ಉಪಯುಕ್ತ ಮಾಹಿತಿಗಳು

*ಸರ್ಕಾರಿ ನೌಕರರ ಸೇವಾವಹಿ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ*

ಕೆ.ಸಿ.ಎಸ್.ಆರ್ ನಿಯಮ 396 ರಿಂದ 415 ರ ವರೆಗೆ ಸೇವಾವಹಿ ನಿರ್ವಹಣೆಯ ಬಗ್ಗೆ ವಿವರಿಸಿದೆ.

ಕರ್ನಾಟಕ ನಾಗರಿಕ ಸೇವಾನಿಯಮಗಳು 1956ರ ನಿಯಮ 397ರಂತೆ ನಮೂನೆ 18ರಲ್ಲಿ ಪ್ರತಿ ಸರ್ಕಾರಿ ನೌಕರರಿಗೂ

ಸೇವಾ ಪುಸ್ತಕ ನಿರ್ವಹಿಸಬೇಕು. ಪ್ರತಿ ಸರ್ಕಾರಿ ನೌಕರರ ಮೊದಲನೇ ನೇಮಕಾತಿ ಸಮಯದಲ್ಲಿ ಸೇವಾವಹಿಯನ್ನು

ತೆರೆಯಲಾಗುತ್ತದೆ. ಸರ್ಕಾರಿ ನೌಕರನು ನೇಮಕಗೊಂಡ ಕೂಡಲೇ ವೇತನ ಬಟವಾಡೆ ಅಧಿಕಾರಿಯು ಕಛೇರಿಯ

ಅಥವಾ ಶಾಲೆಯ ಸಾದಿಲ್ವಾರು ಹಣದಲ್ಲಿ ಸೇವಾ ಪುಸ್ತಕವನ್ನು ಖರೀದಿಸಿ ನಿರ್ವಹಿಸಬೇಕಾಗುತ್ತದೆ. ಪರಿಷ್ಕೃತ

ಸೇವಾವಹಿ ಆರು ಭಾಗಗಳನ್ನು ಹೊಂದಿದೆ.

ಭಾಗ :1 ರಲ್ಲಿ ಸರ್ಕಾರಿ ನೌಕರನ ವ್ಯಕ್ತಿ ವಿವರ, ಸ್ವಂತ ವಾಸ ಸ್ಥಳ, ವೈಯಕ್ತಿಕ ಗುರುತಿನ ಚಿಹ್ನೆ, ಹುಟ್ಟಿದ ದಿನಾಂಕ,

ವಿದ್ಯಾರ್ಹತೆ ಇಲಾಖಾ ಪರೀಕ್ಷೆಗಳ ವಿವರ ನಮೂದಿಸಿ ಭಾವಚಿತ್ರ ಅಂಟಿಸಿ, ಸರ್ಕಾರಿ ನೌಕರನ ಸಹಿ ಪಡೆದು

ಬಟವಾಡೆ ಅಧಿಕಾರಿಗಳು ದೃಢೀಕರಿಸಬೇಕು.

ಭಾಗ-2 ರಲ್ಲಿ ಮೊದಲ ಏಳು ಪ್ರಮಾಣ ಪತ್ರಗಳನ್ನು ನೌಕರನ ಮೊದಲ ನೇಮಕಾತಿ ಸಮಯದಲ್ಲಿ ಮತ್ತು ಉಳಿದ

ನಾಲ್ಕು ಪ್ರಮಾಣ ಪತ್ರಗಳನ್ನು ಸಮುಚಿತ ಹಂತಗಳಲ್ಲಿ ದಾಖಲಿಸಬೇಕು. ಮುಖ್ಯವಾಗಿ ರಹಸ್ಯ ಪಾಲನೆ

ಪ್ರಮಾಣವಚನ ಕುರಿತು 4ನೇ ಬಾಬ್ರನ್ನು ಪ್ರಮಾಣೀಕರಿಸುವ ಮೊದಲು ಕಛೇರಿ ಮುಖ್ಯಸ್ಥರು ಸರ್ಕಾರಿ ರಹಸ್ಯಗಳ

ಅಧಿನಿಯಮ ಮತ್ತು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ರ ಬಗ್ಗೆ ತಿಳುವಳಿಕೆಯನ್ನು

ನೀಡಬೇಕು. ಸರ್ಕಾರಿ ನೌಕರನ ಇಲಾಖೆ ಮತ್ತು ಭಾಷಾ ಪರೀಕ್ಷೆಗಳ ತೇರ್ಗಡೆ ಬಗ್ಗೆ ಮಾಹಿತಿ ನೀಡಬೇಕು. ಉನ್ನತ

ವ್ಯಾಸಂಗದ ವಿವರಗಳನ್ನು ನಮೂದಿಸಿ ದೃಢೀಕರಿಸಬೇಕು. ಘೋಷಣೆಗಳು, ನಾಮನಿರ್ದೇಶನಗಳು ಮತ್ತು

ಜಿ.ಪಿ.ಎಫ್., ಕೆ.ಜಿ.ಐ.ಡಿ., ಡಿ.ಸಿ.ಆರ್.ಜಿ. ಮತ್ತು ಕುಟುಂಬ ನಿವೃತ್ತಿವೇತನ ಇವುಗಳಿಗೆ ಮಾಡಿದ ನಾಮ

ನಿರ್ದೇಶನಗಳು ಹಾಗೂ ಇವುಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದ ಯೋಗ್ಯತಾ ಪತ್ರ, ಪ್ರಮಾಣ ಪತ್ರಗಳನ್ನು

ನಮೂದಿಸಿ ದಾಖಲಿಸಬೇಕು.

ಭಾಗ : 3ರಲ್ಲಿ ಹಿಂದಿನ ಅರ್ಹತಾ ಸೇವೆ ಅಥವಾ ಅನ್ಯ ಸೇವೆ ಇದ್ದಲ್ಲಿ ವಿವರ ನಮೂದಿಸುವುದು. ಭಾಗ- 3 'ಬಿ'ಯಲ್ಲಿ

ಹಿಂದಿನ ಸೇವೆಯನ್ನು 'ಅರ್ಹತಾ ಸೇವೆ' ಎಂದು ಯಾವ ಉದ್ದೇಶಕ್ಕಾಗಿ ಅಂಗೀಕರಿಸಲಾಗಿದೆ ಎಂಬುದನ್ನು

ನಿರ್ದಿಷ್ಟಪಡಿಸಬೇಕು. ಉದಾ: ರಜೆ, ವೇತನ, ನಿವೃತ್ತಿ ವೇತನ,

ಭಾಗ : 4ರಲ್ಲಿ ನೇಮಕಾತಿ ಸಮಯದಲ್ಲಿ ಮತ್ತು ಆನಂತರದ ಹುದ್ದೆ, ಕಛೇರಿ ಸ್ಥಳ, ವೇತನ ಶ್ರೇಣಿ ಅಥವಾ ನೇಮಕಾತಿ

ಸ್ವರೂಪದಲ್ಲಿ ಬದಲಾವಣೆಗಳನ್ನು ಉಂಟುಮಾಡುವ ಘಟನೆಗಳನ್ನು ನಮೂದಿಸಬೇಕು. ನೇಮಕಾತಿ ಖಾಯಂ

ಗೊಳಿಸುವಿಕೆ, ಮುಂಬಡ್ತಿ, ಹಿಂಬಡ್ತಿ, ವರ್ಗಾವಣೆ, ವೇತನ ಬಡ್ತಿ, ರಜೆ, ಅಮಾನತ್ತು, ನಿವೃತ್ತಿ, ಸೇವೆಯಿಂದ ಬಿಡುಗಡೆ

ಅಥವಾ ವಜಾಗೊಳಿಸಿದ ವಿವರಗಳನ್ನು ನಮೂದಿಸುವುದು. ಬಹುಮಾನ ಪ್ರಶಂಸೆ, ದಂಡನೆ ಅಥವಾ ನಿಂದನೆಯ

ಸ್ವರೂಪ ಹಾಗೂ ಇವುಗಳಿಗೆ ಸಂಬಂಧಿಸಿದ ಮಂಜೂರಾತಿಯ ಉಲ್ಲೇಖ, ಆದೇಶ ಸಂಖ್ಯೆ, ದಿನಾಂಕ ಮತ್ತು

ಅಧಿಕಾರದ ಮಾಹಿತಿಗಳನ್ನು ನಮೂದಿಸಬೇಕು. ಪ್ರತಿ ವರ್ಷ ಮಾರ್ಚಿ ಅಂತ್ಯಕ್ಕೆ ಸೇವಾ ವಿವರ ನಮೂದಿಸಿ ವಾರ್ಷಿಕ

ಪರಿಶೀಲನೆ ಮಾಡಿ ಹತ್ತನೇ ಕಾಲಂನಲ್ಲಿ ಸಂಬಂಧಿಸಿದ ಸರ್ಕಾರಿ ನೌಕರರ ಸಹಿಯನ್ನು ಏಪ್ರಿಲ್ ಅಂತ್ಯದೊಳಗೆ

ಪಡೆಯುವುದು.

ಭಾಗ : 5ರಲ್ಲಿ ಕರ್ತವ್ಯ ನಿರ್ವಹಿಸಿದ ತಿಂಗಳು ಲಭ್ಯವಾದ ಗಳಿಕೆ ರಜೆ, ಅರ್ಧವೇತನ ರಜೆ, ಪರಿವರ್ತಿತ ರಜೆಗಳು,

ಜಮೆಯಲ್ಲಿರುವ ಒಟ್ಟು ರಜೆಗಳು ತೆಗೆದುಕೊಂಡ ರಜೆಗಳು, ಪೂರ್ಣಗೊಳಿಸಿದ ಸೇವಾ ವರ್ಷಗಳು, ಪರಿವರ್ತಿಸಿದ

ರಜೆದಿನಗಳ ವಿವರಗಳನ್ನು ನಮೂದಿಸಿ ದೃಢೀಕರಿಸಬೇಕು.

ಭಾಗ : 6 ರಲ್ಲಿ ಸರ್ಕಾರಿ ನೌಕರನು ಉಪಯೋಗಿಸಿಕೊಂಡ ರಜೆ ಪ್ರಯಾಣ ರಿಯಾಯಿತಿಯ ವಿವರ ಮತ್ತು ಇತರ

ವಿಶೇಷ ಮಾಹಿತಿಗಳನ್ನು ನಮೂದಿಸಿ ದೃಢೀಕರಿಸಬೇಕು.


1, ಪ್ರತಿ ವರ್ಷ ಸೇವಾಪುಸ್ತಕವನ್ನು ಪರಿಶೀಲಿಸಿ ದೃಢೀಕರಿಸಬೇಕೇ?


ಹೌದು. ಪ್ರತಿವರ್ಷ ಮಾರ್ಚ್ 31 ಕ್ಕೆ ಕಛೇರಿಯ ಅಥವಾ ಶಾಲೆಯ ಮುಖ್ಯಸ್ಥರು ತಮ್ಮ ಕಛೇರಿಯಲ್ಲಿ ಕಾರ್

ನಿರ್ವಹಿಸುತ್ತಿರುವವರ ಸೇವಾ ವಹಿಯಲ್ಲಿ ಅಗತ್ಯ ನಮೂದುಗಳನ್ನು ದಾಖಲಿಸಿ ದೃಢೀಕರಿಸಬೇಕು. ಅಲ್ಲದೆ ಸೇವಾ

ವಿವರಗಳನ್ನು ಅಗತ್ಯ ದಾಖಲೆಗಳೊಂದಿಗೆ ತಾಳೆ ನೋಡಿ ಸರಿ ಇದೆ ಎಂದು ಪ್ರತೀ ವರ್ಷ ಏಪ್ರಿಲ್ ಅಂತ್ಯದೊಳಗೆ

ವಾರ್ಷಿಕ ಪರಿಶೀಲನೆ ಮಾಡಿ ದೃಢೀಕರಿಸುವುದು.

2, ಸೇವಾ ವಹಿಗಳನ್ನು ಯಾರು ನಿರ್ವಹಿಸಬೇಕು ?


ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಮತ್ತು ಪದವೀಧರೇತರ ಮುಖ್ಯಶಿಕ್ಷಕರು, ಪದೋನ್ನತ

ಮುಖ್ಯಶಿಕ್ಷಕರ ಸೇವಾ ವಹಿಗಳನ್ನು ಆಯಾ ಆಡಳಿತ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ವಹಿಸಬೇಕು ಹಾಗೂ

ಕಾಲಕಾಲಕ್ಕೆ ಅಗತ್ಯ ಮಾಹಿತಿಗಳನ್ನು ನಮೂದಿಸಿ ದೃಢೀಕರಿಸಬೇಕು. ಪ್ರೌಢಶಾಲೆಗಳಲ್ಲಿ ಆಯಾ ಶಾಲಾ

ಮುಖ್ಯಶಿಕ್ಷಕರು ಅಥವಾ ಉಪಪ್ರಾಂಶುಪಾಲರು ಸೇವಾವಹಿಯನ್ನು ನಿರ್ವಹಿಸತಕ್ಕದ್ದು.


ಈ ವರ್ಷದ ಯಾವ ಯಾವ ದಿನಾಂಕದಂದು ರಜೆಯ ವಿವರಗಳನ್ನು ಸೇವಾ ಪುಸ್ತಕದಲ್ಲಿ ದಾಖಲಿಸಬೇಕು?

* ಪ್ರತಿ ವರ್ಷ ಜನವರಿ ಮತ್ತು ಜುಲೈ 1ರಂದು ಪ್ರತಿ ಅರ್ಧ ವರ್ಷಕ್ಕೊಮ್ಮೆ ಮುಂಗಡವಾಗಿ ರಜೆಯನ್ನು ದಾಖಲಿಸಬೇಕು. ಅದನ್ನು ಒಟ್ಟು ಲೆಕ್ಕಕ್ಕೆ ದಾಖಲಿಸಿ ಒಟ್ಟು ಲಭ್ಯವಿರುವ ರಜೆ ದಿನಗಳನ್ನು ದೃಢೀಕರಿಸಬೇಕು

[ಭಾಗ-5 ರಲ್ಲಿ).

ಶಿಕ್ಷಕರಾದಲ್ಲಿ 01/07/1985 ರಿಂದ ಜಾರಿಗೆ ಬರುವಂತೆ ಪ್ರತಿ ಅರ್ಧ ವರ್ಷಕ್ಕೆ 5 ದಿನಗಳು ಗಳಿಕೆ ರಜೆ

(ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ಹೊರತು ಪಡಿಸಿ] ಗಳನ್ನು ನಮೂದಿಸಬೇಕು.

ಬೋಧಕೇತರ ಸಿಬ್ಬಂದಿಗೆ ಜನವರಿ ಮತ್ತು ಜುಲೈ 1 ರಂದು ಅರ್ಧವರ್ಷಕ್ಕೆ 15 ದಿನಗಳಂತೆ ಒಂದು

ವರ್ಷಕ್ಕೆ ಒಟ್ಟು 30 ದಿನಗಳ ಗಳಿಕೆ ರಜೆ ಹಾಗೂ ಒಂದು ವರ್ಷಕ್ಕೆ 20 ದಿನಗಳ ಅರ್ಧವೇತನ ರಜೆಯನ್ನು

ಸೇವಾಪುಸ್ತಕದಲ್ಲಿ ನಮೂದಿಸಿ ಲೆಕ್ಕಕ್ಕೆ ಜಮಾಮಾಡತಕ್ಕದ್ದು.

ಸರ್ಕಾರಿ ನೌಕರರ ಸೇವಾಪುಸ್ತಕವನ್ನು ಮಹಾಲೇಖಪಾಲರ ಬಳಿಗೆ ಪರಿಶೀಲನೆಗಾಗಿ ಯಾವಾಗ

ಸಲ್ಲಿಸಬೇಕು.


ಸರ್ಕಾರಿ ನೌಕರನು 25 ವರ್ಷಗಳ ಸೇವೆಯನ್ನು ಪೂರೈಸಿದಾಗ ಅಥವಾ ನಿವೃತ್ತಿಗೆ 5ವರ್ಷ ಬಾಕಿ

ಇರುವಾಗ ಸೇವಾ ಪುಸ್ತಕವನ್ನು ಪರಿಶೀಲನೆ ಹಾಗೂ ಮುಂಗಡ ತಪಾಸಣೆಗಾಗಿ ಮಹಾಲೇಖಪಾಲರ ಕಛೇರಿಗೆ

ಸಂಬಂಧಿಸಿದ ಕಛೇರಿ ಮುಖ್ಯಸ್ಥರು ಸಲ್ಲಿಸಬೇಕು [ಕರ್ನಾಟಕ ನಾಗರಿಕ ಸೇವಾ ನಿಯಮ 329(ಸಿ)

5. ಶ್ರೀಮತಿ ಸಂಪಗಮ್ಮ ಎನ್ನುವ ಶಿಕ್ಷಕಿಯವರು ನಿವೃತ್ತಿ ಹೊಂದುವ ವರ್ಷದಲ್ಲಿ ಗಳಿಕೆ ರಜೆಯ

ನಗದೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಿದರು. ನಿಮ್ಮ ಹಕ್ಕಿನಲ್ಲಿ ಗಳಿಕೆ ರಜೆಗಳೇ ಇಲ್ಲ ಎಂದು ಕಛೇರಿಯವರು

ತಿಳಿಸಿದರು. ನನ್ನ ಹಕ್ಕಿನಲ್ಲಿ ಇನ್ನೂ 60 ಗಳಿಕೆ ರಜೆ ಇರಬೇಕಿತ್ತು ಎಂಬುದೇ ಅವರ ತೊಳಲಾಟ. ಇವರ ಈ ಸ್ಥಿತಿ ನಮಗೆ

ಬರಬಾರದು ಎಂದರೆ ನಮ್ಮ ಸೇವಾ ವಹಿಯನ್ನು ಪ್ರತಿ ವರ್ಷ ನೋಡಬೇಕಾಗುತ್ತದೆ. ಶಿಕ್ಷಕರಾದ ನಮಗೆ

ಸೇವಾವಹಿಯನ್ನು ನೋಡುವ ಅವಕಾಶಗಳು ಇಲ್ಲವೇ?


ಕೆ.ಸಿ.ಎಸ್.ಆರ್ ನಿಯಮ 407 ಹಾಗೂ ಸುತ್ತೋಲೆ ಸಂ ಎಫ್.ಡಿ.ಎಸ್.ಎಲ್.-5 ಸಿ.ಪಿ.ಪಿ.73 ದಿನಾಂಕ:-

24/12/1973ರ ಪ್ರಕಾರ ತನ್ನ ಆಡಳಿತ ನಿಯಂತ್ರಣದಲ್ಲಿರುವ ಸರ್ಕಾರಿ ನೌಕರರಿಗೆ ಪ್ರತಿ ವರ್ಷವೂ

ಸೇವಾಪುಸ್ತಕಗಳನ್ನು ತೋರಿಸಿ ಅವುಗಳಲ್ಲಿ ಅವರಿಂದ ಅವರ ಸೇವಾಪುಸ್ತಕಗಳಲ್ಲಿ ನಮೂದಿಸಿರುವ ಮಾಹಿತಿಯನ್ನು

ಪರಿಶೀಲಿಸಿದ ಬಗ್ಗೆ ಸಹಿಗಳನ್ನು ಪಡೆದುಕೊಳ್ಳುವುದು, ಕಛೇರಿಯ ಪ್ರತಿಯೊಬ್ಬ ಮುಖ್ಯಾಧಿಕಾರಿಯ

ಕರ್ತವ್ಯವಾಗಿರುತ್ತದೆ. ಈ ನಿಯಮದ ಅನ್ವಯ ಪ್ರತಿಯೊಬ್ಬ ಸರ್ಕಾರಿ ನೌಕರನು ಅವರ ಸೇವಾವಹಿಯ

ನಮೂದುಗಳನ್ನು ಪ್ರತಿ ವರ್ಷವೂ ನೋಡಬಹುದು.

6, ಸೇವಾವಹಿಯನ್ನು ನಕಲು ಪ್ರತಿ ಮಾಡಿಸಿಕೊಳ್ಳಬಹುದೇ?


ಸರ್ಕಾರಿ ಆದೇಶ ಸಂಖ್ಯೆ ಒ.ಎಮ್. ನಂ: ಜಿ.ಎ.ಡಿ. 64 ಮಾರ್ಚ್ 71 ದಿನಾಂಕ:-19/01/02 ರ ಅನ್ವಯ

ಸೇವಾವಹಿಯ ನಕಲುಪ್ರತಿ ಮಾಡಿಕೊಳ್ಳುವ ಅವಕಾಶವಿದೆ.

@******************************@

             *ಮನೋಹರ್ R*  👤

            *GHPS ರಾಮಸಾಗರ*

            *ಬೇತಮಂಗಲ*

          *ಬಂಗಾರಪೇಟೆ ವಲಯ.*

👇👇👇👇👇👇👇👇

*ಶಿಕ್ಷಕರ ಕೈಪಿಡಿ ವೆಬ್ ಸೈಟ್ ಲಿಂಕ್* :https://gbdteachers.blogspot.com

*ಶಿಕ್ಷಕರ ಕೈಪಿಡಿ APP ಲಿಂಕ್*:https://goo.gl/EJxwn2

=============================

  ಆತ್ಮೀಯ ಶಿಕ್ಷಕರೇ ಸಂಪನ್ಮೂಲ ಶಿಕ್ಷಕರ ಕೇಂದ್ರದಲ್ಲಿ  TTMS support  FORM option ADD ಮಾಡಲಾಗಿದೆ  ಇದುವರೆಗೂ ಟಿಟಿಎಂಎಸ್ ಲಾಗಿನ್ ಮಾಡಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳದ ಶಿಕ್ಷಕರು ನಮಗೆ  ಆಗುತ್ತಿರುವ  ಸಮಸ್ಯೆಗಳನ್ನು ಸೂಕ್ತ ವಿವರಗಳೊಂದಿಗೆ  ತಿಳಿಸಲು ಹಾಗೂ screen short  ತೆಗೆದು add ಮಾಡಲು ಅವಕಾಶ ಕಲ್ಪಸಲಾಗಿದೆ ದಯವಿಟ್ಟು ಕೂಡಲೇ ಲಾಗಿನ್ ಮಾಡಿ .ಹಾಗೂ ಇದನ್ನು ಎಲ್ಲಾ  ಶಿಕ್ಷಕರಿಗೂ ಶೇರ್ ಮಾಡಿ  ವಂದನೆಗಳೊಂದಿಗೆ.

ಮಾಹಿತಿ ಕೃಪೆ:ವಾಟ್ಸಾಪ್ ಫಣೀಂದ್ರನಾಥ್ ಶಿಕ್ಷಕರು

 =================================

 ಶಿಕ್ಷಕರ ಸೇವಾ ಮಾಹಿತಿ ಬಗ್ಗೆ 


( DDPI not approved ಎಂಬ ಸಂದೇಶ ಬಂದರೆ ಈ ಕೆಳಕಂಡ ಆಂಗ್ಲ ಭಾಷೆಯ ಸಂದೇಶ ನಿಮ್ಮ registered ಮೊಬೈಲ್ ಗೆ ಬರುವ ವರೆಗೂ ಮುಂದಿನ login ಹಂತಗಳನ್ನು ಪ್ರಯತ್ನಿಸದಿರಿ )

Your service and qualification details with KGID _________ is called for objection by DDPI. Logon to TDS software and choose TEACHER option to get OTP on your mobile. Use this OTP as password to login to TDS for further process.

ಆದೇಶಗಳು :-
           ***  *ಶಿಕ್ಷಕರ ಮಾಹಿತಿ ಸಂಗ್ರಹಣಾ ತಂತ್ರಾಂಶದಲ್ಲಿ ಅಳವಡಿಸಲಾದ ಶಿಕ್ಷಕರ ಮಾಹಿತಿಗಳನ್ನು ಅಪ್ರೊವ್ ಮಾಡಲು ಪರಿಶೀಲಿಸಬೇಕಾದ ಅಂಶಗಳ ಕುರಿತ ಸುತ್ತೊಲೆ ದಿನಾಂಕ:28-09-2017* 

        *** *"ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ "*
(Teacher's Service Data Software)

*_# ವೆಬ್ ಸೈಟ್ ವಿಳಾಸ:_*
http://ktbs.karnataka.gov.in/TeachersInfo/LoginPage.aspx

*# ಈ ಕೆಳಗಿನ ಸೂಚನೆಯನ್ನು ಪಾಲಿಸುತ್ತಾ ಮುಂದುವರೆಯಿರಿ"*

(೧) ಕೆಜಿಐಡಿ ಕಾಲಮ್ ನಲ್ಲಿ, ಪ್ರಥಮ ಕೆಜಿಐಡಿ ನಂ. ಎಂಟ್ರಿ ಮಾಡಿ

(೨) ನಂತರ, Get OTP ಬಟನ್ ಪ್ರೆಸ್ ಮಾಡಿ

(೩) ನಿಮ್ಮ ಮೊಬೈಲ್ ನಂ.ಗೆ OTP ನಂ. ಬರುತ್ತದೆ

(೪) ಆ OTP ನಂ.ಅನ್ನು OTP ಕಾಲಮ್ ನಲ್ಲಿ ಹಾಕಿ -

(೫) *Security Code* ಕಾಲಂ ನಲ್ಲಿ, OTP ಕಾಲಮ್ ಕೆಳಗೆ ಇದ್ದಿರುವ ನಂ.ಅನ್ನು (ಇಟಾಲಿಕ್ ಸೈಲ್'ನಲ್ಲಿ ಇರುವ ನಾಲ್ಕು ಅಂಕಿಯ ಸಂಖ್ಯೆ) ಎಂಟ್ರಿ ಮಾಡಿ

(೬) ನಂತರ, *Log In* ಬಟನ್ ಪ್ರೆಸ್ ಮಾಡಿ

(೭) *View Details* ಪ್ರೆಸ್ ಮಾಡಿ

(೮) *'ಶಿಕ್ಷಕರ ಮಾಹಿತಿ ನಮೂನೆ-೨೦೧೭'* ಇರುತ್ತದೆ, ಇದರಲ್ಲಿರುವ ನಿಮ್ಮ ಎಲ್ಲಾ ಸೇವಾ ಮಾಹಿತಿಗಳು ಸರಿಯಾಗಿದೆಯೇ ನೋಡಿಕೊಳ್ಳಿ

(೯) ನಂತರ, ಎಲ್ಲಾ ಮಾಹಿತಿ 'ಸರಿ' ಇದ್ದಲ್ಲಿ,
(೧೦) *'ಡಿ.ಡಿ.ಓ ನೀಡಿರುವ ಮಹಿತಿಗೆ ನಿಮ್ಮ ಸಹಮತವಿದೆಯೆ?'*
*_ಈ ಮಾಹಿತಿಯು ಸರಿ ಇದ್ದಲ್ಲಿ,_* ಕೆಳಗೆ *'ಹೌದು'* ಎಂದು ಕ್ಲಿಕ್ ಮಾಡಿ
ಅಥವಾ
*_ಈ ಮಾಹಿತಿಯು ಸರಿ ಇರದಿದ್ದಲ್ಲಿ, 'ಇಲ್ಲ'* ಎಂದು ಕ್ಲಿಕ್ ಮಾಡಿ._*

ನಂತರ, ಕೆಳಗೆ ಕಂಡುಬರುವ ಕಾಲಮ್ ನಲ್ಲಿ *_'ತಪ್ಪು ಮಾಹಿತಿ' ಯಾವುದಾಗಿತ್ತು, 'ಸರಿ ಯಾದ ಮಾಹಿತಿ' ಯಾವುದು ಎಂದು ಬರೆಯಿರಿ._*

(೧೧) 'ನಲಿ ಕಲಿ ಯೋಜನೆಯಡಿಯಲ್ಲಿ ನೀವು ತರಬೇತಿ ಪಡೆದಿದ್ದೀರ ?'
ಹೌದು/ ಇಲ್ಲ --> ಆಯ್ಕೆ ಮಾಡಿ
* ತರಬೇತಿಯ ಅವಧಿ: 5/ 8/ 10/‌ 12
--> ಆಯ್ಕೆ ಮಾಡಿ

(೧೨) ಕೊನೆಯಲ್ಲಿ SUBMIT ಬಟನ್ ಪ್ರೆಸ್ ಮಾಡಿ

❄❄❄❄❄❄❄❄❄❄❄❄❄❄❄❄❄❄❄❄❄❄❄❄❄❄

TTMS ಬಗ್ಗೆ ಮಾಹಿತಿ 


*** TTMS ಕುರಿತು ವಿಡಿಯೋ ಮಾಹಿತಿ ( download here )

(help@ttms-dsert.in
ಯಾವ ಶಿಕ್ಷಕರಿಗೆ ಸಮಸ್ಯೆ ಇದೆಯೋ ಆ ಶಿಕ್ಷಕರು ಮೇಲಿನ ಮೇಲೆ ಇಮೇಲ್ ಐಡಿಗೆ ವಿಸ್ತಾರವಾಗಿ ದೂರವಾಣಿ ಸಂಖ್ಯೆ ಕೆಜಿಐಡಿ ನಂಬರ್ ಹೆಸರು ಮತ್ತು ಜನ್ಮದಿನಾಂಕ ತಿಳಿಸಿದರೆ ಅವರು ಮತ್ತೊಮ್ಮೆ ಅವರಿಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಅವರ ದೂರವಾಣಿ ಸಂಖ್ಯೆಗೆ ಕಳಿಸುತ್ತಾರೆ)

(ಸೂಚನೆ :- ಒಂದು ಮೊಬೈಲ್ ಅಥವಾ pc ಯಿಂದ sign in ಆದ ನಂತರ ಬೇರೊಬ್ಬರ ಮಾಹಿತಿ ತುಂಬಲು sign out ಆಗಿ ಅವರ desert ಯಿಂದ ಬಂದ ಇಮೇಲ್ ಬಳಸಿ sign in ಆಗಬೇಕು )

ಹಂತ 1 :- ನಿಮ್ಮ ಮೊಬೈಲ್ ಸಂಖ್ಯೆ ಗೆ ಈ ಕೆಳಗೆ ನೀಡಲಾದ ಚಿತ್ರದಲ್ಲಿನ                 ಮೆಸೆಜ್ ಬಂದಲ್ಲಿ ಮುಂದಿನ ಹಂತಕ್ಕೆ ಹೋಗಿ.

ಹಂತ 2:-  sms ನಲ್ಲಿ ನೀಡಿರುವ ಲಿಂಕ್ ಉಪಯೋಗಿಸಿ zoho app                   download ಮಾಡಿ  ( => Zoho app ಲಿಂಕ್ )
ಹಂತ3:- sms ನಲ್ಲಿ ನಿಮ್ಮ zoho ಅಕೌಂಟ್ ಲಿಂಕ್ ಇದ್ದು ಈ ಲಿಂಕ್ ಮೇಲೆ click ಮಾಡಿದಾಗ app ಮೂಲಕ ಲಿಂಕ್ open ಮಾಡಿ. ನಂತರ ನೀವು ನೆನಪಿಟ್ಟುಕೊಳ್ಳಬಹುದಾದ  password ನ್ನು ಸೆಟ್ ಮಾಡಿ log in ಬಟನ್ click ಮಾಡಿ.
ಹಂತ 4:-
ಹಂತ 5 :-

Pan card

**ಪಾನ್ ಕಾರ್ಡ್**

"ಪಾನ್ ಕಾರ್ಡ್ ಎಂದರೇನು? ಹೇಗೆ ಪಡೆಯಬೇಕು? ಏತಕ್ಕೆ ಬೇಕು...??"

ಭಾರತದ ನಾಗರಿಕರಾಗಿರಲಿ ಅಥವಾ ಎನ್ ಆರ್ ಐಗೇ ಆಗಿರಲಿ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸಲು ಪಾನ್ ಕಾರ್ಡ್ ಅತ್ಯಗತ್ಯ.
ಇಂದು ಅನೇಕ ಸಂದರ್ಭಗಳಲ್ಲಿ ಪಾನ್ ಕಾರ್ಡ್ ಅಗತ್ಯ ಬೀಳುತ್ತದೆ. ಕೇವಲ ಆದಾಯ ತೆರಿಗೆ ಪಾವತಿ ಒಂದೇ ಅಲ್ಲದೇ ಅನೇಕ ಉಪಯೋಗಗಳನ್ನು ಇದು ಹೊಂದಿದೆ. ಪಾನ್ ಕಾರ್ಡ್ ನ ಮೂಲಭೂತ ಅಂಶಗಳನ್ನು ಅರಿತುಕೊಳ್ಳಬೇಕಾದದ್ದು ಅಗತ್ಯ.
#################################

* ಪಾನ್ ಕಾರ್ಡ್ ಎಂದರೇನು?

ಭಾರತದ ಆದಾಯ ತೆರಿಗೆ ಇಲಾಖೆ ಕೊಡಮಾಡುವ 10 ಅಂಕೆಗಳ ಕಾರ್ಡ್ ಇದಾಗಿದ್ದು ಶಾಶ್ವತ ಖಾತೆ ನಂಬರ್ ಎಂದು ಕರೆಸಿಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಅಂಕೆಗಳನ್ನು ನೀಡಲಾಗಿರುತ್ತದೆ.
ಇದೊಂದು ಶಾಶ್ವತ ನಂಬರ್ ಆಗಿದ್ದು ನಿಮ್ಮ ವಿಳಾಸ ಬದಲಾವಣೆ ಯಾವ ಪರಿಣಾಮ ಉಂಟುಮಾಡುವುದಿಲ್ಲ. ಅಲ್ಲದೇ ಇದನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಯುನಿವರ್ಸ್ ಲ್ ಗುರುತಿನ ಚೀಟಿ ತರಹದಲ್ಲಿ ಕೆಲಸ ಮಾಡುತ್ತದೆ. ಆದಾಯ ತೆರಿಗೆ, ಹಣಕಾಸು ವ್ಯವಹಾರಗಳು ಈ ಖಾತೆ ಆಧಾರದಲ್ಲಿಯೇ ನಡೆಯುತ್ತದೆ. ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ಆಧಾರವಾಗಿರುತ್ತದೆ.

* ಸುಳ್ಳು ನಂಬಿಕೆಗಳು :

ಪಾನ್ ಕಾರ್ಡ್ ನ್ನು ಕೇವಲ ತೆರಿಗೆ ತುಂಬಲು ಬಳಸಲಾಗುತ್ತದೆ ಎಂದು ಹಲವರು ನಂಬಿಕೊಂಡಿದ್ದಾರೆ. ಇದನ್ನು ಹೊರತಾಗಿಯೂ ಪಾನ್ ಕಾರ್ಡ್ ನ್ನು ಹಲವು ಕಡೆ ಬಳಕೆ ಮಾಡಬಹುದು. ಬ್ಯಾಂಕ್ ಖಾತೆ ತೆರೆಯಲು, ಆಸ್ತಿ ಮತ್ತು ವಾಹನ ಮಾರಾಟ ಮತ್ತು ಖರೀದಿ ವೇಳೆ, ಷೇರು ಮತ್ತು ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವ ವೇಳೆ ಗುರುತಿನ ಪತ್ರವಾಗಿ ಬಳಕೆ ಮಾಡಬಹುದು.

* ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಯಾರೂ ಬೇಕಾದರೂ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆಯ ಪ್ರಶ್ನೆ ಎದುರಾಗುವುದಿಲ್ಲ. ಮೈನರ್ ಅಥವಾ ಮಗುವಿನ ಹೆಸರಲ್ಲಿ ಪಾನ್ ಕಾರ್ಡ್ ಮಾಡಿಸುವುದಾದರೆ ಪಾಲಕರ ರುಜು ಕಡ್ಡಾಯ.
ಆದಾಯ ತೆರಿಗೆ ಇಲಾಖೆ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಕೆಳಗಿನ ತಾಣಗಳು ಸಹ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೆರವಾಗುತ್ತವೆ.

o UTI PAN Card Application
o NSDL Application for PAN

ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣ ವನ್ನು ನೀಡಬೇಕಾಗುತ್ತದೆ.

* ಯಾವ ಗುರುತಿನ ದಾಖಲೆ ನೀಡಬಹುದು?

- ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
- ನೋಂದಾಯಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರ
- ಕ್ರೆಡಿಟ್ ಕಾರ್ಡ್
- ಬ್ಯಾಂಕ್ ಸ್ಟೇಟ್ ಮೆಂಟ್
- ರೇಶನ್ ಕಾರ್ಡ್
- ಚಾಲನಾ ಪರವಾನಗಿ
- ಮತದಾನ ಗುರುತಿನ ಚೀಟಿ
- ಪಾಸ್ ಪೋರ್ಟ್

* ಪಾನ್ ಕಾರ್ಡ್ ರಿಪ್ರಿಂಟ್ :

ನಿಮಗೆ ಪಾನ್ ಕಾರ್ಡ್ ಸಂಖ್ಯೆ ನೀಡಲಾಗಿದ್ದರೆ ಮಾತ್ರ ಈ ಸೌಲಭ್ಯ ಬಳಸಿಕೊಳ್ಳಲು ಸಾಧ್ಯವಿದೆ. ಎನ್ ಎಸ್ ಡಿಎಲ್ ವೆಬ್ ಸೈಟ್ ಮೂಲಕ ಇದನ್ನು ಪರಿಶೀಲಿಸಬಹುದು.

* ಪಾನ್ ಕಾರ್ಡ್ ನ ಗುಣಲಕ್ಷಣಗಳೇನು?

ಪೊನೆಟಿಕ್ಸ್ ಸೌಂಡ್ ಆಧಾರದಲ್ಲಿ ಹೊಸ ಪಾನ್ ಕಾರ್ಡ್ ಗಳಮನ್ನು ನೀಡಲಾಗುತ್ತಿದೆ ಮತ್ತು ಅನೇಕ ಅಂಶಗಳ ದಾಖಲೆ ಇರುತ್ತದೆ.
ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ತಂದೆಯ ಹೆಸರನ್ನು ಒಳಗೊಂಡಿರುತ್ತದೆ. ಕಾರ್ಡ್ ನ ಬಲಬದಿಯಲ್ಲಿ ಪಾನ್ ಕಾರ್ಡ್ ನೀಡಿರುವ ದಿನಾಂಕವನ್ನು ತಿಳಿಸಲಾಗಿರುತ್ತದೆ.

10 ಇಂಗ್ಲಿಷ್ ಅಕ್ಷರಗಳು ಏನನ್ನು ಸೂಚಿಸುತ್ತವೆ?

1. ಮೊದಲ ಇಂಗ್ಲಿಷ್ 5 ಅಕ್ಷರಗಳನ್ನು ಕೋರ್ ಗುಂಪು ಎಂದು ಕರೆಯಬಹುದು.
2. ಕಾರ್ಡ್ ನ ಮೊದಲ ಮೂರು ಅಕ್ಷರಗಳು A ದಿಂದ Z ವರೆಗಿನ ಅಕ್ಷರಗಳಲ್ಲಿ ಯಾವುದು ಇರಬಹುದು.
3. ಕಾರ್ಡ್ ನ ನಾಲ್ಕನೇ ಅಕ್ಷರ ವಿವಿಧ ಸಂಗತಿಯನ್ನು ಸೂಚನೆ ಮಾಡುತ್ತದೆ.
C - ಕಂಪನಿ
P - ವ್ಯಕ್ತಿ
H - ಹಿಂದು ಅವಿಭಕ್ತ ಕುಟುಂಬ
F - ವಿಭಾಗ
A - ವ್ಯಕ್ತಿಗಳ ಗುಂಪು
T - ಟ್ರಸ್ಟ್
B - ವ್ಯಕ್ತಿಯ ಗುರುತು
L - ಸ್ಥಳೀಯ ಸಂಸ್ಥೆ
J - ಕಾನೂನು ಪ್ರಕಾರ ವ್ಯಕ್ತಿ ಎಂದು ಪರಿಗಣಿಸ್ಪಡುವುದು.
G - ಸರ್ಕಾರ
AAACA- ಕಂಪನಿ, AAAHA-ಹಿಂದು ಅವಿಭಕ್ತ ಕುಟುಂಬ
4. ಐದನೇ ಅಕ್ಷರವು ಒಂದನೇ ಅಕ್ಷರದ ತದ್ರೂಪಾಗಿರುತ್ತದೆ.

* ಕೊನೆ ಮಾತು:

ಆಧುನಿಕ ಸಮಾಜದ ರೀತಿ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಕೂಡಲೆ ಅರ್ಜಿ ಹಾಕುವುದು ಉತ್ತಮ. ಸ್ವಲ್ಪ ಸಮಯವನ್ನು ಮೀಸಲಿಟ್ಟು ಕಾರ್ಡ್ ಮಾಡಿಕೊಂಡರೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.
____________________________________________________________________________________
 ☘☘☘☘☘☘☘☘☘
*ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?*
🍁🍁🍁🍁🍁🍁🍁🍁🍁🍁
SURESH HALAGALI
*ನವದೆಹಲಿ, ಸೆ. 17: ಚಾಲನ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಪತ್ರ ಹಾಗೂ ಆಧಾರ್ ಗುರುತಿನ ಚೀಟಿ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವ ಸುದ್ದಿ ಓದಿರುತ್ತೀರಿ. ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ? ಇಲ್ಲಿ ಓದಿ*

*ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಬಗ್ಗೆ ಅಧಿಕೃತವಾಗಿ ಆದೇಶ ಪ್ರಕಟವಾಗಿಲ್ಲ.*

*ಇತ್ತೀಚೆಗೆ ಆಧಾರ್ ಲಿಂಕ್ ಮಾಡುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವುದು ಸಲ್ಲದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಈ ಬಗ್ಗೆ ಸೂಕ್ತವಾಗಿ ಚರ್ಚಿಸಿ, ಸಮಂಜಸ ನಿರ್ಧಾರ ಕೈಗೊಳ್ಳುವುದಾಗಿ ರವಿಶಂಕರ್ ಪ್ರಸಾದ್ ತಿಳಿಸಿದರು.*

*ಚಾಲನ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಪತ್ರ ಹಾಗೂ ಆಧಾರ್ ಲಿಂಕ್ ಮಾಡಲು ಅನುಕೂಲವಾಗುವಂತೆ ಎಲ್ಲಾ ರಾಜ್ಯಗಳ ಆಯಾ ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸದ್ಯಕ್ಕೆ ಈ ಸೇವೆ ಇನ್ನೂ ಲಭ್ಯವಾಗಿಲ್ಲ. ಲಭ್ಯವಾದ ಬಳಿಕ ಈ ಕೆಳಗಿನ ವಿಧಾನವನ್ನು ಬಳಸಿ..*

🔴 * ಮೊದಲಿಗೆ ಸಾರಿಗೆ ಇಲಾಖೆ ವೆಬ್ ಸೈಟ್ ಗೆ ಭೇಟಿ ಕೊಡಿ (ಉದಾ: http://transport.karnataka.gov.in)*
🔵 * ಆಧಾರ್ ಸಂಖ್ಯೆ ನಮೂದಿಸುವ ಆಯ್ಕೆ ಮಾಡಿಕೊಳ್ಳಿ*
🔴 * Search Element ಎಂಬಲ್ಲಿ ಲೈಸನ್ಸ್ ಅಥವಾ ನೋಂದಣಿ ಸಂಖ್ಯೆ ಆಯ್ಕೆ ಮಾಡಿಕೊಳ್ಳಿ*
🔵 * ನಿಮ್ಮ ನೋಂದಣಿ ಸಂಖ್ಯೆ ಅಥವಾ ಲೈಸನ್ಸ್ ನಂಬರ್ ಸೇರಿಸಿ.*
🔴 * Get details ಚಿನ್ಹೆ ಆಯ್ದುಕೊಂಡು ನಿಮ್ಮ ವಾಹನದ ಸಂಖ್ಯೆ ಸರಿ ಇದೆಯೇ ಪರಿಶೀಲಿಸಿ.*
🔵 * ನಂತರ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕಲಂನ್ನು ಪರಿಶೀಲಿಸಿ.*
🔴 * 12 ಅಂಕಿಯ ಆಧಾರ್ ಸಂಖ್ಯೆಯನ್ನು ದಾಖಲಿಸಿ, ಫೋನ್ ನಂಬರ್ ನಮೂದಿಸಿ.*
🔵 * ಇದಾದ ಬಳಿಕ ನಿಮ್ಮ ಆಧಾರ್ ಹಾಗೂ ಲೈಸನ್ಸ್ ಜೋಡಣೆಯಾಗಿದ್ದು ಯಶಸ್ವಿಯಾಗಿದ್ದಕ್ಕೆ ಮೊಬೈಲಿಗೆ ಸಂದೇಶ ಬರಲಿದೆ.*
___________________________________________________________________________
_____________________________________________

✍🌹 *NMMS & NTSE ಸ್ಪರ್ಧಾತ್ಮಕ ಪರೀಕ್ಷೆಗಳು ಹೆದರಿಕೆ ಬೇಡ, ಇರಲಿ ಧೈರ್ಯ*


*ಇದೀಗ ಶಾಲೆಗಳಲ್ಲಿ ನವೆಂಬರ್ ತಿಂಗಳಿನಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ. ಇದು ಅಗತ್ಯ ಕೂಡ. ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುವುದು ಸಹ ಶಾಲೆಗಳ ಕರ್ತವ್ಯ. ಶಿಕ್ಷಕರಿಗೆ ಇದೊಂದು ಹೆಚ್ಚುವರಿ ಕಾರ್ಯ. ಆದರೂ ಅದನ್ನು ಅನೇಕರು ಬಹಳ ಅಸ್ಥೆಯಿಂದ ಮಾಡುತ್ತಾರೆ. ಈ ಪರೀಕ್ಷೆಗಳನ್ನು ಮಕ್ಕಳು ಎದುರಿಸುವುದರಿಂದ ಅನೇಕ ಪ್ರಯೋಜನಗಳಿವೆ.*

*ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳಿಗೆ ಹೇಗೆ ಪ್ರವೇಶ ಸಿಗುತ್ತದೆ. ಅಲ್ಲಿನ ನಡಾವಳಿ ಏನು? ಪರೀಕ್ಷೆಗಳನ್ನು ಹೇಗೆ ನಡೆಸಲಾಗುವುದು? ಅದರ ಅರ್ಜಿಗಳನ್ನು ತುಂಬುವುದು ಹೇಗೆ? ಇತ್ಯಾದಿಗಳ ಕುರಿತು ಮೊದಲ ದರ್ಶನ ಪ್ರಾಯೋಗಿಕ ತರಬೇತಿಯ ಮೂಲಕವೇ ದೊರೆಯುತ್ತದೆ. ಅಲ್ಲದೆ, ಮಕ್ಕಳು ವೇಗವಾಗಿ ಯೋಚಿಸುವುದನ್ನು ಕಲಿಯುತ್ತಾರೆ.*

*ಇದು ಬಹಳ ಮುಖ್ಯವಾದ ವಿಷಯ. ಮುಂದೆ ಇದು ವಾರ್ಷಿಕ ಪರೀಕ್ಷೆಗಳಲ್ಲಿಯೂ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯಕವಾಗುತ್ತದೆ. ಈ ಪರೀಕ್ಷೆಯನ್ನು ಬರೆದ ಅನುಭವ ಮಕ್ಕಳಿಗೆ ಮುಂದೆ ದೊಡ್ಡ ಲಾಭಗಳನ್ನು ತಂದು ಕೊಡುತ್ತದೆ. ಸರ್ಕಾರ ಸಾಮಾನ್ಯರ ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅವುಗಳಲ್ಲಿ ಮುಖ್ಯವಾದದ್ದು ಈ ಪರೀಕ್ಷೆಗಳು ಒಂದು*.

*ಮೊದಲಿಗೆ ಎನ್‍ಎಂಎಂಎಸ್ಎಸ್ (ನ್ಯಾಷನಲ್‍ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‍ಶಿಪ್ ಸ್ಕೀಮ್) ಪರೀಕ್ಷೆಯನ್ನು ನೋಡೋಣ. ಇದೊಂದು ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಮಾನವ ಸಂಪನ್ಮೂಲ ಸಚಿವಾಲಯ ನಡೆಸುವ ಪರೀಕ್ಷೆಯಾಗಿದ್ದು, ಇದನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಂಟನೇ ತರಗತಿಯ ಮಕ್ಕಳಿಗೆ ನಡೆಸಲಾಗುವುದು. ಇದು ಪೋಷಕರ ವಾರ್ಷಿಕ ಆದಾಯ ಒಂದೂವರೆ ಲಕ್ಷಕ್ಕೂ ಕಡಿಮೆ ಇದ್ದವರ ಮಕ್ಕಳಿಗೆ ಮೀಸಲು. ಇದೊಂದು ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮವಾಗಿದ್ದು, ಈ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಅವರು ದ್ವಿತೀಯ ಪಿಯುಸಿವರೆಗೂ ಪ್ರತಿ ತಿಂಗಳು ಐದು ನೂರು ರೂಪಾಯಿಗಳ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಮಕ್ಕಳ ವಿದ್ಯಾಭ್ಯಾಸ ಆರ್ಥಿಕ ಮುಗ್ಗಟ್ಟಿನ ಕಾರಣಗಳಿಂದಾಗಿ ನಿಲ್ಲಬಾರದು ಹಾಗೂ ಅವರು ಕಡ್ಡಾಯವಾಗಿ ಮುಂದಿನ ಹಂತದ ಶಿಕ್ಷಣಕ್ಕೆ ಹೋಗಬೇಕು ಎಂಬ ಸದುದ್ದೇಶದ ಯೋಜನೆಯಿದು. ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಸದರಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.*

*ಸದ್ಯ ಬಿಇಒ ಕಚೇರಿಗಳಲ್ಲಿ ಅರ್ಜಿಗಳು ದೊರೆಯುತ್ತಿದ್ದು ಸೆಪ್ಟೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ನವೆಂಬರ್ 5ರಂದು ಪರೀಕ್ಷೆ ನಡೆಯಲಿದೆ. ಅರ್ಜಿಗಳು ಉಚಿತವಾಗಿ ಲಭ್ಯವಿದ್ದು ಪರೀಕ್ಷಾ ಶುಲ್ಕ ಇಪ್ಪತ್ತು ರೂಪಾಯಿಗಳನ್ನು ವಿದ್ಯಾರ್ಥಿಗಳು ನೀಡಬೇಕಾಗುತ್ತದೆ. (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರೂ ಹತ್ತು). ಹೆಚ್ಚಿನ ವಿವರಗಳು ಇಲಾಖೆಯ ಜಾಲತಾಣ http://dsert.kar.nic.in/easp/ntsenmms.asp ದಲ್ಲಿ ದೊರೆಯುತ್ತದೆ.*

✍🌹 *ಪರೀಕ್ಷೆಯ ಕ್ರಮ ಹೇಗೆ?*

*ಇದೊಂದು ಪೂರ್ಣ ಲಿಖಿತ ಪರೀಕ್ಷೆಯಾಗಿದ್ದು, ಎರಡು ಭಾಗಗಳಲ್ಲಿ ನಡೆಸಲಾಗುವುದು. ಒಂದು ಬೌದ್ಧಿಕ ಸಾಮರ್ಥ್ಯವನ್ನು ಅಳೆಯುವ ಪರೀಕ್ಷೆ (ಎಂಎಟಿ: ಮೆಂಟಲ್ ಎಬಿಲಿಟಿ ಟೆಸ್ಟ್‌) ಮತ್ತು ಶೈಕ್ಷಣಿಕ ಮಟ್ಟವನ್ನು ಅಳೆಯುವ ಪರೀಕ್ಷೆ (Scholastic aptitude test). ಇದು ತೊಂಬತ್ತು ಪ್ರಶ್ನೆಗಳಿದ್ದು ಕೊಟ್ಟ ಉತ್ತರಗಳಲ್ಲಿ ಸರಿಯುತ್ತರವನ್ನು ಆರಿಸುವ ಪರೀಕ್ಷೆಯಾಗಿರುತ್ತದೆ. ಮೊದಲನೆಯದರಲ್ಲಿ ವಿದ್ಯಾರ್ಥಿಯ ಕಾರಣ ಕೊಡುವ ಸಾಮರ್ಥ್ಯ, ಆಲೋಚನಾ ಸಾಮರ್ಥ್ಯ, ಸರಣಿ ಇತ್ಯಾದಿಗಳಿದ್ದರೆ ಎರಡನೆಯದರಲ್ಲಿ ಕಲಿಕಾ ವಿಷಯಗಳಿಗೆ ಸಂಬಂಧಿಸಿದಂತೆಯೂ ತೊಂಬತ್ತು ಪ್ರಶ‍್ನೆಗಳಿರುತ್ತವೆ. ಇದರ ಪಠ್ಯಕ್ರಮ ಎಂಟನೆಯ ತರಗತಿಯವರೆಗಿನ ವಿಜ್ಞಾನ, ಸಮಾಜ ಮತ್ತು ಗಣಿತದ ಪಠ್ಯ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ/ಅಂಗವಿಕಲರಿಗೆ ಪರೀಕ್ಷೆಯನ್ನು ಬರೆಯಲು ನಿಯಮಾನುಸಾರ ಹೆಚ್ಚಿನ ಸಮಯವನ್ನು ಕೊಡಲಾಗುತ್ತದೆ. ಹಿಂದಿನ ಪ್ರಶ‍್ನಪತ್ರಿಕೆ ಹಾಗೂ ಇತರ ಸಹಾಯಕ ಮಾಹಿತಿ ಮೇಲ್ಕಾಣಿಸಿದ ಜಾಲತಾಣದಲ್ಲಿ ಲಭ್ಯ.*

🌹✍ *ಎನ್‍ಟಿಎಸ್‍ಇ ಪರೀಕ್ಷೆ*

*ನ್ಯಾಷನಲ್ ಟ್ಯಾಲೆಂಟ್‍ ಸರ್ಚ್ ಎಕ್ಸಾಮ್‍. ಇದು ಎನ್‍ಸಿಇಆರ್‍ಟಿ ನಡೆಸುವ ಪರೀಕ್ಷೆಯಾಗಿದ್ದು ಇದನ್ನು 1963ರಿಂದ ನಡೆಸಿಕೊಂಡು ಬರಲಾಗುತ್ತಿದೆ. ಎರಡು ಹಂತಗಳಲ್ಲಿ ಈ ಪರೀಕ್ಷೆ ನಡೆಲಿದ್ದು ಇದು ಹತ್ತನೇ ತರಗತಿಯ ಮಕ್ಕಳಿಗೆ ಮಾತ್ರ*

*ಈ ಪರೀಕ್ಷೆಯಲ್ಲಿ ಯಶಸ್ವಿಯಾದವರಿಗೆ ಎಂಜಿನಿಯರಿಂಗ್, ವೈದ್ಯಕೀಯವೂ ಸೇರಿದಂತೆ ಪಿಎಚ್‍.ಡಿ. ಅಧ್ಯಯನದವರೆಗೂ ಮಾಸಿಕ ವಿದ್ಯಾರ್ಥಿ ವೇತನ ದೊರೆಯಲಿದೆ. ಪರೀಕ್ಷೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುತ್ತದೆ. ಹೀಗಾಗಿ, ತೀವ್ರ ಸ್ಪರ್ಧೆಯಿರುತ್ತದೆ. ಇದರ ಪಠ್ಯಕ್ರಮ ಹತ್ತನೆಯ ತರಗತಿಯವರೆಗಿನದ್ದಾಗಿದ್ದು ಇಂಗ್ಲಿಷ್‍ ಭಾಷಾ ವಿಷಯವೂ ಸೇರಿರುತ್ತದೆ. ರಾಜ್ಯಮಟ್ಟದ ಪರೀಕ್ಷೆ 180 ಅಂಕಗಳಿಗೆ ನಡೆದರೆ, ರಾಷ್ಟ್ರಮಟ್ಟದ ಪರೀಕ್ಷೆ 200 ಅಂಕಗಳಿಗೆ ನಡೆಯುತ್ತದೆ. ಇದು ಸಹ ಬಹು ಉತ್ತರಗಳಲ್ಲಿ ಸರಿ ಉತ್ತರವನ್ನು ಆರಿಸುವ ಪ್ರಶ್ನೆಗಳನ್ನು ಹೊಂದಿರುತ್ತದೆ. ಪಾಸಾಗಲು ಶೇ.40 ಅಂಕಗಳನ್ನು ಗಳಿಸಬೇಕು (ಮೀಸಲಾತಿ ವರ್ಗಕ್ಕೆ ಶೇ. 32). ಕಾಲ ಮಿತಿ ಎಲ್ಲರಿಗೂ ತೊಂಬತ್ತು ನಿಮಿಷಗಳು ಮಾತ್ರ.*
(Mallikarjun Hulasur)

🌹✍ *ತಯಾರಿ ಹೇಗೆ?*

*ಎನ್‍ಸಿಇಆರ್‍ಟಿ ಜಾಲತಾಣದಲ್ಲಿ ಪೂರಕ ಮಾಹಿತಿ, ಹಳೆಯ ಪ್ರಶ್ನಪತ್ರಿಕೆ (ಉತ್ತರಗಳೊಂದಿಗೆ) ಲಭ್ಯವಿದ್ದು ಅವನ್ನು ಇಳಿಸಿಕೊಂಡು ಅಭ್ಯಾಸ ಮಾಡಬಹುದು. ಇದರ ಜೊತೆಗೆ ಮಾರುಕಟ್ಟೆಯಲ್ಲಿ ಅನೇಕ ಪುಸ್ತಕಗಳು ದೊರೆಯುತ್ತವೆ. ಕನ್ನಡದ ಕೆಲವು ಪುಸ್ತಕಗಳು ಸಹ ಮಾರುಕಟ್ಟೆಯಲ್ಲಿವೆ. ಕೆಲವೆಡೆ ತರಬೇತಿಯನ್ನು ಸಹ ನೀಡಲಾಗುತ್ತದೆ. ಇವುಗಳ ಯುಕ್ತ ಪ್ರಯೋಜನ ಪಡೆದುಕೊಂಡು ಪರೀಕ್ಷೆಯಲ್ಲಿ ಯಶಸ್ಸು ಕಾಣಬಹುದು.*

*ವಿದ್ಯಾರ್ಥಿಗಳ ವಿಷಯಜ್ಞಾನ ಮತ್ತು ಆಲೋಚನಾ ಕ್ರಮ ಎರಡೂ ಪರೀಕ್ಷೆಗಳಲ್ಲಿ ಬಹಳ, ಬಹಳ ಮುಖ್ಯ. ಇದನ್ನು ಅಭ್ಯಾಸ ಮಾಡಿ ಗಳಿಸಿಬೇಕು. ಬಾಯಿಪಾಠ ಮಾಡುವುದರಿಂದ ಈ ಪರೀಕ್ಷೆಗಳಲ್ಲಿ ಯಶಸ್ಸು ಸಿಗದು! ವಿಷಯವನ್ನು ಸರಿಯಾಗಿ ಮತ್ತು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ನೂರಾರು, ಸಾವಿರಾರು ಸಮಸ್ಯೆಗಳನ್ನು ವಿದ್ಯಾರ್ಥಿ ತಾನೇ ಬಿಡಿಸಬೇಕು. ಈ ಸಾಮರ್ಥ್ಯ ಗಳಿಸಿದ ನಂತರ ನಿರ್ದಿಷ್ಟ ಸಮಯಲ್ಲಿ ಇಂತಿಷ್ಟು ಸಮಸ್ಯೆಗಳನ್ನು ಬಿಡಿಸುವುದು ಎಂಬ ಗುರಿಯಿಟ್ಟುಕೊಂಡು ಅಭ್ಯಾಸ ಮಾಡಬೇಕು. ಆಗ ಸಮಸ್ಯೆಗಳನ್ನು ಬಿಡಿಸುವ ಸಾಮರ್ಥ್ಯ ಹಾಗೂ ವೇಗ ತಂತಾನೆ ಬರುತ್ತದೆ. ಚಿತ್ರಗಳುಳ್ಳ ಪ್ರಶ್ನೆಗಳಿರುತ್ತವೆ. ಅವನ್ನು ಬಿಡಿಸಲು ಸಮಾಧಾನವಾಗಿ ಎಲ್ಲ ಚಿತ್ರಗಳನ್ನು ಪರಿಶೀಲಿಸಿ ಬಿಟ್ಟ ಸ್ಥಳದಲ್ಲಿ ಯಾವ ಚಿತ್ರ ಬರುತ್ತದೆ ಎಂಬುದನ್ನು ತೀರ್ಮಾನಿಸಿ ಅದನ್ನು ಹಾಕಬೇಕು. ಇದು ಏನೇನೂ ಕಷ್ಟವಲ್ಲ! ನಿಧಾನವಾಗಿ ಚಿತ್ರಗಳನ್ನು ಒಂದುಕಡೆಯಿಂದ ಪರಿಶೀಲಿಸುತ್ತಾ ಸಾಗಬೇಕು. ಚಿತ್ರದ ಮೇಲೆ ಬೆರಳಿಟ್ಟುಕೊಂಡು ತುಸು ತುಸುವೇ ಮುಂದುವರೆಯುತ್ತ ಅದರ ವಿನ್ಯಾಸ ಹೇಗಿದೆ ಎಂದು ಅರಿಯಬೇಕು. ಆಗ ಬಿಟ್ಟ ಸ್ಥಳ ತುಂಬಲು ಸುಲಭವಾಗುತ್ತದೆ. ಎಷ್ಟು ಹೆಚ್ಚು ಸಮಸ್ಯೆಗಳನ್ನು ಬಿಡಿಸುತ್ತೀರೋ ಅಷ್ಟು ಅನುಭವಿಯಾಗುತ್ತಾರೆ. ಇದನ್ನು ಮಕ್ಕಳಿಗೆ ಹೇಳಿ ಮಾಡಿಸಬೇಕು.*

✍🌹 *ಅಣಕುಪರೀಕ್ಷೆ*

*ಶಾಲೆಗಳಲ್ಲಿ ಅಣಕುಪರೀಕ್ಷೆಗಳನ್ನು ನಡೆಸಬೇಕು. ಇವು ಸಾಧ್ಯವಾದಷ್ಟೂ ನೈಜಪರೀಕ್ಷೆಗಳನ್ನು ಹೋಲುವಂತಿರಬೇಕು. ಇದು ಮಕ್ಕಳಿಗೆ ಕೊಡುವ ಧೈರ್ಯ ಅಷ್ಟಿಷ್ಟಲ್ಲ. ಹಾಗೆಯೇ, ಮನೆಯಲ್ಲಿ ಪೋಷಕರು ಬೆಂಬಲವಾಗಿ ನಿಲ್ಲಬೇಕು. ಒಂದು ವೇಳೆ ನಪಾಸಾದರೆ, ‘ನಿನ್ನ ಕೈಲಿ ಇದೇ ಆಗಲಿಲ್ಲ…’ ಎಂಬಂಥ ಮಾತುಗಳನ್ನು ಮಾತ್ರ ಯಾವ ಕಾರಣಕ್ಕೂ ಹೇಳಬಾರದು. ಇಲ್ಲಿ ನಪಾಸಾಗಿದ್ದು ಒಳ್ಳೆಯದಾಯಿತು. ಮುಂದೆ ದೊಡ್ಡ ಪರೀಕ್ಷೆಗಳಲ್ಲಿ ಪಾಸಾಗುವಿಯಂತೆ ಎಂದು ಹೇಳಿ ಹುರುದುಂಬಿಸಬೇಕು.*

*ಮೇಲೆ ಹೇಳಿದಂತೆ ಈ ಪರೀಕ್ಷೆಗಳಿಂದ ಮಕ್ಕಳಿಗೆ ಸಾಕಷ್ಟು ಅನುಕೂಲತೆಗಳಿದ್ದರೂ ಮುಖ್ಯ ಉದ್ದೇಶ ಅವಶ್ಯವಿರುವ ವಿದ್ಯಾರ್ಥಿಗೆ ಆರ್ಥಿಕ ಸಹಾಯ ಒದಗಿಸಲು ಒಂದು ಮಾನದಂಡ, ಅಷ್ಟೆ! ಹೆಚ್ಚಿನ ಪ್ರಯೋಜನವೆಂದರೆ ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳಿಗೆ ಪ್ರವೇಶ ಸಿಗುತ್ತದೆ. ಇದಕ್ಕಿಂತಲೂ ಹೆಚ್ಚಿಗೆ ಎಳೆದು ಮಕ್ಕಳ ಮನಸ್ಸಿಗೆ ಘಾಸಿಯಾಗದಂತೆ ನೋಡಿಕೊಳ್ಳುವುದು ಪೋಷಕರ ಅತಿ ಮುಖ್ಯವಾದ ಕೆಲಸ. ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳೋಣ, ಪ್ರಯತ್ನವನ್ನು ಮಾಡೋಣ. ಯಶಸ್ಸು ನಮ್ಮದೇ ಎಂಬ ಭಾವದಲ್ಲಿ ಮುಂದುವರೆಯೋಣ. ಒಂದು ವೇಳೆ ಯಶಸ್ಸು ಸಿಗದಿದ್ದಲ್ಲಿ, ಇಡೀ ಜೀವನ ಮುಂದೆ ಇದ್ದೇ ಇದೆ. ತಪ್ಪನ್ನು ಸರಿಪಡಿಸಿಕೊಂಡು ಮುಂದುವರೆಯೋಣ. ಎಲ್ಲ ಸ್ಪರ್ಧಿಗಳಿಗೂ ಶುಭಾಶಯಗಳು.*