ಪುರಾಣದ ಕಥೆಗಳು



ರಾಮನಿಲ್ಲದಿದ್ದರೆ ಮುತ್ತಿನ ಹಾರವೂ ಸಹ ಕವಡೆ ಬೆಲೆಯದ್ದು
ಒಂದು ಸಲ ಶ್ರೀರಾಮ ಮತ್ತು ಸೀತಾಮಾತೆಯನ್ನು ಭೇಟಿಯಾಗಲು ಹನುಮಂತನು ಬರುತ್ತಾನೆ ಮತ್ತು ಅವರಿಗೆ ಮನಸಾರೆ ನಮಸ್ಕಾರವನ್ನು ಮಾಡುತ್ತಾರೆ. ಆಗ ಸೀತಾದೇವಿಗೆ ಅನಿಸುತ್ತದೆ, ಹನುಮಂತನು ನನ್ನ ಸ್ವಾಮಿಯ ಭಕ್ತನಿದ್ದಾನೆ. ಅವನು ಯಾವಾಗಲೂ ಸೇವೆ ಮಾಡುತ್ತಿರುತ್ತಾನೆ, ಅವನಿಗೆ ಏನಾದರೂ ನೀಡಬೇಕು. ಹೀಗೆ ಅನಿಸಿದ ತಕ್ಷಣ ಸೀತಾದೇವಿಯು ತನ್ನ ಕೊರಳಿನಲ್ಲಿರುವ ಮುತ್ತಿನ ಹಾರವನ್ನು ಹನುಮಂತನಿಗೆ ನೀಡುತ್ತಾಳೆ ಮತ್ತು ನಾನು ಪ್ರಸನ್ನಳಾಗಿದ್ದೇನೆ ಎಂದು ಹೇಳುತ್ತಾಳೆ.

ಮಾಲೆಯನ್ನು ಪಡೆದ ಹನುಮಂತನು ಮುಂದೆ ಹೋಗಿ ಕೂತು ಪ್ರತಿಯೊಂದು ಮಣಿಯನ್ನು ದಾರದಿಂದ ತೆಗೆದು ನೋಡಿ ನೋಡಿ ಒಡೆಯುತ್ತಾನೆ. ಈ ರೀತಿ ಎಲ್ಲಾ ಮಣಿಗಳನ್ನು ಒಡೆದು ಹಾಕುತ್ತಾನೆ. ಇದನ್ನು ನೋಡಿದ ಸೀತಾದೇವಿಯು ಸಿಟ್ಟಿನಿಂದ ಕೇಳಿದಳು, "ನಾನು ಪ್ರೀತಿಯಿಂದ ನೀಡಿದ ಹಾರವನ್ನು ಯಾಕೆ ಹೀಗೆ ಮಾಡಿದೆ?"

ಹನುಮಂತನು ಹೇಳಿದನು, "ಈ ಮಾಲೆಯ ಯಾವ ಮಣಿಯಲ್ಲಿ ನನಗೆ ರಾಮನು ಕಾಣುತ್ತಾನೆಂದು ನೋಡುತ್ತಿದ್ದೆ. ಯಾವ ಮಣಿಯಲ್ಲಿ ರಾಮನು ಕಾಣಲಿಲ್ಲವೊ ಅದನ್ನು ನಾನು ಒಡೆದುಹಾಕಿದೆ". ಇದನ್ನು ಕೇಳಿದ ಸೀತಾಮಾತೆಗೆ ತಿಳಿಯಿತು, ಹಾರವನ್ನು ನಾನು ಕೊಡುತ್ತಿದ್ದೇನೆಂಬ ಭಾವದಲ್ಲಿ ಅವಳು ಹಾರವನ್ನು ನೀಡುವಾಗ ರಾಮನ ಸ್ಮರಣೆ ಮಾಡಿರಲಿಲ್ಲ. ಎಲ್ಲವನ್ನೂ ಶ್ರೀರಾಮನೇ ಮಾಡುವುದು.

ಸೀತಾದೇವಿಯು ಹನುಮಂತನ ಕ್ಷಮೆ ಕೇಳುತ್ತಾಳೆ ಮತ್ತು ಶ್ರೀರಾಮನ ಸ್ಮರಣೆ ಮಾಡುತ್ತಾ ಮತ್ತೊಂದು ಹಾರವನ್ನು ನೀಡುತ್ತಾಳೆ. ಅದನ್ನು ತಕ್ಷಣ ಹನುಮಂತನು ತನ್ನ ಕೊರಳಿಗೆ ಹಾಕಿಕೊಳ್ಳುತ್ತಾನೆ. ಮಕ್ಕಳೇ, ಯಾವುದು ದೇವರ ಸ್ಮರಣೆ ಮಾಡಿಕೊಡುತ್ತದೆಯೊ ಅದು ಹನುಮಂತನಿಗೆ ಪ್ರಿಯವಾಗುತ್ತದೆ.

ಸಂದೀಪನ ಗುರುಭಕ್ತಿ

ಮಹಿಷಾಸುರ ಮರ್ದಿನಿ ದುರ್ಗಾದೇವಿ

ಮಹಿಷಾಸುರ ಮರ್ದಿನಿ ದುರ್ಗಾದೇವಿ
ನವರಾತ್ರಿಯ ಮೊದಲನೆ ದಿನ ದುರ್ಗಾದೇವಿ ಅಥವಾ ಮಹಾಕಾಳಿಯ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ ಮತ್ತು ಒಂಬತ್ತು ದಿವಸ ದೇವಿಯ ಉತ್ಸವವನ್ನು ಆಚರಿಸಲಾಗುತ್ತದೆ. ನಾವು ಇಂದು ದುರ್ಗಾದೇವಿಯು ಮಹಿಷಾಸುರ ಮರ್ದಿನಿ ಹೇಗೆ ಆದಳು ಎಂಬುದನ್ನು ತಿಳಿಯೋಣ.

ಹಿಂದೆ ಮಹಿಷಾಸುರ ಎಂಬ ರಾಕ್ಷಸನಿದ್ದ. ಅವನು ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದನು. ಒಂದು ಸಲ ಅವನು ಇಂದ್ರನೊಂದಿಗೆ ಯುದ್ಧವನ್ನು ಮಾಡಿದನು ಮತ್ತು ಇಂದ್ರನನ್ನು ಸೋಲಿಸಿ ಅವನ ಸ್ಥಾನವನ್ನು ಪಡೆದನು. ಇಂದ್ರನನ್ನು ಸೋಲಿಸಿದಕ್ಕಾಗಿ ಅವನಿಗೆ ತನ್ನ ಶಕ್ತಿಯ ಬಗ್ಗೆ ತುಂಬಾ ಗರ್ವವಾಯಿತು. ಅವನು ಎಲ್ಲರೊಂದಿಗೆ ಕೆಟ್ಟದಾಗಿ ಮಾತನಾಡುತ್ತಿದ್ದನು. ದಿನೇ ದಿನೇ ಹೆಚ್ಚಾಗುತ್ತಿರುವ ಅವನ ಅನ್ಯಾಯವನ್ನು ಸಹಿಸಲಾರದೇ ದೇವತೆಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಪ್ರಾರ್ಥನೆಯನ್ನು ಮಾಡಿದರು ಮತ್ತು ಅವನಿಂದ ರಕ್ಷಣೆಯನ್ನು ನೀಡಬೇಕೆಂದು ಪ್ರಾರ್ಥಿಸಿದರು.

ದೇವರು ಒಂದು ಕಡೆ ಸೇರಿ ತಮ್ಮ ತಮ್ಮ ಶಕ್ತಿಯನ್ನು ಸೇರಿಸಿ ದೇವಿಯೊಬ್ಬಳನ್ನು ನಿರ್ಮಾಣ ಮಾಡಿದರು. ಶಂಕರನ ಶಕ್ತಿಯಿಂದ ಮುಖ, ವಿಷ್ಣುವಿನ ಶಕ್ತಿಯಿಂದ ಕೈಗಳು ಮತ್ತು ಅಗ್ನಿಯ ಶಕ್ತಿಯಿಂದ ಮೂರು ಕಣ್ಣುಗಳು ನಿರ್ಮಾಣವಾದವು. ಈ ರೀತಿ ಪ್ರತಿಯೊಬ್ಬ ದೇವರು ಒಂದುಂದು ಅಂಗವನ್ನು ನೀಡಿ ಸಾಕ್ಷಾತ್ ದೇವಿಯ ನಿರ್ಮಾಣವಾಯಿತು. ಶಿವನು ತನ್ನ ತ್ರಿಶೂಲವನ್ನು, ವಿಷ್ಣು ಚಕ್ರವನ್ನು, ಇಂದ್ರನು ವಜ್ರವನ್ನು ಈ ರೀತಿ ಎಲ್ಲ ದೇವರು ದೇವಿಗೆ ಆಯುಧಗಳನ್ನು ನೀಡಿದರು.

ದೇವರ ತೇಜದಿಂದ ನಿರ್ಮಾಣವಾದ ದೇವಿಯು ಮಹಿಷಾಸುರನನ್ನು ವಧಿಸಲು ರೌದ್ರರೂಪವನ್ನು ತಾಳಿದರು. ಮಹಿಷಾಸುರ ಮತ್ತು ದೇವಿಗೆ ಒಂಬತ್ತು ದಿನಗಳ ಘೋರ ಯುದ್ಧವಾಯಿತು. ದುರ್ಗಾದೇವಿಯು ತನ್ನ ತ್ರಿಶೂಲದಿಂದ ಮಹಿಷಾಸುರನ್ನು ವಧಿಸಿದರು. ಮಹಿಷಾಸುರನನ್ನು ವಧಿಸಿದರಿಂದ ದೇವಿಗೆ ಮಹಿಷಾಸುರಮರ್ದಿನಿ ಎಂದು ಹೆಸರು ಬಂದಿತು. ಇದರ ನೆನಪಿಗಾಗಿ ನಾವು ನವರಾತ್ರಿಯನ್ನು ಆಚರಿಸುತ್ತೇವೆ. 
 

ಹಾವುಗಳಿಗೇಕೆ ಎರಡು ನಾಲಿಗೆ?

ಸುದಾಮನ ಕಥೆ


ಸುದಾಮನ ಕಥೆ
ಸುದಾಮನು ಒಬ್ಬ ಬಡ ಬ್ರಾಹ್ಮಣನಾಗಿದ್ದನು. ಭಗವಂತನಾದ ಶ್ರೀಕೃಷ್ಣನು ಸುದಾಮನ ಸ್ನೇಹಿತನಾಗಿದ್ದನು. ಸುದಾಮನ ಹೆಂಡತಿಯು ಸುದಾಮನಿಗೆ ಯಾವಾಗಲೂ ನೀವು ಶ್ರೀಕೃಷ್ಣ ನಿಮ್ಮ ಸ್ನೇಹಿತನೆಂದು ಹೇಳುತ್ತಿರುತ್ತೀರಿ, ನೀವು ಯಾಕೆ ಅವನಲ್ಲಿ ನಮ್ಮ ಬಡತನವನ್ನು ಹೋಗಲಾಡಿಸು ಎಂದು ಹೇಳಬಾರದು? ಹೇಗಿದ್ದರು ಶ್ರೀಕೃಷ್ಣನು ಒಬ್ಬ ರಾಜನಾಗಿದ್ದಾನೆ. ಶ್ರೀಕೃಷ್ಣ ನಿಮಗೆ ಕೆಲವು ಸಹಸ್ರ ಬಂಗಾರದ ವರಹಗಳನ್ನು ನೀಡಿದರೆ, ಅವನ ಖಜಾನೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ", ಎಂದು ಹೇಳುತ್ತಿದ್ದಳು. ಆದರೆ ಸುದಾಮನು ಇದಕ್ಕೆ ಒಪ್ಪುತ್ತಿರಲಿಲ್ಲ.
ಒಂದು ದಿನ ಸುದಾಮನು ಹೆಂಡತಿಯ ಒತ್ತಾಯದ ಮೇರೆಗೆ ಶ್ರೀಕೃಷ್ಣನಲ್ಲಿ ತನ್ನ ಬಡತನದ ಬಗ್ಗೆ ಹೇಳಿ, ಧನ ಸಹಾಯ ಪಡೆಯಲು ಅರಮನೆಗೆ ಹೊರಟನು. ಸುದಾಮನು ಶ್ರೀಕೃಷ್ಣನ ಅರಮನೆಗೆ ಬಂದಾಗ, ಅಲ್ಲಿದ್ದ ದ್ವಾರಪಾಲಕರು ಅವನನ್ನು ಅರಮನೆಯ ಒಳಗೆ ಬಿಡಲು ಮೊದಲು ಒಪ್ಪಲಿಲ್ಲ ನಂತರ ಅವನನ್ನು ಅರಮನೆಯ ಒಳಗೆ ಹೊಗಲು ಬಿಟ್ಟರು.
ಶ್ರೀಕೃಷ್ಣನು ಸುದಾಮನು ತನ್ನ ಅರಮನೆಗೆ ಬಂದ ವಿಷಯವನ್ನು ಕೇಳಿ ತುಂಬ ಸಂತೋಷದಿಂದ ಅವನನ್ನು ತುಂಬ ಪ್ರೀತಿ, ಆದರದಿಂದ ಅರಮನೆಗೆ ಬರಮಾಡಿಕೊಂಡನು ಮತ್ತು ಅವನಿಗೆ ಆದರ ಆತಿಥ್ಯವನ್ನು ಮಾಡಿ ಸತ್ಕರಿಸಿದನು. ಆದರೆ ಸುದಾಮನು ಶ್ರೀಕೃಷ್ಣನ ಭಕ್ತನಾದ್ದರಿಂದ ತಾನು ಅರಮನೆಗೆ ಏಕೆ ಬಂದೆ ಎಂಬ ವಿಷಯವನ್ನು ಶ್ರೀಕೃಷ್ಣನಿಗೆ ತಿಳಿಸಲು ಆಗಲಿಲ್ಲ. ಸುದಾಮನು ಹೊರಡುವಾಗ ಶ್ರೀಕೃಷ್ಣನು ಏನಾದರೂ ವಿಷಯವಿತ್ತೇ ಎಂದು ಕೇಳಲು ಸುದಾಮನು ಏನು ಇಲ್ಲ ಎಂದು ಹೇಳಿದನು.
ಸುದಾಮನು ತನ್ನ ಹಳ್ಳಿಯ ಕಡೆಗೆ ಬರಿಗೈಯಲ್ಲಿ ತುಂಬ ಹೆದರಿಕೆಯಿಂದ ಹೊರಟನು ಯಾಕೆಂದರೆ ಹೆಂಡತಿಯು ಅವನಿಗೆ ಬರಿಗೈಯಲ್ಲಿ ಬರಬಾರದೆಂದು ಹೇಳಿದ್ದಳು. ಆದರೆ ಸುದಾಮನು ತನ್ನ ಹಳ್ಳಿಯನ್ನು ಪ್ರವೇಶಮಾಡಿದಾಗ ಅವನಿಗೆ ಆಶ್ಚರ್ಯಕಾದಿತ್ತು. ಶ್ರೀಕೃಷ್ಣನು ಅವನ ಮನೆಯನ್ನು ಸುಂದರವಾದ ಅರಮನೆಯನ್ನಾಗಿ ಪರಿವರ್ತಿಸಿದ್ದನು ಮತ್ತು ಆತನಿಗೆ ಸಾಕಷ್ಟು ಧನವನ್ನು