ಶೈಕ್ಷಣಿಕ ಮಾಹಿತಿಗಳು

     ಸುವೇಗ CLICK HERE               
    NET EXAMS INFO           
      

                          

                                  

                           


                             


Kids Age Coding

 




How to use the coupon and Buy course? 
Use coupon code: "kac@dis399"
Step1: Go to https://kidsagecoding.in
Step2: Click on 'BUYNOW'
Step3: Click on 'Add To Cart'
Step4: Apply 'Coupon' and Enter the requirement and click 'Proceed to checkout'
Step5: Fill the 'Billing details' then click on 'Place order' and Pay the discounted amount for the course

ವಿಜ್ಞಾನದ ಕುರಿತಾಗಿ ಪ್ರಶ್ನೋತ್ತರಗಳು


1. ಲ್ಯೂಸರ್ನ್ ಎಂದರೆ ಏನು?

ಎಲೆಗಳಿಗಾಗಿ ಬೆಳಸಿದ ಬೆಳೆ


2. ವ್ಯಾಪಕ ಬಳಕೆಯಲ್ಲಿರುವ ಜೀವನಿರೋಧಕ ಪೆನ್ಸಿಲಿನ್ ಯಾವುದರಿಂದ ಉತ್ಪತ್ತಿಯಾಗುತ್ತದೆ?

ಒಂದು ಶೀಲಿಂಧ್ರ


3. ಹವಾಮಾನ ಮತ್ತು ವಾಯುಗುಣದ ಅಧ್ಯಯನ ಮಾಡುವ ಶಾಸ್ತ್ರ ಯಾವುದು?

ಪವನಶಾಸ್ತ್ರ


4. ಒಬ್ಬ ಮನುಷ್ಯ ಹುಟ್ಟಿದ ದಿನ ಮತ್ತು ವರ್ಷವನ್ನು ಆಧರಿಸಿ ಭವಿಷ್ಯ ಹೇಳುವ ಶಾಸ್ತ್ರ ಯಾವುದು?

 ಅಂಕಿಶಾಸ್ತ್ರ


5. ಪಾರಾಸಿಟಾಮಾಲ್….

ನೋವು ನಿವಾರಿಸುತ್ತದೆ.


6. ಜಿಯೋಲೈಟ್ ಉಪಯೋಗಿಸುವುದು…..

ಕಾಗದವನ್ನು ವಿವರ್ಣಿಕರಣಗೊಳಿಸಲು


7. ಶರ್ಬತಿ ಸೊನೋರ ಎಂಬುದು?

ಗೋಧಿಯ ಒಂದು ಮಾದರಿ


8. ಸಾರಜನೀಕರಣ ಎಂದರೆ ಏನು?

ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು


9. ಅತಿ ಸೂಕ್ಷ್ಮ ಗಾತ್ರದ ಜೀವಕೋಶ

 ವೈರಸ್


10. ಬೀಜಗಳನ್ನು ಅತ್ಯುತ್ತಮ ರೀತಿಯಲ್ಲಿ ಶೇಖರಿಸಿಡಲು ಉಪಯೋಗಿಸುವ ಪದ್ಧತಿ..

ತಂಪಾದ ಶುಷ್ಕ ಪರಿಸ್ಥಿತಿ


11. ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಗೆ ಏನೆಂದು ಕರೆಯುತ್ತಾರೆ?

 ಎಂಟೆಮೋಫಿಲಿ


12.ರೋಗಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?

ಪೆಥಾಲಜಿ


13. ಬೆಳಕಿನ ತೀವ್ರತೆಯನ್ನು ಅಳೆಯುವ ವಿಧಾನ ಯಾವುದು?

ದ್ಯುತಿ ಮಾಪನ


14. ‘ಪಾತ್ರೆಯಲ್ಲಿ ತುಂಬಿಟ್ಟ ಒಂದು ಬಿಂದುವಿನಲ್ಲಿ ಪ್ರಯೋಗಿಸಿದ ಒತ್ತಡ ಅದರ ಎಲ್ಲಾ ಬಿಂದುಗಳಿಗೂ ಸಮರೂಪದಲ್ಲಿ ಪ್ರಸರಣವಾಗುವುದು’ ಇದು ಯಾವ ನಿಯಮ?

 ಪ್ಯಾಸ್ಕಲ್ ನಿಯಮ


15. ವಸ್ತುವಿನ ಕಣಗಳ ಚಲನೆ ಇಲ್ಲದೆಯೇ ಒಂದು ಕಣದಿಂದ ಪಕ್ಕದ ಕಣಕ್ಕೆ ಶಾಖ ಪ್ರಸಾರವಾಗುವ ಕ್ರಿಯೆಗೆ…

ಉಷ್ಣವಹನ


16. ಎಲೆಕ್ಟ್ರಿಕ್ ಬಲ್ಬ್‍ನ ತಂತಿಯನ್ನು ಯಾವುದರಿಂದ ಮಾಡುತ್ತಾರೆ?

ಟಂಗ್‍ಸ್ಟನ್


17. ನೀರಿನ ಶಾಶ್ವತ ಗಡಸುತನವನ್ನು ನಿವಾರಿಸಲು…..

ವಾಷಿಂಗ್‍ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು


18. ನೀರನ್ನು ಕ್ಲೋರಿಕರಣ ಮಾಡಲು ಕಾರಣ…

ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು



19. ಟಿಂಚರು ಇದು….

ಅಲ್ಕೋಹಾಲಿನ ದ್ರವ


20. ಲೋಹಗಳನ್ನು ತಟ್ಟಿ ತಗಡುಗಳನ್ನಾಗಿ ಮಾಡಬಹುದು. ಲೋಹದ ಈ ಗುಣವೇ..

 ಪತ್ರಶೀಲತ್ವ

ರಕ್ತದ ಬಗ್ಗೆ ಮಾಹಿತಿ

 

1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?

120 ದಿನಗಳು.


2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?

 6-12 ದಿನಗಳು


3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?

ಬಿಳಿ ರಕ್ತಕಣಗಳು



4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?

12 ದಿನಗಳು


5. _____ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.

 ಕಿರುತಟ್ಟೆ.


6. ___ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.

ಬಿಳಿ ರಕ್ತಕಣಗಳ.


7. ____ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.

ಪಿತ್ತಜನಕಾಂಗ.


8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?

9% ರಷ್ಟು.


9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?

ವಿಲಿಯಂ ಹಾರ್ವೆ.


10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?ಸಿಗ್ಮಾನೋಮೀಟರ್.


11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?

ಹೆಮಟಾಲೋಜಿ.


12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?

ಕಾರ್ಲ್ ಲ್ಯಾಂಡ್ ಸ್ಪಿನರ್.


13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?                         ಅಪಧಮನಿ.


14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?

 O ಗುಂಪು.


15. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?

AB ಗುಂಪು.



ಸಂಪನ್ನೂಲ ಶಿಕ್ಷಕರ ಕೇಂದ್ರ ರಸಪ್ರಶ್ನೆ ಕಾರ್ಯಕ್ರಮ


ದಿನಾಂಕ 05-05-2021

ವಿದ್ಯಾರ್ಥಿಗಳು, ಶಿಕ್ಷಕರು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಜ್ಞಾನದ ವಿವಿಧ ಕ್ಷೇತ್ರಗಳ ಪ್ರಶ್ನೆಗಳನ್ನು  ಒಳಗೊಂಡಂತೆ  ರಸಪ್ರಶ್ನೆಯನ್ನು ಪ್ರತಿನಿತ್ಯ  ನಡೆಸಲಾಗುತ್ತದೆ ತಪ್ಪದೆ ಭಾಗವಹಿಸಿ


ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 top ಪ್ರಶ್ನೆಗಳು


1. ಜರ್ಮನಿ ಏಕೀಕೃತಗೊಂಡ ವರ್ಷ – 1990


2. 1945 ರ ಮೊದಲು ‘ ಈಸ್ಟ್ ಇಂಡೀಸ್’ ಎಂದು ಕರೆಸಿಕೊಳ್ಳುತ್ತಿದ್ದ ಇಂಡೋನೇಷಿಯ ಯಾರ ವಸಾಹತು ಆಗಿದ್ದಿತು.- ಡಚ್ಚರು 


3. ಮ್ಯಾನ್ಮಾರ್ ಎಂದು ಪುನರ್‍ನಾಮಕರಣ ಹೊಂದಿದ ದೇಶ – ಬರ್ಮಾ


4. ಇಂಡೋನೇಷ್ಯಾದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕ – ಡಾ/ ಸುಕಾರ್ಣೊ


5. ಆಫ್ರಿಕಾದಲ್ಲಿ ಸ್ವಾತಂತ್ರ್ಯ ಪಡೆದ ಮೊದಲ ದೇಶ – ಲಿಬಿಯಾ


6. ಅಲಿಪ್ತ ಚಳುವಳಿ ಎಷ್ಟರಲ್ಲಿ ಪ್ರಾರಂಭವಾಯಿತು – 1955


7. ಅಲಿಪ್ತ ಚಳುವಳಿಯ ಆರಂಭಿಕ ಸಭೆ ನಡೆದ ಸ್ಥಳ- ಬಾಂಡುಂಗ್


8. ಎರಡನೇ ಮಹಾಯುದ್ಧದ ನಂತರ ಅಸ್ಥಿತ್ವಕ್ಕೆ ಬಂದ ಎರಡು ಬಣಗಳ ನೇತೃತ್ವವನ್ನು ಯಾವ ದೇಶಗಳು ವಹಿಸಿದವು.- ಅಮೇರಿಕ ಮತ್ತು ರಷ್ಯಾ


9. ಚಂದ್ರನ ಮೇಲೆ ಮೊದಲು ಮಾನವನನ್ನು ಇಳಿಸಿದ ದೇಶ- ಅಮೆರಿಕ


10. ಪ್ರಾಚೀನ ಮೆಸಪೊಟೇಮಿಯಾದ ಇಂದಿನ ಹೆಸರು- ಇರಾಕ್


11. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳನ್ನು ಯಾವ ಕಾಲುವೆ ಜೋಡಿಸುತ್ತದೆ- ಸೂಯೆಜ್


12. ಎರಡನೇ ಕೊಲ್ಲಿಯುದ್ಧ ಯಾವ ರಾಷ್ಟ್ರಗಳ ನಡುವೆ ನಡೆಯಿತು.- ಇರಾಕ್, ಕುವೈತ್


13. ಮುಸ್ಸೊಲಿನಿಯ ಪಕ್ಷದ ಹೆಸರು- ಫ್ಯಾಸಿಸ್ಟ್ ಪಕ್ಷ


14. ಭಾರತದ ಮೊದಲನೆಯ ಸಮಾಚಾರ ಪತ್ರಿಕೆ- ಬೆಂಗಾಲ್ ಗೆಜೆಟ್


15. ಕರ್ನಾಟಕದ ಮೊದಲನೆಯ ವಾರ್ತಾಪತ್ರಿಕೆ- ಮಂಗಳೂರು ಸಮಾಚಾರ


16. ಭಾರತದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಗವರ್ನರ್ ಜನರಲ್ – ಲಾರ್ಡ್ ವಿಲಿಯಂ ಬೆಂಟಿಂಕ್


17. ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭಿಸಿದ ವರ್ಷ – 1835


18. ಮೊದಲ ಮೊಘಲ್ ದೊರೆ- ಬಾಬರ್


19. ಕೊನೆಯ ಮೊಘಲ್ ದೊರೆ- ಬಹದ್ದೂರ್ ಷಾ ಝಾಫರ್


20. ಎರಡನೇ ಬಾಜೀರಾಯನ ದತ್ತುಪುತ್ರನಾಗಿದ್ದ ಪೇಶ್ವೆ- ನಾನಾ ಸಾಹೇಬ್


21. ಮರಾಠರ ಕಟ್ಟಕಡೆಯ ಪೇಶ್ವೆ – ಎರಡನೇ ಬಾಜಿರಾವ್


22. ಸೂರತ್ ಒಪ್ಪಂದಕ್ಕೆ ಸಹಿ ಮಾಡಿದ ವರ್ಷ – 1775


23. ಮೊದಲನೆ ಆಂಗ್ಲೋ ಮರಾಠ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಸಾಲ್‍ಬಾಯಿ


24. ಸಾಲ್ಬಾಯಿ ಒಪ್ಪಂದದಲ್ಲಿ ಯಾರನ್ನು ಪೇಶ್ವೇಯಾಗಿ ಒಪ್ಪಿಕೊಳ್ಳಲಾಯಿತು- ಎರಡನೇ ಮಾಧವರಾವ್


25. ಸಿಖ್ ಸಮುದಾಯದ ಸೈನ್ಯವನ್ನು ಏನೆಂದು ಕರೆಯುತ್ತಿದ್ದರು – ಖಾಲ್ಸಾ


26. ಪೇಶ್ವೆ ಎರಡನೆಯ ಬಾಜೀರಾಉನು ಯಾವ ಒಪ್ಪಂದದ ಮೂಲಕ ಸಹಾಯಕ ಸೈನ್ಯ ಮೈತ್ರಿಯನ್ನು ಒಪ್ಪಿಕೊಂಡನು – ಬೇಸ್ಸೀನ್ ಒಪ್ಪಂದ


27. ಕನ್ನಂಬಾಡಿ ಅಣೆಕಟ್ಟನ್ನು ಪೂರ್ಣಗೊಳಿಸಿದ ದಿವಾನರು – ಮಿರ್ಜಾ ಇಸ್ಮಾಯಿಲ್


28. ಮೈಸೂರು ರಾಜ್ಯದಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಆರಂಭಿಸಿದ ದಿವಾನರು- ಕೆ. ಶೇಷಾದ್ರಿ ಅಯ್ಯರ್


29. ಪಂಜಾಭಿನ ಸಿಂಹ ಎಂದು ಕರೆಯಲ್ಪಡುವ ದೊರೆ- ರಣಜಿತ್ ಸಿಂಗ್.


30. ರಣಜಿತ್‍ಸಿಂಗ್‍ನಿ ಇಂಗ್ಲೀಷರೊಡನೆ ಮಾಡಿಕೊಂಡ ಒಪ್ಪಂದ – ಅಮೃತಸರ ಒಪ್ಪಂದ


31. ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ಮೊದಲ ದೇಶಿಯ ರಾಜ- ಹೈದರಾಬಾದಿನ ನಿಜಾಮ( 1798)


32. ‘ ಕೊಹೀನೂರ್ ವಜ್ರವನ್ನು ಬ್ರಿಟಿಷರಿಗೆ ಉಡುಗೊರೆಯಾಗಿ ನೀಡುದ ದೊರೆ- ದುಲೀಪ್ ಸಿಂಗ್


33. ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದವರು- ರಂಗಚಾರ್ಲು


34. ಟಿಪ್ಪು ಸುಲ್ತಾನನು ಎಷ್ಟರಲ್ಲಿ ಮರಣ ಹೊಂದಿದನು- 1799


35. ಹೈದರಾಲಿಯು ಎಲ್ಲಿಯ ಫೌಜುದಾರನಾಗಿದ್ದನು- ದಿಂಡಿಗಲ್


36. ಹೈದರಾಲಿಯು ಯಾವ ಯುದ್ಧದ ಕಾಲದಲ್ಲಿ ಮಡಿದನು – ಎರಡನೇ ಆಂಗ್ಲೋ- ಮೈಸೂರ್ ಯುದ್ಧ


37. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಕಾಲದಲ್ಲಿ ಇಂಗ್ಲೀಷರ ಗವರ್ನರ್ ಜನರಲ್ ಯಾರಾದ್ದರು – ವೆಲ್ಲೆಸ್ಲಿ


38. ಒಡೆಯರ ವಂಶದ ಸ್ಥಾಪಕರು- ವಿಜಯ ಮತ್ತು ಕೃಷ್ಣ


39. ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಹಾಕಿಸಿದವರು ಯಾರು – ದೊಡ್ಡ ದೇವರಾಯ


40. ಮೈಸೂರಿನ ದಸರಾ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದವರು- ರಾಜ ಒಡೆಯರ್


41. ಹದಿಬದೆಯ ಧರ್ಮ ಎಂಬ ಕೃತಿಯನ್ನು ರಚಿಸಿದವರು – ಸಂಚಿಯ ಹೊನ್ನಮ್ಮ


42. ಮೊದಲ ಆಂಗ್ಲೋ ಮೈಸೂರು ಯುದ್ಧವು ಯಾವ ಒಪ್ಪಂದದಿಂದ ಕೊನೆಗೊಂಡಿತು – ಮದ್ರಾಸ್ ಒಪ್ಪಂದ


43. ಎರಡನೇ ಆಂಗ್ಲೋ- ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು – ಮಂಗಳೂರು ಒಪ್ಪಂದ


44. ಪ್ಲಾಸಿ ಕದನ ನಡೆದ ವರ್ಷ –1757


45. ಬಕ್ಸಾರ್ ಕದನ ನಡೆದ ವರ್ಷ – 1764


46. ಜಹಾಂಗೀರನ ಆಸ್ಥಾನದಲ್ಲಿ ಇದ್ದ ಬ್ರಿಟಿಷ್ ರಾಯಭಾರಿ – ಸರ್ ಥಾಮಸ್ ರೋ


47. ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪನೆಯಾದ ವರ್ಷ- 1664


48. ಭಾರತದಲ್ಲಿ ಫ್ರೆಂಚರ ಪ್ರಭಾವವನ್ನು ಕೊನೆಗಾಣಿಸಿದ ಕದನ- ವಾಂಡಿವಾಷ್


49. ಇಂಗ್ಲೀಷರಿಗೆ ದಿವಾನಿ ಹಕ್ಕನ್ನು ನೀಡಿದ ಮೊಘಲ್ ಚಕ್ರವರ್ತಿ – ಎರಡನೆಯ ಷಾ ಆಲಂ


50. ತೆರಿಗೆ ಪಾವತಿಸದೆ ವಸ್ತುಗಳ ಸಾಗಾನಿಕೆಗೆ ನೀಡುತ್ತಿದ್ದ ಅನುಮತಿ ಪತ್ರಗಳನ್ನು ಏನೆಂದು ಕರೆಯುತ್ತಿದ್ದರು – ದಸ್ತಕಗಳು


🌷☘🌷☘🌷☘🌷☘🌷☘🌷


ಇತಿಹಾಸದ ಪ್ರಮುಖ ಇಸ್ವಿಗಳು



👇👇👇👇👇👇👇👇


👉1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ ವಶ


👉1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ


•1757 – ಪ್ಲಾಸಿ ಕದನ (ಬಂಗಾಳದ ನವಾಬ "ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ")


•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)


•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.


•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)


•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)


•1799 – 4ನೇ ಆಂಗ್ಲೋ ಮೈಸೂರು ಯುದ್ಧ ,( ಟಿಪ್ಪು ಮರಣ )


•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )


•1784 – ಪಿಟ್ಸ್ ಇಂಡಿಯಾ ಶಾಸನ


•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )


•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )


•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )

ಇತಿಹಾಸ



•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ


•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )


•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ


•1858 – ಬ್ರಿಟನ್ ರಾಣಿಯ ಘೋಷಣೆ


•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )


•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ


•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ


•1885 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )


•1905 – ಬಂಗಾಳ ವಿಭಜನೆ


•1906 – ಮುಸ್ಲಿಂ ಲೀಗ್ ಸ್ಥಾಪನೆ


•1920-1947 – ಗಾಂಧೀಯುಗ


•1920 - ಅಸಹಕಾರ ಚಳುವಳಿ


•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )


•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )


•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )


•1930 ಮೊದಲ ದುಂಡು ಮೇಜಿನ ಅಧಿವೇಶನ


•1931 – ಎರಡನೆಯ ದುಂಡು ಮೇಜಿನ ಅಧಿವೇಶನ


•1932 – ಮೂರನೆಯ ದುಂಡು ಮೇಜಿನ ಅಧಿವೇಶನ


•1942 ಕ್ವಿಟ್ ಇಂಡಿಯಾ ಚಳುವಳಿ


•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )


•1948 - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್ ಗೂಡ್ಸೆಯಿಂದ )


•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ


•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )


•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ


•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ


•1914-18 – ಮೊದಲ ಮಹಾಯುದ್ಧ


•1917 – ರಷ್ಯಾ ಕ್ರಾಂತಿ


•1939-45 – ಎರಡನೆಯ ಮಹಾಯುದ್ಧ


🦋🌺🦋🌺🦋🌺🦋🌺🦋🌺🦋🌺🦋🌺

🌻🍁 ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ



👇👇👇👇👇👇


1) ದೊಂಡಿಯ ವಾಘನ ದಂಗೆ- 1800


2) ಐಗೂರು ದಂಗೆ= 1802 ( ವೆಂಕಟಾದ್ರಿ ನಾಯಕ)


3) ವೆಲ್ಲೂರು ಬಂಡಾಯ= 1806


4) ಕೊಪ್ಪಳ ಮತ್ತು ಉದಗಿರಿ ದಂಗೆ = 1819 ವೀರಪ್ಪ= ಕೊಪ್ಪಳ, ದೇಶ್ಮುಖ್= ಉದಗಿರ-1821)


5) ಸಿಂದಗಿ ಬಂಡಾಯ= 1824 ( ದಿವಾಕರ್ ದಿಕ್ಷಿತ್, ಶೆಟ್ಟಿಯಪ್ಪಾ ರಾವಜಿ,)


6) ಕಿತ್ತೂರು ಬಂಡಾಯ= 1824 ( ಕಿತ್ತೂರಾಣಿ ಚೆನ್ನಮ್ಮ)


7) ಸಂಗೊಳ್ಳಿ ರಾಯಣ್ಣನ ಗಲ್ಲಿಗೇರಿಸಿದು= 1831 ಜನವರಿ 26 ನಂದಗಡದಲ್ಲಿ


8) ನಗರ ದಂಗೆ= 1831 ( ಬೂದಿ ಬಸಪ್ಪ)


9) ಕೊಡಗು ಬಂಡಾಯ= 1835-37


10) ಹಲಗಲಿಯ ಬೇಡರ ದಂಗೆ= 1857 ( ಜಡಗ ಮತ್ತು ಬಾಳ್ಯ)


11) ಸುರಪುರ ಸಂಸ್ಥಾನಕ್ಕೆ ಮುತ್ತಿಗೆ= 1858 ( ರಾಜಾ ವೆಂಕಟಪ್ಪ ನಾಯಕ)


12) ನರಗುಂದದ ಬಂಡಾಯ= 1858 ( ಭಾಸ್ಕರ್ ರಾವ್)


13) ಮುಂಡರಿಗಿ ಬಂಡಾಯ= 1858 ( ಭೀಮರಾವ್)


14) ಮೈಸೂರು ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ= 1881


15) ಕರ್ನಾಟಕದಲ್ಲಿ ಅಸಹಕಾರ ಚಳುವಳಿ= 1920-22


16) ಹಿಂದೂಸ್ತಾನ ಸೇವಾದಳ ಸ್ಥಾಪನೆ= 1923 ( N,S, ಹಳೆಕಲ್)


17) ಬೆಳಗಾವಿ ಕಾಂಗ್ರೆಸ್ ಅಧಿವೇಶನ= 1924 ( ಗಾಂಧೀಜಿ ಅವರು ಅಧ್ಯಕ್ಷ ವಹಿಸಿದ್ದರು)


18) ಬೆಳಗಾವಿ ಖಾದಿ ಸಂಘ ಸ್ಥಾಪನೆ= 1926


19) ಅಂಕೋಲಾ ಉಪ್ಪಿನ ಸತ್ಯಾಗ್ರಹ= 1930


20) ಬೆಂಗಳೂರಿನಲ್ಲಿ ತ್ರಿವರ್ಣ ಧ್ವಜಾರೋಹಣ= 1931 ಜೂನ್2 ( ನೆಹರೂರವರು ಧ್ವಜಾರೋಹಣ ಮಾಡಿದರು,)


21) ಅರಣ್ಯ ಸತ್ಯಾಗ್ರಹ ಕರ ನಿರಾಕರಣೆ= 1932


22) ಮೈಸೂರು ರಾಜ್ಯ ಕಾಂಗ್ರೆಸ್ ಸ್ಥಾಪನೆ= 1938


23) ಶಿವಪುರ ಧ್ವಜ ಸತ್ಯಾಗ್ರಹ= 1938


24) ವಿದುರಾಶ್ವತ ದುರಂತ= 1938 ಏಪ್ರಿಲ್ 25


25) ಈಸೂರು ದುರಂತ= 1942


26) ಮೈಸೂರು ಚಲೋ ಚಳುವಳಿ= 1947 ಸಪ್ಟಂಬರ್ 1


27) ಅರಮನೆ ಸತ್ಯಾಗ್ರಹ= 1947 ಸಪ್ಟಂಬರ್ 4


28) ಜವಾಬ್ದಾರಿ ಸರ್ಕಾರ ಸ್ಥಾಪನೆ= 1947 ಅಕ್ಟೋಬರ್ 24


29) ಮೈಸೂರಿನ ಏಕೀಕರಣ= 1956 ನವಂಬರ್1 ( ನವ ಮೈಸೂರಿನ ಉದಯ)


30) ಕರ್ನಾಟಕವೆಂದು ನಾಮಕರಣವಾಗಿದ್ದು= 1973 ನಂಬರ್1


🌺🍀🌺🍀🌺🍀🌺🍀🌺🍀🌺🍀🌺🍀

ಬೇರೆ ಬೇರೆ ದೇಶಗಳಿಂದ ಎರವಲು ಪಡೆದ ಸಂವಿಧಾನದ ವಿಷಯಗಳು ಮತ್ತು ಸಂಬಂಧಿಸಿದ ದೇಶಗಳು ------

 



* ರಾಜ್ಯ ನಿರ್ದೇಶಕ ತತ್ತ್ವಗಳು - ಐರ್ಲೆಂಡ್


* ಸಮವರ್ತಿ ಪಟ್ಟಿ - ಆಸ್ಟ್ರೇಲಿಯಾ


* ಕಾನೂನು ಸಮಾನತೆ - ಇಂಗ್ಲೆಂಡ್


* ಸ್ವತಂತ್ರ ನ್ಯಾಯಾಂಗ - ಅಮೆರಿಕಾ


* ತುರ್ತು ಪರಿಸ್ಥಿತಿ - ಜರ್ಮನಿ


* ಕೇಂದ್ರ ಮತ್ತು ರಾಜ್ಯ ಸಂಬಂಧಗಳು - ಕೆನಡಾ


* ಸಂಸದೀಯ ಪದ್ಧತಿ - ಇಂಗ್ಲೆಂಡ್


* ಮೂಲಭೂತ ಕರ್ತವ್ಯಗಳು - ರಷಿಯಾ


* ಮೂಲಭೂತ ಹಕ್ಕುಗಳು - ಅಮೆರಿಕಾ

=========================


ಪ್ರಮುಖ ಮಹೋತ್ಸವಗಳು ----



* 25 ನೇ ವರ್ಷ - ಬೆಳ್ಳಿ ಮಹೋತ್ಸವ


* 50 ನೇ ವರ್ಷ - ಸುವರ್ಣ ಮಹೋತ್ಸವ


* 60 ನೇ ವರ್ಷ - ವಜ್ರ ಮಹೋತ್ಸವ


* 75 ನೇ ವರ್ಷ - ಪ್ಲಾಟಿನಂ ಮಹೋತ್ಸವ


* 100 ನೇ ವರ್ಷ - ಶತಮಾನೋತ್ಸವ


🌹🌺🌹🌺🌹🌺🌹🌺🌹🌺🌹🌺


ಪ್ರಮುಖ ವ್ಯಕ್ತಿಗಳು ಮತ್ತು ಅವರ ಕ್ಷೇತ್ರಗಳು


👇👇👇👇👇👇👇👇


1) ಚಿಟ್ಟಾಣಿ ರಾಮಚಂದ್ರ ಹೆಗಡೆ= ಯಕ್ಷಗಾನ ಕಲಾವಿದರು


2) ಕೆ.ಕೆ ಹೆಬ್ಬಾರ್= ಚಿತ್ರಕಲಾವಿದರು


3) ಬಾಲಮುರಳಿಕೃಷ್ಣ= ಕರ್ನಾಟಕ ಸಂಗೀತಗಾರರು


4) ಪಂಡಿತ್ ರವಿಶಂಕರ್= ಸಿತಾರ ವಾದಕರು


5) ಉಮಾಶಂಕರ ಮಿಶ್ರ= ಸಿತಾರ ವಾದಕರು


6) ಅನುಷ್ಕಾ ಶಂಕರ್= ಸಿತಾರ್ ವಾದಕರು


7) ಕಲಾ ರಾಮನಾಥ= ಪಿಟೀಲು ವಾದಕರು


8) ಯಾಮಿನಿ ಕೃಷ್ಣಮೂರ್ತಿ= ಭರತನಾಟ್ಯಂ ಮತ್ತು ಕಥಕ್


9) ಅಮೀರ್ ಖುಸ್ರೋ= ಶೀತರ್ ವಾದಕರು


10) ಬಿರ್ಜು ಮಹಾರಾಜ್= ಕಥಕ್ ನೃತ್ಯಗಾರರು


11) ಕಿಶೋರಿ ಅಮೊನಕರ್= ಹಿಂದೂಸ್ತಾನಿ ಸಂಗೀತಗಾರರು


12) ಶೋಭನಾ= ಭರತನಾಟ್ಯ ಗಾರರು


13) ಹರಿಪ್ರಸಾದ್ ಚೌರಾಸಿಯಾ= ಕೊಳಲು ವಾದಕರು


14) ಟಿ.ಆರ್ ಮಹಾಲಿಂಗಂ= ಕೊಳಲು ವಾದಕರು


15) ಪಂಚಾಕ್ಷರಿ ಗವಾಯಿ= ಹಿಂದುಸ್ತಾನಿ ಸಂಗೀತಗಾರರು


16) ರುಕ್ಮಿನಿ ದೇವಿ= ಭರತನಾಟ್ಯ ಗಾರರು


17) ಎಂ.ಎಸ್ ಸುಬ್ಬಲಕ್ಷ್ಮಿ= ಕರ್ನಾಟಕ ಸಂಗೀತಗಾರರು


18) ಗಂಗೂಬಾಯಿ ಹಾನಗಲ್= ಹಿಂದುಸ್ತಾನಿ ಸಂಗೀತಗಾರರು


19) ಪಂಡಿತ್ ಭೀಮ್ ಸೇನ್ ಜೋಶಿ= ಹಿಂದುಸ್ತಾನಿ ಸಂಗೀತಗಾರರು


20) ಆರ್ ಕೆ ಶ್ರೀಕಂಠನ್= ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು


21) ರತ್ನಮಾಲ ಪ್ರಕಾಶ್= ಸುಗಮ ಸಂಗೀತ ಗಾರರು


22) ಶಶಾಂಕ್= ಕೊಳಲು ವಾದಕರು


23) ಮಾಧವ ಗುಡಿ= ಹಿಂದುಸ್ತಾನಿ ಸಂಗೀತಗಾರರು


24) ಉಸ್ತಾದ್ ಬಿಸ್ಮಿಲ್ಲಾ ಖಾನ್= ಶಹನಾಯಿ ವಾದಕರು


25) ಎಂ.ಎಫ್ ಹುಸೇನ್= ಚಿತ್ರಕಲಾವಿದರು


26) ರಾಜ ರವಿವರ್ಮ= ಚಿತ್ರಕಲಾವಿದರು


27) ಲಿಯೋನಾರ್ಡೋ ಡಾ-ವಿಂಚಿ= ಚಿತ್ರಕಲಾವಿದರು


28) ಆರ್ ಕೆ ಲಕ್ಷ್ಮಣ್= ವೆಂಗ್ಯ ಚಿತ್ರಗಾರರು


29) ಮೃಣಾಲಿನಿ ಸಾರಾಭಾಯಿ= ಕಥಕಳ್ಳಿ  ಅಥವಾ ಭರತನಾಟ್ಯ


30) ಜಾಕಿರ್ ಹುಸೇನ್= ತಬಲಾ ವಾದಕರು


31) ಶಿವಕುಮಾರ್ ಶರ್ಮಾ= ಸಂತೂರ್ ವಾದಕರು

🔥🍀🔥🍀🔥🍀🔥🍀🔥🍀🔥🍀🔥🍀

🍎ಸಾಮಾನ್ಯ ಜ್ಞಾನ - 🍎

 


೧. ಕನ್ನಡದ ಮೊದಲ ರಾಜಮನೆತನ ಯಾವುದು?

ಕದಂಬ 


೨. ಸತತವಾಗಿ ಮೂರು ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಏಕೈಕ ಕನ್ನಡಿಗ ಯಾರು..? ಯಾವ ವರ್ಷ?

ಎಚ್. ವಿ. ನಂಜುಂಡಯ್ಯ (1915-16-17)


೩. ಕನ್ನಡ ನಾಡಿನ ಮೊದಲ ಗಣಿತಜ್ಞ ಯಾರು?

ಮಹಾವೀರಾಚಾರ್ಯರು 


೪. ಕರ್ನಾಟಕದಲ್ಲಿ ಸಾವಿರ ಕಂಬಗಳ ಬಸದಿ ಎಲ್ಲಿದೆ?

ಮೂಡಬಿದರೆ 


೫. ಕನ್ನಡದ ಮೊದಲ ಶಿಲ್ಪಿ ಯಾರು?

ಟಿಣಕ 


೬. ಕನ್ನಡದ ಮೊದಲು ಬೆರಳಚ್ಚುವಿನ ಯಂತ್ರವನ್ನು ರೂಪಿಸಿದವರು ಯಾರು?

ಅನಂತ ಸುಬ್ಬರಾವ್ 


೭. ಕನ್ನಡದ ಉಪಮಾ ಲೋಲ ಕವಿ ಯಾರು?

ಲಕ್ಷೀಶ 


೮. ೧೯೩೦ರಲ್ಲಿ ಪ್ರಕಟವಾದ ಗೋವಿಂದಪೈ ಅವರ ಮೊದಲ ಕವನ ಸಂಕಲನ ಯಾವುದು?

ಗಿಳಿವಿಂಡು 


೯. ಎಲ್.ಎಂ.ಕರಿಬಸಪ್ಪ ಯಾವ ಸ್ಪರ್ಧೆಯಲ್ಲಿ ಭಾರತ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ?

ದೇಹದಾರ್ಢ್ಯ 


೧೦. ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?

ಶಬ್ದಮಣಿ ದರ್ಪಣ 


೧೧. ಓಶಿಯಾನಾ ಚಿತ್ರೋತ್ಸವದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು ಯಾರು?

ಉಮಾಶ್ರೀ (ಗುಲಾಬಿ ಟಾಕೀಸ್ )


೧೨. ಕನ್ನಡದ ಪ್ರಪ್ರಥಮ ಪ್ರಾಧ್ಯಾಪಕ ಯಾರು?

ಟಿ. ಎನ್. ವೆಂಕಣ್ಣಯ್ಯ 


೧೩. ಏಷ್ಯಾ ಖಂಡದಲ್ಲಿ ಬೃಹತ್ ಏಕಶೀಲಾ ಬೆಟ್ಟವಿರುವ ಕರ್ನಾಟಕದ ಜಿಲ್ಲೆ ಯಾವುದು?

ತುಮಕೂರು (ಮಧುಗಿರಿ )


೧೪. ಅಕ್ಕಾ ಕೇಳವ್ವ ನಾವೊಂದು ಕನಸ ಕಂಡೆ ಅಕ್ಕಮಹದೇವಿಯವರ ಈ ವಚನವನ್ನು ಹಾಡಿ ಜನಪ್ರಿಯಗೊಳಿಸಿದ ಖ್ಯಾತ ಸಂಗೀತಜ್ಞ ಯಾರು?

ಮಲ್ಲಿಕಾರ್ಜುನ ಮನ್ಸೂರ್ 


೧೫. ಜಲವಿದ್ಯುತ್ ಯೋಜನೆಗಳಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿರುವ ರಾಜ್ಯ ಯಾವುದು?

ಕರ್ನಾಟಕ 


೧೬. ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಪ್ರಥಮ ಜಾರಿಗೆಯಾಗಿದ್ದು ಯಾವಾಗ?

1971


೧೭. ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ ಯಾವುದು?

ಮೈಸೂರು (ರಿಸರ್ವ್ ಬ್ಯಾಂಕ್ ನೋಟು ಮುದ್ರಣ 


೧೮. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು?

ಮುಳ್ಳಯ್ಯನಗಿರಿ ಗಿರಿ (ಚಿಕ್ಕಮಂಗಳೂರು )


೧೯. ಕರ್ನಾಟಕದ ಪ್ರತಿಷ್ಠಿತ ನಾಗರೀಕ ಪ್ರಶಸ್ತಿ ಯಾವುದು?

ಕರ್ನಾಟಕ ರತ್ನ 


೨೦. ಕರ್ನಾಟಕದ ಪ್ರಥಮ ಮಹಿಳಾ ನ್ಯಾಯಾಧೀಶರು ಯಾರು?

ಮಂಜುಳಾ ಚೆಲ್ಲೂರ್ 


೨೧. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವದಾಖಲೆ ಮಾಡಿದ್ದ ಕರ್ನಾಟಕ ವೈಧ್ಯ ಯಾರು?

ಡಾ ಎಂ. ಸಿ. ಮೋದಿ 


೨೨. ಪಂಚಲೋಹಗಳು ಯಾವುವು?

ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ 


೨೩. ಕರ್ನಾಟಕದ ವಿಸ್ತೀರ್ಣವೆಷ್ಟು?

1.91.791ಚ. ಕಿ. ಮೀ 


೨೪. ಮಹಾ ವಿಷ್ಣುವಿನ ಚತ್ರದ ಹೆಸರೇನು?

ಸುದರ್ಶನ ಚಕ್ರ 


೨೫. ವೀರೇಶ ಚರಿತ – ಇದು ಯಾರ ಕೃತಿ.

ರಾಘವಾಂಕ 


೨೬. ನೇಗಿಲಯೋಗಿ ಗೀತೆಯನ್ನು ಕನ್ನಡದ ಯಾವ ಚಿತ್ರದಲ್ಲಿ ಅಳವಡಿಸಲಾಗಿದೆ?

ಕಾಮನಬಿಲ್ಲು 


೨೭. ಕರ್ನಾಟಕದ ‘ತೊಗರಿಯ ಕಣಜ’ ಎಂದು ಯಾವ ಜಿಲ್ಲೆಗೆ ಕರೆಯುತ್ತಾರೆ?

ಗುಲ್ಬರ್ಗ 


೨೮. ‘ಶಿಸ್ತು’ ಕಂದಾಯ ಪದ್ಧತಿಯನ್ನು ಜಾರಿಗೆ ತಂದ ಪಾಳೆಗಾರ ಯಾರು?

ಶಿವಪ್ಪ ನಾಯಕ 


೨೯. ಶಿವನು ಸಂಧ್ಯಾಕಾಲದಲ್ಲಿ ಮಾಡುವ ನೃತ್ಯಕ್ಕೆ ಏನೆಂದು ಹೆಸರು?

ತಾಂಡವ


🌷☘🌷☘🌷☘🌷☘🌷

🌎ಅರ್ಥಶಾಸ್ತ್ರ ಬಗ್ಗೆ ಮಾಹಿತಿ🏆


👉FDA , SDA, RRB ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ👇👇✍️


1) SEBI ವಿಸ್ತರಿಸಿರಿ?

👉Security Exchange Board of India.


2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ

ಕೇಂದ್ರಗಳಿವೆ?

👉23.


3) ಭಾರತದ ಶೇಕಡಾವಾರು ಎಷ್ಟು ಭೂಮಿ

ಅರಣ್ಯಗಳಿಂದ ಕೂಡಿದೆ?

👉ಶೇಕಡ 23 ರಷ್ಟು.


4) ಸಹಕಾರದ ಮೂಲ ತತ್ವವೇನು?

👉"ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".


5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ

ಆರಂಭವಾಯಿತು?

👉1904 ರಲ್ಲಿ.


6) ದ್ರವ ರೂಪದ ಚಿನ್ನ ಯಾವುದು?

👉ಪೆಟ್ರೋಲಿಯಂ.


7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------

ಎನ್ನುವರು?

👉ಕರಡಿಯ ಕುಣಿತ.


8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು

ಯಾರು?

👉ಅಮರ್ತ್ಯಸೇನ್.


9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು

ಯಾವಾಗ?

👉1998 ರಲ್ಲಿ.


10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು

ಯಾವಾಗ?

👉 1999 ರಲ್ಲಿ.


11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ

ರಾಜ್ಯ ಯಾವುದು?

👉ಮಿಝೋರಂ.(ಶೇ.0.2 ರಷ್ಟು).


12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು

ಯಾವದನ್ನು ಕರೆಯುತ್ತಾರೆ?

👉ನೈಸರ್ಗಿಕ ಅನಿಲವನ್ನು.


13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?

👉 ಕಲ್ಲಿದ್ದಲು.


14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು

ಯಾವುದು?

👉ಪೆಟ್ರೋಲಿಯಂ ಉತ್ಪನ್ನಗಳು.


15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು

ಯಾವುದು?

👉ಬಡ್ಡಿ ಪಾವತಿಗಳು.


16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ

ರಚಿಸಲಾಯಿತು?

👉ಆಗಸ್ಟ್ 6, 1952 ರಲ್ಲಿ.


17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ

ಸಂಘಟನೆ ಯಾವುದು?

👉 ರಾಜ್ಯ ಯೋಜನಾ ಮಂಡಳಿ.


18) ದೇಶದ ಪ್ರಧಾನ ಟಂಕಸಾಲೆ ಯಾವುದು?

👉ನಾಸಿಕ್ (ಗುಜರಾತ್).


19) ನೀತಿ ಆಯೋಗದ ಅಧ್ಯಕ್ಷರು ಯಾರು?

👉 ಪದನಿಮಿತ್ತ ಪ್ರಧಾನ

 ಮಂತ್ರಿಗಳು



20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು

ಯಾರು?

👉ಅರವಿಂದ ಪನಗಾರಿಯಾ.


21) ರಾಷ್ಟ್ರೀಯ ಯೋಜನಾ ಆಯೋಗವನ್ನು

ಯಾವಾಗ ಸ್ಥಾಪಿಸಲಾಯಿತು?

👉ಮಾರ್ಚ್ 15, 1950 ರಲ್ಲಿ.


22) ಖಾರಿಪ್ ಬೆಳೆಯ ಕಾಲ ತಿಳಿಸಿ?

👉ಜೂನ್ - ಸೆಪ್ಟೆಂಬರ್.


23) ರಬಿ ಬೆಳೆಯ ಕಾಲ ತಿಳಿಸಿ?

👉 ಅಕ್ಟೋಬರ್ - ಎಪ್ರಿಲ್.


24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು

ಯಾರು?

👉ಕೇಂದ್ರ ಹಣಕಾಸು ಸಚಿವಾಲಯ.


25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?

👉 ಅರುಣ್ ಜಟ್ಲಿ.


26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ

ರಾಜ್ಯ ಯಾವುದು?

👉ಉತ್ತರಪ್ರದೇಶ.(ಶೇ.19.4).


27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು

ಯಾರು?

👉 ಕೆ.ಸಿ. ನಿಯೋಗಿ.


28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು

ಯಾರು?

👉 ವೈ.ವಿ. ರೆಡ್ಡಿ.(14 ನೇ).


29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ

ಮಾಡಿದವರು ಯಾರು?

👉ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).


30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ

ಸ್ಥಳ ಯಾವುದು?

👉ನೋಯ್ಡಾ.


31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ

ರಾಜ್ಯದಲ್ಲಿದೆ?

👉ಮಧ್ಯಪ್ರದೇಶ.


32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ

ರಾಜ್ಯದಲ್ಲಿದೆ?

👉ಪಶ್ಚಿಮಬಂಗಾಳ


33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ

ಇರುತ್ತದೆ?

👉ಹಣಕಾಸು ಇಲಾಖೆಯ ಕಾರ್ಯದರ್ಶಿ.


34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?

👉ಒ.ಎ.ಸ್ಮಿತ್.


35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?

👉 ಹಿಲ್ಟನ್ ಯಂಗ್ ಸಮಿತಿ.


36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?

👉 ಮನಮೋಹನಸಿಂಗ್.


37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್

ಯಾರು?

👉 ಸಿ.ಡಿ.ದೇಶ್ ಮುಖ್ (1943-49).


38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?

👉 ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).


39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?

👉ಅಲಹಾಬಾದ್ ಬ್ಯಾಂಕ್ (1865).


40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?

👉 ಔದ್ ಬ್ಯಾಂಕ್ (1881).



41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ

ಬ್ಯಾಂಕ್ ಯಾವುದು?

👉 ಔದ್ ಬ್ಯಾಂಕ್.


42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್

ಯಾವುದು?

👉 ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).


43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?

👉 60 ಲಕ್ಷ.


44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು

ಯಾವಾಗ?

👉 1991 ರಲ್ಲಿ.


45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು

ಯಾವಾಗ?

👉1948 ರಲ್ಲಿ.


46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?

👉ನಾರ್ಮನ್ ಬೋರ್ಲಾಂಗ್.


47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?

👉 ಲಾರ್ಡ್ ವಿಲಿಯಂ ಬೆಟಿಂಕ್.


48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ

ಎಲ್ಲಿದೆ?

👉ಮುಂಬೈ. (ಸ್ಥಾಪನೆ :- 1929).


49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?

👉18 ತಿಂಗಳು.


50) ನಬಾರ್ಡ್ ಎನ್ನುವುದು -----.

👉 ಗ್ರಾಮೀಣ ಅಭಿವೃದ್ಧಿ ಬ್ಯಾಂಕ್.


51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ

ಯಾವುದು?

👉 ಶಿವರಾಮನ್ ಸಮಿತಿ✍️

📚ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು

   

👇👇

🌺ಪ್ರಾಚೀನ ಕರ್ನಾಟಕದ ಇತಿಹಾಸ🌺


— ಶಾಸನಗಳು ಒಂದು ರಾಷ್ಟ್ರದ, ರಾಜ್ಯದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮ ನಾಡಿನ ರಾಜಕೀಯ ಇತಿಹಾಸವು ಮುಖ್ಯವಾಗಿ ಶಾಸನಗಳನ್ನು ಆಧರಿಸಿ ರಚನೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ 'ಸ್ಪರ್ಧಾಲೋಕ'ದಲ್ಲಿ ಕೆಲವು ಮಹತ್ವದ ಶಾಸನಗಳ ಕುರಿತು ವಿವರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗಿದೆ.


🌀 ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು 🌀


●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ


●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ


●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ


●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್


●. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ


●. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ


●. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್


●. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್


●. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು


●. ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ


●. ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ


●. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ


●. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ


●. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ


●. ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್


●. ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ


●. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ರಾಯಚೂರು.


●. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ


●. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ


●. ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ


●. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950 ರಲ್ಲಿ


●. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ


●. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ


●. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ


●. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ


●. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ


●. ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ


●. ಧೃವ ••┈┈┈┈• ಜೆಟ್ಟಾಯಿ ಶಾಸನ


●. ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ 


●. ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ


●. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ


●. ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ


ರವಿ ಕೀರ್ತೀ ••┈┈┈┈• ಐಹೋಳೆ ಶಾಸನ


●. ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ


●. ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)


●. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.


●. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ


●. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.


●. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ


●. ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ .


●. ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ 


●. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)


●. ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .


●. ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .


●. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”


●. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .


●. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ


●. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ.


☘🌷☘🌷☘🌷☘🌷☘

ವೈಜ್ಞಾನಿಕ ಆವಿಷ್ಕಾರಗಳು ಮತ್ತು ಅನ್ವೇಷಣೆಗಳ ಪಟ್ಟಿ (ಭಾಗ -1)

 

 =========================


 ವಿದ್ಯುತ್ಕಾಂತ ➖ ವಿಲಿಯಂ ಸ್ಟರ್ಜನ್ (ಇಂಗ್ಲೆಂಡ್)


 ಸ್ಟೀಮ್ ಎಂಜಿನ್-ಜೇಮ್ಸ್ ವ್ಯಾಟ್ (ಸ್ಕಾಟ್ಲೆಂಡ್)


 📣 ರೇಡಿಯೊ ➖ ಜಿ.  ಮಾರ್ಕೊನಿ (ಇಟಲಿ)


 ಮೈಕ್ರೋಸ್ಕೋಪ್ ➖ ಡ್.  ಜಾನ್ಸೆನ್ (ನೆದರ್ಲ್ಯಾಂಡ್ಸ್)


 📣 ಲೋಗರಿಥಮ್- ಜಾನ್ ನೇಪಿಯರ್ (ಸ್ಕಾಟ್ಲೆಂಡ್)


 ಎಲೆಕ್ಟ್ರಿಕ್ ಲ್ಯಾಂಪ್ ಥೋಮಸ್ ಅಲ್ವಾ ಎಡಿಸನ್ (ಯುಎಸ್ಎ)


 📣 ಟೆಲಿಫೋನ್ ➖ ಅಲೆಕ್ಸಾಂಡರ್ ಗ್ರಹಾಂ ಬೆಲ್ (ಯುಎಸ್ಎ)


 ಎಲಿವೇಟರ್ (ಲಿಫ್ಟ್) l ಎಲಿಷಾ ಜಿ. ಓಟಿಸ್ (ಯುಎಸ್ಎ)


  ಟಾಕಿಂಗ್ ಫಿಲ್ಮ್- ವಾರ್ನರ್ ಬ್ರದರ್ಸ್ (ಯುಎಸ್ಎ)


 ಗ್ರಾಮಫೋನ್- ಥಾಮಸ್ ಅಲ್ವಾ ಎಡಿಸನ್ (ಯುಎಸ್ಎ)


  ಫೌಂಟೇನ್ ಪೆನ-ಲೆವಿಸ್ ಇ. ವಾಟರ್‌ಮ್ಯಾನ್ (ಯುಎಸ್ಎ)


 📣 ರಾಡಾರ್ಡಿಆರ್ ಎ. ಹೆಚ್. ಟೇಲರ್ ಮತ್ತು ಎಲ್. ಸಿ. ಯಂಗ್ (ಯುಎಸ್ಎ)


 📣 ರಿವಾಲ್ವರ್ -ಸ್ಯಾಮುಯೆಲ್ ಕೋಲ್ಟ್ (ಯುಎಸ್ಎ)


 ಜಲಾಂತರ್ಗಾಮಿ ➖ ಡಿ.  ಬುಶ್ನೆಲ್ (ಯುಎಸ್ಎ)


 📣 ಟೆಲಿಗ್ರಾಫ್- ಸ್ಯಾಮುಯೆಲ್ ಬಿ. ಮೋರ್ಸ್ (ಯುಎಸ್ಎ)


 📣 ವಿಕಿರಣಶೀಲತೆ -ಆಂಟೊಯಿನ್-ಹೆನ್ರಿ ಬೆಕ್ವೆರೆಲ್ (ಫ್ರಾನ್ಸ್)


 ಮೋಟಾರ್ ಕಾರ್ (ಪೆಟ್ರೋಲ್) -ಕಾರ್ಲ್ ಬೆಂಜ್ (ಜರ್ಮನಿ)


 ಮೋಟಾರ್ ಸೈಕಲ್ ಎಡ್ವರ್ಡ್ ಬಟ್ಲರ್ (ಬ್ರಿಟನ್)


 📣 ಟೆಲಿವಿಷನ್-ಜಾನ್ ಲೋಗಿ ಬೇರ್ಡ್ (ಬ್ರಿಟನ್)


 📣 ವಿದ್ಯುತ್ಕಾಂತೀಯ ಇಂಡಕ್ಷನ್ -ಮೈಕಲ್ ಫ್ಯಾರಡೆ (ಬ್ರಿಟನ್)

☘UNESCO ವಿಶ್ವ ಪರಂಪರೆಯ ತಾಣಗಳು☘


🔹🌸🔹🌸🔹🌸🔹🌸🔹🌸🔹


1. ತಾಜ್ ಮಹಲ್ - ಉತ್ತರ ಪ್ರದೇಶ [1983]


2. ಆಗ್ರಾ ಕೋಟೆ - ಉತ್ತರ ಪ್ರದೇಶ [1983]


3.ಅಜಂತಾ ಗುಹೆಗಳು - ಮಹಾರಾಷ್ಟ್ರ [1983]


4. ಎಲ್ಲೋರಾ ಗುಹೆಗಳು - ಮಹಾರಾಷ್ಟ್ರ [1983]


5. ಕೊನಾರ್ಕ್ ಸೂರ್ಯ ದೇವಾಲಯ - ಒಡಿಶಾ [1984]


6. ಮಹಾಬಲಿಪುರಮ್-ತಮಿಳ್ ನಾಡು ಸ್ಮಾರಕ ಗುಂಪು [1984]


7.ಕಾಜಿರಂಗಾ ರಾಷ್ಟ್ರೀಯ ಉದ್ಯಾನ - ಅಸ್ಸಾಂ  [1985]


8. ಮಾನಸ್ ವನ್ಯಜೀವಿ ಅಭಯಾರಣ್ಯ - ಅಸ್ಸಾಂ [1985]


9. ಕೆವಾಲಾ ದೇವ್ ರಾಷ್ಟ್ರೀಯ ಉದ್ಯಾನ - ರಾಜಸ್ಥಾನ [1985]


10. ಓಲ್ಡ್ ಗೋವಾದ ಚರ್ಚ್ ಮತ್ತು ಮಠ - ಗೋವಾ [1986]


11. ಮುಘಲ್ ನಗರ, ಫತೇಪುರ್ ಸಿಕ್ರಿ - ಉತ್ತರ ಪ್ರದೇಶ [1986]


12. ಹಂಪಿ ಸ್ಮಾರಕ ಗುಂಪು - ಕರ್ನಾಟಕ [1986]


13. ಖಜುರಾಹೊ ದೇವಸ್ಥಾನ - ಮಧ್ಯ ಪ್ರದೇಶ [1986]


14. ಎಲಿಫೆಂಟಾ ಗುಹೆಗಳು - ಮಹಾರಾಷ್ಟ್ರ [1987]


15. ಪತ್ತಕಲ್ ಸ್ಮಾರಕ ಗುಂಪು - ಕರ್ನಾಟಕ [1987]


16. ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ - ಡಬ್ಲ್ಯು. ಬಂಗಾಳ [1987]


17. ವಧೇಶ್ವರ ದೇವಾಲಯ ತಂಜಾವೂರು - ತಮಿಳುನಾಡು [1987]


18. ನಂದಾ ದೇವಿ ರಾಷ್ಟ್ರೀಯ ಉದ್ಯಾನ - ಉತ್ತರಾಖಂಡ್ [1988]


19. ಸಾಂಚಿ - ಮಧ್ಯ ಪ್ರದೇಶದ ಬೌದ್ಧ ಸ್ಮಾರಕ [1989]


20. ಹುಮಾಯೂನ್ ಸಮಾಧಿ - ದೆಹಲಿ [1993)


💧🌸💧🌸💧🌸💧🌸💧

🏅ಪ್ರಮುಖ ವಿಮಾನ ನಿಲ್ದಾಣಗಳ ಪ್ರಶಸ್ತಿಗಳು 🏅

 


🌺ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಮೊದಲ ಹಸಿರು ವಿಮಾನ ನಿಲ್ದಾಣವಾಗಿದೆ – ವಿಶ್ವದ ಮೊದಲ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ


🌺 ಇಂದಿರಾ ಗಾಂಧಿ ಇಂಟರ್ನ್ಯಾಷನಲ್ 2015 ರಲ್ಲಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ


🌺 ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐಎ) ವಿಮಾನ ನಿಲ್ದಾಣಗಳ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ನೀಡಿದ 2015 ರ ಮೂರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.


🌺 ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐಎ) ಸತತ ಎರಡನೇ ವರ್ಷಕ್ಕೆ 25-40 ಮಿಲಿಯನ್ ಪ್ರಯಾಣಿಕರು ಪ್ರತಿ ವರ್ಷ (ಎಂಪಿಪಿಎ) ವಿಭಾಗದಲ್ಲಿ ವಿಶ್ವದ ನಂಬರ್ 1 ಸ್ಥಾನದಲ್ಲಿದೆ.


🌺ಬಾಡಿ ಸ್ಕ್ಯಾನರ್ ಪಡೆದ ಭಾರತದ ಮೊದಲ ವಿಮಾನ ನಿಲ್ದಾಣ – ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ


🌺 ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನಿರ್ವಹಿಸಲ್ಪಡುವ ಜೈಪುರ ಮತ್ತು ಲಕ್ನೋದಲ್ಲಿನ ವಿಮಾನ ನಿಲ್ದಾಣಗಳು 2015 ರ ವಿಮಾನ ನಿಲ್ದಾಣ ಸೇವಾ ಗುಣಮಟ್ಟ (ಎಎಸ್‌ಕ್ಯೂ) ಪ್ರಶಸ್ತಿಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಗೆದ್ದಿವೆ.


🌺 ದೆಹಲಿ ವಿಮಾನ ನಿಲ್ದಾಣ ಗೋಲ್ಡನ್ ಪೀಕಾಕ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ 2015 ಪಡೆದಿದೆ


🌺ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಗ್ರೀನ್ ಕೋ ಪ್ಲಾಟಿನಂ ರೇಟಿಂಗ್ ಅನ್ನು ಸ್ವೀಕರಿಸುವ ಭಾರತದ ಮೊದಲನೆಯ ವಿಮಾನ ನಿಲ್ದಾಣವಾಗಿದೆ.


 🌀🌸🌀🌸🌀🌸🌀🌸🌀

🍎 ವಿಜ್ಞಾನದ ಹಲವು ಶಾಖೆಗಳು🍎

 


➤ ಏರೋಲಜಿ : ವಾತಾವರಣದ ಅಧ್ಯಯನ


➤ ಏರೋನಾಟಿಕ್ಸ್ : ಹಾರುವಿಕೆಯ ಬಗೆಗಿನ ಅಧ್ಯಯನ


➤ ಆಗ್ರೋಬಯಾಲಜಿ : ಸಸ್ಯ ಜೀವನ ಮತ್ತು ಸಸ್ಯ ಪೋಷಣೆಯ ಬಗೆಗಿನ ಅಧ್ಯಯನ.


➤ ಆಗ್ರೋಲಜಿ : ಮಣ್ಣಿನ ವಿಜ್ಞಾನದ ಶಾಖೆಯಾಗಿದ್ದು ಸಸ್ಯೋತ್ಪನ್ನದ ಬಗೆಗೆ ಅಧಯಯನ ನಡೆಸುತ್ತದೆ.


➤ ಆಗ್ರೋಸ್ಪಾಲಜಿ : ಹುಲ್ಲುಗಳ ಬಗೆಗೆ ಅಧ್ಯಯಿಸುವ ವಿಜ್ಞಾನ


➤ ಅನಸ್ತೇಸಿಯಾಲಜಿ : ಅರವಳಿಕೆ ಶಾಸ್ತ್ರ


➤ ಆರ್ಕಿಯಾಲಜಿ : ಪ್ರಾಚ್ಯ ವಸ್ತುಗಳ ಅಧ್ಯಯನ


➤ ಅಸ್ಟ್ರೋನಾಟಿಕ್ಸ್ : ಸೌರಯಾನ ಮತ್ತು ಸೌರ ವಾಹನಗಳ ಬಗೆಗಿನ ಅಧ್ಯಯನ.

➤ ಅಸ್ಟ್ರೋನಮಿ : ಸೌರವ್ಯೂಹದಲ್ಲಿನ ವಸ್ತುಗಳ ಬಗೆಗಿನ ಅಧ್ಯಯನ ನಡೆಸುವ ವಿಜ್ಞಾನ


➤ ಆಸ್ಟ್ರೋಜಿಯಾಲಜಿ : ಸೌರವ್ಯೂಹದಲ್ಲಿನ ಕಲ್ಲು ಮತ್ತು ಖನಿಜಗಳ ರಚನೆಯ ಬಗೆಗಿನ ಅಧ್ಯಯನ.


➤ ಬಯೋಕೆಮಿಸ್ಟ್ರಿ : ಜೈವಿಕ ಜೀವಿಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಬಗೆಗಿನ ಅಧ್ಯಯನ.


➤ ಬಯೋ ಜಿಯಾಗ್ರಫಿ : ಭೂಮಿಯ ಮೇಲೆ ಜೀವಿಗಳ ಹಂಚಿಕೆಯ ಬಗೆಗೆ ಅಧ್ಯಯನ


➤ ಬಯಾಲಜಿ : ಜೈವಿಕ ವಸ್ತುಗಳ ಬಗೆಗಿನ ಸಂಪೂರ್ಣ ಅಧ್ಯಯನ.


➤ ಬಯೊಮೆಟ್ರಿ : ಗಣಿತಶಾಸ್ತ್ರವನ್ನು ಉಪಯೋಗಿಸಿ ಸಜೀವ ವಸ್ತುಗಳ ಬಗೆಗಿನ ಅಧ್ಯಯನ.


➤ ಬಾಟನಿ : ಸಸ್ಯ ಮತ್ತು ಸಸ್ಯ ಜೀವನದ ಬಗೆಗೆ ಅಧ್ಯಯನ ನಡೆಸುವ ಶಾಸ್ತ್ರ


➤ ಕಾರ್ಡಿಯಾಲಜಿ : ಹೃದಯ ವಿಜ್ಞಾನ


➤ ಕಾರ್ಪೋಲಜಿ : ಹಣ್ಣು ಮತ್ತು ಬೀಜಗಳ ಬಗೆಗಿನ ಅಧ್ಯಯನ


➤ ಕಾಸ್ಮೆಟೋಲಜಿ : ಸೌಂದರ್ಯವರ್ದಕಗಳ ಮತ್ತು ಅವುಗಳ ಉಪಯೋಗದ ಬಗೆಗಿನ ಅಧ್ಯಯನ.


➤ ಕ್ರೈಯೋಜೆನಿಕ್ಸ್ : ಶೈತ್ಯಶಾಸ್ತ್ರ


➤ ಕ್ರಿಪ್ಟೋಲಜಿ : ರಹಸ್ಯ ಭಾಷೆ ಮತ್ತು ಬರಹಗಳ ಬಗೆಗಿನ ಅಧ್ಯಯನ


➤ ಸೈಟೋಲಜಿ : ಜೀವಕೋಶಗಳ ರಚನೆ ಮತ್ತು ಕಾರ್ಯಗಳ ಬಗೆಗಿನ ಅಧ್ಯಯನ.


➤ ಡೆಮೊಗ್ರಫಿ : ಸಾಮಾಜಿಕ ಅಂಕಿ- ಅಂಶಗಳ ಬಗೆಗಿನ ಅಧ್ಯಯನ


➤ ಡರ್ಮಿಟಾಲಜಿ : ಚರ್ಮದ ಬಗೆಗಿನ ಅಧ್ಯಯನ ನಡೆಸುವ ಔಷಧ ವಿಜ್ಞಾನ


➤ ಇಕಾಲಜಿ : ಜೀವಿಗಳ ಮತ್ತು ಪರಿಸರದ ನಡುವಿನ ಸಂಬಂಧಗಳ ಬಗೆಗಿನ ಅಧ್ಯಯನ


➤ ಎಡಪೋಲಜಿ : ಮಣ್ಣಿನ ವೈಜ್ಞಾನಿಕ ಅಧ್ಯಯನ


➤ ಎಂಟೊಮಾಲಜಿ : ಕೀಟಶಾಸ್ತ್ರ – ಕೀಟಗಳ ಬಗೆಗಿನ ಅಧ್ಯಯನ


➤ ಎಟಿಮಾಲಜಿ : ಶಬ್ಧಗಳ ಮೂಲ ಮತ್ತು ಇತಿಹಾಸದ ಅಧ್ಯಯನ


➤ ಜೆನೆಟಿಕ್ಸ್ : ತಳಿಶಾಸ್ತ್ರ- ಅನುವಂಶೀಯತೆ ಮತ್ತು ಅದರ ನಿಯಮಗಳ ಅಧ್ಯಯನ.


➤ ಜಿಯೋಡೆಸಿ : ಭೂಮಿಯ ಮೇಲ್ಮೈಯ ಸರ್ವೇಕ್ಷಣ ಮತ್ತು ನಕ್ಷೆಯ ರಚನೆ


➤ ಹೆಲ್ಮಿಂತಾಲಜಿ : ಹುಳುಗಳ ಬಗೆಗಿನ ಅಧ್ಯಯನ


➤ ಹೆಪಟಾಲಜಿ : ಕರುಳಿನ ಕುರಿತ ಅಧ್ಯಯನ


➤ ಹಿಸ್ಟಾಲಜಿ : ಅಂಗವ್ಯೂಹಗಳ ಬಗೆಗಿನ ಅಧ್ಯಯನ


➤ ಹೈಡ್ರೋಗ್ರಫಿ : ಸಮುದ್ರಗಳ ವೈಜ್ಞಾನಿಕ ಅಧ್ಯಯನ


➤ ಐಕನೋಗ್ರಫಿ : ಚಿತ್ರಗಳ ಮತ್ತು ಮಾದರಿಗಳ ಮೂಲಕ ವಿಷಯಗಳ ಕಲಿಕೆ


➤ ಲಿತಾಲಜಿ : ಶಿಲೆಗಳ ಗುಣಲಕ್ಷಣಗಳ ಅಧ್ಯಯನ


➤ ಮೆಕಾನಿಕ್ಸ್ : ವಸ್ತುಗಳ ಚಲನೆಯ ಬಗೆಗಿನ ಅಧ್ಯಯನ


➤ ಮೆಟಲರ್ಜಿ : ಲೋಹಗಳ ಕುರಿತ ಅಧ್ಯಯನ


➤ ಮೈಕ್ರೋಬಯಾಲಜಿ : ಸೂಕ್ಷ್ಮ ಜೀವಿಗಳ ಅಧ್ಯಯನ


➤ ನೆಫಾಲಜಿ : ಮೋಡಗಳ ಅಧ್ಯಯನ


➤ ನೆಫ್ರಾಲಜಿ : ಕಿಡ್ನಿ ರೋಗಗಳ ಅಧ್ಯಯನ


➤ ನ್ಯೂರೋಲಜಿ : ನರವ್ಯೂಹ, ಕಾರ್ಯ ಮತ್ತು ಅವ್ಯವಸ್ಥೆಯ ಕುರಿತ ಅಧ್ಯಯನ


➤ ಮೆಟಿಯೊರೋಲಜಿ : ವಾತಾವರಣ ಮತ್ತು ಅದರ ಪ್ರಕ್ರಿಯೆಗಳ ಕುರಿತ ಅಧ್ಯಯನ


➤ ಆಂಕಾಲಜಿ : ಕ್ಯಾನ್ಸರ್ನ ಅಧ್ಯಯನ


➤ ಆಪ್ತಾಲ್ಮೋಲಜಿ : ಕಣ್ಣು ಮತ್ತು ಕಣ್ಣಿನ ರೋಗಗಳ ಅಧ್ಯಯನ


➤ ಆರೋಲಜಿ : ಪರ್ವತಗಳ ಅಧ್ಯಯನ


➤ ಆರ್ನಿತೋಲಜಿ : ಪಕ್ಷಿಗಳ ಕುರಿತ ಅಧ್ಯಯನ


➤ ಆರ್ತೋಪೆಡಿಕ್ಸ್ : ಎಲಬು ಮತ್ತು ಮೂಳೆಗಳ ಅಧ್ಯಯನ


➤ ಪಿಡಿಯಾಟ್ರಿಕ್ಸ್ : ಶಿಶು ರೋಗಗಳ ಅಧ್ಯಯನ


➤ ಪೆಥಾಲಜಿ : ರೋಗಶಾಸ್ತ್ರ


➤ ಪೋಮಾಲಜಿ : ಹಣ್ಣು ಮತ್ತು ಹಣ್ಣಿನ ಬೆಳೆಗಳ ಅಧ್ಯಯನ


➤ ರೇಡಿಯೋಲಜಿ : ರೋಗ ಪತ್ತೆ ಮತ್ತು ಚಿಕಿತ್ಸೆಗೆ ಎಕ್ಸರೇ ಬಳಕೆ.


➤ ಸಿಸ್ಮೋಲಜಿ : ಭೂಕಂಪ ಮತ್ತು ಸಂಬಂಧಿಸಿದ ವಿಚಾರಗಳ ಅಧ್ಯಯನ


➤ ಸಿರಿಕಲ್ಚರ್ : ರೇಷ್ಮೇ ಸಾಕಾಣಿಕೆ, ರೇಷ್ಮೇ ಉತ್ಪಾದನೆ ಮತ್ತು ರೇಷ್ಮೇಗೆ ಸಂಬಂಧಿಸಿದ ವಿಷಯಗಳ ಅಧ್ಯಯನ.


➤ ವಿರೋಲಜಿ : ವೈರಸ್ಗಳ ಅಧ್ಯಯನ


➤ ಜುವಾಲಜಿ : ಪ್ರಾಣಿ ಜೀವನದ ಅಧ್ಯಯನ


➤ ಟ್ರೈಕಾಲಜಿ : ಕೂದಲಿನ ವೈಜ್ಞಾನಿಕ ಅಧ್ಯಯನ


➤ ಯುರೋಲಜಿ : ಮೂತ್ರನಾಳದ ರೋಗಶಾಸ್ತ್ರ


➤ ಫಿಲಾಲಜಿ : ಬೋಧನಾ ವಿಜ್ಞಾನ


🍁☘🍁☘🍁☘🍁☘ಪಿ

ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತ್ತರಗಳು

 

👇👇👇👇👇👇👇👇

1. ಭಾರತದ ನದಿಗಳನ್ನು ಯಾವ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.?

➤ 1. ಉತ್ತರ ಭಾರತದ ನದಿಗಳು 2.ದಕ್ಷಿಣ ಭಾರತದ ನದಿಗಳು


2. ಉತ್ತರ ಭಾರತದ ಮುಖ್ಯ ನದಿಗಳು ಯಾವುವು?

➤ ಸಿಂಧೂ ನದಿ, ಗಂಗಾ ನದಿ, ಬ್ರಹ್ಮಪುತ್ರ ನದಿ


3. ಸಿಂಧೂ ನದಿಯ ಉಗಮಸ್ಥಾನ ಯಾವುದು?

➤ ಮೌಂಟ್ ಕೈಲಾಸ್


4. ಸಿಂಧೂ ನದಿಯ ಪ್ರಮುಖ ಉಪನದಿಗಳು ಯಾವುವು?

➤ ಝೀಲಂ, ಚೀನಾಬ್, ಬಿಯಾಸ್, ರಾವಿ ಮತ್ತು ಸಟ್ಲೇಜ್.


5. ಗಂಗಾ ನದಿ ಯಾವ ಹಿಮನದಿಯಲ್ಲಿ ಹುಟ್ಟುತ್ತದೆ?

➤ ಗಂಗೋತ್ರಿ


6. ಗಂಗಾ ನದಿಯ ಉಪನದಿಗಳು ಯಾವುವು?

➤ ಘಾಗ್ರಾ, ಗಂಡಕ್, ಕೋಸಿ, ಚಂಬಲ್, ಯಮುನಾ, ಸೋನ್


7. ಚಂಬಲ್ ನದಿ ಎಲ್ಲಿ ಹುಟ್ಟುತ್ತದೆ?

➤ ಮಾಳ್ವಾ ಪ್ರಸ್ಥಭೂಮಿಯಲ್ಲಿ ಹುಟ್ಟಿ ಯಮುನಾ ನದಿ ಸೇರುತ್ತದೆ.


8. ಗಂಗಾ ನದಿ ಯಾವ ಯಾವ ದೇಶಗಳಲ್ಲಿ ಹರಡಿಕೊಂಡಿದೆ?

➤ಭಾರತ, ಟಿಬೆಟ್, ನೇಪಾಳ, ಬಾಂಗ್ಲಾದೇಶ


9. ಬ್ರಹ್ಮಪುತ್ರ ನದಿ ಯಾವ ಹಿಮನದಿಯಲ್ಲಿ ಹುಟ್ಟುತ್ತದೆ?

➤ಚೆಮಯುಂಗ್ಡುಂಗ್


10. ಭಾರತದಲ್ಲಿ ಬ್ರಹ್ಮಪುತ್ರ ನದಿಯು ಯಾವ ಆ ರಾಜ್ಯಗಳನ್ನು ಹರಡಿಕೊಂಡಿದೆ?

➤ಅರುಣಾಚಲ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.


11. ಕೋಸಿ ನದಿಯು ಯಾವ ನದಿಯ ಉಪನದಿಯಾಗಿದೆ?

➤ ಗಂಗಾ


12. ಕೋಸಿ ನದಿಯು ಯಾವ ಎಲ್ಲಿ ಹುಟ್ಟುತ್ತದೆ?

➤ ನೇಪಾಳದಲ್ಲಿ ಹುಟ್ಟಿ ಬಿಹಾರ ರಾಜ್ಯದಲ್ಲಿ ಗಂಗಾ ನದಿಯನ್ನು ಸೇರುತ್ತದೆ.


13. ಯಮುನಾ ನದಿಯು ಗಂಗಾ ನದಿಯನ್ನು ಸೇರುವ ಸ್ಥಳ ಯಾವುದು?

➤ ಅಲಹಾಬಾದ್


14. ಬ್ರಹ್ಮಪುತ್ರ ನದಿಯು ಎಲ್ಲಿ ಚೆಮಯುಂಗ್ಡುಂಗ್ ಹಿಮನದಿಯಲ್ಲಿ ಹುಟ್ಟುತ್ತದೆ?

➤ ಟಿಬೆಟ್


15. “ಯಾರ್ಲುಂಗ್ ಜಾಂಗಬೋ” ಮತ್ತು , “ತ್ಯಾಂಗ್ಪೋ” ನದಿಯ ಹೆಚ್ಚು ಪರಿಚಿತ ಹೇಸರೇನು?

➤ ಬ್ರಹ್ಮಪುತ್ರ


16. ಯಾವ ನದಿ ಗಂಗಾನದಿಯೊಂದಿಗೆ ಒಂದೇ ಮುಖಜ ಭೂಮಿಯನ್ನು ಸೃಷ್ಟಿಸಿದೆ?

➤ಬ್ರಹ್ಮಪುತ್ರ


17. ಜಗತ್ತಿನ ಅತಿ ದೊಡ್ಡ ಮುಖಜ ಭೂಮಿಯನ್ನು ಸೃಷ್ಟಿಸಿರುವ ನದಿಗಳು ಯಾವುವು?

➤ ಗಂಗಾ ಮತ್ತು ಬ್ರಹ್ಮಪುತ್ರ


18. ಪಶ್ಚಿಮ ಬಂಗಾಳದ ದು:ಖದ ನದಿ ಯಾವುದು?

➤ ದಾಮೋದರ ನದಿ


19. ಬಿಹಾರದ ದುಖ:ದ ನದಿ ಯಾವುದು?

➤ ಕೋಸಿ ನದಿ


20. ಭಾರತದ ಅತ್ಯಂತ ಉದ್ದವಾದ ( ಗಂಗಾ ನದಿ) ಉಪನದಿ ಯಾವುದು?

➤ಯಮುನಾ ನದಿ


21. ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ಹೆಚ್ಚಿನ ನದಿಗಳು ಬಂಗಾಳಕೊಲ್ಲಿಯನ್ನು ಸೇರಲು ಕಾರಣವೇನು?

➤ಪಶ್ಚಿಮಘಟ್ಟಗಳು ಪೂರ್ವದ ಕಡೆಗೆ ಇಳಿಜಾರಾಗಿರುವುದು.


22. ದಕ್ಷಿಣ ಭಾರತದ ಮುಖ್ಯ ನದಿಗಳು ಯಾವುವು?

➤ಗೋದಾವರಿ, ಕೃಷ್ಣಾ, ತುಂಗಭಧ್ರಾ, ನರ್ಮದಾ, ಕಾವೇರಿ , ತಪತಿ, ಮಹಾನದಿ


23. ಗೋದಾವರಿ ನದಿಯು ಎಲ್ಲಿ ಉಗಮಿಸುತ್ತದೆ?

➤ ನಾಸಿಕನ ತ್ರಯಂಬಕದಲ್ಲಿ


24. ಭಾರತದ ಪರ್ಯಾಯ ದ್ವೀಪದ ಅತಿ ಉದ್ದವಾದ ನದಿ ಯಾವುದು?

➤ ಗೋದಾವರಿ


25. ದಕ್ಷಿಣಗಂಗಾ ಎಂದು ಯಾವ ನದಿಯನ್ನು ಕರೆಯುತ್ತಾರೆ?

➤ ಗೋದಾವರಿ


26. ದಕ್ಷಿಣ ಭಾರತದ ಅತಿ ಉದ್ದವಾದ ನದಿ ಯಾವುದು?

➤ ಗೋದಾವರಿ ನದಿ


27. ದಕ್ಷಿಣ ಭಾರತದ ಎರಡನೆಯ ಅತಿ ದೊಡ್ಡ ನದಿ ಯಾವುದು?

➤ ಕೃಷ್ಣಾ ನದಿ


28. ಕೃಷ್ಣಾ ನದಿಯು ಎಲ್ಲಿ ಹುಟ್ಟುತ್ತದೆ.?

 ಮಹಾಬಲೇಶ್ವರ


29. ಕಾವೇರಿ ನದಿಯು ಎಲ್ಲಿ ಉಗಮಿಸುತ್ತದೆ?

➤ ತಲಕಾವೇರಿ


30. ಮಹಾನದಿಯು ಎಲ್ಲಿ ಹುಟ್ಟುತ್ತದೆ?

➤ ಸಿವಾಹ ಶ್ರೇಣಿ


31. ದಕ್ಷಿಣ ಭಾರತದಲ್ಲಿ ಹೆಚ್ಚು ಅಣೆಕಟ್ಟುಗಳಿರುವುದಕ್ಕೆ ಕಾರಣಗಳೇನು?

➤ ದಕ್ಷಿಣ ಭಾರತದ ನದಿಗಳು ನಿಯತಕಾಲಿಕವಾಗಿರುವುದು


32. ನರ್ಮದಾ ನದಿಯು ಯಾವ ಪ್ರಸ್ಥಭೂಮಿಯಲ್ಲಿ ಉಗಮವಾಗುತ್ತದೆ?

➤ ಅಮರಕಂಟಕ


33. ಕೃಷ್ಣಾ ನದಿಯ ಉಪನದಿಗಳು ಯಾವುವು?

➤ ಭೀಮಾ ನದಿ ಮತ್ತು ತುಂಗಭದ್ರಾ ನದಿ, ಘಟಪ್ರಭಾ ನದಿ.


34. ಕಾವೇರಿ ನದಿಯ ಉಪನದಿಗಳು ಯಾವುವು?

➤ ಹೇಮಾವತಿ, ಶಿಂಷಾ, ಕಬಿನಿ, ಭವಾನಿ


35. ಉತ್ತರ ಭಾರತದ ನದಿಗಳಿಗೂ ದಕ್ಷಿಣ ಭಾರತದ ನದಿಗಳಿಗೂ ಇರುವ ವ್ಯತ್ಯಾಸವೇನು?

➤ ಉತ್ತರ ಭಾರತದ ನದಿಗಳು ಬಹುಮಟ್ಟಿಗೆ ಹಿಮಾಲಯದಲ್ಲಿ ಉಗಮವಾಗುತ್ತದೆ. ಇವುಗಳಿಗೆ ಮಳೆ ಮತ್ತು ಹಿಮ ಕರಗುವದರಿಂದ ನೀರು ಒದಗುವುದರಿಂದ ಸದಾಕಾಲವೂ ತು0ಬಿ ಹರಿಯುತ್ತವೆ. ದಕ್ಷಿಣ ಭಾರತದ ನದಿಗಳು ಕೇವಲ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ. ಇವುಗಳು ನಿಯತಕಾಲಿಕ ನದಿಗಳು.


36. ದಕ್ಷಿಣ ಭಾರತದ ಹೆಚ್ಚಿನ ನದಿಗಳು ಪೂರ್ವಾಭಿಮುಖವಾಗಿ ಹರಿಯಲು ಕಾರಣವೇನು?

➤ ದಖ್ಖನ್ ಪ್ರಸ್ಥಭೂಮಿಯು ಪೂರ್ವಕ್ಕೆ ಇಳಿಜಾರಾಗಿದೆ. ಇಲ್ಲಿನ ಹೆಚ್ಚಿನ ನದಿಗಳು ದಖ್ಖನ್ ಪ್ರಸ್ಥಭೂಮಿಯ ಮೂಲಕ ಹರಿಯುತ್ತವೆ. ಹೀಗಾಗಿ ಈ ನದಿಗಳು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ.


37. ಪೂರ್ವಕ್ಕೆ ಹರಿಯುವ ಭಾರತದ ಪ್ರಮುಖ ನದಿಗಳಾವುವು?

➤ ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ


38. ಪಶ್ಚಿಮಕ್ಕೆ ಹರಿಯುವ ಕರ್ನಾಟಕದ ನದಿಗಳು ಯಾವುವು?

➤ ಶರಾವತಿ ಮತ್ತು ನೇತ್ರಾವತಿ


39. ಪರ್ಯಾಯ ಪ್ರಸ್ಥಭೂಮಿಯ ಪಶ್ಚಿಮಕ್ಕೆ ಹರಿಯುವ ಎರಡು ನದಿಗಳು ಯಾವುವು?

➤ ನರ್ಮದಾ ಮತ್ತು ತಪತಿ ನದಿ


40. ಭಾರತದ ಎರಡು ಪ್ರಸಿದ್ಧ ಉಪ್ಪುನೀರಿನ ಸರೋವರಗಳು ಯಾವುವು?

➤ ಚಿಲ್ಕಾ ಮತ್ತು ಪುಲಿಕಾಟ್


41. ಸಿಹಿನೀರಿನ ಎರಡು ಸರೋವರಗಳಾವುವು?

➤ ‘ ದಾಲ್’ ಸರೋವರ ( ಕಾಶ್ಮೀರ- ಶ್ರೀನಗರ) ಮತ್ತು ‘ನಾಲ್’ ಸರೋವರ (ಅಹ್ಮದಾಬಾದ್)


42. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು..?

➤ ಸಿಂಧೂ, ಯಮೂನಾ, ಗಂಗಾ


43. ಕಾರವಾರ ಬಂದರು ಹತ್ತಿರ ಹರಿದಿರುವ ನದಿ..?

➤ಕಾಳಿ


ಜಗತ್ತಿನ ಅತೀ ಉದ್ದವಾದ ಹಿಮನದಿ ಯಾವುದು ..?

➤ ಮೂಲಸ್ಪಿನಾ


44. ಭಾರತದ ಉದ್ದವಾದ ಹಿಮನದಿ ಯಾವುದು ..?

➤ ಸಿಯಾಚಿನ್


45. ಜಗತ್ತಿನ ದೊಡ್ಡದಾದ ನದಿ ಯಾವುದು ..?

➤ ಅಮೇಜಾನ್


46. ಅಲಹಬಾದದಲ್ಲಿ ಗಂಗಾನದಿಯೊಂದಿಗೆ ಕೂಡಿಕೊಳ್ಳುವ ನದಿ ಯಾವುದು ..?

➤ಯಮುನಾ


47  ಕರ್ನಾಟಕದಲ್ಲಿರುವ ಎಕೈಕ ನದಿ ದ್ವೀಪ ಯಾವುದು ..?

➤ ಶ್ರೀರಂಗ ಪಟ್ಟಣ


48. ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ ..?

➤ ಕೆಂಪುಸಮುದ್ರ


 💐🌸💐🌸💐🌸💐🌸💐

ವಿದ್ಯಾಗಮ ಪ್ರತಿ ತಿಂಗಳ ಶೈಕ್ಷಣಿಕ ಯೋಜನೆ 2021




ಜನವರಿ 2021

 6ನೇ ತರಗತಿಯ ಜನವರಿ 2021ರ ಪರ್ಯಾಯ ಶೈಕ್ಷಣಿಕ ಯೋಜನೆ
7ನೇ ತರಗತಿಯ ಜನವರಿ 2021ರ ಪರ್ಯಾಯ ಶೈಕ್ಷಣಿಕ ಯೋಜನೆ
8ನೇ ತರಗತಿಯ ಜನವರಿ 2021ರ ಪರ್ಯಾಯ ಶೈಕ್ಷಣಿಕ ಯೋಜನೆ
ಫಬ್ರವರಿ 2021
ಫೆಬ್ರವರಿ 2021ರ 7ನೇ ತರಗತಿಯ ಪರ್ಯಾಯ ಶೈಕ್ಷಣಿಕ ಯೋಜನೆ
ಫೆಬ್ರವರಿ 2021ರ 8ನೇ ತರಗತಿಯ ಪರ್ಯಾಯ ಶೈಕ್ಷಣಿಕ ಯೋಜನೆ
ಫೆಬ್ರವರಿ 2021ರ 9ನೇ ತರಗತಿಯ ಪರ್ಯಾಯ ಶೈಕ್ಷಣಿಕ ಯೋಜನೆ
ಫೆಬ್ರವರಿ 2021ರ 10ನೇ ತರಗತಿಯ ಪರ್ಯಾಯ ಶೈಕ್ಷಣಿಕ ಯೋಜನೆ

ಮಾರ್ಚ್ 2021
6 ನೇ ತರಗತಿ ಮಾರ್ಚ್ 2021 ಮಾಹೆಯ ಪರ್ಯಾಯ ಶೈಕ್ಷಣಿಕ ಯೋಜನೆ
7 ನೇ ತರಗತಿಯ ಮಾರ್ಚ್ 2021ರ ಮಾಹೆಯ ಪರ್ಯಾಯ ಶೈಕ್ಷಣಿಕ ಯೋಜನೆ
8 ನೇ ತರಗತಿಯ ಮಾರ್ಚ್ 2021ರ ಮಾಹೆಯ ಪರ್ಯಾಯ ಶೈಕ್ಷಣಿಕ ಯೋಜನೆ
9 ನೇ ತರಗತಿಯ ಮಾರ್ಚ್ 2021ರ ಮಾಹೆಯ ಪರ್ಯಾಯ ಶೈಕ್ಷಣಿಕ ಯೋಜನೆ
10 ನೇ ತರಗತಿಯ ಮಾರ್ಚ್ 2021ರ ಮಾಹೆಯ ಪರ್ಯಾಯ ಶೈಕ್ಷಣಿಕ ಯೋಜನೆ

ನಿಷ್ಠಾ ಕೋರ್ಸ್ ಲಿಂಕುಗಳು ಮತ್ತು ತರಬೇತಿ ಸಾಹಿತ್ಯಗಳು


 

ಕ್ರಸಂಖ್ಯೆ

  

KA_NEP_GC_ ಕೋರ್ಸ್ ಗಳ ಲಿಂಕುಗಳು 

 

ಜಾಯಿನ್

1.        

KA_NEP_GC_141_ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಪರಿಚಯಾತ್ಮಕ ಮಾಡ್ಯೂಲ್ (ಭವಿಷ್ಯದ ರೂಪುರೇಷೆಗಳು)

 

CLICK HERE TO JOIN

2.        

KA_NEP_GC_142_ಒಳಗೊಳ್ಳುವ ಶಿಕ್ಷಣ-ಶೈಕ್ಷಣಿಕ ಪ್ರಕ್ರಿಯೆ ಮತ್ತು ತರಗತಿ ಅನುಷ್ಠಾನ

 

CLICK HERE TO JOIN

3.        


KA_NEP_GC_143_ಹೆಣ್ಣುಮಕ್ಕಳ ಶಿಕ್ಷಣ

 

CLICK HERE TO JOIN

4.        


KA_NEP_GC_144_ಶಾಲಾಧಾರಿತ ಮೌಲ್ಯಾಂಕನ

 

CLICK HERE TO JOIN

5.        

KA_NEP_GC_145_NEP-2020: ತರಗತಿ ಪ್ರಕ್ರಿಯೆಯ ಸ್ವರೂಪ, ಬದಲಾವಣೆ ಹಾಗೂ ಅನುಷ್ಠಾನ

 

CLICK HERE TO JOIN

6.        


KA_NEP_GC_146_ಸಂಜ್ಞಾಭಾಷೆ

 

CLICK HERE TO JOIN

7.        


UPDATE WILL SOON

 

CLICK HERE TO JOIN

8.        

KA_NEP_GC_148_ವಿಶೇಷ ಸನ್ನಿವೇಶದ ಶಾಲೆಗಳಲ್ಲಿ -ತರಗತಿ ಪ್ರಕ್ರಿಯೆ ಸವಾಲುಗಳು ಮತ್ತು ಸಾಧ್ಯತೆಗಳು (ಅತಿ ಕಡಿಮೆ ಮಕ್ಕಳಿರುವ ಶಾಲೆಗಳು)

 

CLICK HERE TO JOIN

9.        

KA_NEP_GC_149_ ವಿಶೇಷ ಸನ್ನಿವೇಶದ ಶಾಲೆಗಳಲ್ಲಿತರಗತಿ ಪ್ರಕ್ರಿಯೆ ಸವಾಲುಗಳು ಮತ್ತು ಸಾಧ್ಯತೆಗಳು (ಅತಿ ಹೆಚ್ಚು ಮಕ್ಕಳಿರುವ ಶಾಲೆಗಳು)

 

CLICK HERE TO JOIN




KA_1_ಪಠ್ಯಕ್ರಮ ಮತ್ತು ಸಮನ್ವಯ ತರಗತಿ ಕೋಣೆಗಳು

KA_2_ಸುರಕ್ಷಿತ ಮತ್ತು ಆರೋಗ್ಯಕರ ಶಾಲಾ ಪರಿಸರ ನಿರ್ಮಾಣಕ್ಕಾಗಿ (ವೈ.ಸಾ.ಗು) ಅಭಿವೃದ್ಧಿ
KA_3_ ಶಾಲೆಗಳಲ್ಲಿ ಆರೋಗ್ಯ ಮತ್ತು ಕ್ಷೇಮKA_4 – ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಜೆಂಡರ್ ಸಮನ್ವಯತೆ