ಶಿಶುಗೀತೆಗಳು ( Rhymes )


ನಾಯಿಮರಿ ನಾಯಿಮರಿ ತಿಂಡಿ ಬೇಕೆ

ಸಾಹಿತ್ಯ: ಜಿ.ಪಿ. ರಾಜರತ್ನಂ
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ
ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು

ಬಣ್ಣದ ತಗಡಿನ ತುತ್ತೂರಿ

ಸಾಹಿತ್ಯ: ಜಿ.ಪಿ.ರಾಜರತ್ನಂ
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು
ತನಗೆ ತುತ್ತೂರಿ ಇದೆಯೆಂದು ಬೆರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತುರಿ ನಡದನು ಬೀದೆಯಲಿ
ಜಂಬದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು

ಚಡ್ಡಿ ಗಿಡ್ಡಿ


ಚಡ್ಡಿ ಗಿಡ್ಡಿ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಲಗಾಮು ಹಿಡಿದುಕೊಂಡು
ಹೈ ಹೈ ಹೈ
ಲಂಗ ಗಿಂಗ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಅಣ್ಣನ ಸೊಂಟ ಹಿಡಿದುಕೊಂಡು
ಹೈ ಹೈ ಹೈ
ಕಂದು ಬಣ್ಣ ನಮ್ಮ ಕುದುರೆ
ಗಾಳಿ ಹಾಗೆ ಓಡೊ ಕುದುರೆ
ನಮ್ಮ ಕುದುರೆ ನಮ್ಮ ಕುದುರೆ
ಹೈ ಹೈ ಹೈ
ಕುದುರೆ ಮೇಲೆ ಕುಳಿತುಕೊಂಡು
ಅದ್ರ ಬೆನ್ನ ತಟ್ಟಿಕೊಂಡು
ಅಲ್ಲಿ ಇಲ್ಲಿ ಸುತ್ತಿಕೊಂಡು
ಹೈ ಹೈ ಹೈ
ಕುದುರೆ ಮೇಲೆ ಕುಳಿತುಕೊಂಡು
ಹಳ್ಳಾ ಗಿಳ್ಳಾ ಹಾರಿಕೊಂಡು
ಮಲ್ಲಿಗೆ ದಂಡು ಸೇರಿಕೊಂಡು
ಹೈ ಹೈ ಹೈ
ಕುದುರೆ ಮೈಯ್ಯ ಸವರಿ ತಟ್ಟಿ
ಹುರ್ಳಿ ಹಿರ್ಳಿ ತಂದುಕೊಟ್ಟು ಹೇ ಹೇ
ಸಾಕುವೆವು ನಮ್ಮ ತಟ್ಟು
ನಾನೇ ಮಂಗ
ನಾನೇ ಮಂಗ ಆಗಿದ್ರೆ
ಮರದಿಂದ್ ಮರಕ್ಕೆ ಹಾರಿ
ತಿನ್ಬಿಡ್ತಿದ್ದೆ ಚೇಪೆ ಕಾಯಿ
ದಿನ ಒಂದೊಂದ್ ಲಾರಿ
ಕಪ್ಪು ಕಾಗೆ ಆಗಿದ್ರೆ
ರೆಕ್ಕೆ ಚಾಚಿ ಹೊರಗೆ
ಹಾಯಾಗ್ ತೇಲಿ ಹೋಗ್ತಿದ್ದೆ
ಬಿಳಿ ಮೋಡದ್ ಒಳಗೆ
ನೀಲಿ ಗಿಳಿ ಆಗಿದ್ರೆ
ಹಗಲು ರಾತ್ರಿ ಬಿಡದೆ
ಚಕ್ಲಿ ಉಂಡೆ ಕೂಡಾಕ್ತಿದ್ದೆ
ಭಾರಿ ಕವರಿನ ಒಳಗೆ
ಆನೆ ಎತ್ತ್ರ ನಂಗಿದ್ರೆ
ಅಟ್ಟದ್ ಮೇಲಿನ್ ಡಬ್ಬ
ಒಂದೊಂದೇನೆ ಪೂರ ಖಾಲಿ
ತಾಜಾ ಬಾಯಿಗ್ ಹಬ್ಬಾ
ಹುಡುಗ ಆಗಿ ಎಲ್ಲಾ ಹಾಳು
ಪುಟ್ಟ್ ಪುಟ್ಟ್ ಕೈಯಿ ಕಾಲು
ಅಪ್ಪನ ಹಾಗೆ ದೊಡ್ಡವನಾಗಿ
ಒಟ್ಟ್ಗೆ ತಿಂತೀನ್ ತಾಳು

  👤👤👤👤👤👤👤👤👤👤👤👤👤👤


 ಸ್ಪಷ್ಟವಾಗಿ ಕಾಣಲು ದಯವಿಟ್ಟು ಇವುಗಳ ಮೇಲೆ ಕ್ಲಿಕ್ ಮಾಡಿ

































































































Chinnu Kannada Rhymes for Children Vol. 3

 

Top 25 Kannada Rhymes for Children

Moral Stories in kannada

Panchatantra Stories for Kids in Kannada | Infobells

 

ದಿ ಜಂಗಲ್ ಬುಕ್ - The Jungle Book Story In Kannada -

 

Hit Kannada Rhymes | 18 Mins