1) ಪಿ.ವಿ.ಶ್ರೀನಿವಾಸ
2) ಪುರಂ, ಕಾಮಸಮುದ್ರ ಹೋಬಳಿ
3) 42ವರ್ಷ
4) ವೆಂಕಟೇಶಪ್ಪ ಪಿ.ಎಂ
5) ಶಾಂತಮ್ಮ
6) ಎಂ.ಎ ಪದವಿ
7) ಸರ್ಕಾರಿ ಪ್ರಾ.ಶಿಕ್ಷಕ
8 ) ಕವನ ರಚನೆ
ಪುರಂ ಗ್ರಾಮ ಬೋಡಗುರ್ಕಿ ಅಂಚೆ ಕಾಮಸಮುದ್ರಂ ಹೋ..
ಬಂಗಾರಪೇಟೆ ತಾ...ಕೋಲಾರ ಜಿಲ್ಲೆ 9902531303
*ನನ್ನಶಾಲೆ*
ನಗುಮೊಗದಿ ಕುಣಿಯುತ್ತ ತೆರಳೋಣ ಶಾಲೆಗೆ
ನಮ್ಮಯ ನಂಬಿಹ ಮಕ್ಕಳ ಕರೆಯೋಣ ಶಾಲೆಗೆ
ಅಕ್ಕರೆಯ ಪ್ರೀತಿ ಮಮತೆ ತೋರುತಲಿ
ಎಲ್ಲರೂ ಸರಸರನೆ ನಡೆಯೋಣ ಶಾಲೆಗೆ
ಬಟ್ಟೆ ಪುಸ್ತಕವ ವಿತರಿಸಲು ಚಿಣ್ಣರಿಗೆ
ಉತ್ಸಾಹದ ನಗುವಿನಲಿ ಸಾಗೋಣ ಶಾಲೆಗೆ
ಗದ್ಯ ಪದ್ಯಗಳ ಸಾರವ ತಿಳಿಸಲು
ನಿತ್ಯವೂ ಸಮಯಕೆ ತೆರಳೋಣ ಶಾಲೆಗೆ
ಸಿಬ್ಬಂದಿ ಪೋಷಕರ ವಿಶ್ವಾಸ ಪಡೆಯಲು
ಶಕ್ತಿಮೀರಿ ನಿತ್ಯವೂ ದುಡಿಯೋಣ ಶಾಲೆಗೆ
ಚಿಣ್ಣರ ಪ್ರಜ್ವಲ ಭಾವೀ ಭವಿಷ್ಯಕೆ
ತಂತ್ರಜ್ಞಾನವ ಅಳವಡಿಸೋಣ ಶಾಲೆಗೆ
ದೂರದೃಷ್ಟಿಗೆ ದುಡಿಯುತ ನಾವು
ಸಾಧನೆ ತೋರುತಲಿ ಕೀರ್ತಿ ತರೋಣ ಶಾಲೆಗೆ
ಎಲ್ಲ ಮಕ್ಕಳ ಗುಣಮಟ್ಟದ ಕಲಿಕೆಗೆ
ಬುನಾದಿ ಸಾಮರ್ಥ್ಯ ಸೇರಿಸೋಣ ಶಾಲೆಗೆ
ಯೋಜನೆ ಅನುಷ್ಠಾನಕೆ ಯೋಚಿಸುತ
ಶ್ರಮವಹಿಸಿ ನಿತ್ಯ ದುಡಿಯೋಣ ಶಾಲೆಗೆ
ಏನೇ ಇರಲಿ ಏನೆಲ್ಲಾ ಬರಲಿ ನಡೆಯೋಣ ಶಾಲೆಗೆ
ಶ್ರೀನಿವಾಸನ ನಂಬುತ ಸದಾ ಹೋಗೋಣ ಶಾಲೆಗೆ
*✍ಪಿ.ವಿ.ಶ್ರೀನಿವಾಸ*
*ಪುರಂ, ಕೆಜಿ.ಎಫ್*
👤👤👤👤👤👤👤👤👤👤👤👤👤👤👤
*ಸಂಭ್ರಮ*
ಮನೆಯಲಿ ತುಂಬಿದೆ ಸಂತಸದ ಕ್ಷಣ
ಅನುಭವಿಸಲು ಬೇಕಾಗಿಲ್ಲ ಲಕ್ಷ ಹಣ
ಹೃದಯವರಳಿ ಉಕ್ಕುತಿದೆ ನನ್ನ ಖುಷಿ
ಶಿಕ್ಷಣದಿ ಗುರಿ ಮುಟ್ಟಿದೆ ಮನೆಯ ಸಸಿ
💐💐💐💐💐💐💐💐💐
ಬೀಗುತಿರುವೆನು ಆನಂದದ ಅಲೆಗಳಲಿ
ಅರಳಿನಿಂತ ಸುಮವ ಕಾಣುವ ಗಳಿಗೆಯಲಿ
ಖುಷಿಯೊಡನೆ ಮಿಂದೇಳುವ ಸಂಭ್ರಮ
ಮನೆಯಲ್ಲಿ ನಗುವ ಸವಿಯ ಸಮಾಗಮ
*✍ಪಿ.ವಿ.ಶ್ರೀನಿವಾಸ*
*ಪುರಂ , ಕೆ.ಜಿ.ಎಫ್*
👤👤👤👤👤👤👤👤👤👤👤👤👤👤👤
*ಚಿಂತೆಯಸುಳಿ*
ತಲೆ ತುಂಬೆಲ್ಲ ಕಾಡುತಿಹ ಸಾವಿರಾರು ಯೋಚನೆಗಳ
ಪರಿಹರಿಸಲು ಹೊರಟಿರುವೆ ಏನೂ ಇಲ್ಲದೆ ಬರಿಗೈಲಿ
ಮುಟ್ಟುವೆನೇನೊ ಗೊತ್ತಿಲ್ಲ ಸಾಗಿರುವ ಗುರಿಯನು
ಸಾಗುತಿರುವೆ ಮುಟ್ಟಲು ಮನದೊಳಗಿನ ಬಯಕೆಯನು
ಎದ್ದಾಗ ಕುಳಿತಾಗ ಮನಸೆಲ್ಲ ಸಿಲುಕಿದೆ ಸುಳಿಯಲಿ
ಬೆವೆತು ಕರಕಲಾಗಿದೆ ಸಂಬಂಧಿಕರೂ ನೋಡದ ಹಾಗೆ
ಸಮಾಜಕೆ ಅಂಜುತ ಧೃತಿಗೆಡದೆ ಬದುಕಿರುವೆ ಈತನಕ
ಹೆದರಿ ಚಿಂತೆಗೆ ಮುಖ ಮುಚ್ಚಿಕೊಳ್ಳಲಾರೆ ಖಂಡಿತ
ಮೈಯೆಲ್ಲ ಸವಿದೋದರೂ ಸಾಲದ ಹೊರೆ ಸವಿದಿಲ್ಲ
ಬೇಡಿ ಬೇಡಿ ಸಾಕಾದರೂ ಮರೆತಿಲ್ಲ ಸಾಲವ ತೀರಿಸಲು
ಮಳೆಬಿಲ್ಲಂತೆ ಸುಂದರ ದಿನಕಾಗಿ ಕಾದಿರುವೆ ಕದ ತೆರೆದು
ಸುದಿನಕ್ಕಾಗಿ ಬೇಡದ ದೇವರಿಲ್ಲ ಮಾಡದ ಪೂಜೆಯಿಲ್ಲ
*✍ ಪಿ.ವಿ.ಶ್ರೀನಿವಾಸ*
*ಪುರಂ,ಕೆ.ಜಿ.ಎಫ್*
👤👤👤👤👤👤👤👤👤👤👤👤👤👤👤
*ಕೈ ಹಿಡಿ ತಾರೆ*
ಮನದುಂಬಿದೆ ಕೋಟಿ ಆಸೆಯು ನಿನ್ನ ಸೇರಲು
ಕಾಲದ ಕರೆಗೆ ಕಣ್ಣುಚ್ಚದೆ ಕಾದಿರುವೆ ನಿನ್ನ ಸೇರಲು
ಹೃದಯದಿ ಪ್ರೀತಿಸುತ ಕನಸು ಕಂಡಿರುವೆ
ಗುಲಾಬಿ ಹಿಡಿದು ಬಳುಕುತ ಬಾ ನನ್ನ ಸೇರಲು
ದೇವರಂತೆ ಸದಾ ಕಾಯುತಿರುವೆ ಪ್ರೇಯಸಿ
ಅಪ್ಪಿ ಬಿಗಿದಪ್ಪಲು ಕುಣಿದು ಬಾ ಎನ್ನ ಸೇರಲು
ಮರದ ಮರೆಯಲಿ ಕುಳಿತು ನೋಡುವೆ
ಕೆನ್ನೆಯರಳಿಸಿ ನಗುತಲಿ ಬಾ ಪ್ರಿಯಕರನನ್ನ ಸೇರಲು
ಜೀವನದಿ ಹಾರೋಣ ಬಣ್ಣದ ಹಕ್ಕಿಗಳಂತೆ
ರಂಗಿನ ರೆಕ್ಕೆಯ ಬಿಚ್ಚುತ ಹಾರು ನಲ್ಲನನ್ನ ಸೇರಲು
ನಿನ್ನಯ ಮೈಬಣ್ಣ ಹೊಳೆಯುತ್ತಿದೆ ಮಳೆಬಿಲ್ಲಿನಂತೆ
ತಡ ಮಾಡದೆ ರಂಗು ರಂಗಾಗಿ ಬಾ ನಿನ್ನವನನ್ನ ಸೇರಲು
ಸದಾ ಕೈ ಹಿಡಿದು ಮಗುವಂತೆ ನೋಡಿಕೊಳ್ಳುವೆ
ಅಂಬೆಗಾಲಲಿ ತೆವಳುತ್ತಾ ಬಾ ಸೀನನನ್ನ ಸೇರಲು
*✍ಪಿ.ವಿ.ಶ್ರೀನಿವಾಸ*
*ಪುರಂ,ಕೆ.ಜಿ.ಎಫ್*
👤👤👤👤👤👤👤👤👤👤👤👤👤👤👤
*ಯೋಗ*
ಮಾಡುತಿರಲು ದಿನವೂ ಯೋಗ
ಸುಳಿಯುವುದಿಲ್ಲ ನಿಮ್ಮ ಬಳಿ ರೋಗ
ನಿತ್ಯವೂ ಮಾಡಿದರೆ ಸೂರ್ಯ ನಮಸ್ಕಾರ
ನಿಮ್ಮಯ ಆತ್ಮದಲಿ ಹುಕ್ಕುವುದು ಚಮತ್ಕಾರ
ಅಭ್ಯಾಸವ ಮಾಡುತಿರೆ ಶ್ವಾಸಕ್ರಿಯೆ
ಅಂಗಾಗದಿ ನಡೆಯಲಿದೆ ಸಹಜ ಕ್ರಿಯೆ
ದೇಹವು ಕೂಡಿದ್ದರೆ ಸದಾ ಲವಲವಿಕೆ
ಮುಂದೆ ಆಗುವೆ ಉತ್ತಮ ಪಳೆಯುಳಿಕೆ
ಸತತ ಮಾಡಿದರೆ ದೇಹಕೆ ಕಸರತ್ತು
ದೊರೆಯಲಿದೆ ಒಡಲಿಗೆ ಮಸಲತ್ತು
ಜೀವನಕೆ ಯೋಗವೊಂದು ಮಹಾ ಭಾಗ್ಯ
ರೂಡಿಸಿ ಮಾಡುತಿರೆ ಅದುವೆ ಸೌಭಾಗ್ಯ
ಕೂಡಲೆ ಎಲ್ಲರು ಸೇರಿರಿ ಪತಂಜಲಿ
ಅನಾರೋಗ್ಯಕ್ಕೆ ಹಾಡಿರಿ ತಿಲಾಂಜಲಿ
ಜೀವನದಿ ಯೋಗವೊಂದು ಸುಮಾರ್ಗ
ಅಭ್ಯಾಸದಿ ಸಿಗುವುದು ಮನುಕುಲಕೆ ಸನ್ಮಾರ್ಗ
*ಪಿ.ವಿ.ಶ್ರೀನಿವಾಸ*
*ಪುರಂ,ಕೆ.ಜಿ.ಎಫ್*
👤👤👤👤👤👤👤👤👤👤👤👤👤👤👤
*ಇಷ್ಟಕ್ಕೇಕೆ*
ಕೊಳೆಯುತಿದೆ ತೊಲಗಟ್ಟಲೆ ಮನೇಲಿ ಕನಕ
ಧರಿಸಲುಟ್ಟಿಲ್ಲ ನೆಟ್ಟಗೆ ಕಿವಿ ಮೂಗುಗಳು
ಹೇಗೆ ಮಿಂಚಲಿ ಎಲ್ಲರೆದುರು ಸಮಾಜದಲಿ
ಎಕರೆಗಟ್ಟಲೆ ಬೆಳೆದು ನಿಂತಿದೆ ಧಾನ್ಯ
ಆರೋಗ್ಯವೇ ಹದೆಗೆಟ್ಟಿದೆ ತಿನ್ನಲು
ಗಟ್ಟಿಮುಟ್ಟಾಗುವುದು ಕನಸು ಮಾತ್ರ
ಪ್ರಕೃತಿಯು ನೀಡಿದೆ ಸುಂದರ ವಿಸ್ಮಯ
ನನ್ನನ್ನೆ ಕಾಣಲಾಗದು ನನ್ನ ಕಣ್ಣಿಂದ
ಸಾರ್ಥಕಪಡಿಸಲೆಂತು ಈ ಜಗದೊಳಗೆ
ಮನುಜನಾಗಿ ಜನಿಸಿದೆ ಧರೆಯ ಮೇಲೆ
ಮಾಡುವುದೆಲ್ಲ ಬಾಕಿಯಿದೆ ಏನೂ ಮಾಡಲಾಗದೆ
ಇಷ್ಟಕ್ಕೇಕೆ ಬರಬೇಕಿತ್ತು ತಾಯಿಯ ಗರ್ಭದಿಂದ
ನಿಶ್ಚಯಿಸಿರುವೆ ಮರಳಲು ಮಣ್ಣಿಗೆ
ಕರೆದಿಲ್ಲ ಕಾಲಬೈರವ ಗಮನಿಸಿ ನನ್ನ
ಹೇಗೆ ನೆನಪಿಸಲಿ ನಾನು ಅವನನ್ನ ಮುಟ್ಟಿ
ಎಲ್ಲವೂ ಉಳ್ಳಂತವರೆಲ್ಲ ಕಳೆಯದಿರಿ ಕಾಲವ
ನಿತ್ಯವೂ ಅನುಭವಿಸಿ ಸಿಕ್ಕ ಸಕಲವ
ಮತ್ತೆ ಎಂದು ಲಭಿಸುವುದೊ... ಈ ಜನ್ಮ
*ಪಿ.ವಿ.ಶ್ರೀನಿವಾಸ*
*ಪುರಂ,ಕೆ.ಜಿ.ಎಫ್*
👤👤👤👤👤👤👤👤👤👤👤👤👤👤👤
*ಸ್ಲಂ*
ಜೀವನವ ಸಾಗಿಸಲು ದಿನವೂ ಪಡುತಿಹರು ಕಷ್ಟವ
ಮುಂದೊಂದು ದಿನ ದೈವ ಪಡುವನು ಇಷ್ಟವ
ಸೌಕರ್ಯಗಳ ವಂಚನೆಯಲಿ ನರಳುತಿಹರು ಸಿಲುಕಿ
ಧೈರ್ಯವ ನೀಡಬೇಕಿದೆ ನಾವೆಲ್ಲ ಅವರ ಕೈ ಕುಲುಕಿ
ಬದಲಾಗುತಿದೆ ದಿನಗಳ ಕಳೆದಂತೆ ಸ್ಲಂ
ಸರಣಿಯಾಗಿ ಕಾಡದಿರಲಿ ಅವರಿಗೆ ಪ್ರಾಬ್ಲಂ
ತರಬೇಕಿದೆ ಮನಗಳಲಿ ಜಾಗೃತಿಯ ಶಿಕ್ಷಣ
ಕಾಣಲಿಹುದು ಕುಟುಂಬಗಳಲಿ ಪ್ರಗತಿಯ ಲಕ್ಷಣ
ಸೂರೆಲ್ಲೆ ಸೋರುತಿದೆ ವಾಸಿಸಲಾಗದಂತೆ
ಆಶ್ರಯ ಮನೆ ನೀಡಬೇಕಿದೆ ಜೀವನ ಬದಲಾಗುವಂತೆ
ಅವರೂ ಮನುಜರೆಂಬ ಭಾವನೆ ಮೂಡಲಿ ಮನಸಿನಲಿ
ಅನುಕಂಪದ ಅಲೆಯನ್ನು ಹರಿಸಿರಿ ಹೃದಯಗಳಲಿ
ಅನುಕಂಪವ ನೀಡದು ಎಂದಿಗೂ ಶಾಶ್ವತ ಪರಿಹಾರ
ಆಧ್ಯತೆ ನೀಡುತ ಹೃದಯದಿ ತೋರೋಣ ಮಮಕಾರ
ಮನಸು ಮಾಡೋಣ ನಾವೆಲ್ಲ ಬಡವರ ಬಗೆಗೆ
ಹರುಷವ ನೀಡುತ ಕಾರಣರಾಗೋಣ ಮುಗ್ದರ ನಗೆಗೆ
ಸ್ಲಂಗಳೆಲ್ಲವ ಬದಲಿಸಲು ತೋರೋಣ ವಿಕಾಸಸೌಧ ನಿರ್ಮಾಣವಾಗಲಿದೆ ಭವಿಷ್ಯದಲಿ ಭವ್ಯ ವಿಧಾನಸೌಧ
*✍ಪಿ.ವಿ.ಶ್ರೀನಿವಾಸ*
*ಪುರಂ,ಕೆ.ಜಿ.ಎಫ್*