ದೇಶಭಕ್ತಿ ಗೀತೆಗಳು
ಒಂದೇ ಕರ್ನಾಟಕ ಒಂದೇ...
ಒಂದೇ ಕರ್ನಾಟಕ ಒಂದೇ...
- ದ. ರಾ. ಬೇಂದ್ರೆ
ಒಂದೇ ಒಂದೇ ಒಂದೇ ಕರ್ನಾಟಕ ಒಂದೇ ||
ಹಿಂದೆ ಮುಂದೆ ಎಂದೇ ಕರ್ನಾಟಕ ಒಂದೇ
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ
ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ
ಒಂದೇ ಜಗವು ಮನವು ಕನ್ನಡಿಗರು ಎಂದೆ
ಕುಲವೊಂದೇ ಚಲವೊಂದೇ ನೀತಿಯ ನೆಲೆಯೊಂದೇ
ಹೀಗೆನ್ನದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ
ಕನ್ನಡವೆಂದು ಒಪ್ಪದು ಕರ್ನಾಟಕನಿಂದೆ
ಕನ್ನಡ ಮಾತೆ ಮಾತೆಯೂ ಕರ್ನಾಟಕ ಒಂದೇ
ಅದು ದೈವತ ಅದು ಜೀವಿತ ಒಪ್ಪಿಹೆವದು ಎಂದೆ
ನಮ್ಮದು ನಿಮ್ಮದು ಅವರದು ಈ ಆಸ್ತಿ ಪಾಸ್ತಿ
ನಾಡಿನ ತಾಯಿಗೆ ಸೇರಿದೆ ಬೇರೆಯ ಮನೆ ನಾಸ್ತಿ
ಕನ್ನಡ ಕಾಯಕದಲ್ಲಿಲ್ಲವು ಕಮ್ಮೀ ಜಾಸ್ತಿ
ಇದನೋಪ್ಪದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ
ಕರ್ನಾಟಕ ಹಿತವಿಹಿತವು ಕನ್ನಡ ಕುಲದಿಂದೆ
ಕನ್ನಡವು ಭಾರತವು ಜಗವೆಲ್ಲವು ಒಂದೇ
ತುಂಬಿದೆ ಕನ್ನಡ ಕುಲವನ್ನೋಪ್ಪುವ ಕುಲದಿಂದೇ
ಕನ್ನಡ ಧೀಕ್ಷೆಯ ಹೊಂದಿದ ಪ್ರತಿಯೊಬ್ಬನು ಆರ್ಯ
ಕನ್ನಡ ತೇಜವು ಸಾರಲಿ ಕನ್ನಡಿಗರ ಕಾರ್ಯಾ
ಕನ್ನಡ ನಡೆ ಇರದವರೇ ಶೂದ್ರರು ಅನಿವಾರ್ಯ
ಇಂತರಿಯದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ
ಉಗ್ಗಡಿಸಿರಿ ನಾಸ್ತಿಗೆ ಜಯ ಜಯ ಜಯವೆಂದು
________________________________________________________________________
ಕರುನಾಳು ಬಾ ಬೆಳಕೆ...
ಕರುನಾಳು ಬಾ ಬೆಳಕೆ...
- ಬಿ. ಎಂ. ಶ್ರೀಕಂಠಯ್ಯ
ಕರುನಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು ||
ಇರುಳು ಕತ್ತಲೆಯಾ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು
ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು
ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ
ಮೊನ್ನೆ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು
ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯ ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತಾ
ಇಳಿದು ಬಾ ತಾಯಿ...
ಇಳಿದು ಬಾ ತಾಯಿ...
- ದ.ರಾ. ಬೇಂದ್ರೆ
ಇಳಿದು ಬಾ ತಾಯಿ ಇಳಿದು ಬಾ ||
ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ ದಿಗಂತದಲಿ ಹನಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ, ಇಳಿದು ಬಾ ತಾಯಿ ಇಳಿದು ಬಾ
ನಿನಗೆ ಪೂಡಮಾಡುವೆ ನಿನ್ನ ನುಡುತಡುವೆ ಏಕೆ ತಡೆತಡೆವಿ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ, ಇಳಿದು ಬಾ ತಾಯಿ ಇಳಿದು ಬಾ
ದಯೆಯಿರದ ದೀನ ಹರೆಯಳಿದ ಹೀನ, ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ, ಉದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ, ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ
ಸಿರಿವಾರಿಜಾತ ವರಪಾರಿಜಾತ ತಾರ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ
ಬಂದಾರೆ ಬಾರೆ ಒಂದಾರೆ ಸಾರೆ ಕಂಧಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಪಾತವನ್ನೆ
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
ದುಮು ದುಮು ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ, ಬಾಳು ಬೆಳಕಾಗಿ ಬೆಳೆದು ಬಾ
ಶಂಭು ಶಿವಹರನ ಚಿತ್ತೇ ಬಾ, ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯ ನತ್ತೆ ಬಾ, ಇಳಿದು ಬಾ ತಾಯಿ ಇಳಿದು ಬಾ
___________________________________________________________
ಹಚ್ಚೇವು ಕನ್ನಡದ ದೀಪ...
ಹಚ್ಚೇವು ಕನ್ನಡದ ದೀಪ...
- ಡಿ. ಎಸ್. ಕರ್ಕಿ
ಹಚ್ಚೇವು ಕನ್ನಡದ ದೀಪ ||
ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವಾ ದೀಪ
ಬಹುದಿನಗಳಿಂದ ಮೈ ಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲಿಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರೆವ ತೆರೆದೇವು ಮನವ ಎರೆದೇವು ಒಲವ ಹಿಡಿ ನೆನಪ
ನರ ನರವನೆಲ್ಲಾ ಹುರಿಗುಳಿಸಿ ಹೊಸೆದು
ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನ ಕಿಡಿಗಳನ್ನು ಗಡಿ ನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ ನಾಡೊಲವೆ ನೀತಿ ಹಿಡಿ ನೆನಪ
ಮನೆ ಮನೆಗಳಲ್ಲಿ ಮನ ಮನಗಳಲ್ಲಿ
ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದು ಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯ ಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ ಪಡೆದೇವು ತಿರುಳ ಹಿಡಿ ನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ
ಇದೇ ನಾಡು ಇದೇ ಭಾಷೆ...
ಇದೇ ನಾಡು ಇದೇ ಭಾಷೆ...
- ಚಿ. ಉದಯಶಂಕರ್
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ ||
ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿ ವಾಣಿಯ ನಾಡು
ಚಾಮುಂಡಿ ರಕ್ಷೆಯು ನಮಗೆ ಗೊಮಟೇಶ ಕಾವಲು ಇಲ್ಲಿ
ಶ್ರಿಂಗೇರಿ ಶಾರದೆ ವೀಣೆ ರಸ ತುಂಗೆ ಆಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಏಳೇಳು ಜನ್ಮವೆ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೆ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಸುಮ ಸುಂದರ...
ಸುಮ ಸುಂದರ...
- ಸ. ಶಿ. ಮರುಳಯ್ಯ
ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಭೋಧ ಚಂದ್ರೋದಯ ರಾಗರುನ ಜಾಲೆ ||
ಗಿರಿ ಸಿರಿ ಬಣ ಸಂಚಾರಿಣಿ ತುಂಗಾಜಲ ನೀರೆ
ಧಲ ಧಲ ಧಲ ಮೆದು ಹಾಸದಿ ಗಾನ ಸೂಕ್ತಲೋಲೆ
ಮಲೆನಾಡಿನ ಕೋಗಿಲೆಯೇ ಬಯಲು ನಾಡ ಮಲ್ಲಿಗೆಯೇ
ವಂಗ ವಿಷಯ ಬೃಂಗವೇ ಧವಳ ಗಿರಿಯ ಶೃಂಗವೇ
ಕಾವೇರಿ ಗೋದಾವರಿ ಗಂಗೆ ಯಮುನೆ ಸಿಂಧುವೇ
ಶತ ಶತ ಶತಮಾನಗಳ ಗುಪ್ತಗಾಮಿ ಚೇತನವೇ
ಋತು ಋತುವಿಗು ಹೂವಾಗಿ ಫಲವಾಗುವ ತನಿರಸವೇ
ಚಿಲಿಪಿಲಿಯಂತ ಮೋದದಿ ನಲಿದುಲಿವ ಕೂಜನವೇ
ಮಧುರ ಮಂದಾನಿಲ ಸೌಗಂಧದ ಸಿರಿ ಪರಿಮಳವೇ
ನಸು ಹಸುರಿನ ಹಿಮ ಮಣಿಯೇ ಎಳೆ ಬಿಸಿಲಿನ ಮೆಲುದನಿಯೇ
ಬಿರಿದ ಮುಗುಳ ಬಿಂಕವೇ ತೆರೆದ ಸೋಗೆ ನರ್ತನವೇ
ನಿರ್ಭರ ನಿಚ್ಚರಣಿಯ ಜಲಪಾತದ ಗಿರಿ ಗರ್ಜನೆಯೇ
ಬಾಗಿಲೊಳು ಕೈ ಮುಗಿದು...
ಬಾಗಿಲೊಳು ಕೈ ಮುಗಿದು...
-ಕುವೆಂಪು
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ||
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ
ಗಂಟೆಗಳ ದನಿಯಿಲ್ಲ ಜಾಗಟೆಗಳಿಲಿಲ್ಲ
ಕರ್ಪೂರದಾರತಿಯ ಜ್ಯೋತಿಯಿಲ್ಲ
ಭಗವಂತನಾನಂದ ರೂಪುಗೊಂಡಿವುದಿಲ್ಲಿ
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವ ಹಾಡುತಿವುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಚೆಯಲಿ ಮೈ ಮರೆತು ತೇಲುತಿದೆ ಭೂಭಾರವಿಲ್ಲಿ
_______________________________________________________
ಜಯ ಭಾರತ ಜನನಿಯ...
ಜಯ ಭಾರತ ಜನನಿಯ...
-ಕುವೆಂಪು
ಜಯ ಭಾರತ ಜನನಿಯ ತನುಜಾತೆ ಜಯ ಹೇ! ಕರ್ನಾಟಕ ಮಾತೆ ||
ಜಯ ಸುಂದರ ನದಿವನಗಳ ನಾಡೆ ಜಯ ಹೇ! ರಸ ಋಷಿಗಳ ಬೀಡೆ
ಭೂದೇವಿಯ ಮಕುಟದ ನವಮಣಿಯೆ ಗಂಧದ ಚಂದನ ಹೊನ್ನಿನ ಗಣಿಯೆ
ರಾಘವ ಮಧುಸೂದನ-ರವತರಿಸಿದ ಭಾರತ ಜನನಿಯ ತನುಜಾತೆ
ಜನನಿಯ ಜೋಗುಳ ವೇದದ ಘೋಷ ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೆ ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯ ತನುಜಾತೆ
ಜಯ ಹೇ! ಕರ್ನಾಟಕ ಮಾತೆ
ಶಂಕರ ರಾಮಾನುಜ ವಿದ್ಯಾರಣ್ಯ ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಶಡಕ್ಷರಿ ಪೊನ್ನ ಪಂಪ ಲಕುಮಿಪತಿ ಜನ್ನ
ಕುಮಾರ ವ್ಯಾಸರ ಮಂಗಳ ಧಾಮ ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ
ಜಯ ಹೇ! ಕರ್ನಾಟಕ ಮಾತೆ
ತೈಲಪ ಹೊಯ್ಸಳರಾಡಿದ ನಾಡೆ ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ
ಜಯ ಹೇ! ಕರ್ನಾಟಕ ಮಾತೆ
ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ
ಹಿಂದು ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ ಜಯ ಹೇ! ಕರ್ನಾಟಕ ಮಾತೆ
ಕನ್ನಡ ಎನೆ...
ಕನ್ನಡ ಎನೆ...
- ಕುವೆಂಪು
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು ||
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
ಕನ್ನಡ ಕನ್ನಡ ಹ! ಸವಿಗನ್ನಡ
ಕನ್ನಡದಲಿ ಹರಿ ಬರೆಯುವನು
ಕನ್ನಡದಲಿ ಹರ ತಿರಿಯುವನು
ಕನ್ನಡದಲ್ಲಿಯೇ ಬಿನ್ನಹ ಗೈದೊಡೆ
ಹರಿ ವರಗಳ ಮಳೆ ಕರೆಯುವನು
ಹರ ಮುರಿಯದೆ ತಾ ಪೊರೆಯುವನು
ಬಾಳುಹುದೇತಕೆ ? ನುಡಿ, ಎಲೆ ಜೀವ
ಸಿರಿಗನ್ನದದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ
ಕನ್ನಡ ತಾಯಿಯ ಸೇವೆಯ ಮಾಡೆ
ವಿಶ್ವ ವಿನೂತನ...
ವಿಶ್ವ ವಿನೂತನ...
- ಚೆನ್ನವೀರ ಕಣವಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ, ಜಯ ಭಾರತಿ ||
ಕರುನಾಡ ಸರಸ್ವತಿ ಗುಡಿ ಗೋಪುರ ಸುರ ಶಿಲ್ಪಿ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ ಪರಿತ್ರಿತ ಕ್ಷೇತ್ರ ಮನೋಹಾರಿ
ಗಂಗ ಕದಂಬ ರಾಷ್ಟ್ರಕೂಟ ಬಲ ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕ ಬುಕ್ಕ ಪುಲಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ
ತ್ಯಾಗ ಭೋಗ ಸಮಯೋಗದ ದೃಷ್ಟಿ ಬೆಳವುಳ ಮಲೆಕರೆ ಸುಂದರ ಶೃಷ್ಟಿ
ಗ್ಯಾನದ ವಿಜ್ಞಾನದ ಕಲೆ ಐಸಿರಿ ಸಾರೋದಯ ಧಾರಾ ನಗರಿ
ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲ ತರಂಗ
ವಿಶ್ವ ಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಬೇರಿ
ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ
ಚಿತ್ರ: ತಿರುಗು ಬಾಣ
ರಚನೆ: ಅರ. ಏನ್. ಜಯಗೋಪಾಲ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ,
ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ - ೨
ಕರುನಾಡು ಸ್ವರ್ಗದ ಸೀಮೆ, ಕಾವೇರಿ ಹುಟ್ಟಿದ ನಾಡು,
ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು
ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು
ಚಾಮುಂಡಿ ರಕ್ಷೆಯು ನಮಗೆ, ಗೊಮಟೆಷ ಕಾವಲು ಇಲ್ಲಿ,
ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ,
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ,
ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿವೆ,
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ,
ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ
ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ
ಬಾರಿಸು ಕನ್ನಡ ಡಿಂಡಿಮವ
ಹಾಡು: ಬಾರಿಸು ಕನ್ನಡ ಡಿಂಡಿಮವ
ರಚನೆ: ಕುವೆಂಪು
ಗಾಯನ: ಶಿವಮೊಗ್ಗ ಸುಬ್ಬಣ್ಣ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಬಾರಿಸು ಕನ್ನಡ ಡಿಂಡಿಮವ ||
ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ
ಬಾರಿಸು ಕನ್ನಡ ಡಿಂಡಿಮವ ||
ನಿತ್ಯೋತ್ಸವ
ನಿತ್ಯೋತ್ಸವ
ಕೆ. ಎಸ್. ನಿಸಾರ್ ಅಹಮದ್
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ...
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ....
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನ
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು!
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು ||
ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು, ಬೆಳಗುವ ವಿಜ್ಞಾನಿ ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು |
ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು ||
ಮಾರಕಶಕ್ತಿಯ ದೂರಗೈಯುವ ವೀರಶಿರೋಮಣಿ ನೀನಾಗು
ಬ್ರಮ್ಹಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು, ಕಾಣುವ ಯೋಗಿಯು ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||
ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು ||
ಭಾರತೀಯರ ವಿಶ್ವ ಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು, ಬೆಳಗುವ ವಿಜ್ಞಾನಿ ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು |
ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು ||
ಮಾರಕಶಕ್ತಿಯ ದೂರಗೈಯುವ ವೀರಶಿರೋಮಣಿ ನೀನಾಗು
ಬ್ರಮ್ಹಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು, ಕಾಣುವ ಯೋಗಿಯು ನೀನಾಗು
ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ||