ಪರಿಚಯ
ನೇಷನ್ ಬ್ಯುಲ್ಡರ್ ಅವಾರ್ಡ್
ಸೇವಾರತ್ನ ರಾಜ್ಯ ಪ್ರಶಸ್ತಿ ಮೈಸೂರು-2018
👤👤👤👤👤👤👤👤👤👤👤👤👤👤👤
ಚೌಡ್ಲಾಪುರ ಸೂರಿ(ಸುರೇಶ್ ಸಿ.ಆರ್.)
ಶಿಕ್ಷಕರು.
ಸ.ಕಿ.ಪ್ರಾ.ಶಾಲೆ.ಕೋಟೆಹಾಳು.
ಸಿರುಗುಪ್ಪ ತಾಲೂಕು.
ಬಳ್ಳಾರಿ.ಜಿಲ್ಲೆ.
📲 9480106926
ಶಿಕ್ಷಕರು.
ಸ.ಕಿ.ಪ್ರಾ.ಶಾಲೆ.ಕೋಟೆಹಾಳು.
ಸಿರುಗುಪ್ಪ ತಾಲೂಕು.
ಬಳ್ಳಾರಿ.ಜಿಲ್ಲೆ.
📲 9480106926
ಸಾಹಿತ್ಯ ಕಾವ್ಯನಾಮ :ಚೌಡ್ಲಾಪುರ ಸೂರಿ.
ಸ್ವಂತ ವಿಳಾಸ:
ಚೌಡ್ಲಾಪುರ .
ಕಡೂರು ಪೋಸ್ಟ್.577548
ಕಡೂರು ತಾಲ್ಲೂಕು.
ಚಿಕ್ಕಮಗಳೂರು ಜಿಲ್ಲೆ.
ವಿದ್ಯಾಭ್ಯಾಸ;
ಎಂ.ಎ. ಡಿ.ಇಡಿ.
ಎಂ.ಎ. ಅರ್ಥಶಾಸ್ತ್ರದಲ್ಲಿ 9ನೇ ರ್ಯಾಂಕ್ ಪಡೆದಿರುವುದು.
ಪಡೆದ ಪ್ರಶಸ್ತಿಗಳು:
ರಾಜ್ಯ ಮಟ್ಟದ ಪ್ರಶಸ್ತಿಗಳು.
1.ಅಕ್ಷರ ರತ್ನ.
2.ಸೇವಾ ರತ್ನ.
3.ಸನಾತನ ಸಂಸ್ಕಾರ ಮೂರ್ತಿ.
4.ಕರುನಾಡು ಸೇವಾರತ್ನ ಪ್ರಶಸ್ತಿ.
5.ಕಾವ್ಯಶ್ರೀ.
ಇತರೆ ಸ್ಥಳೀಯ ಪ್ರಶಸ್ತಿಗಳು.
1.2018-19ನೇ ಸಾಲಿನ "ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ"
,2. "ನೇಷನ್ ಬ್ಯುಲ್ಡರ್ ಅವಾರ್ಡ್ "
3.ಪುಟ್ಟರಾಜ ಗವಾಹಿ ಸಂಸ್ಥೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ.
4.3 ಬಾರಿ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ,ಒಂದು ಬಾರಿ ದ್ವಿತೀಯ, ಒಂದು ಬಾರಿ ತೃತೀಯ ಸ್ಥಾನ.
5.ತಾಲ್ಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ 5 ಬಾರಿ ಪ್ರಥಮ ಸ್ಥಾನ.
6.ಶಿಕ್ಷಕರ ಕ್ರೀಡೆಗಳಲ್ಲಿ ಹಲವು ಪ್ರಶಸ್ತಿ.
ನನ್ನ ನೇತೃತ್ವದಲ್ಲಿ ಶಾಲೆ ಪಡೆದ ಪ್ರಶಸ್ತಿಗಳು.
1.ಹಸಿರು ಶಾಲೆ.
2.ಹಳದಿ ಶಾಲೆ.
ಭಾಗವಹಿಸಿದ ಕವಿಗೋಷ್ಠಿ.
1.ಕರುನಾಡು ಹಣತೆ ಕವಿ ಬಳಗದ ರಾಜ್ಯ ಸಮ್ಮೇಳನ.2018.
2.ಜಿಲ್ಲಾ ಮಟ್ಟದ ಸುವರ್ಣ ಕವಿಗೋಷ್ಠಿ ಮೂಡಿಗೆರೆ -2016.
3.ಆದಿವಾಸಿ ಸಾಹಿತ್ಯ ಸಂಶೋಧನೆ ಮತ್ತು ಕಾವ್ಯ ಮನೆ ಪ್ರಕಾಶನ ಬಳ್ಳಾರಿ .
4.ಕರುನಾಡು ಸೇವಾ ಟ್ರಸ್ಟ್ ಮಂಡ್ಯ.
5.ಕೊಟ್ಟೂರು ಪ್ರಕಾಶನದ ವತಿಯಿಂದ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಸಿರುಗುಪ್ಪ.
ಪ್ರಶಂಸಾ ಪತ್ರಗಳು.
1.ಜಯಕರ್ನಾಟಕ ಸಂಘ.
2.ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರಸಮನ್ವಯಾಧಿಕಾರಿಗಳಿಂದ.
3.ರಾಜ್ಯ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಪ್ರಶಂಸೆ.
4.ಗ್ರಾಮ ಪಂಚಾಯಿತಿಯಿಂದ -2017.
5.ಶಾಲಾ ನಾಯಕತ್ವ ಕಾರ್ಯಕ್ರಮ ವತಿಯಿಂದ ಪ್ರಶಂಸೆ ಪತ್ರ.
6.ಇನ್ನರ್ ವಿಲ್ ಕ್ಲಬ್ ನಿಂದ ಪ್ರಶಂಸೆ ಪತ್ರ.
7.ಮಹಿಳಾ ಸಂಘ ಮತ್ತು ಕನಕದಾಸ ಯುವ ಸಂಘದಿಂದ ಪ್ರಶಂಸೆ ಪತ್ರ.
8.ತಹಶೀಲ್ದಾರ್ ಮತ್ತು ನ್ಯಾಯಾಧೀಶರು ಸೇರಿದಂತೆ ವಿವಿಧ ಗಣ್ಯರು ಶಾಲೆಗೆ ಭೇಟಿ ನೀಡಿ ಪ್ರಶಂಶನಿಯ ವರದಿ ಮಾಡಿರುವುದು.
ಸಂಘಟನೆ.
1.ಸಮಾಜ ವಿಜ್ಞಾನ ವೇದಿಕೆ ಕವಿಬಳಗ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷ.(ಬಳ್ಳಾರಿ ಜಿಲ್ಲೆ).2019ರಿಂದ-
2.ಕರುನಾಡು ಹಣತೆ ಕವಿ ಬಳಗ ಜಿಲ್ಲಾ ಉಪಾಧ್ಯಕ್ಷ.2018ರಿಂದ-
3.ಶಿಕ್ಷಕ ಸಂಘದ ನಾಮನಿರ್ದೇಶನ ಸದಸ್ಯ.
4.ನೂತನ ಪಿಂಚಣಿ ಯೋಜನೆಯ ತಾಲ್ಲೂಕು ಅಧ್ಯಕ್ಷ.2014 ರಿಂದ
5.
ಹವ್ಯಾಸಗಳು.
1.ಕಥೆ ಬರೆಯುವುದು.
2.ಲೇಖನ ಬರೆಯುವುದು.
3.ಕವಿತೆ ಬರೆಯುವುದು.
4.ಪ್ರಬಂಧ ಬರೆಯುವುದು.
5.ಸಮಾಜ ಸೇವೆ.
6.ಬಡಮಕ್ಕಳಿಗೆ ಉಚಿತ ಕೋಚಿಂಗ್.
7.ಯೋಗ.
8.ಕ್ರಿಕೆಟ್ ಮತ್ತು ವಾಲಿಬಾಲ್.
9.ಸರ್ಕಾರಿ ಶಾಲೆ ಅಭಿವೃದ್ಧಿಗೆ ಉಚಿತ ಮಾರ್ಗದರ್ಶನ ತರಬೇತಿ.
ಶಾಲೆಯ ಬಗ್ಗೆ ಪತ್ರಿಕೆಗಳಲ್ಲಿ:
1.ಜೂನ್ ತಿಂಗಳ ಶಿಕ್ಷಣವಾರ್ತೆಯಲ್ಲಿ "ಹಸಿರು ಕೋಟೆಹಾಳು ಶಾಲೆ" ಎಂಬ ಶೀರ್ಷಿಕೆಯಲ್ಲಿ ನನ್ನ ಹಾಗೂ ಶಾಲೆಯ ಬಗ್ಗೆ ಪ್ರಕಟವಾಗಿದೆ.
2.ತೆಲುಗು ಈ ನಾಡು ಪತ್ರಿಕೆ,
3.ವಿಜಯವಾಣಿ,
4.ವಿಜಯಕರ್ನಾಟಕ,
5. ಉದಯ ವಾಣಿ,6.
ಬೆಳಗಾಯಿತು ಬಳ್ಳಾರಿ,
7.ಸಂಜೆ ವಾಣಿ ಪತ್ರಿಕೆ.8.ಕನಸಿನ ಭಾರತ.
9.ಪಂಜು ಆನಲೈನ್ ಪತ್ರಿಕೆ. ಗಳಲ್ಲಿ ನನ್ನ ಹಾಗೂ ಶಾಲೆಯ ಬಗ್ಗೆ ಪ್ರಕಟ.
10.tv 23 ಯಲ್ಲಿ ಪ್ರಸಾರ.
11.ಎಸ್.ಕೆ.ನ್ಯೂಸ್ ನಲ್ಲಿ ಪ್ರಸಾರ.
ಶಾಲೆಯ ವಿಶೇಷತೆಗಳು.
1.ಉಚಿತ ಕೋಚಿಂಗ್:
ಮೊರಾರ್ಜಿ, ನವೋದಯ, ಆದರ್ಶ ಪರೀಕ್ಷೆಗಳಿಗೆ ಉಚಿತ ತರಬೇತಿ.
2.ಮಗ್ಗಿ ಟಾರ್ಗೆಟ್:
.ಎಲ್ಲ ಮಕ್ಕಳು 30 ರವರೆಗೆ ಉಲ್ಟಾ,ಸೀದಾ ಮಗ್ಗಿ ಹೇಳುವ ಕೌಶಲ.
3.ಸಾವಯವ ಗೊಬ್ಬರದಿಂದ ಬಿಸಿಯೂಟಕ್ಕೆ ಬೇಕಾದ ಎಲ್ಲ ತರಕಾರಿಗಳನ್ನು ಶಾಲೆಯಲ್ಲಿ ಬೆಳೆಯಲಾಗುತ್ತದೆ.
4.ನಮ್ಮ ಶಾಲೆಯ ಕಲಿಕೆ ಮತ್ತು ಶಾಲಾ ಪರಿಸರವನ್ನು ಮೆಚ್ಚಿ ಬೇರೆ ಗ್ರಾಮಗಳಿಂದ ನಮ್ಮ ಶಾಲೆಗೆ ಮಕ್ಕಳು ಬರುತ್ತಾರೆ.
5.ನೌಕರರ ಮಕ್ಕಳು ಕೂಡ ನಮ್ಮ ಶಾಲೆಗೆ ದಾಖಲಾಗಿದ್ದಾರೆ.
6.ಪ್ಲಾಸ್ಟಿಕ್ ಮುಕ್ತ ಶಾಲೆ.
7.ಉತ್ತಮ ನಲಿಕಲಿ ಶಾಲೆ.
8.ಇಂಗ್ಲಿಷ್ ಟಾರ್ಗೆಟ್.
9.ಉತ್ತಮ ಪರಿಸರ.
10.ಉತ್ತಮ ಶಾಲಾ ಕೈತೋಟ.
11.ಖಾಸಗಿ ಶಾಲೆಯಂತೆ ಉತ್ತಮವಾದ ಜಾರುಬಂಡಿಗಳು,ಜೋಕಾಲಿ ಮುಂತಾದ ಆಟೋಪಕರಣಗಳು.
12.ಶಾಲಾ ಆವರಣದಲ್ಲಿ ವಿದ್ಯಾದೇವತೆಯ ಮಂದಿರ.
13.ಶಾಲಾ ಆವರಣದಲ್ಲಿ ತಾಜಾ ಹಣ್ಣಿನ ಗಿಡಗಳು.
14.ಪ್ರತಿನಿತ್ಯ ವಿಶೇಷ ಪ್ರಾರ್ಥನೆ.
15.ಆರೋಗ್ಯ ಶಿಬಿರ,ಯೋಗ ಶಿಬಿರ ಪರಿಸರ ನೈರ್ಮಲ್ಯ ಜಾಗೃತಿ ಕಾರ್ಯಕ್ರಮ.
16.ದಾನಿಗಳ ನೆರವಿನಿಂದ ಶಾಲೆಗೆ ಆಕರ್ಷಣೆ ಫೈಟಿಂಗ್.ಚಿತ್ರ ಬರೆಸಿರುವುದು.ನಲಿಕಲಿ ಚೇರ್ ಟೇಬಲ್ ,ಶಾಲೆಯ ಮುಂದಿನ ಕಮಾನ್ , ಕಲಿಕಸಾಮಗ್ರಿಗಳು ಹೀಗೆ ವಿವಿಧ ರೀತಿಯ ವಸ್ತುಗಳನ್ನು ಶಾಲೆಗೆ ದಾನಿಗಳ ನೆರವಿನಿಂದ ಕೊಡಿಸಿ ಸುಂದರಗೊಳಿಸಿರುವುದು.
17.ಬೋಧನೆಯಲ್ಲಿ ಹೊಸ ವಿಧಾನಗಳು .ನಿತ್ಯ ಪಠಣ,ಮಗ್ಗಿ ಟಾರ್ಗೆಟ್, ನಿತ್ಯ ವಿನೂತನ, ಪರಿಸರದಲ್ಲಿ ಆಡಿಕಲಿ.
18.ಭಾನುವಾರ ಹಾಗೂ ರಜಾದಿನಗಳಲ್ಲಿ ಕೂಡ ಉಚಿತ ತರಗತಿಗಳು ಮತ್ತು ಹಳೆಯ ವಿದ್ಯಾರ್ಥಿಗಳೊಡನೆ ಶೈಕ್ಷಣಿಕ ಚರ್ಚೆ.
19.ಮದ್ಯಾಹ್ನ ಬಿಸಿಯೂಟದ ನಂತರ ಶಾಲೆಯಲ್ಲಿ ಬೆಳೆದ ರಸಬಾಳೆಯನ್ನು ಮಕ್ಕಳಿಗೆ ವಿತರಿಸಲಾಗುವುದು.
20.ಪೋಷಕರಿಗಾಗಿ ವಾಟ್ಸಾಪ್ ಗ್ರೂಪ್.
21.ಮಗುವಿನ ಹುಟ್ಟು ಹಬ್ಬಕ್ಕೆ ಗಿಡ ನೆಡುವುದು.
22.ಪ್ರತಿ ಶನಿವಾರ ಶಾಲಾ ಅವಧಿಯ ನಂತರ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮಾಡುವುದು.
23.ಮಕ್ಕಳ ಚಟುವಟಿಕೆಯನ್ನು ಎಲ್ಲರೂ ನೋಡಲು ಸಹಕಾರವಾಗುವಂತೆ ಯೂಟ್ಯೂಬ್ ಚಾನಲ್ ಮಾಡಲಾಗಿದೆ.ಅದರ ಹೆಸರು. "ಚೌಡ್ಲಾಪುರ ಸೂರಿ glps ಕೋಟೆಹಾಳು".
24.ಮಕ್ಕಳಿಗಾಗಿ "ಶಾಲಾ ಬ್ಯಾಂಕ್"ಸ್ಥಾಪನೆ.
25.ವಾರಕ್ಕೊಂದು ವಿಭಿನ್ನ ಚಟುವಟಿಕೆ ತರಗತಿಗೊಬ್ಬ ಟಾಪರ್.
26.ಪ್ರತಿ ಶನಿವಾರ"ಬ್ಯಾಗ್ ಲೆಸ್ ಡೇ".
ಸಾಹಿತ್ಯ ಕ್ಷೇತ್ರದಲ್ಲಿ:
1.ಬೆಳಕು ಸಂಸ್ಥೆ ನೆಡೆಸುವ ಸ್ಪರ್ಧೆಯಲ್ಲಿ "ಆಕ್ರಂದನ "ಕವನ ತೃತೀಯ ಸ್ಥಾನ, "ಕೆಡಿಸದಿರು ಜಲಾಮೃತ"ಕವನ ಮೆಚ್ಚುಗೆ ಗಳಿಸಿರುವುದು.
2.ಕವಿ ಜೀವಾಳ ಸಾಹಿತ್ಯ ಘಟಕ ನೆಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ "ಮಾಯವಾಗಿದೆ ದೀಪಾವಳಿ"ಪ್ರಥಮ ಸ್ಥಾನ ಪಡೆದಿತ್ತು.
3.ನವಪರ್ವ ಪೌಂಡೇಶನ್ ನೆಡೆಸಿದ ಸ್ಪರ್ಧೆಯಲ್ಲಿ ಲೇಖನ ವಿಭಾಗದಲ್ಲಿ "ನಮ್ಮೂರ ದಿವ್ಳಿಗೆ" ದ್ವಿತೀಯ ಸ್ಥಾನ ಪಡೆದಿರುವುದು.
4.ಸಾಹಿತ್ಯ ಚಿಗರು ಬಳಗ ನೆಡೆಸಿದ ಸ್ಪರ್ಧೆಯಲ್ಲಿ ಗುರುವನ್ನು ಕುರಿತ "ಅಕ್ಷರ ಶಿಲ್ಪಿ"ಕವನ ಮೆಚ್ಚುಗೆ uಗಳಿಸಿ ಪ್ರಶಂಸೆ ಪತ್ರ ಪಡೆದಿರುವುದು.
5.ಗಡಿನಾಡು ಕನ್ನಡ ಸಾಹಿತ್ಯ ಬಳಗದ ಸ್ಪರ್ಧೆಯಲ್ಲಿ ನನ್ನ "ಸಿರಿಬೀಡು"ಕವನ ಪ್ರಶಸ್ತಿಗೆ ಆಯ್ಕೆಯಾಗಿರುವುದು.
6.ಕರುನಾಡು ಹಣತೆ ಕವಿ ಬಳಗ ಜಿಲ್ಲಾ ಘಟಕ ನೆಡೆಸಿದ ಸ್ಪರ್ಧೆಯಲ್ಲಿ "ಮಕ್ಕಳು"ಕವನ ಪ್ರಥಮ ಸ್ಥಾನ ಪಡೆದಿರುವುದು.
ಕಾವ್ಯಶ್ರೀ ರಾಜ್ಯಪ್ರಶಸ್ತಿ
ಕಾವ್ಯಶ್ರೀ ರಾಜ್ಯಪ್ರಶಸ್ತಿ
ಕರುನಾಡು ಸೇವಾರತ್ನ ರಾಜ್ಯಪ್ರಶಸ್ತಿ 2019 ಮಂಡ್ಯ.
ಅಕ್ಷರ ರತ್ನ ರಾಜ್ಯ ಪ್ರಶಸ್ತಿ ಮೈಸೂರು 2018
ನೇಷನ್ ಬ್ಯುಲ್ಡರ್ ಅವಾರ್ಡ್
ಸೇವಾರತ್ನ ರಾಜ್ಯ ಪ್ರಶಸ್ತಿ ಮೈಸೂರು-2018
-:ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಕೋಟೆಹಾಳು ಶಾಲೆ :-
ಕೋಟೆಹಾಳು ಶಾಲೆ ಪರಿಸರ ಮಿತ್ರ ಪ್ರಶಸ್ತಿ ಪಡೆದ ಶಾಲೆ. ಇದು ಏಕೊಪಾಧ್ಯಯ ಶಾಲೆಯಾದರೂ ಶಿಕ್ಷಕ ಚೌಡ್ಲಾಪೂರ ಸೂರಿಯವರ ಆಸಕ್ತಿ ಹಾಗೂ ಪರಿಶ್ರಮದಿಂದ ಇಂದು ಹೆಸರುವಾಸಿಯಾಗಿದೆ.
ಬಿಸಿಲ ನಾಡಿನಲ್ಲೂ ಹಸಿರನ್ನು ಹಸಿರಾಗಿಸಿ , ಶಿಕ್ಷಣ ಕ್ಕೆ ಮಾದರಿಯಾದ ಶಾಲೆಗೆ ಅಭಿನಂದನೆಗಳು
ಬಿಸಿಲ ನಾಡಿನಲ್ಲೂ ಹಸಿರನ್ನು ಹಸಿರಾಗಿಸಿ , ಶಿಕ್ಷಣ ಕ್ಕೆ ಮಾದರಿಯಾದ ಶಾಲೆಗೆ ಅಭಿನಂದನೆಗಳು
ಚೌಡ್ಲಾಪುರ ಸೂರಿ(ಸುರೇಶ್ ಸಿ.ಆರ್.)
ಶಿಕ್ಷಕರು.
ಸ.ಕಿ.ಪ್ರಾ.ಶಾಲೆ.ಕೋಟೆಹಾಳು.
ಸಿರುಗುಪ್ಪ ತಾಲೂಕು.
ಬಳ್ಳಾರಿ.ಜಿಲ್ಲೆ.
📲 9480106926
ಕನ್ನಡದ ಕಹಳೆ ಮೊಳಗಿಸಿದ ಶಿಕ್ಷಕ
ಶಿಕ್ಷಕರು.
ಸ.ಕಿ.ಪ್ರಾ.ಶಾಲೆ.ಕೋಟೆಹಾಳು.
ಸಿರುಗುಪ್ಪ ತಾಲೂಕು.
ಬಳ್ಳಾರಿ.ಜಿಲ್ಲೆ.
📲 9480106926
👤👤👤👤👤👤👤👤👤👤👤👤👤👤👤
ಆಂಧ್ರದ ಗಡಿಭಾಗದಲ್ಲಿ ಆಳಿವಿನಂಚಿನಲ್ಲಿದ್ದ ಶಾಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಶಿಕ್ಷಕ: ನಾಗೇಶ್.ಟಿ.ಕೆ.*
ನಾನಾ ಕಾರಣಗಳನ್ನು ನೀಡಿ ಸ್ವತಃ ಸರ್ಕಾರವೇ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಾ ಸಾಗುತ್ತಿದೆ. ಆದರೆ ಆಂಧ್ರದ ಗಡಿಭಾಗದಲ್ಲಿ ತೆಲುಗು ಭಾಷೆಯ ಪ್ರಭಾವದಿಂದ ಮುಚ್ಚಿಹೋಗಬೇಕಿದ್ದ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ತಲೆ ಎತ್ತಿ ನಿಂತಿದೆ.
ಸಹೃದಯಿ ದಾನಿಗಳ ಸಹಕಾರ, ಸ್ನೇಹಿತರ ಸಾಥ್ ನಿಂದ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆಯವಂತೆ ಮಾಡಿದ್ದಾರೆ ಈ ಶಾಲೆಯ ಶಿಕ್ಷಕ. ಇಡೀ ಗ್ರಾಮದಲ್ಲಿ ಕನ್ನಡದ ಕಂಪು ಸೂಸುವ ಮೂಲಕ ಕನ್ನಡ ಭಾಷೆ ಹಾಗೂ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾಯಕ ಮಾಡಿದ ಅಪರೂಪದ ಶಿಕ್ಷಕ ಇವರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಟಿಕೆ ನಾಗೇಶ್ ಅವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಹಾಸನದವರಾದ ನಾಗೇಶ್ ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕದಲ್ಲೇ ಈ ಗ್ರಾಮವಿದ್ದರೂ ಇಲ್ಲಿನ ಜನರ ಆಡು ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವಷ್ಟು ಭಾವನೆಗಳಲ್ಲಿ ಬದುಕುತ್ತಿದ್ದರು. ಅಲ್ಲದೇ ಶಾಲೆಗೆ ಮೊದಲ ಬಾರಿ ಶಿಕ್ಷಕರಾಗಿ ನಾಗೇಶ್ ಬಂದಾಗ ಇಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಕೂಡ ಬರುತ್ತಿರಲಿಲ್ಲ. ಅಲ್ಲದೇ ಕನಿಷ್ಠ ಇಲ್ಲಿನ ಜನ ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿರಲಿಲ್ಲ.
ಆದರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಕ್ಷಕ ನಾಗೇಶ್ ಗ್ರಾಮದಲ್ಲೇ ವಾಸ ಮಾಡುವ ಮೂಲಕ ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನ ತಿಳಿಸಿದ್ದಾರೆ. ಪೋಷಕರ ಮನವೊಲಿಸಿ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತಂದು ಉತ್ತಮ ಶಿಕ್ಷಣ ನೀಡುವ ಕಾಯಕಕ್ಕೆ ಮುಂದಾಗಿದ್ದಾರೆ. ಪ್ರತಿ ವರ್ಷ ಶಾಲೆಯಲ್ಲಿ ಕನ್ನಡದ ನುಡಿ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಕನ್ನಡದ ಕಂಪು ಸೂಸುವ ಕೆಲಸ ಮಾಡಿದ್ದಾರೆ. ತೆಲುಗು ಭಾಷೆಯ ಪ್ರಭಾವದಿಂದ ಕನ್ನಡವೇ ಬಾರದ ಮಕ್ಕಳ ಬಾಯಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದಾರೆ. ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿ ಭಿನ್ನ ವಿಭಿನ್ನ ಪ್ರಯತ್ನಗಳಿಂದ ಇಡೀ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.
ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಶಾಲೆಗೆ ಸಹೃದಯಿ ದಾನಿಗಳು ಹಾಗೂ ಸ್ನೇಹಿತರ ಬಳಗದಿಂದ ಸಕಲ ಸೌಲಭ್ಯಗಳನ್ನ ಪಡೆದುಕೊಳ್ಳುವಲ್ಲಿ ಶಿಕ್ಷಕ ನಾಗೇಶ್ ಯಶಸ್ವಿಯಾಗಿದ್ದಾರೆ. ದಾನಿಗಳ ನೆರವಿನಿಂದ ಪಡೆದ ಪ್ರೊಜೆಕ್ಟರ್ ಮೂಲಕ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಕಂಪ್ಯೂಟರ್ ಕಾಣದ ಮಕ್ಕಳ ಕೈ ಹಿಡಿದು ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಕನಿಷ್ಠ ಕನ್ನಡವೂ ಬಾರದ ಮಕ್ಕಳ ಬಾಯಲ್ಲಿ ಇಂದು ಪಟಪಟನೆ ಇಂಗ್ಲಿಷ್ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ.
ಈ ಹಿಂದೆ ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯಲ್ಲಿ ಇಂದು 1 ರಿಂದ 7ನೇ ತರಗತಿಯವರೆಗೂ 114 ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತೆ ಮಾಡಿದ್ದಾರೆ. ಪ್ರತಿ ವರ್ಷ ತಮ್ಮ ಫೇಸ್‍ಬುಕ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ಸಹಾಯ ಪಡೆಯುವ ಮೂಲಕ ವರ್ಷ ಇಡೀ ಉಚಿತವಾಗಿ ನೀಡುತ್ತಾರೆ. ಬಿಸಿಯೂಟ ಆಡುಗೆಗೆ ಬೇಕಾದ ಗ್ರೈಂಡರ್, ತಟ್ಟೆ, ಲೋಟ, ವಾಟರ್ ಫಿಲ್ಟರ್ ಸೇರಿದಂತೆ ಶಾಲೆಗೆ ಬೇಕಾದ ಸಕಲ ಸೌಲಭ್ಯಗಳನ್ನ ದಾನ ಪಡೆದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.
ವಿಶೇಷವಾಗಿ ಶಿಕ್ಷಕರ ಕೊರತೆ ಕಾರಣ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ತಮ್ಮ ಪತ್ನಿಯನ್ನು ಖಾಸಗಿ ಶಾಲೆ ಬಿಡಿಸಿ, ತಮ್ಮ ಶಾಲೆಯಲ್ಲಿ ಉಚಿತವಾಗಿ ಪಾಠ ಮಾಡಿಸುತ್ತಿದ್ದಾರೆ. ಪತಿಯ ಸಮಾಜಮುಖಿ ಕಾರ್ಯಕ್ಕೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟಿದ್ದಾರೆ.
ಆಂಧ್ರದ ಗಡಿಭಾಗ, ತೆಲುಗು ಭಾಷೆಯ ಪ್ರಭಾವ, ಪೋಷಕರ ಇಂಗ್ಲಿಷ್ ವ್ಯಾಮೋಹ ಸೇರಿದಂತೆ ಹಲವು ಕಾರಣಗಳಿಂದ ನಂಜಯ್ಯಗಾರಿಹಳ್ಳಿಯ ಸುತ್ತಮುತ್ತಲ ಐದು ಸರ್ಕಾರಿ ಶಾಲೆಗಳಿಗೆ ಸರ್ಕಾರ ಈಗಾಗಲೇ ಬೀಗ ಜಡಿದಿದೆ.
ಆದರೆ ಶಿಕ್ಷಕ ನಾಗೇಶ್ ಅವರ ಸ್ವಂತ ಪರಿಶ್ರಮದಿಂದ ನಂಜಯ್ಯಗಾರಹಳ್ಳಿಯ ಈಗ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಇದಲ್ಲದೆ 4 ವರ್ಷದ ತಮ್ಮ ಮಗನನ್ನ ಕೂಡ ತಮ್ಮದೇ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಲು ಮುಂದಾಗಿದ್ದಾರೆ ಈ ದಂಪತಿ.ಈ ದಂಪತಿಗೆ ನಮ್ಮದೊಂದು ಸಲಾಂ.