ಅಬ್ದುಲ್ ಕಲಾಮ್

ಮೇಲಿನ ಟೈಟಲ್  ನೋಡಿದರೆ, ಮೇಲುನೋಟಕ್ಕೆ  ಆಪಲ್  ಸಂಸ್ಥೆ ನೆನಪಿಗೆ ಬರಬಹುದು. ಈ ವಾರದ ಲೇಖನ ಆಪಲ್ ಸಂಸ್ಥೆಯ ಬಗ್ಗೆಯಾಗಲಿ , ಸ್ಟಿವ್ ಜಾಬ್ಸ್ ಬಗ್ಗೆಯಾಗಲಿ ಅಲ್ಲ. ಇದು ಭಾರತೀಯ ವಿಜ್ಞಾನಿಯೊಬ್ಬರ ಯಶೋಗಾಥೆ.
ಒಮ್ಮೆ ಅಬ್ದುಲ್ ಕಲಾಂ ಅವರು ಹೈದರಬಾದಿನ ನಿಜಾಂ ಆಸ್ಪತ್ರೆಗೆ ಭೇಟಿ ಕೊಟ್ಟ ಸಂಧರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರು . ಅಲ್ಲಿ ಅಂಗವಿಕಲ ಮಕ್ಕಳು ತಮಗೆ ಅಳವಡಿಸಿದ ಲೋಹದಿಂದ  ಮಾಡಿದ ಭಾರವಾದ  ಕ್ಯಾಲಿಪೆರ್ಸ್ ನಿಂದ ಓಡಾಡಲು ಬಹಳ ಕಷ್ಟ ಪಡುತ್ತಿದ್ದರು. ಅದನ್ನು ನೋಡಿದ ಕಲಾಂಗೆ ಮನ ಕರಗಿತು. ಅಲ್ಲಿಂದ ಹಿಂತಿರುಗಿದ ಮೇಲೆ  ತಮ್ಮ ಪ್ರಯೋಗಾಲಯದಲ್ಲಿ  ಕ್ಷಿಪಣಿಗಳಲ್ಲಿ ಬಳಸುವ ಹಗುರವಾದ ಲೋಹದಿಂದ “ಫ್ಲೂರ್ ರಿಯಾಕ್ಶನ್  ಅರ್ತೊಸಿಸ್  ಕ್ಯಾಲಿಪರ್ಸ್” ತಯಾರಿಸಿ  ಅಂಗವಿಕಲ ಮಕ್ಕಳಿಗೆ ಅಳವಡಿಸಿದರು. ಹಗುರವಾದ ಲೋಹದಿಂದ ಮಾಡಿದ ಕ್ಯಾಲಿಪೆರ್ಸ್ ಧರಿಸಿದ ಮಕ್ಕಳು ತುಂಬಾ ಸಂತೋಷದಿಂದ ನಡೆದಾಡ ತೊಡಗಿದರು. ಮಕ್ಕಳು ನಲಿದಾಡುವುದನ್ನು ಕಂಡ ಕಲಾಂ ಭಾವುಕರಾದರು 
ಮೇಲಿನ ಸಂಧರ್ಭ ನನಗೆ ಅತ್ಯಂತ ಸಂತೋಷ ನೀಡಿದ ಪ್ರಸಂಗ ಎಂದು ಕಲಾಂ ಅವರು ಹೇಳುತ್ತಾರೆ.
ಹಾಗು ಹೃದಯ ರೋಗಿಗಳ ಹೃದಯದಲ್ಲಿ ಅಳವಡಿಸಿದ  ಕಾರೋನರಿ ಸ್ಟೆಂಟ್ ಕೂಡ ಕ್ಷಿಪಣಿ ತಂತ್ರಜ್ಞಾನದ ಫಲ.
ಅಂದು ಕೇವಲ ಕ್ಷಿಪಣಿಗಳ ಬಗ್ಗೆ ಯೋಚನೆ ಮಾಡಿದ್ದರೆ ಕಲಾಂ ಕೇವಲ ಸಾಮಾನ್ಯ ಮಾನವರಾಗುತ್ತಿದ್ದರು. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಗುಣ ಕೇವಲ ವಿಶ್ವ ಮಾನವನಿಗೆ ಸಾಧ್ಯ. ಕಲಾಂ ಅದನ್ನು ನಿರೂಪಿಸಿದರು..
ನಾವು ಸಹ ಸ್ವಲ್ಪ  ಥಿಂಕ್  ಡಿಫರೆಂಟ್ ಅಂತ ಯೋಚನೆ ಮಾಡಿದರೆ. ಏನಾಗಬಹುದು.
ಸೊ ಸ್ಟಾರ್ಟ್ ಥಿಂಕಿಂಗ್ ಡಿಫರೆಂಟ್…..
ನಮ್ಮ ದೇಶದ ಕಥೆ ಇಷ್ಟೇ ಕಣರೋಪ್ಪು!!!ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಯಾರಿಗೆ ಗೊತ್ತಿಲ್ಲ ಹೇಳಿ , ನಮ್ಮ ದೇಶದ ಮಾಜಿ ರಾಷ್ಟ್ರಪತಿ ಹಾಗು ಕ್ಷಿಪಣಿ ಗಳ ಜನಕ ಎಂದೇ ಪ್ರಸಿದ್ಧರು. ಕಲಾಂ ಅವರು ಇಸ್ರೋ ಸಂಸ್ಥೆಯ  ಉಪಗ್ರಹ  ಉಡಾವಣ ವಾಹನಗಳ ಯೋಜನೆಯ ಕಾರ್ಯದಲ್ಲಿ  ತೊಡಗಿದ್ದಾಗ, ಅವರಿಗೆ ಬೆರಿಲಿಯಮ್  ಡಯಾ ಫಾರ್ಮ್ಗಳ ಅವಶ್ಯಕತೆ ಇತ್ತು. ಬೇರಿಲಿಂ ಡಯಾ ಫಾರ್ಮ್ಗಳನ್ನು ವಿಮಾನ, ರಾಕೆಟ್  ಹಾಗು ಕ್ಷಿಪಣಿಗಳ ಭ್ರಮಣ ದಿಕ್ಸೂಚಿಗಳಲ್ಲಿ ಬಳಸುತ್ತಾರೆ.  ಭ್ರಮಣ ದಿಕ್ಸೂಚಿಗಳಿಂದ  ವಿಮಾನ , ರಾಕೆಟ್ ಹಾಗು ಕ್ಷಿಪಣಿಗಳು  ನೆಲದ ಮೇಲೆ ಎಷ್ಟು ಎತ್ತರದಲ್ಲಿ ಹಾರುತ್ತಿವೆ ಎಂದು ಸೂಚಿಸುತ್ತವೆ.
ಅಂದು  ನಮ್ಮ ದೇಶದಲ್ಲಿ ಉತ್ಪಾದನೆ ಮಾಡಲು ಯಾವುದೇ ಉದ್ಯಮಗಳು ಇಲ್ಲದೆ ಇರುವುದರಿಂದ , ಇದನ್ನು ಅಮೇರಿಕದಿಂದ ಅಮದು ಮಾಡಿಕೊಳ್ಳುತ್ತಿದ್ದರು . ಇಸ್ರೋದಿಂದ ನಮ್ಮ ಯೋಜನೆಗೆ ನಮಗೆ ಇಷ್ಟು  ಡಯಾ ಫಾರ್ಮ್ಗಳು ಬೇಕು ಎಂದು ಅಮೆರಿಕಕ್ಕೆ ಬೇಡಿಕೆ ಇಟ್ಟರು.
ಮೂರು ತಿಂಗಳ ನಂತರ ಅಮೆರಿಕವು, ಭಾರತವು  ಖಂಡಾಂತರ ಕ್ಷಿಪಣಿಗಳ  ಅಭಿರುದ್ದಿಯಲ್ಲಿ  ಬೇರಿಲಿಂ ಡಯಾ ಫಾರ್ಮ್ಗಳನ್ನು ಬಳಸುತ್ತಾರೆ  ಎಂದು ಬೇಡಿಕೆ ಪೂರೈಸಲು ನಿರಾಕರಿಸಿತು.
ಬಂದ ಆಪತ್ತನ್ನು  ಪರಿಹರಿಸಲು ತಕ್ಕ್ಷಣ ಒಂದು ಟಾಸ್ಕ್ ಫೂರ್ಸೆ ರಚನೆಯಾಯಿತು. ಆಗ ಬೆಳಕಿಗೆ ಬಂದ ಅಂಶ, ತುಂಬಾ ಕೌತುಕ ಹಾಗು ಆಘಾತವನ್ನು ತಂದಿತ್ತು.
ಅಮೆರಿಕಾವು ಬೆರಿಲಿಯಮ್  ಡಯಾ ಫಾರ್ಮ್ಗಗಳ   ಅಭಿರುದ್ದಿಗೆ   ಬೇರಿಲಿಂ ರಾಡ್ ಮತ್ತು ಶೀಟ್ ಗಳನ್ನೂ  ಜಪಾನಿನಿಂದ ಅಮದು ಮಾಡಿ ಕೊಂಡಿತ್ತು . ಜಪಾನ್  ಬೇರಿಲಿಂ ರಾಡ್ ಮತ್ತು ಶೀಟ್ ಗಳನ್ನೂ  ತಯಾರಿಸಲು , ಭಾರತದಿಂದ   ಬೇರಿಲಿಂ ಅದಿರನ್ನು ಅಮದು ಮಾಡಿಕೊಂಡಿತ್ತು. ಕೊನೆಗೆ, ನಮ್ಮ ದೇಶ  ಬೇರಿಲಿಂ ಅದಿರು ರಫ್ತಿಗೆ  ನಿಷೇಧ ಹೇರಿತು.
ನಮ್ಮ ಮನೆ ವಸ್ತುನ ನಮಗೆ ಮಾರೋಕೆ ಇಷ್ಟು ನಕಾರ ಮಾಡು ಅಮೆರಿಕಕ್ಕೆ ಬುದ್ದಿ ಕಲಿಸಿ, ನಾವು ಕಲಿತು , ತಾನೆ ಅಭಿರುದ್ದಿ ಪಡಿಸುವಲ್ಲಿ ಯೋಜನೆ ರೋಪಿಸಿತು.
ಇದೆಲ್ಲ ನೋಡಿದ್ರೆ ನಮ್ಮ ದೇಶದ ಕಥೆ ಇಷ್ಟೇ ಕಣರೋಪ್ಪು ಅಂತ ಸಂದೇಹವಿಲ್ಲದೇ ಹೇಳಬಹುದು.
 
ನಾವು ಯಾರನ್ನೇ ಮಾತನಾಡಿಸಿದರು ಒಂದು ವಿಷಯ ಹೇಳುತ್ತಾರೆ. ನಮಗೆ ವಯಸ್ಸು ಆಯಿತು. ಏನು ಮಾಡೋಕೆ ಆಗೋದಿಲ್ಲ. ಆದರೆ  ವಯಸ್ಸು ಮತ್ತು ಮುಪ್ಪು ಕೇವಲ ದೇಹಕ್ಕೆ ಅಷ್ಟೇ ಸೀಮಿತ, ಮನಸ್ಸಿಗಲ್ಲ ಮತ್ತು ಸಾಧನೆ ಮಾಡಲು ಅಲ್ಲ. ಎನ್ನುವ ಅರಿವು ಬಹಳ ಕಡಿಮೆ.  ತಮ್ಮ ಇಳಿ ಹರೆಯದಲ್ಲಿ ಸಾಧಿಸಿದ ಕೆಲವು ಮಹನೀಯರ ಪಟ್ಟಿ ಇಲ್ಲಿದೆ .
ಆಗತಾನೆ ನೂರನೇ ವಸಂತ ಕಂಡ ಹಿರಿ ಜೀವವೊಂದಕ್ಕೆ ಅವರ ಸಂಬಂಧಿಯೊಬ್ಬರು ಕೇಳುತ್ತಾರೆ ” ನಾನು  ಮದರಾಸಿಗೆ  ಹೋಗುತ್ತಿದ್ದೇನೆ , ನಿಮಗೆ ಏನಾದರು ಅಲ್ಲಿಂದ ತರಲೆ ” ಎಂದು ಕೇಳಿದರು. ಅದಕ್ಕೆ  ಹಿರಿ ಜೀವವು “ನಾನು ನನ್ನ  ಇಂಗ್ಲಿಷ್ ಭಾಷೆ ಉತ್ತಮ ಪಡಿಸಿ ಕೊಳ್ಳಬೇಕು, ಇತ್ತೀಚಿಗೆ ಬಿಡುಗಡೆಯಾದ ಇಂಗ್ಲಿಷ್ ಶಬ್ದಕೋಶ ಬೇಕು , ತನ್ನಿ” ಎಂದರು. ಹಿರಿ ಜೀವ ಮತ್ತಾರು ಅಲ್ಲ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ.
ಬಿಹಾರದ ಗಂಗಾ ನದಿಗೆ ಸೇತುವೆ ಕಟ್ಟಲು ಸ್ಥಳದ ಅನ್ವೇಷಣೆ ಮತ್ತು ಯೋಜನೆಯನ್ನು ಮತ್ತು ಕೊಸಿ ನದಿಗೆ ಅಣೆಕಟ್ಟಿನ ನೀಲ ನಕ್ಷೆಯನ್ನು  ವಿಶ್ವೇಶ್ವರಯ್ಯನವರು ತಮ್ಮ  ೯೦ರ ಹರೆಯದಲ್ಲಿ ಮಾಡಿದರು.
ಸರ್ ಸಿ ವಿ ರಾಮನ್ ಅವರು ತಮ್ಮ ಸಂಶೋಧನೆ ರಾಮನ್ ಎಫೆಕ್ಟ್ – ಸಣ್ಣ ಕಣದ ಮೂಲಕ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಉಂಟಾಗುವ ವ್ಯತ್ಯಾಸವನ್ನು ಮಾಡಿದ್ದೂ ತಮ್ಮ  ೫೦ನೆ ವಯಸ್ಸಿನಲ್ಲಿ.
ಮಗ ಅವನು  ಐನ್ಸ್ಟೈನ್  ಕಣೋ ಅಂತ ಸಿಕ್ಕಾಪಟ್ಟೆ ಬುದ್ದಿವಂತನಿಗೆ ಹೇಳುತಿವಿ . ಹಾಗೆ ಐನ್ಸ್ಟೈನ್  ೧೯೧೬ರಲ್ಲಿ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (ಜನರಲ್ ರಿಲೇಟಿವಿಟಿ ಥಿಯರಿ)  ಮಂಡಿಸಿದಾಗ ಅವರಿಗೆ ೪೭ರ ಹರೆಯ.
ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರು ಭಾರತೀಯ ಸ್ವಾತಂತ್ರ್ಯ ಆಂದೋಲನದ ಮುಂದಾಳತ್ವ ವಹಿಸಿ ಕೊಂಡಾಗ ೪೫ ಹರೆಯ.
ಭಾರತದ  ಚಿತ್ರರಂಗದ  ಎಂದು ಆರದ ಧ್ರುವ ತಾರೆ   ಅಮಿತಾಬ್ ಬಚ್ಚನ್ ಜೀವನದಲ್ಲಿ ಸಾಲು ಸಾಲು ಸೋಲುಂಡು ಮರುಜನ್ಮ ಪಡೆದದು ತಮ್ಮ ೬೦ನೆ ವಯಸ್ಸಿನ ನಂತರವೆ.
ವಯಸ್ಸಾದರೆ ವಾಹನಗಳಲ್ಲಿ ಓಡಾಡಲು ಹಿಂಜರಿಯುವ ಸಂಧರ್ಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿಯಾದ  ಅಬ್ದುಲ್ ಕಲಾಂ ಗಂಟೆಗೆ ೨೧೨೦ ಕಿಲೋಮೀಟರು ವೇಗದಲ್ಲಿ ಸಾಗುವ ಸುಕೊಯಿ ೩೦ ಯುದ್ದ ವಿಮಾನವೆರಿದಾಗ ಅವರಿಗೆ ೭೫ದರ ಹರೆಯ. 
 
ಮಹಾಭಾರತ ಯುದ್ದ ನಡೆದಾಗ ಪಾಂಡವರ ಮತ್ತು ಕೌರವರ ವಯಸ್ಸು ಎಪ್ಪತ್ತು ದಾಟಿತ್ತು. ಒಮ್ಮೆ ಯೋಚಿಸಿ ನೋಡಿ ಭೀಷ್ಮ,ದ್ರೋಣ ಮತ್ತು  ಕೃಪಾಚಾರ್ಯರ ವಯಸ್ಸು ಎಷ್ಟಿರ ಬಹುದು ಎಂದು.
 ಕೊನೆ ಮಾತು    :                                                                                                                                ನೀವು ಒಂದು ಬಾರಿ ಯೋಚಿಸಿ. ನನಗೆ ವಯಸ್ಸು ಆಯಿತು ಎಂದು ಹೇಳುವ ಮುನ್ನ...