ವೇಣುಗೋಪಾಲ್ ಕೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ ಸ್ವರಚಿತ ಕವನಗಳು


ವೇಣುಗೋಪಾಲ್ ಕೆ 
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು 
ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ 
ಸ್ವರಚಿತ ಕವನಗಳು




"ವಿಶ್ವಧರ್ಮ"

🙏🏽🙏🏽🙏🏽🙏🏽🙏🏽🙏🏽🙏🏽
ವಿಶ್ವಧರ್ಮ ಪಾಲಿಸಿ ಕೂರ್ಮೆ ಗಳಿಸಿ
ಕಾಳಗದ ಗುಂಗು ತೊರೆದು ಜೀವಿಸಿ
ಮಾನವೀಯ ಮೌಲ್ಯ ಮುದದಿ ಪಠಿಸಿ
ಸಹಬಾಳ್ವೆ ಸಮರಸ ಮಂತ್ರವ ಜಪಿಸಿ

ಹಮ್ಮು ಬಿಮ್ಮು ತೊರೆದು ಮಿತ್ರತ್ವ ಗಳಿಸಿ
ವೀರತ್ವ ತೊರೆದು ವಿನಯದಿ ವರ್ತಿಸಿ
ಅಮರತ್ವ ಪಡೆದು ಆತ್ಮಶುದ್ಧಿ ಕರುಣಿಸಿ
ರಕ್ತ ಚಿತ್ತವ ಮರೆತು ವಿಧಾತನ ನಮಿಸ

ಸಮರವ ಮರೆತು ಭಾತೃತ್ವ ಅರಿಯಿರಿ
ಶಾಂತಿ ದಾತರ ಜಾಡು ತೊರೆಯದಿರಿ
ವಿಶ್ವರೂಪ ಮೆರೆಯದಿರಿ ಮಿತ್ರತ್ವ ಗಳಿಸಿ
ಸಿಡಿಮದ್ದು ಸುಡದಿರಿ ಸಾಮರಸ್ಯಪರಿ

ಲೋಕದ ಕೂರ್ಮೆ ಹೊಡೆಯಿರಿಹರ್ಷದಿ
ಕುರ್ಕುರ ಪರಿ ತೋರದಿರಿ
ಕೂರ್ಮ ತರಹ ನಡೆಯಿರಿ
ಲೋಚನ ಪರಿ ಶುಭ್ರವ ಕಾಣಿರಿ

🙏🏽💐💐💐💐💐💐🙏🏽🙏🏽
ಕೆ.ವೇಣುಗೋಪಾಲ್ ಶ್ರೀನಿವಾಸಪುರ
"ಮೂಡಣ ರವಿ"
🙏🏽💐💐💐💐💐🙏🏽


"ಪ್ರಜಾಪತಿ ಪಯಣ"
🌹🌹🌹🌹🌹🌹🌹
ವಾಗೀಶ ಬಂದಿಹನು ಸಂತಸದಿ
ಲೋಗ ವ್ಯಾಕುಲತೆ ಅರಿಯಲು
ವಾಗ್ವರನ ಲೋಚನ ಅರಳಿಸಿ ಕಂಡಲು
ವೈದೇಹಿ ವಾಲ ಚದುರಿದ ತರದಿ||೧||

ಸುಧಾಕರ ತೇಜಸ್ಸು ಪಡೆದಿಹನು
ಲೋಹಿತ ವರ್ಣವ ಪಸರಿಸಿತು ಜಲಜ
ತ್ರಿರುಂಡ ಕಂಡು ಮೂಕ ವಿಸ್ಮಿತ ತರದಿ
ವನಚರಿ ಸುಧೆ ನೀಡಿಹಲು ತೋಷದಿ||೨||
 
ವಿಟಪ ತಳದಿ ತುಸು ಸವಡು ಪಡೆದು
ಹಿಂದೋಲ ತೇಲುತಾ ಮುದ ಪಡೆದು
ಹಟ್ಟಿಯಲೂ ಮಧು ಜಿನಿಗಿತು ರಸನದು
ಪಿಕಗಳು ಮಧುರಕಂಠ ಸಿರಿ ತೊರಿಹು||೩||

ಸುಪರ್ಣರಿಂದ ಸುದ್ದಿ ಅರಿತ ನಾರದನು
ಸರ್ವಗನಿಗೆ ನಮಿಸಿ ಸೊರೆ ನುಡಿಸಿಹನು
ಹೇರಿಗ ತಾಜಾಸುದ್ದಿ ಜಗದೂಲುಪಸರಿ
ಪಿಪೀಲಿಕ,ಸಾರಂಗ,ವ್ಯಾಘ್ರ,ವಂದಿಸಿ||೪||
ಲತಾಂಗಿಯರು ಜಾವಡಿಗೀತೆಹಾಡಿಹರು
ಶಿಖಂಡಿಗಳು ನೃತ್ಯ ಭಂಗಿ ತೊರಿಹವು 
ವಿದುಷರು ವೇದಾಂತ ಪಠಿಸಿದರು
ವಿಧಾತನಿಗೆ ರಸದೌತನದಿ ನಮಿಸಿದರು.||೫||




ಕುರ್ಕುರ:ಶ್ವಾನ

🌹🌹🌹🌹🌹🌹🌹🌹
ಪ್ರಾಚೀನ ಕಾಲದೆ ನೀ ಪೊಡವಿ ತೊರೆದೆ
ಜಗದ ಒಡನಾಟ ಗಳಿಸಿದೆ
 ಒಡೆಯನ ಕವಾಟ ಕಾವಲು ಕಾದೆ
ಶರ್ವರಿ ಬೆಳಕು ಎನ್ನ ಪರಿವಿಲ್ಲಾದೆ||

ಆರಕ್ಷಕರ ಪರಮವೀರ ಮಿತ್ರನಾದೆ
ಘ್ರಾಣದ ಪರಿಯಿಂದ ಠಕ್ಕರ ಶತ್ರುವಾದೆ
ಶಬರನಗೆ ನೀ ಸಾರಥಿಯಾದೆ
ನರರ ಕೂರ್ಮೆ ನೀ ಕಂಡೆ||

ವದನದಿ ಕಡಿದರೆ ಗರಳದಿಂದ ಸತ್ತರು
ಗಂಧವತಿಯಲ್ಲಿ ನಂಬಿಕೆ ನೀ ಕಂಡೆ
ಸಾಕಿದ ನಾಯಕರುಶ್ರೀಮಂತರಾದರು
ಸಂತೆಯಲ್ಲಿ ದುಬಾರಿ ಮೌಲ್ಯನೀ ಕಂಡೆ||
ದೈವಭಾವದಿ ನೆನೆದರೂ ಹಲವು ಮಂದಿ
ನೀಚ ತರದಿ ಪಂಡಿತರು ಕೆಲಮಂದಿ
ಹಾದಿ ಬೀದಿಯಲ್ಲಿ ನಿನ್ನದೇ ಕಾಟ
ನಂಬಿಕೆ ಮತ್ತೊಂದು ಹೆಸರ ಮಾಟ||


🙏🏽ವೇಣುಗೋಪಾಲ್ ಕೆ ಶ್ರೀನಿವಾಸಪುರ🙏🏽
ಅರ್ಥಗಳು:
ಕುರ್ಕುರ . ಶ್ವಾನ
ಶಬರ: ಬೇಟೆಗಾರ
ವದನ: ಬಾಯಿ
ಗಂಧವತಿ: ಭೂಮಿ
ಘ್ರಾಣ: ವಾಸನೆ
ಕೂರ್ಮೆ: ಪ್ರೀತಿ
ಕಾವಟ: ಬಾಗಿಲು
ಗರಲ: ವಿಷ
🙏🏽💐💐💐💐💐💐💐💐🙏🏽

ಅರ್ಥ
ವಿಧಾತ: ಬ್ರಹ್ಮ
ವಿದುಷರು: ಪಂಡಿತರು
ಸುಪರ್ಣ: ಗರುಡ
ನಾಲಿಗೆ: ರಸನ
ಪಿಂಕ :ಕೋಗಿಲೆ
ವಾಗೀಶ: ಬ್ರಹ್ಮ
ಪಿಪೀಲಿಕ:ಇರುವೆ
ಸೊರೆ: ತಂಬೂರಿ
ಹಿಂದೋಲಿ:ಉಯ್ಯಾಲೆ
ಹಟ್ವಿ:ಜೇನುಗೂಡು
ವೈದೇಹಿ:ಸೀತೆ
ಲೋಚನ:ಕಣ್ಣು

ಕೆ.ವೇಣುಗೋಪಾಲ್ ಶ್ರೀನಿವಾಸಪುರ
ಮೂಡಣ ರವಿ
🙏🏽💐💐💐💐💐💐💐💐🌹🙏🏽🙏🏽




"ಸ್ವಾಭಿಮಾನಿ ರೈತ"
@@@_@@@_@

ಜೈ ಕಿಸಾನ್ ಯಾರು ಬಲ್ಲರು ನಿನ್ನ ವ್ಯಥೆ
ವ್ಯವಧಾನ ವಿಲ್ಲದೆ ದುಡಿದು
ವೈಸಿಕ ನಾದೇಯ ವಿಧಿ
ವ್ಯಾಮೋಹದಿ ಫಸಲು ಬೆಳೆದೆ|| ೧||

ಅಲ್ಪ ಧರಕ್ಕೆ ನೀ ಮಾರಿದೆ
ವ್ಯಯವಾಯಿತು ನೀರಿನ ತರಹ
ಶಪಥವ  ಮಾಡಿಬೇಡಿ ಶರಣಾದೆ
ಶರೀರ ದಂಡಿಸಿ ನೀ ರಾಭಸ ತರಹ||೨||

ಸಂಭ್ರಮ ಸಂತೋಷ ನೀ ಕಾಣಲಿಲ್ಲಾ
ದೇಶಿಕರ ಮಾರ್ಗದರ್ಶನಪರಿವಿಲ್ಲಾ
ಶರಾಬು ಸಖ್ಯದಿಂದ ಶಯ್ಕೆ ಜಾರಿದೆ
ದೇವರ ಅನುಗ್ರಹ ನೀ ಕಾಣಲಾದೆ||೩||

ಅರಿಸಿದೆ ಕಣ್ಣೋಟ ಮುಗಿಲಿನಡೆ
ಚಿಂತೆಯಲ್ಲಿ ನೀ ಕೊರಗಿ ಬೆಂಡಾದೆ
ಗರಳ ಕೈಹಿಡಿದು ಗಡಗಡ ನಡುಗಿದೆ
ದುಃಖದಿ ನೀ ಜಾರಿದೆ ಚಿರನಿದ್ರೆಗೆ|| ೪||

ವೇಣುಗೋಪಾಲ್.ಕೆ  ಶ್ರೀನಿವಾಸಪುರ
"ಮೂಡಣ ರವಿ"
🙏🏽🙏🏽🙏🏽🙏🏽🙏🏽🙏🏽💐💐💐💐🙏🏽🙏🏽🙏🏽🙏🏽



"ಅರೆವೆಣ್ಣ_ದರವೇಶಿ"


ಬಂದಿಹನು ಅರೆವವೆಣ್ಣ ದರವೇಶಿ
ಜಗದ ಪರಿಯ ತಾ ಕಾಣಲು
ಪವಕ್ಕಿ ನುಡಿಯಿತು ವಿಶ್ವದ ಮರ್ಮ
ವಸುಮತಿ ಹರ್ಷದಿ ಕುಣಿದಿಹಲು||

ಅಭ್ರ ತೋರಿತು ಸಿಡಿಲಿನಾ ಪರಿಯ
ಶಿಖಂಡಿಗಳು ಗರಿಬಿಚ್ಚಿ ನರ್ತಿಸಿದವು
ಅಮ್ಮಾವು ಸುರಿಸಿತು ಕ್ಷೀರಧಾರೆಯ
ಕೋಗಿಲೆಗಳು ಮಧುಕಂಠ  ತೋರಿಹವು

ವಾಹ ನಾಗಾಲೋಟ ಹಿರಿಮೆ ತೋರಿತು
ಶುಂಡಾಳ ಗಾಂಭೀರ್ಯ ತೋರಿತು
ಪ್ರಭಾಕರ ಪರಾಕ್ರಮ ಪರಿಯ ತೋರಿದ
ಅಹ್ನ ವೇಳೆ ಸರ್ವವೂ ಕಂಡ ಸಂತಸದಿ||

ಮಾನನಿಯರು ಶಾಂತಕುಂಭವ ಧರಿಸಿ ಸಂಭ್ರಮಿಸಿದರು
ಅಭಿನೇತ್ರಿ ಯರು ನಾಟ್ಯ ವೈಯ್ಯಾರ ತೋರಿದರು
ಅಮಾತ್ಯರು ವಾಗ್ವಲ ತೋರಿದರು
ನಾ ಪಿತರು ನಾದಸ್ವರ ಕೈಚಳಕ ತೋರಿದರು||

ವ್ಯಾಘ್ರಗಳು ವಿಶಂಕೆ ಪರಿ ಕಂಡವು
ಹಂಸವು ತೋರಿತು ನಡೆಯ ಗಾಂಭೀರ್ಯವು
ಮಲ್ಲಿಗೆ ಬೀರಿತು ಪರಿಮಳದ ಕಂಪು
ವಸ್ತಾರ ನಿಕಾಲೆ ಹಾಡಿದರುಹಿಂಪು||


ಅರ್ಥ ಗಳು
ಶಿಖಂಡಿಗಳು: ನವಿಲುಗಳು
ಅಭ್ರ:ಆಕಾಶ
ವಸುಮತಿ:ಭೂಮಿ
ಅಮ್ಮಾವು:ಕಾಡಿನ ಹಸು
ವಾಹ:ಕುದುರೆ
ಅಹ್ನ :ಹಗಲು ಸಮಯ
ಅಮಾತ್ಯ:ಮಂತ್ರಿ
ಅಭಿನೇತ್ರಿ :ನಟಿ
ವಸ್ತಾರ :ಗುರು
ಅರೆವೆಣ್ಣ_ದರವೇಶಿ: ಅರ್ಧನಾರೀಶ್ವರ ಭಿಕ್ಷೆಗೆ ಬಂದಿಹನು
ಪವಕ್ಕಿ:ಗಿಳಿ
ನಿಕಾಲೆ:ಮುಕ್ತಾಯ
ವಿಶಂಕೆ:ಅನುಮಾನ


ಕೆ.ವೇಣುಗೋಪಾಲ್.ಶ್ರೀನಿವಾಸಪುರ
"ಮೂಡಣರವಿ"
🙏🏽💐💐💐💐💐💐💐🙏🏽



"ಜಾರಿತು ಜೀವ"
🌹🌹🌹🌹🌹🌹🌹🌹🌹🌹
ಜಾರಿತು ಜೀವ ದೇಹದಿ
ಆಗಸದಿ ಉಲ್ಕೆಯ ಪರಿ
ಧನ ಕನಕಗಳ ತೊರಿದು
ಮಡದಿ, ಮಕ್ಕಳ ಭಾಂದವ್ಯ ತೊರಿದು||

ಹರನ ಕೆರೆಯ ತೊರೆಯದಂತೆ
ಮೌನದಿ ಕಳಚಿತು ದೇಹದಿ ಕೊಂಡಿ
ಹಲವು ಮಜಲುಗಳ ಸುರಿಸುತ್ತಾ 
ಉಳಿಸಿತು ತನ್ನ ಬಿಂಬದಿಯ ಕುಡಿ||

ಅನುದಿನವು ಕಳೆಯಿತು ತಾ ಅರಿಯದೆ
ಕಳೆಯಿತು ಎಂಬ ಪರಿಕಾಣದೆ
ಬಾಲ್ಯ, ಯೌವನ, ವೃದ್ಧಾಪ್ಯ ತರದಿ
ಪೂರ್ವಜರ ಜಾಡಿನ ತೀರದಿ||

ಅರಿಷಡ್ವರ್ಗಗಳ ಪಡೆಯಿತು 
ಅನುಬಂಧಗಳ ಪರಿವಿಲ್ಲಾದಾಯಿತು
ಅನುರಾಗದಲ್ಲಿ ವಿರಮಿಸುತ್ತಾ
ಆಕಸ್ಮಿತವ ಅರಿಯದ ಪಂಚಭೂತಸುತ್ತಾ.||


🙏🏽ವೇಣುಗೋಪಾಲ್.ಕೆ ಶ್ರೀನಿವಾಸಪುರ🙏🏽


🌹ತಿಗುರಿ🌹

ಕುಲ ವೃತ್ತಿಯನ್ನು ಬಲ್ಲಿರಾ
ಕುಲಧರ್ಮವಾ ಪಾಲಿಸುವಿರಾ
ಕುಂಟುನೆಪಗಳ ತೊರೆದು
ಲೋಭದಿಇತರರ ಜರಿದು

ವೃತ್ತಿಯನ್ನು ತೊರೆದು ವೃಥಾ ಸುತ್ತಾಡಿ
ಹೆತ್ತವರ ಹೆಗಲಿಗೆ ಮರೆಯಾಗದಿರಿ
ಡಿಳ್ಳ ಜೀವನ ನಡೆಸದಿರಿ
ದರ್ಪ ಕದೊಳ್ಳಿ ಬಿಂಬವ ಕಂಡ ಪರಿ

ಶುದ್ಧ ನೀರಿನಲ್ಲಿ ಚಂದ್ರ ಕಂಡತರ 
ಕಶ್ಮಲ ದಲ್ಲಿ ಜಲಜ ಅರಳಿದ ಪರಿ
ಹುಣ್ಣಿಮೆಯ ದಿನ ಬೆಳಗಿನ ತರ
ಕರ್ಪೂರ ಉರಿದು ಶೇಷ ನೀಡುವ ತರ

ವೇಣುಗೋಪಾಲ್. ಕೆ
ಶ್ರೀನಿವಾಸಪುರ🙏🏽🙏🏽🙏🏽💐💐🙏🏽




ಬಡವರ ಕೂಗು


ಬಡವರ ಕೂಗು ಕೇಳುವ ಬಾರ
ಉಳ್ಳವರ ಸಂತಸಕ್ಕೆ ಪರಿವ ಬಲ್ಲಿರಾ
ದುರ್ಬಲರ ಕೊರಗ ನೆನೆದರೆ
ವಿಸ್ಮಯದ ತರ ಕಂಡರ||

ಅರಿವಿಲ್ಲದ ಮಂದಿಯ ದುಗುಡವ
ದುಃಖದಿ ಸುರಿಸಿದರ ಕಣ್ಣೀರ
ಕಷ್ಟದಿ ದುಡಿದರ  ಮೈ ಮನವ 
ಪ್ರಕೃತಿ ಸವಾಲಿಗೆ ಅಂಜುವರ||


ನೋವು-ನಲಿವಿನದಿ ನೆನೆದರ ಹರಿಯ
ಕಾಡುಮೇಡುಗಳ ಪರಿವಿಲ್ಲದೆ
ಹೊಟ್ಟೆಯ ಪಾಡಿಗಾಗಿ
ಗೇಣು ಬಟ್ಟೆಗಾಗಿ||

 ಮೌನದಿ ಗಗನ ನೋಡುತ್ತಾ
ಕರ್ಮವ ಪಲವನು ಸ್ಮರಿಸುತ್ತಾ
ಅರಿವಿಲ್ಲದ ಪರಿಯಲಿ ಕಾಯಕ
ತುಸು ತಡವಿಲ್ಲಾದ ರಾಸಭ ತರ ದುಡಿತ||



ವೇಣುಗೋಪಾಲ್.ಕೆ ಶ್ರೀನಿವಾಸಪುರ,
🙏🌷🌷🙏



"ಜವ್ವನಠಮರಿ"
ಜವ್ವನಠಮರಿ ಹಾಡಿದೆನು
ಜಲದ ಹರಿಸಿದ ಧಾರಾಕಾರ ದಿ ಸೋನಿ
ಜಲಜ ಅರಳಿತು ಗಿರಿದೇತ್ತರ
ಜಲನಾಭ ಹರ್ಷದಿ ನೀ ಕಂಡಿರ.

ಜಲಧಿ , ತರಂಗಿಣಿ ಉಕ್ಕಿ ಹರಿದವು
ಝಷಗಳು  ಕೌತುಕದಿ ನಲಿದಾಡಿದವ
ಜ್ಯಾ ಭ್ರಾಂತಿಯಿಂದ ಕಲ ವರಿಸಿತಾ ಜಲ ದವ
ಜಿನ ಮೌನದಿ ಹರಿಸಿದ ದಿವ್ಯ ಜ್ಞಾನವ.

ದಿನಪ ಹರಿಸಿದ ಮಂದಹಾಸ ದ ರಶ್ಮಿ
ತರು ಗುಲ್ಮ ಲತೆಗಳು ತವಕಿಸಿದ ಸಂತಸದಿ
ದಂತಿ ,ವ್ಯಾಘ್ರಗಳು ಶಿಖರ ಏರಿದವು
ಠಮರಿ ಮಾಧುರ್ಯಕ್ಕೆ ನಮಿಸಿದವು
ಮೋಹಕ ನೋಟದಿ ಮಾನನಿ ನಿಂತಳು
ಚಾವಡಿಯ ರಸದೌತನ ಸವಿದಳು
ಮೀಣ ನವರಸಗಳ ಗಾನದೂಳು
ಮೌನದಿ ಖಗ,ಮೃಗ ಗಳು ಮುದದಿ||



ಆಕ್ರಂದನ


ಬರಡು ಭೂಮಿಯ ಆಕ್ರಂದ ಮುಗಿಲೇತ್ತರವ
ತಟ್ಟಿತಾ ಭುವಿಯ ಕಂಠಸ್ಟರವ
ಬಾನಾಡಿಗಳ ತಲ್ಲನಾ ಕಂಡವ
ಭಾನಿನ ಹೃದಯ ಬೆಣ್ಣೆಯಂತೆ ಮೃದುವ||

ಸುರಿಸಿ ತಾ ಸೋನಿ ಸೋನಿಯಾ ತುಂತುರು
ಧರೆಯು ಪಸರಿಸಿತು ಸಂತಸದಿ ಹಸಿರು
ಪ್ರಾಣಿ  ಪಕ್ಷಿಗಳ ಪ್ರಪಂಚ ಹರ್ಷದಿಮೆರದವ
ರೈತರ ಮುಖದಲ್ಲಿ ಮಂದಹಾಸ ||

ಕೆರೆ,ಕುಂಟೆ,ಬಾವಿಗಳು ಹರಿದವಾ
ಫಸಲಿನ  ರಾಶಿ ಯ  
ಬೆಟ್ಟದೇತ್ತರವಾ
ಬೆಳೆದವನು ಬಾಳು ಬಂಗಾರವ
ದೇಶವ ಕಂಡಿತಾ ಸಂಭ್ರಮ ದ ಕ್ಷಣವ.||

ವೇಣುಗೋಪಾಲ್.ಕೆ ಶ್ರೀನಿವಾಸಪುರ
🙏🏽💐💐💐💐📚📚💐💐💐💐🎤



"ವಿಸ್ಮಯ ವಿಶ್ವ"












ಯಾರೂ ಅರಿಯದ ಹರಿಯೇ
ಪ್ರಕೃತಿ ಸೃಷ್ಟಿಯ ವಿಸ್ಮಯ ತೋರಿದೆ
ಹಲವು ಕೌತುಕಗಳ ನೀ ಕಂಡೆ
ವೈವಿಧ್ಯತೆಯಲಿ ತೋರಿದೆ||

ಅಂದ ಚಂದ ನೀ ನೀಡಿದೆ
ಅಷ್ಟದಿಕ್ಕುಗಳ ನೀ ತೋರಿದೆ
ನಾಲ್ಕು ದಿಕ್ಕುಗಳ ಮಹತ್ವ ಸಾರಿದೆ
ಎರಡು ದಿಕ್ಕುಗಳ ವಿಸ್ಮಯ ಕಂಡೆ||

ಗಿಡ ,ಮರ, ಬಳ್ಳಿ ಸೃಷ್ಟಿಸಿದೆ
ಮಹತ್ವ ವನ್ನು ನೀ ಕಂಡೆ
ಸುವಾಸನೆ ಪರಿಮಳ  ನೀ ಹರಿಸಿದೆ
ಪುಷ್ಪಗಳಿಗೆ ವಿವಿಧ ಘಮಲು ನೀ ಡಿ ದುಂಬಿಗಳ ಕಂಡೆ||

ಹರಿಯುವ ನದಿಗಳ ಜುಳುಜುಳು ಶಬ್ದವ ನೀಡಿದೆ
ಗಿರಿ, ಶಿಖರಗಳಿಗೆ ಶ್ವೇತವರ್ಣವ ನೀಡಿದೆ
ಆಗಸದಿ ನೀ ನೀಲಿ ಬಣ್ಣವ ಲೇಪಿಸಿದೆ
ಜಗದೊಳ್ ನೀ ಹಸಿರನ್ನು ಪಸರಿಸಿದೆ.||

ವೇಣುಗೋಪಾಲ್.ಕೆ
ಶ್ರೀನಿವಾಸಪುರ🙏🏽💐💐💐💐💐💐🙏🏽


"ದುಂಬಿ"







ಮರಗಿಡ ನೀ ಸುತ್ತಾಡಿದೇಯಾ
ವಿವಿದ ಹೂಗಳು ನೀ ಕಂಡಿಯಾ
ಮಕರಂದವ ಹಿರಿದೇಯಾ
ಮಧುರತ್ವ ನೀಡಿಯಾ
ವಿವಿಧ ಹೆಸರುಗಳು ನೀ ಪಡೆದೇಯಾ
ಹಲವು ಕರ್ಮಗಳದಿ ನೀ ದುಡಿದೇಯಾ
 ಮಧುರಗಾನವ   ನೀಡಿದೆಯಾ
ಕವಿ ಪುಂಗರ ಮೌನಕ್ಕೆ ಸಾಕ್ಷಿ ನೀ ಯಾದೆಯಾ.
🙏🏽💐💐💐💐💐💐🙏🏽
ವೇಣುಗೋಪಾಲ್.ಕೆ


"ಜಾತಿ"







ಜಾತಿ ಯಾವುದಾದರೇನು
ನೀತಿ ಯಾವುದಾದರೇನು
ಮನುಜ ಕುಲವ ನೀ ಪಡೆದೆಯಾ
ಮಾನವೀಯತೆ ನೀ ಮೆರೆದೆ ಯಾ||

ಸೂರ್ಯ, ಚಂದ್ರರನ್ನು ಬಿಟ್ಟು ನೀ ಬದುಕಲಾರೆ
ರಕ್ತ ಬಣ್ಣ ಕೆಂಪು ಬಿಟ್ಟು ನೀ ಉಳಿಯಲಾರೆ
ಗಾಳಿ, ನೀರು ನೀ ದಾನವ ಪಡೆದೆಯಾ
ದೇಹವನ್ನು ತೊರೆದು ಆತ್ಮ ಪರಮಾತ್ಮನಲ್ಲಿ ತಾ ಲೀನವಾದೆಯಾ. ||

ಕಪ್ಪು ಬಿಳುಪು ಬಣ್ಣ ತೊರೆದು ಬೇರೆ ದಾಗಿ ನೀ ಕಾಣಲಿಲ್ಲ
ದೇವರು ನೀಡಿದ ಉಸಿರು ನೂರು ವರ್ಷ ನಾ
ತಂದೆ-ತಾಯಿ ತೊಡಿಸಿದ ಬಟ್ಟೆ ಮೂರು ವರ್ಷ ನಾ
ಶತ್ರು ಮಿತ್ರರನ್ನು ನೀನು ಕಂಡೆಯಾ
ಗಾಳಿಯಲ್ಲಿ ತೇಲುವ ಪರಮಾತ್ಮನ ನೀ ಕಂಡೆಯಾ...||

ವೇಣುಗೋಪಾಲ್. ಕೆ
🙏🏽🙏🏽🙏🏽💐💐💐💐🙏🏽🙏🏽🙏🏽


"ವಸ್ತ್ರ ಕಾಳಗ"







ನಗ್ನದಿ ನೀ ಪಡೆದೆ  ಜನ್ಮ
ಹಲವು ವಸ್ತ್ರಗಳ ನೀ ತೂಡಿದೆ
ಸಮವಸ್ತ್ರ ಸಹಬಾಳ್ವೆ ಸೂತ್ರ
ಪಾಲಿಸದೆ ನೀ ತೊರೆದೆ ಅಸಹಕಾರದ ಮಂತ್ರ.
ಶಾಂತಿಯನ್ನು ಕದಡಿತಾ ರಾಜ್ಯ
ಧರ್ಮ-ಧರ್ಮಗಳ ವಸ್ತ್ರ ಕಾಳಗ ದ ವ್ಯಾಜ್ಯ
ಸಮಯ, ಹಣ ವ ನುಂಗಿದೆ ಯ ದೊಂಬಿ
ಹಿಜಾಬ್, ಕೇಸರಿಯ ಕೆಸರಿನ ತರ್ಕವ ಬಿಂಬ.
ಶಿಕ್ಷಣ ಕ್ಷೇತ್ರವ ಕಾಳಗದ ಕೆಂಡ ವಾಯಿತು
ವಿವಿಧ ಪಕ್ಷಗಳ ಒಳತಂತ್ರ ವಾಯಿತು
ಜೆಪಿಸಿ ಶಾಂತಿ ಮಂತ್ರವ
ಸೌಹಾರ್ದತೆಯ ಮಂತ್ರವ ಸಹಬಾಳ್ವೆ ಸೂತ್ರವ.

ರಾಜ್ಯದಲ್ಲಿ ಕದಡದಿಲಿ  ಶಾಂತಿ
ಧರೆ ಹೊತ್ತಿ  ಉರಿಯದಿರಲಿ ಕ್ರಾಂತಿ
ಮನುಕುಲದ ಸೌಹಾರ್ದತೆಯ ಭ್ರಾಂತಿ
ಧರ್ಮ-ಧರ್ಮಗಳ ಮೌಢ್ಯತೆಯ ಕ್ರಾಂತಿ.

🎤🎤ವೇಣುಗೋಪಾಲ್.ಕೆ📚📚📚📚📚📚 ಶ್ರೀನಿವಾಸಪುರ🎤🎤
🙏🏽💐💐💐💐💐💐💐💐🙏🏽


"ಪ್ರೇಮ ಪಾಷ"

ತಿಳಿಯದೆ ಜೊತೆಯಾಗಿ

ಮರೆಯದ ಗೆಳತಿಯಾಗಿ

ಪ್ರೇಮಾಂಕುರವಾಗಿ

ಪ್ರೀತಿಯಲಿ ನಾ ಮುಳುಗಿ||

ಮಮತೆಯ ಮಾಡಿದಿಯಾ ಗಿ

ಮಾಂಗಲ್ಯಕ್ಕೆ ತಲೆಬಾಗಿ

ಸಂತಾನ ವಾ ಪಡೆದು

ಕಷ್ಟ-ಸುಖಗಳನ್ನು ಮಿಂದು||

ಜೀವನವ ಸವಿದು

ಜನಾನುರಾಗ ಪಡೆದು

ಜನ್ಮದಾತೆ ತಾ ಎಂದು

ಮಮತೆಗೆ ಮೈಮರೆತದು.||

 ನೀ ಮೋಸಹೋದೆಮ್ಮಾ. ನಾ ಮೋಸ ಹೋದ ನಮ್ಮ...........!?

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.


"ರಾಮ ಧಾನ್ಯರಾಗಿ"



ಮಕ್ಕಳಿಗೆ ಸರಿಯಾದೆ

ಬಡವರಿಗೆ ಗಂಜಿ ಯಾದೆ

ಶ್ರೀಮಂತರಿಗೆ ರೊಟ್ಟಿ ಯಾದೆ

ಕೂಲಿಯಾಳುಗಳಿಗೆ ಮುದ್ದೆಯಾದೆ

ಬಂಧು_ಬಾಂಧವರಿಗೆ ಶ್ಯಾವಿಗೆ ಯಾದೆ

ಮಧುಮೇಹಿಗಳಿಗೆ ರಾಮಬಾಣವಾದೆ

ಬರಡು ನೆಲದಲ್ಲಿ ನೀ ಬೆಳೆದೆ

ವಿವಿಧ ಹೆಸರುಗಳು ನೀ ಪಡೆದು

ಕೀರ್ತಿಶೇಷ ವ ನೀ ಪಡೆದು

ರಾಮ ನಾಮವ ನೀ ಜಪಿಸಿದೆ.

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.


"ದೇಶಾಭಿಮಾನ"


ಮನೆಮನೆಯಲ್ಲಿ ಹುಟ್ಟಬೇಕು ವೀರಪುತ್ರರು

ಧಮನಿ ಧಮನಿಗಳಲ್ಲಿ ಹರಿಯುತ್ತಾ ಬಿಸಿ ನೆತ್ತರು

ದೇಶಾಭಿಮಾನದ ಎದೆಗಾರಿಕೆಯ ಕಿಚ್ಚು

ಭಾರತಾಂಬೆಯನ್ನು ಕಾಯುವ ಹುಚ್ಚು||


ಭಾಷಾಭಿಮಾನದ ಪಡೆದು

ದೇಶಾಭಿಮಾನ ವ ಮಿಡಿದು

ಎದೆಯ ಬೀರಿ ಭಾವದಾಟಿ

ಕೀರ್ತಿಪತಾಕೆ ಹಾರಿಸಿ ಎದೆ ಮೀಟಿ .||

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.

"ಮಾ ಮರವೆ"



ದಟ್ಟ ಕಾನನ ಮಧ್ಯೆ ಆಗಸದೆತ್ತರನೀ ಬೆಳೆದೆ

ಪಕ್ಷಿ ಸಂಕುಲಕೆಆಶ್ರಯವಾದೇ

ಪ್ರಾಣಿಗಳ ದಣಿವನ್ನುನೀಗಿಸಿದೆ ಯಾ

ಬೇಡಿ ಬಂದವರಿಗೆ ಫಲವನ್ನು ನೀಡಿದೆಯಾ|


ಕೋಗಿಲೆಯ ಮಧುರ ಕಂಠಕ್ಕೆ ಸಾಕ್ಷಿಯಾದೇ

ದುಂಬಿಗಳ ಪಾಲಿಗೆ ವರವಾದೆ

ಮನೆಯ ಬಾಗಿಲು ತಳಿರು ನೀಡಿದೆ

ಫಲಾಪೇಕ್ಷೆಯಿಲ್ಲದೆಮೈತುಂಬ ಕಾಯಿ ಪಡೆದೆ.|

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.


"ನಮ್ಮ ಗಾಂಧಿ

ಶಾಂತಿಮಂತ್ರವ ನೀ ಜಪಿಸಿದೆ

ದೇಶಾಂತರ ನೀ ನಡೆದೆ

ದೇಶ ಪ್ರೀತಿಯ ನೀ ಗಳಿಸಿದೆ

ಧೀಮಂತ ನಾಯಕ ನೀನಾದೆ! 

ಜಾತ್ಯಾತೀತ ಮಂತ್ರವ ಜಪಿಸಿದೆ

ಜಾತಿಗಳ ಅಂತರ ನೀ ತಡೆದೆ

ಸೋದರತೆಯನ್ನು ನೀ ಮೆರೆದೆ

ರಾಮರಾಜ್ಯದ ಕನಸು ಕಂಡೆ! 

ನಿನ್ನಿಂದ ಶಾಂತಿ ಸಿಗದೆಂದು ಅರಿತ

ಗೋಡ್ಸೆ ಗುಂಡಾರಿಸಿ ನಿನ್ನ ಕೊಂದ

ದೇಶವ ಶೋಕಸಾಗರದಲ್ಲಿ ಮುಳುಗಿತು

ನೀನೇ ಮಹಾತ್ಮನೆಂದು ದೇಶ ಕೈ ಮುಗಿಯಿತು.

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.


"ಹಗೆ"


ಸೋದರತ್ವ ಅಳಿದರೆ

ಮನಸ್ಸುಗಳಲ್ಲಿ ಮೂಡುವುದು ಹಗೆ

ಬ್ರಾತೃತ್ವದ ಪ್ರೀತಿ ಬೆರೆಯಲಿ

ಹಾಲು ಸಕ್ಕರೆ ಹಾಗೆ

ನೋವು ನಲಿವು

ಸ್ವರ್ಗ-ನರಕಗಳ ಹಾಗೆ.

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.

🙏🏽💐💐💐💐💐💐🙏🏽



"ಮೋಸ ಹೋದ ಕಾಗೆ"



ಮೋಸ ಹೋದೆಯಾ ಕಾಗೆ ಮೋಸ ಹೋದೆಯಾ..

ದತ್ತು ಪಡೆದಿದೆಯಾ ನೀ ತತ್ತಿಪಡೆದೆಯಾ

ಕಾವು ನೀಡಿದೆ ಮರಿಯ ನೀಡಿದೆ

ರೆಕ್ಕೆ ನೀಡಿದೆ ಪುಕ್ಕ ನೀಡಿದೆ

ಗುಟ್ಕ ನೀಡಿದೆ ಗುಣವಾ ನೀಡಿದೆ

ಬಣ್ಣ ನೀಡಿದೆ ಭಾವ ನೀಡಿದೆ

ಪ್ರೀತಿ ನೀಡಿದೆ ಮಮತೆ ನೀಡಿದೆ

ಮೋಸ ಹೋದೆಯಾ ಕಾಗೆ ನೀ ಮೋಸ ಹೋದೆಯಾ.

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.

"ಓ ಚಂದಿರನೆ"



ನೀ ಪಡೆದೆಯಾ ಎರವಲು ಬೆಳಕು

ನೀಡಿದೆಯಾ ನಾಡಿಗೆ ಬೆಳಕಿನ ಕಡಲು

ಆಡಿದರು ಮಕ್ಕಳು ಸಂತಸದಿ

ಕುಣಿದರೆ ಜನರು ಸಂಭ್ರಮದಿ

ತೇಲಿತು ನಾಡಿನ ಬೆಳಕಿನ ಹೊನಲು


ರಾತ್ರಿಯ ಮರೆತು

ಹಗಲನು ಕಂಡಿತು

ನಿನ್ನ ದಿವ್ಯ ಸನ್ನಿಧಿ ಯಾಯಿತು ಜಗತ್ತು

ಪಕ್ಷಿಸಂಕುಲ ಕಲರವ ಮರೆಯಿತು

ಪ್ರಾಣಿ ಪ್ರಪಂಚ ಹರ್ಷದಿ ಮೆರೆಯಿತು

ನಾಡಿಗೆ ನೀನಾದೆಯ ಹಾಲಿನ ಕಡಲು.. 

ಓ ತಂದಿರುನೆ...........

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.

🙏🏽💐💐💐💐💐💐💐🙏🏽



🌴ಮಂದಾರ ಮರವೆ🌴



ಓ ಮಂದಾರ ಮರವೆ ನೀ ಎಲ್ಲಿಂದ ಬಂದಿರುವೇಯಾ||

 ನೀ ಬೆಳೆಯುವಂತೆ ಬಾನೆತ್ತರ

ಜನ ನೀ ನೋಡಿದರೆ ತತ್ತರ 

ದೇವಲೋಕ ದಿ ಬಂದೇಯಾ

ಭೂ ಲೋಕದಿ ಸೇರಿದಿಯಾ|



ನೀ ನೀಡುವೇಯಾ ಫೂಜಾಫಲ

ನೀ ನೀಡುವೇಯಾ ತಂಪಾದ ಜಲ

ನಿನ್ನ ಮೈಯಲ್ಲಾ ನಾರು

ನಿನ್ನ ಮೈ ಯೋಳಿಗೆ ನೀರು|

  ಓ ಮಂದಾರ ಮರವೆ ನೀ ಎಲ್ಲಿಂದ ಬಂದಿರುವೇಯಾ .......|| !!?.....

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.

🌴🌴🌴🌴🌴🌴🌴🌴🌴


"ಭಾರತ ನಾರಿ"



ಓ ಭಾರತ ನಾರಿ..........

ರಾಜ್ಯವಾ ತೊರೆವದು

ಕಷ್ಟದಲ್ಲಿ ಕೈ ತೊಳೆದು

ಕಾಡಿನಲ್ಲಿ ನೊಂದು

ಬೆಂಕಿಯಲ್ಲಿ ಬೆಂದು|


ನಾರ್ ಮುಡಿಯ ತೂಡಿದು

ನೈದೀಲೆಯಾ ಮುಡಿದು

ಗಡ್ಡೆ,ಗೆಣಸುಗಳ ತಿಂದು

ಗಾರೆ ಸೂಪ್ಪನ್ನು ಮಿಂದು|


ವಾಲ್ಮೀಕಿಯ ನೆನೆದು ಆಶ್ರಯಾಪಡೆದು

ಲವ ,ಕುಮಾರನು ಪಡೆದು

ಭಾಗ್ಯವ ನೆನೆಯುತ್ತಾ

ಭಾನೆತ್ತರಾ ನೋಡುತ್ತಾ |


ರಾಮ ಲಕ್ಷ್ಮಣ ರ ಸ್ಮರಿಸಿ

ಕಣ್ಣೀರ ಸುರಿಸಿ

ಪ್ರತಿವ್ರತ ಧರ್ಮ ವಾ ಪಾಲಿಸಿ

ಪರಪುರುಷನನ್ನು ಸೋಲಿಸಿ

ಸ್ವಾಭಿಮಾನವ ಮರೆದೆಯಾ

ರಾಜ ಧರ್ಮ ವ ಪಾಲಿಸದೆಯಾ

 ಓ ಭಾರತ ನಾರಿ..... ಓ ಭಾರತ ನಾರಿ......!!!!.

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.


"ಜೀವನ ಮಂಥನ"



ವಿಶ್ವವನ್ನು ಗೆದ್ದ ವೀರ ಪುರುಷ ಸಾವು ಗೆದ್ದೇ ಯಾ

ದೇಶವನ್ನು ಗೆದ್ದ ಸರದಾರ ರೋಗವಾಗಿವ ನೀ ಗೆದ್ದೆಯಾ

ಸಾಧುಸಂತರನ್ನು ನೀ ಬಲ್ಲೆಯಾ

ಯೌವ್ವನವನ್ನು ಕಂಡ ಸರದಾರ ಮುಪ್ಪು ನೀ ಗೆದ್ದೆಯಾ

 

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.

🙏🏽💐💐💐🙏🏽


"ನನ್ನ ಪಯಣ"

ವೀರ ನಾರಿಯ ನಾ ಕಂಡೆ

ವಿಶ್ವ ಸುಂದರಿಯ ನಾ ಪಡೆದೆ

ಪಿತೃ ವಾಕ್ಯವ ನಾ ಪಾಲಿಸಿದೆ

ಪುಣ್ಯ ಭೂಮಿಯು ನಾ ತೂರೆದೆ


ವೀರ ಮಿತ್ರರನ್ನು ನೋಡಿದೆ

ಶಬರಿಯ ಆತ್ಮೀಯ ಅಥಿತ್ಯವ ನಾ ಪಡೆದೆ

ಗಾಢನಿದ್ರೆಗೆ ನಾ ಜಾರಿದೆ

ರಾಮ ಬಾಣವ ನಾ ಹಿಡಿದೆ


ದಟ್ಟ ಕಾನನ ನಾ ಕಂಡೆ

ಕಾಳಿಂಗ ಸರ್ಪವ ನಾ ಕಂಡೆ

ಗಿರಿಶಿಖರಗಳ ನಾ ಕಂಡೆ

ಗಿರಿಜೇ ಶ್ವರ ನಾ ಕಂಡೆ

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.

💐💐💐💐💐💐💐💐


"ಹೆಣ್ಣು"


ಹೆಣ್ಣಾಗಿ ನೀ ಪಡೆದೆ ಯಾ ಜನ್ಮ

ಹಣ್ಣಾಗಿ ನೀ ಪಡೆದೆ ಯಾ ಕರ್ಮ

ಐದು ಜನರ ಮಧ್ಯೆ ನಲಿಗಿದೇಯಾ

ಅನುದಿನ ಬೆಂಕಿಯಲ್ಲಿ ಬೆಂದೆಯಾ||


ಜೂಜಿಗೆ ನೀ ಪಣವಾದೆ

ನಗ್ನ ವಾಗಿ ನೀ ಮೆರೆದೆ

ಶ್ರೀಕೃಷ್ಣನನ್ನು ನೀ ನೆನೆದು

ಸಿಂಗಾರವನ್ನು ನೀ ತೊರೆದು||


ಜನ್ಮ ವೃತ್ತಾಂತವನ್ನು ನೆನೆಯುತ್ತ

ಕರ್ಮಫಲಗಳನ್ನು ಸ್ಮರಿಸುತ್ತಾ

ಕಷ್ಟಕಾಲ ನೆನೆದು

ಕಣ್ಣೀರ ಕಡಲ ಹರಿದು.........||

🙏🏽💐💐💐💐🙏🏽🙏🏽🙏🏽🙏🏽

🎤🎤ವೇಣುಗೋಪಾಲ್. ಕೆ  ಶ್ರೀನಿವಾಸಪುರ.