ನೌಕರ ಬಂಧು ವಾಟ್ಸಾಪ್ ಗ್ರೂಪ್ಸ್CLICK TO JOIN HERE


ಆತ್ಮೀಯರೇ ನಮಸ್ಕಾರಗಳು..
ನಾನು ಶ್ರೀ.ಅರ್ಜುನ.ಆರ್.ಮಲ್ಲೇವಾಡಿ  (ಸಹ ಶಿಕ್ಷಕರು). ನನ್ನ ಜನ್ಮಭೂಮಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮ.ನನ್ನ ಕರ್ಮಭೂಮಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸರಕಾರಿ ಪ್ರೌಢ ಶಾಲೆ ಮಂದೇವಾಲ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬ ನೌಕರರು ಪ್ರತಿ ಹಂತದಲ್ಲಿ ಪ್ರತಿಕ್ಷಣದಲ್ಲೂ ಅಪ್ಡೇಟ್ ಆಗಲೇಬೇಕು,ಇಲಾಖೆಯ ಮಾಹಿತಿ ಸಕಾಲದಲ್ಲಿ ತಲುಪದೇ ಎಷ್ಟೋ ತೊಂದರೆ ನಮ್ಮ ನೌಕರರು ಅನುಭವಿಸುತ್ತಿದ್ದಾರೆ.ಆ ತೊಂದರೆ ತಪ್ಪಿಸಲು ಮತ್ತು ವೃತ್ತಿ ದಕ್ಷತೆ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿ ಎಂಬ ಉದ್ದೇಶದಿಂದ ೨೭-೦೪-೨೦೧೫ ರಲ್ಲಿ ನನ್ನ ಮನಸ್ಸಿನ ಆಳದಲ್ಲಿ ಮೂಡಿಬಂದ ಕಲ್ಪನೆಯೇ *ನೌಕರ ಬಂಧು.* ಅಂದು ರಚಿಸಲಾದ ಈ ಗ್ರುಪ್ ಇಂದು ಹಲವಾರು ಗ್ರುಪ್ ಗಳಾಗಿ ಸುಮಾರು ೬೦೦೦ ನೌಕರರನ್ನು ಹೊಂದಿದ್ದು, ತಮ್ಮೆಲ್ಲರ ಸಹಾಯದಿಂದ ಕರ್ತವ್ಯ ನಿರ್ವಹಿಸುತ್ತಿದೆ.

"ನೌಕರ ಬಂಧು" ಇದರ ಹೆಸರೇ ಸೂಚಿಸುವಂತೆ ನಮ್ಮ ರಾಜ್ಯ ಮತ್ತು ದೇಶದ ವಿವಿಧ ಇಲಾಖೆಗಳಲ್ಲಿ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖಾ ಆಡಳಿತ ಅಧಿಕಾರಿಗಳಿಗೆ,ಶಿಕ್ಷಕರಿಗೆ,ಕ್ಲರ್ಕ್ ಗಳಿಗೆ ಮುಂತಾದ ನಮ್ಮ ನೌಕರ ಬಂಧುಗಳಿಗೆ, ಅಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೂ ಕಾಲಕಾಲಕ್ಕೆ ತಕ್ಕಂತೆ ಜಾರಿಗೆ ತರುವ ಆದೇಶಗಳು ಮತ್ತು ಬದಲಾವಣೆ ಮಾಡಲಾದ ವ್ಯವಸ್ಥೆಯ ಬಗ್ಗೆ ನಮ್ಮ ನೌಕರ ಬಂಧುಗಳಿಗೆ ತಲುಪಿಸಲೆಂದೇ ಇದನ್ನು ರಚಿಸಿಲಾಗಿದೆ.

ಇದರಲ್ಲಿ ರಾಜ್ಯದ ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅನೇಕ ಸಂಪನ್ಮೂಲ ವ್ಯಕ್ತಿಗಳು ರಾಜ್ಯದ ಮತ್ತು ದೇಶದ ಮೂಲೆಮೂಲೆಗಳಲ್ಲಿನ ಮಾಹಿತಿಗಳನ್ನು ಈ ಗ್ರುಪ್ ಗೆ ಹಂಚಿಕೊಳ್ಳುವ ಮೂಲಕ ನಮ್ಮೆಲ್ಲರ ವೃತ್ತಿ ಬದುಕಿಗೆ ತುಂಬಾ ಸಹಕಾರಿಯಾಗಿದ್ದಾರೆ.ಅದರಲ್ಲೂ KSGE, MAHITILOKA , EDUCATION FEST, ಎಲ್ಲಕ್ಕಿಂತ ಮಿಗಿಲಾಗಿ ಮನೋಹರ.B.R.ಸರ್ ರವರ ಸಾರಥ್ಯದಲ್ಲಿ ನಡೆಯುತ್ತಿರುವ ಶಿಕ್ಷಕರ ಕೈಪಿಡಿ ವೇದಿಕೆಯ ಕೊಡುಗೆ ಅನನ್ಯವಾದದ್ದು ಹಾಗೂ ಇನ್ನೂ ಅನೇಕ ವೇದಿಕೆಗಳ ಆ್ಯಡ್ಮಿನ್ ಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು.ಏಕೆಂದರೆ ಅವರೆಲ್ಲರ ಕೊಡುಗೆ ಇದಕ್ಕೆ ತುಂಬಾ ಅಪಾರವಾಗಿದೆ.ಹೀಗೆಯೇ ನಿಮ್ಮ ಸಹಾಯ,ಸಹಕಾರ ಇದಕ್ಕೆ ಇರಲಿ.ಇದರ ಸದುಪಯೋಗ ಎಲ್ಲರೂ ಪಡೆಯುವಂತಾಗಲಿ.ಎಂದು ಆಶಿಸುತ್ತೇನೆ.
ಇಂತಿ ನಿಮ್ಮ ಗ್ರುಪ್ ಆ್ಯಡ್ಮಿನ್








ದಯವಿಟ್ಟು ತಮ್ಮಲ್ಲಿ ವಿಶೇಷ ಮನವಿಯ ಸೂಚನೆ
ನಮ್ಮ ನೌಕರ ಬಂಧುಗಳ ಸಂಖ್ಯೆ ಅಧಿಕವಾಗಿರುವದರಿಂದ ೧ ರಿಂದ ೨೧ ಗ್ರುಪ್ ಗಳು ಪೂರ್ಣಗೊಂಡಿದ್ದರಿಂದ ಉಳಿದವರ ಬೇಡಿಕೆ ಮೇರೆಗೆ ಈ ಗ್ರುಪ್ ರಚಿಸಲಾಗಿದ್ದು ತಾವು ಈಗಾಗಲೇ ಯಾವುದಾದರೂ ಒಂದು ಗ್ರುಪ್ ನಲ್ಲಿ ಇದ್ದರೇ ಮತ್ತೆ ಹೊಸದಾಗಿ ಈ ಗ್ರುಪ್ ಗೆ ಸೇರಬೇಡಿ.ಏಕೆಂದರೆ ಅವರಿಗೂ ಸ್ವಲ್ಪ ಅವಕಾಶವನ್ನು ಕೊಡೋಣ.ಆದ್ದರಿಂದ ತಾವು ತಮಗೆ ಗೊತ್ತಿರುವ ನೌಕರ ಸ್ನೇಹಿತರಿಗೆ ಈ ಲಿಂಕ್ ಕಳಿಸಿ ಅವರಿಗೂ ಸೇರಲು ತಿಳಿಸಿದರೆ ನಮ್ಮ ಗ್ರುಪ್ ಆ್ಯಡ್ಮಿನ್ ರವರು ಹಾಗೂ ತಾವು ಸಕಾಲದಲ್ಲಿ ಕಳಿಸುವ ಮಾಹಿತಿ ತಲುಪಿಸಲು ಸಾಧ್ಯ ಎಂದು ಆಶಿಸುತ್ತೇನೆ.:bouquet::bouquet::clap::clap::clap:ನಮ್ಮ ನೌಕರ ಬಂಧುಗಳ ಸಂಖ್ಯೆ ಅಧಿಕವಾಗಿರುವದರಿಂದ ೧ ರಿಂದ ೨೧ ಗ್ರುಪ್ ಗಳು ಪೂರ್ಣಗೊಂಡಿದ್ದರಿಂದ ಉಳಿದವರ ಬೇಡಿಕೆ ಮೇರೆಗೆ ಈ ಗ್ರುಪ್ ರಚಿಸಲಾಗಿದ್ದು ತಾವು ಈಗಾಗಲೇ ಯಾವುದಾದರೂ ಒಂದು ಗ್ರುಪ್ ನಲ್ಲಿ ಇದ್ದರೇ ಮತ್ತೆ ಹೊಸದಾಗಿ ಈ ಗ್ರುಪ್ ಗೆ ಸೇರಬೇಡಿ.ಏಕೆಂದರೆ ಅವರಿಗೂ ಸ್ವಲ್ಪ ಅವಕಾಶವನ್ನು ಕೊಡೋಣ.ಆದ್ದರಿಂದ
ತಾವು ತಮಗೆ ಗೊತ್ತಿರುವ ನೌಕರ ಸ್ನೇಹಿತರಿಗೆ ಈ ಲಿಂಕ್ ಕಳಿಸಿ ಅವರಿಗೂ ಸೇರಲು ತಿಳಿಸಿದರೆ ನಮ್ಮ ಗ್ರುಪ್ ಆ್ಯಡ್ಮಿನ್ ರವರು ಹಾಗೂ ತಾವು ಸಕಾಲದಲ್ಲಿ ಕಳಿಸುವ ಮಾಹಿತಿ ತಲುಪಿಸಲು ಸಾಧ್ಯ ಎಂದು ಆಶಿಸುತ್ತೇನೆ.:bouquet:

:bouquet::clap::clap::clap: