ಉಮಾದೇವಿ ಎಚ್ ಎಸ್ ಸಹ ಶಿಕ್ಷಕಿ ರಚಿತ ಕವನಗಳು



ಉಮಾದೇವಿ ಎಚ್ ಎಸ್

ಸಹ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ
ಶ್ರೀಗಿರಿಪುರ ಕ್ಲಸ್ಟರ್ ಕುದೂರು ಹೋಬಳಿ

ಮಾಗಡಿ ತಾಲ್ಲೂಕು ರಾಮನಗರ ಜಿಲ್ಲೆ
 👤👤👤👤👤👤👤👤👤👤👤👤 




ಮತದಾನದ ಬಗ್ಗೆ ಬರೆದ ಕವನ ,ಇಷ್ಟ ಆದ್ರೆ ಶೇರ್ ಮಾಡಿ ಆದಷ್ಟು ಎಲ್ಲರಿಗೂ ಮುಟ್ಟಿಸಿ
ಗಂಗೆ ಬಾರೆಯವ್ವ ತು಼ಂಗೆ ಬಾರೆಯವ್ವ
ಹಿಡಿದು ಬಂದೇವು ಜೋಳಿಗೆ
ಅನ್ನ ಕೇಳೋಲ್ಲ,ದುಡ್ಡಂತು ಬೇಡವೇ ಬೇಡ
ಹಾಕಿರಿ ನಿಮ್ಮ ಮತವನ್ನು
ನೀವೇ ನಮ್ಮ ನಾಡಪ್ರಭುಗಳು
ಇಂದಿಗೂ ಮರೆಯಲಾರೆವು ಎಂದಿಗೂ
ಅಜ್ಜಿ ಅಜ್ಜ ಮುತ್ತಜ್ಜಿ ಮುತ್ತಜ್ಜ ಎಲ್ಲ ಬನ್ನಿ
ಮತಹಾಕಲು ಮತಕಟ್ಟೆಗೆ
ಚಿಗುರು ಮೀಸೆ ಹುಡುಗ ಬಾರೋ
ನುಳಿಯುವ ಯುವತಿ ಬಾರೇ
ಹದಿನೆಂಟರ ರುಜುವಾತು ಮತದಾನವೂ
ವಿಕಲಾಂಗಚೇತರೆಂದು ಮೂಲೆ ಸೇರಬೇಡಿ
ನೀವು ಬನ್ನಿರಿ ಮತಗಟ್ಟೆಗೆ
ನಿಮ್ಮ ಹಕ್ಕನ್ನು ಚಲಾಯಿಸಲಿಕ್ಕೆ
ಮತದಾನ ಮಾಡಲಿಕೆ
ಇಂತಿ ನಿಮ್ಮ ಗೆಳತಿ
ಉಮಾ
ಸ!ಕಿ!ಪ್ರಾ!ಶಾಲೆ.ಹೊಸಹಳ್ಳಿ.ಶ್ರೀಗಿರಿಪುರ ಕ್ಲಸ್ಟರ್.ಮಾಗಡಿ ತಾ.ರಾಮನಗರಜಿಲ್ಲೆ

     ಎತ್ತಸಾಗಲಿ ನಾ ಎಲ್ಲಿ
ನೋಡಿದರೂ ನಿನ್ನದೇ ಘಮಲು
ನಿನ್ನ ಮನದ ಅರಮನೆಯಲೇ ನನ್ನ ಬಿಡಲು
ನೀ ದೂರ ತಳ್ಳಿದರೂ ನಿನ್ನ ಉಸಿರೀನ ನಾದದಂತೆ ಬಂದು ಸೇರುವೆ ನಿನ್ನ ಒಡಲು

👤👤👤👤👤👤👤👤👤👤👤👤
ಅಣ್ಣಮ್ಮ ಎಲ್ಲಮ್ಮ 
ಜೂಜಪ್ಪ ಎಂದು ನೆನೆಯುತ
ಊರು ಸುತ್ತುವೇ ಏಕೆ
ಕಣ್ಣೇದುರೇ ಇರುವ ದೇವರಂಥ
ಅಪ್ಪ ಅಮ್ಮನ ನೆನೆಯದೇ
ಧನಲಕ್ಷ್ಮಿ ವರಲಕ್ಷ್ಮಿ ಎಂದು
ವಿವಿಧ ಲಕ್ಷ್ಮೀಯರ ನೆನೆಯುತ್ತ
ಗುಡಿಗೋಪುರ ಸುತ್ತುವೇ ಏಕೆ
ಮನೆಯಲ್ಲೇ ಇರುವ ಗೃಹಲಕ್ಷ್ಮಿಯ ನೆನೆಯದೇ
ತಂದೆ ತಾಯಿಯರಲ್ಲಿ ದೇವರನ್ನು ಕಂಡ ಶ್ರವಣಕುಮಾರನ ನೆನೆಯದೇ
ಪತ್ನಿಯಲ್ಲಿ ದೇವತೆಯನ್ನು ಕಂಡ
ಪರಮಹಂಸರ ನೆನೆಯದೇ
ಗುರುವಿನಲ್ಲಿ ದೇವರ ಕಂಡ
ವಿವೇಕಾನಂದರ ನೆನೆಯದೇ
ಕಾಯಕದಲ್ಲಿ ದೇವರ ಕಂಡ
ಬಸವಣ್ಣನವರ ನೆನೆಯದೇ
whatsapp facebukಗಳಲ್ಲಿ

ದೇವರನ್ನು ಕಾಣುವ ಬಯಕೇ ಏಕೆ??????
👤👤👤👤👤👤👤👤👤👤👤👤

ಕಾದಿಹಳು ಸೀತೆ
ರಾಮನಿಗಾಗಿ ಅಶೋಕವನದಲ್ಲಿ
ರಾಮನ ನಗುವ ನೆನೆಯುತ
ರಾಮನ ಮೊಗವ ನೆನೆಯುತ
ರಾಮನ ದಾರಿಯ ಕಾಯುತ
ಪ್ರೀತಿಯ ದಾಹದಲಿ ಪರಿತಪಿಸುತ
ಪ್ರೇಮದ ಕಾಣಿಕೆಯಾದ ಸುಂದರಕಾಂಡವನ್ನು
ಹಗಳಿರುಳು ನೋಡುತ
ತನುಮನದಲಿ ಬೆರೆತಿಹೋಗಿರುವ ರಾಮನ ಜಪಿಸುತ
ಕಣ್ಣು ಮುಚ್ಚಿದರೂ ರಾಮ
ಕಣ್ಣ ಬಿಟ್ಟರೂ ರಾಮ
ವೈದೇಹಿಯ ಉಸಿರು ಉಸಿರಿನಲ್ಲೂ ರಾಮ ರಾಮ
ಜಾನಕಿಯ ಜೀವನಾಡಿಯ ಮಿಡಿತದಲ್ಲೂ ರಾಮ ರಾಮ
👤👤👤👤👤👤👤👤👤👤👤👤

ನನ್ನ ಮನಸ್ಸಿನಲ್ಲಿ ನೀ ಸ್ಥಿರವಾಗಿ
ಉಳಿದಿರುವಾಗ ಮತ್ತೆ ಮತ್ತೆ ನೆನಪಿಸುವ ಪ್ರಯತ್ನವೇಕೆ?
ನಾ ಸತ್ತಾಗ ನನ್ನ ಊತ ಮಣ್ಣಿನಕಣಕಣಗಳು
ನಿನ್ನ ಸಾರಿ ಸಾರಿ ಕೇಳುತ್ತವೆ ಪ್ರೀತಿಯ ಜೊತೆ
ಆಟವಾಡಿದೇಕೆ!!
ಒಮ್ಮೆ ಬಂದು ಬಂದು ಹೋಗಲು ಪ್ರೀತಿಯೇನು
ಹೃದಯದ ಅತಿಥಿಯಲ್ಲ ಜೋಕೆ!
👤👤👤👤👤👤👤👤👤👤👤👤

3.ಯುಗಾದಿ ಕಳೆದು ಯುಗಾದಿ
ಬಂದರೂ ನಿನ್ನ ನೆನಪು ಮಾತ್ರ
ಕೊಂಚಕೂಡ ಮಾಸದೇ ಹಾಗೆ
ಉಳಿದಿದೆ ಗೆಳೆಯ
ಚೈತ್ರಮಾಸದೀ ನೀ ಇಟ್ಟ ಪ್ರೀತಿಯ ಆಹ್ವಾನ
ಮಾಮರವನ್ನು ಹುಡುಕಿಕೊಂಡು ಕೋಗಿಲೆಯೊಂದು ಬಂದಂತೆ
ನೀ ನನಗಾಗಿ ಬಂದ ಗಳಿಗೆ
ಗಳಿಗೆಗೂ ಮೀರಿದ ನನ್ನ ನಿನ್ನ ನಡುವಿನ ಸಲುಗೆ
ಸಲುಗೆಯ ಕೊನೆಯಲಿ ನೀ ಕೊಟ್ಟ ಕಣ್ಣೇರಿನ ಬೀಳ್ಗೊಡಿಗೆ
ಮತ್ತೇ ಮಾಮರವಾಗಿ ಕಾದಿರುವೆ ನಿನಗಾಗಿ
ಕೋಗಿಲೆಯಾಗಿ ಬರುವೇಯ ನನಗಾಗಿ

👤👤👤👤👤👤👤👤👤👤👤👤

4.ಹೃದಯ ನೀ ಆದರೇ ಅದರ,ಬಡಿತ
ನಾ ಆಗಲೇ ಗೆಳೆಯ
ಸೂರ್ಯ ನೀಆದರೇ .ನೀ ಹೊರ
ಸೂಸುವ ರಶ್ಮಿ ನಾ ಆಗಲೇ ಗೆಳೆಯ
ಮುರಳಿ ನೀ ಆದರೇ .ನಿನ್ನ ಕೊರಳಿನ ನಾದಕ್ಕೆ
ಶೃತಿಯಾಗಿ ಬರುವ ರಾಧೆ ನಾ ಆಗಲೇ ಗೆಳೆಯ
ಉಸಿರು ನೀ ಆದರೇ.ಅದರ ನಾಡಿಮಿಡಿತ
ನಾ ಆಗಲೇ ಗೆಳೆಯ
ಪ್ರೀತಿಯೇ ನೀ ಆದರೇ.ಅದರಿಂದ ಬರುವ
ಪ್ರೇಮ ದ ತುಡಿತ ನಾ ಆಗಲೇ ಗೆಳೆಯ

👤👤👤👤👤👤👤👤👤👤👤👤

5ಗಂಡಿನ ಎಲ್ಲಾ ಬಯಕೆಗಳಿಗೂ
ಗೊಂಬೆಯಾಗಿ
ಸಂಸಾರದ ಜಜಾಟಕ್ಕೆ
ಸೋತು ತೊದಲುಗೊಂಬೆಯಾಗಿ
ಎಲ್ಲಾ ಬಂಧನಗಳನ್ನು ತಾಳ್ಮೆಯಿಂದ
ಸಂಬಾಳಿಸಿ ಬಿದಿರುಗೊಂಬೆಯಾಗಿ
ಚಟ್ಟವೇರುವ ಸಮಯದಲ್ಲೂ

ಪರರ ಹಿತವನ್ನೇ ಚಿಂತಿಸುವ
ಸ್ತ್ರೀ ಎಂಬ ಮುದ್ದುಗೊಂಬೆಯೇ
ನಿನ್ನ ತ್ಯಾಗವನ್ನು ನೆನೆಯುವರ್ಯಾರು
ನಿನ್ನ ಮಾತಿಗೆ ಬೆಲೆಕೊಡುವವರು ಯಾರು
ನಿನ್ನ ಪ್ರೀತಿ ಪ್ರೇಮಕ್ಕೆ ಸ್ಪಂಧಿಸುವವರು ಯಾರು
ಕಷ್ಟಗಳೆಂಬ ಪೆಟ್ಟನ್ನು ತಿಂದು
ಕಣ್ಣನೀರನಲ್ಲೇ ಜೀವನವೆಲ್ಲಾ
ಜೋತುಬಿದ್ದು ಶಿಲೆಯಾದೆಯಲ್ಲೇ
ಓ ನನ್ನ ದೇವತೆಯೇ!

👤👤👤👤👤👤👤👤👤👤👤👤 
6.ದೂರದೀ ನೋಡಲುಪ್ರೀತಿ ಎಂಬ ಕಡಲ ತೀರ
ಸುಂದರ ಮನೋಹರ
ಹತ್ತಿರದಿ ನೋಡಿದರೆ ಘನಘೋರ
ಪ್ರತಿ ಹೆಜ್ಜೆ ಇಡುವಾಗಲೂ ಇರಲಿ ಏಚ್ಚರ! ಏಚ್ಚರ!
👤👤👤👤👤👤👤👤👤👤👤👤


7.ಮುತ್ತಿನಂತಹ ಸ್ನೇಹದಲ್ಲೂ ನಾ ಕಂಡೆ ಬಿರುಕಿನ ಎಳೆಯ
ರತ್ನದಂತಹ ಪ್ರೀತಿಯಲ್ಲೂ ನಾ

ಕಂಡೆ ಒಡೆದ ಸೆಳೆಯ
ಮುತ್ತು ರತ್ನ ಬೆಲೆಬಾಳುವ ಆಭರಣಗಳೇ
ಆಗಿದ್ದರೂ ಒಡೆದು ಹೋದ್ದದೇ ಅಲ್ಲವೇ?
👤👤👤👤👤👤👤👤👤👤👤👤

8.ತುಂಬಾ ದಿನದಿಂದ ಕಂಡ ಕನಸೊಂದು ನನಸಾಗುವ
ಹಂಬಲದಿಂದ ನವಿಲಿನಂತೆ
ಗರಿಕೇದರಿ ನಿಂತಿದೆ
ಬಹಳದಿನದಿ಼ಂದ ಪ್ರೀತಿಯ ಗಿಡದಿಂದ ಬೆಳೆಸಿದ
ಅರಳಿದ ಪ್ರೇಮಪುಷ್ಪವೊಂದು ಮೂಡಿದು ನಲಿವಂತೆ
ನನ್ನ ಪ್ರೇರೆಪಿಸಿದೆ
ಎಂದು ಕಾಣದ ಮೊಗದಲ್ಲಿನ ನಾಚಿಕೆ

ಇ಼ಂದು ತಾನೇ ಮೊದಲೆಂಬಂತೆ ,ನನ್ನ
ತನವನ್ನೇ ಸೋಲಿಸಿ ತುಂಟನಗೆಯ ಬೀರಿದೆ
👤👤👤👤👤👤👤👤👤👤👤👤


9.ಖೋ ಎಂದು ಜೋರಾಗಿ ಓಡಿಬಂದು ಉದ್ದಜಡೆಯನ್ನು 
ಎಳೆದು ಮುಟ್ಟಿಸುತ್ತಿದ್ದ ಗೆಳೆಯ ಗೆಳತಿಯರೆಲ್ಲಿ ಹೋದರು
ಕಣ್ಣಮುಚ್ಚಿ ಇರುವೆ ಗೂಡಿಗೆ ನನ್ನನ್ನು ಬಿಟ್ಟು

ಹೋದ ತುಂಟ ತುಂಟಿಯರೆಲ್ಲಿ ಹೋದರು
ಮರಕೋತಿ ಆಟ ಆಡುವಾಗ ಮರ ಹತ್ತುವುದನ್ನು ಮಾತ್ರ ಕಳುಹಿಸಿ ,ಇಳುಹಿಸದೇ ಹೋದ ಪೋರ ಪೋರಿಯರೆಲ್ಲಿ ಹೋದರು
ಜೊತೆಗೆ ಓಡುವೇನೆಂದು ಹೇಳಿ ನನ್ನನ್ನು ಮಾತ್ರ ಓಡಲು
ಬಿಟ್ಟು ಹೋದ ಸ್ನೇಹಿತ ಸ್ನೇಹಿತೆಯರೆಲ್ಲಿ ಹೋದರು
ಕಾಲಿನಿಂದ ಮರಳಿಗೂಡು ಕಟ್ಟುವಾಗ ಸಹಾಯ ಮಾಡುವ಼ಂತೆ ಬಂದು ಮರಳಿನಗೂಡನ್ನೆ ಹಾಳು ಮಾಡಿ
ಓಡಿ ಹೋದ ಅನುಚರ ಅನುಚರಣಿಯರೆಲ್ಲಿ ಹೋದರು
ಸೈಕಲ್ ಕಳುಹಿಸಿಕೊಡವೆನೆಂಬ ನೆಪವೊಡ್ಡಿ ಹಿಂದೆ ಕುಳಿತು ಮಧ್ಯದಲ್ಲೆ ಕಳಚೀಕೊಂಡು ನನ್ನ ಬಿಳುಹಿಸಿ
ತಮಾಷೆ ನೋಡಿದ ಜಾಣ ಜಾಣೆಯರೆಲ್ಲಿ ಹೋದರು
ದುಂಡಾಗಿ ಬರೆದುಕೊಟ್ಟ ನೋಟ್ ಪುಸ್ತಕವನ್ನು ತೆಗೆದುಕೊಂಡು ಹೋಗಿ ಕಾಡಿಪಿಡಿಯಿಸಿದ ಗೂಬೆಗಳು ಎಲ್ಲಿ ಹೋದರು
ಬಣ್ಣದ ಹೋಕುಲಿಯ ದಿನ ಯಾಮಾರಿಸಿ ನನ್ನ ಬಣ್ಣದ
ಗೊಂಬೆ ಮಾಡಿದ ಬಾಲಕ ಬಾಲಕರೆಲ್ಲಿ ಹೋದರು
ಸಿನಿಮಾಕ್ಕೆ ಕರೆದುಕೊಂಡು ಹೋಗಿ ನನ್ನನ್ನು ಕತ್ತಲಲ್ಲಿ

ಬಿಟ್ಟು ಬಂದ ಹುಡುಗಹುಡುಗಿಯರೆಲ್ಲಿ ಹೋದರು
ಕಣ್ಣ ಕಣ್ಣ ಬೆರೆಸಿ ಕಣ್ಣಿನ ಆಟ ಆಡುವಾಗ ಕಣ್ಣ ಹೊಡೆದು ಸೋಲಿಸಿದ ವಿಜೇತ ವಿಜೇತರು ಎಲ್ಲಿ ಹೋದರು
ಕೋತಿಎಂಜಲು ಗೂಬೆ ಎಂಜಲು ಎ಼ಂದು ಕೈಲಿದ್ದ ಮಾವಿನಕಾಯಿಯನ್ನು ಕಸಿದುತಿನ್ನುತ್ತಿದ್ದ ವಾನರಸೈನ್ನ
ಎಲ್ಲಿ ಹೋಯಿತ್ತೊ
👤👤👤👤👤👤👤👤👤👤👤👤

10.ಎಷ್ಟೂ ನೋಡಿದರೂ,ಮತ್ತೆ ಮತ್ತೆ

ನೋಡಬೇಕೆಂಬ ಹಂಬಲ
ಎಷ್ಟೂ ಮಾತಾನಾಡಿದರೂ,ಮತ್ತೆ ಮತ್ತೆ ಮಾತಾನಾಡಿಸಬೇಕೆಂಬ ಹಂಬಲ
ಅದು ಮನಸ್ಸಿಗೆ ಏಕೋ ನಿಮ್ಮ ಜೊತೆಗೂಡಿ
ಬದುಕಬೇಕೆಂಬ ಹಂಬಲ
👤👤👤👤👤👤👤👤👤👤👤👤

11.ಮಳೆಯ ಹನಿ ಭೂಮಿಗೆ ಬಿದ್ದಾಗ
ಭೂಮಿಯೂ ಮಳೆಹನಿಗೆ ಹೇಳಿತು ಧನ್ಯವಾದ
ದುಂಬಿಯೂ ಹೂವನ್ನು ಚುಂಬಿಸಿದಾಗ ಹೂ ನಾಚುತ್ತಾ
ದುಂಬಿಗೆ ಹೇಳಿತು ಧನ್ಯವಾದ
ನಿನ್ನ ಕಣ್ಣೋಟ ನನ್ನ ಕಣ್ಣಿನೊಡನೇ ಹೇಳದೇ ಕೇಳದೇ
ಬೇರೆತಾಗ ನನ್ನ ಮನ ನಿನ್ನ ಹೃದಯವನ್ನು ದಟ್ಟಿ ಸಾರಿ
ಸಾರಿ ಹೇಳಿತು ಧನ್ಯವಾದ
👤👤👤👤👤👤👤👤👤👤👤👤👤

12.ಬರಿದಾದ ಬಾಳಿನಲ್ಲಿ
ವರ್ಷ ಧಾರೆಯಂತೆ ಬಂದೆ ನೀನು

ಜೀವನದಲ್ಲಿ ಜೊತೆ ನಡೆಯುವ
ಭರವಸೆ ತಂದೆ ನೀನು

ಅದು ನಿಜವೆಂದು ಕನಸು
ಕ಼ಂಡೆ ನಾನು

ಪ್ರೀತಿ ಎಂಬ ಹೆಸರಿನಲ್ಲಿ

ಪ್ರತಿ ದಿನವೂ ನೋವು ತಂದೆ ನೀನು

ಪ್ರೀತಿ ಎಂಬ ಕುಡಿತದ ಅಮಲಿನಲ್ಲಿ
ಸಿಲುಕಿದೆ ನಾನು
👤👤👤👤👤👤👤👤👤👤👤👤👤

13.ಪ್ರೀತಿ ಎಂಬ ಸಂತೆಯಲ್ಲಿ
ಕಳೆದುಹೋದೆವು ನಾನು ನೀನು
ಕಣ್ಣ ಹನಿಗಳನ್ನು ದಾರಿ ಉದ್ದಕ್ಕೂ

ನೆನಪಾಗಿ ಬಿಟ್ಟು ಬಂದಿರುವೆ
ಹಿಡಿದು ಬರುವೆಯ ನಾ ಇರುವ ಜಾಡನ್ನು
ಕೊನೆ ಉಸಿರು ಬಿಡುವ ಮುನ್ನ

ಸೇರ ಬಲ್ಲೆಯ ನೀ ನನ್ನನ್ನು
👤👤👤👤👤👤👤👤👤👤👤👤👤

14.ಯಾಕೋ ಇಂದುನಿನ್ನ ಹೆಚ್ಚು ಹೆಚ್ಚು

ನೆನಪಿಸುತ್ತಿದೆ ನನ್ನ ಹೃದಯ

ಎಷ್ಟು ಪ್ರಯತ್ನಿಸಿದರೂ ನಿನ್ನ

ಮರೆಯಲಾಗುತ್ತಿಲ್ಲ ನನ್ನ ಇನಿಯ
ನೋಡುತ್ತಾ ಕುಳಿತರೇ ನಿನ್ನ ಮುದ್ದಾದ ಮೋರೆಯ
ಕಳೆದ್ದದ್ದೆ ಗೊತ್ತಾಗದು ಸಮಯ
ನೀ ನನ್ನ ಜೊತೆ ಇರುವ ಪ್ರತಿಯೊಂದು

ಕ್ಷಣವೂ ಶೃಂಗಾರನಮಯ
👤👤👤👤👤👤👤👤👤👤👤👤👤

15.ಅಳುತ್ತಾ ಅಳುತ್ತಾ ನಮ್ಮನ್ನು
ನಗಿಸುವ ಗಿಣಿಮರಿಗಳ ಮುದ್ದು
ತುಟಿಗಳಿಗೆ ಮುತ್ತನಿಟ್ಟು ಹೇಳುವೆ

ಶುಭಾಷಯ
ಹಠವನ್ನು ಮಾಡುವ ತುಂಟ ಕಂಗಳಿಗೆ
ಮುತ್ತನಿಟ್ಟು ಹೇಳುವೆ ಶುಭಾಷಯ
ನನ್ನ ಕೋಪವ ಸಹಿಸಿಕೊಂಡು
ಮತ್ತೆ ಮತ್ತೆ ನಾನೇ ಬೇಕೇಂದು ನನ್ನ

ಬಯಸಿ ಬಯಸಿ ಬರುವ ಮುಗ್ಧ ಮನಸ್ಥಿತಿಗಳಿಗೆ
ಸಾರಿ ಸಾರಿ ಹೇಳುವೇ ಶುಭಾಷಯ!
ನನ್ನ ನೋವನ್ನು ಮರೆಸುವ ಸಂಜೀವಿನಿಗಳಿಗೆ
ಕೂಗಿ ಕೂಗಿ ಹೇಳುವೆ ಶುಭಾಷಯ
ಅಂಬೆಕಾಲಿಡುತ್ತಾ.ತೊದಲು ಮಾತಾನಾಡುತ್ತಾ
ನನಗೆ ಸಮಾಧಾನ ಹೇಳಲು ಪ್ರಯತ್ನಿಸುವ
ಋಷಿಮುನಿಯನ್ನು ತಬ್ಬಿ ಹೇಳುವೆ ಶುಭಾಷಯ
👤👤👤👤👤👤👤👤👤👤👤👤👤

16.ಮನಸ್ಸಿನಲ್ಲಿ ಉಂಟಾಗುವ ತಳಮಳ ಹೇಳುತ್ತಿದೆ
ನೀ ನಿನ್ನಲ್ಲೆ ಅನುಭವಿಸುತ್ತಿರುವ
ಕಳವಳವಾ!!
ಹೃದಯದ ಜೋರಾದ ಬಡಿತ ಹೇಳುತ್ತಿದೆ
ನಿನ್ನ ಹೃದಯದ ಮಿಡಿತದ ಏರೀಳೀತವಾ!!
ನನ್ನ ಕಣ್ಣಿನರೆಪ್ಪೆಯ ಅದರುವಿಕೆ ಹೇಳುತ್ತಿದೆ
ನಿನ್ನ ಕಣ್ಣು ರೆಪ್ಪೆಗಳ ಅಗಳಿಕೆಯ!
👤👤👤👤👤👤👤👤👤👤👤👤👤

17.ಬಾಳೊಂದು ರಂಗವಳ್ಳಿ
ಚುಕ್ಕಿ ಇಟ್ಟವರು ಯಾರೋ?
ಎಳೆಗಳ ಎಳೆದವರು ಯಾರೋ?
ರೂಪುರೇಷೆ ನೀಡಿದವರು ಯಾರೋ?
ಬಣ್ಣ ಗಳ ಮೆರಗು ನೀಡಿದವರು ಯಾರೋ?
ರಂಗವಳ್ಳಿಗೆ ಅಂದ ತಂದವರು ಯಾರೋ?
ರಂಗವಳ್ಳಿ ಕೆಟ್ಟು ಹೋದರೆ ಸರಿ ಕಾಣಿಸದು ಬದುಕು

ಸರಿ ಬಂದರೇ ನೋಡುವವರ ಕಣ್ಣಿಗೂ ಅಂದ
ಮನಸ್ಸಿಗೆ ಮಹಾದಾನಂದ
👤👤👤👤👤👤👤👤👤👤👤👤👤

18.ನೀನೇ ಬೇಕೆಂದು ಬಯಸಿದವಳು ನಾನಾಲ್ಲ
ನಿನಗಾಗಿ ಪರಿತಪಿಸಿದವಳು ನಾನು ಅಲ್ಲ
ಕಾಡಾದೇ ಬೇಡದೇ ಸಣ್ಣ ಸುಳಿವು ಕೊಡದೇ
ಮಾತಾನಾಡದೇ ನೋಡದೇ ಗಾಳಿಯಲ್ಲಿ
ಗಂಧ ಸೇರುವಂತೆ ,ಹೇಗೆ ಬಂದೇ ಏ ಮನವೇ
ನನಗೆ ಗೊತ್ತೆ ಆಗದೇ!
ಪ್ರೀತಿಯಾಗಿದೆ ಎಂದು ಖಾತ್ರಿ ಯಾಗುವ ಮೊದಲೇ
ಮನಸ್ಸೆಂಬ ಗುಡಿಯೊಳಗೆ ನಿನ್ನ ದಾಖಲಾತಿಯ ಧೃಢೀಕರಣವನ್ನು ಎನಗೆ ನೀಡಿದೇ ನನ್ನ ಒಲವೇ!

👤👤👤👤👤👤👤👤👤👤👤👤👤
 

19.ಹೆತ್ತು ಹೊತ್ತು ಸಾಕುವಳು ಅಮ್ಮ

ನಿನ್ನ ಪಾದ ತೊಳೆದ ನೀರನ್ನು

ಕುಡಿದರೂ ನಿನ್ನ ಋಣವ ತೀರಿಸಲಾಗದಮ್ಮ
ಏನಗೆ ನೋವಾದಗಲೂ
ಸಂತೋಷವಾದಗಲೂ
ಕೂಗಿ ಕರೆಯುವೆ ಅಮ್ಮ ಅಮ್ಮ
ನನಗೆ ನೋವಾದಾಗ ನೀ ಅಳುವೆ
ನನಗೆ ಖುಷಿಯಾದಾಗ ನೀ ನಲಿವೆ
ಜಗತ್ತಿನಲ್ಲಿ ನಿಲ್ ಕಲ್ಮಶ ಪ್ರೀತಿ

ನಿನ್ನದು ಒಬ್ಬಳೇದೇನ್ನಮ್ಮ
ನನ್ನ ಕಣ್ಣಿನ ನೀರನ್ನು ನಿನಗೆ

ನೈವೇದ್ಯ ಮಾಡಿದರೂ
ನಿನ್ನ ಪ್ರೀತಿಗೆ ಸರಿಸಮನಾದ
ಪ್ರೀತಿ ಕೊಡಾಲಾರೇನು ಕ್ಷಮಿಸಮ್ಮ

👤👤👤👤👤👤👤👤👤👤👤👤

: 20.ಬೇಸಿಗೆಯಲ್ಲಿ ಮಳೆ ಬಂದ ಹಾಗೆ
ಚಳಿಗಾಲದಲ್ಲಿ ಬಿಸಿಲು ಬಂದ ಹಾಗೆ
ನೀ ಹೇಗೆ ಬಂದೆ ಮನವೇ
ನೀ ಬಂದ ಆ ಕ್ಷಣ ಮರುಭೂಮಿಯಲ್ಲೂ ಮಳೆ ಬಂದ ಹಾಗೆ
ಜೋರುಮಳೆ ಇಬ್ಬನಿ ತಬ್ಬಿದ ಹಾಗೆ
ದಿಕ್ಕು ದೋಚದೆ ಅಲೆಯುತ್ತಿದ್ದ ಹಕ್ಕಿ ಗೂಡು ಸೇರಿದ ಹಾಗೆ

ಕಣ್ಣಂಚಿನ ನೀರು ಕಣ್ಣನೇ ಒತ್ತರಿಸಿದ ಹಾಗೆ
ನದಿಯೊ಼ಂದು ಓಡಿ ಸಾಗರ ಅಪ್ಪಿದ ಹಾಗೆ
ನೀ ತಂದ ಪ್ರೀತಿ ಎಂಬ ಸದ್ದೆ ಇರದ


ಉತ್ಸವದ ಕೊಡುಗೆ