ಮನೋಹರ್ R ಶಿಕ್ಷಕರ ರಚಿತ ಕವನಗಳು



ರಚನೆ :ಮನೋಹರ್ R
         ಶಿಕ್ಷಕರು 
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤



"ಕರಾಳತೆ ಮೆರೆದ ಕೊರೊಣ"

ಅವರಿಸಿದೆ ಭೂಮಂಡಲವ ಕಾಣದೊಂದು ಜೀವಿ ಅವತರಿಸಿ ಬೆಚ್ಚಿ ಬೀಳಿಸಿದೆ ಮನುಕುಲವ...

ಪ್ರಕೃತಿಯ ವರವೋ? ~ ಶಾಪವೋ? ಎಗ್ಗಿಲ್ಲದೆ ನಡೆದ ಪ್ರಾಣಿಗಳ ಮರಣ ಮೃದಂಗದ ರೋಧನವೊ 
ಇಡೀ ವಿಶ್ವ ಮನುಕುಲದ ಸಾಮ್ರಾಜ್ಯವೇ ನಳುಗಿ ತಲ್ಲಣಗೊಂಡಿದೆ ಭಯಭೀತಿಯಲ್ಲಿ.

ಅಟ್ಟಹಾಸದಿ ಬಿಗಿ ಎಲ್ಲವನ್ನೂ ಗೆಲ್ಲುವೆ ಎನ್ನುವ ಕುಲಕ್ಕೆ ಸೂಕ್ಷ್ಮ ಜೀವಿಯ ಆಂತರ್ಯವನ್ನು ಅರಿಯಲಾಗದೆ ಅವಿತು ಕುಳಿತಿದ್ದಾನೆ ಗೃಹ ಬಂಧನದಲ್ಲಿ.

ಎಲ್ಲೆಲ್ಲಿಯೂ ಆತಂಕದ ಕರಾಳ ಛಾಯೆ 
ಹಂಬಲಿಸುವ ಹೊಟ್ಟೆಗೆ ತುತ್ತು ಅನ್ನಕ್ಕೂ ಕುತ್ತು
 ಅನುರಾಗದ ಕುಟುಂಬದಲ್ಲಿ ವಿರಾಗದ ಕಂಪನದ ಬಡಿತ
 ಇನ್ನೆಲ್ಲಿಗೆ ನಮ್ಮ ನಡಿಗೆ ಇಳಿಯುವುದೊ.

ಬಿಟ್ಟ ಜೀವಗಳಿಗೆ ಲೆಕ್ಕ ಸಿಕ್ಕಿದೆ ಹೊರೆತು 
ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಜೀವಗಳಿಗೆ ಲೆಕ್ಕ ಸಿಕ್ಕಿದಿಯೇ
 ಅಂತ್ಯದಲ್ಲಿಯೂ ಸ್ಪರ್ಶ ಕಾಣದ ಜೀವಗಳು  ಆಗ್ನಿ ಮಣ್ಣಿನೊಳಗೆ   ಧಗ-ದಹಿಸಿವೆ.  

ಈ ಸಂಕಷ್ಟದ ಸಮಯದಲ್ಲಿ ಸೃಷ್ಟಿಧಾತ ಸುಮ್ಮನಾದ ಸೂತಕದ ಜಗವನ್ನು ಪುನರ್ಜನ್ಮಕ್ಕೆ ಪೋಣಿಸುವ ವೈದ್ಯಧಾತಾ ಅಂಜದೆ  ಅಳುಕದೆ ಜೀವಧಾತನಾದ.

ಕರಾಳತೆ ಮೆರೆದ ಕೊರೊಣದಿಂದ ನಾವಿಂದು ಕಲಿಯಬೇಕಿದೆ ನೂರಾರು ಪಾಠಗಳು ಅಂತ್ಯವಿಲ್ಲದ ಜೀವ ರಾಶಿಗಳ ಮಧ್ಯೆ ಮನುಕುಲವು ಸಾಗಬೇಕಿದೆ ಹೊರತು ಇತರ ಜೀವಿಗಳ ಮಾರಣಹೋಮದಿಂದಲ್ಲ
ಎಂಬುದನ್ನು ಅರಿತವನ್ನು ಸರ್ವ ಶ್ರೇಷ್ಠ  ದಾರ್ಶನಿಕನಲ್ಲವೆ.

          ವಿಷಾದ ಕವನದ ಸಾಲುಗಳು
                    ಮನೋಹರ್ R

👤👤👤👤👤👤👤👤👤👤👤👤👤👤👤
ಪ್ರತಿ ಅಂತ್ಯದಲ್ಲೂ ಆರಂಭ ...

ಕ್ಷಣದ ಸಂಘರ್ಷ ಜ್ವಾಲೆಯಲ್ಫ್ಲಿ
ಉದ್ಭವಿಸಿದ ಆರಂಭವೇ 
ಘಟಿ ಗಟ್ಟಿಸಿ ಸರಿಯುತ್ತಿರುವೆ ಮೆಲ್ಲಗೆ 
ನಿನ್ನ ಪ್ರಯಾಣ ಇನ್ನೆಲ್ಲಿಗೆ....


ನೂರೆಂಟು ಬಯಕೆಗಳ ನಡುವೆ 
ಅರಳಿದ ಜೀವನದ ಆರಂಭ
 ಚಿಗುರೊಡೆದು ಕವಲುವ ಮುನ್ನವೇ 
ಸರ್ವವನ್ನು ನುಂಗುವ ಅಂತ್ಯವೇ.....

ಸೃಷ್ಟಿಯ ಕ್ಷಣ ಮಾತ್ರದಲ್ಲಿ
 ನಡೆಯುವ ಲಯ  ಕಾರಗಳಿಗೆ 
 ಪ್ರತಿ ಆರಂಭದಲ್ಲಿಯೂ ಕೊನೆಹಿದಿಯಲ್ಲವೇ  
ಪ್ರತಿ ಕೊನೆಯಲ್ಲಿ  ಆರಂಭವಿದಿಯಾಲ್ಲವೇ....


ಎಲೆ ಉದುರಿ ನಿರ್ವಿಕಾರವಾದ ದಟ್ಟಡವಿ ನವರಂಗಿನ  ಚೈತನ್ಯದೊಂದಿಗೆ  ಕಂಗೊಳಿಸುವುದಲ್ಲವೋ ಬತ್ತಿ ಹೋದ ಸಾಗರ ಮಳೆಯ ಸಿಂಚನದಿಂದ  ಧುಮ್ಮಿಕ್ಕಿ ಹರಿಯುವುದಲ್ಲವೋ...

ಬೆಳಕು ಕತ್ತಲಿನ ನೆರಳಾಟದಲ್ಫ್ಲಿ
 ಬದುಕಿನ ಬಂಡಿಯನ್ನು ಎಳೆಯುತ್ತ  
ಸದ್ದು ಗದ್ದಲಗಳ ಮಧ್ಯ
ಎಚ್ಚರದಿಂದ ಮುಂದೆ ಸಾಗೋಣ...
👤👤👤👤👤👤👤👤👤👤👤👤👤👤👤
ದಿಟ್ಟ ಛಲ


ಬಿಟ್ಟ ಬೇರು ಗಟ್ಟಿ ಇರಲು
   ನೀ ಸಾಗುತ್ತಿರು ಮುಂದೆ  
ಅಂಜದೆ  ಅಳಕದೆ 
ನಡೆ ಸಾಗಲಿ ಮುಂದೆ 
ಅತ್ತ ಇತ್ತ ನೋಡಿ ನೀ ಕೊರಗದಿರಿ
 ಹಿಂದೆ~ಮುಂದೆ..........

ಕೊಟ್ಟ ಮಾತು ಇಟ್ಟ ಹೆಜ್ಜೆ 
ಮರೆಯದಿರು ಎಂದೂ
ಹಚ್ಚಿದ ದೀಪ ಅರುವ ಮುನ್ನವೇ
 ಗುರಿ ಮುಟ್ಟು ನೀನೆಂದು....

ನಿನ್ನರಿಸಿ ಬಂದವರಿಗೆ ನೀಗಿಸು ಬವಣೆಯನ್ನು 
ಕಷ್ಟದಲ್ಲಿ ಕೈ ಹಿಡಿದು ಮುನ್ನಡೆಸು  ನಿನ್ನವರನ್ನು 
ಇಷ್ಟ ಕಷ್ಟಗಳ ನಡುವೆ  ಸಾಧಿಸಿ ತೋರಿಸಿ
  ನೀನ್ನೇಂಬುವುದನ್ನು ......

ಸುಟ್ಟ ಗಾಯ ಹಸಿದ ಹೊಟ್ಟೆ
 ಕಟ್ಟಿಕೊಡುವವೂ ನೂರಾರು 
 ಅರಿತು ಬೇರಿತು ಕೂಡಿ ಬಾಳಿದರೆ 
ಜಲವೆಲ್ಲಾ  ನಮಿಸುವುದು ನಿಮಗೆ ....
👤👤👤👤👤👤👤👤👤👤👤👤👤👤

ಕಡಲಾಳದಿಂದ ಅಬ್ಬರಿಸಿ ಬೊಬ್ಬಿರಿದು 
ಮುನ್ನುಗ್ಗುತ್ತಿದೆ ರಕ್ಕಸ ಅಲೆಗಳು
 ಚಳ್ಳನೆ  ಹೃದಯ ಕಂಪಿಸಿ  ಮನಸ್ಸು ಮರಗಟ್ಟಿದೆ 
ನನ್ನೊಳಗೆ......

ಕಣ್ಣಿನಲ್ಲಿ ಕನವರಿಕೆ ನೂರು 
ಮಾತಿನಲ್ಲಿ ತಡವರಿಕೆ ನೂರಾರು 
ಎಲ್ಲಿಯೋ ಬಿಸಿದ ಗಾಳಿ
 ಬಿರುಗಾಳಿಯಾಗಿ ಆರ್ಭಟಿಸುತ್ತಿದೆ
 ನನ್ನೊಳಗೆ......

ಕಣ್ಣೋಟದ ಕನಸಿಗೆ ಕಾರ್ಮೋಡದ ಛಾಯೆ
 ಆವರಿಸಿ ಅಣಕಿಸುತ್ತಿದೆ ಆಸೆಯನ್ನು 
ಎಲ್ಲಿಯೋ ಘರ್ಜಿಸಿದ ಗುಡುಗು ಮಿಂಚಾಗಿ ಅಪ್ಪಳಿಸಿದೆ 
ನನ್ನೊಳಗೆ.....

ಸುತ್ತಲೂ ಕತ್ತಲಾವರಿಸಿ ದಾರಿ ಕಾಣದಾಗಿದೆ
 ಎತ್ತ ನೋಡಿದರೂ ಬರಿ ಕಗ್ಗತ್ತಲು
 ಕೂಗಿ ಕರೆದರೂ ಕೂಗಾಡಿ ಕರೆದರೂ
 ಯಾರಿಗೂ ಕೇಳಿಸಲಿಲ್ಲ  ಈ ನನ್ನೊಳಗಿನ 
ಮೂಕ ವೇದನೆ.......

ರಚನೆ :ಮನೋಹರ್ R
         ಶಿಕ್ಷಕರು 
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤👤👤👤👤👤


ಮುಂಜಾನೆ ಕಿರಣದ ಸೊಬಗು 

ಕಂಡ ಕ್ಷಣ ಮನದಲ್ಲಿ ಮೂಡಿತ್ತು ಕಲ್ಪನೆ 
ಸಾಗರದ ದಡದಲ್ಲಿ ನಡೆದಾಡಿದೆ
ಹಾಗೇ ಸುಮ್ಮನೆ.

ಮಿಂಚು ಬಡಿಯಿತು ಹೃದಯದಲ್ಲಿ 
ಪುಳಕಗೊಂಡಿತು ಹರುಷದಲ್ಲಿ 
ಏನಿಹದು ಈ ಜಗದಲ್ಲಿ ವಿಸ್ಮಯ.

ಮುಂಜಾನೆ ಕಿರಣ ಬಂದು ಸೋಕಿದೊಡನೆ 
ಮನಸದೊಳ್ ಚುಮಿತ್ತು ಕಾರಂಜಿ 
ಆಡಿಗಡಿಗೆಯು ನವರಂಗದ ಚಿಲುಮೆ 
ಪುಟಿದೆದ್ದಿದೆ ಪಾರಿಜಾತ ಯಾವ 
ಮೋಡಿಗಾರ ಸೃಷ್ಟಿಸಿದ ಈ ಸ್ವರ್ಗವ 

ಮುದುರಿದ ಹಕ್ಕಿ ಗೆರೆಗೆದರಿ ಹಾರಿದೆ ಬಾನಿನೊಳ 
ಸಾಲಾಗಿ ಹೊರಟಿವೆ ಕೆಂಪಿರುವೆ 
ಕುಸುಮಗಳರಳಿ ಕಸ್ತೂರಿ ಕಂಪು ಬೀರುವೆ 
ಸಿಹಿ ಸಿಂಚನದ ಆಸೆಯಲ್ಲಿ  ಮುತ್ತಿಕ್ಕಿದೆ ದುಂಬಿಗಳು
ಏನಿದೂ ಇಂತಹ ಈ ಸೊಬಗು ಸ್ವರ್ಗವೇ ಧರೆಗಿಳಿದಿದೆ ಭಾಸ್ಕರನ  ಓರೆಯ ಕಿರಣದಲ್ಲಿ 
ಬೆರಗಾದೆ ನಿನ್ನಯ ಚಮತ್ಕಾರಕ್ಕೆ 
 ತಲೆದೂಗಿದೆ ನಾ........

ರಚನೆ :ಮನೋಹರ್ R
         ಶಿಕ್ಷಕರು 
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤👤👤👤👤👤



ನಾ ಹುಡುಕಿದ ದೇವನು

ಎಲ್ಲಿರುವನು ದೇವನು ?
ಗುಡಿ ಗೋಪುರದೊಳಗೋ?
 ಮಸೀದಿ ಮಂದಿರದೊಳಗೊ ? 
ಹುಡುಕುತ್ತಾ ಸಾಗಿದೆ ನಾ ಮುಂದೆ ......

ಕಲ್ಲು ಮಣ್ಣುಗಳಲ್ಲಿಲದ ದೇವನು 
ಕಂಡೆ ಕಾಯಕ ಕೆಲಸದ ಕೈಲಾಸದಲ್ಲಿ
ಮನ ಮೆಚ್ಚುವಂತೆ  ಪೂಜಿಸು
 ತನ್ಮಯನಾಗುವಂತೆ   ಆರಾಧಿಸು....

ತನು ಮನ ಅರಿತವನು...
 ಜಗವನ್ನು ಅರಿದವನು ಸುಖ ದುಃಖ ಕಂಡವನು..
.ಬಾಳನ್ನ ಸವಿದವನು ಬೆಳಗು ಜ್ಯೋತಿಯನ್ನ ..
ಅಳಿಸು ಅಂಧಕಾರವನ್ನ ಅಂತರಾತ್ಮದಲ್ಲಿ
 ಕಾಣು ಸಾಕ್ಷಾತ್ಕಾರವನ್ನ.

 ನಿನ್ನ ಅಂತರಂಗ ಶುದ್ಧವಿರಲು
 ನಿನ್ನೊಳಗೆ  ನೆಲೆಸಿಹನು ದೇವನು
 ಬಿಡು ಆಡಂಬರದ ಪೂಜೆಯನ್ನ 
 ಅರಿ ಈ ದೈವದ  ತತ್ವವನ್ನ........

ರಚನೆ :ಮನೋಹರ್ R
         ಶಿಕ್ಷಕರು 
ಬಂಗಾರಪೇಟೆ ತಾ॥
          ಕೋಲಾರ

👤👤👤👤👤👤👤👤👤👤👤👤👤


ಶೂನ್ಯದ ಲೋಕ 

ಕಣ್ಣು ತೆರೆದು ನೋಡು ಜಗವನ್ನ
ಎಲ್ಲಾ ಶೂನ್ಯವಿಹುದು
 ಯಾರಿಗೆ ಯಾರುಂಟು 
ಈ ಬಾಳ ಪ್ರಯಾಣದಲ್ಲಿ.

ಜನ ಮೆಚ್ಚುವಂತೆ ನಡೆಯುವರಿಲ್ಲಿ
ಮನ ಮೆಚ್ಚುವಂತೆ ನಡೆಯುವರೆಲ್ಲಿ  
ಎಷ್ಟು ದಿನ ಇರುವೆ 
ನೀ ಈ ಲೋಕದಲ್ಲಿ ......?

ತನುವಿನಲ್ಲಿ ಹೊಸ ಚೈತನ್ಯ 
ಒಡಮೂಡುತ್ತದೆ ಅರಿ ದೈವವನ್ನ
ಬಿಡು ಬಾಹ್ಯದ ಡಂಭವನ್ನ
ಅರಿತು ಬೆರೆತು ನಡೆ ಈ ಜಗವನ್ನ

ಪರರನ್ನು ನಿಂದಿಸಿ ನೋಯಿಸದೆ 
ಇನ್ನೊಬ್ಬರಿಗಾಗಿ ನೀ ಜೀವಿಸದೆ 
ತಿಳಿ ನಿನ್ನ ಅಂತರ್ಯವನ್ನ
ಅರಿ ಸೊನ್ನೆಯ ತಿರುಳನ್ನ.....

ರಚನೆ :ಮನೋಹರ್ R
         ಶಿಕ್ಷಕರು 
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤👤👤👤👤👤



ಯಾವ ಜನ್ಮದ ಮೈತ್ರಿ 

ಕ್ಷಣದಲ್ಲಿ ಹುಟ್ಟಿದ ಪ್ರೀತಿಯೇ 
ನಾ ಒಂದನ್ನು ಕೇಳುವ ಆಸೆ 
ಮನಬಿಚ್ಚಿ ನೀ ಹೇಳುವೆಯಾ
ನೀ ಯಾರೊ....? ನಾ ಯಾರೊ...?
ನೋಡಿದ ಕ್ಷಣದಲ್ಲಿ ಮೈಮರೆತು ಹೋದೆ 
ಇದು ಯಾವ ಜನ್ಮದ ಮೈತ್ರಿ ನೀ ಹೇಳು.?

 ತುಂತುರು ಮಳೆಯಲ್ಲಿ ಮಿಂದು 
ತಂಪಾದ ಹವೆಗೆ ಸಿಕ್ಕಿ 
ಇಂಪಾದ ನಾದ ಇಂಚರದ 
 ಶ್ರೀಗಂಧ ಪರಿಮಳ ಸುವಾಸನೆ ಬೀರಿದೆ 
ಈ ನಿನ್ನ ಪ್ರೀತಿಯಲ್ಲಿ .....!
ಇದು ಯಾವ ಜನ್ಮದ ಮೈತ್ರಿ ನೀ ಹೇಳು.?

ತಿಳಿ ನೀರಾ ಬುಗ್ಗೆಯಲ್ಲಿ ಮಧುರವಾದ 
ಸವಿಜೇನಿನಲ್ಲಿ ...
ಅಕ್ಕರೆಗೆ ಮಮತೆಯ ಬೆಳದಿಂಗಳಲ್ಲಿ ಕನವರಿಕೆಯ ಕನಸಿನಲ್ಲಿ .....
ಕಲ್ಪನೆಗೆ ಕಣ್ಣು ಹರಿಯುವ ತನಕ 
ದಿಗಂತದ ಛಾಯೆಯಲ್ಲಿ  ನಿನ್ನ ಪ್ರತಿಬಿಂಬ ಸವಿದೆ ಇದು ಯಾವ ಜನ್ಮದ ಮೈತ್ರಿ ನೀ ಹೇಳು?

ರಚನೆ :ಮನೋಹರ್ R
         ಶಿಕ್ಷಕರು 
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤👤👤👤👤



ಅಂತಃಕರಣದ ಮೃದಂಗ 

ಬೆಂಕಿಯು ಹತ್ತಿ ಉರಿಯುತ್ತಿದೆ ನನ್ನೊಳಗೆ 
ಬರಸಿಡಿಲು ಬಡಿಯುತ್ತದೆ ಈ ಮನದೊಳಗೆ
 ಉಳಿಯಲೋ.....ಅಳಿಯಲೋ....
         ನಾ ಕಾಣೇ.........

ಗಗನ ಅರುಣ ಛಾಯೆಯ ಬಿಸಿಲಿಗೆ 
 ನನ್ ಈ ಮೈ ಸೋಕಿದೆ 
ಮಧುರ ಮಳೆಯ ಆಸೆಯಲ್ಲಿ 
ಮರಳಗಾಡ  ಅಲೆಯುತ್ತಿದೆ 
 ತಣ್ಣೀಸಲೋ..... ಸುಡಲೋ.....
ನಾ ಕಾಣೇ.......

ನನ್ನ ಒಳಗೆ ಮಿಡಿದ ಶ್ರುತಿಯೊಂದು 
ಹೊರಬಂದು ಅಬ್ಬರಿಸಿ ಕುಣಿದಾಡುತ್ತಿದೆ 
ನಗಲೋ .....ಅಳಲೋ....
 ನಾ ಕಾಣೇ ......

ನಸು ನಿದ್ರೆಯಲ್ಲಿ  ಪಿಸುಮಾತುಗಳ 
ಕಂಪನಕ್ಕೆ ಎಚ್ಚರಗೊಂಡಿದೆ 
ಓ...ನನ್ನ ಅಂತಃಕರಣದ ಮನಸೇ 
ಮರುಗದಿರು.....ಮರುಗದಿರು.....

ರಚನೆ :ಮನೋಹರ್ R
         ಶಿಕ್ಷಕರು 
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤👤👤👤👤



ಜೀವನ ಪ್ರಯಾಣದಲ್ಲಿ ಮಾರಣ 

ಕನಸೆಂಬ ಕುದುರೆಯನ್ನೇರಿ
 ಆಸೆಯನ್ನು ಬೆನ್ನಟ್ಟಿ
 ಸಾಗುತ್ತಿದೆ ಈ ನನ್ನ ಜೀವನ.

ಮುತ್ತುಗಳ ಆಸೆಯಲ್ಲಿ 
ನದಿಯಲ್ಲಿ ಈಜುತ್ತ
ದಡವನ್ನು ಹುಡುಕುತ್ತಾ 
ಸಾಗುತ್ತಿದೆ ಈ ನನ್ನ ಪ್ರಯಾಣ

 ಈಗ ಆಸೆ ಕಮರಿದೆ ದಡ ಕಾಣದಾಗಿದೆ
 ಜೀವನ ಕಾಲಚಕ್ರದಲ್ಲಿ ಸಾಗುತ್ತಾ
 ವಿಧಿಯಾಟದಲ್ಲಿ ನಾನ್ ಈ   ಮರಣ.

ರಚನೆ :ಮನೋಹರ್ R
         ಶಿಕ್ಷಕರು 
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤👤👤👤👤👤👤



ಹುಚ್ಚು ಮನಸ್ಸಿಗೆ ನೂರೆಂಟು ಆಸೆ 

ಜಾರುತ್ತಿದೆ ಈ ನನ್ನ ಮನ ಕಂದಕಕ್ಕೆ 
ಕೈ ಚಾಚಿ ಮೇಲತ್ತೇಯಾ.

ದಾರಿ ಕಾಣದಾಗಿದೆ ಕತ್ತಲಲ್ಲಿ ಬೆಳಕು ಚೆಲ್ಲಿ ದಾರಿ ತೋರೆಯಾ..

ಆಸೆ ಬತ್ತಿ ಹೋಗಿದೆ ಬದುಕಿನಲ್ಲಿ 
ಕನಸುಗಳ ಬಿಂಬ ಕಾಣೆಯ 

ಪ್ರೀತಿ ಕಮರಿದ ಹೃದಯದಲ್ಲಿ 
ಬೆಳದಿಂಗಳ ಛಾಯೆ ಮುಾಡೆಯಾ.
  ದೇವ ದೇವ ಈ ನನ್ನ ಹುಚ್ಚು ಮನಸ್ಸಿನೊಳಗೆ  ನೂರೆಂಟು ಆಸೆಗಳ......

ರಚನೆ :ಮನೋಹರ್ R
         ಶಿಕ್ಷಕರು 
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤👤👤👤👤




ಈ ನನ್ನ ಬದುಕು

ಕಾಲದ ಒಡಲಲ್ಲಿ ಸಾಗುತ್ತಿರುವ
ಈ ನನ್ನ ಬದುಕಿನಲ್ಲಿ
ಸಂತಸವಿಲ್ಲ.......ದುಃಖವೆಯಲ್ಲ .......
ಮಾತಿಲ್ಲ ........ಮೌನವೆಯಲ್ಲ ......
ನಿದ್ರೆಯಿಲ್ಲ .......ಎಚ್ಚರವೆಯಲ್ಲ ......
ಕನಸಿಲ್ಲ  .......ಕಣ್ಣಿರೇಯಲ್ಲ ......
ಬೆಳಕಿಲ್ಲ ..........ಕತ್ತಲೆಯಲ್ಲ.......
 ಪ್ರೀತಿಯ ಛಾಯೆ  ಇಲ್ಲದೆ ಈ
ನನ್ನ ಹೃದಯದಲ್ಲಿ ಹುಟ್ಟಿದ
ಈ ನನ್ನ ಕವನ ......

ರಚನೆ :ಮನೋಹರ್ R
         ಶಿಕ್ಷಕರು
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤👤👤👤👤👤




ಮನಸ್ಸಿನ ಮೌನ

ಮನದಾಳದಲ್ಲಿ ಉಕ್ಕಿ ಹರಿಯುತ್ತಿದೆ
ಹೊಸ ಹರುಷವುಂದು
 ಹೇಳಲು ಮಾತುಗಳೇ  ಬರುತ್ತಿಲ್ಲವಲ್ಲ

ನಾ ನಿನ್ನ ನೆನೆದ ಕ್ಷಣದಲೆಲ್ಲ
ನನ್ನ ಈ ಮನ    ಝೇಂಕರಿಸುತ್ತಿದೆ                  ಸಾಕು ಈ ಮೌನ ತುಟಿಯ ಅರಳಿಸಿ
 ನಗೆಯನ್ನು ಬೀರೆಯ.

ನಿಶ್ಯಬ್ದ ರಾತ್ರಿಯಲ್ಲಿ ಕಣ್ಣು ಮುಚ್ಚಿದಾಗ
 ಹೃದಯದಲ್ಲಿ ಪಿಸು ಮಾತುಗಳ ಕಲರವ
 ತುಂಬಿ ತಲ್ಲಣಿಸಿದೆ ಈ ನನ್ನ ಮನ
 ನಾನು  ಸೋತೆ ನೀನು ಗೆದ್ದೇ
ಈಗಲಾದರೂ ಮಾತಡು ನನ್ನ ಮನಸ್ಸೇ....

ರಚನೆ :ಮನೋಹರ್ R
         ಶಿಕ್ಷಕರು
ಬಂಗಾರಪೇಟೆ ತಾ॥
          ಕೋಲಾರ

👤👤👤👤👤👤👤👤👤👤👤👤👤👤👤


.
ನನ್ನೊಳಗಿನ ಬೇಸರ

 ಬದುಕಿನೊಳಗೆ ಅಂಧಕಾರ ಆವರಿಸಿ
 ಮುಗಿಲೆತ್ತರದ ಆಕಾಶ ಕಳಚಿ
 ದೋ ಎಂದು ಆರ್ಭಟಿಸುತ್ತಿರುವ ಮಳೆ ಹಾಗೆ
 ನನ್ನೊಳಗೆ ಮನೆ ಮಾಡಿದೆ ಆಕ್ರಂದನದ ಹೆಸರು

ಅಳುವ ಕಂಗಳ ಕಂಬನಿ ಕಟ್ಟೆ ಒಡೆದು
ಮರಗಟ್ಟಿದ ನೋವಿನ ಪ್ರತಿಧ್ವನಿ  ಮಾರ್ದನಿಸಿ
 ಸತ್ತ ಶವಗಳು ನಡುವೆ ಅಲೆದಾಡುತ್ತಿರುವ ಹಾಗೆ
 ನನ್ನೊಳಗೆ ಮನೆ ಮಾಡಿದೆ ಆಕ್ರಂದನದ ಬೆಸರ

ಮನಸ್ಸಿನೊಳಗೆ ಇಂಗಿತ ನೂರು ಹೇಳಿಕೊಳ್ಳಲಾಗದ ಸ್ಥಿತಿ ನೂರಾರು
 ಅತ್ತ ಇತ್ತ ಸುತ್ತಮುತ್ತ ಯಾರಿಲ್ಲ  ಧ್ವನಿ ಗೂಡಲು
ನಿರ್ಲಿಪ್ತವಾಗಿ  ನಿರ್ವಿಕಾರವಾಗಿ ಆಂತರ್ಯದ ತುಂಬಾ ಮನೆ ಮಾಡಿದೆ ಆಕ್ರಂದನದ ಬೇಸರ

ಮುಸುಕಿದ ಮಬ್ಬಿನ ಪೊರೆಯನ್ನು ಮುಗುಚಿ
ನಸು ಬೆಳಕಿನ ಕತ್ತಲೆ ಕಳೆದು
 ಹೂ ಬಣ್ಣದ  ಹೊಂಗಿರಣ ಮೂಡಿ
ಅಳೆದು ಹೋಗುವುದೇ ನನ್ನೊಳಗಿನ ಆಕ್ರಂದನದ ಬೆಸರ
ರಚನೆ :ಮನೋಹರ್ R
         ಶಿಕ್ಷಕರು
ಬಂಗಾರಪೇಟೆ ತಾ॥
          ಕೋಲಾರ
👤👤👤👤👤👤👤👤👤👤👤👤👤👤👤