ದಿನಕ್ಕೊಂದು ಮಾಹಿತಿ

ಆತ್ಮೀಯ ಶಿಕ್ಷಕ ಬಂಧುಗಳೇ ಈ ವಿಭಾಗದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಶಿಕ್ಷಕರ ಕೈಪಿಡಿಯಿಂದ ಬಿತ್ತರಿಸಲಾಗುತ್ತಿದೆ ದಯವಿಟ್ಟು ಇದರ ಪ್ರಯೋಜನವನ್ನು ಪಡೆದು ಇತರರಿಗೆ ಶೇರ್ ಮಾಡಿ ಧನ್ಯವಾದಗಳೊಂದಿಗೆ
ಮನೋಹರ್ ಆರ್



World environment day is very important day in our life. It is the day when we get aware of issues related to our environment and pledge to keep it safe for our better future. We should take care of our environment all through the life. It can be done only when we will keep our eyes open and be active to bring some positive changes within ourselves and environment. We should make our kids and children aware about this issue so that they can be the active agents of this campaign in future. The condition of our healthy environment is getting declined day by day just because of the industrialization, deforestation, technological development, global warming, pollution, etc. It affects the health of living beings and environment very badly.




Following are some short speech and long speech on World Environment Day given by us. All the speech on World Environment Day will surely help students to take part in the speech recitation activity in the school or college at this event celebration or debate competition programme. Following World Environment Day speech provided below are written using very easy words and small sentences especially for the students. So, you can select any speech on World Environment Day according to your need and requirement




************************


*WhatsApp ನಲ್ಲಿ ಸ್ವಯಂ ಡೌನ್‌ಲೋಡ್ ತಡೆಯಲು ಹೀಗೆ ಮಾಡಿ*




ಹೆಚ್ಚಿನವರು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ (WhatsApp) ಎಂಬ ಪ್ರಭಾವಶಾಲಿ ಸಂವಹನ ಆ್ಯಪ್ ಬಳಸುತ್ತಾರೆ. ಫೇಸ್‌ಬುಕ್, ಟ್ವಿಟರ್ ಜತೆಗೆ ವಾಟ್ಸಾಪ್ ಕೂಡ ಈಗ ಸಂಪರ್ಕಸೇತುವಾಗಿ, ಸ್ನೇಹ ಸೇತುವಾಗಿ, ಫೈಲ್‌ಗಳ ಹಂಚಿಕೆಗಾಗಿ, ಗುಂಪು ರಚನೆಗಾಗಿ ಉತ್ತಮ ಸಾಮಾಜಿಕ ಮಾಧ್ಯಮವಾಗಿ ಹೊರಹೊಮ್ಮಿದೆ. ಈ ಆ್ಯಪ್ ಅಳವಡಿಸಿಕೊಂಡರೆ, ಲೈವ್ ಚಾಟ್ ಮಾತ್ರವೇ ಅಲ್ಲದೆ, ಫೋಟೋ, ವೀಡಿಯೋ, ಧ್ವನಿ ಸಂದೇಶಗಳ ವಿನಿಮಯ ಸಾಧ್ಯವಾಗಿದ್ದು, ಶೀಘ್ರದಲ್ಲೇ ಉಚಿತವಾಗಿ ಅಂದರೆ, ಇಂಟರ್ನೆಟ್ ಮೂಲಕ ಕರೆ ಸೌಲಭ್ಯವೂ ದೊರೆಯಲಿದೆ.

ಆದರೆ, ಇದರಲ್ಲಿ ಬರುವ ಫೈಲ್‌ಗಳ ಆಟೋ-ಡೌನ್‌ಲೋಡಿಂಗ್ ಹಾಗೂ ಅದಕ್ಕಾಗಿ ಅನವಶ್ಯ ಡೇಟಾ (ಇಂಟರ್ನೆಟ್) ವೆಚ್ಚ ವ್ಯಯವಾಗುತ್ತಿರುವ ಬಗ್ಗೆ ಕೆಲವರು ದೂರಿದ್ದಾರೆ. ಫೇಸ್‌ಬುಕ್‌ನಲ್ಲಿರುವಂತೆ ಇಲ್ಲಿಯೂ ತಮ್ಮನ್ನು ಯಾವುದೋ ಒಂದು ಗ್ರೂಪ್‌ಗೆ ಸೇರಿಸಿ, ದಿನಕ್ಕೆ ಹತ್ತು ಹಲವಾರು ಆಡಿಯೋ, ವೀಡಿಯೋ, ಫೋಟೋ ಫೈಲ್‌ಗಳು ಬರುತ್ತಿವೆ ಮತ್ತು ಪದೇ ಪದೇ ಫೋನ್ ನೋಟಿಫಿಕೇಶನ್ ಧ್ವನಿ ಕಿರಿಕಿರಿ ಮಾಡುತ್ತಿದೆ ಎಂಬುದರ ಬಗ್ಗೆ ಮತ್ತೆ ಕೆಲವರು ದೂರಿದ್ದಾರೆ. ಅದಕ್ಕೆ ಒಂದಿಷ್ಟು ಟಿಪ್ಸ್.

ಮೊದಲನೆಯದಾಗಿ, ನಮ್ಮ ಪ್ರೈವೆಸಿ ಅಂದರೆ ಖಾಸಗಿತನದ ರಕ್ಷಣೆ. ನಿಮ್ಮ ಪ್ರೊಫೈಲ್ ಜತೆಗೆ, ಎಷ್ಟು ಹೊತ್ತಿಗೆ ನೀವು ಈ ಆ್ಯಪ್ ಬಳಸಿದ್ದೀರಿ (‘last seen’) ಎಂಬ ಮಾಹಿತಿಯನ್ನು ಯಾರು ಬೇಕಾದರೂ ನೋಡಬಹುದು. ಈ ಮಾಹಿತಿ ಮುದ್ರೆ ಬೇರೆಯವರಿಗೆ ಕಾಣಿಸದಂತೆ ಮಾಡಲು, ವಾಟ್ಸಾಪ್ ತೆರೆದು, ಅದರ ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳಿರುವ ಗುರುತು ಟಚ್ ಮಾಡಿದ್ರೆ ಸೆಟ್ಟಿಂಗ್ಸ್ ಮೆನು ತೆರೆದುಕೊಳ್ಳುತ್ತದೆ. ಅದರಲ್ಲಿ Accounts ನಲ್ಲಿ Privacy ಎಂಬಲ್ಲಿ, Last Seen ಎಂಬ ಆಯ್ಕೆಯನ್ನು ಪ್ರೆಸ್ ಮಾಡಿದ ಬಳಿಕ ಲಭ್ಯವಿರುವ ಮೂರು ಆಯ್ಕೆಗಳಲ್ಲಿ Nobody ಎಂಬುದನ್ನು ಗುರುತು ಮಾಡಿದರಾಯಿತು. ನೀವು ಎಷ್ಟೊತ್ತಿಗೆ ವಾಟ್ಸಾಪ್ ಬಳಸಿದ್ದೀರಿ ಎಂಬುದು ಯಾರಿಗೂ ತಿಳಿಯಲಾರದು.

ಇತ್ಯಾದಿ) ಸಾಧನದ ಆಂತರಿಕ ಮೆಮೊರಿಯಲ್ಲಿ (ROM) ತಾನಾಗಿಯೇ ಡೌನ್‌ಲೋಡ್ ಆಗಿಬಿಟ್ಟು, ಉಳಿದ ಫೈಲ್ ಸೇವ್ ಮಾಡಲು ಜಾಗವೇ ಸಾಲದಾಗಬಹುದು. ಅದಕ್ಕೇನು ಪರಿಹಾರ? ಪ್ರಸ್ತುತ, ವಾಟ್ಸಾಪ್ ಮೀಡಿಯಾ ಫೈಲ್‌ಗಳನ್ನು ಎಸ್‌ಡಿ ಕಾರ್ಡ್‌ಗೆ ಡೌನ್‌ಲೋಡ್ ಆಗುವಂತೆ ಮಾಡಲು ಸಾಧ್ಯವಿಲ್ಲ. ಆ್ಯಪ್ ಅನ್ನೇ ಎಸ್‌ಡಿ ಕಾರ್ಡ್‌ಗೆ ಮೂವ್ ಮಾಡಿದರೆ ಮಾತ್ರವೇ ಇದು ಸಾಧ್ಯವಾಗುತ್ತದೆ. ಆದರೆ, ಈ ಆಯ್ಕೆ ವಾಟ್ಸಾಪ್‌ನಲ್ಲಿನ್ನೂ ಲಭ್ಯವಿಲ್ಲ. ಆದರೆ ಈ ಫೈಲ್‌ಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗದಂತೆ ತಡೆದು ಇಂಟರ್ನೆಟ್ ಡೇಟಾ ಶುಲ್ಕದಲ್ಲಿ ಉಳಿತಾಯ ಮಾಡಬಹುದು. ಅದಕ್ಕೆ ಹೀಗೆ ಮಾಡಿ.

ಸೆಟ್ಟಿಂಗ್ಸ್‌ನಲ್ಲಿ Chat Settings ಎಂಬ ವಿಭಾಗಕ್ಕೆ ಹೋದರೆ, Media Auto-download ಎಂಬ ಆಯ್ಕೆ ಲಭ್ಯವಿರುತ್ತದೆ. ಅದರೊಳಗೆ ಪ್ರವೇಶಿಸಿದರೆ, When using mobile data ಅಂತ ಬರೆದಿರುವುದನ್ನು ಪ್ರೆಸ್ ಮಾಡಿದರೆ, ಚಿತ್ರ, ವೀಡಿಯೋ ಅಥವಾ ಆಡಿಯೋ ಪ್ರತ್ಯೇಕವಾಗಿ ಡೌನ್‌ಲೋಡ್‌ಗೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ನಿಮಗೆ ಬೇಕಾಗಿರುವ ಬಾಕ್ಸ್‌ಗೆ ಚೆಕ್ ಗುರುತು ಹಾಕಿ. ಎಲ್ಲ ಬಾಕ್ಸ್‌ಗಳಿಂದಲೂ ಅನ್-ಚೆಕ್ ಮಾಡಿದರೆ ಯಾವುದೂ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವುದಿಲ್ಲ. ಆದರೆ, ಉಚಿತ ವೈ-ಫೈ ಸೌಕರ್ಯವಿದ್ದಲ್ಲಿ, ವೈಫೈ ಮೂಲಕ ಮಾತ್ರ ಸ್ವಯಂ-ಡೌನ್‌ಲೋಡ್ ಆಗುವಂತೆ ಹೊಂದಿಸುವ ಆಯ್ಕೆಯೂ ಸೆಟ್ಟಿಂಗ್ಸ್ > Media Auto-download ವಿಭಾಗದಲ್ಲೇ ಇದೆ. ಬಳಿಕ, ಯಾರಾದರೂ ಕಳಿಸಿರೋ ಫೈಲ್ ಬೇಕೆಂದಾದರೆ, ನೀವೇ ಆ ಚಿತ್ರ/ವೀಡಿಯೋ ಮೇಲೆ ಮಾತ್ರ ಕ್ಲಿಕ್ ಮಾಡಿದರೆ ಅದು ಡೌನ್‌ಲೋಡ್ ಆಗುತ್ತದೆ.
ನೀವೇನಾದರೂ ವಾಟ್ಸಾಪ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಿದ್ದರೆ, ಸೆಟ್ಟಿಂಗ್ಸ್‌ನಲ್ಲಿ Account ಅಂತ ಹೋದ್ರೆ, ಅಲ್ಲಿ Change number ಎಂಬ ಆಯ್ಕೆ ಇರುತ್ತದೆ. ಹಳೆಯ ಹಾಗೂ ಹೊಸ ಸಂಖ್ಯೆಯನ್ನು ಹಾಕಿದರಾಯಿತು. ಆದರೆ, ನಿಮ್ಮ ಎಲ್ಲ ವಾಟ್ಸಾಪ್ ಸ್ನೇಹಿತರಿಗೂ ಅವರವರ ಮೊಬೈಲ್‌ನಲ್ಲಿ ನಿಮ್ಮ ಹಳೆಯ ನಂಬರ್ ಡಿಲೀಟ್ ಮಾಡಲು ಮತ್ತು ಹೊಸದನ್ನು ಸೇರಿಸಲು ಸಂದೇಶದ ಮೂಲಕ ಒತ್ತಾಯಿಸುವುದು ಅಗತ್ಯ.
ಸ್ಮಾರ್ಟ್‌ಫೋನ್ ಕಳೆದುಹೋದಾಗ ಇದನ್ನೂ ಪ್ರಯತ್ನಿಸಿ ನೋಡಿ…


ನಾವು ಅಷ್ಟು ಆಸ್ಥೆಯಿಂದ, ನಮ್ಮೆಲ್ಲಾ ಬೇಕು ಬೇಡಗಳನ್ನು ತುಂಬಿಸಿದ್ದ ಸ್ಮಾರ್ಟ್‌ಫೋನ್ ಕಳೆದು ಹೋದರೆ ಆಗುವ ಚಡಪಡಿಕೆ ಯಾರಲ್ಲೂ ಹೇಳಿಕೊಳ್ಳಲಾಗದು. ಅಷ್ಟೊಂದು ಅಮೂಲ್ಯ ಮಾಹಿತಿಗಳನ್ನು ನಾವು ಅದಕ್ಕೆ ಊಡಿಸಿಬಿಟ್ಟಿರುತ್ತೇವೆ. ಎಲ್ಲ ಲಾಗಿನ್‌ಗಳು, ಪಾಸ್‌ವರ್ಡ್‌ಗಳು, ಕ್ರೆಡಿಟ್-ಡೆಬಿಟ್ ಕಾರ್ಡ್ ವಿವರಗಳು ಎಲ್ಲವೂ ಅದರಲ್ಲಿ ಶೇಖರವಾಗಿರುವಾಗ ಹೃದಯವೇ ಬಾಯಿಗೆ ಬಂದಂತಾಗುತ್ತದೆ. ಹೊಸದಾಗಿ ಫೋನ್ ಕೊಂಡುಕೊಂಡರಂತೂ ಎಲ್ಲೋ ಮರೆತು ಬಿಟ್ಟು ಬಂದಾಗ ಆಗುವ ಯಾತನೆ ಹೇಳತೀರದು.
ನಮ್ಮ ಕಣ್ಣ ದೃಷ್ಟಿಯಿಂದ ಮರೆಯಾದ ಫೋನನ್ನು ಹುಡುಕುವುದು ಹೇಗೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಫೋನ್‌ನ ಐಎಂಐಇ ಸಂಖ್ಯೆಯನ್ನು (ಅದರ ಬಾಕ್ಸ್‌ನಲ್ಲಿರುವ ಸ್ಟಿಕರ್‌ನಲ್ಲಿರುತ್ತದೆ) ತೆಗೆದುಕೊಂಡು, ಪೊಲೀಸ್ ಠಾಣೆಗೆ ದೂರು ನೀಡುವುದು ಒಂದು ವಿಷಯವಾದರೆ, ಸೈಬರ್ ಪೊಲೀಸರು ಹುಡುಕಿ ತಂದುಕೊಡುವಷ್ಟರೊಳಗೆ ಸಾಧ್ಯವಾದಲ್ಲಿ ನಾವೂ ಒಂದು ಬಾರಿ ಪ್ರಯತ್ನಿಸಿ ನೊಡಲು ಇಲ್ಲಿದೆ ವಿಧಾನ.
ಇಂಟರ್ನೆಟ್ ಸಂಪರ್ಕ ಮೂಲಕ ನಮ್ಮ ಫೋನನ್ನು ಯಾವುದೇ ಇಮೇಲ್ ಐಡಿ ಜತೆಗೆ ಸಿಂಕ್ ಮಾಡಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಇಲ್ಲಿ ಸಂಪರ್ಕ ಸಂಖ್ಯೆಗಳೆಲ್ಲವೂ ಸಿಂಕ್ ಆಗಿರುವುದರಿಂದ ಯಾವಾಗಲಾದರೂ ಕಳೆದುಹೋದಾಗ ಅಥವಾ ಫೋನ್ ಬದಲಾಯಿಸಬೇಕಾದಾಗಲೂ, ಎಲ್ಲೋ ಮರೆತುಬಿಟ್ಟ ಫೋನ್ ಹುಡುಕಲೂ ಅನುಕೂಲ.
ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್ನಿರ್ಮಿತವಾದ ಒಂದು ವ್ಯವಸ್ಥೆ ಇದೆ. ಮನೆಯೊಳಗೆ ಎಲ್ಲಿ ಇಟ್ಟಿದ್ದೀರಿ, ಎಲ್ಲಿ ಮರೆಯಾಗಿದೆ ಅಂತ ಸುಲಭವಾಗಿ ತಿಳಿದುಕೊಳ್ಳಬಹುದು ಅಥವಾ ಹೊರಗೆಲ್ಲಾದರೂ ಇದ್ದರೆ ಇಲ್ಲವೇ ಕಳವಾದರೆ ಅದರ ಎಲ್ಲ ಮಾಹಿತಿಯನ್ನು ದೂರಸ್ಥವಾಗಿಯೇ ಅಳಿಸಿಬಿಡಬಹುದು ಅಥವಾ ಅದನ್ನು ಬಳಸಲಾಗದಂತೆ ಲಾಕ್ ಮಾಡಬಹುದು.
ಆಂಡ್ರಾಯ್ಡ್‌ನಲ್ಲಿ
ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಎಂಬ ಗೂಗಲ್‌ನhttps://www.google.com/android/devicemanager ತಾಣಕ್ಕೆ ಹೋಗಿ, ನಿಮ್ಮ ಸಾಧನಕ್ಕೆ ಬಳಸಿದ ಜಿಮೇಲ್ ಖಾತೆಗೆ ಲಾಗಿನ್ ಆದಾಗ, ಹಿನ್ನೆಲೆಯಲ್ಲಿ ನಕ್ಷೆ ಇರುವ ಪುಟವೊಂದು ಕಾಣಿಸುತ್ತದೆ. ಅಲ್ಲಿ ನಿಮ್ಮ ಸಾಧನದ ಹೆಸರೂ ಕಾಣಿಸುತ್ತದೆ. ಹೆಚ್ಚು ಸಾಧನಗಳಿದ್ದರೆ, ಅಲ್ಲೇ ಕಾಣಿಸುವ ಡ್ರಾಪ್‌ಡೌನ್ ಮೆನುವಿನಿಂದ ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿದ ಬಳಿಕ, ಪಕ್ಕದಲ್ಲೇ ಕಾಣಿಸುವ ನ್ಯಾವಿಗೇಶನ್ ಬಟನ್ ಕ್ಲಿಕ್ ಮಾಡಬೇಕು. ಸಾಧನ ಕೊನೆಯ ಬಾರಿಗೆ ಎಲ್ಲಿತ್ತು ಎಂಬ ಮಾಹಿತಿ ನಕ್ಷೆ ಸಮೇತ ಕಾಣಿಸುತ್ತದೆ. ಕೆಳಗೆ ಮೂರು ಆಯ್ಕೆಗಳು ಗೋಚರಿಸುತ್ತವೆ. ಸಮೀಪದಲ್ಲೇ ಎಲ್ಲಾದರೂ ಇದ್ದರೆ ಜೋರಾಗಿ ರಿಂಗ್ ಮಾಡಿಸಬಲ್ಲ ಒಂದನೇ ಆಯ್ಕೆ, ಫೋನ್‌ನ ಸ್ಕ್ರೀನ್ ಲಾಕ್ ಬದಲಾಯಿಸಬಲ್ಲ ಎರಡನೇ ಆಯ್ಕೆ ಹಾಗೂ ಫೋನನ್ನು ಫ್ಯಾಕ್ಟರಿಯಿಂದ ಬಂದಾಗ ಹೇಗಿತ್ತೋ ಆ ಸ್ಥಿತಿಗೆ ರೀಸೆಟ್ ಮಾಡುವ ಮೂರನೇ ಆಯ್ಕೆ. ಹೀಗೆ ಮಾಡಿದರೆ, ನಿಮ್ಮ ಫೋನ್‌ನಲ್ಲಿರುವ ಎಲ್ಲ ಮಾಹಿತಿಯೂ ಅಳಿಸಿಹೋಗುತ್ತದೆ.
ಆದರೆ, ಇದಕ್ಕೆ ನಿಮ್ಮ ಸ್ಮಾರ್ಟ್‌ಫೋನ್‌ನ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಎಂಬ ಲೊಕೇಶನ್ ಸೇವೆ ಹಾಗೂ ಕೆಲವೊಮ್ಮೆ ಇಂಟರ್ನೆಟ್ ಸೇವೆಯೂ ಸದಾ ಆನ್ ಆಗಿಟ್ಟಿರಬೇಕು. ಉಪಗ್ರಹ ಮೂಲಕ ಫೋನ್‌ನ ಇರುವಿಕೆಯನ್ನು ಸಂಪರ್ಕಿಸುವ ಸೇವೆಯಿದು. ಕಂಪ್ಯೂಟರ್‌ನಲ್ಲಿ ಇಲ್ಲದಿದ್ದರೆ, ಸ್ನೇಹಿತರ ಮೊಬೈಲ್ ಫೋನ್‌ನಲ್ಲಿ Device Manager ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಅದರ ಮೂಲಕವೂ ಇದೇ ಕೆಲಸಗಳನ್ನು ಮಾಡುವುದು ಸಾಧ್ಯವಾಗುತ್ತದೆ.
ವಿಂಡೋಸ್ ಫೋನ್‌ನಲ್ಲಿಈಗಲೇ ನಿಮ್ಮ ವಿಂಡೋಸ್ 8.1 ಫೋನುಗಳಲ್ಲಿ ಮೊದಲು ಸೆಟ್ಟಿಂಗ್ಸ್‌ನಲ್ಲಿ ‘Find my phone’ ಎಂಬುದನ್ನು ಕ್ಲಿಕ್ ಮಾಡಿ, ಅಲ್ಲಿರುವ ಎರಡೂ ಚೆಕ್‌ಬಾಕ್ಸ್‌ಗಳನ್ನು ಕ್ಲಿಕ್ ಮಾಡಿಟ್ಟಿರಬೇಕು. ನಂತರ ವಿಂಡೋಸ್ ಆ್ಯಪ್‌ಗಳ ಸ್ಟೋರ್‌ಗೆ (http://www.windowsphone.com/en-in/store) ಹೋಗಿ, ನಿಮ್ಮ ಫೋನ್‌ಗೆ ಲಾಗಿನ್ ಆದ ಮೈಕ್ರೋಸಾಫ್ಟ್ ಖಾತೆ (ಲೈವ್, ಹಾಟ್‌ಮೇಲ್, ಔಟ್‌ಲುಕ್ ಇತ್ಯಾದಿ) ಮೂಲಕ ಲಾಗಿನ್ ಆಗಿ, Find My Phone ಆಯ್ಕೆ ಕ್ಲಿಕ್ ಮಾಡಿದರೆ, ರಿಂಗ್ ಮಾಡುವ, ಲಾಕ್ ಮಾಡುವ ಮತ್ತು ಫ್ಯಾಕ್ಟರಿ ಡೇಟಾ ರೀಸೆಟ್ ಮಾಡುವ ಆಯ್ಕೆಗಳು ಕಂಡುಬರುತ್ತವೆ.

ಐಫೋನ್‌ನಲ್ಲಿಐಫೋನ್ ಇದ್ದವರು Settings > iCloud > Find My iPhone ಎನೇಬಲ್ ಆಗಿರುವಂತೆ ನೋಡಿಕೊಳ್ಳಬೇಕು. ನಂತರ ಫೋನ್ ಕಳೆದುಹೋದರೆ, ಸ್ನೇಹಿತರ ಐಫೋನ್ ಅಥವಾ ಐಪ್ಯಾಡ್ ಅಥವಾ ಐಒಎಸ್ ಇರುವ ಕಂಪ್ಯೂಟರ್ ಮೂಲಕ ಐಟ್ಯೂನ್ಸ್ ಎಂಬ ಸ್ಟೋರ್‌ನಿಂದ Find My iPhone ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ನಿಮ್ಮದೇ ಇಮೇಲ್ ಖಾತೆ ಮೂಲಕ ಲಾಗಿನ್ ಆದರೆ, ಮೇಲಿನ ಮೂರೂ ಆಯ್ಕೆಗಳು ಲಭ್ಯವಾಗುತ್ತವೆ.

ಬ್ಲ್ಯಾಕ್‌ಬೆರಿ ಫೋನ್‌ಗಳಲ್ಲಿಯೂ Settings > BlackBerry Protect ಎಂಬುದನ್ನು ಹಾಗೂ ಲೊಕೇಶನ್ ಸರ್ವಿಸಸ್ ಆನ್ ಮಾಡಿದ ಬಳಿಕ http://protect.blackberry.com/ ಎಂಬಲ್ಲಿ ಹೋಗಿ ಟ್ರ್ಯಾಕ್ ಮಾಡಬಹುದು.




ಇಮೇಲ್‌ನಲ್ಲಿ BCC, ಏನಿದು?

ಇಮೇಲ್ ಮಾಡುವಾಗ, ಮುಖ್ಯವಾಗಿ ಯಾರಿಗೆ ಉದ್ದೇಶಿತವಾಗಿದೆಯೋ ಅವರ ಇಮೇಲ್ ವಿಳಾಸವನ್ನು To ಎಂಬಲ್ಲಿಯೂ, ಅದರ ಒಂದು ನಕಲು ಪ್ರತಿಯು ಬೇರೆಯವರಿಗೆ ಕಳುಹಿಸಬೇಕಿದ್ದರೆ ಅವರ ಇಮೇಲ್ ವಿಳಾಸವನ್ನು CC ಎಂಬಲ್ಲಿಯೂ ದಾಖಲಿಸಬೇಕೆಂದು ಹೆಚ್ಚಿನವರಿಗೆ ಗೊತ್ತು. ಆದರೆ BCC ಎಂಬ ಮತ್ತೊಂದು ಕ್ಷೇತ್ರವಿದೆ. ಇದರ ಉಪಯೋಗ ಏನು ಕೆಲವರಿಗೆ ಮಾತ್ರ ಗೊತ್ತಿದೆ. ಇಲ್ಲಿ ಯಾರದ್ದೇ ಇಮೇಲ್ ವಿಳಾಸ ದಾಖಲಿಸಿದರೆ, BCC ಯಲ್ಲಿರುವ ವಿಳಾಸವು ನೀವು To ಮತ್ತು CC ಮೂಲಕ ಕಳುಹಿಸಿದವರಿಗೆ ಕಾಣಿಸುವುದಿಲ್ಲ. ಅಂದರೆ, ಯಾರಿಗೆಲ್ಲಾ ಇಮೇಲ್ ಕಳುಹಿಸಿದ್ದೀರಿ ಎಂಬುದು ಯಾರಿಗೂ ತಿಳಿಯದಿರಲಿ ಎಂಬ ಉದ್ದೇಶ ನಿಮ್ಮದಾಗಿದ್ದರೆ, BCC ಯಲ್ಲಿ ಇಮೇಲ್ ವಿಳಾಸ ಹಾಕಿದರಾಯಿತು.

👤👤👤👤👤👤👤👤👤👤👤👤👤👤👤
ಮನೆಯಲ್ಲೇ ಕುಳಿತು ಎಲ್‌ಪಿಜಿ ಖಾತೆ, ಆಧಾರ್, ಬ್ಯಾಂಕ್ ಖಾತೆ ಸಂಪರ್ಕಿಸಿ




ಅಡುಗೆ ಅನಿಲದ ಪ್ರತೀ ಸಿಲಿಂಡರ್‌ಗೆ ಕೇಂದ್ರ ಸರಕಾರ ಸಬ್ಸಿಡಿ ನೀಡುತ್ತಿದೆ ಎಂಬುದು ಎಲ್ಲರಿಗೆ ತಿಳಿದಿದೆ. ಆದರೆ ಮಾರ್ಚ್ ತಿಂಗಳ ಬಳಿಕ ಅಡುಗೆ ಅನಿಲಕ್ಕೆ ಪೂರ್ತಿ ಹಣ ಪಾವತಿಸಬೇಕಾಗುತ್ತದೆ. ಒಂದು ಬಾರಿಯ ಸಬ್ಸಿಡಿ ಹಣವು ನಮ್ಮ ಖಾತೆಗೆ ಮುಂಗಡವಾಗಿ ಬಂದು ಬೀಳುತ್ತದೆ. ಇದಕ್ಕಾಗಿ ಬ್ಯಾಂಕ್ ಖಾತೆ ಮತ್ತು ಎಲ್‌ಪಿಜಿ ಖಾತೆಗಳನ್ನು ಪರಸ್ಪರ ಬೆಸೆಯಬೇಕು, ಜತೆಗೆ ಆಧಾರ್ ಸಂಖ್ಯೆ ಕೂಡ ಸಂಪರ್ಕಗೊಳ್ಳಬೇಕೆಂದು ಎಲ್‌ಪಿಜಿ ವಿತರಕರು ಎಸ್ಸೆಮ್ಮೆಸ್ ಕಳುಹಿಸುತ್ತಲೇ ಇದ್ದಾರೆ. ಈ ರೀತಿ ಲಿಂಕ್ ಮಾಡಲು ಕಚೇರಿಗಳಿಗೆ ಅಲೆದಾಡಿ ಸಮಯ ವ್ಯರ್ಥ ಮಾಡುವ ಬದಲು, ಹದಿನೈದು ನಿಮಿಷದೊಳಗೆ ಸುಲಭವಾಗಿ ಕೆಲಸ ಮುಗಿಸಬಹುದು.


ಕಂಪ್ಯೂಟರ್, ಇಂಟರ್ನೆಟ್ ಜತೆಗೆ ನೀವು ಸಿದ್ಧ ಮಾಡಿಟ್ಟುಕೊಳ್ಳಬೇಕಾಗಿರುವ ವಿಷಯಗಳು:

1. ನಿಮ್ಮ 16 ಅಂಕಿಗಳ ಆಧಾರ್ ಸಂಖ್ಯೆ

2. ಎಲ್‌ಪಿಜಿ ವಿತರಕರ (ಡಿಸ್ಟ್ರಿಬ್ಯೂಟರ್) ಸರಿಯಾದ ಹೆಸರು

3. ಎಲ್‌ಪಿಜಿ ಗ್ರಾಹಕ ಸಂಖ್ಯೆ (ಎಲ್‌ಪಿಜಿ ಪಾಸ್‌ಬುಕ್ ಅಥವಾ ಕಾರ್ಡ್‌ನಲ್ಲಿರುವ ಆರಂಕಿಯ ಸಂಖ್ಯೆ)

4. ನೆಟ್ ಬ್ಯಾಂಕಿಂಗ್‌ನ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ

5. ಎಲ್‌ಪಿಜಿ ಐಡಿ (17 ಅಂಕಿಯ ಒಂದು ಸಂಖ್ಯೆ)

6. ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ


http://bit.ly/AdharLPG ಎಂಬಲ್ಲಿ ಹೋಗಿ, Start Now ಎಂಬ ಬಟನ್ ಒತ್ತಿಬಿಡಿ. ಅಲ್ಲಿ ತೆರೆದುಕೊಳ್ಳುವ ಪುಟದ ಒಂದನೇ ಹಂತದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, 2ನೇ ಹಂತದಲ್ಲಿ ನೀವು ಪಡೆಯಬೇಕೆಂದಿರುವ ಪ್ರಯೋಜನದ ವಿಧವನ್ನು LPG ಅಂತಲೂ, ‘ಸ್ಕೀಮ್’ ಎಂದಿರುವಲ್ಲಿ, ನಿಮ್ಮ ಎಲ್‌ಪಿಜಿ ವಿತರಣಾ ಕಂಪನಿಯ ಹೆಸರನ್ನು [ಬಿಪಿಸಿಎಲ್ (ಭಾರತ್), ಹೆಚ್‌ಪಿಸಿಎಲ್ ಅಥವಾ ಐಒಸಿಎಲ್ (ಇಂಡೇನ್)] ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮ ವಿತರಕರ (ಡಿಸ್ಟ್ರಿಬ್ಯೂಟರ್) ಹೆಸರು ಆಯ್ಕೆ ಮಾಡಿಕೊಳ್ಳುವ ಡ್ರಾಪ್ ಡೌನ್ ಮೆನು ಕಾಣಿಸುತ್ತದೆ. ನಂತರದ ಫೀಲ್ಡ್‌ನಲ್ಲಿ ಎಲ್‌ಪಿಜಿ ಗ್ರಾಹಕ ಸಂಖ್ಯೆ (ಕನ್ಸ್ಯೂಮರ್ ನಂಬರ್) ದಾಖಲಿಸಿ.


ಗ್ರಾಹಕ ಸಂಖ್ಯೆ ದಾಖಲಿಸಿದ ಬಳಿಕ ಪಕ್ಕದಲ್ಲೇ ಎಲ್‌ಪಿಜಿ ಯಾರ ಹೆಸರಲ್ಲಿದೆಯೋ ಅವರ ಹೆಸರು ಕಾಣಿಸಿಕೊಳ್ಳುತ್ತದೆ (ಸರಿಯಾಗಿಲ್ಲದಿದ್ದರೆ ನಿಮ್ಮ ಡಿಸ್ಟ್ರಿಬ್ಯೂಟರನ್ನು ಸಂಪರ್ಕಿಸಿ). ಮೂರನೇ ಹಂತದಲ್ಲಿ ನಿಮ್ಮ ಇಮೇಲ್ ವಿಳಾಸ ಹಾಗೂ ಎಲ್‌ಪಿಜಿ ಕಂಪನಿ ಜತೆಗೆ ಈಗಾಗಲೇ ನೋಂದಾಯಿಸಿಕೊಂಡಿರುವ ಫೋನ್ ಸಂಖ್ಯೆ ದಾಖಲಿಸಿ. ನಿಮ್ಮ ಮಾಹಿತಿಯನ್ನು ದೃಢೀಕರಿಸಿಕೊಳ್ಳುವುದಕ್ಕಾಗಿ ಇವರೆಡಕ್ಕೂ ಏಕ ಕಾಲಿಕ ಪಾಸ್‌ವರ್ಡ್ (ಒನ್ ಟೈಮ್ ಪಾಸ್‌ವರ್ಡ್ -ಒಟಿಪಿ) ಕಳುಹಿಸಲಾಗುತ್ತದೆ. ಒಟಿಪಿ ದಾಖಲಿಸುವಾಗ ಕ್ಯಾಪ್ಚಾ ಎಂದು ಹೇಳಲಾಗುವ ಅಂಕಿ ಮತ್ತು ಅಕ್ಷರಗಳನ್ನು ಅಲ್ಲಿರುವ ಬಾಕ್ಸ್‌ನಲ್ಲಿ ಟೈಪ್ ಮಾಡಿ ಹಾಕಿಬಿಡಿ. (ಇದು ಆನ್‌ಲೈನ್ ಭದ್ರತೆಗಾಗಿ). ನಂತರ 16 ಅಂಕಿಗಳ ಆಧಾರ್ ಸಂಖ್ಯೆ ದಾಖಲಿಸಿ. ಈಗ ಆಧಾರ್ ಮತ್ತು ಎಲ್‌ಪಿಜಿ ಖಾತೆ ಪರಸ್ಪರ ಸಂಪರ್ಕವಾಯಿತು. ಕೆಲವು ದಿನಗಳ ಬಳಿಕ ಈ ಬಗ್ಗೆ ನಿಮಗೆ ದೃಢೀಕರಣ ಸಂದೇಶ ಬರುತ್ತದೆ.
ಆಧಾರ್ ಮತ್ತು ಎಲ್‌ಪಿಜಿ ಖಾತೆಗೆ ಬ್ಯಾಂಕ್ ಖಾತೆಯನ್ನು ಸಂಪರ್ಕಿಸಲು, ಸ್ಟೇಟ್ ಬ್ಯಾಂಕ್, ಕೆನರಾ, ಆ್ಯಕ್ಸಿಸ್ ಬ್ಯಾಂಕ್ ಮುಂತಾದವುಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ, ನೋಂದಾಯಿಸಬಹುದು. ನಿಮ್ಮ ಬ್ಯಾಂಕ್‌ಗೆ ಆನ್‌ಲೈನ್ ವ್ಯವಸ್ಥೆ ಇಲ್ಲದಿದ್ದರೆ, ಶಾಖಾ ಕಚೇರಿಗೆ ಹೋಗಿ ಅದನ್ನು ಲಿಂಕ್ ಮಾಡಬಹುದು.
ಬಳಿಕ, MyLpg.in ಎಂಬಲ್ಲಿ ಹೋಗಿ. ಲಾಗ್ ಇನ್ ಆಗುವುದು ಎಲ್ಲಿ ಎಂಬುದು ಗೊಂದಲವಾಗಬಹುದು. ನಿಮ್ಮ ಅಡುಗೆ ಅನಿಲ ವಿತರಣಾ ಕಂಪನಿಯ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿ. ಎಲ್‌ಪಿಜಿ ಗ್ರಾಹಕ ಸಂಖ್ಯೆ ಹಾಗೂ ಈಗಾಗಲೇ ನೋಂದಾಯಿಸಿರುವ ಮೊಬೈಲ್ ಸಂಖ್ಯೆ ನಮೂದಿಸಿ, ನೋಂದಾಯಿಸಿಕೊಳ್ಳಿ. ಇಮೇಲ್ ವಿಳಾಸ ಸೇರಿಸಿದರೆ, ಇಮೇಲ್ ವಿಳಾಸವೇ ನಿಮ್ಮ ಲಾಗಿನ್ ಐಡಿ ಆಗುತ್ತದೆ. ಪಾಸ್‌ವರ್ಡನ್ನು ಇದೇ ಇಮೇಲ್ ವಿಳಾಸಕ್ಕೆ ಕಳುಹಿಸುತ್ತಾರೆ. ಹೊಸ ಸಿಲಿಂಡರ್ ಬುಕ್ ಮಾಡಲು, ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಲು, ನಿಮ್ಮ ಎಲ್‌ಪಿಜಿ ಐಡಿ ತಿಳಿಯಲು, ಸಬ್ಸಿಡಿ ನಿರಾಕರಿಸಲು, ಎರಡನೇ ಸಿಲಿಂಡರ್ ಅಥವಾ 5 ಕೆಜಿಯ ಸಿಲಿಂಡರ್ ಬುಕ್ ಮಾಡಲು, ಸೇವೆ ಸರಿ ಇಲ್ಲದಿದ್ದರೆ ವಿತರಕರನ್ನು ಅಥವಾ ವಿತರಣಾ ಕಂಪನಿಯನ್ನೇ (ಪೋರ್ಟಿಂಗ್) ಬದಲಾಯಿಸಲು…. ಹೀಗೆ ಎಲ್ಲ ಆಯ್ಕೆಗಳು ಇಲ್ಲೇ ಲಭ್ಯ.