ವಿನೋದ್ ಕುಮಾರ್ ಆರ್.ವಿ.ಶಿಕ್ಷಕರ ರಚಿತ ಕವನಗಳು



ರಚನೆಃ ವಿನೋದ್ ಕುಮಾರ್ ಆರ್.ವಿ.ಶಿಕ್ಷಕರು.
ಸ.ಕಿ.ಪ್ರಾ.ಶಾಲೆ.ಮುದ್ದಲಹಳ್ಳಿ
ಚಿಕ್ಕಬಳ್ಳಾಪುರ.
👤👤👤👤👤👤👤👤👤👤👤👤👤👤👤


ಕವನ
---------
ಓ ಮೋಡಗಳೇ
---------------------
ಓ ಮೋಡಗಳೇ ನಿಮಗಿದು ಸರಿಯೇ 
ಧರೆಗೆ ಇಳಿದು ಬನ್ನಿ
ಮಳೆಯನು ತನ್ನಿ

ಕಣ್ಣೀರು ಹಾಕುತಿಹರು ರೈತರು
ಕಂಗೆಟ್ಟಿರುವರು ಗ್ರಾಹಕರು.....

ರೈತರಿಗೆ ಬೆಳೆಯ ಚಿಂತೆ
ಗ್ರಾಹಕರಿಗೆ ಬೆಲೆಯೇರಿಕೆಯ ಚಿಂತೆ

ಓ ಮೋಡಗಳೇ ನಿಮಗಿದು ಸರಿಯೇ.........

ಸಕಾಲಕ್ಕೆ ಸುರಿಸು ನೀ ಮಳೆಯ
ಎಲ್ಲರಿಗು ನೀಡು ನೀ ನೆಮ್ಮದಿಯ.....

ಕರುಣಿಸು ರೈತರ ಮೊರೆಯ
ಕೆಳಗಿಳಿದು ನೆನೆಸು ಈ ಧರೆಯ

ಓ ಮೋಡಗಳೇ ನಿಮಗಿದು ಸರಿಯೇ........
ವಿನೋದ್ ಕುಮಾರ್ ಆರ್.ವಿ.
ಚಿಕ್ಕಬಳ್ಳಾಪುರ..
👤👤👤👤👤👤👤👤👤👤👤👤👤👤👤
ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
ಕವನ..
ನನ್ನ ನುಡಿ
------------
ಕನ್ನಡಿಗರು ಒಟ್ಟಾಗಲು
ಏಕಮಾತ್ರ ಸಾಧನ ನುಡಿ...
ಕನ್ನಡಕ್ಕಾಗಿ ಕಟ್ಟು
ನೀ ಮನದಲಿ ಗುಡಿ.......

ಕನ್ನಡದ ಅಭಿಮಾನವ ಕಾಪಾಡಿ...
ಅನ್ಯ ಭಾಷೆಗಳ ಮೋಹಕೆ
ಸಿಲುಕಬೇಡಿ......

ಕನ್ನಡದಲ್ಲಿಯೇ ಮಾತಾಡಿ
ಕನ್ನಡದ ಕಂಪು ಎಲ್ಲೆಡೆ ಹರಡಿ..

ಯಾವ ಭಾಷೆಗೂ ಬಂದಿಲ್ಲ
ನನ್ನ ನುಡಿಗೆ ಬಂದಷ್ಟು ಪ್ರಶಸ್ತಿ
ನನ್ನ ನುಡಿ ಈ ದೇಶದ ಆಸ್ತಿ....

ರಕ್ಷಿಸಬೇಕಿದೆ ಕನ್ನಡ ನೆಲ-ಜಲ
ಮರೆಯಬಾರದು ನಾವು ಇದು ದಶಕಗಳ ಹೋರಾಟದ  ಫ್ರತಿಫಲ........

ಸೀಮಿತವಾಗದರಲಿ ಕನ್ನಡ
ಬರೀ ಸಭೆ ಸಮಾರಂಭಗಳಿಗೆ..
ಹರಡಲಿ ಕನ್ನಡದ ಕಂಪು
ಕನ್ನಡಿಗನ ನರನಾಡಿಗಳಿಗೆ......

ಕನ್ನಡದ ಪ್ರೌಡಿಮೆ ಹೆಚ್ಚಿಸಿ
ಕನ್ನಡಿಗನ ಸ್ವಾಭಿಮಾನವ ಉಳಿಸಿ...........
ವಿನೋದ್ ಕುಮಾರ್ ಆರ್.ವಿ.
ಚಿಕ್ಕಬಳ್ಳಾಪುರ..
👤👤👤👤👤👤👤👤👤👤👤👤👤👤👤👤
ಕವನ.
ಹಳ್ಳಿ ಜನರ ನಡೆ.
---------------------
ಹಳ್ಳಿ ಜನರ ನಡೆ
ಸಾಗುತಿದೆ ಪಟ್ನದ ಕಡೆ..

ಬದಕು ಭಾರವಾಗಿ
ಉದ್ಯೋಗವೇ ಉಸಿರಾಗಿ
ಇರುವುದನ್ನು ಮಾರಿ
ಪಟ್ಟಣವ ಸೇರಿ
ಹಳ್ಳಿ ಜನರ ನಡೆ
ಸಾಗುತಿದೆ ಪಟ್ನದ ಕಡೆ...

ಭೂಮಿ ಬರಡಾಗಿ
ಬದುಕು ಕಠಿಣವಾಗಿ
ಸಾಲಗಳ ಹೊರೆಯಾಗಿ
ನೆಮ್ಮದಿಗೆ ಬರವಾಗಿ
ಹಳ್ಳಿ ಜನರ ನಡೆ
ಸಾಗುತಿದೆ ಪಟ್ನದ ಕಡೆ...

ಉಳಲು ನೆಲವಿದೆ
ತೋಳಲಿ ಬಲವಿದೆ
ಆದರೆ ವರುಣನ ಕೃಪೆಯಿಲ್ಲ
ಹಳ್ಳಿ ಜನರ ನಡೆ
ಸಾಗುತಿದೆ ಪಟ್ನದ ಕಡೆ....

ಉದ್ಯೋಗವರಿಸಿ ಹೋಗುವರು
ತಂದೆ ತಾಯಿಯ ಬಿಟ್ಟು
ನಾಳಿನ ಬಾಳನು ಹಸನಾಗಿಸುವ
ಭರವಸೆಯ ಕೊಟ್ಟು
ಕಾಲ ಕಳೆವರು ಬರೀ ನೆನಪುಗಳಲೆ
ಹಳ್ಳಿ ಜನರ ನಡೆ
ಸಾಗುತಿದೆ ಪಟ್ನದ ಕಡೆ....

ಅರಳೀ ಮರದ ಕೆಳಗೆ ಹರಟೆ
ಆಗಾಗ ಕೇಳುವ ಜಾತ್ರೆಗಳ ತಮಟೆ
ಗ್ರಾಮೀಣ ಸೌಂದಯ೯ದ ಸೊಗಡು ಮರೆತು
ಹಳ್ಳಿ ಜನರ ನಡೆ
ಸಾಗುತಿದೆ ಪಟ್ನದ ಕಡೆ....

ಹಳ್ಳಿ ಜನರ ನಡೆ
ಸಾಗುತಿದೆ ಪಟ್ನದ ಕಡೆ......

ರಚನೆ:ವಿನೋದ್ ಕುಮಾರ್.ಆರ್.ವಿ.ಶಿಕ್ಷಕರು.ಸ.ಕಿ.ಪ್ರಾ.ಶಾಲೆ.ಮುದ್ದಲಹಳ್ಳಿ.
ಚಿಕ್ಕಬಳ್ಳಾಪುರ.

💖💖💖💖💖💖💖💖💖💖💖💗💗💗💗💗
ಕವನ
ಗಾಂಧಿತಾತ..
ನಮ್ಮ ರಾಷ್ಟ್ರಪಿತ ಗಾಂಧಿತಾತ
ಬ್ರಿಟಿಷರನೋಡಿಸಿದರು ಶಾಂತಿಮಂತ್ರ ಜಪಿಸುತ..

ವೃತ್ತಿಯಲ್ಲಿ ವಕೀಲರು
ಪ್ರವೃತ್ತಿಯಲ್ಲಿ ಹೋರಾಟಗಾರರು..

ಕೈಯಲಿ ಹೊತ್ತಿಗೆ ಕೋಲು
ಮೈಮೇಲೆ ಕಚ್ಛೆ ಶಾಲು...

ಇದು ಇವರ ಸರಳತೆಗೆ ಸಂಕೇತ
ಭಾರತೀಯರ ಬದುಕನ್ನೇ ಬದಲಿಸಿದ ವಿಧಾತ...

ಸ್ವಾತಂತ್ರ್ಯಗಳಿಸಿದರೂ ಅಧಿಕಾರದಿಂದ ದೂರ ಉಳಿದರು
ನಿಸ್ವಾಥ೯ ಸೇವೆಯಿಂದ ಭಾರತೀಯರ ಮನದಲ್ಲಿ ಅಮರರಾದರು.......
ವಿನೋದ್ ಕುಮಾರ್ ಆರ್.ವಿ.
ಚಿಕ್ಕಬಳ್ಳಾಪುರ..

💞💞💞💞💞💞💞💞💞💞💞💞💞💞💞💞
ನಮ್ ಚಿಕ್ಕಬಳ್ಳಾಪುರ
ಬರದ ನಾಡಲಿ
ಬರಡಾದ ಭುವಿಯಲಿ
ತನ್ನ ಮೈಸಿರಿ ತುಂಬಿಕೊಂಡು
ಧುಮುಕುತಿದೆ ಪುಟ್ಟ ಜಲಪಾತ.......

ಪ್ರವಾಸಿಗರ ಕೈ ಬೀಸಿ ಕರೆಯಲು
ಜನಸಾಗರ ಹರಿದು ಬರುತಿದೆ
ಇದರ ವೈಭೋಗ ನೋಡಲು
ಮರುಕಳುಸಲಿ ಮಳೆ ಹೀಗೆ ಪ್ರತೀ ಸಾಲು........
ವಿನೋದ್ ಕುಮಾರ್ ಆರ್.ವಿ
ಸ.ಕಿ.ಪ್ರಾ.ಶಾಲೆ.ಮುದ್ದಲಹಳ್ಳಿ
ಚಿಕ್ಕಬಳ್ಳಾಪುರ.
💟💟💟💟💟💟💟💟💟💟💟💟💟💟💟💟
ಹನಿಗವನ..
ಮಹಿಳೆಯರ ಮೇಲಿನ ಶೋಷಣೆಗಳು
ವ್ಯಾಪಕವಾಗಿ ಕೇಳಿಬರುತಿರುವ ಘೋಷಣೆಗಳು
ವರದಿಯಾಗುತಿವೆ ಅತ್ಯಾಚಾರ ಪ್ರಕರಣಗಳು
ದೇಶದಲ್ಲೆಡೆ ನಡೆಯುತಿವೆ ವ್ಯಾಪಕ ಪ್ರತಿಭಟನೆಗಳು
ತಪ್ಪಿತಸ್ಥರಿಗೆ ಕಾನೂನೆಂದರೆ ತಿರಸ್ಕಾರ
ಜನರ ಮನಃಪರಿವತ೯ನೆಯೇ ಇದಕೆ ಪರಿಹಾರ....

ವಿನೋದ್ ಕುಮಾರ್ ಆರ್.ವಿ.
ಚಿಕ್ಕಬಳ್ಳಾಪುರ..
💖💖💖💖💖💖💖💖💖💗💗💗💗💗💗💗
ಮಳೆ.
ಆಕಾಶವೇ ನಿನ್ನ ನನಗಾಗಿ ಕಳುಹಿಸಲು
ಸುರಿಸುತಿರುವೆ ಮಳೆಯ ನನ್ನ ನೆನೆಸಲು

ಆಕಾಶ ಧರಣಿಯ ಮುದ್ದು ಕಂದ ನೀನು
ಹನಿಹನಿಯಾಗಿ ಬಿದ್ದು ಕುಣಿದು ಕುಪ್ಪಳಿಸುತ್ತಿರುವೆ ಏನು?

ಪಟಪಟ ರಾಗವ ಕೇಳಿಸುತಾ
ಗಿಡಮರಗಳಿಗೆ ಸ್ನಾನವ ಮಾಡಿಸುತಾ
ವಜ್ರದ ಹವಳದಂತೆ ಹೊಳೆಯುತಾ
ಪ್ರಕೃತಿಯ ಯೋಗಕ್ಷೇಮ ವಿಚಾರಿಸುತಾ
ನಯನಕೆ ಮುದ ನೀಡುವ ನಿನ್ನ ಮೈಮಾಟ
ಕಣ್ ತುಂಬಿ ಕೊಳ್ಳುವಷ್ಟರಲ್ಲೇ ಮತ್ತೆ
ಬರುವೆನೆಂದು ಹೊರಟೆಯಾ....ಓ ಮಳೆಯೆ....

ರಚನೆ:ವಿನೋದ್  ಕುಮಾರ್.ಆರ್.ವಿ

ಶಿಕ್ಷಕರು ಚಿಕ್ಕಬಳ್ಳಾಪುರ..

🎠🎠🎠🎠🎠🎠🎠🎠🎠🎠🎠🎠🎠🎠🎠
ಕವನ
ಮಿಡಲ್ ಕ್ಲಾಸ್ ಜನ.

ಮದ್ಯಮ ವಗ೯ದವರ ಬಾಳು
ಕೇಳುವವರಾರಿಲ್ಲ ಇವರ ಗೋಳು

ಬರುವ ಆದಾಯ ಸಾಲುವುದಿಲ್ಲ
ಮಾಡುವ ಸಾಲಗಳಿಗೆ ಕೊನೆಯಿಲ್ಲ

ಐಷಾರಾಮಿ ಕನಸು ಕಾಣುವರು
ಹತಾಶೆಯ ಜೀವನ ನಡೆಸುವರು

ಹಣವಿರುವವರು ವೃದ್ದರಾದರೂ ತರುಣರೇ
ಹಣವಿಲ್ಲದವರು ಯೌವ್ವನದಲ್ಲಿದ್ದರೂ ವೃದ್ದರೇ

ಇವರ ಜೀವನ ಸರಿ ಹೋಗುವುದೆಂದು
ತಿಂಗಳ ಮೊದಲ ತಾರೀಖಿನಂದು.......

  ರಚನೆ:ವಿನೋದ್ ಕುಮಾರ್ ಆರ್.ವಿ.ಶಿಕ್ಷಕರು.ಸ.ಕಿ.ಪ್ರಾ.ಶಾಲೆ.ಮುದ್ದಲಹಳ್ಳಿ
.ಚಿಕ್ಕಬಳ್ಳಾಪುರ.
💙💙💙💙💙💙💙💙💙💙💙💙💙💙💙💙:
  ನಮ್ಮಕಷ್ಟ...
ಏಕ ಉಪಾಧ್ಯಾಯ ಶಾಲೆ
ಇಲ್ಲಿದೆ ಸಮಸ್ಯೆಗಳ ಸರಮಾಲೆ

ಭೋದಿಸಬೇಕು ಹಲವುವಿಷಯಗಳ
ಉತ್ತರಿಸಬೇಕು ಜನರ ಪ್ರಶ್ನೆಗಳ

ಮಾಡಬೇಕು ಮೇಲುಸ್ತುವಾರಿ
ನೀಡುವ ಹಾಲು  ಊಟಕೆ,
ನೀಡಬೇಕು ಲೆಕ್ಕ ಮಾಡುವ
ಪ್ರತೀ ರೂಪಾಯಿ ಖಚಿ೯ಗೆ

ಇವನು ದಾಖಲೆಗಳ ಸರದಾರ
ಇವನ ಕಷ್ಟ ಕೇಳಲು ಯಾರಿಲ್ಲ ಆಧಾರ

ಹೆಚ್ಚು ಹೊರೆ ಕಡಿಮೆ ಸಂಬಳ
ಎನ್ನುವ ಭೀತಿ
 ಆದರೂ ತಲೆಕೆಡಿಸಿಕೊಳ್ಳದೆ
ಮಕ್ಕಳಿಗೆ ಭೋದಿಸುವನು ನೀತಿ

ಏಕ ಉಪಾಧ್ಯಾಯ ಶಾಲೆ
ಇವನಿಗೆ ಹಾಕಲೇಬೇಕು ಹೂಮಾಲೆ....

ವಿನೋದ್ ಕುಮಾರ್ ಆರ್.ವಿ
ಚಿಕ್ಕಬಳ್ಳಾಪುರ..
💙💙💙💙💙💙💙💙💙💙💙💙💙💙💙
 ಕವನ
ಒಂದು ಸಣ್ಣ ಕಿರುನಗೆ ಸಾಕು
ಸ್ನೇಹ ಪ್ರಾರಂಭವಾಗಲು
ಒಂದು ಸಣ್ಣಮಾತು ಸಾಕು
ದೊಡ್ಡ ಯುದ್ದಗಳಾಗಲು
ಒಂದು ಸಣ್ಣನೋಟ ಸಾಕು
ಎಷ್ಟೋಬಂಧಗಳ ಉಳಿಸಲು
ಒಬ್ಬ ಪ್ರಾಮಾಣಿಕ ಸ್ನೇಹಿತ ಸಾಕು
ಒಂದು ಜೀವನವನ್ನೇ ಬದಲಿಸಲು....

ರಚನೆ:ವಿನೋದ್ ಕುಮಾರ್ ಆರ್.ವಿ.
ಚಿಕ್ಕಬಳ್ಳಾಪುರ..
💜💜💜💜💜💜💜💜💜💜💜💜💜💜
: ಹನಿಗವನ
ಶಿಕ್ಷಣವಾಗುತಿದೆ ಖಾಸಗೀಕರಣ
ಶಾಲೆಗಳಲ್ಲಾಗುತಿದೆ ರಾಜಕಾರಣ
ಶಾಲೆಗಳಲ್ಲಿದೆ ಸಂಪನ್ಮೂಲಗಳ ಕೊರತೆ
ರಾಜಕಾರಣಿಗಳಲ್ಲಿದೆ ಇಚ್ಛಾಶಕ್ತಿಯ ಕೊರತೆ
ಇಂದು ಶಿಕ್ಷಣವಾಗಿದೆ ವ್ಯಾಪಾರ
ಪೋಷಕರಿಗಿಲ್ಲ ಸಕಾ೯ರಿ ಶಾಲೆಗಳ ಮೇಲೆ ಮಮಕಾರ.
ವಿನೋದ್ ಕುಮಾರ್ ಆರ್.ವಿ.
💚💚💚💚💚💚💚💚💚💚💚💚💚💚💚
 ಹನಿಗವನ
ವಾತಾವರಣದಲ್ಲಾಗುತಿದೆ ಏರುಪೇರು
ಹಿಮಕರಗಿ ಸಾಗರ ಸೇರುತಿದೆ ನೀರು

ಭೂತಾಪದಲ್ಲಾಗಿದೆ ಏರಿಕೆ
ಕಾಡುಗಳ ಸಂಖ್ಯೆಯಲ್ಲಾಗಿದೆ ಭಾರೀ ಇಳಿಕೆ

ಪ್ರಕೃತಿ ನೀಡುತಿಹುದು ಅಪಾಯದ ಮುನ್ಸೂಚನೆ
ಕಡಗಣಿಸಿದರೆ ಪಡಬೇಕಾದೀತು ಜೀವಸಂಕುಲ ಯಾತನೆ.......
ವಿನೋದ್ ಕುಮಾರ್ ಆರ್.ವಿ.
ಚಿಕ್ಕಬಳ್ಳಾಪುರ..
💝💝💝💝💝💝💝💝💝💝💝💝💝💝💝