ಸೃಜನಾತ್ಮಕ ಮಕ್ಕಳ ಮತ್ತು ಶಿಕ್ಷಕರ ವಿಡಿಯೋಗಳ ವೇದಿಕೆ

ಆತ್ಮೀಯ ಬಂಧುಗಳೇ :-

 ಸೃಜನಾತ್ಮಕ ಮಕ್ಕಳ ಮತ್ತು ಶಿಕ್ಷಕರ ವಿಡಿಯೋಗಳ ವೇದಿಕೆಗೆ ಸುಸ್ವಾಗತ

ಶಿಕ್ಷಕ ಮಿತ್ರರೇ......
ಮಕ್ಕಳ ಮತ್ತು ಶಿಕ್ಷಕರ ಸೃಜನಾತ್ಮಕ ವೇದಿಕೆಗೆ ಶಿಕ್ಷಕರ ಕೈಪಿಡಿಯಲ್ಲಿ ಈ ಪುಟವನ್ನು  ಸೃಜನಾತ್ಮಕ   ವಿಡಿಯೋಗಳಿಗಾಗಿ  ತೆರೆಯಲಾಗಿದೆ.

ವಿಶೇಷ ಸಂದರ್ಭಗಳಲ್ಲಿ ತಮ್ಮ ಶಾಲೆಯಲ್ಲಿ ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಂತಹ ಮಕ್ಕಳ ಮತ್ತು ಶಿಕ್ಷಕರ  ಹಾಗೂ  ಶೈಕ್ಷಣಿಕವಾಗಿ  ಸುದ್ದಿ ವಾಹಿನಿಗಳಲ್ಲಿ ಪ್ರಕಟಗೊಂಡ  ವಿಶೇಷ, ವಿಶಿಷ್ಟ, ವಿನೂತನ ಮಕ್ಕಳ ಕಲಿಕೆಗೆ ಮತ್ತು ಶಿಕ್ಷಕರ ಕಲಿಕೆಗೆ ನವ ನೂತನ ಸ್ವಂತ( Your Own videos )ವಿಡಿಯೋಗಳನ್ನು ಕರ್ತವ್ಯ ಸಮಯವನ್ನು ಹೊರತುಪಡಿಸಿ ಅಥವಾ ರಜಾದಿನಗಳಲ್ಲಿ ತಾವು ಕಳುಹಿಸಬಹುದು.

ತಾವು ಕಳುಹಿಸುವಂತಹ ವಿಡಿಯೋಗಳನ್ನು ಶಿಕ್ಷಕರ ಕೈಪಿಡಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಿಸಲಾಗುವುದು
ಇದರಿಂದ ಮಕ್ಕಳಿಗೆ ಮತ್ತು ಶಿಕ್ಷಕರ ಕಲಿಕೆಗೆ ಆಸಕ್ತಿ, ಪ್ರೇರಣೆ, ಮತ್ತು ಮಾರ್ಗದರ್ಶನವಾಗಬಹುದು.

ತಾವು ಇಂತಹ ಸೃಜನಾತ್ಮಕ ವಿನೂತನ  ಆಸಕ್ತಿದಾಯಕ  ಪ್ರೇರಣಾತ್ಮಕ   ಕಲಿಕೆಯ  ವಿಡಿಯೋಗಳನ್ನು ಕಳುಹಿಸಲು ಇಚ್ಛಿಸುವುದಾದರೆ ತಮ್ಮ ಹೆಸರು ಮತ್ತು ಶಾಲೆಯ ವಿಳಾಸ ಹಾಗೂ ವಿಡಿಯೋದ ಟೈಟಲ್  ಬರೆದು ಕಳುಹಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಹಾಗೆಯೇ ಶಿಕ್ಷಕರ ಕೈಪಿಡಿ ಯೂಟ್ಯೂಬ್  ಚಾನೆಲ್ ನಲ್ಲಿರುವಂತ ಎಲ್ಲ ವಿಡಿಯೋಗಳನ್ನು ನೋಡುವುದಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹಾಗೂ ಶಿಕ್ಷಕರ ಕೈಪಿಡಿ ಯೂಟ್ಯೂಬ್ ಚಾನೆಲ್   ಸಬ್ಸ್ಕ್ರೈಬ್ ಮಾಡಿ

ವಿನಮ್ರತೆಯ ಮನವಿ:-
ಈ ವೇದಿಕೆ ಅಡಿಯಲ್ಲಿ    ಕಳುಹಿಸುವಂತಹ  ವಿಡಿಯೊಗಳು ಸಾಮಾಜಿಕ ಜಾಲತಾಣಗಳಿಂದ ಪಡೆಯುತ್ತಿರುವುದರಿಂದ ಕೆಲವೊಂದು ವಿಡಿಯೋಗಳು ತಮ್ಮ ವೈಯಕ್ತಿಕ ಅಥವಾ ಹಕ್ಕು ಸಾಮ್ಯವನ್ನು ಹೊಂದಿದ್ದರೆ ದಯವಿಟ್ಟು  ಶಿಕ್ಷಕರ ಕೈಪಿಡಿ ಈ ಕೆಳಗಿನ ಲಿಂಕ್ ನಲ್ಲಿ ತಿಳಿಸಿ  ಅಂತಹವುಗಳನ್ನು ತೆಗೆದು ಹಾಕಲಾಗುವುದು  ಈ ವೇದಿಕೆ ಕೇವಲ ಸೃಜನಾತ್ಮಕ ಕಲಿಕೆಗಾಗಿ  ಮಾತ್ರ......ಮತ್ತೆ ಯಾವುದೇ ವಹಿವಾಟಿನ ಚಟುವಟಿಕೆಗಳಿಗಾಗಿ ಅಲ್ಲ ಎಂಬುದನ್ನು ಶಿಕ್ಷಕರ ಕೈಪಿಡಿಯು ತಿಳಿಸಲು ಇಚ್ಚಿಸುತ್ತದೆ ಧನ್ಯವಾದಗಳೊಂದಿಗೆ.