7 ನೇ ತರಗತಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ 2019-20




 👉  7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ
        ವಿದ್ಯಾರ್ಥಿಗಳಿಗೆ ಮಾರ್ಚ್ ಮಾಹೆಯಲ್ಲಿ ಸಾಮಾನ್ಯ ಮೌಲ್ಯಾಂಕನ ನಡೆಸುವ ಬಗ್ಗೆ.
👉 7ನೇ ತರಗತಿಯ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ
 👉  7 ನೇ ತರಗತಿಯ ಪಬ್ಲಿಕ್ ಪರೀಕ್ಷೆ ಕುರಿತು ಒಂದಿಷ್ಟು ಮಾಹಿತಿ
👉  7ನೇ ತರಗತಿ ಸಾಮಾನ್ಯ ಮೌಲ್ಯಾಂಕನಕ್ಕೆ ಸಂಬಂಧಿಸಿದ ಸಹಾಯವಾಣಿ ಕಾರ್ಯ ನಿರ್ವಹಿಸುವ ಬಗ್ಗೆ

7ನೇ ತರಗತಿ ಎರಡನೇ ಸೆಮಿಸ್ಟರ್ ಮಾದರಿ ಪ್ರಶ್ನೆ ಪತ್ರಿಕೆ 2019-2020
 👉 ಕನ್ನಡ
  👉 ಇಂಗ್ಲಿಷ್ 
 👉 ಹಿಂದಿ 
 👉 ಗಣಿತ
 👉 ವಿಜ್ಞಾನ
 👉 ಸಮಾಜ ವಿಜ್ಞಾನ


ವಿಷಯ:- 2019-20ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಅಧ್ಯಯನ ನಡೆಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ,
ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ
ವಿದ್ಯಾರ್ಥಿಗಳಿಗೆ ಮಾರ್ಚ್ ಮಾಹೆಯಲ್ಲಿ ಸಾಮಾನ್ಯ ಮೌಲ್ಯಾಂಕನ ನಡೆಸುವ ಬಗ್ಗೆ.

ಕಲಿಕೆಯ ಗುಣಮಟ್ಟ ಬಲವರ್ಧನೆಗೊಳಿಸುವ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ
ಎಲ್ಲಾ ಸರ್ಕಾರಿ, ಅನುದಾನಿತ, ಮೊರಾರ್ಜಿ ದೇಸಾಯಿ ಶಾಲೆಗಳು ಸೇರಿದಂತೆ ಎಲ್ಲಾ ವಸತಿ ಶಾಲೆಗಳು ಮತ್ತು ಅನುದಾನ
ರಹಿತ ಶಾಲೆಗಳ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮೇಲಿನ ಸರ್ಕಾರಿ ಆದೇಶದನ್ವಯ “ಸಾಮಾನ್ಯ ಮೌಲ್ಯಾಂಕನ” ವನ್ನು
ದಿನಾಂಕ:09.03.2020 ರಿಂದ 14.03.2020 ರವರೆಗೆ ಹಮ್ಮಿಕೊಳ್ಳಲಾಗಿದೆ.
7ನೇ ತರಗತಿ “ಸಾಮಾನ್ಯ ಮೌಲ್ಯಾಂಕನವನ್ನು” ಶಾಲಾ ಹಂತದಲ್ಲಿಯೇ, ಶಾಲಾ ಆವರಣದಲ್ಲಿಯೇ ಇತರೆ ತರಗತಿಗಳ
ಪರೀಕ್ಷೆಗಳಂತೆ ತರಗತಿಯ ವಾತಾವರಣದಲ್ಲಿಯೇ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ರ ಬದಲಾಗಿ ಸದರಿ
ಪರೀಕ್ಷೆಯನ್ನು ನಡೆಸಲಾಗುವುದು,
1, ಉದ್ದೇಶಗಳು:
11. ವಿದ್ಯಾರ್ಥಿಗಳು ತಮ್ಮ ಕಲಿಕಾ ಮಟ್ಟ ತಿಳಿದುಕೊಳ್ಳುವಂತೆ ಮಾಡುವುದು.
1.2. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಂತಹ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಷಯಗಳಲ್ಲಿ :
ಪರಿಹಾರ ಬೋಧನಾ ಕಾರ್ಯಕ್ರಮವನ್ನು ರೂಪಿಸುವುದು,
1.3, ಉನ್ನತ ವ್ಯಾಸಂಗದ ಸ್ಪರ್ಧಾತ್ಮಕ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು.
1.4, ವಿದ್ಯಾರ್ಥಿಗಳ ಸಾಧನಾ ಮಟ್ಟವನ್ನು ತಿಳಿಸುವ ಮೂಲಕ ಪೋಷಕರಿಗೆ ಅಭಿಪ್ರೇರಣೆ (Motivation) ಉಂಟು
ಮಾಡುವುದು,
1.5, ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಮತ್ತು ಶಿಕ್ಷಕರ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಸೂಕ್ತ
ಕಾರ್ಯನೀತಿಗಳನ್ನು ರೂಪಿಸುವುದು,
1.6, ಶಿಕ್ಷಕರು ತಮ್ಮ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಸೂಕ್ತ ಮತ್ತು ಅವಶ್ಯಕ ಬದಲಾವಣೆ ಮಾಡಿಕೊಳ್ಳುವಂತೆ
ಪ್ರೇರೇಪಿಸುವುದು,
1.7. ಅನುಪಾಲನೆಯ ರೂಪುರೇಷೆಗಳನ್ನು ರಚಿಸಲು ಇಲಾಖೆಗೆ ಸಹಕಾರ ನೀಡುವುದು.

2. ವ್ಯಾಪ್ತಿ:
2.1, ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮೊರಾರ್ಜಿ ದೇಸಾಯಿ

ಶಾಲೆಗಳು ಸೇರಿದಂತೆ ಎಲ್ಲಾ ವಸತಿ ಶಾಲೆಗಳು ಮತ್ತು ಅನುದಾನರಹಿತ ಶಾಲೆಗಳ 7 ನೇ ತರಗತಿಗಳ ಎಲ್ಲಾ
ವಿದ್ಯಾರ್ಥಿಗಳಿಗೆ (ವಿದ್ಯಾರ್ಥಿಗಳ ಮಾಹಿತಿಯನ್ನು SATS ತಂತ್ರಾಂಶದಿಂದ ಪಡೆಯಲಾಗುವುದು) ಸಾಮಾನ್ಯ
ಮೌಲ್ಯಾಂಕನ ನಡೆಸಲಾಗುವುದು,
2.2. ಮಾಧ್ಯಮ:- ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ತಮಿಳು ಮತ್ತು ತೆಲುಗು.
2.3, ವಿಷಯಗಳು:- ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ

> ಪ್ರಥಮ ಭಾಷೆ: ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಉರ್ದು, ತಮಿಳು, ತೆಲುಗು,
> ದ್ವಿತೀಯ ಭಾಷೆ:- ಕನ್ನಡ, ಇಂಗ್ಲೀಷ್,
> ತೃತೀಯ ಭಾಷೆ:- ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಸಂಸ್ಕೃತ, ಕೊಂಕಣಿ (ಕನ್ನಡ), ಕೊಂಕಣಿ(ದೇವನಾಗರಿ),
ತುಳು, ಅರೇಬಿಕ್, ಪರ್ಷಿಯನ್,
> ಕೋರ್ ವಿಷಯಗಳು:- ಗಣಿತ, ವಿಜ್ಞಾನ, ಸಮಾಜ ವಿಜ್ಞಾನ.
3, ಸಾಮಾನ್ಯ ಮೌಲ್ಯಾಂಕನದ ಪ್ರಶ್ನೆ ಪತ್ರಿಕೆ ಸ್ವರೂಪ:
3.. ಪ್ರಶ್ನೆಪತ್ರಿಕೆಯು ದ್ವಿತೀಯ ಸೆಮಿಸ್ಟರ್‌ನ (SA-2) ಪಠ್ಯವನ್ನಾಧರಿಸಿದ್ದು, ಒಟ್ಟು 24 ಪ್ರಶ್ನೆಗಳಿದ್ದು 40 ಅಂಕಗಳನ್ನು
ಒಳಗೊಂಡಿರುತ್ತದೆ ಹಾಗೂ ಲಿಖಿತ ರೂಪದಲ್ಲಿ ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
3.2. ಪ್ರತಿ ವಿಷಯದ ಪರೀಕ್ಷೆಗೆ 1 ಗಂಟೆ 30 ನಿಮಿಷಗಳ ಅವಧಿಯನ್ನು ನಿಗದಿಪಡಿಸಲಾಗಿದೆ,
3.3. ಪ್ರತಿ ವಿಷಯಕ್ಕೆ 24 ಪ್ರಶ್ನೆಗಳನ್ನೊಳಗೊಂಡ ಪ್ರತ್ಯೇಕ ಪ್ರಶೋತ್ತರ ಪತ್ರಿಕೆಗಳನ್ನು ನೀಡಲಾಗುತ್ತದೆ.

6. ಮೌಲ್ಯಾಂಕನ ಪ್ರಕ್ರಿಯೆ:
61. ವಿದ್ಯಾರ್ಥಿಗಳ ಮಾಹಿತಿಯನ್ನು ಎಸ್.ಎ.ಟಿ.ಎಸ್ ನಿಂದ ಶಾಲಾವಾರು, ತರಗತಿವಾರು, ಮಾಧ್ಯಮವಾರು,
ಭಾಷಾವಾರು ಪಡೆಯಲಾಗುವುದು. ಪ್ರಶೋತ್ತರ ಪತ್ರಿಕೆಗಳನ್ನು ರಾಜ್ಯ ಹಂತದಲ್ಲಿಯೇ ಸಿದ್ದಪಡಿಸಿ ಬ್ಲಾಕ್ ಹಂತಕ್ಕೆ
ಸರಬರಾಜು ಮಾಡಲಾಗುವುದು. ಅಲ್ಲದೆ ವಿಶ್ಲೇಷಣಾ ಕಾರ್ಯಕ್ಕಾಗಿ ಮೌಲ್ಯಮಾಪನ ನಡೆಸಿದ ನಂತರ
ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಶಾಲಾ ಶಿಕ್ಷಕರು ದಾಖಲಿಸಲು ವಿಷಯವಾರು ಒ.ಎಂ.ಆರ್‌ಗಳನ್ನು ಶಾಲೆಗಳಿಗೆ
ಸರಬರಾಜು ಮಾಡಲಾಗುವುದು. ಶಿಕ್ಷಕರು ಮೌಲ್ಯಮಾಪನದ ನಂತರ ಒದಗಿಸಲಾದ ಒ.ಎಂ.ಆಲ್‌ಗಳಲ್ಲಿ
ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ನಮೂದಿಸುವುದು.
6.2, ರಾಜ್ಯ ಕಛೇರಿಯಿಂದ ಬ್ಲಾಕ್ ಹಂತಕ್ಕೆ ತಲುಪಿಸಿದ ಪ್ರಶೋತ್ತರ ಪತ್ರಿಕೆಗಳನ್ನು ಮತ್ತು ಒ.ಎಂ.ಆರ್‌ಗಳನ್ನು
ಕ್ಷೇತ್ರಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ರವಾನಿಸುವುದು,
6.3. ನಿಗದಿತ ವೇಳಾಪಟ್ಟಿಯಂತೆ ಶಾಲೆಗಳಲ್ಲಿ ಪರೀಕ್ಷೆಯನ್ನು ನಡೆಸುವುದು.
6.4, ಪ್ರತಿ ಶಾಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಅದೇ ಶಾಲೆಯ ಶಿಕ್ಷಕರಿಂದ ಶಾಲಾ
ಹಂತದಲ್ಲಿಯೇ ಮಾಡುವುದು,
6.5, ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು ಮೌಲ್ಯಮಾಪನದ ನಂತರ ಪ್ರತಿ ಸಾಲಿನಂತೆ ಈ ಸಾಲಿನಲ್ಲಿಯೂ
ವಿದ್ಯಾರ್ಥಿಗಳು ಪಡೆದಿರುವ ಅಂಕಗಳನ್ನು ಎಸ್.ಎ.ಟಿ.ಎಸ್. ತಂತ್ರಾಂಶದಲ್ಲಿ ನಮೂದಿಸಿ ಫಲಿತಾಂಶವನ್ನು
ಪೋಷಕರಿಗೆ ನೀಡುವುದು.
7. ಉಪನಿರ್ದೇಶಕರು(ಆಡಳಿತ) ರವರ ಜವಾಬ್ದಾರಿಗಳು:
71. ಸಾಮಾನ್ಯ ಮೌಲ್ಯಾಂಕನದ ಸಮಗ್ರ ಕಾರ್ಯ ನಿರ್ವಹಣೆಗಾಗಿ ತಮ್ಮ ಕಛೇರಿಯಿಂದ ಓರ್ವ ವಿಷಯ

ಪರಿವೀಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡುವುದು.
7.2. ಮುಖ್ಯ ಶಿಕ್ಷಕರು ಸದರಿ ಫಲಿತಾಂಶವನ್ನು SATS ತಂತ್ರಾಂಶದಲ್ಲಿ ವಿದ್ಯಾರ್ಥಿವಾರು ಭರ್ತಿ ಮಾಡುವಂತೆ ---
ಮಾರ್ಗದರ್ಶನ ನೀಡುವುದು ಮತ್ತು ಕ್ರಮವಹಿಸುವುದು,
7.3, ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ದಿನಾಂಕದಂದು ಗೌಪ್ಯತೆಯನ್ನು ಹಾಗೂ ಪರೀಕ್ಷಾ
ಕಾಪಾಡಿ, ಸಾಮಾನ್ಯ ಮೌಲ್ಯಾಂಕನ ಕಾರ್ಯದ ಮೇಲ್ವಿಚಾರಣೆಯನ್ನು ಕೈಗೊಳ್ಳುವುದು,
7.4. ಉಪನಿರ್ದೇಶಕರು (ಅಭಿವೃದ್ಧಿ) ರವರ ಸಹಯೋಗದಲ್ಲಿ ಕಲಿಕಾ ಗುಣಮಟ್ಟ ಮತ್ತು ಶಿಕ್ಷಕರ ಬೋಧನಾ ಗುಣಮಟ್ಟ
ಉತ್ತಮಪಡಿಸಿಕೊಳ್ಳುವಿಕೆಗೆ ವಿಶ್ಲೇಷಣೆ ಕೈಗೊಂಡು ಸೂಕ್ತ ಕಾರ್ಯಾಗಾರ/ಅನುಪಾಲನೆ/ ಮಾರ್ಗದರ್ಶನ ನೀಡುವಂತೆ
ಕ್ರಮ ಕೈಗೊಳ್ಳುವುದು.
7.5, ಮೌಲ್ಯಮಾಪನದ ನಂತರ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ವಿಷಯವಾರು ಭರ್ತಿ ಮಾಡಲು ಶಿಕ್ಷಕರಿಗೆ
ನೀಡಲಾಗಿರುವ ಒ.ಎಂ.ಆರ್ ಗಳನ್ನು ಸಂಗ್ರಹಿಸಿ ತಮ್ಮ ಹಂತದಲ್ಲಿ ಸ್ನಾನಿಂಗ್ ಕಾರ್ಯ ನಿರ್ವಹಿಸಿ ರಾಜ್ಯ
ಕಛೇರಿಯಿಂದ ನೀಡಲಾಗುವ ಸೂಚನೆಗಳಂತೆ ಮಾಹಿತಿಯನ್ನು ರಾಜ್ಯ ಕಛೇರಿಗೆ ನೀಡುವುದು.