ಅಕ್ಷರ ದಾಸೋಹ ವಿಭಾಗ


          ಮಾಹಿತಿಗಾಗಿ ಇವುಗಳ ಮೇಲೆ ದಯವಿಟ್ಟು ಕ್ಲಿಕ್   ಮಾಡಿ
ಪ್ರತಿ ಮಗುವಿಗೆ ನೀಡುವ ಮಾತ್ರೆಗಳ ಸರಬರಾಜು ವಿವರ..
ಪೌಷ್ಠಿಕಾಂಶ ಪ್ರತಿ ಮಗುವಿಗೆ ಪ್ರತಿದಿನದ ಆಹಾರ ಪೂರೈಕೆ ವಿವರ.
ಅಕ್ಷರ ದಾಸೋಹದ ಅಡುಗೆ ತಯಾರಿಕೆ ಸಾದಿಲ್ವಾರು ಹೆಚ್ಚಳ ಬಗ್ಗೆ ಆದೇಶ ದಿನಾಂಕ 28:11:2019
ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳ ಸಮಸ್ಯೆ
Mdm-Cook Selection Recruitment 2017
ಅಕ್ಷರ ದಾಸೋಹ ಫಲಾನುಭವಿಗಳ ಡೇಟಾ ಎಂಟ್ರಿ ಫೈಲ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಕ್ಷರ ದಾಸೋಹಕ್ಕೆ ಸಂಬಂಧಿಸಿದ ಎಲ್ಲಾ ಆದೇಶಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಡುಗೆ ಸಾದಿಲ್ವಾರು ಹೆಚ್ಚಳದ ಆದೇಶ ದಿನಾಂಕ 28/09/2016
.ಅಕ್ಷರ ದಾಸೋಹದ ಸಮುದಾಯ ದತ್ತ ಶಾಲೆ ನಮೂನೆಗಳು
MDM message Based monitoring system ಆದೇಶ
.User Manual for MDM Message Based Monitoring System school level
.ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಸುರಕ್ಷತಾ ನಿಯಮಗಳು
.Check SMS status and Report of MDM -Attendance
ಅಕ್ಷರ ದಾಸೋಹದ message ಮಾಡುವ ಸಂಬಂಧಿಸಿದ PPt

 ಶಾಲೆಗಳಲ್ಲಿನ ವಿದ್ಯಾರ್ಥಿಗಳ ಎತ್ತರ ಮತ್ತು ತೂಕದ ಮಾಪನ ವರದಿಯ ನಮೂನೆ

2023-24ನೇ ಸಾಲಿನಲ್ಲಿ 1ರಿಂದ 10ನೇ ತರಗತಿ ಶಾಲಾ ಮಕ್ಕಳ ಎತ್ತರ ಮತ್ತು ತೂಕವನ್ನು ಅಳತೆ ಮಾಡಿ ದಾಖಲೆ ಸಲ್ಲಿಸುವ ಕುರಿತು

ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿದ ಮಾಸಿಕ ವರದಿ

2023-24ನೇ ಸಾಲಿನಲ್ಲಿ ಪಿ.ಎಂ ಪೋಷಣ್ (ಮಧ್ಯಾಹ್ನ ಉಪಹಾರ ಯೋಜನೆ) ಮತ್ತು ಕ್ಷೀರ ಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಪೂರ್ವಸಿದ್ದತೆಗಳನ್ನು ಕೈಗೊಳ್ಳುವ ಬಗ್ಗೆ

ಪಾಲಕರ ಒಪ್ಪಿಗೆ ಪತ್ರ

ಆಹಾರ ಬೇಡಿಕೆಯ ಪಟ್ಟಿಯ ನಮೂನೆ

ಮಧ್ಯಾಹ್ನ ಉಪಹಾರ ಯೋಜನೆ ಅಡಿ ಬಿಸಿಯೂಟ ತಯಾರಿಕೆಗೆ ಬಳಸುವ ಪದಾರ್ಥಗಳಿಗೆ ಅಡುಗೆ ತಯಾರಿಕ ವೆಚ್ಚವನ್ನು ಹೆಚ್ಚಿಸಿರುವ ಬಗ್ಗೆ
VOUCHER AND UC ( ಉಪಯೋಗಿತಾ ಪ್ರಮಾಣ ಪತ್ರ )

2022-23 ನೇ ಸಾಲಿನಲ್ಲಿ ಮಧ್ಯಾಹ್ನ ಉಪಹಾರ ಯೋಜನೆಗೆ ಸಂಬಂಧಿಸಿದಂತೆ ಅಡುಗೆ ತಯಾರಿಕಾ ವೆಚ್ಚದ ದರವನ್ನು ದಿನಾಂಕ : 01- 10 - 2022  ರಿಂದ ಅನ್ವಯವಾಗುವಂತೆ ಶೇಕಡ 9.6 ರಷ್ಟು ಹೆಚ್ಚಳಗೊಳಿಸುವ ಕುರಿತು

ಮೊಟ್ಟೆ ಮತ್ತು ಬಾಳೆಹಣ್ಣು ಶೇಂಗಾ ಚಿಕ್ಕಿ ಯೋಜನೆಯ ನಿರ್ವಹಣೆಯ ದಾಖಲೆಗಳ ವಹಿ

ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯ್ಕೆ ಸಮಿತಿಯು ಅನುಸರಿಸಬೇಕಾದ ಅಂಶಗಳು

ಅಡುಗೆ ಸಿಬ್ಬಂದಿಯ ನೇಮಕ ಕುರಿತು

ಅಡುಗೆ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು


ಮಧ್ಯಾಹ್ನ ಉಪಹಾರ ಯೋಜನೆಯ ಅಡುಗೆ ಸಿಬ್ಬಂದಿಯ ನೇಮಕಾತಿ ವಿಧಾನ ಹಾಗೂ ನಮೂನೆಗಳು

ಮಧ್ಯಾಹ್ನ ಉಪಹಾರ ಯೋಜನೆಯ CCH ನಮೂನೆ

ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡುವ ಸಂಬಂಧಶಾಲಾ ಹಂತದಲ್ಲಿ ನಿರ್ವಹಿಸಲಾಗುತ್ತಿರುವ ಜಂಟಿ ಬ್ಯಾಂಕ್ ಖಾತೆಯನ್ನು ಇನ್ನು ಮುಂದೆ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಹೆಸರಿನಲ್ಲಿ ನಿರ್ವಹಿಸುವ ಕುರಿತ  ಆದೇಶ

ಅಡುಗೆ ಸಿಬ್ಬಂದಿಯ ನೇಮಕಾತಿ ಆದೇಶದ ಪ್ರತಿ

ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯ್ಕೆ ಸಮಿತಿಯು ಅನುಸರಿಸಬೇಕಾದ ಅಂಶಗಳು

SOP order

ಅಡುಗೆ ಸಿಬ್ಬಂದಿ ಮರಣ ಮತ್ತು ಅಪಘಾತ ಪರಿಹಾರ ಆದೇಶ

ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಗ್ನಿನಂದಕಗಳನ್ನು ಸುಸ್ಥಿತಿಯಲ್ಲಿಡುವ ಬಗ್ಗೆ

ಅಡುಗೆ ತಯಾರಿಸುವ ಪೂರ್ವ ಮತ್ತು ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು

ಅಕ್ಷರ ದಾಸೋಹ ಅಡುಗೆ ಸಿಬ್ಬಂದಿ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದು ಸದಸ್ಯತ್ವವನ್ನು ಹೊಂದಿದ್ದಲ್ಲಿ ಸದರಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ಕುರಿತು

ಬೇಯಿಸಿದ ಮೊಟ್ಟೆ ಹಾಗೂ ಬಾಳೆಹಣ್ಣು ಯೋಜನೆಯ ಪಾಲಕರ ಒಪ್ಪಿಗೆ ಪತ್ರ

ಮಧ್ಯಾಹ್ನ ಉಪಹಾರ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯನ್ನು ಮಾರ್ಚ್ 31ನೇ ದಿನಾಂಕದಂದು ಕರ್ತವ್ಯದಿಂದ ಬಿಡುಗಡೆ ಮಾಡುವ ಕುರಿತು

ಶುಚಿ - ರುಚಿ ಅಡುಗೆ ಸಿಬ್ಬಂದಿ ತರಬೇತಿ ಸಾಹಿತ್ಯ

ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿದ ಮಾಸಿಕ ವರದಿ

ಮಧ್ಯಾಹ್ನ ಉಪಹಾರ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ 60ವರ್ಷ ವಯೋಮಾನ ಪೂರೈಸಿದ ಅಡುಗೆ ಸಿಬ್ಬಂದಿಯವರನ್ನು ಗೌರವಯುತವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ

ಶಾಲಾ ಅಡುಗೆ ಸಹಾಯಕರ ಕಾರ್ಯಗಳು ಮತ್ತು ಜವಾಬ್ದಾರಿಗಳು

ಮುಖ್ಯ ಅಡುಗೆಯವರು ಹಾಗೂ ಅಡುಗೆಯವರ ದಿನಚರಿ

ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ನಿರ್ವಹಣೆಯ ದಾಖಲೆಗಳ ವಹಿ

2022-23 ನೇ ಸಾಲಿನಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ಅನುಷ್ಠಾನದ ಆದೇಶ

ಮಧ್ಯಾಹ್ನ ಉಪಹಾರ ಯೋಜನೆಯ ಉಪಯೋಗದ ಪ್ರಮಾಣ ಪತ್ರ ಹಾಗೂ ಬೇಡಿಕೆ ನಮೂನೆ

 ಬಿಸಿಯೂಟ ತಯಾರಿಕೆಯಲ್ಲಿ ವಹಿಸಬೇಕಾದ ಎಚ್ಚರಿಕೆಗಳು.

★ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನಕ್ಕೆ ಈ ಕೆಳ ಕಾಣಿಸಿದ ಅಂಶಗಳನ್ನುಅಳವಡಿಸಿಕೊಳ್ಳುವುದು.
★ಮುಖ್ಯ ಶಿಕ್ಷಕರು ಸರಕಾರಿ ರಜೆ ಹೊರತುಪಡಿಸಿ ಯಾವುದೇ ಕಾರಣಕ್ಕೂ ಅಕ್ಷರದಾಸೋಹ ಕಾರ್ಯಕ್ರಮ ನಿಲ್ಲದಂತೆ ಮುಂಜಾಗ್ರತೆವಹುಸಬೇಕು.
★ಮುಖ್ಯ ಶಿಕ್ಷಕರು ಪ್ರತಿ ತಿಂಗಳು ಅಗತ್ಯವಿರುವ ಆಹಾರ ಮತ್ತು ಸಾದಿಲ್ವಾರು ಬೇಡಿಕೆಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಹಿಂದಿನ ತಿಂಗಳ ಉಪಯೋಗತಾ ಪ್ರಮಾಣಪತ್ರದೊಂದಿಗೆ ಪ್ರತಿ ತಿಂಗಳು 25 ನೇ ತಾರೀಖಿನೊಳಗಾಗಿ ತಾಲೂಕು ಕಛೇರಿಗೆ ತಲುಪಿಸಬೇಕು.
★ನಿಗದಿತ ಅವಧಿಯಲ್ಲಿ ಆಹಾರ ಸಾಮಗ್ರಿಗಳು ಪೂರೈಕೆಯಾಗದಿದ್ದಲ್ಲಿ,ಸ್ಥಳಿಯವಾಗಿ ಲಭ್ಯವಾಗುವ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.ಯಾವುದೇ ಕಾರಣಕ್ಕೂ ಮಕ್ಕಳು ಹಸಿವಿನಿಂದ ಉಳಿಯಬಾರದು.
★ಕಳಪೆ ಮಟ್ಟದ ಆಹಾರ ಸಾಮಗ್ರಿಗಳನ್ನು ಸ್ವೀಕರಿಸಬಾರದು.ಹಾಗೂ ಒಂದು ವೇಳೆ ಕಳಪೆ ಮಟ್ಟದ ಆಹಾರ ಸಾಮಗ್ರಿ ಬಳಸಿ ಬಿಸಿಊಟ ತಯಾರಿಸಬಾರದು.
★ಪ್ರತಿ ತಿಂಗಳು ಪಡೆದ ಆಹಾರ ಧಾನ್ಯಗಳು ಕೆಡದಂತೆ ಶೇಕರಿಸಿಟ್ಟುಕೊಳ್ಳಬೇಕು.
★ನಮೂನೆ-2 ರಲ್ಲಿದ್ದ ಆಹಾರ ದಾಸ್ತಾನಿಗೂ ಹಾಗೂ ಭೌತಿಕ ದಾಸ್ತಾನಿಗೂ ತಾಳೆಯಾಗಬೇಕು.ವ್ಯತ್ಯಾಸ ಕಂಡುಬಂದಲ್ಲಿ ಮುಖ್ಯಶಿಕ್ಷಕರೇ ಜವಾಬ್ದಾರರಾಗಿರುತ್ತಾರೆ.
★ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ,ಎಲ್ಲಾ ಮಾಹಿತಿಗಳನ್ನು/ವಹಿಗಳನ್ನು ಪ್ರತಿನಿತ್ಯ ನಿರ್ವಹಿಸಬೇಕು.
★ಪ್ರತಿದಿನ ಮಕ್ಕಳಿಗೆ ಆಹಾರ ವಿತರಿಸುವ ಮುಂಚೆ ಇಬ್ಬರು ಶಿಕ್ಷಕರು ಆಹಾರ ಸೇವಿಸಿ ಉತ್ತಮ ಗುಣಮಟ್ಟದ ಆಹಾರವೆಂದು ದೃಢೀಕರಿಸಿದ ನಂತರ ವಹಿಯಲ್ಲಿ ದಾಖಲಿಸಿ ಮಕ್ಕಳಿಗೆ ವಿತರಿಸಬೇಕು.
★ಅನಿಲ ಸಿಲಿಂಡರನ್ನು ಮಿತವಾಗಿ ಬಳಸಬೇಕು.ಸಿಲಿಂಡರ್ ಸ್ವೀಕರಿಸುವಾಗ ರಿಜಿಸ್ಟರ್ ನಂಬರ್ ಬರೆದುಕೊಳ್ಳಬೇಕು.
ಕಳ್ಳತನವಾಗದಂತೆ ನೋಡಿಕೊಳ್ಳಬೇಕು.
★ಮಾತ್ರೆಗಳನ್ನು ನಿಗದಿತ ಅವಧಿಯಲ್ಲಿ ಮಕ್ಕಳಿಗೆ ನೀಡಬೇಕು.ಹಾಗೂ ವರ್ಗವಾರು ನೀಡಿದ ಮಾತ್ರೆಗಳ ದಾಖಲೆಗಳನ್ನಿಡಬೇಕು.
★ತಾಯಂದಿರ ಸಮೀತಿಯನ್ನು ರಚಿಸಿ ವಾರ್ಷಿಕ ವೇಳಾಪಟ್ಟುಯಂತೆ ಕನಿಷ್ಟ 4 ಜನ ತಾಯಂದಿರು ಸರದಿಯ ಮೇಲೆ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವುದು.
★ಮಕ್ಕಳಿಗೆ ಬಿಸಿಯೂಟ ವಿತರಿಸುವಾಗ ಎಲ್ಲ ಶಿಕ್ಷಕರು ತಪ್ಪದೇ ಹಾಜರಿದ್ದು,ಶಿಸ್ತಿನಿಂದ ವ್ಯವಸ್ಥಿತವಾಗಿ ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.
★ಅಡುಗೆ ಕೋಣೆಯನ್ನು ಪಾತ್ರೆಪರೀಕರಗಳನ್ನು ಅಡುಗೆ ಪ್ರಾರಂಭದ ಮುನ್ನ ಮತ್ತು ಮುಗಿದ ನಂತರ ಸ್ವಚ್ಚಗೊಳುಸಬೇಕು.
★ಪ್ರತಿ ಶಾಲೆಯಲ್ಲಿ ಶಾಲಾ ಕೈತೋಟ ನಿರ್ವಹಿಸಬೇಕು.ಹಾಗೂ ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಿಕೊಳ್ಳಬೇಕು.
★ಅಕ್ಷರದಾಸೋಹ ಕಾರ್ಯಕ್ರಮದಡಿ ಖರ್ಚುಮಾಡಿದ ಪ್ರತಿಯೊಂದು ಅನುದಾನಕ್ಕೆ ಓಚರ್ಗಳನ್ನು ನಿಯಮಾನುಸಾರ ನಿರ್ವಹಿಸಿ ನಗದು ಪುಸ್ತಕವನ್ನು ಪ್ರತಿನಿತ್ಯ ನಿರ್ವಹಿಸಬೇಕು.
★ಪ್ರತಿವರ್ಷದ ಕೊನೆಗೆ ಅಕ್ಷರ ದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
★ರಜಾ ದಿನಗಳಲ್ಲಿ ಸಿಲಿಂಡರಗಳು ಹಾಗೂ ಆಹಾರ ಧಾನ್ಯಗಳು ಕಳ್ಳತನವಾಗದಂತೆ ಮುಂಜಾಗ್ರತೆವಹಿಸಬೇಕು.
★ಅರ್ಧವಾರ್ಷಿಕ ಹಾಗೂ ವಾರ್ಷಿಕ ರಜೆಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ಉಳಿಯದಂತೆ ಬೇಡಿಕೆಯನ್ನು ಸಲ್ಲಿಸಬೇಕು.ಬೇಡಿಕೆಯಿಲ್ಲದಿದ್ದರೂ ಶೂನ್ಯವರದಿಯನ್ನು ಸಲ್ಲಿಸಬೇಕು.
★ದಾನಿಗಳ ಮನವೊಲಿಸಿ ಅಕ್ಷರದಾಸೋಹ ಕಾರ್ಯಕ್ರಮಕ್ಕೆ ಬೇಕಾಗುವ ಕುಕ್ಕರ್,ತಟ್ಟೆ,ಲೋಟ,ಬಕೀಟಇತ್ಯಾದಿಗಳನ್ನು ಪಡೆಯಲು ಶ್ರಮಿಸಬೇಕು.
★ಬಿಸಿಯೂಟ ಪಡೆಯುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳನ್ನು ಸಾದಿಲ್ವಾರುಗಳನ್ನು ಬಳಸಬೇಕು.
★ಆಹಾರ ಧಾನ್ಯಗಳನ್ನು ಲಾರಿಗಳಿಂದ ಪಡೆಯುವಾಗ ತೂಕ ಸರಿ ಇದ್ದ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
★ಖಾಲಿ ಚೀಲಗಳ ಬಗ್ಗೆ ಲೆಕ್ಕ-ಪತ್ರ ಇಟ್ಟು ನಿಯಮಾನಯಸಾರ ಕ್ರಮ ಕೈಗೊಳ್ಳಬೇಕು. ಖಾಲಿ ಚೀಲ ಮಾರಾಟದ ಹಣವನ್ನು ಕಡ್ಡಾಯವಾಗಿ ಅಕ್ಷರದಾಸೋಹ ಖಾತೆಗೆ ಜಮಾ ಮಾಡಬೇಕು.
★ಮುಖ್ಯಶಿಕ್ಷಕರು ಕಡ್ಡಾಯವಾಗಿ ಅಡುಗೆ ಸಿಬ್ಬಂದಿಗಳ ವೇತನವನ್ನು ಚೆಕ್ ಮೂಲಕ ಪಾವತಿಸತಕ್ಕದ್ದು.
ಬಿಸಿಯೂಟಕ್ಕೆ ಸಂಬಂದಿಸಿದ ಪ್ರಮುಖ ದಾಖಲೆಗಳು
;1★ದೈನಂದಿನ ಹಾಜರಾತಿ ಮತ್ತು ಫಲಾನುಭವಿಗಳ ಮಾಹಿತಿ
2★ಅಕ್ಕಿ/ಗೋಧಿ/ಬೇಳೆ/ಎಣ್ಣೆ/ಸಾಂಬಾರ ಪದಾರ್ಥಗಳ ದಾಸ್ತಾನು ವಹಿ
3★ಸಾದಿಲ್ವಾರು ಪುಸ್ತಕ-ಕ್ಯಾಶ್ ಬುಕ್
4★ಅಡುಗೆ ಸಿಬ್ಬಂದಿಯ ದೈನಂದಿನ ಹಾಜರಾತಿ ಮತ್ತು ವೇತನ ಬಟವಾಡೆ ವಹಿ
5★ದಿನನಿತ್ಯ ತರಕಾರಿ ಖರ್ಚಿನ ವಿವರ
6★ಆಹಾರ ದಾನ್ಯಗಳ ಸರಬರಾಜಿನ ರಶಿದೀಗಳ ವಹಿ
7★ಆಹಾರ ಸರಬರಾಜು ವಹಿ
8★ಬೇಡಿಕೆ ಮತ್ತು ಉಪಯೋಗತಾ ಪ್ರಮಾಣ ಪತ್ರಗಳ ಕ್ರೋಢೀಕರಣ ವಹಿ
9★ಪ್ರತಿನಿತ್ಯ ಇಬ್ಬರು ಶಿಕ್ಷಕರು ಊಟಮಾಡಿದ ವಹಿ
10★ಶಿಲಿಂಡರ್ ಸ್ವೀಕರಿಸಿದ ಹಾಗೂ ಬಳಸಿದ ವಹಿ
11★ಮಾತ್ರೆಗಳನ್ನು ನೀಡಿದ ದಾಖಲೆ
12★ತಾಯಂದಿರ ಸಮೀತಿ ರಚಿಸಿದ ವಹಿ/ಹಾಗೂ ಪ್ರತಿ ದಿನ 4 ತಾಯಂದಿರು ಅಕ್ಷರದಾಸೋಹದಲ್ಲಿ ಭಾಗವಹಿಸಬೇಕು.
13★ಪಾತ್ರೆಗಳ ದಾಸ್ತಾನು ವಹಿ
14★ಖಾಲಿ ಚೀಲಗಳ ಲೆಕ್ಕಪತ್ರಗಳನ್ನಿಡಬೇಕು.
15★ಪ್ರತಿ ತಿಂಗಳು ಅಡುಗೆಯವರ ವೇತನ ಬಿಡಿಸಿಕೊಟ್ಟ ಬಗ್ಗೆ ಒಂದು ರಿಜಿಸ್ಟರ್ ನಲ್ಲಿ ಅವರವರ ಸಹಿ ತೆಗೆದುಕೊಂಡ ವಹಿ
16★ವೈಧ್ಯಕೀಯ ತಪಾಸನಾ ಪ್ರತಿ ಇಡುವುದು
17★ಅಗ್ನಿ ನಂದಕ ಅಳವಡಿಸಬೇಕು.
18★ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನೀಡುವುದು.
19★ತುರ್ತು ವೈಧ್ಯಕೀಯ ಯೋಜನೆ ತಯಾರಿಸಬೇಕು.
20★ ಮಧ್ಯಾಹ್ನ ಬಿಸಿಯೂಟ ಯೋಜನೆಯ ಲಾಂಚನ ಬರೆಸುವುದು.
21★ಪ್ರತಿ ವರ್ಷದ ಕೊನೆಗೆ ಅಕ್ಷರದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
22★ಅಕ್ಷರ ದಾಸೋಹದ ಸಾಮಾನ್ಯ ಮಾಹಿತಿಯನ್ನು ಅಡುಗೆ ಕೋಣೆಯ ಹೊರಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಸುವುದು.
ಅಡುಗೆ ಸಿಬ್ಬಂದಿ ದಿನಚರಿ
★9:30 ಕ್ಕೆ ಶಾಲೆಗೆ ಹಾಜರಾಗುವುದು.
★10:30 ಕ್ಕೆ ಪಾತ್ರೆ ಪರಿಕರಗಳ ಸ್ವಚ್ಚತೆ ಮಾಡುವುದು.
★ಬೆಳಿಗ್ಗೆ 10:30 ರಿಂದ 11:00—ಮುಖ್ಯ ಅಡುಗೆಯವರು ತರಗತಿವಾರು ಹಾಜರಾತಿ ಮತ್ತು ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಯನ್ನು ನಮೂದಿಸಿ ತರಗತಿ ಶಿಕ್ಷಕರಿಂದ ಸಹಿ ತೆಗೆದುಕೊಳ್ಳುವುದು.
★11:00 ರಿಂದ 11:15 —ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಗನುಗುಣವಾಗಿ ಆಹಾರ ಧಾನ್ಯಗಳನ್ನು ಅಳತೆಮಾಡಿ ತೆಗೆದುಕೊಳ್ಳುವುದು.
★11:15 ರಿಂದ 1:15—ಅಡುಗೆ ತಯಾರಿಸುವುದು.ಪ್ರತಿ ದಿನದ ಖರ್ಚು ವೆಚ್ಚಗಳನ್ನು ಬರೆಯುವುದು.
★1:15 ರಿಂದ 1:55—ಮಕ್ಕಳನ್ನು ಸಾಲಾಗಿ ಕೂರಿಸಿ ಊಟ ಬಡಿಸುವುದು.
★1:55-ಅನಿಲ ಸ್ವಿಚ್ಚ್ ಆಫ್ ಮಾಡಿ,ಪಾತ್ರೆ ಪರಿಕರಗಳನ್ನು ತೊಳೆಯುವುದು
ಮುಖ್ಯ ಹಾಗೂ ಸಹಾಯಕ ಅಡುಗೆಯವರ ಕರ್ತವ್ಯಗಳು.
★ಅಡುಗೆ ಕೇಂದ್ರದ ಉತ್ತಮ ನಿರ್ವಹಣೆಯು /ಸ್ವಚ್ಚತೆ ಮುಖ್ಯ ಅಡುಗೆಯವರ ಜವಾಬ್ದಾರಿಯಾಗಿರುತ್ತದೆ.
★ಶಾಲಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು.
★ಸಿಲಿಂಡರ್ ದುರಸ್ತಿ ಬಗ್ಗೆ ಮುಖ್ಯಗುರುಗಳ ಜವಾಬ್ದಾರಿ
★sdmc ಸಮ್ಮುಖದಲ್ಲಿ ಆಹಾರ ಪದಾರ್ಥ ಪಡೆದು,ಗುಣಮಟ್ಟ ಪರಿಕ್ಷಿಸಿ,ಅಡುಗೆ ತಯಾರಿಸುವದು.
★೧೫/ಒಂದು ತಿಂಗಳಿಗೆ ಸಾಕಾಗುವಷ್ಟು ಸಾಂಬಾರು ಪದಾರ್ಥ ಖರೀದಿ ಮಾಡಿ ವೋಚರ ಇಡುವುದು.
★ಹಾಲಿನ ಪುಡಿ ದಾಸ್ತಾನು ಸುರಕ್ಷಿತವಾಗಿಡಬೇಕು.
★ಶುಚಿಯಾದ ಹಾಲನ್ನು ತಯಾರಿಸಿ ಬಡಿಸುವುದು.
★ದಿನಾಲು/ವಾರಕ್ಕೊಂದು ಸಾರಿ ತರಕಾರಿ ಖರೀದಿಸಿ ವೋಚರ್ ಗಳನ್ನಿಡುವುದು.
★ಅನಿಲ ವಿತರಕರಿಂದ ಗ್ಯಾಸ ಪಡೆಯುವುದು.ತೂಕ 14.2kg ಇರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.ಸಿಲಿಂಡರಿ
ನ ತಳಭಾಗದಲ್ಲುರುವ ನಂ.ಅನ್ನು ದಾಸ್ತಾನು ಪುಸ್ತಕದಲ್ಲಿ ನಮೂದಿಸುವುದು.
★ಸಾಂಬಾರು ಪದಾರ್ಥಗಳನ್ನು ಒಂದು ವಾರಕ್ಕೆ ಸಾಕಾಗುವಷ್ಟು “ಸಾಂಬಾರು ಪುಡಿ” ತಯಾರಿಸಿಕೊಳ್ಳುವುದು.
★ಹಾಜರಾತಿ ಮತ್ತು ಫಲಾನುಭವಿಗಳ ಸಂಖ್ಯೆ ಪಡೆದು ಮುಖ್ಯಗುರುಗಳಿಂದ ದೃಢೀರಿಸಿಕೊಳ್ಳಬೇಕು.
★ಕುಡಿಯುವ ನೀರು ಶುದ್ದವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
★ಆಹಾರ ತಯಾರಿಸಿದ ನಂತರ ಅದರ ಗುಣಮಟ್ಟವನ್ನು ಪರೀಕ್ಷೆ ಮಾಡುವುದು.
★ಅಡುಗೆ ಅನಿಲವನ್ನು ಸುರಕ್ಷಿತವಾಗಿ/ ಮಿತವಾಗಿ ಬಳಕೆ
★ಅಡುಗೆ ಮನೆಯೊಳಗೆ ಅಪರಿಚಿತರು ಬರದಂತೆ ಮುಂಜಾಗ್ರತೆವಹಿಸಬೇಕು.
★ಪ್ರತಿ ತಿಂಗಳು ಬಳಕೆ ಮ/ಉಳಿಕೆ/ಬೇಡಿಕೆ ಪಟ್ಟಿಯನ್ನು ತಯಾರಿಸಿ ಅಧ್ಯಕ್ಷರು,ಮುಖ್ಯ ಶಿಕ್ಷಕರಿಂದ ದೃಢೀಕರಣ ಮಾಡಿಕೊಂಡು crp ಮೂಲಕ ಅಕ್ಷರದಾಸೋಹ ಅಧಿಕಾರಿಗಳಿಗೆ ಮುಟ್ಟಿಸುವುದು.
★ಮೇಲಾಧಿಕಾರಿಗಳು ತಪಾಸಣೆಗೆ ಬಂದಾಗ ಅಗತ್ಯ ಮಾಹಿತಿಗಳನ್ನು ಒಪ್ಪಿಸುವುದು.
★ಮುಖ್ಯ ಅಡುಗೆಯವರು ರಜೆ ಹೋಗುವ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಅನುಮತಿ ಪಡೆಯುವುದು.
ಮುಖ್ಯ ಶಿಕ್ಷಕರ ಜವಾಬ್ದಾರಿಗಳು
ಆಹಾರ ಧಾನ್ಯಗಳ ಬಳಕೆ ಪ್ರಮಾಣ ಪತ್ರ/ಬೇಡಿಕೆ ಪ್ರಮಾಣ ಪತ್ರ ಅಕ್ಷರದಾಸೋಹ ಅಧಿಕಾರಿಗಳಿಗೆ ಸಲ್ಲಿಕೆ
ಆಹಾರ ಧಾನ್ಯಗಳನ್ನು ವಿಲೇವಾರಿ ಮಾಡುವಾಗ ತೂಕ/ಗುಣಮಟ್ಟವನ್ನು ಪರಿಶಿಲುಸಬೇಕು.
ಅಡುಗೆ ಗೆ ಸಂಬಂದಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಮುಖ್ಯ ಅಡುಗೆಯವರು ಗಮನ ಹರಿಸುತ್ತಿರಬೇಕು.
ತಾಯಂದಿರ ಸಮೀತಿ ರಚಿಸಬೇಕು.
lಪ್ರತಿ ದಿನ ರುಚಿ ನೋಡಲು ಶಿಕ್ಷಕರನ್ನು ನೇಮಿಸಿ ವಹಿಯಲ್ಲಿ ದಾಖಲಿಸುವುದು.
ಮಕ್ಕಳನ್ನು ಬಿಸಿಯೂಟ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.
ಶಾಲಾ ಶಿಕ್ಷಕರ ಮೇಲುಸ್ತುವಾರಿಯಲ್ಲಿ ಸುರಕ್ಷಿತವಾಗಿ ಅಡುಗೆ ಬಡಿಸುವುದನ್ನು ವ್ಯವಸ್ಥೆ ಮಾಡಿಕೊಳ್ಳುವುದು.
ಅಪರಿಚಿತರು ಪ್ರವೇಶಿಸದಂತೆ ನೋಡಿಕೊಳ್ಳುವುದು.
ಅನಾಹುತ ಅಸಕಸ್ಮಿಕ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.
ಅಗ್ನಿ ನಂದಕವನ್ನು ಅಡುಗೆ ಕೋಣೆಯಲ್ಲಿ ಅಳವಡಿಸಬೇಕು.ಸಮಯಕ್ಕೆ ಸರಿಯಾಗಿ ರೀಫಿಲ್ಲಿಂಗ ಮಾಡಿಸಿ ಚಾಲನೆಯಲ್ಲಿಟ್ಟಿರಬೇಕು.
ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ health card ನಿರ್ವಹಿಸುವುದು.
ದಾಖಲೆಗಳನ್ನು ನಿರ್ವಹಿಸುವುದು,ಪರಿಶಿಲಿಸುವುದು.
ಒಟ್ಟಾರೆ ಅಕ್ಷರದಾಸೋಹ ಯಶಸ್ವಿಗೊಳಿಸಲು ಮುಖ್ಯಗುರುಗಳು ಸಹ ಕೈಜೋಡಿಸಬೇಕು.
ಶಾಲಾ ಬಿಸಿಯೂಟ ತಯಾರಿಕೆಯಲ್ಲಿ ಎಚ್ಚರವಹಿಸಿ-
*ಶಾಲಾ ಕೆಲಸದ ದಿನಗಳಲ್ಲಿ (ಪರೀಕ್ಷಾ ದಿನಗಳನ್ನು ಸೇರಿಸಿ) ಹಾಗೂ ರಾಷ್ಟ್ರೀಯ ಹಬ್ಬಗಳು, ಸರಕಾರದಿಂದ ಆಚರಿಸಲಾಗುತ್ತಿರುವ ಗಣ್ಯರ ಜನ್ಮ ದಿನಗಳಂದು ತಪ್ಪದೇ ಬಿಸಿಯೂಟ ನೀಡಬೇಕು.
ಅಪೌಷ್ಠಿಕತೆ ನಿವಾರಿಸಲು ವಿದ್ಯಾರ್ಥಿಗಳಿಗೆಪೌಷ್ಠಿಕಾಂಶ ಮಾತ್ರೆಗಳನ್ನು ನೀಡಲಾಗುತ್ತಿದ್ದು, ನಿಗದಿಪಡಿಸಿರುವ ದಿನಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀಡಬೇಕು. ಹೀಗೆ ಮಾತ್ರೆಗಳನ್ನು ನೀಡುವಾಗ ಮಾತ್ರೆಯ ಅವಧಿ ಮುಕ್ತಾಯದ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವಷ್ಟೇ ವಿದ್ಯಾರ್ಥಿಗಳಿಗೆನೀಡಬೇಕು. ಇಲಾಖೆಯಿಂದ ಸರಬುರಾಜು ಮಾಡಿರುವ ಮಾತ್ರೆಗಳನ್ನು ನಿಯಮಾನುಸಾರ ಮಕ್ಕಳು ಊಟ ಮಾಡಿದ ನಂತರ ಕಡ್ಡಾಯವಾಗಿ ವಿತರಣೆಮಾಡಬೇಕು. ಯಾವುದೇ ಕಾರಣಕ್ಕೂ ಊಟಕ್ಕಿಂತ ಮೊದಲು ಮಾತ್ರೆಗಳನ್ನು ಮಕ್ಕಳಿಗೆ ವಿತರಿಸಬಾರದು. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು. ಶಾಲೆಯಲ್ಲಿ ಮುಂಜಾಗೃತ ಕ್ರಮವಾಗಿ ತುರ್ತು ಚಿಕಿತ್ಸೆಗೆ ಎಮರ್ಜೆನ್ಸಿ ಮೆಡಿಕಲ್ ಪ್ಲಾನ್ ಕಡ್ಡಾಯವಾಗಿ ವ್ಯವಸ್ಥೆ ಮಾಡಿ ಇರಿಸಿಕೊಳ್ಳಬೇಕು.ಈ ವಿವರವನ್ನು ಶಾಲೆಯ ಗೋಡಯ ಮೇಲೆ ಬರೆಸಬೇಕು. ಅಲ್ಲದೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು.ಪ್ರತಿ ವರ್ಷ ನಡೆಸುವ ರೀತಿಯಲ್ಲಿಯೇ, ಎಲ್ಲಾ ಮಕ್ಕಳನ್ನು ಶಾಲೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಹಾಗೂ ತಪಾಸಣೆಗಾಗಿ ಬಂದ ತಂಡದಿಂದಲೇ ಶಾಲಾ ಅಡುಗೆ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಿಸಬೇಕು.
 ಶಾಲಾ ಕೈತೋಟದಲ್ಲಿ ಬೆಳೆಯುವ ಹಸಿರು ಸೊಪ್ಪು, ತರಕಾರಿಗಳನ್ನು ಬಿಸಿಯೂಟ ಕಾರ್ಯಕ್ರಮಕ್ಕೆ ನಿಗದಿಪಡಿಸಿರುವ ಅವಕಾಶಗಳ ಜೊತೆಗೆ ಹೆಚ್ಚುವರಿಯಾಗಿ ಬಳಸುವದು. ಅವಕಾಶವಿರುವಡೆ ಶಾಲಾ ಕೈ ತೋಟವನ್ನು ಬೆಳೆಸಿ ಸಂರಕ್ಷಿಸುವುದು. ಅಡುಗೆ ತಯಾರಿಸಲು ಸ್ವಚ್ಛ ಹಾಗೂ ತಾಜಾ ತರಕಾರಿ, ಸೊಪ್ಪುಗಳನ್ನು ಮಾತ್ರ ಬಳಸಬೇಕು.
ಅಡುಗೆ ಅನಿಲ ಸಿಲಿಂಡರ ಉಪಯೋಗಿಸಿ ಅಡುಗೆಯವರು ಬಿಸಿಯೂಟ ತಯಾರು ಮಾಡುವಾಗ ಕಡ್ಡಾಯವಾಗಿ ಏಫ್ರಾನ್ ಧರಿಸಿಯೇ ಜಾಗ್ರತೆ ಮತ್ತು ಸುರಕ್ಷತೆಯಿಂದ ತಯಾರಿಸಬೇಕು.
ಕುಕ್ಕರ್ ಬಳಕೆ ಮಾಡಿ ಅಡುಗೆ ತಯಾರಿಸುವ ಶಾಲೆಗಳ ಮುಖ್ಯ ಶಿಕ್ಷಕರು/ ಶಿಕ್ಷಕರು/ಅಡುಗೆ ಸಿಬ್ಬಂದಿ ಕುಕ್ಕರಿನ ಸೇಪ್ಟಿ ವಾಲ್, ಗ್ಯಾಸಕೇಟ್, ವ್ಹಿಸಿಲ್ ಅನ್ನು ಆಗಾಗ್ಗೆ ನಿಯಮಿತವಾಗಿ ಪರಿಶೀಲಿಸುತ್ತಿರಬೇಕು. ಹವೆ ಪೂರ್ಣ ಹೋದ ನಂತರವೇ ಕುಕ್ಕರ್ ಮುಚ್ಚಳ ತೆರೆಯುವ ವಿಧಾನ ಅಳವಡಿಸಿಕೊಳ್ಳಬೇಕು.
 ಮುಖ್ಯೋಪಾದ್ಯಾಯರುಹಾಗೂ ಸಹ ಶಿಕ್ಷಕರು ಹಾಲು, ಆಹಾರದ ಗುಣಮಟ್ಟ, ರುಚಿ, ಶುಚಿತ್ವ ಇತ್ಯಾದಿಗಳನ್ನು ಪ್ರತಿ ದಿನ ಇಬ್ಬರು ಶಿಕ್ಷಕರಂತೆ ಸರದಿ ಪ್ರಕಾರ ಆಹಾರದ ರುಚಿ ನೋಡಿ, ಮಕ್ಕಳು ಸೇವಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು,ಊಟದ ಬಗ್ಗೆ ವಹಿಯಲ್ಲಿ ದಾಖಲಿಸಬೇಕು.
 ಶಾಲೆಯಲ್ಲಿ ಸಂಗ್ರಹವಿರುವ ಆಹಾರ ಧಾನ್ಯಗಳನ್ನು ಬಳಸುವಾಗ, ಎಫ್ಐಎಫ್ಓ (ಈiಡಿsಣ Iಟಿ ಈiಡಿsಣ ಔuಣ) ಮಾದರಿಯಂತೆ ಮೊದಲು ಬಂದ ಆಹಾರ ಧಾನ್ಯಗಳನ್ನು ಮೊದಲು ಬಳಸಿ ನಂತರ ಬಂದ ಆಹಾರ ಧಾನ್ಯಗಳನ್ನು ನಂತರ ಬಳಸಬೇಕು.
ಅಡುಗೆ ತಯಾರಿಕೆಗೆ ಸಂಗ್ರಹ ಮಾಡುವ ನೀರಿನ ತೊಟ್ಟಿ/ಟ್ಯಾಂಕಗಳನ್ನು ತಿಂಗಳಿಗೆ 2 ಬಾರಿ ಸ್ವಚ್ಛವಾಗಿ ತೊಳೆದು ನೀರನ್ನು ಸಂಗ್ರಹಿಸಿ, ಯಾವುದೇ ಕ್ರಿಮಿ-ಕೀಟಗಳನ್ನು ಬೀಳದಂತೆ ಮುಚ್ಚಳಿಕೆಯಿಂದ ರಕ್ಷಿಸುವುದು.
 ಆಹಾರ ಧಾನ್ಯಗಳನ್ನು ಕೆಡಲಾರದಂತೆ ಕಟ್ಟಿಗೆಯ ಹಲಗೆಯ ಮೇಲೆ ಸಂಗ್ರಹಿಸಿಡಬೇಕು.
*ಪ್ರತಿ ತಿಂಗಳು ಕಡ್ಡಾಯವಾಗಿ 25 ನೇ ತಾರಿಖಿನೊಳಗಾಗಿ ಆಹಾರಧಾನ್ಯದ ಬೇಡಿಕೆ, 3 ನೇ ತಾರಿಖೀನೊಳಗಾಗಿ ಬಳಕೆ, ಅಡುಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಹಾಜರಾತಿ ಪತ್ರ ಹಾಗೂ ಎಂ.ಐ.ಎಸ್. ಮಾಹಿತಿಯನ್ನು ಸಿ.ಆರ್.ಪಿ. ಯವರ ಮೂಲಕ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಪ್ರತಿ ದಿನ ಮಕ್ಕಳ ಸಂಖ್ಯೆಗೆಅನುಗುಣವಾಗಿ ಆಹಾರ ಧಾನ್ಯಗಳು, ತರಕಾರಿ, ಸಾಂಬಾರ ಪದಾರ್ಥಗಳನ್ನು ಉಪಯೋಗಿಸಿ ಸ್ವಚ್ಛತೆ ಹಾಗೂ ಸುರಕ್ಷತೆಯಿಂದರುಚಿಕಟ್ಟಾಗಿ ಅಡುಗೆ ತಯಾರಿಸಬೇಕು.
ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಮೆನು ಚಾರ್ಟನ್ನು ಹಾಕಿ ಅದರಂತೆಯೇ ಕ್ರಮವಹಿಸಬೇಕು.
ಪ್ರತಿ ದಿನ ಎಲ್ಲಾ ಮಕ್ಕಳಿಗೆ ಊಟ ಬಡಿಸುವಾಗ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕರು ಹಾಜರಿದ್ದು ಸುರಕ್ಷಿತವಾಗಿ ಹಾಗೂ ಶಿಸ್ತಿನಿಂದ ಊಟ ಮಾಡಿಸಬೇಕು.
 ಯಾವುದೇಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು.
ಪ್ರತಿ ದಿನ ಊಟಕ್ಕೆ ಮುಂಚೆ ಹಾಗೂ ಊಟದ ನಂತರ ಮಕ್ಕಳು ಕೈತೊಳೆಯ ಬೇಕು. ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಮಕ್ಕಳು ಕೈ ತೊಳೆಯಲು 20 ಮಕ್ಕಳಿಗೆ ಒಂದು ನಳದಂತೆ ಕಟ್ಟೆ ನಿರ್ಮಿಸಿಕೊಳ್ಳಬೇಕು. ಕಟ್ಟೆ ನಿರ್ಮಿಸಲು ಶಾಲಾ ಅನುದಾನ/ನಿರ್ವಹಣಾ ವೆಚ್ಚ/ದಾನಿಗಳ ಸಹಾಯವನ್ನು ಪಡೆಯಬಹುದಾಗಿದೆ.
*ಅಡುಗೆ ತಯಾರಿಸಲು ಸ್ವಚ್ಛ ಹಾಗೂ ಶುದ್ದವಾದ ನೀರನ್ನು ಬಳಸಬೇಕು. ಯಾವ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿರುತ್ತದೆಯೋ ಆಯಾ ಶಾಲೆಗಳ ಮುಖ್ಯೋಪಾದ್ಯಾಯರು ಸಂಭಂದಿಸಿದ ಗ್ರಾಮ ಪಂಚಾಯತಗೆ ಪತ್ರ ನೀಡಿ ಮಕ್ಕಳಿಗೆ ಉಚಿತವಾಗಿ ಕುಡಿಯುವ ನೀರಿನ ಸೌಲಭ್ಯವನ್ನು ಪಡೆದುಕೊಳ್ಳುವಂತೆಈಗಾಗಲೆ ಸೂಚನೆ ನೀಡಲಾಗಿದೆ.
*ಈ ಹಿಂದೆ ತಿಳಿಸಿದಂತೆ 1 ರಿಂದ 10 ನೇ ತರಗತಿಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ( ಸೋಮವಾರ, ಬುಧವಾರ, ಶನಿವಾರ ) 18 ಗ್ರಾಂ ಹಾಲಿನ ಪುಡಿಯಿಂದ ಹಾಲು ತಯಾರಿಸಿ ವಿತರಿಸಬೇಕು. ಒಂದು ವೇಳೆ ಹಾಲಿನ ಪುಡಿ ಮುಗಿದಲ್ಲಿ ಬೇರೆ ಶಾಲೆಯಿಂದ ಕಡ ತಂದು ಹಾಲು ತಯಾರಿಸಿ ವಿತರಿಸಬೇಕೆ ಹೊರತು ಖರೀದಿಸುವಂತಿಲ್ಲ.
 ಹಿಂದೆ ನೀಡಿರುವ ಆದೇಶದಂತೆ ವಾರಕ್ಕೊಮ್ಮೆ ಪ್ರತಿ ಶನಿವಾರ ಗೋಧಿ ಬಳಕೆ ಮಾಡಿ ಉಪ್ಪಿಟ್ಟು/ಚಪಾತಿ/ಪಾಯಸ/ಪೂರಿ ತಯಾರಿಸಿ ವಿತರಿಸಬೇಕು.
 ಶನಿವಾರದಂದು ತೊಗರಿ ಬೇಳೆಯನ್ನು ಬಳಸಬಾರದು.
ಅಡುಗೆಗೆ ಡಬಲ್ಫೋರ್ಟಿಫೈಡ್ ಉಪ್ಪನ್ನು ಬಳಸಬೇಕು.
ಅನುಷ್ಠನದಲ್ಲಾಗುವವಿಳಂಬ ಹಾಗೂ ವ್ಯತ್ಯಾಸಗಳಿಗೆ ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ)ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳು ಅಕ್ಷರದಾಸೋಹ, ತಾಲೂಕಾ ಹಂತದಲ್ಲಿ ತಾಲೂಕಾ ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅಧಿಕಾರಿಗಳವರು ಜವಾಬ್ದಾರರಾಗಿರುತ್ತಾರೆ. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು, ಸಿ.ಆರ್.ಪಿ ಗಳ ಜವಾಬ್ದಾರಿಯಾಗಿರುತ್ತದೆ.
ಅಕ್ಷರ ದಾಸೋಹ ಕಾರ್ಯಕ್ರಮದ ಮಾರ್ಗಸೂಚಿ ಪುಸ್ತಕದಲ್ಲಿ ಸೂಚಿಸಿರುವಂತೆ ಅಡುಗೆ ಸಿಬ್ಬಂದಿಯ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಗಳಲ್ಲಿ ಯಾವುದೇ ಲೋಪಗಳು ಉಂಟಾಗಿದ್ದಲ್ಲಿ ಅಡುಗೆ ಸಿಬ್ಬಂದಿಯವರೇ ನೇರ ಹೊಣೆಗಾರರಾಗಿರುತ್ತಾರೆ. ಇದರ ಮೇಲುಸ್ತುವಾರಿಯನ್ನು ಎಸ್.ಡಿ.ಎಂ.ಸಿ. ನಿರ್ವಹಿಸಬೇಕು