ನಾಯಕತ್ವ Leadership


ಬದುಕಿನಲ್ಲಿ ಯಾವುದೇ ಶಾರ್ಟ್ ಕಟ್‌ಗಳಿಲ್ಲ. ನಾಯಕ ಆಗಬೇಕೆಂದು ಹೊರಡುವ ಮುನ್ನ ಮನಸ್ಸನ್ನು ತೆರೆದಿಡಿ. ನಾನೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ.

 ನಾಯಕನಾಗುವುದು ಮತ್ತು ನಾಯಕನಾಗಿಯೇ ಉಳಿಯುವುದು ಸುಲಭದ ಮಾತಲ್ಲ. ಆತನನ್ನು ಎಲ್ಲರೂ ನೋಡುತ್ತಾ ಇರುತ್ತಾರೆ. ಆತ ಏನು ಮಾಡುತ್ತಾನೆ ಎಂಬುದನ್ನು ಗಮನಿಸುತ್ತಿರುತ್ತಾರೆ.

ನಾಯಕನಾದವನ ವರ್ತನೆ ಮತ್ತು ಚಿಂತನೆಯನ್ನು ಇತರರು ಹೇಗೆ ಅನುಸರಿಸುತ್ತಾರೆ ಎಂಬುದನ್ನು ಗಮನಿಸಿ. ಕೆಲಸದ ಸ್ಥಳ ಮತ್ತು ಅಲ್ಲಿನ ವಾತಾವರಣವನ್ನು ದೂಷಿಸುವುದು ಸಲ್ಲದು. ನಾಯಕತ್ವ ಪಡೆಯುವ ನಿಟ್ಟಿನಲ್ಲಿ ಸರಿಯಾದ ಸ್ಥಳ ಮತ್ತು ಸರಿಯಾದ ಸಮಯದಲ್ಲಿಯೇ ನೀವು ಅಲ್ಲಿದ್ದೀರಿ.
ಯಾವುದೇ ಸಾಧನೆಗೆ ಆತ್ಮ ಬಲ ಮುಖ್ಯ. ಧರ್ಮಕ್ಕೆ ಬದ್ಧರಾಗಿಯೂ ಇರಬೇಕು. ಒಳಗಿನ ಶಕ್ತಿಯನ್ನು ಜಾಗೃತಗೊಳಿಸಿ, ಮುನ್ನಡೆಯಬೇಕು. ಮಾಡುವ ಕೆಲಸ ತಪ್ಪು ಅಥವಾ ಸರಿ ಇರಬಹುದು. ಒಟ್ಟಿನಲ್ಲಿ ಮುನ್ನಡೆಯುವುದು ಮುಖ್ಯ. ನಿಮಗೆ ಏನು ಮತ್ತು ಎಷ್ಟು ಸಾಧ್ಯವಾಗುವುದೋ ಅದನ್ನು ಮಾಡಿ ಬಿಡಿ. ಇದನ್ನೇ ಕೃಷ್ಣ, ಅರ್ಜುನನಿಗೆ ಭಗವದ್ಗೀತೆಯಲ್ಲಿ ಹೇಳಿದ್ದಾನೆ.
ಪ್ರೇರಣೆಯು ಒಂದು ಕೆಲಸದ ಆರಂಭಕ್ಕೆ ದಾರಿಯಾಗುತ್ತದೆ. ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ ಎನ್ನುವ ಆರು ಸೂತ್ರಗಳನ್ನು ಪಾಲಿಸಿದಾಗ ಯಶಸ್ಸು ಹುಡುಕಿಕೊಂಡು ಬರುತ್ತದೆ. ಇದರ ಜತೆಗೆ ಪ್ರಾರ್ಥನೆಯನ್ನೂ ಆರಂಭಿಸಿದರೆ ದೇವರು ನಿಮಗೆ ಹಸ್ತಲಾಘವ ಮಾಡುತ್ತಾನೆ. ಆರು ಸೂತ್ರಗಳ ಅನುಸರಿಸುವಾಗ, ಯಾವುದಾದರೂ ಒಂದು ಲೋಪವಾದರೂ ಪ್ರಾರ್ಥನೆಯಿಂದ ಅದನ್ನು ಸರಿತೂಗಿಸಬಹುದು. ಅಲ್ಲದೇ ಅಸಹಾಯಕತೆಯನ್ನು ಪ್ರಾರ್ಥನೆ ಹೋಗಲಾಡಿಸುತ್ತದೆ.

 ಪ್ರಾರ್ಥನೆ ಸೇರಿದಂತೆ ಈ ಏಳು ಸೂತ್ರಗಳನ್ನು ನೀವು ಅನುಸರಿಸಿದರೆ, ನಾಯಕತ್ವ ವೃದ್ಧಿಗೆ ಸಂಬಂಧಿಸಿದ ಯಾವುದೇ ಕಾರ್ಯಾಗಾರಗಳು ಬೇಕಾಗುವುದಿಲ್ಲ. ಉದ್ಯಮ ಯಶಸ್ಸು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಿಮಗಾಗಿ ನೀವು ಎಂದೂ ಕೆಲಸ ಮಾಡದಿರಿ. ನಿಮ್ಮ ಜ್ಞಾನ ಅಥವಾ ಕೌಶಲ ಹಂಚಿಕೊಳ್ಳುವ ಕಾರಣಕ್ಕೆ ಕೆಲಸ ಮಾಡಿ. ಒಂದು ಉದ್ಯಮದ ಯಶಸ್ಸು ಅಥವಾ ನಾಯಕತ್ವ ಪಡೆಯುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲದ ಸದ್ಭಳಕೆಯೂ ಬಹಳ ಮುಖ್ಯ. ಕಾಲಕಾಲಕ್ಕೆ ಅಪ್‌ಡೇಟ್ ಆಗುವುದು ಇನ್ನೂ ಮುಖ್ಯ. ಸದ್ಯದ ಸಂದರ್ಭದಲ್ಲಿ ನ್ಯಾಯ ಕೊಡುವುದು ಹೇಗೆ ಎನ್ನುವುದು ಗೊತ್ತಿರಬೇಕು.

  Click below links 👇

👉 Leadership

👉 Achievement

👉Discipline