ಅಭಿನಯ ಗೀತೆಗಳು

ಹಾವು ಅಂದ್ರೆ ಮರಿ ಗುಬ್ಬಿಗೆ

ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ
ಅಮ್ಮ ಅಮ್ಮ ಬುಸ್ಸ್ ಬುಸ್ಸ್ ಹಾವು ಹ್ಯಾಗಿರತ್ತೆ ||

ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ
ಒಳ್ಳೆ ಪ್ರಶ್ನೆ ಹಾವು-ಹ್ಯಾಗಿರತ್ತೆ ಹಾವು ಹ್ಯಾಗಿರತ್ತೆ
ಹಾವಿರತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ
ಸಪೂರ ಥಳ ಥಳ ಕೆಂಡದ ಕಣ್ಣು ಕಡ್ಡಿ ದಪ್ಪಗೆ ||

ಸೂರಿಗೆ ಸುತ್ತಿ ಜೋತಾಡತ್ತೆ ಗೋಧಿ ಬೆನ್ನು
ದೀಪದ ಹಾಗೆ ಉರಿತಿರತ್ತೆ ಹಾವಿನ ಕಣ್ಣು
ಬುಸ್ಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ
ಇಡಿ ಇಡಿಯಾಗಿ ನುಂಗ್ ಬಿಡುತ್ತೆ ಹಕ್ಕಿ ಮೊಟ್ಟೆ

ಹಕ್ಕಿಯ ಮೊಟ್ಟೆ ನುಂಗಿದ್ ಮೇಲೆ ಇಡಿ ಇಡೀಲಿ
ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ
ಹಕ್ಕಿ ಮರಿ ಹುಟ್ಕೋಳ್ಳತ್ತೆ ಹಾವಿನ ಹೊಟ್ಟೆಲಿ
ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ

ನಿಟ್ಟುಸಿರಿತ್ತು ಅಮ್ಮ ಗುಬ್ಬಿ ಇಲ್ಲ ಬಂಗಾರ
ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ ಮೇಲೆ ಹೇಳೋದ್ ಇನ್ನೇನು
ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು


ಒಂದು ಎರಡು ಬಾಳೆಲೆ ಹರಡು




ಒಂದು ಎರಡು ಬಾಳೆಲೆ ಹರಡು 

ಮೂರು ನಾಲ್ಕು ಅನ್ನವ ಹಾಕು

ಐದು ಆರು ಬೇಳೆ ಸಾರು

ಏಳು ಎಂಟು ಪಲ್ಯಕ್ಕೆ ದಂಟು

ಒಂಬತ್ತು ಹತ್ತು  ಎಲೆ ಮುದಿರೆತ್ತು

ಒಂದರಿಂದ ಹತ್ತು ಹೀಗಿತ್ತು

ಊಟದ ಆಟವು ಮುಗಿದಿತ್ತು.



ಮಳೆ ಬಂತು ಮಳೆ
(ಶಿಶುಗೀತೆ)

ಮಳೆ ಬಂತು ಮಳೆ,
ಕೊಡೆ ಹಿಡಿದು ನಡೆ

ಕೊಚ್ಚೆಯಲ್ಲಿ ಜಾರಿ ಬಿದ್ದು
ಬಟ್ಟೆಯೆಲ್ಲ ಕೊಳೆ|

ಬಿಸಿಲು ಬಂತು ಬಿಸಿಲು,
ಕೋಟು ಟೋಪಿ ತೆಗೆ

ಬಾವಿಯಲ್ಲಿ ನೀರು ಸೇದಿ
ಸೋಪು ಹಾಕಿ ಒಗೆ||



ನಮ್ಮ ಮಿಸ್ಸು ಬಹಳ ಒಳ್ಳೆಯವರು ಗೊತ್ತಾ!!


ಬಹಳ ಒಳ್ಳೆಯವರು  ನಮ್ಮ ಮಿಸ್ 
ಎನ್ನ ಹೇಳಿದ್ರು ಎಸ್ ಎಸ್ಸು  
ನಗುತ ನಗುತ ಮಾತಾಡ್ತಾರೆ !

ಸ್ಕ್ಹೂಲಿಗೆಲ್ಲ ಫೇಮಸ್ 
ಸ್ಕ್ಹೂಲಿಗೆಲ್ಲ ಫೇಮಸ್ !!

ಜಾಣ ಮರಿ ಅಂತಾರೆ
ಚಾಕ್ಲೆಟ್   ಇದ್ದರೆ  ಕೊಡುತಾರೆ 
ಜಾಣ ಮರಿ ಅಂತಾರೆ
ಚಾಕ್ಲೆಟ್  ಇದ್ದರೆ  ಕೊಡುತಾರೆ  ಗೊತ್ತಾ!

ಬೆನ್ನು ತಟ್ಟಿ ಕೆನ್ನೆ ಸವರಿ 
ಬೆಣ್ಣೆ ಕಂದ ಅನ್ನುತಾರೆ 
ಬೆನ್ನು ತಟ್ಟಿ ಕೆನ್ನೆ ಸವರಿ 
ಬೆಣ್ಣೆ ಕಂದ ಅನ್ನುತಾರೆ 

ಬಹಳ ಒಳ್ಳೆಯವರು  ನಮ್ಮ ಮಿಸ್ 
ಎನ್ನ ಹೇಳಿದ್ರು ಎಸ್ ಎಸ್ಸು  
ನಗುತ ನಗುತ ಮಾತಾಡ್ತಾರೆ !
ಸ್ಕ್ಹೂಲಿಗೆಲ್ಲ ಫೇಮಸ್ 
ಸ್ಕ್ಹೂಲಿಗೆಲ್ಲ ಫೇಮಸ್ !!

ಆಟಕ್ಕೆ ಬಾ ಅಂತಾರೆ 
ಆಟದ ಸಾಮಾನು ಕೊಡುತಾರೆ 
ಆಟಕ್ಕೆ ಬಾ ಅಂತಾರೆ 
ಆಟದ ಸಾಮಾನು ಕೊಡುತಾರೆ 

ಗೊತ್ತಿಲ್ದಂಗೆ ಆಟದ ಜೊತೇನೆ 
ಪಾಠನು ಕಲಿಸ್ತಾರೆ
ಗೊತ್ತಿಲ್ದಂಗೆ ಆಟದ ಜೊತೇನೆ 
ಪಾಠನು ಕಲಿಸ್ತಾರೆ

ಬಹಳ ಒಳ್ಳೆಯವರು  ನಮ್ಮ ಮಿಸ್ 
ಎನ್ನ ಹೇಳಿದ್ರು ಎಸ್ ಎಸ್ಸು  
ನಗುತ ನಗುತ ಮಾತಾಡ್ತಾರೆ !
ಸ್ಕ್ಹೂಲಿಗೆಲ್ಲ ಫೇಮಸ್ 
ಸ್ಕ್ಹೂಲಿಗೆಲ್ಲ ಫೇಮಸ್ !!


ನಮ್ಮ ಜೊತೇನೆ ಆಡ್ತಾರೆ 
ಕೈ ಕೈ ಹಿಡಿದು ಹಾಡುತಾರೆ

ನಮ್ಮ ಜೊತೇನೆ ಆಡ್ತಾರೆ 
ಕೈ ಕೈ ಹಿಡಿದು ಹಾಡುತಾರೆ

ಕೋತಿ ಕರಡಿ ಕಥೆ ಹೇಳಿ
ಸಿಕ್ಕಾಪಟ್ಟೆ ನಗಿಸ್ತಾರೆ 
ಕೋತಿ ಕರಡಿ ಕಥೆ ಹೇಳಿ 
ಸಿಕ್ಕಾಪಟ್ಟೆ ನಗಿಸ್ತಾರೆ 

ಬಹಳ ಒಳ್ಳೆಯವರು  ನಮ್ಮ ಮಿಸ್ 
ಎನ್ನ ಹೇಳಿದ್ರು ಎಸ್ ಎಸ್ಸು  
ನಗುತ ನಗುತ ಮಾತಾಡ್ತಾರೆ !
ಸ್ಕ್ಹೂಲಿಗೆಲ್ಲ ಫೇಮಸ್ 
ಸ್ಕ್ಹೂಲಿಗೆಲ್ಲ ಫೇಮಸ್ !!

ನಮ್ಮ ಸ್ಕೂಲ್  ಅಂತ ಸ್ಕೂಲ್  ಇಲ್ಲ
ನಮ್ಮ ಮಿಸ್ ಅಂತ ಮಿಸ್ ಇಲ್ಲ
ನಮ್ಮ ಸ್ಕೂಲ್  ಅಂತ ಸ್ಕೂಲ್  ಇಲ್ಲ
ನಮ್ಮ ಮಿಸ್ ಅಂತ ಮಿಸ್ ಇಲ್ಲ

ಅಮ್ಮನ ಹಾಗೆ  ಅವರುನು
ಬಿಟ್ಟ ಬರೋಕೆ ಮನಸಿಲ್ಲ ..
ಅಮ್ಮನ ಹಾಗೆ  ಅವರುನು 
ಬಿಟ್ಟ ಬರೋಕೆ ಮನಸಿಲ್ಲ ..

ಬಹಳ ಒಳ್ಳೆಯವರು  ನಮ್ಮ ಮಿಸ್ 
ಎನ್ನ ಹೇಳಿದ್ರು ಎಸ್ ಎಸ್ಸು  
ನಗುತ ನಗುತ ಮಾತಾಡ್ತಾರೆ !
ಸ್ಕ್ಹೂಲಿಗೆಲ್ಲ ಫೇಮಸ್ 
ಸ್ಕ್ಹೂಲಿಗೆಲ್ಲ ಫೇಮಸ್ !!

ಅಮ್ಮ ನಿನ್ನ ಎದೆಯಾಳದಲ್ಲಿ
ಸಾಹಿತ್ಯ: ಬಿ. ಆರ್. ಲಕ್ಷ್ಮಣ್ ರಾವ್

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು|
ಕಡಿಯಲೊಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೆ,
ಬಿಡದ ಭುವಿಯ ಮಾಯೆ||

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ  ಅಡಗಲಿ ಎಷ್ಟು ದಿನ ,
ದೂಡು ಹೊರಗೇ ನನ್ನ|
ಓಟ ಕಲಿವೆ ಒಳನೋಟ ಕಲಿವೆ ನಾ ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ||1||

ಮೇಲೆ ಹಾರಿ ನಿನ್ನಾ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ,
ಬ್ರಹ್ಮಾಂಡವನ್ನೇ ಬೆದಕಿ|
ಇಂಧನ ತೀರಲು ಬಂದೇ ಬರುವೆನು ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ||2||

ಕಮಲದ ಮೊಗದೋಳೆ

ಕಮಲದ ಮೊಗದೋಳೆ ಕಮಲದ ಕಣ್ಣೋಳೆ

ಕಮಲವ ಕೈಯಲ್ಲಿ ಹಿಡಿದೋಳೆ

ಕಮಲಾನಾಭನ ಹೃದಯ ಕಮಲದಲಿ ನಿಂತೋಳೆ

ಕಮಲಿನೀ ಕರಮುಗಿವೆ ಬಾಮ್ಮಾ

ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ ||


ಕಾವೇರಿ ನೀರ ಅಭಿಷೇಕಕಾಗಿ

ನಿನಗಾಗಿ ನಾ ತಂದೆನಮ್ಮ

ಕಂಪನ್ನು ಚೆಲ್ಲೊ ಸುಮರಾಶಿಯಿಂದ

ಹೂಮಾಲೆ ಕಟ್ಟಿರುವೆನಮ್ಮ

ಬಂಗಾರ ಕಾಲ್ಗೆಜ್ಜೆ ನಾದ

ನಮ್ಮ ಮನೆಯಲ್ಲವಾ ತುಂಬುವಂತೆ

ಬಂಗಾರ ಕಾಲ್ಗೆಜ್ಜೆ ನಾದ

ನಮ್ಮ ಮನೆಯಲ್ಲವ ತುಂಬುವಂತೆ 

ನಲಿಯುತ ಕುಣಿಯುತ ಒಲಿದು ಬಾ 

ನಮ್ಮ ಮನೆಗೆ ಬಾ || ೧ ||


ಶ್ರೀದೇವಿ ಬಾಮ್ಮ ಧನಲಕ್ಷ್ಮೀ ಬಾಮ್ಮ

ಮನೆಯನ್ನು ಬೆಳಕಾಗಿ ಮಾಡು

ದಯೆತೋರಿ ಬಂದು ಮನದಲ್ಲಿ ನಿಂತು

ಸಂತೋಷ ಸೌಭಾಗ್ಯ ನೀಡು

ಸ್ಥಿರವಾಗಿ ಬಂದಿಲ್ಲಿ ನೆಲೆಸು 

ತಾಯೆ ವರಮಹಾಲಕ್ಷ್ಮಿಯೇ ಹರಸು 

ಸ್ಥಿರವಾಗಿ ಬಂದಿಲ್ಲಿ ನೆಲೆಸು 

ತಾಯೆ ವರಮಹಾಲಕ್ಷ್ಮಿಯೇ ಹರಸು 

ಕರವನು ಮುಗಿಯುವೆ

ಆರತಿ ಈಗ ಬೆಳಗುವೆ || ೨ ||


ಮುಂಜಾನೆದ್ದು ಕುಂಬಾರಣ್ಣ

ಮುಂಜಾನೆದ್ದು ಕುಂಬಾರಣ್ಣ ಹಾಲು  ಬಾನುಂಡಾನ
ಹಾರ್ಯಾಡಿ ಮಣ್ಣಾ ತುಳಿದಾನ
ಹಾರಿ ಹಾರ್ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ
ನಾರ್ಯಾರು ಹೊರುವಂತ ಐರಾಣಿ ||

ಹೊತ್ತಾರೆದ್ದು ಕುಂಬಾರಣ್ಣ ತುಪ್ಪ ಬಾನುಂಡಾನ
ಘಟೀಸಿ ಮಣ್ಣಾ ತುಳಿದಾನ
ಘಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ
ಮಿತ್ರೇರು ಹೊರುವಂತ ಐರಾಣಿ ||1||

ಅಕ್ಕಿ ಹಿಟ್ಟು ನಾವು ತುಂಬ್ಕೊಂಡು ತಂದೀವಿ
ಗಿಂಡಿಲಿ ತಂದೀವ್ನಿ ತಿಳಿದುಪ್ಪ
ಗಿಂಡಿಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ
ತಂದಿಡು ನಮ್ಮ ಐರಾಣಿ ||2||

ಕುಂಬಾರಣ್ಣನ ಮಡದಿ ಕಡದಾಗ ಕೈಯಿಟ್ಟು
ಕೊಡದ ಮ್ಯಾಲೇನ ಬರೆದಾಳ
ಕೊಡದ ಮ್ಯಾಲೇನ ಬರೆದಾಳ ಕಲ್ಯಾಣದ
ಶರಣ ಬಸವನ ನಿಲಿಸ್ಯಾಳ||3||