ಕಣ್ಣಾ ಮುಚ್ಚೆ ಗಾಡೆ ಗುಡೆ…
ಕಣ್ಣಾ ಮುಚ್ಚೆ
ಗಾಡೆ ಗುಡೆ
ಉದ್ದಿನ ಮೂಟೆ
ಉರಳೆ ಹೋಯಿತು
ನನ್ನ ಹಕ್ಕಿ
ನಿಮ್ಮ ಹಕ್ಕಿ
ಬಿಟ್ಟೆ ಬಿಟ್ಟೆ
ಕೋ…. ಕಾ
ಕೋ.. ಕ್..
ನಿಮ್ಮ ಹಕ್ಕಿ
ಬಿಟ್ಟೆ ಬಿಟ್ಟೆ
ಕೋ…. ಕಾ
ಕೋ.. ಕ್..
ಕಣ್ಣಾ ಮುಚ್ಚಾಲೆ |
ಮರ ಕೋತಿ
ನಾಡೆಲ್ಲ ಕಾಂಕ್ರಿಟು ಕಾಡಾಗುತಿರುವ ಸಮಯದಲ್ಲಿ , ಹಿಂದೆ ಮರ ಕೋತಿ ಎನ್ನುವ ಆಟ ಇತ್ತು ಎನ್ನುವ ಪ್ರಮೇಯ ಯಾರಿಗೂ ಇರಲಾರದು.ನೆಲದಿಂದ ಸುಮಾರು ೬ ಅಡಿ ಎತ್ತರದ ರಂಬೆ ಕೊಂಬೆ ಇರುವ ಒಂದು ಸಣ್ಣ ಮರ/ಗಿಡ ಇದ್ದರೆ ಸಾಕು ಮರ ಕೋತಿ ಆಟ ಆಡಬಹುದು.
ಆಟಕ್ಕೆ ಮೊದಲು ಎಲ್ಲರೂ ಮರದ ಕೆಳಗೆ ಇರಬೇಕು, ಕೋತಿಯಾದವನು ಮರದ ಕೆಳಗೆ ವೃತ್ತವನ್ನು ರಚಿಸಿ ಒಂದು ಅಡಿ ಸಣ್ಣ ಕೋಲನ್ನು ವೃತ್ತದ ಮಧ್ಯದಲ್ಲಿ ಇಡಬೇಕು. ನಂತರ ಕೋತಿಯು ವೃತ್ತದ ಸುತ್ತ ಮೂರು ಸುತ್ತು ಹಾಕುವುದರವಳಗೆ ಎಲ್ಲರೂ ವೃತ್ತದ ಮೇಲಿನ ಮರವನ್ನು ಹತ್ತ ಬೇಕು. ಯಾರ ಕೈಯಲ್ಲಿ ಹತ್ತಲಾಗದು ಅವನನ್ನು ಕೋತಿಯಾದವನು ಮುಟ್ಟಿದರೆ ಔಟ್. ಎಲ್ಲರೂ ಮರ ಏರಿದರೆ , ಕೋತಿಯಾದವನು ಮರ ಹತ್ತಿ ಮರದ ಮೇಲೆ ಇರುವವರನ್ನು ಮುಟ್ಟಬೇಕು.ಆಗ ಅವನು ಔಟ್.ಕೋತಿಯಾದವನು ಮರದ ಮೇಲಿರುವವರನ್ನು ಮುಟ್ಟುವ ಮೊದಲೇ ,ಮರದ ಮೇಲಿರುವವರು ಕೋತಿ ಮರ ಏರಿದಾಗ ಕೆಳಗೆ ಹಾರಿ ವೃತ್ತದ ಒಳಗೆ ಇರುವ ಕೋಲನ್ನು ಮುಟ್ಟಿದರೆ, ಕೋತಿ ಔಟ್. ಮುಂದಿನ ಆಟದಲ್ಲಿ ಮತ್ತೆ ಅವನೇ ಕೋತಿಯಾಗುತ್ತಾನೆ.
ಕಲ್ಲು ಮಣ್ಣು (ಕೆರೆ ದಡ)
ತೂರು ಚೆಂಡು
ತೂರು
ಚೆಂಡು ಹೆಸರಿನಲ್ಲಿ ಚೆಂಡಿದೆ ಅದ್ದರಿಂದ ಆಟಕ್ಕೆ ಒಂದು ಚಿಕ್ಕ
ಚೆಂಡಿನ ಅವಶ್ಯಕತೆ ಇದೆ. ಇದೊಂದು ಗುಂಪಿನ ಆಟ. ಆಟ ಆಡಲು ಪ್ರತಿ ತಂಡದಲ್ಲಿ
ಕನಿಷ್ಠ ೩ ಜನರ ಅವಶ್ಯಕತೆ ಇದೆ. ಚೆಂಡನ್ನು ಒಬ್ಬರಿಂದ ಒಬ್ಬರಿಗೆ ಪಾಸು ಮಾಡಿ ಎದುರಾಳಿ
ತಂಡದ ಆಟಗಾರರ ದೇಹಕ್ಕೆ ಗುರಿಯಾಗಿರಿಸಿ ಹೊಡೆಯುವ ಆಟ. ಚೆಂಡು ಎದುರಾಳಿಯ ದೇಹಕ್ಕೆ
ತಾಕಿದರೆ ಅವನು ಔಟ್.
ಚೌಕ ಬರ
೫ * ೫ ಚೌಕದ ಆಟ
೧.ಚಿತ್ರದಲ್ಲಿ ತೋರಿಸಿದ ಹಾಗೆ ಗೆರೆಗಳನ್ನು ಎಳೆದು ಕೊಳ್ಳಬೇಕು.
೨.ಪ್ರತಿಯೊಬ್ಬ
ಆಟಗಾರ ತಾನು ಆಟ ಆರಂಭಿಸುವ ಮನೆಯಲ್ಲಿ ತನ್ನ ನಾಲ್ಕು ಒಂದೇ ರೀತಿಯ ಗುರುತಿನ
ವಸ್ತುಗಳನ್ನು(ಕಾಯಿ) ಇಡಬೇಕು( ನಾಲ್ಕು ನೀಲಿ ಬಳೆ ಚೂರು, ನಾಲ್ಕು ಚಿಕ್ಕ ಕಲ್ಲು,
ಹಾಗು ಇನ್ನೊಬ್ಬ ಆಟಗಾರ ಅದೇ ಗುರುತುಗಳನ್ನು ಬಳಸಬಾರದು. )
೪. ಆಟಗಾರ ಆರು ಕವಡೆಗಳನ್ನು ಒಟ್ಟಿಗೆ ಕುಲುಕಿ ಒಂದೇ ಕ್ಷಣದಲ್ಲಿ ಕೈಯಿಂದ ದಾಳ ಹಾಕಬೇಕು.
ಬಿದ್ದ ಕವಡೆಗಳ ಮುಖದ ಆಧಾರದ ಮೇಲೆ , ಕಾಯಿಗಳನ್ನು ಕ್ರಮವನ್ನು ಚಿತ್ರದಲ್ಲಿ ತೋರಿಸಿದಂತೆ ಮುನ್ನಡೆಸಬೇಕು. ದಾಳ ಹಾಕಿದಾಗ ನಾಲ್ಕು , ಆರು ಅಥವಾ ಹನ್ನೆರಡು ಬಿದ್ದರೆ, ಹಾಗು ಪ್ರತಿಸ್ಪರ್ಧಿಯ ಕಾಯಿಯಗಳನ್ನು ಕಡಿದರೆ ಮತ್ತೊಮ್ಮೆ ದಾಳ ಹಾಕಬಹುದು. ಇಲ್ಲದಿದ್ದರೆ ಎಷ್ಟು ಬೀಳುತ್ತದೆ ಅಷ್ಟು ಮುಂದೆ ಕಾಯಿಯನ್ನು ಮುನ್ನಡೆಸಬೇಕು.
೫. ಕಾಯಿ “X” ಚೌಕದಲ್ಲಿ ಇದ್ದಾಗ ದಾಳ ಹಾಕುವವನು ಕಡಿಯುವ ಹಾಗಿಲ್ಲ, ಇವು ಸೇಫ್ ಜೋನ್ಗಳು .ಮತ್ತೊಬ್ಬ ಸ್ಪರ್ಧಿಯ ಕಾಯಿ ಕಡಿದಿದ್ದರೆ ಮಾತ್ರ ೪ನೆ ಚೌಕದ ಒಳಗೆ ಹೋಗಲು ಅನುಮತಿ ಇಲ್ಲದಿದ್ದರೆ, ಅವನು ಒಳ ಹೋಗುವ ಹಾಗಿಲ್ಲ.
೬ . ಸ್ಪರ್ಧಿಯು ತನ್ನ ಎಲ್ಲ ನಾಲ್ಕು ಕಾಯಿಗಳನ್ನು ಮಧ್ಯದ ಚೌಕಕ್ಕೆ ಮೊದಲು ಸೇರಿಸಿದರೆ ಅವನು ಗೆದ್ದಂತೆ.
೭*೭ ಚೌಕದ ಆಟವು ಸಹ ಇದೆ ಮಾದರಿ, ಆದರೆ ಅಲ್ಲಿ 8 ಕಾಯಿಗಳು ಇರುತ್ತವೆ. ಆದರೆ ಒಳಗಿನ ಚೌಕದಲ್ಲಿ ೨ ಕಾಯಿಗಳನ್ನು ಮಾತ್ರ ಜೊತೆ ಜೊತೆಯಾಗಿ ನಡೆಸಬಹುದು.
ಮಂಕಿ ಕ್ಯಾಪ್ ಆಟ (ಟೋಪಿ ಆಟ)
ಮಂಕಿ
ಕ್ಯಾಪ್ ಆಟ ಅಂತ ಎಲ್ಲಾದರೂ ಕೇಳಿದರೆ ತಟ್ ಅಂತ ನೆನಪಿಗೆ ಬರುವುದು , ನಾವುಗಳು
ಪ್ರಾರ್ಥಮಿಕ ಶಿಕ್ಷಣ ಪಡೆಯುವಾಗ ಆಡುತ್ತಿದ್ದ ಆಟ. ಆಟದ ವಿಧಾನ ಮರೆತಿದ್ದರು ನೀವು
ಮರೆತಿರಬಹುದು. ಅದಕ್ಕೆ ಆಟದ ವಿಧಾನವನ್ನು ಒಮ್ಮೆ ನಿಮಗೆ ನೆನಪಿಸುತ್ತೇನೆ.
ಆಟದಲ್ಲಿ ಎಲ್ಲರು ಒಂದು ದೊಡ್ಡ ವೃತ್ತಾಕಾರದಲ್ಲಿ ಕುಳಿತು ಕೊಳ್ಳಬೇಕು. ಆಟದಲ್ಲಿ ಮಂಗನಾದವನು ಕೈಯಲ್ಲಿ ಕರವಸ್ತ್ರ ಅಥವಾ ಟೋಪಿಯನ್ನು ಬಚ್ಚಿಟ್ಟು ಕೊಂಡು ವೃತ್ತದ ಸುತ್ತ ” ಲೋಡ್ ಲೋಡ್ ತಿಮ್ಮಯ್ಯಾ” ಎಂದು ಕೋಗುತ್ತಾ ಸುತ್ತುವನು,ವೃತ್ತದಲ್ಲಿ ಕುಳಿತಿರುವರು ಅವನಿಗೆ ” ಏನು ಬೇಕು ಸಂಗಯ್ಯ” ಎಂದು ಪ್ರತಿ ಬಾರಿ ಕೇಳುವರು. ಹೀಗೆ ಅವನು ಸುತ್ತುವಾಗ ಯಾರಿಗೂ ಗೊತ್ತಾದಾಗ ಹಾಗೆ ಟೋಪಿ ಅಥವಾ ಕರವಸ್ತ್ರವನ್ನು ಕುಳಿತಿರುವವರ ಹಿಂದೆ ಗೊತ್ತಾಗದ ಹಾಗೆ ಇಡುವನು. ಆಗ ಯಾರ ಹಿಂದೆ ಟೋಪಿ ಅಥವಾ ಕರವಸ್ತ್ರ ಇರುತ್ತದೆಯೋ ಅವರು ಮಂಗನಾದವನನ್ನು ಹಿಡಿಯಬೇಕು. ಅಗ ಮಂಗನಾದವನು,ಟೋಪಿ ಹಿಡಿದು ಅಟ್ಟಿಸಿಕೊಂಡು ಬರುತ್ತಿರುವವನ ಜಾಗಕ್ಕೆ ಹೋಗಿ ಕೂತರೆ , ಟೋಪಿ ಹಿಡಿದವನು ಮಂಗನಾಗುತ್ತಾನೆ. ಅಷ್ಟರಲ್ಲಿ ಮಂಗನಾದವನನ್ನು ಮುಟ್ಟಿದರೆ ಅವನೇ ಮುಂದಿನ ಆಟದಲ್ಲಿ ಮಂಗನಾಗುತ್ತಾನೆ.ಮಂಕಿ ಕ್ಯಾಪ್ ಆಟ ಆಡಲು ಕನಿಷ್ಠ ೧೦ ಜನ ಇದ್ದರೆ ಚೆನ್ನ.
ಕಡ್ಡಿ ಆಟ
ಕಡ್ಡಿ
ಆಟದಲ್ಲಿ ಹತ್ತು ಸಣ್ಣ ಕಡ್ಡಿಗಳು ಒಂದು ದೊಡ್ಡ ಕಡ್ಡಿ ಇರುತ್ತದೆ. ಎಲ್ಲ ಕಡ್ಡಿಗಳನ್ನು
ಮುಷ್ಟಿಯಲ್ಲಿ ಹಿಡಿದು ದೊಡ್ಡ ಕಡ್ಡಿಯ ಮೇಲೆ ಕನಿಷ್ಠ ಒಂದು ಚಿಕ್ಕ ಇರುವ ಹಾಗೆ
ನೆಲಕ್ಕೆ ಹಾಕಬೇಕು.ಬಿದ್ದ ಕಡ್ಡಿಗಳನ್ನು ಒಂದೊಂದಾಗಿ ಮೆಲ್ಲಕ್ಕೆ ಬೇರೆ ಕಡ್ಡಿಗಳು
ಅಲುಗಾಡದ ಹಾಗೆ ತಗೆಯಬೇಕು. ಆಗ ಬೇರೆ ಕಡ್ಡಿ ಅಲುಗಾಡಿದರೆ ಅವರು ಔಟ್. ಸ್ಪರ್ಧಿಗಳು
ಅಲುಗಾಡಿಸದೆ ಎಷ್ಟು ಕಡ್ಡಿ ಎತ್ತುತ್ತಾರೆ ಅವುಗಳಿಗೆ ಅಂಕಗಳನ್ನು ಕೊಡಲಾಗುತ್ತದೆ.
ಕಡ್ಡಿಯನ್ನು ಎಸೆಯುವಾಗ ದೊಡ್ಡ ಕಡ್ಡಿಯ ಸಂಪರ್ಕಕ್ಕೆ ಯಾವುದೇ ಚಿಕ್ಕ ಕಡ್ಡಿ
ಇರದಿದ್ದರೆ ಅವರು ಔಟ್. ಇದನ್ನು ಒಬ್ಬರೇ ಆಡಬಹುದು. ಪೊರಕೆ ಕಡ್ಡಿ ಇದ್ದರು ಸಾಕು,
ಇಂದು ಪ್ಲಾಸ್ಟಿಕ್ ಕಡ್ಡಿಗಳು ಬಂದಿವೆ ಆದರೆ ಪೊರಕೆ ಕಡ್ಡಿಯಲ್ಲಿ ಆಡುವಾಗ ಇರುವ ರೋಚಕತೆ
ಪ್ಲಾಸ್ಟಿಕ್ ಕಡ್ಡಿಗಳಲ್ಲಿ ಇರುವುದಿಲ್ಲ.
ಲಗೋರಿ..
ಲಗೋರಿ ಆಟ ಇಂದಿಗೂ ಸಹ ಅತ್ಯಂತ ಜನಪ್ರಿಯ ಆಟ. ಆಟದಲ್ಲಿ ಎರಡು ಗುಂಪುಗಳು ಇರುತ್ತವೆ. ಎರಡು ಗುಂಪಿನಲ್ಲೂ ಸಮನಾಗಿ ಸದಸ್ಯರು ಇರುತ್ತಾರೆ. ಕಪ್ಪಂಚಿನ ಬಿಲ್ಲೆಗಳು, ಮಡಕೆ ಚೂರುಗಳು, ಇಲ್ಲವೇ ಚಪ್ಪಟೆ ಕಲ್ಲುಗಳನ್ನು ಬಳಸಿ ಚೆಂಡಿನಿಂದ ಹೊಡೆದರೆ ಬೀಳುವಂತ ಅರ್ಧ ಅಡಿಯ ಚಿಕ್ಕ ಗೋಪುರ ನಿರ್ಮಿಸುತ್ತಾರೆ. ಸುಮಾರು ೩ ರಿಂದ ೪ ಮೀಟರ್ ದೊರದಲ್ಲಿ ನಿಂತು ಒಂದು ತಂಡದವರು ಅದನ್ನು ಚೆಂಡಿನಿಂದ ಬಿಳಿಸಿ ಅಲ್ಲಿಂದ ಪಲಾಯನ ಮಾಡಿ,ಮತ್ತೆ ಅದೇ ತಂಡದವರು ಬಿದ್ದ ಕಲ್ಲುಗಳಿಂದ ಗೋಪುರವನ್ನು ನಿರ್ಮಿಸಲು ಯತ್ನಿಸುತ್ತಾರೆ. ಅವರ ಪ್ರಯತ್ನದಲ್ಲಿ ಸಫಲರಾದರೆ ಅವರು ಗೆದ್ದಂತೆ, ಅವರು ಗೋಪುರ ಕಟ್ಟುವ ಸಮಯದಲ್ಲಿ ಮತ್ತೊಂದು ತಂಡದ ಸದಸ್ಯರು ಯಾರಾದರು ಅವರನ್ನು ಚೆಂಡಿನಿಂದ ತಾಕಿಸಿದರೆ ಇಲ್ಲವೇ ಅವರನ್ನು ಮುಟ್ಟಿದರೆ ಅವರು ಔಟ್. ಗೋಪುರ ಬೀಳಿಸಿದ ತಂಡದರು ಗೋಪುರವನ್ನು ಕಟ್ಟಿದಾಗ “ಲಗೋರಿ….”, ಪ್ರಾಸ ಬದ್ದವಾಗಿ ಕೊಗುವುದನ್ನು ಕೇಳುವುದೇ ಆನಂದ.
ರಾಜ ರಾಣಿ ಕಳ್ಳ ಪೋಲಿಸ್
ಇದರಷ್ಟು ಟೈಮ್ ಪಾಸು ಆಟವು ಮತ್ತೊಂದಿಲ್ಲ, ಒಂದೇ ಸಮನಾದ ನಾಲ್ಕು ಚೌಕಕಾರದ ಕಾಗದದಲ್ಲಿ ರಾಜ – ೧೦೦೦ ,ರಾಣಿ – ೫೦೦೦, ಕಳ್ಳ – ೦ ಮತ್ತು ಪೋಲಿಸ್ – ೧೦೦, ಎಂದು ಬರೆದು ನಂತರ,ಸಮಾನವಾಗಿ ಮಡಚಿ. ಮುಷ್ಟಿಯಲ್ಲಿ ಕುಲುಕಿ ಹಾಕಬೇಕು. ನಾಲ್ವರು ಒಂದೊಂದು ಚೀಟಿ ಆರಿಸಿ ಕೊಳ್ಳಬೇಕು. ಪೋಲಿಸ್ ಆದವನು ಕಳ್ಳ ಯಾರೆಂದು ಮೊದಲ ಆಯ್ಕೆಯಲ್ಲಿ ಸರಿಯಾಗಿ ತಿಳಿಸಿದರೆ ಅವನಿಗೆ ೧೦೦ ಅಂಕಗಳು ಇಲ್ಲದಿದ್ದರೆ ಅವನ ಅಂಕಗಳು ಕಳ್ಳನಿಗೆ ವರ್ಗವಣೆಯಾಗುತ್ತದೆ.
ಅವರನ್ನು ಬಿಟ್ಟ್ ಇವರನ್ನು ಬಿಟ್ಟ್ ಇವರಾರು?
ಇದೊಂದು
ಮಕ್ಕಳಾಡುವ ಜನಪ್ರಿಯ ಆಟ. ಆಟ ಅಡಲು ಕನಿಷ್ಠ ಐದು ಮಕ್ಕಳಾದರೂ ಇರಬೇಕು. ಮಕ್ಕಳನ್ನು
ಸಾಲಾಗಿ ಕೂರಿಸುತ್ತಾರೆ. ಒಂದು ಮಗುವಿಗೆ ಕಣ್ಣು ಮುಚ್ಚುವ ಮೊದಲು ಅಲ್ಲಿ ಯಾರು ಯಾವ
ಜಾಗದಲ್ಲಿ ಕೂತಿರುತ್ತಾರೆ ಎಂದು ನೋಡಲು ಹೇಳುತ್ತಾರೆ. ನಂತರ ಮಗುವಿಗೆ ಕಣ್ಣು ಮುಚ್ಚಿ
ಅಲ್ಲಿರುವ ಮಕ್ಕಳಿಗೆ ತಮ್ಮ ಜಾಗವನ್ನು ಬದಲಿಸಿ ಕೂರುವಂತೆ ಹೇಳುತ್ತಾರೆ. ನಂತರ
ಮಗುವಿಗೆ ಕಣ್ಣು ಮುಚ್ಚಿ, ಕೈ ಹಿಡಿದು “ಅವರನ್ನು ಬಿಟ್ಟ್ ಇವರನ್ನು ಬಿಟ್ಟ್ ಇವರಾರು? ” ಎಂದು ರಾಗ ಬದ್ದವಾಗಿ ಕೇಳುತ್ತಾರೆ. ಮಗು ಸರಿಯಾಗಿ ಹೆಸರು ಹೇಳಿದರೆ, ಮುಂದಿನ ಆಟದಲ್ಲಿ ಮಗು ಸೂಚಿಸಿದ ಹೆಸರಿನ ಮಗುವಿಗೆ ಕಣ್ಣು ಮುಚ್ಚಿ ಪ್ರಶ್ನೆ ಕೇಳುವ ಸರದಿಯಾಗುತ್ತದೆ .
ದೊರದರ್ಶನ ಬಂದ ಮೇಲಿನಿಂದ ನಮ್ಮಲ್ಲಿ ಹಲವು ಬದಲಾವಣೆಗಳು ಆಗಿವೆ. ಮಕ್ಕಳು ಬೆಳಗಿನಿಂದ ಸಂಜೆಯವರೆಗೂ ಕಾರ್ಟೂನ್ ನೋಡುತ್ತಲೇ ಕಾಲಕಳೆದು ಮುಂದೆ ಜೀವನದಲ್ಲಿ ದೊಡ್ಡ ಕಾರ್ಟೂನ್ಗಳಾಗುತ್ತಿವೆ.
ದೊರದರ್ಶನ ಬಂದ ಮೇಲಿನಿಂದ ನಮ್ಮಲ್ಲಿ ಹಲವು ಬದಲಾವಣೆಗಳು ಆಗಿವೆ. ಮಕ್ಕಳು ಬೆಳಗಿನಿಂದ ಸಂಜೆಯವರೆಗೂ ಕಾರ್ಟೂನ್ ನೋಡುತ್ತಲೇ ಕಾಲಕಳೆದು ಮುಂದೆ ಜೀವನದಲ್ಲಿ ದೊಡ್ಡ ಕಾರ್ಟೂನ್ಗಳಾಗುತ್ತಿವೆ.
ಕುಂಟಾ ಪಿಲ್ಲೆ , ಬುಗುರಿ, ಬಚ್ಚಾ ಆಟ , ಚಿನ್ನಿ ದಾಂಡು, ಕವಣೆ ಮನೆ, ಕಂಬದಾಟ , ಗೋಲಿ, ಕಬ್ಬಡಿ , ಖೋ ಖೋ, ಬಳೆ ಗೌರಿ ಆಟ ಹೀಗೆ ಇನ್ನು ಹಲವಾರು ಆಟಗಳು ಕ್ರಿಕೆಟ್ ಎಂಬ ಆಟದ ದಾಳಿಯಿಂದ ನಶಿಸಿ ಹೋಗುತ್ತಿವೆ.
ಇಂದು
ಐದು ವರ್ಷದ ಮಗುವು ಸಹ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಮಾತನಾಡುತ್ತಿದೆ ಎಂದರೆ
ಕ್ರಿಕೆಟ್ ಆಟದ ಮಹಿಮೆ ಎಷ್ಟಿದೆ ಎಂದು ನೀವೇ ಊಹಿಸಿ.ಇಗ ತಾನೆ
ಶಾಲೆಗಳು ಆರಂಭವಾಗಿವೆ. ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ಗ್ರಾಮೀಣ ಆಟಗಳನ್ನು ಪಠ್ಯೇತರ
ಚಟುವಟಿಕೆಗಳ ಪಟ್ಟಿಗೆ ಸೇರಿಸಿದರೆ ನಮ್ಮವರ ಕ್ರೀಡೆಗಳು ಸಹ ಮುಂದಿನ ಪೀಳಿಗೆಗೆ
ಉಳಿಯುತ್ತವೆ ಹಾಗು ಮಕ್ಕಳ ಕ್ರಿಯಾಶೀಲತೆಯು ಸಹ ಮತ್ತಷ್ಟು ವೃದ್ಧಿಸುತ್ತದ