1. ಲ್ಯೂಸರ್ನ್ ಎಂದರೆ ಏನು?
ಎಲೆಗಳಿಗಾಗಿ ಬೆಳಸಿದ ಬೆಳೆ
2. ವ್ಯಾಪಕ ಬಳಕೆಯಲ್ಲಿರುವ ಜೀವನಿರೋಧಕ ಪೆನ್ಸಿಲಿನ್ ಯಾವುದರಿಂದ ಉತ್ಪತ್ತಿಯಾಗುತ್ತದೆ?
ಒಂದು ಶೀಲಿಂಧ್ರ
3. ಹವಾಮಾನ ಮತ್ತು ವಾಯುಗುಣದ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಪವನಶಾಸ್ತ್ರ
4. ಒಬ್ಬ ಮನುಷ್ಯ ಹುಟ್ಟಿದ ದಿನ ಮತ್ತು ವರ್ಷವನ್ನು ಆಧರಿಸಿ ಭವಿಷ್ಯ ಹೇಳುವ ಶಾಸ್ತ್ರ ಯಾವುದು?
ಅಂಕಿಶಾಸ್ತ್ರ
5. ಪಾರಾಸಿಟಾಮಾಲ್….
ನೋವು ನಿವಾರಿಸುತ್ತದೆ.
6. ಜಿಯೋಲೈಟ್ ಉಪಯೋಗಿಸುವುದು…..
ಕಾಗದವನ್ನು ವಿವರ್ಣಿಕರಣಗೊಳಿಸಲು
7. ಶರ್ಬತಿ ಸೊನೋರ ಎಂಬುದು?
ಗೋಧಿಯ ಒಂದು ಮಾದರಿ
8. ಸಾರಜನೀಕರಣ ಎಂದರೆ ಏನು?
ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು
9. ಅತಿ ಸೂಕ್ಷ್ಮ ಗಾತ್ರದ ಜೀವಕೋಶ
ವೈರಸ್
10. ಬೀಜಗಳನ್ನು ಅತ್ಯುತ್ತಮ ರೀತಿಯಲ್ಲಿ ಶೇಖರಿಸಿಡಲು ಉಪಯೋಗಿಸುವ ಪದ್ಧತಿ..
ತಂಪಾದ ಶುಷ್ಕ ಪರಿಸ್ಥಿತಿ
11. ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಗೆ ಏನೆಂದು ಕರೆಯುತ್ತಾರೆ?
ಎಂಟೆಮೋಫಿಲಿ
12.ರೋಗಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಪೆಥಾಲಜಿ
13. ಬೆಳಕಿನ ತೀವ್ರತೆಯನ್ನು ಅಳೆಯುವ ವಿಧಾನ ಯಾವುದು?
ದ್ಯುತಿ ಮಾಪನ
14. ‘ಪಾತ್ರೆಯಲ್ಲಿ ತುಂಬಿಟ್ಟ ಒಂದು ಬಿಂದುವಿನಲ್ಲಿ ಪ್ರಯೋಗಿಸಿದ ಒತ್ತಡ ಅದರ ಎಲ್ಲಾ ಬಿಂದುಗಳಿಗೂ ಸಮರೂಪದಲ್ಲಿ ಪ್ರಸರಣವಾಗುವುದು’ ಇದು ಯಾವ ನಿಯಮ?
ಪ್ಯಾಸ್ಕಲ್ ನಿಯಮ
15. ವಸ್ತುವಿನ ಕಣಗಳ ಚಲನೆ ಇಲ್ಲದೆಯೇ ಒಂದು ಕಣದಿಂದ ಪಕ್ಕದ ಕಣಕ್ಕೆ ಶಾಖ ಪ್ರಸಾರವಾಗುವ ಕ್ರಿಯೆಗೆ…
ಉಷ್ಣವಹನ
16. ಎಲೆಕ್ಟ್ರಿಕ್ ಬಲ್ಬ್‍ನ ತಂತಿಯನ್ನು ಯಾವುದರಿಂದ ಮಾಡುತ್ತಾರೆ?
ಟಂಗ್‍ಸ್ಟನ್
17. ನೀರಿನ ಶಾಶ್ವತ ಗಡಸುತನವನ್ನು ನಿವಾರಿಸಲು…..
ವಾಷಿಂಗ್‍ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು
18. ನೀರನ್ನು ಕ್ಲೋರಿಕರಣ ಮಾಡಲು ಕಾರಣ…
ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು
19. ಟಿಂಚರು ಇದು….
ಅಲ್ಕೋಹಾಲಿನ ದ್ರವ
20. ಲೋಹಗಳನ್ನು ತಟ್ಟಿ ತಗಡುಗಳನ್ನಾಗಿ ಮಾಡಬಹುದು. ಲೋಹದ ಈ ಗುಣವೇ..
ಪತ್ರಶೀಲತ್ವ