ತತ್ಸಮ-ತದ್ಭವ

ಸಂಸ್ಕೃತದಿಂದ ತಮ್ಮ ಮೂಲರೂಪವನ್ನು ವ್ಯತ್ಯಾಸಮಾಡಿಕೊಂಡು ಕನ್ನಡಕ್ಕೆ ಬಂದ ಶಬ್ದಗಳು
ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆ ಹೊಂದಿದವು, ಹೆಚ್ಚು ಬದಲಾವಣೆ ಹೊಂದಿದವು ಎಂದು ಎರಡು ಭಾಗ ಮಾಡಬಹುದು.
(i) ಅಲ್ಪಸ್ವಲ್ಪ ಬದಲಾವಣೆ ಹೊಂದಿ ಬಂದವುಗಳು:
ಉದಾಹರಣೆಗೆ:- ಸೀತೆ, ಲಕ್ಷ್ಮಿ, ಮಾಲೆ, ದೇವತೆ, ರಾಜ, ಮಹ, ಯಶ, ಬೃಹತ್ತು, ಮಹತ್ತು, ವಿಪತ್ತು, ವಿಯತ್ತು, ಸರಿತ್ತು-ಇತ್ಯಾದಿಗಳು.
(ii) ಹೆಚ್ಚು ಬದಲಾವಣೆ ಹೊಂದಿ ಬಂದವುಗಳು:
ಉದಾಹರಣೆಗೆ:- ಸಕ್ಕರೆ, ಸಾವಿರ, ಬಸವ, ಸಂತೆ, ಪಟಕ, ಸರ, ತಾಣ, ದೀವಿಗೆ, ಬತ್ತಿ, ಬಸದಿ, ನಿಚ್ಚ, ಕಜ್ಜ, ಅಂಚೆ, ಕಂತೆ, ಅಜ್ಜ, ಕವಳ-ಇತ್ಯಾದಿಗಳು.
ಸಂಸ್ಕೃತದಿಂದ ಅಸಂಖ್ಯಾತ ಪದಗಳು ಕನ್ನಡಕ್ಕೆ ತದ್ಭವ ರೂಪವಾಗಿಬಂದಿರುವುದರಿಂದ, ಅವುಗಳು ಕನ್ನಡಕ್ಕೆ ಬಂದ ಕ್ರಮವನ್ನು ವಿಸ್ತಾರವಾಗಿಯೇ ತಿಳಿಯಬೇಕಾದುದು ಅವಶ್ಯವಾದುದು.  ಆ ಬಗೆಗೆ ಈಗ ವಿಚಾರ ಮಾಡೋಣ.

[1] ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಬಂದ ಶಬ್ದಗಳನ್ನು ತಿಳಿಯಲು ಸ್ಥೂಲವಾಗಿ ಕೆಳಗಣ ವಿಷಯಗಳನ್ನು ನೆನಪಿನಲ್ಲಿಡಬೇಕು:-
(i) ಋ, ಶ, ಷ, ಕ್ಷ, ಜ್ಞ, ತ್ರ ವಿಸರ್ಗ, ಸ್ತ್ರೀ, ಸ್ತ್ರ ಅಕ್ಷರಗಳಿರುವ ಶಬ್ದಗಳು;
(ii) ಮಹಾಭಾರತ, ರಾಮಾಯಣಗಳೇ ಮೊದಲಾದ ಪುರಾಣ ಗ್ರಂಥಗಳಲ್ಲಿ ಬರುವ ವ್ಯಕ್ತಿ, ಸ್ಥಳ, ಪರ‍್ವತ, ನದಿ, ಋಷಿಗಳೇ ಮೊದಲಾದವರ ಹೆಸರುಗಳು ಮತ್ತು ಋತು, ಮಾಸ, ದಿವಸ, ನಕ್ಷತ್ರ, ಯೋಗ, ಕರಣಗಳು;
(iii) ವಿ, ಅ, ಅನ್, ಸು, ಸ, ನಿಸ್, ನಿರ್, ನಿಃ, ದುಃ, ದುಸ್, ದುರ್ ಇತ್ಯಾದಿ ಉಪಸರ್ಗ ಪೂರ್ವಕ ಶಬ್ದಗಳು, ಉದಾ:-ವಿಚಲಿತ, ಅಚಲಿತ, ದುರಾಚಾರ, ಅನಗತ್ಯ, ವಿಶೇಷ … … … ಇತ್ಯಾದಿ;
(iv) ಇವಲ್ಲದೆ ಇನ್ನೂ ಅನೇಕ ಶಬ್ದಗಳಿವೆ.  ಇಲ್ಲಿ ಹೇಳಿರುವುದು ಕೇವಲ ಸ್ಥೂಲಮಾತ್ರ.
[2] ಅನೇಕ ಶಬ್ದಗಳು ತದ್ಭವ ರೂಪ ಹೊಂದಿ ನೇರವಾಗಿ ಸಂಸ್ಕೃತದಿಂದಲೇ ಬಂದಿಲ್ಲ.  ಪ್ರಾಕೃತ ಎಂಬ ಭಾಷೆಯಿಂದಲೂ ಬಂದಿವೆ.
     (೨೭ತತ್ಸಮಗಳು-ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಶಬ್ದಗಳು ತತ್ಸಮಗಳು.  ತತ್ ಎಂದರೆ ಅದಕ್ಕೆಸಮ ಎಂದರೆ ಸಮಾನವಾದುದು-ಇಲ್ಲಿ ಅದಕ್ಕೆ ಎಂದರೆ ಸಂಸ್ಕೃತಕ್ಕೆ ಸಮಾನ (ಎಂದು ಅರ್ಥಇವನ್ನು ಕೆಲವರು ಸಮಸಂಸ್ಕೃತ ಗಳೆಂದೂ ಕರೆಯುವರು (ಕನ್ನಡಕ್ಕೂ ಸಂಸ್ಕೃತಕ್ಕೂ ಇವು ಸಮಾನರೂಪಗಳೆಂದು ತಾತ್ಪರ್ಯ).  ಅಲ್ಲದೆ ತದ್ಭವ ಶಬ್ದಗಳ ಸಂಸ್ಕೃತ ರೂಪಗಳನ್ನು ತತ್ಸಮ ಗಳೆಂದೇ ಕರೆಯುವುದು ರೂಢಿಗೆ ಬಂದಿದೆ.
ಉದಾಹರಣೆಗೆ:- ರಾಮ, ಭೀಮ, ಕಾಮ, ವಸಂತ, ಸೋಮ, ಚಂದ್ರ, ಸೂರ‍್ಯ, ಗ್ರಹ, ಕರ್ತೃ, ಶತ್ರು, ಸ್ತ್ರೀ, ಶ್ರೀ, ವನ, ಮಧು, ಕಮಲ, ಭುವನ, ಭವನ, ಶಯನ, ಶ್ರುತಿ, ಸ್ಮೃತಿ, ಶುದ್ಧಿ, ಸಿದ್ಧಿ, ಕವಿ, ಕಾವ್ಯ, ರವಿ, ಗಿರಿ, ಲಿಪಿ, ಪಶು, ಶಿಶು, ರಿಪು, ಭಾನು, ಯತಿ, ಮತಿ, ಪತಿ, ಗತಿ-ಇತ್ಯಾದಿ.
(೨೮ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವಿಕಾರವನ್ನಾಗಲಿಪೂರ್ಣ ವಿಕಾರವನ್ನಾಗಲಿಹೊಂದಿ ಬಂದಿರುವ ಶಬ್ದಗಳನ್ನು ತದ್ಭವಗಳೆಂದು ಕರೆಯುವರು (ತತ್ ಎಂದರೆ ಅದರಿಂದ ಎಂದರೆ ಸಂಸ್ಕೃತದಿಂದ ಭವ ಎಂದರೆ ಹುಟ್ಟಿದ ಅಥವಾ ನಿಷ್ಪನ್ನವಾದ ಎಂದು ಅರ್ಥ).
(ಅಲ್ಪಸ್ವಲ್ಪ ವಿಕಾರ ಹೊಂದಿದ ಶಬ್ದಗಳನ್ನು ಸಮಸಂಸ್ಕೃತ ಎಂದು ಕರೆಯುವುದೂ ವಾಡಿಕೆ)

ಉದಾಹರಣೆಗೆ:- ಮಾಲೆ, ಸೀತೆ, ಉಮೆ, ವೀಣೆ, ಅಜ್ಜ, ಬಂಜೆ, ಸಿರಿ, ಬಾವಿ, ದನಿ, ಜವನಿಕೆ, ನಿದ್ದೆ, ಗಂಟೆ, ಜೋಗಿ, ರಾಯ, ಕೀಲಾರ, ಪಟಕ, ಸಂತೆ, ಪಕ್ಕ, ಪಕ್ಕಿ, ಚಿತ್ತಾರ, ಬಟ್ಟ, ಆಸೆ, ಕತ್ತರಿ-ಇತ್ಯಾದಿ.
(i) ಅಲ್ಪಸ್ವಲ್ಪ ವ್ಯತ್ಯಾಸ ಹೊಂದಿ ಕನ್ನಡಕ್ಕೆ ಬಂದಿರುವ ಸಂಸ್ಕೃತ ಶಬ್ದಗಳ ಪಟ್ಟಿ:-
ಸಂಸ್ಕೃತ ರೂಪವ್ಯತ್ಯಾಸ ರೂಪಸಂಸ್ಕೃತ ರೂಪವ್ಯತ್ಯಾಸ ರೂಪ
ದಯಾದಯೆ, ದಯಗ್ರೀವಾಗ್ರೀವೆ, ಗ್ರೀವ
ಕರುಣಾಕರುಣೆ, ಕರುಣಶಮಾಶಮೆ
ನಾರೀನಾರಿವಧವಧೆ
ನದೀನದಿಅಭಿಲಾಷಅಭಿಲಾಷೆ
ವಧೂವಧುಪ್ರಶ್ನಪ್ರಶ್ನೆ
ಸರಯೂಸರಯುಉದಾಹರಣೆಉದಾಹರಣೆ
ಸ್ವಯಂಭೂಸ್ವಯಂಭುಸರಸ್ವತೀಸರಸ್ವತಿ
ಮಾಲಾಮಾಲೆಲಕ್ಷ್ಮೀಲಕ್ಷ್ಮಿ
ಸೀತಾಸೀತೆಗೌರೀಗೌರಿ
ಬಾಲಾಬಾಲೆಭಾಮಿನೀಭಾಮಿನಿ
ಲೀಲಾಲೀಲೆಕಾಮಿನೀಕಾಮಿನಿ
ಗಂಗಾಗಂಗೆಕುಮಾರೀಕುಮಾರಿ
ನಿಂದಾನಿಂದೆಗೋದಾವರೀಗೋದಾವರಿ
ಶಾಲಾಶಾಲೆಕಾವೇರೀಕಾವೇರಿ
ರಮಾರಮೆಶಾಸ್ತ್ರೀಶಾಸ್ತ್ರಿ
ಉಮಾಉಮೆಭಿಕ್ಷಾಭಿಕ್ಷಾ, ಭಿಕ್ಷೆ
ದಮಾದಮೆಯಾತ್ರಾಯಾತ್ರೆ
ಕ್ಷಮಾಕ್ಷಮೆಜ್ವಾಲಾಜ್ವಾಲೆ
ಆಶಾಆಶೆರೇಖಾರೇಖೆ
ಸಂಸ್ಥಾಸಂಸ್ಥೆಮುದ್ರಾಮುದ್ರೆ
ನಿದ್ರಾನಿದ್ರೆದ್ರಾಕ್ಷಾದ್ರಾಕ್ಷೆ
ಯವನಿಕಾಯವನಿಕೆಮಾತ್ರಾಮಾತ್ರೆ
ದ್ರೌಪದೀದ್ರೌಪದಿಶಾಖಾಶಾಖೆ
ವೇಳಾವೇಳೆವಾಲುಕಾವಾಲುಕ
ಭಾಷಾಭಾಷೆಗಾಂಧಾರೀಗಾಂಧಾರಿ
-ಇತ್ಯಾದಿಗಳು
ಮೇಲಿನ ಎಲ್ಲ ಉದಾಹರಣೆಗಳಲ್ಲಿ ಮುಖ್ಯವಾಗಿ ಸಂಸ್ಕೃತದ ಆ ಕಾರಂತ ಶಬ್ದಗಳು ಎ ಕಾರಾಂತಗಳಾಗಿವೆ (ಮಾಲಾ-ಮಾಲೆ ಇತ್ಯಾದಿ); ಕೆಲವು ಅ ಕಾರಾಂತಗಳೂ ಎ ಕಾರಂತಗಳಾಗಿವೆ (ವಧ-ವಧೆ); ಕೆಲವು ದೀರ್ಘಾಂತಗಳು ಹ್ರಸ್ವಾಂತಗಳಾಗಿವೆ (ಲಕ್ಷ್ಮೀ-ಲಕ್ಷ್ಮಿ); ಕೆಲವು ಆಕಾರಂತಗಳು ಅಕಾರಾಂತಗಳಾಗಿಯೂ ಆಗಿವೆ (ದಯಾ-ದಯ); ಹೀಗೆ ಸ್ಥೂಲವಾಗಿ ತಿಳಿಯಬಹುದು.  ಹೀಗೆ ಅಲ್ಪಸ್ವಲ್ಪ ವ್ಯತ್ಯಾಸಗೊಂಡ ಮೇಲೆ ಇವು ಕನ್ನಡದ ಪ್ರಕೃತಿಗಳಾಗುವುವು.  ಇವುಗಳ ಮೇಲೆ ಕನ್ನಡದ ಪ್ರತ್ಯಯಗಳನ್ನು ಹಚ್ಚಬಹುದು. (ಇಂಥವನ್ನೇ ಸಮ ಸಂಸ್ಕೃತಗಳೆಂದು ಕೆಲವರು ಕರೆಯುವರೆಂದು ಹಿಂದೆ ತಿಳಿಸಿದೆ).
(ii) ಶಬ್ದದ ಕೊನೆಯಲ್ಲಿರುವ ಋಕಾರವು ಅ ಅರ ಎಂದು ವ್ಯತ್ಯಾಸಗೊಳ್ಳುವುವು.  ಕೆಲವು ಎಕಾರಾಂತಗಳೂ ಆಗುವುವು.  ಅನಂತರ ಕನ್ನಡ ಪ್ರಕೃತಿಗಳಾಗುವುವು.

ಸಂಸ್ಕೃತ ರೂಪವ್ಯತ್ಯಾಸ ರೂಪಸಂಸ್ಕೃತ ರೂಪವ್ಯತ್ಯಾಸ ರೂಪ
ಕರ್ತೃಕರ್ತ, ಕರ್ತಾರನೇತೃನೇತಾರ
ದಾತೃದಾತ, ದಾತಾರಸವಿತೃಸವಿತಾರ
ಪಿತೃಪಿತ, ಪಿತರಭರ್ತೃಭರ್ತಾರ
ಮಾತೃಮಾತೆಹೋತೃಹೋತಾರ
(iii) ಕೆಲವು ನಕಾರಾಂತ ಶಬ್ದಗಳು ಕೊನೆಯ ನಕಾರವನ್ನು ಲೋಪ ಮಾಡಿಕೊಂಡು ಕನ್ನಡ ಪ್ರಕೃತಿಗಳಾಗುವುವು.
ಸಂಸ್ಕೃತ ರೂಪವ್ಯತ್ಯಾಸ ರೂಪಸಂಸ್ಕೃತ ರೂಪವ್ಯತ್ಯಾಸ ರೂಪ
ರಾಜನ್ರಾಜಬ್ರಹ್ಮನ್ಬ್ರಹ್ಮ
ಕರಿನ್ಕರಿಪುರೂರವನ್ಪುರೂರವ
ಆತ್ಮನ್ಆತ್ಮಯುವನ್ಯುವ
ಧಾಮನ್ಧಾಮಮೂರ್ಧನ್ಮೂರ್ಧ
(iv) ಕೆಲವು ವ್ಯಂಜನಾಂತ ಶಬ್ದಗಳು ಕೊನೆಯ ವ್ಯಂಜನವನ್ನು ಲೋಪ ಮಾಡಿಕೊಂಡಾಗಲೀ ಅಥವಾ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರದೊಡನಾಗಲೀ ವ್ಯತ್ಯಾಸಗೊಂಡು ಕನ್ನಡ ಪ್ರಕೃತಿಗಳಾಗುತ್ತವೆ.
ಸಂಸ್ಕೃತ ರೂಪ  ಬದಲಾವಣೆಯಾದ ರೂಪಗಳು

ಧನಸ್ಧನುಧನುಸ್ಸು(ಸ್ + ಉ)
ಶಿರಸ್ಶಿರಶಿರಸ್ಸು(ಸ್ + ಉ)
ಯಶಸ್ಯಶಯಶಸ್ಸು(ಸ್ + ಉ)
ಮನಸ್ಮನಮನಸ್ಸು(ಸ್ + ಉ)
ತೇಜಸ್ತೇಜತೇಜಸ್ಸು(ಸ್ + ಉ)
ವಯಸ್ವಯವಯಸ್ಸು(ಸ್ + ಉ)
ಪಯಸ್ಪಯಪಯಸ್ಸು(ಸ್ + ಉ)
ಶ್ರೇಯಸ್ಶ್ರೇಯಶ್ರೇಯಸ್ಸು(ಸ್ + ಉ)
(v) ಕೆಲವು ಸಂಸ್ಕೃತದ ಪ್ರಥಮಾವಿಭಕ್ತ್ಯಂತ ಏಕವಚನಗಳು ತಮ್ಮ ಕೊನೆಯ ವ್ಯಂಜನದೊಡನೆ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರ ಸೇರಿಸಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.
ಸಂಸ್ಕೃತದಲ್ಲಿ  ಪ್ರಥಮಾ  ಏಕವಚನದ ರೂಪವಿಕಾರಗೊಂಡ ರೂಪ
ಪ್ರತಿಪತ್ಪ್ರತಿಪತ್ತು
ಕ್ಷುತ್ಕ್ಷುತ್ತು
ಸಂಪತ್ಸಂಪತ್ತು
ವಿಯತ್ವಿಯತ್ತು
ವಿಪತ್ವಿಪತ್ತು
ದಿಕ್ದಿಕ್ಕು
ತ್ವಕ್ಕುತ್ವಕ್
ವಾಕ್ವಾಕ್ಕು
ಸಮಿತ್ಸಮಿತ್ತು
(vi) ಸಂಸ್ಕೃತದ ಪ್ರಥಮಾವಿಭಕ್ತಿಯ ಬಹುವಚನಾಂತವಾಗಿರುವ ಕೆಲವು ಪುಲ್ಲಿಂಗ ವ್ಯಂಜನಾಂತ ಶಬ್ದಗಳು ತಮ್ಮ ಕೊನೆಯ ವಿಸರ್ಗವನ್ನು ಲೋಪಮಾಡಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.
ಪ್ರಥಮಾ ವಿಭಕ್ತಿ ಬಹುವಚನ ರೂಪವಿಕಾರ ರೂಪ
ವಿದ್ವಾಂಸಃ     -ವಿದ್ವಾಂಸ
ಹನುಮಂತಃ   -ಹನುಮಂತ
ಶ್ವಾನಃ        -ಶ್ವಾನ
ಭಗವಂತಃ    -ಭಗವಂತ
ಶ್ರೀಮಂತಃ    -ಶ್ರೀಮಂತ

(vii) ಸಂಸ್ಕೃತದ ಕೆಲವು ವ್ಯಂಜನಾಂತ ಶಬ್ದಗಳು ಆ ವ್ಯಂಜನದ ಮುಂದೆ, ಒಂದು ಅ ಕಾರದೊಡನೆ ಅಂದರೆ ಅಕಾರಾಂತಗಳಾಗಿ ಕನ್ನಡದ ಪ್ರಕೃತಿಗಳಾಗುತ್ತವೆ.

ವ್ಯಂಜನಾಂತ ಸಂಸ್ಕೃತ ಶಬ್ದವಿಕಾರಗೊಂಡ ರೂಪ
ದಿವ್ದಿವ
ಚತುರ್ಚತುರ
ಬುಧ್ಬುಧ
ಕುಕುಭ್ಕುಕುಭ
ವೇದವಿದ್ವೇದವಿದ
ಸಂಪದ್ಸಂಪದ
ಮರುತ್ಮರುತ
ಗುಣಭಾಜ್ಗುಣಭಾಜ
ಈ ಮೇಲೆ ಇದುವರೆಗೆ ಹೇಳಿದ ಸಂಸ್ಕೃತದಿಂದ ಕನ್ನಡಕ್ಕೆ ಬರುವ ಶಬ್ದಗಳು ಕೊನೆಯಲ್ಲಿ ಅಲ್ಪಸ್ವಲ್ಪ ವಿಕಾರಹೊಂದಿದ ಬಗೆಗೆ ಸ್ಥೂಲವಾಗಿ ತಿಳಿದಿದ್ದೀರಿ.  ಇವನ್ನು ಅಲ್ಪಸ್ವಲ್ಪ ವಿಕಾರವನ್ನು ಕೊನೆಯಲ್ಲಿ ಹೊಂದಿದ ತದ್ಭವ ಶಬ್ದಗಳೆಂದು ಹೇಳಬೇಕು (ಇವನ್ನು ಕೆಲವರು ಸಮಸಂಸ್ಕೃತ ಎಂದೂ ಹೇಳುವರೆಂದು ಹಿಂದೆ ತಿಳಿಸಿದೆ).
ಈಗ ಶಬ್ದದ ಮೊದಲು, ಮಧ್ಯದಲ್ಲಿಯೂ ಹೆಚ್ಚಾಗಿ ವಿಕಾರ ಹೊಂದಿದ ಅನೇಕ ಶಬ್ದಗಳ ಸ್ಥೂಲ ಪರಿಚಯ ಮಾಡಿಕೊಳ್ಳೋಣ.
(viii) ಸಂಸ್ಕೃತದಲ್ಲಿ ಶ, ಷ ಗಳನ್ನು ಹೊಂದಿರುವ ಶಬ್ದಗಳು ಕನ್ನಡದಲ್ಲಿ ಸಕಾರವಾಗಿರುವ, ಮತ್ತು ಯಕಾರಕ್ಕೆ ಜಕಾರ ಬಂದಿರುವ ತದ್ಭವ ಶಬ್ದಗಳು (ಕನ್ನಡ ಪ್ರಕೃತಿಗಳು) ಆಗುತ್ತವೆ.

ಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪ
ಶಶಿಸಸಿಔಷಧಔಸದಯೋಧಜೋದ
ಶಂಕಾಸಂಕೆಶೇಷಾಸೇಸೆಯುದ್ಧಜುದ್ದ
ಶಾಂತಿಸಾಂತಿಮಷಿಮಸಿಯವಾಜವೆ
ಆಕಾಶ(i) ಆಗಸ
(ii) ಆಕಾಸ
ಪಾಷಾಣಪಾಸಾಣವಿದ್ಯಾಬಿಜ್ಜೆ
ಯಶಜಸವಂಧ್ಯಾಬಂಜೆ
ಶಿರಸಿರಯವನಿಕಾಜವನಿಕೆಧ್ಯಾನಜಾನ
ಕಲಶಕಳಸಯಮಜವಯತಿಜತಿ
ಶೂಲಸೂಲಕಾರ‍್ಯಕಜ್ಜಯಂತ್ರಜಂತ್ರ
ಶುಚಿಸುಚಿಯೌವನಜವ್ವನಯುಗಜುಗ
ಅಂಕುಶಅಂಕುಸಯಾತ್ರಾಜಾತ್ರೆಯುಗ್ಮಜುಗುಮ
ಶುಂಠಿಸುಂಟಿಯೋಗಿನ್ಜೋಗಿವಿದ್ಯಾಧರಬಿಜ್ಜೋದರ
ಪಶುಪಸುರಾಶಿರಾಸಿಉದ್ಯೋಗಉಜ್ಜುಗ
ಹರ್ಷಹರುಸಶಾಣಸಾಣೆಸಂಧ್ಯಾಸಂಜೆ
ವರ್ಷವರುಸಪರಶುಪರಸುದ್ಯೂತಜೂಜು
ಭಾಷಾಬಾಸೆದಿಶಾದೆಸೆ

ವೇಷವೇಸದಶಾದಸೆ

(ix) ವರ್ಗದ ಪ್ರಥಮಾಕ್ಷರಗಳಿಂದ ಕೂಡಿದ ಅನೇಕ ಸಂಸ್ಕೃತ ಶಬ್ದಗಳು ಅದೇ ವರ್ಗದ ಮೂರನೆಯ ವರ್ಣಗಳಾಗುತ್ತವೆ.  ಅವು ಇಂಥ ಸ್ಥಾನದಲ್ಲಿಯೇ ಇರಬೇಕೆಂಬ ನಿಯಮವಿಲ್ಲ.
ಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪ
ಡಮರುಕಡಮರುಗಸೂಚಿಸೂಜಿಜಾತಿಜಾದಿ
ಆಕಾಶಆಗಸವಚಾಬಜೆವಸತಿಬಸದಿ
ದೀಪಿಕಾದೀವಿಗೆಕಟಕಕಡಗಚತುರಚದುರ
ಮಲ್ಲಿಕಾಮಲ್ಲಿಗೆಅಟವಿಅಡವಿಭೂತಿಬೂದಿ
ಪೈತೃಕಹೈತಿಗೆತಟತಡದೂತಿದೂದಿ
(x) ಸಂಸ್ಕೃತದಲ್ಲಿ ಮಹಾಪ್ರಾಣಾಕ್ಷರಗಳಿಂದ ಕೂಡಿದ ಅನೇಕ ಅಕ್ಷರಗಳು ಅಲ್ಪಪ್ರಾಣಗಳಾಗಿ ಕನ್ನಡ ಪ್ರಕೃತಿಗಳಾಗುತ್ತವೆ.
ಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪ
ಛಂದಚಂದಘಟಕಗಡಗೆಧನದನ
ಛಾಂದಸಚಾಂದಸಘೋಷಣಾಗೋಸಣೆಧೂಪದೂಪ
ಛವಿಚವಿಗೋಷ್ಠಿಗೊಟ್ಟಿನಿಧಾನನಿದಾನ
ಕಂಠಿಕಾಕಂಟಿಕೆಘೂಕಗೂಗೆಧೂಸರದೂಸರ
ಶುಂಠಿಸುಂಟಿಅರ್ಘಅಗ್ಗಧೂಳಿದೂಳಿ
ಫಾಲಪಾಲಝಟತಿಜಡಿತಿವಿಧಿಬಿದಿ
ಫಣಿಪಣಿಢಕ್ಕೆಡಕ್ಕೆಕುಸುಂಭಕುಸುಬೆ
ಘಂಟಾಗಂಟೆರೂಢಿರೂಡಿ

(xi) ಸಂಸ್ಕೃತದ ಕೆಲವು ಖಕಾರವುಳ್ಳ ಶಬ್ದಗಳು ಗಕಾರಗಳಾಗಿ ಛಕಾರದ ಒತ್ತಿನಿಂದ ಕೂಡಿದ ಅಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿ ಠಕಾರವು ಡಕಾರವಾಗಿ, ಛಕಾರವು ಸಕಾರವಾಗಿಯೂ, ಥಕಾರವು ದಕಾರವಾಗಿಯೂ ಮತ್ತು ಟಕಾರವಾಗಿಯೂ, ಹಕಾರವಾಗಿಯೂ ರೂಪಾಂತರ ಹೊಂದಿ ಕನ್ನಡ ಪ್ರಕೃತಿಗಳಾಗುತ್ತವೆ.
ಉದಾಹರಣೆಗಳು:

ಖಕಾರ ಗಕಾರವಾಗುವುದಕ್ಕೆಛಕಾರವು ಸಕಾರವಾಗಿರುವುದಕ್ಕೆಠಕಾರ ಡಕಾರವಾದುದಕ್ಕೆ
ಮುಖಮೊಗಛುರಿಕಾಸುರಿಗೆಕುಠಾರಕೊಡಲಿ
ವೈಶಾಖಬೇಸಗೆಛತ್ರಿಕಾಸತ್ತಿಗೆಮಠಮಡ

ಥಕಾರವು ದಕಾರವಾದುದಕ್ಕೆಥಕಾರವು  ಟಕಾರವಾದುದಕ್ಕೆಥಕಾರವು ಹಕಾರವಾದುದಕ್ಕೆ
ವೀಥಿಬೀದಿಗ್ರಂಥಿಗಂಟುಗಾಥೆಗಾಹೆ









ಛಕಾರದ ಒತ್ತಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿದುದಕ್ಕೆ
ಇಚ್ಛಾಇಚ್ಚೆ






(xii) ಇನ್ನೂ ಅನೇಕ ವಿಕಾರ ರೂಪಗಳನ್ನು ಈ ಕೆಳಗೆ ಗಮನಿಸಿರಿ:-

ಸಂಸ್ಕೃತ  ರೂಪ
ವಿಕಾರ ರೂಪಸಂಸ್ಕೃತ  ರೂಪ
ವಿಕಾರ ರೂಪ
ಕಪಿಲೆ-ಕವಿಲೆಕುರುಂಟ-ಗೋರಟೆ
ತ್ರಿಪದಿ-ತಿವದಿಮಾನುಷ್ಯ-ಮಾನಸ
ಪಿಶುನ-ಹಿಸುಣಮರೀಚ-ಮೆಣಸು
ಪಿಪ್ಪಲಿ-ಹಿಪ್ಪಲಿಅನ್ಯಾಯ-ಅನ್ನೆಯ
ಪಾದುಕಾ-ಹಾವುಗೆಸಾಹಸ-ಸಾಸ
ಪರವಶ-ಹರವಸಗಹನ-ಗಾನ
ಕಬಳ-ಕವಳಕುಕ್ಕುಟ-ಕೋಳಿ
ಸಿಬಿಕಾ-ಸಿವಿಗೆನಿಷ್ಠಾ-ನಿಟ್ಟೆ
ವಶಾ-ಬಸೆಅಮೃತ-ಅಮರ್ದು
ವಂಚನಾ-ಬಂಚನೆಅಂಗುಷ್ಠ-ಉಂಗುಟ
ವಸಂತ-ಬಸಂತಪಿಷ್ಟ-ಹಿಟ್ಟು
ವೀಣಾ-ಬೀಣೆಇಷ್ಟಕಾ-ಇಟ್ಟಿಗೆ
ವೀರ-ಬೀರಕೂಷ್ಮಾಂಡ-ಕುಂಬಳ
ವಾಲ-ಬಾಲದಾಡಿಮ-ದಾಳಿಂಬೆ
ಶ್ರವಣ-ಸವಣತೃತೀಯಾ-ತದಿಗೆ
ಪ್ರಸರ-ಪಸರಚತುರ್ಥೀ-ಚೌತಿ
ಪತಿವ್ರತೆ-ಹದಿಬದೆವರ್ಧಮಾನ-ಬದ್ದವಣ (ಔಡಲ)
ವೇತ್ರ-ಬೆತ್ತ
ಸೂತ್ರಿಕಾ-ಸುತ್ತಿಗೆವಿನಾಯಕ-ಬೆನಕ
ವೃಷಭ-ಬಸವಸುರಪರ್ಣೀ-ಸುರಹೊನ್ನೆ
ವ್ಯಾಘ್ರ-ಬಗ್ಗಮರುವಕ-ಮರುಗ
ರಕ್ಷಾ-ರಕ್ಕೆಸರ್ವ-ಸಬ್ಬ
ಪಕ್ಷ-ಪಕ್ಕಶ್ರೀಖಂಡ-ಸಿರಿಕಂಡ
ಲಕ್ಷ-ಲಕ್ಕವೀರಶ್ರೀ-ಬೀರಸಿರಿ
ಅಕ್ಷರ-ಅಕ್ಕರಅಂದೋಲಿಕಾ-ಅಂದಣ
ಭಿಕ್ಷಾ-ಬಿಕ್ಕೆಬಾಹುವಲಯ-ಬಾಹುಬಳೆ
ಕ್ಷಪಣ-ಸವಣತ್ರಿಗುಣ-ತಿಗುಣ
ಕ್ಷಾರ-ಕಾರತ್ರಿವಳಿ-ತಿವಳಿ
ಯಮಳ-ಜವಳವಲ್ಲಿ-ಬಳ್ಳಿ
ಚರ್ಮ-ಸಮ್ಮವಸತಿ-ಬಸದಿ
ಚರ್ಮಕಾರ-ಸಮ್ಮಕಾರಶೀರ್ಷಕ-ಸೀಸಕ
ಶಿಲ್ಪಿಗ-ಚಿಪ್ಪಿಗವರ್ತಿ-ಬತ್ತಿ
ಶಷ್ಕುಲಿ-ಚಕ್ಕುಲಿಕರ್ತರಿ-ಕತ್ತರಿ
ಹಂಸ-ಅಂಚೆಶರ್ಕರಾ-ಸಕ್ಕರೆ
ತುಳಸಿ-ತೊಳಚಿಕರ್ಕಶ-ಕಕ್ಕಸ
ಕಾಂಸ್ಯ-ಕಂಚುರಾಕ್ಷಸ-ರಕ್ಕಸ
ನಿತ್ಯ-ನಿಚ್ಚಅರ್ಕ-ಎಕ್ಕ
ವಿಸ್ತಾರ-ಬಿತ್ತರದ್ರೋಣಿ-ದೋಣಿ
ವ್ಯವಸಾಯ-ಬೇಸಾಯಭ್ರಮರ-ಬವರ
ಶಯ್ಯಾ-ಸಜ್ಜೆಪ್ರಭಾ-ಹಬೆ
ಜಟಾ-ಜಡೆಪ್ರಣಿತೆ-ಹಣತೆ
ತೈಲಿಕ-ತೆಲ್ಲಿಗಪುಸ್ತಕ-ಹೊತ್ತಗೆ
ಇಳಾ-ಎಳೆಕುಸ್ತುಂಬರ-ಕೊತ್ತುಂಬರಿ
ಸ್ಪರ್ಶ-ಪರುಸಬ್ರಹ್ಮ-ಬೊಮ್ಮ
ಸ್ಪಟಿಕ-ಪಳಿಗೆರತ್ನ-ರನ್ನ
ಶ್ಮಶಾನ-ಮಸಣಪ್ರಜ್ವಲ-ಪಜ್ಜಳ
ತಾಂಬೂಲ-ತಂಬುಲಬಿಲ್ವಪತ್ರ-ಬೆಲ್ಲವತ್ತ
ಆರಾಮ-ಅರವೆಕನ್ಯಕಾ-ಕನ್ನಿಕೆ
ಬಂಧೂಕ-ಬಂದುಗೆಮೃತ್ಯು-ಮಿಳ್ತು
ಗೋಧೂಮ-ಗೋದುವೆಕಾವ್ಯ-ಕಬ್ಬ
ಬರ್ಭೂರ-ಬೊಬ್ಬುಳಿದಂಷ್ಟ್ರ-ದಾಡೆ
ಪ್ರಯಾಣ-ಪಯಣಕಹಳಾ-ಕಾಳೆ
ದ್ವಿತೀಯಾ-ಬಿದಿಗೆಋಷಿ-ರಿಸಿ
ಅಶೋಕ-ಅಸುಗೆಮೃಗ-ಮಿಗ
ಉದ್ಯೋಗ-ಉಜ್ಜುಗಭೃಂಗಾರ-ಬಿಂಗಾರ
ಸಂಜ್ಞಾ-ಸನ್ನೆಪ್ರಗ್ರಹ-ಹಗ್ಗ
ಯಜ್ಞಾ-ಜನ್ನಆಶ್ಚರ‍್ಯ-ಅಚ್ಚರಿ
ಕ್ರೌಂಚ-ಕೊಂಚೆಸ್ವರ್ಗ-ಸಗ್ಗ
ಸುಧಾ-ಸೊದೆಜ್ಯೋತಿಷ-ಜೋಯಿಸ
ಭುಜಂಗ-ಬೊಜಂಗಅಮಾವಾಸ್ಯಾ-ಅಮಾಸೆ
ಕೌಪೀನ-ಕೋವಣಧ್ವನಿ-ದನಿ
ಮಯೂರ-ಮೋರಜ್ವರ-ಜರ
ಗೂರ್ಜರ-ಗುಜ್ಜರಸರಸ್ವತಿ-ಸರಸತಿ
ಆರ‍್ಯ-ಅಜ್ಜವರ್ಧಕಿ-ಬಡಗಿ
ವ್ಯವಹಾರ-ಬೇಹಾರಕಾಷ್ಠ-ಕಡ್ಡಿ
ನಿಯಮ-ನೇಮಚತುರ್ದಂತ-ಚೌದಂತ
ಪತ್ತನ-ಪಟ್ಟಣದೃಷ್ಟಿ-ದಿಟ್ಟ
ಅತಸೀ-ಅಗಸೆದಿಶಾಬಲಿ-ದೆಸೆಬಲಿ
ತ್ವರಿತ-ತುರಿಹಏಕಶರ-ಎಕ್ಕಸರ
ಆಜ್ಞೆ-ಆಣೆಚತುಷ್ಕ-ಚೌಕ
ಶಾಣ-ಸಾಣೆಚತುರ್ವೇದಿ-ಚೌವೇದಿ
ಜೀರಿಕಾ-ಜೀರಿಗೆಸಹದೇವ-ಸಾದೇವ
ವಿಜ್ಞಾನ-ಬಿನ್ನಣಸಹವಾಸಿ-ಸಾವಾಸಿ
ಕಲಮಾ-ಕಳವೆಮಹಾಪಾತಕ-ಮಾಪಾತಕ
ಕಂಬಲ-ಕಂಬಳಿಪಂಜರಪಕ್ಷಿ-ಹಂಜರವಕ್ಕಿ
ಅರ್ಗಲ-ಅಗುಳಿದಿಶಾಬಲಿ-ದೆಸೆವಲಿ
ಕುದ್ದಾಲ-ಗುದ್ದಲಿರತ್ನಮಣಿ-ರನ್ನವಣಿ
ದ್ಯೂತ-ಜೂಜುಅಂತಃಪುರ-ಅಂತಪುರ
ಗ್ರಂಥಿ-ಗಂಟುಅಚ್ಚಮಲ್ಲಿಕಾ-ಅಚ್ಚಮಲ್ಲಿಗೆ
ಕುಕ್ಷಿ-ಕುಕ್ಕೆಅಕ್ಷರಮಾಲಾ-ಅಕ್ಕರಮಾಲೆ
ಚರ್ಮಪಟ್ಟಿಕಾ-ಚಮ್ಮಟಿಗೆಕ್ಷೀರಾಗಾರಾ-ಕೀಲಾರ
ದೇವಕುಲ-ದೇಗುಲಗೂಢಾಗಾರ-ಗೂಡಾರ
ದೀಪಾವಳಿಕಾ-ದೀವಳಿಗೆ ಉತ್ಸಾಹ- ಉಚ್ಚಾಹ
ಹೀಗೆ ಅನೇಕ ಸಂಸ್ಕೃತ-ಪ್ರಾಕೃತ ಭಾಷಾಶಬ್ದಗಳು ಕನ್ನಡಕ್ಕೆ ಬರುವಾಗ ರೂಪಾಂತರ ಹೊಂದಿ ಬರುವುದನ್ನು ಇದುವರೆಗೆ ಸ್ಥೂಲವಾಗಿ ಹೇಳಲಾಗಿದೆ.
ಇದುವರೆಗೆ ಸಂಸ್ಕೃತದ ಅನೇಕ ಶಬ್ದಗಳು ರೂಪಾಂತರ ಹೊಂದಿ ಕನ್ನಡಕ್ಕೆ ಬಂದ ಬಗೆಗೆ ತಿಳಿದಿರುವಿರಿ.  ಕನ್ನಡದ ಅನೇಕ ಶಬ್ದಗಳು ಕಾಲಕಾಲಕ್ಕೆ ರೂಪಾಂತರ ಹೊಂದಿವೆ.
ಹಳೆಗನ್ನಡದ ಅನೇಕ ಶಬ್ದಗಳು ಈಗಿನ ಕನ್ನಡದಲ್ಲಿ (ಹೊಸಗನ್ನಡದಲ್ಲಿ) ರೂಪಾಂತರ ಹೊಂದಿ ಪ್ರಯೋಗವಾಗುತ್ತಿವೆ.  ಅವುಗಳ ಬಗೆಗೆ ಈಗ ಸ್ಥೂಲವಾಗಿ ಮುಖ್ಯವಾದ ಕೆಲವು ಅಂಶಗಳನ್ನು ನೀವು ಅವಶ್ಯ ತಿಳಿಯಬೇಕು.
(ಪಕಾರಾದಿಯಾದ ಅನೇಕ ಶಬ್ದಗಳು ಹಕಾರಾದಿಯಾಗುತ್ತವೆ.

ಹಳಗನ್ನಡ-ಹೊಸಗನ್ನಡಹಳಗನ್ನಡ-ಹೊಸಗನ್ನಡ
ಪಾಲ್-ಹಾಲುಪಂಬಲಿಸು-ಹಂಬಲಿಸು
ಪಾವ್-ಹಾವುಪಣೆ-ಹಣೆ
ಪಾಸು-ಹಾಸುಪರಡು-ಹರಡು
ಪರಿ-ಹರಿಪರದ-ಹರದ
ಪರ್ಬು-ಹಬ್ಬುಪಲವು-ಹಲವು
ಪೊರಳ್