<<< ಶಿಕ್ಷಕರ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ >>>
ಶಿಕ್ಷಕರ ಓದುಗರೇ ನಿಮ್ಮದೇ ಆದ ಲೇಖನ-ಬರಹ-ಕಥೆ-ಕವನ-ಪ್ರಬಂಧ-ಕನ್ನಡ ಸಾಮಾನ್ಯ ಜ್ಞಾನದ ಸಂಗ್ರಹ-ಶೈಕ್ಷಣಿಕ ವಿಚಾರ ಇತ್ಯಾದಿಗಳನ್ನು ' ಶಿಕ್ಷಕರ ಕೈಪಿಡಿಗೆ ಪ್ರಕಟಿಸುವ ಮೂಲಕ ಓದುಗರಿಗೆ ಸಂಪನ್ಮೂಲ ಒದಗಿಸಿ.
ಲೇಖನ ಪ್ರಕಟಿಸುವರು ತಮ್ಮ ಹೆಸರು ಭಾವಚಿತ್ರ ಹಾಗೂ ನೀವು ಕೆಲಸ ಮಾಡುವ ಶಾಲೆಯ ಹೆಸರು ಇವುಗಳಲ್ಲಿ ಟೈಪ್ ಮಾಡಿ ವಾಟ್ಸಾಪ್ ಮೂಲಕ ಕಳುಹಿಸಲು ಕೋರಿದೆ
🌹🌹🌹🌹🌹🌹🌹🌹🌹🌹🌹🌹🌹🌹🌹
ಆರ್.ಬಿ.ಗುರುಬಸವರಾಜ. ಹೊಳಗುಂದಿ.
ಹೊಳಗುಂದಿ(ಪೊ) ಹೂವಿನ ಹಡಗಲಿ (ತಾ) ಬಳ್ಳಾರಿ(ಜಿ)
ಸಹ ಶಿಕ್ಷಕನಾಗಿ ವೃತ್ತಿ. ಶೈಕ್ಷಣಿಕ ಹಾಗೂ ವೈಜ್ಞಾನಿಕ ಲೇಖನಗಳನ್ನು ಬರೆಯುವುದು ಪ್ರವೃತ್ತಿ. ಇವರ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಓದಲು ದಯವಿಟ್ಟು ಗುರು ಮಾರ್ಗ ಲಿಂಕ್ ನ್ನು ಸಂಪರ್ಕಿಸಿ.
🌎🌎🌎🌎🌎🌎🌎🌎🌎🌎🌎🌎🌎🌎🌎
ಅಪ್ಪಾಜಿ ಎ ಮುಸ್ಟೂರು
ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬುಳ್ಳನಹಳ್ಳಿ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ.
ಮೊಬೈಲ್ ಫೋನ್ 8496819281
ಲೇಖನ
*ಮಕ್ಕಳನ್ನು ಬೆಳೆಸುವಲ್ಲಿ ತಂದೆ ತಾಯಿಗಳ ಪಾತ್ರ*
ಮಕ್ಕಳಿಸ್ಕೂಲ್ ಮನೇಲಲ್ವೇ ಎಂಬಂತೆ ಮಕ್ಕಳ ವ್ಯಕ್ತಿತ್ವ ಅರಳಬಲ್ಲದೆ ಎಂದರೆ ಅದು ಮನೆ. ಅದಕ್ಕೆ ಮನೆಯೇ ಮೊದಲ ಶಾಲೆ ಜನನಿ ತಾನೆ ಮೊದಲ ಗುರು ಎಂಬ ಮಾತು ಸಾಮಾನ್ಯವಾಗಿದೆ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮನೆಯ ವಾತಾವರಣ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಅದರಲ್ಲೂ ತಂದೆ ತಾಯಿ ಇಬ್ಬರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಹೆಚ್ಚಿನ ಹೊಣೆಗಾರರಾಗಿರುತ್ತಾರೆ. ಇಲ್ಲಿ ಯಾರೊಬ್ಬರೂ ವಿಮುಖರಾದರು ಕೂಡ ಮಕ್ಕಳ ಭವಿಷ್ಯದ ಅಭದ್ರವಾಗುತ್ತದೆ. ಅಲ್ಲದೆ ಮಕ್ಕಳು ತಮ್ಮ ಹೆತ್ತವರನ್ನು ಅವಲಂಬಿಸಿರುವುದರಿಂದ ಮತ್ತು ಅನುಕರಣೆ ಮಾಡುವುದರಿಂದ ಅವರ ವ್ಯಕ್ತಿತ್ವ ಉತ್ತಮವಾಗಿರಬೇಕು. ಹೆತ್ತವರ ಭಾಷೆ, ನಡೆನುಡಿ , ಜೀವನಶೈಲಿ , ತಿಳುವಳಿಕೆ, ಪಾಲ್ಗೊಳ್ಳುವಿಕೆ ಎಲ್ಲವೂ ಮಕ್ಕಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
*ತಾಯಿಯ ಪಾತ್ರ* :-
ಮಕ್ಕಳು ಹೆಚ್ಚು ಹೊತ್ತು ತಾಯಿಯ ಮಡಿಲಲ್ಲಿ ಕಳೆಯುತ್ತಾರೆ. ತಾಯಿಯಾದವಳು ತನ್ನ ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳುತ್ತಾ ಅವರ ಮನಸ್ಸಿನಲ್ಲಿ ಉತ್ತಮ ಅಂಶಗಳನ್ನು ಬಿತ್ತುತ್ತಾ ಹೋಗಬೇಕು. ಜೀಜಾಬಾಯಿ ವಹಿಸಿದ ಜವಾಬ್ದಾರಿಯಿಂದ ಶಿವಾಜಿಯಂತಹ ಮಹಾನ್ ಶೂರನನ್ನು ರೂಪಿಸಲು ಸಾಧ್ಯವಾಯಿತು. ಹಾಗೆ ತಾಯಿ ತನ್ನ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಮುಖ್ಯ.
* ತಾಯಿತನ ಮಕ್ಕಳ ಬೇಕು-ಬೇಡಗಳನ್ನು ಅರ್ಥಮಾಡಿಕೊಂಡು ಅವರನ್ನು ಪ್ರೀತಿಯಿಂದ ಬೆಳೆಸಬೇಕು.
* ಮಕ್ಕಳ ವೈಯಕ್ತಿಕ ಸ್ವಚ್ಛತೆಯಿಂದ ಹಿಡಿದು ಅವರ ಜೀವನ ರೂಪಿಸುವಲ್ಲಿ ತಾಯಿಯು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
* ಮಕ್ಕಳಿಗೆ ಒತ್ತಡದ ತಂತ್ರವನ್ನು ಅನುಸರಿಸಿದೆ ಅಕ್ಕರೆಯಿಂದ ಮೆದು ಮಾತುಗಳಿಂದ ಅವರನ್ನು ಪ್ರೋತ್ಸಾಹಿಸಬೇಕು.
* ಕಾಲಕ್ಕೆ ಮಕ್ಕಳ ಹಸಿವನ್ನು ನೀಗಿಸುವ ಜೊತೆಗೆ ಜ್ಞಾನದ ಹಸಿವನ್ನು ನೀಗಿಸುವ ಗಮನಹರಿಸಬೇಕು.
* ತನ್ನ ಕಷ್ಟ ನೋವು ಹತಾಶೆ ಅಸಹಾಯಕತೆಗಳನ್ನು ಮಕ್ಕಳ ಮುಂದೆ ಪ್ರದರ್ಶಿಸಿದೆ ಗೆಲ್ಲುವ ಛಲವನ್ನು ತುಂಬಬೇಕು.
* ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ಅವರ ಶಕ್ತಿಯನುಸಾರ ಬೆಳೆಯುವಂತೆ ನೋಡಿಕೊಳ್ಳಬೇಕು.
* ತನ್ನಿಂದ ಸಾಧ್ಯವಾಗದ್ದನ್ನು ನೀವು ಸಾಧ್ಯ ಮಾಡಲೇಬೇಕೆಂದು ಒತ್ತಡ ಹೇರಬಾರದು.
* ತನ್ನ ಬಗ್ಗೆ ಹಾಗೂ ಇತರರ ಬಗ್ಗೆ ಗೌರವವನ್ನು ಬೆಳೆಸುವ ಕೊಳ್ಳುವಂತೆ ಮಗುವಿಗೆ ಮಾರ್ಗದರ್ಶನ ನೀಡಬೇಕು.
*ತಂದೆಯ ಪಾತ್ರ* :-
ತಂದೆ ಮಕ್ಕಳ ಭವಿಷ್ಯದ ಆಧಾರಸ್ತಂಭ. ಆದರೆ ಮಕ್ಕಳು ತಂದೆಯ ಬಳಿ ಬರುವುದು ಮುಕ್ತವಾಗಿ ಹಂಚಿಕೊಳ್ಳುವುದು ಕಡಿಮೆ. ಹಾಗಾಗಿ ತಂದೆಯಾದವನು ತನ್ನ ಮಕ್ಕಳ ಬೆಳವಣಿಗೆಯ ಬಗ್ಗೆ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ.
* ಮಕ್ಕಳಿಗೆ ಉತ್ತಮವಾದ ಅವಕಾಶಗಳನ್ನು ಒದಗಿಸಿ ಕೊಡಬೇಕಾಗುತ್ತದೆ.
* ದುಶ್ಚಟಗಳ ದಾಸನಾದ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಬೇಕು.
* ಮಕ್ಕಳ ಬೇಡಿಕೆಗಳನ್ನು ಅಗತ್ಯಕ್ಕನುಸಾರವಾಗಿ ಪೂರೈಸುತ್ತಾ ಹೊರಗಿನ ಪ್ರಪಂಚದ ಅರಿವನ್ನು ಮೂಡಿಸುವುದು.
* ಮಕ್ಕಳ ಮನಸ್ಸಿನಲ್ಲಿ ಭಯ ಮೂಡಿಸಿದೆ ಅಂತರ್ಗತ ಪ್ರೀತಿ ಅನಾವರಣಕ್ಕೆ ಅವಕಾಶ ನೀಡಬೇಕು.
* ಸಾಧಕರ ದಾರ್ಶನಿಕರ ಕಥೆಗಳನ್ನು ಹೇಳುವುದು ಮತ್ತು ಪುಸ್ತಕಗಳನ್ನು ತಂದು ಓದಿಸುವುದನ್ನು ರೂಢಿಸಬೇಕು.
* ದುಡಿಯುವೆ ನೆಂಬ ಅಹಂಕಾರಕ್ಕಿಂತ ಹೊಣೆಗಾರಿಕೆ ಮಹತ್ವವನ್ನು ಅರಿತು ಕರ್ತವ್ಯ ನಿಭಾಯಿಸಬೇಕು.
,* ಮಕ್ಕಳಿಗೆ ಒಳ್ಳೆಯ ಸ್ನೇಹಿತ ಮಾರ್ಗದರ್ಶಕನಾಗಿರಬೇಕು.
ತಂದೆ ತಾಯಿ ಇಬ್ಬರು ಎರಡು ಕಣ್ಣುಗಳಾಗಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಎತ್ತು ಏರಿಗೆ ಕೋಣ ನೀರಿಗೆ ಎಂಬಂತಾಗಿದೆ ಸಮಭಾವದಿ ಹೊಣೆಗಾರಿಕೆಯನ್ನು ಹೊತ್ತು ಮಕ್ಕಳನ್ನು ಬೆಳೆಸಬೇಕು
*ತಂದೆ-ತಾಯಿಗಳ ಜಂಟಿ ಪಾತ್ರ* :-
* ಮಕ್ಕಳ ಎದುರುಗಡೆ ಪರಸ್ಪರ ಜಗಳವಾಡುವುದು ಅಸಹಕಾರ ತೋರಿಸುವುದನ್ನು ಮಾಡಬಾರದು.
* ಹೊಣೆಗಾರಿಕೆಯ ಪರಭಾರೆ ಮಾಡಬಾರದು.
* ತಮ್ಮ ಪಾಲಿನ ಕರ್ತವ್ಯವನ್ನು ತುಂಬಾ ಪ್ರಾಮಾಣಿಕತೆಯಿಂದ ನಿರ್ವಹಿಸುವುದು.
* ವೈಯಕ್ತಿಕ ಬಿನ್ನಬಿಪ್ರಾಯ ಏನೇ ಇದ್ದರೂ ಮಕ್ಕಳ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು.
* ಮಕ್ಕಳಲ್ಲಿ ತಾರತಮ್ಯ ಮಾಡದೆ ಸಮಾನ ಪ್ರೀತಿಯನ್ನು ಹಂಚಬೇಕು.
* ನಮ್ಮ ಸಮಾಜ ಸಂಸ್ಕೃತಿ ಸಂಪ್ರದಾಯ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡಬೇಕು.
* ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಇಬ್ಬರೂ ಸಮ ಪಾಲುದಾರರು ಎಂಬುದನ್ನು ಅರಿತು ಅದರಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡದೆ ಇಬ್ಬರು ಮಕ್ಕಳ ಭವಿಷ್ಯವನ್ನು ರೂಪಿಸಬೇಕು.
ಒಟ್ಟಿನಲ್ಲಿ ಮಗುವಿನ ಉತ್ತಮ ಭವಿಷ್ಯ ರೂಪಿಸುವಲ್ಲಿ ವ್ಯಕ್ತಿತ್ವವನ್ನು ಕಲ್ಪಿಸಿಕೊಡುವಲ್ಲಿ ತಂದೆ-ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾವು ಬದುಕುತ್ತಿರುವುದೇ ಮಕ್ಕಳಿಗಾಗಿ ಎಂದ ಮೇಲೆ ಅವರನ್ನು ಬೆಳೆಸುವಲ್ಲಿಯೂ ಆ ಕಾಳಜಿಯನ್ನು ವಹಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಇಬ್ಬರದ್ದೂ ಆಗಿರುತ್ತದೆ. ಏನೇ ಸಮಸ್ಯೆಗಳಿದ್ದರೂ ಯಾವುದೇ ಕೊರತೆಗಳಾಗದಂತೆ ಎಚ್ಚರವಹಿಸಬೇಕು. ಅನುಕಂಪ ಅಸಹಾಯಕತೆಗಳನ್ನು ಬಂಡವಾಳ ವಹಿಸಿಕೊಳ್ಳದೆ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಹೀಗಾದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಮಕ್ಕಳು ಉತ್ತಮರಾದರೆ ತಂದೆತಾಯಿಗಳ ಶ್ರಮ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಪೋಷಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ತಮ್ಮ ತ್ಯಾಗವನ್ನು ಸಾರ್ಥಕಪಡಿಸಿಕೊಳ್ಳಬೇಕು ಆಗಿದೆ.
*ಅಮು ಭಾವಜೀವಿ*

🙏🙏🙏🙏🙏🙏🙏🙏🙏🙏🙏🙏🙏
ಸ.ಕಿ.ಪ್ರಾ.ಶಾಲೆ.ಕೋಟೆಹಾಳು.
ಸಿರುಗುಪ್ಪ ತಾಲೂಕು.
ಬಳ್ಳಾರಿ.ಜಿಲ್ಲೆ.
📲 9480106926
"ಶಿಕ್ಷಣದಲ್ಲಿ ಒಂದು ಅಕ್ಷಯ ತೃತೀಯ"
ಇಂದಿನ ತಾಂತ್ರಿಕ,ವೈಚಾರಿಕ ಜಗತ್ತಿನಲ್ಲಿ ನಾವಿದ್ದು ,ಇಂದಿಗೂ ಮೂಢನಂಬಿಕೆಗಳಿಗೆ ಅಂಟಿಕೊಂಡಿರುವುದು ನಮ್ಮ ಅವಿವೇಕತನ.
ನಾನು ಯಾವುದೇ ಪುರಾಣಗಳು,ಸಂಸ್ಕೃತಿಯ ವಿರೋಧಕನಲ್ಲ ,ನಮ್ಮ ಮುಗ್ಧತೆಯನ್ನು ಬಂಡವಾಳವಾಗಿಸಿಕೊಳ್ಳುತ್ತಿರುವವರಿಗೆ ನನ್ನ ಪ್ರತಿರೋಧ ಅಷ್ಟೇ,ಅಕ್ಷಯ ತೃತೀಯ ಎಂದೂ ಎಲ್ಲರೂ ಬಂಗಾರ ಕೊಳ್ಳುವ ಧಾವಂತದಲ್ಲಿದ್ದರೆ,ಇದರಿಂದ ಧನಿಕರಿಗೆ ಲಾಭವೇ ಹೊರತು ಮತ್ತೇನು ಅಲ್ಲ.ನಮ್ಮೆಲ್ಲ ಹಿರಿಯರು,ಬುದ್ಧಿಜೀವಿಗಳು,ಚಿಂತಕರು,ಪೋಷಕರು,ನಾಗರಿಕರು ಏಕೆ ಯೋಚಿಸುತ್ತಿಲ್ಲ?.
ಅಕ್ಷಯ ತೃತೀಯ ಹೆಸರಿನಲ್ಲಿ ವ್ಯಾಪಾರಿಗಳಿಗೆ ಲಾಭ ಮಾಡುವ ಬದಲು,ಶೈಕ್ಷಣಿಕ ಅಕ್ಷಯ ತೃತೀಯ ಯಾಕೆ ಮಾಡಬಾರದು ಎನ್ನುವುದು ನನ್ನ ವಾದ .
ಅಕ್ಷಯ ತೃತೀಯ ದಿನವನ್ನು ಆಚರಿಸಲೇಬೇಕೆನ್ನುವುದಾದರೆ,ಶಿಕ್ಷಣದಲ್ಲಿ ಒಂದು ಅಕ್ಷಯ ತೃತೀಯ ಆಚರಿಸೋಣವೇ,ಆ ದಿನದಂದು ಬಂಗಾರ ಖರೀದಿಗೆ ವಿನಿಯೋಗಿಸುವ ಹಣವನ್ನು ನಿಮ್ಮ ಮಕ್ಕಳಿಗೆ ಆ ದಿನ ಒಳ್ಳೆಯ ಪುಸ್ತಕಗಳನ್ನು ಕೊಡಿಸಬಹುದು ಅಲ್ಲವೇ?.ಎಸ್,ಎಸ್,ಎಲ್,ಸಿ ಮತ್ತು ಪಿ.ಯು.ಸಿ.ಮುಗಿಯುವ ಮಕ್ಕಳಿಗೆ ಅಕ್ಷಯ ತೃತೀಯ ನೆನಪಿಗಾಗಿ ಮುಂದಿನ ವರ್ಷದ ಪುಸ್ತಕಗಳನ್ನು ಕೊಡಿಸಿ,ಎಷ್ಟೋ ಬಡ ಮಕ್ಕಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ಹೀಗೆ ವಿವಿಧ ರೀತಿಯ ಪ್ರವೇಶಗಳು ದೊರೆತು ಹಣಕಾಸಿನ ನೆರವಿಲ್ಲದೆ ವಂಚಿತರಾದ ಮಕ್ಕಳಿಗೆ ಸಹಾಯ ಮಾಡಿ ಅಕ್ಷಯ ತೃತೀಯ ಮಾಡಿ,ಆ ದಿನದಂದು ನಿಮ್ಮ ಕೈಲಾದಷ್ಟು ಪುಸ್ತಕ ಖರೀದಿಸಿ ನಿಮ್ಮ ಮಕ್ಕಳಿಗೆ ಮತ್ತು ನೆರೆಹೊರೆಯ ಮಕ್ಕಳಿಗೆ ಕೊಡಿ,ಮಕ್ಕಳಿಗೂ ವೈಚಾರಿಕತೆ ಮೂಡಿಸಿ,ಸಮಾಜವನ್ನು ಬದಲಿಸುವ ಕಾಯಕ ಮಾಡೋಣ,
ಸಾಲಸೂಲ ಮಾಡಿ ಬಂಗಾರ ಖರೀದಿಸಿ ಮನೆಯವರನ್ನು ಮೆಚ್ಚಿಸುವ ಕೆಲಸ ಬಿಡಿ,ನಿಮಗೆ ಎಷ್ಟು ಸಾಧ್ಯವೋ ಆ ದಿನ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ ಅಕ್ಷಯ ತೃತೀಯ ಮಾಡೋಣ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤👤
ಲೇಖನ
ಶೀರ್ಷಿಕೆ :ವಿದ್ಯಾವಂತರೆಂದರೆ ಯಾರು????
ಮಳೆ ಬಂದಾಗ ನಮ್ಮ ಊರಿನ ರಸ್ತೆ ಚೆನ್ನಾಗಿ ಇರದ ಕಾರಣ 1ಕಿ.ಮಿ,ಶಾಲೆಗೆ ನಡೆದು ಕೊಂಡು ಹೋರಟೆ,ನಿರ್ಜನ ಪ್ರದೇಶವಾಗಿರುವುದರಿಂದ,ಒಬ್ಬಳೇ ನಡೆಯುತ್ತ ಸಾಗುವಾಗ.ಒಬ್ಬ ಬಡ ಹೆಂಗಸು ತನ್ನ ಮೂಲತಃ 5ವರ್ಷದ ಮಗನನ್ನು ತೊಡೆ ಮೇಲೆ ಹಾಕಿಕೊಂಡು ಅಳುತ್ತ ಪರಿತಪಿಸುತ್ತಿದ್ದಳು.ಏಕೆ ಎಂದು ಕೇಳುವ ಮುನ್ನ ಆ ಮಗುವಿನ ಪರಿಸ್ಥಿತಿ ಗಮನಿಸಿದಾಗ .ಆ ಮಗು ಮೂರ್ಛೆ ರೋಗದಿಂದ ಬಳಲುತ್ತಿದ್ದು.ಬಾಯಿಯಲ್ಲಿ ಜೊಲ್ಲುರಸ ಬರುತ್ತಿತ್ತು .ನಾನು ಚಿಕ್ಕ ವಯಸ್ಸಿನಲ್ಲಿ ಈ ರೋಗಕ್ಕೆ ತುತ್ತಾಗಿದ್ದರಿಂದ.ನನಗೆ ಆ ಮಗುವಿನ ಕಷ್ಟ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯಲ್ಲಿಲ್ಲ,ಆ ಮಗುವಿನ ಹತ್ತಿರ ಹೋಗಿ ಬೀಗವನ್ನು ನೀಡಿದೆ.ಆದರೂ ಕಾಯಿಲೆ ಹತೋಟಿಗೆ ಬರಲ್ಲಿಲ್ಲ.ಯಾವುದೋ ಒಂದು ಕಾರು ಆ ದಾರಿ ಹಿಡಿದು ಬರುತ್ತಿತ್ತು ,ಕಾರನ್ನು ತಡೆ ಹಿಡಿದೆ,ಕಾರಿನಲ್ಲಿದ್ದ ಶ್ರೀಮಂತ ವಿದ್ಯಾವಂತ ವ್ಯಕ್ತಿ ನಮ್ಮ ಪರಿಸ್ಥಿತಿ ಕಂಡು ಸಹಾಯ ಮಾಡಲು ಹಿಂಜರೆದ,ಏನು ಮಾಡಬೇಕು ಎಂದು ಗೊತ್ತಗಲ್ಲಿಲ್ಲ,ಯಾವುದೇ ದೂರವಾಣಿ ಕರೆಯು ಹೋಗದ ಬಾರದ ಸ್ಥಳ.ಆ ತಾಯಿ ಮಾಡಿದ ಪುಣ್ಯದ ಫಲವೇ ಏನೋ ಎಂಬ಼ಂತೆ ಒಂದು tata acಬ಼ಂತು.ಆ ವ್ಯಕ್ತಿ ಮದ್ಯಪಾನ ಧೂಮಪಾನ ವ್ಯಸನಿ ಆಗಿದ್ದು,ಅವನ ಹತ್ತಿರ ಸಹಾಯ ಕೇಳಲು ನನಗೆ ಮನಸ್ಸಾಗಿಲ್ಲಿಲ್ಲ.ಆದರೂ ಆ ವ್ಯಕ್ತಿಯೇ ಗಾಡಿ ನಿಲ್ಲಿಸಿ ಆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದನು,ತಾಯಿಗೆ ನನ್ನಲಿದ್ದ ಸ್ವಲ್ಪ ಹಣವನ್ನು ನೀಡಿ ಕಳುಹಿಸಿದೆ,ಸಂಜೆ ಬರುತ್ತೇನೆ ಎಂದು ಹೇಳಿ ಕಳುಹಿಸಿ.ಅವರ ಹಿಂದೆಯೇ ನನ್ನ ಇಬ್ಬರೂ ವಿದ್ಯಾರ್ಥಿಗಳನ್ನು ಕಳುಹಿಸಿದೆ.ಮತ್ತೆ ನನಗೆ ವೈದ್ಯರಿಗೂ ಕರೆ ಮಾಢಿ ಹೇಳಿದೆ,ನಂತರ ಶಾಲೆಯ ಹತ್ತಿರ ಬಂದು ಆ ವ್ಯಕ್ತಿ ನಾನು ಮದ್ಯಪಾನ ವ್ಯಸನಿಯೇ.ಆದರೇ ಕೆಟ್ಟವನಲ್ಲ,ನನಗೂ ಮಾನವೀಯತೆ ಇದೆ ಎಂದು ಹೇಳಿದ.ಆ ಸಮಯದಲ್ಲಿ ಆ ಶ್ರೀಮಂತ ವಿದ್ಯಾವಂತ ವ್ಯಕ್ತಿ ಗಿಂತ ಈ ವ್ಯಕ್ತಿ ಉನ್ನತ ಸ್ಥಾನ ದಲ್ಲಿದ್ದ,ಆ ಸಮಯದಲ್ಲಿ ನನ್ನ ಮನದಲ್ಲಿ ಮೂಡಿದ ಪ್ರಶ್ನೆ ನಿಜವಾಗಿಯೂ ವಿದ್ಯಾವಂತರೆಂದರೇ ಯಾರು?
👤👤👤👤👤👤👤👤👤👤👤👤
ಶಿಕ್ಷಕರ ಲೇಖನ
ಮಾನವೀಯಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ
ಮಾನವೀಯ ಮೌಲ್ಯಗಳು
ಒಬ್ಬ ಶಿಕ್ಷಕಿಯಾಗಿ ಮಾನವೀಯ ಮೌಲ್ಯಗಳನ್ನು ನನ್ನ ಪಾತ್ರ ಮಹತ್ತರವಾದುದು,ಏಕೆಂದರೆ ಇಂದು ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ,ಸ್ವಾರ್ಥಜೀವನ.ತಾನು ಒಬ್ಬನೇ ಬದುಕಬೇಕೆಂಬ ಅತಿಯಾದ ಆಸೆ.ವಸ್ತುಗಳಿಗಾಗಿ ಮನುಷ್ಯನನ್ನು ಉಪಯೋಗಿಸಿಕೊಂಡು ಮನುಷ್ಯರನ್ನು ವಸ್ತುಗಳಂತೆ ಬಿಸಾಡುವುದು,ಆಸೆ ತೀರಿವವರೆಗೂ ಅಷ್ಟೆ ಸಂಬಂಧಗಳಿಗೆ ಬೆಲೆ,ತಂದೆ ತಾಯಿ ಪ್ರೀತಿ ಒಂದೇ ನಿಷ್ಕಲ್ಮಶವಾದ ಪ್ರೀತಿ ,ಇತರೆ ಸಂಬಂಧಗಳಿಗೆ ಅವಶ್ಯಕತೆ ಇದ್ದರಷ್ಟೆ ಬೆಲೆ,ಇದು ನಾನು ಜೀವನದಲ್ಲಿ ನೋಡಿರುವ ನೈಜ ಸತ್ಯಗಳು,ಎತ್ತ ಹೋದರೂ ರಾಮ ಲಕ್ಷ್ಮಣರಂಥಹ ಸಹೋದರರು,ಎತ್ತ ಹೋದರೂ ದೂರ್ಯೋಧನ ಕರ್ಣರಂತಹ ಸ್ನೇಹಿತರು.ಎತ್ತ ಹೋಯಿತು ರಾಮನಲ್ಲಿದ್ದ ಪಿತೃಪ್ರೇಮ ,ಎತ್ತ ಹೋಯಿತು ಪಾಂಡವರಲ್ಲಿದ್ದ ಮಾತೃಪ್ರೇಮ.ಎತ್ತ ಹೋಯಿತು ಸೀತೆ ಊರ್ಮಿಳೆಯಲ್ಲಿದಂತಹ ಪತಿಭಕ್ತಿ,ಎತ್ತ ಹೋಯಿತು ರಾಮನಲ್ಲಿದ್ದ ಏಕಪತ್ನಿತ್ವ.ಈ ಪ್ರಶ್ನೆಗಳಿಗೆ ಇಂದೀನ ಸಮಾಜದಲ್ಲಿ ಉತ್ತರ ಹುಡುಕುವುದು ಕಠಿಣ,ಮದುವೆ ಎಂಬ ವೇದಿಕೆಯ ಮೇಲೆ ಕೊನೆವರೆಗೂ ನಾ ನಿನ್ನ ಜೊತೆಗಿರುವೆ ಎಂಬ ಮಾತಿಗಿಲ್ಲ ಬೆಲೆ,ಇತ್ತಿಚಿನ ಆಧುನಿಕಯುಗದಲ್ಲಿ ನೃತ್ಯದ ತರಗತಿ.ಸಂಗೀತ ತರಗತಿ,ವಿಭಿನ್ನ ವಿಭಿನ್ನ ಕೌಶಲಗಳನ್ನು ಬೆಳೆಸಲು ಮಕ್ಕಳನ್ನು ವಿಭಿನ್ನ ತರಗತಿಗಳಿಗೆ ಕಳುಹಿಸುವ ಪೋಷಕರು ಮಾನವೀಯ ಮೌಲ್ಯಯುತ ಕೌಶಲಗಳನೇಕೆ ಮರೆಯುತ್ತಿದ್ದಾರೆ,ಹಿ಼ಂದೆ ತಪ್ಪು ಮಾಡಿದಾಗ ತಿದ್ದಲು ಅಜ್ಜ ಅಜ್ಜಿ ಇರುತ್ತಿದ್ದರು,ಮನೆಯಲ್ಲಿ ಮಕ್ಕಳಿಗೆ ನೀತಿಕಥೆಗಳನ್ನು ಹೇಳುತ್ತಿದ್ದರು,ಆದರೆ ಇಂದು ಅಜ್ಜ ಅಜ್ಜಿಯನ್ನು ವೃದ್ಧ ಶ್ರಮಕ್ಕೆ ಸೇರಿಸಿ ಅವರನ್ನು ಕೊರಗಿ ಸಾಯುವಂತೆ ಮಾಡುತ್ತಾರೆ,ನಾನು ಬಾಲ್ಯದಲ್ಲಿದಲ್ಲಿದ್ದಾಗ ನನ್ನ ತಂದೆ ನನಗೆ ತ಼ಂದುಕೊಡುತ್ತಿದ್ದ ಬಾಲಮಿತ್ರ ಚ಼ಂದಮಾಮ ಕಥೆ ಪುಸ್ತಕ ನನ್ನ ಜೀವನದ ವಿಶೇಷ ಪ್ರಭಾವ ಬೀರುತ್ತಾ ಹೋಯಿತು,ನಾನು ಓದುತ್ತಿದ್ದಾಗ ಇದ್ದ ಕಲಿ ನಲೀ ಪುಸ್ತಕದಲ್ಲಿರುತ್ತಿದ್ದ ಪಾಠಗಳು ನೀತಿಯುತ ಸತ್ವಗಳಿಂದ ಕೂಡಿದ್ದವು.ಶಿವಭೂತಿಯ ಕಥೆ,ಮು಼ಂಗುಸಿಯ ಕಥೆ .ಹೀಗೆ ಉತ್ತಮ ನೀತಿಯುತ ಕಥೆಗಳು ನಮಗೆ ಅರಿವಿಲ್ಲದಂತೆ ಮಾನವೀಯ ಮೌಲ್ಯಗಳು ಮನೆ ಮಾಡುತ್ತಿದ್ದವು,ಈಗಿನ ಪರಿಸ್ಥಿತಿಯಲ್ಲಿ ಪುಸ್ತಕಗಳು ಪರಿಷ್ಕರಣೆಗೊಳ್ಳುತ್ತಿದ್ದು ಅದು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ,ಹಿಂದೆ ನಾವು ತಪ್ಪು ಮಾಡಿದಾಗ ನಮ್ಮ ತಪ್ಪುಗಳನ್ನು ತಿದ್ದಲು ಶಿಕ್ಷಕರು ಒಡೆಯುತ್ತಿದ್ದರು ಅದರ ಹಿಂದೆ ಕಲಿಕೆಯ ಉದ್ದೇಶವೀರುತ್ತದೆ ವಿನಃ ಯಾವುದೇ ವೈಶಮ್ಯವೂ ಇರುವುದಿಲ್ಲ,ಆದರೆ ಇಂದು ಮಕ್ಕಳನ್ನು ಹೊ಼ಡೆಯುವುದರಲ್ಲಿ ತನ್ನ ವಿದ್ಯಾರ್ಥಿಗಳನ್ನು ದಿಟ್ಟಿಸಿ ನೋಡುವ಼಼ಂತೆಯೂ ಇಲ್ಲ.ಕಾರಣrte.ಈವೆಲ್ಲಾ ಕಾರಣಗಳ ನಡುವೆಯೂ ನಾನು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಅವಿರತವಾಗಿ ಒಂಭತ್ತು ವರ್ಷಗಳಿಂದ ಪ್ರಯತ್ನಿಸುತ್ತಲೇ ಇರುವೆ,ಈ ನಡುವಿನ ನನ್ನ ಜೀವನದಬಂಡಿಯಲ್ಲಿ ನನ್ನ ಜೀವನದಲ್ಲಿ ಬಂದ ಕೆಲವೊಂದು ವಿಭಿನ್ನ ಸ್ವಭಾವದ ವಿದ್ಯಾರ್ಥಿಗಳ ಬಗ್ಗೆ ತಿಳಿಸಲು ಇಚ್ಚಿಸುವೆ,ಅವರಿಗೆ ನಾನು ಮಾನವೀಯ ಮೌಲ್ಯಗಳನ್ನು ಕಲಿಸಿದ್ದಕ್ಕಿಂತ ಅವರಿಂದ ಕಲಿತದ್ದೆ ಹೆಚ್ಚು .ಅದನ್ನು ಒಂದೊಂದಾಗಿ ಬಿಚ್ಚಿಡಬಯಸುತ್ತೇನೆ.ಉದ್ಯೋಗ ಸಿಕ್ಕಿ ಹೊಸತು ,ಹೊಸ ಉರುಪು,ಎಲ್ಲಾ ಕೆಲಸದಲ್ಲೂ ಉತ್ಸುಕತೆಯಿಂದ ಇದ್ದ ನನಗೆ ಮೊದಲು ಪ್ರಭಾವ ಬೀರಿದವನು ಒಬ್ಬ ಮುಸ್ಲಿಂ ವಿದ್ಯಾರ್ಥಿ .ಮೂರನೇ ತರಗತಿಯಲ್ಲಿ ಓದುತ್ತಿದ್ದ ತ಼ಂದೆ ತಾಯಿ ಇಲ್ಲದ ಎಳೆಯ ಮನಸ್ಸಿನ ಎಳೆಯ ಜೀವ,ನನ್ನ ತ಼ಂದೆ ತಾಯಿ ಸಂಪ್ರದಾಯವಾದಿಗಳಾಗಿದ್ದರಿಂದ ಪೂಜೆ ಪುನಸ್ಕಾರ ಮಾಡುವುದು ನನಗೆ ಮೊದಲಿನಿಂದನೂ ಅನುಸರಿಸಿಕೊಂಡು ಬಂದ ಗುಣ,ಅವನು ನನ್ನೋಂದಿಗಿದ್ದ ಪ್ರತಿಯೊಂದು ಕ್ಷಣ ನನಗೆ ಅರಿವಿಲ್ಲದಂತೆ ಜಾತಿ ಧರ್ಮಗಳ ಎಲ್ಲೆ ಮೀರಿದ ತಾಯಿ ಮಗ ಸಂಬ಼ಂಧ,ಅವನು ನನ್ನ ಆಗೆ ಪೂಜೆ ಮಾಡುವುದು ಶ್ಲೋಕಗಳನ್ನು ಹೇಳುವುದು ಮಾಡುತ್ತಿದ್ದ,ಆ ಪುಟ್ಟ ಪೋರ ತನಗೆ ಅರಿವಿಲ್ಲದಂತೆ ನನಗೆ ದೇವರೊಬ್ಬನೆ ನಾಮ ಹಲವು ಎಂಬ ಪಾಠವನ್ನು ಹೇಳಿಕೊಟ್ಟಿದ್ದ.ನಾನು ನಿಯೋಜಿತ ಶಿಕ್ಷಕಿಯಾಗಿ ಮತ್ತೊಂದು ಶಾಲೆಗೆ ನಿಯೋಜನೆಗೊಂಡಾಗ ಅಲ್ಲಿ ಅವನಿಗಿಂತ ಹೆಚ್ಚು ಪ್ರಭಾವ ಬೀರಿದ ವಿದ್ಯಾರ್ಥಿ ನಾಗರಾಜ ಇಲ್ಲಿಗೆ ಏಳು ವರ್ಷಗಳ ಹಿಂದೆ ಆ ಪುಟ್ಟ ಪೋರ ಐದನೇ ತರಗತಿ.ನಿಯೋಜಿತ ಶಾಲೆಗೆ ಪ್ರತಿದಿನ ಐದು ಕಿ ಮಿ ನಡೆಯಬೇಕಾಗಿತು,ಅಂತಹ ದಿನಗಳು ಸುಂದರ.ಶಾಲೆ ಮುಗಿಸಿಕೊಂಡು ನಡೆದು ಬರುವಾಗ ನನ್ನ ಜೊತೆಗೆ ಸ್ವಲ್ಪ ದೂರದವರೆಗೆ ಸಥ್ ಕೊಡುತ್ತಿದ್ದ ಲಂಬಾಣಿ ಜನಾಂಗದ ಹುಡುಗ ನಾಗರಾಜ ಮತ್ತು ಅವನ ಸಹೋದರಿ ಮಂಗಳ.ಹೀಗೆ ಒಂದು ದಿನ ನಡೆದು ಬರುವಾಗ ನನ್ನ ಚಪ್ಪಲಿ ಕಿತ್ತುಹೋಯಿತು.ನನ್ನ ಚಪ್ಪಲಿಯನ್ನು ಅಲ್ಲಿಯೆ ಬಿಟ್ಟು ಬರಿಗಾಲೀನಲ್ಲಿ ನಡೆದಾಗ ನನ್ನ ಕಾಲಿಗೆ ಬಿದಿರು ಮುಳ್ಳು ಚುಚ್ಚಿ ಹೆಚ್ಚು ರಕ್ತ ಬಂದೀತು,ನನ್ನ ಜೊತೆಯಲ್ಲಿದ್ದ ನಾಗರಾಜ ಮತ್ತು ಮಂಗಳ ಇಬ್ಬರೂ ನನ್ನ ಕಾಲಿನಲ್ಲಿ ಬರುತ್ತಿದ್ದ ರಕ್ತವನ್ನು ಹೊರೆಸಿದರು.ಹೇಗೊ ನನ್ನ ಕಾಲಿಗೆ ಕರವಸ್ತ್ರವನ್ನು ಕಟ್ಟಿ ನನ್ನನ್ನು ಅಂದು ಬಸ್ ನಿಲ್ದಾಣದವರೆಗೂ ಬೀಳ್ಕೊಟ್ಟಾಗ ಅವರ ಕಣ್ಣಿನಲ್ಲಿದ್ದ ಮುಗ್ದನೋಟ ಕಣ್ಣಿಗೆ ಕಟ್ಟಿದಂತೆ ಇದೆ,ಮಾರನೇಯ ದಿನ ನಾನು ನಡೆದು ಬರುವಾಗ ಅವನ ಸಹೋದರಿ ಮಾತ್ರ ನನ್ನ ಜೊತೆ ನಡೆದಳು.ನನಗೆ ನಮ್ಮ ಮನೆಯಿಂದ ದೂರವಾಣಿ ಕರೆ ಬ಼ಂದ ಕಾರಣ ಅವನ ಬಗ್ಗೆ ವಿಚಾರಿಸಲಿಲ್ಲ,ಅಮ್ಮನ ಜೊತೆ ಮಾತಾನಾಡುತ್ತ ನನ್ನ ರಕ್ತದ ಹೆಜ್ಜೆ ಗುರುತುಗಳನ್ನು ನೋಡುತ್ತ ಶಾಲೆ ಕಡೆ ನಡೆದೆ,ಇನ್ನೂ ಅವನು ಬಂದಿರಲಿಲ್ಲ,ಅಲ್ಲಿನ ಶಿಕ್ಷಕಿಯ ಮಾತಾನಾಡಿ ನನ್ನ ತರಗತಿಯ ಕಡೆಗೆ ನಡೆದೆ ನನ್ನ ಹಿಂದೆಯೆ ಜೋರಾಗಿ ಬಂದ ನಾಗರಾಜ ಮೀಸ್ ಎಂದು ಕೂಗಿದನು,ತಿರುಗಿ ನೋಡಿದೆ,ಅವನ ಕೈಲಿದ್ದ ನನ್ನ ಚಪ್ಪಲಿಗಳನ್ನು ತೋರಿಸಿ ಮಿಸ್ ಇದಕ್ಕೆ ಮೊಳೆ ಹೊಡೆದು ತಂದಿದ್ದೀನಿ ನೋಡಿ ಮಿಸ್ ಎಂದಾಗ ನನ್ನ ಕಣ್ಣಿನಲ್ಲಿ ನೀರು ತುಂಬಿ ಬಂದಿತು,ವಿನಯತೆಯ ಪಾಠವನ್ನು ನಾಗರಾಜ ನನಗೆ ಪ್ರಯೋಗಿಕವಾಗಿ ಹೇಳಿಕೊಟ್ಟಿದ್ದ.ನಂತರದ ಸ್ಥಾನ ನನ್ನ ಇತ್ತೀಚಿನ ವಿದ್ಯಾರ್ಥಿ ರಾಧಮ್ಮಳದು,ಅವಳು ಮುಗ್ದೇಯಂತು ಖಂಡಿತ ಅಲ್ಲ,ಮಾತು ಜೋರು.ಮನಸ್ಸು ಮೃದು ,ಎಲ್ಲ ವಿದ್ಯಾರ್ಥಿಗಳು ಅವಳಿಂದ ದೂರ ದೂರ.ಜಗಳ ಮಾಡುವುದರಲ್ಲಿ ಎತ್ತಿದ ಕೈ,ಹೀಗೆ truefriendshipಪಾಠ ಮಾಡುವ ಸಂದರ್ಭ .ನಿಮ್ಮ ಸ್ನೇಹಿತರು ಯಾರು ಎಂದು ಕೇಳುತ್ತಾ ಹೋದೆ.ಒಬ್ಬರು ಅವಳ ಹೆಸರನ್ನು ಹೇಳಲಿಲ್ಲ ,ಅವಳನು ಕೇಳಿದಾಗ ಅವಳು ಸದಾ ಅವಳೊಡನೆ ಜಗಳವಾಡುತ್ತಿದ್ದ ಮುನಿಸಿಕೊಳ್ಳುತ್ತಿದ್ದ ಮೊನಿಕಳ ಹೆಸರನ್ನು ಹೇಳಿದಳು.ಯಾಕೆ ಎಂದು ಕೇಳಿದಾಗ ಮಿಸ್ ಅವಳ ಜೊತೆ ಮುನಿಸಿಕೊಂಡರೂ ಮತ್ತೆ ಮತ್ತೆ ಅವಳ ಜೊತೆನೆ ಮಾತಾನಾಡಬೇಕು ಅನ್ನಿಸುತ್ತೆ,ಅವಳು ನನಗೆ ಆಪ್ತ ಗೆಳತಿ ಎಂದು ಹೇಳಿದಳು,ಅವಳಿಂದ ನನಗೆ ತಿಳಿದ ವಿಷಯ ಸ್ನೇಹಿತರ ನಡುವೆ ಆಗಲಿ ಸಂಬಂಧಗಳ ನಡುವೆ ಆಗಲಿ ವೈಮನಸ್ಯ ಬಂದಾಗ ಬಗೆಹರಿಸಿಕೊಳ್ಳಬೇಕೆ ಹೊರತು ಸಂಬಂಧಗಳನ್ನು ಕಡಿದುಕೊಳ್ಳುವ ಅವಶ್ಯಕತೆ ಇಲ್ಲ,ಹೀಗೆ ಕೆಲವೊಮ್ಮೆ ವಿದ್ಯಾರ್ಥಿಗಳೇ ಶಿಕ್ಷಕರಾಗಿ ತಮ್ಮಗೆ ಅರಿವಿಲ್ಲದ಼ಂತೆ ನಮಗೆ ಬೋದಿಸುತ್ತಾರೆ.ಇಲ್ಲಿ ನಾವು ವಿದ್ಯಾರ್ಥಿಗಳು ಮಾತ್ರ .ಕಲಿಕೆ ನಿರಂತರ
👤👤👤👤👤👤👤👤👤👤👤👤
"ಮನುಕುಲದಲ್ಲಿ ಸರ್ವಶ್ರೇಷ್ಠ ದಾರ್ಶನಿಕ ಶ್ರೀ ಕನಕದಾಸರು"
ಆತ್ಮೀಯರೇ ನನ್ನ ಹೆಸರು ಮನೋಹರ್ R ಮೂಲತಃ ಕೋಲಾರಿನವ ಪ್ರಸ್ತುತ ಗೌರಿಬಿದನೂರು ತಾಲ್ಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಈ ಲೇಖನವನ್ನು ಪ್ರಸ್ತುತ ಶ್ರೀ ಕನಕದಾಸರ ಜಯಂತಿ ಅಂಗವಾಗಿ ವಿಷಯ ವಿಶ್ಲೇಷಸುತ್ತಿದ್ದೆನೆ.
ಸಕಲ ಜೀವರಾಶಿಗಳಲ್ಲಿ ಯೋಚಿಸಬಲ್ಲ ಸಂದರ್ಭಕ್ಕೆ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲ ಏಕಮಾತ್ರ ಜೀವಿ ಮಾನವ .
ಹೌದು ಮಾನವ ಸಮಾಜ ಜೀವಿ ಸಮಾಜದ ರೀತಿ ನೀತಿಗಳನ್ನು ಅರಿತು ನಡೆಯಬೇಕು ಆಗ ಮಾತ್ರ ಸ್ವಸ್ಥ ಸಮಾಜವನ್ನು ಕಾಣಲು ಸಾಧ್ಯ ಹಾಗಾದರೆ ಸಮಾಜದ ಅಂಕುಡೊಂಕುಗಳನ್ನು ಓರೆ ಕೋರೆಗಳನ್ನು ಲೋಪದೋಷಗಳನ್ನು ಎತ್ತಿ ತೋರಿಸುವವರು ಯಾರು. ? ಉತ್ತಮ ಮಾರ್ಗದಲ್ಲಿ ಮನುಕುಲವನ್ನು ನಡೆಸುವವರು ಯಾರು. ? ಎಂಬುವುದನ್ನು ಇತಿಹಾಸದ ಪುಟ ತೆರೆದಾಗ ಸೂಫಿ ಸಂತರು, ದಾರ್ಶನಿಕರು,ವಚನಕಾರರು,ದಾಸರು ಇವರೆಲ್ಲರೂ ಜಾತಿ ಮತ ಪಂಥಗಳಿಗೆ ಸೀಮಿತವಾಗದೆ ಮನುಕುಲದ ಆಚಾರ ವಿಚಾರಗಳ ಸಮಾಜಕ್ಕೆ ಎತ್ತಿ ತೋರಿಸಿದವರು.
ಅವರಲ್ಲಿ ಹದಿನೈದನೇ ಮತ್ತು ಹದಿನಾರನೇ ಶತಮಾನದಲ್ಲಿ ಎದ್ದು ನಿಂತ ಸರ್ವ ಶ್ರೇಷ್ಠ ದಾರ್ಶನಿಕ ಶ್ರೀ ಕನಕದಾಸರು ಬಚ್ಚಮ್ಮ ಮತ್ತು ಬೀರಪ್ಪನ ವರಿಗೆ ತಿರುಪತಿ ತಿಮ್ಮಪ್ಪನ ಹರಕೆಯಿಂದ ಹುಟ್ಟಿದ ತಿಮ್ಮಪ್ಪನಾಯಕರು ಇವರು 1509 ರಿಂದ 1609 ರವರಿಗೆ ಮನುಕುಲಕ್ಕೆ ಹರಿದಾಸರಾಗಿ ,ಸಾಹಿತಿಯಾಗಿ ,ಕೀರ್ತನಕಾರರಾಗಿ, ಕವಿಯಾಗಿ ನೊಂದವರ ಬಾಳಿನ ಬೆಳಕಾಗಿ ದಾರಿ ದೀಪವಾದರು .
ಕನಕದಾಸರು ಬರೀ ಕುರುಬ ಜಾತಿಗೆ ಸೀಮಿತವಾದ ಭಕ್ತನಲ್ಲ ಎಲ್ಲಾ ಜಾತಿಗಳನ್ನು ಮೀರಿ ವಿಶ್ವಮಾನವರ ಸಾಲಿನವರು ಹದಿನೈದು ಮತ್ತು ಹದಿನಾರನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಸಮಾಜದ ದಾಸ (ಸೇವಕ)ಎಂದರೆ ತಪ್ಪಾಗಲಾರದು.
ಕನಕದಾಸರು ದಾಸನಾಗುವ ಮೊದಲು ಬಂಕಾಪುರದ ದಂಢನಾಯಕನಾದವನು ಕತ್ತಿ ವರಸೆ ಕಲಿತವನು, ಯುದ್ಧವನ್ನು ಬಲ್ಲವನು,ಭೂಮಿಯನ್ನು ಅಗೆಯುವ ಸಂದರ್ಭದಲ್ಲಿ ಕನಕ (ಚಿನ್ನ )ಸಿಕ್ಕರೆ ಬಡವರಿಗೆ ಕಷ್ಟದಲ್ಲಿ ಇದ್ದವರಿಗೆ ಧಾರಾಳವಾಗಿ ಹಂಚಿ ಮಾಡಿ ಜನರ ದೃಷ್ಟಿಯಲ್ಲಿ ತಿಮ್ಮಪ್ಪ ಹೆಸರಿನವ ಕನಕ ನಾದವನು ಯುದ್ಧವೊಂದರಲ್ಲಿ ಸೋತು ವೈರಾಗ್ಯ ಉಂಟಾಗಿ ಕಾಗಿನೆಲೆಯ ಆದಿಕೇಶವನ ದಿವ್ಯ ವಾಣಿಯಿಂದ ಕನಕ ಕನಕ ದಾಸನಾದವನು ಹೀಗೆ ಕನಕದಾಸರ ಜೀವನ ಒಂದು ಹಂತವನ್ನು ದಾಟಿ ಬಂಧನಗಳ ಸಂಕೋಲೆಯಿಂದ ಮುಕ್ತಿಯನ್ನು ಬಯಸಿ ಭಕ್ತಿಯ ಅಧ್ಯಾತ್ಮಿಕತೆಯ ಕಡೆ ಮುಖ ಮಾಡಿ ಗುರುಗಳನ್ನು ಅರಸಿ ಹೊರಟವರು ವಿಜಯನಗರದಲ್ಲಿ ಕೃಷ್ಣದೇವರಾಯನ ಗುರುಗಳಾಗಿದ್ದ ವ್ಯಾಸರಾಯರು ಕನಕದಾಸರ ಮುಖದ ಕಾಂತಿ ತೇಜಸ್ಸನ್ನು ಕಂಡು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ ಕೆಲವೇ ದಿನಗಳಲ್ಲಿ ವ್ಯಾಸ ರಾಯರಿಂದ ಮದ್ವ ತತ್ವ ಶಾಸ್ತ್ರಗಳನ್ನು ಕಲಿತು
ವ್ಯಾಸರಾಯರ ಶಿಷ್ಯರಲೇ ಶ್ರೇಷ್ಠ ಶಿಷ್ಯರಾಗಿ ಗುರ್ತಿಸಿಕೊಂಡವರು ಶ್ರೀ ಕನಕದಾಸರು.
ಸಮಾಜದಲ್ಲಿ ನಡೆಯುತ್ತಿರುವ ಮೇಲು, ಕೀಳು ಕಂದಾಚಾರಗಳು, ಮೌಢ್ಯತೆ , ಢಂಬಚಾರಗಳ ಬಗ್ಗೆ ಧ್ವನಿ ಎತ್ತಿದ್ದವರು. ಹೌದು ಸಾಮಾನ್ಯ ಜನರಿಗೆ ಮನಮುಟ್ಟುವ ಹಾಗೆ ತಮ್ಮ ಕೀರ್ತನೆಗಳ ಮೂಲಕ ಮನುಕುಲದ ತಪ್ಪುಗಳನ್ನು ತಿದ್ದುವ ಪ್ರಯತ್ನ ಮಾಡಿದವರು ಕುಲಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನೇನಾದರೂ ಬಲ್ಲಿರಾ ಸಮಾಜದ ಘರ್ಷಣೆಗೆ ಕಾರಣವಾದ ಕುಲ ವ್ಯವಸ್ಥೆಯ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಕುಡಿಯುವುದೊಂದೇ ಜಲ ನಿಂತಿರುವದೊಂದೇ ನೆಲ ಉಸಿರಾಡುತ್ತಿರುವುದು ಒಂದೇ ಗಾಳಿ ಇವುಗಳಿಗಿಳದ ಕುಲ ಭೇದ ನಿಮಗೆತಕ್ಕಯ್ಯ ಎಂದು ಚೇಡಿಸಿದವರು ಸತ್ಯವನ್ನು ಅರಿಯದ ಜನರಿಗೆ ಸತ್ಯದ ಸನ್ಮಾರ್ಗವನ್ನು ತೋರಿದವರು
ಜಾತಿ ಕುಲ ಎಂಬುವುದು ಹುಟ್ಟಿನಿಂದ ಬರುವಂಥದ್ದಲ್ಲ ನಾವು ಸೃಷ್ಟಿಸಿಕೊಂಡಿರುವ ಬಲೆ ಹೌವುದಲ್ಲವೇ ಅದನ್ನು ಕಿತ್ತೆಸೆದು ಮಾನವನಾಗು ಅದರಲ್ಲೂ ವಿಶ್ವ ಮಾನವನಗೂ ದಾರ್ಶನಿಕರ ಕೂಗಿನಂತೆ ನಮ್ಮನ್ನು ನಾವು ಸಂಕುಚಿತಗೊಳಿಸಿಕೊಳ್ಳದೇ ಇಡೀ ವಿಶ್ವವನ್ನು ಪರಿಪೂರ್ಣ ದೃಷ್ಟಿಯಿಂದ ಕಾಣಬೇಕು ಪರಿವರ್ತನೆ ಜಗದ ನಿಯಮ ಶತಶತಮಾನಗಳಿಂದ ಹರಿಯುತ್ತಿರುವ ಕುಲದ ನೀರನ್ನ ಬತ್ತಿಸಿ (ಇಂಗಿಸಿ) ಹೊಸ ನೀರನ್ನು ಕಾರಂಜಿಯ ಹಾಗೆ ಹರಿಸಬೇಕಲ್ಲವೇ ಇದು ಯಾರಿಂದ ಸಾಧ್ಯ ನಮ್ಮಿಂದಲ್ಲ ? ನಿಮ್ಮಿಂದಲ್ಲ ? ಯಾಲ್ಲರಿಂದಲ್ಲ ?ಉತ್ತರ ನಿಮ್ಮ ಅಂತರಂಗದಿಂದಲೇ ಬರಲಿ ಬನ್ನಿ ಶ್ರೀ ಕನಕದಾಸರ ಆದರ್ಶ ತತ್ವಗಳನ್ನು ಪಾಲಿಸೋಣ ನವ ಸಮಾಜದ ಕನಸಿಗೆ ನಾವು ನನಸಗೋಣ ಎಲ್ಲರಿಗೂ ಕನಕದಾಸರ ಜಯಂತಿಯ ಶುಭಾಶಯಗಳು
ಇಂತಿ ವಿಷಯ ವಿಶ್ಲೇಷಕರು
ಮನೋಹರ R
ಶಿಕ್ಷಕರು .
ಸ್ವಾತಂತ್ರ ಹಾದಿಯ ನೋಟ
ಉತ್ತರದಲ್ಲಿ ಉತ್ತುಂಗ ಹಿಮರಾಶಿ ದಕ್ಷಿಣದ ತುದಿಯಲ್ಲಿ ಅಗಾಧ ಶರಧಿ ತಾಯಿಯ ಶಿರದಲ್ಲಿ ಸದಾ ಹಿಮ ವರ್ಷ ತಾಯಿಯ ಚರಣದಲ್ಲಿ ನೀಲ ಬಿಂದುವಿನ ಜಲ ಸ್ಪರ್ಶ
ಒಂದೆಡೆ ಕಾಡು ಇನ್ನೊಂದಡೆ ವಿಶಾಲ ನದಿ ಬಯಲು ಒಂದೆಡೆ ದಗಿಸುವ ಮರುಭೂಮಿ ಇನ್ನೊಂದೆಡೆ ಧುಮ್ಮುಕ್ಕಿ ಹರಿಯುವ ಜಲಧಾರೆ ಎತ್ತ ನೋಡಿದರೂ ಹಚ್ಚಹಸಿರಿನ ಲೋಕ
ಬೆಟ್ಟ ಗುಡ್ಡಗಳ ಸಾಲು ಸಾಲು ಇದು ನಮ್ಮ ಭಾರತ ಇದು ನಮ್ಮ ಭಾರತ
ಸ್ವರ್ಗಕ್ಕೂ ಮುಕ್ತಿ ದ್ವಾರದದಂತಹ ಭಾರತದಲ್ಲಿ ಹುಟ್ಟಿದಂಥ ಪ್ರತಿಯೊಂದು ಜೀವಿಯೂ ಕೂಡ ಆ ದೇವತೆಗಳಿಂದ ಮಿಗಿಲು ಇದು ನಾನು ಹೇಳುತ್ತಿರುವ ಮಾತ್ತಲ್ಲ
ಆ ದೇವತೆಗಳೇ ಭಾರತವನ್ನು ಕೊಂಡಾಡಿರುವ ಮಾತುಗಳು ಇಂತಹ ಭಾರತದಲ್ಲಿ ಪುಣ್ಯ ಜೀವಿಗಳಾಗಿ ನಾವಿಂದು ಹುಟ್ಟಿರುವುದೇ ವಿಶೇಷ
ಇಂದು ನಾವು 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಅದು ಹೇಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಆತಂಕದಿಂದ ಕಳವಳದಿಂದ ಇದಕ್ಕೆ ಕಾರಣವೇನು
ನಮ್ಮದೇ ದೇಶ ನಮ್ಮದೇ ಸ್ವಾತಂತ್ರ್ಯ ನಮ್ಮದೇ ಜನಗಳು ಆಚರಣೆ ಮಾಡುತ್ತಿರುವುದು ಹೇಗೆ... ಅದು ಹೆದರಿಕೆಯ ಪರಿಸ್ಥಿತಿಯಲ್ಲಿ
ಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅದು ಎಷ್ಟೋ ಮಹಾನ್ ಹುತಾತ್ಮ ನಾಯಕರನ್ನು ಸ್ಮರಿಸಬೇಕಾಗಿದೆ ಈ ಕ್ಷಣದಲ್ಲಿ
ನಮ್ಮ ದೇಶ ಹಿಂದೆ ಆಗಿತ್ತು ಹಿಂದೆ ಹೀಗಿತ್ತು ಅನ್ನುವುದಕ್ಕಿಂತ ಇಂದು ಹೇಗಿದೆ ಎಂಬುದು ಮುಖ್ಯ
ಆದದ್ದೆಲ್ಲ ಆಗಿ ಹೋಯಿತು ಮುಂದೆ ಆಗಬೇಕಾಗಿರುವುದು ಏನು ಅದನ್ನು ನಾವು ಇಂದು ಯೋಚನೆ ಮಾಡಬೇಕಿದೆ
ನಮ್ಮೆಲ್ಲ ನಾಯಕರು ಅವರ ಶಕ್ತಿ ಸಾಹಸ ಪ್ರತಿಭೆ ಕೊನೆಗೆ ತಮ್ಮ ಪ್ರಾಣವನ್ನು ಕೂಡ ದೇಶಕ್ಕಾಗಿ ಬಲಿದಾನ ಮಾಡಿದವರಲ್ಲ ಅವರ ತ್ಯಾಗ ಅವರ ಆದರ್ಶ ಅವರ ಮನೋಭಾವನೆ ಇವತ್ತು ನಮ್ಮದಾಗಬೇಕಾಗಿದೆ
ಭಾರತೀಯ ಸಂಸ್ಕೃತಿಯ ತಿರುಳನ್ನು ಪ್ರಪಂಚದ ಜನಮಾನಸದಲ್ಲಿ ಭದ್ರವಾಗಿ ಬಿತ್ತಿದಂತಹ ರಾಮಕೃಷ್ಣ ಪರಮಹಂಸರು ರಮಣ ಮಹರ್ಷಿಗಳು ಅವರ ಕಲ್ಪನೆಗಳು ನಮ್ಮ ಕಲ್ಪನೆಗಳ ಆಗಬೇಕಿದೆ
ಭಾರತೀಯ ಅಂತರ್ಯದಲ್ಲಿ ಅಡಗಿದಂತಹ ತತ್ವದ ಶಕ್ತಿಯನ್ನು ಬಡಿದೆಬ್ಬಿಸಿದ ಸ್ವಾಮಿ ವಿವೇಕನಂದರ ಕಲ್ಪನೆಗಳು ನಮ್ಮ ಯುವ ಜನರಲ್ಲಿ ಮೂಡಬೇಕಾಗಿದೆ
ಸಾಮಾಜಿಕ ಸುಧಾರಣಾ ಅಗ್ರಗಣ್ಯರ ದಂತಹ ರಾಜರಾಮ್ ಮೋಹನ್ ರಾವ್ ಜ್ಯೋತಿ ಬಾಪುಲೆ ದಯಾನಂದ ಸರಸ್ವತಿ ಬಸವಣ್ಣ ಕನಕದಾಸ ಈಶ್ವರಚಂದ್ರ ವಿದ್ಯಾಸಾಗರ್ ಅವರ ಆಲೋಚನೆಗಳು ಇವರ ಮನಸ್ಸಿನಲ್ಲಿ ಇದ್ದಂತಹ ಭವ್ಯ ಭಾರತದ ಚಿತ್ರಗಳು ನಮ್ಮ ಮನಸ್ಸಿನಲ್ಲಿ ಮುದ್ರಿತವಾಗಬೇಕಿದೆ
ಧಾರ್ಮಿಕ ಸುಧಾರಕರು ಕನಸು ಕಂಡಿದ್ದರಲ್ಲಿ ಆ ದಾರಿಯಲ್ಲಿ ನಾವು ಇಂದು ನಡೆಯಬೇಕಿದೆ
ವೀರ ಸರ್ವಕರ ಭಗತ್ ಸಿಂಗ್ ಚಂದ್ರಶೇಖರ ಆಜಾದ್ ಸುಭಾಶ್ಚಂದ್ರ ಬೋಸ್ ಮುಂತಾದ ಸಾವಿರಾರು ಕ್ರಾಂತಿಕಾರಿಗಳ ಉಪದೇಶಗಳು ನಮ್ಮನ್ನ ಉದ್ರೇಕಿಸಬೇಕಿದೆ
ವರಾಜ್ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಬಲ್ಲೆ ಕುಡಿಯುತ್ತೇನೆ ಎಂದು ಕುಡಿದಿಲ್ಲ ಬಾಲಗಂಗಾಧರ ತಿಲಕ್ ಭಾರತ ಬಿಟ್ಟು ತೊಲಗಿ ಎಂದು ಕೂಗಾಡಿ ಹೇಳಿದರಲ್ಲ ಮಹಾತ್ಮ ಗಾಂಧೀಜಿ ಅವರ ಆ ತತ್ವ ಆದರ್ಶಗಳು ನಮಗೆ ಇವತ್ತು ಮಾರ್ಗದರ್ಶನವಾಗಬೇಕಿದೆ
ಸ್ವತಂತ್ರದ ನಂತರ ಭಾರತ ದೇಶದ ರಾಷ್ಟ್ರಪತಿಗಳ ದಂತಹ ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್ ಈ ರೀತಿಯಾಗಿ ಹೇಳುತ್ತಾರೆ
ಸಾವಿರ ವರ್ಷಗಳ ನಂತರ ಭಾರತದಲ್ಲಿ ಸ್ವಾತಂತ್ರ್ಯ ಸೂರ್ಯನ ಉದಯವಾಗುತ್ತಿದೆ ಎಂದು ಅಂದ್ರೆ ಈ ಸಾಲುಗಳ ಅರ್ಥವೇನು
ಬ್ರಿಟಿಷರು ಇನ್ನೂರು ವರ್ಷಗಳ ಕಾಲ ದುರಾಡಳಿತ ನಡೆಸಿದ್ದು ಆದರೆ ಅದಕ್ಕಿಂತ ಅದೆಷ್ಟೋ ಪರಕೀಯರ ಆಕ್ರಮಣದಿಂದ ಭಾರತ ದೇಶ ನಲುಗಿ ಹೋಗಿದ್ದು
ಇದಕ್ಕೆ ಕಾರಣವೇನು
ಒಂದನೇ ಶತಮಾನದಿಂದ ಇಪ್ಪತ್ತನೆ ಶತಮಾನದವರೆಗೆ ಪೋರ್ಚುಗೀಸರು ಡಚ್ಚರು ಫ್ರೆಂಚರು ಮೊಗಲರು ಇತ್ಯಾದಿ ಇತ್ಯಾದಿ ದಾಳಿಗಳಿಂದ ಭಾರತ ಮಾತೆ ನನಗೆ ಹೋಗಿತ್ತು
[12/08, 4:45 PM] ಮನೋಹರ: ಇಪ್ಪತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಧೋನಿ ಹತ್ತಿದವರಲ್ಲ ಅದು ನಿಜವಾದ ಸ್ವಾತಂತ್ರ್ಯದ ಹೋರಾಟ ..ಸ್ವಾತಂತ್ರ್ಯದ ಹೋರಾಟ
ಹಾಗಾದರೆ ಸ್ವಾತಂತ್ರ್ಯವೆಂದರೆನು ಸ್ವಾತಂತ್ರ್ಯದ ಮೌಲ್ಯಗಳೆಂದರೆ ಈಗ ನಾವು ಅರ್ಥ ಮಾಡಿಕೊಳ್ಳಬೇಕಿದೆ
1947 ಆಗಸ್ಟ್ 15 ಒಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು ಹೌದು ಮಕ್ಕಳೇ ಇದು ಅತಿ ಸಂತೋಷದ ವಿಷಯವೇ ಅದರ ಜೊತೆಗೆ ಅತಿ ನೋವಿನ ಸಂಗತಿಯೆಂದರೆ ದೇಶ ವಿಭಜನೆ ಎನ್ನುವ ಅನಿಷ್ಟ
ಆದ್ದರಿಂದ ನಾವು ಇವತ್ತಿಗೂ ಕೊರಗುತ್ತಿದ್ದೇವೆ ಬಳಲುತ್ತಿದ್ದೇವೆ ನೋವನ್ನು ಅನುಭವಿಸುತ್ತಿದ್ದೇವೆ
ಭಾರತ ಸ್ವತಂತ್ರವಾಗಿದೆ ಆದರೆ ಅಖಂಡ ವಾಗಿಲ್ಲ ಭಾರತದಲ್ಲಿ ಹಿಂದಿಗೂ ದಿನೇ ದಿನೇ ಧರ್ಮಧರ್ಮಗಳ ನಡುವೆ ವೈಷಮ್ಯ ಬೆಳೆಯುತ್ತಿದೆ
ಭಾರತ ದೇಶದಲ್ಲಿ ಹಿಂದೂ ಮುಸ್ಲಿಂ ಸಹೋದರರ ನಡುವೆ ಸಂಕುಚಿತ ಮನೋಭಾವವುಳ್ಳ ಮನಸ್ಸುಗಳು ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ಕೆಲಸ ನಡೆಯುತ್ತಿದೆ
ಹಾಗಾದರೆ ಇದಕ್ಕೆ ಕಾರಣವೇನು
ಹೌದು ಮಕ್ಕಳೇ ನಮ್ಮಲ್ಲಿನ ಐಕ್ಯತೆಯೇ ಕೊರತೆ ಅಂದು ರಾಜ ರಾಜರ ನಡುವೆ ಐಕ್ಯತೆ ಕೊರತೆಯ ಕಾರಣ ಬ್ರಿಟಿಷರು ಭಾರತ ದೇಶವನ್ನು ಉಂಡಾಡಿ ಗುಂಡಡಿ ಭಾರತದ ಸಂಪತ್ತನ್ನು ಲೂಟಿ ಮಾಡಿದರು ಇವತ್ತು ಗೆದ್ದಲು ಹಿಡಿದ ನರಿ ಬುದ್ದಿಯ ಪಾಕಿಸ್ತಾನ ವಕ್ರ ಬುದ್ಧಿಯ ಚೀನಾ ಆಗಾಗ ಶಾಂತಿ ಪ್ರಿಯವಾದ ಪ್ರೀತಿ ಪ್ರೇಮ ವಾತ್ಸಲ್ಯ ತ್ಯಾಗ ಸಹಬಾಳ್ವೆಗೆ ಹೆಸರಾದ ಭಾರತ ಮಾತೆ ಮೇಲೆ ಕಾಲು ಕೆರೆದು ಜಗಳಕ್ಕೆ ಬಂದು ಪೆಟ್ಟು ತಿಂದ ನಾಯಿಯ ಹಾಗೆ ಬಾಲ ಮುದುಡಿಕೊಂಡು ಹೋಗುತ್ತವೆ

ಚೌಡ್ಲಾಪುರ ಸೂರಿ(ಸುರೇಶ್ ಸಿ.ಆರ್.)
ಶಿಕ್ಷಕರು.ಸ.ಕಿ.ಪ್ರಾ.ಶಾಲೆ.ಕೋಟೆಹಾಳು.

ಉಮಾದೇವಿ ಎಚ್ ಎಸ್ ಸಹ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ
ಶ್ರೀಗಿರಿಪುರ ಕ್ಲಸ್ಟರ್ ಕುದೂರು ಹೋಬಳಿಮಾಗಡಿ ತಾಲ್ಲೂಕು ರಾಮನಗರ ಜಿಲ್ಲೆ👥👥👥👥👥👥👥👥👥👥👥👥

ನಮ್ಮ ಸುಂದರ ಬದುಕಿನ ನಾಳೆಗಳಿಗಾಗಿ ಇಂದು ನಮ್ಮ ಹೆಮ್ಮೆಯ ಸೈನಿಕರು ತನ್ನ ಮಡದಿ ಮಕ್ಕಳು ತಂದೆ ತಾಯಿ ಮನೆ ಕುಟುಂಬ ಅಷ್ಟೇ ಏಕೆ ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸುವ ಸಂಕಲ್ಪ ತೊಟ್ಟು ಎಷ್ಟೋ ದೂರದಿ ಅನ್ನ ನೀರು ಸಮಯಕ್ಕೆ ಸರಿಯಾಗಿ ಲಭಿಸದೆ ಒಂದೆಡೆ ಮೈಕೊರೆಯುವ ಚಳಿಯಲ್ಲಿ ಇನ್ನೊಂದೆಡೆ ಹಿಮಪಾತದಲ್ಲಿ ಮತ್ತೊಂದೆಡೆ ಬಿರು ಬಿಸಿಲಿನಲ್ಲಿ ನಮ್ಮ ಭಾರತ ಮಾತೆಯ ರಕ್ಷಣೆಗೆ ಅಂದರೆ ನಮ್ಮ ರಕ್ಷಣೆಗಾಗಿ ತನು ಮನವನ್ನು ಅರ್ಪಿಸುತ್ತಿದ್ದಾರೆ
ಆದರೆ ನಾವಿಲ್ಲಿ ಮಾಡುತ್ತಿರುವುದಾದರೂ ಏನು
ಜಾತಿ ಜಾತಿಗಳ ಹೆಸರಿನಲ್ಲಿ ರಾಜಕಾರಣ
ಧರ್ಮ ಧರ್ಮದ ಹೆಸರಿನಲ್ಲಿ ಕೋಮುಗಲಭೆ
ಅಧಿಕಾರದ ಆಸೆಯಲ್ಲಿ ದುರಾಡಳಿತ
ಇದೇನು ಭವ್ಯ ಭಾರತದ ಕನಸು ಇದೇನಾ ಭವ್ಯ ಭಾರತದ ಕನಸು
ನುಚ್ಚು ನೂರಾಗಿ ಹೋಯಿತಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸು
ಅದಕ್ಕಾಗಿ ನಾವೇನು ಮಾಡಬೇಕಾಗಿದೆ ಇಂದು..
ಹೌದು ಮಕ್ಕಳೇ ಜಾತಿ ಧರ್ಮ ಕುಲ ಗೋವುಗಳೆಲ್ಲ ಮರೆತು ಭಾರತ ಮಾತೆ ರಕ್ಷಣೆಗಾಗಿ ನಾವೆಲ್ಲರೂ ಒಂದಾಗಿ ಕೈಜೋಡಿಸಬೇಕಿದೆ
ಸರ್ವಧರ್ಮ ಸಮನ್ವಯ ವಾಗಿರುವಂತೆ ಈ ಭವ್ಯ ಭಾರತವನ್ನು ಐಕ್ಯತೆಯೊಂದಿಗೆ ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆ ನಮ್ಮೆಲ್ಲರ ಹೊಣೆಯಾಗಿದೆ
ಮನೋಹರ R
ಶಿಕ್ಷಕರು .
ನನ್ನ ಹೆಸರು ನಾಗೇಶ್ ಟಿ ಕೆ. ಮೂಲತಃ ಹಾಸನ ಜಿಲ್ಲೆಯವ, ಪ್ರಸ್ತುತ ಗೌರಿಬಿದನೂರು ತಾಲ್ಲೋಕಿನಲ್ಲಿ ವಾಸ. ನಾನೊಬ್ಬ ಕನ್ನಡ ಪ್ರೇಮಿ, ಹುಚ್ಚು ಅಭಿಮಾನಿಯಲ್ಲ ಕೇವಲ ಭಾಷಾಭಿಮಾನಿಯಷ್ಟೆ.
1956ರಲ್ಲಿ ಅಸ್ಥಿತ್ವಕ್ಕೆ ಬಂದ ‘ಮೈಸೂರು ರಾಜ್ಯ’ ಇಂದು ಶ್ರೀಗಂಧದ ಬೀಡು, ಶಿಲ್ಪಕಲೆಗಳ ತವರೂರು ಎಂದು ಕರೆಯಲ್ಪಡುವ ‘ಕರ್ನಾಟಕ’ 60ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡ ನಾಡು, ಕನ್ನಡ ರಾಜ್ಯೋತ್ಸವದ ವಿಶೇಷತೆ, ಕನ್ನಡಿಗರ ಭಾಷಾಭಿಮಾನದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ.
ಕನ್ನಡ ನಾಡಿನ ಇತಿಹಾಸ ಎರಡು ಸಾವಿರ ವರ್ಷಕ್ಕು ಹೆಚ್ಚಿನದು. ಹಲವು ಸಾಮ್ರಾಜ್ಯಗಳು ಹಾಗು ರಾಜವಂಶದವರು ಉದಾಹರಣೆಗೆ ಕನ್ನಡದ ಮೊದಲ ರಾಜವಂಶ ಬನವಾಸಿ ಕದಂಬರು, ಶಿಲ್ಪಕಲೆಯ ತವರೂರನ್ನು ಹುಟ್ಟಿಹಾಕಿದ ಹೊಯ್ಸಳರು, ತಲಕಾಡಿನ ಗಂಗರು, ಚರಿತ್ರೆಯ ಪುಟಗಳಲ್ಲಿ ಸುವರ್ಣ ಯುಗವನ್ನು ಬರೆದು ಹೋಗಿರುವ ವಿಜಯನಗರ ಸಾಮ್ರಾಜ್ಯ ಅರಸರು, ಹೀಗೆ ಹಲವಾರು ರಾಜವಂಶಗಳು ಕರ್ನಾಟಕವನ್ನು ಆಳಿ, ಕನ್ನಡದ ವೈಭವೋಪೆತ ಇತಿಹಾಸಕ್ಕೆ ಮತ್ತು ಶ್ರೀಮಂತ ಶಿಲ್ಪಕಲೆ ಸಾಹಿತ್ಯ ಸಂಸ್ಕೃತಿಯ ಹುಟ್ಟು ಹಾಗು ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ.
ಕರ್ನಾಟಕದ ಹುಟ್ಟಿನ ಬಗ್ಗೆ ತಿಳಿಯುವುದಾದರೆ 1905ರಲ್ಲಿ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್ ರವರು ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪಗೊಂಡವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ 1956ರ ನವೆಂಬರ್ ಒಂದರಂದು ಏಕೀಕೃತ ಕನ್ನಡ ನಾಡು ‘ಮೈಸೂರು ರಾಜ್ಯ’ ಎಂಬ ಹೆಸರಿನಲ್ಲಿ ಉದಯವಾಯಿತು. ನಂತರದ ಬೆಳವಣಿಗೆಗಳಲ್ಲಿ ಏಕೀಕರಣ ಚಳುವಳಿಯ ಹೋರಾಟಗಾರರ, ಕನ್ನಡ ಸಾಹಿತಿಗಳ, ಕನ್ನಡ ಪರ ಸಂಘಟನೆಗಳ ಆಶಯದಂತೆ, ದೇವರಾಜು ಅರಸರ ಕಾಲದಲ್ಲಿ 1973ರ ನವೆಂಬರ್ ಒಂದರಂದೇ ‘ಕರ್ನಾಟಕ ರಾಜ್ಯ’ ವೆಂದು ನಾಮಕರಣಗೊಂಡಿತು. ಇದರ ಸವಿನೆನಪಿಗಾಗಿಯೆ ಪ್ರತಿ ವರ್ಷ ನವೆಂಬರ್ ತಿಂಗಳು ಪೂರ್ತಿ ಕನ್ನಡಿಗರೆಲ್ಲರು ಹಬ್ಬವನ್ನು ಆಚರಿಸುತ್ತಾರೆ. ಇದುವೆ ಕನ್ನಡ ರಾಜ್ಯೋತ್ಸವ.

ಕನ್ನಡ ರಾಜ್ಯೋತ್ಸವ ಎಂದರೆ ಮನಸ್ಸಿಗಾಗುವ ಖುಷಿಯನ್ನ ಹೇಳಲಾಗದು. ‘ಕನ್ನಡದ ರವಿ ಮೂಡಿ ಬಂದ, ಮುನ್ನೆಡೆವ ಬೆಳಕನ್ನು ತಂದ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ ‘ ಎಂಬ ಕವಿವಾಣಿಗೆ ಹೆಜ್ಜೆ ಹಾಕುತ್ತಾ, ‘ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೆ ಗಂಧದ ಗುಡಿ’ ಎಂಬ ಅರ್ಥ ಗರ್ಬಿತ ಸಾಲುಗಳನ್ನು ಮೆಲುಕು ಹಾಕುತ್ತಾ, ‘ಕನ್ನಡ ಕನ್ನಡ ಕಸ್ತೂರಿ ಕನ್ನಡ, ಕನ್ನಡ ಕನ್ನಡ ಕರುನಾಡ ಕನ್ನಡ’ ಎಂದು ಗುನುಗುತ್ತಾ, ‘ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ’ ಎಂಬ ಸಾಲುಗಳನ್ನು ಎಲ್ಲರ ತನುಮನಗಳಲ್ಲಿ ತುಂಬುತ್ತಾ, ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ, ಕನ್ನಡ ಡಿಂಡಿಮ ಬಾರಿಸುವೆ ಎಂದು ಬರೆಯುತ ಹಾಡುವೆ ಎಂಬ ಅರ್ಥಪೂರ್ಣ ಸಾಲುಗಳಲ್ಲಿರುವ ಮಾಧುರ್ಯದಲ್ಲಿ ಮೈ ಮರೆತು ಕೋಟಿ ಕೋಟಿ ಕನ್ನಡಿಗರೆಲ್ಲ ಸಂಭ್ರಮದಿಂದ ಆಚರಿಸುವ ಕನ್ನಡ ಹಬ್ಬವೆ ‘ಕನ್ನಡ ರಾಜ್ಯೋತ್ಸವ’
ವರ್ಷಕೊಮ್ಮೆ ಬರುವ ನವೆಂಬರ್ ತಿಂಗಳಲ್ಲಿ ಕನ್ನಡದ ಅಭಿಮಾನದಲ್ಲಿ ತೇಲುವ ನಾವು ಕೆಲವೊಮ್ಮೆ ಹುಚ್ಚು ಅಭಿಮಾನಿಗಳಾಗಿಬಿಡುತ್ತೇವೆ. ಕನ್ನಡ ಭಾಷೆಯ ಉಳಿವಿಗೆ ಮತ್ತು ಅದರ ಬೆಳವಣಿಗೆಗೆ ಭಾಷಾಭಿಮಾನ, ಭಾಷೆಯ ಬಗ್ಗೆ ಆಪಾರವಾದ ಜ್ಞಾನ, ಭಾಷೆಯ ಶ್ರೀಮಂತಿಕೆಗೆ ಶ್ರಮಿಸುವ ಶಕ್ತಿ ಮುಖ್ಯವಾಗುತ್ತವೆ. ಕೇವಲ ನವೆಂಬರ್ ಕನ್ನಡಿಗರಾಗುವುದರಿಂದಾಲಿ, ತನ್ನ ಭಾಷೆಯ ಬಗ್ಗೆ ಹುಚ್ಚು ಅಭಿಮಾನ ಬೆಳೆಸಿಕೊಂಡು ಅನ್ಯ ಭಾಷೆಗಳನ್ನು ತಿರಸ್ಕರಿಸುವುದರಿಂದಾಗಲಿ ಕನ್ನಡ ಭಾಷೆಯ ಉಳಿವು ಹಾಗು ಬೆಳವಣಿಗೆ ಸಾಧ್ಯವಿಲ್ಲ. ಮಾತೃ ಭಾಷಾ ಕನ್ನಡಿಗರು ಕನ್ನಡವನ್ನು ಆರಾಧಿಸುವುದರ ಜೊತೆಗೆ ಇತರೆ ಭಾಷೆಗಳನ್ನು ಪ್ರೀತಿಸಿ, ನಮ್ಮೊಳಗಿರುವ ಅನ್ಯ ಭಾಷಿಗರಿಗೆ ಕನ್ನಡವನ್ನು ಕಲಿಸುವ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಕನ್ನಡಿಗರೆಲ್ಲರೂ ಕನ್ನಡ ಭಾಷೆಯನ್ನ ಹೆಬ್ಬಾಗಿಲಿನಂತೆ ಬಳಸಿ, ಇತರೆ ಭಾಷೆಗಳನ್ನು ಗಾಳಿ ಬೆಳಕಿಗೆ ಬೇಕಾದ ಕಿಟಕಿಗಳಂತೆ ಅಳವಡಿಸಿಕೊಳ್ಳಬೇಕು. ಭಾಷಾವಾರು ರಚನೆಯಾದ ಬೇರೆ ರಜ್ಯಗಳಲ್ಲಿ ಅಯಾ ರಾಜ್ಯಗಳ ಮಾತೃ ಭಾಷೆಯಲ್ಲೆ ವ್ಯವಹಿಸುವಂತೆ, ಮಾತನಾಡುವಂತೆ ಒತ್ತಡ ಹೇರುವ ಪರಿಸ್ಥಿತಿಯನ್ನ ಹೆಚ್ಚಾಗಿ ನೋಡಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಮಾತೃಭಾಷಾ ಅಳವಡಿಕೆಗೆ ಎಲ್ಲರ ಮೇಲೂ ಒತ್ತಡ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ.
ಮಕ್ಕಳ ಮೊದಲ ಶಾಲೆ ಮನೆ. ಇಲ್ಲಿಂದಲೇ ಮಾತೃಭಾಷಾ ಕಲಿಕೆ ಮತ್ತು ಭಾಷಾಭಿಮಾನ ಬೆಳೆಸುವುದು ಮುಖ್ಯವಾಗುತ್ತದೆ. ಮಕ್ಕಳಿಗೆ ನಮ್ಮ ನಾಡಿನ, ದೇಶದ, ಜಗತ್ತ್ತಿನ ಪರಿಚಯ ಮಾಡುತ್ತಾ ಅವರ ಜ್ಞಾನ ಭಂಡಾರವನ್ನು ಹೆಚ್ಚಿಸುವುದು,ಇನ್ನೂ ಹೆಚ್ಚು ತಿಳಿಯಲು ಪ್ರೆರೇಪಿಸುವುದು, ಮಕ್ಕಳ ಮನಸ್ಸಿನ ಸೂಕ್ಷತೆಗಳನ್ನ ಅರಿತು ಅವರ ಓದುವ ಹವ್ಯಾಸವನ್ನು ಬೆಳೆಸುವುದು, ಅವರ ಭಾಷಾಭಿವೃದ್ಧಿಗೊಳಿಸುವುದು ಜೊತೆ ಜೊತೆಯಲ್ಲೆ ಮಾತೃಭಾಷೆಯಲ್ಲೆ ಮನೋರಂಜನೆ ನೀಡುವ ಕಾರ್ಯಗಳಾಗಬೇಕು. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗಳೆಂದರೆ ಸರ್ಕಾರಿ ಕನ್ನಡ ಶಾಲೆಗಳು.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪೋಷಕರೇ ಹೆಚ್ಚು. ಇಂದಿನ ಸರ್ಕಾರಿ ಶಾಲೆಗಳು ಕೇವಲ ಕನ್ನಡ ಭಾಷೆಯನಷ್ಟೆ ಬೋಧಿಸುತ್ತಿಲ್ಲ, ಕನ್ನಡದ ಜೊತೆಗೆ ಪೋಷಕರು ಬೆನ್ನು ಹತ್ತಿ ಹೊರಟಿರುವ ಇಂಗ್ಲೀಷ್ ಅನ್ನು ಕೂಡ ಒಂದು ಭಾಷೆಯಾಗಿ ಬೋಧಿಸಲಾಗುತ್ತಿದೆ. ಇದರಿಂದ ಮಗು ತನ್ನ ಮಾತೃ ಭಾಷೆಯ ಜೊತೆಗೆ ಇತರೆ ಭಾಷೆಗಳನ್ನು ಕಲಿತು ಆ ಭಾಷೆಯ ಕಲೆ ಸಂಸ್ಕೃತಿ ವೈಚಾರಿಕತೆಗಳನ್ನು ತಿಳಿದು ತನ್ನ ಮಾತೃಭಾಷೆಯ ಬೆಳವಣಿಗೆಗೆ ಶ್ರಮಿಸಲು ಸಹಕಾರಿಯಾಗಿದೆ.
ಕನ್ನಡಿಗರು ಇಂದು ಅನ್ಯ ಭಾಷೆಗಳ ಕಡೆ ಒಲವು ತೋರುತ್ತಿದ್ದಾರೆ, ಆ ಭಾಷೆಗಳು ಕನ್ನಡಿಗರನ್ನ ರತ್ನ ಗಂಬಳಿ ಹಾಸಿ ಕರೆದಿಲ್ಲ. ಅನ್ಯ ಭಾಷೆ ಕಲಿಯುವುದರಿಂದ ಅವರ ಜೀವನೋಪಾಯ ಸುಲಭವಾಗಬಹುದು, ಇಚ್ಛಿಸಿದಲ್ಲಿ ನೌಕರಿ ಪಡೆಯಬಹುದು, ವಿಶಾಲವಾದ ಪ್ರಪಂಚದಲ್ಲಿ ಅಳುಕಿಲ್ಲದೆ ಸಂಚರಿಸಬಹುದು, ಕೂತಲ್ಲೆ ಕ್ಷಣಾರ್ಧದಲ್ಲಿ ಜಗತ್ತಿನ ಆಗು ಹೋಗುಗಳನ್ನು ತಿಳಿಯಬಹುದು ಎಂಬ ಕಲ್ಪನೆ ಕನ್ನಡಿಗರಲ್ಲಿರಿಬಹುದು.ಈ ಎಲ್ಲಾ ಸೌಲಭ್ಯಗಳು ನಮ್ಮ ಮಾತೃಭಾಷೆಯಲ್ಲೆ ದೊರೆಯುವಂತಾದರೆ ಕನ್ನಡಿಗರು ಕನ್ನಡಿಗರಾಗೆ ಉಳಿಯಬಹುದೇನೊ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಭಾಷೆ, ಕನ್ನಡ ನಾಡಿನ ಉಳಿವಿಗಾಗಿ ಹೋರಾಟ ಮಾಡುತ್ತಿರುವ ಎಲ್ಲಾ ಕನ್ನಡಪರ ಸಂಘಟನೆಗಳು ಒತ್ತಾಯ ಪೂರಕವಾಗಿ ಭಾಷಾ ಅಳವಡಿಕೆಯನ್ನು ಹೇರುವ ಪರಿಸ್ಥಿತಿ ದೂರವಾಗಿ, ಕನ್ನಡ ಭಾಷೆ ,ನಾಡು ಎಂದರೆ ನಮ್ಮನ್ನೆಲ್ಲ ಹೊತ್ತು ಸಲಹಿ, ಅನ್ನ ನೀಡಿ ಸಲಹುತ್ತಿರುವ ತಾಯಿ ಇದ್ದಂತೆ ಎಂಬ ಭಾವನಾತ್ಮಕ ಅಂಶಗಳನ್ನು ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಬಿತ್ತುವ ಕಾರ್ಯ ಮಾಡಬೇಕಾಗಿದೆ. ಅಲ್ಲದೆ ಅನ್ಯ ಭಾಷೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ನಮ್ಮ ಕನ್ನಡ ಭಾಷೆಯಲ್ಲೂ ದೊರೆಯುವಂತೆ ನಮ್ಮ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಈ ಕಾಯಕದಲ್ಲಿ ಪ್ರತಿಯೊಬ್ಬ ಕನ್ನಡಿಗನು ಕಂಕಣಬದ್ಧನಾಗಿ ಕಾರ್ಯ ನಿರ್ವಹಿಸಿದರೆ ಕನ್ನಡಿಗರಷ್ಟೆ ಅಲ್ಲದೆ ಅನ್ಯ ಭಾಷಿಗರು ನಮ್ಮ ಕನ್ನಡ ಬಾಷೆಯನ್ನ ಪ್ರೀತಿಸಿ ಅವರು ಅಳವಡಿಸಿಕೊಳ್ಳುವ ದಿನಗಳು ದೂರ ಉಳಿಯಲಾರವು.

ಈಗಾಗಲೇ ನಮ್ಮ ಕನ್ನಡ ನೆಲ ಜಲವನ್ನು ಕಳೆದುಕೊಂಡಿದ್ದೇವೆ, ಮುಂದೆ ಭಾಷೆಯನ್ನು ಕಳೆದುಕೊಳ್ಳುವ ಆತಂಕ ಬರುವುದು ಬೇಡ, ಕನ್ನಡ ಭಾಷೆ ಈ ನಾಡು ಸಮಸ್ತ ಕನ್ನಡಿಗರ ಆಸ್ತಿ. ‘ಸತ್ತಂತಿಹರನ್ನು ಬಡಿದೆಚ್ಚರಿಸಿ, ಕಚ್ಚಾಡುವವರನ್ನು ಕೂಡಿಸಿ ಒಲಿಸಿ’ ಎಂಬ ಕವಿವಾಣಿಯ ಆಶಯದಂತೆ ಕಾರ್ಯಪ್ರವೃತ್ತರಾಗೋಣ. ಗಡಿನಾಡೆ ಇರಲಿ, ನಡುನಾಡೆ ಇರಲಿ ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಸಾಧ್ಯವೊ ಅಲ್ಲೆಲ್ಲ ಕನ್ನಡದ ಕಂಪನ್ನು ಸೂಸಿ ಪರಿಮಳವನ್ನು ಚೆಲ್ಲೋಣ. ಕನ್ನಡದ ಕೀರ್ತಿ ಪತಾಕೆ ಹಾರಿಸೋಣ ಎಂದು ಶಪಥಗೈಯೋಣ. ಜೈ ಕನ್ನಡಾಂಬೆ.
-ಟಿ ಕೆ ನಾಗೇಶ
👤👤👤👤👤👤👤👤👤👤👤👤👤👤
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯು ಹಾಗೂ ಪುರಾತನ ಭಾಷೆಗಳಲ್ಲಿ ಒಂದಾದ "ಕನ್ನಡ" ಭಾಷೆಯ ಸ್ಥಿತಿ ಕೇವಲ ನವೆಂಬರ್ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗುತ್ತಿರುವುದು ಶೋಚನೀಯ.
ಶತಶತಮಾನಗಳಿಂದ ರಾಜಾಶ್ರಯವನ್ನು ಪಡೆದು ಉಚ್ಚ್ರಾಯ ಸ್ಥಿತಿಯಲ್ಲಿ ಬೆಳೆದು ಬಂದ ಕನ್ನಡ ಭಾಷೆ ಮತ್ತು ಸಾಹಿತ್ಯ ಇಂದು ಪರ ಭಾಷಾವ್ಯಾಮೋಹಕ್ಕೆ ಬಲಿಯಾಗುತ್ತಿರುವುದು ದುರಂತವೇ ಸರಿ. ಕನ್ನಡ ಭಾಷೆ ಮತ್ತು ಸಾಹಿತ್ಯ ಶ್ರೇಷ್ಠವಾಗಿಲ್ಲ ಎಂದೇನಿಲ್ಲ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯಲ್ಲಿ ಕನ್ನಡಕ್ಕೆ 29ನೇ ಸ್ಥಾನವಿದೆ. ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತರ ಮತ್ತು ಎಸ್. ಎಲ್. ಭೈರಪ್ಪನವರ ಕೃತಿಗಳು ಭಾರತದ 14 ಭಾಷೆಗಳಿಗೆ ಅನುವಾದಗೊಂಡಿವೆ. ಅಲ್ಲದೆ ಯಾವ ಭಾಷೆಗೂ ಸಿಗದಷ್ಟು 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ಇಂತಹ ಒಂದು ಮಾತೃಭಾಷೆ ಕನ್ನಡಿಗರಿಂದ ತಿರಸ್ಕಾರಕ್ಕೆ ಒಳಗಾಗುತ್ತಿರುವುದು ಕನ್ನಡಿಗರಾದ ನಾವು ಕನ್ನಡಕ್ಕೆ ಮಾಡುತ್ತಿರುವ ಅಪಮಾನ.
2011ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ 6.4ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ. ಇವರಲ್ಲಿ 5.5ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಇವರಲ್ಲಿ ಗಡಿಭಾಗದ ಕನ್ನಡಿಗರಿಗೆ ನೆರೆ ರಾಜ್ಯದ ಭಾಷೆಯೇ ಮಾತೃಭಾಷೆಯಾಗಿದ್ದರೂ ಅತಿಶಯೋಕ್ತಿಯಿಲ್ಲ. ಬೇರೆ ಭಾಷಿಗರಲ್ಲಿ ಇಲ್ಲದ ಈ ಮಾತೃಭಾಷೆ ತಾತ್ಸಾರ ನಮ್ಮ ಕನ್ನಡಿಗರಲ್ಲಿ ಏಕೆ? ಬೇರೆಯವರು ಅವರವರ ಭಾಷೆಗೆ ತೋರುವ ಅಭಿಮಾನ, ವಾತ್ಸಲ್ಯ ನಮಗೇಕೆ ಇಲ್ಲ? ಎಲ್ಲವೂ ಕೇವಲ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಇನ್ನಾದರೂ ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ನಾಡು, ನುಡಿಯ ರಕ್ಷಣೆಗಾಗಿ ಮೈಕೊಡವಿ ಎದ್ದು ನಿಲ್ಲಬೇಕು. ಇಲ್ಲವಾದರೆ, ಬಣವೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದಂತಾಗುತ್ತದೆ.
ಇಂದು ನಮ್ಮ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ ಹೆಚ್ಚುತ್ತಿದೆ. ಅದರಲ್ಲೂ ಇಂಗ್ಲೀಷ್ ಪ್ರಭಾವವಂತೂ ಅಧಿಕವಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಕನ್ನಡದ ಬಗ್ಗೆ ತಾತ್ಸಾರ ಮೂಡುತ್ತಿದೆ. ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣವೇ ಬೇಕೆಂಬ ಹಠಕ್ಕೆ ಬಿದ್ದು ಕನ್ನಡ ಶಾಲೆಗಳನ್ನು ಕಡೆಗಣಿಸುತ್ತಿದ್ದಾರೆ. ಇಂದು ಕನ್ನಡ ಶಾಲೆಗಳಲ್ಲಿಯೂ ಸಹ ಇಂಗ್ಲೀಷ್‌ನ್ನು ಒಂದು ವಿಷಯವಾಗಿ ಬೋಧಿಸಲಾಗುತ್ತಿದೆ, ಅದರೂ ಪೋಷಕರಿಗೆ ಪೂರ್ಣ ಇಂಗ್ಲೀಷ್ ಮಾಧ್ಯಮದ ಶಿಕ್ಷಣವೇ ಅನಿವಾರ್ಯವಾಗುತ್ತಿದೆ. ಬೇರೆ ಭಾಷೆಯನ್ನ ಕಲಿಯುವುದು ತಪ್ಪಲ್ಲ. ಆದರೆ ನಮ್ಮ ಮಾತೃ ಭಾಷೆಯನ್ನು ತಿರಸ್ಕರಿಸುವಷ್ಟು ಮನೋಧೋರಣೆ ಇದೆಯಲ್ಲ ಅದನ್ನು ಸಹಿಸಲಾಗದು. ನಮ್ಮ ಕನ್ನಡ ಭಾಷೆಯನ್ನು ನಮ್ಮ ಮನೆಯ ಮುಖ್ಯದ್ವಾರದಂತೆ ಇಟ್ಟುಕೊಳ್ಳೋಣ, ನಮ್ಮ ದಿನ ನಿತ್ಯದ ಓಡಾಟ ಅದರ ಮೂಲಕವೇ ಅಲ್ಲವೇ? ಹಾಗೆಯೇ ನಮ್ಮೆಲ್ಲ ವ್ಯವಹಾರಗಳೂ ಕನ್ನಡದಲ್ಲೇ ಆಗಲಿ, ಗಾಳಿ ಬೆಳಕಿಗೆ ಕಿಟಕಿಗಳನ್ನು ಇಟ್ಟುಕೊಂಡ ಹಾಗೆ ಪ್ರಪಂಚ ಜ್ಞಾನ ತಿಳಿಯಲು ಇಂಗ್ಲೀಷ್ ಅವಲಂಬಿಸೋಣ.
ಗಡಿಭಾಗದ ಜನರಲ್ಲಿ ನೆರೆ ರಾಜ್ಯದ ಭಾಷೆಯೇ ಮಾತೃಭಾಷೆಯಾಗಿರುತ್ತದೆ. ಆದರೆ, ಪಕ್ಕದ ರಾಜ್ಯದವರು ಮಾತ್ರ ನಮ್ಮ ಭಾಷೆಯನ್ನು ಇಷ್ಟು ಅವಲಂಬಿಸಿರುವುದಿಲ್ಲ. ಅದು ಅವರ ಭಾಷೆಯ ಮೇಲೆ ಅವರಿಗಿರುವ ಸ್ವಾಭಿಮಾನ ಎನ್ನಬಹುದು.
ನಾವು ಇಂದು ನಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆಗಳತ್ತ ಒಲವು ತೋರಿಸುತ್ತಿದ್ದೇವೆ ಎಂದರೆ, ಅದಕ್ಕೆ ಕಾರಣ ಆ ಭಾಷೆಯ ಶ್ರೀಮಂತಿಕೆಯೋ ಅಥವಾ ನಮ್ಮ ಭಾಷೆಯ ಬಡತನವೊ ಗೊತ್ತಿಲ್ಲ. ಯಾರೂ ಕೂಡ ನಮ್ಮ ಭಾಷೆಯನ್ನು ಪ್ರೀತಿಸಿ, ಅವಲಂಬಿಸಿ, ಅನುಕರಿಸಿ ಎಂದು ಉಡುಗೊರೆ ಕೊಟ್ಟಾಗಲೀ, ಸನ್ಮಾನ ನೀಡಿ ಗೌರವಿಸಿಯಾಗಲೀ ಕರೆಯುತ್ತಿಲ್ಲ, ನಾವೇ ನಾವಾಗಿ ಅವಲಂಬಿಸುತ್ತಿದ್ದೇವೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಇದೇ ರೀತಿ ಬೇರೆಯವರು ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಮತ್ತು ಅಚಾರ ವಿಚಾರಗಳನ್ನು ಅನುಸರಿಸುವಂತೆ, ನಾವು ನಮ್ಮ ಕನ್ನಡ ಭಾಷೆಯನ್ನು ಏಕೆ ಶ್ರೀಮಂತಗೊಳಿಸಬಾರದು?
ಇದಕ್ಕೆ ಇಂದು ಉದಾರಣೆ ನಮ್ಮ ಹೋಬಳಿ ಮಟ್ಟದಲ್ಲಿ 2 ಖಾಸಗಿ ಶಾಲೆಗಳಲ್ಲಿ ಶಾಲಾ ವಾರ್ಷಿಕೊತ್ಸವ ಎಂದು ಆಚರಿಸಿ ಬರೀ ಅನ್ಯ ಭಾಷೆಗಳ ಗೀತೆಯನ್ನು ಹಾಕಿ ನೃತ್ಯ ಮಾಡಿಸಿದರು. ನನಗ್ಯಾಕೋ ತುಂಬಾ ಬೇಸರವಾಯಿತು. ನಮ್ಮ ಶಾಲೆಯಲ್ಲಿಯೇ ಒಂದು ಉತ್ತಮ ಕನ್ನಡ ಕಾರ್ಯಕ್ರಮ ಏಕೆ ಮಾಡಬಾರದೆಂದು ಯೋಚಿಸಿ "ಕನ್ನಡ ನುಡಿ ಹಬ್ಬ" ಎಂಬ ಕಾರ್ಯಕ್ರಮ ಮಾಡಲಾಯಿತು. ಪ್ರಾರಂಭದಲ್ಲಿ ತಾತ್ಸಾರ ತೋರಿದ ಜನ ಕಾರ್ಯಕ್ರಮದ ನಂತರ ಹಾಡಿ ಹೊಗಳಿ ಬಿಟ್ಟರು. ಕಾರಣ ಆ ಕಾರ್ಯಕ್ರಮ ಆ ಜನತೆಯಲ್ಲಿ ಕನ್ನಡದ ಶ್ರೀಮಂತಿಕೆಯನ್ನು ತಿಳಿಸಿತು. ಇನ್ನು ಮುಂದೆಯೂ ಇಂತಹ ಕಾರ್ಯಕ್ರಮ ಬೇಕೆಂಬ ಆಶಯ ತೋರಿಸುತ್ತಿದ್ದಾರೆ. ಅಲ್ಲದೆ ಕನ್ನಡವನ್ನು ಪ್ರೀತಿಸುತ್ತಿದ್ದಾರೆ.
ನಮ್ಮ ಕನ್ನಡ ಸಂಘಟನೆಗಳ ಕನ್ನಡ ಕಾರ್ಯಕ್ರಮಗಳು ಕೇವಲ ಜಿಲ್ಲೆ ತಾಲ್ಲೂಕು ಮಟ್ಟಕ್ಕೆ ಸೀಮಿತವಾಗುತ್ತವೆ. ಇದನ್ನು ದಾಟಿ ಗ್ರಾಮ ಗ್ರಾಮಗಳಲ್ಲೂ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿದ್ದೇ ಆದರೆ ಗಡಿ ನಾಡ ಜನತೆಗೆ ಕನ್ನಡ ನಾಡ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಪರಿಚಯಿಸುವುದರ ಮೂಲಕ ಕನ್ನಡಾಭಿಮಾನವನ್ನು ಮೂಡಿಸಬಹುದು. ಈ ಒಂದು ಪ್ರಯತ್ನವಾಗಿ ಗೌರಿಬಿದನೂರು ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಜಯ್ಯಗಾರಹಳ್ಳಿಯಲ್ಲಿ "ಕನ್ನಡ ನುಡಿ ಹಬ್ಬ" ಎಂಬ ಕಾರ್ಯಕ್ರಮವನ್ನು ರೂಪಿಸಿ ಕರ್ನಾಟಕವಾಗಿದ್ದರೂ ಸಹ ಕನ್ನಡವೇ ಬಾರದ ಗ್ರಾಮಸ್ಥರಲ್ಲಿ ಮತ್ತು ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸುವ ಹೊಸ ಪ್ರಯತ್ನ ನಡೆಯುತ್ತಿದೆ.
ಕನ್ನಡ ರಾಜ್ಯೋತ್ಸವದ ಭರಾಟೆಯಲ್ಲಿ ಕೇವಲ ನವೆಂಬರ್ ಕನ್ನಡಿಗರಾದರೆ ನಮ್ಮ ಕುವೆಂಪುರವರು ಹೇಳಿರುವ ಹಾಗೆ ಸತ್ತಂತಿಹರನು ಬಡಿದೆಚ್ಚರಿಸಿ, ಕಚ್ಚಾಡುವವರನ್ನು ಕೂಡಿಸಿ ಒಲಿಸಿ, ಕನ್ನಡ ಡಿಂಡಿಮವನ್ನು ಬಾರಿಸೋಣ. ಅಲ್ಲದೆ, ಡಿ. ಎಸ್. ಕರ್ಕಿಯವರು ಹೇಳಿರುವ ಹಾಗೆ ನಡುನಾಡೇ ಇರಲಿ ಗಡಿನಾಡೇ ಇರಲಿ ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಸಾಧ್ಯವೋ ಅಲ್ಲೆಲ್ಲ ಕನ್ನಡ ಕಹಳೆಯನ್ನು ಊದಿ ಕನ್ನಡದ ಕರುನಾಡ ಸಿರಿನುಡಿಯ ದೀಪವನ್ನು ಹಚ್ಚೋಣ ಎಂದು ಶಪಥಗೈಯೋಣ
ಟಿ ಕೆ ನಾಗೇಶ
-ಟಿ ಕೆ ನಾಗೇಶ
👤👤👤👤👤👤👤👤👤👤👤👤👤👤
ಗಡಿನಾಡ ಕನ್ನಡ
2007ರಲ್ಲಿ ಶಿಕ್ಷಕನಾಗಿ ತೆಲುಗು ಪ್ರಭಾವವಿರುವ ಗಡಿನಾಡಿನ ಶಾಲೆಯಲ್ಲಿ ನಿಯೋಜನೆಗೊಂಡು ಕೆಲಸ ಪ್ರಾರಂಭಿಸಿದಾಗ ನನಗಾದ ಭಾಷಾ ಸಮಸ್ಯೆ ಹಾಗೂ ಇಲ್ಲಿನ ಜನರಿಗೆ ಕನ್ನಡ ಭಾಷೆಯ ಬಗ್ಗೆ ಆಳವಾದ ಜ್ಞಾನ ಅಥವಾ ಮಾತೃಭಾಷಾ ಅಭಿಮಾನ ಇಲ್ಲದಿರುವುದನ್ನು ನೋಡಿ ಈ 8 ವರ್ಷದಲ್ಲಿ ನನಗಾದ ಎಲ್ಲಾ ಅನುಭವಗಳನ್ನು ಕ್ರೋಢೋಕರಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.
"ಕನ್ನಡ ಬಾರದ ಊರಲ್ಲಿ
ಕನ್ನಡ ರಾಜ್ಯೋತ್ಸವ
ಆಚರಿಸಲು ಹೊರಟ
ನಾನೊಬ್ಬ ಕನ್ನಡಿಗ
ಇದು ಕರ್ನಾಟಕವೆಂದೇನಲ್ಲ
ಪಕ್ಕದಲ್ಲಿ ಆಂಧ್ರದ ಗಡಿಯಿದೆಯಲ್ಲ
ಇಲ್ಲಿ ಕನ್ನಡ ಕಾರ್ಯಕ್ರಮಗಳು
ನಡೆಯುವುದೇ ಇಲ್ಲ
ಕಾರಣ ಸಂಘಟನಾಕಾರರು
ಹೋಗಿ ಬರಲು ಸೂಕ್ತ ರಸ್ತೆಗಳಿಲ್ಲ".
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯು ಹಾಗೂ ಪುರಾತನ ಭಾಷೆಗಳಲ್ಲಿ ಒಂದಾದ "ಕನ್ನಡ" ಭಾಷೆಯ ಸ್ಥಿತಿ ಕೇವಲ ನವೆಂಬರ್ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗುತ್ತಿರುವುದು ಶೋಚನೀಯ.
ಶತಶತಮಾನಗಳಿಂದ ರಾಜಾಶ್ರಯವನ್ನು ಪಡೆದು ಉಚ್ಚ್ರಾಯ ಸ್ಥಿತಿಯಲ್ಲಿ ಬೆಳೆದು ಬಂದ ಕನ್ನಡ ಭಾಷೆ ಮತ್ತು ಸಾಹಿತ್ಯ ಇಂದು ಪರ ಭಾಷಾವ್ಯಾಮೋಹಕ್ಕೆ ಬಲಿಯಾಗುತ್ತಿರುವುದು ದುರಂತವೇ ಸರಿ. ಕನ್ನಡ ಭಾಷೆ ಮತ್ತು ಸಾಹಿತ್ಯ ಶ್ರೇಷ್ಠವಾಗಿಲ್ಲ ಎಂದೇನಿಲ್ಲ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯಲ್ಲಿ ಕನ್ನಡಕ್ಕೆ 29ನೇ ಸ್ಥಾನವಿದೆ. ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತರ ಮತ್ತು ಎಸ್. ಎಲ್. ಭೈರಪ್ಪನವರ ಕೃತಿಗಳು ಭಾರತದ 14 ಭಾಷೆಗಳಿಗೆ ಅನುವಾದಗೊಂಡಿವೆ. ಅಲ್ಲದೆ ಯಾವ ಭಾಷೆಗೂ ಸಿಗದಷ್ಟು 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ಇಂತಹ ಒಂದು ಮಾತೃಭಾಷೆ ಕನ್ನಡಿಗರಿಂದ ತಿರಸ್ಕಾರಕ್ಕೆ ಒಳಗಾಗುತ್ತಿರುವುದು ಕನ್ನಡಿಗರಾದ ನಾವು ಕನ್ನಡಕ್ಕೆ ಮಾಡುತ್ತಿರುವ ಅಪಮಾನ.
2011ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ 6.4ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ. ಇವರಲ್ಲಿ 5.5ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಇವರಲ್ಲಿ ಗಡಿಭಾಗದ ಕನ್ನಡಿಗರಿಗೆ ನೆರೆ ರಾಜ್ಯದ ಭಾಷೆಯೇ ಮಾತೃಭಾಷೆಯಾಗಿದ್ದರೂ ಅತಿಶಯೋಕ್ತಿಯಿಲ್ಲ. ಬೇರೆ ಭಾಷಿಗರಲ್ಲಿ ಇಲ್ಲದ ಈ ಮಾತೃಭಾಷೆ ತಾತ್ಸಾರ ನಮ್ಮ ಕನ್ನಡಿಗರಲ್ಲಿ ಏಕೆ? ಬೇರೆಯವರು ಅವರವರ ಭಾಷೆಗೆ ತೋರುವ ಅಭಿಮಾನ, ವಾತ್ಸಲ್ಯ ನಮಗೇಕೆ ಇಲ್ಲ? ಎಲ್ಲವೂ ಕೇವಲ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಇನ್ನಾದರೂ ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ನಾಡು, ನುಡಿಯ ರಕ್ಷಣೆಗಾಗಿ ಮೈಕೊಡವಿ ಎದ್ದು ನಿಲ್ಲಬೇಕು. ಇಲ್ಲವಾದರೆ, ಬಣವೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದಂತಾಗುತ್ತದೆ.
ಇಂದು ನಮ್ಮ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ ಹೆಚ್ಚುತ್ತಿದೆ. ಅದರಲ್ಲೂ ಇಂಗ್ಲೀಷ್ ಪ್ರಭಾವವಂತೂ ಅಧಿಕವಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಕನ್ನಡದ ಬಗ್ಗೆ ತಾತ್ಸಾರ ಮೂಡುತ್ತಿದೆ. ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದ ಶಿಕ್ಷಣವೇ ಬೇಕೆಂಬ ಹಠಕ್ಕೆ ಬಿದ್ದು ಕನ್ನಡ ಶಾಲೆಗಳನ್ನು ಕಡೆಗಣಿಸುತ್ತಿದ್ದಾರೆ. ಇಂದು ಕನ್ನಡ ಶಾಲೆಗಳಲ್ಲಿಯೂ ಸಹ ಇಂಗ್ಲೀಷ್‌ನ್ನು ಒಂದು ವಿಷಯವಾಗಿ ಬೋಧಿಸಲಾಗುತ್ತಿದೆ, ಅದರೂ ಪೋಷಕರಿಗೆ ಪೂರ್ಣ ಇಂಗ್ಲೀಷ್ ಮಾಧ್ಯಮದ ಶಿಕ್ಷಣವೇ ಅನಿವಾರ್ಯವಾಗುತ್ತಿದೆ. ಬೇರೆ ಭಾಷೆಯನ್ನ ಕಲಿಯುವುದು ತಪ್ಪಲ್ಲ. ಆದರೆ ನಮ್ಮ ಮಾತೃ ಭಾಷೆಯನ್ನು ತಿರಸ್ಕರಿಸುವಷ್ಟು ಮನೋಧೋರಣೆ ಇದೆಯಲ್ಲ ಅದನ್ನು ಸಹಿಸಲಾಗದು. ನಮ್ಮ ಕನ್ನಡ ಭಾಷೆಯನ್ನು ನಮ್ಮ ಮನೆಯ ಮುಖ್ಯದ್ವಾರದಂತೆ ಇಟ್ಟುಕೊಳ್ಳೋಣ, ನಮ್ಮ ದಿನ ನಿತ್ಯದ ಓಡಾಟ ಅದರ ಮೂಲಕವೇ ಅಲ್ಲವೇ? ಹಾಗೆಯೇ ನಮ್ಮೆಲ್ಲ ವ್ಯವಹಾರಗಳೂ ಕನ್ನಡದಲ್ಲೇ ಆಗಲಿ, ಗಾಳಿ ಬೆಳಕಿಗೆ ಕಿಟಕಿಗಳನ್ನು ಇಟ್ಟುಕೊಂಡ ಹಾಗೆ ಪ್ರಪಂಚ ಜ್ಞಾನ ತಿಳಿಯಲು ಇಂಗ್ಲೀಷ್ ಅವಲಂಬಿಸೋಣ.
ಗಡಿಭಾಗದ ಜನರಲ್ಲಿ ನೆರೆ ರಾಜ್ಯದ ಭಾಷೆಯೇ ಮಾತೃಭಾಷೆಯಾಗಿರುತ್ತದೆ. ಆದರೆ, ಪಕ್ಕದ ರಾಜ್ಯದವರು ಮಾತ್ರ ನಮ್ಮ ಭಾಷೆಯನ್ನು ಇಷ್ಟು ಅವಲಂಬಿಸಿರುವುದಿಲ್ಲ. ಅದು ಅವರ ಭಾಷೆಯ ಮೇಲೆ ಅವರಿಗಿರುವ ಸ್ವಾಭಿಮಾನ ಎನ್ನಬಹುದು.
ನಾವು ಇಂದು ನಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆಗಳತ್ತ ಒಲವು ತೋರಿಸುತ್ತಿದ್ದೇವೆ ಎಂದರೆ, ಅದಕ್ಕೆ ಕಾರಣ ಆ ಭಾಷೆಯ ಶ್ರೀಮಂತಿಕೆಯೋ ಅಥವಾ ನಮ್ಮ ಭಾಷೆಯ ಬಡತನವೊ ಗೊತ್ತಿಲ್ಲ. ಯಾರೂ ಕೂಡ ನಮ್ಮ ಭಾಷೆಯನ್ನು ಪ್ರೀತಿಸಿ, ಅವಲಂಬಿಸಿ, ಅನುಕರಿಸಿ ಎಂದು ಉಡುಗೊರೆ ಕೊಟ್ಟಾಗಲೀ, ಸನ್ಮಾನ ನೀಡಿ ಗೌರವಿಸಿಯಾಗಲೀ ಕರೆಯುತ್ತಿಲ್ಲ, ನಾವೇ ನಾವಾಗಿ ಅವಲಂಬಿಸುತ್ತಿದ್ದೇವೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಇದೇ ರೀತಿ ಬೇರೆಯವರು ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಮತ್ತು ಅಚಾರ ವಿಚಾರಗಳನ್ನು ಅನುಸರಿಸುವಂತೆ, ನಾವು ನಮ್ಮ ಕನ್ನಡ ಭಾಷೆಯನ್ನು ಏಕೆ ಶ್ರೀಮಂತಗೊಳಿಸಬಾರದು?
ಇದಕ್ಕೆ ಇಂದು ಉದಾರಣೆ ನಮ್ಮ ಹೋಬಳಿ ಮಟ್ಟದಲ್ಲಿ 2 ಖಾಸಗಿ ಶಾಲೆಗಳಲ್ಲಿ ಶಾಲಾ ವಾರ್ಷಿಕೊತ್ಸವ ಎಂದು ಆಚರಿಸಿ ಬರೀ ಅನ್ಯ ಭಾಷೆಗಳ ಗೀತೆಯನ್ನು ಹಾಕಿ ನೃತ್ಯ ಮಾಡಿಸಿದರು. ನನಗ್ಯಾಕೋ ತುಂಬಾ ಬೇಸರವಾಯಿತು. ನಮ್ಮ ಶಾಲೆಯಲ್ಲಿಯೇ ಒಂದು ಉತ್ತಮ ಕನ್ನಡ ಕಾರ್ಯಕ್ರಮ ಏಕೆ ಮಾಡಬಾರದೆಂದು ಯೋಚಿಸಿ "ಕನ್ನಡ ನುಡಿ ಹಬ್ಬ" ಎಂಬ ಕಾರ್ಯಕ್ರಮ ಮಾಡಲಾಯಿತು. ಪ್ರಾರಂಭದಲ್ಲಿ ತಾತ್ಸಾರ ತೋರಿದ ಜನ ಕಾರ್ಯಕ್ರಮದ ನಂತರ ಹಾಡಿ ಹೊಗಳಿ ಬಿಟ್ಟರು. ಕಾರಣ ಆ ಕಾರ್ಯಕ್ರಮ ಆ ಜನತೆಯಲ್ಲಿ ಕನ್ನಡದ ಶ್ರೀಮಂತಿಕೆಯನ್ನು ತಿಳಿಸಿತು. ಇನ್ನು ಮುಂದೆಯೂ ಇಂತಹ ಕಾರ್ಯಕ್ರಮ ಬೇಕೆಂಬ ಆಶಯ ತೋರಿಸುತ್ತಿದ್ದಾರೆ. ಅಲ್ಲದೆ ಕನ್ನಡವನ್ನು ಪ್ರೀತಿಸುತ್ತಿದ್ದಾರೆ.
ನಮ್ಮ ಕನ್ನಡ ಸಂಘಟನೆಗಳ ಕನ್ನಡ ಕಾರ್ಯಕ್ರಮಗಳು ಕೇವಲ ಜಿಲ್ಲೆ ತಾಲ್ಲೂಕು ಮಟ್ಟಕ್ಕೆ ಸೀಮಿತವಾಗುತ್ತವೆ. ಇದನ್ನು ದಾಟಿ ಗ್ರಾಮ ಗ್ರಾಮಗಳಲ್ಲೂ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿದ್ದೇ ಆದರೆ ಗಡಿ ನಾಡ ಜನತೆಗೆ ಕನ್ನಡ ನಾಡ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಪರಿಚಯಿಸುವುದರ ಮೂಲಕ ಕನ್ನಡಾಭಿಮಾನವನ್ನು ಮೂಡಿಸಬಹುದು. ಈ ಒಂದು ಪ್ರಯತ್ನವಾಗಿ ಗೌರಿಬಿದನೂರು ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಜಯ್ಯಗಾರಹಳ್ಳಿಯಲ್ಲಿ "ಕನ್ನಡ ನುಡಿ ಹಬ್ಬ" ಎಂಬ ಕಾರ್ಯಕ್ರಮವನ್ನು ರೂಪಿಸಿ ಕರ್ನಾಟಕವಾಗಿದ್ದರೂ ಸಹ ಕನ್ನಡವೇ ಬಾರದ ಗ್ರಾಮಸ್ಥರಲ್ಲಿ ಮತ್ತು ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸುವ ಹೊಸ ಪ್ರಯತ್ನ ನಡೆಯುತ್ತಿದೆ.
ಇಂದು ಶ್ರಮಿಸಿದರೆ
ಇನ್ನೊಂಬತ್ತು ತಿಂಗಳಲ್ಲಿ
ಹುಟ್ಟಬಹುದು ಒಂದು ಕಂದ......
ವಿಪರ್ಯಾಸವೆಂದರೆ ನವೆಂಬರ್ ಕಳೆದರೆ
ಮತ್ತೆ ಹನ್ನೊಂದು ತಿಂಗಳು
ಕಾಯಬೇಕು ನಾವಾಗಲು ಕನ್ನಡದ ಕಂದ......