ವಿಸ್ಮಯ ಜಗತ್ತು

 ನಮಗಿಲ್ಲದ ಶಕ್ತಿಗಳು 
ಒಂದು ಊರು,  ಊರಿಗೆ ಒಬ್ಬ ಗೌಡ , ಅವರ ಮನೇಲಿ ಒಂದು ನಾಯಿ ಸಾಕಿದ್ದರು ಅದರ ಹೆಸರು ‘ ಮೋತಿ ‘ ಅಂತ . ಒಮ್ಮೆ ಕಳ್ಳರು  ಗೌಡರು ಮನೇಲಿ ಇಲ್ಲದಿರುವ ಸಮಯದಲ್ಲಿ ಮನೆಗೆ ಕಣ್ಣ  ಹಾಕಿ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕದ್ದು ಅವರ ಸ್ಥಳಕ್ಕೆ ತಗೆದುಕೊಂಡು ಹೋಗಿ ಒಂದು ಕಡೆ ಬಚ್ಚಿಟ್ಟು ಅಲ್ಲಿಂದ ನಿರ್ಗಮಿಸುತ್ತಾರೆ. ಆಗ ಗೌಡರ  ನಾಯಿ ಮೋತಿಯು  ಯಾರಿಗೂ ಗೊತ್ತಾಗದ ಹಾಗೆ ಕಳ್ಳರನ್ನು ಹಿಂಬಾಲಿಸಿ . ಕಳ್ಳರು ಕದ್ದ ವಸ್ತುಗಳನ್ನು ಬಚ್ಚಿಟ್ಟ ಸ್ಥಳವನ್ನು ನೋಡಿ ಮನೆಗೆ ಹಿಂತಿರುತ್ತದೆ. ಅಷ್ಟರೊಳಗೆ ಗೌಡರ ಮನೆಯು ಕಳ್ಳತನವಾಗಿರುವ ಸುದ್ದಿ ಊರಿಗೆಲ್ಲ ತಿಳಿದಿರುತ್ತದೆ. ಆಗ ಮೋತಿಯು ಗೌಡರ ಪಂಚೆ ಹಿಡಿದು ಕಳ್ಳರು ಬಚ್ಚಿಟ್ಟಿರುವ ಗೌಡರ ವಸ್ತುಗಳು ಇರುವ ಸ್ಥಳದ ಕಡೆಗೆ ಕರೆದು ಕೊಂಡು ಹೋಗಿ ತೋರಿಸುತ್ತದೆ. ಮೋತಿಯ ಜಾಣತನವನ್ನು  ಮೆಚ್ಚಿದ ಗೌಡರು ಮೋತಿಗೆ ಕೃತಜ್ಞತೆ ಸಲ್ಲಿಸುತ್ತಾರೆ.
ಈ ಕಥೆಯನ್ನು ನೀವು ಶಾಲೆಯ ದಿನಗಳಲ್ಲಿ ಕೇಳಿರಬಹುದು ಎಂಬ ನಂಬಿಕೆ ನನಗೆ.
ತಾಯಿ ಕೋತಿ, ಮರಿ ಕೋತಿಯ ತೆಲೆಯಿಂದ ಅತ್ಯಂತ ಕಾಳಜಿಯಿಂದ  ಹೇನನ್ನು ತಗೆಯುತ್ತಿರುವುದನ್ನು ನೀವು ನೋಡಿರಬಹುದು. ಕೋಗಿಲೆ ಇಂಚರವನ್ನು ಕೇಳಿರಬಹುದು.  ಕ್ರಿಕೆಟ್ , ಫುಟ್ ಬಾಲ್ ಆಡುವ ಆನೆಗಳ ಆಟವನ್ನು ಸವಿದಿರಬಹುದು. ಮಾತನಾಡುವ ಮುದ್ದಿನ ಗಿಳಿಯನ್ನು ಕಂಡು ಅನಂದಿಸಿರಬಹುದು. ತುತ್ತು ಅಗುಳು ಕಂಡರೆ ತನ್ನ ಬಳಗವನ್ನೆಲ್ಲ ಕರೆಯುವ ಕಾಗೆಯ ವಿಶಾಲ ಮನೋಭಾವವನ್ನು ಅಭಿನಂದಿಸಿರಬಹುದು. ತನ್ನ ಹೊಟ್ಟೆಯ ಚೀಲದಲ್ಲಿ ತನ್ನ ಮರಿಯನ್ನು ಸಲಹುವ ಕಾಂಗೊರೊವನ್ನು ನೋಡಿ ವಾತ್ಸಲ್ಯಕ್ಕೆ ಬೆರಗಾಗಿರಬಹುದು. ಸರ್ಕಸ್ನಲ್ಲಿ ಹುಲಿ, ಸಿಂಹ , ಚಿರತೆ ಕಾಡು ಪ್ರಾಣಿಗಳ ಸಾಹಸ ಮತ್ತು ಆರ್ಭಟಕ್ಕೆ ರೋಮಾಂಚನಗೊಂಡಿರಬಹುದು. ಅಲ್ಲದೇ ನಮ್ಮ ಪೂರ್ವಜರಾದ ಕಪಿಗಳನ್ನು ಜಾಣ್ಮೆಯನ್ನು ಕಂಡು ಪುಳುಕಿತರಾಗಿರಬಹುದು.
 ಮೇಲಿನ ಎಲ್ಲ ಸಂದರ್ಭಗಳನ್ನು ಒಮ್ಮೆ ಅವಲೋಕಿಸಿದರೆ ಮಾನವನಿಗೂ ಮತ್ತು ಪಶು ಪಕ್ಷಿಗಳಿಗೂ ಸಾಮ್ಯತೆ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಮ್ಮಲ್ಲಿ ಹೇಗೆ ಭಾವನೆಗಳು ಇವೆಯೋ ಹಾಗೆ ಪಶು ಪಕ್ಷಿಗಳಿಗೂ ಸಹ ಇವೆ. ನಿಮಗೆ ತಿಳಿದಿರಬಹುದು ಭಾರತದಲ್ಲಿ ಸುನಾಮಿ ಅಪ್ಪಳಿಸಿದಾಗ ಸಾವಿರಾರು ಜನರು ಜೀವ ಕಳೆದು ಕೊಂಡರು ಆದರೆ ಅಂಡಮಾನ್ ದ್ವೀಪದ ಪ್ರಾಣಿ ಪಕ್ಷಿಗಳಿಗೆ ಯಾವುದೇ ತೊಂದರೆಯಾಗಲಿಲ್ಲ. ಮಾನವನಿಗಿಲ್ಲದ ಶಕ್ತಿಗಳು ಇತರೆ ಜೀವ ಜಂತುಗಳಲ್ಲಿ ಇವೆ. ಬನ್ನಿ, ಪಶು ಪಕ್ಷಿಗಳ ವಿಸ್ಮಯ ಜಗತ್ತಿನ ಅನುಭವಗಳನ್ನು ಸವಿಯೋಣ.
ಒಮ್ಮೆ ಫ್ರಾನ್ಸ್ ದೇಶದ ಹಳ್ಳಿಯಲ್ಲಿ ಸಾಕು ಪ್ರಾಣಿಗಳು ಇದ್ದಕ್ಕಿದ್ದ ಹಾಗೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದವು. ಪ್ರಾಣಿಗಳ ವರ್ತನೆ ಕಂಡ ಅ ಊರಿನ ಬೆಸ್ತರು, ಯಾಕೋ ದಿನ ಚೆನ್ನಾಗಿಲ್ಲ ಅಂತ ಹೇಳಿ ಅಂದು ಸಮುದ್ರಕ್ಕೆ ಮೀನು ಹಿಡಿಯಲು ಹೋಗಲಿಲ್ಲ. ಅದೇ ದಿನ ಭಯಂಕರ ಚಂಡಮಾರುತ ಸಮುದ್ರದ ಮೇಲೆ ಹಾದು ಹೋಯಿತು. ಅಂದು ಅ ಊರಿನ ಬೆಸ್ತರು ಏನಾದರೂ ಮೀನು ಹಿಡಿಯಲು ಹೋಗಿದ್ದರೆ. ಜೀವಂತ ವಾಪಸು ಬರುತ್ತಿರಲಿಲ್ಲ.
ಹೀಗೆ ಒಮ್ಮೆ ಗ್ರೀಸ್ ದೇಶದ ಥೆಸೇಲಿ ಪಟ್ಟಣದ ಬಕ ಪಕ್ಷಿಗಳು ಸಹ ಒಮ್ಮೆಗೆ ಚಿರಾಡಲು ಆರಂಭಿಸಿದವು. ಕೆಲವರು ಅಪಾಯವಿದೆ ಎಂದು ಮನೆ ಬಿಟ್ಟು ಹೊರಗೆ ಬಂದರು, ಮತ್ತೆ ಕೆಲವರು ಏನು ಆಗದು ಎಂದು ಮನೆಯ ಒಳಗೆ ಉಳಿದರು. ಸ್ವಲ್ಪ ಸಮಯದಲ್ಲಿ ಭೂಕಂಪವಾಯಿತು ಮನೆಯಲ್ಲಿ ಇದ್ದವರು ಮಣ್ಣು ಪಾಲಾದರು.  ಮನೆ  ಹೊರಗಿದ್ದವರು ಮರು ಹುಟ್ಟು ಕೊಟ್ಟ ಬಕಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇಂಗ್ಲೆಂಡ್ ದೇಶದ ವಿಮಾನ ಖಾತೆ ಸಚಿವರಾಗಿದ್ದ ಲಾರ್ಡ್ ಥಾಮಸ್ ಸಹ ಒಂದು ನಾಯಿ ಸಾಕಿದ್ದರು. ಅ ನಾಯಿಯು ಸಹ ಅವರು ಹೋದ ಕಡೆಯೆಲ್ಲ ಅವರನ್ನು ಹಿಂಬಾಲಿಸುತಿತ್ತು. ಒಮ್ಮೆ ಒಂದು ಹೊಸ ಮಾದರಿಯ ವಿಮಾನದ ಪರೀಕ್ಷೆಗೆ ಅವರು  ಹೊರಟಿದ್ದರು. ಅ ಸಮಯದಲ್ಲಿ  ಅವರ  ಮುದ್ದು ನಾಯಿ ಅಂದು ಆಹಾರ ತಿನ್ನದೇ, ಭಯದಿಂದ ನಡುಗುತ್ತ, ಸುಮ್ಮನೆ ಬೊಗಳಲು ಆರಂಭಿಸಿತು. ಅವರು ಎಷ್ಟು ಸಮಾಧಾನ ಮಾಡಿದರು ಅದಕ್ಕೆ ಸಮಾಧಾನವಾಗಲಿಲ್ಲ. ಅಂದು ಅವರ ನಾಯಿಯು ಮಾತನ್ನು ಕೇಳಲೇ ಇಲ್ಲ. ಕಡೆಗೆ ನಾಯಿಯನ್ನು ಮನೆಯಲ್ಲಿ ಬಿಟ್ಟು ವಿಮಾನ ಹತ್ತಿದ. ಅ ವಿಮಾನ ಅಪಘಾತಕ್ಕೆ  ಈಡಾಯಿತು ಅವರ ಪ್ರಾಣ  ಪಕ್ಷಿಯು ಸಹ ಹಾರಿ ಹೋಯಿತು. ತನ್ನ ಮುದ್ದಿನ ನಾಯಿಯ ಮಾತು ಕೇಳಿದ್ದರೆ ಥಾಮಸ್ ಉಳಿಯುತಿದ್ದರು. ನಾಯಿಗೆ ತನ್ನ ಮಾಲಿಕನ ಮರಣದ ಸುದ್ದಿಯು ಸಹ ಮುಂಚೆಯೇ ತಿಳಿದಿತ್ತು. ಅದನ್ನು ತಡೆಯುವ ಪ್ರಯತ್ನ ಸಹ ವಿಫಲವಾಗಿತ್ತು.
ಹಾಗೆ ನಾನು ಮತ್ತೊಂದು ವಿಚಿತ್ರವನ್ನು ನಿಮ್ಮ ಮುಂದೆ ಇಡಲೇ ಬೇಕು
ನಮ್ಮ ಮನೆಯ ರಸ್ತೆಯಲ್ಲಿಯೂ ಸಹ ಮಧ್ಯರಾತ್ರಿಯಾದರೆ ಸಾಕು,  ಬೀದಿ ನಾಯಿಗಳು ಎಲ್ಲವು ಒಂದು ಕಡೆ ನಿಂತು  ಒಟ್ಟಿಗೆ ಒಂದೇ ದಿಕ್ಕಿಗೆ ಮುಖ ಮಾಡಿ ಉಳಿಡಲು ಆರಂಭಿಸುತ್ತವೆ. ಕಿಟಕಿಯ ಬಳಿ ನಿಂತು ಹಲವು ಭಾರಿ ನೋಡಿದ್ದೇನೆ ಅಲ್ಲಿ ನಂಗಂತೂ ಏನು ಕಂಡಿಲ್ಲ. ಆದರೆ ಅದನ್ನು ಕಾಣುವ ಶಕ್ತಿ ಕೇವಲ ನಾಯಿಗೆ ಮಾತ್ರ ಇದೆ

ಭವಿಷ್ಯ ನುಡಿಯುವ ಬುದ್ದಿಜೀವಿಗಳು

ಪ್ರತಿದಿನ ಬೆಳಗಾದರೆ ಮಾನವನು ನೋಡುವುದು ದಿನ ಭವಿಷ್ಯವನ್ನು. ದಿನ ಹೇಗಿದೆ?  ನನಗೆ ಒಳ್ಳೆಯದು ಆಗುತ್ತದೆಯೇ ? ಇಲ್ಲವಾದರೆ ಕೆಟ್ಟದ್ದು ಏನಾದರೂ ಕಾದಿದೆಯೋ?  ಎನ್ನುವ ಆತಂಕ ಮಾನವನಿಗೆ. ಇದಕ್ಕಾಗಿ ಜೋತಿಷಿಗಳ ಸಲಹೆಗೆ ಮೊರೆಯಿಡುತ್ತಾರೆ. ಅವರು ಸಹ ತಿಳಿದಿದ್ದು ತಿಳಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕೆಲ ವರ್ಷಗಳ ಹಿಂದೆ ಪ್ರಳಯವಾಗುತ್ತದೆ  ಎಂದು ವಿಶ್ವದಲ್ಲಿನ ಎಲ್ಲ ಜೋತಿಷಿಗಳು ಭವಿಷ್ಯ ನುಡಿದಿದ್ದರು ಆದರೆ ಆಗಿದ್ದೇನು ನಿಮಗೆ ತಿಳಿದೇ ಇದೆ.   ಮೇಲಿನ ಪ್ರಸ್ತಾವನೆ ಓದಿದವರಿಗೆ ಇಂದಿನ ಲೇಖನದ ಬಗ್ಗೆ  ಒಂದು ಅಭಿಪ್ರಾಯ ಬಂದಿರಬೇಕು. ಹೌದು ಮನುಷ್ಯನ  ಹಾಗೆ ಪ್ರಾಣಿ ಪಶುಪಕ್ಷಿಗಳು ಸಹ  ಭವಿಷ್ಯ ನುಡಿಯುತ್ತವೆ. ಅವು ಸಹ ಯೊಚಿಸುತ್ತವೆ. ಅವುಗಳಿಗೂ ಸಹ ಬುದ್ದಿವಂತಿಕೆ ಇದೆ. ಬನ್ನಿ ಅತಿ ಬುದ್ದಿವಂತ ಪ್ರಾಣಿಗಳ ನುಡಿಯುವ ಭವಿಷ್ಯದ ಬಗ್ಗೆ ಒಂದಿಷ್ಟು ತಿಳಿಯೋಣ.
ಅ ದಿನ ಸಮಸ್ತ ಜರ್ಮನಿ ದೇಶವು ಒಂದು ರೀತಿಯ ದುಖದಲ್ಲಿ ಇತ್ತು. ಕೆಲವರು ಪೌಲ್ ನ ಭವಿಷ್ಯ ಸುಳ್ಳಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಮತ್ತೆ ಕೆಲವರು ಪೌಲ್ ಹೀಗೇಕೆ ನುಡಿದ ಎಂದು ತರ್ಕಿಸುತ್ತಿದ್ದರು. ಉಳಿದವರು ಪೌಲ್ ನ ಭವಿಷ್ಯ ನಿಜವಾದರೆ  ಪೌಲ್ ನನ್ನೇ ಮುಗಿಸುವ ಮಾಸ್ಟರ್ ಪ್ಲಾನ್ನಲ್ಲಿ ತೊಡಗಿದ್ದರು. ಕಟ್ಟ ಕಡೆಗೆ ಪೌಲ್ ನುಡಿದ ಭವಿಷ್ಯ ನಿಜವಾಯಿತು. ಸಮಸ್ತ ಜರ್ಮನ್ ದೇಶದ ನಾಗರಿಕರ ಶಾಪ, ಕೋಪ, ಅಕ್ರೋಶಗಳಿಗೆ ಪೌಲ್ ತುತ್ತಾದ. ಕಡೆಗೆ ಜರ್ಮನಿಯ ನಾಗರೀಕರ ಪ್ರೀತಿಗೆ ಪಾತ್ರನಾದ ಪೌಲ್ , ಅಂದು ಜರ್ಮನಿಯ ನಾಗರೀಕರ ಪಾಲಿಗೆ ಖಳನಾಯಕನಾದ. ಪೌಲ್ ಯಾರು ? ಅವನು ಮಾಡಿದ್ದದಾರು  ಏನು ? ಅಂತ ಪ್ರಶ್ನೆಗಳು ನಿಮ್ಮನ್ನು ಬೆಂಬಿಡದ ಬೇತಾಳ ಹಾಗೆ ಆವರಿಸಿ ಕೊಳ್ಳುವುದು ಸಹಜ.
ಪೌಲ್ ಮತ್ತಾರು ಅಲ್ಲ, ಪೌಲ್ ಒಂದು ಆಕ್ಟೋಪಸ್. ೨೦೧೦ರ ವಿಶ್ವಕಪ್ ಫುಟ್ಬಾಲ್ ಪಂದ್ಯದ ಸಮಯದಲ್ಲಿ  ಪಂದ್ಯಕ್ಕು ಮುನ್ನ ಆತ ಪಂದ್ಯದ ವಿಜೇತರು ಯಾರು ಎಂದು  ಭವಿಷ್ಯ ನುಡಿಯುತ್ತಿದ್ದ . ಪೌಲ್ ಪ್ರಸಿದ್ಧಿ ಪಡೆದದು ೨೦೧೦ರ ವಿಶ್ವಕಪ್ ಆದರು ಬೆಳಕಿಗೆ ಬಂದದ್ದು ೨೦೦೮ ಯುರೋ ಕಪ್ ಸಮಯದಲ್ಲಿ ಆತ ಜರ್ಮನಿಯ ಅದೃಷ್ಟ ಚಿನ್ಹೆಯಾದ.
ಫುಟ್ಬಾಲ್ ಪಂದ್ಯಕ್ಕೆ ಮುನ್ನ ,ಅಂದು ಅಟ ಆಡುವ ಎರಡು ದೇಶಗಳ ಬಾವುಟಗಳನ್ನು ಎರಡು ಡಬ್ಬಿಗಳ ಮೇಲೆ ಇಟ್ಟಿರುತ್ತಿದ್ದರು. ಡಬ್ಬಿಯ ಒಳಗಡೆ ಆಹಾರವನ್ನು ಇಡುವರು. ಪೌಲ್ ಯಾವ  ಡಬ್ಬವನ್ನು ಅಂದು ಆರಿಸಿಕೊಳ್ಳುವುದು ಅ ದೇಶ ಅಂದಿನ ಪಂದ್ಯ ಗೆಲ್ಲುವ ನೆಚ್ಚಿನ ತಂಡ.
ಪೌಲ್ ಜರ್ಮನಿಯ ಎಲ್ಲ ಪಂದ್ಯಗಳಲ್ಲಿ ಗೆಲುವಿನ ಸಿಹಿ ಸುದ್ದಿ ನೀಡಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೋಲುವುದೆಂಬ ಭವಿಷ್ಯ ಸಹ ನಿಜವಾಯಿತು. ಅದಲ್ಲದೆ ಪೌಲ್ ಫೈನಲ್ ಪಂದ್ಯದ ವೇಳೆ ಸ್ಪೇನ್ , ನೆದರ್ಲ್ಯಾಂಡ ವಿರುದ್ಧ ಗೆಲ್ಲುವುದೆಂಬ ನುಡಿದ ಭವಿಷ್ಯ ಸಹ ನಿಜವಾಯಿತು.
ಪೌಲ್ ಕಥೆ ಹೀಗಾದರೆ , ಅಮೇರಿಕಾದ ಸಾಲ್ಟ್ ಲೇಕ್ ಸಿಟಿಯ ಹೊಗೆಲ್ ಮೃಗಾಲಯದ ಎಲಿ ಎಂಬ ವಾನರ ಸಹ ಸೂಪರ್ ಬೌಲ್ ಸ್ಪರ್ಧೆಯ ವಿಜೇತರನ್ನು ಸುಮಾರು ಆರು ವರ್ಷಗಳಿಂದ ಸರಿಯಾಗಿ ಉಹೆ ಮಾಡುತ್ತಿದ್ದೆಯಂತೆ.    
ಅಮೇರಿಕ  ದೇಶದ ರೋಡ್ ಐಲ್ಯಾಂಡ್ ನ  ಆಸ್ಪತ್ರೆಯಲ್ಲಿ ಯಾವಾಗಲು ಒಂದು ವಿಚಿತ್ರ ನಡೆಯುತ್ತಿತ್ತು. ಅ ಆಸ್ಪತ್ರೆಯಲ್ಲಿದ್ದ ಆಸ್ಕರ್ ಎನ್ನುವ  ಬೆಕ್ಕು ಅಲ್ಲಿನ ರೋಗಿ ಹಾಸಿಗೆಯ ಸುತ್ತ  ಏನಾದರೂ  ಸುತ್ತುವುದು ಮಾಡಿದರೆ ತಕ್ಷಣ  ಅಲ್ಲಿನ ಸಿಬ್ಬಂದಿ ರೋಗಿಯ ಸಂಬಂಧಿಕರ ಮನೆಗೆ ಕರೆ ಮಾಡುತ್ತಿದ್ದರು. ಕಾರಣ ಏನು ಅಂತ ಕೇಳಿದರೆ ಕೇಳಿದವನ ಎದೆ ಸಹ ಜಲ್ ಎನ್ನುತಿತ್ತು. ಅ ಬೆಕ್ಕು ಯಾವ ರೋಗಿಯ ಸುತ್ತ ಸುತ್ತುವುದು ಅವನ ಮರಣ ಸಮೀಪಿಸಿದೆ ಎಂಬರ್ಥ. ೨೦೧೦ ತನಕ ಬೆಕ್ಕು ೫೦ ಜನರ ಮರಣ ಮೃದಂಗ ಬಾರಿಸಿತ್ತು.
ನ್ಯೂಜಿಲ್ಯಾಂಡ್ ದೇಶದ ಸೋನಿ ವೋಲ್ ಎನ್ನುವ ಕುರಿ ಇದ್ದಕಿದ್ದ ಹಾಗೆ ತನ್ನ ಶಕ್ತಿಯಿಂದ ಬೆಳಕಿಗೆ ಬಂತು. ನ್ಯೂಜಿಲ್ಯಾಂಡ್ ದೇಶದ ಜನಪ್ರಿಯ ಕ್ರೀಡೆ ರಗ್ಬಿ ಆಟದ ಭವಿಷ್ಯವನ್ನು ಅದು ನಿಖರವಾಗಿ ಹೇಳುತಿತ್ತು. ಆಟಕ್ಕೂ ಮುನ್ನ ಒಂದೊಂದು ಆಹಾರವನ್ನು ಬಕೆಟ್ನಲ್ಲಿ  ಅ ತಂಡದ ಬಾವುಟ ಕಟ್ಟಿ ಕುರಿಯ ಮುಂದೆ ಇಡುವರು. ಸೋನಿ ಯಾವುದು ಆಯ್ದು ಕೊಳ್ಳುವುದು ಅ ತಂಡ ಅಂದಿನ ಪಂದ್ಯ ಗೆಲ್ಲುತ್ತಿತ್ತು.
ಗಿನಿಯ ಪಿಗ್ ಯಾರಿಗೆ ಗೊತ್ತಿಲ್ಲ ಹೇಳಿ , ಪೆರು ದೇಶದಲ್ಲಿ ರೋಗಿಯ ದೇಹದ ಮೇಲೆ ಗಿನಿಯ ಪಿಗ್ ಅನ್ನು  ಓಡಾಡಿಸುವರಂತೆ. ನಂತರ ಗಿನಿಯ ಪಿಗ್ ಅನ್ನು ಹಿಡಿದು ಅದರ ದೇಹವನ್ನು ಸೀಳುವರು. ರೋಗಿಯ ದೇಹದಲ್ಲಿ ಕ್ಯಾನ್ಸರ್ ಇದ್ದರೆ ಅದನ್ನು ಗಿನಿಯ ಪಿಗ್ ದೇಹಕ್ಕೆ ಬಂದಿರುತ್ತದೆ. ಗಿನಿಯ ಪಿಗ್ ದೇಹವನ್ನು ಅದ್ಯಯನ ಮಾಡಿ ಕಡೆಗೆ ಕ್ಯಾನ್ಸರ್ ರೋಗಿಯ ತೀವ್ರತೆಯನ್ನು ತಿರ್ಮಾನಿಸುವರು.
ಇಲ್ಲಿಯವರೆಗೆ ನೀವು ವಿದೇಶಿ ಸುದ್ದಿಯನ್ನು ಕೇಳಿದಿರಿ , ಇನ್ನು ನಿಮ್ಮ ಮನೆಯ ಸುದ್ದಿ ಕೇಳೋಣ.
ನಿಮ್ಮ ಮನೆಯ ಮುಂದೆ ಕಾಗೆ ಸತತವಾಗಿ ಕಾ ಕಾ ಎಂದರೆ ನಿಮ್ಮ ಮನೆಗೆ ಅಥಿತಿಗಳು ಬರುವ ಭವಿಷ್ಯವನ್ನು ನಿಮಗೆ ನೀಡುತ್ತದೆ. ಗಿಳಿ ಶಾಸ್ತ್ರದವನು ಗಿಳಿಗಳ ನೆರವಿನಿಂದ ನಿಮ್ಮ ಭವಿಷ್ಯವನ್ನು ನೀಡುತ್ತಾನೆ. ಇನ್ನು ಯಾರಿಗೂ ಕಾಣದ ಹಾಲಕ್ಕಿ , ಬುಡು ಬುಡಿಕೆಯವನ ಮೂಲಕ ನಿಮ್ಮ ಭವಿಷ್ಯವನ್ನು ನುಡಿಯುತ್ತದೆ. ಮಳೆ ಹುಳು ಮಳೆ ಬರುವ  ಮುನ್ನ ರೆಕ್ಕೆ ಬಿಚ್ಚಿ ರಸ್ತೆಯಲೆಲ್ಲ ಹಾರಿ ಭವಿಷ್ಯ ನುಡಿದರೆ . ನಿಮ್ಮ ಮನೆಯ ನಾಯಿ ಮಳೆ ಬರುವ ಮುನ್ನವೇ ಮನೆ ಸೇರಿ ಮಳೆ ಬರುವ ಭವಿಷ್ಯ ನುಡಿಯುತ್ತದೆ.
ಈಗ ಇಷ್ಟೆಲ್ಲಾ ಉದಾಹರಣೆ ನಿಮ್ಮ ಮುಂದಿದೆ , ನೀವೇ ನಿರ್ಧರಿಸಿ ಭವಿಷ್ಯ ನುಡಿಯುವ ನಿಜವಾದ ಬುದ್ಧಿಜೀವಿಗಳು ಯಾರೆಂದು?
 
ನಾವು ಮನುಷ್ಯರಗಿಂತ ಏನು ಕಮ್ಮಿಯಿಲ್ಲ

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎನ್ನುವ ನುಡಿಗಟ್ಟು ನಿಮಗೆಲ್ಲ ತಿಳಿದಿದೆಯಲ್ಲ.  ಹೊಟ್ಟೆ ಮತ್ತು ಬಟ್ಟೆಗಾಗಿ ಕೆಲವರು ಕಷ್ಟ ಪಟ್ಟು ದುಡಿದರೆ ಮತ್ತೆ ಕೆಲವರು ಮೋಸ, ವಂಚನೆ  ಮಾಡಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುತ್ತಾರೆ.  ಈ ಸ್ವಾರ್ಥ ಮನೋಭಾವ ಕೇವಲ ಮಾನವನಲ್ಲಿ ಮಾತ್ರ ಅಂತ ನೀವು ನಂಬಿದ್ದರೆ ಅದು ಖಂಡಿತ ಸುಳ್ಳು ಅದು ಪ್ರಾಣಿ ಪಕ್ಷಿಗಳಲ್ಲೋ ಸಹ ಕಂಡು ಬರುತ್ತದೆ.  ಕಳ್ಳತನ, ಮೋಸ,ವಂಚನೆಗಳು ಕಾನೂನು ಬಾಹಿರ ಚಟುವಟಿಕೆಯಾದರು ಕೆಲವೊಮ್ಮೆ ಅನಿಸುತ್ತದೆ ಸಹ ಪ್ರಕೃತಿಯ ನಿಮಯವೆಂದು.

ನರಿ 
ನರಿ ಬುದ್ದಿ ಅಂತ ಮೋಸ ,ವಂಚನೆ,ಕುತಂತ್ರ ಮಾಡುವ ಮಾನವರಿಗೆ ನಾವು ಹೊಲಿಸುತ್ತೇವೆ. ನರಿ ಬಿಟ್ಟು ಬೇರೆ ಪ್ರಾಣಿನೇಕೆ ನಾವು ಹೋಲಿಸುವುದಿಲ್ಲ. ನರಿ ಹೇಗೆ ಮೋಸ ಮಾಡುತ್ತೆ ಅಂತ ಇಂದು ತಿಳಿದು ಕೊಳ್ಳೋಣ. ನಿಮಗೆಲ್ಲ ತಿಳಿದಿರು ಹಾಗೆ ನರಿ ತನ್ನ ಆಹಾರಕ್ಕಾಗಿ  ಇತರೆ ಸಸ್ಯಹಾರಿ ಪ್ರಾಣಿಗಳು ಮತ್ತು ಪಕ್ಷಿಗಳು , ಅವುಗಳ ಮರಿ ಮತ್ತು ಮೊಟ್ಟೆಗಳನ್ನ ತಿನ್ನುತ್ತದೆ.
ನರಿ ತನ್ನ ಆಹಾರಕ್ಕಾಗಿ ಪ್ರಾಣಿ ಪಕ್ಷಿಗಳಿಗೆ ಮಾಡುವ ಕೆಲಸ ನಿಜಕ್ಕೂ ಪ್ರಕೃತಿಯ ನಿಮಯಮವೇ ಅಥವಾ   ಮೋಸವೇ ಅಂತ ನೀವು ತೀರ್ಮಾನ ಮಾಡಬೇಕು.
ಉಷ್ಟ್ರ ಪಕ್ಷಿಗಳ ಮೊಟ್ಟೆ ಸಹಜವಾಗಿ ಗಾತ್ರದಲ್ಲಿ ದೊಡ್ಡವು. ಉಷ್ಟ್ರ ಪಕ್ಷಿ ತನ್ನ ಮೊಟ್ಟೆಗಳ ರಕ್ಷಣೆ ಸದಾ ಮಾಡುತ್ತಿರುತ್ತದೆ. ಒಮ್ಮೆ ಏನಾದರೂ ಅದು ಎದ್ದು ಓಡಾಡಿದರೆ. ಅಲ್ಲೇ ಇದ್ದು ಹೊಂಚು ಹಾಕುತ್ತಿದ್ದ ನರಿ ತಕ್ಷಣವೇ ಮೊಟ್ಟೆಯನ್ನು ಕಚ್ಚಿಕೊಂಡು ಪಲಾಯನ ಮಾಡುತ್ತದೆ.
ಕೋಗಿಲೆ  
ಕೋಗಿಲೆ ಎಷ್ಟು ಇಂಪಾಗಿ ಹಾಡುತ್ತೋ ಅಷ್ಟೇ ಕುತಂತ್ರಿ  ಮತ್ತು ಸ್ವಾರ್ಥಿ ಕೂಡ, ಕೋಗಿಲೆ ತನ್ನ ಮೊಟ್ಟೆಗಳನ್ನು ಬೇರೆ ಪಕ್ಷಿಗಳ ಗೋಡುಗಳಲ್ಲಿ ಇಡುತ್ತದೆ. ಬರಿ ಮೊಟ್ಟೆ ಇಟ್ಟರೆ ಪರವಾಗಿಲ್ಲ ಅ ಪಕ್ಷಿಯ ಮೊಟ್ಟೆಗಳನ್ನು ಗೋಡಿನಿಂದ ಬಿಸಾಕುತ್ತದೆ. ಬೇರೆ ಪಕ್ಷಿ ತನ್ನ ಮೊಟ್ಟೆಗಳೆಂದು ಕಾವು ಕೊಟ್ಟು ಮರಿ ಮಾಡಿದರೆ ಮುಂದೆ ಕೋಗಿಲೆ ಮರಿಗಳು ಮೋಸ ಮಾಡುವಲ್ಲಿ ತಾಯಿಯನ್ನೇ ಅನುಕರಣೆ ಮಾಡಿ, ಅವು ಬೇರೆ ಪಕ್ಷಿಯ ಮರಿಗಳನ್ನು ಗೋಡಿನಿಂದ ಹೊರಹಾಕಿ ತಾವು ಸಮೃದ್ದವಾಗಿ ಬೆಳೆಯುತ್ತವೆ.
ಮಂಗ/ಕಪಿ
ಹಿಂದೆ ಮಂಗನಿಗೂ ಮಾನವನಿಗೂ ವ್ಯತ್ಯಾಸ ಇತ್ತು ಅಂತ ಹೇಳುತಾ ಇದ್ದರು, ಆದರೆ ವ್ಯತ್ಯಾಸ ಏನು ಇಲ್ಲ ಬಿಡಿ ಇಬ್ಬರು ಒಂದೆನೇ. ಪ್ಲಾನೆಟ್ ಆಫ್ ಏಪ್ಸ್ ಚಲನ ಚಿತ್ರದಲ್ಲಿ ಮಂಗ ಹೇಗೆ ಬಂಧನದಿಂದ ತಪ್ಪಿಸಿಕೊಂಡು ಹೋಗುವುದು ಹಾಗೆ ನಿಜ ಜೀವನದಲ್ಲಿ ಸಹ ಮೃಗಾಲಯದಲ್ಲಿ ಆಗಾಗ ಬೋನಿನ ಚೀಲಕ ತಗೆದು ಮೃಗಾಲಯದ ಅಧಿಕಾರಿಗಳಿಗೂ ಚಳ್ಳೆ ಹಣ್ಣು ತಿನ್ನಿಸುವುದು ಉಂಟು. ಕೈಯಲ್ಲಿ ತಿನ್ನುವ ಪದಾರ್ಥಗಳನ್ನು ಇಟ್ಟು ಕೊಂಡು ಮಂಗಗಳು ಇರುವ ಕಡೆಗೆ ಒಮ್ಮೆ ಭೇಟಿ ಕೊಡಿ. ನೀವು ಅವುಗಳಿಗೆ ಎಷ್ಟು ಕೊಟ್ಟರು ಅವು ನಿಮ್ಮನ್ನು ಹಿಂಬಾಲಿಸಿ ಮತ್ತಷ್ಟು ಕೊಡುವವರೆಗೂ ಬಿಡುವುದಿಲ್ಲ. ಇಲ್ಲದಿದ್ದರೆ ಬಲವಂತವಾಗಿ ನಿಮ್ಮಿಂದ ಕಿತ್ತುಕೊಂಡು ಪರಾರಿಯಗುತ್ತವೆ. ನಮ್ಮ ಪೂರ್ವಜರು ಮಾಡಿದ್ದು ಹೊಟ್ಟೆಗಾಗಿ ತಾನೇ.
ವಿರ್ಜಿನಿಯ ಒಪ್ಪಸಂ
ಕೆಲವೊಂದು ಸಿಕ್ಕಿಬೀಳುವ ಸಂದರ್ಭದಲ್ಲಿ  ಮಾನವರು ಏನು ಆಘಾತ ಆದವರಂತೆ ನಾಟಕ ಮಾಡುತ್ತಾರೆ. ವಿರ್ಜಿನಿಯ ಒಪ್ಪಸಂ ಎನ್ನುವ ಇಲಿ ಗಾತ್ರದ ಪ್ರಾಣಿ ಸಹ ನಟನೆ ಮಾಡುತ್ತದೆ. ತನಗೆ ಅಪಾಯ ಎದುರಾದರೆ ತಾನು ಸತ್ತಂತೆ ನಾಟಕ ಮಾಡುತ್ತದೆ. ಕೇವಲ ಸತ್ತರೆ ಸಾಲದೇ ಸತ್ತ ಪ್ರಾಣಿಗಳ ದೇಹದಿಂದ ಬರುವ ದುರ್ಗಂಧವನ್ನು ಸಹ ಸೂಸುತ್ತದೆ. ಇದನ್ನು ಅರಿಯಾದ ಇತರೆ ಪ್ರಾಣಿಗಳು  ವಿರ್ಜಿನಿಯ ಒಪ್ಪಸಂ ಸತ್ತಿದೆ ಎಂದು ಭಾವಿಸುತ್ತಾರೆ.
ಕಂಬಳಿ ಹುಳ
ಪರಿಸರದಲ್ಲಿರುವ ತನ್ನ ವಾಸ ಸ್ಥಳಕ್ಕೆ ತಕ್ಕಂತೆ ತನ್ನ ದೇಹವನ್ನು ಹೊಂದಿಸುವ ತಾಕತ್ತು ಒಂದು ಜಾತಿಯ ಕಂಬಳಿ ಹುಳಗಳಿಗೆ ಇವೆ. ಹೆಚ್ಚಾಗಿ ಒಣಗಿದ ಗಿಡ,ಎಲೆ, ಹೂವು ಇತರೆ ಭಾಗಗಳನ್ನು ಹೋಲುವಂತೆ ತಟಸ್ಥವಾಗುತ್ತವೆ. ಆಗ ನಮಗೆ ಅವು ಅ ಸಸ್ಯದ ಭಾಗವೆಂದು ಮಾನವನೂ ಸೇರಿ ಇತರೆ ಜೀವಿಗಳು ಮೋಸ ಹೋಗುತ್ತವೆ.
ಗೋಸುಂಬೆ
ಸಮಯಕ್ಕೆ ತಕ್ಕಂತೆ ತಾನು ಆಡಿದ ಮಾತನ್ನು ಬದಲಿಸುವ ತಾಕತ್ತು ಕೇವಲ ಮಾನವನಿಗೆ ಮಾತ್ರವಿದೆ. ಇಂತವರು ಹೆಚ್ಚಾಗಿ ಸ್ವಾರ್ಥಿಗಳು ಕೇವಲ ತಮ್ಮ ಕಾರ್ಯ ಸಾಧನೆಗೆ ಇತರರನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಮಾನವನ ಈ ನಡುವಳಿಕೆಗೆಗೆ  ನಾವು ಆಗಾಗ ಹೇಳುತ್ತೇವೆ ಗೋಸುಂಬೆ ಹಾಗೆ ಬಣ್ಣ ಬದಲಿಸ ಬೇಡ ಎಂದು. ಪಾಪ ಗೋಸುಂಬೆಗೆ ಪ್ರಕೃತಿ ನೀಡಿದ ವರ ಅದು ಆದರೆ ಮಾನವನಿಗೆ?
ಗೋಸುಂಬೆ ತನ್ನ ಶತ್ರುಗಳಿಗೆ ವಂಚಿಸಲು ಹಾಗು ತನ್ನ ಆಹಾರಕ್ಕಾಗಿ ತನ್ನ ಬಣ್ಣ ಬದಲಿಸುತ್ತಾ ಇರುತ್ತದೆ. ಗೋಸುಂಬೆಯ ನಾಲಿಗೆಯು ತನ್ನ ದೇಹದ ಅಕಾರಕ್ಕಿಂತ ಎರಡು ಪಟ್ಟು ದೊಡ್ಡದು ಇದೆ. ಗೋಸುಂಬೆ ತುಂಬಾ ಸಿಟ್ಟಾದಾಗ ತನ್ನ ದೇಹದ ಬಣ್ಣವನ್ನು ಕೆಂಪು ಬಣ್ಣಕ್ಕೆ ತಿರುಗಿಸಿ ಬಿಡುತ್ತದೆ. ನಮಗೂ ಈ ರೀತಿ ಪವರ್ ಇದ್ದರೆ ಎಷ್ಟು ಸೂಪರ್ ಇರುತಿತ್ತು ಅಲ್ವಾ .
ಸಧ್ಯಕ್ಕೆ ಏನೆ ಅನ್ನಿ ವಂಚಿಸುವುದರಲ್ಲಿ ಮಾನವನನ್ನು ಮಿರಿಸಲು ಮತ್ತೊಂದು ಜೀವಿಗಂತೋ ಸಾಧ್ಯವಿಲ್ಲ. ಮುಂದೆ ಏನಾದರು  ಪರಿಸ್ಥಿತಿ ಉಲ್ಟಾ ಹೊಡೆದರು ಅನುಮಾನವಿಲ್ಲ. ಯಾಕಂದರೆ ಬದಲಾವಣೆಯೇ ಪ್ರಕೃತಿಯ ನಿಯಮ.

ಒರಾಂಗುಟನ್
ಒರಾಂಗುಟನ್  ಪ್ರಾಣಿಯ ತಾಯಿ ಮಗುವಿನ ಸಂಬಂಧ ವಿಶ್ವದಲ್ಲೇ ಅತ್ಯಂತ ಬಲಿಷ್ಟವಾದದು. ಮರಿ ಒರಾಂಗುಟನ್ ಮೊದಲ ಎರಡು ವರ್ಷದಲ್ಲಿ ಆಹಾರ ಮತ್ತು ಓಡಾಟಕ್ಕೆ ಸಂಪೂರ್ಣವಾಗಿ ತಾಯಿಯನ್ನೇ ಅವಲಂಬಿಸಿರುತ್ತದೆ. ಮಗುವು ಸುಮಾರು ೬ ವರ್ಷಗಳ ಕಾಲ ತಾಯಿಯೊಂದಿಗೆ ಇದ್ದು ಎಲ್ಲ ಕಲೆಗಳನ್ನು ಕಲಿತ ಮೇಲೆ ಸ್ವತಂತ್ರವಾಗಿ ಬದುಕಲು ಕಲಿಯುತ್ತದೆ. ತಾಯಿಯು ಮಗುವಿಗೆ ಆಹಾರವನ್ನು ಹುಡುಕುವುದು, ಆಹಾರವನ್ನು ಹೇಗೆ ತಿನ್ನುವುದು , ನಿದ್ರಿಸಲು ಸೂರನ್ನು ಕಟ್ಟುವುದು   ಇತರೆ ಜೀವನ ಕಲೆಗಳನ್ನು ಕಲಿಸುತ್ತದೆ. ಹಾಗೆ ಹೆಣ್ಣು ಮರಿಯು ಸುಮಾರು ಹದಿನಾರು ವರ್ಷದ ವರೆಗೂ ತನ್ನ ತಾಯಿಯನ್ನು ಭೇಟಿ ಮಾಡುತ್ತಲೇ ಇರುತ್ತದೆ.
ಹಿಮಕರಡಿ :
ಹೆಣ್ಣು ಹಿಮ ಕರಡಿಯು ಹೆಚ್ಚಾಗಿ ಅವಳಿ ಮರಿಗಳಿಗೆ ಜನ್ಮ ನೀಡುತ್ತದೆ. ಒರಾಂಗುಟನ್ ಮರಿಗಳ ಹಾಗೆ ಹಿಮಕರಡಿಗಳ ಮರಿಗಳು ಸಹ ತಾಯಿಯ ಜೊತೆ ಸುಮಾರು ಎರಡು ವರ್ಷಗಳನ್ನು ಕಳೆಯುತ್ತವೆ. ಮೊದಲೇ ಹಿಮದಿಂದ ಕೊಡಿದ ಪ್ರದೇಶದಲ್ಲಿ ವಾಸಿಸುವುದರಿಂದ  ಹಿಮಕರಡಿ ಕಡಿಮೆ ಚಳಿ ಇರುವ ಸಮಯ ನೋಡಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮರಿಗಳಿಗೆ ಜನ್ಮ ನೀಡುತ್ತದೆ. ಮರಿಗಳು ಮಾರ್ಚ್ ಮತ್ತು ಏಪ್ರಿಲ್ ತಿಂಗಳ ನಂತರವಷ್ಟೇ ಮನೆಯಿಂದ ಹೊರಗೆ ಕಾಲಿಡುತ್ತವೆ. ಎರಡು ವರ್ಷಗಳ ನಂತರ ಜೀವನಕ್ಕೆ ಅಗತ್ಯವಾದ ಕಲೆಗಳನ್ನು ಕಲಿತ ಮೇಲೆ ಮರಿಗಳು ತಾಯಿಯಿಂದ ಬೇರೆಯಾಗುತ್ತವೆ .
ಮಂಗಟ್ಟೆ ಹಕ್ಕಿ (ಹಾರ್ನ್ ಬಿಲ್) :
ಹೆಣ್ಣು ಹಾರ್ನ್ ಬಿಲ್ ಮೊಟ್ಟೆಯಿಡುವ ಸಂದರ್ಭದಲ್ಲಿ , ಮರದ ಪೊಟರೆಯನ್ನು ಆಯ್ಕೆ ಮಾಡಿ , ಪೊಟರೆಯ ಒಳಗೆ ಹೋಗಿ ಪೊಟರೆಯ ದ್ವಾರವನ್ನು ಕೇವಲ  ಕೊಕ್ಕು  ಇಳಿ ಬಿಡುವಷ್ಟು ಜಾಗ ಉಳಿಸಿ ಮುಚ್ಚಿ ಬಿಡುತ್ತದೆ. ಪೊಟರೆಯ ಒಳಗೆ ಮೊಟ್ಟೆಯಿಟ್ಟು , ಮರಿ ಮಾಡಿ ಒಮ್ಮೆ ಮರಿಗಳು ಬಲಿತ ಮೇಲೆ ಪೊಟರೆಯ ದ್ವಾರವನ್ನು ಗಂಡು ಹಕ್ಕಿ ಒಡೆಯುತ್ತದೆ.  ಆಗ ಹೆಣ್ಣು ಹಕ್ಕಿ ಮರಿಗಳೊಂದಿಗೆ ಹೊರಗೆ ಬರುತ್ತದೆ. ಅಲ್ಲಿಯವರೆಗೆ ಗಂಡು ಹಕ್ಕಿ ಪ್ರತಿ ದಿನವೂ ಆಹಾರವನ್ನು ತಂದು ಅ ಪೊಟರೆಯ ಒಳಗೆ ಹಾಕುತ್ತದೆ. ಹೆಣ್ಣು ಹಕ್ಕಿ ಅದನ್ನೇ ಸೇವಿಸಿ ಬದುಕುತ್ತದೆ. ಮೊಟ್ಟೆಯೊಡೆದು ಮರಿ ಬರುವ ತನಕ ಹೆಣ್ಣು ಹಕ್ಕಿಗೆ ಹೊರಗಿನ ಪ್ರಪಂಚದ ಸಂಪರ್ಕವೇ ಇರುವುದಿಲ್ಲ. ಅಕಸ್ಮಾತ್ ಗಂಡು ಹಕ್ಕಿ ವಾಪಾಸ್ ಬರದಿದ್ದರೆ ಹೆಣ್ಣು ಹಕ್ಕಿ ಅದೇ ಪೊಟರೆಯಲ್ಲಿ ತನ್ನ ಕಡೆ ಉಸಿರು ಬಿಡುತ್ತದೆ.
ಅನೆ :
” ನರ್ಸ್   ”  ” ಸಿಸ್ಟರ್ ” ಈ ಪದಗಳು ಆನೆಗಳ ಶಬ್ದ ಕೋಶಗಳಲ್ಲಿ  ಸಹ ಜಾಗ ಪಡೆದಿವೆ ಅಂದರೆ ನಿಮಗೆ ಆಶ್ಚರ್ಯವಾಗಬಹುದು. ಆನೆಗಳಿಗೆ  ಹೆರಿಗೆಯಾದಾಗ ಇತರೆ ಹೆಣ್ಣು ಆನೆಗಳು  ಆಸ್ಪತ್ರೆಯಲ್ಲಿರುವ ಸಿಸ್ಟರ್ ಗಳು ನೀಡುವ ಸೇವೆಯನ್ನು ನೀಡುತ್ತವೆ. ಅನೆಯ ಮರಿಗಳು ತಮ್ಮ ಹಿರಿಯರನ್ನು ನೋಡಿ ಯಾವ ಸಸ್ಯವನ್ನು ತಿನ್ನಬೇಕು, ಹೇಗೆ ಹುಡುಕಬೇಕು ಅನುಸರಿಸಿ ಕಲಿಯುತ್ತವೆ. ಆನೆಗಳಲ್ಲಿ ಹೆಣ್ಣು ಪ್ರಧಾನವಾದ ಸಮಾಜ ಅಲ್ಲಿ ಮನೆಯ/ಗುಂಪಿನ ಹಿರಿಯರು ಹೆಣ್ಣು ಅನೆ ಆಗಿರುತ್ತದೆ. ಹಾಗೆ ಅನೆ ತನ್ನ ಮರಿಯನ್ನು ತನ್ನ ಸೊಂಡಲಿನಿಂದ ಆಗಾಗ ಮುದ್ದು ಮಾಡುವುದನ್ನು ನೀವು ನೋಡಿರುತ್ತೀರ.
ಚಿರತೆ :
ಚಿರತೆ ಒಟ್ಟಿಗೆ ನಾಲ್ಕುರಿಂದ ಆರು ಮರಿಗಳನ್ನು ಹಾಕುತ್ತದೆ.  ಚಿರತೆ ತನ್ನ ಮರಿಗಳನ್ನು ಹೆಚ್ಚಾಗಿ ಯಾರು ಇರದ ಸ್ಥಳದಲ್ಲಿ ಬೆಳೆಸುತ್ತದೆ. ಸತತ ಹದಿನೆಂಟು ತಿಂಗಳು ಹೇಗೆ ಬೇಟೆಯಾಡಬೇಕು, ಶತ್ರುಗಳಿಂದ ಹೇಗೆ ತಪ್ಪಿಸಿ ಕೊಳ್ಳಬೇಕು ಎಂದು ತರಬೇತಿ ನೀಡುತ್ತದೆ .  ತರಬೇತಿಯ ನಂತರ ಚಿರತೆಯ ಮರಿಗಳು ತಮ್ಮ ತಾಯಿಯನ್ನು ತೊರೆದು ಸ್ವತಂತ್ರವಾಗಿ ಬದುಕುತ್ತವೆ.
ಪೆಂಗ್ವಿನ್ :
ಪೆಂಗ್ವಿನ್ ಹಕ್ಕಿಗಳಲ್ಲಿ ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಹೋಗುತ್ತದೆ. ಆಗ ಗಂಡು ಹಕ್ಕಿ ಚಳಿಯಿಂದ ಮೊಟ್ಟೆಗಳಿಗೆ ಅಪಾಯವಾಗದಂತೆ ಸುಮಾರು ಎರಡು ತಿಂಗಳು ಕಾವು ಕೊಡುತ್ತದೆ. ಮೊಟ್ಟೆಯೊಡೆದು ಹೊರಬರುವ ಮರಿಗಳಿಗೆ ಹೆಚ್ಚಾಗಿ ಕಾಳಜಿ ತೋರಿಸುವುದು ಗಂಡು ಹಕ್ಕಿಯೇ .
ಗೈಂಟ್ ವಾಟರ್ ಬಗ್ :
ಗೈಂಟ್ ವಾಟರ್ ಬಗ್ ತನ್ನ ಮಕ್ಕಳನ್ನು ಕಾಪಾಡುವ ತಂತ್ರವನ್ನು ನಮ್ಮ ಮಾನವ ಜನ್ಮಕ್ಕೆ ಹೊಲಿಸಬಹುದು. ತಾಯಿ ಹೇಗೆ ಮಗುವಿಗೆ ಜನ್ಮ ನಿಡುವ ಮೊದಲು  ತನ್ನ ಹೊಟ್ಟೆಯಲ್ಲಿ ೯ ತಿಂಗಳು ಆಸರೆ ನೀಡುತ್ತಾಳೆ ಹಾಗೆ ಗಂಡು ಗೈಂಟ್ ವಾಟರ್ ಬಗ್  ತನ್ನ ಮೊಟ್ಟೆಗಳನ್ನು ತನ್ನ ರೆಕ್ಕೆಗಳ ಮೇಲೆ ಇಟ್ಟುಕೊಂಡು ರಕ್ಷಿಸುತ್ತದೆ.  ಯಾರಾದರೂ ಮೊಟ್ಟೆಯನ್ನು ಕದಿಯಲು ಕೈ ಹಾಕಿದರೆ ಸಾಕು ವಾಟರ್ ಬಗ್ ಅವರನ್ನು ಕಚ್ಚುತ್ತದೆ.
ಜಕಾನ  ಹಕ್ಕಿ :
ಗಂಡು ಜಾಕನ ಹಕ್ಕಿಯ ನಿಷ್ಠೆಯನ್ನು ನೀವು ಎಲ್ಲರೂ ಮೆಚ್ಚಲೇ ಬೇಕು. ಯಾಕಂದರೆ ಒಮ್ಮೆ  ಹೆಣ್ಣು ಹಕ್ಕಿ ಒಮ್ಮೆ ಮೊಟ್ಟೆಯಿಟ್ಟ ಮೇಲೆ ಗಂಡನ್ನು ತೊರೆದು ಬೇರೆ ಗಂಡಿನ ಸಂಗವನ್ನು ಬಯಸುತ್ತದೆ. ಆದರೆ ಗಂಡು ಅ ಮೊಟ್ಟೆಗಳಿಗಾಗಿ ಗೊಡನ್ನು ಕಟ್ಟಿ, ಮರಿ ಮಾಡಿ ಸಾಕಿ  ಸಲಹುತ್ತದೆ. ಇದಲ್ಲದೆ ಬೇರೆ ಗಂಡು ಹಕ್ಕಿಯ ಸಂಗ ಮಾಡಿದ ಅದೇ ಹೆಣ್ಣು  ಹಕ್ಕಿ ಮೊಟ್ಟೆ ಇಟ್ಟರೆ ಅವಕ್ಕೂ ಸಹ ಆಶ್ರಯ ನೀಡುತ್ತದೆ .
ಆಕ್ಟೋಪಸ್ :
ಒಮ್ಮೆಗೆ ೫೦೦೦೦ ಮೊಟ್ಟೆಯಿಟ್ಟು,ಮೊಟ್ಟೆಗಳ ಮೇಲೆ ಆಮ್ಲಜನಕ ಹೆಚ್ಚು ಇರುವ ನೀರನ್ನು ಉದುತ್ತಾ  ಅವುಗಳಿಗೆ ಅಪಾಯವಾಗದಂತೆ ರಕ್ಷಣೆ ಮಾಡುತ್ತವೆ. ಮೊಟ್ಟೆಯೊಡೆದು ಮರಿಗಳು ಹೊರಬಂದ ಮೇಲೆ ಮರಿಗಳ ಕೈಗಳನ್ನೇ ತಿನ್ನುತ್ತದೆ ಆದರೆ ಅ ಕೈಗಳು ಮತ್ತೆ ಬೆಳೆಯುತ್ತವೆ.
ಸಮುದ್ರ ಕುದುರೆ (ಸೀ ಹಾರ್ಸ್) :
ಹೆಣ್ಣು ಸಿ ಹಾರ್ಸ್ ಗಂಡು ಸಿ ಹಾರ್ಸ್ ನ ದೇಹದಲ್ಲಿರುವ ಚೀಲದಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಸುಮಾರು ೪೫ ದಿನಗಳವರೆಗೂ ಗಂಡು ಸಿ ಹಾರ್ಸ್ ಮೊಟ್ಟೆಗಳನ್ನು  ಜೋಪಾನವಾಗಿ ಕಾಪಾಡುತ್ತದೆ. ೪೫ ದಿನಗಳ ನಂತರ ಮೊಟ್ಟೆಯೊಡೆದು ಹೊರಬರುತ್ತವೆ.
ಆರೋವನ ಮೀನು :
ಗಂಡು ಆರೋವನ ಮೀನು ತನ್ನ ಮರಿಗಳನ್ನು ಇತರ ಜೀವಿಗಳಿಂದ ರಕ್ಷಿಸುವ ಕ್ರಮ ನಿಜಕ್ಕೂ ಪ್ರಶಂಸನೀಯ. ಇತರೆ ಜೀವಿಗಳಿಂದ  ಅಪಾಯದ ಸೂಚನೆ ಕಂಡಾಗ ತನ್ನ ಮರಿಗಳನ್ನು ತನ್ನ ಬಾಯಿ ತಗೆದು ಬಾಯಿಯ ಒಳಗೆ ಆಶ್ರಯ ನೀಡುತ್ತದೆ. ಒಮ್ಮೆ ಸುರಕ್ಷಿತ ಎನ್ನುವವರೆಗೂ ಅವುಗಳನ್ನು ಕಾಪಾಡುತ್ತದೆ.
ಕಪ್ಪೆ :
ನೀರಿನಲ್ಲಿರುವ ಗಂಡು ಕಪ್ಪೆಗಳು  ತಮ್ಮ ಮರಿಗಳನ್ನು ಹೆಚ್ಚಾಗಿ ತಮ್ಮ ಬಾಯಿಯಲ್ಲಿ ಇಟ್ಟುಕೊಂಡು ರಕ್ಷಿಸುತ್ತವೆ. ಕೆಲವೊಂದು ಜಾತಿಯ ಕಪ್ಪೆಗಳು ತಮ್ಮ ಬೆನ್ನ ಮೇಲೆ ಮರಿಗಳನ್ನು ಸಲಹುತ್ತವೆ.

ಹೇಯ್, ಬುಲ್‌ ಬುಲ್‌ ಮಾತಾಡಕ್ಕಿಲ್ವಾ

 

” ಹೇಯ್, ಬುಲ್‌ ಬುಲ್‌ ಮಾತಾಡಕ್ಕಿಲ್ವಾ” ಅಂದಾಕ್ಷಣ, ತಕ್ಷಣ ನೆನಪಿಗೆ ಬರೋದೇ  ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಯಶಸ್ವೀ ಚಿತ್ರ ‘ನಾಗರಹಾವು’. ರೇಬಲ್ ಸ್ಟಾರ್ ಅಂಬರೀಶ್ ನಟಿ ಆರತಿಯನ್ನು ಅಡ್ಡಗಟ್ಟಿ ತನ್ನ ಕಡೆ  ಸೆಳೆಯಲು ಹೇಳಿದ ಮಾತಿದು. ಮುಂದೆ ಏನಾಯಿತು ನಿಮಗೆ ತಿಳಿದೇ ಇದೆ. ಅಂಬರೀಶ್ ರವರು ಆರತಿಯವರನ್ನು ಬುಲ್ ಬುಲ್ ಹಕ್ಕಿ ಹೋಲಿಸಿ ಮೇಲಿನ ಮಾತನ್ನು ಆಡುತ್ತಾರೆ.ಇಂದು ಇದೆ ಮಾತು ಪಡ್ಡೆ ಹುಡುಗರ ನಾಲಿಗೆಯ ಮೇಲೆ ಯಾವುದಾದರು ಹುಡುಗಿ ಎದುರಿಗೆ ಹೋದರೆ ಸಾಕು  ಅ ಹುಡುಗಿಯನ್ನು ಕುರಿತು ಹೇಳುವ ನುಡಿಗಟ್ಟು ಆಗಿದೆ .
ಒಂದು ಗಂಡು ಒಂದು ಹೆಣ್ಣನ್ನು ತನ್ನ ಕಡೆ ಆಕರ್ಷಿಸಲು ಏನೆಲ್ಲ ಮಾಡುತ್ತಾನೆ ಅಂತ ನಿಮಗೆ ತಿಳಿದೇ ಇದೆ. ನಿಮಗೆ ಅನುಭವವಿದ್ದಲ್ಲಿ  ನೀವು ಸಹ ಏನು ಮಾಡಿರುತ್ತೀರ ಅಂತ ಒಮ್ಮೆ ಫ್ಲಾಶ್ ಬ್ಯಾಕ್ ಗೆ ಹೋಗಿ ಬನ್ನಿ. ಹಾಗೆ ನಮ್ಮ ಪಕ್ಷಿಗಳ ಲೋಕದಲ್ಲಿ ಸಹ ಗಂಡು ಹೆಣ್ಣನ್ನು ಆಕರ್ಷಿಸಲು ಮಾಡುವ ಕಸರತ್ತುಗಳು ಮಾನವನನ್ನೇ ನಾಚಿಸುತ್ತವೆ. ಬನ್ನಿ ವಿಸ್ಮಯ ಜಗತ್ತಿನ ಇಂದಿನ ಲೇಖನವನ್ನು ಸವಿಯೋಣ.
ಸಾವಿರಾರು ಕಣ್ಣುಗಳ ಸರದಾರ , ನಮ್ಮ ರಾಷ್ಟ್ರ ಪಕ್ಷಿ ನವಿಲು ನಿಮಗೆ ತಿಳಿದೇ ಇದೆ . ಗಂಡು ನವಿಲು ಹೆಣ್ಣು ನವಿಲನ್ನು ಆಕರ್ಷಿಸಲು ಬಳಸುವ ಅಸ್ತ್ರವೇ ತನ್ನ ಆಕರ್ಷಕವಾದ ರೆಕ್ಕೆಗಳು, ಒಮ್ಮೆ ಗಂಡು ನವಿಲು ತನ್ನ ರೆಕ್ಕೆಗಳನ್ನು ಸಂಪೂರ್ಣ ಫ್ಯಾನ್ ಆಕಾರದಲ್ಲಿ ನಿಲ್ಲಿಸಿದಾಗ, ಹೆಣ್ಣು ನವಿಲಿಗೆ ಇಷ್ಟವಾದರೆ ಹೆಣ್ಣು ನವಿಲು ತನ್ನ ದೇಹವನ್ನು ಒಮ್ಮೆ ಜೋರಾಗಿ ಕುಣಿಸಿ ತನ್ನ ಸಮ್ಮತಿ ಸೂಚಿಸುತ್ತದೆ.
ನಾವು ಮತ್ತೊಬ್ಬರನ್ನು ಬಯ್ಯುವಾಗ ಬಳಸುವ ಪದ ಗೂಬೆ. ನಿಮಗೆ ಗೊತ್ತಾ ,ಯಾವಾಗಲು ಗೂಬೆಗಳಿಗೆ ಹೆಚ್ಚಾಗಿ ಭಯವೇ ಅವರಿಸಿರುತ್ತವೆ. ಗಂಡು ಗೊಬೆ ಹೆಣ್ಣು ಗೊಬೆಯನ್ನು ಆಕರ್ಷಿಸಲು ಆಹಾರವನ್ನು ಹೆಣ್ಣು ಗೂಬೆಯ ಸಮೀಪ ಇಡುತ್ತವೆ. ಹೆಣ್ಣು ಗೂಬೆಗೆ ಭಯ ಹೆಚ್ಚು. ಅದು ದೊರದಲ್ಲಿಯೇ ಇರುತ್ತದೆ.  ಹೆಣ್ಣು ಗೊಬೆ ತನ್ನ ಭಯವೆಲ್ಲ ನಿವಾರಣೆಯಾದ ಮೇಲೆ  ನಿಧಾನವಾಗಿ ಆಹಾರವನ್ನು ತಗೆದುಕೊಳ್ಳುತ್ತದೆ. ಹೀಗೆ ಗಂಡು ಹೆಣ್ಣನ್ನು ಆಕರ್ಷಿಸುತ್ತದೆ.  
ಇನ್ನು ಹಮ್ಮಿಂಗ್ ಬರ್ಡ್ ಪಕ್ಷಿಗಳನ್ನು ತಗೆದು ಕೊಳ್ಳೋಣ ,  ಹಮ್ಮಿಂಗ್ ಬರ್ಡ್ ಹಕ್ಕಿಗಳಲ್ಲಿ ಸಹ ಹೆಣ್ಣು ಗಂಡನ್ನು ಜೀವನ ಸಂಗಾತಿಯಾಗಿ ಸ್ವೀಕರಿಸುವ ಕ್ರಮ ಸಹ ನಮ್ಮನ್ನು ಅಚ್ಚರಿ ಮೂಡಿಸುತ್ತದೆ. ಹಮ್ಮಿಂಗ್  ಬರ್ಡ್ ಅಷ್ಟು ಸಮಾಜಮುಖಿ  ಪಕ್ಷಿಯಲ್ಲ. ಅದು ಗುಂಪಾಗಿ ವಾಸಿಸುವ ಸಂಪ್ರದಾಯ ಇಟ್ಟುಕೊಂಡಿಲ್ಲ. ಹೆಣ್ಣು ಹಕ್ಕಿ , ಗಂಡು ಹಕ್ಕಿಯನ್ನು ಆರಿಸಿ ಕೊಳ್ಳುವ ಸಂದರ್ಭದಲ್ಲಿ ಸುಮಾರು ೧೦೦ ಗಂಡು ಹಕ್ಕಿಗಳು ಒಂದು ಕಡೆ ಸೇರಿ ಕೊಳ್ಳುತ್ತವೆ. ಆಗ ಹೆಣ್ಣು ಹಕ್ಕಿ ಯಾವುದಾದರೂ ಗಂಡನ್ನು ಇಷ್ಟ ಪಟ್ಟರೆ. ಗಂಡು ಹಕ್ಕಿ ಆಕಾಶದಲ್ಲಿ ಹಾರಾಡುತ್ತ ಗಾಳಿಯಲ್ಲಿ ನರ್ತನ ಮಾಡಬೇಕು. ಆಗ ಗಂಡು ಹಕ್ಕಿ ಹೆಣ್ಣಿಗೆ ಒಲಿಯುತ್ತದೆ.
ರಾಜಹಂಸ ಪಕ್ಷಿಗಳಲ್ಲಿ ಸಹ ಹೆಣ್ಣು ಗಂಡನ್ನು ಆಯ್ಕೆ ಮಾಡುತ್ತದೆ. ಇಲ್ಲಿ ವಿಚಿತ್ರವೆಂದರೆ ಹೆಣ್ಣು ಗಂಡು ಜೊತೆಯಲ್ಲಿ  ಕೆಲ ಸಮಯ ಕಳೆಯುತ್ತವೆ, ಸಂತಾನವಾದರೆ ಸರಿ. ಇಲ್ಲದಿದ್ದರೆ ಹೆಣ್ಣು ರಾಜಹಂಸ ಮತ್ತೊಂದು ಗಂಡು ಹಕ್ಕಿಯನ್ನು ಹುಡುಕುತ್ತದೆ.
ಮಿಂಚುಳ್ಳಿ ಅಲಿಯಾಸ್ ಕಿಂಗ್ ಫಿಷರ್ ಪಕ್ಷಿಗಳಲ್ಲಿ ಹೆಣ್ಣು ಪಕ್ಷಿಗಳು ಗಂಡು ಪಕ್ಷಿಗಳಿಗೆ ಅಷ್ಟು ಸುಲಭವಾಗಿ ಒಲಿಯುವುದಿಲ್ಲವಂತೆ. ಅದಕ್ಕೊಂದು ಉದಾಹರಣೆ ಇಲ್ಲಿದೆ
ಒಮ್ಮೆ  ಒಂದು ಗಂಡು ಮಿಂಚುಳ್ಳಿ ನದಿಯ ದಡದಲ್ಲಿದ್ದ ಹೆಣ್ಣು ಮಿಂಚುಳ್ಳಿಯನ್ನು ಒಲಿಸಲು ಬಂದಿತು. ಅದೇ ಸಮಯಕ್ಕೆ ಇನ್ನೆರಡು ಗಂಡು ಮಿಂಚುಳ್ಳಿಗಳು  ಅಲ್ಲಿಗೆ ಆಗಮಿಸಿದವು. ಮೊದಲು ಬಂದ ಗಂಡು ಮಿಂಚುಳ್ಳಿ ಅಲ್ಲಿಗೆ ಬಂದಿದ್ದ ಇನ್ನೆರಡು ಗಂಡು ಮಿಂಚುಳ್ಳಿಗಳನ್ನು ಅಲ್ಲಿಂದ ಓಡಿಸಿದರೆ ಮಾತ್ರ ತನ್ನ ಲವ್ ಲೈಫ್ ಆರಂಭವಾಗಬಹುದೆಂಬ  ಆಶಯದೊಂದಿಗೆ ಅವುಗಳ ಜೊತೆ ಸಮರ ಹೊಡಿತು . ಕಡೆಗೂ  ತನ್ನ ಒಂದೆರಡು ರೆಕ್ಕೆ ಪುಕ್ಕಗಳನ್ನು ಕಳೆದುಕೊಂಡರು ವೀರಾವೇಶದಿಂದ ಹೋರಾಡಿ ಉಳಿದ ಎರಡು ಗಂಡು ಹಕ್ಕಿಗಳನ್ನು ಓಡಿಸಿತು.
ತನ್ನ ಪರಾಕ್ರಮವನ್ನು ಹೆಣ್ಣು ಮಿಂಚುಳ್ಳಿ ಮೆಚ್ಚಿದೆ ಎನ್ನುವ ಭಾವನೆಯಿಂದ ಗಂಡು ಹೆಣ್ಣು ಮಿಂಚುಳ್ಳಿ ಹತ್ತಿರ ಹೋದಾಗ. ಹೆಣ್ಣು ಮಿಂಚುಳ್ಳಿ ಅದರ ಕಡೆಗೆ ತಿರುಗಿಯೂ ನೋಡಲಿಲ್ಲ.
ಆದರೆ ಗಂಡು ಮಿಂಚುಳ್ಳಿ ತಾನು ಹೆಣ್ಣು ಮಿಂಚುಳ್ಳಿಯನ್ನು ಒಲಿಸಿ ಕೊಳ್ಳಲೇಬೇಕು ಎನ್ನುವ ಒಂದೇ ಹಠದೊಂದಿಗೆ  ತನ್ನ ಪ್ರಯತ್ನವನ್ನು ಮುಂದುವರೆಸಿತ್ತು.
ಗಂಡು ಮಿಂಚುಳ್ಳಿ ಶರವೇಗದಲ್ಲಿ ನೀರಿನ ಒಳಗೆ ಹಾರಿ ಒಂದು ಮೀನನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹೆಣ್ಣು ಮಿಂಚುಳ್ಳಿಗೆ ಸಮರ್ಪಿಸಿತು. ಹೆಣ್ಣು ಮಿಂಚುಳ್ಳಿ ಯಾವುದೇ  ಭಾವನೆಯನ್ನು ವ್ಯಕ್ತಪಡಿಸದೆ ಸುಮ್ಮನೆ ಇರುವುದನ್ನು ಕಂಡ ಗಂಡು ಮತ್ತೆ ನೀರಿಗೆ ಜೀಗಿದು ಮತ್ತೊಂದು , ಮತ್ತೆ ಮಗದೊಂದು ಎಂಬಂತೆ  ೩೦ ಮೀನು ಹಿಡಿದು ಹೆಣ್ಣಿನ ಮುಂದೆ ಗುಡ್ಡೆ ಹಾಕಿತು. ಕಡೆಗೆ ಹೆಣ್ಣು ಮಿಂಚುಳ್ಳಿಗೆ ತೃಪ್ತಿಯಾಯಿತು. ಗಂಡು ಮಿಂಚುಳ್ಳಿ ತಂದ ಒಂದು ಮೀನನ್ನು ಹೆಣ್ಣು ಕಚ್ಚಿಕೊಂಡು ಹಾರ ತೊಡಗಿತು. ಗಂಡು ಮಿಂಚುಳ್ಳಿ ಅದನ್ನು ಹಿಂಬಾಲಿಸಿ ಅದರ ಸ್ನೇಹವನ್ನು ಸಂಪಾದಿಸಿತು
ಅಬ್ಬಾ  ಹಕ್ಕಿಗೆ ಕಾಳು ಹಾಕೋದು ಅಂದರೆ ಎಷ್ಟು ಕಷ್ಟ ಅಂತ ಈಗ ಗೊತ್ತಾಯ್ತ ?      
ನಿಮಗೆ ಗೊತ್ತ ಮಾನವ ಜನ್ಮದಲ್ಲಿ ಅತ್ಯಂತ ಸುಂದರ ಎಂದರೆ ಹೆಣ್ಣು,  ಹಾಗೆ  ಪಶು ಪಕ್ಷಿಗಳಿಗೆ ಇದು ಅನ್ವಯವಾಗುವುದಿಲ್ಲ. ಪ್ರಕೃತಿಯಲ್ಲಿ  ಗಂಡೇ ಸುಂದರ..

ನಾವು ಬುದ್ದಿವಂತರ,

” ಅಬ್ಬಾ! ಎಷ್ಟು ಬುದ್ದಿವಂತಿಕೆಗೆ ಇದೆ ಇದೆಕ್ಕೆ. ಪ್ರತಿಸಲ ಎಷ್ಟೇ ಪ್ರಯತ್ನಿಸಿದರು ನನಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತದೆ. ಆದರೆ ನನಗೆ ನಂಬಿಕೆ ಇದೆ. ಒಂದು ದಿನ ನಾನು ಹಿಡಿದೆ ಹಿಡಿಯುತ್ತೇನೆ  ” ಅಂತ ಹೇಳಿದವರು ಯಾರು ಗೊತ್ತೇ .
ಮತ್ತಾರು ಅಲ್ಲ ಖ್ಯಾತ ಬೇಟೆಗಾರ ಹಾಗು ಕಾದಂಬರಿಕಾರ ಜಿಮ್ ಕಾರ್ಬೆಟ್.
ಯಾರ ಬಗ್ಗೆ ಅಂತಹ  ಹೇಳಿಕೆ ನೀಡಿದ್ದಾರೆ ಅಂತ ಗೊತ್ತ?.
ಸುಮಾರು ೮ ವರ್ಷಗಳ ಅಂತರದಲ್ಲಿ ರುದ್ರಪ್ರಯಾಗದ ಐದು ನೂರು ಮೈಲಿ ಪ್ರದೇಶದಲ್ಲಿ ನೂರಾರು ಜನರ ಕಗ್ಗೊಲೆ ಮಾಡಿ, ಯಾವ ಬೇಟೆಗಾರನ ಕೋವಿಗು ಬಲಿಯಾಗದೆ ತನ್ನ ಶಿಕಾರಿಯನ್ನು ನಿರ್ಭಯವಾಗಿ ಬೇಟೆಯಾಡುತ್ತ ತನ್ನ ಚಾಣಾಕ್ಷತನ ತೋರಿದ ಚಿರತೆಯ ಬಗ್ಗೆ.
ನಾಳೆ  ಎಂಬುದು ಎಲ್ಲರಿಗೂ ಇರುತ್ತದೆ ಆದರೆ ನಾಳೆ ಎಂಬ ಭವಿಷ್ಯದ ದರ್ಶನವೇ ಅನುಮಾನವಾಗಿರುವ ಸಂದರ್ಭದಲ್ಲಿ ಜೀವದ ಹಂಗು ತೊರೆದು ಅ ಜಾಣ ಚಿರತೆಯನ್ನು ಕಟ್ಟ ಕಡೆಗೆ ಮಟ್ಟ ಹಾಕುವ ಜಿಮ್ ಕಾರ್ಬೆಟ್ ಅವರ ಸಾಹಸವನ್ನು ಹಾಗು ಜಿಮ್ ಕಾರ್ಬೆಟ್ ಅವರ ಪ್ರತಿ ತಂತ್ರವನ್ನು ವಿಫಲಗೊಳಿಸುವ ಚಾಣಾಕ್ಷ ನರಭಕ್ಷಕ ಅಪರಿಮಿತ ಬುದ್ದಿಯನ್ನು ಒಮ್ಮೆ  ” ರುದ್ರಪ್ರಯಾಗದ ನರಭಕ್ಷಕ ” ಕೃತಿಯನ್ನು ಓದಿದವರಿಗೆ ಮಾತ್ರ ತಿಳಿಯುತ್ತದೆ. 
ಬುದ್ದಿಶಕ್ತಿ ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ ಅದು ಪ್ರಾಣಿ ಪಕ್ಷಿಗಳಿಗೂ ಸಹ ಇದೆ. ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲೇ ನಮ್ಮನ್ನೇ ಬೆರಗುಗೊಳಿಸುವಂತಹ ಸನ್ನಿವೇಶಗಳನ್ನು ಒಮ್ಮೆ ನೋಡೋಣ ಬನ್ನಿ. 
ಇಲಿ :
ವಿದ್ಯಾದೇವತೆ ಗಣೇಶನ ವಾಹನ ಅಂದರೆ ಕೇಳಬೇಕು ನನಗು ಸಹ ಬುದ್ದಿ ಕೊಟ್ಟಿದ್ದಾನೆ ನನ್ನ ಒಡೆಯ ಅಂತ ಹೆಮ್ಮೆಯಿಂದ ತನ್ನ ಬುದ್ದಿವಂತಿಕೆಯನ್ನು ಪ್ರದರ್ಶಿಸುತ್ತದೆ ಇಲಿ.
ಟಾಮ್ ಅಂಡ್ ಜೆರ್ರಿ ನೋಡಿದವರಿಗೆ ಸ್ಮಾರ್ಟ್ ಜೆರ್ರಿ ತನ್ನ ಬುದ್ದಿವಂತಿಕೆಯಿಂದ ಟಾಮ್ಗೆ ಹೇಗೆ ಚೆಳ್ಳೆ ಹಣ್ಣು ತಿನಿಸುವುದನ್ನು ನೀವು ನೋಡಿದ್ದೀರ. ನಿಜ ಹೇಳಬೇಕೆಂದರೆ ಇಲಿಗಳು ಅತ್ಯಂತ ಬುದ್ದಿವಂತ  ಪ್ರಾಣಿಗಳು . ಬೇರೆ ಇಲಿಗಳು ಅಪಾಯದಲ್ಲಿ  ಸಿಲುಕಿದರೆ ಅವಗಳನ್ನು ಬಿಡಿಸುವ ಪ್ರಯತ್ನವನ್ನು ಮಾಡುತ್ತವೆ. ಇದಲ್ಲದೆ ಸುಲಭದ ಮಾರ್ಗವನ್ನು,  ತಪ್ಪುಗಳನ್ನು ಹುಡುಕುವ ಬುದ್ದಿ ಇಲಿಗಳಿಗೆ ಇವೆ. 
ಪಾರಿವಾಳ :
ಹಿಂದೆ ಅಂಚೆ ರಾಜಮಹಾರಾಜರ ಸಮಯದಲ್ಲಿ ಪಾರಿವಾಳಗಳನ್ನು ಸಂದೇಶ/ಪತ್ರಗಳನ್ನು ಕಳುಹಿಸಲು ಬಳಸುತ್ತಿದ್ದರು. ೧೯೯೦ರಲ್ಲಿ ಬಿಡುಗಡೆಯಾದ   ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ನಟನೆಯ ” ಮೈನೆ ಪ್ಯಾರ್ ಕಿಯಾ” ಚಿತ್ರದಲ್ಲಿ  ಸಂದೇಶ ರವಾನೆ ಮಾಡಲು ಪಾರಿವಾಳಗಳನ್ನು ಬಳಕೆ ಮಾಡಿದ್ದು ನಿಮಗೆಲ್ಲ ನೆನಪಿದೆಯಲ್ಲವೇ. ಪಾರಿವಾಳಗಳಿಗೆ ನೂರಾರು ವರ್ಷಗಳ ಹಳೆಯ ಚಿತ್ರಗಳನ್ನು ಸಹ ನೆನಪಿನಲ್ಲಿ ಇಟ್ಟು ಕೊಂಡು ಗುರುತಿಸುವ ಶಕ್ತಿ ಇದೆ.   ಇದೆ ಕಾರಣಕ್ಕಾಗಿ ಅವುಗಳನ್ನು ಸಂದೇಶ ರವಾನೆಯಲ್ಲಿ ಬಳಸುತ್ತಿದ್ದರು. 
ಒಮ್ಮೆ ಇಂಗ್ಲೆಂಡ್ನಲ್ಲಿ ಒಬ್ಬ ಹುಡುಗ ಒಂದು ಪಾರಿವಾಳವನ್ನು ಬಹಳ ಮುದ್ದಿಸುತ್ತಿದ್ದ ಒಮ್ಮೆ ಆತನಿಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಸೇರಿಸಿದರು. ಒಂದು ದಿನ ಅ ಹುಡುಗ ಆಸ್ಪತ್ರೆಯಲ್ಲಿ  ಇದ್ದಾಗ ಯಾರು ಕಿಟಕಿಯ ಗಾಜನ್ನು ಯಾರು ಕುಕ್ಕುವ ಸದ್ದು ಅವನಿಗೆ ಕೇಳಿಸಿತು. ಕಿಟಕಿ ತೆರೆದಾಗ ಕಂಡದ್ದು ತಾನು ಮುದ್ದಿಸುತ್ತಿದ್ದ ಪಾರಿವಾಳ.  

ಕಾಗೆ :
ಬಾಲ್ಯದಲ್ಲಿ ನೀವೆಲ್ಲರೂ ಬಾಯಾರಿದ ಕಾಗೆ ಕಥೆಯನ್ನು ಕೇಳಿರುತ್ತಿರ. ಕಾಗೆ ತನ್ನ ಕೊಕ್ಕುನ್ನು ಒಂದು ಸಾಧನವನ್ನಾಗಿ ಬಳಸುವ ಕುಶಲತೆಯನ್ನು ಮೈಗೂಡಿಸಿ ಕೊಂಡಿದೆ. ಇದಲ್ಲದೆ ಕಾಗೆ ತನ್ನ ಆಹಾರವನ್ನು ಪಡೆಯಲು ಉಪಕರಣಗಳನ್ನು ಸಹ ಬಳಸುವಷ್ಟು ಬುದ್ದಿವಂತಿಕೆಯನ್ನು ಬೆಳಸಿಕೊಂಡಿದೆ.  
ಆಕ್ಟೋಪಸ್ :
ಹಿಂದಿನ ಲೇಖನದಲ್ಲಿ ಆಕ್ಟೋಪಸ್ ನ ಬುದ್ದಿವಂತಿಕೆಯ ಬಗ್ಗೆ ಓದಿರುತ್ತೀರಿ . ಆಕ್ಟೋಪಸನ ನೆನಪಿನ ಶಕ್ತಿ ಅಗಾಧವಾದದು. ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಆಕ್ಟೋಪಸ್  ನಿಷ್ಣಾತ.
ಹಂದಿ :
ಗಲೀಜು ಅಂತ ಹೇಳಿದರೆ ಮೊದಲು ನೆನಪಿಗೆ ಬರುವ ಪ್ರಾಣಿ ಹಂದಿನೇ. ಆದರೆ ನಿಮ್ಮ ತೀರ್ಮಾನ ತಪ್ಪು. ಹಂದಿಗಳು ಯಾವಾಗಲು ಸ್ವಚ್ಛತೆಗೆ ಮಹತ್ವ ನೀಡುತ್ತದೆ. ಹಂದಿಗಳಲ್ಲಿ ಬೆವರುಗಳ ಗ್ರಂಥಿಗಳು ಇಲ್ಲದಿರುವ ಕಾರಣ ಅವು ತಮ್ಮ ದೇಹವನ್ನು ತಂಪಾಗಿಸಲು ತೇವಾಂಶವಿರುವ ಮಣ್ಣಿನಲ್ಲಿ    ಹೊರಳಾಡುತ್ತವೆ ಅಷ್ಟೇ.  ಆದರೆ ಒಂದು ಮಾತ್ರ ಸತ್ಯ ನೀವು ಅಪ್ಪಿ ಪಪ್ಪಿ ಕೊಡುವ ನಾಯಿ ಬೆಕ್ಕುಗಳಿಗಿಂತ ಹಂದಿ ಅತ್ಯಂತ ಶುಚಿಯಾಗಿರುವ ಪ್ರಾಣಿ . ಈಗ ನಾಯಿ , ಬೆಕ್ಕುಗಳಿಗೆ ಅಪ್ಪಿ ಪಪ್ಪಿ ಕೊಡುವ ಯೋಚನೆಯನ್ನು ಒಮ್ಮೆ ಪರಿಶೀಲಿಸುವ ಅಗತ್ಯ ಇದೆ . ಇದಲ್ಲದೆ ಹಂದಿಗಳಿಗೆ ನಮ್ಮಂತೆ ಭಾವನೆಗಳಿವೆ
ಬೆಕ್ಕು :
ಬುದ್ದಿವಂತಿಕೆ ಅನ್ನೋದು ಇಲಿಗೆ ಮಾತ್ರವಲ್ಲ  ಬೆಕ್ಕುಗು ಸಹ ಇದೆ.  ಬೆಕ್ಕು ಕೇವಲ ಅನುಕರಣೆ ಮತ್ತು ನೋಟದಿಂದ ಎಲ್ಲವನ್ನು ಕಲಿಯುವ ಬುದ್ದಿವಂತಿಕೆ ಇದೆ.  ಆದರೆ ನಾಯಿಗೆ ಇರುವಷ್ಟು ಬುದ್ದಿವಂತಿಕೆ ಬೆಕ್ಕಿಗೆ ಇಲ್ಲ.  ನೀವು ನಾಯಿ ಮತ್ತು ಬೆಕ್ಕಿಗೆ ಒಂದೇ ಸಮಯದಲ್ಲಿ ಒಟ್ಟಿಗೆ ತರಬೇತಿ ಕೊಟ್ಟರೆ ನಾಯಿ ಬೇಗ ಕಲಿಯುತ್ತದೆ.

ಅಳಿಲು :
ಅಳಿಲುಗಳು ತಮ್ಮ ಆಹಾರವನ್ನು ಸಂರಕ್ಷಿಸುವ ವಿಧಾನದಲ್ಲಿ ಮೆರೆಯುವ ಬುದ್ದಿವಂತಿಕೆ ಮಾನವನನ್ನು ನಾಚಿಸುತ್ತದೆ. ಅದು ತನ್ನ ಆಹಾರವನ್ನು ಒಂದೇ ಜಾಗದಲ್ಲಿ ಬಚ್ಚಿಡುವುದಿಲ್ಲ. ಇನ್ನೊಬ್ಬರಿಗೆ ದಾರಿ ತಪ್ಪಿಸಿ ಬಚ್ಚಿಡುತ್ತದೆ.

ಇರುವೆ:
ಇರುವೆಗಳು ಅಪಾಯದ  ಸೂಚನೆ ಕಂಡು ಬಂದರೆ ತಾವು ಸಂಗ್ರಹಿಸಿದ ಆಹಾರವನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸುವ ಚಾಣಕ್ಷತೆ ಹೊಂದಿವೆ. ಇದಲ್ಲದೆ ಆಹಾರವನ್ನು ಸಂಸ್ಕರಿಸಿ ಕೆಡದಂತೆ ಇಡುವುದನ್ನು ಸಹ ಕಲಿತು ಕೊಂಡಿವೆ. 
ಅನೆ :
ದೊಡ್ಡ ಗಾತ್ರದ ಮೆದುಳನ್ನು ಹೊಂದಿರುವ ಪ್ರಾಣಿ ಎಂದರೆ ಅನೆ. ಅದಲ್ಲದೆ ನಮ್ಮ ಗಣೇಶನಿಗೆ ನಮ್ಮ ಪುರಾಣವು ತೋಡಿಸಿದ್ದು ಆನೆಯ ಮುಖವನ್ನೇ. ಅನೆ ಶಕ್ತಿ.  ಬುದ್ದಿವಂತಿಕೆಗೆ ಹೆಸರಾದ ಪ್ರಾಣಿ ಅದ್ದರಿಂದ ಹಿಂದೆ ಯುದ್ಧಗಳಲ್ಲಿ ಬಳಸುತ್ತಿದ್ದರು. ಆನೆಗಳ ಬುದ್ದಿವಂತಿಕೆ ನೋಡಲು ಬಯಸಿದರೆ ಒಮ್ಮೆ ಶಿವಮೊಗ್ಗೆಯ ಸಕ್ರೆ ಬೈಲು ಅನೆ ಬಿಡಾರಕ್ಕೆ ನೀವು ಭೇಟಿ ನೀಡಲೇ ಬೇಕು. ಆನೆಗಳು ತಮ್ಮ ಆಹಾರವನ್ನು ತಿನ್ನುವುದಕ್ಕೆ ಮುನ್ನ ಶುದ್ದ ಪಡಿಸುತ್ತವೆ. ಇದಲ್ಲದೆ ಉಪಕರಣಗಳನ್ನು ಬಳಸುವ ಕಲೆಯು ಸಹ ಆನೆಗೆ ಗೊತ್ತು . ದೊಡ್ಡ ಕಿವಿ ಮತ್ತು ದೊಡ್ಡ ಗಾತ್ರದ ಮೆದುಳು ಇರುವುದರಿಂದ ಆನೆಗಳಿಗೆ ನೆನಪಿನ ಶಕ್ತಿ ಉತ್ತಮವಾಗಿದೆ.   
ಚಿಂಪಾಂಜಿ :
ಮನುಷ್ಯನಿಗೂ ಚಿಂಪಾಂಜಿಗಳ ಜೀನ್ಗಳಲ್ಲಿನ ವ್ಯತ್ಯಾಸ ಕೇವಲ ಒಂದೇ ಪೆರ್ಸೆಂಟ್ ಎಂದು ನಿಮಗೆ ತಿಳಿದೇ ಇದೆ ಅದ್ದರಿಂದ ಮಾನವ ಮಾಡುವ ಎಲ್ಲ ಕೆಲಸಗಳನ್ನು ಚಿಂಪಾಂಜಿಗಳು ಮಾಡುತ್ತವೆ. ಇರುವ ವಸ್ತುಗಳನ್ನು ಬಳಸಿ ಉಪಕರಣಗಳನ್ನು ಮಾಡುತ್ತವೆ. ಮತ್ತೊಂದು  ಚಿಂಪಾಂಜಿಯ ಜೊತೆ ಸಂಜ್ಞೆ ಮತ್ತು ಸೂಚನೆಗಳ ಸಹಾಯದಿಂದ  ಸಂಭಾಷಣೆಯಲ್ಲಿ ತೊಡಗುತ್ತವೆ. ಇದಲ್ಲದೆ ಅತ್ಯಂತ ಕಷ್ಟವಾದ ಸಮಸ್ಯೆಗಳನ್ನು ಬಗೆಹರಿಸುವ ಬುದ್ದಿವಂತಿಕೆ ಚಿಂಪಾಂಜಿಗೆ ಇದೆ. ಸಂಖ್ಯಾ ಶಾಸ್ತ್ರದ ಪರೀಕ್ಷೆಯಲ್ಲಿ  ಮಾನವನನ್ನು ಚಿಂಪಾಂಜಿ  ಸೋಲಿಸಿದ ನಿದರ್ಶನವಿದೆ.
ಡಾಲ್ಫಿನ್ :
ಡಾಲ್ಫಿನ್ಗಳು ಸಹ ಮತ್ತೊಂದು ಡಾಲ್ಫಿನ್ ಗೆ  ತಮ್ಮದೇ ಅದ  ಭಾಷೆ  ಮೂಲಕ ಸಂಭಾಷಣೆಯಲ್ಲಿ ತೊಡಗುತ್ತವೆ. ಇದಲ್ಲದೆ ಅವುಗಳು ಸಮುದ್ರದಲ್ಲಿ ನಾವೆಗಳು ಸಾಗುವ ದಾರಿಯಲ್ಲಿ ಅಪಾಯವಿದ್ದರೆ ಅವುಗಳು ನಾವಿಕರಿಗೆ ತಮ್ಮದೇ ಅದ ಭಾಷೆಯಿಂದ ವ್ಯಕ್ತಪಡಿಸುತ್ತವೆ. 

ನಾಯಿ
ನಿಯತ್ತಿಗೆ ನಾವು ಹೋಲಿಸುವ ಪ್ರಾಣಿ ನಾಯಿ. ಕಾರಣ ಇಷ್ಟೇ ನಾಯಿಗಳು ತನ್ನ ಆತ್ಮೀಯರೇ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಬುದ್ದಿವಂತಿಕೆ ಹೊಂದಿವೆ . ಇದಲ್ಲದೆ ಮುಂಬರುವ ಅಪಾಯವನ್ನು ಯೋಚಿಸಿ ಅದನ್ನು ನಿಭಾಯಿಸುವ ಚಾಣಾಕ್ಷ ಬುದ್ದಿವಂತಿಕೆ ಹೊಂದಿವೆ.  

ಮಿಸ್ ಬೇಕರ್(ಮಂಗ) , ಲೈಕಾ(ನಾಯಿ), ಹ್ಯಾಮ್ ಮತ್ತು  ಯೇನುಸ್ (ಚಿಂಪಾಂಜಿ )ಗಳನ್ನು ಮಾನವ ತನಗಿಂತ ಮೊದಲೇ ಅಂತರಿಕ್ಷಕ್ಕೆ ಏಕೆ ಕಳುಹಿಸಿದ ಎಂದು. ಅವುಗಳ ಬುದ್ದಿವಂತಿಕೆಯ ಮೇಲೆ ನಂಬಿಕೆ ಇಟ್ಟು ಹೊರತು ಇನ್ನಾವ ಉದ್ದೇಶದಿಂದ ಅಲ್ಲ.  


ನಮಗಿಲ್ಲದ ಶಕ್ತಿಗಳು

ಒಂದು ಊರು,  ಊರಿಗೆ ಒಬ್ಬ ಗೌಡ , ಅವರ ಮನೇಲಿ ಒಂದು ನಾಯಿ ಸಾಕಿದ್ದರು ಅದರ ಹೆಸರು ‘ ಮೋತಿ ‘ ಅಂತ . ಒಮ್ಮೆ ಕಳ್ಳರು  ಗೌಡರು ಮನೇಲಿ ಇಲ್ಲದಿರುವ ಸಮಯದಲ್ಲಿ ಮನೆಗೆ ಕಣ್ಣ  ಹಾಕಿ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕದ್ದು ಅವರ ಸ್ಥಳಕ್ಕೆ ತಗೆದುಕೊಂಡು ಹೋಗಿ ಒಂದು ಕಡೆ ಬಚ್ಚಿಟ್ಟು ಅಲ್ಲಿಂದ ನಿರ್ಗಮಿಸುತ್ತಾರೆ. ಆಗ ಗೌಡರ  ನಾಯಿ ಮೋತಿಯು  ಯಾರಿಗೂ ಗೊತ್ತಾಗದ ಹಾಗೆ ಕಳ್ಳರನ್ನು ಹಿಂಬಾಲಿಸಿ . ಕಳ್ಳರು ಕದ್ದ ವಸ್ತುಗಳನ್ನು ಬಚ್ಚಿಟ್ಟ ಸ್ಥಳವನ್ನು ನೋಡಿ ಮನೆಗೆ ಹಿಂತಿರುತ್ತದೆ. ಅಷ್ಟರೊಳಗೆ ಗೌಡರ ಮನೆಯು ಕಳ್ಳತನವಾಗಿರುವ ಸುದ್ದಿ ಊರಿಗೆಲ್ಲ ತಿಳಿದಿರುತ್ತದೆ. ಆಗ ಮೋತಿಯು ಗೌಡರ ಪಂಚೆ ಹಿಡಿದು ಕಳ್ಳರು ಬಚ್ಚಿಟ್ಟಿರುವ ಗೌಡರ ವಸ್ತುಗಳು ಇರುವ ಸ್ಥಳದ ಕಡೆಗೆ ಕರೆದು ಕೊಂಡು ಹೋಗಿ ತೋರಿಸುತ್ತದೆ. ಮೋತಿಯ ಜಾಣತನವನ್ನು  ಮೆಚ್ಚಿದ ಗೌಡರು ಮೋತಿಗೆ ಕೃತಜ್ಞತೆ ಸಲ್ಲಿಸುತ್ತಾರೆ.
ಈ ಕಥೆಯನ್ನು ನೀವು ಶಾಲೆಯ ದಿನಗಳಲ್ಲಿ ಕೇಳಿರಬಹುದು ಎಂಬ ನಂಬಿಕೆ ನನಗೆ.
ತಾಯಿ ಕೋತಿ, ಮರಿ ಕೋತಿಯ ತೆಲೆಯಿಂದ ಅತ್ಯಂತ ಕಾಳಜಿಯಿಂದ  ಹೇನನ್ನು ತಗೆಯುತ್ತಿರುವುದನ್ನು ನೀವು ನೋಡಿರಬಹುದು. ಕೋಗಿಲೆ ಇಂಚರವನ್ನು ಕೇಳಿರಬಹುದು. ಕ್ರಿಕೆಟ್ , ಫುಟ್ ಬಾಲ್ ಆಡುವ ಆನೆಗಳ ಆಟವನ್ನು ಸವಿದಿರಬಹುದು. ಮಾತನಾಡುವ ಮುದ್ದಿನ ಗಿಳಿಯನ್ನು ಕಂಡು ಅನಂದಿಸಿರಬಹುದು. ತುತ್ತು ಅಗುಳು ಕಂಡರೆ ತನ್ನ ಬಳಗವನ್ನೆಲ್ಲ ಕರೆಯುವ ಕಾಗೆಯ ವಿಶಾಲ ಮನೋಭಾವವನ್ನು ಅಭಿನಂದಿಸಿರಬಹುದು. ತನ್ನ ಹೊಟ್ಟೆಯ ಚೀಲದಲ್ಲಿ ತನ್ನ ಮರಿಯನ್ನು ಸಲಹುವ ಕಾಂಗೊರೊವನ್ನು ನೋಡಿ ವಾತ್ಸಲ್ಯಕ್ಕೆ ಬೆರಗಾಗಿರಬಹುದು. ಸರ್ಕಸ್ನಲ್ಲಿ ಹುಲಿ, ಸಿಂಹ , ಚಿರತೆ ಕಾಡು ಪ್ರಾಣಿಗಳ ಸಾಹಸ ಮತ್ತು ಆರ್ಭಟಕ್ಕೆ ರೋಮಾಂಚನಗೊಂಡಿರಬಹುದು. ಅಲ್ಲದೇ ನಮ್ಮ ಪೂರ್ವಜರಾದ ಕಪಿಗಳನ್ನು ಜಾಣ್ಮೆಯನ್ನು ಕಂಡು ಪುಳುಕಿತರಾಗಿರಬಹುದು.
 ಮೇಲಿನ ಎಲ್ಲ ಸಂದರ್ಭಗಳನ್ನು ಒಮ್ಮೆ ಅವಲೋಕಿಸಿದರೆ ಮಾನವನಿಗೂ ಮತ್ತು ಪಶು ಪಕ್ಷಿಗಳಿಗೂ ಸಾಮ್ಯತೆ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಮ್ಮಲ್ಲಿ ಹೇಗೆ ಭಾವನೆಗಳು ಇವೆಯೋ ಹಾಗೆ ಪಶು ಪಕ್ಷಿಗಳಿಗೂ ಸಹ ಇವೆ. ನಿಮಗೆ ತಿಳಿದಿರಬಹುದು ಭಾರತದಲ್ಲಿ ಸುನಾಮಿ ಅಪ್ಪಳಿಸಿದಾಗ ಸಾವಿರಾರು ಜನರು ಜೀವ ಕಳೆದು ಕೊಂಡರು ಆದರೆ ಅಂಡಮಾನ್ ದ್ವೀಪದ ಪ್ರಾಣಿ ಪಕ್ಷಿಗಳಿಗೆ ಯಾವುದೇ ತೊಂದರೆಯಾಗಲಿಲ್ಲ. ಮಾನವನಿಗಿಲ್ಲದ ಶಕ್ತಿಗಳು ಇತರೆ ಜೀವ ಜಂತುಗಳಲ್ಲಿ ಇವೆ. ಬನ್ನಿ, ಪಶು ಪಕ್ಷಿಗಳ ವಿಸ್ಮಯ ಜಗತ್ತಿನ ಅನುಭವಗಳನ್ನು ಸವಿಯೋಣ.
ಒಮ್ಮೆ ಫ್ರಾನ್ಸ್ ದೇಶದ ಹಳ್ಳಿಯಲ್ಲಿ ಸಾಕು ಪ್ರಾಣಿಗಳು ಇದ್ದಕ್ಕಿದ್ದ ಹಾಗೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದವು. ಪ್ರಾಣಿಗಳ ವರ್ತನೆ ಕಂಡ ಅ ಊರಿನ ಬೆಸ್ತರು, ಯಾಕೋ ದಿನ ಚೆನ್ನಾಗಿಲ್ಲ ಅಂತ ಹೇಳಿ ಅಂದು ಸಮುದ್ರಕ್ಕೆ ಮೀನು ಹಿಡಿಯಲು ಹೋಗಲಿಲ್ಲ. ಅದೇ ದಿನ ಭಯಂಕರ ಚಂಡಮಾರುತ ಸಮುದ್ರದ ಮೇಲೆ ಹಾದು ಹೋಯಿತು. ಅಂದು ಅ ಊರಿನ ಬೆಸ್ತರು ಏನಾದರೂ ಮೀನು ಹಿಡಿಯಲು ಹೋಗಿದ್ದರೆ. ಜೀವಂತ ವಾಪಸು ಬರುತ್ತಿರಲಿಲ್ಲ.
ಹೀಗೆ ಒಮ್ಮೆ ಗ್ರೀಸ್ ದೇಶದ ಥೆಸೇಲಿ ಪಟ್ಟಣದ ಬಕ ಪಕ್ಷಿಗಳು ಸಹ ಒಮ್ಮೆಗೆ ಚಿರಾಡಲು ಆರಂಭಿಸಿದವು. ಕೆಲವರು ಅಪಾಯವಿದೆ ಎಂದು ಮನೆ ಬಿಟ್ಟು ಹೊರಗೆ ಬಂದರು, ಮತ್ತೆ ಕೆಲವರು ಏನು ಆಗದು ಎಂದು ಮನೆಯ ಒಳಗೆ ಉಳಿದರು. ಸ್ವಲ್ಪ ಸಮಯದಲ್ಲಿ ಭೂಕಂಪವಾಯಿತು ಮನೆಯಲ್ಲಿ ಇದ್ದವರು ಮಣ್ಣು ಪಾಲಾದರು.  ಮನೆ  ಹೊರಗಿದ್ದವರು ಮರು ಹುಟ್ಟು ಕೊಟ್ಟ ಬಕಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇಂಗ್ಲೆಂಡ್ ದೇಶದ ವಿಮಾನ ಖಾತೆ ಸಚಿವರಾಗಿದ್ದ ಲಾರ್ಡ್ ಥಾಮಸ್ ಸಹ ಒಂದು ನಾಯಿ ಸಾಕಿದ್ದರು. ಅ ನಾಯಿಯು ಸಹ ಅವರು ಹೋದ ಕಡೆಯೆಲ್ಲ ಅವರನ್ನು ಹಿಂಬಾಲಿಸುತಿತ್ತು. ಒಮ್ಮೆ ಒಂದು ಹೊಸ ಮಾದರಿಯ ವಿಮಾನದ ಪರೀಕ್ಷೆಗೆ ಅವರು  ಹೊರಟಿದ್ದರು. ಅ ಸಮಯದಲ್ಲಿ  ಅವರ  ಮುದ್ದು ನಾಯಿ ಅಂದು ಆಹಾರ ತಿನ್ನದೇ, ಭಯದಿಂದ ನಡುಗುತ್ತ, ಸುಮ್ಮನೆ ಬೊಗಳಲು ಆರಂಭಿಸಿತು. ಅವರು ಎಷ್ಟು ಸಮಾಧಾನ ಮಾಡಿದರು ಅದಕ್ಕೆ ಸಮಾಧಾನವಾಗಲಿಲ್ಲ. ಅಂದು ಅವರ ನಾಯಿಯು ಮಾತನ್ನು ಕೇಳಲೇ ಇಲ್ಲ. ಕಡೆಗೆ ನಾಯಿಯನ್ನು ಮನೆಯಲ್ಲಿ ಬಿಟ್ಟು ವಿಮಾನ ಹತ್ತಿದ. ಅ ವಿಮಾನ ಅಪಘಾತಕ್ಕೆ  ಈಡಾಯಿತು ಅವರ ಪ್ರಾಣ  ಪಕ್ಷಿಯು ಸಹ ಹಾರಿ ಹೋಯಿತು. ತನ್ನ ಮುದ್ದಿನ ನಾಯಿಯ ಮಾತು ಕೇಳಿದ್ದರೆ ಥಾಮಸ್ ಉಳಿಯುತಿದ್ದರು. ನಾಯಿಗೆ ತನ್ನ ಮಾಲಿಕನ ಮರಣದ ಸುದ್ದಿಯು ಸಹ ಮುಂಚೆಯೇ ತಿಳಿದಿತ್ತು. ಅದನ್ನು ತಡೆಯುವ ಪ್ರಯತ್ನ ಸಹ ವಿಫಲವಾಗಿತ್ತು.
ಹಾಗೆ ನಾನು ಮತ್ತೊಂದು ವಿಚಿತ್ರವನ್ನು ನಿಮ್ಮ ಮುಂದೆ ಇಡಲೇ ಬೇಕು
ನಮ್ಮ ಮನೆಯ ರಸ್ತೆಯಲ್ಲಿಯೂ ಸಹ ಮಧ್ಯರಾತ್ರಿಯಾದರೆ ಸಾಕು,  ಬೀದಿ ನಾಯಿಗಳು ಎಲ್ಲವು ಒಂದು ಕಡೆ ನಿಂತು  ಒಟ್ಟಿಗೆ ಒಂದೇ ದಿಕ್ಕಿಗೆ ಮುಖ ಮಾಡಿ ಉಳಿಡಲು ಆರಂಭಿಸುತ್ತವೆ. ಕಿಟಕಿಯ ಬಳಿ ನಿಂತು ಹಲವು ಭಾರಿ ನೋಡಿದ್ದೇನೆ ಅಲ್ಲಿ ನಂಗಂತೂ ಏನು ಕಂಡಿಲ್ಲ. ಆದರೆ ಅದನ್ನು ಕಾಣುವ ಶಕ್ತಿ ಕೇವಲ ನಾಯಿಗೆ ಮಾತ್ರ ಇದೆ

ನಂಬಿದರೆ ನಂಬಿ ಬಿಟ್ಟರೆ ಬಿಡಿ

nambidare nambiನಾವು ಬದುಕುತ್ತಿರುವುದು ಭೂತ, ವರ್ತಮಾನ ಮತ್ತು ಭವಿಷ್ಯದ ಮೇಲೆ ನಂಬಿಕೆಯಿಟ್ಟು. ಆದರೆ ಅ ನಂಬಿಕೆಗಳು ಧಾರ್ಮಿಕ ಶ್ರದ್ಧೆಗಳಾಗುತ್ತವೆ ಆದರೆ ಕೆಲವೊಮ್ಮೆ ಅಚಾರವಾಗಿ ಅನಾಚಾರವಾಗುವ ಸಂಭವವೂ ಸಹ ಇದೆ. ಕೆಲವೊಂದು ಅರ್ಥವಿಲ್ಲದ ಆಚರಣೆಗಳನ್ನು ನಾವು ಮೂಢನಂಬಿಕೆ ಎನ್ನಬಹುದು. ಕೆಲವೊಂದು ನಂಬಿಕೆಗಳು ಇನ್ನೊಂದು ಕಾಲದಲ್ಲಿ ಸುಳ್ಳೆಂದು ಸಾಬೀತಾಗುತ್ತದೆ. ಈ ನಂಬಿಕೆಗಳು ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತವೆ. ಕೆಲವೊಂದು ಪ್ರಸಂಗಗಳನ್ನು ನಿಮ್ಮ ಮುಂದೆ ನೀಡುತ್ತೇನೆ ಅದು ನಂಬಿಕೆಯೋ ಅಥವಾ ಮೂಢನಂಬಿಕೆಯೋ ನೀವೇ ತಿರ್ಮಾನಿಸಿ.
ಮನೆ ಬಿಟ್ಟು ಹೊರಗೆ ಯಾವುದೂ ಕೆಲಸಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಬೆಕ್ಕು ಅಡ್ಡವಾಗಿ ಹೋದರೆ ಹೋದ ಕೆಲಸವಾಗುವುದಿಲ್ಲ ಅಪಶಕುನವೆಂದು ನಾವು ನಂಬುತ್ತೇವೆ. ಅದಕ್ಕೆ ಪರಿಹಾರವಾಗಿ ಸ್ವಲ್ಪ ಸಮಯ ನಿಂತು ಮುಂದೆ ಕಾರ್ಯ ನಿಮಿತ್ತ ಹೋಗುತ್ತೇವೆ. ಕಾರ್ಯ ಸಾಧನೆಯಾದರೆ ಸರಿ ಇಲ್ಲವೆಂದರೆ ಬೆಕ್ಕಿನ ಮೇಲೆ ಅಪವಾದ ವಹಿಸುತ್ತೇವೆ. ಆದರೆ ವಿದೇಶದಲ್ಲಿ ಕಪ್ಪು ಬೆಕ್ಕು ಅಡ್ಡ ಹೋದರೆ ಅಪಶಕುನ. ಬೇರೆ ಬಣ್ಣದ ಬೆಕ್ಕಿಗೆ ರಿಯಾಯಿತಿಯಿದೆ.
ಮನೆಯಲ್ಲಿದ್ದ ತರಲೆ ಬೆಕ್ಕಿನ ಕಾಟ ತಡೆಯಲಾರದೆ ಮನೆಯ ಯಜಮಾನ ತಿಥಿಯ ದಿನ ಬೆಕ್ಕನ್ನು ಕಂಬಕ್ಕೆ ಕಟ್ಟಿ ಉಳಿದ ಕಾರ್ಯಗಳನ್ನು ನಿರ್ವಹಿಸುತ್ತಿದ್ದ. ಮುಂದೆ ಅವನ ಮನೆಯಲ್ಲಿ ಅವನ ಮಕ್ಕಳು ಸಹ ಬೆಕ್ಕನ್ನು ಕಂಬಕ್ಕೆ ಕಟ್ಟಿ ತಿಥಿ ಕಾರ್ಯ ಮುಂದುವರೆಸಿದರು. ಮಕ್ಕಳಿಗೆ ತಿಥಿ ಸಮಯದಲ್ಲಿ ಬೆಕ್ಕನ್ನು ಕಂಬಕ್ಕೆ ಕಟ್ಟುವುದು ಸಂಪ್ರದಾಯವೆಂದು ಮುಂದುವರೆಸಿದರು. ಹೇಗಿದೆ ಈ ನಂಬಿಕೆ.
ನಾವು ಕೆಲಸ ಮಾಡುತ್ತಿರುವಾಗ ಜರಿ ಏನಾದರೂ ಕಂಡರೆ ನಿಮಗೆ ಸ್ವಲ್ಪ ಸಮಯದಲ್ಲೇ ಸಿರಿ ಸಿಗುತ್ತದೆ ಎನ್ನುವ ಮತ್ತೊಂದು ನಂಬಿಕೆ ಇದೆ. ಇದಲ್ಲದೆ ನಿಮ್ಮ ಮನೆಯ ಸುತ್ತಮುತ್ತ ಹಾವುಗಳು ವಾಸ್ತವ್ಯ ಹೊಡಿ ನಿಮ್ಮ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದರೆ ನಿಮ್ಮ ಮನೆಯಲ್ಲಿ ಗುಪ್ತ ನಿಧಿಯೆಂಬ ಪ್ರತೀತಿ. ನಮ್ಮ ಮನೆಗೂ ಸಹ ಉರಗಗಳು ಭೇಟಿ ನೀಡುತ್ತವೆ ಆದರೆ ನಿಧಿಯೇಲ್ಲಿದೆ ಎಂದು ಇಂದಿಗೂ ಸಹ ತೋರಿಸಿಲ್ಲ.
ಕೋಗಿಲೆಯ ಮೊದಲ ಕೊಗು ವಸಂತದ ಸೂಚನೆಯನ್ನು ನೀಡುತ್ತದೆ. ಆದರೆ ಬ್ರಿಟನ್ನಲ್ಲಿ ಕೋಗಿಲೆಯ ಮೊದಲ ಕೂಗು ಏಪ್ರಿಲ್ ೬ರ ಮುಂಚೆ ಕೇಳಿದಲ್ಲಿ ಅದು ಅಪಶಕುನವಂತೆ. ಏಪ್ರಿಲ್ ೨೮ರ ಮೇಲೆ ಕೇಳಿದರೆ ಅದು ಶುಭಶಕುನವೆಂಬ ನಂಬಿಕೆಯಿದೆ.
ಒಂದು ದಿನ ನಮ್ಮೊರಿನ ದೇವಣ್ಣನ ಮನೆಯ ಮುಂದೆ ಜನರು ಸೇರಿದ್ದರು. ದೇವಣ್ಣನಿಗೆ ಅಗಲಿ ಅವನ ಮನೆಯವರಿಗೆ ಅಗಲಿ ಏನು ಆಗಿರಲಿಲ್ಲ. ಅಂದು ದೇವಣ್ಣ ನಾಯಿಯ ಹಾಗೆ ಕಾಣುವ ನರಿಯನ್ನು ತನ್ನ ಮನೆಯ ಮುಂದಿನ ಜಗಲಿಗೆ ಕಟ್ಟಿದ್ದ. ದಿನ ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟವೆಂದು ಯಾರೂ ಹೇಳಿದ್ದರು ಅದ್ದರಿಂದ ಅವನಿಗೆ ನಂಬಿಕೆ.
ಮನೆಯಲ್ಲಿ ಕುಳಿತು ಮಾತನಾಡುತ್ತಿರುವಾಗ ಹಲ್ಲಿ ಲೊಚಗುಟ್ಟಿದರೆ ಕೆಲವೊಮ್ಮೆ ಅಪಶಕುನವಾಗುವ ನಂಬಿಕೆ ಸಹ ಇದೆ. ನಿಮ್ಮ ಮೇಲೆ ಹಲ್ಲಿ ಏನಾದರೂ ಬಿದ್ದರೆ ಅದು ಸಹ ಬಿದ್ದ ಜಾಗದ ಮೇಲೆ ಶುಭ ಮತ್ತು ಅಶುಭ ಸಮಾಚಾರದ ತಿರ್ಮಾನವಾಗುತ್ತದೆ.
ಟಿಟ್ಟಿಭ ಹಕ್ಕಿ ತನ್ನ ಕತ್ತನ್ನು ಸತತವಾಗಿ ಎಡಕ್ಕೆ ಮತ್ತು ಬಲಕ್ಕೆ ತಿರುಗಿಸುತ್ತಿರುತ್ತದೆ. ಅದು ಏನಾದರೂ ನಿಮ್ಮ ಕಡೆ ತಿರುಗಿಸಿ ನಿಲ್ಲಿಸಿ ದುರುಗಟ್ಟಿ ನೋಡಿದರೆ ನಿಮ್ಮ ಜೀವಕ್ಕೆಕುತ್ತು ಎನ್ನುವ ನಂಬಿಕೆಯಿದೆ.
ಮಗುವು ಸತತವಾಗಿ ಹಾಸಿಗೆಯನ್ನು ಒದ್ದೆ ಮಾಡುತ್ತಿದ್ದರೆ , ದೊಡ್ಡವರು ಮಗುವಿಗೆ ಕರಡಿ ಸವಾರಿ ಮಾಡಿಸುವರು. ಹಾಗೆ ಮಾಡುವುದರಿಂದ ಮಗು ಹಾಸಿಗೆಯನ್ನು ಒದ್ದೆಮಾಡಿಸುವುದನ್ನು ನಿಲ್ಲಿಸುತ್ತದೆ ಎನ್ನುವ ನಂಬಿಕೆಯಿದೆ.
ಮಲೆನಾಡಿನಲ್ಲಿ ರಾತ್ರಿ ವೇಳೆ ಹಕ್ಕಿಯೊಂದು(ತುಂಬಾ ಹಿಂದೆ ಓದಿದ್ದು , ಹಕ್ಕಿ ಹೆಸರು ನೆನಪಿಲ್ಲ) ಕೊಗುವುದು. ಇದರ ಕೊಗು ” ಸಿಕ್ , ಸಿಕಿತ್ ರೋ ” ಎಂದು ಕೇಳುವುದರಿಂದಅದು ಎಲ್ಲಿ ಕೊಗಿರುವುದು ಅಲ್ಲಿಗೆ ಯಮಧರ್ಮನು ತನ್ನ ಜವಾಬ್ದಾರಿ ನಿಭಾಯಿಸಲು ಬರುವನು ಎನ್ನುವ ನಂಬಿಕೆಯಿದೆ.
ರಷ್ಯ ದೇಶದಲ್ಲಿ ಹಕ್ಕಿಗಳು ಮಾನವರ ಮೇಲೆ ಹಿಕ್ಕೆ ಹಾಕಿದರೆ ಅದು ಶುಭ ಸಂಕೇತವಂತೆ. ಹೆಚ್ಚಾಗಿ ಕಾರುಗಳ ಮೇಲೆ ಹಾಕಿದರೆ ಅವರ ಬಳಿಯಿರುವ ಹಣ ದ್ವಿಗುಣಗೊಳ್ಳುವ ಶುಭ ಸಂಕೇತವಂತೆ. ನಿಮ್ಮ ಮೇಲೆ ಹಾಗು ನಿಮ್ಮ ವಾಹನದ ಮೇಲೆ ಹಿಕ್ಕೆ ಬಿದ್ದರೆ ಖುಷಿ ಪಡಿ ಯಾಕಂದರೆ ಅದು ಶುಭ ಸಂಕೇತವೇ.
ನಿಶಾಚರಿ ಬಾವಲಿಗಳು ನಿಮ್ಮ ಮೇಲೆ ಬಿದ್ದರೆ ಶುಭ ಶಕುನವೇ ಆದರೆ ಅದೇ ಬಾವಲಿ ನಿಮ್ಮ ಮನೆಯಲ್ಲಿ ಸೇರಿದರೆ ಮನೆಯಲ್ಲಿ ದೆವ್ವಗಳ ಕಾಟ ಆರಂಭವೆಂಬ ಅಶುಭದ ಸೂಚನೆಯನ್ನು ಸಹ ನೀಡುತ್ತವೆ.
ನಾವೆಲ್ಲ ಹೆಚ್ಚಾಗಿ ಹೆದರುವುದು ಗೊಬೆಗಳನ್ನು ಕಂಡು, ಗೊಬೆಗಳು ಬೆಳಗಿನ ಸಮಯದಲ್ಲಿ ಉಳಿಟ್ಟರೆ ಅಂದಿನ ದಿನ ಕಳೆಯುವ ಒಳಗೆ ನಿಮಗೆ ಕೆಟ್ಟ ಸಮಾಚಾರ ಬರುವ ಸಂಕೇತ.
ಇನ್ನು ಹಕ್ಕಿಗಳನ್ನು ವೀಕ್ಷಿಸುವಾಗ ನೀವು ಒಂದೇ ಹಕ್ಕಿ ವೀಕ್ಷಿಸಿದರೆ ಅದಕ್ಕೂ ಸಹ ನಂಬಿಕೆ ಇದೆ . ನಿಮಗೆ ಒಂದೇ ಮಡಿವಾಳ ಹಕ್ಕಿ ಕಂಡರೆ ಅದು ಅಶುಭದ ಸೂಚನೆ ಅದಕ್ಕೆ ಎರಡು ಮೂರು ಮಡಿವಾಳ ಹಕ್ಕಿಗಳನ್ನು ನೋಡಬೇಕು.
ನಾವೆಲ್ಲ ನವಿಲಿನ ರೆಕ್ಕೆಗಳನ್ನು ಮನೆಗೆ ತರುವುದು ಸಹ ಅಶುಭದ ಸಂಕೇತ. ಯಾಕೆಂದರೆ ನವಿಲ ಗರಿಗಳಲ್ಲಿರುವ ಕಣ್ಣುಗಳು ಕೆಟ್ಟ ದೃಷ್ಟಿಯ ಸಂಕೇತ.
ನಮ್ಮಜ್ಜಿ ನಾವು ಊರಿಗೆ ಹೋದ ಸಮಯದಲ್ಲಿ ಯಾವಾಗಲು ಹೇಳುತ್ತಿದ್ದರು. ಬೆಳಗ್ಗೆಯಿಂದ ಕಾಗೆಗಳು ಕಾ ಕಾ ಎನ್ನುತ್ತಿದ್ದವು. ಅದಕ್ಕೆ ಅಂದುಕೊಂಡೆ ಯಾರು ನೆಂಟರು ಬರುತ್ತಾ ಇದ್ದಾರೆ ಎಂದು. ಹಾಗೆ ತಿಥಿ ಸಮಯದಲ್ಲಿ ಕಾಗೆಗಳಿಗೆ ಎಡೆಯಿಟ್ಟು ಸಹ ಕಾಯುತ್ತಿರುತ್ತೇವೆ. ಅಜ್ಜಿ ಕಥೆಗಳು ಬಹಳಷ್ಟು ಇವೆ. ಇವೆಲ್ಲ ನಮ್ಮ ಆಚಾರಗಳೂ ಅಥವಾ ಅರ್ಥವಿಲ್ಲದ ಆಚರಣೆಗಳೊ ನೀವೇ ತಿಳಿಸಬೇಕು.
ಏನೇ ಹೇಳಿ , ಈ ನಂಬಿಕೆಗಳು ನಮ್ಮ ಮೂಡ್ ಮೇಲೆ ಡಿಪೆಂಡ್ ಅದಕ್ಕೆ ಅವು ಮೂಡ ನಂಬಿಕೆಗಳಾಗಿವೆ

ಆರ್ಟ್ ಆಫ್ ಸೆಲ್ಫ್ ಡಿಫೆನ್ಸ್

ಮಾನವ ತನ್ನ ಆತ್ಮ ರಕ್ಷಣೆಗೆ ಆಯುಧಗಳನ್ನು ಬಳಸಲು ಆರಂಭಿಸಿದ ಎಂದು ತಮಗೆಲ್ಲ ತಿಳಿದೇ ಇದೆ. ಶೀಲಾಯುಗದಲ್ಲಿ ಮನುಷ್ಯ ಕಲ್ಲಿನಿಂದ ಮಾಡಿದ ಆಯುಧಗಳನ್ನು ಬಳಸಲು ಆರಂಭಿಸಿದ. ಮುಂದುವರಿದು ಲೋಹದಿಂದ ಮಾಡಿದ ಆಯುಧಗಳನ್ನು ತಯಾರಿಸಿದ ಕಡೆಗೆ ಇಂದು ಪಿಸ್ತೂಲು, ಗ್ರೆನೇಡ್, ಬಾಂಬು, ಪರಮಾಣು ಬಾಂಬುಗಳನ್ನು ಸಂಶೋಧಿಸಿ ಬಳಕೆಗೆ ತಂದ. ಇವೆಲ್ಲವೂ ಸಾಧ್ಯವಾಗಿದ್ದು  ಅವನ ಬುದ್ದಿವಂತಿಕೆಯಿಂದ ಹೊರತು ಬೇರಾವ ಶಕ್ತಿಯಿಂದ ಅಲ್ಲ. ಮನುಷ್ಯನಿಗೆ ಈ ಶಕ್ತಿ ಇದ್ದರೆ ಇತರೆ ಜೀವಿಗಳಿಗೂ ಒಂದಲ್ಲ ಒಂದು  ಶಕ್ತಿ ಇರಲೇಬೇಕಲ್ಲ.
  
ಪ್ರಾಣಿ ಪಕ್ಷಿಗಳಿಗೆ ಶತ್ರುಗಳಿಂದ ರಕ್ಷಣೆ ಪಡೆಯಲು ಚಿಪ್ಪಿನ ದೇಹವನ್ನು, ಕೊಂಬುಗಳನ್ನು , ದಪ್ಪ ಚರ್ಮವನ್ನು, ಮೈ ಮೇಲೆ ಮುಳ್ಳುಗಳನ್ನು, ಬಲಿಷ್ಠ ಪಂಜುಗಳನ್ನು, ಹೊರಗಣ ಪರಿಸರಕ್ಕೆ ತಕ್ಕಂತೆ ಬಣ್ಣ  ಬದಲಾಯಿಸುವ ಸಾಮರ್ಥ್ಯವನ್ನು, ಉತ್ತಮ ದೃಷ್ಟಿ ಮತ್ತು ಶ್ರವಣವನ್ನು ಪಡೆದಿವೆ.
ಅಮೆ, ಬಸವನ ಹುಳು , ಶಂಕು ಹುಳುಗಳು ತಮ್ಮ ದೇಹದ ಸುತ್ತ ಇರುವ ಚಿಪ್ಪಿನ ಸಹಾಯದಿಂದ, ಅನೆ , ಖಡ್ಗಾಮೃಗ, ಕಾಡೆಮ್ಮೆ, ನೀರಾನೆ  ತಮ್ಮ ದಪ್ಪ ಚರ್ಮದ ಮೂಲಕ, ಪಾಂಗೊಲಿನ್ ಮತ್ತು ಮೊಸಳೆಗಳು ತಮ್ಮ ಮೇಲಿನ ಅಕಾರದಿಂದ, ಗೋಸುಂಬೆ, ಇತರೆ ಕೀಟಗಳು ತನ್ನ ದೇಹದ ಬಣ್ಣ ಬದಲಾವಣೆ ಮಾಡುವುದರಿಂದ, ಕಾಡೆಮ್ಮೆ,ಚಿಗರಿ,ಜಿಂಕೆಗಳು ತಮ್ಮ ಕೊಂಬುಗಳಿಂದ, ಹುಲಿ, ಸಿಂಹ , ಚಿರತೆಗಳು  ತಮ್ಮ ಬಲಿಷ್ಠ ಪಂಜುಗಳಿಂದ, ಹಾವು, ಚೇಳುಗಳು   ವಿಷಕಾರುವುದರಿಂದ  ತಮ್ಮ ಮೇಲಿನ ದಾಳಿಯಿಂದ ತಮ್ಮನ್ನು ರಕ್ಷಿಸಿ ಕೊಳ್ಳುತ್ತವೆ.
ಈ ವಿಸ್ಮಯ ಜಗತ್ತಿನಲ್ಲಿ ಪ್ರಾಣಿ ಪಕ್ಷಿಗಳು ತಮ್ಮದೇ ಅದ ರೀತಿಯಲ್ಲಿ ತಮ್ಮ  ಆತ್ಮ ರಕ್ಷಣೆ ಮಾಡಿಕೊಳ್ಳುತ್ತವೆ. ಅವುಗಳಿಗೆ ಗನ್ನು, ಬಾಂಬುಗಳು ಬೇಕಿಲ್ಲ. ಅವುಗಳ ಆತ್ಮ ರಕ್ಷಣೆಗೆ ಬಳಸುವ ತಂತ್ರದ ಬಗ್ಗೆ ತಿಳಿಯೋಣ 
ಫ್ಲೈಯಿಂಗ್ ಫಿಶ್ :
ದಾಂಡೇಲಿಯ  ಅಭಯಾರಣ್ಯದಲ್ಲಿ ಇರುವ ಹಾರುವ ಹಲ್ಲಿಗಳ ಬಗ್ಗೆ  ಹಿಂದೆ ದಾಂಡೇಲಿ ದಂಡಯಾತ್ರೆಯ ಲೇಖನದಲ್ಲಿ ನಿಮಗೆ ತಿಳಿಸಿದ್ದೆ. ಹಾರುವ ಹಲ್ಲಿಗಳ ಹಾಗೆ ಹಾರುವ ಮೀನುಗಳು ಸಹ ಇವೆ. ಇವು ಹೆಚ್ಚಾಗಿ ವೆಸ್ಟ್ ಇಂಡಿಸ್, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಸಾಗರಗಳಲ್ಲಿ ಕಾಣಬಹುದು. ಶತ್ರುಗಳು ತಮ್ಮ ಮೇಲೆ ಆಕ್ರಮಣ ಮಾಡಿದಾಗ ಈ ಮೀನುಗಳು ತಮ್ಮ ರೆಕ್ಕೆಯ ಸಹಾಯದಿಂದ ಸುಮಾರು ೫೦ ಮೀಟರ್ ದೊರದವರೆಗೂ  ಹಾರಿ ತಪ್ಪಿಸಿಕೊಳ್ಳುತ್ತವೆ. ಈ ಫ್ಲೈಯಿಂಗ್ ಫಿಶ್ಗಳು ಗಂಟೆಗೆ ೬೦ ಕಿಲೋಮೀಟರು ವೇಗದಲ್ಲಿ ಹಾರುತ್ತವೆ.


ಉರಶಿನ್ ರೋಲರ್ :
ಈ ಹಕ್ಕಿ ತನ್ನ ಶತ್ರುಗಳಿಂದ ತಪ್ಪಿಸಿಕೊಳ್ಳಲು ಬಳಸುವ ಮಾರ್ಗವೇ ಒಂದು ವಿಸ್ಮಯ. ಈ ಪಕ್ಷಿ  ತಾನು ಆಹಾರ ಹುಡುಕಲು ಹೊರಗೆ ಹೋಗುವ ಸಮಯದಲ್ಲಿ ತನ್ನ ಮರಿಗಳು ಇತರ ಪ್ರಾಣಿಗಳಿಗೆ ಬಲಿಯಾಗದಂತೆ ತಡೆಯಲು ಮರಿಗಳ ಮೇಲೆ ವಾಂತಿ ಮಾಡುತ್ತವೆ. ಅದೇ ವಾಂತಿಯಿಂದ ರಚಿತವಾದ ಒಂದು ಪದರದೊಳಗೆ ಮರಿಗಳು ಆಶ್ರಯ ಪಡೆಯುತ್ತವೆ. ಈ ಪದರವು ಅತ್ಯಂತ ಕೆಟ್ಟ ವಾಸನೆಯನ್ನು ಬೀರುವುದರಿಂದ ಯಾವ ಪ್ರಾಣಿಯು ಇವುಗಳ ತಂಟೆಗೆ ಬರುವುದಿಲ್ಲ.ಇದೊಂದೇ ಪಕ್ಷಿ ಹೀಗೆ ತನ್ನ ಮರಿಗಳನ್ನು ರಕ್ಷಿಸುತ್ತದೆ.

ಸೀ ಕುಕುಂಬರ್ :
ಹೆಚ್ಚಾಗಿ ದೊಡ್ಡ ಸಾಗರಗಳಲ್ಲೇ ಕಂಡು ಬರುವ ಈ ಜಲಚರ ಇತರ ಜೀವಿಗಳು ತನ್ನ ಮೇಲೆ ಬಿದ್ದಾಗ ತನ್ನ ಆತ್ಮರಕ್ಷಣೆ ಮಾಡಿಕೊಳ್ಳುವ ತಂತ್ರ ಮಾತ್ರ ಒಂದು ಕೌತುಕವೇ ಸರಿ. ನೀರಿನಲ್ಲಿರುವ ಇತರೆ ಜಲಚರಗಳು ದಾಳಿ ಮಾಡಿದಾಗ ಸಿ ಕುಕುಂಬರ್ ತನ್ನ ಗುದದ್ವಾರದಿಂದ ತನ್ನ ಸಣ್ಣ ಕರಳು ಮತ್ತು ಇತರೆ ದೇಹದ ಭಾಗಗಳನ್ನು ದಾಳಿಕೋರರ ಮೇಲೆ ಹಾಕುತ್ತದೆ ಜೀವಿಯ ಸಣ್ಣ ಕರಳನ್ನು ನೋಡಿದ ತಕ್ಷಣ ದಾಳಿ ಮಾಡಿದ ಜೀವಿಗೆ ಒಂದು ರೀತಿ ಆತಂಕಕ್ಕೆ ಒಳಗಾಗುತ್ತದೆ. ಜೀವಿಯ ಕರುಳು ಅತ್ಯಂತ ವಿಷಕಾರಿಯಾಗಿರುವುದರಿಂದ ಅದನ್ನು ಸೇವಿಸಿದ ಪ್ರಾಣಿಗಳು ತಕ್ಷಣವೇ ಸಾವನ್ನು ಅಪ್ಪುತ್ತವೆ. ಸೀ ಕುಕುಂಬರ್ ಸುಮಾರು ಆರು ವಾರಗಳ ಅಂತರದಲ್ಲಿ ತಾನು ಕಳೆದುಕೊಂಡ  ದೇಹದ ಅಂಗಗಳನ್ನು ಮರಳಿ ಪಡೆಯುತ್ತದೆ.  
ಟರ್ಕಿ ಹದ್ದು   :
ಟರ್ಕಿ ಹದ್ದು ಏನು ಕಡಿಮೆಯಿಲ್ಲ. ಒಮ್ಮೆ ಯಾವುದಾದರೂ ಜೀವಿ  ತನ್ನ ಮೇಲೆ ದಾಳಿ ಮಾಡಿದರೆ ಟರ್ಕಿ ತನ್ನ ಹೊಟ್ಟೆಯಲ್ಲಿ ಏನು ಏನು ಇದೆಯೂ ಎಲ್ಲವನ್ನು ಅ ಜೀವಿಯ ಮೇಲೆ ಕಕ್ಕುತ್ತದೆ.  ಅ ವಾಸನೆ ತಡೆಯಲಾರದೆ ಅ ಜೀವಿ ಅಲ್ಲಿಂದ ಕಾಲಿಗೆ ಬುದ್ಧಿ ಹೇಳುತ್ತದೆ. ದಾಳಿ ಮಾಡಿದ ಜೀವಿ ಏನಾದರು ವಾಂತಿಯನ್ನು ತಿಂದರೆ ಅದರ ಗತಿ ಅಷ್ಟೇ ಅದರ ಹೊಟ್ಟೆಯಲ್ಲಿ ಅಸಾಧ್ಯ ಉರಿ ಶುರುವಾಗುತ್ತದೆ.

ಮಲೇಶಿಯದ ಇರುವೆ :
ಮಲೇಶಿಯ ಇರುವೆಯ ಮೇಲೆ ಯಾರಾದರು ಇತರೇ ಜೀವಿಗಳು ದಾಳಿ ಮಾಡಿದರೆ. ಈ ಇರುವೆ ತನ್ನ ದೇಹದ ಗಾತ್ರವನ್ನು ಒಮ್ಮೆಗೆ ಹಿಗ್ಗಿಸುತ್ತದೆ. ಈ ಇರುವೆಯ ದೇಹದ ತುಂಬಾ ವಿಷಪೂರಿತ ಗ್ರಂಥಿಗಳಿರುವುದರಿಂದ ತನ್ನ ಹಿಗ್ಗಿಸಿದ ದೇಹವನ್ನು ಒಮ್ಮೆಗೆ ಕುಗ್ಗಿಸುತ್ತದೆ. ಆಗ ಅ ವಿಷವು ದಾಳಿ ಮಾಡಿದ ಜೀವಿಗಳಿಗೆ ತುರಿಕೆಯನ್ನು ತಂದು ಕಡೆಗೂ ಸಾವನ್ನು ಸಹ ತರಬಲ್ಲವು.  
ವುಡ್ ಕಪ್ಪೆ :
ಅಲಾಸ್ಕಾ ಮತ್ತು ಅಂಟಾರ್ಟಿಕ ಹಿಮದಲ್ಲಿ ಈ ವುಡ್ ಕಪ್ಪೆ ತನ್ನ ಜೀವವನ್ನು ರಕ್ಷಿಸಿಕೊಳ್ಳುವ ಪರಿ ವಿಜ್ಞಾನಕ್ಕೆ ಒಂದು ಸವಾಲೇ ಸರಿ. ಹೊರಗಿನ ಚಳಿ ಹೆಚ್ಚಾದಾಗ ಈ ಕಪ್ಪೆಯ ಮೆದುಳು ತನ್ನ ಪಿತ್ತಜನಕಾಂಗಕ್ಕೆ ಹೆಚ್ಚು ಗ್ಲುಕೋಸ್ ಸ್ರವಿಸುವಂತೆ ಸಂದೇಶ ನೀಡುತ್ತದೆ. ಇದರಿಂದ ಹಿಮದಿಂದ ಜೀವ ಕೋಶಗಳು ಮತ್ತು ರಕ್ತನಾಳಗಳು ಒಡೆದು ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತದೆ. ಅಲ್ಲಿರುವ ತಂಪು ವಾತಾವರಣದಿಂದ  ದೇಹವೆಲ್ಲ ಹೆಪ್ಪುಗಟ್ಟಿದ್ದರು ಹಿಮದಲ್ಲಿ ಏನು ಆಗದೆ ತನ್ನ ದೇಹವನ್ನು ಕಾಪಾಡಿಕೊಳ್ಳುತ್ತದೆ. ಒಮ್ಮೆ ತಾಪಮಾನ ಒಂದು ಹಂತಕ್ಕೆ ಬಂದಾಗ ತನ್ನ ದೇಹದಲ್ಲಿನ ವಿದ್ಯುತ್ಕಾಂತೀಯ ಶಕ್ತಿಯಿಂದ ಮತ್ತೆ ಹೃದಯವನ್ನು ಸಹಜ ಸ್ಥಿತಿಗೆ ತರುತ್ತದೆ.
ಈ ಎಲ್ಲ ಜೀವಿಗಳಿಗೂ ಆತ್ಮ ರಕ್ಷಣೆ ಮಾಡಿಕೊಳ್ಳಲು ಒಂದಲ್ಲ ಒಂದು ಶಕ್ತಿ ತನ್ನೊಳಗೆ ಇದೆ. ಆದರೆ ಮಾನವನಿಗೆ ಅವು ಯಾವು ಇಲ್ಲ.