ರಂಗನಾಥ KN ಶಿಕ್ಷಕರ ರಚಿತ ಕವನಗಳು


ರಂಗನಾಥ KN  ಶಿಕ್ಷಕರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಗಿಕೊಪ್ಪ ತೀರ್ಥಹಳ್ಳಿ ತಾಲ್ಲೂಕು 
**********************






 ೨೪೫.ಅನುಕಂಪ ಬೇಡ ಅವಕಾಶ ಕೊಡಿ

ಕೇಳಿರಿ ಕನ್ನಡ ಕಣ್ಮಣಿಗಳೇ
ನಮ್ಮಯ ಜೀವನಗಾಥೆಯ//
ಬದುಕೆಂಬ ಬೆಳಕಿನ ಕಿರಣಗಳೇ
ಬೆಳಗಿರಿ ಚೈತನ್ಯದ ಚಿಲುಮೆಯ//

ಕಲ್ಲು ಉಳಿಪೆಟ್ಟು ತಿಂದು
ಶಿಲೆಯಾಗಿ ಪೂಜಿಸಿಕೊಳ್ಳಲಿಲ್ಲವೇ//
ನೋವಲ್ಲೇ ಹರಿಶ್ಚಂದ್ರ ಬೆಂದು
ಸತ್ಯದ ಬೆಳಕ ಜಗಕೆ ಚಲ್ಲಲಿಲ್ಲವೇ//

ಅತ್ಮಬಲ ಜೊತೆಗಿರಲು
ಕೀಳರಿಮೆ ಕರಗಿ ದಿಕ್ಕೆಟ್ಟು ಓಡಿರಲು//
ಕೀಳುಸೀಳು ನೋಟ ಬೇಡ
ಅಂತರ್ಚಕ್ಷ ತೆರೆದೊಮ್ಮೆ ನೋಡ//

ಕಲೆಗಿಲ್ಲಿ ಬೆಲೆನೀಡು ನೆಲೆನೀಡು
ಕಾಲಲ್ಲಿ ಒಸಕಿ ಸಾಯಿಸಬೇಡ//
ಆತ್ಮವಿಶ್ವಾಸದ ಮುಂದೆ ಏನಿಲ್ಲ ನೋಡು
ನೀನೆಷ್ಟೇ ತುಳಿದರೂ ಎದ್ದು ಬರುವೆ ಮೂಢ//

ಛಲವೊಂದಿದ್ದರೆ ಗುರಿಗೆಲ್ಲಿ ಸೋಲು
ಹೃದಯದಿ ಬಿಸಿರಕ್ತದ ಜ್ವಾಲೆಯ ನೋಡು//
ತಪ್ಪುಮಾಡಿ ನಾವು ಬಂದಿಲ್ಲವಿಲ್ಲಿ
ಒಪ್ಪ ಬಾಳ ಬಾಳಿ ತೋರಿಸಿ ಸವಾಲೆಸೆವೆ ನೋಡು//

ನಮ್ಮ ಬದುಕಲೂ ಕಾಮನಬಿಲ್ಲು ಬರಲಿ
ಮೊದಲಮಳೆಯ ನವಿಲಂತೆ ನಾವೂ ನರ್ತಿಸಲಿ//
ನೋವಿಲ್ಲದ ಸಾವಿಲ್ಲದ ಜೀವಿ ಜಗದೊಳು ತೋರಿಸಲಿ
ಪ್ರತಿಭೆಗಳ ಯಾನವು ಗಗನವನು ತುಂಬಲಿ//

ವೈಪಲ್ಯ ವೈಕಲ್ಯ ವೈರುಧ್ಯವಿಲ್ಲ
ವಿಕಲತೆಯ ವಿಚಲತೆಯ ಡೊಂಕೆಮಗಿಲ್ಲ//
ವಿಧಿಗೂ ಸವಾಲೆಸೆದು ಬದುಕು ಕಟ್ಟಿದೆವಲ್ಲ
ಅನುಕಂಪ ಬೇಡ ಅವಕಾಶ ಕೊಡಿ ನೀವೆಲ್ಲ//

ರಂಗನಾಥ ಕ. ನಾ. ದೇವರಹಳ್ಳಿ.

೫೦.ನನಗೂ ಆಸೆ

ಏನು ಹೇಳಲಿ ನಾನು
ನೂರು ಆಸೆಯು ನನಗೆ//
ಬಿಚ್ಚಿಬಿಡುವೆನು ಇನ್ನು
ಆಸೆಗಂಟನು ಹೊರಗೆ//

ಮುಗಿದ ಪುಟವ ತೆರೆವ ಆಸೆ
ಬಾಲ್ಯಕೊಮ್ಮೆ ಹೋಗುವಾಸೆ//
ಬೆಟ್ಟ ಹತ್ತಿ ಮಂಗಚೇಷ್ಟೆ  ಮಾಡುವಾಸೆ
ಮೊದಲ ಪ್ರೀತಿ ನೋಡುವಾಸೆ//

ಗಿರಿಜಾ ಮೇಡಂ ಪಾಠ ಕೇಳುವಾಸೆ
ಹೆಚ್ ಎಸ್ ಆರ್ ನೀತಿ ಆಲಿಸುವಾಸೆ//
ಚಿಗುರು ಮೀಸೆ ತಿರುವುವಾಸೆ
ಡ್ರಾಮಾ ಮಾಡಿ ಮಿಂಚೋ ಆಸೆ//

ಬಾಲ್ಯಗೆಳೆಯರ ನೋಡೋ ಆಸೆ
ಸ್ನೇಹ ಸಮ್ಮಿಲನ ಮಾಡೋ ಆಸೆ//
ಎಲ್ಲರ ದುಃಖ ಪಾಲು ಪಡೆವ ಆಸೆ
ಎಲ್ಲರೊಳಗೊಂದಾಗಿ ಬಾಳೋ ಆಸೆ//

ಗುರುವಿನ ಕೃಪೆಗೆ ಗುರುವಾಗೋ ಆಸೆ
ಸಾರ್ಥಕ ಸೇವೆಯ ಮಾಡುವ ಮಹದಾಸೆ//
ಪ್ರೀತಿಯ ಕಡಲ ಸೇರೋ ಆಸೆ
ಹೆತ್ತವರ ಮಡಿಲಲ್ಲಿ ಮಲಗೋ ಆಸೆ//

ನಂಬಿಕೆ ನದಿಯಲಿ ಈಜೋ ಆಸೆ
ಸರಳತೆ ಸವಿಯಲಿ ಬದುಕೋ ಆಸೆ//
ಮಡದಿಯ ಕಣ್ಣಿಗೆ ರೆಪ್ಪೆ ಆಸರೆಯಾಸೆ
ಮಗುವಿನ ಕನಸಲಿ ಇರುವಾ ಆಸೆ//

ದೈವತೆ ಮಾನವ ಹೊಂದುವ ಆಸೆ
ವಿಶ್ವದ ಐಕ್ಯವ ತ್ರಿಲೋಕದಿ ಸಾರುವಾಸೆ//
ಮೌಡ್ಯತೆಯೋಡಿಸಿ ಸತ್ಯದ ಕಣ್ಣ ತೆರೆಸುವಾಸೆ
ನಾಲ್ಕುದಿನದ ಸಂತೆಯ ಕಥೆ ಹೇಳುವಾಸೆ//

ತಮಂಧವ ನಂದಿಸೋ ಜ್ಯೋತಿಯಾಗುವಾಸೆ
ಬಂಧುರಗಳಿಗೆ ಪ್ರೀತಿ ಹಂಚುವಾಸೆ//
ಬಿಸಿಯಾದ ಇಳೆಗೆ ತಂಪೆರಸೋ ತಂಗಾಳಿಯಾಗುವಾಸೆ
ಏನಾದರೂ ಕೊನೆಗೆ ಮಾನವನಾಗಿ ಬಾಳುವಾಸೆ//

ರಂಗನಾಥ

೪೮.ಎಂತಹ ಸೆಳೆತ ನಿನ್ನದು

ಬಣ್ಣ ಬಣ್ಣದ ಚಿತ್ತಾರ ಮೈಮಾಟ/
ಕಣ್ಣುಗಳ ಹಬ್ಬಕ್ಕೆ ವರ್ಣಗಳ ರಸದೂಟ//
ಮಕರಂದದ ಮಡಿಲಲ್ಲಿ ಏಕಿಂತ ಸಿಹಿಯೂಟ/
ಬಯಕೆಯ ತೋಟದಲ್ಲಿ ನಿನಗಾಗಿ ಹುಡುಕಾಟ//

ನಿನಗಾಗಿ ಭ್ರಮೆಗಿಳಿದು ಭ್ರಮರನಾದೆನು/
ನಾನೂ ಚಿತ್ತಾರದ ಅಂಗಿಯುಟ್ಟು ಬಂದೆನು//
ಸ್ವಯಂವರ ನಡೆದು ಗಾಂಧರ್ವ ವಿವಾಹವಾದೆನು/
ನಿನ್ನಧರಕ್ಕೆ ಚುಂಬಿಸಿ ರಸವೀರಿ ಬೀಗಿದೆನು//

ಏನು ಸಿಹಿ ನಿನ್ನ ತುಟಿಯಂಚಲಿ ಅಡಗಿಸಿಹೆ/
ಹೀರಿದಷ್ಟು ಇಮ್ಮಡಿಸುವ ಆಸೆ ಕಂಗಳಲಿಹೆ//
ಬಯಕೆ ಬಳ್ಳಿಯು ನಿನ್ನ ತಬ್ಬಲು ಓಡಿ ಬಂದಿಹೆ/
ಜೇನಕೊಟ್ಟು ತೃಪ್ತಿಪಡಿಸು ಇನಿತು ಬೇಡಿಹೆ//

ಪ್ರಕೃತಿ ನೀನು ಪುರುಷ ನಾನು /
ಪ್ರೇಮಕಡಲನು ಸೇರಲು ಬಂದೆನು//
ಮುತ್ತಿನ ಮತ್ತಲಿ ರೇಣುವ ತಂದೆನು/
ಬಸಿರಿನ ಹಸಿರಿಗೆ ನಾಂದಿಯ ಹಾಡ್ದೆನು//

ವಿಸ್ಮಯ ಜಗದಿ ನಿಸ್ಸಂಶಯ ಹೆಣ್ಣು ನೀನು/
ಹುಟ್ಟು ಸಾವಿನ ಸಾರ್ಥಕ ಕಂಡೆನು//
ಸೃಷ್ಟಿಯ ಸ್ವಾರ್ಥಕೆ ಹೇಳುವ ಪಾಠ ನೀನು/
ನನ್ನ ಮಂಗನ ತಿದ್ದುವೆಯೇನು//

ನಿನ್ನಯ ತೋಳಲಿ ಪಾತರಗಿತ್ತಿಯು ನಾನು/
ತ್ಯಾಗದ ಸತ್ಯವ ನನಗೂ ತುಂಬುವೆಯೇನು//
ಚಂಚಲ ಮನವನು  ಪ್ರೀತಿಲಿ ತಿದ್ದುವೆಯೇನು/
ನವಸೃಷ್ಟಿಗೆ ನಾವು ಒಂದಾಗೋಣವೇನು//

ರಂಗನಾಥ ಕ. ನಾ. ದೇವರಹಳ್ಳಿ.

 ಕವನ ಸ್ಪರ್ಧೆಗೆ

೨೫೨.ಕುಂಡಲಿನಿ ಯೋಗಚಕ್ರ.

ಆ ದೈವಸೃಷ್ಟಿಯಲಿ ಆರೋಗ್ಯವೇ ಮೊದಲಿಲ್ಲಿ
ದೇಹರಚನೆಯ ಗುಡಿಯಲ್ಲಿ ಏಳುಬಣ್ಣದ ಉಸಿರಿಲ್ಲಿ||
ಮುಕುಟಚಕ್ರವು ನೇರಳೆ ಬಣ್ಣದಲಿ
ಅರಿವು ಏಕತೆಯ ಅಸ್ತಿತ್ವದ ನೆತ್ತಿಯಲಿ||

ಆಜ್ಞಾಚಕ್ರವು ಮೂರನೇ ಕಣ್ಣಿನ ತೆರದಲ್ಲಿ
ಕಡುನೀಲಿ ಬಣ್ಣವು ಅಂತರ್ದೃಷ್ಟಿಯ ತುಲನೆಯಲಿ||
ವಿಶುದ್ಧಿಚಕ್ರವು ಗಂಟಲಲಿ ಸಂಪರ್ಕಿಸಲು ತಿಳಿನೀಲಿ
ಆತ್ಮಾಭಿವ್ಯಕ್ತಿಯ ಸಂವಹನ ನಿಯತ ನಡೆಯಲಿ||

ಹೃದಯಚಕ್ರವು ಹಸಿರಲ್ಲಿ ಅನಾಹತ ಭಾವದುಸಿರಲ್ಲಿ
ಪ್ರೀತಿಯ ಕಂಗಳ ಭಾವದರಮನೆಯಲ್ಲಿ||
ಮಣಿಪೂರಕಚಕ್ರ ಮೆದೋಜೀರಕದಲ್ಲಿ
ಹಳದಿಯಲಿ ಭಯ ಬಲ ಅಂತರ್ಮುಖಿಯಲ್ಲಿ||

ಸ್ವಾದಿಸ್ಥಾನಚಕ್ರವು ವೃಷಣ ಅಂಡಾಶಯದಲ್ಲಿ
ಕಿತ್ತಳೆಬಣ್ಣದಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ||
ಮೂಲಾಧಾರಚಕ್ರವು ಆದಿಸೃಷ್ಟಿಯ ಕರದಲ್ಲಿ
ಸ್ಥಿರತೆ ರಕ್ಷಣೆ ಅನುವಂಶೀಯತೆ ಕೆಂಪು ಬಣ್ಣದಲ್ಲಿ||

ಪ್ರತೀಬಣ್ಣವೂ ಮನುಷ್ಯನ ಗುಣಗಳ ಮಿಡಿತದಲ್ಲಿ
ಆತ್ಮದ ಜೀವಾತ್ಮ ಪರಮಾತ್ಮನ ಕೃಪೆಯಲ್ಲಿ||
ಸರ್ವಂ ಏಕತೆಯು ದೇಹದ ಮೂಳೆಮಾಂಸ ತಡಿಕೆಯಲ್ಲಿ
ಸರ್ವರೋಗಂ ನಿವಾರಣಂ ಕುಂಡಲಿನಿ ಚಕ್ರಯೋಗದಲ್ಲಿ||

ಅದ್ಭುತ ವಿಜ್ಞಾನ ಪ್ರಾಚೀನ ಪಥದಲ್ಲಿ
ಲೋಕದ ಕೊಠಡಿಗೆ ಭಾರತ ನೀಡಿದ ಕೊಡುಗೆಯಲ್ಲಿ||
ಅಂತರ್ಚಕ್ಷು ತೆರೆವ ನಿತ್ಯವೂ ನಾವಿಲ್ಲಿ
ಸರ್ವರೂ ನಡೆಯಲಿ ಯೋಗಬದುಕಿನ ರಥದಲ್ಲಿ||

ರಂಗನಾಥ ಕ. ನಾ. ದೇವರಹಳ್ಳಿ.


೫೫.ಎಚ್ಚರಿಕೆ ಸನ್ಮಾನ್ಯ ಮತದಾರ...!

ದೇಶ ಕಟ್ಟಲು ಹೊರಟ ನಿಜ ಯೋಧ ನೀ ಹೀಂಗ
ಭವಿಷ್ಯದ ನಿನ್ನಾಳುವ ದೊರೆಯಾರಿಸುವ  ನೀ||
ಬರಿಗಣ್ಣಿನಿಂದ ನೋಡಿ ಮತ ಹಾಕಬೇಡ ನೀ
ಅಂತರ್ಚಕ್ಷು ತೆರೆದು ಸತ್ಯಗಣ್ಣನು ತೆರೆ ನೀ||

ನರಿಬುದ್ಧಿ ನಿಪುಣರು ನಯವಂಚಕರು
ಮಾತಲ್ಲೇ ದೇಶವ ಗಗನಕ್ಕೆ ಕೊಂಡೊಯ್ವರು||
ಒಳಗೊಂದು ಹೊರಗೊಂದು ಚರ್ಮವಾ ಹೊದ್ದರು
ನಿಮ್ಮ ಅಸಹಾಯಕತೆಗೆ ನಿಮ್ಮ ಸಮಾಧಿ ಕಟ್ಟುವರು||

ಒಂದೊಂದು ಮತ ಮತೀಯತೆಯ ತೊಲಗಿಸಲಿ
ದೇಶಭಕ್ತಿಯ ಪಾಠ ಅವರಿಗೂ ಕಲಿಸಲಿ||
ದೀನದಲಿತರ ಹನಿಯು ಸಾರ್ಥಕ್ಯ ಪಡೆಯಲಿ
ಕಲ್ಯಾಣ ರಾಜ್ಯ ಮತ್ತೊಮ್ಮೆ ಉದಯಿಸಲಿ||

ಸುಳ್ಳು ಪೊಳ್ಳಿನ ನೋಟು ಹೆಂಡ ಹೆಣ್ಣಿನ ಮಾಯೆ
ನುಂಗದಿರಲಿ ನಿಮ್ಮ ಆ ಕರಾಳ ರಾತ್ರಿಯಲಿ ತಾಯೆ||
ಗಂಟು ಮಾಡುವಾ ಚಟಕೆ ಸೆರಗ ಎಳೆಯುವರು
ಎಚ್ಚೆತ್ತುಕೊಳ್ಳಿ ನೀವು ಬಿಕರಿ ಬೀದಿಬೆತ್ತಲಾದವರು||

ಪ್ರಜಾಪ್ರಭುತ್ವವಿದು ನೀನೇ ನಿಜಪ್ರಭುವಿಲ್ಲಿ
ಯಾರಹಂಗೂ ನಿನಗಿಲ್ಲ ನಿನ್ನ ಆಯ್ಕೆ ದಿಟವಿಲ್ಲಿ||
ಜಾತಿವಿಜಾತಿಗಳ ಎಲ್ಲೆ ಮೀರಿಹುದು ಮತವಿಲ್ಲಿ
ನೀ ಕೊಡುವ ದಾನ ಐದು ವರ್ಷ ಗಟ್ಟಿಯಾಗುವುದಿಲ್ಲಿ||

ಇರುವುದೆಲ್ಲಾ ಜೊಳ್ಳು ಪರೀಕ್ಷಿಸಿ ಹೆಕ್ಕಿ ತೆಗೆ
ಕತ್ತಲರಾಜ್ಯದಿ ದೀಪವಾ ಹುಡುಕಿ ತೆಗೆ||
ಹೊಲಮೇಯುವ ದನವನ್ನು ಕುಣಿಕೆಯಲ್ಲಿ ಬಿಗಿ
 ತಾಯ್ನೆಲ ತಾಯ್ನುಡಿಯ ಗೌರವಿಸುವವರ ಮರುಗಿ||

ಜಾಗೃತನಾಗು ಅಜಾಗೃತ ಜಗದಲ್ಲಿ
ಸವೆದ ಪಾದಗಳ ಮೌಲ್ಯ ಕರಗಿಹುದಿಲ್ಲಿ||
ರಕ್ತದರ್ಪಣ ಬಲಿದಾನ ತ್ಯಾಗ ಸತ್ತಿಹುದಿಲ್ಲಿ
ಎಚ್ಚರಾ ಮತದಾರ ಮಾಯದಫೀಮು ಲೋಕದಲ್ಲಿ||

ಚುನಾವಣೆಯೋ ಇದು ಚಿತಾವಣೆಯೋ
ಅನ್ನದಾನ ಚಿನ್ನದಾನ ನೇತ್ರದಾನ ಮಾಯೋ||
ಸರ್ವದಾನಕೂ ಉಚ್ಚವೀ ಮತದಾನ
ನವ ನಾಯಕನ ಕಥೆಗೆ ವಿಜಯಗಾನ||

ರಂಗನಾಥ ಕ. ನಾ. ದೇವರಹಳ್ಳಿ

೫೪.ಜನುಮದಿನ

ಏನು ಅಂತ ನಾನು ಬಂದು
ಮೂವತ್ತಾರು ವಸಂತ ಕಳೆದು||
ಬಾಳು ಎಂಬ ದೋಣಿಯಲ್ಲಿ
ಬದುಕು ಎಂಬ ಪಯಣದಲ್ಲಿ||

ಮಾಂಸಮುದ್ದೆ ಜೀವ ನೀಡ್ದ
ತಾಯಿ ನಿನಗೆ ಕೋಟಿ ವಂದನೆ||
ನಿರುಪ ಕಲ್ಲ ಶಿಲೆಯ ಮಾಡ್ದ
ನಿನ್ನ ತ್ಯಾಗ ನಮಗೆ ಸ್ಪೂರ್ತಿನೆ||

ಬಯಕೆ ತೋಟ ಚಂದ ಮಾಡ್ದ
ತಂದೆ ನಿನಗೆ ಕೋಟಿ ನಮನ||
ಬಾಳ್ವೆ ಎಂಬ ಸಂತೆ ನೀಡ್ದ
ದಾರಿದೀಪ ನೀನೆ ನಮಗೆ ಮಾದರಿಯಾನ||

ಬಾಲ್ಯವನ್ನು ಸ್ವರ್ಗಮಾಡ್ದ
ಒಡಹುಟ್ಟುಗಳೇ ನಿಮಗೆ ಶರಣು||
ನಿಯತ ನನ್ನ ತಿದ್ದಿ ತೀಡಿ ಬೆಳಕುನೀಡ್ದ||
ನಿಮ್ಮ ಸಖ್ಯ ನವಿರು ಗಾನ ತೋರಣ||

ಪ್ರೀತಿ ಎಂಬ ನಾವೆಯನ್ನು
ಹೃದಯವೆಂಬ ನದಿಯೊಳು||
ಉಸಿರು ಬೆರೆಸಿ ಪಯಣವನ್ನು
ಸಗ್ಗದ ತೇರು ಮಾಡ್ದ ಸತಿಯಿರಲು ಜೊತೆಯೊಳು||
ಜೀವನದ ಅರ್ಥ ನೀನು ಕರುಣೆಯೊಡಲು
ಏರು ಇಳಿತ ನಾಡಿಮಿಡಿತ
ಹಿಡಿದು ನನ್ನ ಕಾಯಲು||

ಬೀಳಲೊರಟ ದೋಣಿಯನ್ನು
ಸ್ನೇಹವೆಂಬ ಹುಟ್ಟಿನಲ್ಲಿ ಮುಂದೆ
ಮುಂದೆ ಸಾಗಿಸುವ ಗೆಳೆಯರನ್ನು
ಮರೆಯಲು ಅಸಾಧ್ಯ ಸತ್ಯ ಒಂದೇ||

ನನ್ನ ಕಣ್ಣು ನನ್ನ ಮಗಳು
ರೆಪ್ಪೆಯಂತೆ ಕಾದು ತಿದ್ದಿ ಬುದ್ಧಿ ಹೇಳ್ವಳು||
ಎಲ್ಲೋ ನಿಂತು ಬದುಕ ನೀಡ್ವ
ಸತ್ಯಬಂಧುವೆನಗೆ ಗುರುಗಳು||

ಅರ್ಧ ಪಯಣ ಕಳೆದ ನನಗೆ
ಸತ್ಯಕಂಡು ಗುಡುಗು ಸಿಡಿಲು
ಗಗನದಲ್ಲೇ ತೇಲಿ ತೇಲಿ ಸಾಗಿದೆ
ಇನ್ನಾದರೂ ಧರೆಯ ತಿರುಳು ಅರ್ಥವಾಗಬಾರದೇ||

ರಂಗನಾಥ ಕ. ನಾ. ದೇವರಹಳ್ಳಿ



೨೬೬.ಸೋಲೆನೆಂದು....!!!!

ನಾನು ಹಾಡುವೆನಿಂದು ಕೇಳಿಸಿಕೊಳ್ಳಿರಿ
ಹೃದಯ ತೆರೆದು ಮನಮಿಡಿದು ಒಮ್ಮೆ ನೋಡಿರಿ||ಪ||

ಹುಟ್ಟು ಜೀವ ಗಟ್ಟಿ ನಾನು ಕಲ್ಲುಮನವು
ಯಾರಿಗೇನು ಕಡಿಮೆಯಿಲ್ಲ ಹೃದಯದೊಲವು||
ಗುರಿಯು ಮುಂದೆ ಗುರುವು ಹಿಂದೆ ನಮ್ದೆ ಗೆಲುವು
ನ್ಯೂನ್ಯತೆ ಕೊರತೆಯಲ್ಲ ನಮಗೆ ವರವು||೧||

ನಂಬಿಕೆಯೊಂದೇ ದಾರಿದೀಪ ಅರಿವ ಬಾಳಿಗೆ
ಆತ್ಮಸ್ಥೈರ್ಯ ಬಲದ ರೂಪ ನಾಳೆ ಗೆಲುವಿಗೆ||
ಸಾಧನೆಯ ಶಿಖರ ಕೂಡ ಅಣತಿ ದೂರ ನಮಗೆ
ಗೆದ್ದುಬರುವ ಗುಂಡಿಗೆಯು ಸಿದ್ಧ ವಿಜಯ ಕಹಳೆಗೆ||೨||

ನೂರು ಮಂದಿ ಸ್ಪೂರ್ತಿ ನಮ್ಮ ಬಿಸಿ ರಕ್ತಕೆ
ಹಿಂದೆ ತಿರುಗೋ ನೇಮವಿಲ್ಲ ಈ ಜ್ಞಾನಕೆ||
ಸೃಷ್ಟಿ ನಿಯತಿ ಈಸಿ ಜಯಿಸು ತತ್ವ ತ್ಯಾಗಕೆ
ಪ್ರತಿಭೆ ಬುಗ್ಗೆಗೆ ದಾರಿ ನೀಡಿ ಸಾಗಿ ವಿಶ್ವಪಥಕೆ||೩||

ಬುವಿಯಲ್ಲಿ ಎಲ್ಲಾ ಒಂದೇ ಬಳ್ಳಿಯ ಕಾಯ್ಗಳು
ಅರಿತು ಬಾಳು  ಮನುಜ ಪ್ರೀತಿ ನಮ್ಮ ಗೆಲುವುಗಳು||ಪ||

ರಂಗನಾಥ ಕ. ನಾ. ದೇವರಹಳ್ಳಿ.
೨೬೩.ಚುಟುಕುಗಳು

೧.ಹಕ್ಕು... ದಿಕ್ಕು

ಅಂದು ನೀಡಿದರು ಬೀಮರಾವ್
ಸ್ವಾತಂತ್ರ್ಯದ ಹಕ್ಕು..!
ಇಂದು ರಾಜಕೀಯ ಎಲ್ಲರ
ಮನೆ ಹೊಕ್ಕು..!
ಅತಂತ್ರವಾಗಿದೆ ಕುತಂತ್ರಿಗಳಿಂದ
ಸಮಾಜದ ದಿಕ್ಕು..!

೨.ಹಕ್ಕು...ಬೆಕ್ಕು

ಅಂಬೇಡ್ಕರ್ ಕೊಟ್ಟ
ಮತದಾನ ಹಕ್ಕು...!
ಚಲಾಯಿಸಿಯೇ ಬಿಟ್ಟ
ಮತದಾನ ಕೇಂದ್ರ ಹೊಕ್ಕು..!
೫ ವರ್ಷಕ  ಬಾಳಿಗೆ
ಬೆಂಕಿಯನು ಇಕ್ಕು...!
ಸಾರಾಯಿ ಮತ್ತಿನಲಿ ಒತ್ತಿ
ಆರಿಸಿದ್ದು ನರಿಬುದ್ದಿಯ ಬೆಕ್ಕು..!

೩.ಸಂವಿಧಾನ.. ಸನ್ಮಾನ

 ಶಿಕ್ಷಣ ಹಕ್ಕು ಕೊಟ್ಟ
ನಮ್ಮ ಸಂವಿಧಾನ...!
ಚುನಾವಣೆಗೆ ನಿಗದಿ
ಮಾಡಲಿಲ್ಲ ಕನಿಷ್ಠ
ಎಡುಕೇಶನ್ನ...!
ಅದಕ್ಕಾಗಿಯೇ ನಮಗೂ
ನಿಮಗೂ ಬಡತನದ ಸನ್ಮಾನ..!

೪.ಇವನಾರವ..ಇವನಮ್ಮವ..

ಚುನಾವಣೆ ಬಂದಾಗ
ಇವ ನಮ್ಮವ...
ಇವ ನಮ್ಮವ...!
ಚುನಾವಣೆ ಮುಗಿದ ನಂತರ
ಇವನಾರವ...
ಇವನಾರವ...!!

೫.ಮನಸ್ಸು.. ಜೇಬು

ಎಷ್ಟು ದೊಡ್ಡದು
ನಿಮ್ಮ ಮನಸ್ಸು ಎಂದ
ಮತದಾರ ಮತ ಹಾಕುವಾಗ..!
ಎಷ್ಟು ದೊಡ್ಡದು
ನಿಮ್ಮ ಜೇಬು ಎಂದ
ಮತದಾರ ಆಡಳಿತ ನೋಡಿದಾಗ..!!

೬.ನೀರು..ಬೀರು

ನೀರು ಕೊಡು ಎಂದು
ಓಟು ಹಾಕಿದೆ...
ಬೀರು ಕೊಟ್ಟುಮಲಗಿಸಿದೆ..!
ಅನ್ನ ಕೊಡು ಎಂದು
ಓಟು ಹಾಕಿದೆ..
ನನ್ನ ಮರ್ಕಟ ಮಾಡಿ ಆಡಿಸಿದೆ..!

೭.ಮತ... ಮಾತ

ಚುನಾವಣೆ ಮತ ಜಾತಿ
ಲೆಕ್ಕಾಚಾರ..
ಅದಕ್ಕೆ ಹೇಳುವುದು
ಮತದಾರ...
ಹಾಕು ಮತ.. ಒತ್ತು ಮತ..
ಕೊನೆಗೆ ಬಿಚ್ಚೋಲೆ
ಗೌರಮ್ಮ ನಮ್ಮ ಮಾತ...!!

೮.ಮತ...ದಾನ

ದಾನ ಕೊಡುವೆನು ಬನ್ನಿ
ನನ್ನ ಮತವನು...
ತಿಳಿಯಲಿಲ್ಲ... ಬಂದವನು
ರಾವಣನು...
ದಾನದ ನೆಪದಲ್ಲಿ
ಎಲ್ಲವನು ನುಂಗಿದನು..!!

೯.ಸಾಂಕ್ರಾಮಿಕ ರೋಗ

ತಿಗಣೆಗಳು ಜಿಗಣೆಗಳು
ಸೊಳ್ಳೆಗಳು ಕಚ್ಚಿ...!
ಮತ್ತಿನಲಿ ಏನನ್ನೋ ಓತ್ತಿದೆನು..!
ಐದು ವರ್ಷವಾದರೂ
ಹೋಗದ ಸಾಂಕ್ರಾಮಿಕ
ರೋಗ ಕೊಂದಿತು ಚುಚ್ಚಿ ನನ್ನನು..!!

೧೦.ಸಂವಿಧಾನ.. ಹೆಣವಾಗಿ ನಿದಾನ

ಮಾನವತಾವಾದಿ ಅಂಬೇಡ್ಕರ್
ರಚಿಸಿದರು ಸಮಾನತೆಯ
ಸಂವಿಧಾನ...
ಇಂದು ಗಾಳಿಗೆ ತೂರಲಾಗಿ
ಸಂ... ವಿಧಿ ವಿಧಾನ..
ಹಣದ ಗುಂಡಿಯಲ್ಲಿ
ಹೆಣವಾಗಲೊರಟಿದೆ..ನಿದಾನ!!

ರಂಗನಾಥ. ಕ. ನಾ. ದೇವರಹಳ್ಳಿ.


೭೦. ಗಜ಼ಲ್

ನಿನ್ನ ನೆನಪಲಿ ಮೋಡ ಬೀಜವ ಕಟ್ಟೀತು|
ನಿನ್ನ ಕನಸಲಿ ಮರವು ಫಲವ ಕಟ್ಟೀತು||

ನಿನ್ನಂತರಂಗವು ನನ್ನೆದೆಯ ಕದವ ತಟ್ಟೀತು|
ಪ್ರೀತಿಎಸಳಿನ ಬಳ್ಳಿ ತೋರಣವ ಕಟ್ಟೀತು||

ಧರೆಯೆಲ್ಲ ತಂಪಾಗಿ ಬಸಿರು ಹಸಿರು ಬಿಟ್ಟೀತು|
ನಿನ್ನಂಬಲದಿ ಇಳೆಗೆ ಮಳೆಯ ಬಲವ ಕಟ್ಟೀತು||

ನಿನ್ನ ಪ್ರೇಮಗಡಲು ನದಿಯೊಡಲ ತುಂಬೀತು|
ನಿನ್ನ ಪ್ರಣಯದಿ ಗಗನ ಒಲವ ಕಟ್ಟೀತು||

ಎಂತಹ ನೆನಪಿದು ಹೃದಯ ಗೀತೆ ಹಾಡೀತು|
ಶ್ರೀನಾಥನಲೂ ನಿನ್ನರಿವು ಶಾಶ್ವತ ನಿಲುವ ಕಟ್ಟೀತು||

ರಂಗನಾಥ. ಕ.ನಾ. ದೇವರಹಳ್ಳಿ.


೨೬೯.ಗಜ಼ಲ್.

ಐದು ವರ್ಷಕ್ಕೊಮ್ಮೆ ಸಾಣೆಯಿಡಿವ ಚುನಾವಣೆ|
ನಮ್ಮನೆ ಯಜಮಾನನ ಆಯ್ಕೆ ಮಾಡುವ ಚುನಾವಣೆ||

ಓಟಿನ ನಂಟಲಿ ನೋಟಿನ ಗಂಟಲಿ ಬಂಧನದಾಣೆ|
ಸಿಲುಕುವ ಚಂದದ ಕೈಕೈ ಹಿಸುಕಿಸುವ ಚುನಾವಣೆ||

ನಾಳೆಯ ಭವಿಷ್ಯವ ನರಿಬಣ್ಣದಿ ಜಮಾವಣೆ|
 ಬಣ್ಣದ ಕನಸನು ಕಣ್ಣಿಗೊರೆಸುವ ಚುನಾವಣೆ||

ಅಳಿಸಲಾಗದ ಶಾಯಿ ಅಳಿಸಲೊರಟ ಬವಣೆ|
ಭ್ರಮೆಯಲ್ಲೇ ಬಂದು ನಡೆಸುವ ಚುನಾವಣೆ||

ಬುದ್ದಿ ಕಲಿಯದ ನರನಿಗಿದು ಆಗದಿರಲಿ ಚಿತಾವಣೆ|
ಶ್ರೀನಾಥ ಕಾಯೋ ಜಗವ ನಡೆಸು ಸತ್ಯ ಚುನಾವಣೆ||

ರಂಗನಾಥ ಕ. ನಾ. ದೇವರಹಳ್ಳಿ.


೬೮.ಗಜ಼ಲ್.

ಭಾಸ್ಕರನು ನಾಚಿನಿಂದನು ನಿನ್ನೊಡಲ ಮಳೆಗೆ|
ಹನಿಹನಿಯು ಸೂಸಿರುವ ಬಣ್ಣೊಡಲ ಮಳೆಗೆ||

ಪಕ್ಕಿಗಳ ಸಾಲು ಗೂಡು ಜಾಡನು ಹಿಡಿದ ಪಂಕ್ತಿಗೆ|
ವೈಯಾರ ಮೈದೋರಿ ಧರೆಯೇ ಚಂದೊಡಲ ಮಳೆಗೆ||

ಕಾಯಕಯೋಗಿಯು ಹೆಜ್ಜೆಗೆ ಬುದ್ಧಿಯೇಳಿದ ಘಳಿಗೆ|
ನೇಗಿಲನೊಗದಲಿ ಓಡಲು ಎತ್ತು ಸಿಡಿಲೊಡಲ ಮಳೆಗೆ||

ರವಿಯು ಜಾರುತ ತಾ ಎದ್ದಿತು ಕೆಂದೂಳು ಈ ಧರೆಗೆ|
ಸುಳಿಸುಳಿದು ಬಾಳಸುಳಿ ಸುಳಿಗಾಳಿಯೊಡಲ ಮಳೆಗೆ||

ಶಶಾಂನಂಕುರವು ಮರೆಯಲ್ಲಿ ಮರೆಯಾದ ಜಾಡಿಗೆ|
ತುಂತುರು ತಿಳಿಹನಿಯ ತಂಗಾಳಿ ಮನದೊಡಲ ಮಳೆಗೆ||

ಸರಿದ ಮೇಘದ ಒಡಲು ಬಿತ್ತಿದ ಕಾಮನಾಬಿಲ್ಲಿಗೆ|
ಸಗ್ಗದಗ್ಗರ ತಂತು ಬಣ್ಣದ ಪಡುವೊಡಲ ಮಳೆಗೆ||

ಅಂಗಳದಿ ಹೆಬ್ಬೆರಳ ರಂಗೋಲಿ ನಡುಗಿತ್ತಾ ನಲ್ಲೆಗೆ|
ಇನಿಯನುಸಿರ ಬಿಸಿಯು ತಂಪು ಪ್ರೀತಿಯೊಡಲ ಮಳೆಗೆ||

ಮರೆಯಾದರೂ ಸೂರ್ಯ ಸಿಡಿಲ ಸಿಂಚನ ಬಾಳಿಗೆ|
ಎನ್ನಂದಕಾರ ತೊಲಗಿಸೋ ಅರಿವೊಡಲ ಮಳೆಗೆ||

ಪುನರಪಿ ಬೆಳಕಂ ಪುನರಪಿ ಕತ್ತಲಂ ಚಕ್ರ ನಮ್ಮ ದೀವಿಗೆ|
ನಾಳೆ ಬರುವ ಭರವಸೆ ಸ್ತೈರ್ಯದೊಡಲ ಮಳೆಗೆ||

ರಂಗನಾಥ ಕ. ನಾ. ದೇವರಹಳ್ಳಿ.


೮೫ ಶರಣ ಬಸವಣ್ಣ

ಜಾತಿಗಳೆಲ್ಲಾ ಸಿಂಹಾಸನಕ್ಕೆ ಬಿಲ ತೋಡುವಾಗ
ಮತಿಹೀನರು ಸ್ವಾರ್ಥವರ್ಣದಿ ಮುಳುಗಿದಾಗ||
ಸಮಾಜವೆಲ್ಲಾ ಕೊಳಕು ಮೌಡ್ಯದಲಿ ಮಿಂದಾಗ
ಧರೆಗಿಳಿದನೋರ್ವ ಭಗವಂತ ಬೆಳಕಾಗಲಾಗ||

ಮಾದರಸ ಮಾದಲಾಂಬಿಕೆಗೆ ಸಂತಸುತನು
ಜನಿವಾರದ ಕಟ್ಟುಕಿತ್ತು ಅಂಧಕಾರದ ಕತ್ತಿಸುಕಿದನು||
ಲೋಕದ ಡೊಂಕು ತಿದ್ದಲು ತಾನೇ ಶರಣನಾದನು||

ಅಂತರಂಗ ಬಹಿರಂಗಗಳ ಕೊಳೆಯ ತೊಳೆದು
ಭಕ್ತಿರಸದ ಹೊಳೆ ಕಾಯಕದಿ ಕೈಲಾಸ ಪಡೆದು||
ಅನುಭವಮಂಟಪದಿ ಆಮನೆ ಈಮನೆ ಬೆರೆಸಿ
ಮಾನವ ಜೀವನ ಸಾರ್ಥಕ್ಯಕೆ ಶರಣರ ಸಮ್ಮಿಳಿಸಿ||

ಹನ್ನೆರಡನೇ ಶತಮಾನದಿ ಜಗಕೆ  ಸಂವಿಧಾನ
ಆತ್ಮಲಿಂಗ ಪೂಜೆ ಜಂಗಮ ಆಚಾರಯಾನ||
ಸಗ್ಗನಾಕಗಳ ತೋರಿ ದಯೆಯೇ ಧರ್ಮದ ಮೂಲಮಾನ
ಜಗಕೆಲ್ಲಾ ಬೆಳಗೋ ಪರಂಜ್ಯೋತಿ ನಿಮ್ಮ ಮನ||

ಹಿಂದೂಧರ್ಮದ ಅನಿಷ್ಟಾಚರಣೆ ವಿರೋಧಿಸಿದ
ರುಧಿರದಂತರಂಗ ಸೇರಿದ್ದ ಜಾತಿಬುಡ ಅಲ್ಲಾಡಿಸಿದ||
ವಚನಾಮೃತ ನೀಡಿ ಸಾಮಾನ್ಯರ ಸಂಜೀವಿನಿಯಾದ
ನಮ್ಮ ಬಸವಣ್ಣ ಅವತಾರ ಪುರುಷನಾಗಿ ಬಂದ||

ರಂಗನಾಥ ಕ. ನಾ. ದೇವರಹಳ್ಳಿ.

💐💐💐ಎಲ್ಲರಿಗೂ ಬಸವಜಯಂತಿಯ ಶುಭಾಶಯಗಳು💐💐💐

೨೭೧.ಜೀವನವೊಂದು ಗೋಲಿಯಾಟ

ಬಣ್ಣ ಬಣ್ಣದ  ಗೋಲಿಗಳಲಿ
 ಬಣ್ಣದಂತಾ ಕನಸು
ಒಟ್ಟಿಗೆ ಕೂಡಿ ಆಡುತ್ತಾವೆ ಅವಕೂ
ಸ್ಪರ್ಧೆಯ ಮನಸು||

ಕನಸನಿನ ನಾಯಕ ನಾನೇ ಇಲ್ಲಿ
ಗೆಲುವಿನ ಗುಲಾಮನು
ಚೌಕಟ್ಟೊಳಗೆ ಜೀವನವಿರಿಸಿ
ಅಟವ ಆಡುವೆನು||

ಗುರಿಯಿದ್ದರೆ ಗೆದ್ದು ಬೀಗುವೆ
ತುಂಬುವೆ ತೂತಿನ ಚೀಲ
ಗಳಗಳ ಸದ್ದನು ಮಾಡುತ ಸಾಗುವೆ
ಗೋಲಿ ಹೆಕ್ಕುತ ಸುತ್ತುವೆ ಗೋಲ||

ನಡೆಯುವ ನಡೆಸುವ ದಾರಿಯು
ಗುರಿಯನು ಮುಟ್ಟಿದೆ ಬೇಗ
ಒಂದೇದೃಷ್ಠಿಯು ನೆಟ್ಟಿರುವಾಗ
ತಡೆಯುವರಾರು ನನ್ನ ವೇಗ||

ಇಂದು ಇಲ್ಲಿ ನಾಳೆ ಅಲ್ಲಿ ನಾಡಿದ್ದು...
ಗೆಲುವಿನ ಪಯಣದ ಕನಸಿನ ಓಟ
ಎಲ್ಲಾ ಕಡೆಯೂ ಹೋರಾಡುವ ಜಿದ್ದು...
ಆದರೆ ಕಲಿತದ್ದು ಜೀವನ ಪಾಠ||

ಒಮ್ಮೆ ಜೊತೆಯಲಿ ಒಮ್ಮೆ ಎದುರಲಿ
ಬೆನ್ನ ಹಿಂದಿನ ಆಟವು ಮರೆಯಲ್ಲಿ
ಸೋಲಿನ ಮೆಟ್ಟಿಲ ಗೆಲುವಿನ ಗೆರೆಯಲಿ
ಸೀಮೆಯ ಮೀರದೆ ಸೂಕ್ಷ್ಮದ ಗುರಿಯಲ್ಲಿ||

ಬಾಲ್ಯವು ಕಟ್ಟುವ ಜೀವನಪಾಠವು
ಭವಿಷ್ಯದ ಹೆಜ್ಜೆಗೆ ಭರವಸೆ ಸ್ಪೂರ್ತಿಯು
ಕೂಡಿಬಾಳುವ ತೂಗಿ ನೋಡುವ
ಎಣಿಸಿ ಗುಣಿಸಿ ಲೆಕ್ಕಿಸಿ ಜೀವನ ಜೀಕುವ||

ಜೀವನವೊಂದು ಗಾಜಿನ ಗೋಲಿ
ಬಳಸುವ ರೀತಿ ಅರಿತರೆ ಜಾಲಿ
ಎಡವಲು ಎರವಲು ನೂರು ಚೂರು
ಬುತ್ತಿಯೂ ಕೂಡ ಘಮಿಸುವ ಜೋರು||

ವಿಘ್ನಗಳೆಲ್ಲಾ ಭಗ್ನಗೊಳಿಸಿ ಗೆಲುವಿನಮಾಲೆ ಧರಿಸಿ
ಬದುಕಿನ ಬವಣೆಯ ಜೋಳಿಗೆ ತುಂಬಿಸಿ
ಗುರಿಯನು ನಾವು ಮುಟ್ಟೋಣ
ಗೋಲಿಯ ನಾವು ಆಡೋಣ...||

ಕಷ್ಟ ನಷ್ಟಕೆ ಸುಳ್ಳು ಪೊಳ್ಳಿಗೆ..
ಭಯದ ಬಂಡಿಗೆ ಮೋಸದ ಜಾಲಕೆ..
ಗೋಲಿಯನ್ನು ಹೊಡಿಯೋಣ
ಗೋಲಿಯ ಆಡಿ ನಲಿಯೋಣ..||

ರಂಗನಾಥ ಕ. ನಾ. ದೇವರಹಳ್ಳಿ.

೩೫೬. "ಶ್ರಾವಣ ಬಂತು "

ಶ್ರಾವಣ ಬಂತು ಹಸಿರನು ತಂತು ನಾಡಿಗೆ
ಅವನಿಯ ಚಲುವನು ಮೈತುಂಬಲೆಂತು ಬಸಿರಿಗೆ||
ವಿರಹದಿ ಬೆಂದ ರತಿಮನ್ಮಥರ ಬಾಳಿಗೆ
ಮಿಲನದುತ್ಸವ ಸಂದೇಶ ತಂತು ಬೀಡಿಗೆ||

ಆಶಾಡಗಾಳಿಗೆ ಬಿಡುಗಡೆ ತಂತು ಒಮ್ಮೆಗೇ
ವರುಣನ ಚುಂಬನ ನವಿರಾಯ್ತು ಅವಳಿಗೆ||
ಮಿಗಖಗ ಸಗ್ಗದಿ ಸುಗ್ಗಿಯನರ್ತನ ಕಾಡಿಗೆ
ಅರಳಿದದರವು ಆಮಂತ್ರಣ ನೀಡಿತು ದುಂಬಿಗೆ||

ಹಬ್ಬಗಳ ದಿಬ್ಬಣ ಸಿಂಗಾರ ಶೃಂಗಾರ ನಾರಿಗೆ
ಮೇಘಯುದ್ಧದಿ ಗೆದ್ದವರ ಸಂಭ್ರಮ ಸೂರಿಗೆ||
ಮಲೆಮಲೆಗಳಲಿ ಅಲೆಯುಬ್ಬರ ಸಾವಜೋಳಿಗೆ
ಬೆತ್ತಲೆಬಿತ್ತನೆ ಸುತ್ತಲೂ ಕತ್ತಲೆ ಮಿತ್ರನೆ ವರುಣಗೆ||

ಹೊಸಬಾಳ ಹೊಸಲಿಗೆ ಸಿಂಗಾರಚುಂಬನ ಬೆಸುಗೆ
ಭಕ್ತಿಶಕ್ತಿಮುಕ್ತಿಗಳ ಪಂಕ್ತಿಯೂಟದ ಒಸಗೆ||
ಕಾಯಿಕಣ ಬಾಗಿನ ತವರೊಲವು ಬಾಗಿಲಿಗೆ
ಸೀಮಂತ ಸಿರಿಜೊನ್ನೆ ಅನ್ನದೊಡತಿ ಅವನಿಗೆ||

ಅಂಬರದ ಸುಗ್ಗಿ ಮುಂಗಾರಿನುಗ್ಗಿ ರೈತಗೆ
ಕಂಕಣಕೂಡಿ ಸಪ್ತಪದಿ ಮುತೈದೆಯೊಸಲಿಗೆ||
ಚಿಗುರೆಲೆಯ ಚಪ್ಪರಿಸಿ ಸರಿಗಮವು ಪಕ್ಕಿಗೆ
ಶ್ರಾವಣಿಯೊಲವು ನಮಗಾಯ್ತು ಬಾಳದೀವಿಗೆ||

ಎಷ್ಟೇ ಹತ್ಯೆ ನಡೆದರೂ ನಗುವಳು ಈ ಬಗೆ
ಕಾಲಚಕ್ರದಿ ಅಕ್ರಮವಾದರೂ ಬಾಳಿಗೆ||
ಶ್ರಾವಣಮಾಸದಿ ಬಂದು ತಣಿವಳು ಈ ದಗೆ
ನೀವೂ ಬನ್ನಿ ಅವರೂ ಬರಲಿ ಶ್ರಾವಣಪೂಜೆಗೆ||

ರಂಗನಾಥ ಕ. ನಾ. ದೇವರಹಳ್ಳಿ. ಶಿಕ್ಷಕರು.

ರಾಯಚೂರು ಬಳಗದ ಕಾವ್ಯ ಕವನಸ್ಪರ್ಧೆಗಾಗಿ

೩೫೭. "ಪ್ರಥಮ ಪೂಜಿತ "

ದೇವಾದಿದೇವನೇ ನಮ್ಮ ಗಜಮುಖನೇ
ದೇವಗಣ ಸೇವಿಪನೇ ಷಣ್ಮುಖ ಸೋದರನೇ||
ದೇಯಿ ಎಂದವರ ಕುಲಕಾಯ್ವ ಪಾರ್ವತಿಸುತನೇ
ದೇವಪ್ರಿಯ ನೀನು ಪ್ರಥಮ ಪೂಜಿತನೇ||

ತಾಯಿಯ ಬೆವರಂಶದಿ ಜೀವ ಪಡೆದವನೇ
ತಾಯಿಮಾತಿಗಾಗಿ ತಂದೆಯನೇ ತಡೆದವನೇ||
ತಾಯಿತಂದೆ ಮೂಜಗವೆಂದು ಅವರಸುತ್ತಿ ಬಂದವನೇ
ತಾಳ್ಮೆಯ ಮೂರುತಿ ಜ್ಞಾನದೊಡಯನಾದವನೇ||

ಗಣೇಶ ಗಣಪ ಗಜಾನನ " ಗಣನಾಯಕನೇ"
ಬುದ್ಧಿಸಿದ್ಧಿ ಒಡೆಯ ವಿಘ್ನವಿನಾಶಕನೇ||
ಏಕದಂತ ಮೋದಕಪ್ರಿಯ ನ್ಯಾಯಪರನೇ
ಹರಿಹರಬ್ರಹ್ಮ ಪ್ರಿಯ ಸತ್ಯಸಂದನೇ||

ಸರ್ವಕಾರ್ಯಕೂ ನಿನ್ನಾಣತಿ ಇರಬೇಕು
ಸರ್ವಬಾಧೆಯ ನಿಗ್ರಹಿಸಲು ವಿಘ್ನೇಶ್ವರ ಬೇಕು||
ಅಜ್ಞಾನ ಅಹಂ ಅಳಿಸಲು ಗೌರಿಸುತನೊಲವು ಬೇಕು
ಭಾದ್ರಪದ ಚೌತಿಲಿ ಚಂದಿರನು ಮರೆಯಲಿರಬೇಕು||

ಮೂಷಿಕವಾಹನ ಚಾಮರಕರ್ಣ ಮಹೇಶ್ವರಪುತ್ರ
ಡೊಳ್ಳೊಟ್ಟೆ ಗಣಪ ಉರಗದಿ ಸುತ್ತಿಪ||
ಸರ್ವರ ಸಂಮಿಳಿಸಿದ ಐಕ್ಯತಾ ಗಣಪ
ಸರ್ವರೂ ಪೂಜಿಸೋಣ ಪರಿಸರಸ್ನೇಹಿ ಗಣಪ||

ರಂಗನಾಥ ಕ. ನಾ. ದೇವರಹಳ್ಳಿ. ಶಿಕ್ಷಕರು.

೩೫೯. "ತ್ಯಾಗಮೂರ್ತಿ "

ಬುವಿಯಂತೆ ಮನಸ್ಸು ಗಗನದಗಲ ಕನಸ್ಸು
ನಕ್ಷತ್ರಗಳ ಹೊಳಪು ಬೆಳದಿಂಗಳ ತಂಪು||
ಜಗದಗಲ ಪ್ರೀತಿ ಕಡಲಗಲ ನೀತಿ
ನದಿಯಂತೆ ಮಮತೆ ಹಸಿರಂತಾ ಘನತೆ||

ವಿಶ್ವವ ಕಣ್ಣೆದುರು ತರಬಲ್ಲವ ಗುರು
ಹಸಿಮನಗಳ ಹಸಿವನೀಗುವ ದೇವರು||
ಹಾಲ್ನೋಟದಲ್ಲಿ ತುಪ್ಪದಂತಹಾ ಮನದವರು
ಮೇಲ್ನೋಟಕೆ ನಕ್ಕು ಕಡಲ್ಗರ್ಭದ ಜ್ವಾಲಾಮುಖಿ ಹೊತ್ತವರು||

ಸದಾ ಸಾಣೆಹಿಡಿವ ಅರಿವಿನೊಲವಿನವರು
ಅಂತರಂಗವ ಅರಿತ ಸ್ನೇಹಿತರು ಇವರು||
ಗುಪ್ತಸುಪ್ತ ಹೆಮ್ಮರಕೆ ನೀರು ಗೊಬ್ಬರ ಹಾಕಿದವರು
ಎಲ್ಲವನು ಕೊಟ್ಟು ಏನನ್ನೂ ಬಯಸದವರು||

ಬೆಟ್ಟದ ಹೃದಯ ಶ್ರೀಗಂಧ ಮನದವರು
ಜ್ಞಾನದೇಗುಲದ ನಿಯತ ಅರ್ಚಕರಿವರು||
ಮುಕ್ಕೋಟಿ ದೇವರ ಮನಗೆದ್ದವರು||

ಸಂಸಾರ ಸುಖವನ್ನು ಕೊಂಚ ಹಿಂದೆ ಇಟ್ಟವರು
ಸಂಸ್ಕಾರ ಬೀಜವನು ಹಸುಳೆಯುಸಿರಲಿ ಬಿತ್ತಿದರು||
ತನ್ನವರನು ಬಿಟ್ಟು ಮಗುವಿಗಾಗಿ ಬಂದವರು
ತನ್ಮಯರಾಗಿ ದೀಪದಂತೆ ಮಗುವ ಮನ ಬೆಳಗಿದರು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.

೩೬೦. " ಶಿಕ್ಷಕ ರಕ್ಷಕ"

ತಮವೋಡಿಸಲೋಸುಗ ಜ್ಯೋತಿಯಾಗಮವು
ಅನೃತವ ಮಧಿಸಲು ಸತ್ಯವು ಮೈದುಂಬಿಯೊಲವು||
ಅಹಂ ಕೋಟೆ ಕುಟ್ಟಿ ಪ್ರೇಮದೇಗುಲ ನಿಲುವು
ಸಾವಾಚೆಗೂ ಮನಮನಗಳ ಸಂಜೀವಿನಿ ಗುರುವು||

ಶಿಲ್ಪಿಯಾಗಿ ದೈವತ್ವವ ನೀಡಿದೆ ಜಡಕಲ್ಲಿಗೆ
ಕುಂಬಾರನಾಗಿ ರೂಪವ ಕೊಟ್ಟೆ ಮದಮಣ್ಣಿಗೆ||
ಚಮ್ಮಾರನಾಗಿ ರಕ್ಷಣೆ ನೀಡ್ದೆ ಒಣಪಾದಕೆ
ಕಮ್ಮಾರನಾಗಿ ಸಂಸ್ಕಾರವೆರೆದೆ ಮಣಮನಕೆ||

ಆವಜಾತಿಯ ಅಂಗಿರದ ಜಂಗಮನು ನೀನು
ಜ್ಞಾನದೀವಿಗೆಗೆ ತೈಲಬತ್ತಿಯಾದವನು||
ಗುರಿಯೆಡೆಗೆ ಎಮ್ಮನು ಕರೆವ ಕರ್ತನು ನೀನು
ಜಾಗೃತಿಯ ನೀಡಿ ದೇಶಭಕ್ತಿಯ ಕಲಿಸಿದವನು||

ಖಾಲಿ ಆಳೆಯಲೂ ಅರ್ಥಗರ್ಭಿತ ಚಿತ್ರವಿತ್ತವನು
ರವಿಕಾಣದ್ದನ್ನು ಮಗುಕಾಣಲು ಅನುವಾದವನು||
ನಾವುನಮ್ಮವರೆಂಬ ಸಂಸ್ಕೃತಿ ಕಲಿಸಿದವನು
ಅನುಭವಗಳೊಂದಿಗೆ ಜೀವನ ಕೊಟ್ಟವನು||

ಮೌಲ್ಯದ ಫಸಲನು ಪಣತೊಟ್ಟು ಬೆಳೆದವನು
ನಿಂದಕರೊಡಗೂಡಿ ಶಾಂತಿತೋಟ ಮಾಡ್ದವನು||
ಅಂಧಕರಂತರಂಗಕೆ ದೀವಿಗೆಯಾದವನು
ಮನಮನೆಗಳ ಮನೋವಿಜ್ಞಾನಿ ಇವನು||

ಗುರು ಶಿಕ್ಷಕ ಆಚಾರ್ಯ ಪ್ರಾಚಾರ್ಯ ಪ್ರಾಧ್ಯಾಪಕ
ಹಲವು ಹೆಸರಿಂದ ಜಗವ ಪೊರೆದವನು||
ಅಕ್ಕರೆಯಲಿ ಸಕ್ಕರೆಯಂತಹ ಸವಿಯ ತಂದವನು
ಜಗದಸ್ತಿತ್ವವಿರುವವರೆಗೂ ಜಗದ ರಕ್ಷಕನು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.

೩೬೨. "ಜೀವಜಲಾಮೃತ"

ನೆರೆ ನಿಂತು ನಾಯಿಮೊಲೆ ಹಾಲಾಯ್ತು ನೀರು
ನೆಲಜಲದಿ ಮಿಂದರೂ ತಣಿಲಿಲ್ಲ ಗಂಟಲ ಸೂರು||
ನೆಮ್ಮದಿಯೆಲ್ಲಿ ಕಾಂಕ್ರೀಟ್ ಮಧ್ಯೆ ನಮ್ಮ ಕಾರುಬಾರು
ನೆಪದಾಶ್ವಾಸನೆ ಗಗನಕುಸುಮ ಪರಿಹಾರ ಜೋರು||

ಮಣ್ಣುಮರದಾಸೆಗೆ ಕಾನನವೇ ಬರಿದಾಗಿ
ಮರಗಳಿರದೇ ನಿಂತ ವರುಣ ಮಮ್ಮಲ ಮರುಗಿ||
ಮಸಣಯಾತ್ರೆಗೆ ಚಿತೆ ನೀನೇ ಕಟ್ಟಿಕೊಂಡೆ ಬೀಗಿ
ಮರಳಲೂತೆ ಬದುಕ ಮರುಳ ಮರಣಶಾಸನಕಾಗಿ||

ವಿಧಿಯೆಂತಹ ಕ್ರೂರಿ ಬೆಣ್ಣೆಸುಣ್ಣದಾಟದಿ
ವಿವಿಧತೆಯಲ್ಲಿ ಏಕತೆ ಬರಿಬೊಗಳೆ ಪಾತ್ರದಿ||
ವಿಲಕ್ಷಣ ಬರಹದಿ ಚಿಂದಿಯಾಯ್ತು ಜೀವನದಿ
ವಿಷವರ್ತುಲದೊಳು ಮೂಕಬೊಂಬೆ ಕುಣಿತದಿ||

ತಾಯಮೊಲೆಹಾಲು ಇಂದು ವಿಷವಾಗಿದೆ
ತಾಳ್ಮೆಯಿರದ ಮೊಲ ಮಾಂಸ ಚಪ್ಪರಿಸಿದೆ||
ತಾಪವ ತಾಳದೇ ನಿರ್ಗತಿಕ ಜೀವ ಹಪಹಪಿಸಿದೆ
ತಾಲ ಕತ್ತರಿಸಿ ರಕ್ಕಸಮನ ಗಹಗಹಿಸಿ ನಕ್ಕಿದೆ||

ಬೀದಿಗೆ ಬಂದಿದೆ ದೀನರ ಬದುಕು
ಬೀಳುವ ಮೊದಲು ಜಲಾಮೃತ ಬೇಕು||
ಬೀಗವ ಹಾಕದಿರಿ ನೀವು ಬಡವನ ಮನಕು
ಬೀಜವೇ ಕರಗಿದಾಗ ಎಲ್ಲಿದೆ ಸಂಕುಲಬದುಕು||

ಜೀವಹಿಂಡುವ ಮಲಿನದ ಕರ್ತನು ನೀನು
ಜೀಕಲು ಬೇಕು ಜೀವಜಲಾಮೃತವೆಂಬ ಜೇನು||
ಜೀವನ ಸಂತೆಗೆ ಜಲವಾಯು ಕಾನನ ಅಮೃತ ತಾನು
ಜೀವಪಣವಿಟ್ಟು ರಕ್ಷಿಸೋಣ ಇಂದು ನಾವು ನೀನು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.

೩೬೩. ದಾಂಪತ್ಯದ ಹನಿಗಳು

೧. ಸಂಸಾರ ಸಾರ

ನಾನು ನೀನು ಒಂದಾದರೆ
ಬಾಳೆಲ್ಲಾ ಹುಣ್ಣಿಮೆಯ ಹಾಲ್ನೊರೆ||
ನಮ್ಮಿಬ್ಬರ ಸಂಮಿಲನವು
ಮಧುಚಂದ್ರನ ಹನಿಧಾರೆಯು||
ನೋವಲ್ಲೂ ನಲಿವಲ್ಲೂ ನೀ
ಸರಿಹೆಜ್ಜೆಗೆ ಜೊತೆಯಾದೆ ನೀ||
ನಂಬಿಕೆ ಪ್ರೀತಿ ಸ್ನೇಹ ಸೇತುವೆ
ಸಂಸಾರ ದೋಣಿಗೆ ಸಹನೆ ಬೀಗವೆ||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು

೨. ದಾಂಪತ್ಯಗೀತಾ

ಎಲ್ಲೋ ಹುಟ್ಟುವ ನದಿಗೆ.....
ಎಲ್ಲೋ ಹರಿವ ನದಿ ಸೇರಿ ಸಂಸಾರವಪ್ಪುದು||
ಬರುವ ಕಷ್ಟಗಳಿಷ್ಟಗಳಲಿ ಒಂದಾಗಿ
ನಾಲ್ವರಿಗನ್ನ ಜೀವನ ಸಲೆಯಾಗಿಪ್ಪುದು||
ಮಸಣದ ಶರಧಿಯಲೊಂದಾಗಿ
ಮಹಾನವಮಿ ಎಂದು ಸಂಭ್ರಮಿಪುದು||
ನದಿ ನಾನುನೀನು ವಿಧಿಯವನು
ಬೆರೆಸಿದನು ನಮಗೆ ಹಾಲು ಜೇನು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.

೩. ಸಂಸಾರ ಬಂಡಿ

ಉಪ್ಪು ಹುಳಿ ಖಾರ ಸಪ್ಪೆ
ಸಂಸಾರವೆಂಬ ನೋಟ ಕಡೆಗೆ ಸಿಪ್ಪೆ||
ನಾನು ನೀನು ಅವನು ಇವನು
ಹಣ ಆಸ್ತಿ ಮನೆ ತೂತು ಜೇಬು ತಾನು||
ಹಗಲು ಹಸಿವು ಇರುಳು ನಲಿವು
ಸನ್ನೆಯಲ್ಲಿ ಸಂಸಾರ ನೊಗದ ಕಾವು||
ಆ ಬಂಧ ಈ ಬಂಧ ಬ್ರಹ್ಮಗಂಟು ಮನವು
ವಿಧಿಯೋಡಿಸೋ ಬಂಡಿಯಲ್ಲಿ ಬಂದಿ ನಾವು ನೀವು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.

೩೬೪. "ಪೌರ್ಣಮಿಗಾನ"

ಬೆರೆಸೆನ್ನ ಪ್ರೀತಿಯ ಮಧುವಿನ ಮಡುವಲಿ
ಅಧರಗಳು ಅರಳಲಿ ಹುಣ್ಣುಮೆ ಬೆಳದಿಂಗಳಲಿ||
ಚಕೋರವು ನಾಚುವ ಚಂದ್ರಮನ ನೋಟಕೆ
ಹಾಲುಹಾಸಿಗೆಯೊಡಲು ಕರೆದೆನ್ನ ಮಂಚಕೆ||

ತಾಳೆಹೂ ಎದೆಯಲ್ಲೂ ಏದುಸಿರು ಏತಕೆ
ತಂಗಾಳಿತೆವರಲ್ಲೂ ಬೆವರಹನಿ ಸೋಕಿಗೆ||
ಜಂಟಿಪಯಣಕೆ ತಂಪುಸಿಂಚನ ಭಾವಮೈಥುನ
ತಾರಾನಗುವಲೂ ತುಸು ನಾಚುವ ಈ ಮೈಮನ||

ಸೃಷ್ಟಿಶಿಖರದ ಅಂಕುರದಂಚಲಿ ಬಿಸಿಯಾನ
ಮೊದಲಮಿಲನಕೆ ಮೂಕಸಾಕ್ಷಿ ಪೌರ್ಣಮಿಗಾನ||
ಮಿಗಖಗ ಶುಕಪಿಕ ಪಿಸುಪಿಸು ಸ್ವಗತಮೌನ
ಸರಸಯಾತ್ರೆಗೆ ಚಂದಮನ ಸಾರೋಟಪಯಣ||

ಶಾಂತರಸ ಶೃಂಗಾರದಿ ಒಲವತಂತಿ ಮೀಟಿ
ಮನ್ಮಥನ ಹೂ ಬಾಣವೇ ನಿನಗೆಲ್ಲಿ ಸಾಟಿ||
ಬೆಳದಿಂಗಳ ಬಾಲೆ ಶಶಿವಸಂತೆ ರತಿಭಾವತೀಡಿ
ಪ್ರಣಯಗೀತೆಗೆ ಹುಣ್ಣಿಮೆಯೊಂದೇ ಮುನ್ನುಡಿ||

ನವಿರುರಶ್ಮಿ ಬಿಸಿಯುಸಿರ ಸ್ಪರ್ಷದಿ
ರೋಮಾಂಚನವೀ ಮೈಮನ ತಿಳಿನೀಲವರ್ಣದಿ||
ಪ್ರತಿ ಹುಣ್ಣುಮೆ ನೆಪವಾಗಲಿ ಮಿಲನೋತ್ಸವಕೆ
ಹಂಚಿವಿನಿಮಯ ಸಂಚುಸಾಗದು ತ್ಯಾಗಕೆ||

ಸಾಗರವುಕ್ಕಲು ಉಬ್ಬರವಿಳಿತ ಅಲೆಅಲೆಯಾಟ
ಉರಗಮಿಲನ ಬದುಕಸರಪಳಿ ಜೂಜಾಟ||
ರಸಮಯ ಸಮಯದಿ ರಸಿಕನೆದೆಗೆ ಕಾಮದೂಟ
ಸೃಷ್ಟಿಯ ಸೊಬಗಲಿ ಚಿದಂಬರ ರಹಸ್ಯವೀ ಆಟ||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.

೩೬೮. "ಕನ್ನಡವೆನೆ ಎನ್ನೆದೆ... "

ಕನ್ನಡವೆನೆ ಎನ್ನೆದೆ ಹಬ್ಬವ ತರುವುದು
ಚನ್ನುಡಿಯಿಂದಲಿ ಮನವ ತೊಳೆವುದು||
ಬೆನ್ನೆಲೆಬಾಗಿ ಸಂಸ್ಕೃತಿ ಕಾಯ್ವುದು
ಎನ್ನಭಿಮಾನದಿ ಗಗನದಿ ಮೆರೆವುದು||

ಕೆಚ್ಚೆದೆಯೆಂಬುದು ಗರ್ಭದಿ ಸೃಜಿಪುದು
ಮೆಚ್ಚುವ ಪರರನು ಹೃದಯದಿ ಪೊರೆವುದು||
ಕಿಚ್ಚನು ಕಲಿಯಲಿ ಗೆಲುವಲಿ ಇಡುವುದು
ಚುಚ್ಚಿಪ ನರಿಗಳ ನರಗಳ ಹರಿವುದು||

ಸಗ್ಗವ ತಂದು ಧರೆಗಬ್ಬವ ನೀಡಿಪುದು
ಹಿಗ್ಗನು ನೀಡಿ ಜ್ಞಾನಪೀಠದಿ ನಿಲುವುದು||
ಸುಗ್ಗಿಯ ಪರಂಪರೆ ಎಲ್ಲೆಡೆ ಸೆಳೆವುದು
ಹೆಗ್ಗಣಗಳನು ಬಗ್ಗುಬಡಿದು ರಕ್ಷಿಪುದು||

ಕಾಮಾಂಧರ ಕಣ್ಣನು ಶುದ್ಧಿಸೋ ತಾಯದು
ವಾಮಾಮಾರ್ಗಿಗೂ ಸನ್ಮಾರ್ಗವ ತೋರಿಪುದು||
ಪಾಮರಪಂಡಿತ ಶರಣ ದಾಸರ ಪದವಿದು
ಮಾಮರ ಚಿಗುರಿನ ಕಂಪಿನ ಗಾನವಿದು||

ರಸಿಕರ ವಣಿಕರ ಕಲೆಗಳ ತವರಿದು
ಬಸಿರಲು ಭಕ್ತಿಯ ಬಿತ್ತುವ ನೆಲವಿದು||
ಹಸಿಮನಸೆಸಳಿನ ಸುಂದರ ತೋಟವಿದು
ಮಸಿಯನು ಬಯಸದ ಪವಿತ್ರ ಜಲವಿದು||

ಕರುಣೆಯ ಕಡಲನು ಮಡಿಲಿಗೆ ತರುವುದು
ತರುಣರ ಕರಣದಿ ಸಂಕಲ್ಪನುಡಿಯದು||
ಮರುಜನ್ಮದ ಮರಳಿಕೆಗೆ ಬರವಸೆ ಕೊಡುವುದು
ತಿರುಗುವ ಚಕ್ರಕೂ ಪ್ರೀತಿಯ ಕಲಿಸುವುದು||

ನಮ್ಮಯ ಹೃದಯಕೆ ಕನ್ನಡವೇ ಉಸಿರಾಗಿಪುದು
ಅಮ್ಮನಂತೆ  ತ್ಯಾಗವೆಮಗೆ ಕರಗತ ಮಾಡಿಪುದು||
ಘಮ್ಮೆಂದು ಗಂಧದ ಕಂಪನು ಸೂಸಿಹುದು
ಹೆಮ್ಮೆಯಿಂದ ಹೇಳಿ ಕನ್ನಡ ನಮ್ಮದು... ನಮ್ಮದು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು

೩೬೯. "ಗುರುವಂದನಾ "

ಅಗಣಿತ ತಾರಾಗಣಗಳ ನಡುವೆ ದೃವತಾರೆ
ಜೀವಕೆ ರೂಪವ ನೀಡುವೆ ಮನಸಾರೆ||
ನರರನು ಗುರಿಯಡೆ ಕರೆಯುವ ಭವಸಾರೆ
ಸೇವಾಭಾವದಿ ಕಾಯಕ ನಿಷ್ಕಲ್ಮಶ ಅಕ್ಕರಧಾರೆ||

ನಿಂದಕರಡಿಯಲೂ ಚಂದವಮಾಡಿ
ಹಸಿಹಸುಕನಸನು ನನಸಲಿ ನೋಡಿ||
ಕೆಳೆಯರ ಕಲೆಸುತ ಅಮೃತಸಿಂಚನ ನೀಡಿ
ದೇಶದ ನಾಡಿಯ ಮಿಡಿತವ ಹಿಡಿಯುವ ಮೋಡಿ||

ಜಾತಿಮತಗಳ ಹೊಟ್ಟನು ತೂರುತ
ಅಂಧಕರಂತರಂಗಕೆ ಬೆಳಕನು ನೀಡುತ||
ಏಕತೆಯಸಿವನು ಹಸಿಕಂಗಳಲಿ ಮೂಡಿಸುತ
ನೆಲಜಲದ ಹಿರಿಮೆಯ ಮನದಲಿ ಬಿತ್ತುತ||

ಬ್ರಷ್ಟರಕೋಟೆಗೆ ನಿಷ್ಟರ ಕಳಿಸುತ
ವಿಜ್ಞಾನದಭಿಜ್ಞಾನ ಕಣ್ಣನು ತೆರೆಸುತ||
ನಾಳಿನ ನಾಡಿನ ಕಲಿಗಳ ಬೆಳೆಸುತ
ಅನುಭವದಭಿರುಚಿ ಅನ್ವಯಗೊಳಿಸುತ||

ಮನಮನೆ ದೀವಿಗೆ ಬೆಳಗುವ ಅಭಿಮತ
ಕಣಕಣದಲೂ ಆಧ್ಯಾತ್ಮ ಮುಕ್ತಿಯ ನೀಡುತ||
ಸಾವಿರ ಶಿಷ್ಯರ ಸಾಧನೆ ಬಯಸುತ
ಮೇಣದ ಬದುಕಲೂ ಸಾರ್ಥಕ ಮೆರೆಯುತ||

ಸಹನೆಯ ಬಾಳಲಿ ಬುವಿಯನು ಹೋಲುವ
ಕೀಚಕರನ್ನೂ ಸರಿದಾರಿಗೆ ತರುವ||
ನನ್ನದೆಂಬ ಮಮಕಾರ ಕಳಚುವಂತೆ ಮಾಡುವ
ಗುರುವೇ ಇದೋ ನಿನಗೆ ಕೋಟಿವಂದನೆ....
ನೀ ನಮ್ಮವ... ನೀ ನಮ್ಮವ.. ||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.

೩೭೫. "ಬ್ರಷ್ಟಾಚಾರ ಅನಂತಪಿಡುಗು..!? "

ಎಂತಹಾ ಸ್ಥಿತಿ ನಮದು ಕೊಟ್ಟು ಹೊಡೆಸಿಕೊಳ್ಳುವುದು
ಬ್ರಷ್ಟರ ಮನೆಯೊಳಗೆ ಔತಣವಾ ಬೇಡುವುದು||
ನೀತಿಗೆಟ್ಟ ಜಗದೊಳಗೆ ಶಾಂತಿಯನ್ನು ಬಯಸುವುದು
ಅಧರ್ಮದ ದೋಣಿಯಲ್ಲಿ ನದಿ ದಾಟಲೋಗುವುದು||

ವರ್ಗಾವಣೆ ನೇಮಕಾತಿ ಅಕ್ಷರವೂ ರಾಜಕೀಯ
ದೇವರನ್ನೇ ನುಂಗಿದ ಪೂಜಾರಿಯ ತಟ್ಟೆಪ್ರಾಯ||
ಧನಪಿಶಾಚಿ ಕುಣಿತದಲ್ಲಿ ಸತ್ಯ ನಿಷ್ಠೆ ಮಂಗಮಾಯ
ಸುರಾಸುರ ಕಾಲವೆಲ್ಲಾ ಅಸುರಬೀಜ ಸಂಪ್ರದಾಯ||

ನಾಚಿಕೆಯೇ ನಗ್ನವಾಗಿ ನಡುವೆ ಸಂಸಾರಸಾಗಿ
ನಾಡು ನುಡಿ ನರಳುವಾಗ ನೇತನುಧರ  ಬಿರಿದುಹೋಗಿ||
ರಾಜಕೀಯದೆಗಲ ಮೇಲೆ ಬೇತಾಳ ಬೆನ್ನುಬಾಗಿ
ಪೂಜಾರಿಯ ವರಕೆ ಬಡವನುಸಿರ್ನಿಂತು ಹೋಗಿ||

ಕಾಮಾಲೆ ನರ್ತನಕೆ ಹಸಿಮನಸುಗಳೆಂಜಲು
ಮುಗ್ದಮನದ ಬವಣೆಗಳೇ ಬಲ್ಲವರ ಮೆಟ್ಟಿಲು||
ಅಧಿಕಾರವು ಕರುಣೆಯಿರದ ಬೀಜಾಸುರ ತೊಟ್ಟಿಲು
ಕಿತ್ತುತಿಂಬೋ ಹದ್ದುಗಣ್ಣ ಕನಿಕರವಿಲ್ಲ ಸುತ್ತಲೂ||

ಅಲೆಸಿ ಅಲೆಸಿ ಬೆವರು ಸುರಿಸಿ ರಕ್ತಹೀರೋ ಒಕ್ಕಲು
ನಾವೇ ತೋಡಿದ ಗುಂಡಿಯಲ್ಲಿ ನಾವು ನೀವು ಬೀಳಲು||
ಧ್ವನಿಯಿರದ ಬಾಳಿನಲ್ಲಿ ಕಾನನಕೂಗು ಸುತ್ತಲು
ಬ್ರಷ್ಟಾಚಾರ ಅನಂತಪಿಡುಗು ಜೀವಜಂತು ಸಾಯಲು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು


೩೭೬. "ಕನ್ನಡದ ದೀಪ"

ಹಚ್ಚು ಬಾ ಬೆಳಗು ಬಾ
ಕನ್ನಡದ ದೀಪ||
ಸ್ವಚ್ಛತೆಯ ಕೆಚ್ಚೆದೆಯಲಿ
ತೊಳೆಯಲೆಲ್ಲ ಪಾಪ||

ಅನಂತಗೀತೆ ಚಿರಂತನತೆಗೆ
ಮೊಳಗಲಿ ಎಂದೆಂದೂ||
ವಿಶ್ವಪಥದ ಮನುಜಮತದ
ಜಾಡು ಬಿಡೆನೆಂದೆಂದೂ||

ಆವ ಬಿರುಗಾಳಿ ಬರಲಿ
ಶಿರವ ಬಾಗದಿರಲಿ||
ಆವ ಸಿಡಿಲೆರಗಿದರೂ
ಹಾರಿಹೋಗದಿರಲಿ||

ಕರುನಾಡ ಹಣತೆಯಿದು
ಕರುಣೆಯ ದ್ಯೋತಕ||
ತಾಯೊಲವ ನುಡಿಯಿದು
ತ್ಯಾಗದುಸಿರ ಪ್ರತೀಕ||

ನಾನೆಂಬ ಭ್ರಮೆಯಿರದ
ನಿಸ್ವಾರ್ಥ ದೀವಿಗೆ||
ನಾವೆಂಬಾ ಸತ್ಯಸ್ಪರ್ಶ ನೀಡಿ
ಬೆಳಕಾಗಲೆಮ್ಮ ಬಾಳಿಗೆ||

ನೂರು ಕವಲು ನೂರು ತಂತಿ
ನವಿರು ಗಾನ ನಾಡಿಗೆ||
ಎಲ್ಲರೊಳಗೊಂದಾಗಿ ಮಿಡಿವ
ಐಕ್ಯತೆಯ ಯಾನ ದೀವಿಗೆ||

ಎಷ್ಟೇ ಅಂಧತೆಯೋಡಿಸಿದರೇನು
ತನ್ನ ನೆರಳೇ ನೇಣಿಗೆ||
ಅರಿತು ಬಾಳು ಮನುಜ ನೀನು ಸತ್ಯಮಿಥ್ಯ
ಇರುವ ಮೂರುದಿನದ ಜೋಳಿಗೆ||

ಬತ್ತಿಹುದೆಣ್ಣೆ, ಹಾಕುವ ಕರವಿಲ್ಲದೇ
ಇನ್ನೆಷ್ಟುದಿನ ಮೈಸುಟ್ಟುಕೊಳ್ಳುವ ಕಾಯಕ||?
ಬತ್ತಿಯ ಕುತ್ತಿಗೆ ಹಿಸುಕಿರುವಾಗ
ಇನ್ನೆಲ್ಲಿ ಉರಿದೀತು ಬರೀ ಸೂತಕ||?

ಒಂದಾಗಿ ಹಚ್ಚಬನ್ನಿ
ಕೆಚ್ಚೆದೆಯ ದೀವಿಗೆ
ಹುಚ್ಚೆನ್ನಲಿ ಚುಚ್ಚಾಡಲಿ
 ಕಚ್ಚರಿಯಲಿ ಇಂದಿಗೆ||

ಸಂಕಲ್ಪದ ಸೇತುವೆಯು
 ನಮಗೂ ನಿಮಗೂ ಮೆಟ್ಟಿಲು||
ಒಗ್ಗಟ್ಟಿನ ಆತ್ಮಸ್ಥೈರ್ಯ
ತೊಡೆಯಲಿ ನಮ್ಮೊಳಗಿನ ಕತ್ತಲು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು

೩೭೭. "ಕನ್ನಡಮ್ಮನ ದೇವಾಲಯ"

ಕರುನಾಡಿದು... ಸಿರಿನಾಡಿದು..
ಕನ್ನಡಮ್ಮನ ದೇವಾಲಯ.. ಪ್ರೇಮಾಲಯ||ಪ||

ಕರುಣೆಯ ಕಡಲಿದು ಪ್ರೀತಿಯ ಮಡಿಲಿದು
ಪ್ರೇಮದ ನೆಲವಿದು ಮಧುರ ನುಡಿಯಿದು||ಅ.ಪ||

ರನ್ನ ಪಂಪ ಪೊನ್ನ ಚಂಪಾ
ಕುವೆಂಪು ಬೇಂದ್ರೆ ಹರಡಿದ ಕಂಪಾ||
ಮಾಸ್ತಿ ಆಸ್ತಿ ಕಾರಂತ ಅನಂತ
ಗೋಕಾಕ್ ಕಾರ್ನಾಡ್ ಕಂಬಾರರಂತ
ಕವಿಪುಂಗವರ ನಾಡಿದು..ಸಾಹಿತ್ಯ ಬೀಡಿದು||೧||

ಕಾವೇರಿ ತುಂಗೆ ಭದ್ರೆ ಶರಾವತಿ
ಕಪಿಲೆ ಕೃಷ್ಣ ಕಾಳಿ ಕುಮುದ್ವತಿ||
ಘಟಪ್ರಭಾ ಮಲಪ್ರಭಾ ವೇದಾವತಿ
ಲಕ್ಷ್ಮಣತೀರ್ಥ ವರದಾ ನೇತ್ರಾವತಿ
ರೈತರ ಬಾಳಿನ ಅನ್ನಕೆ ನೀವೇಗತಿ||೨||

ಹಂಪೆ ಬೇಲೂರು ಹಳೇಬೀಡು
ಐಹೊಳೆ ಪಟ್ಟದಕಲ್ಲು ಕಲೆನಾಡು||
ಸೋಮೇಶ್ವರ ತಲಕಾಡು ನಂಜನಗೂಡು
ಅಮೃತಾಪುರ ಗೊಮ್ಮಟೇಶ್ವರ ಜಾಡು||
ಶಿಲ್ಪಕಲೆಯ ತವರಿದು ನಮ್ಮ ಕರುನಾಡು||೩||

ಕರ್ನಾಟಕ ಸಂಗೀತ ಕೋಗಿಲೆ ಹಾಡು
ಗಾನ ಗವಾಯಿ ಪ್ರತಿಭೆಯ ನೋಡು||
ನಾಟ್ಯಮಯೂರಿ ನಟನೆಯ ಬೀಡು
ಕಣ್ಮನ ಸೆಳೆಯುವ ಸಹ್ಯಾದ್ರಿಯ ಕಾಡು
ಚಂದನ ಚಿನ್ನದ ಸಂಪತ್ತಿನ ಗೂಡು||೪||

ಯೋಧರ ವೀರರ ಗಂಡೆದೆ ಬಂಟರ
ಸಂಸ್ಕೃತಿ ಸಂಸ್ಕಾರ ಸುಮಧುರ ನೆಂಟರ||
ವಿವಿಧ ವೇಷದಿ ಏಕತೆಯ ಹಂದರ
ಬಿನ್ನಪ್ರಾದೇಶಿಕ ಹಿನ್ನಲೆಯ ಹೆಮ್ಮರ||
ಶ್ರೀಮಂತಿಕೆಯ ಚೆಲುವಿನ ಚಂದಿರ||೫||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು

೩೮೦ "ದೀಪಾವಳಿ ದೀವಿಗೆ "

ದೀಪದಿಂದ ದೀಪ ಹಚ್ಚಿವ
ಪ್ರೀತಿ ಮಮತೆ ಘನತೆ ಹೆಚ್ಚುವ||
ಅಂಧಕರೆದೆಯ ಮೌಡ್ಯ ಕಳಚುವ
ಬೆಳಕಿನಲ್ಲಿ ಗುರಿಯ ದಾರಿ ಹಿಡಿಯುವ||

ಬಂಧುಬಳಗವೆಲ್ಲಾ ಸೇರಿ
ಒಂದು ಎಂಬ ಮಂತ್ರ ಸಾರಿ||
ಬಂಧವೆಂಬ ಕಂಪು ಬೀರಿ
ಚಂದದೊಲವ ರಥವ ಏರಿ||

ಬಗೆಬಗೆಯ ಹೂವ ರಾಶಿ
ಹಟ್ಟಿಗೆಲ್ಲ ಹರಡಿ ಸಿಂಗರಿಸಿ||
ಬೆನಕನನ್ನು ಮಧ್ಯದಿರಿಸಿ
ಹಟ್ಟಿಲಕ್ಕವ್ವನ ಮನದಿ ಜಪಿಸಿ||

ಸಿಹಿಯೂಟ ಸವಿಯುವಾಗ
ದೇವಗಣವು ಅರಸಿತಾಗ||
ಕಾಶಿಹುಲ್ಲು ಬ್ರಹ್ಮದಂಡೆಯೊಳಗ
ಹೊಸಲುಗಳನು ಸಿಂಗರಿಸಿವಾಗ||

ರಂಗರಂಗ ರಂಗವಲ್ಲಿ ನೋಡು
ಅಂಗಳವೇ ಸಗ್ಗವಾಗಲೆದೆಯ ಗೂಡು||
ಹಬ್ಬಗಳ ತವರು ನಮ್ಮ ನಾಡು
ಬಾಂಧವ್ಯದ ತೋಟವಿದು ಜೀವಿಸಿ ನೋಡು||

ಹಿರಿಯರನ್ನು ನೆನೆವ ಪರಿಯು
ಮಾನವೀಯ ಮಮತೆ ಸಿರಿಯು||
ಅವರಿಗಿಷ್ಟದ ತಿನಿಸ ಸವಿಯು
ಬೆಳಗೋ ದೀವಿಗೆ ಎಮ್ಮ ಬರವಸೆಯು||

ಪರಿಸರ ಹಾಳುಮಾಡದೇ
ಪರಿಸರಸ್ನೇಹಿ ಪಟಾಕಿ ಹಚ್ಚಬಾರದೇ||
ಮಾಲಿನ್ಯಕ್ಕೆ ಬೆಂಕಿ ಹಚ್ಚಬಾರದೇ
ದುಂದುವೆಚ್ಚ ದೂರಮಾಡಿ ಅಶಕ್ತನೊಟ್ಟೆ ತುಂಬಬಾರದೇ||

ನರಕಾಸುರ ಮಾನವರಲ್ಲೂ ಸಾಯದೇ
ಬಲಿಯಹಂಕಾರವು ನಮ್ಮಿಂದ ಹೋಗದೇ||
ದಶದುಷ್ಚಟ ದರ್ಪವಳಿಯಬಾರದೇ
ನಮ್ಮನೆಯ ದೀವಿಗೆ ಅಜ್ಞಾನಿಗೆ ಜ್ಞಾನ ನೀಡದೇ||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.


೩೮೨. "ಬೆಳಗವರ ಬದುಕು"

ಬೆಳ್ಳಿಯಂಗಳದಲ್ಲಿ ವರ್ಣರಂಜಿತ ಸಮಯ
ಚಿತ್ತಾರದೋಕುಳಿ ಚೆಲ್ಲಿ ಕಣ್ಮನ ಸೆಳೆಯುವ ವಿಷಯ||
ಒಂದೆಡೆ ಸಂತೋಷ ಮೊಗದೊಂದೆಡೆ ಬೇಸರ
ಕಣ್ಣೆದುರೆ ಆರಿದ ದೀಪಗಳ ಘನಘೋರ ಚಿತ್ತಾರ||

ಕರುಳಹಿಂಡುವ ಕಥೆ ಕಣ್ಣೆದುರು ಇರುವೆಡೆ
ಪ್ರಳಯರುದ್ರನ ನರ್ತನಕೆ ಚಿಂದಿಬದುಕಾದೊಡೆ||
ಜೀಕುವ ಪಯಣವು ಅಂಧಕಾರದೊಳಿದ್ದೊಡೆ
ಕಾರ್ಮೋಡ ಕವಿದ ಗಗನಯಾನವಾದೊಡೆ||

ಅಜ್ಞಾನಿ ನಾನು ಪಟಾಕಿ ಹಚ್ಚಿ ಸಂಭ್ರಮಿಸುವೆನು
ಅವರ ಬಾಳನು ಬೆಳಗದೇ ನಮ್ಮನೆ ಬೆಳಗುವೆನು||
ಹಚ್ಚುವ ಬೆಳಗುವ ಭಗವಂತನೆಲ್ಲಿಹನು
ಬೆಳಗುವ ಕೈಗಳನು ಬೆರೆಡೆ ಕಳಿಸಿಹನು||

ಮರುಗುವ ಮನಗಳಲಿ ಸ್ವಾರ್ಥವ ತುಂಬಿಹನು
ಕೈಚಾಚಿ ಕರೆವುದಕೂ ರಾಜಕೀಯ ಬಳಿದಿಹನು||
ಅಸ್ತಿತ್ವದುಡುಕಾಟ ನಿರ್ಗತಿಕರ ಮರೆತಿಹನು
ಕೆಸರೆಚಾಟದಿ ದೀನಬದುಕ ನುಂಗಿಹೆನು||

ಬದುಕು ಬಲು ಸುಲಭ ದೋಸೆ ಮಗುಚಿದಂತೆ
ಕಾಲಚಕ್ರದ ತಿರುವು ಬಾಳ ಪಯಣದ ಸಂತೆ||
ಪಾಠಕಲಿಯದ ನರನು ನಾನೆಂಬ ಬೊಗಳೆ ಕಂತೆ
ಕೈನೀಡಿ ಕೈಹಿಡಿದು ಸಾಗಿ ಅದುವೇ ಸಗ್ಗವಂತೆ||

ಹಚ್ಚುವ ಮನಸಿದ್ದರೆ ಅವರಬಾಳ ದೀಪ ಹಚ್ಚಿ
ಬೆಳಗುವ ಪ್ರಭೆಯಿದ್ದರೆ ಅವರ ಕತ್ತಲಬಾಳ ಬೆಳಗಿ||
ಮರುಗುವ ಕರುಳಿದ್ದರೆ ಅವರಿಗಾಸರೆಯ ನೀಡಿ
ಮಿಡಿಯುವ ಹೃದಯವಿದ್ದರೆ ಅವರಿಗಾಗಿ ಕರ್ತನಲಿ ಬೇಡಿ||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು

೩೮೩. "ಬಂದೆಯಾ ದೀಪವಾಗಿ"

ಎಂತು ಬಂದೆನಾ ಇಂತು ಧರೆಯೊಳು
ನಿಂತು ನೋಡಲು ಬರಿಯ ಕರಿಗತ್ತಲು||ಪ||

ಅಂಧಕಾರವು ಅಂದವಾಗಿರಲು
ನೊಂದು ಬೆಂದೆನು ಸಣ್ಣತನದೊಳು||ಅ.ಪ||

ಎಲ್ಲೋ ದೂರದಿ ಪ್ರಭೆಯು ಕರೆದಿದೆ
ಅರಿವಿನೊಲವಲಿ ಕರವ ನೀಡಿದೆ||
ಬಳಿಗೆ ಸಾರಿದೆ ಬೆಳಕು ತಾ ನೀಡಿದೆ
ಮನದ ಖಿನ್ನತೆ ದೂರ  ತಾ ಮಾಡಿದೆ||೧||

ಸಹನೆ ಮಾತ್ರವೇ ಮಂತ್ರವಾಗಿದೆ
ತ್ಯಾಗದಿಂದಲೇ ಬಾಳನು ಬೆಳಗಿದೆ||
ಭೋಗ ಬೇಗುದಿ ಅರಿಯದಾಗಿದೆ
ಸೇವೆ ಹಿರಿಮೆಯೆ ಸತ್ಯವಾ ಸಾರಿದೆ||೨||

ಕವಲುಪಯಣಕೆ ದಿಕ್ಕನು ನೀಡಿದೆ
ಅಮಲುಗಣ್ಣಿನ ಪೊರೆಯನು ಕಳಚಿದೆ||
ಸವೆವ ಬಾಳಿಗೂ ಸಾರ್ಥಕ್ಯ ನೀಡಿದೆ
ಇರುವಸತ್ಯಕೆ ಕನ್ನಡಿಯ ತಾ ತೋರಿದೆ||೩||

ಮನೆಮನಗಳ ಕರಿಯ  ನೀ ಓಡಿಸಿದೆ
ನಾವು ನಮ್ಮವರ ಕಣ್ಣ ನೀ ತೆರೆಸಿದೆ||
ಭಾವಪುಟಕೆ ರೆಕ್ಕಕಟ್ಟಿ ನೀ ಹಾರಿಸಿದೆ
ನೋವು ನಲಿವಿನ ಜಗವ ತೋರಿಸಿದೆ||೪||

ನಿನ್ನ ನೀನು ಸವೆಸಿಕೊಂಡು ಚಂದನವಾದೆ
ನಿನ್ನಹಂ ಸಟ್ಟುಕೊಂಡು ನೀ ಶುದ್ಧವಾದೆ||
ನಿಜದೈವ ಜಗಕೆ ಪೂಜಿಸೆ ನೀ ಶಕ್ತಿಯಾದೆ
ನಿಲುವು " ದೀಪವು" ಸರ್ವರ ನಯನವಾದೆ||೫||

ಆವಗಾಳಿಗೂ ಜಗ್ಗದೆ ಕುಗ್ಗದೆ ಉರಿಯುತಿರು
ಭಾವಕೆಡುಕನು ತೊಡೆದು ಹಬ್ಬದಿ ಬೆಳಗುತಿರು||
ನಂಬಿಕೆ ಶ್ರದ್ಧೆ ಪ್ರೀತಿಯ ಸಂಗಮವಾಗಿರು
ಜಂಗಮನಂತೆ ಶುದ್ಧಿಸೆ ಧರೆಗೆ ನೀ ಬರುತಿರು||೬||

"ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು."


೩೮೪ "ದೈವಸೃಷ್ಟಿ ದೂರದೃಷ್ಟಿ " 

ಜಗವನೊಮ್ಮೆ ಒಳಹೊಕ್ಕು ನೋಡು
ಮುಗಿಲಗಲ ನಿಂತ ವಿಸ್ಮಯ ಜಾಡು||
ವಿವಿಧ ಕಣ್ಣು ವಿವಿಧ ಬಣ್ಣದ ಗೂಡು
ಊಸರವಳ್ಳಿಯಲ್ಲೂ ಒಲವಿದೆ ನೋಡು||ಪ||

ಒಂದೇ ಮೊಲೆಯ ಹಾಲುಸವಿದ
ಮನದ ಬೇದಭಾವವ ನೋಡು||
ಒಂದೇ ನೆಲದ ರಸವನುಂಡ
ಫಲದ ಸಿಹಿಕಹಿ ರುಚಿಗಳ ನೋಡು||೧||

ಒಂದೇ ಗಾಳಿ ಸೇವಿಸಿನಿಂದ
ಜನರ ಬಣ್ಣದ ಬದುಕಿನ ನೋಡು||
ಒಂದೇ ಮಳೆಯ ತನುವಲಿ ನೆನೆದ
ಸಂಕುಲದ ವೈವಿಧ್ಯತೆ ಸಿರಿಯ ನೋಡು||೨||

ಒಂದೇ ಹುಟ್ಟು ಒಂದೇ ಸಾವು
ಗಳಿಸುವ ಕಳೆಯುವ ಲೆಕ್ಕ ನೋಡು||
ಒಂದೇ ಬಣ್ಣದ ರುಧಿರವೂ ಕೂಡ
ನೂರು ಭಾವದ ಸಂತೆಯು ನೋಡು||೩||

ಒಂದೇ ಬೆಳಕು..ಒಂದೇ ಬದುಕು
ಬಣ್ಣದ ತೋಟದಿ ಮರೀಚಿಕೆ ಹಾಡು||
ಒಂದೇ ಹೆಣ್ಣು .... ಒಂದೇ ಗಂಡು
ಸಮರಸವಿರಸ ಸವಿಯೂಟ ನೋಡು||೪||

ಒಂದೇ ಜಗವು.... ಒಂದೇ ಒಲವು
ಹೊಂದಿಕೊಂಡು ಬಾಳೋ ಪರಿಯ ನೋಡು||
ಒಂದೇ ರಂಗ .....ಒಂದೇ ವೇದಿಕೆ
ನಟಿಸಿ ಘಟಿಸೋ ಬುಗುರಿಯ ಹಾಡು||೫||

ಒಂದೇ ದ್ವನಿಯು ... ಒಂದೇ ಕಂಠ
ನೂರುರಾಗದಿ ಪಯಣ ನೋಡು||
ಒಂದೇ ಗುರಿಯು ಒಂದೇ ಗುರುಪಥವು
ಕವಲುವ್ಯಾಧಿಯ ಮನಸ್ಸು ನೋಡು||೬||

ಒಂದೇ ಧರಣಿಯು ಒಂದೇ ಗಗನವು
ಒಂದನೊಂದನು ತಬ್ಬುವ ಪ್ರೀತಿ ನೋಡು||
ಒಂದೇ ಗರ್ಭವು ...ಒಂದೇ ಕಾವು
ಸೃಷ್ಟಿಯಂಚಲಿ ಅನಂತನಂತರ ನೋಡು||೭||

"ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು"

೩೮೩. " ಸ್ವಾರ್ಥದ ಬೆನ್ನೇರಿ... "

ಇಂದು ನಾಳೆ ಬದುಕ ಸಂತೆ
ನಂದು ನಂದು ಎಂಬ ಚಿಂತೆ
ಅಂದು ಇಂದು ಎಂದೆಂದೂ ನನಗೆ ನನಗೆ ಎಂಬಂತೆ||
ಮುಂದೆ ಚಂದ ಹಿಂದೆ ಕುಹುಕತೆ
ಬಂಧವಿರದ ಬರಿಬಾಳಿನೊರತೆ
ಕೊಂದಿಹರಿಲ್ಲಿ ಹೃದಯದಲಿ ಮಾನವೀಯತೆ||

ಸಹಿಸರಲ್ಲೋ ಸಂಗಡವೂ ನಿಲ್ಲರಲ್ಲೋ
ದಹಿಸರಲ್ಲೋ  ನಾನೆಂಬುದ ಬಿಡರಲ್ಲೋ
ಸಿಹಿಯಿರುವ ಬಾಳಿನಲ್ಲಿ ಕಹಿಬೀಜ ಬಿತ್ತುವರಲ್ಲೋ||
ಸ್ನೇಹಿತರೆಸರಲ್ಲಿ ತನ್ನತಾನು ಮರೆತರಲ್ಲೋ
ಕಹಿಗಾಳಿ ಬೀಸಿ ಅನುಮಾನ ಹೊತ್ತಿತಲ್ಲೋ
ಸಹಿಷ್ಣು ವೃಕ್ಷದಡಿಯೇ ಅಸೂಯೆ ಹುತ್ತ ಬೆಳೆಯಿತಲ್ಲೋ||

ಪರರೇಳ್ಗೆ ಸಹಿಸಲಿಲ್ಲ ವಿಶಾಲಭಾವವಿಲ್ಲ
ನರನಾಡಿ ಸ್ವಾರ್ಥದಲ್ಲಿ ತನ್ನರಿವನ್ನೇ ಮರೆಯಿತಲ್ಲ
ಕರದಲ್ಲೆ ಬರಹವಿರಲು ಗಾಳಿಸೋಕ ಹಿಡಿಯಿತಲ್ಲ||
ಉರಗದ್ವೇಷ ಮಿತಿಯುಂಟು ನರನಿಗೆ ಮಿತಿಯಿಲ್ಲ
ಹರಣವೆಲ್ಲ ಸುಡುವುದಲ್ಲ ಬದುಕುಹೀನವಾಯ್ತಲ್ಲ
ಬರಡು ಭೂಮಿಕಂಡರೂನು ನನಗೆ ಬೇಕು ಎನುವಿರಲ್ಲ||

ಒಂದೇ ದಾರಿಯಲ್ಲೂ ಕೂಡ ನಾನುನೀನು ಎಂತೀರಲ್ಲ
ಮುಂದೆ ಇರುವ ಗುರಿಯ ಮರೆತು ಕ್ಷಣಿಕಗೆದ್ದು ನಗುವಿರಲ್ಲ
ಹಿಂದೆ ಬಂದ ದಾರಿ ಮರೆತು ಮನದಿ ಕರುಬುತಿಹರಲ್ಲ||
ತಂದೆತರುವ ವಸಂತನಣತಿ ಚಿಗುರಲಿ ಬಾಳೆಲ್ಲಾ
ಹಿಂದೆಮುಂದೆ ನೋಡದೆ ಅಪ್ಪಿಕೋ ನಿಸ್ವಾರ್ಥವೆಲ್ಲಾ
ವಂದೇಮಾತರಂ ಹಾಡು ಬೆಳಗಲಿ ಬಾಳನೆಲ್ಲಾ||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.


೩೮೫ "ಹಣದ ಮತ್ತಲ್ಲಿ "

ನಾನು ನಾನೆಂಬ ಸ್ವಾರ್ಥ ಬಾಳಲ್ಲಿ
ಎಲ್ಲವನ್ನೂ ತೊರೆದರು ಹಣದ ಮತ್ತಲ್ಲಿ||
ಸಂಬಂಧ ಅನುಬಂಧ ಗಾಳಿಗೆ ತೂರಿ
ಉನ್ಮಾದ ಸಂಪತ್ತು ಮದವನ್ನು ಏರಿ||

ಅದೆಷ್ಟು ನಿಷ್ಕರುಣೆ ಧನಪಿಶಾಚಿಗೆ
ನಮ್ಮವರ ನುಂಗುವ ಕ್ರೌರ್ಯದ ನಡಿಗೆ||
ಅದೆಷ್ಟು ಅಸೂಯೆಗಳು ಇದ್ದವರ ಬಲೆಗೆ
ಹೊರುವ ನಾಲ್ವರೂ ಇಲ್ಲ ಅಂತಿಮ ಯಾತ್ರೆಗೆ||

ಆಡುವ ಮಾತಲ್ಲಿ ಅಮಾನವೀಯ ನಡಿಗೆ
ನಾಲಿಗೆಯು ಅನೃತದ ಆಗರವೇ ನಿನಗೆ||
ಚಂಚಲೆಯ ಬೆನ್ನಿಂದೆ ಬಿದ್ದವರು ಉಳಿವರೇ
ಮಾಡಿದ್ದುಣ್ಣೋ ಮಾರಾಯ ನಿನ್ನ ಕಣ್ಣೆದುರೇ||

ಇದ್ದಾಗ ಎಲ್ಲರೂ ಹುಸಿನಗೆಯ ನೆಂಟರು
ಬಿದ್ದಾಗ ಎಲ್ಲರೂ ಕುಹುಕತೆಯ ಬಂಟರು||
ಕರುಳಿನ ಕಥೆಗೆ ರಕ್ತಲೇಪನಗೈವರು
ಅವರಿವರೆನ್ನದೇ ಸೊಲ್ಲೊಲಸಗೈವರು||

ಮೆರೆದವರ ಕಥೆಯು ಮಣ್ಣಲ್ಲಿ ಮಣ್ಣಾಗಿ
ಮಾಡುವಾ ಪಾಪವು ಆಡುವವರ ಬಾಯಾಗಿ||
ವಿಧಿ ಲಿಖಿತದಲ್ಲಿ ನಾವು ನೀವು ದಾಳಗಳಾಗಿ
ಅರಿತು ಬೆರೆತು ಬಾಳಿ ಎಲ್ಲರೊಳಗೊಂದಾಗಿ||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು

೩೮೯. "ಭಕ್ತ ಕನಕದಾಸ"

ಧರೆಗವತರಿಸಿದ ತಾರೆಗದಿಪತಿ ಅಂದು
ಜಾತಿವಿಜಾತಿ ಭೀತಿಯ ತೊಡೆಯಲು ಬಂದು||
ಭಕ್ತರ ಪಾಲಿಗೆ ಜ್ಯೋತಿಯ ರೂಪದಿ ನಿಂದು
ಮುಕ್ತಿಗೆ ಕಾಗಿನೆಲೆ ಆದಿಕೇಶವನ ನೆನೆದು||

ಬೀರಪ್ಪ ಬಚ್ಚಮ್ಮನ ಕರುಳಿನ ಸಿಂಧು
ಸಂಗೀತದಶ್ವಿನಿದೇವತೆಯಂತೆ ಬಂದು||
ಭಕ್ತಿಸಾರವ ರಾಮಧಾನ್ಯವ ಮೇರು ಎಂದು
ಅವತರಿಪ ಕನಕದಾಸ ದಾಸಶ್ರೇಷ್ಠನಾಗಿ ಅಂದು||

ತಿಮ್ಮಪ್ಪನಾಯಕ ಬಂಡಾರ ದಾನಗೈದು
ಕನಕದಾಸನಾಗಿ ಜನಾನುರಾಗಿಯಾದನು||
ಯುದ್ಧದಿ ಸೋತರು ಭೈರಾಗಿಯಾಗಿ ಗೆದ್ದನು
ಕೃಷ್ಣನ ಭಕ್ತನಾಗಿ ಕುಲದ ನೆಲೆ ತೋರಿದನು||

ಚಡಿ ಏಟು ತಿಂದು ಜನರ ಕಣ್ಣು ತೆರೆಸಿದನು
ಅಂತರಂಗದ ಶುದ್ಧಿಯನು ಸರ್ವರಲೂ ಬಿತ್ತಿದನು||
ರಾಗಿಯ ಮಹತ್ವ ಜಗತ್ತಿಗೆ ಸಾರಿದನು
ವೈಷ್ಣವಪಥದಿ ಕೇಶವನೊಲುಮೆ ಕಂಡನು||

ಅಂಧಕಾರವನೋಡಿಸಲು ಕೀರ್ತನೆ ಉಗಾದಿ
ಕಾವ್ಯಗಳ ರಚಿಸಿ ಹರಿದಾಸ ಕವಿಯಾದಿ||
ನಿನ್ನ ಉದ್ದೇಶವನರಿಯದ ಮೂಢರು
ಜಾತಿಗೆ ಸೀಮಿತ ಮಡಿಹರು ಮತಿಹೀನರು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು
ಕಾವ್ಯಾಂತರಂಗ ಕವನ ಸ್ಪರ್ಧೆಗೆ

೩೯೧. "ವಿಸ್ಮಯ ತಿರುವುಗಳು"

ನಾನು ನೀನು ಎನ್ನುವಷ್ಟು ಸ್ಥಿಮಿತವಿಲ್ಲ ಜಗಕೆ
ಶರವೇಗವೂ ನಾಚುತಿದೆ ಜಗದೋಟದ ಬದುಕೆ||
ಸತ್ಯವೊಮ್ಮೆ ಮಿಥ್ಯವೊಮ್ಮೆ ತಿರುವುಗಳ ಕಥೆಗೆ
ಅತ್ತೆ ಸೊಸೆ ದೋಸೆಮಗುಚೆ ಜೀವನ ವ್ಯಥೆಗೆ||

ಆಸೆಯೆಂಬ ಕೊಡೆ ಹಿಡಿದೆ ಬಯಕೆಸಂತೆಯೊಳಗೆ
ಮಾಡಿದ ಪಾಪವೆಲ್ಲ ನೇಣುಬಳ್ಳಿ ಕಡೆಗೆಮಗೆ||
ಹುದುಗಿಹೋದ ಸತ್ಯಕತೆಗೂ ಅನೃತಬಣ್ಣ ಬಳಿದು
ಭವಿಷ್ಯವೆಂಬ ಮಾಯಾಜಿಂಕೆ ಬಾಲವ ಹಿಡಿದು||

ಅವರವರ ಕೈಯಲ್ಲಿ ಜೀವನವಿರುವ ಸತ್ಯ
ಅರಿಯದೇ ಆಮಿಷದ ಜಾಲವಿಹುದು ನಿತ್ಯ||
ಮೇಲಿನವನ ಚಾಟಿಏಟು ಬಲು ತೀಕ್ಷ್ಣವೋ ಮನುಜ
ನಾನೆಂಬುದ ಬಿಡದಿದ್ದರೆ ಸರ್ವನಾಶ ಸಹಜ||

ಪ್ರಾಯಕುದುರೆಯೋಟದಲ್ಲಿ ಕಣ್ಣುಮಂಜಾಯ್ತೇ
ಹೆತ್ತವರ ತ್ಯಾಗ ಮರೆತು ಬೆನ್ನಹುಣ್ಣು ಆಯ್ತೇ||
ತಿರುಗೋ ಬುಗರಿಯಾಟದಿ ನಾಳೆನಿನದಲ್ಲವೇ
ಬಣ್ಣಕಳಚೋ ಸಮಯದಿ ಉಳಿಕೆ ಬೆತ್ತಲೆಯಲ್ಲವೇ||

ಏಳುಬೀಳ ದೋಣಿಯಲ್ಲಿ ನಾವಿಕನು ನಾನು
ಕಾಲಗರ್ಭದುಸಿರಿನಲ್ಲಿ ಸೇವಕನು ನಾನು||
ಕರ್ತನಾಟ ಬಲ್ಲವರು ಯಾರು ಹೇಳು ಜಗದಿ
ಇಂದು ನೀನು ನಾಳೆ ನಾನು ಬೆತ್ತಲಾಗೋ ತೆರದಿ||

ಮಾಡಿದಂತ ಪುಣ್ಯವೆಲ್ಲ ಅಮೃತವೂ ನಮಗೆ
ಪಾಪಕೂಪ ಶಾಪವೆಲ್ಲ ಕಲಿಯಾಟವು ನಮಗೆ||
ಮುತ್ತಿಗಿಂತ ಮೌಲ್ಯ ಸಮಯ ಮುಖ್ಯ ನಮಗೆ
ಮಿಂಚಿ ಹೋಗುವ ಮೊದಲು ಹಿಡಿದು ನೋಡು ಕಡೆಗೆ||

ಶಿಸ್ತುಬದ್ಧ ಜೀವನಕೆ ಕಾಲಮಿತಿಯ ಕೊಡುಗೆ
ಸಾಧನೆಯ ಶಿಖರಕೆ ಕಾಲವೊಂದೇ ಗುರಿಗೆ||
ಸೃಷ್ಟಿ ಸ್ಥಿತಿ ಲಯವೂಕೂಡ ಕಾಲನಿರದೇ ನಡೆಯದು
ಹಗಲುರಾತ್ರಿಗಳು ಕೂಡ ಕಾಲಕಥೆಯ ನುಡಿಪುದು||

ಅನಂತನನಂತ ಕಡಲೊಳು ಹುಟ್ಟುಸಾವಿರುವುದು
ಬರುವ ಹೋಗುವ ನಡುವೆ ಅಂತರ ನೀಡಿಹುದು||
ಎದೆಗುಂದದೇ ಮುನ್ನುಗ್ಗುವ ಕಾಲಕೇಯನಲ್ಲೂ
ಮಾನವೀಯ ಕೃತಿಯಲ್ಲಿ ಕಾಲನೊಲವ ಗೆಲ್ಲು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು

 ೩೯೩. "ಬಾ ಗರುವೇ ಅವತರಿಸು "

ಓ ಸೃಷ್ಟಿ ಸತ್ಯವೇ| ಬಾ ಇಲ್ಲಿ ಭವಿಸು||
ಎಲ್ಲೆಲ್ಲೂ ಅಧರ್ಮವೇ ಮೆರೆದಿಹುದು ವಧಿಸು||ಪ||

ಮಣ್ಣೊಲವು ಕೂಡಾ ದ್ವೇಷವುಂಡಿಹುದು
ತಾಯಎದೆಹಾಲು ವಿಷವನುಂಗಿಹುದು||
ಗೋವಿನಮೃತದಲ್ಲೂ ರುಧಿರ ಬರುತಿಹುದು
ತುಂಪುಚಂದ್ರನೆದಯೂ ಬೆಂಕಿಯುಗುಳಿಹುದು||ಬಾ||

ಮಲ್ಲಿಗೆಯು ಕೊಳೆತ ಶವದ ಪರಿಮಳ ಬೀರಿ
ಬೆಳಗೋ ದೀಪವೂ ಕೂಡ ಮನೆ ನುಂಗಿಹುದು||
ಸ್ವಾರ್ಥ ಸಿಂಹಾಸನದಿ ನರಿಯು ಕುಂತಿಹುದು
ರಕ್ಕಸರ ಅಡಿಯಲ್ಲಿ ನರನ ಬಾಳು ಬಿದ್ದಿಹುದು||ಬಾ||

ರುಷವತ್ತು ದೀನನ ಕಾಲಲಿ ತುಳಿದಿಹುದು
ಅಸೂಯೆಯೊಡಲಲಿ ಮಗು ಜನ್ಮ ಪಡೆದಿಹುದು||
ಕಾನನವೇ ಹಸಿರುಂಡು ಅಗ್ನಿಯುಗುಳಿಹುದು
ಗಗನವೇ ಮೇಘವುಂಡು ಬರವ ತಂದಿಹುದು||ಬಾ||

ಒಬ್ಬರಾ ಜೇಬಲಿನ್ನೊಬ್ಬರ ಕೈಯಿಹುದು
ಒಬ್ಬರಾ ಕಾಲೆಳೆದಿನ್ನೊಬ್ಬರ ಬದುಕಿಹುದು||
ಎಲ್ಲಮನವೂ ಊಸರವಳ್ಳಿಯ ತಬ್ಬಿಹುದು
ಕ್ರೌರ್ಯಸಂತೆ ಮಾಡಲು ಕಾಲ ಹೊರಟಿಹುದು||ಬಾ||

ನಾನೆಂಬ ಅರ್ಧಾಂಗ ಬಂಗದಿ ನಿಂತಿಹುದು
ಸಂಸಾರದನುಮಾನ ಸರ್ವರೊಳಗೊಂದಾಗಿಹುದು||
ಸಾವಿರ ಕೈಯಲಿ ದೇವರೂ ನಾಚಿಹುದು
ಜಗದಲ್ಲಿ ಸತ್ಯವು ಶವಮಣ್ಣ ತಿಂದಿಹುದು||ಬಾ||

ಲೋಕದ ಬಿಸಿಗಾಳಿ ನಮ್ಮ ಬೇಯಿಸದಿರದು
ಕೂಡಿಡುವ ದುರಾಸೆಯಲಿ ಚಟ್ಟಕಟ್ಟುತಲಿಹುದು||
ಪ್ರೀತಿ ಕರುಣೆಯು ರಕ್ತ ಬೇಡುತಲಿಹುದು
ಮಾನವತೆಯ ಮಮತೆ ನಿನಗಾಗಿ ಕಾದಿಹುದು||ಬಾ||

ರಂಗನಾಥ ಕ ನಾ ದೇವರಹಳ್ಳಿ. ಶಿಕ್ಷಕರು.

 "ಕವನ ಹೂರಣ ಸ್ಪರ್ಧೆ"

೩೯೫  "ಬೆಸೆದು ಹೊಸೆದ ಭಾವ"

"ಪ್ರೀತಿ ಇಲ್ಲದ ಮೇಲೆ "
ಹೃದಯಕೆ ಅಂದು ಬಂದೆ ಏಕೆ?
ಬಾಳಸಂಗಾತಿಯಾದ ಮೇಲೆ
ಅನುಮಾನಭೂತ ಹೊಕ್ಕೆಯೇಕೆ?

ಕರುಳ ಒಲವು ಬಳುವಳಿ ಲೀಲೆ
ನಂಬಿಕೆಯೊಡವೆ ಕಳಚಿದವೇಕೆ?
ತನುಮನ ಬೆಸುಗೆ ಪ್ರೇಮದಾ ಮಳೆ
ಭ್ರಮೆಯುಡುಗೆ ಬರವಸೆ ಮರೀಚಿಕೆಯೇಕೆ?

ಉಸಿರೊಳುಸಿರು ಬೆರತ ಜೊತೇಲೆ
ಬಸಿರ ಭಾಗ ಕೆಸರೊಳು ಕಲ್ಲು ಏಕೆ?
ಸಂಸಾರ ಬಂಡಿಗೆ ಪ್ರೀತಿ ನಂಬಿಕೆ ಇರಲೆ
ಅಹಂ ಸ್ವಾರ್ಥ ಅಸೂಯೆಯ ಗೊಡವೆ ಏಕೆ?

ಒಬ್ಬರನ್ನೊಬ್ಬರು ಗೌರವಿಸುವಿಸೋ ಕಲೆ
ಇರಲು ಹೆಚ್ಚು ಕಡಿಮೆಯ ಸೆಲೆಯೇಕೆ?
ಹೆತ್ತ ಹೊತ್ತ ಮುತ್ತಿತ್ತು ಮಮತೆಯಿಂದಲೆ
ಜೀವಕೆ ಮುಖ ತಿರುಗಿಸೋ ಬಾಳೇಕೆ?

ಸಪ್ತಸ್ವರದ ಸಂಗಮ ಬಾಳದೋಣಿಯ ಅಲೆ
ತೇಲಿಬರುವ ಉಬ್ಬರವಿಳಿತ ನಿನಾದ ಸಾಕೆ||
ಸರಳ ಬದುಕಲಿ ಪುಟ್ಟ ಕಂಗಳು ಅರಳಲಿ
ಸೀಳೋ ಬುವಿಯೊಡಲು ಬೆಸೆದು ಜೀಕಲಿ ಭವಕೆ||

ಅರ್ಥೈಸಿ ನಡೆಯೋ ಕಾಯಕ ನಮದಾಗಲೆ
ಭವಿಷ್ಯದ ಕನಸಿನ ಗುರಿಯ ಪಯಣಕೆ||
ಚಂದನದ ತ್ಯಾಗ ಹುಟ್ಟಲಿ ನಮ್ಮಿಬ್ಬರಲೆ
ಒಂದಾಗಿ ಅನುಭವಪಾಠವ ನೀಡುವ ಜಗಕೆ||

ಹಾಲ್ಗಡಲ ತಿಳಿಯಂತೆ ಬೆಳದಿಂಗಳ ಬಾಲೆ
ಬೆಳಗೆನ್ನ ಆತ್ಮವನು ಜ್ಯೋತಿಯಾಗಿ ನಭಕೆ||
ವಿಧಿಯ ನಾವಿಕನೂರುಗೋಲು ಇರಲೆ
ಸಂಸ್ಕಾರ ಕಡಲ ಮೇಲೆ ಸೇರಲಾಚೆ ದಡಕೆ||

ನಾನು ನೀನು ಆನು ತಾನು ಒಂದಾಗಿ ಸಾಗಲೆ
"ತೆಪ್ಪದಲಿ ಸಾಗೋಣ ಸ್ಪರ್ಶದಲಿ "||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು

: ೩೯೮. "ನಮ್ಮ ಸಹಿಷ್ಣುತೆ"

ಎಂತಹಾ ಚಿಂತನೆ ಸರ್ವಗುಣ ನಮ್ಮನೆ
ಜಗತ್ತಿನತೀ ದೊಡ್ಡ ಸಂವಿಧಾನ ಕಲ್ಪನೆ||
ಮಾನವಕೋಟಿಗೆ ಐಕ್ಯತೆಯ ದೀವಿಗೆ
ಧರ್ಮಸಹಿಷ್ಣುತೆಯ ಪಾಠವು ಬದುಕಿಗೆ||

ಸಾವಿರ ಭಾಷೆಯ ಸಾವಿರ ಸಂಸ್ಕೃತಿಯ
ಒಂದೇ ಸೂರಡಿ ಕಲೆತರು ಸಹಬಾಳ್ವೆಯ||
ವಿವಿಧತೆ ಮಡಿಲಲಿ ಕಾನೂನಿನೇಕತೆ
ಮಮತೆಯ ಮಡಿಲಲಿ ಸಲಹುವ ಮಾತೆ||

ಪ್ರಜಾಪ್ರಭುತ್ವ ನಮ್ಮಯ ಮಂತ್ರವು
ಪ್ರಜೆಗಳ ಕೈಯಲಿ ದೇಶದ ಭವಿಷ್ಯವು||
ಹಕ್ಕುಗಳ ತೋರಣ ಕರ್ತವ್ಯ ಕಾರಣ
ನಿರ್ದೇಶಕ ತತ್ವವು ಬಾಳ್ವೆಯ ಕಿರಣ||

ಸ್ವಾತಂತ್ರ್ಯ ಸಮಾನತೆ ನಮ್ಮೆಲ್ಲರ ಘನತೆ
ಸಾರ್ವಭೌಮತೆ ಜಾತ್ಯತೀತ ಸುರಕ್ಷತೆ||
ಹೋರಾಟದ ಫಲವು ಅಂಬೇಡ್ಕರ್ ಛಲವು
ಸಕಲ ಜೀವಿಯ  ಅನಂತ ಆತ್ಮಬಲವು||

ಸಾಮಾಜಿಕ ನ್ಯಾಯವು ದೀನರ ದೀಪವು
ಬಡವ ಬಲ್ಲಿದ ತಾರತಮ್ಯಕೆ ಮಾರಕವು||
ಸಾಮಾಜಿಕ ಪಿಡುಗನು ತುಳಿಯುವ ದೈವವು
ಗಣರಾಜ್ಯದ ನೀತಿಯ ಪವಿತ್ರ ಮಂತ್ರವು||

ಪಂಡಿತ ಪಾಮರರ ಅರಿವಿನ ಫಸಲಿದು
ಧರೆಯೊಳು ಭ್ರಾತೃತ್ವದ  ಗಂಡೆದೆ ಕೂಸಿದು||
ತಿದ್ದಿತೀಡಿ ಸರ್ವರೊಪ್ಪ ಗಂಧದ ಕೊನರಿದು
ನಮ್ಮ ಸಂವಿಧಾನ ಜಗಕೆ ಮಾದರಿಯಾದುದು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು.


೪೦೦. "ಜಯ ಕನ್ನಡ ಮಾತೆ"

ಜಯತು ಜಯವೀ ಕನ್ನಡ ನಾಡಿಗೆ
ಜಯವು ಮುಡಿಗೇರಲಿ ಭುವನದ ಮಾತೆಗೆ||
ಹಂದರವೀ ಸರ್ವರ ಐಕ್ಯದ ಬಾಳಿಗೆ
ಚಂದನವೀ ಶ್ರಮಿಕರ ತ್ಯಾಗದ ದೀವಿಗೆ||ಜಯ||

ಭುವನೇಶ್ವರಿ ಮಣಿಹಾರದ ನದಿಯೇ
ಸಂಪತ್ಭರಿತ ಕಾನನ ಚೆಲುವಿನ ಗಿರಿಯೇ||
ಸಹ್ಯಾದ್ರಿಯ ಸೆರಗಲಿ ಪಾಮರ ಪೊರೆಯೇ
ಸಾಹಸ ಶೌರ್ಯಕೆ ಕೊಡಗಲಿ ದುಡಿಯೇ ||ಜಯ||

ಪಂಪ ರನ್ನ ಪೊನ್ನ ಜನ್ನ ಜನ್ಮವೆತ್ತ ಬೇರಲಿ
ಗಗನಚುಂಬಿ ಸಾಹಿತ್ಯ ವೃಕ್ಷವು ಬೆಳೆಯಲಿ||
ಹಳೆಮನೆ ಹೊಸಮನೆ ಬೆರೆಯುತ ಸಾಗಲಿ
ನಡುಮನೆ ಹಬ್ಬದಿ ಕನ್ನಡ ದಿಬ್ಬಣ ಹೊರಡಲಿ||ಜಯ||

ಮೈಮನ ಸೆಳೆಯುವ ಬ್ರಾತೃತ್ವದ ಪಾಠ
ಕಪಟವನರಿಯದ ತಾಯ ಶಾಂತಿಯ ತೋಟ||
ಸಹಬಾಳ್ವೆಯ ಕಡಲಲಿ ನಮ್ಮಯ ಆಟ
ಮಾನವೀಯ ಮೌಲ್ಯದಿ ತಾಳ್ಮೆಯ ನೋಟ||

ಕನ್ನಡತೇರಿಗೆ ತ್ಯಾಗದ ಚಕ್ರವನಿರಿಸಿ
ನಂಬಿಕೆ ಕೀಲಿಯ ಅದರಲಿ ಸಿಕ್ಕಿಸಿ||
ಒಗ್ಗಟ್ಟಿನ ಮಂತ್ರದ ಹಗ್ಗವನು ತರಿಸಿ
ಸಗ್ಗವ ಮಾಡುತ ರಥವನು ಪ್ರೀತಿಲಿ ಎಳೆಯಿಸಿ||

ಗಂಧವ ಬೆಳೆಯುವ ಚಿನ್ನದ ನೆಲದಿ
ಸುರಲೋಕವನೇ ಇಳಿಸಿದೆ ಮಲೆನಾಡ ಸನ್ನಿಧಿ||
ವಿಶ್ವದೆಲ್ಲೆಡೆ ಮಾನವತ್ವ ಬೆಸೆಯುವ ಕಾರ್ಯದಿ
ಕವಿಮನ ಚಿಂತನ ಅನಂತನಾಗಿಹ ಜಗದಿ||

ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು.

 ೬೦೨. "ಕಡಲ ಒಡಲ ತೀರ"

ದೂರ ದೂರವು ನಿನ್ನ ಚಿತ್ತವು
ಅನಂತ ತೀರವು ಅಂತ್ಯವಿಲ್ಲವು
ನಿಂತು ನೋಡಲು ನಯನ ಸಾಲವು
ನೀಲಿ ಗಗನವು ನೀಲಿ ತೀರ ತೀರವು
ನೀಲ ಲೋಕದ ಮಿಲನ ಜಾಲವು||

ಮೇರೆಯಾಚೆಗೂ ಮೀರಿ ಬೆಳೆದವು
ಹೃದಯದಲೆಗಳ ಮಿಡಿತ ತುಡಿತವು
ಅಂತ್ಯವಿಲ್ಲದ ಆಸೆಯಲೆಗಳ ಬಿಂಬವು
ಏರಿಳಿತದ ಬದುಕ ಎದುರು ತಂದವು||

ಮೇಘಮಾಯ್ಕನ ತಾಳಮೇಳವು
ನೆರಳು ಬೆಳಕಿನ ಬದುಕ ತಂದವು
ತನುವ ಹಂದರ ಬಿರಿಯ ತೀರವು
ಅಲೆಗಳೊಡೆತಕೆ ಬಿರಿದು ನಿಂತವು||

ಹೃದಯಸಮುದ್ರದಿ ಎಲ್ಲಾ ಬೆರೆತವು
ನವರಸ ನವಮಾಸ ನವಜಾತ ಮನವು
ಇಲ್ಲೆ ಜಗಳವು ಇಲ್ಲೆ ಉಳಿವಿನ ಸಂಘರ್ಷವು
ಇಲ್ಲೆ ಭಾವವು ಇಲ್ಲೆ ಅರಿವಿನ ಸಹಜೀವನವು||

ಮೇಲೆ ತಿಳಿಯು ಒಳಗೆ ತಾಳಮೇಳವು
ಎಷ್ಟೇ ಮೆರೆದರಲೆಗೆ ಮುಕ್ತಿಯದರ ತೀರವು
ಆವ ಜಾಗ ಆವ ಊರು ಆವ ಜಾತಿ ಬಲವು
ಸಾವಗಂಟೆ ಬಡಿಯುವಾಗ ಎಲ್ಲಾ ಶೂನ್ಯವು||

ಜೀವನದ ಪಯಣದಲ್ಲಿ ಅಂಬಿಗರು ನಾವು
ಇಂಬಿನೊಳು ಸಾಗುವಾಗ ನೆಪಚಿತ್ತ ನಾವು
ಎಲ್ಲರೊಳು ಚಿಗುರಲಿ ಆಂತರ್ಯದೊಲವು
ಬಾನಂಗಳ ಸಾಗರ ಬೆರೆಸಿ ನೀಲಿ ವರ್ಣವು||

ಮರಳಿ ಮನೆಯ ಮರುಳರು ನಾವು
ಕರಗೋ ಬದುಕಲೂ ಮೆರೆದು ನಿಂತೆವು
ಸುನಾಮಿ ತೀರದ ತಿರುಕರೋ ನಾವು
ಅರಿತು ಬಾಳದೇ ಸ್ವಾರ್ಥದರಮನೆ ಕಟ್ವೆವು||

ಎಷ್ಟು ಅರಿತರೇನು ಬಂತು ಕಡಲಾಳವು
ಅರಿವಿಗೆ ನಿಲುಕದ ವಿಸ್ಮಯ ಜೀವನವು
ನಾಲ್ಕು ದಿನದ ಯಾನದಿ ನಾವು ನೀವು
ನೆನಪಿನ ಗುರುತು ಬಿಟ್ಟು ಹೊರಟೆವು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ.

೪೦೩. "ಮುಂಜಾನೆ ಗೆಳತಿ"

ಬಿಸಿಯುಸಿರ ಸ್ಪರ್ಶದಲೂ ಚಳಿರಾಯನಾರ್ಭಟ
ಮೈಯನ್ನಾವರಿಸಿ ಕೊಡುತಿಹನು ಬಲು ಕಾಟ||
ಶುಕಪಿಕದ ಮೌನದಲೂ ತಿಳಿಗಾಳಿ ಹಾಡು
ತರುಲತೆಯ ತಿಳಿಸದ್ಧು ತಂಪಾದ ಪಾಡು||

ಬೆಂಬಿಡದೆ ಬೀಸಿತ್ತು ಆ ಚಾದರದೊದಿಕೆ
ಕೊಸರಾಡಿದರೂ ಬಿಡುಗಡೆಯಿಲ್ಲ ಈ ಮನಕೆ||
ಮಂಜಿನಮಜ್ಜನದಿ ಮಿಂದೆದ್ದ ಮೂಡಣಕದವು
ಒಳನುಗ್ಗಲು ಹವಣಿಸಿದೆ ಜಲಬಿಂಬದ ಛಲವು||

ಸರಸವೋ ಸಮರಸವೋ ಈ ಅಪ್ಪುಗೆಯಲ್ಲಿ
ಅವನಿಗೂ ಆಸೆತಾನೆ ಬಸಿರಾಗಿದೆ ಇಲ್ಲಿ||
ಮುಂಗುರುಳ ತುಂಟಾಟದಿ ಸನ್ನೆಗಳ ಮಾಲೆ
ಹನಿಹನಿಯು ಮುತ್ತಾದವು ಹೊಳೆವ ಕಿರಣಸಾಲೇ||

ಹಳ್ಳಿಮನ ಮಳ್ಳಿಮೈ ಜಗ್ಗಲಿಲ್ಲ ಚಳಿಗೆ
ತಣ್ಣೀರಿನ ತೋಟದಲ್ಲೂ ಹೂಬಿಟ್ಟವೀ ನಗೆ||
ಎಲೆಎಲೆಯ ಮೇಲಿನಿಂದ ಹನಿಜಾರುವಾಗ
ಅಧರಗಳ ಬೀಗವು ಕಳೆದೋಗಿರುವಾಗ||

ಅದುರುತಿಹ ತುಟಿಗಳ ಸರಗಮಪ ಗಾನ
ಭಾಸ್ಕರನ ಸ್ಪರ್ಶದಿ ಅವನಿ ಮಧುಸ್ನಾನ||
ಸಗ್ಗವೇ ಸುಗ್ಗಿ ಮರೆತು ಬಗ್ಗಿ ನೋಡುತಿರಲು
ಹಿಗ್ಗಿರಲು ಜಗ್ಗದೇ ಸಮರಸದಾ ಮುಗಿಲು||

ಹಾಲ್ಗೆನ್ನೆ ಹಾಲ್ಜೇನು ಹಾಲ್ಕಡಲ ಸ್ಪರ್ಶಕೆ
ಕುಠನಾಡಿ ನಲುಗಿರಲು ತಂಪೆಲರ ಸೋಕಿಗೆ||
ಧರೆಯುಡುಗೆ ರಂಗೇರಿ ಕಾಮದ ಓಕುಳಿಲಿ
ಬಿಸಿಯುಸಿರ ಹಬ್ಬದಲಿ ಸಿಹಿಮಂಥನ ನಡೆಯಲಿ||

ರೋಮಾಂಚನ ರುಧಿರನರ್ತನದ ಆಲಿಂಗನ
ಉಡದಿಡಿತದಿ ಬಿಡಲಾಗದ ಬಾಂಧವ್ಯದ ಚುಂಬನ||
ಅಮರವಾಗಲಿ ಪ್ರೀತಿ ಧರೆಪ್ರಕೃತಿ ರೀತಿ
ಅನಂತಸತ್ಯ ದಾಂಪತ್ಯ ಕರಗದಿರಲೆಂದೂ ಪ್ರತೀತಿ||

"ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ. "

೪೦೪. " ಮಹಾಭಕ್ತ ದಶಾನನ"

ದಶಶಿರಸ್ಸು ದಶತೇಜಸ್ಸು ಮಹಾಭಕ್ತಾಗ್ರಣಿ
ಶಿವಭಾವೇ ಶಿವಲಿಂಗೇ ಆತ್ಮದಿ ನೆಲೆಯಾದೆ ನೀ||
ಅಸುರಕುಲತಿಲಕ ಧರ್ಮಪರಿಚಾರಕ ಲಂಕೇಶ
ಬ್ರಹ್ಮಮಾನಸೇ ಬ್ರಹ್ಮವರಪುಷ್ಠೇ ಅಸುರೇಶ||

ಅಮೃತಕಳಶ ವಕ್ಷಸ್ಥಳದಿ ಧರಿಪನೇ ರಾವಣ
ಬುದ್ಧಿಗೆ ಮನಸನಿಟ್ಟು ಕಂಗೆಟ್ಟು ನಿಂದನಾ||
ಸೋದರಿ ವಾತ್ಸಲ್ಯ ಮನವ ಮಂಕಾಗಿಸೆ
ಜಾನಕಿ ಸೌಂದರ್ಯ ಬುದ್ಧಿಯ ಮರ್ಕಟವಾಗಿಸೆ||

ಪೆಣ್ಣಶಾಪ ಪಾವಿತ್ರ್ಯ ತಾಪ ಧರ್ಮಾಂಧನಾಗಿಸೆ
ಹಟತೊಟ್ಟ ಛಲವಾಧಿ ದರ್ಪದಿ ಬಂದಿಸೆ||
ಸ್ವಯಂವರ ಸೇಡಿಗೆ ಪತಿತೆಯ ಕಾಡಿದ ದುರ್ಮುಖ
ಅಧರ್ಮ ಪಥತುಳಿದನಾ ಧರ್ಮಿದಶಮುಖ||

ಮುಟ್ಟಲಿಲ್ಲ ಎಳೆದಾಡಿ ಅವಳ ಪೀಡಿಸಲಿಲ್ಲ
ಅವಳಾಕಿದ ಸವಾಲನು ಆಲಂಗಿಸದಿರಲಿಲ್ಲ||
ಹೆತ್ತವರ ತೃಪ್ತಿಗೆ ಶಿವನಾತ್ಮಲಿಂಗ ತಂದ ಮಲ್ಲ
ಹರನ ಹೃದಯದಿ ಪರಮಭಕ್ತನಾದನಲ್ಲ||

ಧರ್ಮತಿಲಕನಾದರೂ  ಸ್ತ್ರೀಮೋಹ ಬಿಡಲಿಲ್ಲ
ಭಕ್ತನಾದರೂ ಲೋಭವ ತಾ ಗೆಲ್ಲಲಿಲ್ಲ||
ಅಹಂಭೂಷಿತ ವ್ಯಾಮೋಹಬಲವು ಸಲ್ಲ
ಕಡೆಗೆ ತನ್ನತಾ ಗೆಲ್ಲದೇ ಎಲ್ಲಾ ಬಿಟ್ಟು ಹೋದನಲ್ಲ||

ಹನುಮನ ಬುದ್ಧಿವಾದಕೂ ಬಗ್ಗಲಿಲ್ಲ
ವಿಭೀಷಣನ ಸಂಸ್ಕಾರಕೂ ಸೋಲಲಿಲ್ಲ||
ಮಂಡೋದರಿ ಪಾತಿವ್ರತ್ಯವೂ ಗೆಲ್ಲಲಿಲ್ಲ
ಧರ್ಮದ ಮುಂದೆ ದರ್ಪ ಕಡೆಗೂ ನಿಲ್ಲಲಿಲ್ಲ||

ಧರೆಗೆ ನೀ ಮಾದರಿಯಾಗಿ ಚಿರವಾದೆ
ಭಕ್ತನಾದರೂ ಹರಿಷಡ್ವರ್ಗವ ಗೆಲ್ಲದಾದೆ||
ಪುರುಷೋತ್ತಮನೆದುರು ಪ್ರಾಣ ನೀಡಿದೆ
ಲೋಕದಿ ಸ್ತ್ರೀಮೋಹದ ಫಲವ ಸಾರಿದೆ||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು

ಕಾವ್ಯಸ್ಪಂದನಾ ಕವನ ಸ್ಪರ್ಧೆಗಾಗಿ

೪೦೫ "ನನ್ನ ಬವಣೆ ನನ್ನ ಬೆನ್ನು"

ನಾನೊಬ್ಬ ರೈತ ಜಗಕನ್ನದಾತ
ಏನೆಂದು ಹೇಳಲಿ ನನ್ನ ಚರಿತ||
ಬರಗಾಲಕ್ಕಾಗಿ ಆಮಂತ್ರಣವಿತ್ತೆ
ಮರಗಿಡವನ್ನೆಲ್ಲಾ ಕಡಿದುಬಿಟ್ಟೆ||ನಾ||

ಭೂತಾಯಿ ಗರ್ಭವ ಕೊರೆದುಬಿಟ್ಟೆ
ಮಳೆರಾಯಗೆ ವಿಚ್ಚೇದನ ಕೊಡಿಸಿಬಿಟ್ಟೆ||
ನನ್ನ ಪ್ರಾಣಕೆ ನಾನೇ ಅಂತ್ಯವಾಡಿಬಿಟ್ಟೆ
ಉಸಿರುಳಿಸಲು ಗುಳೇ ಹೊರಟ್ಟುಬಿಟ್ಟೆ||

ಗಗನನೋಡುತ ಗರಬಡಿದಂತೆ ಕೂತುಬಿಟ್ಟೆ
ನಂಬಿದ ಜೀವಗಳ ಬೀದಿಗೆ ತಳ್ಳಿಬಿಟ್ಟೆ||
ದಳ್ಳಾಳಿ ಮೋಸಕ್ಕೆ ಬಾಯ್ ಬಾಯ್ ಬಿಟ್ಟೆ
ಬಸಿರಾಗದ ಧರೆಯ ಮಾರಿ ಊರುಬಿಟ್ಟೆ||

ಅನ್ನವನುಂಬುವರು ನಮ್ಮನ್ನು ಮರೆತರು
ನಮ್ಮುಸಿರ ಬೆವರಲಿ ಬೇಳೆಯ ಬೇಯ್ಸಿದವರು||
ಬುವಿಯನು ಬಿಟ್ಟು ಚಂದ್ರನಂಗಳ ಸೇರಿದರು
ಹಗಲುಗನಸಿನ ಶತಮೂರ್ಖರವರು||

ನೀರಿಲ್ಲದೇ ಜಗದಿ ಎಲ್ಲಾ ಶೂನ್ಯವು
ಅಂಬಲಿ ಕೂಳಿಗೂ ಹೋರಾಟ ಮಾಡ್ವೆವು||
ಮೂಖಜೀವಿಯ ವೇದನೆಯ ನೋಡೆವು
ದೇಶದ ಬೆನ್ನೆಲುಬು ಮುರಿದಿದೆ ಬರವು||

ನಮ್ಮ ತಪ್ಪನು ನಾವು ಅರಿತಿರುವೆವು
ನೀವೂ ಬನ್ನಿ ಎಲ್ಲಾ ಅನ್ನದಾತರಾಗ್ವೆವು||
ಮುಂದೆಂದೂ ಬರಗಾಲ ಸುಳಿಯದಂತೆ ಕಾಯ್ವೆವು
ಅವನಿಯ ಮಡಿಲು ಹಸಿರಾಗಿ ಮಾಡ್ವೆವು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ.

: ೪೦೭ "ಮಮತೆಯ ಮಡಿಲು

ಅದೆಷ್ಟು ಬಾರಿ ಹೊದ್ದಿರುವೆ ನಿನ್ನೊಡಲ ನಾನು
ಅದೆಷ್ಟು ಬಾರಿ ಜರಿದಿರುವೆ ಅರಿಯದೇ ನಿನ್ನನು||
ಅದೆಷ್ಟು ಬಾರಿ ಕಮರಿಸಿದೆ ನಿನ್ನಾಸೆಗಳನು
ಅದೆಷ್ಟು ಬಾರಿ ನೋವುಣಿಸಿದೆ ಸರೀಕರೆದುರು ನಾನು||

ಅದೆಷ್ಟು ಕಹಿಯನುಣ್ಣಿಸಿದೆ ಸ್ವಾರ್ಥಕ್ಕಾಗಿ ನಾನು
ಅದೆಷ್ಟು ಜ್ವಾಲೆ ಉಕ್ಕಿಸಿದೆ ನಿನ್ನೊಡಲಲಿ ನಾನು||
ಅದೆಷ್ಟು ತಿರುವು ತಿರುಗಿಸಿದೆ ನಿನ್ನ ಬದುಕ ನಾನು
ಅದೆಷ್ಟು ಸಹನೆ ಪರೀಕ್ಷಿಸಿದೆ ನಿನ್ನ ಸಮವಲ್ಲದವನು||

ಅದೆಷ್ಟು ಗೆಲುವು ನೀಡಿದೆ ನನಗಾಗಿ ನೀನು
ಅದೆಷ್ಟು ಸೇವೆಗೈದೆ ಫಲಾಫಲವೆಣಿಸದೆ ನೀನು||
ಅದೆಷ್ಟು ಕರುಣೆ ನಿನ್ನದು ಕಡಲಿನಂತೆ ನೀನು
ಅದೆಷ್ಟು ಮಮತೆ ತುಂಬಿದ ಮಮತೆಮಡಿಲು ನೀನು||

ಅದೆಷ್ಟು ತ್ಯಾಗ ನಿನ್ನದು ಸಂಸಾರನಾವೆ ನೀನು
ಅದೆಷ್ಟು ಒಲವು ತುಂಬಿದ ಪ್ರೀತಿಧರೆಯು ನೀನು||
ಅದೆಷ್ಟು ರಹಸ್ಯಾಂತರಂಗ ತಾರಾಗಣ ನೀನು
ಅದೆಷ್ಟು ಪ್ರಫುಲ್ಲ ಮಂದಸ್ಮಿತ ಪೂರ್ಣಚಂದ್ರ ನೀನು||

ಅದೆಷ್ಟು ನಂಬಿಕೆ ನಮ್ಮೊಳಗೆ ಕರುಳಬಂಧವೇನು
ಅದೆಷ್ಟು ಸಹಿಯ ಚಿಲುಮೆಯು ಬದುಕು ಹಾಲುಜೇನು||
ಅದೆಷ್ಟು ಭರವಸೆ ತಾಯಿ ಕ್ಷಮಯಾಧರಿತ್ರಿ ನೀನು
ಅದೆಷ್ಟು ಮುಗ್ಧೆ ಪಾಪನಾಶಿನಿ ಪಾವನಗಂಗೆ ನೀನು||

ಅದೆಷ್ಟು ಹೇಳಿದರೂ ಮುಗಿಯದ ಅನಂತಗೀತೆ ನೀನು
ಅದೆಷ್ಟು ನೆನೆದರೂ ಹಿಗ್ಗದ ಪ್ರೇಮಮೂರ್ತಿ ನೀನು||
ಅದೆಷ್ಟು ಗುರುತು ಇದ್ದರೂ ಸೃಷ್ಟಿಯ ಹೆಮ್ಮೆ ನೀನು
ಅದೆಷ್ಟು ಬಾರಿ ಹೇಳಲಿ ನನ್ನ ಹೆತ್ತತಾಯಿ ನೀನು||

ರಂಗನಾಥ ಕ. ನಾ. ದೇವರಹಳ್ಳಿ. ಶಿಕ್ಷಕರು. ವಿಶ್ವನಗರ.


೪೦೯ " ನಲುಗಿದಳಾ... ಭಾರತಿ! "

ಇದು ಪುಣ್ಯತ್ಮರುದಿಸಿದ ನವ ಭಾರತ
ಇದು ವಂದೇಮಾತರಂ ಮಂತ್ರದ ಅಭಿಮತ||
ಇದು ಸರ್ವ ಹೃದಯದ ಒಲವಿನ ಮಿಡಿತ
ಇದು ಸರ್ವ ಸೇವಾ ಸೃಷ್ಟಿಯ ಜನಹಿತ||

ಮತಪಂಥಗಳ ಕೇಕೆಯಲಿ ನರಕವಾಯಿತಾ
ಜಾತಿರಾಜಕಾರಣದಿ ಉಸುರುಗಟ್ಟೀತಾ||
ಅಜ್ಞಾನದಂಧಕಾರದಿ ಗುರುತು ಮರೆತೀತಾ
ಸ್ವಾರ್ಥದ ಬೇಳೆಯು ಕಣ್ಣೀರಲಿ ಬೆಂದೀತಾ||

ನೂರುಪಥಳಿದ್ದರೂ ನಮಗೆ ಗುರಿಯೊಂದೇ ಅಲ್ಲವೇ
ಭಯೋತ್ಪಾದನೆ ಮುಳ್ಳ ಮುರಿಯಬೇಕಲ್ಲವೇ||
ಆತಂಕವಾದಿಗಳ ಸೊಲ್ಲಡಗಿಸಬೇಕಲ್ಲವೇ
ಮೂಲಬೇರನು ಕಿತ್ತು ವಿಷಗಿಡ ಸಾಯಿಸಬೇಕಲ್ಲವೇ||

ರಕ್ತಬೀಜಾಸುರರ ಎಡೆಮುರಿಕಟ್ಟಬೇಕಲ್ಲವೇ
ನುಸುಳುಕೋರರ ಕತ್ತ ಹಿಸುಕಬೇಕಲ್ಲವೇ||
ಹಿತ್ತಾಳೆ ಕಿವಿಗೆ ಹೆತ್ತುಹೊತ್ತ ಪಾಠ ಹೇಳಬೇಕಲ್ಲವೇ
ದಿಟ್ಟತನದಿ ನಿಂತು ನಾವು ಭಾರತೀಯರೆನ್ನಬೇಕಲ್ಲವೇ||

ಶಕುನಿ ಮಂಥರೆಗಳ ಸ್ವರವ ನಿಲ್ಲಿಸಬೇಕಲ್ಲವೇ
ಆಳುವವರ ಕಾಳಜಿ ನಾವೂ ಅರಿಯಬೇಕಲ್ಲವೇ||
ನಮ್ಮ ಸಹೋದರ ನಾವು ರಕ್ಷಿಸಬೇಕಲ್ಲವೇ
ನಮ್ಮೊಡನಿರುವ ಮೀರಸಾಧಿಕ್ಕರ ತೊಲಗಿಸಬೇಕಲ್ಲವೇ||

ಅನ್ಯರ ಬಲವಂತ ಅತ್ಯಾಚಾರ ತಡೆಯಬೇಕಲ್ಲವೇ
ನಮ್ಮವರನು ನಾವು ಅನವರತ ಕಾಯಬೇಕಲ್ಲವೇ||
ಸಹಿಷ್ಣುತೆಯ ಗೀತೆ ಜಗಕೆ ಸಾರಬೇಕಲ್ಲವೇ
ಬರುವ ಅತಿಥಿಗಳ ಸತ್ಕರಿಸಬೇಕಲ್ಲವೇ||

ಎಲ್ಲವನು ಸೈರಿಸುವ ಪ್ರಜಾಪ್ರಭುತ್ವ ನಮ್ಮದಲ್ಲವೇ
ಪೌರತ್ವ ನಮ್ಮ ನಿಮ್ಮ  ಅವರ ಹಕ್ಕಲ್ಲವೇ||
ಬದುಕಿ ಬದುಕಲು ಬಿಡಿ ಮಂತ್ರ ನಮ್ಮದಲ್ಲವೇ
ಅರಿತು ಬಾಳುವ ಕರುಣೆಯ ನಾಡು ನಮ್ದಲ್ಲವೇ||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ.

೪೧೫. "ಕ್ಷಮಯಾಧಿಪತಿ"

ಧರೆಗೆ ದುರ್ಜನರು ಮಿಗಿಲುಗೊಂಡಾಗ
ಅವತರಿಸಿದೆ ನೀ ಶಾಂತಿಧೂತನಾಗ||
ಎಲ್ಲೆಲ್ಲೂ ಧರ್ಮಾಂಧತೆ ಮುಗಿಲೇರಿದಾಗ
ಸತ್ಯದ ಬೆಳಕು ಹರಿಸಲು "ಏಸು" ಧರೆಗಿಳಿದನಾಗ||

ಬೆತ್ಲೆಹ್ಯಾಮ್ ಕೊಟ್ಟಿಗೆಯಲಿ ಜನನವಾಗಿ
ಬೆಳೆದನು ಸಂತ ಜನಾನುರಾಗಿಯಾಗಿ||
ಯಹೂದಿನಾಡಲಿ ಸಂಕಟಹರ ಫಕೀರನಾಗಿ
ನೀತಿನೇಮ ಬೀಜ ಬಿತ್ತಿದನು ಭವಿಷ್ಯಕ್ಕಾಗಿ||

ರೋಮ್ ರಾಜ ದುಷ್ಟರ ಕ್ಷಮಿಸೆಂದನು
ಶಿಲುಬೆಯೊತ್ತರೂ ಚಿತ್ತಚಂಚಲನಾಗದಿದ್ದನು||
ಚಾಟಿಯೊಂದೊಂದು ಏಟಲೂ ದೈವವ ಕಂಡನು
ಎಲ್ಲರನೂ ಮನ್ನಿಸೆಂದು ದೇವನ ಬೇಡಿದನು||

ಮೊಳೆಗನೊಡದರು ನೋವ ಸೈರಿಸಿದನು
ಇವರಜ್ಞಾನ ಅನೀತಿ ಅಧರ್ಮವ ತೊಲಗಿಸೆಂದನು||
ರುಧಿರಕಾರಿದರೂ ದೃತಿಗೆಡದ ಪುಣ್ಯಾತ್ಮನು
ಎಲ್ಲರನು ಮನ್ನಿಸೆಂದ ಕ್ಷಮಯದಾತನು||

ತಾರೆಯಂತೆ ಮನಜರೆದೆಗೆ ಬೆಳಕು ತಂದನು
ಸದ್ಗುಣಸಂಪನ್ನನಾಗಿ ಪ್ರೇಮಬಂಧ ಬೆಸೆದನು||
ಇಹಪರದ ಏಳ್ಗೆಗೆ ಸಂದೇಶವೇ ತಾನಾದನು
ಲೋಕಕೆ ಮಮತೆಯ ಸಂಜೀವಿನಿ ತಾನಾದನು||

ನೋವನೇ ಉಂಡು ನೋವಲ್ಲೇ ಬೆಂದು ಹೆಮ್ಮರವಾದನು
ತನ್ನಡಿಯಲಿ ಜೀವಸಂಕುಲಕೆ ಫಲವನು ನೀಡ್ವನು||
ಆತ್ಮಶುದ್ಧಿಗೆ ಅನಂತಸಿದ್ಧಿಗೆ ವರವೇ ಆದನು
ಸರ್ವರೊಳಗೊಂದಾಗೋ ಬಂಧ ಕೊಟ್ಟನು||

ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ.


"ಸರ್ವರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು "
















































77. ಬೆಳಗಲಿ ದಿವ್ಯಜ್ಯೋತಿ. 

ಬೆಳಗಲಿ ಬೆಳಗಲಿ 
ದಿವ್ಯ ಜ್ಯೋತಿಯು! 
ಕರುಣೆಯ ಕಡಲಲಿ
ತೇಲಿ ನೌಕೆಯು!! ಬೆ!! 

ಪ್ರೀತಿಯೆಂಬ ಎಣ್ಣೆಯ 
ನಲ್ಮಯಿಂದ ಸೇರಿಸಿ!!
ಪ್ರೀತಿ ಕಟ್ಟೆ ಒಡೆಯದಂತೆ
ಸುತ್ತ ನೀತಿ ಗೋಡೆ ಇರಿಸಿ!!ಬೆ!! 

ಸತ್ಯಜ್ಯೋತಿ ಬೆಳಗಿಸಿ
ಅಂಧಕಾರ ತೊಲಗಿಸಿ!! 
ತ್ಯಾಗವೆಂಬ ಬತ್ತಿಯ 
ಒಲವಿಂದ ಜೋಡಿಸಿ!!ಬೆ!! 

ಬೆಳಗಲಿ ಬೆಳಗಲಿ ಭಾಗ್ಯಜ್ಯೋತಿಯು
ಅಹಂಕಾರ ಓಡಿಸೋ ಪುಣ್ಯಜ್ಯೋತಿಯು!! 
ಮೇಲುಕೀಳು ಭೇದಭಾವ 
ಸಮಾನತೆಯ ಸಾರುವ.....!! ಬೆ!! 

ಮೌನವಾಗಿ ಜಗವ ಬೆಳಗಿ
ತನ್ನೊಳಗೆ ತಾನು ಕರಗಿ!! 
ಜಾತಿ ಮತ ವರ್ಣಗಳ
ಮೇರೆಮೀರಿ ಸತ್ಯಬೆಳಗಿ!!ಬೆ!!

ಬೆಳಗಲಿ ಬೆಳಗಲಿ..... ಬೆಳಗಲೀ 
ದಿವ್ಯ ಜ್ಯೋತಿಯು...!!!! 

ರಂಗನಾಥ. ಕ. ನಾ. 



79. (ಅಹಂ) ಆತ್ಮಾವಲೋಕನ 

ಯುದ್ಧಮುಗಿಯೆ ಹದ್ದುಕರೆಯೆ
ಗುಳ್ಳೆನರಿಗಳ ಕೂಗು ಆಗಸವಾವರಿಸೆ!! 
ಎಲ್ಲಿಂದಲೋ ಚೀರಾಟ ಕೀರಲು
ಕಿರುಚಾಟ ನೋವೊಲು ನರಳಾಟ!! 

ಒಳಗಿದ್ದ ನಾನೆಂಬ ನಾನೆ ಕರಗಿ
ಗೆದ್ದೆನೆಂಬ ಗತ್ತು ನೆತ್ತರು ಸೇರಿ!! 
ಮಗನತೊರೆದ ತಾಯಕೂಗು
ಸುತನಗಲಿರ ವ್ಯಥೆಯ ಕೂಗು!! 


ಕುಲಪುತ್ರನ ಮರೆತಭಾವವು
ಕನಸದೊರೆಯ ಕರದಿ ಮಗುವು!! 
ಮುಂಡವಿರದ ರುಂಡವೊಂದುಕಡೆ
ಚಂಡರಾದಿಯಾಗಿ ಕಾಳಿಕರದಿ!! 

ಬಿಸಿರಕ್ತವ ಬಸಿದು ಕುಡಿವ ತೋಳ
ಕರುಳನೆಲ್ಲ ಗುಡ್ಡೆಮಾಡೆ ಗರುಡ!! 
ಕಣ್ಣುಗಳಲಿ ಕರುಣೆಯಿಲ್ಲದೋಯ್ತೆ
ಕರಗಳಲಿ ಪ್ರೀತಿ ಎಲ್ಲಿ ಹೋಯ್ತೇ!! 

ನಿಷ್ಕರುಣೆಯ ಕ್ರೂರಕಣ್ಣ 
ತೆರೆದು ಅಹಂ ಪೊರೆಯ ಕಳಚಿ!! 
ಪಡೆದ ಲಾಭ ಪಡೆಯ ಕಳೆದು
ಕೊಂಡುಹೋದದೇನು ನಾನು!! 

ಮಗನ ಸಾವು ಹೆತ್ತವರಿಗೆ ಶಾಪ
ಅರೆಸಾವು ಗೆಳತಿಗಗ್ನಿ ಆಹುತಿ ಪಾಪ!! 
ಯಾರ ಸಾವು ಏನತಂತು ಕುರೂಪ
ಜೀವನಕ್ಕೆ ಪಾಪದ ಗಂಟು ಬೇಡಪ್ಪಾ!! 

ನಾನೆಂಬ ಅಹಂಕಾರ ನನ್ನನ್ನೇ ದಹಿಸಿತು
ಪ್ರೀತಿಯೆಂಬ ಮಮಕಾರ ಜಗಬೆಳಗಿತು!! 
ಲೋಕವನ್ನೇ ಗದ್ದವನು ಸೋತುಕೂತು
ಕರಮುಗಿದು ಬೇರೆ ಕ್ಷಮೆಯೇನಿಂತು!! 

ವಂಗ ಮಗಧ ಸೌರಾಷ್ಟ್ರ ಪತಿ
ಮೌರ್ಯಕುಲತಿಲಕ ಧರೆಗಧಿಪತಿ!! 
ಕಳಿಂಗದಿ ಗೆದ್ದು ಸೋತವ ಅಶೋಕ
ಯುದ್ಧ ಪರ್ಯಾಣದ ಪ್ರತಿಜ್ಞೆ ಫಲಕ!! 

ತಾಳಗುಂದದಿ ಶಾಸನ ಬರೆಸಿ
ಶಾಂತಿ ಅಹಿಂಸೆಯ ಮನದಿ ನೆಲೆಸಿ!! 
ಭೌದ್ಧಮತದ ಸಾರವ ಅನುಸರಿಸಿ 
ಸಾರಾನಾಥದಿ ನೆಲೆನಿಂದ ಮೋಕ್ಷವರೆಸಿ!! 

ರಂಗನಾಥ ಕ. ನಾ. ದೇವರಹಳ್ಳಿ.





ನನ್ನೊಳಗಿನ ನಾನು

ನೆರಳಲ್ಲಾ ಬರಿ ನೆರಳಲ್ಲಾ 
ಅವು ಬಳುವಳಿಗಳು!! 
ಹಿಂದಿನ ಪಾಪಕೆ ಮುಂದಿನ
ಬೇತಾಳನ ಕನವರಿಕೆಗಳು!! 

ಮಳೆಚಕ್ರದಂತೆ ಪುನರಪಿ ಜನನ
ಕಾಲಚಕ್ರದಿ ಕಾಡೊ ಆತ್ಮಪಯಣ!!
ಮನದೊಳ ಪಾಪಕೆ ತನುವಿನ ಶಯನ
ಫಲಗಳು ಮಾತ್ರ ಕರ್ಮದ ಮರಣ!! 

ನಿನ್ನೊಡನಿರುವ ನಿನ್ನೊಳಗಿರುವ
ನಿನ್ನನೇ ಕಟಕಟೆಗೆಳೆದು ತರುವ!! 
ನಾನೆಂಬ ಪಿಶಾಚಿ ಸವಾರಿ ಮಾಡುವ
ಕೊನೆಗುಳಿವ ಶೂನ್ಯತೆ ದಾರಿ ತೋರುವ!! 

ಯಾರ ನೆರಳು ಯಾರಿಗೂ ಇಲ್ಲ 
ತನ್ನ ಪ್ರಭೆಯು ತನ್ನದೇಯಲ್ಲ!! 
ಕೆಸರೆರೆಚೋ ಆಟವೇ ಇಲ್ಲ 
ಅರಿತು ನಡೆ ಸ್ವರ್ಗ ಕಾಣಾ- ಶ್ರೀನಾಥ!! 

ರಂಗನಾಥ ಕ.  ನಾ. ದೇವರಹಳ್ಳಿ.

































👤👤👤👤👤👤👤👥👥👤👤👤
50.ಬದುಕಿದು ಜಟಕಾ ಬಂಡಿ! 

ಕಾಸೀಮ ಕೃಷ್ಣ 
ನಡೆಸಿದರಣ್ಣಾ ! 
ಬದುಕಿನ ಪಯಣ 
ಬೆಳೆಸಿದರಣ್ಣಾ!! 

ಎರಡೂ ಚಕ್ರದ 
ನಡಿಗೆಯ ನೋಡಿ! 
ಗಂಡ ಹೆಂಡಿರ
ಪ್ರಗತಿಯ ಜೋಡಿ!! 

ಕೀಲೆಣ್ಣೆಎಂಬ 
ನೀತಿಯ ಬೆರೆಸಿ! 
ನ್ಯಾಯದ ಚಾಟಿಯ                 
ಕೈಯೊಳು ಇರಿಸಿ!! 

ಸಾರಥಿ ಕೈಯೊಳು 
ಜೀವನ ನೀಡಿದೆ! 
ವಿಧಿಸಾಹೇಬ ನಿನ್ನೊಳು
ನನ್ನಯ ಗುರಿಯ ಬೇಡಿದೆ!! 

ಲಗಾಮು ನೀನು
ನನ್ನಯ ಪಾಪಕೆ! 
ಏರು ಇಳಿತಗಳ 
ಸಮಚಿತ್ತದ ಗಾನಕೆ!! 

ನನ್ನಯ ಸ್ಥಾನ 
ಬಂದಾಯ್ತು ಕಡೆಗೆ! 
ಜೀವನಪಯಣ 
ಮುಗಿದಾ ಗಳಿಗೆ!! 

ಸಾಕ್ಷಿಯು ನೀನು 
ಸರ್ವರ ಪಥಕೆ! 
ಜಟಕಾ ಬಂಡಿ
ಜೀವನಕೊಂಡಿ ಜನಕೆ!! 

ರಚನೆ-ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು 
     01/07/2018.

👤👤👤👤👤👤👤👤👤👤👤👤
ಸ್ವಾರ್ಥ ನಮ್ಮ ನಗರ ಜೀವನ! 

ನಾನೆಂಬ ನರಕ ತಳುಕು ಬಳುಕಿನ ತವಕ! 
ಹತ್ತಿಯ ಹಣ್ಣಿನ ನೋಟದ ಕೊಳಕ!! 
ಕಾಂಕ್ರೀಟ್ ಕಾಡಿನಲ್ಲಿ ಹುಡುಕು ಬದುಕ! 
ನಗರಜೀವನವೆಂಬ ಮರೀಚಿಕೆ!! ಪ!! 

ಬೆರಗುಗಣ್ಣಿನ ನೋಟ ನೆಲೆಕಾಣದ ಆಟ! 
ನಂಬಿಕೆಗಳ ಮಾರಾಟ ಪ್ರತಿಭಟನೆ ಕಲ್ಲುತೂರಾಟ!! 
ಭ್ರಮೆಗಳ ಮಾಟ ಕುರ್ಚಿಗಳ ಕಾದಾಟ! 
ನೀರೆಯರ ಕುಡಿನೋಟ ಬಾಳಲೆಲ್ಲಾ ಚೆಲ್ಲಾಟ!! ಪ!! 

ಮರುಕ ಕನಿಕರಕೆ ಜಾಗವಿಲ್ಲ! 
ಸ್ವಾರ್ಥ ಜನರೇ ತುಂಬತುಳುಕಿಹರಲ್ಲ!! 
ಬಂಧನ ನಂಟಿನ ತಂಟೆಯಿಲ್ಲ! 
ವ್ಯವಹಾರವೇ ಜೀವನವಾಯ್ತಲ್ಲ!! ಪ!! 

ನಿನ್ನ ಕೂಗು ಕಾನನದಿ ನಿಂತಂತೆ! 
ನಿನ್ನ ಗೋಳು ಶರಧಿಲಿ ಅತ್ತಂತೆ!! 
ನಿನ್ನ ಬದುಕು ಮೂರನ್ನೂ ಬಿಟ್ಟಂತೆ!
ತಲೆಮೇಲೆ ಕೈಯಿಟ್ಟು ಸುಮ್ನೇಕೆ ಕುಂತೆ!! ಪ!! 

ಬಣ್ಣದ ಹೋಕುಳಿಲಿ ನಿನ್ತನವ ಮಾರಿ! 
ಯಂತ್ರಗಳ ಮಡಿಲಲಿ ಬಿದ್ದಿದ್ದೇ ಜಾರಿ!! 
ಕನಸುಗಳ ಕಥೆಯಲಿ ಮಿಂದೆದ್ದ ನಾರಿ! 
ಸಂಬಳ ಸಾರಿಗೆ ಲೆಕ್ಕಗಳಲಿ ಜೀವನ ಪರಾರಿ!! ಪ!! 

ನೆರಳಿನ ಬದುಕು ನಾಜೂಕಿನ ಸೋಗು! 
ನಡುರಾತ್ರಿ ಕೊಡೆಹಿಡಿದು ನಾನೆಂದು ಬೀಗು!! 
ನೆತ್ತರ ಕುಡುಕರ ಕಾರುಬಾರಲಿ ಕೂಗು! 
ನಮ್ಮರಿಲ್ಲದ ನಾಡಲಿ ಒಂಟಿಯಾಗಿ ಹಸುನೀಗು!!ಪ!! 

ರಚನೆ-ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು.
👤👤👤👤👤👤👤👤👤👤
47.ಮಲೆನಾಡಿನ ವೈಭವ! 

ಮಲೆ ಮಲೆಗಳಲಿ ನೆಲೆಯಾಗಿಹಳು ಕನ್ನಡತಿ! 
ಹಸಿರ್ಸೀರೆಯಲಿ ಸೆರೆಯಾಗಿಹಳು ನಮ್ಮೊಡತಿ!!
ಕಣ್ಣ ಕೊನೆಯಂಚಿನಲಿ ನಿಂತಿಹಳು ಈ ಗರತಿ! 
ಬೆರಗು ಬಿನ್ನಾಣಗಳ ಒಡತಿ ಈ ನಮ್ಮ ರತಿ!! ಪ!! 


ತುಂಗೆ ಶರಾವತಿ ಕರುನಾಡ ಭಾಗೀರಥಿ! 
ಝುಳುಝುಳು ನಾದದಿ ಹಾಡಿನ ಆರತಿ!! 
ಆಗಸದೆತ್ತರ ನಿನ್ನಯ ಶಿಖರ! 
ನೆತ್ತಿಲಿ ಮೋಡ ಮುಸುಕಿನ ಹಂದರ!! ಪ!! 

ಗಿರಿಗೋಪುರ ಚಂದದ ಆಗರ! 
ಮಳೆಕಾಡಿನ ಬಣ್ಣದ ಚಂದಿರ!! 
ಪಕ್ಷಿಗಳ ಕಂಠದಿ ಸಿರಿ ನಿನ್ನಯ ಇಂಚರ! 
ಕವಿಗಳ ತವರು ನಿನ್ನಯ ಕಿನಾರ!! ಪ!! 

ಪಶ್ಚಿಮಘಟ್ಟದಿ ಸೊಬಗಿನ ಬೀಡು! 
ಲೋಕಕೆ ಸಾರಿದೆ ಹಸಿರಿನ ಜಾಡು!! 
ಸಂಪತ್ತಿನ ಆಗರ ನಮ್ಮಯ ಕಾಡು! 
ಬೆಳೆದು ನಿಂತಿದೆ ಗಗನಕೆ ಈ ಕರುನಾಡು!! ಪ!! 

ಜಟಿಜಟಿ ಮಳೆಯಲಿ ಮರೆಯದ ಪಯಣ! 
ತೋಟದ ಸರದಿಲಿ ಅರಳಿದ ನಯನ!! 
ಪ್ರಕೃತಿ ಜೊತೆಯಲಿ ಸೆಣಸಿನ ಗಾಯನ! 
ಮೊಳಗಿದೆ ಮನೆಮನ ಭೂತಚೌಡಿ ನರ್ತನ!! ಪ!! 

ಮಳೆಕಾಡು ಈ ನಮ್ಮ ಮಲೆನಾಡು! 
ಸ್ಪೂರ್ತಿಯ ಸಿಂಚನ ಈ ಮಲೆನಾಡು!! 
ಆದುನಿಕ ನೆರಳಲಿ ಸೊರಗಿದ ಗೂಡು! 
ಚಳುವಳಿ ಚಳಿಲಿ ಮಿಂದೆದ್ದ ಬೀಡು!! ಪ!! 

ರಚನೆ -ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು.
👤👤👤👤👤👤👤👤👤👤👤👤👤👤
ಸ್ವಾರ್ಥ ನಮ್ಮ ನಗರ ಜೀವನ! 

ನಾನೆಂಬ ನರಕ ತಳುಕು ಬಳುಕಿನ ತವಕ! 
ಹತ್ತಿಯ ಹಣ್ಣಿನ ನೋಟದ ಕೊಳಕ!! 
ಕಾಂಕ್ರೀಟ್ ಕಾಡಿನಲ್ಲಿ ಹುಡುಕು ಬದುಕ! 
ನಗರಜೀವನವೆಂಬ ಮರೀಚಿಕೆ!! ಪ!! 

ಬೆರಗುಗಣ್ಣಿನ ನೋಟ ನೆಲೆಕಾಣದ ಆಟ! 
ನಂಬಿಕೆಗಳ ಮಾರಾಟ ಪ್ರತಿಭಟನೆ ಕಲ್ಲುತೂರಾಟ!! 
ಭ್ರಮೆಗಳ ಮಾಟ ಕುರ್ಚಿಗಳ ಕಾದಾಟ! 
ನೀರೆಯರ ಕುಡಿನೋಟ ಬಾಳಲೆಲ್ಲಾ ಚೆಲ್ಲಾಟ!! ಪ!! 

ಮರುಕ ಕನಿಕರಕೆ ಜಾಗವಿಲ್ಲ! 
ಸ್ವಾರ್ಥ ಜನರೇ ತುಂಬತುಳುಕಿಹರಲ್ಲ!! 
ಬಂಧನ ನಂಟಿನ ತಂಟೆಯಿಲ್ಲ! 
ವ್ಯವಹಾರವೇ ಜೀವನವಾಯ್ತಲ್ಲ!! ಪ!! 

ನಿನ್ನ ಕೂಗು ಕಾನನದಿ ನಿಂತಂತೆ! 
ನಿನ್ನ ಗೋಳು ಶರಧಿಲಿ ಅತ್ತಂತೆ!! 
ನಿನ್ನ ಬದುಕು ಮೂರನ್ನೂ ಬಿಟ್ಟಂತೆ!
ತಲೆಮೇಲೆ ಕೈಯಿಟ್ಟು ಸುಮ್ನೇಕೆ ಕುಂತೆ!! ಪ!! 

ಬಣ್ಣದ ಹೋಕುಳಿಲಿ ನಿನ್ತನವ ಮಾರಿ! 
ಯಂತ್ರಗಳ ಮಡಿಲಲಿ ಬಿದ್ದಿದ್ದೇ ಜಾರಿ!! 
ಕನಸುಗಳ ಕಥೆಯಲಿ ಮಿಂದೆದ್ದ ನಾರಿ! 
ಸಂಬಳ ಸಾರಿಗೆ ಲೆಕ್ಕಗಳಲಿ ಜೀವನ ಪರಾರಿ!! ಪ!! 

ನೆರಳಿನ ಬದುಕು ನಾಜೂಕಿನ ಸೋಗು! 
ನಡುರಾತ್ರಿ ಕೊಡೆಹಿಡಿದು ನಾನೆಂದು ಬೀಗು!! 
ನೆತ್ತರ ಕುಡುಕರ ಕಾರುಬಾರಲಿ ಕೂಗು! 
ನಮ್ಮರಿಲ್ಲದ ನಾಡಲಿ ಒಂಟಿಯಾಗಿ ಹಸುನೀಗು!!ಪ!! 

ರಚನೆ-ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು.
👤👤👤👤👤👤👤👤👤👤👤👤👤👤👤

45...ಹೆಣ್ಣೆಂಬ ಅಬಲೆ? 

ಭ್ರೂಣಹತ್ಯೆಯೋಳ್ ಪ್ರಾರಂಭ ಪಾಪ! 
ಹೆಣ್ಮಕ್ಳ ಗೋಳಿಗೆ ಮುಹೂರ್ತ ಕೂಪ!! 
ಅದೇನು ಪೊರೆ ಬಂದಿದೆಯೋ ನಮಗೆ! 
ಆಲದ ಮರಕ್ಕೆ ಶರಣಾಗೋ ನೇಣಿಗೆ!! ಪ!! 

ಖರ್ಚುಗಳ ಲೆಕ್ಕ ಹಾಕುವರು ಪಕ್ಕ! 
ಋಣವೆಂದೇ ತಿಳಿದು ಗರ್ಭಪಾತವಕ್ಕ!! 
ಗಂಡಿನ ಬೆನ್ನತ್ತಿ ಅನಾಥರಾದರೂ! 
ಬಿಡಲಿಲ್ಲ ವ್ಯಾಮೋಹ ಬೆತ್ತಲಾದರೂ!! ಪ!! 

ಶಿಕ್ಷಣದಲ್ಲೂ ನೆಪ ಇನ್ನೊಬ್ಬರ ಮನೆದೀಪ! 
ಓದಲೋದರೆ ರೋಮಿಯೋಗಳ ಆಲಾಪ!! 
ನಿರಾಕರಿಸೆ ಯ್ಯಾಸಿಡ್ ದಾಳಿ ಬಲಾತ್ಕಾರ! 
ಕಾಮುಕ ಶಿಕ್ಷೆ ಇದುವೇ ಗಂಡಿನ ಸತ್ಕಾರ!! ಪ!! 

ಮದುವೆಯೆಂಬ ಪಯಣ ಸುಳಿಯೊಳು ಸಿಕ್ಕವರಂತೆ! 
ವರನೆಂಬ ಬಿಕ್ಷುಕನೇ ಕಾಡುವ ಯಮಕಿಂಕರನಂತೆ! 
ಅನುಮಾನದ ಭೂತ ಹೊಕ್ಕರೆ ಮುಗೀತು! 
ಪ್ರತೀನಡಿಗೆಯು ಧೌರ್ಜನ್ಯದ ಪಾಪಿಗೀತು!! ಪ!! 

ಮನಸ್ಸೆಂಬ ಕುದುರೆಯನ್ನು ನಿಯಂತ್ರಿಸದ ಗಂಡು! 
ಕಟ್ಟಿದನಾಯಿಯಂತೆ ನೋಡುವ ದೃಷ್ಟಿ ಕಂಡು!! 
ಅಡುಗೆಮನೆ ಮನೆಗೆಲಸ ಆಳೆಂಬ ಕೀಳು! 
ಕೈಲಾಗದ ಅಬಲೆ ಕಡಲಾಗ್ನಿಯಾಯ್ತೆ ನಿನ್ನ ಬಾಳು!! ಪ!! 

ತಾಯಿ ತಂಗಿ ಒಡತಿ ಹೆಂಡತಿ ಅವರು!  
ಪಾತ್ರ ನೂರು ಕಾಯಕ ಸಾವಿರಾರು!! 
ತ್ಯಾಗಮಯಿ ತ್ಯಾಜ್ಯವೇಕೆ ಗಂಡಿಗೆ! 
ಎಂತು ಬಿಡುವನೋ ಈ ಅಮಾನವೀಯ ಬಗೆ!! ಪ!! 

ನಾರಿಯಿರುವೆಡೆ ದೈವವಾಸವಂತೆ! 
ವಿಕೃತ ಕ್ರೂರಿ ಮಾನವ ಶೀಲಹರಣ ರಕ್ಕಸನಂತೆ!! 
ಹೆಣ್ಣಿಗೆ ಉನ್ನತ ಸ್ಥಾನ ನೀಡಿದ ದೇಶ ನನದು! 
ನಿನ್ನಿಂದ ಇಂದು ಕರ್ಮಫಲ ಪಡೆದಿಹುದು!! ಪ!! 

ಬದಲಾಗು ಪುರು಼ಷನೇ ಪ್ರಕೃತಿಯಿಲ್ಲದೇ ನೀನಿಲ್ಲ! 
ಅಬಲೆಯಲ್ಲ ಸಬಲೆಯಾಗಿ ಮೆಟ್ಟಿನಿಂತಿಹಳಲ್ಲ!! 
ನಿನ್ನೆತ್ತರಕೆ ಬೆಳೆದು ಶಕ್ತಿಯಾದಳು! 
ಕಣ್ಬಿಡು ಮನುಜ ಆಕೆ ಮನುಕುಲ ಸಲಹುವವಳು!!ಪ!! 

ರಚನೆ -ರಂಗನಾಥ. ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು 
45..13/06/2018.
👤👤👤👤👤👤👤👤👤👤👤👤👤
ದುರಾಸೆ ದುಮ್ಮಾನದ ಬದುಕು! 

ಎಲ್ಲಿ ಹೋದವೋ ಕೊಟ್ಟು ಕೊಡುವ ಮನಸ್ಸು! 
ದುರಾಸೆ ಬೇರೂರಿ ತನ್ನ ತೇಜಸ್ಸು!! 
ಸ್ವಾರ್ಥ ಬದುಕಿನ ಮೇಲೆ ಈ ತಮಸ್ಸು! 
ನಿಲ್ಲದಾಗಿದೆ ಯಂತ್ರಗಳ ಆ ವರ್ಚಸ್ಸು!! ಪ!! 

ಬಂಧ ಬಂಧುಗಳ ನೆರಳಿಲ್ಲ! 
ನಾವು ನಮ್ಮದೆನ್ನುವಾ ಒರತೆಯಿಲ್ಲ!! 
ಮಾನವೀಯತೆಯ ಗೀಳು ಮೊದಲಿಲ್ಲ! 
ಅಪರಿಚಿತ ಪ್ರಶ್ನೆ ಈ ಜೀವನವಾಯ್ತಲ್ಲ!! ಪ!!

ನಾನು ನನ್ನದೆಂಬ ದರ್ಪದಲಿ ನಿಂತು! 
ಧನದ ಮಧದಲಿ ಕೊಬ್ಬೇರಿ ಬಂತು!! 
ದೈಹಿಕ ದಂಡನೆ ಇಲ್ಲ ಯಾಂತ್ರಿಕ ಜೀವನವಾಯ್ತು! 
ರೋಗ ನಿರೋಧಕ ಶಕ್ತಿ ಮರೆಯಾಯ್ತು!! ಪ!! 

ಪ್ರಕೃತಿ ಮುನಿಸು ಪಾಠವ ಕಲಿಸಿ! 
ಜಂಜಾಟದೊಂದಿಗೆ ಬಾಳ್ವೆ ನಡೆಸಿ!! 
ಕಾಲನ ಕೈಗೆ ಬದುಕನು ಸಿಕ್ಕಿಸಿ! 
ಗೊಂದಲದ ನಡುವೆ ಸಮಯವ ಸವೆಸಿ!! ಪ!! 

ಆಳುವ ಅರಸರ ದುರಾಸೆಗೆ! 
ಕಪ್ಪುಹಣಗಳ ಧನಿಕರ ಕೂಸಿಗೆ!! 
ಭವಿಷ್ಯದ ಬೇಗೆಗೆ ನೆಮ್ಮದಿ ಮಾರಿ! 
ಬದುಕಿನ ನಾವೆಗೆ ಸುಳಿಯೊಳು ಜಾರಿ!! ಪ!! 

ನಿಲ್ಲದ ಪಯಣ ಈ ತಿರುಕರ ಜೀವನ!
ಕಾಲಚಕ್ರದಿ ಸಿಲುಕಿ ಒದ್ದಾಡುವ ಈ ಮನ!! 
ಪಾಪಕೆ ಪುಣ್ಯಕೆ ಇಲ್ಲೇ ಬೆಲೆ ತೆತ್ತೋಣ! 
ರಾವಣರಾಜ್ಯದಿ ಬದುಕಿ ಬಾಳೋಣ!! ಪ!! 

ಭಕ್ತಿಯ ಹೆಸರಿಗೆ ತುಂಬಿತು ಜೋಳಿಗೆಯು! 
ಓಟಿನ ನೋಟಿಗೆ ಧರ್ಮವೇ ಮಾಯವು!! 
ಮೋಸದ ಆಟಕೆ ರೈತನೆ ಬಲಿಪಶುವು! 
ಭುವಿಪಯಣ ಮುಗಿಸೆ ಅನ್ಯಗ್ರಹ ವಾಸವು!! ಪ!! 

ರಚನೆ-ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು
👤👤👤👤👤👤👤👤👤👤👤👤
ಸೂಳೇಕೆರೆಯ ಬವಣೆ!
ವಿಶಾಲ ಮೈಯೊಡ್ಡಿ ಜಲಾಶಯದಂತೆ!

ಪ್ರಶಾಂತ ಜೀವಂತ ಸೆಲೆಯಾದ ಜ್ವಲಂತೆ!!
ನಿಸರ್ಗದ ಮಡಿಲಲ್ಲಿ ನಿರ್ವಾಣವಾಗಿ ನಿಂತೆ!
ಏಷ್ಯಾದ ಎರಡನೇ ದೊಡ್ಕೆರೆ ಓ ಶಾಂತೆ!! ಪ!!

ಸಿದ್ಧಪ್ಪನ ಆಶ್ರಯದಾತೆ ಸಲಿಲೆ!
ನಿನ್ನಂತರಾಳವ ನಾನೆಂತು ಪಾಡಲೇ!!
ಚನ್ನಗಿರಿಯ ಜನಕೆ ಬೆಳಕಾಗಿ ಬಂದವಳೇ!
ಎಲ್ಲರಾ ಜೀವನಕೆ ಆಧಾರ ನೀಡ್ದವಳೇ!! ಪ!!

ಹೀಗಂತೂ ನೀನು ರಾಜಕೀಯ ದಾಳ!
ತಮಿಳುನಾಡಿನ ಕಾವೇರಿಯಂತ ಗಾಳ!!
ನಿರ್ಲಕ್ಷ್ಯ ನಿರ್ವಾಣ ಮಾಡಿಹರು ನಿನ್ನ!
ಬತ್ತದಾ ಇತಿಹಾಸ ಬತ್ತಿಹುದು ಚಿನ್ನ!! ಪ!!

ಸೂಳೆ ಎಂದೆಲ್ಲಾ ಜರಿದರು ಅಂದು!
ಎಲ್ಲವನೂ ನುಂಗಿ ಸಿಂಧೂ ಆದೆಯಾ ಇಂದು!!
ಲೋಕಪಾಲನೆಗೆ ನೆಲೆ ನಿಂತವಳೇ !
ಏತನೀರಾವರೀಲಿ ಬೆಳಕಾದವಳೇ!! ಪ!!

ಸುತ್ತದೂರುಗಳಿಗೆ ಜೀವಜಲ ನೀವು!
ನಿನ್ನಂತರಂಗಕೆ ಚೂರಿ ಎಸೆದವರು ನಾವು!!
ಮೀನುಗಾರ ಅನ್ನದಾತರ ಅನ್ನ ನೀವು!
ನಿನ್ನ ಪೋಷಿಸದ ಪಾಪಿ ಮಕ್ಕಳು ನಾವು!! ಪ!!

ಸಾಗರೆ ಹರಿದ್ರಾವತೆ ತಾಯೆ!
ನಿನ್ನ ಮೇಲೆ ನಿಂತಿದೆ ನಮ್ಮ ಜೀವನ ಛಾಯೆ!!
ನಿನ್ನೊಡಲ ತುಂಬಿಸೆ ಎಮ್ಮೊಡಲ ಕಾಯೆ!
ಶಿರಬಾಗಿ ಬೇಡುವೆನು ವರನೀಡೆ ಮಾಯೆ!! ಪ!!

ರಚನೆ.. ರಂಗನಾಥ ಕ ನಾ ದೇವರಹಳ್ಳಿ. ಶಿಕ್ಷಕರು ತೀರ್ಥಹಳ್ಳಿ ತಾಲೂಕು.
👤👤👤👤👤👤👤👤👤👤👤👤👤


ಒಂಟಿ ಏಕೆ ಬದುಕೇ!?
ಒಂಟಿಏಕೆ ಬದುಕೇ ನಂಟ ಕಳೆದೆಯೇಕೆ!
ಗಂಟಬಿಡಿಸೋ ಗೊಡವೆ ಮರೆತು ಸಾಗಲೇಕೆ!!
ನಿಂತು ನೋಡಲೇಕೆ ನೀನು ಬಂದ ದಾರಿ!
ಜಂಟಿ ಇರದ ಬದುಕೇ ಸಂಘ ಸೇರಬೇಕೆ!! ಪ!!

ಮೂರು ಗಂಟೆ ಸಂತೆ ಮುಗಿಸಿ ಸಾಗುವಾಗ!
ನಿನ್ನಂತರಾಳ ಕದವ ತೆರೆದು ನೋಡು ಆಗ!!
ಜೇನಿನಂತ ಬದುಕು ಸವಿದು ನೋಡು ಬೇಗ!
ಒಬ್ಬಂಟಿಯಾಗಿ ಹೊರಡೋ ಹಟವೇಕೆ ಈಗ!! ಪ!!

ನಿನ್ನೆಗಿಂತ ನಾಳೆ ಬಲುಸೊಗಸು ಜೀವನ!
ಇಂದು ಕಟ್ಟೋ ಕನಸ ನಾಳೆನಾವು ನೋಡೋಣ!!
ಭರವಸೆ ಇರಲಿ ಭವಿಷ್ಯ ನಮ್ಮ ಕೈಯಲಿ!
ಯಾರೂ ಕೊಡದ ಗಂಟು ನಮ್ಮ ನಮ್ಮ ಹೆಗಲಲಿ!!ಪ!!

ಆಗಸವ ನೋಡು ವಿಶಾಲ ನಮ್ಮ ಜೀವನ!
ದಾರಿ ಇರಲಿ ದುರ್ಗಮ ಗೆಲುವು ನಮದೇ ಅಂತಿಮ!!
ಸತ್ಯಪಥವು ನಮದು ನಿರಾಶೆಯೇಕೆ ಮರುಳೆ!
ಚಿತ್ತವಿಟ್ಟು ಸಾಗು ಸುತ್ತ ನೂರು ಮರಗಳೇ!! ಪ!!

ರಚನೆ -ರಂಗನಾಥ. ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು.


👤👤👤👤👤👤👤👤👤👤👤👤👤

ಯೋಧ ಗೆದ್ದು ಬಾ..!
ಹೋಗಿ ಬಾ ಹೋಗಿ ಬಾ ಇನಿಯ!
ಗೆಲಿಸಿ ಬಾ ಗೆಲಿಸಿ ಬಾ ಗೆಲಿಸಿ ಬಾ ಇಂಡಿಯಾ!! ಪ!!

ನಾನಿಲ್ಲಿ ನಿನ್ನ ಗೆಲುವಿಗಾಗಿ ಕಾಯುವೆ!
ನನ್ನಂತರಾಳದ ಪ್ರೇಮವಾ ತ್ಯಾಗಮಾಡಿ ಬಿಡುವೆ!!
ಕೊರಗದಿರು ಮರುಗದಿರು ದೇಶ ನಿನ್ನ ಜೀವನ!
ಧೈರ್ಯದಿಂದ ಮುನ್ನುಗ್ಗು ನೋಡು ಶತೃ ನಡುಕನ!! ಪ!!

ತಾಯಿಯರಕೆ ಸತ್ಯ ತ್ಯಾಗ ನಿನ್ನನೆಂದು ಕಾಯ್ವವು!
ಅಂಜದಿರು ತ್ರಿಶಕ್ತಿ ಎಂದೆಂದೂ ನಿನ್ನ ತೋಳ್ಬಲವು!!
ಹೆಂಡತಿ ಸುತ ಹೆತ್ತವರ ನೆರಳ ನೀ ಮರೆಯದಿರು!
ಹೋರಾಟವೊಂದೆ ಗುರಿ ಛಲವ ಬಿಡದೆ ಮುಂದಿರು!! ಪ!!

ನಿನಗಾಗಿ ಕಾದಿರುವ ಜೀವ ನಾನು ಅನುದಿನ!
ಗೆದ್ದು ಬರುವ ಭಾಷೆಕೊಡು ಸಾವ ದೂರ ಮಾಡುವೆ ನಾ!!
ಅನ್ನಕೊಟ್ಟ ತಾಯ ಋಣವಾ ತೀರಿಸಿ ಬಾ ಇನಿಯನೇ!
ವಿಜಯಮಾಲೆ ಹಿಡಿದು ಅನುದಿನವೂ ಕಾಯ್ವೆನೇ!! ಪ!!

ರಚನೆ -ರಂಗನಾಥ. ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು


👤👤👤👤👤👤👤👤👤👤👤👤👤

ಹೆತ್ತವಳು ಹೆತ್ತವಳು!
ಲೋಕಕೆಲ್ಲ ಸಾರಿಹೇಳು ದೈವ ಕಂಡೆನೆಂದು!
ಗುಡಿಮಂದಿರ ಮಸೀದಿಲೂ ಸಿಗದಿಂದು!!
ಶ್ರೀಗಂಧ ತೇದಾಗ ತನ್ನ ತಾ ಕರಗಿ ಸುಗಂಧ ಬೀರುವುದು!
ದೀಪದಂತೆ ತಾನುರಿದು ಜಗಕೆ ಬೆಳಕ ನೀಡುವುದು!! ಪ!!

ಹಡೆದವಳು ಪ್ರೀತಿಯ ಹಿರಿಮೆ ಹೊತ್ತು ಸಾರಿದಳು!
ಹುಟ್ಟು ನೀಡಿ ತಾನು ಮರುಜನ್ಮ ಪಡೆದವಳು!!
ಪ್ರೇಮ ಪಯಣಿದಿ ಆಗಸದ ಮನದವಳು!
ಕರುಣೆಯ ಕಡಲಿವಳು ಆಶ್ರಯದ ಮಡುವಿವಳು!! ಪ!!

ತೂತಿನಾ ದೋಣಿಯ ದಡವ ಸೇರಿಸಿದ ದೇವಿಯು!
ಸುಳಿಜೀವ ಜೀವನಕೆ ಅರ್ಥನೀಡ್ದ ಮಾತೆಯು!!
ತನ್ನೊಟ್ಟೆ ಬರಿದಿರಲು ನನ್ನೊಟ್ಟೆ ಕಾದೆಯಲ್ಲಾ!
ಲೋಕದಾ ನಿಂದನೆ ನುಂಗಿ ಜೀವನ ಕಟ್ಟಿಕೊಟ್ಟೆಯಲ್ಲಾ!! ಪ!!
ತಾಯ ಋಣ ತೀರಿಸಲು ಜನ್ಮಜನ್ಮ ಸಾದ್ಯವಿಲ್ಲ!
ಹೆತ್ತತಾಯಿ ಸ್ವರ್ಗಕ್ಕೆ ಸಮವಾಗಿ ನಮಗೆಲ್ಲಾ!!
ಕಣ್ಣಲ್ಲಿ ಕಣ್ಣಾಗಿ ಕಾದವಳು ಮರೆವುದಿಲ್ಲ!
ಕಣ್ಣಿಗೆ ಕಾಣುವ ನಿಜದೈವ ನೀ ಜಗಕೆಲ್ಲ!! ಪ!!

ರಚನೆ-ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು.


👤👤👤👤👤👤👤👤👤👤👤👤👤

ಕೊ.. ಕೊ.. ಕೋ..!!!
ಕೊ.. ಕೊ.. ಕೋ.. ಎಂದು ಕೋಳಿ ಕೂಗಿದೆ!
ಹಳ್ಳಿ ಜನರ ಬಾಳಿಗಿಂದು ಬೆಳಕಾ ನೀಡಿದೆ!! ಪ!!

ಬೆಳ್ಳಿ ಮೂಡುವ ಹೊತ್ತಿಗೆ ಕೂಗೋ ಬೆಳಗಿನ ಗಡಿಯಾರವೇ!
ಸಾಟಿಯಾರು ನಿನಗೆ ಈ ಜಗದೊಳ್ ಶಿಸ್ತು ಸಮಯವೇ!!
ಯಾವ ಸ್ಥಾನ ಆದರೇನು ಯಾರ ಮನೆಯಾದರೇನು!
ನಿತ್ಯ ಸತ್ಯ ನಿನ್ನ ಕಾಯಕ ನೀಯತ್ತಿನ ಬಂಟ ನೀನು!! ಪ!!

ಹೆಗಲಮೇಲ ಭಾರ ಮರೆತು ಕೂತ ಸೋಮಾರಿಗೆ!
ಕಾಯಕವ ಮರೆತು ಮಲಗಿದ ಕುಂಬಕರ್ಣಗೆ!!
ಪಶುಪಕ್ಷಿ ಮಿಡಿಜೀವ ಜಲಜಂತುಗಳ ಪಾಲಿಗೆ!
ಗಂಟೆ ನೀನು ನೇಸರನ ಆಗಮನದ ಸಮಯಕೆ!! ಪ!!

ಹಳ್ಳಿ ಹಟ್ಟಿ ಕಾಡು ಮೇಡು ಆವ ಜಾಗವಾಗಲಿ!
ಕಾಲಗಡಿಯಾರ ನೀನು ನಿತ್ಯ ಬೆಳಿಗ್ಗೆ ಏಳಲಿ!!
ನೀನಿಲ್ಲದ ಹಳ್ಳಿ ಕೇರಿ ತೋರುಜಗದಿ ಬಾಳಲಿ!
ನರನ ಕಾಯ್ಕ ನೆನಪಿಸೆ ಸೃಷ್ಟಿಪೆ ನೀ ಜಗದಲಿ!! ಪ!!

ರಚನೆ -ರಂಗನಾಥ. ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು.

👤👤👤👤👤👤👤👤👤👤👤👤👤


ಮುಸ್ಸಂಜೆ ಮಾತು!
ಕೆಂದೂಳ ಬೆನ್ನೇರಿ ಹೊರಟಾಗ!
ಆಗಸವೇ ಕೆಂಬಣ್ಣ ಚಲ್ಲಿದಾಗ!!
ನೇಸರನು ಪಡುವಣದಿ ನಡೆದಾಗ!
ರಮ್ಯ ರಮಣೀಯ ಚಿತ್ತಾರ ನನ್ನೊಳಗ!!ಪ!!

ಗೋಧೂಳಿ ಸಮಯಕೆ ಜೋರು!
ರೈತನ ಬವಣೆಯ ಕಾರುಬಾರು!!
ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತ!
ಸರಿದಾನು ನೇಸರನು ನಾಚುತ್ತಾ!! ಪ!!

ಯಾರು ಬಳಿದಾರು ಬಣ್ಣ!
ನಭಕೆಲ್ಲ ರಕ್ತದೋಕುಳಿಯಣ್ಣ!!
ಗಿಡ ಮರ ಗೆಂಟೆ ಕೆಂದುಟಿಯಣ್ಣ!
ನೀಲಗಗನವೇ ನಿನ್ನ ಕೆನ್ನೆ ಕೆಂಪೇಕಣ್ಣ!! ಪ!!

ಪಕ್ಷಿಗಳ ಝೇಂಕಾರ ಮನಕರಗಿ!
ಮರಿಯ ಸೇರಲು ದೂರದಾರಿಸಾಗಿ!!
ಕರುಳ ಕೂಗಿಗೆ ತಾಯ್ತನವು ಮರುಗಿ!
ಶಶಿಯಾಗಮಕೆ ನೇಸರನು ಮರೆಯಾಗಿ!! ಪ!!

ರಚನೆ-ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು.

👤👤👤👤👤👤👤👤👤👤👤👤👤

ಹೆಣ್ಣಿನ ಮುಖಗಳು?

ಹೆಣ್ಣಾಗಿ ಜನಿಸು ಈ ಜಗದಿ ಕಣ್ಣಾಗಿ ಕಾಯುವೆ!
ಪುರುಷನ ಪೋಷಿಸಿ ದಡವ ಸೇರಿಸುವೆ!!
ನಮ್ಮ ಹುಟ್ಟಿಗರ್ಥ ನೀಡಿ ಬದುಕ ನೀಡುವೆ!
ಸೃಷ್ಟಿಯ ಮೂಲ ಕಾರಣ ಆದಿ-ಅಂತ್ಯಳಾಗುವೆ!!ಪ!!

ಕೆಸರಲ್ಲಿ ಕಮಲವು ಅರಳುವಂತೆ!
ಕಾನನದಿ ಸುಮ ಅರಳಿ ಸುಗಂಧಿಸುವಂತೆ!!
ಮುಳ್ಳಕೋಟೆಯ ಮಧ್ಯೆ ಗುಲಾಬಿಯ ನಗುವಂತೆ!
ಹೆಜ್ಜೇನ ಗೂಡಲ್ಲಿ ಸವಿಜೇನಿನಂತೆ!!ಪ!!

ಬೆಂಕಿಯ ಬಲೆಯೋಳ್ ಸಿಕ್ಕ ಜೇಡನಂತೆ!
ಹಾಲಾಹಲದ ಕಡಲ ಅಮೃತದಂತೆ!
ನೋವಿನೇಟಲಿ ಕಟೆದ ಶಿಲೆ ದೈವವಾದಂತೆ!
ಹೆಣ್ಣೇ ನೀಬಂದೆ ಸಹನೆ ತಾಳ್ಮೆಯ ಮಡುವಾದಂತೆ!!ಪ!!

ಹುಟ್ಟುತ್ತಾ ಮೂಗುಮುಸುಡಿ ತಿರುವಿಸಿಕೊಂಡವಳು!
ಸಾಧನೆಯ ಶಿಖರವೇರಿ ಎಲ್ಲರಿಗೂ ಉತ್ತರವಾದವಳು!!
ನೂರು ಪಾತ್ರವ ಮಾಡಿ ಮೀರಿ ಬೆಳೆದವಳು!
ಕಂದ- ಅಂಧನಿಗೆ ಮುತ್ತುತುತ್ತುಗಳ ಮಳೆಗರೆದವಳು!!ಪ!!

ಸೌಂದರ್ಯದ ರಾಶಿ ಮುತ್ತುಗಳ ಒಡತಿ!
ಮೌಲ್ಯಗಾಗ್ರಿಣಿ ಮಾದರಿ ಈ ಚಲುವ ಗರತಿ!!
ಮೂಲೋಕ ಮನದಿ ತುಂಬಿಕೊಂಡ ಸವತಿ!
ಶ್ರೀಗಂಧ ಸಂಪಿಗೆ ಜಗಕೆಲ್ಲ ಗೆಳತಿ!!ಪ!!

ರಚನೆ-ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು.

👤👤👤👤👤👤👤👤👤👤👤👤👤
ನಮ್ಮ ದೇಶ ನಮ್ಮ ಸಂಸ್ಕೃತಿ! 

ಭಾರತೀಯರು ನಾವು ಭಾರತೀಯರು! 
ವಿಶ್ವಕೆಲ್ಲ ಸಂಸ್ಕೃತಿಯ ಕಲಿಸಿದ ಧೀರರು!! 
ಸ್ವಾರ್ಥಕ್ಕಾಗಿ ದೇಶ ಒಡೆದ ಕೆಂಪುಜನರ ಕೈಯಲಿ! 
ಸೈ ಎನಿಸಿಕೊಂಡ ಸಜ್ಜನರು!! 

ಎಲ್ಲರನು ಕಲೆಸುವ ಎಲ್ಲದನು ಕಲಿಸುವ! 
ಕಾಯಕದ ತತ್ವಗಳನ್ನು ಎಲ್ಲರಿಗೂ ಉಣಿಸುವ!! 
ಸತ್ಯ ಶಾಂತಿ ಅಹಿಂಸೆ ಆ... ಆ. 
ತ್ಯಾಗದಡಿ ದೇಶಕಟ್ಟಿ ಮೆರೆದ!
ಭಾರತೀಯರು ನಾವು ಭಾರತೀಯರು!! ೧!!

ಕಲೆಗಳ ತವರೂರು ಭಾರತ ನನ್ನೂರು! 
ಪ್ರೀತಿ ಪ್ರೇಮ ಪ್ರಣಯಗಳ ಹಂಚುವ ತವರೂರು!! 
ನಾವು ನಮ್ಮದೆನ್ನುವಾ ಆ.. ಆ.. 
ಸಂಸ್ಕೃತಿಯೇ ನಮ್ಮ ಹೆಮ್ಮೆ! 
ಭಾರತೀಯರು ನಾವು ಭಾರತೀಯರು!! ೨!!

ರಕ್ತಸಿಕ್ತ ಕಥೆಗಳಲಿ ದೇಶಕಟ್ಟಿ ಬೆಳೆಸ್ದವರು! 
ಒಡಿಬರುವ ಆಗಂತುಕರಿಗಾಶ್ರಯವ ನೀಡ್ವವರು!! 
ತನ್ನ ತಾನೇ ಸವೆಸಿಕೊಂಡು ಆ.. ಆ.. 
ಇತರಿತವ ಕಾಯ್ವವರು! 
ಭಾರತೀಯರು ನಾವು ಭಾರತೀಯರು!! ೩!!

ನೂರು ಭಾಷೆ ನೂರು ಮತ! 
ನೂರು ದಾರಿ ಒಂದೇ ಪಥ!! ಎಲ್ಲರೊಳಗೊಂದಾಗೋ ಆ.. ಆ.. 
ಐಕ್ಯತೆಯ ಸಾರ್ವವರು! 
ಭಾರತೀಯರು ನಾವು ಭಾರತೀಯರು!! ೪!!

ಪುರಾಣಪುಣ್ಯ ಕಥೆಗಳ! 
ಸಂತಶರಣರ ಅನುಭವಗಳ!! 
ನೀತಿನೆಲೆಯ ಅಡಿಗಲ್ಲೇ ಆ.. ಆ.. 
ನಮ್ಮ ದೇಶದುಸಿರು! 
ಭಾರತೀಯರು ನಾವು ಭಾರತೀಯರು!! ೫!!

ಶಿಲ್ಪಕಲಾ ಬೀಡು ಇದು!
ಸಂಗೀತ ನೃತ್ಯ ಸೆಲೆ ಇದು!! 
ನಮ್ಮವರ ಶ್ರೀಮಂತಿಕೆ. ಆ.. ಆ.. 
ಸಂಸ್ಕೃತಿಗೆ ಕಳಶವು! 
ಭಾರತೀಯರು ನಾವು ಭಾರತೀಯರು!! ೬!!

ನೀಲಕಾಯದೋಳು ಮೆರೆವ! 
ಮಾನವತೆಯ ಜಗಕೆ ಸಾರ್ವ!! 
ವಿಶ್ವಗುರು ಭಾರತವೋ ಆ.. ಆ.. 
ಸಂಸ್ಕಾರದ ಪ್ರತೀಕವೊ! 
ಭಾರತೀಯರು ನಾವು ಭಾರತೀಯರು!! ೭!!

ರಚನೆ-ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು ತೀರ್ಥಹಳ್ಳಿ ತಾಲೂಕು.
👤👤👤👤👤👤👤👤👤👤👤👤👤



👤👤👤👤👤👤👤👤👤👤👤👤👤


👤👤👤👤👤👤👤👤👤👤👤👤👤


👤👤👤👤👤👤👤👤👤👤👤👤👤


👤👤👤👤👤👤👤👤👤👤👤👤👤



👤👤👤👤👤👤👤👤👤👤👤👤👤

ಶರಾವತಿಯ ಸೊಬಗು. 

ಪಶ್ಚಿಮ ವಾಹಿನಿ ಶಿವನ ಮೋಹಿನಿ! 
ಶರವೇಗದಿ ಹರಿವೋಳೇ ನೀರೆನೀ!! 
ನಲಿನಲಿ ಬಿಂದು ನಾಡಿನ ಬಂಧು! 
ಝುಳುಝುಳು ಎಂದು ಹರಿವೋಳೇ ದಕ್ಷಿಣ ಸಿಂಧು!!ಪ!! 

ಪಶ್ಚಿಮ ಘಟ್ಟದ ಕಾಡುಗಳಲ್ಲಿ! 
ಸಹ್ಯಾದ್ರಿ ಶ್ರೇಣಿಯ ತಪ್ಪಲಿನಲ್ಲಿ!! 
ಧರೆಯೇ ಸಲಿಲದಿ ತುಂಬಿತಲ್ಲಿ! 
ಶರಾವತಿ ಮಿಂದೆವ್ ನಿನ್ನ ಸೊಬಗಲ್ಲಿ!! ೧!!

ಧರಣಿಯೆ ಧನ್ಯ ನಿನ ಸ್ಪರ್ಶಕೆ! 
ಶುಕಪಿಕ ಪಾವನ ನಿನ ವೈಯಾರಕೆ!! 
ಅಬ್ಬಾ ಏನ್ ಚಂದ ದುಮ್ಮಿಕ್ಕೋ ಪರಿ! 
ಪಾಪಿಯ ಪಾಪವ ತೊಳೆಯಲ್ ನೀ ಹರಿ!! ೨!!

ಜೋಗದ ಗುಂಡಿಯೇ ಕವಿಗಳ ಸ್ಪೂರ್ತಿ! 
ಜೀವನ ಪಯಣದ ದಿಕ್ಕಿಗೆ ಮೂರ್ತಿ!! 
ಒಡೆದ ದಾರಿ ಒಂದಾಗೋ ಪರಿಯು! 
ನಾಲ್ಕೇ ದಿನದ ಪಯಣಕೆ ಸ್ಪೂರ್ತಿಯು!!೩!!

ಬಣ್ಣದ ಹೋಕಳಿ ಹಾಕಿಹೆ ಜಲಧಿ! 
ಚಂದದಿ ಚಿತ್ತಾರ ಬಿತ್ತಿಹೆ ನಬಕೆ!! 
ನಾಡಿಗೆ ಬೆಳಕ ಬೀಗುತ ನೀಡಿದೆ! 
ಕನ್ನಡ ಸೊಗಡ ಲೋಕಕೆ ಬಿತ್ತಿದೆ!! ೪!!

ನಾವು ನೀವೂ ಅವರೂ ಸೇರಿ! 
ಧರೆಗವತರಿಸಿದ ಸ್ವರ್ಗದ ನಾರಿ!! 
ಹುಟ್ಟುವ ಬೆಳೆಯುವ ನಿನ್ನಯ ರೀತಿ! 
ದೀಪದಿ ಬೆಳಗಿದೆ ತಾಯಿಯ ನೀತಿ!! ೫!!

ಗಿರಿನವಿಲು ನರ್ತಿಸುವ ತೆರದಿ! 
ಹರಿವೊಲು ನಿನ್ನಯ ರೂಪದಿ!! 
ಕಾಲದಗಂಟೆ ಜೀವಕೆ ನಂಟೇ! 
ಎಲ್ಲರ ಜೀವವ ಪೋಷಿಸಿ ಹೊರಟೇ!! ೬!!

ಹರಿಣಿ ಕರಣಗಳು ನಲಿದು! 
ಜೀವಸಂಕುಲವು ನಿನ್ನೊಲುಮೆಗೊಲಿದು!! 
ಹಸಿರ ಕೆಸರನು ಚೆಲ್ಲಿ ನೈದಿಲೆಯ ಬೆಳದೆ! 
ನೆಲ್ಲ ನಲ್ಮೆಯ ನೀಡಿ ಅನ್ನಪೂರ್ಣೆಯಾದೆ!! ೭!!

ಅರೇಬಿನ್ ಶರಧಿಲಿ ಲೀನವಾಗಿ ನೀ! 
ಕರುನಾಡ ಸಂಪತ್ತು ಬೆಳೆಸಿದೆ ನೀ!! 
ನಿನ್ನಂಥ ಮಾತೆ ಸಿಕ್ಕಿದ್ದು ಪುಣ್ಯ! 
ನಮ್ಮವಳು ನೀ ಧರಿಸಿದ್ದೇ ಧನ್ಯ!! ೮!!

ರಚನೆ-ರಂಗನಾಥ ಕ. ನಾ. ದೇವರಹಳ್ಳಿ ಶಿಕ್ಷಕರು 
ತೀರ್ಥಹಳ್ಳಿ ತಾಲ್ಲೂಕು.

👤👤👤👤👤👤👤👤👤👤👤👤👤

ಜೀವಜಲಧಾರೆ ಕಾವೇರಿ! 

ಚೆನ್ನವೋ ಚೆನ್ನವೋ ಈ ಕಾವೇರಿ! 
ಚಂದದ ಬೇಡಗಿಯೋ ಈ ವಯ್ಯಾರಿ!! 
ನಯನಮನೋಹರ ಇವಳರಿವ ಪರಿ! 
ಬೆಡಗು ಬಿನ್ನಾಣಗಳ ಮೈಸಿರಿ!! ಪ!! 

ತಲಕಾವೇರಿಲಿ ಉದ್ಭವಿಸೆ ನೀ! 
ಕೊಡಗಲ್ಮನೆ ಮಾಡಿಪೆ ನೀ!! 
ಹಸಿರ್ಸೀರೆ ಉಟ್ಟು ಹಸನಾಗಿಪೆ ನೀ! 
ಕನ್ನಡಿಗರ ಮನೆಮಗಳಾಗಿಪೆ ನೀ!! ೧!!

ತವರಿನ ಸಿರಿಯಾಗಿ ಬಂದವಳೇ! 
ಅನ್ನದಾತರ ಅನ್ನ ತಾನಾದವಳೇ!! 
ಕತ್ತಲಾ ಕರಿಗಿಸೋ ಬೆಳಕಾದವಳೇ! 
ನೆತ್ತಿಯಲಿ ನೆತ್ತರ ತಿಲಕವಾದವಳೇ!! ೨!!

ಕೆಸರ ಮನಗಳಿಗೆ ನೈದಿಲೆಯ ಮಗಳೇ! 
ಕರಿಮಧದ ಗೊಡವರ ಮನೆಗೆಹೋದವಳೇ!! 
ಇಲ್ಲೂ ಸಲಹಿ ಅಲ್ಲೂ ಪೋಷಿಪಳೇ! 
ಬತ್ತದಾ ಅಕ್ಷಯೆ ಸಿರಿಸಂಪದಳೇ!! ೩!!

ಗಿರಿಕನ್ಯೆ ಧರೆಗೆ ವರವು ನೀನು! 
ನಿತ್ಯ ಜೀವನೀಡೋ ಕಾಯಕವೇನು!! 
ಸುತ್ತಮುತ್ತಲ ಜನಕೆ ಬಾನದಾತೆ ನೀನು!
ತಾಯೇ ನಿನ್ನನೆಂದಿಗೂ ಮರೆಯೆನು ನಾನು!! ೪!!

ಹೆಣ್ಣಿನ ಬದುಕಿಗೆ ಸ್ಪೂರ್ತಿ ನೀಡುವ! 
ನಡಿಗೆಯಲಿ ಮಾದರಿ ಈ ಚಲುವ!! 
ಮೇಣದಂತೆ ನೊಂದು ನೆರೆಬಾಳ ಬೆಳಗಿಸುವ! 
ತನ್ನಲ್ಲಿ ನೋವ್ನುಂಗಿ ಕಡಲ್ಸೇರುವ!! ೫!!

ಅಬ್ಬಿಯ ಸೊಬಗಲಿ ಮಿಂದು! 
ನಿಸರ್ಗಧಾಮದಿ ಮಿಡಿದು!!
ಸಂಗಮದಿ ಕಪಿಲೆಯ ಕೈಹಿಡಿದು!
ಕೊಡವರ ಜೀವನಾಡಿ ನೀ ಬಂಧು!! ೬!!

ಗಗನಕ್ಕೆ ಮಳೆಬಿಲ್ಲೆ ಬರಚುಕ್ಕೆ ಭರದಲ್ಲಿ! 
ಶಿಂಷಾ ಮೈಯಲ್ಲೆ ಬೆಳಕನ್ನು ಸುರಿವಲ್ಲಿ!! 
ಮೇಕೆದಾಟು ಮರೆವಣಿಗೆ ತೆರದಲ್ಲಿ!! ೬!!

ತಾರಕೆಯ ತೆವರೋಳ್ ನಿಂದೆ! 
ಕಬಿನಿಯೋಳ್ ರೈತರ ಕಂಬನಿಯ ಕಳೆದೆ!! 
ವೈನಾಡ ನಗುವೋಳ್ ಕರುಣೆ ಬೀರಿದೆ! 
ಬೃಂಧಾವನದಿ ತಾಯೇ ಭೂಸ್ವರ್ಗ ಮಾಡ್ದೆ!!೭!!

ಸಿರಿಗನ್ನಡ ನಾಡ ಶೃಂಗಾರ ಮಾಡಿ! 
ಕರುನಾಡ ಸೊಬಗ ಮಾಡ್ದೆ ನೂರ್ಮಡಿ!!
ಪಾವನೆ ನೀ ಹುಟ್ಟಿ ಮೆಟ್ಟಿದ ಮನೆಗೆ! 
ವರವಾಗಿ ಬಂದೆ ನೀ ದೇವಸುಂದರಿ ಧರೆಗೆ!! ೮!!

ಚನ್ನುಡಿಯ ಮಾಲೆ ಚಂದದ ಒಡತಿಗೆ! 
ಯಾರಮಗಳೋ ತಂಪನೀಡು ದೇವ ಅವರೊಡಲಿಗೆ!! 
ಬಿಟ್ಟೋಗದಿರು ಬತ್ತಿದಾ ಬಿಸಿಬೇಗೆ! 
ಎಂದೆಂದೂ ಮಾಸದಿರಲಿ ಕರುನಾಡಿಗೆ ಈ ನಗೆ!! ೯!!

ರಚನೆ - ರಂಗನಾಥ ಕ ನಾ ಶಿಕ್ಷಕರು ತೀರ್ಥಹಳ್ಳಿ ತಾಲೂಕು
👤👤👤👤👤👤👤👤👤👤👤👤👤

ಅದ್ಭುತಗಳ ಆಗರ ಈ ಅವನಿ! 

ಚಂದನದ ಗೊಂಬೆ ಏ ಧರಣಿ! 
ಅದ್ಭುತಗಳ ಆಗರ ಈ ಅವನಿ!! 
ಸೌಂದರ್ಯ ಶಿರೋಮಣಿ ಏ ಧರಣಿ! 
ಜೀವ ಸಂಕುಲದ ಉಸಿರು ಈ ಧರಣಿ!!ಪ!! 

ಒಡಲೆಲ್ಲಾ ಅಗ್ನಿಕುಂಡ ಲಾವಾ! 
ಒಡಲ್ಮೇಲೆ ತಂಪು ಜಲಜೀವಾ!! 
ಪ್ರೀತಿ ಕೊಟ್ಟು ನಮ್ಮೆಲ್ಲರ ಕಾಯ್ವ! 
ತಾಯೇ ಯಾರು ಬಲ್ಲರು ನಿನ್ನಂತರಾಳವ!!೧!!

ಮನುಕುಲದ ಮನದಂತೆ ನೀನು! 
ಸುಖದುಃಖ ತೆರನಂತೆ ಬಾನು!! 
ಗ್ರಹಗಳ ಜೀವಗ್ರಹ ನೀನು! 
ಹೊರನೋಟ ನೀಲಕಾಯವೇನು!! ೨!!

ಒಮ್ಮೊಮ್ಮೆ ಮುನಿಸು ಯಾರದೋ ಮೇಲೆ! 
ಒಮ್ಮೊಮ್ಮೆ ಸಲಹೋ- ತಾಯ್ ನಿನ್ನ ಲೀಲೆ!! 
ಗರ್ಭದಿ ಸಂಪತ್ತಿನ ಒಡತಿ ನಲ್ಲೆ! 
ಸ್ವಾರ್ಥ ಮಾನವ ಮೀರಿಹನು ಎಲ್ಲೆ!!೩!!

ನೀ ತಾಯಿ ಎಮಗೆ ಭೂತಾಯಿ! 
ಮಡಿಲಲ್ಲಿ ಬೆಳೆಸುತ ಎಮ್ಮ ಕಾಯಿ!! 
ಏನೆಂದು ವರ್ಣಿಸಲಿ ನಿನ್ನೀ ಅದ್ಭುತವ! 
ಪದಪುಂಜ ಸಾಲದೇ ಬಳಲಿದೆ ಅವ್ವ!! ೪!!

ಗಿರಿಶೃಂಗ ಶಿಖರ ನಿನ್ನ ತುಂಬು ಸ್ಥನಗಳು! 
ಹರಿವಜಲಧಾರೆ ನಿನ್ಸೀರೆ ಸೆರಗುಗಳು!! 
ಹಸಿರರಾಶಿಯೇ ನೀನುಟ್ಟ ಸೀರೆ! 
ಸಾಟಿಯಾರು ನಿನಗೆ ಈ ಜಗದೊಳ್ ನೀರೆ!!೫!!

ನೋವುಂಡು ಜಗಕೆ ನಲಿವನ್ನು ನೀಡ್ದೆ! 
ಜೀವಜಂತುಗಳಿಗೆ ವರನೀನಾದೆ!! 
ನಿನ್ನೊಡಲ ಸೀಳ್ದವಗೆ ಅಮೃತವುಣಿಸಿದೆ! 
ಮೇಣದಂತೆ ತಾಯೇ ತ್ಯಾಗಮೂರ್ತಿಯಾದೆ!!೬!!

ಶಾಂತಿಗೆ ಕಡಲು ವಿಶಾಲಕೆ ಮುಗಿಲು!
ಸೌಂದರ್ಯಕೆ ಪರಿಸರ ಖನಿಜದೊಡಲು!! 
ಮುನಿದರೆ ನೀ ಜಗಕೆಲ್ಲ ಪ್ರಳಯ! 
ಯಾರು ಬಲ್ಲರು ಆ ಸರಿಹೊಂದಿಸೋ ಮಾಯ!!೬!!

ಏ ಮಾತೆ ನಿನಗೀಗ ಒಂದೊಳ್ಳೆ ಪ್ರಾಯ! 
ಸ್ವರ್ಗ-ನರಕಗಳಿಗೆ ನೀಡಾಶ್ರಯ!! 
ತಾಳ್ಮೆಯಾ ಮೂರ್ತಿ ನೀಡೆಮಗೆ ಅಭಯ! 
ನಿನ್ಮಡಿಲೊಳಗೆ ಬದುಕುವೆವು ನಿಶ್ಚಯ!!೭!!

ವರ್ಣಿಸಲಸದಳ ನಿನ್ನೀ ಚಲುವ! 
ಗಿಡಗೆಂಟೆ ಹೂ-ಹಣ್ಣು ಚಿಗುರೆಲೆ ನಲಿವ!! 
ಕಾಲದೊಳಗುದ್ಭವಿಸೋ ಆ ನಿನ್ನ ಗೆಲುವ! 
ನೂರ್ಕಣ್ಣು ಸಾಲದು ನೋಡಲಾ ಅದ್ಭುತವ!! ೮!!

ಮಳೆಗಾಲದಿ ನೀ ಮಾಡ್ವೆ ಸ್ನಾನ! 
ಚಳಿಗಾಲಕ್ಕೆ ನಡುಗಿ ಕ್ಷಣಕಾಲ ಯಾನ!! 
ಬೇಸಿಗೆಯ ಧಗೆಗೆ ನೀಬಿಟ್ಟೆ ಮೌನ! 
ನೇಸರನ ಆಟಕೆ ನಿನ್ನೀ ಅವತರಣ!!೯!!

ನರನಾಡಿ ನದನದಿ ಹರಿವಾಗ ಚಂದ! 
ನೀಲ್ಗಡಲೆ ನಿನ್ನೊಡಲ ಜೀವದಾನಂದ!! 
ನೆಲ ಜಲ ಪರಿಸರ ಜೀವರಾಶಿಗಬ್ಬ! 
ನೀ ಮೈತುಂಬಿ ಇರುವೆಡೆ ನಭಕೆಲ್ಲ ಹಬ್ಬ!!೧೦!!

ಪ್ರೀತಿಯ ಹೂರಣ ಎಲ್ಲರಲೂ ತುಂಬಿದೆ! 
ಅವರವರ ಭಾವಕ್ಕೆ ಆಸೆ ಹೊಂದಿಸಿದೆ!! 
ಪೂರೈಸಿ ಒಲವ ಗೆಲುವನಗೆ ಬೀರಿದೆ! 
ಅದ್ಭುತವೇ ಭೂಮಾತೆ ನಿನ್ತಾಯ್ತನದೆ!!೧೧!!

ಹೆಣ್ತನಕೆ ಸ್ಪೂರ್ತಿ ಈ ಅವನಿ! 
ದುರ್ಜನರ ಅತ್ಯಾಚಾರಕೆ ನೊಂದಮಣಿ!! 
ತಾಯನ್ನು ಬಿಡದ ಪಾಪಿಜಗದಿಂದೆ! 
ಹೇಗೆ ಸಲಹುವೆ ಅಮ್ಮ ನಮ್ಮ ಮುಂದೆ!!೧೨!!

ಕರುಣಾಮಯಿ ಏ ತಾಯಿ! 
ಮಕ್ಕಳ ತುಂಟಾಟ ಮನ್ನಿಸಿ ಕಾಯಿ!! 
ಕ್ಷಮಯಾಧರಿತ್ರಿ ನೀ ನಮಗೆಲ್ಲ! 
ತಾಯಲ್ಲವೇ ನೀ ಈ ಜೀವರಾಶಿಗೆಲ್ಲಾ!!೧೩!!

ರಚನೆ - ರಂಗನಾಥ. ಕ. ನಾ. ದೇವರಹಳ್ಳಿ.. ಶಿಕ್ಷಕರು 
ತೀರ್ಥಹಳ್ಳಿ ತಾಲ್ಲೂಕು.
👥👤👤👤👤👤👤👤👤👤
ರಸಾನುಭವ! 

ಅನುಭವದೋಳ್ ಅಮೃತತ್ವ ಹುಟ್ಟಿ! 
ಧ್ಯಾನದೋಳ್ ಧನ್ಯತೆ ಮೆರೆದು! 
ಧ್ಯಾನನುಭವವೇ ಮುಕ್ತಿದಾರಿ ನೋಡಾ-ಶ್ರೀನಾಥ!!೧!!

ಮನಸು ಮನಸುಗಳು ಬೆರೆತಾಗ! 
ಕನಸು ಕನವರಿಕೆಗಳು ಕಲೆತಾಗ!! 
ಕನಸಿನ ಮನಸ ರಸರಾತ್ರಿ ಕಣಾ-ಶ್ರೀನಾಥ!! ೨!!

ನಿನ್ನೆ ನಾಳೆಗಳ ನಡುವೆ ಇಂದಿನ ಬೆಳಕು! 
ಸತ್ಯಕ್ಕೆ ಕನ್ನಡಿ ಈ ಗುರಿಯ ತಳುಕು!! 
ಮಾಯೆಗಳ ಮಧ್ಯೆ ನೀನಿರುವೆ ಸತ್ಯ-ಶ್ರೀನಾಥ!! ೩!!

ಅಂಗೈ ಅನ್ನಕೆ ಮುಂಗೈ ನೆಕ್ಕುವ! 
ದಕ್ಕುವಾ ಕೆಲಸಕೆ ಧನಪೀಪಸರೀರುವ!!
ಮುಗ್ಧ ಮನಸ್ಸಿನ ಮಾರಣಹೋಮ ಕಣಾ-ಶ್ರೀನಾಥ!! ೪!!

ಕಳಚಿದ ಬಟ್ಟೆ ಕಳಚುತ್ತಾ ಸಾಗಿ! 
ಮಂಚಗಳ ಮಂದಲಿಗೆ ಬದಲಿಸುತ್ತಾ ಬಿಗಿ!!
ಸತ್ಯದಾಂಪತ್ಯಕೆಲ್ಲಿ ಬೆಲೆ-ಶ್ರೀನಾಥ!! ೫!!

ನಂಬಿಕೆಯ ನಯನಗಳು ನೈದಿಲೆಯ ರೂಪದಿ! 
ಪ್ರೀತಿಯ ಹೂರಣ ಜೀವನದ ವಾರಿಧಿ!! 
ಬಾಳ್ವೆಯ ಬೇಯ್ಗೆಗೆ ಇವೇ ಸ್ಪೂರ್ತಿ ಕಣಾ-ಶ್ರೀನಾಥ!!೬!!

ಹೃದಯದಿ ಪ್ರೇಮ ಪ್ರಣಯದಿ ಕಾಮ! 
ಮನ್ಮಥನ ಬಾಣಕೆ ಪುಷ್ಪಗಳ ಸಂಭ್ರಮ!! 
ರಸರಮ್ಯ ರಸಕಾವ್ಯ ಜೀವನ ನೋಡಾ-ಶ್ರೀನಾಥ!!೬!!

ಹಕ್ಕಿ ತಾ ತನ್ನ ಮರಿಗೆ ಗುಟುಕವೀವ ಪರಿ! 
ಕಾಂಗೊರೋ ಮಡಿಲಲ್ಲಿ ಮರುಜೀವ ಆ ಮರಿ!! 
ಪಾಲನೆ ಪೋಷಣೆ ತಾಯ್ತನದ ಬೆಳಕು -ಶ್ರೀನಾಥ!!೭!!

ಪ್ರಕೃತಿಯ ಕರೆಗೆ ಹೂ-ಹಣ್ಣು ಚಿಗುರೆಲೆಯು! 
ಸತ್ಯಜಗದ ಸೌಂದರ್ಯಕೆ ಪಂಚದೇವಗಳ ಮೆರುಗು!! 
ಜಗಜೀವ ಜೀಕಲು ನವರಸದಿ  ಬಂದೆ-ಶ್ರೀನಾಥ!!೮!!

ಕಾಡುಗಲ್ಲು ಮನಸ ಕಟೆದೆನ್ನ ಶಿಲೆಮಾಡ್ದೆ! 
ಸೀಳುಪಯಣದಿ ಕಾದು ಗುರಿಗೆನ್ನ ಕರೆದೊಯ್ದೆ!! 
ನಿಷ್ಫಲದಿ ಕಾಯ್ವ ನಿನ್ಮರ್ಮ ಬಲ್ಲವರಾರು-ಶ್ರೀನಾಥ!! ೯!!

ನೋವು-ನಲಿವುಗಳ ಸಮಚಿತ್ತದಿ ನೆಲಸಿ! 
ಜೀವನದ ಬಂಡಿಗೆ ರಸದೆಣ್ಣೆ ಸೇರಿಸಿ!! 
ಎನ್ನಾಟ ಸೈರಿಸಿ ಸಂತೈಸಿ ಕಾಯೋ-ಶ್ರೀನಾಥ!!೧೦!!

ರಚನೆ-ರಂಗನಾಥ.ಕ.ನಾ. ದೇವರಹಳ್ಳಿ 
ಶಿಕ್ಷಕರು. ತೀರ್ಥಹಳ್ಳಿ ತಾಲೂಕು.
👤👤👤👤👤👥👤👤👤👤👤
ನಾ ಕೋಲಾದೆ.. ನೀನಾರಿಗಾದೆ.! 


ಬಾಪೂಜಿಯ ಕೈಲಿ ಪರಕೀಯರಿಗೆ ಸಿಂಹಸ್ವಪ್ನವಾದೆ! 
ದನಗಾಯಿಗಳಿಗೆ ನಿಯಂತ್ರಣಾಸ್ತ್ರವಾದೆ!! 
ದೇಶಭಕ್ತ ಯೋಧರಿಗೆ ಧನುಸ್ಸೋಪದಿ ಬಂದೆ! 
ನೀನಾರಿಗಾದೆ ಎಲೆ ಮಾನವ!! ಪ!! 

ಗುರುವಿನಾ ಕೈಲಿ ಬುದ್ಧಿಬೋಧೆಯಾದೆ! 
ಆಹಾರ ಬೇಯ್ಗೆಗೆ ಊರಿವ ಕಟ್ಟಿಗೆಯಾದೆ!! 
ಸುಧಾರಕರ ಕೈಲಿ ಸನ್ನಡೆಸೋ  ಲೇಖನಿ ನೀನಾದೆ!! 
ನೀನಾರಿಗಾದೆ ಎಲೆ ಮಾನವ!! 

ತಂಬೂರಿಯನ್ನು ಮೀಟೋಕಡ್ಡಿ ನೀನಾದೆ! 
ನೆರಳಚಾವಣಿಗೆ ಆಧಾರವಾದೆ!! 
ತಂದೆಯ ಕೈಗೆ ತಿದ್ಧೋಕಾರಣವಾದೆ! 
ವಾಮನನ ಛತ್ರಿಗೆ ಹಿಡಿಕೆಯಾದೆ!! 
ನೀನಾರಿಗಾದೆ ಎಲೆ ಮಾನವ!! 


ಕುರುಡರಿಗೆ ನೀ ದಾರಿದೀಪವಾದೆ! 
ಪೋಲೀಸರಿಗೆ ರಕ್ಷಕಲಾಟಿಲಿ ನಿಂದೆ!! 
ಮಾಂತ್ರಿಕನ ಕರಗಳಲಿ ದಂಡವಾಗಿ ಮೇರೆಗೆ! 
ಕೋಲಾಟ-ಮೇಲಾಟ ಕೈಗಳಲಿ ನಡೆಸಿದೆ!! 
ನೀನಾರಿಗಾದೆ ಎಲೆ ಮಾನವ!! 

ಪೀಠಕ್ಕೆ ಧ್ಯಾನಕ್ಕೆ ಋಷಿದಂಡವಾದೆ! 
ಒಳಕಲ್ಲ ಒನಕೆ ಬೀಸ್ಕಲ್ಲ ಗೂಟವಾದೆ!! 
ರೈತಂಗೆ ಬಾರ್ಕೋಲು ಬರವಸೆಯಾದೆ! 
ಕೊನೆಗೆ ಚಟ್ಟಕ್ಕೂ ನಾನೇ ಬೆನ್ಕೊಟ್ಟೆ!! 
ನೀನಾರಿಗಾದೆ ಎಲೆ ಮಾನವ!! 

ರಚನೆ -ರಂಗನಾಥ. ಕ. ನಾ.
  ಶಿಕ್ಷಕರು ದೇವರಹಳ್ಳಿ. 
06/08/2000.
👤👤👤👤👤👤👤👤👤👤👤
2000ನೇ ಇಸವಿಯಲ್ಲಿ ರಚಿಸಿದ ಕವನ! 

ಕೀಳರಿಮೆ... 

ಮನಸೊಂದು ಸಂತೆಯಾಗಿದೆ! 
ಒಂದೊಂದೂ ಹಲವಾರಾಗಿದೆ!!
ಚಿಂತೆಯೋ ಚಿಂತನೆಯೋ ತಿಳಿಯದಾಗಿದೆ -ಶ್ರೀನಾಥ.!!

ನಾ ಬದುಕಿದೆಂತೋ ಗೊತ್ತಿಲ್ಲ! 
ನಾ ಸಾಯುವುದೆಂತೋ ಗೊತ್ತಿಲ್ಲ!! 
ಸಾಯಿಸದಿರು ಎನ್ನರಿವು -ಶ್ರೀನಾಥ!! 

ಜಾತಿ, ವರ್ಣ, ಅಂತಸ್ತೆಂಬ! 
ಮೂರರೊಂದಿಗೆ ಕೀಳರಿಮೆಯೆಂಬ!! 
ಜೀವ ಬೆರೆಸಿ ಮೆರೆಸದಿರು- ಶ್ರೀನಾಥ!! 

ಬದುಕಿನಲಿ ಹುಟ್ಟುಂಟು ಸಾವುಂಟು, !
ನೋವುಂಟು ನಲಿವುಂಟು!! 
ಸಮತೂಕದಿ ನೆಲೆಸೆನಮನಕೆ ಇವೆರಡ- ಶ್ರೀನಾಥ!! 

ಗುರುತಿಸುವವರಿಲ್ಲದಿಲ್ಲ ಈ ಜಗದಿ! 
ಗುರುತಿಸೋ ಮನಸಿಲ್ಲ ಸ್ವಾಭಿಮಾನದಿ!!
ತಾನ್ ಮೇಲೆಂಬ ಮರೆದಾಟವ ನಿಲ್ಲಿಸೋ-ಶ್ರೀನಾಥ!! 

ಕರಿಯ ನೀನು ಕುಬ್ಜನೆಂದು! 
ಕರಿಯಂತೆ ಕುಣಿಕುಣಿದು!! 
ಮತ್ತೇರಿದ ಗಜಕೆ ಸೋಲಿಲ್ಲವೇಕೆ-ಶ್ರೀನಾಥ!! 

ರಚನೆ-ರಂಗನಾಥ ಕ. ನಾ. 
    ಶಿಕ್ಷಕರು ದೇವರಹಳ್ಳಿ.
👤👤👤👤👤👤👤👤👤👤👤👤👤
ರಸಿಕನ ರಸಮಯ ಸೃಷ್ಟಿ! 

ರಸಕಾವ್ಯ ಕೃತಿಗಿಳಿಸಲು! 
ಹೊರಟವ್ರು ನಾವು ಜೀವಿಸಲು!! 
ಸರಸ-ಸಮರಸ ಒಲವು! 
ಅದುವೇ ಬಾಳ್ವೆಯ ಗೆಲುವು!! ಪ!! 

ನಲ್ಲೆಯ ಮುಂಗುರುಳ ಸುರುಳಿ! 
ಚೆಲ್ಲಿದ ಚೆಲುವನು ಮರಳಿ ಮರಳಿ!! 
ಬಳ್ಳಿಯ ಕುಡಿಯಂತೆ ತಬ್ಬಿಹುದು! 
ಕೆನ್ನೆ ಮೇಲೆ ಮುತ್ತ ಬಿತ್ತಿಹುದು!! ಪ!! 

ನಾರಿಯ ಮಾರಿಮ್ಯಾಲೊಳು! 
ಬಿಲ್ಲಂತೆ ಬಾಗಿ ಬೀಗುತಿಹ ಕರಿಹುಬ್ಬೇ!! 
ಹೆಣ್ಚಂದ ಕಣ್ಚಂದ ನಿನ್ನಂದದಿಂದ! 
ಗತ್ತು ಗಾಂಭೀರ್ಯ ಹುಬ್ಬೇರಿ ಬಂದ!! ಪ!! 

ಅಕ್ಷಿಗಳ ಮಾತೇ 
ನಿನ್ನಂತರಾಳವು! 
ಸೌಂದರ್ಯದಾತೆ ಈ ಚೆನ್ನೋಟವು!! 
ನೋಟದೋಳ್ ನಗುವ ಪರಿ!
ಅಂದಗಾತಿಗೆ ಶೃಂಗಾರವು!! ಪ!! 

ಹಂಸದ ನಡಿಗೆಯ ನಡುವಿನ ಸುಂದರಿ! 
ಬಳುಕುವ ಬಳ್ಳಿಯೇ ನಾಚುವ ಆ ಪರಿ!! 
ಡಾಬಾಗಿ ನಿತ್ಯವೂ ತಬ್ಬಲೇ ಕಿನ್ನರಿ! 
ಬೇಲೂರ ಬಾಲಿಕೆ ನಿಂತಳು ಅಚ್ಚರಿ!! ಪ!! 

ಜೇನ್ದುಟಿಯ ರಸಕವಳ ನಲ್ಲಗೆ! 
ಮುತೈತೆ ಮೂಜಗಕೂ ನಲ್ಮೆಗೆ!! 
ಆಗಬಾರದೇ ನಾ ತುಟಿಸವರೋ ನಾಲಿಗೆ! 
ಆಗಾಗ ತುಟಿಒದ್ಧೆ ಕಣ್ಗೆಲ್ಲಿ ನಿದ್ದೆ!! ಪ!! 

ಮುತ್ತಿನರಳಿನಾ ಸಾಲು ಆ ಧಂತದೋಳು! 
ಮಿನುಗೋ ನಕ್ಷತ್ರಗಳ ಆ ಕಿರಣದೋಳು!! 
ಅಂದಕಿಡಿದ ಕನ್ನಡಿ ಆ ಹೊಳಪಿನೊಳು! 
ಚಂದ ಚಂದ್ರಿಕೆ ನಿನ್ನ ನಾ ನೋಡಲು!!ಪ!! 

ಉಬ್ಬುವೆದೆ ಹಬ್ಬದೋಳ್! 
ಸಂಪಿಗೆಯೇ ನಾಸಿಕದೋಳ್!! 
ಶಂಕತೆರದಿ ನಾಕದೋಳ್! 
ಬಂಗಾರ ಶೃಂಗಾರಕೆ ಎನ್ನ ಸೆಳೆದೋಳ್!!ಪ!! 

ನಾಚಿಕೆ ಜೀವಂತ ಒಡವೆ ನಿನಗೆ! 
ನೆಲದಲ್ಲೇ ರಂಗೋಲಿ ಒಲವಿಗೆ!! 
ಅದುರಿದ ತುಟಿಯಲಿ ತೊದಲಿನ ಆಸೆ! 
ಬಿಗಿದಿರೊ ಎದೆಯಲಿ ಕಾಮನ ಕೂಸೆ!!ಪ!!         


ಸೃಷ್ಟಿಯೇ ಸಾಕ್ಷಿಯು ರಸಗಳಿಗೆಗೆ! 
ಮುಪ್ಪಿಲ್ಲ ರಸಿಕನೇ ಸಮರಸಕೆ!! 
ನವರಸದಿ ಶೃಂಗಾರ ಮೊದಲ್ರಸವು! 
ಸಾರ್ಥಕತೆ ಇರಲಿ ಬದುಕಲೊಲವು!! ಪ!! 

ಉಡುಗೆ-ತೊಡುಗೆ ಅವಳ ಅಲಂಕಾರವು! 
ಮುತೈದು ಒಡವೆಗಳೇ ಅವಳ್ಬಲವು!!
ನಿತ್ಯಜಗಕವಳ ಅಮೃತ ಸಿಂಚನವು! 
ಕತ್ತಲಲೂ ಕೈಹಿಡಿವ ಭಾಗ್ಯದಂತೊಲವು!!ಪ!! 

ಪುರುಷನ ಇರುವಿಗೆ ಪ್ರಕೃತಿ ನೆರವು! 
ಸಾರ್ಥಕ ಜನುಮಕೆ ಈರ್ವರಾ ಪ್ರೇಮವು!! 
ಹುಟ್ಟು -ಸಾವುಗಳ ಮಧ್ಯೆ ನಿಂತವರು ನಾವು! 
ಬಾಳೋಣ ಕಲ್ಪವೃಕ್ಷದ ಗುರುತಂತೆ!!ಪ!! 

ಪ್ರೀತಿಯ ನಾವೆಯ ಪಯಣಿಗರು ನಾವು!
ಬರುವಾಗ ಬರಿಗೈಲಿ ಬಂದವರು ನಾವು!! 
ಮುಕ್ತಾಯ ಮುಕ್ತಿಗೇನೂ ಹೊತ್ತೊಯ್ವೆವು!
ಇಂದೇ ಇದಷ್ಟು ಹಂಚಿ ಜೀಕುವೆವು!!ಪ!! 

ಮಾಯೆ ಈ ಗೋಡೆಗಳು ಅಸ್ತಿರವು! 
ದಾಟೋಣ ಬಂಧನವ ತೆರೆಅರಿವು!! 
ಬಾಳಲಿ ಪ್ರೇಮಿ ರಸಮಯವು! 
ಎಲ್ಲರೊಳಗೊಂದಾಗೋ ಸಾರ್ಥಕತೆಯು!! ಪ!! 

ರಚನೆ - ರಂಗನಾಥ ಕ ನಾ ದೇವರಹಳ್ಳಿ. ಶಿಕ್ಷಕರು ತೀರ್ಥಹಳ್ಳಿ ತಾಲೂಕು.
👤👤👤👤👤👤👤👤👤👤👤👤👤


👤👤👤👤👤👤👤👤👤👤👤

ಶ್ರೀ ರಂಗನಾಥ - ಪ್ರಾರ್ಥನೆ. 

ಗುರಿಕಾಣದೇ ವರಕಾಣದೇ.. ಬೀಳುತ್ತಿದ್ದೆ! ಬಡತನವೇ..
 ವರವಾಗಿ ಕಾಯ್ದೆ - ಶ್ರೀನಾಥ!!ಪ!! 

ದೊರೆಯಾಗಿ ಕಲಾವಿದೆ.. 
ತೊರೆಯಾಗಿ ಮನಗೆದ್ದೆ. 
ನಿನ್ನಕರುಣಾರವಿಂದದೊಳು ನಾ- ಶ್ರೀನಾಥ!! 

ಬಡವ-ಬಲ್ಲಿದನಾರೆಂದು ನಾನರಿಯೆ! 
ನಾನರಿಯುವುದೂ ಬೇಡ.. 
ಸುಡುನೀ ಈ ಮೂಢನಂಬಿಕೆಯ - ಶ್ರೀನಾಥ!! 

ನಾ ನಿನ್ನ ಕರುವಾಗಲು ಬಯಸುವೆ! 
ನೀಡೆನಗೆ ಆಸರೆಯ! 
ತೋರೆನಗೆ ಸನ್ಮಾರ್ಗವಾ-ಶ್ರೀನಾಥ!! 

ಭಕ್ತರುದ್ಧಾರಕೆ ಅವತರಿಪೆ ನೀ! 
ಶಕ್ತನಲ್ಲ ನಿನ್ನಂತೆ ನಾ! ಕಲ್ಪನೆಯಸಾರ ನೀಡಿ ಸಲಹೋ- ಶ್ರೀನಾಥ!! 

ಹೊರಟಿಹೆನು ರಚಿಸಲು ಕವನ! 
ಕೊಡೆನಗೆ ನಿನ್ನನುಮತಿನಾ! 
ಪ್ರತಿಭೆ ಜ್ಞಾನದರಿವು ಇಂದಾಗಿದೆ -ಶ್ರೀನಾಥ!! 

ರಚನೆ-ರಂಗನಾಥ ಕ. ನಾ. 

ಶಿಕ್ಷಕರು ದೇವರಹಳ್ಳಿ. 1-4-2000.
👤👤👤👤👤👤👤👤👤👤👤👤👤👤
ನನ್ನ ಗೆಳತಿ.. 

ಓ ನನ್ನ ಗೆಳತಿ ಮನದರತಿ! 
ಮರುಭೂಮಿ ಎನ್ನ ಮನದಗತಿ!! 
ನಿನ್ನನು ಕಂಡಾಗ ಓಯಸಿಸ್ ಕಂಡಂತಿ! 
ಆಕಾಶ ಕೈಗೆಟಕಿ ಮೈದಡವಿ ಬಂದಂತಿ!! 
ಮರೆಯದಿರು ಗೆಳತಿ ಮನದರತಿ!! ಪ!! 

ಸೊಕ್ಕಿ ಸೊರಗಿದ ಮನದಲ್ಲಿ! 
ನೀ ಆಸರೆಯ ಬಳ್ಳಿಯಾಗಿ!! 
ಕವನಕ್ಕೆ ಸ್ಪೂರ್ತಿಯಾಗಿ! 
ಎನ್ನ ಮನವ ಗೆದ್ದೆ... ಓ.. 
ದೂರವಾದಂತೆ ಮರೆಯಾಗಲಿಲ್ಲ! 
ನೀನು..ಭಾವನೆಗೆ ವರ್ಣನೆಗೆ!
ಎಟುಕದಾ ಪುಷ್ಫವಾದೆ!! 
ಎನ್ನಮನಗೆದ್ದೆ ಮನದರತಿ!! ನನ್ನ!! 

ಸದಾ ಹಸಿಯಾಗಿ ಹಸಿರಾಗಿತ್ತು! 
ಎಂದೂ ಹುಸಿಯಾಗದಿರಲಿ ನಿನ್ನ ನಗು!! 
ನಿನ್ನ ನಗುವಿನಲಿ ನನ್ನನ್ನೇ ಕಂಡಂತೆ! 
ತಿಳಿಯಾದ ಹುಣ್ಣಿಮೆ ಚಂದ್ರನಂತೆ! 
ಕೊನೆಯಾಗದಿರಲಿ ಅದು ಹುಸಿಬಿಂಬದಂತೆ!! ನನ್ನ!! 

ಓ ಶಾಂತ ಲೋಕದ ನಿರ್ಮಲ ರೂಪವೇ!
ಸದಾ ನನ್ನ ಜೀವನ ಚಿಲುಮೆಯೇ!! 
ಕೈ ಬೀಸಿ ಕರೆದಿದೆ ಬಾಳ ಒಲುಮೆಯೇ! 
ಬಾ ಬಂದು ಸೇರಿಕೊ ಆ ನಿನ್ನ ಸ್ಥಾನ! 
ಚಿರವಾಗಿ ಬೆಳಗೆನ್ನ ಪ್ರೇಮಸನ್ನಿದಾನ!! ನನ್ನ!! 

ರಚನೆ - ರಂಗನಾಥ ಕ. ಈ ನಾ. 

ಶಿಕ್ಷಕರು ದೇವರಹಳ್ಳಿ.

👤👤👤👤👤👤👤👤👤👤👤👤👤
Winter.... Winter. 

Good morning aglor... 
How are you winter!! 

Will you give the dew! 
You look like a snow!! 
Will you give the cold! 
You look like a cloud!!good!! 

Dew fed clouds flow! 
Shivering world slow!! 
Fingers vibrating Low! 
Lips spit dew in glow!! Good!! 

Packing myself with clothes! 
Sitting in shiver beside fire!! 
Falling brame on our head! 
Flinting the breeze on flowers head!! Good!! 

Where are you going aglore! 
Ho.. Sun is coming on seashore!! 
Liquesent dew is disappear! 
Bai bai winter... Winter.!! Good!! 


By Ranganatha KN teacher ghps Jogikoppa Thirthahalli thalluk.

👤👤👤👤👤👤👤👤👤👤👤👤👤
ಆ ಸಿಹಿ-ಕಹಿ ದಿನಗಳು

ನೆನಪಿನಾ ಹಕ್ಕಿಗೆ ರೆಕ್ಕೆಯ ಕಟ್ಟಲು! 
ಆಗಸದಿ ಹಾರುತಿವೆ ಆ ನೆನಪುಗಳ ಸಾಲು!!
ಕಣ್ಮುಚ್ಚಿ ಕುಳಿತು ಹಿಂತಿರುಗಿ ನೋಡಲು!
ಬಾಲ್ಯದೋಳ್ ಹತ್ತಿದ ಒಂದೊಂದು ಮೆಟ್ಟಿಲು!!ಪ!! 

ಆಸೆಗಳು ಸಾವಿರ ಆಗಸದ ಎತ್ತರ! 
ಚಿಗುರ್ಗಣ್ಣಲಿ ಕನಸುಗಳ ಕಾತರ!! 
ಆಟ-ಪಾಠದೋಳ್ ನೋವುಗಳೇ ದೂರ! 
ಆದರೂ ಬಾಲ್ಯವೇ ಅತೀಸುಂದರ!!ಪ!! 

ಮೊದಲ್ಮಳೆ ಕೆನ್ನೀರ ಮಜ್ಜನ! 
ಚಳಿಗವರೆ ಸುಟ್ಟು ತುಟಿಕಾಡಿಗೆ ಲೇಖನ!! 
ಕುಟ್ಟಿಂಡಿ ಧೋರುಣಸೆ ಚಪ್ಪರಿಸಿ ನಾ! 
ಏನ್ ಹೇಳಲೀ ಆ ದಿನದ ಸಂಭ್ರಮನಾ!!ಪ!! 

ಜಾತ್ರೆ -ಸಂತೆ ಸುತ್ತಾಟ! 
ಜ್ಞಾನದಸಿವಿನ ಕಿತ್ತಾಟ!! 
ಬಂಡೆಕವಿ ಬೆಟ್ಟತಿರುಗಾಟ! 
ಅಬ್ಬಬ್ಬಾ ಗುಡಿಗೋಪುರ ರಸದೂಟ!! ಪ!! 

ಮರಕೋತಿ ಚಾಚಂಡು ಬುರಿಯಣ್ಣ! 
ಬಟ್ಟೆಗಳ ಅರಿವಿಲ್ಲ ಬರಿ ಮೈಯಣ್ಣ!! 
ನೆರೆಮನೆ ಬಟ್ಟೆ ಹಾಕಿ ಮೆರ್ದ್ವಣ್ಣ! 
ಹೇಳೋದೇನಿದೆ ಆಗ ಬಡವ್ರಣ್ಣ!! ಪ!! 

ಮೊದಲ್ನೋಟ ಮೊದಲ್ಪ್ರೀತಿ! 
ಬಡತನದ ಬೇಗೆಗೆ ತಂಗಾಳಿ ರೀತಿ!! 
ತರಗತಿಗೆ ಮೊದಲ್ಬಂದು ಉಬ್ಬಾರೈತಿ! 
ಹರಿದ ಚಡ್ಡಿಯೋಳ್ ಗತ್ತು ಅಂಗೈತಿ!!ಪ!! 

ಒಂದೊಮ್ಮೆ ಶಾಲಿಬಿಟ್ಟಿದ್ದು! 
ಗುರುಗಳೇ ಎನ್ನ ಕೈಹಿಡಿದಿದ್ದು!! 
ಓದಿಸಲು ಅವ್ವ ಸೊಪ್ಮಾರಿದ್ದು! 
ಕಣ್ಣೀರೊಳು ಆ ಶಾರದೆ ಮನಸೇರಿದ್ದು!! ಪ!! 

ಸ್ನೇಹಿತರ ಒಡನಾಟ! 
ಸ್ನೇಹಿತೆಯ ಕಣ್ಪಾಠ!! 
ನಾಮುಂದು ತಾಮುಂದು! 
ಗುರುಗಳಾ ಪ್ರಶಂಸೆಯಾ ಗೀತಂದು!! ಪ!! 

ಬಾನಂಗಳಕೆ ಪಟಪತಂಗದಾರಾಟ! 
ಜೀಗುಟ್ಟೋ ಜೀರ್ಜಿಂಬೆಗೆ ಪೊಟ್ಟಣದಿ ಊಟ!! 
ಮನೆಯಲ್ಲಾ ದಡಗುಟ್ಟೋ ಮೂಶಿಕನ ಕಾಟ! 
ಮೀನು-ಏಡಿಗಳ ಜೊತೆ ನಮ್ಮ ನೀರಾಟ!!ಪ!! 

ಚಿತ್ರ ಗಾನ ಅಭಿನಯ ಮಾಡಿ! 
ಮಾವಿನ ಹಲಸಿನ ಸವಿದದ್ದು ನೋಡಿ!! 
ಕಪ್ಪು-ಬಿಳುಪು ಪ್ರಸಾರ ಕಣ್ಣರಳಿಸಿ ನೋಡಿ! 
ಬಿಲ್ಲುಬಾಣ ಕಟ್ಟಿ ಯುದ್ಧವೇ ಮಾಡಿ!! ಪ!! 

ಹೇಳಲೊರಟರೆ ದಿನವೆಲ್ಲಾ ಸಾಲದು! 
ಬಂಗಾರದ ಬಣ್ಣದ ಮಜಲದು!! 
ಆ ದಿನ ಆ ಕಾಲ ಜೇನಿನ ಸವಿಯಂತದು! 
ಜನರೆಲ್ಲ ಒಟ್ಟಾಗಿ ಕಲೆತ ಹಬ್ಬವದು!!ಪ!! 


ಏನೇ ಆಗಲೀ ನಮ್ಮೀ ನಿಲುವಿಗೆ! 
ನಾವು ಕಂಡ ಯಶಗಾತೆಗೆ!!
ಬುನಾದಿಯ ಮೆಟ್ಟಿಲಿವೆಮಗೆ! 
ಆ ನೆನಪೇ ಸ್ಪೂರ್ತಿ ಬವಿತವ್ಯಕೆ!!ಪ!! 

ರಚನೆ-ರಂಗನಾಥ ಕ. ನಾ. 

  ಶಿಕ್ಷಕರು ದೇವರಹಳ್ಳಿ.
👤👤👤👤👤👤👤👤👤👤👤
ಮರುಜನ್ಮವೆಂಬ ಮರೀಚಿಕೆ! 

ಮುಂದೊಂದು ಬೆಳಕು ಕೈಚಾಚಿ ಕರೆದು! 
ಮರುಜನ್ಮ ಮರುಜಗವ ಪೊರೆದು!! 
ಮುಂದೊಂದು ಭರವಸೆಯು! 
ಕರ್ಮಫಲದ ನೆರಳಾಗಿ ನಡೆದು!! ಪ!! 

ಇಲ್ಲೇ ಬದುಕು ಇಲ್ಲೇ ಹುಡುಕು! 
ಎಲ್ಲೋ ಬರುವ ಕಿರಣದ ತಳುಕು!! 
ಜೀವನದ ಪಯಣದ ಜರುಕು! 
ಆಸೆಬಿಟ್ಟು ನಿಷ್ಫಲದಿ 
ಜೀಕು!!ಪ!! 

ನಾಲ್ಕು ದಿನದ ಸಂತೆ ಸಾಕಾಗಿದೆ! 
ಮುಂದಿನ ದಿನಸಂತೆ ಬೇಕಾಗಿದೆ!! 
ಮರುಜನ್ಮ ಮರುಜೀವ ಚಿಗುರೊಡೆದಿದೆ! 
ಇಲ್ಲಿರದ ಬದುಕ ಅಲ್ಬಯಸಿದೆ!!ಪ!! 

ಆವ ಕಾಯಕೆನ್ನ ಕಳಿಪುವೆಯೋ! 
ಆವ ಸಂಕುಲದ ಭಾಗವಾಗಿಸುಯೋ!!
ಸ್ವಾರ್ಥ ಅಸೂಯೆಯ ಅಂಗಿಲ್ಲದ!
ತನುವನಪ್ಪಲು ಅನುವಾಗಿಸು!!ಪ!! 

ನಾಳೆಯೆಂಬ ಮರೀಚಿಕೆ ಹಿಡಿದು! 
ಇಂದಿನ ಹರ್ಷವ ಈಯದೇ ಮೆರೆದು!! 
ಜನ್ಮದ ಕಾರಣ ಕ್ರಯಿಸದೇ ಉಳಿದು! 
ನೀಡೆನಗೆ ನಿಷ್ಫಲದ ನಿಷ್ಕಾಮ ಜನ್ಮ!!ಪ!! 

ಜೀಕಿದ್ದು ಆಯ್ತು ಜನಿಸಿ ಈಸಿದ್ದು ಆಯ್ತು! 
ಕರ್ಮಫಲವೆಂಬ ಬಾಲಹಿಡಿದು ನಡೆದದ್ದಾಯ್ತು!! 
ನೋವು-ನಲಿವು ಹಾದಿ ಸವೆಸಿದ್ದಾಯ್ತು! 
ಮರುದಾರಿ ನೀಡು ಎಲ್ಲದಕೂ ಮುಕ್ತಿ!!ಪ!! 

ತಾಯಋಣ ತೀರಿಸಲು!
ನಾರನಾಡಿ ನುಡಿಯಾಗಿಸಲು!! 
ಗುರುವಾಗಿ ದೈವಕೆ ಸನಿಹಿಸಲು! 
ಎಲ್ಲರೊಳಗೊಂದಾಗಿ ನೆಲೆನೀಡಲು!!ಪ!! 

ಮಾನವನಾಗಿ ಜೀವಸಿ ಹಸಿರ್ನೀಡಲು! 
ಜಗದನ್ನ ನೀಡಿ ಮನಸೇರಲು!! 
ಪ್ರೇಮದ ಕಂಪು ನೀಡಿ ಸಂತೈಸಲು! 
ನೀಡೆನಗೆ ಮರುಜನ್ಮ ಮನುಕುಲದಿ ಈ ನಾಡೊಲು!! ಪ!! 

ರಚನೆ-ರಂಗನಾಥ ಕ. ನಾ. 

ಶಿಕ್ಷಕರು ದೇವರಹಳ್ಳಿ.
👤👤👤👤👤👤👤👤👤👤👤👤👤
ನನ್ನ ಮನದರಸಿ.!

ನನ್ನವಳು ನನ್ನವಳು ನನ್ನೆದೆಯ ಕಾಯುವಳು!
ನನ್ನನ್ನು ಪ್ರೀತಿಸುವ ನನ್ನಜೀವದುಸಿರಿವಳು!!

ಮೂಡಣದಿ ನೇಸರನು ಮೈತುಂಬಿ ಬಂದಂತೆ!
ಕೆಸರಲ್ಲಿ ಕಮಲವು ಮೈದಡವಿ ಅರಳ್ದಂತೆ!!
ಆಗಸದ ಹಬ್ಬಕೆ ನವಿಲಿನ ನರ್ತನದಂತೆ!
ನನ್ನವಳು ನನಗೆ ಹಾಲ್ಗಡಲ ಶಶಿಯಂತೆ!! ನನ್ನವಳು!!


ಬೆಂದ ಬೇಸಿಗೆಯ ತಂಪಿಸುವ ಮೊದಲ್ಮಳೆಯಂತೆ!
ಬತ್ತಿದಾ ಒಡಲಿಗೆ ಅನ್ನವೀವ ಅನ್ನಪೂರ್ಣೆಯಂತೆ!!
ಪ್ರೀತಿಯ ಹೊಳೆಗೆ ಸೇರುವಾ ತೊರೆಯಂತೆ!
ನನ್ನವಳು ನನಗೆ ಅಮೃತದಾ ಸಿಂಚನದಂತೆ!! ನನ್ನವಳು!!


ಅವಳ ಕಣ್ಣೋಟ ಕೋಲ್ಮಿಂಚಿನಂತೆ!
ಅವಳ ನುಡಿಗಾತೆ ಮುತ್ತಿನಹಾರದಂತೆ!!
ಅವಳ ಬಿಗುನಡಿಗೆ ಹಂಸದಾನಡೆಯಂತೆ!
ನನ್ನವಳು ನನಗೆ ಅಪ್ಸರೆಯಾಗಿ ಬಂದಂತೆ!! ನನ್ನವಳು!!

ನಾದಕೆ ಸ್ವರಸೇರಿ ಸುರಗೀತೆಯಾದಂತೆ!
ಹಕ್ಕಿಯಾ ಹಾಡಿಗೆ ಕಾನನವು ಮೈದೂಗಿದಂತೆ!!
ಊರ್ವಶಿ ರಂಭೆಯರೇ ನಾಚುವ ರೂಪಸಿಯಂತೆ!
ನನ್ನವಳು ನನಗೆ ಜೀವನ ನೀಡೋ ಧರಣಿಯಂತೆ!! ನನ್ನವಳು!!


ರಚನೆ -ರಂಗನಾಥ ಕ ನಾ ಶಿಕ್ಷಕರು ತೀರ್ಥಹಳ್ಳಿ.
👤👤👤👤👤👤👤👤👤👤👤👤👤
ನನ್ನವಳ ಸಂತೈಕೆ.!!


ನಿನ್ನ ನೋಟ ಸೂಜಿಯ ಬೀರಿ!
ಎದೆಗೆ ನಾಟಿ ಉಸಿರ್ಹೀರಿ!!
ಕಾಡಲು ಕಾರಣ ಕೋರಿ!
ಏನೆಂದು ಹೇಳಲಿ ನನ್ನವಳಿಗೆ!! ಪ!!

ಒಕ್ಕಣ್ಣ ಕಿತ್ತರೆ ನೋಟವಿನ್ನೆಲ್ಲಿ!
ಬರಿಗಣ್ಣ ಭರವಸೆಯ ಬೆನ್ನಲ್ಲಿ!!                      ಆಕಾಶ ಕಳಚಿ ಮೈಗೆರಗಲಿ!
ಶರಧಿಯುಕ್ಕಿ ಮುಳುಗಿ ಮನದಲಿ!! ನಿನ್ನ!!

ರಕ್ಷಿಸುವ ಭಾಷೆ ಮರೆಯಾಯಿತು!
ರಕ್ಷಕನೆ ಭಕ್ಷಿಸಿ ಮರೆದಾಯಿತು!!
ಇಬ್ಬನಿಯ ಮನಕೆ ಬರವಾಯಿತು!
ಸಂಧ್ಯಾ ಸಮಯ ಬಂದಾಯಿತು!! ನಿನ್ನ!!

ಕಣ್ಣಲಿ ನೋವಾ ನುಂಗಲೂ ಬೇಡ!
ಮನಬಾರ ತನುಬಾರ ಬೇಡವೇಬೇಡ!!
ಉಕ್ಕಿ಼ರುವ ಬಿಕ್ಕನು ತಡೆಯಲೂಬೇಡ!
ಬಿಟ್ಟುಬಿಡು ಗೆಳತಿ ಬಗಿಹಿಡಿಯಬೇಡ!! ನಿನ್ನ!!

ತುಟಿಬಿಚ್ಚಿ ನಕ್ಕು ಹೊನಲರಿಯಬಿಡು!
ಕಣ್ಣಕೊನೆಯ ಹನಿಯ ಹರಿಯಬಿಡು!!
ಭವಿಷ್ಯದ ಬಾಗಿಲ ತಟ್ಟಿಬಿಡು!
ನಾನಿಲ್ಲವೇ ನಿನಗೆ ದುಗುಡ ಬಿಡು!! ನಿನ್ನ!!

ಕಣ್ಣರಳಿಸಿ ನೋಡು ಕಣ್ಮುಂದಿದೆ ಸತ್ಯ!
ಶಾಶ್ವತವು ಯಾರು ಈ ಜಗದಿ ನಿತ್ಯ!!
ಪಯಣವಾ ಮುಗಿಸಲು ಕಾತರಿಕೆ ನಿತ್ಯ!
ಜವರಾಯ ಮಗಳಿಗೆ ಕಾದಿರುವ ಸತ್ಯ!! ನಿನ್ನ!!

ಬಿಡುಸತಿ ಮಗಳೆಂಬ ಮರ್ಮ!
ಮುಗಿಸಿಯಾಯ್ತು ಅವಳೆನ್ನ ಕರ್ಮ!!
ನೀಲಿಯಾಗಸಕೆ ಅತಿಥಿಯಾಗಮ!
ಪಿಕಪತ್ಯೆ ಕೈಬೀಸಿ ಕರೆದಂತೆ ಧರ್ಮ!! ನಿನ್ನ!!

ನಿನಗಿತ್ತ ಭಾಷೆ ಭರಿಸದವ ನಾನು!
ಇನ್ನೇನು ಗೆಳತಿ ವಿಧಿ ಗೆದ್ದು ಬೀಗ್ಯಾನು!!
ದುಃಖದ ಮಡುವಿಗೆ ಎಮ್ಮ ದೂಡ್ಯಾನು!
ಎದ್ದೇಳು ನಿನ್ನನು ಸಹಿಸೆನೂ ನಾನು!! ನಿನ್ನ!!

ಬರಿದಾದ ನಿನಮನಕೆ ಬೆಳಕಾಗಿ ಬರುವೆನು!
ಪ್ರೀತಿಯ ಪಯಣಕೆ ಸಾರಥಿಯಾಗುವೆನು!!
ನಿನ್ನೊಲವ ಸ್ಪೂರ್ತಿಗೆ ಹೃದಯದಲ್ಲಿ ಕಾಯುವೆನು! ಉಸಿರ್ನೀಡಿ ನಿನಗೆ ಉಸಿರಾಗುವೆನು!! ನಿನ್ನ!!

ರಚನೆ-ರಂಗನಾಥ ಕ. ನಾ.
   ಶಿಕ್ಷಕರು.ತೀರ್ಥಹಳ್ಳಿ.
👤👤👤👤👤👤👤👤👤👤👤👤👤👤👤
ಸಂತೆಯೆಂಬ ಸಂಭ್ರಮ.!

ಸಾಲು ಸಾಲಾಗಿ ಇರುವೆಯಂತೆ!      ಸಾಗಿತಮ್ಮ ಜನ ಕೆನ್ಧೂಳು ಕೆದರಿದಂತೆ!!
ಬಲುಜೋರು ನಮ್ಮೂರಸಂತೆ!
ಗಗನ ಮುಟ್ಟಿ ಕರೆದಿತ್ತು ವಾರದ ಸಂತೆ!! ಪ!!

ಬಿಸಿಲ್ಮಳೆ ಕೊಳೆಯೆನ್ನದೆ!
ಕಿಕ್ಕಿರಿದ ಜನ ನೆಲಕಾಣದೆ!!
ಗುಡ್ಡೆ ಗುಡ್ಡೆ ಕಳೆಕಟ್ಟಿದೆ!
ವಿಭಿನ್ನ ಫರಾಕು ಕೂಗಿಕರೆದಿದೆ!! ಪ!!


ಜಾತಿ-ಜನ್ವಾರ ಜೊತೆಗಿಲ್ಲ!
ಧಮ್ಮ-ದಂದೆಗಳ ಮರೆತಿಲ್ಲ!! ಪ್ರೀತಿ-ನೀತಿಯ ಕರೆಗೆ ಸೋತವರಿಲ್ಲ!
ಚೌಕಾಸಿ-ಚಮಕಿಸಿ ಬರ್ತಿವಲ್ಲ!! ಪ!!

ಗೋಧೂಳಿ ಸಮಯಕೆ ಜೋರು!
ಬಿಡಾರದಂಗಡಿಗಳ ಕಾರುಬಾರು!!
ಬಡವ ಸಿರಿವಂತನೆನ್ನದೇ ಹೊರಟರು!
ಎಲ್ಲರಿಗೂ ಸಂತೆ ತವರೂರು!! ಪ!!

ಇವರ ಬಾಯಿ ಅವರ ವಿಷಯ!
ಕೇಳೋಕಿವಿಗೆ ಹಾಕ್ದಂಗೆ ಕಷಾಯ!!
ನೂರು ಸುದ್ದಿ ನೂರುಮಾತು!
ಕೇಳಿನಿಂತೆ ಮನಸೋತು!! ಪ!!

ಸಂತೆಯೇ ಸಂಬಂಧಗಳ ಬೆಸುಗೆ!
ಸೌಂದರ್ಯಗಳ ಸಿರಿಸೊಗೆ!!
ಪ್ರೇಮಿಗಳ ಎದೆಯ ನಗೆ!
ನವಮುಖ ನವನೋಟ ಬಗೆ ಬಗೆ!! ಪ!!

ದರಪಟ್ಟಿ ಬಡವರ ಪಾಲಿಗೆ!
ಬಿಡಿಧನ ಸಾಹೇಬರ ಜೇಬಿಗೆ!!
ಕೈಚಾಚೋ ಕೈಗಳ ಕಿರುನಗೆ!
ಕೈಬೀಸಿ ಕರೆಯೋ ನಿಜಬಗೆ!!ಪ!!

ತರಾವರಿ ತಿಂಡಿ ತರಕಾರಿ!
ಧಿನಿಸು ಧಾನ್ಯ ಮಾರಿ ತರಾತುರಿ!!
ನೇಸರನು ಪಡುವಣದಿ ಹೋಗಲು ಜಾರಿ!
ಜೋರಾಯ್ತು ಸಂತೆ ಭಾರಿ ಭಾರಿ ಭಾರಿ!! ಪ!!

ರಚನೆ-ರಂಗನಾಥ ಕ. ನಾ.
  ಶಿಕ್ಷಕರು ತೀರ್ಥಹಳ್ಳಿ.
👤👤👤👤👤👤👤👤👤👤👤👤👤👤
ಹಬ್ಬಗಳ ತೋರಣ.

ಪ್ರೀತಿಯ ಹೂರಣ, ಬಾಂಧವ್ಯದ ಅಂತಃಕರಣ!
ಬೆಸುಗೆ ಬಂಧನ, ಸಂಬಂಧಗಳ ತೋರಣ!!
ಏಕತೆಯ ಆಶಾಕಿರಣ,        ಈ ಹಬ್ಬಗಳ ಆಚರಣ!
ಧರ್ಮಗಳ ಧಿಬ್ಬಣ,
ಸಂಸ್ಕೃತಿಯ ಅನಾವರಣ!!

ಒಂದೊಂದು ಆಚರಣೆ!
ಭಕ್ತಿ ಭಾವ ಸಮರ್ಪಣೆ!!
ಹೊಸಬಟ್ಟೆ ಹೊಸಗಣಿ!
ಹಸುಭಾವ ಜಾಗರಣೆ!!

ತರಾವರಿ ಒಗ್ಗರಣೆ ಹಾಕಿ!
ತರತರ ತಿಂಡಿ ಚಕ್ಕಲಿ ಹಾಕಿ !!
ಚಪ್ಪರಿಸಿ ತಿಂದು ತೇಗಿ ತೇಗಿ!
ತಾಂಬೂಲ ಸವಿಯುತ್ತ ಸಾಗಿ!!

ಜನಕ್ಕೊಂದು ಹಬ್ಬ!
ಮನಕ್ಕೊಂದು ಹಬ್ಬ!!
ಮತಜತಕ್ಕೊಂದು ಹಬ್ಬ!
ಸುಖದುಃಖಕ್ಕೂ ಹಬ್ಬ ಹಬ್ಬಬ್ಬಾ!!

ಮೊದಲೆಲ್ಲ ಹಬ್ಬ ಸಹಬಾಳ್ವೆ!
ಈಗಂತೂ ಪ್ರತಿಷ್ಠೆಯ ಗೊಡವೆ!!
ನರರೊಳಗೆ ರಕ್ಕಸನಂತಿರುವ!
ಭಾವನೆಗೆ ವೇದಿಕೆ ಈ ಹಬ್ಬವೇ!!

ನನ್ನವರ ನಮ್ಮವರಾಗಿಸಿ!
ದುಃಖ ದುಮ್ಮಾನ ಮರೆಸಿ!!
ಭಕ್ತಿ ಬದುಕಿನ ದೀಪ ಹಚ್ಚಿಸಿ! ಮನಬೆಳಗಗೆನ್ನ ಮನ ಬೆಳಗಿಸಿ!!

ಹೊಸತಾಗಿ ಬಂದ ಯುಗಾದಿ!
ಬೇವುಬೆಲ್ಲತಂದ ಸಂಕ್ರಮದಿ!!
ಶಿವ ಶಿವಾ ಎಂದ ಶಿವಗಣದಿ!
ನೂರಾರು ಆಚರಣೆ ಈ ಜಗದಿ!!

ಹುಟ್ಟಿಗೊಂದು ಹಬ್ಬ!
ಬಾಳಿದ ವರ್ಷಕೊಂದು ಹಬ್ಬ!!
ಬತ್ತಿದ ಬೆಳೆ-ಮಳೆಗೊಂದು ಹಬ್ಬ!
ಈಗ ಗೆಲುವು ದಿನವೆಲ್ಲಾ ಹಬ್ಬ!!

ಹೆಂಗಳೆಯರ ಸಿಂಗಾರ!
ಹಸುಳೆಗಳ ಝೇಂಕಾರ!!
ಊರು-ಕೇರಿ ಅಲಂಕಾರ!
ನೋಡಮ್ಮ ದೈವಗಳ ದರ್ಭಾರ!!

ಇಳೆಗೆ ಮಳೆ ನಿಸರ್ಗದಬ್ಬ!
ಜಲಧಾರೆ ಜೀವರಾಶಿಗಬ್ಬ!!
ಸಮೃದ್ಧಿ ಮನುಕುಲಕಬ್ಬ!
ಅಬ್ಬಬ್ಬಾ ಜಗಕೆಲ್ಲ ಸಿರಿಹಬ್ಬ!!



ರಚನೆ -ರಂಗನಾಥ ಕ. ನಾ.
        ಶಿಕ್ಷಕರು ತೀರ್ಥಹಳ್ಳಿ.

👤👤👤👤👤👤👤👤👤👤👤👤👤👤


ಮುಸುಕಿದ ಮೋಡ..

ಚಂದದಂತ ಹೆಂಡತಿಗೆ!
ಅಂದವಾದ ಸುತ ಧರೆಗೆ!!
ಜನ್ಮವೆತ್ತು ಬದುಕಿದ ಬಗೆ!
ಕಥೆ ಹೇಳುವೆ..ನಾ ಕಥೆ ಹೇಳುವೆ!!ಪ!!

ರಾಮುಹಳ್ಳಿ ರಾಮನಿಗೆ!
ಸೀತೆಯೆಂಬ ನಿಜಸತಿಗೆ!!
ಹುಟ್ಟಿದಾ ರವಿಯೆಂಬ ಕಂದ!
ಹುಟ್ಟುತ್ತಾ ತಾಯಿಯನ್ನೇ ತಿಂದ!!ಕಥೆ!!

ಗೌಡ್ರ ಮನೆ ಜೀತದವ!
ಮಗನ ಜೀತಕ್ ನೂಕಿದವ!!
ಊಟ ಭಟ್ಟೆಗಿಲ್ಲದವ!
ನಮ್ಮ ರಮು ಬಡವನಿವ!!ಕಥೆ!!
ಮೇಣದಂತೆ ದಡಿದರೂ!
ಮಗನ ಜೀತಕಿಟ್ಟರೂ!!
ತೀರದಾಯ್ತೆ ಸಾಲವು!
ಅಪ್ಪ ಮಗನ ಕರ್ಮಫಲವು!!ಕಥೆ!!

ಕೂಲಿಯಲ್ಲೆ ಬೆಳದ ರವಿ!
ಶಿಕ್ಷಣವ ಮರೆತ ಕವಿ!!
ಕನಸುಗಾರನಾಗಿ ಬೆಳೆದ!
ಪ್ರಕೃತಿಯ ಪೊಗಳಿ ಪಾಡಿದ!!ಕಥೆ!!

ಕರಿಯನಿವ ಕುಬ್ಜನು!
ತಾಯಿನುಂಗಿ ಬಂದನು!!
ಎಂದು ಜರಿವ ಜನರೆದುರು!
ಒಪ್ಪ ಗಾಯಕನಾದನಿವನು!!ಕಥೆ!!


ಗೌಡ್ರಿಗೊಬ್ಳು ಮಗಳುಯಿದ್ದು!
ರವಿಯ ಕಂಠಕೆ ಸೋತು!!
ಮನದ ಅರಸನಿವನೇ ಎಂದು!
ಕನಸಕಟ್ಟಿ ಹಕ್ಕಿತೆರದಿ ಹಾರುತಿದ್ದಳು!!ಕಥೆ!!

ಹೊಲಗದ್ದೆ ತೆವರುಕಳೆ!
ಬೆಟ್ಟಗುಡ್ಡ ಹಸಿರುಮಳೆ!!
ಪ್ರೀತಿಸಾಕ್ಷಿಯಾಯ್ತು ಇಳೆ!
ರವಿಶಶಿಯ ಪ್ರೇಮಕಹಳೆ!!ಕಥೆ!!

ಉಸಿರ್ಗುಸಿರು ಬೆರೆತೋಯ್ತು!
ನೇಸರನು ನಾಚಿಯಾಯ್ತು!!
ಯಾರಉರಿಗಣ್ಣು ಬಿತ್ತು!
ಗೌಡ್ರಿಗೆಲ್ಲಾ ಗೊತ್ತಾಯ್ತು!!ಕಥೆ!!

ಊರಿಗೂರೆ ಗುಲ್ಲಾಯ್ತು!
ಪಂಚಾಯ್ತಿ ಮೊದಲುಮಾಡ್ತು!!
ಪಂಚಮರ ಸಮ್ಮುಖದಿ!
ಗೌಡ್ರ ಊರುಭಂಗವಾಯ್ತು!!ಕಥೆ!!

ಸೇಡಿನಾ ಜ್ವಾಲೆಗೌಡ!
ಶರತ್ತಿನ ಬಲೆಹೆಣೆದ!!
ಹತ್ತುಲಕ್ಷ ವರಹದ!
ವರನಾಗಿ ಬಾಎಂದ ಗೌಡ!!ಕಥೆ!!

ದಿಕ್ಕುತೋಚದಾ ತಂದೆ!
ಸಹಿಸದಾದ ಪರನಿಂದೆ!!
ಕಳಿಸಿ ಮಗನ ಕೊರಗದೆ!
ವಿಧಿ ಪೇಟೆದಾರಿ ಹಿಡಿಸಿದೆ!!ಕಥೆ!!

ಪ್ರಿಯೆಶಶಿಯ ಕಂಡ ರವಿ!
ಬರುವೆನೆಂಬ ಭಾಷೆಗೆರವಿ!!
ಭಾರಮನದಿ ಬೀಳ್ಕೊಡವಿ!
ಪೇಟೆದಾರಿ ನಡೆದ ರವಿ!!ಕಥೆ!!

ಊರುಕೇರಿ ದಾರಿದೂರ!
ನದನದಿ ಶಿಖರ ದಾಟಿಪೋರ!!
ಹಾಡಿಪಾಡಿ ತೇಲಿ ಶಿಖರ!
ಸೇರ್ದ ಕೊನೆಗೆ ದೂರದೂರ!!ಕಥೆ!!

ಗೆಳೆಯನಿರುವ ಕಾವನವ!
ಬಿಗಡದೂರ ಮಾಡ್ವನವ!!
ಶಂಕರನ ನಾಮದೇಯನವ!
ಎಂದು ಮನೆಗೆ ಹೋದನಿವ!!ಕಥೆ!!

ಆಘಾತ ಕಾದಿತ್ತು!
ಅದು ಸಾವಮನೆಯಾಗಿತ್ತು!!
ಪಿತನಗಲಿಕೆ ನೋವಚಾಚಿತ್ತು!
ನೋಡ್ದರವಿಮನ ಕುಸಿಯಿತು!!ಕಥೆ!!

ಶಂಕರನು ಕೆಲಸವಂತು!
ಕೊಡಿಸಿದನು ತಕ್ಕುದಂತು!!
ಸ್ನೇಹದಿ ಕಲೆತರು ಪರಂತು!
ವಿಧಿಯದಾಳದಾಟದಿ ಪಗಡೆಯಾದರು!!ಕಥೆ!!

ಸ್ನೇಹಿತನ ತಂಗಿ ಮಂಜು!
ಒಳಗೆ ಪ್ರೇಮಕಾವ್ಯ ಬುರುಜು!!
ರವಿಯಗಾನಕೆ ಸೋತು!
ಕನಸಗೋಪುರದ ಗೀತು!!ಕಥೆ!!

ತುಟಿ ಬಿಚ್ಚಲಿಲ್ಲ!
ಮನ ಹಂಚಲಿಲ್ಲ!!
ಅರಿಯದ ರವಿಗಿದೆಲ್ಲ!
ಸ್ನೇಹಿತೆಯೆಂದು ತಿಳಿದನಲ್ಲಾ!!ಕಥೆ!!

ಇವನಕಥೆ ಇವಹೇಳದೇ!
ಅವಳ ವ್ಯಥೆ ಅವಳೇಳದೆ!!
ಸ್ವಪ್ನಲೋಕದಲು ಇವರದೆ!
ಪ್ರೇಮಲೋಕ ಸೃಷ್ಠಿಯಾಯ್ತೇ!!ಕಥೆ!!

ಅರ್ಜಿಸಿದ ಹಣವ ಕೋಡಲು!
ಊರಿಗೋಗಿ ಬರ್ವೆನೆನಲು!!
ತಿರುಗಿಬರದೆ ಅಲ್ಲೇ ಇರಲು!
ಮಂಜು ಕಾದು ಕರಗುತಿರಲು!!ಕಥೆ!!

ಪ್ರೇಮಲೋಕದ ಸರದಾರ!
ನಮ್ಮರವಿ ಸೊಗಸುಗಾರ!!
ಶಶಿಯ ಮದುವೆಯಾಗಿ!
ಪೇಟೆಯನ್ನೆ ಮರೆತುಹೋಗಿ!!ಕಥೆ!!

ಪತ್ರ ಬರಲು ಮನೆಗೆ ಒಂದು!
ಗಮನಿಸದ ವಿಧಿಯಬಂಧು!!
ತನ್ನ ಲೋಕದೀ ತಾನು!
ಪ್ರೇಮದಿ ಮುಳುಗಿಹೋದನು!!ಕಥೆ!!

ಕಳೆದ ಎರಡು ದಿನದಿನೋಡೆ!
ಪತ್ರಜೊತೆಗೆ ಓಡಿ ಓಡೆ !!
ಗೆಳೆಯನೆಲೆಗೆ ಬಂದುನೋಡೆ!
ಬಿರಿದೋಯ್ತು ಮನದಗೋಡೆ!!ಕಥೆ!!

ದುಃಖದಮನೆ ನೋವ ನೋಡೆ!
ಗೋಡೆಯಲ್ಲಿ ಫೋಟೊ ನೋಡೆ!
ಮಂಜುವಿನ ಪೋಟಕೆ!
ಹಾರಹಾಕಿ ಪೂಜೆನೋಡೆ!!ಕಥೆ!!

ಕಾರಣ ಹೇಳಿದ ಗೆಳೆಯ!
ಅರುಹಿದ ಮಂಜುವಿನ ಕಥೆಯ!!
ಭಾರವಾದ ನಿರ್ಮಲ ಪ್ರೀತಿಯ!
ತುಂಬಿದಳು ಮಂಜು ರವಿತನುವ!!ಕಥೆ!!

ಮೋಡಮುಸುಕಿತು!
ಮಂಜು ಆವರಿಸಿ ಮಡುವಾಯ್ತು!!
ಅತ್ತ ಶಶಿ ಇತ್ತ ಮಂಜು!
ಎತ್ತಸಾಗದೇ ಮನಕುಗ್ಗಿತು!!ಕಥೆ!!

ಮುಸುಕಿದಮೋಡ ಕರಗುವುದೆಂತು!
ನೆನಪಲ್ಲೇ ಸಾಗಿತು ಬಂಡಿಯಾಯ್ತು!!
ಮಂಜುವಿನ ನೆನಪವಗೆ!
ಮೋಡದಂತೆ ಮುಸುಕಿತು!!ಕಥೆ!!

ರಚನೆ-ರಂಗನಾಥ.ಕ.ನಾ
      ಶಿಕ್ಷಕರು.ತೀರ್ಥಹಳ್ಳಿ.

👤👤👤👤👤👤👤👤👤👤👤👤👤👤

ನನ್ನವಳು..


ಬೆಳದಿಂಗಳಂತೆ ಬೆಳಕಾಗಿ ಬಂದವಳು!
ಕತ್ತಲೆಯೋಡಿಸಿವ ಭಾನುವಾದಳು!!
ನನ್ನವರ ಕಾವ ಆದಿಶಕ್ತಿಯವಳು!
ನನ್ನವಳು ನನಗಾಗಿ ಬಂದವಳು!! ಪ!!

ಗುರಿಕಾಣದ ಮನಕೆ ಗುರುವಾದವಳು!
ಬರಿನೋವ ಕಣ್ಣಲ್ಲಿ ನಲಿವನ್ನು ತಂದು!!
ಜರಿಜಗದಿ ಕಾದು ಪೊರೆದೆನ್ನ ಎತ್ತಿದಳು!
ಮರಯದಂತ ವರವು ನನಗವಳು!! ನನ್ನವಳು!!

ಮರುಭೂಮಿಯ ಓಯಸಿಸ್ ಅವಳು!
ಧರಣಿ ತಣಿಸುವ ಮಳೆಯಂತವಳು!!
ನೋವನ್ನು ಸೈರಿಸಿ ಕ್ಷಮಿಸಿದ ಅವಿರತಳು!
ಬಣ್ಣಗಳು ತುಂಬಿದ ಕನಸನ್ನು  ನೀಡ್ದವಳು!!ನ!!


ಅಂತರ್ಮುಖಿ ಭಾವ ಚಿಂತಕಳು ಇವಳು!
ಎಲ್ಲರನು ಸಲಹುವ ತಾಯಿಯಾದಳು!!
ನಮ್ಮವರ ಅರ್ಥೈಸೊ ಸಹನಮೂರ್ತಿಯಿವಳು!
ಬರಡಾದ ಎನ ಮನಕೆ ಸಿಂಚನವಾದಳು!! ನ!!

ನಿತ್ತೆರಡು ಮುತ್ತುಗಳ ಹೆತ್ತು ಕೊಟ್ಟವರು!
ಹೆಜ್ಜೆಗೆಜ್ಜೆ ಸೇರಿಸಿ ಜೀವನ ಜೀಕಿದಳು!!
ಹೆತ್ತವರ ಸಂತೈಸಿ ಹೊತ್ತು ಸಾಗಿದಳು!
ನನ್ನೇಳ್ಗೆಗೆ ನನಗಾಗಿ ದುಡಿದವರು!! ನ!!

ನನ್ನವಳು ನನಗಾಗಿ ಪುಟ್ದವಳು!
ತಂಗಾಳಿ ತಿಳಿನೀರ ತಿಳಿಮುಗಿಲಿವಳು!!
ತಿಳಿನೀಲ ಕಡಲಂತೆ ಅದ್ಭುತ ಇವಳು!
ಏಳೇಳು ಜನ್ಮದ ಬಂಧುವೂ ಇವಳು!! ನ!!

ಇರಬೇಕು ಇಂತವಳು ಮನೆಗೊಬ್ಬಳು!
ನನಗಾಗಿ ದೈವಕೊಟ್ಟ ವರವಿವಳು!!
ಕ್ಷಮಯಾಧರಿತ್ರಿ ನಮಗವಳು!!
ನಮ್ಮವರ ಕಾಯ್ವ ಈ ನನ್ನವಳು!! ನ!!

ರಚನೆ-ರಂಗನಾಥ. ಕ. ನಾ.
      ಶಿಕ್ಷಕರು ಜೋಗಿಕೊಪ್ಪ
      ತೀರ್ಥಹಳ್ಳಿ ತಾಲೂಕು.

👤👤👤👤👤👤👤👤👤👤👤👤👤

ಇಂದಿನ ಸ್ನೇಹಸಂಬಂಧ.


ಇಬ್ಬನಿಯು ಅವನಿಯ ತಬ್ಬಿ!
ಮಂಜು ಮಳೆಯಲ್ಲಿ ಅಬ್ಬಿ!!
ಲತೆಯು ಮರಕ್ಕೆಲ್ಲಾ ಹಬ್ಬಿ!
ನೀಎನ್ನ ಮನದಲ್ಲಿ ಅಬ್ಬಿ!!೧!!

ಈ ಜಗದಿ ಶಾಶ್ವತವು!
ಈಸ್ನೇಹ ಸಂಬಂಧವು!!
ಈ ವ್ಯಕ್ತಿಗಳಲಿ ವೈರದ್ಯವು!
ಈಸ್ನೇಹದಾ ಸೆಳೆತವು!!೨!!

ಲಾಭದಾ ಸ್ನೇಹ ಲೋಭದಲ್ಲಿ!
ಸ್ವಾರ್ಥದಾ ಸ್ನೇಹ ಅರ್ಥದಲ್ಲಿ!!
ಆತ್ಮೀಯ ಸ್ನೇಹ ಅನಂತದಲ್ಲಿ!
ಕೊನೆಗಣೋ ಈಪರಿ ದಿಗಂತದಲ್ಲಿ!!೩!!

ಗೆದ್ದಾಗ ದುಡ್ಡು ಇದ್ದಾಗ ಬಂದ!
ಬೆಲ್ಲಕ್ಕೆ ನೊಣ ಇರುವೆಯಂತಿದ್ದ!!
ಹಣ್ಣು ಮೆದ್ದು ಸಿಪ್ಪೆ ಬಿಸುಟಿದ!
ಕಡೆಗಾಣಿಸೆನ್ನ ಮರೆತುಹೋದ!!೪!!

ಒಮ್ಮೆಯೂ ತಿರುಗಿ ನೋಡಲಿಲ್ಲ!
ನಡೆದು ಬಂದ ದಾರಿ ಮರೆತನಲ್ಲಾ!!
ಪಡೆದ ಸಹಾಯ ಗಾಳ್ಗೆ ತೂರಿದನಲ್ಲಾ!
ನಿಜಸ್ನೇಹಕೆ ಅರ್ಥ ಇವನಲ್ಲ!!೫!!

ನಾ ಆಕಾಶದಂತೆ ವಿಶಾಲವು!
ಬಯಸಿದ್ದೆ ಎಲ್ಲರ ಒಲವು!!
ಕಷ್ಟ ಬಂದಾಗ ಎಲ್ಲವೂ!
ಅರ್ಥವಾಯ್ತು ಈಜಗದಿ ಶೂನ್ಯವು!!೬!!

ಯಾವ ಸಂಬಂಧ ಈಜಗದೊಳಗೆ!
ಆತೊರೆದರು ಸ್ವಾರ್ಥಸಾಧನೆಗೆ!!
ಹತ್ತಿದಾ ಏಣಿಯಾ ಜಾಡಿಸಿದರು!
ನಿಜಸ್ನೇಹ ತಿಳಿಯದ ಈ ಅಂಧಕರು!!೭!!

ಇರಬಹುದು ನಿಜಸ್ನೇಹ ಜಗದೊಳಗೆ!
ಹುಡುಕಿಕೊಡಿ ನಿಸ್ವಾರ್ಥವಾ ನನಗೆ!!
ಲಾಭದ ಸ್ನೇಹವೇ,ನಿಷ್ಫ ಕರ್ಮವೆಲ್ಲಿ!
ಬರಿ ಮಾತಲ್ಲಿ ಎಲ್ಲ, ಕೃತಿಯಲ್ಲಿ ಎಲ್ಲಿ!!೮!!

ನೋವಿನಾ ಮನ ನನದು!
ದುಗುಡ ದಮ್ಮಾನದ ಮಡುವದು!!
ಯಾರು ಕೈಹಿಡಿವರು ಬಂದು!
ದೇವಾ ಸದ್ಗುರುವೇ ಸ್ನೇಹಬಂಧು!!೯!!

ರಚನೆ- ರಂಗನಾಥ.ಕ.ನಾ.
         ಶಿಕ್ಷಕರು. ತೀರ್ಥಹಳ್ಳಿ.
👤👤👤👤👤👤👤👤👤

ಪ್ರಕೃತಿ ಮಾತೆಯ ಮುನಿಸು.

ಎಲ್ಲಿ ಹೋದವು
ಬಿಳಿಯ ಮೋಡವು!
ತಂಪಲೀಯದೇ
ತಂಗಾಳಿ ತರದೇ!!ಪ!!

ಕೋಗಿಲೆಯ ದನಿಯಿಲ್ಲಾ ವಸಂತಕೆ!
ಮಾವಿನ ಚಿಗುರಿಲ್ಲಾ ಶುಕಗಾನಕೆ!!
ಹರಿವ ತೊರೆಯಿಲ್ಲಾ
ನಿನಾದಕೆ!
ಬೋಳು ಬೆಟ್ಟವೆಲ್ಲಾ
ಭವಿತವ್ಯಕೆ!!೧!!

ಹೂಹಣ್ಣು ಕಾಯ್ಗಳೇ ವಿಷವಾಯ್ತೇ!
ಬಿತ್ತಿದಾ ಬೆಳೆಯಲ್ಲಾ ಭಾನುನುಂಗಿತ್ತೇ!!
ಭೂತಾಯಿ ಮೈಬಿರಿದು ಬಾಯಿಬಿಟ್ಟಿತ್ತೇ!
ಹಸಿವೆಯಾ ಶಾಪಕೆ ಜಗನಲುಗಿತ್ತೇ!!೨!!

ಇನ್ನೆಲ್ಲಿ ಶಾಂತಿ ಸಾಗರದಲೆಗೆ!
ಸ್ವಾರ್ಥಿ ಮಾನವ ಸಿಲುಕಿದನಾ ಬಲೆಗೆ!!
ಇನ್ನೆಲ್ಲಿ ಹಸಿರು ಇನ್ನೆಲ್ಲಿ ಉಸಿರೆಮಗೆ!
ಕೆಂಪು ಕಾಯವಾಯ್ತೆ ಇಳೆ ಕಾಳಿಯಾರ್ಭಟಕೆ!!೩!!

ನೂರು ಪುರುಷರು ಬಂದು ನೀತಿಭೋದಿದರೂ!
ನೂರು ದೇವರು ಬಂದು ಅವತಾರವೆತ್ತಿದರೂ!!
ನೂರು ವೇದಾದರ್ಶಗಳೇ ಬಂದರೂ!
ಬಿಡಲಿಲ್ಲಾ ದುರಾಸೆಯ ಈ ದುರ್ಜನರು!!೪!!

ತಾಯ ಗರ್ಬಕೆ ಕನ್ನ ಹಾಕಿದರು!
ಅಗ್ನಿಗಾಹುತಿ ನೀಡಿ ಕರಕಲಾಗಿಸಿದರು!!
ನಾಳೆಯಾ ಆಸೆಗೆ ಇಂದೆ ಬಲಿಕೊಟ್ಟರು!
ಮಲಿನ ಮಾಡ್ದರು ತಾಯ ಈ ಮೈಲಿಗರು!!೫!!

ಪ್ರಕೃತಿ ಮಾತೆ ಮುನಿಸಿದ್ದೇ ಬಂತು!
ವಿನಾಶದ ಗಂಟೆ ಕರ್ಣದೀ ಬಾರಿಸಿತು!!
ಇನ್ನೆಲ್ಲಿ ಉಳಿಗಾಲ, ಇನ್ನೆಲ್ಲಿ ಶುಭಕಾಲ!
ಹೇಗೆ ವರಿಸಲೇ ನಿನ್ನ ಉಸಿರ್ನೀಡಲಾ!!೬!!


ರಚನೆ- ರಂಗನಾಥ.ಕ.ನಾ.
         ಶಿಕ್ಷಕರು ತೀರ್ಥಹಳ್ಳಿ.
👤👤👤👤👤👤👤👤👤👤👤👤👤👤

ತಂದೆಯ ಹಿರಿಮೆ.


ಮಾಗಿಯ ಮಳೆಯಂತೆ,
ಇಳೆಗೆಲ್ಲಾ ತಂಪು!
ನಿನ್ನ ನೆನೆಯಲು ತಂದೆ,
ಬಾಳೆಲ್ಲಾ ಇಂಪು!!ಪ!!

ಬಂಗಾರದಂತೆ ಬಾಳನ್ನು ಹೊಳೆಸಿ!
ಮೇಣದಂತೆ ತನ್ನನ್ನೆ ಸವೆಸಿ!!
ತ್ರಿಮೂರ್ತಿಯಂತೆ ಲೋಕಪಾಲಿಸಿ!
ಬೆಳಕಾದೆ ತಂದೆ ನಮ್ಮನ್ನು ಬೆಳೆಸಿ!!೧!!

ಅತ್ತಾಗ ಸಂತೈಸಿ ಸಂತುಷ್ಠನಾದೆ!
ಅರಿಯದ ಆಸೆಗಳ ಬೆನ್ನಿಂದೆ ಪೊರೆದೆ!!
ಕಷ್ಠಕ್ಕೆ ಎದೆಯೊಡ್ಡಿ ನೆರಳಲ್ಲಿ ಇರಿಸಿದೆ!
ಬೇವನ್ನು ಉಂಡು ಬೆಲ್ಲವಾ ನೀಡಿದೆ!!೨!!

ತಪ್ಪನ್ನು ತಿದ್ದುವ ಶಿಕ್ಷಕ ನೀನಾದೆ!
ಒಪ್ಪುಳ್ಳ ಸತಿಯ ನೀನೆನಗೆ ತಂದೆ!!
ಸಂಸಾರ ನೊಗಹೊತ್ತು ದಡವನ್ನು ಸೇರಿಸಿದೆ!
ಬಹುಮುಖ ಕರ್ಮಗಳ ಮಾಡುತ್ತಾ ನಡೆದೆ!!೩!!

ಬೆಟ್ಟದಂತ ಜೀವ ನಿನದು!
ತಿರುಗಿದ ಮಗನೆದುರು ನೊಂದಿಹುದು!!
ಕರಗಿದ ಬೆಟ್ಟವೂ ಮರುಗಿಹುದು!
ಸಹನೆ ತಾಳ್ಮೆಯ ಮೂರ್ತಿಯಾಗಿಹುದು!!೪!!

ಸ್ವಾಭಿಮಾನದ ಮೂರ್ತಿಯು!
ಮೀಸೆ ತಿರುವುವ ದಾಟಿಯು!!
ಗಾಂಭೀರ್ಯ ಗತ್ತಿನ ನಡಿಗೆಯು!
ನನ್ನಪ್ಪ ನನಗೆ ಮಾದರಿಯು!!೫!!

ಮನೆಗೆ ಒಡೆಯ ಬದುಕಲು!
ಮನಕೆ ಒಡೆಯ ಬಣ್ಣಿಸಲು!
ಕಲ್ಪವೃಕ್ಷ ನಮ್ಮ ಕಾಯಲು!
ಪ್ರತಿಜನ್ಮಕೂ ತಂದೆ ನಾ ಬೇಡಲು!!೬!!


ರಚನೆ-ರಂಗನಾಥ.ಕ.ನಾ.
          ಶಿಕ್ಷಕರು. ತೀರ್ಥಹಳ್ಳಿ.

👤👤👤👤👤👤👤👤👤👤👤👤👤👤

ನಿಸರ್ಗದೇವತೆ.

ತಿಳಿನೀರ ಕಡಲಲ್ಲಿ!
ತಂಗಾಳಿ ಅಲೆಯಲ್ಲಿ!!
ಶುಕಪಿಕಗಳಹಿಂಪಲ್ಲಿ!
ಮನಸ್ಸೊಮ್ಮೆ ತೇಲುತಲಿ!!
ಬಾಬಾರೆ ಮಾತೆ,ನಿಸರ್ಗದಾಯಿ!!ಪ!!

ಝುಳುಝಳು ಝರಿಯಾಗಿ!
ಕೋಗಿಲೆಗೆ ದನಿಯಾಗಿ!!
ಸೌಂಧರ್ಯಕೆ ಸ್ವರವಾಗಿ!
ನಯನಕೆ ಹಬ್ಬತಾನಾಗಿ!!
ಬಾಬಾರೆ ಮಾತೆ.... ಹಸಿರಮ್ಮದಾತೆ...!!೧!!

ಹೂವಲ್ಲಿ ಕಂಪೆಲರು!
ಸೋಂಪಾಗಿ ಬೀರಿರಲು!!
ಇಬ್ಬನಿಯ ದಿಬ್ಬೆಲರು!
ಬಿಳಿಸೀರೆ ತೊಟ್ಟಿರಲು!!
ಬಾಬಾರೆ ತಾಯಿ ಬಿಳಿಮುಗಿಲಕಾಯಿ!!೨!!

ನಿನ್ನಂತರಾಳವ ಕೊರೆದವರು!
ಉಸಿರ್ಕಟ್ಟಿಸಿ ಕಣ್ಣೀರ್ತಂದರು!!
ಬಸಿರ್ಸೋರಿಸಿ ಬಂಜೆಮಾಡ್ದವರು!
ಕೊಲೆಗೈದ ನಮ್ಮವರ ಕಾಯಲು!!
ಬಾಬಾರೆ ತಾಯಿ ರಕ್ಷಕಾಮಾಯಿ!!೩!!

ಸಜೀವ-ನಿರ್ಜೀವವು!
ತುಲನೆಯ ಭಾವವು!!
ನಿರ್ಮಿತ ಉದ್ಭವಿತ!
ಅಲೆಯಂತೆ ಸಾಗಿಸುತ!!
ಬಾಬಾರೆ ತಾಯಿ, ಪಾಲಿಸುತ ಕಾಯಿ!!೪!!

ಗಿರಿ ಶಿಖರ ತಪ್ಪಲು!
ಜೀವರಾಶಿಯ ಒಕ್ಕಲು!!
ಬಗೆಬಗೆದು ನಕ್ಕು ನೆಕ್ಕಲು!
ಅಣಿಯಾದವರ ಕುಕ್ಕಲು!!
ಬಾಬಾರೆ ತಾಯಿ, ಶಕ್ತಿಯಾದಾಯಿ!!೫!!

ನೀಬಂದು ಜಗಕೂ!
ತುಂಬಿದೆ ಬೆಳಕು!!
ನಿಜ ನೀನೆ ಜನಮನಕೂ!
ಕ್ಷಮಿಸುತಲೀ ಭವಕು!!
ಬಾಬಾರೆ ತಾಯಿ ಪೊರೆದೆಮ್ಮ ಕಾಯಿ!!೬!!

ರಚನೆ- ರಂಗನಾಥ.ಕ.ನಾ.
           ದೇವರಹಳ್ಳಿ.

  👤👤👤👤👤👤👤👤👤👤👤👤👤👤
ಸ್ನೇಹದ ಸೆಳೆತ......... !!!!! ಸಾವಿಲ್ಲ ಸೈರಿಸುವ ಜೀವಕೆ! ನೋವು ನಲಿವುಗಳ ಕನವರಿಕೆ!! ನಿರೀಕ್ಷೆಗಳ ನಿಷ್ಪಲ ಪೂರೈಕೆ! ಇರಲಿ ಸ್ನೇಹಕೆ ನಿಮ್ಮಆರೈಕೆ!! ನೊಂದ ಜೀವದ ಕಣ್ಣೀರೊರೆಸಿ! ನಲಿವ ಜೀವಕೆ ತಂಪೆಲರಿಸಿ! ಬಂಧು ಬಂಧನವ ಮೀರಿಸಿ!! ನಂಬಿಕೆಯ ಕೋಟೆ ಕಟ್ಟಿಸಿ!!! ಮನಮನಗಳು ಬೆರೆತಂತೆ! ಕನಸಿನ ರೆಕ್ಕೆಗಳ್ಬೆಳೆದಂತೆ! ಒಬ್ಬರನ್ನೊಬ್ಬರು ಅರ್ಥೈಸಿದಂತೆ!! ಆಶಾಕಿರಣ ಬಾಳಲಿ ಬಂದಂತೆ!!! ಎಂದಿಗೂ ಮರೆಯದ ನೆನಪು! ಸ್ನೇಹ ಬದುಕಿನ ಹೊಳಪು!! ಜೀವಜೀವಕೂ ಹುರುಪು! ನಾವು ನಮ್ಮವರೆಂಬತಿರುಪು!!! ಜಾತಿ-ವಿಜಾತಿಯ ಹಂಗಿಲ್ಲ! ಮತ-ಮತಾಂದರ ಪರಿವಿಲ್ಲ! ವರ್ಣ-ಬಣ್ಣಗಳ ಭೇದವಿಲ್ಲ!! ವಯದ-ಭಯದ ಅಂತರವಿಲ್ಲ!!! ಬಂಧ ಬಂಧುಗಳಮೂಲ

ಜಗದಿ ಜೀವಕಳೆಗೆ ಬಲ! ಬೆಸೆದ ಬೆಸುಗೆಯ ಚಲ!! ಸ್ನೇಹವೇ ಸ್ನೇಹಕೆ ಸಕಾಲ!!! ರಚನೆ-ಕ.ನಾ.ರಂ. ದೇವರಹಳ್ಳಿ.

08:20


👤👤👤👤👤👤👤👤👤👤👤👤
ಖಾಸಗಿ ಆಸ್ಪತ್ರೆ.
ನಾಯಿಕೊಡೆಯಂತೆ ಹಬ್ಬಿಹುದು ಖಾಸಗಿ ಆಸ್ಪತ್ರೆ!
ಯಾರೂ ಕೇಳೋರಿಲ್ಲ ನೀನ್ಸತ್ರೆ!!

ಅಬ್ಬಬ್ಬಾ..ಸಾವುಗಳ ಖಾರ್ಕಾನೆ!
ರಕ್ತ ಹೀರುವ ಈ ಧವಾಖಾನೆ!!
ಮನಕುಗ್ಗಿಸಿ ತನುಸವೆಸಿ!
ಧನಕರಗಿಸಿ ಆಸೆಕಮರಿಸಿ!!
ಕಾಲ ಕೈಬೀಸಿ ಭಾಸಿಹುದು ಈಖಾರ್ಕಾನೆ!!!

ನಿಜದ ನೆರಳಿಲ್ಲಾ ಕಾಯಕವಿಲ್ಲಾ!
ಅನೃತದ ಕೋಟೆ ಕಟ್ಟಿಹರಲ್ಲಾ!!
ಬಟ್ಟೆ ನೋಡಿದರಲ್ಲಾ!
ಬೆಲೆ ಕಟ್ಟಿದರಲ್ಲಾ ಬಲೆ ಹೆಣೆದರಲ್ಲಾ!!
ನೋಡ್ನೋಡ್ತಲೇ ತಿಂದು ತೇಗಿದರಲ್ಲಾ!!!

ನೋವ ಮರೆತವರು!
ಸಾವ ತರುವವರು ಕಾಲರು!!
ಜೀವವ ತೃಣವಾಗಿ ಕಂಡರು!
ಅಮಾನುಷರಿವರು ರಕ್ಕಸರು!!
ನಾರಾಯಣನ ನಾಮದೇಯರು!!!

ಸುಲಿಗೆ ಮಾಡುವವರಿವರು!
ಆಸೆಯ ಆಶ್ವಾಸನೆ ನೀಡಿದರು!!
ಮೆಲ್ಲಗೆ ನುಂಗುವರು!
ನರ ನಾಡಿಯ ಹರಿಯುವರು!!
ವೈದ್ಯರಂತೆ ವೈದ್ಯರು!!!

ರೋಗಿ ರೋಗಿಯಲ್ಲ!
ಜೊತೆಗೋದವ ರೋಗಿ!!
ವೈದ್ಯರು ಮಾತ್ರ ಭೋಗಿ!
ಉಳ್ದವರನ್ನ ಹೊತ್ಕಂಡೋಗಿ!
ಕೊನೆಗುಳಿದವ ಜೋಗಿ!!!

ಕಣ್ಣಿಗೆ ನುಣ್ಣಗೆ ದೂರದ ಬೆಟ್ಟ
ನಂಬ್ಕೊಂಡೋದವ ಕೆಟ್ಟ!!
ಕಾಯ್ಲೆಗೆ ಕಾಯ್ಲೆ ಸೇರಿಸಿಟ್ಟ!
ಕಡತ ಕೈಗಿಟ್ಟು ಬಾಯ್ಬಿಟ್ಟ!
ಧನ ಧನ..ಎಂದ್ಬಿಟ್ಟ ಎಂದ್ಬಿಟ್ಟ!!!



ರಚನೆ- ಕ. ನಾ. ರಂ.

           ದೇವರಹಳ್ಳಿ.
👤👤👤👤👤👤👤👤👤👤👤👤
ಜೀವನ..ಬಾಳೆಯ ಹೊದಿಕೆ!!
ಬಾಳೆಯ ದಿಂಡೆನ್ನ ಬದುಕು!
ನಾನಾರೆಂಬುದ ಅಲ್ಲಿಯೇ ಹುಡುಕು...!!ಪ!!

ಕಾಮ ಕ್ರೋದಗಳ ಹೊದಿಕೆ ಸುಲಿಯೆ!
ಮಾತ್ಸರ್ಯ ಮೈದೋರಿ ಸುರಿಯೆ!!
ಜಾತಿ-ವಿಜಾತಿಗಳ ಹೊದಿಕೆ ಸುಲಿಯೆ!
ಅಂದಕದ ಮೌಡ್ಯತೆಯು ಮೆರೆಯೆ!!೧!!

ಮಿತ್ಯಾಧರ್ಮಗಳ ಹೊದಿಕೆ ಸುಲಿಯೆ!
ಹಮ್ಮು-ಬಿಮ್ಮುಗಳು ತಾವೆಂದು ಜರಿಯೆ!!
ಮೋಸವಂಚನೆಯ ಹೊದಿಕೆ ಸುಲಿಯೆ!
ದುರಾಸೆಯು ತಾಬಂದು ಬೆರೆಯೆ!!೨!!

ಅನೀತಿ ಅವಿವೇಕದ ಹೊದಿಕೆ ಸುಲಿಯೆ!
ಹಿಂಸಾರಸ ಬಂದು ಅವುಗಳ ಪೊರೆಯೆ!!
ಅಶಾಂತಿ,ಅತ್ಯಾಚಾರದ ಹೊದಿಕೆ ಸುಲಿಯೆ!
ಅಚಾರಿತ್ರ್ಯರು ಅಪಾತ್ರರು ಅವುಗಳ ಕಡೆಯೆ!!೩!!

ಸುಲಿದಂತೆ ಆವರಿಸೋ ದುರ್ಗುಣದ ಜಗವು!
ಕೊನೆಗುಳಿಯುವುದೊಂದೇ ಶೂನ್ಯದಾ ಫಲವು!!
ನಾನಾರೆಂಬುದ ಅರಿಯುವಾ ಪಥ!
ನನ್ನೊಳಗಣ ಶೂನ್ಯ ನೀನೇ ಕಾಣಾ --ಶ್ರೀನಾಥ.!!೪!!


ರಚನೆ-ಕ.ನಾ.ರಂ.
           ದೇವರಹಳ್ಳಿ.
👤👤👤👤👤👤👤👤👤👤👤👤👤👤👤
ಇಂಗ್ಲೀಷ್ ತರಬೇತಿ ಬಗ್ಗೆ.
ನೆನಪಿನಾಳದ ಕನಸು ಮನೆಮಾಡಿದಂತೆ!
ಅನುಭವದ ನನಸು ಮೆರೆಯುತ್ತಿದ್ದಂತೆ!!
ಕೊರಗಿತ್ತು,ಮರುಗಿತ್ತು ದಾರಿಕಾಣದಂತೆ!
ಎತ್ತ ಪೋಗಲಿ,, ಏನ ಹೇಳಲಿ
ಚಿಂತೆ............ಚಿಂತೆ!!ಪ!!

ಬರವಸೆಯ ಬೆಳಕು ವಾರಿಧಿಗೆ ಬಡಿದು!
ಮಿಂಚಿನ ಸಂಚಾರವಾದಂತೆ ಹರಿದು!!
ಎಚ್ಚರಿಸಲು ಸಬಲಿಸಲು.. ಆತ್ಮಸ್ಥೈರ್ಯ ತುಂಬಲು!
ನುಡಿಯಸ್ಥಿತ್ವವುಳಿಸಿ, ಅರ್ಜಿಸಲು!!೧!!

ತರಬೇತಿಯೆಂಬ ತುಂಗಾನದಿಯ ತಪ್ಪಲು!
ಕಗಪಿಕಗಳ ನಿನಾದದ ಸಾಲು..ಸಾಲು...!!
ಮನ್ವಂತರದ ಕಾಳಜಿ ಹರಿಸಲು!
ಸಂಪನ್ಮೂಲದೊಡೆಯರ ಪ್ರವಚನದ ಪಾಲು...!!೨!!

ಕಲಿತದ್ದನು ಓರೆಗೆ ಹಚ್ಚಲು..ಚಂದಿಸಲು!
ಸೃಜಿಸಿದ ಕಲೆಗಳನು.. ಆಲಂಗಿಸಿ ಪೊರೆಯಲು!!
ನವಿಲಾಗಿ ಕೋಗಿಲೆಗೆ ದನಿಯಾಗಿ ನಿಂತಿರಲು!
ಪ್ರತಿಭಾನ್ವಿತರ ಮಾನವೀಯತೆಯ ಗೀಳು!೩!

ಭಾಷೆಯ ಅಸ್ಥಿತ್ವಕ್ಕೆ ಕನ್ನಡಿನೀನಾಗಿ!
ನಿನ್ನೆಯನುಭವಕೆ ನಾಳೆಯಬರವಸೆ ಬೀಗಿ!!
ಮೈಗೂಡಿತ್ತು ನಾಬಲ್ಲೆನೆಂಬ ವಿಶ್ವಾಸದಿ ತೂಗಿ!
ಇಂಗ್ಲೀಷ್ ನಮ್ಮಬೀಗರಾಗಿ!!೪!!

ರಚನೆ-ಕ.ನಾ.ರಂ.
           ದೇವರಹಳ್ಳಿ.
👤👤👤👤👤👤👤👤👤👤👤👤👤👤👤
ತಾಯಿಯ ಹರಕೆ....
ಎಷ್ಟು ಅಂತ ನೆನೆಲಿ ಮಾತೆ!
ನಿನ್ನ ಹರಕೆ,ಆರೈಕೆಯ ಗಾತೆ!

ಸೋತಾಗ ಬೆನ್ತಟ್ಟಿ ಪೊರೆದೆ!
ಮದಲೆಜ್ಜೆ ಬೆರಳಿಡಿದು ನಡೆಸಿದೆ!
ತೊದಲ್ನುಡಿಗೆ ತಾಯ್ನುಡಿ ಕಲಿಸಿದೆ!
ತಪ್ಪಲ್ಲಿ ಒಪ್ಪಾಗಿ ಸರಿದಾರಿ ತೋರಿದೆ!
ಎಷ್ಟಂತ  ನೆನೆಲಿ ಮಾತೆ...!

ಇಷ್ಟಗಳ ಪೂರೈಸಿ..
ಕಷ್ಟಗಳ ಪೊರೆದೆ!
ಅನಿಷ್ಟಗಳ ತೊಳೆಸಿ..
ಸಂಕಷ್ಟಗಳ ಮರೆಮಾಚಿದೆ.!
ನೋವುಗಳ ನುಂಗಿ..
ನಲಿವುಗಳ ನೀಡಿದೆ!
ಹೆಜ್ಜೆಹೆಜ್ಜೆಗೂ ಹರಸಿ..
ಯಶಸ್ಸಿಗೆ ಸ್ಪೂತಿ೯ಯಾದೆ!!
ಎಷ್ಟುಅಂತ ನೆನೆಲಿ ಮಾತೆ...

ಬೆಳೆದಂತೆ ನಾ ನಿನ್ನ...
 ಪೂಜಿಸಿದೆ,ಪ್ರೇಮಿಸಿದೆ!
ನಿನ್ನ ಆಶಯಕೆ ನನ್ನ..
ಕನಸುಗಳ ಸೇರಿಸಿದೆ!
ಕರುಣೆಯಲಿ ನನ್ನ..
ಧಿವ್ಯ ಮೂತಿ೯ಯ ಮಾಡ್ದೆ!
ಸದ್ಗುಣದಲಿ ನನ್ನ..
ಬೆಳಗಿಸಿ ಬೆಳಕನು ನೀಡ್ದೆ!
ಎಷ್ಟುಅಂತ ಬರಿಲಿ ಮಾತೆ!!

ಎಷ್ಟು ಬರೆದರೂ ..
ಪದಗಳೇ ಸಾಲಲ್ಲ!
ದಿನಗಳೇ ಮುಗಿಯಲ್ಲ!
ಕೊನೆಗಳೇ ಇಲ್ಲ!
ಅನಂತ ಅನಾದಿಯಾಯ್ತಲ್ಲ!ನಿನ್ನ ಹರಕೆ ಆರೈಕೆಗೆ ...
ಜಗದಿ ಹೋಲಿಕೆಯೇ ಇಲ್ಲ!!


    ರಚನೆ-ಕ.ನಾ.ರಂ.
              ದೇವರಹಳ್ಳಿ.
👤👤👤👤👤👤👤👤👤👤👤👤👤👤👤
ಯಾರಿಗಾಗಿ ಕಾದಿರುವೆ?
ಯಾರಿಗಾಗಿ ಕಾದಿರುವೆ ನೀ..!
ಎಷ್ಟು ಅಂತ ಕಾಯುವೆ ನೀ.!!    
 ಮುಪ್ಪು ಆವರಿಸಿ ಕೆನ್ನೆ ಸುಕ್ಕಿ!
 ನೆರೆ ಮೊದಲ್ಗೊಂಡ ಬಕವಕ್ಕಿ!
 ಕಣ್ಣಂಚಿನಲಿ ನಿರೀಕ್ಷೆಉಕ್ಕಿ!
ಸೊಂಟ ಬಗ್ಗಿ ತನುಕೃಶವಕ್ಕಿ!!
ಯಾರಿಗಾಗಿ ಕಾದಿರುವೆ ನೀ...

ಭೋಜನಂ ತಯಾರಿಸಿ!
ಮಂದಲಿಗೆಯ ಹಾಸಿ!
ಮನೆಯಂ ಸಿಂಗರಿಸಿ!
ಮನದಲ್ಲೇ ನಿರೀಕ್ಷಿಸಿ!
ಯಾರಿಗಾಗಿ ಕಾದಿರುವೆ ನೀ...

ಒಲವಧಾರೆ ಹರಿಸಿದ್ದೆ!
ರಕ್ತಸುರಿಸಿ ಜನ್ಮನೀಡಿದ್ದೆ!
ನಿಂದನೆ ಸಹಿಸಿ ಸಂತೈಸಿದ್ದೆ!
ಕಣ್ಣೀರ ಮರೆಸಿ ನಲಿಸಿದ್ದೆ!
ಯಾರಿಗಾಗಿ ಕಾದಿರುವೆ ನೀ...

ನೋವನ್ನೆ ನುಂಗಿ ಸಂತೈಸಿ!
ಕಷ್ಟಗಳ ಮರೆಯಾಗಿ ಮರೆಸಿ!
ಇಷ್ಟಗಳ ಕಾಯ್ಸದೇ ಪೂರೈಸಿ!
ಕನಸುಗಳ ನನಸು ಮಾಡಿಸಿ!
ಯಾರಿಗಾಗಿ ಕಾದಿರುವೆ ನೀ...

ನೂರಾರು ಆಸೆಗಳ ಹೊತ್ತು!
ಮುಪ್ಪಲಿ ಕಾಯ್ವೆನೆಂಬ ನಿರೀಕ್ಷೆಯಿತ್ತು!
ಕಾಲನನ್ನೂ ದೂರವಿತ್ತು!
ಮನದಲ್ಲಿ ಭಾರದ ನೋವಿತ್ತು!
ಯಾರಿಗಾಗಿ ಕಾದಿರುವೆ ನೀ...

ನೀ ತೋರಿದ್ದ ಪ್ರೀತಿ ಮರೆತವನನ್ನು!
ಕತ೯ವ್ಯ,ಕನ್ನಿಕೆಗೆ ಮನಸೋತವನನ್ನು!
ಜನನಿಯ ತ್ಯಾಗಕೆ ಬೆಂಕಿಹಚ್ಚಿದವನನ್ನು!
ಇಂತಹ ಮಗನ ಕನವರಿಕೆಯನು ಬಿಡಿನ್ನು!
ಯಾರಿಗಾಗಿ ಕಾದಿರುವೆ ತಾಯಿ ನೀನು....

ಫಲಾಪೇಕ್ಷೆ ಇಲ್ಲದ ಪ್ರೀತಿ!
ಆಕಾಶದಂತೆ ವಿಶಾಲರೀತಿ!
ಧರೆಯಂತೆ ಕ್ಷಮಿಸೋ ನೀತಿ!
ಸಾಟಿಯಾರು ತಾಯಿ ಜಗದಿ!
ಯಾರಿಗಾಗಿ ಕಾದಿರುವೆ ನೀ...

ಮಗ ಬಂದು ಪೊರೆದಾನು!
ಜಗಕೆ ಸಾರಿ ಹೇಳ್ಯಾನು!
ನನಗೆ ಜನ್ಮವಿತ್ತು..ಕರುಳ ಕತ್ತರಿಸಿ ಪ್ರೀತಿಪ್ರೇಮಗಳ
ಉಣಬಡಿಸಿ ಸಾಕಿದವಳು..ಇವಳೆನ್ನ ಎತ್ತವಳು ಎಂದೆನ್ನ
ಬಿಗಿದಪ್ಪಿಯಾನೆಂಬ ನಿರೀಕ್ಷೆಯಲಿ...ಕಾದಿರುವೆ..!!

ತಾಯಿಯ ನಿರೀಕ್ಷೆ..

     ರಚನೆ-ರಂಗನಾಥ.ಕ.ನಾ.
👤👤👤👤👤👤👤👤👤👤👤👤👤👤👤
ಸೌಂದಯ೯ದ ಹುಡುಕಾಟ.
ಮನಸುಗಳ ರಸದೂಟ.!!ಹೆಣ್ಣನಸೌಂದಯ೯!ಕಣ್ಣಿಗೆ ತ೦ಪು! ಪ್ರಕೃತಿಯಸೌಂದಯ೯!ಮನಸಿಗೆ ತಂಪು! ಗಾನದ ಸೌಂದಯ೯,ಕಿವಿಗೆ ಕ೦ಪು! ನುಡಿಯ ಸೌಂದಯ೯!ನಾಲಿಗೆಗೆ ಇಂಪು! ನಾಡಿನ ಸೌಂದಯ೯!ನರ ನಾಡಿಗೆ ಸೋಂಪು! ನನ್ನವಳ ಸೌಂದಯ೯....ತನುಮನಕೆ ತಂಪು!ಇಂಪು!ಸೋಂಪು!!!!!!
     

             ಕ.ನಾ.ರಂ.    ದೇವರಹಳ್ಳಿ.
👤👤👤👤👤👤👤👤👤👤👤👤👤
* ದೇಶದ ಬೆನ್ನೆಲುಬು ರೈತ *
ದೇಶದ ಬೆನ್ನೆಲುಬು....
ಆಕಾಶ ನೋಡುತ್ತಾ ಕುಳಿತಿರುವೆಯಾ.....
ಹಸಿರು ಶಾಲಿನ ಒಡೆಯ..!!

ನೇಗಿಲ ಯೋಗಿ, ಎಲ್ಲಿಯ ಭೋಗಿ|
ಬೆಳೆದು, ಕಾದು, ಬೆನ್ನು ಬಾಗಿ ಬಾಗಿ|
ನೆಮ್ಮದಿಯ ನುಂಗಿದರು ದಲ್ಲಾಳಿಗಾಗಿ|
ನ್ಯಾಯಬೆಲೆ, ಅಂಗಡಿಯ ಬೋರ್ಡಿಗಾಗಿ|
ಆಕಾಶ ನೋಡುತ್ತಾ ಕುಳಿತಿರುವೆಯಾ......

ಮಳೆಯೊಂದಿಗೆ ತಿಕ್ಕಾಟ!
ಮುನಿದ ವರುಣನ ಚಲ್ಲಾಟ!!
ಬಡಬಾಗ್ನಿಯಾಯ್ತು ನಿನ್ನ ಹಟ!
ದೇಶದ ಬೆನ್ನೆಲುಬಿಗಿಲ್ಲ ಒಪ್ಪತ್ತೂಟ!!
ಆಕಾಶ ನೋಡುತ್ತಾ ಕೂತಿರುವೆಯಾ...!!೨!!

ಬೆನ್ನಲ್ಲಿ ಸಾವಿನ ಸಾಲದ ಮೂಟೆ!
ಎದೆಯಲ್ಲಿ ಪ್ರೀತಿ, ಸವೆಯದ ರಾಟೆ!!
ಕಣ್ಣಲ್ಲಿ ಹಸಿವು ನಿರೀಕ್ಷೆಯ ಕೋಟೆ!
ಬತ್ತಲಿಲ್ಲ, ಕುಗ್ಗಲಿಲ್ಲ ನಿನ್ದುಡಿಮೆಯ ಬರಾಟೆ!!

ಸಾಲದ ಸುಳಿಗೆ ಸತ್ತವರು ಸಾವಿರ!
ಅನಾಥ ಕುಟುಂಬಕೆ ನೆರವು ಭ್ರಮರ!!
ಸರ್ಕಾರ ಸಂಸ್ಥೆಗಳ ಭರವಸೆ ಮಹಾಪೂರ!
ಎಲ್ಲಿಯುಳಿವು ನಡುವೆ ಕತ್ತುತಿನ್ನುವ ಕೀಚಕರ!!
ಆಕಾಶ ನೋಡುತ್ತಾ ಕೂತಿರುವೆಯಾ..!!

ಅರಣ್ಯರೋಧನವಾಯ್ತೆ, ನಿನ್ನ ಕೂಗು..!
ಅನ್ಯಾಯ,ಅತಿಕ್ರಮ ಎದುರಿಸುತಾತ ಬೀಗು!!
ಯಾರೂ ಆಲಿಸಲಿಲ್ಲ ಚಿತ್ತ ಹರಿಸಲಿಲ್ಲ!
ಎತ್ತಿದಾ ದನಿಯ ಕುತ್ತಿಗೆ ಹಿಸುಕಿದರಲ್ಲ!!
ಆಕಾಶ ನೋಡುತ್ತಾ ಕೂತಿರುವೆಯಾ..!!

ಚಿಂದಿಯಾಯ್ತು ನಿನ್ನ ಬದುಕು !
ಅಂದಿನಿಂದ ಇಂದಿನ ತನಕ ಮೆಲುಕು ಹಾಕು!!
ನೆಮ್ಮದಿಯಿತ್ತು ಅಂದಿನ ಜೀವಕು!
ಮರೆಯಾಯ್ತು ಸುಖನಿದ್ದೆ ಇಂದಿನ ತಳುಕು!!
ಆಕಾಶ ನೋಡುತ್ತಾ ಕೂತಿರುವೆಯಾ..!!

ಯಾರೂ ಬಂದು ನೇಗಿಲು ಹಿಡಿಯಲ್ಲ!
ಒಲೆ ಹೊತ್ತಿಸಲ್ಲ ಬೀಜ ಬಿತ್ತಲ್ಲ!!
ಹೊತ್ತು ಹೊತ್ತಿಗೆ ಊಟ ಹಾಕಲ್ಲ!
ನಿನ್ನ ಕನಸಿನೊಡನೆ ಈಸುವ ಜೀವ ನೀನೆಯಲ್ಲಾ!!
ಆಕಾಶ ನೋಡುತ್ತಾ ಕೂತಿರುವೆಯಾ..!!

ಕಾನನದ ನಾಶ ಬಿಡು!
ಏಳು ಎದ್ದೇಳು ಹಸಿರು ಮೇಳೈಸು!!
ದೈವನೊಬ್ಬನೇ ಮಳೆರಾಯ ನೋಡು!
ತಲೆಮೇಲ ಕೈ ತೆಗೆದು ನಂಬ್ದವರ ಸಂತೈಸು!!
ಆಕಾಶ ನೋಡುತ್ತಾ ಕೂತಿರುವೆಯಾ..!!

ಮರೆತೆಯಾ ರೈತನೇ ನಿನ್ನ!
ಸ್ವಾಭಿಮಾನದ ಬದುಕು ಭರವಸೆಯನ್ನ!!
ನಂಬಿಕೆ ಶ್ರದ್ಧ ಪ್ರಾಮಾಣಿಕತೆ ನಿನ್ನ!
ಬಾಳನ್ನ ಬೆಳಗುವುದು ಶಿಕ್ಷಣವೇ ಚಿನ್ನ!!
ಆಕಾಶನೋಡುತ್ತಾ ಕೂತಿರುವೆಯಾ..!!

ನಿನ್ನ ಬೆಳೆಗೆ ನೀನೇ ಸಾರ್ವಭೌಮ!
ಹೊಡೆದೋಡಿಸು ದಲ್ಲಾಳಿಯ ಅಕ್ರಮ!!
ಶಿಕ್ಷಿತನಾಗು, ಜಾಗೃತನಾಗು!
ಸಾಧಿಸಿ ದೇಶದ ಬೆನ್ನೆಲುಬೆಂದು ಬೀಗು!!
ಆಕಾಶ ನೋಡುತ್ತಾ ಕೂತಿರುವೆಯಾ...
ಹಸಿರು ಶಾಲಿನ ಒಡೆಯ..!!

  ರಚನೆ-ರಂಗನಾಥ ಕ.ನಾ.

         ದೇವರಹಳ್ಳಿ.