ಅಂಬಿಗರ ಚೌಡಯ್ಯ

image
ಅಂಬಿಗರ ಚೌಡಯ್ಯ🚣:
ಅಂಬಿಗರ ಚೌಡಯ್ಯನ ಕಾಲ ಕ್ರಿ. ಶ. ಸುಮಾರು 1160. ಈತನ ಜನ್ಮ ಸ್ಥಳ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಾದಾನಪುರ. ಇವರು ಸುಮಾರು 330 ವಚನಗಳನ್ನು ರಚಿಸಿದ್ದಾರೆ. ಇವರು ತಮ್ಮ ವಚನಗಳಲ್ಲಿ ಯಾವ ಇಷ್ಟದೈವಕ್ಕೆ ಋಣಿಯಾಗದೆ ತನ್ನ ಹೆಸರನ್ನೇ ವಚನಗಳ ಅಂಕಿತವಾಗಿಯೂ ಬಳಸಿಕೊಂಡು ದಿಟ್ಟತನದ ಎದೆಗಾರಿಕೆಯನ್ನು ತೋರಿಸಿದ್ದಾರೆ. ಅಂಬಿಗರ ಚೌಡಯ್ಯ ಸಾಮಾನ್ಯ ಅಂಬಿಗನಲ್ಲ, ತಡೆಯಿಲ್ಲದ ಮಹಾನದಿಯ ಕಡೆ ಗಾಣವೆ ಹಾಯಿಸಿ ನುಡಿವಿಲ್ಲದ ನಿನೇನು ಗ್ರಾಮದಲ್ಲಿರಿಸುವನಂತೆ ಅಬ್ಬಾ ಅದೆಂಥ ಅಂಬಿಗನನ ಬಡಲಿಲ್ಲದ ಅಂಬಿಗ ಕಡೆ ಗಾಣಿಸುವ ಅಂಬಿಗ ಕಾಸಿನ ಆಸೆಯಿಲ್ಲದ ಅಂಬಿಗ ಆತ್ಮ ವಿಶ್ವಾಸದ ಅಂಬಿಗ ಆಧ್ಯಾತ್ಮ ಸಂಪದದ ಅಂಬಿಗ ಅನುಭವಿ ಅಂಬಿಗ.
ಅಂಬಿಗ ಎಂದರೆ ನೀರಿನಲ್ಲಿ ವ್ಯವಹರಿಸುವವನು, ತಾನೆ ದೋಣಿ ಮುಂತಾದವನನ್ನು ನಡೆಸುವವನು ಎಂದರ್ಥ. ಸಂಸಾರ ಸಾಗರವನ್ನು ದಾಟಿ ಮೋಕ್ಷ ಸಾಗರದಲ್ಲಿ ತನ್ನ ದೋಣಿಯನ್ನು ನಡೆಸಿದ ಚಂದಗೆಟ್ಟವರೆಲ್ಲ ಬಂದೇರಿ ದೋಣಿಯನ್ನು ಶಿವನೊಂದೆ ಠಾವಿಗೊಯ್ದಿಳುಹುವೆ ಎಂದು ಎದೆ ತಟ್ಟಿ ಹೇಳಿಕೊಂಡು ತಾನು ತನ್ನ ದೋಣಿ ಮತ್ತು ದೋಣಿಯಲ್ಲಿದ್ದ ಭಕ್ತರನ್ನೆಲ್ಲಾ ಶಿವ ಪಥದತ್ತ ಹಾಯಿಸಿದ ಮಹಾ ನಿಸ್ಸೀಮವಾದ ಕಾಯಕವನ್ನು ಕೈಕೊಂಡವನು ಅಂಬಿಗನ ಚೌಡಯ್ಯ
ಅಂಬಿಗರ ಚೌಡಯ್ಯನ ವಚನಗಳು ವಿಹಿತರಿಗೆ ಕಾದ
image
ನೇಸದಂತಿದ್ದರೆ ಹಿತರಿಗೆ ಬೆಸುಗೆಯ ನೇಸದಂತಿದೆ. ಸಮಾಜವನ್ನು ಪ್ರತ್ಯಕ್ಷ ದರ್ಶಿಯಾಗಿ ಕಂಡದನ್ನು ಕಂಡ ಹಾಗೆ ಕೇಳಿ ಕೆಂಡದಂತಹ ಕೋಪ ಬರಿಸುವ ಚೌಡಯ್ಯ ಕೆಂಡಗಣ್ಣ ಮೂರ್ತಿಯಾಗಿದ್ದಾನೆ.
ಮುಚ್ಚು ಮರೆಯಿಲ್ಲದೆ. ತೆರೆದ ಮನಸ್ಸಿನ ಇತಿಮಾತಿನ ತಿರುಳು ಅವನ ವಚನಗಳಲ್ಲಿ ಉಂಟು ಡಂಬಾಚಾರ ಮೂಢ ನಂಬಿಕೆ ವಿಡಂಬನೆ ಆಡಂಬರಗಳಿಗೆ ಅನುಕೂಲಕ್ಕಾಗಿ ಸಾತ್ವಿಕದ ಕೆಚ್ಚನ್ನು ಕೆರಳಿಸಿ ಕೊಂಡಿದ್ದಾನೆ. ನಿಜದ ನಗಾರಿ ನಿರ್ಭಯತೆಯನ್ನು ಬೀರಿದವನು ಅಂಬಿಗರ ಚೌಡಯ್ಯ ಎಂದು ಶರಣರು ಹೋಗಳಿದ್ದಾರೆ.
ಅಂಬಿಗರ ಚೌಡಯ್ಯ ವಚನದಲ್ಲಿ ಶಿವನ ಚಿಂತೆಯಿಂದಿರುವವರೊಬ್ಬರನು ಕಾಣೆ ಎಂಬ ವಚನ ಚಿರ ಸತ್ಯವನ್ನು ಪ್ರತಿ ಬಿಂಬಿಸುತ್ತದೆ.
ಬಡತನಕ್ಕೆ ಉಂಬುವ ಚೀಂತೆ ಉಣಲಾದರೆ ಉಡುವ ಚಿಂತೆ
ಉಡಲಾದರೆ ಇಡುವ ಚಿಂತೆ ಇಡಲಾದರೆ ಹೆಂಡಿರ ಚಿಂತೆ
ಹೆಂಡಿರಾದರೆ ಮಕ್ಕಳ ಚಿಂತೆ ಮಕ್ಕಳಾದರೆ ಬದುಕಿನ ಚಿಂತೆ
ಬದುಕಾದರೆ ಕೇಡಿನ ಚಿಂತೆ ಕೇಡಾದರೆ ಮರಣದ ಚಿಂತೆ
ಇಂತೀ ಹಲವು ಚಂತೆಯಲ್ಲಿ ಇಸ್ರವರನ್ನು ಕಂಡೆನು
ಶಿವನ ಚಂತೆಯಲ್ಲಿದ್ದವರೊಬ್ಬರನೂ ಕಾಣೆ ವೇದಾಂತ ನಮ್ಮ ಅಂಬಿಗರ ಚೌಡಯ್ಯ ನಿಜ ಶರಣನು
ಈ ವಚನದಿಂದ ಯಾವ ಮನೆಯೂ ಚಿಂತೆಯಿಂದ ಬಿಡುಗಡೆ ಆಗಿಲ್ಲವೆಂಬ ಮಾತು ಮನದಟ್ಟಾಗುತ್ತದೆ. ನಮ್ಮ ಮನೆಯಲ್ಲಿ ಅಂತಹುದೇನು ನಡೆದಿಲ್ಲ ಎಂದು ಬೋರ್ಡು ಹಾಕುವ ಸ್ಥಿತಿಯಲ್ಲಿ ಯಾವ ಮನೆಯೂ ಇಲ್ಲ.
ಅಂಬಿಗರ ಚೌಡಯ್ಯನ ವಚನಗಳು ಚಾಟಿಯೇಟನ್ನು ಕೊಟ್ಟು ಹೊಡೆದೆಬ್ಬಿಸುವ ಚುಚ್ಚು ಮಾತಿನ ಬಿಚ್ಚು ಹೃದಯದ ಅನುಭವದ ಕೆಚ್ಚಿನ ಅಮರವಾಣಿಯ ಸಚ್ಚಿಯಂತಿದೆ ನುಡಿದಂತೆ ನಡೆದು ನಡೆದಂತೆ ನುಡಿದ ಧೀರ ಶರಣ. ಸಮಾಜ ವಿಮರ್ಶೆ, ವ್ಯಕ್ತಿ ಟೀಕೆ, ಮೂಡ ನಂಬಿಕೆಯನ್ನೇ ತೆಗಳದೆ ಅವುಗಳನ್ನು ಬೆರಳು ಮಾಡಿ ತೋರಿಸಿ ತಾನು ಪರಿಶುದ್ಧನಾಗಿ ಸಿದ್ಧ ಶುದ್ಧ ಬಾಳನ್ನು ಬಾಳಿ ಬೆಳಗಿಸಿ ಕೊಂಡವನು.
ಇವರ ವಚನಗಳು ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ, ಸಮಾಜಕ್ಕಂಟಿರುವ ಭವ ರೋಗವನ್ನು ನಿರ್ಮೂಲನೆ ಮಾಡುವ ಕಹಿ ಲೇಪನದ ವಧುರ ವಚನ ಮಾತ್ರೆಗಳನ್ನಿತ್ತ ಜೀವನವನ್ನೇ ಸೂಕ್ಷ್ಮ ದರ್ಶನ ಯಂತ್ರದಿಂದ ಗ್ರಹಿಸಿ ಒಪ್ಪಿದ ದಾರಿ ತೋರಿಸಿದ ಮಹಾತ್ಮ ಮಹಾಶರಣ ಮಹಾನುಭಾವಿ ಮಹಾಭಕ್ತ ಅಂಬಿಗರ ಚೌಡಯ್ಯ ಎನ್ನಬಹುದು. ಬೇವು ತಿಂದವನು ಬಹಳ ಕಾಲ ಬದುಕುತ್ತಾನೆ. ಕಹಿ ಉಂಡವನು ಜೀವನದಲ್ಲಿ ಅಜರಾಮರನಾಗುತ್ತಾನೆ.
ಅಂಬಿಗರ ಚೌಡಯ್ಯ ಯಾವ ಮಾತನ್ನಾಡಿದರೂ ಅದು ಸಿಂಹ ಗರ್ಜನೆ ಇವರ ವಚನಗಳನ್ನು ಓದುತ್ತಿದ್ದರೆ, ಒಂದೆಡೆ ನಗು ಮತ್ತೊಂದೆಡೆ ಜಿಗುಪ್ಸೆ ಉಂಟಾಗುವುದು ಆದರೆ ಅವನು ಹಾಗೆ ಆಗಿರುವುದಕ್ಕೆ ಕಾರಣವಿಲ್ಲ ಕಿವಿಗೊಡುತ್ತಿರಲ್ಲ ವೆಂದು ತೋರುತ್ತದೆ. ಕಿವುಡರನ್ನು ಕಿವಿಗೊಡುವಂತೆ ಮಾಡಬೇಕಾಗಿದ್ದರೆ ಅಂಬಿಗರ ಚೌಡಯ್ಯನ ಬಲ್ಲರಿಯಂತಹ ನುಡಿಗಳೇ ಬೇಕಾಗಿದ್ದುವೆಂದು ತೋರುತ್ತದೆ.
ಅಂಬಿಗರ ಚೌಡಯ್ಯ ನಿಜವಾಗಿಯೂ ವಚನಕಾರರಲ್ಲಿ ಒಬ್ಬ ಕ್ರಾಂತಿ ಪುರುಷ ನಿಷ್ಠುರ ಮನುಜ ವಸವಾದಿ ಪ್ರಪಥರಪಾಳಿಯಲ್ಲಿ ಅಂಬಿಗರ ಚೌಡಯ್ಯನ ಹೆಸರು ಶಾಶ್ವತವಾಗಿ ನಿಂತಿದೆ ಸಂಸಾರ ಸಾಗರವನ್ನು ದಾಟಿ ಮೋಕ್ಷ ಸಾಗರದಲ್ಲಿ ತನ್ನ ದೋಣಿಯನ್ನು ನಡೆಸಿದ ಚಂಡಿಗೆಟ್ಟವರೆಲ್ಲ ಬಂದೇರಿ ದೋಣಿಯನ್ನು ಶಿವನೊಂದೆ ಠಾವಿಗೋಯ್ದಿಳುಹುನೇ ಎಂದು ಎದೆತಟ್ಟಿ ಹೇಳಿಕೊಂಡು ತಾನು ತನ್ನ ದೋಣಿ ಮತ್ತು ದೋಣಿಯಲ್ಲಿದ್ದ ಭಕ್ತ ರನ್ನೆಲ್ಲಾ ಶಿವಪಥ ದತ್ತ ಹಾಯಿಸಿದ ಕಾಯಕದಲ್ಲಿ ದುಡಿದು ಉಣ್ಣಬೇಕು ಎನ್ನುವ ಕಾಯಕನನ್ನು ಕೈ ಕೊಂಡವನ್ನು ಅಂಬಿಗರ ಚೌಡಯ್ಯಾ.
ತಾನು ಪರಿಶುದ್ಧವಾಗಿ ಸಿದ್ಧ ಶುದ್ಧ ಬಾಳನ್ನು ಬಾಳಿ ಬೆಳಗಿಸಿಕೊಂಡವನು ಚೌಡಯ್ಯ. ಶಿವಶರಣರು ಶರಣರೆಲ್ಲರೂ ಕಾಯಕದ ಕಲಿಗಳು ಇಂದಿಗೂ ಕನ್ನಡಿಗರ ನಾಲಗೆಯ ಮೇಲೆ ನಲಿದಾಡುವ ಅಂಬಿಗರ ಚೌಡಯ್ಯನ ವಚನಗಳು ಜನತೆಯ ಪಂಚ ಪ್ರಾಣದಂತಿವೆ.ನೇರ ನಡೆ ನುಡಿಯ ಇರುವದನ್ನು ಇರುವಂತೆ ನುಡಿದ ಜನರ ಮನದಾಳದಲ್ಲಿ ಸ್ಥಿರವಾಗಿ ಉಳಿದ ಅಂಬಿಗರ ಚೌಡಯ್ಯನವರಿಗೆ ಅವರ ಜಯಂತಿಯ ಶುಭಸಮಯದಲ್ಲಿ ನಮ್ಮದೊಂದು ನಮನ ಸಲ್ಲಿಸೋಣ.