ಕನ್ನಡ ಸೂಕ್ತಿಗಳು

ನಮಸ್ಕಾರ ಗೆಳೆಯರೇ,
ಮಹನೀಯರ ಮೇರು ನುಡಿಗಳು
ನಾವು ಆಗಾಗ ಕೆಲವು ಗಾದೆಗಳನ್ನು  ನಾಣ್ಣುಡಿಗಳನ್ನು ತಮ್ಮ ನಮ್ಮ ಮಾತಿನ ಮಧ್ಯದಲ್ಲಿ ಬಳಸುತ್ತೇವೆ. ಆ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡುವುದು ಆಂಗ್ಲ ಭಾಷೆಯ ಸೂಕ್ತಿಗಳೆ. ಕಾರಣ ಇಷ್ಟೇ ನಮ್ಮ ಭಾಷಿಕರಲ್ಲಿ ಉತ್ತಮವಾದ ಸೂಕ್ತಿಗಳು,
ಹಿತವಚನಗಳು ಇಲ್ಲವೆಂದು ನಮ್ಮ ಅರಿಕೆ. ನಿಮಗೆ ತಿಳಿದಿದೆಯೋ ಇಲ್ಲವೋ ನಮಲ್ಲಿ ಸಹ ಉತ್ತಮವಾದ ಸೂಕ್ತಿಗಳು ಸಹ ಇವೆ. ಬನ್ನಿ ಇವುಗಳನ್ನು ನಮ್ಮ ಮಿತ್ರರಿಗೆ ಪರಿಚಯಿಸೋಣ.ಇವೆಲ್ಲವುಗಳ ಮೂಲ ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು,
ಸಾಹಿತ್ಯದ ಕೆಲಸವೆಂದರೆ ಮನುಷ್ಯನ ಅಂತರಾಳಕ್ಕೆ ಪ್ರವೇಶ ದೊರಕಿಸಿಕೊಡುವುದು. ಪ್ರೀತಿ, ಅನುಕಂಪ, ಕರುಣೆಗಳನ್ನು ಹುಟ್ಟಿಸುವುದು.
–ಎಸ್‌.ಎಲ್‌. ಭೈರಪ್ಪ
ಮತವೆಂದರೆ ದೇವರನ್ನು ಕುರಿತ ನಂಬಿಕೆ ಮತ್ತು ಆ ನಂಬಿಕೆಗೆ ಅನುಸಾರವಾದ ನಡವಳಿಕೆ.
–ಡಿ.ವಿ.ಜಿ
ಕರ್ತವ್ಯವನ್ನು ಕುರಿತು ಮೊದಲು ಯೋಚನೆ ಮಾಡಿ; ಹಕ್ಕುಗಳು ಆಮೇಲೆ ಬರಲಿ.
–ಡಿ.ವಿ. ಗುಂಡಪ್ಪ
ಮಕ್ಕಳನ್ನು ಕುಬ್ಜ ವೃದ್ಧರೆಂದು ತಿಳಿಯದ, ಅವರ ಸಹಜ ವಿಕಾಸಕ್ಕೆ ಹಾತೊರೆಯುವ ಶಿಕ್ಷಣ ಮತ್ತು ಶಿಕ್ಷಕರು ಬೇಕು.
–ಶಿವರಾಮ ಕಾರಂತ
ಜೀವನದಿಂದಲೇ ದೇವರು ಉದ್ಭವಿಸಬೇಕು, ಬೆಳೆಯಬೇಕು. ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು.
–ಶಿವರಾಮ ಕಾರಂತ
ಸಾಹಿತ್ಯ ಸಮ್ಮೇಳನಗಳು ಜನಜಂಗುಳಿಯ ಜಾತ್ರೆಯಾಗದೆ, ಸದುದ್ದೇಶದ ಪುಣ್ಯ ಯಾತ್ರೆಯಂತಿರಬೇಕು. ಕ್ರಿಯಾತ್ಮಕ ಸಾಹಿತ್ಯಕ ವಿಚಾರಗಳ ವೇದಿಕೆಯಾಗಬೇಕು.
ಕಯ್ಯಾರ ಕಿಞ್ಞಣ್ಣ ರೈ
ಧರ್ಮದ ಬೇರು ದಯೆ, ಸತ್ಫಲ, ಸರ್ವ ಭ್ರಾತೃತ್ವ.
–ಕೆ.ಎಸ್. ನಿಸಾರ್ ಅಹಮದ್
ಮದುವೆ ಎಂಬ ಮೋಹದ ಬೋನಿನಲ್ಲಿ ಸಮಾಜ ಎಲ್ಲರನ್ನೂ ಸಿಕ್ಕಿಸಿ ಪಳಗಿಸುತ್ತಿದೆ.
–ನಾ. ಕಸ್ತೂರಿ
ವಿವೇಕವೆಂದರೆ ಬಿಡಿಸಿ ನೋಡುವುದು, ವಿಶ್ಲೇಷಿಸುವುದು, ತೂಗುವುದು, ಅಳೆಯುವುದು.
–ಎಂ. ಗೋಪಾಲಕೃಷ್ಣ ಅಡಿಗ
ಜನರಿಗೆ ತಮ್ಮ ಹಕ್ಕು, ಹೊಣೆಗಾರಿಕೆಯ ಅರಿವು ಇಲ್ಲದೆ ಹೋದರೆ ಪ್ರಜಾಪ್ರಭುತ್ವ ಕೇವಲ ನಕಲಿ ಮಾಲು.
–ಎಂ. ಗೋಪಾಲಕೃಷ್ಣ ಅಡಿಗ
ಅನ್ಯರನು ಆಳುಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ.
–ದ.ರಾ. ಬೇಂದ್ರೆ
ಮನುಷ್ಯನ ಜೀವನದಲ್ಲಿ ಸುಖ, ದುಃಖ ಎಂಬುದಿಲ್ಲ. ಅಲ್ಲಿರುವುದು ಅನುಭವಗಳು ಮಾತ್ರ.
–ಶ್ರೀಕೃಷ್ಣ
 ಏನೂ ಅರಿಯೆನೆಂದು ಮೌನಗೊಂಡಿರಬೇಡ. ಕೂಡಲ ಸಂಗಮ ದೇವರ ಮುಂದೆ ದಂದಣ ಎನ್ನಿ, ದತ್ತಣ ಎನ್ನಿ.
–ಬಸವಣ್ಣ
 ನಿಜವಾದ ವಿದ್ಯೆ ಮನುಷ್ಯನಿಗೆ ಆಲೋಚಿಸುವುದನ್ನು ಕಲಿಸುತ್ತದೆ.
–ಹಾ.ಮಾ. ನಾಯಕ
ಶಕ್ತಿ, ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ.
–ಮಹಾತ್ಮ ಗಾಂಧಿ
ಹಸಿವನ್ನು ರೋಗವೆಂದು ತಿಳಿ. ರೋಗಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಆಹಾರವನ್ನು ಔಷಧದಂತೆ ಸೇವಿಸು.
–ಶಂಕರಾಚಾರ್ಯ
ಎಲ್ಲಾ ಶಕ್ತಿ ನಿಮ್ಮೊಳಗೇ ಇದೆ. ನೀವು ಏನು ಬೇಕಾದರೂ ಮಾಡಬಹುದು.
–ಸ್ವಾಮಿ ವಿವೇಕಾನಂದ
ಮಹನೀಯರ ಮೇರು ನುಡಿಗಳು – ೫
ನಮಸ್ಕಾರ ಗೆಳೆಯರೇ,
ಮಹನೀಯರ ಮೇರು ನುಡಿಗಳು
ನಾವು ಆಗಾಗ ಕೆಲವು ಗಾದೆಗಳನ್ನು  ನಾಣ್ಣುಡಿಗಳನ್ನು ತಮ್ಮ ನಮ್ಮ ಮಾತಿನ ಮಧ್ಯದಲ್ಲಿ ಬಳಸುತ್ತೇವೆ. ಆ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡುವುದು ಆಂಗ್ಲ ಭಾಷೆಯ ಸೂಕ್ತಿಗಳೆ. ಕಾರಣ ಇಷ್ಟೇ ನಮ್ಮ ಭಾಷಿಕರಲ್ಲಿ ಉತ್ತಮವಾದ ಸೂಕ್ತಿಗಳು,
ಹಿತವಚನಗಳು ಇಲ್ಲವೆಂದು ನಮ್ಮ ಅರಿಕೆ. ನಿಮಗೆ ತಿಳಿದಿದೆಯೋ ಇಲ್ಲವೋ ನಮಲ್ಲಿ ಸಹ ಉತ್ತಮವಾದ ಸೂಕ್ತಿಗಳು ಸಹ ಇವೆ. ಬನ್ನಿ ಇವುಗಳನ್ನು ನಮ್ಮ ಮಿತ್ರರಿಗೆ ಪರಿಚಯಿಸೋಣ.ಇವೆಲ್ಲವುಗಳ ಮೂಲ ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು,
ಮಹನೀಯರ ಮೇರು ನುಡಿಗಳು
ನಮ್ಮ ವಿಚಾರಗಳನ್ನು ಮಾತೃಭಾಷೆಯಲ್ಲಿ ಸರಳವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುವಂತೆ, ಬೇರೆ ಯಾವ ಭಾಷೆಯಲ್ಲೂ ವ್ಯಕ್ತಪಡಿಸಲು ಆಗುವುದಿಲ್ಲ.
– ಮಹಾತ್ಮ ಗಾಂಧಿ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸಗೊಂಡು ತನ್ನ ಮಟ್ಟವನ್ನು ಮುಟ್ಟಬೇಕು.
– ಎಂ. ಗೋಪಾಲಕೃಷ್ಣ ಅಡಿಗ
ದುಡ್ಡು ಅಂದರೆ ದುಡಿದು ತರಬೇಕಾದ ವಸ್ತು.
-ನಾ. ಕಸ್ತೂರಿ
ಒಬ್ಬರು ಮತ್ತೊಬ್ಬರನ್ನು ತಿಂದು ಬದುಕ ಬಾರದು, ತಿಳಿದು ಬದುಕಬೇಕು
– ದರಾ ಬೇಂದ್ರೆ  ದೇವರು ಧನ, ಅಧಿಕಾರ ಕೊಡೋದು ಜನರಿಗೆ ಉಪಕಾರ ಮಾಡಲಿ ಅಂತ. ಆದರೆ, ಮನುಷ್ಯ ಅದನ್ನು ಜನರನ್ನು ಸುಲಿಗೆ ಮಾಡಲು ಉಪಯೋಗಿಸುತ್ತಾನೆ.
– ತ.ರಾ.ಸು.
ಅರಿತು ಮಾಡಿದ್ದು ಪಾಪ, ಮರೆತು ಮಾಡಿದ್ದು ಮನುಷ್ಯ ಸ್ವಭಾವ
-ತರಾಸು 
ಗುರಿ ತಪ್ಪಿದರೂ , ಹಾದಿ ತಪ್ಪಬಾರದು
-ಎಸ್ ವಿ ಪರಮೇಶ್ವರಭಟ್
ಪ್ರತಿಯೊಂದು ಧರ್ಮವೂ ಈ ಜಗತ್ತಿಗೆ ಪ್ರೇಮ, ಬಂಧುತ್ವದ ಸಂದೇಶವನ್ನೇ ನೀಡಿದೆ.
–ಖಾನ್‌ಅಬ್ದುಲ್‌ಗಫಾರ್‌ಖಾನ್‌
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು
–ಪಂಜೆ ಮಂಗೇಶರಾಯರು
ನಾಳೆ ಏನೆಂಬ ಪ್ರಶ್ನೆಗಿಂತಲೂ ‘ಇಂದು ಹೇಗೆ?’ ಎನ್ನುವ ಪ್ರಶ್ನೆ ನಮಗೆ ಮಹತ್ತರವಾಗಿ ಕಾಣಬೇಕು.
–ಶಿವರಾಮ ಕಾರಂತ
ಬಾಳು ಇರುವುದು ಬದುಕುವುದಕ್ಕಾಗಿ, ಬಳಲುವುದಕ್ಕಲ್ಲ ಬದುಕಿನಿಂದ ಬೆಳೆಯಬೇಕು
– ಶಿವರಾಮ ಕಾರಾಂತ
ಶೀಲ ಮತ್ತು ಬುದ್ಧಿವಂತಿಕೆಯನ್ನು ಒಂದುಗೂಡಿಸುವುದೇ ಶಿಕ್ಷಣದ ನಿಜವಾದ ಉದ್ದೇಶ
–ಮಾರ್ಟಿನ್‌ಲೂಥರ್‌ಕಿಂಗ್‌ಜೂನಿಯರ್‌
ಮೂಢನಂಬಿಕೆಯುಳ್ಳ ವಿದ್ಯಾವಂತನು ಮೂಢನಂಬಿಕೆ ಹೊಂದಿದ ಅವಿದ್ಯಾವಂತನಿಗಿಂತ ಹೆಚ್ಚು ಅಪಾಯಕಾರಿ.
–ಡಾ. ಎಚ್‌.ನರಸಿಂಹಯ್ಯ
ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
– ಬೀchi
ಮನಸ್ಸಿದ್ದರೆ ನಾವು ಅಂದುಕೊಂಡಿರುವ ಗುರಿ ಸಾಧಿಸಬಹುದು.
–ಬುದ್ಧ
ಪುಸ್ತಕಗಳಲ್ಲಿ ಹಳೆಯವೆಂಬುವೇ ಇಲ್ಲ. ಓದಿರದ ಪುಸ್ತಕಗಳೆಲ್ಲ ಹೊಸವು; ಮತ್ತೆ ಮತ್ತೆ ಓದಬೇಕೆನ್ನುವ ಪುಸ್ತಕಗಳೆಲ್ಲ ಹೊಸವು.
–ಹಾ.ಮಾ. ನಾಯಕ
ನಿರ್ಭಯವೂ, ನಿಷ್ಪಕ್ಷಪಾತವೂ ಆದ ಜಗತ್ಸತ್ಯಾನ್ವೇಷಣೆಯೇ ವಿಜ್ಞಾನ.
-ಡಿ ವಿ ಗುಂಡಪ್ಪ
ಲೋಕೋದ್ದರಕ್ಕಾಗಿ ನಾವು ಕೆಲಸ ಮಾಡುತ್ತಿದ್ದೆವೇಂದು ಯಾರು ತಿಳಿದುಕೊಳ್ಳಬಾರದು , ನಮ್ಮ ಪ್ರಯತ್ನ, ನಮ್ಮ ಏಳಿಗೆಗಾಗಿ , ನಮ್ಮ ಬಾಳಿನ ಸಫಲತೆಗಾಗಿ , ನಮ್ಮ ಜೀವಸಂಸ್ಕಾರಕ್ಕಾಗಿ
-ಡಿ ವಿ ಗುಂಡಪ್ಪ
ನಮ್ಮ ಸ್ವಭಾವ ,ಸಂದರ್ಭ  – ಇವೆರಡನ್ನೂ ನಾವು ಕಂಡುಕೊಂಡು ನಮಗೆ ತಕ್ಕ ಗುರಿ ಯಾವುದು , ತಕ್ಕ ದಾರಿ ಯಾವುದು ಎಂಬುದನ್ನೂ ನಾವೇ ಗೊತ್ತು ಮಾಡಿಕೊಳ್ಳಬೇಕು
-ಡಿ ವಿ ಗುಂಡಪ್ಪ
ದೇವಸ್ಥಾನಗಳಿಗಿಂತ ಗ್ರಂಥಾಲಯಗಳು ಮಹತ್ವವೆಂದು ನಮ್ಮ ಜನರಿಗೆ ಅನ್ನಿಸುವುದು ಯಾವಾಗ?
–ಜಿ.ಎಸ್‌. ಶಿವರುದ್ರಪ್ಪ
ಸಂಸ್ಕೃತಿಯ ಮಹೋನ್ನತವಾದ ಮಹಲಿಗೆ ನೀತಿ ನೆಲಗಟ್ಟು, ಅನುಭವ ಆವಾರ.
–ಕೆ.ಎಸ್‌.ನಿಸಾರ್‌ಅಹಮದ್‌
ಒಳ್ಳೆಯ ಬರಹಗಾರ ತನ್ನ ವಿರುದ್ಧ ತಾನೇ ಯೋಚಿಸಬಲ್ಲವ. ಕೆಟ್ಟ ಬರಹಗಾರ ತನ್ನನ್ನು ಬಿಟ್ಟರೆ ಇಲ್ಲ ಅಂತ ತಿಳಿದುಕೊಂಡಿರುತ್ತಾನೆ.
–ಕುವೆಂಪು
ನಂಬಿ ಅನುಭವಿಸುವುದಕ್ಕಿಂತ , ಅನುಭವಿಸಿ ನಂಬುವುದೇ ಶಾಶ್ವತ ಮತ್ತು ಸತ್ಯ
-ಕುವೆಂಪು
ಮಹನೀಯರ ಮೇರು ನುಡಿಗಳು – ೩
ನಮಸ್ಕಾರ ಗೆಳೆಯರೇ,

ಮಹನೀಯರ ಮೇರು ನುಡಿಗಳು
ನಾವು ಆಗಾಗ ಕೆಲವು ಗಾದೆಗಳನ್ನು  ನಾಣ್ಣುಡಿಗಳನ್ನು ತಮ್ಮ ನಮ್ಮ ಮಾತಿನ ಮಧ್ಯದಲ್ಲಿ ಬಳಸುತ್ತೇವೆ. ಆ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡುವುದು ಆಂಗ್ಲ ಭಾಷೆಯ ಸೂಕ್ತಿಗಳೆ. ಕಾರಣ ಇಷ್ಟೇ ನಮ್ಮ ಭಾಷಿಕರಲ್ಲಿ ಉತ್ತಮವಾದ ಸೂಕ್ತಿಗಳು,
 ಹಿತವಚನಗಳು ಇಲ್ಲವೆಂದು ನಮ್ಮ ಅರಿಕೆ. ನಿಮಗೆ ತಿಳಿದಿದೆಯೋ ಇಲ್ಲವೋ ನಮಲ್ಲಿ ಸಹ ಉತ್ತಮವಾದ ಸೂಕ್ತಿಗಳು ಸಹ ಇವೆ. ಬನ್ನಿ ಇವುಗಳನ್ನು ನಮ್ಮ ಮಿತ್ರರಿಗೆ ಪರಿಚಯಿಸೋಣ.ಇವೆಲ್ಲವುಗಳ ಮೂಲ ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು,

ಅಂತರ್ಜಾಲದ ಮಿಂಬಲೆಗಳು. ಹಾಗೂ ಹಿಂದಿನ ಮಹನೀಯರ ಮೇರು ನುಡಿಗಳಿಗಾಗಿ ******************************************************************************
ಕುವೆಂಪು 
ಆದರ್ಶಗಳು ಪ್ರತಿದಿನ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು.
 ಒಳ್ಳೆಯ ಬರಹಗಾರ ತನ್ನ ವಿರುದ್ಧ ತಾನೇ ಯೋಚಿಸಬಲ್ಲವ. ಕೆಟ್ಟ ಬರಹಗಾರ ತನ್ನನ್ನು ಬಿಟ್ಟರೆ ಇಲ್ಲ ಅಂತ ತಿಳಿದುಕೊಂಡಿರುತ್ತಾನೆ.
ವಿದ್ಯಾರ್ಥಿಗಳು ಭತ್ತದ ಚೀಲಗಳಾಗಬಾರದು, ಭತ್ತದ ಗದ್ದೆಗಳಾಗಬೇಕು.
 ******************************************************************************
ಕೆ ಶಿವರಾಮ ಕಾರಂತ
ಸರ್ಕಾರ ಎಂದರೆ ಅಲ್ಲಿರುವ ಸರ್ವತಂತ್ರ ಸ್ವತಂತ್ರ ಅಧಿಕಾರಿಗಳಷ್ಟೇ.
ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ.
ನಾಲ್ಕು ಜನರಿಗೆ ಅನ್ಯಾಯವಾಗದಂತೆ ಬದುಕಬೇಕು. ಪರರಿಗೆ ಸುಖ ಕೊಡಲು ಆಗದಿದ್ದರೆ ದುಃಖ ಮಾತ್ರ ಕೊಡಬಾರದು.
ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿ ಬೆಳೆಯುವುದಕ್ಕಾಗಿ. 
******************************************************************************

ಡಿ ವಿ ಗುಂಡಪ್ಪ
ಪ್ರತಿಫಲದ ಅಪೇಕ್ಷೆಯಿಲ್ಲದೆ ಕೇವಲ ಆತ್ಮತೃಪ್ತಿಗಾಗಿ ಕೆಲಸ ಮಾಡಿದಾಗ, ಮೋಸ ಹೋದಾಗಲೂ ದುಃಖವಾಗುವುದಿಲ್ಲ.
ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ!
******************************************************************************
ವಿ.ಕೃ.ಗೋಕಾಕ್‌
 ಬದುಕು ಕರೆದುಕೊಂಡು ಹೋದ ಕಡೆ ನೀವು ಹೋಗದೆ, ನೀವು ಹೋದೆಡೆ ಬದುಕನ್ನು ಕರೆದುಕೊಂಡು ಹೋಗುವುದು ಜಾಣತನ.
ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ.
 ******************************************************************************
 ಕೆ.ಎಸ್. ನಿಸಾರ್‌ ಅಹಮದ್‌
 ಪರಾನುಕರಣೆಯ ಪರಮಾನ್ನಕ್ಕಿಂತ ಸ್ವಸಾಧನೆಯ ಸಾರನ್ನ ಸ್ವಾದಿಷ್ಟ.
 ಕಾಲಪ್ರಜ್ಞೆ ಇಲ್ಲದವನಿಗೆ ಗಡಿಯಾರ ಬರಿ ಅಲಂಕಾರವಷ್ಟೇ.
******************************************************************************
ಆಲೂರು ವೆಂಕಟರಾಯರು
 ಪ್ರತಿಯೊಂದು ಸಮಸ್ಯೆಗೆ ಉತ್ತರ ಇರುತ್ತದೆ. ಈ ನಂಬಿಕೆ ಇದ್ದಾಗ ಪ್ರತಿಯೊಂದು ಕಷ್ಟವೂ ಪರಿಹಾರವಾಗುತ್ತದೆ. 
******************************************************************************
ಎ.ಆರ್. ಕೃಷ್ಣಶಾಸ್ತ್ರಿ
ಜಗಳ ಮಾಡಲು ಬಂದವನ ಎದುರು ಮೌನವಾಗು. ಅದು ಜಗಳದ ಬಾಗಿಲನ್ನು ಮುಚ್ಚುತ್ತದೆ.
******************************************************************************
ಕೃಷ್ಣಮೂರ್ತಿ ಪುರಾಣಿಕ
ದಾಂಪತ್ಯದ ಯಶಸ್ಸಿಗೆ- ಶ್ರೀಮಂತಿಕೆ, ಸೌಂದರ್ಯಕ್ಕಿಂತ ಇಬ್ಬರ ನಡುವಿನ ಗುಣ, ಸ್ವಭಾವಗಳ ಹೊಂದಾಣಿಕೆ ತುಂಬ ಮುಖ್ಯ.
******************************************************************************
ತ್ರಿವೇಣಿ
ರೂಪ ಕಣ್ಣುಗಳಿಗೆ ಸೀಮಿತ, ಗುಣ ಆತ್ಮದವರೆಗೆ ತಲುಪುವ ಸಾಧನ. 
******************************************************************************
ಡಾ. ವೀರೇಂದ್ರ ಹೆಗ್ಗಡೆ
 ಸತ್ಯ ಇಲ್ಲದ್ದನ್ನು ಧೂಳನ್ನು ಜಾಡಿಸಿದಂತೆ ಜಾಡಿಸುವುದನ್ನು ರೂಢಿಸಿಕೊಳ್ಳಬೇಕು “
******************************************************************************
ಪಂಜೆ ಮಂಗೇಶರಾವ್
ಜಾತಿ ಜಾತಿಯೊಳಗೆ ಜನಕೆಲ್ಲ ಹಗೆ, ಹೆರರಿಗಿದು ನಗೆ, ನಮಗಿದು ದಗೆ.

******************************************************************************
 ಚದುರಂಗ 
ಸಂತೋಷ ಹೊರಗಿನಿಂದ ಬರುವುದಿಲ್ಲ. ಅದನ್ನು ನಮ್ಮ ಮನಸ್ಸಿನಲ್ಲಿ ನಾವು ಕಂಡುಕೊಳ್ಳಬೇಕು. 
******************************************************************************
ಎಮ್.ವಿ.ಸೀತಾರಾಮಯ್ಯ
ನಾನು ಬೇರೆ- ದೇಹ ಬೇರೆ ಎ೦ದು ತಿಳಿವು ತ೦ದುಕೊ೦ಡರೆ ರೋಗದ ಭಾಧೆಯು ಅತ್ಯಲ್ಪವಾಗುತ್ತದೆ.
******************************************************************************
ತ.ರಾ.ಸು

ನಿಜವಾದ ಸೋಲು ಪ್ರತಿಸ್ಪರ್ಧಿಗಳಿಂದ ಸಂಭವಿಸುವ ಪರಾಜಯವಲ್ಲ. ನಮ್ಮಲ್ಲಿ, ನಮ್ಮ ಸಾಹಸದಲ್ಲಿ, ನಮ್ಮ ಶ್ರದ್ಧೆಯಲ್ಲಿ ನಮಗೆ ನಂಬಿಕೆ ಹೋಗುವುದು.
******************************************************************************
 ಅ.ನ.ಕೃಷ್ಣ ರಾಯ .
ಯಾರಾದರೂ ಕೃತಘ್ನರಾದರೆ ಅದು ಅವರ ದೋಷ. ಆದರೆ, ನೀನು ಸಜ್ಜನಿಕೆ ತೋರದಿದ್ದರೆ ಅದು ನಿನ್ನ ದೋಷ.
******************************************************************************
 ತಿರುಮಲೆ ರಾಜಮ್ಮ

ಅನುಭವದ ಕೊರತೆ ಮತ್ತು ಅಜ್ಞಾನದಿಂದ ಕೆಲಸ ಕೆಡುತ್ತದೆ. ಅಪಾಯ ಎದುರಾಗುತ್ತದೆ.
******************************************************************************
ಬೀಚಿ 
ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ.
ಜೀವನದ ದುರಂತವಿದು, ಎಂದೋ ಬಯಸಿದುದು ಇಂದು ಸಿಗುತ್ತದೆ, ಅದು ಅವನಿಗೆ ಬೇಡವಾಗಿ ಪರರಿಗೆ ಉಪಯೋಗವಾಗುವಾಗ.
ಸಾರಾಯಿ ನಿಶೇಧ ಕುಡಿಯದವರಿಗೆ ಮಾತ್ರ. 
ಸತ್ಯವನು ಅರಿತವನು ಸತ್ತಂತೆ ಇರಬೇಕು.
ಮನೆಯಾಕೆ ಸಷ್ಟಿಸುವ ವಾತಾವರಣವೇ ಮನೆಯ ವಾತಾವರಣ. 
******************************************************************************
ಯುಗಾದಿ
ಬೇಸರವೇ ಇಲ್ಲ ಈ ನಿಸರ್ಗಕ್ಕೆ , ಸದಾ ಹೊಚ್ಚ ಹೊಸದಾಗಿ ಹೊಮ್ಮುವುದಕ್ಕೆ – ಜಿ ಎಸ್ ಶಿವರುದ್ರಪ್ಪ
ತೊಲಗಲಿ ದುಃಖ , ತೊಲಗಲಿ ಮತ್ಸರ
ಪ್ರೇಮಕೆ ಮೀಸಲು ನವ ಸಂವತ್ಸರ – ಕುವೆಂಪು
ಹೆಜ್ಜೆಗೊಂದು ಹೊಸ ಯುಗಾದಿ
ಚೆಲವು ನಮ್ಮ ಜೀವನ !
ಪಯಣವೆಲ್ಲ ಪಾವನ – ಕೆ ಎಸ್ ನರಸಿಂಹಸ್ವಾಮಿ
ಕೆನ್ದಲಿರಿನ ಬೆರಳ ಹಿಡಿದು ಬಂತು ಯುಗಾದಿ – ಕೆ ಎಸ್ ನಿಸಾರ ಅಹಮದ್
ಯುಗಯುಗಾದಿ ತೆರೆಗಳೇಳುತಿವೆ ,ಬೀಳುತಿವೆ
ಹೊಸಹೊಸವು ಪ್ರತಿವರುಶವು – ಗೋಪಾಲ ಕೃಷ್ಣ ಅಡಿಗ
 ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ – ಪು ತಿ ನರಸಿಂಹಾಚಾರ್
 ******************************************************************************
ಸುಭಾಷಿತಗಳು
ನಿಮ್ಮ ನೋವಿನ ಬಗ್ಗೆ ಹೆಚ್ಚು ಚಿಂತಿಸಬೇಡಿ. ಇದನ್ನೇ ಸಾಧನೆಯಾಗಿ ಬದಲಾಯಿಸಿ. 
ಕೆಲವೇ ತಪ್ಪುಗಳಿಗಾಗಿ ಒಂದು ಉತ್ತಮ ಸಂಬಂಧ ಮುರಿದುಕೊಳ್ಳಬೇಡಿ. ಏಕೆಂದರೆ ಪರಿಪೂರ್ಣತ್ವ ಕೇವಲ ತತ್ವ ಮಾತ್ರ. ಇದರ ಜೊತೆಗೆ ನಾನು ಸರಿಯಾಗಿದ್ದೇನೆ ಎಂಬುದೂ ಭ್ರಮೆ. ಹೀಗಾಗಿ ತಪ್ಪುಗಳನ್ನು ಮನ್ನಿಸಿ ಸಂಬಂಧ ಉಳಿಸಿಕೊಳ್ಳಿ. 
ನಾವು ನಮ್ಮ ಜೀವನದಲ್ಲಿ ಧೈರ್ಯಗಳಿಸ ಬೇಕಿದ್ದರೆ ನೋವು ಅನುಭವಿಸಲೇಬೇಕು. ತಪ್ಪು ಮಾಡದೇ ಇದ್ದರೆ ಹೊಸ ವಿಚಾರಗಳನ್ನು ಕಲಿಯಲು ಸಾಧ್ಯವೇ ಇಲ್ಲ. ವೈಫಲ್ಯಗಳನ್ನು ಎದುರಿಸದೇ ಇದ್ದರೆ ಯಶಸ್ಸು ಕಾಣಲು ಅಸಾಧ್ಯ. 
ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಪ್ರತಿ ಕ್ಷಣ ಹೊಸ ಹೊಸ ಸಂಗತಿಗಳನ್ನು ಕಲಿಸುತ್ತದೆ. ಆದರೆ ಮನಸ್ಸನ್ನು ಮಾತ್ರ ಸದಾ ತೆರೆದಿಡಬೇಕು.
ಆರಾಮಾಗಿರುತ್ತೆ ಎಂದು ಯಾವ ಕೆಲಸವನ್ನೂ ಆರಿಸಿಕೊಳ್ಳಬೇಡಿ. ಇಂಥ ಕೆಲಸಗಳು ನಿಮ್ಮನ್ನು ಜಿಡ್ಡುಗಟ್ಟಿಸಿಬಿಡುತ್ತವೆ. ಇದಕ್ಕೆ ಬದಲಾಗಿ ಸದಾ ಚಟುವಟಿಕೆಯಿಂದಿರುವ ಕೆಲಸಗಳನ್ನು ಆರಿಸಿಕೊಳ್ಳಿ. ಇವು ನಿಮ್ಮನ್ನು ಕ್ರಿಯಾಶೀಲರಾಗಿರುವಂತೆ ಮಾಡುತ್ತವೆ.
ನೀವು ಎಲ್ಲ ಟೀಕೆಗಳಿಗೆ ಉತ್ತರ ನೀಡಬೇಕಿಲ್ಲ. ಸುಮ್ಮನಿದ್ದರೆ ಟೀಕಾಕಾರರಿಗೇ ತಮ್ಮ ತಪ್ಪಿನ ಅರಿವಾಗಬಹುದು. ನೀವು ಪ್ರತಿ ಟೀಕೆ ಮಾಡಿದಾಗ ಅದು ಜಗಳಕ್ಕೆ ಕಾರಣವಾಗಬಹುದು. ಕೆಲವು ಟೀಕೆಗಳನ್ನು ಉದಾಸೀನ ಮಾಡುವುದೇ ಲೇಸು.
 ಹೇಳಿಕೆ ಮಾತು ಕೇಳಿ ಹಿಡಿದಿರುವ ಯಾವುದೇ ಕೆಲಸವನ್ನು ಬಿಡಬೇಡಿ. ಏಕೆಂದರೆ ಕೆಲವರು ನಿಮ್ಮನ್ನು ಧೃತಿಗೆಡಿಸುವ ಸಲುವಾಗಿಯೇ ಇರುತ್ತಾರೆ. ಬದಲಾಗಿ, ಈ ಹೇಳಿಕೆ ಮಾತುಗಳನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಹಿಡಿದಿರುವ ಕೆಲಸ ಮುಗಿಸಿ.

ಕೆಲವೊಂದು ಬಾರಿ ಸಮಸ್ಯೆಗಳನು ಪರಿಹರಿಸಲು ಸಾಧ್ಯವಿದ್ದರೂ ಅದರ ಬಗ್ಗೆ ಸುಮ್ಮನೆ ಗೊಂದಲಗಳನು ಸೃಷ್ಟಿಸಿಕೊಳ್ಳುತ್ತೇವೆ.

ತಪ್ಪುಗಳಿವೆಯಲ್ಲ, ಅವು ನೀವು ಪದೇಪದೆ ಪ್ರಯತ್ನಿಸುತ್ತಿದ್ದೀರಿ ಎಂಬುದಕ್ಕೆ ಪುರಾವೆಗಳು. ತಪ್ಪುಗಳಾದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಪ್ರಯತ್ನ ಮುಂದುವರಿಯಲಿ.
ನೀವು ಇಂದೇನು ಮಾಡುತ್ತೀರಿ ಎಂಬುದರ ಮೇಲೆ ನಾಳೆ ನಿರ್ಧಾರವಾಗುತ್ತದೆ. ಇಂದು ಏನೂ ಮಾಡದೇ ನಾಳೆ ಚೆನ್ನಾಗಿರಲು ಸಾಧ್ಯವಿಲ್ಲ. ಇಂದು ಲಾಟರಿ ಟಿಕೆಟ್ ಖರೀದಿಸಿದರೆ ನಾಳೆ ಬಹುಮಾನ ಬರಬಹುದು
******************************************************************************
ನಮ್ಮ ಮಾತಿಗಿಂತ ನಮ್ಮ ಜೀವನವನ್ನೇ ನಮ್ಮ ವಿಷಯವಾಗಿ ಮಾತನಾಡಲು ಬಿಡುವುದು ಉತ್ತಮ.
ಗಾಂಧೀಜಿ
ಒಬ್ಬ ಶಿಕ್ಷಕ ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ. ತಾನು ಉರಿಯದ ದೀಪ ಇನ್ನೊಂದು ದೀಪವನ್ನು ಬೆಳಗಿಸಲಾರದು.
ರವೀಂದ್ರನಾಥ್ ಟ್ಯಾಗೋರ್
ಒಬ್ಬ ಪರಿಪೂರ್ಣ ವ್ಯಕ್ತಿಯ ಮನಸ್ಸು ಕನ್ನಡಿಯಂತೆ. ಎಲ್ಲವನ್ನೂ ಪ್ರತಿಬಿಂಬಿಸುತ್ತದೆ. ಯಾವುದನ್ನೂ ತಿರಸ್ಕರಿಸುವುದಿಲ್ಲ. ಎಲ್ಲವನ್ನೂ ಸ್ವೀಕರಿಸುತ್ತದೆ. ಆದರೆ ಏನನ್ನೂ ಉಳಿಸಿಕೊಳ್ಳುವುದಿಲ್ಲ.
-ಸ್ವಾಮಿ ಚಿನ್ಮಯಾನಂದ
ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದರೆ ನೀನು ಓದಿದ್ದು ವ್ಯರ್ಥ
ಪ್ರೇಮಚಂದ.
ಮಹಾಕಾರ್ಯಗಳನ್ನು ಮಹಾತ್ಯಾಗದಿಂದ ಮಾತ್ರ ಸಾಧಿಸಲು ಸಾಧ್ಯ. ಅನ್ಯಾಯದ ಸ್ಥಾನವು ಅಭದ್ರವಾದುದು. ಅದರಿಂದ ಏಳಿಗೆ ಆಗದು.
ಸ್ವಾಮಿ ವಿವೇಕಾನಂದ.
ಕ್ಷಮೆಯೇ ಯಶಸ್ಸು, ಧರ್ಮ. ಕ್ಷಮೆಯಲ್ಲಿಯೇ ಚರಾಚರ ಜಗತ್ತು ಅಡಗಿದೆ.
-ವಾಲ್ಮೀಕಿ ರಾಮಾಯಣ
ಉಳ್ಳವರು ಮತ್ತು ಇಲ್ಲದವರ ನಡುವೆ ಅಂತರ ಇರುವಷ್ಟು ಕಾಲ, ಅಹಿಂಸೆಯನ್ನು ಪ್ರತಿಪಾದಿಸುವ ಆಡಳಿತ ವ್ಯವಸ್ಥೆ ಜಾರಿಗೆ ಬರುವುದಿಲ್ಲ.
-ಪುಸ್ತಕ ಪ್ರಾಧಿಕಾರಕ್ಕೆ ಪ್ರೇರಣೆಯಾದ ಪತ್ರ
******************************************************************************
ಮಂಕು ತಿಮ್ಮನ ಕಗ್ಗ
ಧಾರುಣೀಸುತೆಯವೊಲು ದೃಢಮನಸ್ಕರದಾರು?
ಮಾರೀಚಹರಿಣವಡ್ಡಾಡಲೇನಾಯ್ತು?
ವಾರಿಧಿಯೊಳಡಗಿ ನಿದ್ರಿಪ ಬಾಡವವೊ ತೃಷ್ಣೆ
ಆರದನು ಕೆರಳಿಪರೊ ಮಂಕುತಿಮ್ಮ
ಭಕ್ತಿ ನಂಬುಗೆ ಸುಲಭ , ಭಜನೆ ವಂದನೆ ಸುಲಭ |
ತತ್ವಶೋಧನೆ ಕಷ್ಟ , ಮತಿಕಾರ್ಯ ಕಷ್ಟ||
ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ |
ಹತ್ತುವನು ತಾಪಸಿಯೊ – ಮಂಕುತಿಮ್ಮ ||
ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರು ।
ಉಲ್ಲಾಸಕೆಡೆಮಾಡು ನಿನ್ನನಾದನಿತು ॥
ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ ।
ಎಲ್ಲಕಂ ಸಿದ್ಧನಿರು ಮಂಕುತಿಮ್ಮ 
ವ್ಯರ್ಥವೀ ಜೀವನದ ಬಡಿದಾಟವೆನ್ನದಿರು
ಅರ್ಥವಹುದದು ನಿನಗೆ ಪೂರ್ಣದರ್ಶನದಿಂ
ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ
ಪೂರ್ತಿಯಿದನರಿಯೆ ಸೊಗ – ಮಂಕುತಿಮ್ಮ 
ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್
ಕಾಣಿಸುವರನ್ನವನು? ಹಸಿವವರ ಗುರುವು
ಮಾನವನುಮಂತುದುರಶಿಷ್ಯನವನಾ ರಸನೆ
ನಾನಾವಯವಗಳಲಿ ಮಂಕುತಿಮ್ಮ 
ಜೀವಋಣಗಳ ಲೆಕ್ಕದಾದಿಯರಿಯದ ನಾವು
ಆವುದನು ಸರಿಯೆನುವ? ತಪ್ಪಾವುದೆನುವ?
ಓವೊ ಬಿಡು ಕಡುಕಷ್ಟ ನೀತಿ ನಿರ್ಣಯದ ಹೊರೆ
ದೈವವದ ಹೊರಲಿ ಬಿಡು ಮಂಕುತಿಮ್ಮ

ಮಹನೀಯರ ಮೇರು ನುಡಿಗಳು

ನಮ್ಮವರು ನಮ್ಮವರ ಮೇರು ನುಡಿಗಳನ್ನು ಮೆಚ್ಚುವುದನ್ನು ಬಿಟ್ಟು, ಅನ್ಯ ಭಾಷಿಕರ ನುಡಿಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಐನ್ಸ್ಟೀನ್ ಹೇಳಿದ ಮಾತುಗಳನ್ನೇ ಉವಾಚ ಮಾಡುತ್ತಾ ಕನ್ನಡದಲ್ಲೇನಿದೆ ಎಂದು ಅಕಳಿಸುತ್ತಾರೆ .
ಕುವೆಂಪು , ಬೇಂದ್ರೆ, ಮಾಸ್ತಿ, ವಿಶ್ವೇಶ್ವರಯ್ಯರಂತಹ ಇನ್ನು ಹಲವಾರು ಮಹನಿಯರ ಪಾದಧೂಳಿಯಿಂದ ಪುನಿತವಾದ ನಾಡು ನಮ್ಮ ಕನ್ನಡ ನಾಡು. ಕನ್ನಡದಲ್ಲೇ ಕನ್ನಡಿಗರು ಆಡಿದ ನುಡಿಗಳ ಸಂಗ್ರಹ ಇಲ್ಲಿದೆ..
ಬನ್ನಿ ಇನ್ನಾದರೂ ನಮ್ಮ ಕನ್ನಡಿಗರ ಮಾತುಗಳನ್ನು ಬಳಸೋಣ
ಸರಳತನವು ಪರಿಪೂರ್ಣತೆಯ ಲಕ್ಷಣ – ಪಂಡಿತ ತಾರಾನಾಥ.
ಕೊರಬೇಡಿ , ನಿಲ್ಲಬೇಡಿ, ಇಳಿಯ ಬೇಡಿ , ಏರುತ್ತಾ ಇರಿ – ಮಾಸ್ತಿ ವೆಂಕಟೇಶ ಅಯ್ಯಂಗಾರ್.
ಉತ್ತಮವಾದುದು ಶ್ರಮವಿಲ್ಲದೆ ಲಭಿಸದು , ಇಚ್ಹೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ – ಕುವೆಂಪು .
ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು- ಕುವೆಂಪು .
ಲೋಕವೆಲ್ಲಾ ಬಗ್ಗುವುದು ಶ್ರೇಷ್ಠವಾದ ಬುದ್ದಿಗೆ ತಾನೇ ? – ಬಿ ಎಂ ಶ್ರೀಕಂಠಯ್ಯ.
ಜ್ಞಾನಕ್ಕೆ ವಿದ್ಯೆಯೂ , ವಿದ್ಯೆಗೆ ಓದು ಬರಹವೂ ತಳಹದಿ – ಬಿ ಎಂ ಶ್ರೀಕಂಠಯ್ಯ.
ಎಂತಹ ಕಟು ಅನುಭವ ಪ್ರಸಂಗ ಬಂದರೂ ಎದೆಗುಂದಬಾರದು.ಇದೇ ಸುಖಿ ಆಗಿರೋ ರಹಸ್ಯ.- ದಾ ರಾ ಬೇಂದ್ರೆ
ಬುದ್ದಿಯ ಜ್ಞಾನ ಬೇರೆ , ಹೃದಯದ ಜ್ಞಾನ ಬೇರೆ – ಜಿ ಪಿ ರಾಜರತ್ನಂ
ಅಪ್ರಿಯವಾದರು ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ – ಅನಕೃ
ಹೋದ ಐಶ್ವರ್ಯ ಸಿಗಬಹುದು, ಹೋದ ಹೊತ್ತು ಸಿಗುವುದಿಲ್ಲ – ಅನಕೃ
ಮಾನವ ಭೂಮಿಯ ಮೇಲೆ ಇದ್ದುಕೊಂಡು ಸ್ವರ್ಗವನ್ನು ಗೆಲ್ಲುವ ಸಾಧನೆ ಮಾಡಬೇಕು – ವಿನಾಯಕ ಕೃಷ್ಣ ಗೋಕಾಕ
ಮರ್ತ್ಯದಲ್ಲಿ ನಿಂತು ಗೆಲ್ಲು, ಮರ್ತ್ಯವೇ ಒರೆಗಲ್ಲು .- ವಿನಾಯಕ ಕೃಷ್ಣ ಗೋಕಾಕ
ಪ್ರಾಣಿ ಜೀವನ ಮಿತವಾದದು , ಮನುಷ್ಯ ಜೀವನ ಬಹುಮುಖವಾದದು – ಶಿವರಾಮ ಕಾರಂತ
ಜನಾಂಗವನ್ನು ಶ್ರೇಷ್ಠ ಮಾಡುವುದಕ್ಕೆ ಒಂದೇ ದಾರಿ . ಜನರನ್ನು ಶ್ರೇಷ್ಠ ಮಾಡಬೇಕು – ಸರ್ ಎಂ ವಿಶ್ವೇಶ್ವರಯ್ಯ
ಹೆಚ್ಚು ಹೆಚ್ಚಾಗಿ ದುಡಿ — ಸರ್ ಎಂ ವಿಶ್ವೇಶ್ವರಯ್ಯ
ದುಡಿಮೆಗೆ ಗುರಿಯಿರಲಿ , ದುಡಿಯುವುದರಲ್ಲಿ ನಿಯಮವಿರಲಿ – ಸರ್ ಎಂ ವಿಶ್ವೇಶ್ವರಯ್ಯ
ನಿನ್ನ ದುಡಿಮೆಯಲ್ಲಿ ನೀನು ದಕ್ಷನಾಗು – ಸರ್ ಎಂ ವಿಶ್ವೇಶ್ವರಯ್ಯ
ದುಡಿಮೆಯಲ್ಲಿ ಸೇವಾ ಬುದ್ದಿಯಿರಲಿ – ಸರ್ ಎಂ ವಿಶ್ವೇಶ್ವರಯ್ಯ
ಇನ್ನೊಬ್ಬನ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ , ನಮ್ಮದೇ ಹುಚ್ಚುತನ ನಮಗೆ ಕಾಣಿಸುತ್ತದೆಯೇ ? – ಶಿವರಾಮ ಕಾರಂತ
ಸತ್ಯ ದರ್ಶನವಾಗಬೇಕು ಎಂದರೆ ಅಹಂಕಾರ ವಿಸರ್ಜನೆಯಾಗಬೇಕು.- ತ ರಾ ಸುಬ್ಬರಾವ್
ತಾನು ಆಚರಿಸದೆ ಮತ್ತೊಬ್ಬರು ಮಾತ್ರ ಆಚರಿಸಬೇಕೆಂದು ದ್ವಿವಿಧವಾದುದು ಎಂದು ಧರ್ಮವೆನಿಸಿಕೊಳ್ಳುವುದಿಲ್ಲ – ತ ರಾ ಸುಬ್ಬರಾವ್
ನಾವು ಹುಟ್ಟಿದ ಸಮಾಜಕ್ಕೆ ಸಲ್ಲಿಸಬೇಕಾದ ಋಣ ಸಮಾಜ ಸೇವೆ – ಟಿ ಪಿ ಕೈಲಾಸಂ
ಏನಾದರು ಮಾಡುತಿರು ತಮ್ಮ ಸುಮ್ಮನಿರಬೇಡ – ಗೋಪಾಲ ಕೃಷ್ಣ ಅಡಿಗ
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ -ಅಡಿಗರು
ತಾಯಿ ಇಲ್ಲದ ತವರಿಗೆ ಮಗಳು ಬಂದರೆ ಉರಿಬೇಸಗೆಯಲ್ಲಿ ಮರಳು ಗಾಡಿಗೆ ಬಂದಂತೆ.- ಅನಕೃ
ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.–ಸರ್ ಎಂ.ವಿ
ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ — ಟಿ.ಪಿ.ಕೈಲಾಸಂ
ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು-— ಕುವೆಂಪು
ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು— ಮಾಸ್ತಿ
ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು— ಕುವೆಂಪು
ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಭಿಚಾರ – ಎಸ್ ಎಲ್ ಭ್ಯರಪ್ಪ

 

ಮಹನೀಯರ ಮೇರು ನುಡಿಗಳು –

ಇಲ್ಲಿರುವ ಮೇರು ನುಡಿಗಳಿಗೆ ಮೂಲಗಳು  : ಅಂತರ್ಜಾಲ , ಕನ್ನಡ ಪುಸ್ತಕಗಳು ಹಾಗು ಕನ್ನಡ ದಿನಪತ್ರಿಕೆಗಳು 
ಆಲೂರು ವೆಂಕಟರಾಯರು 
ಕರ್ನಾಟಕವು ನಮ್ಮ ಕನ್ನಡಿಗರ ಕುರುಕ್ಷೇತ್ರ , ಭಾರತವು ನಮ್ಮ ಧರ್ಮ ಕ್ಷೇತ್ರ .
ಭಾರತಿದೇವಿಯು ವಿಶ್ವದ ಉತ್ಸವಮೂರ್ತಿಯು, ಕರ್ನಾಟಕ ದೇವಿಯು  ಭಾರತಿದೇವಿಯ ಉತ್ಸವಮೂರ್ತಿಯು.
ಕರ್ನಾಟಕತ್ವವವು ಅತ್ಯಂತ ಪರಿಶುದ್ಧ ಭಾವನೆ, ಅತ್ಯಂತ ವಿಶಾಲವಾದ ಭಾವನೆ. ಅದು ಕರ್ನಾಟದ ಹಿತಗಳೆಲ್ಲವನ್ನೂ ತನ್ನಲ್ಲಿ ಅಡಗಿಸಿಕೊಂಡಿದೆ. 
ಅಖಂಡ ಕರ್ನಾಟಕವು ಮೊದಲು ಹೃದಯದಲ್ಲಿ. 
ಭಾರತೀಯ ಸಂಸ್ಕೃತಿಯೂ ಕರ್ನಾಟಕ ಸಂಸ್ಕೃತಿ .
ಇತಿಹಾಸವೆಂದರೆ ಸತ್ತವರ ಮೇಲೆ ಕಟ್ಟುವ ಗೋರಿಯಲ್ಲ ಅದೊಂದು ಆಳವಾದ ತತ್ವಜ್ಞಾನ.
ಕರ್ನಾಟಕ ಬಾಳೆಯ ಗಿಡಕ್ಕೆ ಈಗ ಗೊನೆ ಬಿಟ್ಟಂತಾಗಿದೆ. ಅದರೊಳಗಿನ ಕಾಯಿಗಳನ್ನು ಹಣ್ಣು ಮಾಡಿಕೊಂಡು ಉಣ್ಣುವ ಕೆಲಸ ಕನ್ನಡಿಗರದು .
ಈಗಿನ ಕಾಲಕ್ಕೆ ಮಾತೃ ಭಾಷೆಗಿಂತ ದೇಶ ಭಾಷೆಗೆ ಮನ್ನಣೆ ಹೆಚ್ಚು ಎಂಬುದನ್ನು ಯಾರು ಮರೆಯದಿರಲಿ.
ನಾನು ಮೊದಲು ಭಾರತೀಯನು , ಅನಂತರ ಕರ್ನಾಟಕದವನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದುಗಡೆಗಳಿಲ್ಲ. ಎರಡು ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವಿಶಿಷ್ಟತ್ವವು ಸಮಷ್ಟಿತ್ವವೂ ಎಕಸಮಯಾವಛೇದದಿಂದ       ಬೇಕು.
————————————————————————————————–

ಕೆ.ಎಸ್.ನರಸಿಂಹ ಸ್ವಾಮಿ
ಬರವೇ ಇರಲಿ, ಸಮೃದ್ಧಿ ಬರಲಿ- ತಾಳುವ ಬಾಳಿನ ಬಾವುಟವಿರಲಿ.
ಬದಲಾವಣೆಯೇ ಬಾಳಿನೊಗ್ಗರಣೆ.
ಯಾವುದಿಹವೋ, ಬಂಧನವೋ, ಭ್ರಾಂತಿಯೋ ಅದಾಗಲಿ ನನ್ನ ನೆಲೆ
ಯಾವುದನುಭವದ ಸಹಜ ಕ್ರಾಂತಿಯೋ ಅದಾಗಲಿ ನನ್ನ ಕಲೆ.
————————————————————————————————–

ಕುವೆಂಪು
ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ.
ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಬಾರದು, ಕಲ್ಲಿದ್ದಲ ಕಾವಾಗಬೇಕು.
ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು
ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ”
ಇಂದಿನ ಕನಸು, ನಾಳೆಯ ಮನಸು, ನಾಡಿದ್ದಿನ ಉಣಿಸು.
ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ
————————————————————————————————–

ದ.ರಾ.ಬೇಂದ್ರೆ
ನಾಳೆ ಎಂಬುವುದು ನಿನ್ನಿನ ಮನಸು, ಮುಂದೆ ಎಂಬುವುದು ಇಂದಿನ ಕನಸು. ರಸವೆ ಜನನ, ವಿರಸ ಮರಣ, ಸಮರಸವೇ ಜೀವನ!
ಕೃತಿ ಕೆಟ್ಟದಿದ್ದು,ಮನಸ್ಸು ಸದಾ ಕೆಡುಕು ಬಯಸುತ್ತಿದ್ದು,
ಸಜ್ಜನರಂತೆ ಮುಖವಾಡ ಧರಿಸುತ್ತಿರುವ ಜನರ ಬಗ್ಗೆ ಎಚ್ಚರದಿಂದಿರಬೇಕು.
ಕುರಿಯಂತೆ ನಡೆಯುವವರು ಬಹಳಷ್ಟು ಜನರು,
ಗುರಿಯಿಟ್ಟು ನಡೆಯುವವರು ತುಂಬಾ ಕಡಿಮೆ.
ಬೇವಿನ ಕಹಿ ಬಾಳಿನಲ್ಲಿ ಹೂವಿನ ನರುಗಂಪು ಸೂಸಿ ಜೀವಕಳೆಯ ತರುತಿದೆ.
ಬದುಕು ಮತ್ತು ಬಾಳು ಬೇರೆ ಬೇರೆ – ಬದುಕು ವ್ರುದ್ಧಿ , ಬಾಳು ಸಿದ್ಧಿ
ತಾ೦ತ್ರಿಕ ಶಿಕ್ಶಣ ಬದುಕಿಗಾಗಿ – ಆಧ್ಯಾತ್ಮಿಕ ಶಿಕ್ಶಣ ಬಾಳಿಗಾಗಿ
ಯಾರಿಗೇತರಲಿ ಇಷ್ಟವೋ ಅದುವೇ ಸುಖ.
————————————————————————————————–

ವಿ.ಕೃ.ಗೋಕಾಕ್
ಓದಿ ಮರುಳಾಗಬಾರದು; ಓದದೆಯೂ ಮರುಳಾಗಬಾರದು; ಓದಿ ಹುರುಳಾಗಬೇಕು.
ಬರಲಿರುವ ಸನ್ನಿವೇಶಗಳನ್ನು ಸದಾ ನಿಮ್ಮ ಪರವಾಗಿ ಇಟ್ಟುಕೊಳ್ಳುವುದು ಜಾಣತನ.
————————————————————————————————–
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಜೀವಂತವಾದ ಯಾವ ಭಾಷೆಯೂ ತಾನು ಕಡಿಮೆ ಯೋಗ್ಯತೆಯ ಭಾಷೆಯೆಂದು ಕುಗ್ಗಬಾರದು.
ಕನ್ನಡ ಜಗತ್ತಿನ ಯಾವ ಭಾಷೆಗೂ ಕಡಿಮೆಯದಲ್ಲ.
ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು
ಅಂದಂದಿನ ಕೆಲಸವನ್ನು ಅಂದಂದು ಮಾಡಿ , ಅದರ ವಿಷಯವಾಗಿ ಬಹಳವಾಗಿ ಚಿಂತೆ ಮಾಡದೆ ಇರಬೇಕು.ಅದೇ ಒಳ್ಳೆಯ ಜೀವನ.
————————————————————————————————–

ಪೂರ್ಣ ಚಂದ್ರ ತೇಜಸ್ವಿ 
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ 
————————————————————————————————–

ಪಿ.ಲಂಕೇಶ್
ಪ್ರೀತಿ ಎ೦ಬುದು ಆರೋಗ್ಯವ೦ತರ ಖಾಯಿಲೆ.
ಸಾರ್ವಜನಿಕ ಬದುಕಿನಲ್ಲಿ ತೊಡಗಿರುವ ಪ್ರತಿಯೊಬ್ಬರೂ ಟೀಕೆ, ವಿಮರ್ಶೆ, ತಮಾಷೆಯನ್ನು ಎದುರಿಸಲು ಸಿದ್ಧರಾಗಿರಬೇಕು.
————————————————————————————————–
ಡಾ॥ಡಿ.ವೀರೇಂದ್ರ ಹೆಗ್ಗಡೆಯವರು

ಮೂರು ವರ್ಷ ಸತತ ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ ನಮ್ಮ ಲೆಕ್ಕ ಬರೆಯುವುದು ಹೆಚ್ಚುಅರ್ಥಪೂರ್ಣವಾದದ್ದು”
————————————————————————————————–

ಚೆನ್ನವೀರ ಕಣವಿ

ಅಹಂಕಾರಿ ಮನುಷ್ಯ ಒಂಟಿಯಾಗಿರಬೇಕಾಗುತ್ತದೆ.
————————————————————————————————–

ಶಿವರಾಮ ಕಾರಂತ
ಬೇರೆಯವರನ್ನು ತೆಗಳುವುದರಿಂದ ನಿಮ್ಮ ವ್ಯಕ್ತಿತ್ವಕ್ಕೇ ಹೆಚ್ಚು ಕುಂದುಂಟಾಗುತ್ತದೆ.
————————————————————————————————–

ಅ.ನ.ಕೃಷ್ಣರಾವ್
ಕೆಲವರಿಗೆ ಯಶಸ್ಸು ಸಿಕ್ಕುತ್ತದೆ. ಆದರೆ ಅದಕ್ಕೆ ಪಾತ್ರರು ಬೆರೆಯವರು ಆಗಿರುತ್ತಾರೆ.
————————————————————————————————–

ಗೋಪಾಲಕೃಷ್ಣ ಅಡಿಗ
ಭಾಷೆ ವೈಯಕ್ತಿಕವೂ ಹೌದು, ಸಾಮಾಜಿಕವೂ ಹೌದು- ಏಕಕಾಲಕ್ಕೆ.
————————————————————————————————–
ಮಧುರ ಚೆನ್ನ
ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು. ಬಯಕೆ ಬರುವುದರ ಕಣ್ಸನ್ನೆ ಕಾಣೋ.
————————————————————————————————–
ಕನಕದಾಸ
ನುಡಿ ನಡೆವ ಕಾಲದಲ್ಲಿ ದಾನಧರ್ಮ ಮಾಡದೆ, ಅಡವಿಯೊಳಗೆ ಕೆರೆ ತುಂಬಿ ಬತ್ತಿದಂತೆ.
————————————————————————————————–
ಚದುರಂಗ

ಪರಿಸ್ಥಿತಿಗಳನ್ನು ಹಾಗೆಯೇ ಬಿಟ್ಟುಬಿಟ್ಟರೆ ಅದು ಎಂದಿಗೂ ಸರಿ ಹೊಂದುವುದಿಲ್ಲ.
————————————————————————————————–
ಎ.ಎನ್. ಮೂರ್ತಿರಾವ್
ನಾವು ನಂಬುವ ತತ್ವಗಳಿಗಿಂತ, ದೇವರಿಗಿಂತ,ನಾವು ಬದುಕುವ ರೀತಿ ಮುಖ್ಯ.
————————————————————————————————–

ಬೀಚಿ
ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆಯ ಮೇಲೆ!
————————————————————————————————–
ಬಿ.ಎಂ.ಶ್ರೀ

ಒಳ್ಳೆಯದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ. ಅಲ್ಲದ್ದನ್ನು ಕಂಡಾಗ ಮಾತು ಕೊಂಚಾಗಲಿ.
————————————————————————————————–
ಕೃಷ್ಣಮೂರ್ತಿ ಪುರಾಣಿಕ

ಅಸಹನೆಯಿಂದ ಭಾವೋದ್ವೇಗ, ಅದರಿಂದ ಆತಂಕ, ಆತಂಕದಿಂದ ಆಪತ್ತು ಬರುತ್ತದೆ.
ಆದ್ದರಿಂದಲೇ ಅಸಹನೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕಾದರೆ ಸಹನೆಯನ್ನು ರೂಢಿ ಮಾಡಿಕೊಳ್ಳಬೇಕು.
————————————————————————————————–

ಬಸವಣ್ಣ
ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯಾ .
ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು.
————————————————————————————————–
ಕಮಲಾಹಂಪನಾ

ಯಾವ ಕನ್ನಡಿಗನ ಮನೆಯಲ್ಲಿ ಕೆಲವಾದರೂ ಕನ್ನಡ ಕೃತಿಗಳಿಲ್ಲವೋ,
ಅದು ಕನ್ನಡಿಗನ ಮನೆಯೇ ಎಂದು ಪ್ರಶ್ನಿಸುವಂತಾಗಬೇಕು.
————————————————————————————————–
ಅನುಪಮಾ ನಿರಂಜನ

ನಾವು ಮಾಡುವ ಕಾರ್ಯವು ಕಾರಣಗಳ ಅನುರೂಪವಾಗಿರುತ್ತದೆ.
————————————————————————————————–
ಕೈಲಾಸಂ

ಹೆಂಡ ಎಲ್ಲರನ್ನೂ upset ಮಾಡಿದ್ದರೆ , ನನ್ನನ್ನೂ setup ಮಾಡುತ್ತೆ . ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ.
————————————————————————————————–

ಸರ್ ಎಂ. ವಿಶ್ವೇಶ್ವರಯ್ಯ
ತುಕ್ಕು ಹಿಡಿದು ಹೋಗಬೇಡ, ತೇದು ಹೋಗು.
————————————————————————————————–

ಶೇಷಗಿರಿರಾವ್

ಮಾನವ ಕೆಟ್ಟ ಕೆಲಸಗಳನ್ನು ಮಾಡಲು ಯೋಚಿಸುವುದಿಲ್ಲ. ಆದರೆ ಒಳ್ಳೆ ಕೆಲಸ ಮಾಡಲು ಬಹಳ ಯೋಚಿಸುತ್ತಾನೆ .
————————————————————————————————–
ಶ್ರೀರಂಗ
ಭಾಷೆಯು ಭಾವನೆಯ ಪ್ರತಿಬಿಂಬ
————————————————————————————————–
ಕಡಗ್ಲೋಡ್ಲು ಶಂಕರಭಟ್ಟ

ಅನುಭವವು ಸವಿಯಲ್ಲ; ಅದರ ನೆನಪೇ ಸವಿವು,
ಅದಕದ್ದು ಮೇಯದೆ ಮನವು!
————————————————————————————————–
ನಾ. ಕಸ್ತೂರಿ
ಹೊಟ್ಟೆ ತುಂಬಿದವರಿಗೆ ಬೇರೆಯವರು ಕಷ್ಟದಲ್ಲಿದ್ದಾಗ ಮರುಕ ಹುಟ್ಟುವುದೇ ?
————————————————————————————————–
ಜಿ.ಎಸ್.ಶಿವರುದ್ರಪ್ಪ
ಕ್ರಾಂತಿ ಎಂದರೆ ಹಳೆಯದರ ನಾಶವಲ್ಲ. ಹಳೆಯದರಲ್ಲಿ ಏನೇನು ಒಳ್ಳೆಯದು ಇದೆಯೋ ಅದನ್ನು ಉಳಿಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳುವುದು.
————————————————————————————————–
ಪಿ.ಲಂಕೇಶ್
ಸಾರ್ವಜನಿಕ ಬದುಕಿನಲ್ಲಿ ತೊಡಗಿರುವ ಪ್ರತಿಯೊಬ್ಬರೂ ಟೀಕೆ, ವಿಮರ್ಶೆ, ತಮಾಷೆಯನ್ನು ಎದುರಿಸಲು ಸಿದ್ಧರಾಗಿರಬೇಕು.
————————————————————————————————–

ಎಸ್‌.ವಿ.ರಂಗಣ್ಣ ನಂಬಿಕೆ ಇರಬೇಕು, ನಂಬಿಕೆಗೆ ಕಣ್ಣಿರಬೇಕು, ನಂಬಿಕೆಯ ಕಣ್ಣು ತೆರೆದಿರಬೇಕು; ಆಗ ನಂಬಿಕೆಯ ನಂಬಬಹುದು.
————————————————————————————————–
ತೀ.ನಂ.ಶ್ರೀ.

ಪ್ರತಿಭೆ ನಿಜವಾಗಿಯೂ ಒಂದು ರೀತಿಯ ದೃಷ್ಟಿ. ಅದು ಬುದ್ಧಿಯ ಕಣ್ಣಲ್ಲ; ಹೃದಯದ ಕಣ್ಣು. ಈ ಒಳಗಣ್ಣು ತೆರೆದಾಗ ವಿಶ್ವದ ಹೃದಯವೇ ತೆರೆಯುತ್ತದೆ.
————————————————————————————————–

ತರಾಸು ಅರಸಾದೋನು ಆಳಬೇಕು; ಅಳಬಾರದು. ಅಳೋ ಸಮಯ ಬಂದರೂ ಅದು ಮಾನಸಿಕವಾಗಿರಬೇಕು. ಕಣ್ಣಲ್ಲಿ, ಮುಖದಲ್ಲಿ ಕಾಣಬಾರದು.
————————————————————————————————–

ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ ನೀತಿ ಎಂಬುದು ಸಾಧಿಸಬೇಕಾದ ಧರ್ಮವೇ ಹೊರತು ಸಹಜವಾದ ಗುಣವಲ್ಲ.
————————————————————————————————–
ಗೋಪಾಲ ಕೃಷ್ಣ ಅಡಿಗ ಒಳ್ಳೆತನ ಸಹಜವೇನಲ್ಲ
ಒಳ್ಳೆತನ ಅಸಹಜವೂ ಅಲ್ಲ
————————————————————————————————–

ಸಿಂಪಿ ಲಿಂಗಣ್ಣ

ಇಂದು ಮಿತಿಮೀರಿದ ಆಸೆಯೇ ಜಗತ್ತಿನ  ಜೀವನವನ್ನೆಲ್ಲಾ ರೂಪಿಸುತ್ತಿದೆ.
ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖವನ್ನು ಸಹಿಸಲು ಸಿದ್ಧವಾಗಿದೆ.
————————————————————————————————–

ಅನುಪಮಾ ನಿರಂಜನ ನಾವು ಮಾಡುವ ಕಾರ್ಯವು ಕಾರಣಗಳ ಅನುರೂಪವಾಗಿರುತ್ತದೆ.
————————————————————————————————–

ನಿರಂಜನ
ಸ್ನೇಹಿತ ನಿಸರ್ಗ ಕೊಟ್ಟಿರುವ ಸೋದರ ಸ್ನೇಹಿತರನ್ನು ಹೊಂದಿರುವವರೇ ನಿಜವಾಗಿ ಧನ್ಯರು.
————————————————————————————————–
ಎಸ್.ಎಲ್.ಭೈರಪ್ಪ

ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಭಿಚಾರ.
ಯುದ್ಧ ಮಾಡುವವನು ತಾನು ಯಾಕೆ ಯುದ್ಧ ಮಾಡುತ್ತಿದ್ದೇನೆ ಎನ್ನುವ ಕಾರಣವನ್ನು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ತಿಳಿದಿರಬೇಕು.
ಅಂತರಂಗದ ನಿಷ್ಠೆ ಇಲ್ಲದಿದ್ದರೆ ಸೇಹ ಧೈರ್ಯ ಎಲ್ಲಿಂದ ಬರುತ್ತದೆ?
————————————————————————————————–
ರಂ. ಶ್ರೀ. ಮುಗಳಿ
ಎಂಥ ನಾಡಿದು ಯೆಂಥ ಕಾಡಾಯಿತೋ”
————————————————————————————————–
ಕೆ.ಕೆ.ಹೆಬ್ಬಾರ ನನಗೆ ಗುಲಾಬಿ ಹೂವು ಎಷ್ಟು ಪ್ರಿಯವೋ, ಕಳ್ಳಿಯ ಪೊದೆ ಕೂಡ ಅಷ್ಟೇ ಪ್ರಿಯ