ಕಂಪ್ಯೂಟರ್ ಬಗ್ಗೆ ಒಂದಷ್ಟು ಮಾಹಿತಿ



ಕಂಪ್ಯೂಟರ್ ಮಾಹಿತಿ

ಕಂಪ್ಯೂಟರ್ ಒಂದು ಇಣುಕು ನೋಟ (Computer At a Glance)

ಕಂಪ್ಯೂಟರ್ ಇಂದಿನ ದಿನಗಳಲ್ಲಿ ಕೇವಲ ಒಂದು ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ನಮ್ಮ ಜನ ಜೀವನದ ಪರಿಕಲ್ಪನೆಯನ್ನೇ ಬದಲಿಸಿದೆ. ನಿತ್ಯ ಬದುಕಿನ ವಿಧಾನವೇ ಅದಾಗಿದೆ. 1950ರ ನಂತರದ ದಶಕಗಳಲ್ಲಿ ಯಾರೂ ಊಹಿಸಲಾರದಷ್ಟು ತ್ವರಿತಗತಿಯಲ್ಲಿ ಬೆಳವಣಿಗೆ ಕಂಡ ಕಂಪ್ಯೂಟರ್, ಇಂದಿಗೆ ಎ.ಟಿ.ಎಮ್.  ಮೂಲಕ ಹಣ ಕೊಡುವ ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದಿನ ದಿನಗಳಲ್ಲಿ ವಿದ್ಯಾವಂತರಾಗಿ ಕಂಪ್ಯೂಟರ್ ಕಲಿಯುವುದೂ ಬದ್ದಿವಂತಿಕೆಯ ಲಕ್ಷಣವೆನಿಸಿದೆ.

ಕಂಪ್ಯೂಟರ್ ಗೂ ಮನುಷ್ಯನಂತೆಯೆ ಎರಡು ಸ್ಮೃತಿಗಳಿವೆ.  ಒಂದು ತಾತ್ಕಾಲಿಕ ಸ್ಮತಿ ಇನ್ನೊಂದು ಶಾಶ್ವತ ಸ್ಮೃತಿ


(Random Access Memory, and Read only Memory).

ಇವುಗಳ ಬಗ್ಗೆ ಮುಂದೆ ನೋಡೋಣ. ಕಂಪ್ಯೂಟರ್ ಸ್ವತಃ ಯಂತ್ರ ಭಾಷೆ ಹೊಂದಿದೆ.  ಅದು ತನ್ನ ಯಂತ್ರ ಭಾಷೆಯಿಂದಲೇ ಬಳಕೆ ದಾರರ ಸೂಚನೆ ಆದೇಶಗಳನ್ನು(Instructions and commands) ಪಾಲಿಸುತ್ತದೆ.  ತೆರೆಯಮೇಲೆ ಪ್ರತಿಕ್ರಿಯಿಸುತ್ತದೆ.  ನಮ್ಮೊಡನೆ ಸಂವಾದ  ನಡೆಸುತ್ತದೆ. ಅದೇ ಬೈನರಿ ಭಾಷೆಯಾಗಿದೆ.  ಪ್ರಧಾನ ಕಾರ್ಯಾಚರಣೆಯ ತಂತ್ರಾಂಶವೂ ಸೇರಿದಂತೆ ಅಂದರೆ ಆಪರೇಟಿಂಗ್ ಸಿಸ್ಟಂ ಸೇರಿದಂತೆ ಬರೆಯಲ್ಪಡುವ ಪ್ರೋಗ್ರಾಂಮಿಂಗ್ ಸೋರ್ಸ್ಕೊಡ್ಸ್ ( ಸಂಕೇತಿಕ ಕಾರ್ಯವಿಧಿಗಳೆಲ್ಲವೂ)  ಎಲ್ಲವೂ ತೆರೆಯ ಮರೆಯಲ್ಲೇ ಕಂಪೈಲರ್ ಗಳಿಂದ  ಬೈನರಿ ಭಾಷೆಗೆ ತರ್ಜುಮೆಗೊಳ್ಳುತ್ತವೆ.

ಕಂಪ್ಯೂಟರ್ ಮೊದಲು ಗಣಿತದ ಲೆಕ್ಕಾಚಾರ ಪ್ರಕ್ರಿಯೆಗಳನ್ನು ಮಾಡುಂತಹ ಯಂತ್ರವಷ್ಟೇ ಆಗಿತ್ತು.  ಅದರಾಚೆಗೂ ಬೆಳೆದು ಅಭಿವೃದ್ಧಿಪಥದಲ್ಲಿ ಸಾಗಿರುವ ಕಂಪ್ಯೂಟರ್ ಗೆ ತಿಳಿಯುವುದು ದ್ಚಿಮಾನ ಪದ್ಧತಿಯ ಸಂಖ್ಯೆಗಳೇ.  ಅಕ್ಷರಗಳು, ಅಂಕೆಗಳು, ಚಿತ್ರಗಳು,  ಶಬ್ಬಗಳು, ಕೋಮಾ, ಫುಲ್ ಸ್ಟಾಪ್, ಪಂಕ್ಷಯೇಷನ್ ,   ಇತರೆ  ಏನೆಲ್ಲವೂ ಸೇರಿದಂತೆ ಸ್ವತಃ ಅದರ ಕಾರ್ಯನಿರ್ವಹಣೆಯಲ್ಲಿನ ಸೂಚನಾ ವಿಧಿ ವಿಧಾನಗಳೇ ಸಂಖ್ಯೆಗಳಿಂದ ಕೂಡಿರುತ್ತವೆ. ಇದೆಲ್ಲವೂ ದ್ಚಿಮಾನ ಪದ್ಧತಿಯ ಬೈನರಿ ಕೋಡ್ಸ್ಗಳಿಂದಲೇ ಸಾಧ್ಯವಾಗಿದೆ. ಕಂಪ್ಯೂಟರ್ ಈ ಕೆಳಕಂಡ ಸ್ತರಗಳಲ್ಲಿ ಕೆಲಸ ಮಾಡುತ್ತದೆ-



1.ಹಾರ್ಡ್ ವೇರ್- ಬಿಡಿಭಾಗಗಳು,
2.ಸಾಫ್ಟ್ ವೇರ್ ಅಥವಾ ಪ್ರೋಗ್ರಾಂಸ್ – ತಂತ್ರಾಂಶಗಳು,
3.ಡೇಟಾ- ದತ್ತಾಂಶಗಳು,
4. ಪ್ರಾಸೆಸಿಂಗ್- ಸಂಸ್ಕರಣೆ ಮತ್ತು
5. ಔಟ್ ಪುಟ್ ರಿಸಲ್ಟ್- ಇನ್ ಫರ್ಮೇ ಷನ್- ಮಾಹಿತಿಯಾಗಿ ಫಲಿತಾಂಶಗಳು.
-ಇದನ್ನೆಲ್ಲ ಬಳಸಿಕೊಳ್ಳುವ ನಾವೇ ಯೂಸರ್ಸ್-ಬಳಕೆದಾರರು.

ಕಂಪ್ಯೂಟರ್ ಎಲ್ಲ ಯಂತ್ರಗಳಂತೆ ಸುಮ್ಮನೆ ಆಪರೇಟ್ ಮಾಡುವುದಲ್ಲ. ಅದರ ಮೂಲಭೂತ ಪರಿಕಲ್ಪನೆಯನ್ನು ಮೊದಲು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆಗ ಅದು ಹೇಗೆ ನಮ್ಮ ಆದೇಶಗಳನ್ನು ಸ್ವೀಕರಿಸುತ್ತದೆ ಮತ್ತು ಹೇಗೆ ನಮ್ಮೊಡನೆ ಪ್ರತಿಕ್ರಿಯಿಸುತ್ತದೆ ಎಂಬುದು ತಿಳಿಯುತ್ತದೆ.

ಯಾಕೆಂದರೆ,ಟಿ.ವಿ.ದೃಶ್ಯಗಳ ಮುಂದೆ ನಮ್ಮನ್ನು ನಾವು ಕಳೆದು ಕೊಳ್ಳುತ್ತೇವೆ. ಕಂಪ್ಯೂಟರ್ ದೃಶ್ಯಮಾಧ್ಯಮವೇ ಆದರೂ ಅದರ ಮುಂದೆ ನಮ್ಮನ್ನು ನಾವು ಆಲೋಚನೆಗೆ ಹಚ್ಚಿಕೊಂಡೇ ಸಾಗಬೇಕು. ಇದು ಹತ್ತು ವರ್ಷಗಳಿಂದ ಕಂಪ್ಯೂಟರ್ ಶಿಕ್ಷಕನಾಗಿ ಕನ್ನಡದಲ್ಲಿ ಕಂಪ್ಯೂಟರ್ ಪುಸ್ತಕಗಳನ್ನು ಬರೆದು ಪ್ರಕಟಿಸಿರವ ಈ ಲೇಖಕನ ಅನುಭವವೂ ಹೌದು.



ಕಂಪ್ಯೂಟರ್ ಬಿಡಿ ಭಾಗಗಳಾದ -ಹಾರ್ಡವೇರ್ ಏನು ಕೆಲಸ ಮಾಡಬೇಕೆಂಬುದನ್ನು ತಿಳಿಸುವುದೇ ಅದಕ್ಕೆ ಸಂಬಂಧಪಟ್ಟ “ಸಾಫ್ಟ್ ವೇರ್ ತಂತ್ರಾಂಶ.”
ಕಂಪ್ಯೂಟರ್ “ಆಪರೇಟಿಂಗ್ ಸಿಸ್ಟಂ” ಎಂದರೆ ಮಿಷಿನ್ ಖಂಡಿತ ಅಲ್ಲ! ಮಿಷಿನ್ ಗೇ ಜೀವ ತುಂಬುವ ಪ್ರಧಾನ ಕಾರ್ಯಾಚರಣೆಯ ತಂತ್ರಾಂಶ.


ಜನ ಸಾಮಾನ್ಯರು ಹೆಚ್ಚು ಬಳಸುವ ತಂತ್ರಾಂಶವೆಂದರೆ- ಮೈಕ್ರೋಸಾಫ್ಟ್ ವಿಂಡೋಸ್. ಈ ಪ್ರಧಾನ ಕಾರ್ಯಾಚರಣೆಯ ತಂತ್ರಾಂಶ ಅಂದರೆ, ಮಾಸ್ಟರ್ ಕಂಟ್ರೋಲ್ ಪ್ರೋಗ್ರಾಂನಲ್ಲಿ ಮೊದಲೇ ತಿಳಿಸಿಟ್ಟಿರುವ ಸೂಚನೆ ಆದೇಶಗಳ ಮೇರೆಗೆ ಇಡೀ ಕಂಪ್ಯೂಟರ್ ಯಂತ್ರವು ನಿಯಂತ್ರಣ ಹೊಂದಿರುತ್ತದೆ. ಮತ್ತು ಅದರ ಅಧೀನಕ್ಕೊಳಪಟ್ಟು ಕಂಪ್ಯೂಟರ್ ಕೆಲಸ ಮಾಡುತ್ತದೆ.

ಇತರೆ ಅಳವಡಿಕೆ ತಂತ್ರಾಂಶಗಳೂ ಆಪರೇಟಿಂಗ್ ಸಿಸ್ಟಂನ್ನೇ ಅವಲಂಬಿಸಿ ಕೆಲಸ ಮಾಡುವಂತೆ ತಯಾರಾಗಿರುತ್ತವೆ. ಬಳಕೆದಾರರ ಯಾವ ಕೆಲಸಕ್ಕೆ ಯಾವ ಸೂಚನೆ/ಆದೇಶಗಳೆಂಬುದೂ ಸಹ ಇಂತಹ ಅಳವಡಿಕೆಯ ತಂತ್ರಾಂಶಗಳಲ್ಲಿ (ಅಪ್ಲಿಕೇಷನ್ ಸಾಫ್ಟ್ ವೇರ್ಸನಲ್ಲಿ) ಮೊದಲೇ ತಿಳಿಸಲ್ಪಟ್ಟಿರುತ್ತವೆ.



ಮೊದಲು ಕಂಪ್ಯೂಟರ್  ಪರಿಕಲ್ಪನೆಯಲ್ಲಿ (Computer Concepts) -
ಅಂದರೆ, ಅದರ ಎರಡು ಪ್ರಧಾನ ಸ್ಮೃತಿಕೋಶಗಳಾದ(ಮೆಮೊರಿ ಚಿಪ್ಸ್)
1.ರೀಡೋನ್ಲಿ ಮೆಮೊರಿ ಮತ್ತು2. ರಾಂಡ್ಯ ಮ್ ಏಕ್ಸೇಸ್ ಮೆಮೊರಿ


- ಇವೆರಡು ಮೆಮೊರಿಗಳ ಬಗ್ಗೆ ಮೊದಲು ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯಬೇಕಾಗುತ್ತದೆ.

ಈ ಎರಡು ಸ್ಮತಿಕೋಶಗಳ ಬಗ್ಗೆ  ಅಂದರೆ, ಮೆಮರಿ ಚಿಪ್ಸ್ ಗೆ ಇರುವ ವ್ಯತ್ಯಾಸಗಳೇನು? ಅರ್ಥ್ಯೆ ಸಿಕೊಳ್ಳುವುದು  ಬಹಳ ಮುಖ್ಯವಾಗುತ್ತದೆ. ನಂತರ ಆಪರೇಟಿಂಗ್ ಸಿಸ್ಟಂ ಯಂತ್ರವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡು ಹೇಗೆ ನಿಮ್ಮೊಡನೆ ಮಧ್ಯವರ್ತಿಯಾಗಿ ಸಂವಹನ ನಡೆಸುತ್ತದೆ ? ಎಂಬುದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡೇ ಮುಂದುವರೆಯಬೇಕಾಗುತ್ತದೆ.  ಆಗ ಎಂ.ಎಸ್.ಆಫೀಸ್ ಹಾಗೂ ಇತರೆ ಅಪ್ಲಿಕೇಷನ್ ಸಾಫ್ಟ್ ವೇರ್ ಗಳೊಂದಿಗೆ ಕೆಲಸ ಮಾಡಲು ಸುಲಭವಾಗುತ್ತದೆ. ಮುಂದಿನ ಹಂತದಲ್ಲಿ ಇಂಟರ್ ನೆಟ್ ಬ್ರೌಸಿಂಗ್ ಮತ್ತು ಹಾರ್ಡವೇರ್ ಕಲಿಕೆ ಮತ್ತು ಪ್ರೋಗ್ರಾಮಿಂಗ್ ಗಳೂ ಕೂಡ ಅರ್ಥವಾಗುತ್ತವೆ
ಕಂಪ್ಯೂಟರ್ ಮಾಹಿತಿ     
 1. ಕಂಪ್ಯೂಟರ್ ಹಾರ್ಡ್ ವೇರ್ ಎಂದರೇ “ ಕಂಪ್ಯೂಟರ್ ನ ಹೊರಗಡೆ ಮತ್ತು ಒಳಗಡೆ ಯಾವುದೇ ರೀತಿಯ , ಕಣ್ಣಿಗೆ ಕಾಣುವ ಬಿಡಿಭಾಗಗಳನ್ನು ಮತ್ತು ಇತರೆ ಜೋಡಣಿಗಳಾಗಿವೆ ” .

 2. ಕಂಪ್ಯೂಟರ್ ನ ಮಾನಿಟರ್ , ಮೌಸ್ , ಕೀಬೋರ್ಡ್ , ಪ್ರಿಂಟರ್ ಮತ್ತು ಸಿ.ಪಿ.ಯು ಒಳಗೆ ಇರುವ ಮದರ್ ಬೋರ್ಡ್ ಅಲ್ಲದೇ ಅದಕ್ಕೆ ಅಳವಡಿಸಿರುವ ಎಲ್ಲಾ ರೀತಿಯ ಚಿಪ್ ಗಳು , ರ್ಯಾಂ , ಪ್ರೋಸೆಸರ್ ಇವೆಲ್ಲವುಗಳನ್ನ ಹಾರ್ಡ್ ವೇರ್ ನ ಭಾಗಘಳಾಗಿವೆ .

 3. ಹಾರ್ಡ್ ವೇರ್ ಗಳ ಸಂಯೋಜನೆಯ ಜೋತೆಗೆ ಪ್ರಿಂಟರುಗಳು , ಸ್ಕ್ಯಾನರ್ ಗಳು , ಮೋಡೆಂಗಳು , ಮತ್ತು ಇತರೆ ಉಪಕರಣಗಳು ಪೆರಿಫೆರಲ್ಸ್ ಅಥವಾ ಸುತ್ತುಉಪಕರಣಗಳು ಎಂದು ಕರೆಯುವರು .

 4. ಕಂಪ್ಯೂಟರ್ ವ್ಯವಸ್ಥೆಯಲ್ಲಿ ಮೂಲತಃ 4 ಭಾಗಗಳು ಸೇರಿವೆ ಅವೆಂದರೇ
 1. ಇನ್ ಪುಟ್ ಯೂನಿಟ್ ,
 2. ಔಟ್ ಪುಟ್ ಯೂನಿಟ್
 3. ಸ್ಟೋರೆಜ್ ಯೂನಿಟ್ ,
4. ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ .

 5. ಇನ್ ಪುಟ್ ವಸ್ತುಗಳು – ಕೀಬೋರ್ಡ್ , ಮೌಸ್ , ಮೈಕ್ರೋಫೋನ್ , ಸ್ಕ್ಯಾನರ್ , ವೆಬ್ ಕ್ಯಾಮೆರಾ ,
6. ಔಟ್ ಪುಟ್ ವಸ್ತುಗಳು – ಮಾನಿಟರ್ , ಪ್ರಿಂಟರ್ , ಸ್ಪೀಕರ್ , ಹೆಡ್ ಫೋನ್ .

7. ಸೀಡಿ ರೋಂ – ಒಂದು ಪ್ಲಾಪಿ ಡಿಸ್ಕ್ ಗಿಂತ 400 ಪಟ್ಟು ಹೆಚ್ಚು ಗಾತ್ರದ ಮಾಹಿತಿ ಅಥವಾ ಡೇಟಾ ಸಂಗ್ರಹಿಸಲು ಅನುವು ಮಾಡಿಕೊಂಡುವಂತಹ ಒಂದು ಟ್ರಾನ್ಸ ಫಾರಬಲ್ ಸ್ಟೋರೆಜ್ ಮೀಡಿಯಾ ಅಂದರೆ ವರ್ಗಾಯಿಸಬಲ್ಲ ಸಂಗ್ರಹಣಾ ಮಾಧ್ಯಮಕ್ಕೆ ಸೀಡಿ ರೋಂ ಎಂದು ಹೆಸರು.

8. ಡಿ.ವಿ.ಡಿ – ಡಿಜಿಟಲ್ ವರ್ಸಟೈಲ್ ಡಿಸ್ಕ್ .

9. ಸಿ.ಪಿ.ಯು – ಸೆಂಟ್ರಲ್ ಪ್ರೋಸೆಸಿಂಗ್ ಯೂನಿಟ್ .

10. ಕಂಟ್ರೋಲ್ ಯೂನಿಟ್ ಮತ್ತು ಅರಿತ್ ಮ್ಯಾಟಿಕ್ ಅಂಡ್ ಲಾಜಿಕ್ ಯೂನಿಟ್ ಎರಡನ್ನೂ ಸೇರಿಸಿ ಒಟ್ಟಾಗಿ ಸೆಂಟ್ರಲ್ ಪ್ರೋಸೆಸಿಂಗ್ ಯೂನಿಟ್ - ಸಿ.ಪಿ.ಯೂ ಎಂದು ಕರೆಯಲಾಗಿದೆ.

 11. ಸಿ.ಪಿ.ಯು ಅನ್ನ ಕಂಪ್ಯೂಟರ್ ನ ಮಿದುಳು / ಹೃದಯ ಎಂದು ಕರೆಯಲಾಗಿದೆ.

12. ಯು.ಎಸ್.ಬಿ – ಯುನಿವರ್ಸಲ್ ಸೀರಿಯಲ್ ಬಸ್ ( ಇದನ್ನು ಮೌಸ್ , ಮೋಡೆಮ್ , ಕೀಬೋರ್ಡ್ ಅಥವಾ ಪ್ರಿಂಟರ್ ನಂತಹ ಬಾಹ್ಯ ಸಾಧನಗಳನ್ನು ಕಂಪ್ಯೂಟರಿಗೆ ಜೋಡಿಸಲು ಬಳಸಲಾಗುತ್ತದೆ.).

13. ಎಕ್ಸೆಲ್ ಅಪ್ಲಿಕೇಷನ್ ನ್ನ ಪ್ರವೇಶಿಸಿದಾಗ ಬುಕ್ 1 ಎಂಬ ಶೀರ್ಷಿಕೆಯನ್ನುಳ್ಳ ಹೊಸ ವರ್ಕ್ ಬುಕ್ ತೆರೆಯ ಮೇಲೆ ಕಾಣುತ್ತದೆ.

14. ಒಂದು ವರ್ಕ್ ಬುಕ್ ನಲ್ಲಿ ಮೂರು ಖಾಲಿ ವರ್ಕ್ ಶೀಟ್ ಗಳು ಇರುತ್ತವೆ

15. ಪ್ರತಿ ವರ್ಕ್ ಶೀಟ್ ನಲ್ಲಿ 65,536 ಅಡ್ಡ ಸಾಲುಗಳನ್ನು ಮತ್ತು 256 ಲಂಬಸಾಲುಗಳನ್ನು ಒಳಗೊಂಡಿರುತ್ತದೆ.

16. ಸೆಲ್ ಎಂದರೇ - ಒಂದು ಲಂಬ ಸಾಲು ಮತ್ತು ಅಡ್ಡ ಸಾಲು ಸಂಧಿಸುವ ಆಯತಾಕಾರ ಚೌಕಕ್ಕೆ ಸೆಲ್ ಎಂದು ಹೆಸರು

17. ಮೈಕ್ರೋಸಾಫ್ಟ್ ಎಕ್ಸೆಲ್ 2003 ಅನ್ನು ಆರಂಭಿಸುವ ವಿಧಾನ – ಸ್ಟಾರ್ಟ್ – ಪ್ರೋಗ್ರಾಮ್ – ಮೈಕ್ರೋಸಾಪ್ಟ್ ಎಕ್ಸೆಲ್ .

18. ಕನಿಷ್ಠಗೊಳಿಸುವುದು ಎಂದರೇ – ಮಿನಿಮೈಜ್ .

19. ಒಂದು ಹೊಸ ಫೈಲ್ ನ್ನ ಉಳಿಸ ಬೇಕೆಂದಿದ್ದರೆ - ಸೇವ್ ಆಸ್ ಕೊಟ್ಟು ನಂತರ ಫೈಲ್ ಹೆಸರು ಕೊಡಬೇಕು .

20. ನಮಗೆ ಮೈಕ್ರೋ ಸಾಫ್ಟ್ ಎಕ್ಸೆಲ್ ನಲ್ಲಿ ನಿರ್ದಿಷ್ಟವಾದ ಸೆಲ್ ಗೆ ಹೋಗ ಬೇಕು ಆಗ – ಸೆಲ್ ರೆಫರೆನ್ಸ್ ನಲ್ಲಿ ದಾಖಲಿಸಿ ಎಂಟರ್ ಬಟನ್ ಒತ್ತಿದರೆ ಸಾಕು ( ಉದಾ- ಜೆ100 )!.

21. ಒಂದು ಸೆಲ್ ಬಲಕ್ಕೆ ಹೋಗಬೇಕಾದರೆ – ಬಲಬಾಣದ ಕೀಲಿ ಅಥವಾ ರೈಟ್ ಆರೋ .

22. ಒಂದು ಸೆಲ್ ಎಡಕ್ಕೆ ಬರಬೇಕಾದರೆ – ಎಡ ಬಾಣದ ಕೀಲಿ ಅಥವಾ ಲೆಫ್ಟ್ ಆರೋ.

23. ಒಂದು ಸೆಲ್ ಕೆಳಕ್ಕೆ ಹೋಗಬೇಕಾದರೆ – ಕೆಳ ಬಾಣದ ಕೀಲಿ ಅಥವಾ ಡೌನ್ ಆರೋ .

24. ಒಂದು ಸೆಲ್ ಮೇಲ್ಭಾಗಕ್ಕೆ ಹೋಗಬೇಕಾದರೆ – ಮೇಲು ಬಾಣದ ಕೀಲಿ ಅಥವಾ ಅಪ್ ಆರೋ .

25. ಪ್ರಸ್ತುತ ಪ್ರದೇಶದ ಬಲಬದಿಯ ಕೊನೆಗೆ ಹೋಗಲು – ಕಂಟ್ರೋಲ್ ಮತ್ತು ಬಲ ಬಾಣದ ಕೀಲಿ ಅಥವಾ ಕಂಟ್ರೋಲ್ ರೈಟ್ ಆರೋ .

26. ಪ್ರಸ್ತುತ ಪ್ರದೇಶದ ಎಡಬದಿಯ ಕೊನೆಗೆ ಹೋಗಲು – ಕಂಟ್ರೋಲ್ ಎಡ ಬಾಣದ ಕೀಲಿ ಅಥವಾ ಕಂಟ್ರೋಲ್ ಲೆಫ್ಟ್ ಆರೋ .

27. ಪ್ರಸ್ತುತ ಪ್ರದೇಶದ ಕೆಳಬದಿಯ ಕೊನೆಗೆ ಹೋಗಲು – ಕಂಟ್ರೋಲ್ ಕೆಳ ಬಾಣದ ಕೀಲಿ ಅಥವಾ ಕಂಟ್ರೋ


1. ಕಂಪ್ಯೂಟರ್ ಹಾರ್ಡ್ ವೇರ್ ಎಂದರೇ “ ಕಂಪ್ಯೂಟರ್ ನ ಹೊರಗಡೆ ಮತ್ತು ಒಳಗಡೆ ಯಾವುದೇ ರೀತಿಯ , ಕಣ್ಣಿಗೆ ಕಾಣುವ ಬಿಡಿಭಾಗಗಳನ್ನು ಮತ್ತು ಇತರೆ ಜೋಡಣಿಗಳಾಗಿವೆ ” .
2. ಕಂಪ್ಯೂಟರ್ ನ ಮಾನಿಟರ್ , ಮೌಸ್ , ಕೀಬೋರ್ಡ್ , ಪ್ರಿಂಟರ್ ಮತ್ತು ಸಿ.ಪಿ.ಯು ಒಳಗೆ ಇರುವ ಮದರ್ ಬೋರ್ಡ್ ಅಲ್ಲದೇ ಅದಕ್ಕೆ ಅಳವಡಿಸಿರುವ ಎಲ್ಲಾ ರೀತಿಯ ಚಿಪ್ ಗಳು , ರ್ಯಾಂ , ಪ್ರೋಸೆಸರ್ ಇವೆಲ್ಲವುಗಳನ್ನ ಹಾರ್ಡ್ ವೇರ್ ನ ಭಾಗಘಳಾಗಿವೆ .
3. ಹಾರ್ಡ್ ವೇರ್ ಗಳ ಸಂಯೋಜನೆಯ ಜೋತೆಗೆ ಪ್ರಿಂಟರುಗಳು , ಸ್ಕ್ಯಾನರ್ ಗಳು , ಮೋಡೆಂಗಳು , ಮತ್ತು ಇತರೆ ಉಪಕರಣಗಳು ಪೆರಿಫೆರಲ್ಸ್ ಅಥವಾ ಸುತ್ತುಉಪಕರಣಗಳು ಎಂದು ಕರೆಯುವರು .
4. ಕಂಪ್ಯೂಟರ್ ವ್ಯವಸ್ಥೆಯಲ್ಲಿ ಮೂಲತಃ 4 ಭಾಗಗಳು ಸೇರಿವೆ ಅವೆಂದರೇ 1. ಇನ್ ಪುಟ್ ಯೂನಿಟ್ , 2. ಔಟ್ ಪುಟ್ ಯೂನಿಟ್ 3. ಸ್ಟೋರೆಜ್ ಯೂನಿಟ್ , 4. ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ .
5. ಇನ್ ಪುಟ್ ವಸ್ತುಗಳು – ಕೀಬೋರ್ಡ್ , ಮೌಸ್ , ಮೈಕ್ರೋಫೋನ್ , ಸ್ಕ್ಯಾನರ್ , ವೆಬ್ ಕ್ಯಾಮೆರಾ ,
6. ಔಟ್ ಪುಟ್ ವಸ್ತುಗಳು – ಮಾನಿಟರ್ , ಪ್ರಿಂಟರ್ , ಸ್ಪೀಕರ್ , ಹೆಡ್ ಫೋನ್ .
7. ಸೀಡಿ ರೋಂ – ಒಂದು ಪ್ಲಾಪಿ ಡಿಸ್ಕ್ ಗಿಂತ 400 ಪಟ್ಟು ಹೆಚ್ಚು ಗಾತ್ರದ ಮಾಹಿತಿ ಅಥವಾ ಡೇಟಾ ಸಂಗ್ರಹಿಸಲು ಅನುವು ಮಾಡಿಕೊಂಡುವಂತಹ ಒಂದು ಟ್ರಾನ್ಸ ಫಾರಬಲ್ ಸ್ಟೋರೆಜ್ ಮೀಡಿಯಾ ಅಂದರೆ ವರ್ಗಾಯಿಸಬಲ್ಲ ಸಂಗ್ರಹಣಾ ಮಾಧ್ಯಮಕ್ಕೆ ಸೀಡಿ ರೋಂ ಎಂದು ಹೆಸರು.
8. ಡಿ.ವಿ.ಡಿ – ಡಿಜಿಟಲ್ ವರ್ಸಟೈಲ್ ಡಿಸ್ಕ್ .
9. ಸಿ.ಪಿ.ಯು – ಸೆಂಟ್ರಲ್ ಪ್ರೋಸೆಸಿಂಗ್ ಯೂನಿಟ್ .
10. ಕಂಟ್ರೋಲ್ ಯೂನಿಟ್ ಮತ್ತು ಅರಿತ್ ಮ್ಯಾಟಿಕ್ ಅಂಡ್ ಲಾಜಿಕ್ ಯೂನಿಟ್ ಎರಡನ್ನೂ ಸೇರಿಸಿ ಒಟ್ಟಾಗಿ ಸೆಂಟ್ರಲ್ ಪ್ರೋಸೆಸಿಂಗ್ ಯೂನಿಟ್ - ಸಿ.ಪಿ.ಯೂ ಎಂದು ಕರೆಯಲಾಗಿದೆ.
11. ಸಿ.ಪಿ.ಯು ಅನ್ನ ಕಂಪ್ಯೂಟರ್ ನ ಮಿದುಳು / ಹೃದಯ ಎಂದು ಕರೆಯಲಾಗಿದೆ.
12. ಯು.ಎಸ್.ಬಿ – ಯುನಿವರ್ಸಲ್ ಸೀರಿಯಲ್ ಬಸ್ ( ಇದನ್ನು ಮೌಸ್ , ಮೋಡೆಮ್ , ಕೀಬೋರ್ಡ್ ಅಥವಾ ಪ್ರಿಂಟರ್ ನಂತಹ ಬಾಹ್ಯ ಸಾಧನಗಳನ್ನು ಕಂಪ್ಯೂಟರಿಗೆ ಜೋಡಿಸಲು ಬಳಸಲಾಗುತ್ತದೆ.).
13. ಎಕ್ಸೆಲ್ ಅಪ್ಲಿಕೇಷನ್ ನ್ನ ಪ್ರವೇಶಿಸಿದಾಗ ಬುಕ್ 1 ಎಂಬ ಶೀರ್ಷಿಕೆಯನ್ನುಳ್ಳ ಹೊಸ ವರ್ಕ್ ಬುಕ್ ತೆರೆಯ ಮೇಲೆ ಕಾಣುತ್ತದೆ.
14. ಒಂದು ವರ್ಕ್ ಬುಕ್ ನಲ್ಲಿ ಮೂರು ಖಾಲಿ ವರ್ಕ್ ಶೀಟ್ ಗಳು ಇರುತ್ತವೆ
15. ಪ್ರತಿ ವರ್ಕ್ ಶೀಟ್ ನಲ್ಲಿ 65,536 ಅಡ್ಡ ಸಾಲುಗಳನ್ನು ಮತ್ತು 256 ಲಂಬಸಾಲುಗಳನ್ನು ಒಳಗೊಂಡಿರುತ್ತದೆ.
16. ಸೆಲ್ ಎಂದರೇ - ಒಂದು ಲಂಬ ಸಾಲು ಮತ್ತು ಅಡ್ಡ ಸಾಲು ಸಂಧಿಸುವ ಆಯತಾಕಾರ ಚೌಕಕ್ಕೆ ಸೆಲ್ ಎಂದು ಹೆಸರು
17. ಮೈಕ್ರೋಸಾಫ್ಟ್ ಎಕ್ಸೆಲ್ 2003 ಅನ್ನು ಆರಂಭಿಸುವ ವಿಧಾನ – ಸ್ಟಾರ್ಟ್ – ಪ್ರೋಗ್ರಾಮ್ – ಮೈಕ್ರೋಸಾಪ್ಟ್ ಎಕ್ಸೆಲ್ .
18. ಕನಿಷ್ಠಗೊಳಿಸುವುದು ಎಂದರೇ – ಮಿನಿಮೈಜ್ .
19. ಒಂದು ಹೊಸ ಫೈಲ್ ನ್ನ ಉಳಿಸ ಬೇಕೆಂದಿದ್ದರೆ - ಸೇವ್ ಆಸ್ ಕೊಟ್ಟು ನಂತರ ಫೈಲ್ ಹೆಸರು ಕೊಡಬೇಕು .
20. ನಮಗೆ ಮೈಕ್ರೋ ಸಾಫ್ಟ್ ಎಕ್ಸೆಲ್ ನಲ್ಲಿ ನಿರ್ದಿಷ್ಟವಾದ ಸೆಲ್ ಗೆ ಹೋಗ ಬೇಕು ಆಗ – ಸೆಲ್ ರೆಫರೆನ್ಸ್ ನಲ್ಲಿ ದಾಖಲಿಸಿ ಎಂಟರ್ ಬಟನ್ ಒತ್ತಿದರೆ ಸಾಕು ( ಉದಾ- ಜೆ100 ).
21. ಒಂದು ಸೆಲ್ ಬಲಕ್ಕೆ ಹೋಗಬೇಕಾದರೆ – ಬಲಬಾಣದ ಕೀಲಿ ಅಥವಾ ರೈಟ್ ಆರೋ .
22. ಒಂದು ಸೆಲ್ ಎಡಕ್ಕೆ ಬರಬೇಕಾದರೆ – ಎಡ ಬಾಣದ ಕೀಲಿ ಅಥವಾ ಲೆಫ್ಟ್ ಆರೋ.
23. ಒಂದು ಸೆಲ್ ಕೆಳಕ್ಕೆ ಹೋಗಬೇಕಾದರೆ – ಕೆಳ ಬಾಣದ ಕೀಲಿ ಅಥವಾ ಡೌನ್ ಆರೋ .
24. ಒಂದು ಸೆಲ್ ಮೇಲ್ಭಾಗಕ್ಕೆ ಹೋಗಬೇಕಾದರೆ – ಮೇಲು ಬಾಣದ ಕೀಲಿ ಅಥವಾ ಅಪ್ ಆರೋ .
25. ಪ್ರಸ್ತುತ ಪ್ರದೇಶದ ಬಲಬದಿಯ ಕೊನೆಗೆ ಹೋಗಲು – ಕಂಟ್ರೋಲ್ ಮತ್ತು ಬಲ ಬಾಣದ ಕೀಲಿ ಅಥವಾ ಕಂಟ್ರೋಲ್ ರೈಟ್ ಆರೋ .
26. ಪ್ರಸ್ತುತ ಪ್ರದೇಶದ ಎಡಬದಿಯ ಕೊನೆಗೆ ಹೋಗಲು – ಕಂಟ್ರೋಲ್ ಎಡ ಬಾಣದ ಕೀಲಿ ಅಥವಾ ಕಂಟ್ರೋಲ್ ಲೆಫ್ಟ್ ಆರೋ .
27. ಪ್ರಸ್ತುತ ಪ್ರದೇಶದ ಕೆಳಬದಿಯ ಕೊನೆಗೆ ಹೋಗಲು – ಕಂಟ್ರೋಲ್ ಕೆಳ ಬಾಣದ ಕೀಲಿ ಅಥವಾ ಕಂಟ್ರೋಲ್ ಡೌನ್ ಆರೋ.
28. ಪ್ರಸ್ತುತ ಪ್ರದೇಶದ ಮೇಲಿನ ಬದಿಯ ಕೊನೆಗೆ ಹೋಗಲು – ಕಂಟ್ರೋಲ್ ಮತ್ತು ಮೇಲು ಬಾಣದ ಕೀಲಿ ಅಥವಾ ಕಂಟ್ರೋಲ್ ಅಪ್ ಆರೋ.


ಕಂಪ್ಯೂಟರ್ ಪರಿಕಲ್ಪನೆ (Computer Concepts)


ಕಂಪ್ಯೂಟರ‍್ ನ್ನು ಚಾಲನೆಗೊಳಿಸುವ ಮೊದಲು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು
I.ಮೊದಲನೆಯದಾಗಿ ಅದರ ಯಂತ್ರ ಭಾಷೆಯ ಸ್ಥೂಲ ಪರಿಚಯ ಮಾಡಿಕೊಳ್ಳುವುದು.
ಹಾಗೂ ಅದರ ಎರಡು ಸ್ಮೃತಿಕೋಶಗಳನ್ನು (memory chips) ಅರ್ಥಮಾಡಿಕೊಳ್ಳುವುದು.
ಅವು ಯಾವುವೆಂದರೆ-
೧.ರೀಡೋನ್ಲಿ ಮೆಮೊರಿ - ಇದು ಶಾಶ್ವತ ಮೆಮೊರಿ
೨. ರ‍್ಯಾಂಡಮ್  ಯಾಕ್ಸೆಸ್ ಮೆಮೊರಿ- ಇದು ತಾತ್ಕಾಲಿಕ ಮೆಮೊರಿ
ಮತ್ತು ಇವೆರಡೂ ಮೆಮೊರಿಗಳಿಗಿರುವ ವ್ಯತ್ಯಾಸ.


II. ಎರಡನೆಯದಾಗಿ ಹಾರ್ಡವೇರ‍್ ಮತ್ತು ಸಾಫ್ಟ್ ವೇರ‍್
ಮತ್ತು ಇವುಗಳಿಗಿರುವ ಸಂಬಂಧ.
೧. ಹಾರ್ಡ್‌ವೇರ‍್ ಅಂದರೆ ಬಿಡಿಭಾಗಗಳು
೨. ಸಾಫ್ಟ್ ವೇರ‍್ ಅಂದರೆ ತಂತ್ರಾಂಶಗಳು

ನಿಖರವಾಗಿ ಹಾಗೂ ನಿರ್ಧಿಷ್ಟವಾಗಿ ಹಾರ್ಡ್‌ವೇರ‍್ ಏನು ಕೆಲಸ ಮಾಡಬೇಕೆಂದು ಹೇಳುವುದೇ ಸಾಫ್ಟ್ ವೇರ‍್.

ಸಾಫ್ಟ್ ವೇರ‍್ ಗಳಲ್ಲಿ ಎರಡು ವಿಧಗಳು-
೧.ಸಿಸ್ಟಂ ಸಾಫ್ಟ್ ವೇರ‍್-ಅಂದರೆ ಯಂತ್ರ ನಿಯಂತ್ರಣ ತಂತ್ರಾಂಶ ಮತ್ತು 
೨.ಅಪ್ಲಿಕೇಷನ್ ಸಾಫ್ಟ್ ವೇರ‍್- ಅಂದರೆ ಅಳವಡಿಕೆಯ ತಂತ್ರಾಂಶ.

-ಇವುಗಳ ಬಗ್ಗೆ ಸ್ವಷ್ಟವಾಗ ತಿಳುವಳಿಕೆಯನ್ನು ಹೊಂದುವುದು.

III. ಮೂರನೆಯದಾಗಿ ಆಪರೇಟಿಂಗ್ ಸಿಸ್ಟಮ್- ಇದು ಸಮಗ್ರ ಕಾರ್ಯಾಚರಣೆಯ ತಂತ್ರಾಂಶ.
ಅಂದರೆ, ಮಾಸ್ಟರ‍್ ಕಂಟ್ರೋಲ್ ಪ್ರೋಗ್ರಾಂ.
ಇದು ಕಂಪ್ಯೂಟರ‍್ ನ ಭೌತಿಕ ಭಾಗಗಳನ್ನು (ಬಿಡಿಭಾಗಗಳು (Hardware) ನಿಯಂತ್ರಿಸುವುದಲ್ಲದೇ ಬಳಕೆದಾರನೊಡನೆ 
ಅಂದರೆ, ಕಂಪ್ಯೂಟರ‍್ ಯೂಸರ‍್ ಜೊತೆ ಸಂವಹನ ನಡೆಸುವುದು. 

(It is the Master control program of the  Computer system and becomes an interpreter between the user and that machine).

IV. ನಾಲ್ಕನೆಯದಾಗಿ  
ದತ್ತಾಂಶ- ಡೇಟಾ 
ಸಂಸ್ಕರಣೆ- ಪ್ರಾಸೆಸಿಂಗ್ ಮತ್ತು 
ಮಾಹಿತಿ-ಇನ್ ಫರ್ಮೇ಼ಷನ್

-ಇವುಗಳನ್ನು ಅರ್ಥ ಮಾಡಿಕೊಳ್ಳುವುದಲ್ಲದೇ ಅವುಗಳಿಗಿರುವ ವ್ಯತ್ಯಾಸವನ್ನು ತಿಳಿಯುವುದು.

V. ದತ್ತಾಂಶ ತುಂಬುವ ಮತ್ತು ಫಲಿತಾಂಶ ನೀಡುವ ಸಾಧನಗಳು (Input and Output Devices)
1.ದತ್ತಾಂಶ ತುಂಬುವ ಸಾಧನಗಳೆಂದರೆ-
ಮುಖ್ಯವಾಗಿ ಕೀಬೋರ್ಡ್,  ಸ್ಕ್ಯಾನರ‍್(ಇದು ಔಟ್ ಪುಟ್ ಡಿವೈಸ್ ಕೂಡ ಹೌದು), ಮೌಸ್ ಇತ್ಯಾದಿ
2.ಫಲಿತಾಂಶ ನೀಡುವ ಸಾಧನಗಳೆಂದರೆ-
ಮಾನಿಟರ‍್ ಅಂದರೆ ದರ್ಶಕ, ಪ್ರಿಂಟರ‍್ಸ್ , ಸ್ಕ್ಯಾನರ‍್ಸ ಇತ್ಯಾದಿಗಳು.

VI.ಸಂಗ್ರಾಹ್ಯ ಸಾಧನಗಳು (Storage Devices)
ಹಾರ್ಡ ಡಿಸ್ಕ್, ಸಿಡಿ, ಡಿವಿಡಿ, ಪೆನ್  ಡ್ರೈವ್ ಇತ್ಯಾದಿ.

ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ?



ಕಂಪ್ಯೂಟರ್ ಕಂಡುಹಿಡಿದ ದಿನಗಳಿಂದಲೂ ಅದನ್ನು ಚಾಲನೆಗೊಳಿಸುವ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗಿವೆ.ಪೇಪರ್, ಸ್ವಿಚ್ ಇತರೇ ಮಾಧ್ಯಮಗಳನ್ನು ಫೀಡ್ ಮಾಡುವ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಚಾಲನೆ ಮಾಡಬೇಕಾದಂತಹ ಕಾಲವೊಂದಿತ್ತು. ಇಂದು ಒಂದು ಸ್ವಿಚ್ ಅದುಮಿದರೆ ಸಾಕು, ಸೂಪರ್ ಕಂಪ್ಯೂಟರ್ ಕೂಡ ಕಾರ್ಯನಿರ್ವಹಿಸಲು ಶುರುಮಾಡ್ತದೆ. ಬೂಟ್ ಪ್ರೊಸೆಸ್  ಒಂದು ಕಾರ್ಯಕ್ರಮ. ಇದನ್ನು ಸುಲಭಗೊಳಿಸಿದರೂ ಅದೊಂದು ಕ್ಲಿಷ್ಟಕರ ಕಾರ್ಯ. ಅಂತಹ ಕೆಲಸವನ್ನು ಮಾಡಲಿಕ್ಕಾಗಿಯೇ ಅಲ್ಲವೇ ಕಂಪ್ಯೂಟರ್ ಇರೋದು.
ಮೊದಲೇ ಹೇಳಿದಂತೆ ಡೆಸ್ಕ್ ಟಾಪ್  ಕಂಪ್ಯೂಟರ್ ಇರಲಿ, ಸೂಪರ್ ಕಂಪ್ಯೂಟರ್ , ಮೊಬೈಲ್, ಪಿ.ಡಿ.ಎ ಯಾವುದೇ ಇರಲಿ ಅದರಲ್ಲಿರುವ ಲಿನಕ್ಸ್ ಬೂಟ್ ಆಗೋದು ಮಾತ್ರ  ಒಂದೇ ರೀತಿ.

ಬೂಟ್ ಪ್ರೊಸೆಸ್

ಈ ಚಿತ್ರ ನಿಮಗೆ ಲಿನಕ್ಸ್ ಬೂಟ್ ಪ್ರೊಸೆಸ್ ನ ವಿವಿಧ ಹಂತಗಳನ್ನು ತೋರಿಸುತ್ತದೆ
ನಿಮ್ಮ ಕಂಪ್ಯೂಟರಿನ ಮುಟ್ಟಿ ನೋಡಬಹುದಾದ ಎಲ್ಲ ಭಾಗಗಳು (physical components) ಹಾರ್ಡ್ ವೇರ್ ಗಳು ವಸ್ತುಗಳು. ಅಂದ್ರೆ ಸಿ.ಪಿಯು ಬಾಕ್ಸ್ (ಮದರ್ ಬೋರ್ಡ್,ಪ್ರೊಸೆಸರ್, ಪ್ಲಾಪಿ ಡಿಸ್ಕ್, ಸಿ.ಡಿ/ಡಿ.ವಿ.ಡಿ, ಹಾರ್ಡ್ ಡಿಸ್ಕ್, ಮೆಮೊರಿ, ವಿಡಿಯೋ ಕಾರ್ಡ್, ಆಡಿಯೋ ಕಾರ್ಡ್, ನೆಟ್ ವರ್ಕ್ ಕಾರ್ಡ್ ಇತ್ಯಾದಿಗಳು ಇರುವ ಬಾಕ್ಸ್. ಇದಕ್ಕೆ ಇತರೆ ಹಾರ್ಡ್ ವೇರ್ ಗಳು ಜೋಡಣೆಯಾಗಿರುತ್ತವೆ), ಮೌಸ್, ಕೀಬೋರ್ಡ್, ಮಾನೀಟರ್, ಪ್ರಿಂಟರ್ ಇತ್ಯಾದಿ. ಪವರ್ ಬಟನ್ ಅದುಮಿದಾಕ್ಷಣ ಇವೆಲ್ಲಾ ಒಂದಕ್ಕೊಂದು ಮಾತಾಡ್ಕೊಂಡು ಕೆಲಸ ಮಾಡಲು ತಯಾರಾಗ್ತವೆ ಅಲ್ವೇ? ಇದಕ್ಕೆ ಕಾರಣ ಬಯೋಸ್. ಪವರ್ ಆನ್ ಮಾಡಿದಾಕ್ಷಣ ಇದು ಕಾರ್ಯೋನ್ಮುಖವಾಗುತ್ತದೆ.

ಬಯೋಸ್ ಅಂದರೇನು?

ಬಯೋಸ್(BIOS) ಎಂಬುದು ಬೇಸಿಕ್ ಇನ್ ಪುಟ್/ಔಟ್ ಪುಟ್ ಸಿಸ್ಟಮ್ (Basic Input/Output System) ಎಂಬುದರ ಸಂಕ್ಷಿಪ್ತರೂಪ. ಇದು ನಿಮ್ಮ ಕಂಪ್ಯೂಟರ್ ಚಾಲನೆಯಾಗಿ ಕೆಲಸ ಮಾಡಲು ಬೇಕಾದ ವಿದ್ಯುನ್ಮಾನ ಆದೇಶಗಳ/ಸಂಕೇತಗಳ (electronic instructions) ಒಂದು ಗುಂಪು. ಬಯೋಸ್ ನಿಮ್ಮ ಕಂಪ್ಯೂಟರಿನ ಮದರ್ ಬೋರ್ಡ್ ಒಳಗೆ ಒಂದು ಸಣ್ಣ ಸ್ಮೃತಿ ಕೋಶದಲ್ಲಿ (computer chip) ಅಡಗಿ ಕುಳಿತಿದೆ. ಇದು ನಿಮ್ಮ ಇತರೆ ಡ್ರೈವ್ ಗಳಿಗಿಂತ ಹೆಚ್ಚು ಕಾಲ ಉಳಿಯುವಂತೆ ತಯಾರಿಸಲಾಗಿದೆ.

ಬಯೋಸ್ ನ ಮುಖ್ಯ ಕೆಲಸ ಏನು?

ಪೋಸ್ಟ್ (POST – power-on self test) ಅನ್ನುವ ಪ್ರೊಗ್ರಾಮ್ ಗೆ ಸಂಕೇತಗಳನ್ನು ಕಳಿಸೋದು. ಅಂದರೆ ನೀವು ಕಂಪ್ಯೂಟರನ್ನು ಚಾಲನೆ ಮಾಡಿದ ತಕ್ಷಣ ಕಾಣುವ ಮೊದಲ ಪ್ರೋಗ್ರಾಮ್ ಅಥವಾ ಕಪ್ಪು ಬಣ್ಣದ ಪರದೆಯಲ್ಲಿ ನಡೆಯುವ ಮೊದಲ ಕೆಲಸ. ಇದು ಕಂಪ್ಯೂಟರನ ಸುಲಲಿತ ಚಾಲನೆಗೆ ತನ್ನಲ್ಲಿರಬೇಕಾದ ಎಲ್ಲ ಅಗತ್ಯ ಹಾರ್ಡ್ ವೇರ್ ಗಳು (ಮೆಮೊರಿ, ಕೀ ಬೋರ್ಡ್ ಇತ್ಯಾದಿ) ಇವೆಯೇ ಇಲ್ಲವೇ ಅನ್ನುವುದನ್ನು ತನ್ನಂತಾನೆ ಪರೀಕ್ಷಿಸಿ ಕೊಳ್ಳಲು (ಸ್ವಪರೀಕ್ಷೆ) ಇರುವ ಸಣ್ಣ ಪ್ರೊಗ್ರಾಮ್. ಹಾರ್ಡ್ವೇರ್ ಗಳಲ್ಲಿ ಏನಾದರೂ ತೊಂದರೆ ಇದ್ದರೆ, ಬಯೋಸ್ ಇದನ್ನು ನಮಗೆ ಅರ್ಥವಾಗುವಂತಹ ಸಂದೇಶವನ್ನು ನೀಡುವಂತೆ ಕಂಪ್ಯೂಟರ್ ಗೆ ಆದೇಶಿಸುತ್ತದೆ. ಈ ಸಂದೇಶಗಳು ನಮಗೆ ಬೀಪ್ (BEEP) ಗಳಿಂದ ಕೂಡಿದ ಸದ್ದಿನ ಮೂಲಕ ಕೇಳಿ ಬರುತ್ತವೆ.
ಇದೇ ಬಯೋಸ್, ನಿಮ್ಮ ಕಂಪ್ಯೂಟರ್ ನ ನಿರ್ಣಾಯಕ ಅಂಗಗಳಾದ ಡ್ರೈವ್ ಗಳು, ಮೆಮೋರಿಗಳು ಆಪರೇಟಿಂಗ್ ಸಿಸ್ಟಂ ಅನ್ನು ಲೋಡ್ ಮಾಡಲು ಬೇಕಾದ ಮೂಲ ಮಾಹಿತಿಯನ್ನು ಕಳಿಸುತ್ತದೆ. ಈ ಮೂಲ ಮಾಹಿತಿಗಳು ಮತ್ತು ಪೋಸ್ಟ್ ಪರೀಕ್ಷೆ ಮುಗಿದ ನಂತರ, ಆಪರೇಟಿಂಗ್ ಸಿಸ್ಟಂ ನಿಮ್ಮ ಕಂಪ್ಯೂಟರಿನ ಒಂದು ಡ್ರೈವ್ ನ ಮೂಲಕ ಲೋಡ್ ಆಗಲು (ಚಾಲನೆಯಾಗಲು) ಶುರು ಮಾಡುತ್ತದೆ.
ಕಂಪ್ಯೂಟರಿನ ಬಳಕೆದಾರರಾದ ನಾವು, ಬಯೋಸನ್ನು ನಮಗೆ ಬೇಕಿರುವ ಡ್ರೈವ್ ನ ಮೂಲಕ ಆಪರೇಟಿಂಗ್ ಸಿಸ್ಟಂ ಅನ್ನು ಲೋಡ್ ಮಾಡುವ ಹಾಗೆ ತಯಾರು ಮಾಡಿಕೊಳ್ಳಬಹುದು. ಬಯೋಸ್ ನ ಕಾನ್ಫಿಗರೇಷನ್ ಪರದೆ (configuration screen) ಮೂಲಕ ನಾವಿದನ್ನು ಸಾಧಿಸಬಹುದು. ಈ ಪರದೆಯನ್ನು ಕಂಪ್ಯೂಟರ್ ಚಾಲನೆ ಆಗುತ್ತಿರುವಾಗ “F10″ ಅಥವಾ “DEL” ಎನ್ನುವ ವಿಶೇಷ ಕೀ ಗಳನ್ನು ಕೀಲಿಸುವುದರಿಂದ ಪ್ರವೇಶಿಸಬಹುದು. ನಿಮ್ಮ ಕಂಪ್ಯೂಟರಿನ ಕಂಪನಿಯವರು ನೀಡಿರುವ ಕೈಪಿಡಿ (manual) ನಿಮಗೆ ಈ “ವಿಶೇಷ ಕೀ” ಬಗ್ಗೆ ತಿಳಿಸುತ್ತದೆ ಅಥವಾ POST ಪರದೆಯನ್ನು ನೀವು ಗಮನವಿಟ್ಟು ನೋಡಿದರೆ ಅಲ್ಲಿ ಇದರ ಮಾಹಿತಿ ಸಿಗುತ್ತದೆ. ನಿಮ್ಮ ಕಂಪ್ಯೂಟರ್ ನಿಮಗೆ ಇದನ್ನು ಓದಲು ಸಾಕಷ್ಟು ಸಮಯ ನೀಡುತ್ತಿಲ್ಲವೆಂದಾದರೆ “Tab” ಕೀ ಯನ್ನು ಕಂಪ್ಯೂಟರ್ ಚಾಲನೆ ಮಾಡಿದಾಕ್ಷಣ ಒತ್ತಿ.
ನೀವು ಬಯೋಸ್ ನ ವಿನ್ಯಾಸ ಪರದೆಯನ್ನು ಪ್ರವೇಶಿಸಿದ ನಂತರ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಸಿ.ಡಿ/ಡಿ.ವಿ.ಡಿ ಯಿಂದ ಆಪರೇಟಿಂಗ್ ಸಿಸ್ಟಂ ಶುರುವಾಗಬೇಕು ಅನ್ನುವ ನಿರ್ದೇಶನವನ್ನು ಬಯೋಸ್ ಗೆ ನೀಡುವುದು. ಇದರ ಬಗ್ಗೆ ಕೂಡ ಹೆಚ್ಚಿನ ಮಾಹಿತಿಯನ್ನು ನಿಮ್ಮ ಕಂಪ್ಯೂಟರಿನ ಕೈಪಿಡಿಯಲ್ಲಿ ಪಡೆಯಬಹುದು. ಇಲ್ಲಾಂದ್ರೆ, ಬಯೋಸ್ ನ ಪರದೆಯಲ್ಲಿರುವ ಅಂಶಗಳನ್ನು ಓದಿಅರೆ ನೀವು “Boot Options” ಎನ್ನುವ ಒಂದು ವಿಭಾಗಕ್ಕೆ ಒಮ್ಮೆ ಬರುತ್ತೀರ. ಬಯೋಸ್ ನಲ್ಲಿ ನೀವೇನಾದರೂ ತಪ್ಪು ಮಾಡಿದಿರಿ ಅಂತಾದ್ರೆ, “Esc” ಕೀ ಒತ್ತಿ ನೀವು ಮಾಡಿದ ಬದಲಾವಣೆಗಳನ್ನು ಬಯೋಸಿನಲ್ಲಿ ಉಳಿಸದೆ ಆಚೆ ಬನ್ನಿ. ಬೇರೆ ಬೇರೆ ಕಂಪ್ಯೂಟರಿನ ಬಯೋಸ್ ನಿಮಗೆ ಬೇರೆ ಬೇರೆ ರೀತಿ ಕಂಡುಬರಬಹುದು. ಇದು ಬಯೋಸ್ ನ ಆವೃತ್ತಿ (version) ಯನ್ನು ಆಧರಿಸಿರುತ್ತದೆ ಅಥವಾ ನಿಮ್ಮ ಕಂಪ್ಯೂಟರ್ ಕಂಪನಿ ಉಪಯೋಗಿಸುತ್ತಿರುವ ಬಯೋಸ್ ಬೇರೆಯದಾಗಿರಬಹುದು. (ಅದಕ್ಕಾಗಿ ಕೈಪಿಡಿ ನಿಮ್ಮ ಜೊತೆಯಲ್ಲಿದ್ದರೆ ಒಳ್ಳೆಯದು) .
ಹೆಚ್ಚಿನ ಮಾಹಿತಿ
ಇತ್ತೀಚೆಗೆ ಬಯೋಸ್ ಪ್ಲಾಶ್- ಮೆಮೊರಿ ಎಂಬ ಚಿಪ್ ನಲ್ಲಿ (ಸ್ಮೃತಿ ಕೊಶ ) ಬರುತ್ತಿರುವುದರಿಂದ, ನಿಮ್ಮ ಕಂಪ್ಯೂಟರ್ ಕಂಪನಿ ಹೊಸ ಬಯೋಸ್ ಅನ್ನು ಬಿಡುಗಡೆ ಮಾಡಿದ್ರೆ ಅದನ್ನು ನಿಮ್ಮ ಬಯೋಸ್ ಚಿಪ್ಪಿನಲ್ಲೂ ಅಪ್ ಡೇಟ್ (update) ಮಾಡಿಕೊಳ್ಳಲು ಸಾಧ್ಯವಿದೆ.ಇದರಿಂದ ಹಳೆ ಬಯೋಸ್ ನಲ್ಲಿರೋ ನ್ಯೂನ್ಯತೆಗಳನ್ನು ಸರಿಪಡಿಸಲು ಇಲ್ಲವೇ ಹೊಸ ಅಂಶಗಳನ್ನು ಸೇರಿಸಲು ಸಾಧ್ಯವಾಗುತ್ತಿದೆ. ಈ ಕ್ರಿಯೆ ನಿಮ್ಮ ಬಯೋಸ್ ನ ಆಯಸ್ಸನ್ನು ಹೆಚ್ಚಿಸಿ, ನಿಮ್ಮ ಹಾರ್ಡ್ವೇರ್ ಗಳು ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
ಇದೆಲ್ಲಾ ಸರಿ, ನಾವ್ಯಾಕೆ ಇದನ್ನೆಲ್ಲಾ ತಿಳ್ಕೋಬೇಕು ಅಂತೀರಾ? ಯಾವುದೇ ಆಪರೇಟಿಂಗ್ ಸಿಸ್ಟಂ ಇರಲಿ, ಅದು ಹೇಗೆ ಕೆಲಸ ಮಾಡ್ತದೆ ಅಂತ ಗೊತ್ತಿಲ್ಲದೇ ಇದ್ರೆ ಮುಂದೆ ಯಾವುದಾದರೊಂದು ತೊಂದರೆ ಬಂದಾಗ ಆ ತೊಂದರೆಯನ್ನು ನಿವಾರಿಸೋದು ಸಾಧ್ಯವಾಗಲ್ಲ. ಕೆಲ ಸಲ ವಿಂಡೋಸ್ ನಲ್ಲಿ ತೊಂದರೆಯಾದ್ರೆ ಅದನ್ನು ಸರಿಪಡಿಸುವುದರ ಬದಲು ಸಂಪೂರ್ಣವಾಗಿ ರೀಇನ್ಟಾಲ್ ಮಾಡಿರ್ಬೇಕಲ್ಲ ನಿಮ್ಮಲ್ಲಿ ಕೆಲವರು? ಇದು ನಿಮ್ಮ ಅಮೂಲ್ಯ ಫೈಲ್ ಗಳನ್ನು ಹಾಳು ಮಾಡಿರಬಹುದು. ಇದೇನಾದರೂ ಸರ್ವರ್ ಗಳಲ್ಲಿ ಆದರೆ ಏನಾಗಬಹುದು ಅಂತ ಒಮ್ಮೆ ಯೋಚಿಸಿ ನೋಡಿ. ಇದನ್ನು ತಪ್ಪಿಸಬೇಕಾದ್ರೆ ಬೂಟ್ ಪ್ರೊಸೆಸ್ ಇತ್ಯಾದಿಗಳ ಬಗ್ಗೆ ತಿಳಿದು ಕೊಳ್ಳೋದು ಮುಖ್ಯ. ಇದು ತುಂಬಾ ಸುಲಭ ಸಹ.ಮುಂದಿನ ಸಾಲುಗಳು ನಿಮಗೆ ಅದರ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿಸುತ್ತವೆ.
ಕಂಪ್ಯೂಟರನ್ನು ಆನ್ ಮಾಡಿದಾಗ ಅಥವಾ ರಿ-ಸೆಟ್ ಮಾಡಿದಾಗ, ಪ್ರೊಸೆಸರ್ ಒಂದು ನಿರ್ದಿಷ್ಟ ಮೆಮೋರಿ ಲೊಕೇಷನ್ ನಿಂದ ತಂತ್ರಾಂಶದ ಸಾಲುಗಳನ್ನು ಕಾರ್ಯಗತಗೊಳಿಸುತ್ತದೆ. ಪರ್ಸನಲ್ ಕಂಪ್ಯೂಟರಲ್ಲಿ ಇದು ಬಯೋಸ್ ನಲ್ಲಿರುತ್ತದೆ. ಪ್ರೊಸೆಸರ್ ನಲ್ಲಿರುವ CPU (ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್) ಈ ಕಾರ್ಯಕ್ರಮವನ್ನು ಫ್ಲಾಷ್ / ROM ಚಿಪ್ ನ ಒಂದು ಮೆಮೋರಿ ಚಿಪ್ ನಿಂದ ಪಡೆದು ಕಾರ್ಯಗತಗೊಳಿಸುತ್ತದೆ.ಇದೆಲ್ಲಾ ಒಂದೇ ಫಲಿತಾಂಶವನ್ನು ನೀಡುತ್ತದೆ. ಒಟ್ಟಿನಲ್ಲಿ ಬಯೋಸ್ ಸಿಸ್ಟಂ ಬೂಟ್ ಆಗಲು ಬೇಕಿರುವ ಎಲ್ಲ ಹಾರ್ಡ್ವೆರ್ ಡಿವೈಸ್ ಗಳನ್ನ ಕಂಡುಕೊಳ್ಳಬೇಕು (ಬಯೋಸ್ ಹ್ಯಾಗೆ ಕಾರ್ಯನಿರ್ವಹಿಸುತ್ತದೆ ಅನ್ನುವುದು ಇನ್ನೂ ಕುತೂಹಲಕಾರಿ) ಹಾಗೂ ಯಾವ ಮಾಧ್ಯಮವನ್ನು (ಡಿವೈಸ್) ಬೂಟ್ ಮಾಡಬೇಕು (ಅಂದ್ರೆ ಎಲ್ಲಿ ನಿಮ್ಮ ಆಪರೇಟಿಂಗ್ ಸಿಸ್ಟಂ ಇದೆ) ಅನ್ನುವುದನ್ನು ತಿಳಿದುಕೊಳ್ಳಬೇಕು.

ಮೊದಲ ಹಂತದ ಬೂಟ್ ಲೋಡರ್

ಸರಿ, ಬಯೋಸ್ ಬೂಟ್ ಡಿವೈಸ್ ಕಂಡುಕೊಂಡದ್ದಾಯಿತು. ಈಗ ಮೊದಲ ಹಂತದ ಬೂಟ್ ಲೋಡರ್ ಅನ್ನು ಕಂಪ್ಯೂಟರಿನಲ್ಲಿರುವ ತಾತ್ಕಾಲಿಕ ಸ್ಮೃತಿ ಕೋಶ (RAM) ಮೆಮೋರಿಗೆ ಲೋಡ್ ಮಾಡಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಈ ಬೂಟ್ ಲೋಡರ್ ನಿಮ್ಮ ಹಾರ್ಡ್ ಡಿಸ್ಕ್ / USB ಡಿಸ್ಕ್, ಫ್ಲಾಪಿ ಡಿಸ್ಕ್ ಮುಂತಾದವುಗಳ ಮೊದಲ ಮೆಮೋರಿ ಲೊಕೇಷನ್ (MBR – Master Boot Record) ನಲ್ಲಿರುತ್ತದೆ. ಇದರ ಮುಖ್ಯ ಕೆಲಸ ನಿಮ್ಮ ಡಿಸ್ಕ್ ನಲ್ಲಿರೋ ಪಾರ್ಟೀಷನ್ ಗಳ ಮಾಹಿತಿಯನ್ನ ತನ್ನಲ್ಲಿಟ್ಟುಕೊಂಡು, ಯಾವ ಪಾರ್ಟೀಷನ್ ನಲ್ಲಿ ಎರಡನೇ ಹಂತದ ಬೂಟ್ ಲೋಡರ್ ಇದೆ ಅನ್ನೋದನ್ನು ತಿಳಿದು ಅದನ್ನ ಮೆಮೋರಿಗೆ ಲೋಡ್ ಮಾಡೋದು. MBR ನಲ್ಲಿ ೫೧೨ bytes ನಷ್ಟು ಮಾಹಿತಿಯನ್ನು ಮಾತ್ರ ಸಂಗ್ರಹಿಸಿಡಬಹುದು. ಆದರೆ ಇದರ ಪಾತ್ರ ಮಾತ್ರ ಬಹುಮುಖ್ಯ.

ಎರಡನೇ ಹಂತದ ಬೂಟ್ ಲೋಡರ್

ಎರಡನೇ ಹಂತದ ಬೂಟ್ ಲೋಡರ್ ಮೆಮೋರಿಗೆ ಲೋಡ್ ಆಗಿ ಕಾರ್ಯನಿರ್ವಹಿಸಲು ಶುರುಮಾಡಿದಾಗ ಅದು ನಿಮ್ಮ ಮುಂದೆ ಸ್ಲ್ಪಾಷ್ ಸ್ಕ್ರೀನ್ (Spalsh Screen)ಅನ್ನು ನಿಮ್ಮ ಮುಂದಿಡುತ್ತದೆ. ನಿಮ್ಮ ಕಂಪ್ಯೂಟರ್ ನಲ್ಲಿ ಲಿನಕ್ಸ್ ಇನ್ಸ್ಟಾಲ್ ಆಗಿದ್ದರೆ, GRUB ಅನ್ನೋ ತಂತ್ರಾಂಶದ ಸ್ಪ್ಲಾಷ್ ಸ್ಕ್ರೀನ್ ನಿಮ್ಮ ಮುಂದೆ ಲಿನಕ್ಸ್ ಮತ್ತು ಇತರೆ ಆಪರೇಟಿಂಗ್ ಸಿಸ್ಟಂಗಳನ್ನ ಆಯ್ಕೆಯನ್ನ ತೋರಿಸುತ್ತದೆ. ಕೆಳಗಿನ ಚಿತ್ರದಲ್ಲಿ ಅದನ್ನ ನೀಡಲಾಗಿದೆ.

GRUB ಎರಡನೇ ಹಂತದ ಬೂಟ್ ಲೋಡರ್

ಈ ಹಂತದಲ್ಲಿ ನೀವು ಬೂಟ್ ಆಗಬೇಕಿರುವವ ಗ್ನು/ಲಿನಕ್ಸ್ ಅನ್ನು ಆಯ್ಕೆ ಮಾಡಿಕೊಂಡಾಗ ಲಿನಕ್ಸ್ ಕರ್ನೆಲ್ ಇಮೇಜ್ ಮತ್ತು ಆಪ್ಶನಲ್ ಪ್ರಾರಂಭಿಕ RAM ಡಿಸ್ಕ್ (ಇದರಲ್ಲಿ ತಾತ್ಕಾಲಿಕ root ಫೈಲ್ ಸಿಸ್ಟಂ ಇರುತ್ತದೆ) ಅನ್ನು ನಿಮ್ಮ ಕಂಪ್ಯೂಟರಿನ ಮೆಮೋರಿಗೆ ಲೋಡ್ ಮಾಡಲಾಗುತ್ತದೆ. ಗ್ನು/ಲಿನಕ್ಸ್ ಹೃದಯ ಭಾಗ ಎನ್ನಬಹುದಾದ “ಕರ್ನೆಲ್” ಇಮೇಜ್ ಮೆಮೋರಿಗೆ ಲೋಡ್ ಆದ ನಂತರ ಗ್ರಬ್ (ಎರಡನೇ ಹಂತದ ಬೂಟ್ ಲೋಡರ್) ಬೂಟ್ ಪ್ರೊಸೆಸ್ ನ ನಿಯಂತ್ರಣವನ್ನು ಕರ್ನೆಲ್ ಇಮೇಜಿಗೆ ನೀಡುತ್ತದೆ. ಕಂಪ್ರೆಸ್ ಆಗಿದ್ದ ಕರ್ನೆಲ್ ಈ ಹಂತದಲ್ಲಿ ಡಿ-ಕಂಪ್ರೆಸ್ ಆಗಿ, ಮುಂದಿನ ಕಾರ್ಯಕ್ಕೆ ತನ್ನನ್ನು ತಾನು ಅಣಿ ಮಾಡಿಕೊಳ್ಳುತ್ತದೆ (Kernel Initialization Phase). ಈ ಹಂತದಲ್ಲಿ ಎರಡನೇ ಹಂತದ ಬೂಟ್ ಲೋಡರ್ ನಿಮ್ಮ ಸಿಸ್ಟಂನ ಹಾರ್ಡ್ವೇರ್ ಅನ್ನು ಎಣಿಸಿ, ಚೆಕ್ ಮಾಡುವುದರೊಂದಿಗೆ, root ಡಿವೈಸ್ ಅನ್ನು ಮೌಂಟ್ ಮಾಡುತ್ತದೆ (ಹಾರ್ಡಿಸ್ಕ್ ಅನ್ನು ಉಪಯೋಗಿಸಲಾಗುವಂತೆ ಅಣಿ ಮಾಡುವ ಕೆಲಸ mount) ಹಾಗು ಹಾರ್ಡ್ವೇರ್ ಗಳು ಕಾರ್ಯನಿರ್ವಹಿಸಲಿಕ್ಕೆ ಬೇಕಾದ ಕರ್ನೆಲ್ ಮಾಡ್ಯೂಲ್ ಗಳನ್ನು (ವಿಂಡೋಸ್ ಆಪರೇಟಿಂಗ್ ಸಿಸ್ಟಂ ನಲ್ಲಿ ಡ್ರೈವರ್ ಗಳಿವೆಯಲ್ಲ ಇವನ್ನು ಅದಕ್ಕೆ ಹೋಲಿಸಬಹುದು) ಮೆಮೋರಿಗೆ ಲೋಡ್ ಮಾಡಲಾಗುತ್ತದೆ.

ಲಾಗಿನ್ ಸ್ಕ್ರೀನ್

ಇದಾದ ನಂತರವೇ ಬಳಕೆದಾರನಿಗೆ ಬೇಕಾದ ಮೊದಲನೇ ಕಾರ್ಯಕ್ರಮ ಶುರುವಾಗುವುದು. ಇದೇ Init ಅಥವಾ user-space ಪ್ರೋಗ್ರಾಮ್. ಮುಂದೆ ಇನ್ನೂ ಕ್ಲಿಷ್ಟಕರವಾದ ಸಿಸ್ಟಂ ಪ್ರೊಗ್ರಾಮ್ ಗಳು ತಮ್ಮ ಕೆಲಸಕ್ಕೆ ಅಣಿಯಾಗುತ್ತವೆ. ಮತ್ತು ನಿಮಗೆ ಕಂಪ್ಯೂಟರ್ ಉಪಯೋಗಿಸಲು ಸಾಧ್ಯವಾಗುತ್ತವೆ. ಈ ಹಂತದಲ್ಲಿ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಲಾಗಿನ್ ಸ್ಕ್ರೀನ್ ಕಾಣಬಹುದು.
ಈಗ ಕಂಪ್ಯೂಟರ್ ಬಳಕೆದಾರನ ಪ್ರವೇಶಪದ (Login Name) ಹಾಗು ಗುಪ್ತಪದ(Password) ಬಳಸಿ ಲಾಗಿನ್ ಆಗಬಹುದು.

ಡೆಸ್ಕ್ ಟಾಪ್

ಲಾಗಿನ್ ಆದ ಬಳಿಕ ನಿಮ್ಮ ಕಂಪ್ಯೂಟರ್ ನ ಸ್ಕ್ರೀನ್ ಈ ಕೆಳಕಂಡಂತೆ ಕಾಣಿಸುತ್ತದೆ.
ಈಗ ನಿಮ್ಮ ಕಂಪ್ಯೂಟರಿನ ಮೌಸ್ ಬಳಸಿ ಡೆಸ್ಕ್ಟಾಪ್ ಮೇಲಿರುವ ಐಕಾನ್ ಗಳು, ಮೆನು ಇತ್ಯಾದಿಗಳನ್ನು ಕ್ಲಿಕ್ಕಿಸಿ ಅದರ ಬಗ್ಗೆ ಹೆಚ್ಚಿನ ವಿಷಯವನ್ನು ಅರಿಯಬಹುದು. ಇವೇ ನಿಮ್ಮನ್ನು ಕಂಪ್ಯೂಟರಿನೊಂದಿಗೆ ವ್ಯವಹರಿಸಲು ಸಹಕರಿಸುವ ವ್ಯವಸ್ಥೆಗಳು.