ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ವಿಸ್ತರಿಸಲು ಪೂರಕ ಕಾರ್ಯಕ್ರಮಗಳು ಕಾರಣವಾಗುತ್ತವೆ. ಅಂತಹ ಕಾರ್ಯಕ್ರಮಗಳಲ್ಲಿ ‘ಇಕೋ ಕ್ಲಬ್’ ಚಟುವಟಿಕೆಯೂ ಒಂದು. ಬರೀ ಪರಿಸರದ ಪ್ರಜ್ಞೆಯನ್ನು, ಜ್ಞಾನವನ್ನು ಗಳಿಸಿಕೊಂಡರೆ ಸಾಲದು, ಅದರ ಬಗ್ಗೆ ಕಳಕಳಿಯೂ ಸಾಲದು. ವಾಸ್ತವವಾಗಿ ನಮ್ಮ ಪರಿಸರದಲ್ಲಿ ಜವಾಬ್ದಾರಿಯಿಂದ ಬದುಕುವುದನ್ನು, ಪರಿಸರವನ್ನು ಉಳಿಸಿ ಬೆಳಸುವಂತಹ ಕೆಲಸಗಳನ್ನು ಮಾಡುವ ಸಾಮರ್ಥ್ಯ ಯಾವಾಗಲೂ ಇರುವಂತೆ ವಿದ್ಯಾರ್ಥಿಗಳಲ್ಲಿ ಅಪೇಕ್ಷಿತ ವರ್ತನಾ ಬದಲಾವಣೆಗಳಾಗಬೇಕು. ಪರಿಸರವನ್ನು ಉಳಿಸಿ ಬೆಳೆಸಿ ಸಂರಕ್ಷಿಸುವ ಅಗತ್ಯವನ್ನು ಅದಕ್ಕಾಗಿ ಆಗಬೇಕಾದ ಜವಾಬ್ದಾರಿಯುತ ಅಪೇಕ್ಷಿತ ವರ್ತನೆಗಳನ್ನು ವಿದ್ಯಾರ್ಥಿಗಳು ಪರಿಸರ ಸಂಘಗಳ ಮೂಲಕ ಹೊಂದುತ್ತಾರೆ.
ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಶಾಲೆಕಾಲೇಜುಗಳು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ವಿದ್ಯಾರ್ಥಿಗಳನ್ನು ಪರಿಸರದ ಕಡೆಗೆ ಕೊಂಡೊಯ್ಯುವುದು ಹಾಗೂ ಪರಿಸರವನ್ನು ತರಗತಿಗಳಿಗೆ ತರುವುದು ಪರಿಸರ ಸಂಘಗಳ ಮೂಲ ಉದ್ದೇಶವಾಗಿದೆ.
ಲಾಭವೇನು ?
1. ಪರಿಸರದ ಜೀವಿಗಳಲ್ಲಿ ತೋರಿಬರುವ ಪರಸ್ಪರ ಅವಲಂಬನೆ ಸೌಹಾರ್ದತೆಯನ್ನು ಅರ್ಥಮಾಡಿಕೊಳ್ಳಲು ಹಾಗೂ ಮೆಚ್ಚುಗೆ ಪಡಲು ಒಂದು ಅವಕಾಶ ಸಿಕ್ಕಂತಾಗುವುದು.
2. ನಾಯಕತ್ವ, ಸಂವಹನ, ಕ್ರಿಯಾಶೀಲತೆ, ಯೋಜಿಸುವುದು ಮತ್ತು ಸಂಘಟಿಸುವುದು ಇವೇ ಮುಂತಾದ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳು ಹೊಂದುತ್ತಾರೆ.
3. ಸಮುದಾಯಗಳಲ್ಲಿ ಬೆರೆಯಲು, ಸಮುದಾಯದ ಜನರ ಬಗ್ಗೆ ತಿಳಿಯಲು, ಅದರ ಒಂದು ಯೋಜನಾ ಕಾರ್ಯ ನಿರ್ವಹಿಸಲು ಔಪಚಾರಿಕ ಶಾಲಾ ವ್ಯವಸ್ಥೆಯ ಚೌಕಟ್ಟುಗಳನ್ನು ವಿಸ್ತರಿಸುವುದು.
4. ಸಮೀಪದ ಶಾಲೆಗಳಲ್ಲಿ ಒಂದು ಸಂಪನ್ಮೂಲ ಕೇಂದ್ರವಾಗಿ ಸ್ಪೂರ್ತಿ ತುಂಬುವುದು.
ನಡೆಸಬಹುದಾದ ಚಟುವಟಿಕೆಗಳು
ಶಾಲೆಗಳಲ್ಲಿ ಪರಿಸರ ಸಂಘಗಳ ಮೂಲಕ ಅನೇಕ ಚಟುವಟಿಕೆಗಳನ್ನು ಏರ್ಪಡಿಸಬಹುದು.
1. ಚರ್ಚೆ- ಒಂದು ಪರಿಸರೀಯ ವಿಷಯವನ್ನು ಕುರಿತು ಸರಿಯಾದ ಯೋಜನೆಯೊಡನೆ ನಡೆಯುವ ಚರ್ಚಾ ಚಟುವಟಿಕೆಯು ವಿದ್ಯಾರ್ಥಿಗಳಲ್ಲಿ ಪರಿಸರದೆಡೆಗೆ ಧನಾತ್ಮಕ ಧೋರಣೆಯನ್ನೂ, ಸ್ಪಷ್ಟ ವೌಲ್ಯಗಳನ್ನೂ ಬೆಳೆಸುವುದು.
2. ತಜ್ಞರ ಚರ್ಚಾಕೂಟ- ಇದರಲ್ಲಿ ತಜ್ಞರ ಒಂದು ತಂಡವು ಚರ್ಚಾಂಶಗಳನ್ನು ಒಂದು ವ್ಯವಸ್ಥಿತ ರೂಪದಲ್ಲಿ ಪ್ರಸ್ತುತ ಪಡಿಸುವುದು.
3. ಪರಿಸರ ವಸ್ತು ಪ್ರದರ್ಶನಗಳು- ಪರಿಸರವನ್ನು ಕುರಿತು ಪ್ರದರ್ಶನಗಳು ಮತ್ತು ಪರಿಸರ- ವಸ್ತು ಪ್ರದರ್ಶನಗಳು. ಕೇವಲ ಪರಿಸರ ಪ್ರಜ್ಞೆ, ಕಳಕಳಿ, ಕಾಳಜಿಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದಷ್ಟೇ ಅಲ್ಲದೆ, ಪರಿಸರದ ಕೆಲವು ವಿಚಾರಗಳ ಬಗ್ಗೆ ಆಳವಾದ ಜ್ಞಾನ ಪಡೆಯುವಂತೆಯೂ ಪ್ರಚೋದಿಸುತ್ತದೆ.
4. ನಿಸರ್ಗ ವಿಹಾರ- ನಿಸರ್ಗ ವಿಹಾರ, ಕ್ಷೇತ್ರ ಪ್ರವಾಸಗಳ ಮೂಲಕ ಮಕ್ಕಳಲ್ಲಿ ಸಹಜವಾಗಿಯೇ ಇರುವ ಅನ್ವೇಷಣಾ ಮನೋಭಾವವನ್ನು, ನಿಸರ್ಗದೊಂದಿಗೆ ಇರಬೇಕೆಂಬ ಅವರ ಆಸೆಯನ್ನೂ ಪ್ರೋತ್ಸಾಹಿಸಬಹುದು.
5. ಸ್ಪರ್ಧೆಗಳು- ಪರಿಸರಕ್ಕೆ ಸಂಬಂಧಿಸಿದ ಚಿತ್ರಕಲೆ, ಪ್ರಬಂಧ, ಕ್ವಿಜ್ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು.
6. ಕ್ರಿಯೆ ಆಧಾರಿತ ಕಾರ್ಯಕ್ರಮಗಳು- ತೋಟದ ನಿರ್ವಹಣೆ, ಸಸಿ ನೆಡುವುದು ಇತ್ಯಾದಿ.
7. ತಜ್ಞರಿಂದ ಭಾಷಣಗಳು- ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರ ಕುರಿತು ಭಾಷಣ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು.
ಇಕೋ ಕ್ಲಬ್‌ಗಳ ನಿರ್ವಹಣೆಗಾಗಿ ಸರ್ಕಾರದಿಂದ ಧನಸಹಾಯವೂ ಲಭ್ಯವಾಗುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ನಿರ್ವಹಿಸುವಲ್ಲಿ ಆಡಳಿತ ಮಂಡಳಿ ಮುಂದಾಗಬೇಕು.
ಇಕೋ ಕ್ಲಬ್ ಮಾದರಿ ವರದಿ
೨೦೧೯-೨೦೨೦
೨೦೧೯-೨೦೨೦
===================================
೨೦೧೭-೨೦೧೮
===================================
೨೦೧೯-೨೦೨೦