ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 top ಪ್ರಶ್ನೆಗಳು


1. ಜರ್ಮನಿ ಏಕೀಕೃತಗೊಂಡ ವರ್ಷ – 1990


2. 1945 ರ ಮೊದಲು ‘ ಈಸ್ಟ್ ಇಂಡೀಸ್’ ಎಂದು ಕರೆಸಿಕೊಳ್ಳುತ್ತಿದ್ದ ಇಂಡೋನೇಷಿಯ ಯಾರ ವಸಾಹತು ಆಗಿದ್ದಿತು.- ಡಚ್ಚರು 


3. ಮ್ಯಾನ್ಮಾರ್ ಎಂದು ಪುನರ್‍ನಾಮಕರಣ ಹೊಂದಿದ ದೇಶ – ಬರ್ಮಾ


4. ಇಂಡೋನೇಷ್ಯಾದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕ – ಡಾ/ ಸುಕಾರ್ಣೊ


5. ಆಫ್ರಿಕಾದಲ್ಲಿ ಸ್ವಾತಂತ್ರ್ಯ ಪಡೆದ ಮೊದಲ ದೇಶ – ಲಿಬಿಯಾ


6. ಅಲಿಪ್ತ ಚಳುವಳಿ ಎಷ್ಟರಲ್ಲಿ ಪ್ರಾರಂಭವಾಯಿತು – 1955


7. ಅಲಿಪ್ತ ಚಳುವಳಿಯ ಆರಂಭಿಕ ಸಭೆ ನಡೆದ ಸ್ಥಳ- ಬಾಂಡುಂಗ್


8. ಎರಡನೇ ಮಹಾಯುದ್ಧದ ನಂತರ ಅಸ್ಥಿತ್ವಕ್ಕೆ ಬಂದ ಎರಡು ಬಣಗಳ ನೇತೃತ್ವವನ್ನು ಯಾವ ದೇಶಗಳು ವಹಿಸಿದವು.- ಅಮೇರಿಕ ಮತ್ತು ರಷ್ಯಾ


9. ಚಂದ್ರನ ಮೇಲೆ ಮೊದಲು ಮಾನವನನ್ನು ಇಳಿಸಿದ ದೇಶ- ಅಮೆರಿಕ


10. ಪ್ರಾಚೀನ ಮೆಸಪೊಟೇಮಿಯಾದ ಇಂದಿನ ಹೆಸರು- ಇರಾಕ್


11. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳನ್ನು ಯಾವ ಕಾಲುವೆ ಜೋಡಿಸುತ್ತದೆ- ಸೂಯೆಜ್


12. ಎರಡನೇ ಕೊಲ್ಲಿಯುದ್ಧ ಯಾವ ರಾಷ್ಟ್ರಗಳ ನಡುವೆ ನಡೆಯಿತು.- ಇರಾಕ್, ಕುವೈತ್


13. ಮುಸ್ಸೊಲಿನಿಯ ಪಕ್ಷದ ಹೆಸರು- ಫ್ಯಾಸಿಸ್ಟ್ ಪಕ್ಷ


14. ಭಾರತದ ಮೊದಲನೆಯ ಸಮಾಚಾರ ಪತ್ರಿಕೆ- ಬೆಂಗಾಲ್ ಗೆಜೆಟ್


15. ಕರ್ನಾಟಕದ ಮೊದಲನೆಯ ವಾರ್ತಾಪತ್ರಿಕೆ- ಮಂಗಳೂರು ಸಮಾಚಾರ


16. ಭಾರತದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಗವರ್ನರ್ ಜನರಲ್ – ಲಾರ್ಡ್ ವಿಲಿಯಂ ಬೆಂಟಿಂಕ್


17. ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭಿಸಿದ ವರ್ಷ – 1835


18. ಮೊದಲ ಮೊಘಲ್ ದೊರೆ- ಬಾಬರ್


19. ಕೊನೆಯ ಮೊಘಲ್ ದೊರೆ- ಬಹದ್ದೂರ್ ಷಾ ಝಾಫರ್


20. ಎರಡನೇ ಬಾಜೀರಾಯನ ದತ್ತುಪುತ್ರನಾಗಿದ್ದ ಪೇಶ್ವೆ- ನಾನಾ ಸಾಹೇಬ್


21. ಮರಾಠರ ಕಟ್ಟಕಡೆಯ ಪೇಶ್ವೆ – ಎರಡನೇ ಬಾಜಿರಾವ್


22. ಸೂರತ್ ಒಪ್ಪಂದಕ್ಕೆ ಸಹಿ ಮಾಡಿದ ವರ್ಷ – 1775


23. ಮೊದಲನೆ ಆಂಗ್ಲೋ ಮರಾಠ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಸಾಲ್‍ಬಾಯಿ


24. ಸಾಲ್ಬಾಯಿ ಒಪ್ಪಂದದಲ್ಲಿ ಯಾರನ್ನು ಪೇಶ್ವೇಯಾಗಿ ಒಪ್ಪಿಕೊಳ್ಳಲಾಯಿತು- ಎರಡನೇ ಮಾಧವರಾವ್


25. ಸಿಖ್ ಸಮುದಾಯದ ಸೈನ್ಯವನ್ನು ಏನೆಂದು ಕರೆಯುತ್ತಿದ್ದರು – ಖಾಲ್ಸಾ


26. ಪೇಶ್ವೆ ಎರಡನೆಯ ಬಾಜೀರಾಉನು ಯಾವ ಒಪ್ಪಂದದ ಮೂಲಕ ಸಹಾಯಕ ಸೈನ್ಯ ಮೈತ್ರಿಯನ್ನು ಒಪ್ಪಿಕೊಂಡನು – ಬೇಸ್ಸೀನ್ ಒಪ್ಪಂದ


27. ಕನ್ನಂಬಾಡಿ ಅಣೆಕಟ್ಟನ್ನು ಪೂರ್ಣಗೊಳಿಸಿದ ದಿವಾನರು – ಮಿರ್ಜಾ ಇಸ್ಮಾಯಿಲ್


28. ಮೈಸೂರು ರಾಜ್ಯದಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಆರಂಭಿಸಿದ ದಿವಾನರು- ಕೆ. ಶೇಷಾದ್ರಿ ಅಯ್ಯರ್


29. ಪಂಜಾಭಿನ ಸಿಂಹ ಎಂದು ಕರೆಯಲ್ಪಡುವ ದೊರೆ- ರಣಜಿತ್ ಸಿಂಗ್.


30. ರಣಜಿತ್‍ಸಿಂಗ್‍ನಿ ಇಂಗ್ಲೀಷರೊಡನೆ ಮಾಡಿಕೊಂಡ ಒಪ್ಪಂದ – ಅಮೃತಸರ ಒಪ್ಪಂದ


31. ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ಮೊದಲ ದೇಶಿಯ ರಾಜ- ಹೈದರಾಬಾದಿನ ನಿಜಾಮ( 1798)


32. ‘ ಕೊಹೀನೂರ್ ವಜ್ರವನ್ನು ಬ್ರಿಟಿಷರಿಗೆ ಉಡುಗೊರೆಯಾಗಿ ನೀಡುದ ದೊರೆ- ದುಲೀಪ್ ಸಿಂಗ್


33. ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದವರು- ರಂಗಚಾರ್ಲು


34. ಟಿಪ್ಪು ಸುಲ್ತಾನನು ಎಷ್ಟರಲ್ಲಿ ಮರಣ ಹೊಂದಿದನು- 1799


35. ಹೈದರಾಲಿಯು ಎಲ್ಲಿಯ ಫೌಜುದಾರನಾಗಿದ್ದನು- ದಿಂಡಿಗಲ್


36. ಹೈದರಾಲಿಯು ಯಾವ ಯುದ್ಧದ ಕಾಲದಲ್ಲಿ ಮಡಿದನು – ಎರಡನೇ ಆಂಗ್ಲೋ- ಮೈಸೂರ್ ಯುದ್ಧ


37. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಕಾಲದಲ್ಲಿ ಇಂಗ್ಲೀಷರ ಗವರ್ನರ್ ಜನರಲ್ ಯಾರಾದ್ದರು – ವೆಲ್ಲೆಸ್ಲಿ


38. ಒಡೆಯರ ವಂಶದ ಸ್ಥಾಪಕರು- ವಿಜಯ ಮತ್ತು ಕೃಷ್ಣ


39. ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಹಾಕಿಸಿದವರು ಯಾರು – ದೊಡ್ಡ ದೇವರಾಯ


40. ಮೈಸೂರಿನ ದಸರಾ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದವರು- ರಾಜ ಒಡೆಯರ್


41. ಹದಿಬದೆಯ ಧರ್ಮ ಎಂಬ ಕೃತಿಯನ್ನು ರಚಿಸಿದವರು – ಸಂಚಿಯ ಹೊನ್ನಮ್ಮ


42. ಮೊದಲ ಆಂಗ್ಲೋ ಮೈಸೂರು ಯುದ್ಧವು ಯಾವ ಒಪ್ಪಂದದಿಂದ ಕೊನೆಗೊಂಡಿತು – ಮದ್ರಾಸ್ ಒಪ್ಪಂದ


43. ಎರಡನೇ ಆಂಗ್ಲೋ- ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು – ಮಂಗಳೂರು ಒಪ್ಪಂದ


44. ಪ್ಲಾಸಿ ಕದನ ನಡೆದ ವರ್ಷ –1757


45. ಬಕ್ಸಾರ್ ಕದನ ನಡೆದ ವರ್ಷ – 1764


46. ಜಹಾಂಗೀರನ ಆಸ್ಥಾನದಲ್ಲಿ ಇದ್ದ ಬ್ರಿಟಿಷ್ ರಾಯಭಾರಿ – ಸರ್ ಥಾಮಸ್ ರೋ


47. ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪನೆಯಾದ ವರ್ಷ- 1664


48. ಭಾರತದಲ್ಲಿ ಫ್ರೆಂಚರ ಪ್ರಭಾವವನ್ನು ಕೊನೆಗಾಣಿಸಿದ ಕದನ- ವಾಂಡಿವಾಷ್


49. ಇಂಗ್ಲೀಷರಿಗೆ ದಿವಾನಿ ಹಕ್ಕನ್ನು ನೀಡಿದ ಮೊಘಲ್ ಚಕ್ರವರ್ತಿ – ಎರಡನೆಯ ಷಾ ಆಲಂ


50. ತೆರಿಗೆ ಪಾವತಿಸದೆ ವಸ್ತುಗಳ ಸಾಗಾನಿಕೆಗೆ ನೀಡುತ್ತಿದ್ದ ಅನುಮತಿ ಪತ್ರಗಳನ್ನು ಏನೆಂದು ಕರೆಯುತ್ತಿದ್ದರು – ದಸ್ತಕಗಳು


🌷☘🌷☘🌷☘🌷☘🌷☘🌷