ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ:
ನಿಮ್ಮ ಪ್ರಶ್ನೆಗಳನ್ನು ಈ ವಿಳಾಸಕ್ಕೆ ಕಳುಹಿಸಿ.
ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.
ಇ-ಮೇಲ್: sarakaricorner@gmail.com
ದೂರವಾಣಿ: 8884431909, ಫ್ಯಾಕ್ಸ್: 080-26257464.
*************************************
2018 JANUARY ರಿಂದ ಆರಂಭ .....
2017 ಅಕ್ಟೋಬರ್ 4 ರಿಂದ ಆರಂಭ till December
@@@@@@@@@@@@@@@@@@@@@@@@@@@@@@@@@@
ಬಿ.ಎಚ್. ಹರೀಶ ಮಂಗಳೂರು.
ಕಿರಣ ಕೊಪ್ಪಳ.
ವಿಶಾಲಾಕ್ಷಿ ಹಾಸನ.
ರವಿಕುಮಾರ್ ಸಾಗರ.
ಇಲಾಖಾ ವಿಚಾರಣಾಧಿಕಾರಿಗಳು ಆರೋಪ ಸಾಬೀತಾಗಿದೆ ಎಂದು ತಿಳಿಸಿ ವಿಧಿಸುವ ದಂಡನೆಯನ್ನು ಶಿಫಾರಸ್ಸು ಮಾಡಬಹುದೇ ?
ನಾನು ನಿವೃತ್ತ ಪ್ರೌಢಶಾಲಾ ಶಿಕ್ಷಕ. ನನಗೀಗ 82 ವರ್ಷ. ನನ್ನ ಪತ್ನಿ ಇತ್ತೀಚೆಗೆ ನಿಧನ ಹೊಂದಿದ್ದಾಳೆ. ನನ್ನ ಸಂಬಂಧಿಗಳು ದೂರದ ಊರಿನಲ್ಲಿರುವುದರಿಂದ ನನಗೆ ಈ ಇಳಿವಯಸ್ಸಿನಲ್ಲಿ ನೆರವು ಬೇಕಾಗಿದೆ. ನಾನು ಮತ್ತೊಂದು ಮದುವೆಯಾದರೆ ಎರಡನೇ ಪತ್ನಿಗೆ ಕುಟುಂಬ ವೇತನ ದೊರೆಯುವುದೇ?
|ಜಿ. ರಾಜು ಕೊಡಗು.
ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ವೇತನ) ನಿಯಮಗಳು 2002ರ ನಿಯಮ 15(1)ರ ಪ್ರಕಾರ ನಿವೃತ್ತಿ ಹೊಂದಿದ ಸರ್ಕಾರಿ ನೌಕರನು ಪುನರ್ವಿವಾಹವಾದಾಗ ಅವನು ಆ ವಿಷಯವನ್ನು 3 ತಿಂಗಳೊಳಗಾಗಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಮೂನೆ ಎಫ್ನಲ್ಲಿ ಅವನು ಸೇವೆ ಸಲ್ಲಿಸುತ್ತಿದ್ದ ಕಚೇರಿ ಮುಖ್ಯಸ್ಥನಿಗೆ ತಿಳಿಸಬೇಕು. ಅವನ ಅರ್ಜಿಯ ಜತೆ ಪ್ರಮಾಣ ಪತ್ರದ ದೃಢೀಕೃತ ಪ್ರತಿಯನ್ನು ಸಲ್ಲಿಸಬೇಕು. ತನ್ನ ಸಂಗಾತಿ ಜತೆಗಿರುವ ಪಾಸ್ಪೋರ್ಟ್ ಅಳತೆಯ ಜಂಟಿ ಭಾವಚಿತ್ರವನ್ನು 3 ಪ್ರತಿಗಳೊಂದಿಗೆ ಒದಗಿಸಬೇಕು. ತದನಂತರ ಇದನ್ನು ಪರಿಶೀಲಿಸಿ ಇಲಾಖಾ ಮುಖ್ಯಸ್ಥರು ಮಹಾಲೇಖಪಾಲರಿಗೆ ಕಳುಹಿಸಿಕೊಡುತ್ತಾರೆ. ಆಗ ದ್ವಿತೀಯ ಪತ್ನಿಗೆ ನಿಮ್ಮ ನಿಧನ ನಂತರ ಈ ಪಿಂಚಣಿಯು ಲಭ್ಯವಾಗುತ್ತದೆ.
***
05.11.2017.
ನಾನು 1985ರ ಫೆಬ್ರವರಿ 1 ರಂದು ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿದ್ದು, ನಮ್ಮನ್ನು ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 12 ರೀತ್ಯ ಸರ್ಕಾರಿ ನೌಕರರೆಂದು ತೀರ್ವನಿಸಿ ಕನಿಷ್ಠ ಮೂಲ ವೇತನ 11,600 ರೂ. ಸಿ ಗುಂಪಿಗೆ ನಿಗದಿಪಡಿಸಿ ಶೇ. 75 ಮನೆ ಬಾಡಿಗೆ ಭತ್ಯೆ ಹಾಗೂ ಕಾಲಕಾಲಕ್ಕೆ ತುಟ್ಟಿ ಭತ್ಯೆಯನ್ನು ಮಂಜೂರು ಮಾಡಲಾಗಿದೆ. ಸರ್ಕಾರ ಇದುವರೆಗೂ ರಜೆ ನಗದೀಕರಣ ಸೌಲಭ್ಯವನ್ನು ನೀಡಿರುವುದಿಲ್ಲ. ಆದ್ದರಿಂದ ನಮಗೆ ಗಳಿಕೆ ರಜೆಯ ವೇತನ ಸೌಲಭ್ಯವನ್ನು ನಗದೀಕರಣಗೊಳಿಸಿ ಮಂಜೂರು ಮಾಡಬಹುದೇ?
| ಎಂ. ವೀರಯ್ಯ ಮಂಡ್ಯ.
ರಾಜ್ಯ ಸರ್ಕಾರವು ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆದುಹಾಕದೆ ಅವರಿಗೆ ಸೂಕ್ತ ಜೀವನೋಪಾಯ ಒದಗಿಸಲು 2012ರಲ್ಲಿ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದನ್ವಯ ಹಂಗಾಮಿ ನೌಕರರೆಂದು ಪರಿಗಣಿಸಿದೆ. ಆದರೆ ಅವರಿಗೆ ನಗದೀಕರಣ ಸೌಲಭ್ಯವನ್ನು ನೀಡಲು ಅವಕಾಶವಿರುವುದಿಲ್ಲ. ಈ ನೌಕರರಿಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ಸಂಪೂರ್ಣವಾಗಿ ಅನ್ವಯವಾಗದಿರುವುದರಿಂದ ಇತ್ತೀಚೆಗೆ ಸರ್ಕಾರವು ಸುತ್ತೋಲೆಯೊಂದನ್ನು ಹೊರಡಿಸಿದೆ. ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿಯಲ್ಲಿರುವ ನೌಕರರಿಗೆ ಕರ್ನಾಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 118ರ ಪ್ರಕಾರ ಗಳಿಕೆ ರಜೆ ನಗದೀಕರಣ ಮಾಡಲು ಅವಕಾಶ ನೀಡಿಲ್ಲ.
***
04.11.2017
ಈಚೆಗೆ ದ್ವಿತೀಯ ದರ್ಜೆ ಸಹಾಯಕನಾಗಿ ಕರ್ತವ್ಯಕ್ಕೆ ಸೇರಿದ್ದು, ಹಿಂದೆ ಪೊಲೀಸ್ ಇಲಾಖೆಯಲ್ಲಿದ್ದಾಗ ಅಕೌಂಟ್ಸ್ ಹೈಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೆ. ಹಿಂದಿನ ಸೇವೆಯು ಮುಂದುವರಿದಿರುವುದರಿಂದ ಅಕೌಂಟ್ಸ್ ಲೋಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೇ? ನನ್ನ ಪರೀಕ್ಷಾರ್ಥ ಅವಧಿಯನ್ನು ಘೊಷಣೆ ಮಾಡಲು ಅಕೌಂಟ್ಸ್ ಲೋಯರ್ ಅಗತ್ಯ ಎಂದು ಸಹೋದ್ಯೋಗಿಗಳು ಹೇಳುತ್ತಿದ್ದಾರೆ. ಪರಿಹಾರ ಸೂಚಿಸಿ.
| ನರೇಂದ್ರ ಬಾಬು ಹೊಳೆನರಸೀಪುರ, ಹಾಸನ.
19-7-1979ರ ಸರ್ಕಾರಿ ಸುತ್ತೋಲೆ ಸಂಖ್ಯೆ ಜಿಎಡಿ 25, ಎಸ್ಎಸ್ಆರ್ 76ರ ಮೇರೆಗೆ ಕರ್ನಾಟಕ ಸೇವಿಲ್ ಸೇವಾ (ಸೇವೆ ಮತ್ತು ಕನ್ನಡ ಭಾಷಾ ಪರೀಕ್ಷೆ) ನಿಯಮಗಳು 1974ರಲ್ಲಿ ಕೆಲವೊಂದು ಹುದ್ದೆಗಳಿಗೆ ಅಕೌಂಟ್ಸ್ ಲೋಯರ್ ಪರೀಕ್ಷೆ ನಿಗದಿಪಡಿಸಿದ್ದು, ಅಂತಹ ಸಂದರ್ಭದಲ್ಲಿ ಸರ್ಕಾರಿ ನೌಕರ ಅಕೌಂಟ್ಸ್ ಹೈಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಮತ್ತೆ ಅಕೌಂಟ್ಸ್ ಲೋಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಲ್ಲ. ಇದಕ್ಕೆ ಕಾರಣ ಅಕೌಂಟ್ಸ್ ಹೈಯರ್ ಪರೀಕ್ಷೆಗಳಿಗೆ ನಿಗದಿಪಡಿಸಿರುವ ಪಠ್ಯಕ್ರಮವು ಅಕೌಂಟ್ಸ್ ಲೋಯರ್ ಪರೀಕ್ಷೆಯ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ. ಆದುದರಿಂದ ನೀವು ಮತ್ತೆ ಅಕೌಂಟ್ಸ್ ಲೋಯರ್ ಆಗಲಿ ಇನ್ನಿತರ ಇಲಾಖಾ ಪರೀಕ್ಷೆಗಳಾಗಲಿ ತೇರ್ಗಡೆಯಾಗುವುದು ಅನಿವಾರ್ಯವಲ್ಲ.
***
03.11.2017
ಸರ್ಕಾರಿ ಶಾಲೆಯಲ್ಲಿ ಕೆಲಸದಲ್ಲಿದ್ದ ನನ್ನ ಪತಿ 2017ರ ಮೇ 25ರಂದು ಅನಾರೋಗ್ಯದಿಂದ ಮರಣ ಹೊಂದಿದ್ದಾರೆ. ನನಗೆ ಹದಿನಾಲ್ಕು ವರ್ಷದ ಮಗಳು, ಮತ್ತು 10 ವರ್ಷದ ಮಗನಿದ್ದು, ನನ್ನ ಮಗಳು 18 ವರ್ಷವಾದ ಮೇಲೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಬಹುದೇ? ಇದಕ್ಕೆ ನಾನು ಏನು ಮಾಡಬೇಕು.
| ಉಮ್ಮ ಆಸಿಯಾ, ಎಸ್.ಎಲ್. ಅರಸಿಕೆರೆ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ನಿಧನ ಹೊಂದಿದ ಸರ್ಕಾರಿ ನೌಕರನ ಪತ್ನಿ ಹಿರಿಯ ಮಗ, ಮಗಳು ಅನುಕಂಪದ ಮೇರೆಗೆ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ. ಈ ರೀತಿ ಅರ್ಹತೆ ಪಡೆದವರು ಒಂದು ವರ್ಷದೊಳಗೆ 18 ವರ್ಷವಾಗುವುದಾದರೆ ಅಂತಹ ಮಕ್ಕಳು ಅನುಕಂಪದ ಮೇರೆಗೆ ಸರ್ಕಾರಿ ಉದ್ಯೋಗ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆ. ಆದರೆ ನಿಮ್ಮ ಮಗಳು ಈಗ 14 ವರ್ಷವಾಗಿರುವುದರಿಂದ ಅವಳಿಗೆ 18 ವರ್ಷವಾದ ಮೇಲೆ ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ಲಭ್ಯವಾಗುವುದಿಲ್ಲ. ಅಲ್ಲದೆ ಈಗಾಗಲೇ ನೀವು ಶಿಕ್ಷಕಿಯಾಗಿರುವುದರಿಂದ ನಿಮ್ಮ ಮೂಲವೇತನವು ಪ್ರಥಮ ದರ್ಜೆ ಸಹಾಯಕರ ವೇತನ ಶ್ರೇಣಿಯ ಸರಾಸರಿ ವೇತನಕ್ಕೆ ಬೆಂಗಳೂರಿನಲ್ಲಿ ಲಭ್ಯವಾಗಬಹುದಾದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ತುಟ್ಟಿ ಭತ್ಯೆಗಳ ಒಟ್ಟು ಮೊಬಲಗಿನ ವಾರ್ಷಿಕ ಆದಾಯವು ಹೆಚ್ಚಾಗಿದ್ದರೆ. ಈ ಅನುಕಂಪದ ನೇಮಕಾತಿ ಲಭ್ಯವಾಗುವುದಿಲ್ಲ.
***
30.10.2017.
ನಾನು 2017ರ ಜೂನ್ 1ರಂದು ಪ್ರೊಬೆಷನರಿಯಾಗಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಸೇರಿರುತ್ತೇನೆ. ನವೆಂಬರ್ನಲ್ಲಿ ನಡೆಯುವ ಅಕೌಂಟ್ಸ್ ಹೈಯರ್, ಜನರಲ್ ಲಾ ಭಾಗ 1, 2 ಪರೀಕ್ಷೆಗಳಿಗೆ ಹಾಜರಾಗುತ್ತಿದ್ದು, ಈ ಪರೀಕ್ಷೆಗೆ ಹೇಗೆ ಓದಬೇಕು? ಯಾವ ಯಾವ ಪುಸ್ತಕಗಳನ್ನು ಬಳಸಬೇಕು. ಪರೀಕ್ಷೆಗೆ ಪುಸ್ತಕಗಳನ್ನು ನೋಡಿಕೊಂಡು ಉತ್ತರಿಸಬಹುದೇ?
|ಶ್ವೇತ ಎಂ. ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾ (ಸೇವಾ ಮತ್ತು ಕನ್ನಡ ಭಾಷೆ) ನಿಯಮಗಳು 1974ರ ಪ್ರಕಾರ ಪ್ರತಿಯೊಬ್ಬ ಸರ್ಕಾರಿ ನೌಕರನು ಅವನ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ. ನೀವು ಈ ಇಲಾಖಾ ಪರೀಕ್ಷೆಗಳಿಗೆ ಲ. ರಾಘವೇಂದ್ರ ಅವರು ಸಿದ್ಧಪಡಿಸಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, ಕರ್ನಾಟಕ ಆರ್ಥಿಕ ಸಂಹಿತೆ , ಕರ್ನಾಟಕ ಬಜೆಟ್ ಕೈಪಿಡಿ, ಸಾದಿಲ್ವಾರು
ವೆಚ್ಚದ ಕೈಪಿಡಿ ಪುಸ್ತಕ ಅಕೌಂಟ್ಸ್ ಹೈಯರ್ ಪರೀಕ್ಷೆಗೆ ಬಳಸಬಹುದಾಗಿದೆ. ಅಕೌಂಟ್ಸ್ ಹೈಯರ್, ಲೋಯರ್ ಇಲಾಖಾ ಪರೀಕ್ಷಾ ಕೈಪಿಡಿ,
ಜನರಲ್ ಲಾ ಭಾಗ 1 ಮತ್ತು 2ಕ್ಕೆ ಲ. ರಾಘವೇಂದ್ರ ಅವರೇ ಸಂಕಲನ ಗೊಳಿಸಿರುವ ಪಠ್ಯಪುಸ್ತಕಗಳನ್ನು ನೀವು ಖರೀದಿಸಿ ಅದರಲ್ಲಿರುವ ವಿಷಯಾನುಕ್ರಮಾಣಿಕೆ, ವಿಷಯ ಸೂಚಿ, ಅಧ್ಯಯನ ಮಾಡಿಕೊಂಡು ಹಿಂದಿನ ಪರೀಕ್ಷಾ ಪತ್ರಿಕೆಗಳನ್ನು ಅವಲೋಕಿಸಿ ಉತ್ತರವನ್ನು ಮಾಡಿದರೆ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ.
***
28.10.2017,
ನಮ್ಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಪುರುಷರಾಗಿದ್ದು ಅವರು ಆಗಾಗ್ಗೆ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅವಿವಾಹಿತಳಾದ ನಾನು ಭಯ ಪಟ್ಟು ಯಾರಿಗೂ ತಿಳಿಸದೆ ಒದ್ದಾಡುತ್ತಿದ್ದೇನೆ. ಈ ಬಗ್ಗೆ ನಾನು ಯಾರಿಗೆ ದೂರನ್ನು ಸಲ್ಲಿಸಬೇಕು. ಈ ಬಗ್ಗೆ ರಹಸ್ಯವನ್ನು ಕಾಪಾಡಲಾಗುತ್ತದೆಯೇ?
|ವಿಶಾಲಾಕ್ಷಿ ವಿಜಯಪುರ.
ಕರ್ನಾಟಕ ಸರ್ಕಾರಿ ಸೇವಾ (ನಡತೆ ) ನಿಯಮಗಳು 1966ರ ನಿಯಮ 29ಬಿಯಲ್ಲಿ ಯಾರೇ ಸರ್ಕಾರಿ ನೌಕರನು ಕೆಲಸದ ಸ್ಥಳದಲ್ಲಿ ಯಾರೇ ಮಹಿಳಾ ಸರ್ಕಾರಿ ನೌಕರಳನ್ನು ಲೈಂಗಿಕ ಕಿರುಕುಳಕ್ಕೆ ಒಳಪಡಿಸತಕ್ಕದ್ದಲ್ಲ ಎಂದು ಸೂಚಿಸಿದೆ. ಈ ರೀತಿ ಸೂಚಿಸಿದರೂ ಸಹ ಅಂತಹ ಕಿರುಕುಳ ನೀಡಿದರೆ ನೀವು ಮೇಲಧಿಕಾರಿಗಳಿಗೆ ಗೌಪ್ಯವಾಗಿ ದೂರನ್ನು ನೀಡಬಹುದು. ಇದಕ್ಕೆ ನಿಮ್ಮ ಶಿಸ್ತು ಪ್ರಾಧಿಕಾರಿಯವರು ಒಂದು ಸಮಿತಿಯನ್ನು ರಚಿಸಿ ವಿಚಾರಣೆಯನ್ನು ರಹಸ್ಯವಾಗಿ ಮಾಡಬೇಕಾಗುತ್ತದೆ. ಈ ರೀತಿ ವಿಚಾರಣೆಯಲ್ಲಿ ಆರೋಪ ಸಾಬೀತಾದರೆ ಅವರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಬಹುದಾಗಿದೆ. ಅಲ್ಲದೆ ನೀವು ಸಹ ಅವರ ವಿರುದ್ಧ ದೂರನ್ನು ಸಲ್ಲಿಸಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬಹುದು. ಆಗ ಭಾರತ ದಂಡ ಸಂಹಿತೆಯ ಮೇರೆಗೆ ಅಂತಹ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬಹುದು.
***
27.10.2017,
ನಾನು ಇತ್ತೀಚೆಗೆ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದು ಯಾವ್ಯಾವ ಇಲಾಖಾ ಪರೀಕ್ಷೆಗಳಿಗೆ ಹಾಜರಾಗಬೇಕು. ಅಕೌಂಟ್ಸ್ ಹೈಯರ್ ರೆವಿನ್ಯೂ ಹೈಯರ್ ತೇರ್ಗಡೆಯಾದರೆ ಸಾಕೆ? ಮಾಹಿತಿ ನೀಡಿ.
|ವಿಜಯಲಕ್ಷ್ಮಿ ಚಿಕ್ಕಮಗಳೂರು.
ಕರ್ನಾಟಕ ಸರ್ಕಾರಿ ಸೇವಾ (ಕನ್ನಡ ಭಾಷೆ ಮತ್ತು ಇಲಾಖಾ ಪರೀಕ್ಷೆಗಳು) ನಿಯಮಗಳು 1974ರ ಮೇರೆಗೆ ನಿಮ್ಮ ಹುದ್ದೆಗೆ ನಿಗದಿಪಡಿಸಿರುವ ರೆವಿನ್ಯೂ ಲೋಯರ್ ಮತ್ತು ಅಕೌಂಟ್ಸ್ ಲೋಯರ್ ತೇರ್ಗಡೆಯಾದರೆ ಸಾಕು. ನೀವು ಈ ಪರೀಕ್ಷೆಗಳಿಗೆ ಲ. ರಾಘವೇಂದ್ರ ಅವರು ಸಿದ್ಧಪಡಿಸಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, ಜನರಲ್ ಲಾ ಭಾಗ 1 ಮತ್ತು 2 ಮುಂತಾದ ಕೃತಿಗಳನ್ನು ಅಧ್ಯಯನ ಮಾಡಬಹುದು.
***
26.10.2017.
ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ನೇಮಕವಾಗಿದ್ದ ನನ್ನ ಅಣ್ಣ ಇತ್ತೀಚೆಗೆ ಮೃತರಾಗಿದ್ದಾರೆ. ಅವರು ಅವಿವಾಹಿತರಾಗಿದ್ದು ನಾನು ಅವರಿಗೆ ಅವಲಂಬಿಳಾಗಿದ್ದೆ. ನಾನು ತಾಲ್ಲೂಕು ಕಚೇರಿಗೆ ಉತ್ತರ ಜೀವಿತ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ನೀಡಲು ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದಾರೆ. ನಾನು ಅವಿವಾಹಿತಳಾಗಿದ್ದು, ಅನುಕಂಪದ ಮೇರೆಗೆ ಉದ್ಯೋಗ ಪಡೆಯಲು ಏನು ಮಾಡಬೇಕು?
| ಜಯಶ್ರೀ ಡಿ ಉಪಹಾರ್ ಹಿರೇಬಾಗೇವಾಡಿ, ಬೆಳಗಾಂ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ನಿಯಮ 3ರ ಮೇರೆಗೆ ಅವಲಂಬಿತರಾಗಿರುವ ಅವಿವಾಹಿತೆ ಸಹೋದರಿ ಸಹ ಅನುಕಂಪದ ಮೇರೆಗೆ ನೇಮಕ ಹೊಂದಲು ಅರ್ಹಳಾಗಿರುತ್ತಾಳೆ. ಆದುದರಿಂದ ನೀವು ದಿನಾಂಕ 17-10-2012ರ ಸರ್ಕಾರಿ ಆದೇಶ ಸಂಖ್ಯೆ ಕಂಇ41ಸಮಿತಿ 2012ರ ಮೇರೆಗೆ ಉತ್ತರ ಜೀವಿತ ಪ್ರಮಾಣ ಪತ್ರವನ್ನು ತಹಸೀಲ್ದಾರರಿಂದ ಪಡೆಯಬಹುದು. ಈ ಅನುಕಂಪದ ಆಧಾರದ ಮೇಲೆ ನೇಮಕ ಹೊಂದಲು ನಿಮ್ಮ ವಿದ್ಯಾರ್ಹತೆಯ ನಕಲು ಪ್ರಮಾಣ ಪತ್ರ ಮೀಸಲಾತಿ ಇತ್ಯಾದಿಗಳನ್ನು ಅರ್ಜಿಯೊಂದಿಗೆ ಕಳುಹಿಸಬೇಕು.
***
25.10.2017.
ನಮ್ಮ ಮೇಲಧಿಕಾರಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ರಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿದ್ದಾರೆ. ಆದರೆ ಅವರು 2017ರ ಜುಲೈ 10ರಿಂದ 2017ರ ಸೆಪ್ಟೆಂಬರ್ 30ರವರೆಗೆ ನನ್ನನ್ನು ದುರ್ನಡತೆ ಆರೋಪದಡಿ ಅಮಾನತಿನಲ್ಲಿಟ್ಟಿದ್ದಾರೆ. ಪ್ರಭಾರದಲ್ಲಿರುವವರು ಶಿಸ್ತು ಪ್ರಾಧಿಕಾರಿಯಾಗಿ ವರ್ತಿಸಬಹುದೆ?
| ಮಹಂತೇಶ್ ಚಿತ್ರದುರ್ಗ.
ಕರ್ನಾಟಕ ರಾಜ್ಯ ಹೈಕೋರ್ಟ್ ಎಂ. ಮಾರಿದೇವ್ ್ಖಠ ಸ್ಟೇಟ್ ಆಫ್ ಮೈಸೂರು 1968 (1) ಎಲ್ಜೆ 325 ಹಾಗೂ ಕೆಎಎಚ್ ಕಾಳೇಗೌಡ ್ಖಠ ಸ್ಟೇಟ್ ಆಫ್ ಮೈಸೂರು (1971) ಮೈಸೂರು ಎಲ್ಜೆ ಎಸ್ಎನ್ 86 ಮುಂತಾದ ಪ್ರಕರಣಗಳಲ್ಲಿ ಸ್ವತಂತ್ರ ಪ್ರಭಾರದಲ್ಲಿ ಶಿಸ್ತು ಪ್ರಾಧಿಕಾರದ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಶಿಸ್ತು ಪ್ರಾಧಿಕಾರದ ಹಕ್ಕು ಚಲಾಯಿಸುವಂತಿಲ್ಲ ಎಂದು ಹೇಳಿದೆ. ಹೀಗಾಗಿರುವುದರಿಂದ ನಿಮ್ಮನ್ನು ಅಮಾನತಿನಲ್ಲಿಟ್ಟಿರುವುದು ನಿಯಮಾವಳಿ ರೀತ್ಯ ಕ್ರಮಬದ್ಧವಲ್ಲ. ಆದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 7ಬಿರಂತೆ ಸಹವರ್ತಿ ಪ್ರಭಾರದಲ್ಲಿಟ್ಟಿದ್ದರೆ ಅಂತಹ ಅಧಿಕಾರಿಯು ಶಿಸ್ತು ಪ್ರಾಧಿಕಾರದ ಅಧಿಕಾರಗಳನ್ನು ಚಲಾಯಿಸಬಹುದು.
***
24.10.2017.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ 2010ರಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ನನ್ನ ಜನ್ಮ ದಿನಾಂಕ 24-7-1978. ಐಎಎಸ್, ಐಪಿಎಸ್ ಪರೀಕ್ಷೆ ಬರೆಯಲು ವಯೋಮಿತಿ ಸಡಿಲಿಕೆ ಉಂಟೆ?
| ರವಿ ನಾಗೇಶ್ ಕೊಪ್ಪಳ.
ಅಖಿಲ ಭಾರತ ಸೇವಾ ಅಧಿಕಾರಿಗಳ ನೇಮಕಾತಿಯನ್ನು ಯುಪಿಎಸ್ಸಿಯು ಪ್ರತಿವರ್ಷ ನಡೆಸುತ್ತದೆ. ನೀವು ಈ ಪರೀಕ್ಷೆಗೆ ಹಾಜರಾಗಲು ಗರಿಷ್ಠ ವಯೋಮಿತಿ 30 ವರ್ಷಗಳಾಗಿದ್ದು, ಕೇಂದ್ರ ನೇಮಕಾತಿ ನಿಯಮಾವಳಿ ನಿಯಮದಂತೆ ಈ ಸ್ಪರ್ಧಾತ್ಮಕ ಪರೀಕ್ಷೆಗೆ ವಯೋಮಿತಿ ಸಡಿಲಿಕೆ ಇರುವುದಿಲ್ಲ. ಆದುದರಿಂದ ನೀವು ಅಖಿಲ ಭಾರತ ಸೇವಾ ಅವಧಿಗಳ ಪರೀಕ್ಷೆ ಬರೆಯಲು ಅನರ್ಹ.
***
22.10.2017.
ಪ್ರೌಢಶಾಲೆಯಲ್ಲಿ ದಿನಾಂಕ 7-11-2016 ರಿಂದ ಪ್ರಭಾರ ಮುಖ್ಯ ಶಿಕ್ಷಕನಾಗಿದ್ದೇನೆ. ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಹೈಯರ್ ಜನರಲ್ ಲಾ ಭಾಗ-1 ಮತ್ತು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಪ್ರಭಾರ ಭತ್ಯೆ ಪಡೆಯಲು ಜನರಲ್ ಲಾ ಭಾಗ-2 ಪರೀಕ್ಷೆ ತೇರ್ಗಡೆಯಾಗುವುದು ಕಡ್ಡಾಯವೆ? ಜನರಲ್ ಲಾ ಭಾಗ-2 ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಯಾವಾಗಿನಿಂದ ಪ್ರಭಾರ ಭತ್ಯೆ ಸಿಗಲಿದೆ?
| ಸುಬ್ರಹ್ಮಣ್ಯ ಮದ್ದೋಡಿ ಬೈಂದೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ರಂತೆ ನಿಮ್ಮನ್ನು ಪ್ರಭಾರದಲ್ಲಿಟ್ಟಿದ್ದರೆ ನಿಯಮ 68ರ ಮೇರೆಗೆ ಮುಖ್ಯೋಪಾಧ್ಯಾಯರ ವೇತನ ಶ್ರೇಣಿಯ ಕನಿಷ್ಠ ವೇತನಕ್ಕೆ ಶೇ. 7.5 ಪ್ರಭಾರ ಭತ್ಯೆ ಲಭ್ಯವಾಗುತ್ತದೆ. ನೀವು ಈಗಾಗಲೇ ಅಗತ್ಯವಾದ ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದರಿಂದ 7-1-2016ರಿಂದಲೇ ಪ್ರಭಾರ ಭತ್ಯೆ ಲಭ್ಯವಾಗುತ್ತದೆ. ಜನರಲ್ ಲಾ ಭಾಗ -2, ಸಾಮಾನ್ಯವಾಗಿ ಎ ಗುಂಪಿನ ಅಧಿಕಾರಗಳ ಹುದ್ದೆಗೆ ಪದೋನ್ನತಿ ಪಡೆಯಲು ಅವಶ್ಯವಾಗಿರುತ್ತದೆ. ಆದರೆ ಶಾಲಾ ಮುಖ್ಯೋಪಾಧ್ಯಾಯರ ಹುದ್ದೆಯು ಬಿ ಗುಂಪಿನ ಹುದ್ದೆಯಾಗಿರುವುದರಿಂದ ಪ್ರಸ್ತುತ ಜನರಲ್ ಲಾ ಭಾಗ-2 ತೇರ್ಗಡೆಯಾದರೆ ಸಾಕು.
***
21.10.2017.
ನಾನು 1944ರ ಜುಲೈ 8ರಂದು ಜನಿಸಿದ್ದು, 1973ರಲ್ಲಿ ಎಫ್ಡಿಎ ಆಗಿ ಕೆಲಸಕ್ಕೆ ಸೇರಿದ್ದೆ. ಆದರೆ ಕಾರಣಾಂತರಗಳಿಂದ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ಸುಮಾರು 7 ವರ್ಷಗಳ ಬಳಿಕ ಮತ್ತೆ ಕೆಪಿಎಸ್ಸಿ ಮೂಲಕ ನನ್ನ 41ನೇ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿ 17 ವರ್ಷ ಕೆಲಸದಲ್ಲಿದ್ದು ನಿವೃತ್ತನಾಗಿದ್ದೇನೆ. ನನ್ನ ಹಿಂದಿನ ಸೇವೆಯನ್ನು ನಿವೃತ್ತಿ ವೇತನಕ್ಕೆ ಅರ್ಹತಾದಾಯಕ ಸೇವೆಯನ್ನು ಪರಿಗಣಿಸಿ ಪಿಂಚಣಿ ಸೌಲಭ್ಯಗಳನ್ನು ನೀಡಿರುತ್ತಾರೆ. ನಾನು 2ನೇ ಬಾರಿ ಕೆಲಸಕ್ಕೆ ಸೇರುವಾಗ 41 ವರ್ಷ ವಯಸ್ಸಾಗಿದ್ದ ಕಾರಣ 30 ವರ್ಷ ದಾಟಿದ ಸರ್ಕಾರಿ ನೌಕರರಿಗೆ ನೀಡುವ ನಿಯಮ 247ಎ ಪ್ರಕಾರ ಹೆಚ್ಚುವರಿ ಸೌಲಭ್ಯಕ್ಕೆ ಅರ್ಹನಾಗುವೆನೆ?
| ಎಂ. ಮುನಿಕರಿಯಪ್ಪ ಬೆಂಗಳೂರು-52.
ನೀವು 1973ರಲ್ಲಿ ಸೇವೆಗೆ ಸೇರುವಾಗ 29 ವರ್ಷಗಳಾಗಿದ್ದು ತದನಂತರ 2ನೇ ಬಾರಿಗೆ 41ನೇ ವಯಸ್ಸಿನಲ್ಲಿ ಸೇರಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ಪ್ರಕಾರ ಹೆಚ್ಚುವರಿ ಸೇವಾವಧಿಯನ್ನು ನಿಮ್ಮ ಅರ್ಹತಾದಾಯ ಸೇವೆಗೆ ಸೇರಿಸಲು ಬರುವುದಿಲ್ಲ. ಈಗಾಗಲೇ ಸೇವಾ ಭಂಗದ ಅವಧಿಯನ್ನು ಪರಿಗಣಿಸದೆ ಹಿಂದಿನ ಸೇವೆಯನ್ನು ಪರಿಗಣಿಸಿರುವುದರಿಂದ ಪ್ರಸ್ತುತ ನಿಮಗೆ ಯಾವುದೇ ಹೆಚ್ಚುವರಿ ಸೌಲಭ್ಯ ಲಭ್ಯವಾಗುವುದಿಲ್ಲ.
***
20.10.2017.
ನಮ್ಮ ತಂದೆ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು ಅವರ ಮಾಸಿಕ ನಿವೃತ್ತಿ ವೇತನ 6,200 ರೂ. ಅವರಿಗೆ ತಗುಲಿದ ವೆಚ್ಚವನ್ನು ಭರಿಸಲು ನಮ್ಮ ಮೇಲಧಿಕಾರಿಗಳಿಗೆ ವಿನಂತಿಸಿದಾಗ ನಿಮ್ಮ ತಂದೆಯವರು ನಿವೃತ್ತಿ ವೇತನದ ಮೂಲವೇತನ 6,000 ರೂ. ಕ್ಕಿಂತ ಹೆಚ್ಚಾಗಿರುವುದರಿಂದ ವೈದ್ಯಕೀಯ ವೆಚ್ಚವನ್ನು ಮರುಭರಿಸಲು ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ನೀಡಿ?
| ರಾಮಕೃಷ್ಣ ಎಂ. ಚಿತ್ರದುರ್ಗ.
ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸಾ ನಿಯಮಾವಳಿ 1963ರ ನಿಯಮ 2ರ ಪ್ರಕಾರ ಕಾನೂನು ಇತ್ತೀಚಿನ ತಿದ್ದುಪಡಿಯಂತೆ ಸರ್ಕಾರವು ನಿಗದಿಪಡಿಸಿದ ಕನಿಷ್ಠ ನಿವೃತ್ತಿ ವೇತನ ರೂ. 4800 ಮತ್ತು ಅದಕ್ಕೆ ಹೊಂದಿಕೊಂಡಂತೆ ವೈದ್ಯಕೀಯ ಮರುಭವಿಸುವ ದಿನಾಂಕದಂದು ನೀಡಿದ್ದ ತುಟ್ಟಿಭತ್ಯೆ ಒಳಗೊಳ್ಳುತ್ತದೆ. ಈ ತಿದ್ದುಪಡಿಯ ಹಿನ್ನೆಲೆಯಲ್ಲಿ ನಿಮ್ಮ ತಂದೆಯವರ ಮಾಸಿಕ ಪಿಂಚಣಿ 6200 ಆಗಿದ್ದರೂ ನೀವು ಈ ನಿಯಮಾವಳಿಯಂತೆ ನಿಮ್ಮ ಕಚೇರಿಗೆ ಮರು ಭರಿಸಲು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು.
***
18.10.2017.
ನಾನು ಸರ್ಕಾರಿ ಸಿ ಗುಂಪಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಕಾಯಂ ನೌಕರನಾಗಿದ್ದೇನೆ. ನಾನು ಹಿಂದುಳಿದ ವರ್ಗಕ್ಕೆ ಸೇರಿದ್ದು ಕೆಎಎಸ್ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಠ ವಯೋಮಿತಿ ಎಷ್ಟು? ಈ ಪರೀಕ್ಷೆಗೆ ಹೇಗೆ ಅಧ್ಯಯನ ಮಾಡಬೇಕು?
|ಶಿವು ಮೈಸೂರು.
ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಿಯಮಾವಳಿ 1997ರ ನಿಯಮ 5 ರಂತೆ ಹಿಂದುಳಿದ ವರ್ಗಗಳಿಗೆ ಗರಿಷ್ಠ 38 ವರ್ಷಗಳಾಗಿರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಸರಕಾರವು ಕಾಲಕಾಲಕ್ಕೆ ನೇಮಕಾತಿ ಆಗದಿದ್ದರೆ ವಯೋಮಿತಿಯನ್ನು ಸಡಿಲಿಕೆಗೊಳಿಸುವ ಕಾರ್ಯಮಿತಿಯನ್ನು ಅನುಸರಿಸುತ್ತದೆ. ಈ ಪರೀಕ್ಷೆಗೆ ನೀವು ಲ. ರಾಘವೇಂದ್ರ ಅವರು ಬರೆದಿರುವ ಕೆಎಎಸ್ ಪರೀಕ್ಷಾ ಮಾರ್ಗದರ್ಶಿ, ಸಾಮಾನ್ಯ ಅಧ್ಯಯನ ಮತ್ತು ಪೂರ್ವಭಾವಿ ಪರೀಕ್ಷೆಗಳ ಪ್ರಶ್ನೆಕೋಶ ಕೃತಿಗಳನ್ನು ಅಧ್ಯಯನ ಮಾಡಬಹುದು. ಈ ಪುಸ್ತಕಗಳಿಗೆ ನೀಡಿರುವ ಮಾರ್ಗದರ್ಶಿ ಸೂಚಿಗಳನ್ನು ಮತ್ತು ಅಧ್ಯಯನ ಸಾಮಗ್ರಿಗಳನ್ನು ಚೆನ್ನಾಗಿ ಮನನ ಮಾಡಿಕೊಂಡು ಪೂರ್ವಭಾವಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ, ಮುಖ್ಯ ಪರೀಕ್ಷೆಗೆ ಹಾಜರಾಗಬಹುದು.
***
17.10.2017.
ನಾನು 2014ರಲ್ಲಿ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದೇನೆ. ಕೆಲಸಕ್ಕೆ ಸೇರುವುದಕ್ಕಿಂತ ಮುಂಚೆ ನಾನು ಡಿಪ್ಲೊಮೊ ವ್ಯಾಸಂಗ ಮಾಡಿದ್ದು, ನಂತರ ಸಂಜೆ ಕಾಲೇಜಿನಲ್ಲಿ ಬಿ.ಇ., ಮಾಡಲು ಅನುಮತಿ ಕೇಳಿದ್ದಕ್ಕೆ ಕೆಸಿಎಸ್ಆರ್ ನಿಯಮದಲ್ಲಿ ಸಂಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ಅನುಮತಿ ಇಲ್ಲ ಎಂದು ನಿರಾಕರಿಸಿದ್ದಾರೆ. ಇದು ಸರಿಯೇ?
| ಮಹೇಶ, ಹಾಸನ.
ದಿನಾಂಕ 6-9-1986 ಸರ್ಕಾರಿ ಸುತ್ತೋಲೆ ಸಂಖ್ಯೆ ಡಿಪಿಆರ್ 9 ಎಸ್ಆರ್ಸಿ 86ರಂತೆ ಕಚೇರಿ ಕೆಲಸಕ್ಕೆ ಅಡ್ಡಿ ಮಾಡದಂತೆ ಸರ್ಕಾರಿ ನೌಕರರು ಉನ್ನತ ಶಿಕ್ಷಣ ಪಡೆಯಲು ಕೆಲವೊಂದು ಷರತ್ತುಗೊಳಪಟ್ಟು ಅನುಮತಿ ನೀಡಬೇಕೆಂದು ಸೂಚಿಸಲಾಗಿದೆ. ಸರ್ಕಾರಿ ನೌಕರರ ಮನೋಬಲ ಕುಗ್ಗುವುದನ್ನು ಮತ್ತು ಆಡಳಿತದ ಚುರುಕುತನ ತಗ್ಗುವುದನ್ನು ತಪ್ಪಿಸುವುದಕ್ಕಾಗಿ ನೌಕರರ ಸೇವಾಷರತ್ತುಗಳಿ
ಗನ್ವಯಿಸುವ ವಿಷಯಗಳಲ್ಲಿ ವಿಳಂಬ ಮಾಡದೆ ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಆರ್19 ಎಸ್ಎಸ್ಆರ್85 ದಿನಾಂಕ 11-6-1985ರಲ್ಲಿ ಸೂಚಿಸಲಾಗಿದೆ. ಅಲ್ಲದೆ ಇದೇ ಸುತ್ತೋಲೆಯಲ್ಲಿ ಸಿ ಮತ್ತು ಡಿ ಗುಂಪಿನ ನೌಕರರು ಅವರ ಶೈಕ್ಷಣಿಕ ಮತ್ತು ತಾಂತ್ರಿಕ ವಿದ್ಯಾರ್ಹತೆಗಳನ್ನು ಕಚೇರಿ ವೇಳೆ ನಂತರ ಪಡೆಯಲು ಉತ್ತೇಜನ ನೀಡಬೇಕೆಂದು ಸೂಚಿಸಲಾಗಿದೆ. ಆದುದರಿಂದ ನೀವು ಈ ಸರ್ಕಾರಿ ಸುತ್ತೋಲೆ ಮತ್ತು ದಿನಾಂಕ 5-2-73ರ ಸರ್ಕಾರಿ
ಆದೇಶ ಸಂಖ್ಯೆ ಜಿಎಡಿ 4 ಎಸ್ಆರ್ಸಿ 73ರ ಮೇರೆಗೆ ಹಾಗೂ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 61ರಡಿಯಲ್ಲಿ ಉಪಬಂಧಗಳಿಗನುಸಾರವಾಗಿ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಬಹುದು.
***
16.10.2017.
ನಮ್ಮ ಶಾಲೆಯಲ್ಲಿ ನಾಲ್ವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಒಬ್ಬರು ಪ್ರಭಾರ ಮುಖ್ಯ ಶಿಕ್ಷಕರಾಗಿ ಅಧಿಕಾರ ಸ್ವೀಕರಿಸಬೇಕಿದೆ. ಹಿರಿಯ ಶಿಕ್ಷಕನಾದ ನನ್ನನ್ನು ಅಧಿಕಾರ ಸ್ವೀಕರಿಸುವಂತೆ ಇತರರು ಹೇಳುತ್ತಿದ್ದಾರೆ. ಕಾನೂನಿನ ಅಡಿ ಯಾರು ಪ್ರಭಾರ ಮುಖ್ಯ ಶಿಕ್ಷಕರಾಗಿ ಅಧಿಕಾರ ಸ್ವೀಕರಿಸಬೇಕು?
| ರಾಮಮೋಹನ ಕೋಲಾರ ಜಿಲ್ಲೆ.
ಸರ್ಕಾರಿ ಅಥವಾ ಖಾಸಗಿ ಪ್ರೌಢಶಾಲೆಗಳಲ್ಲಿ ಕಾಯಂ ಮುಖ್ಯ ಶಿಕ್ಷಕರು ಇಲ್ಲದ ಸಂದರ್ಭದಲ್ಲಿ ಅಥವಾ ರಜೆ ಹೋದ ಸಂದರ್ಭದಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಶಾಲೆಯ ಪ್ರಭಾರವನ್ನು ಸದರಿ ಶಿಕ್ಷಕ ವೃಂದದ ಮುಖ್ಯ ಶಿಕ್ಷಕರ ಹುದ್ದೆಗೆ ಪ್ರಭಾರದಲ್ಲಿ ಇರಿಸತಕ್ಕದ್ದು. ಆದರೆ ಈ ರೀತಿ ಕ್ರಮ ಜರುಗಿಸುವಾಗ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ರ ಅಡಿಯಲ್ಲಿ ಪ್ರಭಾರದಲ್ಲಿ ಇಡುವಂತಿಲ್ಲ ಎಂದು ಹೇಳಲಾಗಿದೆ. ಆದುದರಿಂದ ಆ ಶಾಲೆಗೆ ಸೇರಿದ ಹಿರಿಯ ಶಿಕ್ಷಕರು ಈ ಸುತ್ತೋಲೆಯಂತೆ ಪ್ರಭಾರ ತೆಗೆದುಕೊಳ್ಳಬೇಕಾಗುತ್ತದೆ.
***
15.10.2017.
ನಾನು ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಕಂಪನಿಯಲ್ಲಿ ಖಾಯಂ ನೌಕರನಾಗಿದ್ದು ನನ್ನ ವಾರ್ಷಿಕ ಆದಾಯ ಸುಮಾರು 6 ಲಕ್ಷ ಇದೆ. ನನ್ನ ತಂದೆಯ ವಾರ್ಷಿಕ ಪಿಂಚಣಿ 84 ಸಾವಿರವಾಗಿದ್ದು ಅವರು ನನ್ನನ್ನು ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಇದನ್ನು ನನ್ನ ಕಂಪನಿಯಲ್ಲಿ ಕೂಡ ನಮೂದಿಸಿದ್ದೇನೆ ಹಾಗೂ ವೈದ್ಯಕೀಯ ಸೌಲಭ್ಯ ಪಡೆಯುತ್ತಿದ್ದೇನೆ. ನನ್ನ ತಂದೆಯ ಹೆಸರಿನಲ್ಲಿ ಯಾವುದೇ ವಸತಿ ಇರುವುದಿಲ್ಲ. ಈಗ ನನ್ನ ತಂದೆ ರಾಜ್ಯ ಸರ್ಕಾರದಿಂದ ವಸತಿ ನಿರ್ವಣಕ್ಕಾಗಿ ರೂ. 3.20 ಲಕ್ಷ ಪಡೆಯಲು ಇಚ್ಛಿಸಿದರೆ ನನಗೆ ಅವಲಂಬಿತರಾಗಿ ಈ ಸಹಾಯ ಧನವನ್ನು ವಸತಿ ನಿರ್ವಣಕ್ಕಾಗಿ ಪಡೆದರೆ ನನ್ನ ಕೆಲಸಕ್ಕೆ ಏನಾದರೂ ತೊಂದರೆಯಾಗುತ್ತದೆಯೇ?
|ಅವಿನಾಶ್, ಮೈಸೂರು.
ನೀವು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ನಿಮ್ಮ ತಂದೆಯವರು ರಾಜ್ಯ ಸರ್ಕಾರದಿಂದ ಪಿಂಚಣಿಯನ್ನು ಪಡೆಯುತ್ತಿರುವುದರಿಂದ ರಾಜ್ಯ ಸರ್ಕಾರದಿಂದ ವಸತಿ ನಿರ್ವಣಕ್ಕೆ ಸಹಾಯಧನ ಪಡೆಯುವುದು ಕಾನೂನು ಬಾಹಿರವಾಗಿರುತ್ತದೆ. ಈ ಸಹಾಯಧನವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ವಸತಿ ಹೀನರಿಗೆ ನೀಡುವ ಸೌಲಭ್ಯವಾಗಿರುತ್ತದೆ. ಆದುದರಿಂದ ನೀವು ನಿಮ್ಮ ತಂದೆಯವರಿಗೆ ಈ ಬಗ್ಗೆ ಮನವರಿಕೆ ಮಾಡಿಸಿ ಪಡೆಯದಂತೆ ಸೂಚಿಸಿದರೆ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ.
***
14.10.2017,
ನಮ್ಮ ತಂದೆಯವರು ಪ್ರಗತಿ ಕೃಷ್ಣ ಗ್ರಾಮೀಣ ಸಹಕಾರಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಆರೋಗ್ಯ ತೊಂದರೆಯಿಂದ 2006ರ ಜುಲೈ 8ರಂದು ನಿಧನ ಹೊಂದಿದ್ದಾರೆ. ನನ್ನ ಅಣ್ಣ ಪಿಯುಸಿ ಮಾಡಿದ್ದು ಇಂಜಿನಿಯರಿಂಗ್ ಪದವೀಧರನಾಗಿದ್ದೇನೆ. ಬ್ಯಾಂಕಿನ ಅಧಿಕಾರಿಗಳು ಅನುಕಂಪದ ಆಧಾರದ ಮೇಲೆ ಉದ್ಯೋಗ ಬರುವುದಿಲ್ಲವೆಂದು ಹೇಳುತ್ತಿದ್ದಾರೆ. ಇದು ಸರಿಯೇ?
|ಮಹೇಶ್ ಚಿಕ್ಕಬಳ್ಳಾಪುರ.
ಕರ್ನಾಟಕ ಸಹಕಾರಿ ಸಂಘಗಳ ನಿಯಮಗಳು 1961ರ ನಿಯಮ 18ರ ಮೇರೆಗೆ ಅನುಕಂಪದ ಮೇರೆಗೆ 18(3) ಅನುಕಂಪದ ಆಧಾರದ ಮೇಲೆ ಉದ್ಯೋಗವಕಾಶ ಪಡೆಯಲು ಅವಕಾಶವಿರುತ್ತದೆ. ಪುರುಷ ಉದ್ಯೋಗಿಯು ಮರಣ ಹೊಂದಿದರೆ ಅವರ ಪತ್ನಿ ಅಥವಾ ಪತ್ನಿಯು ಯುಕ್ತ ಕಾರಣಗಳಿಗಾಗಿ ಉದ್ಯೋಗವನ್ನು ಮಾಡಲು ಅನರ್ಹಳಾಗಿದ್ದರೆ ಅವಳ ಹಿರಿಯ ಮಗ ಅರ್ಹರಾಗುತ್ತಾರೆ. ಒಂದುವೇಳೆ ಅಭ್ಯರ್ಥಿಯ ವಿಧವೆ ಮತ್ತು ಆಕೆಯ ಮಗ ಯಾವುದೇ ಒಂದು ಯುಕ್ತ ಕಾರಣಗಳಿಗಾಗಿ ಅನರ್ಹರಾಗಿದ್ದರೆ ಈ ಹುದ್ದೆಯನ್ನು ಪಡೆಯಲು ಇಷ್ಟ ಪಡದಿದ್ದರೆ ಅವರ ಕಿರಿಯ ಮಗ ಅಥವಾ ಮಗಳು ಪಡೆಯಬಹುದು ಆದುದರಿಂದ ನೀವು ಸರಕಾರವು ಇತ್ತೀಚೆಗೆ ತಂದಿರುವ ತಿದ್ದುಪಡಿ ಅಧಿಸೂಚನೆ ಸಂಖ್ಯೆ ಸಿಒ 123, ಸಿಎಲ್ಎನ್ 2016 ದಿನಾಂಕ 29-7-2017ರ ಮೇರೆಗೆ ಪುನಃ ನೀವು ಅರ್ಜಿಯನ್ನು ಸಲ್ಲಿಸಬಹುದು.
***
13.10.2017.
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ 5 ವರ್ಷಗಳಿಂದ ಸಹಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ನಡೆದ ವಾಲ್ಮೀಕಿ ಜಯಂತಿಯಂದು ಅನಾರೋಗ್ಯದ ಕಾರಣ ಶಾಲೆಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿ ಮುಖ್ಯೋಪಾಧ್ಯಾಯರು ಅಂದಿನ ಹಾಜರಾತಿಯಲ್ಲಿ ನನ್ನ ಖಾತೆಯಲ್ಲಿ ಸಾಂರ್ದಭಿಕ ರಜೆ ಇಲ್ಲದ ಕಾರಣ ಗಳಿಕೆ ರಜೆ ಎಂದು ಪರಿಗಣಿಸಿ ನನ್ನ ಲೆಕ್ಕದಿಂದ ಕಡಿತಗೊಳಿಸಿದ್ದಾರೆ. ಇದು ನಿಯಮಾವಳಿ ರೀತ್ಯ ಸರಿಯೆ ?
|ಪ್ರದೀಪ್ ಕೆ.ಜಿ. ಬಿಜಾಪುರ.
ಕರ್ನಾಟಕ ಸರ್ಕಾರದ ಆದೇಶ ಅಥವಾ ಸುತ್ತೋಲೆ ಮೇರೆಗೆ ಮಹಾ ಪುರುಷರ ಜಯಂತಿಯಂದು ಸರಕಾರಿ ನೌಕರರು ಹಾಜರಾಗಬೇಕಾಗುತ್ತದೆ. ಆದರೂ ಸಹ ಇಂತಹ ಸಂದರ್ಭದಲ್ಲಿ ವೈದ್ಯಕೀಯ ಕಾರಣಗಳ ನಿಮಿತ್ತ ಗೈರು ಹಾಜರಾದರೆ ನಿಮ್ಮ ಲೆಕ್ಕದಲ್ಲಿರುವ ಗಳಿಕೆ ರಜೆಯನ್ನು ಸಾಂರ್ದಭಿಕ ರಜೆ ಇಲ್ಲವೆಂಬ ಕಾರಣದಿಂದ ಕಡಿತಗೊಳಿಸುವುದು ನಿಯಮಾವಳಿಗೆ ವ್ಯತಿರಿಕ್ತವಾಗಿರುತ್ತದೆ. ಈ ಬಗ್ಗೆ ನೀವು ನಿಮ್ಮ ಮುಖ್ಯೋಪಾಧ್ಯಾಯರಿಗೆ ಮನದಟ್ಟು ಮಾಡಿಕೊಟ್ಟು ಕಡಿತಗೊಳಿಸಿದ ಗಳಿಕೆ ರಜೆಯನ್ನು ನಿಮ್ಮ ಖಾತೆಗೆ ಸೇರಿಸಲು ವಿನಂತಿಸಬಹುದು. ಇತ್ತೀಚೆಗೆ ಸರ್ವೇಚ್ಛ ನ್ಯಾಯಾಲಯವು ಇಂತಹ ಜಯಂತಿಯನ್ನು ಕಡ್ಡಾಯವಾಗಿ ಸರ್ಕಾರಿ ನೌಕರರು ಹಾಜರಾಗುವುದು ಅನಿವಾರ್ಯವಲ್ಲವೆಂದು ಸೂಚಿಸಿದೆ.
***
12.10.2017
ನಾನು 2010ರ ಆಗಸ್ಟ್ 26ರಂದು ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕನಾಗಿ ನೇಮಕ ಹೊಂದಿರುತ್ತೇನೆ. ನಾನು ಕೆಎಎಸ್ ಪರೀಕ್ಷಾ ತಯಾರಿಗಾಗಿ ಮುಖ್ಯ ಶಿಕ್ಷಕರಿಂದ ಅನುಮತಿ ಪಡೆದು 2017ರ ಜುಲೈ 1 ರಿಂದ 2017ರ ಆಗಸ್ಟ್ 31ವರೆಗೆ ವೇತನ ರಹಿತ ರಜೆ ಪಡೆದಿರುತ್ತೇವೆ. ಈಗ ನನ್ನ ವಾರ್ಷಿಕ ವೇತನ ಬಡ್ತಿ ಆಗಸ್ಟ್ ತಿಂಗಳ ಬದಲಾಗಿ ಅಕ್ಟೋಬರ್ ತಿಂಗಳಿಗೆ ನಿಗದಿಪಡಿಸಿರುತ್ತಾರೆ. ಈ ಕ್ರಮ ಸರಿಯೇ? ಅಥವಾ ನನ್ನ ವಾರ್ಷಿಕ ವೇತನ ಬಡ್ತಿಯು ಆಗಸ್ಟ್ನಲ್ಲಿಯೇ ಮುಂದುವರಿಯುತ್ತದೆಯೇ? ತಿಳಿಸಿ.
|ವಿಜಯಕುಮಾರ್ ಸ್ವಾಮಿ ಮೈಸೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51 ರಂತೆ ನಿಮ್ಮ ವಾರ್ಷಿಕ ವೇತನ ಬಡ್ತಿಯನ್ನು 1 ವರ್ಷ ಮಾತ್ರ ಮುಂದೂಡಬೇಕೆ ವಿನಃ ಪ್ರತಿ ವರ್ಷ ನೀವು ಜುಲೈ ತಿಂಗಳಿನಲ್ಲಿ ಪಡೆಯುತ್ತಿದ್ದ ದಿನಾಂಕದಂದೇ ವಾರ್ಷಿಕ ವೇತನಬಡ್ತಿಯನ್ನು ಮಂಜೂರು ಮಾಡಬೇಕಾಗುತ್ತದೆ. ಆದುದರಿಂದ ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 53ರಂತೆ ನಿಮ್ಮ ವೇತನ ಬಡ್ತಿಯನ್ನು ಶಿಸ್ತು ಪ್ರಾಧಿಕಾರವಾಗಲಿ ಮುಂದೂಡಲು ಯಾವುದೇ ದಂಡನೆಯನ್ನು ವಿಧಿಸದೆ ಇರುವುದರಿಂದ ಪ್ರತಿವರ್ಷ ಜುಲೈ ತಿಂಗಳಿನಲ್ಲೇ ಮಂಜೂರು ಮಾಡಲು ಮನವಿ ಸಲ್ಲಿಸಬೇಕು.
***
11.10.2017.
ಅನುದಾನಕ್ಕೆ ಒಳಪಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬಾಲಕಿಯರ ಪ್ರೌಢಶಾಲೆಯಲ್ಲಿ ಪೂರ್ಣಾವಧಿ ಮುಖ್ಯೋಪಾಧ್ಯಾಯನಾಗಿ ಕಮೀಷನರ್ ಆಫೀಸಿನಿಂದ ಅನುಮೋದನೆ ಪಡೆದಿದ್ದು, ಈಗ ನಾನು ಮೂಲ ಪ್ರತಿಗಳನ್ನು ಆಧಾರವಾಗಿ ಇಟ್ಟುಕೊಂಡು ಜೆರಾಕ್ಸ್ ಪ್ರತಿಗಳನ್ನು ದೃಢೀಕರಿಸಲು (ಅಟೆಸ್ಟೇಷನ್) ಬರುತ್ತದೆಯೋ ಅಥವಾ ಇಲ್ಲವೋ ದಯಮಾಡಿ ತಿಳಿಸಿ.
|ಶಿವಲಿಂಗಯ್ಯ ಮಂಡ್ಯ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 8 (20)ರಂತೆ ರಾಜ್ಯ ಸರ್ಕಾರಿ ಸೇವೆಯ ಗ್ರೂಪ್ ಎ ಅಥವಾ ಗ್ರೂಪ್ ಬಿ ವೃಂದಕ್ಕೆ ಸೇರಿದವನು ಅಥವಾ ಒಂದು ಕರಾರಿನ ನಿಬಂಧನೆಗಳಿಗನುಸಾರವಾಗಿ ನೇಮಕವಾದ ಗೆಜೆಟೆಡ್ ಸರ್ಕಾರಿ ನೌಕರನು ಮಾತ್ರ ನಕಲು ಪ್ರಮಾಣ ಪತ್ರಗಳಿಗೆ ದೃಢೀಕರಣಕ್ಕೆ ಸಹಿ ಮಾಡಬಹುದು. ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ದೃಢೀಕರಿಸಲು ಬರುವುದಿಲ್ಲ.
***
10.10.2017.
ನಾನು 1951 ಜೂನ್ 1 ರಂದು ಜನಿಸಿದ್ದು ಅನುಕಂಪದ ಮೂಲಕ ಶಿಕ್ಷಣ ಇಲಾಖೆಯಲ್ಲಿ ಆಯ್ಕೆಯಾಗಿ 1989 ನವೆಂಬರ್ 22 ರಿಂದ ಡಿ ದರ್ಜೆಯ ನೌಕರನಾಗಿ ಕೆಲಸಕ್ಕೆ ಸೇರಿದ್ದು, 2011ರ 31 ರಂದು ವಯೋನಿವೃತ್ತಿ ಹೊಂದಿರುತ್ತೇನೆ. ಸರ್ಕಾರಿ ಸೇವೆಯ ನಿಯಮಾವಳಿಯ ನಿಯಮ 247/ಎ1ರಂತೆ ಒಬ್ಬ ಸರ್ಕಾರಿ ನೌಕರನು 2012 ರ ಜನವರಿ 15ಕ್ಕಿಂತ ಮುಂಚೆ 30 ವರ್ಷ ಕಳೆದ ನಂತರ ಕೆಲಸಕ್ಕೆ ಸೇರಿದ್ದರೆ, 4 ವರ್ಷದ ಅರ್ಹತೆ ಸೇವೆಯನ್ನು ಪಿಂಚಣಿಗಾಗಿ ಪರಿಗಣಿಸಬಹುದೇ?
| ಎಸ್. ಎಸ್. ಬಾಳಿಗಿಡದ ಹಾವೇರಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ರಂತೆ ಒಬ್ಬ ಸರ್ಕಾರಿ ನೌಕರನು 30 ವರ್ಷಗಳ ವಯಸ್ಸಿನ ನಂತರ ಸೇವೆಗೆ ಸೇರಿದರೆ ಅವನಿಗೆ ನಿವೃತ್ತಿ ಸಂದರ್ಭದಲ್ಲಿ ಸೇವಾ ಅರ್ಹತೆಗೆ 4 ವರ್ಷಗಳ ವಿಶೇಷ ಸೇರ್ಪಡೆ ಮಾಡಲು ಅವಕಾಶವಿರುತ್ತದೆ. ನೀವು 2011ರಲ್ಲೇ ನಿವೃತ್ತಿ ಹೊಂದಿರುವುದರಿಂದ ಪುನಃ ಮನವಿ ಸಲ್ಲಿಸಿ ನಿಮ್ಮ ಪಿಂಚಣಿ ಪರಿಷ್ಕರಣಗೊಳಿಸಲು ಕ್ರಮಕೈಗೊಳ್ಳಬಹುದು.
***
09.10.2017.
ನಾನು ಶಿಕ್ಷಕಿಯಾಗಿದ್ದು, ಸೇವಾ ಆದ್ಯತೆ ಮೇರೆಗೆ 2003ರಲ್ಲಿ ಬಡ್ತಿ ಮುಖ್ಯ ಶಿಕ್ಷಕಿ ಆಯ್ಕೆ ಪಟ್ಟಿಗೆ ಸೇರಿಸಲಾಗಿತ್ತು. ಅನಿವಾರ್ಯ ಕಾರಣ ಕರ್ತವ್ಯ ನಿರ್ವಹಿಸಲು ಆಗದೆ ಮುಂದಿನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇನೆಂದು ಬರೆದು ಕೊಟ್ಟಿದ್ದೆ. ಆದರೆ ನನ್ನ ಸೇವಾ ಪುಸ್ತಕದಲ್ಲಿ ನಿರಾಕರಿಸಿದ್ದಾರೆಂದು ಬರೆದಿರುತ್ತಾರೆ. ಇದರಿಂದ ಹೆಚ್ಚುವರಿ ನೀಡಬೇಕಾದ 25, 30 ವರ್ಷದ ಬಡ್ತಿ ನೀಡಿಲ್ಲ. 2012ಕ್ಕೆ ನನ್ನ ವೇತನವೂ ಕೊನೇ ಹಂತ ತಲುಪಿದ್ದರಿಂದ ವಾರ್ಷಿಕ ಬಡ್ತಿ ಬರುತ್ತಿಲ್ಲ. ಸ್ಥಗಿತ ಬಡ್ತಿ ನೀಡಲು ಅವಕಾಶವಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಪರಿಹಾರವೇನು?
|ಜಯಲಕ್ಷ್ಮಿ ಚಿಕ್ಕಮಗಳೂರು
ಕರ್ನಾಟಕ ಮುಖ್ಯ ಸೇವಾ ಸಾಮಾನ್ಯ ನೌಕರಿ ಬಡ್ತಿ ನಿಯಮಗಳು 1977ರ ನಿಯಮ 4ಎರಂತೆ ಸರ್ಕಾರಿ ನೌಕರನು ಪದೋನ್ನತಿ ಪಡೆಯಲು ಇಚ್ಛಿಸದಿದ್ದರೆ ಪದೋನ್ನತಿ ಆದೇಶ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗೆ ಹಾಗೆ ನೀಡಲಾದ ಪದೋನ್ನತಿಯನ್ನು ಬಿಟ್ಟುಕೊಡಲು ನೇಮಕ ಪ್ರಾಧಿಕಾರದ ಅನುಮತಿಯನ್ನು ಕೋರಿ ಲಿಖಿತ ಮನವಿ ಸಲ್ಲಿಸಬಹುದು. ಸರ್ಕಾರಿ ನೌಕರನು ಬಡ್ತಿ ಬಿಟ್ಟುಕೊಟ್ಟ ಎಲ್ಲ ಪ್ರಕರಣಗಳಲ್ಲಿ ಸಲ್ಲಿಸಿದ ದಿನಾಂಕದಿಂದ 1 ವರ್ಷದ ಅವಧಿಯವರೆಗೆ ಅಥವಾ ಬಡ್ತಿಗಾಗಿ ಪರಿಗಣಿಸಲಾಗುವ ನಿಕಟ ತರುವಾಯದ ದಿನಾಂಕವರೆಗೆ ಅವನನ್ನು ಪದೋನ್ನತಿಗಾಗಿ ಪರಿಗಣಿಸತಕ್ಕದ್ದಲ್ಲ. ಅಲ್ಲದೆ ಕರ್ನಾಟಕ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ12ಎಸ್ಆರ್ಪಿ (8) ದಿನಾಂಕ 14-6-2012ರಂತೆ ಸ್ವ ಇಚ್ಛೆಯಿಂದ ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ 25 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ನೀಡತಕ್ಕದ್ದಲ್ಲವೆಂದು ತಿಳಿಸಲಾಗಿದೆ. ಅಲ್ಲದೆ ನಿಮಗೆ ಸ್ಥಗಿತ ವೇತನ ಬಡ್ತಿಯೂ ದೊರಕುವುದಿಲ್ಲ.
***
06.10.2017.
ನೌಕರರೊಬ್ಬರು ವೈಯಕ್ತಿಕ ಕಾರಣದಿಂದ 2017ರ ಜನವರಿಯಲ್ಲಿ 2 ದಿವಸ ಸೆರೆಮನೆವಾಸವಿದ್ದರು. ಕಾರಣ ಮೇ ಮತ್ತು ಜೂನ್ ತಿಂಗಳಿನಲ್ಲಿ ಕಚೇರಿಯಿಂದ ಅಮಾನತುಗೊಂಡಿದ್ದರು. ವಿಚಾರಣೆಯನ್ನು ಕಾಯ್ದಿರಿಸಿ ಜುಲೈನಲ್ಲಿ ಸದರಿ ಕಚೇರಿಗೆ ಮರುನೇಮಕಗೊಂಡಿದ್ದಾರೆ ಸದರಿ ನೌಕರರಿಗೆ 2017ರ ಸೆಪ್ಟೆಂಬರ್ ತಿಂಗಳಿನಲ್ಲಿ ವಾರ್ಷಿಕ ವೇತನ ಬಡ್ತಿ ಇರುತ್ತದೆ. ಈ ವೇತನ ಬಡ್ತಿಯನ್ನು ಮಂಜೂರು ಮಾಡಬಹುದೇ?
| ಎಚ್.ಎನ್. ಪಾಟೀಲ್ ವಿಜಯಪುರ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51ರಂತೆ ವಾರ್ಷಿಕ ವೇತನ ಬಡ್ತಿಯನ್ನು 1 ವರ್ಷ ಪೂರೈಸಿದ ನಂತರ ನೀಡಲಾಗುತ್ತದೆ. ಆದರೆ ಈ ನೌಕರ ಸೆರೆಮನೆವಾಸ ಹೊಂದಿ 2 ತಿಂಗಳ ಕಾಲ ಅಮಾನತಿನಲ್ಲಿರುವುದರಿಂದ ಈ ಅವಧಿಯು ಇಲಾಖಾ ವಿಚಾರಣೆ ನಡೆಸಿ ತದನಂತರ ಆ ಅವಧಿ ಕರ್ತವ್ಯದ ಅವಧಿ ಎಂದು ಪರಿಗಣಿತವಾದರೆ ಅವರಿಗೆ ವಾರ್ಷಿಕ ವೇತನ ಬಡ್ತಿ ಸೆಪ್ಟೆಂಬರ್ ತಿಂಗಳಿನಲ್ಲಿ ನೀಡಬಹುದಾಗಿರುತ್ತದೆ. ನಿಯಮ 53ರಂತೆ ಅಮಾನತ್ತಿನ ಅವಧಿಯಲ್ಲಿ ಯಾವುದೇ ವೇತನ ಬಡ್ತಿ ಲಭ್ಯವಾಗುವುದಿಲ್ಲವಾದ್ದರಿಂದ ಅದನ್ನು ಮುಂದೂಡಬೇಕಾಗುತ್ತದೆ. ಆದುದರಿಂದ ಇವರಿಗೆ ಇಲಾಖಾ ವಿಚಾರಣೆ ಪೂರ್ಣಗೊಳ್ಳದ ಹೊರತು ಹಾಗೂ ದಂಡನಾಧಿಕಾರಿಯವರು ದಂಡನೆ ವಿಧಿಸದ ಹೊರತು ಸೆಪ್ಟೆಂಬರ್ ತಿಂಗಳಿನಲ್ಲಿ ವೇತನ ಬಡ್ತಿಯನ್ನು ನೀಡಲು ಬರುವುದಿಲ್ಲ.
***
05.10.2017.
ಕೆಪಿಎಸ್ಸಿ ಮೂಲಕ ಆಯ್ಕೆಯಾಗಿ ನ್ಯಾಯಾಂಗ ಇಲಾಖೆಯಲ್ಲಿ 2014ರಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಇಲಾಖಾ ಅನುಮತಿ ಪಡೆದು ಎಸ್ಡಿಎ ಹುದ್ದೆಗೆ ಆಯ್ಕೆಯಾಗಿರುತ್ತೇನೆ. ಸದ್ಯ ಮೂಲ ವೇತನ -ಠಿ;16,000 ರೂ.ಗಳಿದ್ದು, ಎಸ್ಡಿಎ ಹುದ್ದೆಗೆ ಹೋದರೆ ನನ್ನ ಈಗಿನ ಮೂಲವೇತನ ದೊರೆಯುತ್ತದೆಯೇ? ಅಥವಾ ಎಸ್ಡಿಎ ಮೂಲವೇತನ ದೊರೆಯುತ್ತದೆಯೇ?
|ಸುನೀಲ್ಕುಮಾರ್ ಜಿ.ಟಿ. ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41ಎ ಪ್ರಕಾರ, ಸರ್ಕಾರಿ ನೌಕರ ನೇಮಕ ಹೊಂದಿದ ಹುದ್ದೆಯ ವೇತನ ಶ್ರೇಣಿಯು ಅವನು ಹಿಂದೆ ಹೊಂದಿದ್ದ ಹುದ್ದೆಯ ವೇತನ ಶ್ರೇಣಿಗಿಂತ ಕಡಿಮೆ ಆಗಿದ್ದಲ್ಲಿ, ಅವನು ನೇಮಕ ಹೊಂದಿದ ಹುದ್ದೆಯಲ್ಲಿ ಅವನ ವೇತನವನ್ನು ಆ ಹುದ್ದೆಗೆ ಆರಂಭದಲ್ಲಿ ಕ್ರಮಬದ್ಧವಾದ ಅಭ್ಯರ್ಥಿಯಾಗಿ ನೇಮಕವಾದ ದಿನಾಂಕದಿಂದ ಆ ವೇತನ ಶ್ರೇಣಿಯಲ್ಲಿ ಅವನು ತಲುಪಬಹುದಾಗಿದ್ದ ವೇತನಕ್ಕೆ ಸಮಾನವಾಗಿರತಕ್ಕದ್ದು ಎಂದು ಸೂಚಿಸಲಾಗಿದೆ. ಆದುದರಿಂದ ನೀವು ಮೇಲಿನ ವೇತನ ಶ್ರೇಣಿಯ ಕೆಳಗಿನ ವೇತನ ಶ್ರೇಣಿಯ ಎಸ್ಡಿಎ ಹುದ್ದೆಗೆ ಬಂದರೆ ನಿಮಗೆ ಈ ನಿಯಮದಡಿಯಲ್ಲಿ ವೇತನ ರಕ್ಷಣೆ ದೊರಕುವುದಿಲ್ಲ.
***
04.10.2017.
ಪ್ರಾಥಮಿಕ ಶಾಲಾ ಶಿಕ್ಷಕಿಯಾದ ನನಗೆ 2016-17ನೇ ಸಾಲಿನಲ್ಲಿ ಘಟಕದೊಳಗಿನ ವರ್ಗಾವಣೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಿಂದ ಅದೇ ಜಿಲ್ಲೆಯ ಸಿಂಧನೂರು ತಾಲ್ಲೂಕಿಗೆ ವರ್ಗಾವಣೆಯಾಗಿದ್ದು, ಸದರಿ ಶಾಲೆಯಿಂದ ಬಿಡುಗಡೆಗೊಂಡಿರುವುದಿಲ್ಲ. ಆದರೆ ಈ ಅವಧಿಯಲ್ಲಿ ದಿನಾಂಕ 28-9-2016ರಿಂದ ಆರು ತಿಂಗಳು ಹೆರಿಗೆ ರಜೆ ಪಡೆದಿರುತ್ತೇನೆ. ಸದ್ಯ ಎರಡು ತಿಂಗಳ ರಜೆ ಮುಗಿದಿದ್ದು, ಈಗ ನಾನು ವರ್ಗಾವಣೆಯಾದ ಸಿಂಧನೂರು ಸ್ಥಳಕ್ಕೆ ಹಾಜರಾಗಿ ಉಳಿದ ನಾಲ್ಕು ತಿಂಗಳ ಹೆರಿಗೆ ರಜೆಯನ್ನು ಮುಂದುವರಿಸಬಹುದೆ? ಪ್ರಸ್ತುತ ಶಾಲೆಯಿಂದ ಬಿಡುಗಡೆ ಹೊಂದಿ ವರ್ಗಾವಣೆಯಾದ ಸ್ಥಳಕ್ಕೆ ಹಾಜರಾಗಲು ಎಷ್ಟು ದಿನ ಕಾಲಾವಕಾಶವಿರುತ್ತದೆ?
| ಶಶಿಕಲಾ ಸಿಂಧನೂರು.
ಹೆರಿಗೆ ರಜೆ ಅವಧಿಯಲ್ಲಿ ನೀವು ವರ್ಗಾವಣೆಯಾಗಿರುವುದರಿಂದ ಈ ರಜೆ ಪೂರ್ಣಗೊಂಡ ಮೇಲೆ ಕರ್ತವ್ಯಕ್ಕೆ ಹಾಜರಾಗಿ, ವರ್ಗಾವಣೆಯಾದ ಸಿಂಧನೂರು ತಾಲ್ಲೂಕಿನ ಶಾಲೆಗೆ ಸೇರಬಹುದು. ಆದರೆ ನೀವು ವರ್ಗಾವಣೆಯಾದ ಸ್ಥಳಕ್ಕೆ ಹಾಜರಾದರೆ ಹೆರಿಗೆ ರಜೆ ಕಡಿತಗೊಂಡು ನಿಮ್ಮ ಲೆಕ್ಕದಲ್ಲಿರುವ ರಜೆಯನ್ನು ಪಡೆದು ಮುಂದುವರಿಯಬೇಕಾಗುತ್ತದೆ. ಪ್ರಸ್ತುತ ಶಾಲೆಯಿಂದ ಬಿಡುಗಡೆ ಹೊಂದಿ ಹೊಸ ಸ್ಥಳಕ್ಕೆ ಹಾಜರಾಗಲು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 78ರಂತೆ 10 ದಿನಗಳ ಕಾಲ ಅವಕಾಶವಿರುತ್ತದೆ.
ನಿಮ್ಮ ಪ್ರಶ್ನೆಗಳನ್ನು ಈ ವಿಳಾಸಕ್ಕೆ ಕಳುಹಿಸಿ.
ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.
ಇ-ಮೇಲ್: sarakaricorner@gmail.com
ದೂರವಾಣಿ: 8884431909, ಫ್ಯಾಕ್ಸ್: 080-26257464.
*************************************
2018 JANUARY ರಿಂದ ಆರಂಭ .....
20-02-18.
ನನ್ನ ಪತ್ನಿ ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೇದಾರರಾಗಿ ಕೆಲಸ ನಿರ್ವಹಿಸುತ್ತಿದ್ದು, ಸೇವೆಯಲ್ಲಿದ್ದಾಗಲೇ ನಿಧನರಾದರು. ನನ್ನ ಮಗ, ಬಿ.ಕಾಂ. ಅಂತಿಮ ವರ್ಷದಲ್ಲಿ ಅನುತ್ತೀರ್ಣರಾಗಿರುವುದರಿಂದ ಅನುಕಂಪ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದೆವು. ನ್ಯಾಯಾಂಗ ಇಲಾಖೆ ಗ್ರೂಪ್ ಡಿ ನೌಕರ ನೀಡಿದ್ದಾರೆ. ದ್ವಿತೀಯ ದರ್ಜೆ ಹುದ್ದೆ ನೀಡಲು ಸಾಧ್ಯವೆ? |
ಎಂ. ಬಸಪ್ಪ ಕೆ.ಜಿ.ಎಫ್, ಕೋಲಾರ.
ನಿಮ್ಮ ಪುತ್ರನು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು 1996 ರ ನಿಯಮ 6ರ ಮೇರೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನೇ ನೀಡಬೇಕಾಗುತ್ತದೆ. ಅಲ್ಲದೆ ಸರ್ಕಾರವು ಇತ್ತೀಚೆಗೆ ಸುತ್ತೋಲೆಯೊಂದನ್ನು ಹೊರಡಿಸಿ (ಸಂಖ್ಯೆ ಸಿಆಸುಇ 150ಸೇಆಸೇ 2017 ದಿನಾಂಕ 27-10-2017) ಅಭ್ಯರ್ಥಿಯು ಯಾವ ವಿದ್ಯಾರ್ಹತೆ ಹೊಂದಿರುತ್ತಾನೋ ಆ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೀಡಲು ಸೂಚಿಸಿದೆ. ಆದುದರಿಂದ ನೀವು ಮತ್ತೆ ನ್ಯಾಯಾಂಗ ಇಲಾಖೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೀಡಲು ಅರ್ಜಿ ಸಲ್ಲಿಸಬಹುದು.
***
19-02-18.
ಸರ್ಕಾರಿ ನೌಕರಳಾದ ನನಗೆ 32 ವಾರ 3 ದಿನಗಳಿದ್ದಾಗ (8 ತಿಂಗಳು ತುಂಬಿ, 9ನೇ ತಿಂಗಳು ಬಂದಿದೆ) 2018ರ ಜನವರಿ 17ನೇ ತಾರೀಖು, ಸಿಸೇರಿಯನ್ ಮೂಲಕ ಮೃತಪಟ್ಟ ಹೆಣ್ಣುಮಗುವಿಗೆ ಜನ್ಮ ನೀಡಿದೆ. ಹಾಗಾದರೆ ನಾನು 6 ತಿಂಗಳ ಹೆರಿಗೆ ರಜೆಗೆ ಅರ್ಹಳೇ? ಹೆರಿಗೆ ರಜೆಗೆ ಅರ್ಹಳಾಗದಿದ್ದಲ್ಲಿ ನನ್ನ ಆರೈಕೆಗೆ ಎಷ್ಟು ದಿನಗಳ ರಜೆ ಸಿಗುತ್ತದೆ ಹಾಗೂ 6 ತಿಂಗಳ ಹೆರಿಗೆ ರಜೆ ಅನ್ವಯವಾಗುವುದಾದರೆ ಕೆ.ಸಿ.ಎಸ್.ಆರ್.ನ ಯಾವ ನಿಯಮ, ಉಪನಿಯಮ ಅನ್ವಯವಾಗುತ್ತದೆ?
| ವಾಣಿ ಕಗ್ಗಲೀಪುರ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಮೇರೆಗೆ 180 ದಿನಗಳ ಕಾಲ ಹೆರಿಗೆ ರಜೆ ಲಭ್ಯವಾಗುತ್ತದೆ. 1961ರ ಪ್ರಸೂತಿ ಸೌಲಭ್ಯ ಅಧಿನಿಯಮದ ಪ್ರಕರಣ 3ಬಿ ರಂತೆ 26 ವಾರಗಳ ನಂತರ ಜನನವಾಗುವ ಮಗುವು ಜೀವಂತವಿರಲಿ ಅಥವಾ ಇಲ್ಲದಿರಲಿ ಅದು ಸಾಮಾನ್ಯ ಹೆರಿಗೆ ಎಂದು ಭಾವಿಸಿ ಅಷ್ಟು ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ನೀಡಬೇಕಾಗುತ್ತದೆ. ಈ ನಿಯಮದಂತೆ ನೀವು 180 ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ಪಡೆದು ತದನಂತರ ಕರ್ತವ್ಯಕ್ಕೆ ಹಾಜರಾಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***
18-02-18.
ನಾನು 35 ವರ್ಷದವಳಾಗಿದ್ದು ಅನುಕಂಪದ ಆಧಾರದಲ್ಲಿ (ದ್ವಿ.ದ.ಸ.) ಹುದ್ದೆಗೆ ನೇಮಕಗೊಂಡಿದ್ದೇನೆ. ಶಿಕ್ಷಕರಾಗಿದ್ದ ನನ್ನ ಗಂಡ ಮರಣ ಹೊಂದಿದ್ದಾರೆ. ಗಂಡ ಜೀವಂತವಿರುವಾಗಲೇ ನಾನು ಎರಡನೇ ಮಗುವಿಗೆ ‘ಸಂತಾನಹರಣ ಶಸ್ತ್ರಚಿಕಿತ್ಸೆ’ ಮಾಡಿಸಿಕೊಂಡಿದ್ದೇನೆ. ಈ ಚಿಕಿತ್ಸೆಯ ವಿಶೇಷ ಭತ್ಯೆಯ ಸೌಲಭ್ಯವನ್ನು ಪಡೆಯಲು ಸಾಧ್ಯವೆ ಎಂಬ ಬಗ್ಗೆ ಗೊಂದಲವಾಗಿದೆ. ಈ ಗೊಂದಲ ನಿವಾರಿಸಿ.
| ನಾಗವೇಣಿ ಮೈಸೂರು.
1-10-1985ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 27 ಎಸ್ಆರಎಸ್ 85ರ ಮೇರೆಗೆ ಕುಟುಂಬಯೋಜನೆಯನ್ನು ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಉತ್ತೇಜನ ನೀಡಲು ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರಳು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡರೆ ವೈಯಕ್ತಿಕ ವೇತನ ರೂಪದಲ್ಲಿ ವಿಶಿಷ್ಟ ವೇತನ ಬಡ್ತಿಯನ್ನು ಮಂಜೂರು ಮಾಡಲಾಗುತ್ತದೆ. ಆದರೆ ನೀವು ಸರ್ಕಾರಿ ಸೇವೆಗೆ ಸೇರುವ ಮೊದಲು ಕುಟುಂಬಯೋಜನೆ ಅನುಸರಣೆಗೆ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡಿರುವುದರಿಂದ ಈ ವಿಶೇಷ ವೇತನ ಬಡ್ತಿ ಲಭ್ಯವಾಗುವುದಿಲ್ಲ.
***
17-02-18.
ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 24 ವರ್ಷ ಸೇವೆ ಸಲ್ಲಿಸಿದ್ದೇನೆ. 47 ವರ್ಷದ ನಾನು ಅವಿವಾಹಿತಳಾಗಿದ್ದು ಪುತ್ರನನ್ನು ‘ದತ್ತಕ’ ತೆಗೆದುಕೊಂಡರೆ ಆತನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಸಿಗಬಹುದೆ? ಎಷ್ಟು ವಯಸ್ಸಿನವರನ್ನು ‘ದತ್ತು’ ತೆಗೆದುಕೊಳ್ಳಬೇಕು ?
ಎನ್.ಕೆ. ಗಾಯತ್ರಿ ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳು 1996ರ ನಿಯಮ 3(3) ಪ್ರಕಾರ ಮೃತ ಸರ್ಕಾರಿ ನೌಕರನ ದತ್ತು ಮಗ ಅಥವಾ ದತ್ತು ಮಗಳು ಈ ನಿಯಮಾವಳಿ ರೀತ್ಯ ಅನುಕಂಪದ ಆಧಾರದ ಮೇಲೆ ಅರ್ಹರಾಗುವುದಿಲ್ಲ. ನೀವು ಐದು ವರ್ಷದೊಳಗಿನ ದತ್ತುಪುತ್ರ ಅಥವಾ ಪುತ್ರಿಯನ್ನು ತೆಗೆದುಕೊಂಡು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರ ಪ್ರಕಾರ ನಾಮನಿರ್ದೇಶನ ಮಾಡಿದರೆ ನಿಮ್ಮ ಆಕಸ್ಮಿಕ ನಿಧನದಿಂದ ಮರಣ ಉಪದಾನ ಕುಟುಂಬ ನಿವೃತ್ತಿ ವೇತನ ಮುಂತಾದ ಪಿಂಚಣಿ ಸೌಲಭ್ಯಗಳು ಲಭ್ಯ.
***
16-02-2018.
ನಾನು 1989ರಲ್ಲಿ ಅಂಗವಿಕಲರ ಕೋಟಾದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಎಂದು ಆಯ್ಕೆ ಆಗಿದ್ದೇನೆ. 54 ವರ್ಷದ ನಾನು ನರದೌರ್ಬಲ್ಯದಿಂದ ಕೆಲಸ ಮಾಡಲು ಅಸಮರ್ಥನಾಗಿದ್ದೇನೆ. ಯಾವ ಆಧಾರದ ಮೇಲೆ ಸ್ವಯಂನಿವೃತ್ತಿ ಪಡೆದರೆ ಮಗನಿಗೆ ಅನುಕಂಪದ ನೌಕರಿ ದೊರೆಯುತ್ತದೆ?
– ಪಿ.ಎಚ್. ಪಾಟೀಲ್ ಬೆಳಗಾವಿ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಗಳು 1996ರ ನಿಯಮ 3ಎ ಪ್ರಕಾರ ವೈದ್ಯಕೀಯ ಕಾರಣಗಳ ಮೇಲೆ ನಿವೃತ್ತಿ ಹೊಂದಿದ ಸರ್ಕಾರಿ ನೌಕರನ ಅವಲಂಬಿತರ ನೇಮಕಾತಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಅದರಂತೆ ಸರ್ಕಾರಿ ನೌಕರನು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಶಾಶ್ವತ ಅಸಮರ್ಥತೆ ಉಂಟಾಗಬೇಕಾಗುತ್ತದೆ. ಅದು ಸರ್ಕಾರಿ ನೌಕರನು ಇತರ ಕರ್ತವ್ಯ ನಿರ್ವಹಿಸಲು ಅಸಮರ್ಥನಾಗಿರುವುದಕ್ಕೆ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಅವಶ್ಯಕವಾಗಿರುತ್ತದೆ. ಆದರೆ ನೀವು ನರದೌರ್ಬಲ್ಯದಿಂದ ಕೆಲಸ ಮಾಡುತ್ತಿದ್ದು, ಇದು ನಿಮ್ಮ ಕರ್ತವ್ಯ ನಿರ್ವಹಣೆಯಿಂದ ಉಂಟಾದ ಅನಾರೋಗ್ಯವಲ್ಲವಾದ್ದರಿಂದ ನೀವು ಸ್ವಯಂನಿವೃತ್ತಿ ತೆಗೆದುಕೊಂಡರೂ ನಿಮ್ಮ ಮಗನಿಗೆ ಅನುಕಂಪದ ನೌಕರಿ ದೊರಕುವುದಿಲ್ಲ.
***
15-02-2018.
ನಾನು ಕೌಟುಂಬಿಕ ಕಲಹದಿಂದ ಬಳಲುತ್ತಿದ್ದೇನೆ. ನನ್ನ ಮರಣದ ನಂತರ ಬರುವ ಸಂಬಳ, ಉಪದಾನ, ಪಿಂಚಣಿ, ಅನುಕಂಪದ ನೌಕರಿ ಇನ್ನಿತರೆ ನಗದು ಮತ್ತು ಸೌಲಭ್ಯಗಳನ್ನು ಹೆಂಡತಿ ಮತ್ತು ಮಕ್ಕಳಿಗೆ ಹೊರತುಪಡಿಸಿ ಬೇರೆಯವರಿಗೆ (ಅಣ್ಣ/ಅಕ್ಕ) ಸಲ್ಲಿಕೆಯಾಗುವಂತೆ ಮಾಡಲು ಅವಕಾಶ ಇದೆಯೆ? ವೈಯಕ್ತಿಕವಾಗಿ ವಿಲ್ ಮಾಡಿದಲ್ಲಿ ಕೆಸಿಎಸ್ಆರ್ ನಿಬಂಧನೆಗಳಿಂದ ಅಡ್ಡಿಯಾಗುವುದೆ?
| ಸುರೇಶ್ಬಾಬು ದಾವಣಗೆರೆ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರಂತೆ; ಸರ್ಕಾರಿ ನೌಕರನ ಸಂದರ್ಭದಲ್ಲಿ ಪತ್ನಿ ಮಕ್ಕಳು 18 ವರ್ಷದೊಳಗಿನ ಸಹೋದರ /ಸಹೋದರಿಯರು; ಅವಿವಾಹಿತ/ ವಿಧವೆ/ವಿಚ್ಛೇದಿತ ಸಹೋದರಿಯರು ಒಳಗೊಂಡಿರುತ್ತಾರೆ. ಈ ನಿಯಮದಡಿ ಸರ್ಕಾರಿ ನೌಕರನು ಯಾರಿಗೆ ನಾಮನಿರ್ದೇಶನ ಮಾಡಿದರೂ ನಿಯಮ 302(5-ಎ) ಪ್ರಕಾರ ಪ್ರತಿಯೊಬ್ಬ ನೌಕರನು ಮದುವೆಗೆ ಮುಂಚೆ ಮಾಡಿದ ನಾಮನಿರ್ದೇಶನವು ಮದುವೆಯ ನಂತರ ತಾನಾಗಿ ಅನೂರ್ಜಿತವಾಗುವುದು ಮತ್ತು ಪತ್ನಿಯ ಹೆಸರಿನಲ್ಲಿ ನಾಮನಿರ್ದೇಶನವಾಗಿದೆ ಎಂದು ಭಾವಿಸತಕ್ಕದ್ದು ಎಂದು ಸೂಚಿಸಲಾಗಿದೆ. ನೀವು ಸೇವಾಪುಸ್ತಕದಲ್ಲಿ ಸಹೋದರ/ಸಹೋದರಿಯರ ಹೆಸರನ್ನು ಹಾಗೂ ವೈಯಕ್ತಿಕವಾಗಿ ವಿಲ್ ಮಾಡಿದರೆ ಅದು ಅಸಿಂಧುವಾಗುತ್ತದೆ.
***
14-02-2018.
ನಾನು 2012ರ ಸೆಪ್ಟೆಂಬರ್ 21ರಂದು ಉದ್ಯೋಗಕ್ಕಾಗಿ ನ್ಯಾಯಾಂಗ ಇಲಾಖೆಗೆ ಸೇರಿದೆ. ಈಗ ನನ್ನ ವಯಸ್ಸು 40. ನಾನು ಇಲಾಖಾ ಪರೀಕ್ಷೆಯ ಮೂಲಕ ಎಫ್ಡಿಎ/ಎಸ್ಡಿಎ ಪರೀಕ್ಷೆ ತೆಗೆದುಕೊಳ್ಳಬಹುದೆ? ನೌಕರಿಗೆ ಸೇರಿದಾಗ ನನ್ನ ವಯಸ್ಸು 35 ವರ್ಷ 2 ತಿಂಗಳಾಗಿತ್ತು. ಸೂಕ್ತ ಪರಿಹಾರ ತಿಳಿಸಿ.
| ಸೌಮ್ಯ ಎನ್. ತುಮಕೂರು.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977 ನಿಯಮ 6ರಂತೆ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ 40 ವರ್ಷ, ಹಿಂದುಳಿದ ವರ್ಗಕ್ಕೆ 38 ವರ್ಷ ಹಾಗೂ ಸಾಮಾನ್ಯ ವರ್ಗಕ್ಕೆ 35 ವರ್ಷ ಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರಿ ಸೇವೆಯಲ್ಲಿರುವ ನೌಕರನು ಅವನು ಸಲ್ಲಿಸಿದ ಸೇವಾವಧಿ ಅಥವಾ ಗರಿಷ್ಠ 10 ವರ್ಷಗಳಿಗಿಂತ ಮೀರದಷ್ಟು ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಆದುದರಿಂದ ನೀವು ಸಲ್ಲಿಸಿದ ಸೇವಾವಧಿಯನ್ನು ಈ ಗರಿಷ್ಠ ವಯೋಮಿತಿಗೆ ಸೇರಿಸಿ ನಿಯಮ 11ರಂತೆ ಪೂರ್ವಾನುಮತಿ ಪಡೆದು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.
****
13-02-18.
ಪ್ರಾಥಮಿಕ ಶಾಲಾ ಪ್ರಧಾನ ಗುರುಗಳು ಸಹಶಿಕ್ಷಕರಿಗೆ ಗರಿಷ್ಠ ಎಷ್ಟು ಸಾಂರ್ದಭಿಕ ರಜೆಗಳನ್ನು ಮಂಜೂರು ಮಾಡಲು ಬರುತ್ತದೆ? ಶನಿವಾರ ಮತ್ತು ಸೋಮವಾರ ಸಾಂರ್ದಭಿಕ ರಜೆ ಹಾಕಿದ್ದರೆ ಭಾನುವಾರವೂ ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುತ್ತದೆಯೆ?
ಪ್ರಾಥಮಿಕ ಶಾಲಾ ಪ್ರಧಾನ ಗುರುಗಳು ಸಹಶಿಕ್ಷಕರಿಗೆ ಗರಿಷ್ಠ ಎಷ್ಟು ಸಾಂರ್ದಭಿಕ ರಜೆಗಳನ್ನು ಮಂಜೂರು ಮಾಡಲು ಬರುತ್ತದೆ? ಶನಿವಾರ ಮತ್ತು ಸೋಮವಾರ ಸಾಂರ್ದಭಿಕ ರಜೆ ಹಾಕಿದ್ದರೆ ಭಾನುವಾರವೂ ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುತ್ತದೆಯೆ?
| ಧರೆಪ್ಪ ಅಂಬಗೆರೆ, ಸುರಪುರ, ಯಾದಗಿರಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ – (ಬಿ)ಯ ನಿಯಮ (1)ರ ಪ್ರಕಾರ ಶಾಲಾ ಪ್ರಧಾನ ಗುರುಗಳು ಒಂದು ಸಲಕ್ಕೆ ಗರಿಷ್ಠ ಏಳು ದಿನಗಳಷ್ಟು ಸಾಂರ್ದಭಿಕ ರಜೆಯನ್ನು ಮಂಜೂರು ಮಾಡಬಹುದು. ಆದರೆ ಭಾನುವಾರ ಸಾರ್ವತ್ರಿಕ ರಜೆ ಆಗಿರುವುದರಿಂದ ಅದು ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***
12-02-18.
ನನ್ನ ಗೆಳೆಯನ ತಂದೆ ಆಕಸ್ಮಿಕವಾಗಿ ಮರಣ ಹೊಂದಿದ್ದಾರೆ. ತಾಯಿ ಇನ್ನೂ ಕೆಲಸದಲ್ಲಿದ್ದಾರೆ. ನನ್ನ ಗೆಳೆಯನಿಗೆ ತಂದೆಯ ಅನುಕಂಪದ ನೌಕರಿ ಹಾಗೂ ಆರ್ಥಿಕ ಸೌಲಭ್ಯ ದೊರೆಯಬಹುದೆ?
| ತೋಟಗಂಟಿ ಸಿದ್ಧಪ್ಪ ಹಿರೇಕೆರೂರು, ಹಾವೇರಿ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ನಿಮ್ಮ ಗೆಳೆಯ ಅರ್ಹರಾಗಿರುತ್ತಾರೆ. ಆದರೆ ನಿಯಮ 4ರಲ್ಲಿ ತಿಳಿಸಿದಂತೆ ಅವರ ಕೌಟುಂಬಿಕ ಆದಾಯವು ಮೃತ ಸರ್ಕಾರಿ ನೌಕರನ ನಿಧನದ ದಿನದಂದು ಪ್ರಥಮ ದರ್ಜೆಸಹಾಯಕ ವೇತನ ಶ್ರೇಣಿಯ ಸರಾಸರಿ ವೇತನಕ್ಕೆ ಬೆಂಗಳೂರಿನಲ್ಲಿ ಅನ್ವಯವಾಗುವ ಮನೆಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ತುಟ್ಟಿ ಭತ್ಯೆ ಒಳಗೊಂಡಂತೆ ವಾರ್ಷಿಕ ಆದಾಯವು ನಾಲ್ಕು ಲಕ್ಷ ಮೀರಬಾರದು ಹಾಗೂ ಆರ್ಥಿಕ ಸಂಕಷ್ಟದಲ್ಲಿರಬೇಕು. ಅವರ ತಂದೆಯ ಆಕಸ್ಮಿಕ ಮರಣದಿಂದ ಆರ್ಥಿಕ ಸೌಲಭ್ಯವನ್ನು ಅವರ ತಾಯಿ ಪಡೆಯಲು ಅರ್ಹರಾಗಿರುತ್ತಾರೆ.
***
11-02-2018.
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ 2007ರ ಮೇ 14ರಂದು ಸೇವೆಗೆ ಸೇರಿ ಕಾನ್ಸ್ಟೇಬಲ್ (ಪಿ.ಸಿ.) ಆಗಿ ಒಂದು ವರ್ಷ ಮೂರು ತಿಂಗಳು ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯ ಸೂಕ್ತ ಅನುಮತಿ ಪಡೆದು ಕೆ.ಸಿ.ಎಸ್.ಆರ್. ನಿಯಮ 252(ಬಿ) ರೀತ್ಯ ಮುಂದುವರಿಸಿಕೊಂಡು ಬಂದಿರುತ್ತೇನೆ. ಪೊಲೀಸ್ ಇಲಾಖೆಯ ಸೇವಾವಹಿಯನ್ನು ಶಿಕ್ಷಣ ಇಲಾಖೆಗೂ ಮುಂದುವರಿಸಿಕೊಂಡು ಬಂದದ್ದು ಇರುತ್ತದೆ. ಆದರೆ ನನಗೆ ಕೆ.ಸಿ.ಎಸ್.ಆರ್. ಯಾವ ನಿಯಮದ ಪ್ರಕಾರ ಹಿಂದಿನ ಸೇವೆ ಹಾಗೂ ಸೇವಾವಹಿಯಲ್ಲಿರುವಂಥ ಗಳಿಕೆ ರಜೆ ಹಾಗೂ ಅರ್ಧ ವೇತನ ರಜೆಗಳ ಸೌಲಭ್ಯ ಪಡೆಯಬಹುದೆ?
| ಈರಣ್ಣ ಎಂ. ಜಾಡರ ಶಿರಹಟ್ಟಿ ಗದಗ.
ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿ ಪ್ರಕಾರ ಪೂರ್ವಾನುಮತಿ ಪಡೆದು ಕರ್ತವ್ಯದಿಂದ ಬಿಡುಗಡೆ ಹೊಂದಿರುವುದರಿಂದ ನೀವು ಪ್ರೌಢಶಾಲೆಯಲ್ಲಿ ಹಿಂದಿನ ಸೇವಾವಧಿಯಲ್ಲಿ ಗಳಿಸಿದ ಗಳಿಕೆ ರಜೆ, ಅರ್ಧವೇತನ ರಜೆ ಸೌಲಭ್ಯಗಳಲ್ಲದೆ ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ಮತ್ತು ಕೆಜಿಐಡಿ ಸಹ ಮುಂದುವರಿಯುತ್ತದೆ. ಆದುದರಿಂದ ನಿಮ್ಮ ಹಿಂದಿನ ಸೇವೆ ಈ ಸೌಲಭ್ಯಗಳಿಗೆ ಪರಿಗಣಿಸಿ ಪುನಃ ಪ್ರಸ್ತಾವನೆ ಸಲ್ಲಿಸಲು ಕೋರಬಹುದು.
***
10-02-2018.
ನನ್ನ ಸ್ನೇಹಿತರೊಬ್ಬರು ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆ ಗ್ರೇಡ್-2ರಿಂದ ಪ್ರೌಢಶಾಲೆಗೆ ಗ್ರೇಡ್ 1 ಹುದ್ದೆಗೆ ನವೆಂಬರ್ 8ರಂದು ಬಡ್ತಿ ಹೊಂದಿದ್ದು, 2015ರ ನವೆಂಬರ್ 7ಕ್ಕೆ 20 ವರ್ಷ ಪೂರ್ಣಗೊಂಡಿರುತ್ತದೆ. ಆದ್ದರಿಂದ ನನ್ನ ಸ್ನೇಹಿತರು 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರೆ?
| ದಿನೇಶ್ ಕೆ.ಆರ್. ನಗರ, ಮೈಸೂರು.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಎಫ್ ಡಿ 13 ಎಸ್ಆರ್ಪಿ 2002 ದಿನಾಂಕ 9-5-2002ರ ಕಂಡಿಕೆ 6(2)(ಆ) ಈಗಾಗಲೇ ಕನಿಷ್ಠ ಒಂದು ಪದೋನ್ನತಿಯನ್ನು ಪಡೆದಿರುವ ಸರ್ಕಾರಿ ನೌಕರರು ಈ 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗುವುದಿಲ್ಲ ಎಂದು ತಿಳಿಸಲಾಗಿದೆ. ಆದುದರಿಂದ ನಿಮ್ಮ ಸ್ನೇಹಿತರು ಈ 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***
09-02-2018.
ಕಳೆದ ವರ್ಷ ಅಕ್ಟೋಬರ್ 29ರಂದು ನಮ್ಮ ಮಾವ ದೈವಾಧೀನರಾದರು. ಅವರು ಪ್ರಾಥಮಿಕ ಶಾಲೆಯಲ್ಲಿ ಬಡ್ತಿ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನೂ ಸೇವೆ ಒಂದು ವರ್ಷ ಇತ್ತು. ಅವರ ಮಗ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಡಿಪ್ಲೊಮಾ ಆಗಿದೆ. ಅವರಿಗೆ ಯಾವ ಹುದ್ದೆ ದೊರೆಯಬಹುದು? ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆಗೆ ಅನುಕಂಪದ ಹುದ್ದೆಯನ್ನು ಬದಲಾಯಿಸಿಕೊಳ್ಳಬಹುದೆ?
| ಮಹೇಶ್ ಕುಂಚಿಗನಾಳ ಚಿತ್ರದುರ್ಗ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಅವರ ಪುತ್ರ ಇಂಜಿನಿಯರಿಂಗ್ ಪದವೀಧರರಾಗಿದ್ದರೆ ಅವರು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅರ್ಹರಾಗುತ್ತಾರೆ. ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆಗೆ ಅನುಕಂಪದ ಹುದ್ದೆಯನ್ನು ಬದಲಾಯಿಸಿಕೊಳ್ಳಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಆದರೆ ಆ ಇಲಾಖೆಯಲ್ಲಿ ಹುದ್ದೆ ಇಲ್ಲವೆಂದು ಪ್ರಾದೇಶಿಕ ಆಯುಕ್ತರಿಗೆ ಸಂಬಂಧಿತ ನೇಮಕಾತಿ ಪ್ರಾಧಿಕಾರ ತಿಳಿಸಿದರೆ ಹುದ್ದೆಯನ್ನು ಬದಲಾಯಿಸಿಕೊಳ್ಳಬಹುದು.
***
08-02-2018.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, 2010ರಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಮೊದಲ ಮಗುವಿನ ಜನನ 2014ರ ಬೇಸಿಗೆ ರಜೆಯಲ್ಲಾಗಿದ್ದು, ಪಿತೃತ್ವ ರಜೆಯನ್ನು ಪಡೆದಿಲ್ಲ. 2018ರ ಫೆಬ್ರವರಿ ತಿಂಗಳಿನಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಪ್ರಥಮ ಪಿತೃತ್ವದ ರಜೆ ಪಡೆಯಬಹುದಾ ಅಥವಾ ದ್ವಿತೀಯ ಪಿತೃತ್ವ ರಜೆ ಪಡೆಯಬಹುದಾ? ಮಾಹಿತಿ ನೀಡಿ.
| ಅಮೋಘ ಪೂಜಾರಿ ಮಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135 ಬಿ ಪ್ರಕಾರ ಪುರುಷ ಸರ್ಕಾರಿ ನೌಕರರಿಗೆ ಅವರ ಪತ್ನಿಯ ಹೆರಿಗೆಯ ಪ್ರಾರಂಭದಲ್ಲಿ 15 ದಿನಗಳ ಕಾಲ ಪಿತೃತ್ವದ ರಜೆಯನ್ನು ನೀಡಬಹುದು. ಎರಡು ಅಥವಾ ಅದಕ್ಕಿಂತ ಹೆಚ್ಚು ಜೀವಂತ ಮಕ್ಕಳಿರುವ ಸರ್ಕಾರಿ ನೌಕರರಿಗೆ ಈ ರಜೆ ದೊರೆಯುವುದಿಲ್ಲ. ಆದುದರಿಂದ ನೀವು ದ್ವಿತೀಯ ಮಗುವಿಗೆ ಮೊದಲ ಪಿತೃತ್ವದ ರಜೆ ಪಡೆದುಕೊಳ್ಳದಿದ್ದರೂ ದ್ವಿತೀಯ ಪಿತೃತ್ವ ರಜೆಯನ್ನು ಬಳಸಿಕೊಳ್ಳಬಹುದು.
***
07-02-2018.
ನಾನು ಸರ್ಕಾರಿ ಪ್ರಾಥಮಿಕ ಸೇವಾ ಶಿಕ್ಷಕಿಯಾಗಿದ್ದೇನೆ. ನನಗೆ ಏಳು ತಿಂಗಳ ಮಗುವಿದ್ದು, ಕೆಲಸದ ಅವಧಿಯಲ್ಲಿ ಮಗುವಿಗೆ ಹಾಲುಣಿಸಲು ಮುಖ್ಯಶಿಕ್ಷಕರು ಅನುಮತಿಸುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಾವಳಿಯು ರಾಜ್ಯ ಸರ್ಕಾರಿ ನೌಕರರಿಗಿಲ್ಲ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ. ಶಿಶುಪಾಲನೆಗೆ ಸಂಬಂಧಿಸಿದಂತೆ ಕೆಲಸದ ಅವಧಿಯಲ್ಲಿ ವಿರಾಮ ಪಡೆಯಲು ಅವಕಾಶವಿಲ್ಲವೆ? ಯಾವುದಾದರೂ ಸರ್ಕಾರಿ ಆದೇಶ ಅಥವಾ ನಿಯಮವಿದ್ದರೆ ತಿಳಿಸಿ.
| ನೇಮಿತ್ ಸಿದ್ದಿಕಾ ಆವಲಹಳ್ಳಿ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಯಲ್ಲಿ ಮಹಿಳಾ ನೌಕರರಿಗೆ ಪ್ರಸೂತಿ ರಜೆಯ ನಂತರ ಆ ಮಗುವಿಗೆ ಹಾಲುಣಿಸಲು ಅವಕಾಶ ಕಲ್ಪಿಸುವ ಯಾವುದೇ ನಿಯಮಾವಳಿ ಇಲ್ಲ. ಆದರೆ 1961ರ ಪ್ರಸೂತಿ ಸೌಲಭ್ಯ ಅಧಿನಿಯಮದಡಿಯಲ್ಲಿ ಮಗುವಿಗೆ 15 ತಿಂಗಳಾಗುವವರೆಗೆ ಹಾಲುಣಿಸಲು ಅವಕಾಶ ನೀಡಬೇಕೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ಮೇಲಧಿಕಾರಿಗಳ ಬಳಿ ಈ ಬಗ್ಗೆ ವಿನಂತಿ ಮಾಡಿಕೊಳ್ಳಬಹುದು.
***
06-02-2018.
ನನ್ನ ಪತ್ನಿಯು ಪ್ರೌಢಶಾಲಾ ಸಹಶಿಕ್ಷಕಿಯಾಗಿದ್ದಾಳೆ. ಅವಳು 2017ರ ಫೆಬ್ರವರಿ ಏಳರಿಂದ ಹೆರಿಗೆರಜೆ ಸಲ್ಲಿಸಿದ್ದು 2017ರ ಜುಲೈ ಎರಡರಂದು ಮಗು ಜನಿಸಿದೆ. ಈ ಹೆರಿಗೆರಜೆಯು ಯಾವಾಗಿನಿಂದ ಪ್ರಾರಂಭವಾಗುತ್ತದೆ? ದಯವಿಟ್ಟು ಇದರ ಬಗ್ಗೆ ಸೂಕ್ತ ಪರಿಹಾರ ಸೂಚಿಸಿ.
| ಮಲ್ಲಿಕಾರ್ಜುನ್ ಶೋರಾಪುರ, ಯಾದಗಿರಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135 ರಂತೆ ಮಹಿಳಾ ಸರ್ಕಾರಿ ನೌಕರರಿಗೆ ಈ ಹೆರಿಗೆರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳವರೆಗೆ ಮಂಜೂರು ಮಾಡಲಾಗುತ್ತದೆ. ಆದಕಾರಣ ನೀವು ಫೆಬ್ರವರಿ ಏಳರಿಂದ ಅರ್ಜಿ ಸಲ್ಲಿಸಿರುವುದರಿಂದ, ವೈದ್ಯಕೀಯ ಪ್ರಮಾಣತ್ವದ ಆಧಾರದ ಮೇಲೆ ಈ ಹೆರಿಗೆ ರಜೆಯನ್ನು ಮಂಜೂರು ಮಾಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
05-02-2018.
ನಾನು 2012ರಲ್ಲಿ ಬೆರಳಚ್ಚುಗಾರನಾಗಿ ಸರ್ಕಾರಿ ಸೇವೆಗೆ ಸೇರಿದ್ದೇನೆ. ಈಗ ಕನ್ನಡ ಶೀಘ್ರಲಿಪಿ ಪ್ರೌಢದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹಳೆ? ಅಕೌಂಟ್ಸ್ ಹೈಯರ್ ಪರೀಕ್ಷೆ ಪಾಸಾಗಿದ್ದು ಜನರಲ್ ಲಾ ಮತ್ತಿತರ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿಲ್ಲ.
| ಜಯಲಕ್ಷ್ಮಿ ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ (ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ನೇಮಕಾತಿ) ನಿಯಮಗಳು 1983ರ ಪ್ರಕಾರ ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿ ಹೊಂದಲು ಕನ್ನಡ ಶೀಘ್ರಲಿಪಿ, ಪ್ರೌಢದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಾಗಿದೆ. ಅದಲ್ಲದೆ ಅಕೌಂಟ್ಸ್ ಹೈಯರ್ ಹುದ್ದೆಯಲ್ಲೂ ಉತ್ತೀರ್ಣರಾಗಿದ್ದರೆ ನೀವು ಈ ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿಯನ್ನು ಪಡೆಯಬಹುದು.
***
04-02-2018.
ನಾನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಕುಲಸಚಿವನಾಗಿ ಕೆಲಸ ಮಾಡುತ್ತಿದ್ದು 2017ರ ಡಿಸೆಂಬರ್ಗೆ 6 ವರ್ಷ ಪೂರೈಸಿದ್ದೇನೆ. ನಮ್ಮ ವಿಶ್ವವಿದ್ಯಾಲಯದ ನೇಮಕಾತಿ ನಿಯಮಗಳನ್ವಯ 5 ವರ್ಷ ಪೂರೈಸಿದವರಿಗೆ ಪದೋನ್ನತಿ ನೀಡಬೇಕೆಂದಿದೆ. ಆದರೆ ವಿಶ್ವವಿದ್ಯಾಲಯದಲ್ಲಿ ಸಹಕುಲಸಚಿವ ಹುದ್ದೆಗಳು ಇಲ್ಲದಿರುವುದರಿಂದ ಪದೋನ್ನತಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಂಖ್ಯಾತೀತವಾಗಿ ಸಹಕುಲಸಚಿವ ಹುದ್ದೆ ಸೃಷ್ಟಿಸಿ ಪದೋನ್ನತಿ ನೀಡಬಹುದೆ?
| ಶಿವಾನಂದ ಮಾರಡಗಿ ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾನಿಯಮಾವಳಿಯ ನಿಯಮ 100ರ ರೀತ್ಯ ಹೀಗಿದೆ: ಒಂದು ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಕ್ಷಮ ಅಧಿಕಾರಿಯ ಅಭಿಪ್ರಾಯ ಹೀಗಿರಬೇಕು. ಒಂದು ಕ್ರಮಬದ್ಧ ಖಾಯಂ ಹುದ್ದೆಯ ಹಕ್ಕನ್ನು ಹೊಂದಲು ಅರ್ಹನಾದ, ಆದರೆ ಸಾಂರ್ದಭಿಕ ಕಾರಣಗಳಿಂದಾಗಿ ಅಂಥ ಹುದ್ದೆ ಹೊಂದಲು ಸಾಧ್ಯವಾಗದ ಸರ್ಕಾರಿ ನೌಕರನ ಅರ್ಜಿಗೆ ಅವಕಾಶ ನೀಡಲು ಸೃಷ್ಟಿಸಬಹುದು. ಆದರೆ ಅದನ್ನು ಸೃಷ್ಟಿಸುವ ಅಥವಾ ಆ ನಂತರ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿಯಾದರೆ ಸೃಷ್ಟಿಸತಕ್ಕದ್ದಲ್ಲ ಎನ್ನಲಾಗಿದೆ. ಹೀಗಾಗಿ ನಿಮ್ಮ ವಿ.ವಿ.ಯಲ್ಲಿ ಈ ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಾಧ್ಯವಿಲ್ಲ.
***
03-02-2018.
ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷಕ. ನನ್ನ ಮೂಲ ವೇತನ ರೂ. 24 ಸಾವಿರ ರೂ.ಗಳು. ನಾನು ಎಫ್ಡಿಎ ಆಯ್ಕೆಯಾದರೆ ನನ್ನ ಮೂಲ ವೇತನ ಎಷ್ಟಾಗುತ್ತದೆ? ದಯವಿಟ್ಟು ತಿಳಿಸಿ.
| ಶಿವು ಬೆಂಗಳೂರು.
ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿಯ ನಿಯಮ 41 (ಎ) ಪ್ರಕಾರ ನೀವು ಸಮಾನ ವೇತನಶ್ರೇಣಿಗೆ ನೇಮಕವಾದರೆ ವೇತನ ರಕ್ಷಣೆ ದೊರಕುತ್ತದೆ. ಇಲ್ಲವಾದರೆ ನೀವು ಪ್ರಥಮ ದರ್ಜೆ ಸಹಾಯಕರ ವೇತನ ಶ್ರೇಣಿಯು ಪ್ರೌಢಶಾಲಾ ಶಿಕ್ಷಕರ ವೇತನ ಶ್ರೇಣಿಗಿಂತ ಕಡಿಮೆಯಾಗಿದ್ದರೆ ನಿಮ್ಮ ವೇತನವನ್ನು ನೀವು ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಸೇರಿದ ದಿನಾಕದಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ ವೇತನವನ್ನು ನಿಗದಿಪಡಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
04-02-2018.
ನಾನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಕುಲಸಚಿವನಾಗಿ ಕೆಲಸ ಮಾಡುತ್ತಿದ್ದು 2017ರ ಡಿಸೆಂಬರ್ಗೆ 6 ವರ್ಷ ಪೂರೈಸಿದ್ದೇನೆ. ನಮ್ಮ ವಿಶ್ವವಿದ್ಯಾಲಯದ ನೇಮಕಾತಿ ನಿಯಮಗಳನ್ವಯ 5 ವರ್ಷ ಪೂರೈಸಿದವರಿಗೆ ಪದೋನ್ನತಿ ನೀಡಬೇಕೆಂದಿದೆ. ಆದರೆ ವಿಶ್ವವಿದ್ಯಾಲಯದಲ್ಲಿ ಸಹಕುಲಸಚಿವ ಹುದ್ದೆಗಳು ಇಲ್ಲದಿರುವುದರಿಂದ ಪದೋನ್ನತಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಂಖ್ಯಾತೀತವಾಗಿ ಸಹಕುಲಸಚಿವ ಹುದ್ದೆ ಸೃಷ್ಟಿಸಿ ಪದೋನ್ನತಿ ನೀಡಬಹುದೆ?
| ಶಿವಾನಂದ ಮಾರಡಗಿ ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾನಿಯಮಾವಳಿಯ ನಿಯಮ 100ರ ರೀತ್ಯ ಹೀಗಿದೆ: ಒಂದು ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಕ್ಷಮ ಅಧಿಕಾರಿಯ ಅಭಿಪ್ರಾಯ ಹೀಗಿರಬೇಕು. ಒಂದು ಕ್ರಮಬದ್ಧ ಖಾಯಂ ಹುದ್ದೆಯ ಹಕ್ಕನ್ನು ಹೊಂದಲು ಅರ್ಹನಾದ, ಆದರೆ ಸಾಂರ್ದಭಿಕ ಕಾರಣಗಳಿಂದಾಗಿ ಅಂಥ ಹುದ್ದೆ ಹೊಂದಲು ಸಾಧ್ಯವಾಗದ ಸರ್ಕಾರಿ ನೌಕರನ ಅರ್ಜಿಗೆ ಅವಕಾಶ ನೀಡಲು ಸೃಷ್ಟಿಸಬಹುದು. ಆದರೆ ಅದನ್ನು ಸೃಷ್ಟಿಸುವ ಅಥವಾ ಆ ನಂತರ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿಯಾದರೆ ಸೃಷ್ಟಿಸತಕ್ಕದ್ದಲ್ಲ ಎನ್ನಲಾಗಿದೆ. ಹೀಗಾಗಿ ನಿಮ್ಮ ವಿ.ವಿ.ಯಲ್ಲಿ ಈ ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಾಧ್ಯವಿಲ್ಲ.
***
02-02-2018.
ಪತಿಯ ನಿಧನದಿಂದ ನಾನು ಅನುಕಂಪದ ಆಧಾರದ ಮೇಲೆ 2016ರಲ್ಲಿ ದ್ವಿತೀಯ ದರ್ಜೆ ಸಹಾಯಕಳಾಗಿ ಕೆಲಸಕ್ಕೆ ಸೇರಿದ್ದೇನೆ. ನಾನೀಗ ಎರಡನೇ ಮದುವೆಯಾಗಲು ಇಚ್ಛಿಸಿದ್ದೇನೆ. ‘ನೀವು ಅನುಕಂಪದ ಆಧಾರದ ಮೇಲೆ ಪತಿಯ ಹುದ್ದೆಯನ್ನು ಪಡೆದಿರುವುದರಿಂದ ಎರಡನೇ ಮದುವೆಯಾದರೆ ಕೆಲಸ ಕಳೆದುಕೊಳ್ಳುವಿರಿ’ ಎಂದು ಮೇಲಧಿಕಾರಿಗಳು ಹೆದರಿಸುತ್ತಿದ್ದಾರೆ. ನಾನು ಎರಡನೇ ಮದುವೆಯಾಗಹುದೆ? ಕಾನೂನು ತೊಡಕುಗಳಿವೆಯೆ?
| ಸೌಮ್ಯಲತಾ ಮೈಸೂರು.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ರೀತ್ಯ ಅನುಕಂಪದ ಮೇಲೆ ಪತಿಯ ನೌಕರಿಯನ್ನು ಪಡೆದ ಮಹಿಳೆಯು ಎರಡನೇ ವಿವಾಹವಾದರೆ ಕೆಲಸ ಕಳೆದುಕೊಳ್ಳುತ್ತಾರೆ ಎನ್ನುವ ನಿಯಮವಿಲ್ಲ. ಆದುದರಿಂದ ನೀವು ಯಾವುದೇ ಬೆದರಿಕೆಗೆ ಅಂಜದೆ ಎರಡನೇ ಮದುವೆಯಾಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***
01-02-2018.
ವೃಂದ ಮತ್ತು ನೇಮಕಾತಿ ರೀತ್ಯಾ ಗ್ರಾಮಲೆಕ್ಕಾಧಿಕಾರಿ ಹುದ್ದೆಯಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆಯೇ?
| ಚಂದ್ರಕಾಂತ ಕಲಬುರಗಿ.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 16(ಎ) ರೀತ್ಯ ಸಮಾನ ವೇತನ ಶ್ರೇಣಿಯ ಸಿ ಮತ್ತು ಡಿ ಗುಂಪಿನ ಹುದ್ದೆಗಳಲ್ಲಿರುವ ಸರ್ಕಾರಿ ನೌಕರರು ವೃಂದ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಈ ವೃಂದ ಬದಲಾವಣೆಗೆ ವೈದ್ಯಕೀಯ ಹಾಗೂ ಇನ್ನಿತರ ಸರ್ಕಾರಿ ನೌಕರನ ಇನ್ನಿತರ ಕಾರಣಗಳಿಂದ ವೃಂದ ಬದಲಾವಣೆ ಮಾಡಿಕೊಳ್ಳಬಹುದು.
***
31.01.2018.
2018ರ ಮಾರ್ಚ್ 31ರಂದು ವಯೋನಿವೃತ್ತರಾಗಲಿರುವ ಸರ್ಕಾರಿ ನೌಕರನಿಗೆ ಎಷ್ಟು ದಿನ ಸಾಂರ್ದಭಿಕ ರಜೆಗಳನ್ನು ಮುಂಗಡವಾಗಿ ಜಮೆ ಮಾಡಬಹುದು, ಹಾಗೂ ಹೊಸದಾಗಿ ಸೇರಿದ ನೌಕರನಿಗೆ ನಿರ್ಬಂಧಿತ ರಜೆಯನ್ನು ಮುಂಗಡವಾಗಿ ಜಮೆ ಮಾಡಬಹುದು?
| ಪ. ಚಂದ್ರಕುಮಾರ್ ಗೌನಹಳ್ಳಿ ಚಿತ್ರದುರ್ಗ.
ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿಯ ಅನುಬಂಧ (ಬಿ) ರಂತೆ ಸರ್ಕಾರಿ ನೌಕರನಿಗೆ ಒಂದು ಕ್ಯಾಲೆಂಡರ್ ವರ್ಷದಲ್ಲಿ 15 ದಿನಗಳ ಕಾಲ ಸಾಂರ್ದಭಿಕ ರಜೆ ಲಭ್ಯವಾಗುತ್ತದೆ. 2018ರ ಮಾರ್ಚ್ 31ರಂದು ವಯೋನಿವೃತ್ತರಾಗಲಿರುವ ಸರ್ಕಾರಿ ನೌಕರನಿಗೆ 15 ದಿನಗಳ ಕಾಲ ಸಾಂರ್ದಭಿಕ ರಜೆಯನ್ನು ಜಮೆ ಮಾಡಬಹುದು. ಹೊಸದಾಗಿ ಸೇರುವ ನೌಕರನಿಗೆ ಎರಡು ದಿನಗಳ ಕಾಲ ನಿರ್ಬಂಧಿತ ರಜೆಯನ್ನು ನೀಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
30-01-2018.
ನಾನು ಹಿಂದುಗಳ ಪವಿತ್ರಾ ಯಾತ್ರಾಸ್ಥಳವಾದ ಮಾನಸಸರೋವರ ಮತ್ತು ಕೈಲಾಸಪರ್ವತಕ್ಕೆ ಹೋಗಬೇಕೆಂದು ಇಚ್ಛಿಸಿರುತ್ತೇನೆ. ನಾನು ಇಲ್ಲಿಗೆ ಹೋಗಲು ಇಲಾಖಾ ಮುಖ್ಯಸ್ಥರ ಅಥವಾ ಸರ್ಕಾರದ ಅನುಮತಿ ಪಡೆದುಕೊಳ್ಳುವುದು ಆವಶ್ಯಕವೆ?
| ಕಮಲಾ ನಾಗೇಶ್ವರರಾವ್ ಧಾರವಾಡ.
ನೀವು ಮಾನಸಸರೋವರಕ್ಕೆ ಹೋಗಲು ಸರ್ಕಾರದ ಅನುಮತಿ ಆವಶ್ಯಕ. ಮಾನಸಸರೋವರವು ಚೀನಾದೇಶದಲ್ಲಿರುವುದರಿಂದ ಹಾಗೂ ಅದು ವಿದೇಶಿ ಪ್ರವಾಸವಾಗಿರುವುದರಿಂದ ಇದಕ್ಕೆ ವೀಸಾ ಪಾಸ್ಪೋರ್ಟ್ ಬಳಸಬೇಕಾಗುತ್ತದೆ. ಆದ್ದರಿಂದ ಸ್ವಂತ ಖರ್ಚಿನಲ್ಲಿ ಸರ್ಕಾರದ ಅಥವಾ ಇಲಾಖಾ ಮುಖ್ಯಸ್ಥರಿಂದ ಅನುಮತಿ ಪಡೆದು ಹೋಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವಂತಹ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***
29-01-2018.
ನಾನು 20-10-2010ರಂದು ಅರಣ್ಯ ಇಲಾಖೆಯಲ್ಲಿ ಬೆರಳಚ್ಚುಗಾರನಾಗಿ ಸೇವೆಗೆ ಸೇರಿ ಏಳು ವರ್ಷ ಸೇವೆ ಪೂರೈಸಿದ್ದೇನೆ. ಈಗ ವೃಂದ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ ಮೇಲಾಧಿಕಾರಿಯವರು ಪಿಯುಸಿ ತೇರ್ಗಡೆಯಾಗಬೇಕು ಎನ್ನುತ್ತಿದ್ದಾರೆ. ನಾನು ಐ.ಟಿ.ಐ.ನಲ್ಲಿ ತೇರ್ಗಡೆ ಆಗಿದ್ದು ಇದನ್ನು ಪರಿಗಣಿಸಬಹುದೆ?
| ಪಾಂಡುರಂಗ ಧವಳೇಶ್ವರ ಬಾಗಲಕೋಟೆ.
ಕರ್ನಾಟಕ ಸರ್ಕಾರ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಾವಳಿ 1973ರ ಪ್ರಕಾರ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಪಿಯುಸಿ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ದಿನಾಂಕ: 27-01-2015ರ ಸರ್ಕಾರಿ ಸುತ್ತೋಲೆ ಸಂಖ್ಯೆ: ಡಿಪಿ.ಎ.ಆರ್ 147 ಎಸ್ಸಿಎ2014ರ ರೀತ್ಯ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಐ.ಟಿ.ಐ. ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷ ಡಿಪ್ಲೊಮೋ ಪಡೆದಿದ್ದರೂ ನೇಮಿಸಿಕೊಳ್ಳಬಹುದೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನೀವು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ಐ.ಟಿ.ಐ. ವಿದ್ಯಾರ್ಹತೆಯನ್ನು ಪರಿಗಣಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***
28.01.2018.
ನನ್ನ ತಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾನು ಎರಡು ವರ್ಷ ವಯಸ್ಸಾಗಿದ್ದಾಗ ತಂದೆ-ತಾಯಿ ಮರಣ ಹೊಂದಿದರು. ಅವರು ತೀರಿಕೊಂಡು ಸುಮಾರು ಇಪ್ಪತ್ತು ವರ್ಷಗಳಾಗಿವೆ. ಈ ಅನುಕಂಪದ ನೇಮಕಾತಿಯ ಬಗ್ಗೆ ಗೊತ್ತಿರಲಿಲ್ಲ. ನಾನೀಗ ಎಂ.ವಿ.ಪದವೀಧರಳಾಗಿದ್ದು ಅನುಕಂಪದ ಆಧಾರದ ಮೇಲೆ ಈಗ ನನ್ನ ತಾಯಿಯ ಸರ್ಕಾರಿ ನೌಕರಿಯನ್ನು ಪಡೆಯಬಹುದೆ?
| ಭೂಮಿಕಾ ದೇಸಾಯಿ ಧಾರವಾಡ.
1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಾವಳಿ ರೀತ್ಯ ಸರ್ಕಾರಿ ನೌಕರನು ನಿಧನ ಹೊಂದಿದ ಒಂದು ವರ್ಷದೊಳಗಾಗಿ ಅನುಕಂಪದ ಮೇರೆಗೆ ನೌಕರಿಯನ್ನು ಪಡೆಯುವ ಅವಲಂಬಿತರು 18 ವರ್ಷ ಪೂರೈಸಿದ್ದು ನಿಗದಿತ ವಿದ್ಯಾರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಬೇಕು. ಅಂತಹವರಿಗೆ ಈ ಅನುಕಂಪದ ಆಧಾರದ ಮೇಲೆ ನೌಕರಿ ಲಭ್ಯವಾಗುತ್ತದೆ. ಆದರೆ ನಿಮ್ಮ ತಾಯಿ ಮರಣ ಹೊಂದಿ ಇಪ್ಪತ್ತು ವರ್ಷಗಳಾಗಿರುವುದರಿಂದ ಲಭ್ಯವಾಗುವುದಿಲ್ಲ.
***
27-01-2018.
ನಾನು 2012ರ ಏಪ್ರಿಲ್ 5ರಂದು ಪೊಲೀಸ್ ಪೇದೆಯಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿದೆ. 2016ರಲ್ಲಿ ಇಲಾಖೆಯಿಂದ ಅನುಮತಿ ಪಡೆದುಕೊಂಡು ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಹಾಜರಾಗಿದ್ದೇನೆ. ನಾನು ಪೊಲೀಸ್ ಇಲಾಖೆಗೆ ಮರಳಿ ಹೋಗುವುದಕ್ಕೆ ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಗಳಲ್ಲಿ ಅವಕಾಶ ಇದೆಯೇ? ದಯವಿಟ್ಟು ವಿವರ ನೀಡಿ.
| ಉದಯ ರೆಡ್ಡಿ ರಾಯಚೂರು.
ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಯ ನಿಯಮ 20ರ ಮೇರೆಗೆ ಹುದ್ದೆಯ ಹಕ್ಕನ್ನು ಕಾಯ್ದಿರಿಸಲು ವಿನಂತಿಸಿ ನಿಯಮ 252(ಬಿ) ರಂತೆ ಬಿಡುಗಡೆ ಹೊಂದಿರಬೇಕು. ನೀವು ಎರಡು ವರ್ಷಗಳೊಳಗಾಗಿ ನ್ಯಾಯಾಂಗ ಇಲಾಖೆಯಿಂದ ಪೊಲೀಸ್ ಇಲಾಖೆಗೆ ವಾಪಸ್ಸು ಹೋಗಬಹುದು.
***
26-01-2018.
ನಾನು 2010ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ್ದೆ. ಆ ನಂತರ ನಿರಾಕ್ಷೇಪಣ ಪತ್ರವನ್ನು ಪಡೆದು 2016ರಲ್ಲಿ ಪಿಎಸ್ಐ ಆಗಿ ನೇಮಕ ಹೊಂದಿದ್ದೇನೆ. ಈ ಹುದ್ದೆಗೆ ನನ್ನ ಹಿಂದಿನ ಸೇವೆಯನ್ನು ಕೂಡ ಪರಿಗಣಿಸುತ್ತಾರೆಯೆ? ನನಗೆ ಯಾವ ಯಾವ ಸೇವಾಸೌಲಭ್ಯಗಳು ದೊರಕುತ್ತವೆ?
| ಡಿ. ಸಂತೋಷ ಕೊಪ್ಪಳ.
ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಯ ನಿಯಮ 252ಬಿ ರಂತೆ ಶಾಲಾ ಶಿಕ್ಷಕ ಹುದ್ದೆಯಿಂದ ಬಿಡುಗಡೆಯಾಗಿ ಪಿ.ಎಸ್.ಐ. ಹುದ್ದೆಗೆ ಸೇರಿದ್ದರೆ ವೇತನ ರಕ್ಷಣೆ, ರಜೆ ಸೌಲಭ್ಯಗಳು ದೊರೆಯುತ್ತವೆ. ಅಷ್ಟೇ ಅಲ್ಲ, ಹೊಸ ಹುದ್ದೆಯಲ್ಲೂ ಎನ್.ಪಿ.ಎಸ್. ಕೆ.ಜಿ.ಐ.ಡಿ, ಸೌಲಭ್ಯಗಳು ಮುಂದುವರಿಯುತ್ತವೆ.
***
25-01-2018.
ನಾನು ಅನುಕಂಪದ ಆಧಾರದ ಮೇಲೆ 2004ರಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಸೇವೆಗೆ ಸೇರಿದ್ದೇನೆ. 2017ರಲ್ಲಿ ಕಿಯಾನಿಕ್ಸ್ ಅವರು ನಡೆಸಿದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಗರಿಷ್ಠ ಅಂಕ 80ಕ್ಕೆ 34 ಅಂಕಗಳನ್ನು ಪಡೆದಿದ್ದೇನೆ. ನಾನು ಈ ಪರೀಕ್ಷೆ ತೆಗೆದುಕೊಳ್ಳಬೇಕೆ? 50 ವರ್ಷ ವಯಸ್ಸಾಗಿರುವ ನನಗೆ ಈ ಪರೀಕ್ಷೆಯಿಂದ ವಿನಾಯಿತಿ ಇದೆಯೇ?
| ಬಿ. ಸುವರ್ಣ ಹಾವೇರಿ.
ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ಪ್ರಕಾರ ಈ ನಿಯಮವು ಜಾರಿಗೆ ಬಂದ ದಿನಾಂಕ : 22 ಮಾರ್ಚ್ 2012ರ ಪೂರ್ವದಲ್ಲಿ ಸರ್ಕಾರಿಸೇವೆಗೆ ಸೇರಿದ ನೌಕರರು ಶೇ. 35ರಷ್ಟು ಅಂದರೆ, 80ಕ್ಕೆ 28 ಅಂಕಗಳನ್ನು ಗಳಿಸಿದರೆ ಸಾಕು. ಜಾರಿ ದಿನಾಂಕದಂದು 50 ವರ್ಷವಾಗಿದ್ದರೆ ಈ ಪರೀಕ್ಷೆಯಿಂದ ವಿನಾಯಿತಿಯಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕಂಪ್ಯೂಟರ್ ಸಾಕ್ಷರತಾ ಕೈಪಿಡಿಯನ್ನು ನೋಡಬಹುದು.
***
24-01-2018.
ನಾನು ವಿದ್ಯಾ ಇಲಾಖೆಯಲ್ಲಿ ಸೇವೆಗೆ ಸೇರಿ ವಯೋನಿವೃತ್ತಿ ಹೊಂದಿದ್ದು ನನ್ನ ಪತಿ ಸಹ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿದರು. ಅಂದಿನಿಂದ ನಾನು ಕುಟುಂಬ ನಿವೃತ್ತಿವೇತನವನ್ನು ಪಡೆಯುತ್ತಿದ್ದೇನೆ. ನನ್ನ ಮಗನಿಗೆ ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕವಾಗಿದ್ದು ನನ್ನ ಮತ್ತು ನನ್ನ ಪತಿಯ ಕುಟುಂಬ ವೇತನವನ್ನು ಪಡೆಯುತ್ತಿರುವುದರಿಂದ ಅನುಕಂಪದ ಮೇಲೆ ನೇಮಕವಾದ ನನ್ನ ಮಗನಿಗೆ ಮುಂದೇನಾದರೂ ಕಾನೂನಿನ ತೊಡಕಾಗುತ್ತದೆಯೆ?
| ರೋಹಿಣಿ ಎಂ. ಹೊಳ್ಳ ಮಂಗಳೂರು
2002ರ ಕುಟುಂಬ ನಿವೃತ್ತಿವೇತನ ನಿಯಮಾವಳಿಯ ರೀತ್ಯ ಪತಿ-ಪತ್ನಿ ಇಬ್ಬರಿಗೂ ಸಂದಾಯವಾಗಬೇಕಾದ ಕುಟುಂಬ ವೇತನವನ್ನು ನೀವು ಪಡೆಯುತ್ತಿದ್ದರೂ ಅನುಕಂಪದ ಮೇಲೆ ನೇಮಕವಾದ ನಿಮ್ಮ ಮಗನ ಭವಿಷ್ಯದ ದೃಷ್ಟಿಯಿಂದ ಯಾವುದೇ ತೊಡಕು ಉಂಟಾಗುವುದಿಲ್ಲ. ಆದರೆ ಒಟ್ಟು ಕುಟುಂಬ ನಿವೃತ್ತಿ ವೇತನವು 39,600 ರೂ.ಗಳು ಮಾಸಿಕವಾಗಿ ಮೀರಬಾರದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದಾಗಿದೆ.
***
23-01-2018.
ಮೇಲಧಿಕಾರಿಗಳ ಆದೇಶದಂತೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಯ ಮಕ್ಕಳ ನೇತ್ರ ತಪಾಸಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೇತ್ರರೋಗಿಗಳ ಪರೀಕ್ಷೆ ಮಾಡಲು ಹೋಗುತ್ತಿದ್ದೇನೆ. ನನಗೆ 5 ವರ್ಷಗಳಿಂದ ಯಾವುದೇ ಪ್ರವಾಸಭತ್ಯೆ ಹಾಗೂ ದಿನಭತ್ಯೆ ಸಂದಾಯವಾಗಿಲ್ಲ. ಈ ಭತ್ಯೆಗಳನ್ನು ಪಡೆದುಕೊಳ್ಳುವುದು ಹೇಗೆ?
| ಸುಭಾಷ್ ಚೌಗಲೆ ಬೆಳಗಾವಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 491ರಂತೆ ಯಾರೇ ಸರ್ಕಾರಿ ನೌಕರನು ಕರ್ತವ್ಯನಿಮಿತ್ತ ವ್ಯಾಪಕವಾಗಿ ಪ್ರಯಾಣ ಮಾಡಬೇಕಾಗಿದೆಯೋ ಅವನಿಗೆ ಖಾಯಂ ಮಾಸಿಕ ಪ್ರಯಾಣಭತ್ಯೆ ಮಂಜೂರು ಮಾಡಬಹುದೆನ್ನಲಾಗಿದೆ. ಸರ್ಕಾರಿ ನೌಕರನ ಕಾರ್ಯವ್ಯಾಪ್ತಿಯೊಳಗೆ ಕೈಗೊಳ್ಳುವ ಪ್ರಯಾಣಭತ್ಯೆಯ ಬದಲಾಗಿ ಅಂಥ ಭತ್ಯೆಯನ್ನು ಮಂಜೂರು ಮಾಡಬಹುದು ಮತ್ತು ವರ್ಷಪೂರ್ತಿ ಪಡೆಯಬಹುದು. ನೀವು ನಿಯಮ 494ರ ಅಡಿಯಲ್ಲಿ ಮಾಸಿಕ ಪ್ರಯಾಣಭತ್ಯೆಯೊಂದಿಗೆ ಹೆಚ್ಚಿನ ದಿನಭತ್ಯೆಯನ್ನೂ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದಾಗಿದೆ.
***
22-01-2018.
ನಾನು ಸರ್ಕಾರಿ ನೌಕರ. ನಮಗೆ ಇನ್ನೂ ಮಗುವಾಗದ ಕಾರಣ ನನ್ನ ಸಹೋದರನು ಮಗುವನ್ನು ದತ್ತು ಕೊಡಲು, 2017ರ ಫೆಬ್ರವರಿ ಮೊದಲ ವಾರದಲ್ಲಿ ಡೆಲಿವರಿ ಸಮಯದಲ್ಲಿ ಒಪ್ಪಿದ್ದಾರೆ. ಮಗುವನ್ನು ದತ್ತು ತೆಗೆದುಕೊಳ್ಳುವುದು ಹೇಗೆ? ನನ್ನ ಸೇವಾಪುಸ್ತಕದಲ್ಲಿ ಹೇಗೆ ನಾಮನಿರ್ದೇಶನ ಮಾಡಿಸಬೇಕು? ಮಾರ್ಗದರ್ಶನ ಮಾಡಿ.
| ವಿಜಯಕುಮಾರ್ ದಾವಣಗೆರೆ.
ಹಿಂದು ದತ್ತಕ ಕಾಯ್ದೆ ಅಡಿಯಲ್ಲಿ ನೀವು ಮಗುವನ್ನು ದತ್ತು ತೆಗೆದುಕೊಳ್ಳಬೇಕು. ದತ್ತು ತೆಗೆದುಕೊಂಡ ಮಗುವನ್ನು ನೋಂದಣಿ ಮಾಡಿಸಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರಂತೆ ನಿಮ್ಮ ದತ್ತಕ ಮಗುವನ್ನು ನಾಮ ನಿರ್ದೇಶನ ಮಾಡಿಸಬೇಕು. ಆಗ ನಿಮ್ಮ ಸ್ವಂತ ಮಗುವಿಗೆ ದೊರಕುವಂತೆ ಎಲ್ಲ ಸರ್ಕಾರಿ ಸೌಲಭ್ಯಗಳು ಈ ಮಗುವಿಗೂ ದೊರಕುತ್ತದೆ.
***
21-01-2018.
ನಾನು ಮೊದಲ ಸರ್ಕಾರಿ ಹುದ್ದೆಗೆ ಸಿಂಧುತ್ವ ಪ್ರಮಾಣಪತ್ರ ನೀಡಿ ಆಯ್ಕೆಯಾಗಿ, ಮೂರು ವರ್ಷ ಸೇವೆ ಸಲ್ಲಿಸಿದ್ದೇನೆ. ಈಗ ಅದೇ ಇಲಾಖೆಯ ಇನ್ನೊಂದು ಹುದ್ದೆಗೆ ಅನುಮತಿಯೊಂದಿಗೆ ನೇರ ನೇಮಕಾತಿಯಲ್ಲಿ ಅದೇ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದೇನೆ. ಮತ್ತೊಮ್ಮೆ ಸಿಂಧುತ್ವ ಪ್ರಮಾಣಪತ್ರವನ್ನು ಮಾಡುವ ಆವಶ್ಯಕತೆ ಇದೆಯೆ?
| ಅಭಿಲಾಷ್ ಚಿಕ್ಕಮಗಳೂರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಅಧಿನಿಯಮ 1992ರಡಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಸಿಂಧುತ್ವ ಪ್ರಮಾಣಪತ್ರವು ಐದು ವರ್ಷದ್ದಾಗಿದ್ದು, ಪರಿಶಿಷ್ಟ ಜಾತಿ/ವರ್ಗದ ಪ್ರಮಾಣಪತ್ರವು ಶಾಶ್ವತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೀವು ಹಿಂದುಳಿದ ವರ್ಗಕ್ಕೆ ಸೇರಿದ್ದರೆ ಮತ್ತೊಮ್ಮೆ ಸಿಂಧುತ್ವ ಪ್ರಮಾಣಪತ್ರವನ್ನು ಕ್ರೀಮಿ ಲೇಯರ್ ದೃಷ್ಟಿಯಿಂದ ಮಾಡಿಸುವುದು ಆವಶ್ಯಕ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ಯನ್ನು ನೋಡಬಹುದು.
***
20-01-2018.
ಹೆರಿಗೆ ರಜೆಯ ಮೇಲಿರುವ ನಾನು ಸರ್ಕಾರಿ ನೌಕರಳಾಗಿದ್ದು, 2018ರ ಜನವರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಆದರೆ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ಆದ್ದರಿಂದ ನಾನು ಒಂದೂವರೆ ವರ್ಷಗಳ ಕಾಲ ವೇತನರಜೆ ಸಲ್ಲಿಸಲು ಬಯಸಿದ್ದೇನೆ. ಕೆೆಸಿಎಸ್ಆರ್ನಲ್ಲಿ ಈ ರೀತಿ ರಜೆ ಹಾಕಲು ಅವಕಾಶವಿದೆಯೆ ಅಥವಾ ಬೇರೆ ಮಾರ್ಗವಿದೆಯೆ?
| ಮನಸ್ವಿನಿ ಉಡುಪಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಉಪನಿಯಮ 4(ಎ)ರ ಅಡಿಯಲ್ಲಿ ಹೆರಿಗೆ ರಜೆ ನಂತರ 60 ದಿನಗಳವರೆಗೆ ವೈದ್ಯಕೀಯ ಪ್ರಮಾಣ ಪತ್ರವಿಲ್ಲದೆ ರಜೆ ಮಂಜೂರು ಮಾಡಿಸಿಕೊಳ್ಳಬಹುದು. ಉಪನಿಯಮ 4(ಬಿ)ಯಡಿಯಲ್ಲಿ ಮಗುವಿಗೆ ತಾಯಿಯ ವೈಯಕ್ತಿಕ ಗಮನದ ಮತ್ತು ಮಗುವಿನ ಹತ್ತಿರ ತಾಯಿ ಇರುವುದು ತುಂಬ ಅವಶ್ಯವೆಂದು ಅಧಿಕೃತ ವೈದ್ಯಾಧಿಕಾರಿ ನೀಡುವ ಪ್ರಮಾಣಪತ್ರದ ಮೇಲೆ ರಜೆ ಮಂಜೂರು ಮಾಡಿಸಿಕೊಳ್ಳಬಹುದು. ಹೀಗಾಗಿ ನೀವು ಮಗುವಿನ ಆರೈಕೆಯ ದೃಷ್ಟಿಯಿಂದ ವೈದ್ಯಕೀಯ ಪ್ರಮಾಣಪತ್ರದ ಆಧಾರದ ಮೇಲೆ ವೇತನರಹಿತ ರಜೆ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
19-01-2018.
ನಾನು 24.3.2003ರಲ್ಲಿ ಸಶಸ್ತ್ರ ಪೊಲೀಸ್ಪೇದೆಯಾಗಿ ಸೇರಿ 2007ರಲ್ಲಿ ಸಿವಿಲ್ ಪೊಲೀಸ್ ಆಗಿ ಆಯ್ಕೆಯಾದೆ. ತದನಂತರ 2016ರಲ್ಲಿ ಕೆಪಿಎಸ್ಸಿ ಮೂಲಕ ಎಫ್ಡಿಎ ಹುದ್ದೆಗೆ ನೇಮಕಗೊಂಡು 2017ರಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿದ್ದೇನೆ. ಆದರೆ ಮೈಸೂರು ಮಹಾನಗರ ಪಾಲಿಕೆಯು ಸ್ಥಳೀಯ ಸಂಸ್ಥೆಯಾಗಿದ್ದು ಸದರಿಯವರು ನನ್ನನ್ನು ಕೆಸಿಎಸ್ಆರ್ 252ಬಿ ಪ್ರಕಾರ ಬಿಡುಗಡೆಗೊಳಿಸಿರುವುದಿಲ್ಲ. ಆದ್ದರಿಂದ ನನ್ನ ಹಿಂದಿನ ಸೇವೆಯು ನಿಯಮ 224ಬಿ ಪ್ರಕಾರ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಬಹುದೆ?.
| ಎನ್.ಕೆ. ಹರೀಶ ಮೈಸೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224ಬಿ ಪ್ರಕಾರ ನೀವು ಪಿಂಚಣಿ ಸೌಲಭ್ಯಕ್ಕೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಬೇಕಾದರೆ ನಿಯಮ 252 ಬಿ ಪ್ರಕಾರ ರಾಜೀನಾಮೆ ನೀಡಿ ಬೇರೊಂದು ಹುದ್ದೆಗೆ ಕರ್ತವ್ಯಕ್ಕೆ ಹಾಜರಾದರೆ ಪರಿಗಣಿಸಲಾಗುತ್ತದೆ. ಏತನ್ಮಧ್ಯೆ ನೀವು 2016ರಿಂದ 2017ರವರೆಗೆ ಸ್ಥಳೀಯ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆಯನ್ನು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಲು ಬರುವುದಿಲ್ಲ.
***
18-01-2018.
ನಾನು 2017ರ ಮೇ ತಿಂಗಳಿನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಸರ್ಕಾರಿ ಸೇವೆಗೆ ಸೇರಿದ್ದೇನೆ. ನನಗೆ ಪ್ರತಿ ತಿಂಗಳು ಎಷ್ಟು ದಿವಸ ಸಾಂರ್ದಭಿಕ ರಜೆ ಲಭಿಸುತ್ತದೆ? ಈ ರೀತಿ ಲಭ್ಯವಾದ ಸಾಂರ್ದಭಿಕ ರಜೆ ಆಯಾ ವರ್ಷದ ಡಿಸೆಂಬರ್ನಲ್ಲಿ ನಷ್ಟವಾಗುತ್ತದೆಯೆ? ಒಮ್ಮೆ ಎಷ್ಟು ಸಾಂರ್ದಭಿಕ ರಜೆಯನ್ನು ಪಡೆಯಬಹುದು?
| ಜಗದೀಶ್ ಎಂ ಕೋಲಾರ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ ಮೇರೆಗೆ ಸರ್ಕಾರಿ ಸೇವೆಗೆ ಸೇರಿದ ಮೊದಲ ವರ್ಷದಲ್ಲಿ ತಿಂಗಳಿಗೆ ಒಂದು ದಿನದಂತೆ ಸಾಂರ್ದಭಿಕ ರಜೆ ಲಭಿಸುತ್ತದೆ. ಈ ರೀತಿಯಾಗಿ ರಜೆ ಖಾತೆಯಲ್ಲಿ ಸೇರ್ಪಡೆಯಾದ ರಜೆಯು ಮುಂದಿನ ವರ್ಷದ ಡಿಸೆಂಬರ್ವರೆಗೂ ನಷ್ಟವಾಗದೆ ಉಳಿಯುತ್ತದೆ. ಒಂದು ವರ್ಷವಾದ ಮೇಲೆ ಕ್ಯಾಲೆಂಡರ್ ವರ್ಷದಲ್ಲಿ ನೀಡುವ 15 ದಿನಗಳ ಅನುಪಾತದಲ್ಲಿ ಲೆಕ್ಕ ಹಾಕಿ ಖಾತೆಗೆ ಸೇರಿಸಲಾಗುತ್ತದೆ. ಒಮ್ಮೆಗೆ ಒಟ್ಟು ಏಳು ದಿನಗಳ ಕಾಲ ಸಾಂರ್ದಭಿಕ ರಜೆಯನ್ನು ವೈಯಕ್ತಿಕ ಅಥವಾ ಇನ್ನಿತರ ಕಾರಣಗಳ ನಿಮಿತ್ತ ಪಡೆಯಬಹುದಾಗಿದೆ. ಈ ಸಾಂರ್ದಭಿಕ ರಜೆಗಳು ಸಾರ್ವತ್ರಿಕ ರಜೆಗಳಾದ ಭಾನುವಾರ, ಇನ್ನಿತರ ಹಬ್ಬ ಹರಿದಿನಗಳ ರಜೆ ಒಳಗೊಳ್ಳುವುದಿಲ್ಲ.
***
17-01-2018
ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಅಕೌಂಟೆಂಟ್ ಆಗಿ 22 ವರ್ಷ ಸೇವೆ ಸಲ್ಲಿಸಿರುವ
ನನಗೆ 55 ವರ್ಷ. ನಾನೀಗ ಸ್ವಯಂನಿವೃತ್ತಿ ಪಡೆಯಬಹುದೆ? ಸ್ವಯಂನಿವೃತ್ತಿ
ಹೊಂದಲು ಗರಿಷ್ಠ ಎಷ್ಟು ವರ್ಷ ಸೇವೆ ಸಲ್ಲಿಸಬೇಕು? ಸೂಕ್ತ ಮಾಹಿತಿ ನೀಡಿ.
| ಕೆ.ಆರ್. ರಾಮಕೃಷ್ಣ ಅಡಿಗ ಮಂಗಳೂರು
ಕರ್ನಾಟಕ ಸಹಕಾರಿ ಸಂಘಗಳ ನಿಯಮಗಳು 1960ರ ನಿಯಮ 18 (4)(ಜಿಜಿ)ರ ಮೇರೆಗೆ ಸಹಕಾರಿ ಬ್ಯಾಂಕಿನ ಯಾವುದೇ ಉದ್ಯೋಗಿಯು ಸ್ವಯಂನಿವೃತ್ತಿ ತೆಗೆದುಕೊಳ್ಳಲು ಬಯಸಿದರೆ ಕನಿಷ್ಠ 15 ವರ್ಷ ತೃಪ್ತಿದಾಯಕ ಸೇವೆ ಸಲ್ಲಿಸಿರಬೇಕು ಅಥವಾ 50 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಎನ್ನಲಾಗಿದೆ. ಆದುದರಿಂದ ನೀವು ಸ್ವಯಂನಿವೃತ್ತಿ ಪಡೆಯಲು ಅನುಮತಿ ಕೋರಿ ಮೂರು ತಿಂಗಳ ಮುಂಚಿತವಾಗಿ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ನಿಯಮಗಳು 1961’ ಪುಸ್ತಕವನ್ನು ನೋಡಬಹುದಾಗಿದೆ.

16-01-2018.
ಸರ್ಕಾರಿ ಸೇವೆಯಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿರುವ ನನಗೆ 54 ವರ್ಷ. ಇತ್ತೀಚೆಗೆ ಸರ್ಕಾರವು ಎಲ್ಲಾ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವೆಂದು ಆದೇಶಿಸಿದೆ. ಆದ್ದರಿಂದ 50 ವರ್ಷಕ್ಕಿಂತ ಹೆಚ್ಚಾಗಿರುವುದರಿಂದ ಹಾಗೂ ನಾನು 1989ರಲ್ಲಿ ಸರ್ಕಾರಿ ಸೇವೆಗೆ ಸೇರಿರುವುದರಿಂದ ಈ ಪರೀಕ್ಷೆ ಕಡ್ಡಾಯವೆ? ಈ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆಯಬೇಕು?
| ವಿಠಲ್ ರಾವ್ ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ನಿಯಮ 3(3)ರ ಮೇರೆಗೆ ದಿನಾಂಕ 22.3.2012ರಲ್ಲಿ 50 ವರ್ಷ ದಾಟಿದ ಸರ್ಕಾರಿ ನೌಕರರಿಗೆ ವಿನಾಯಿತಿ ನೀಡಲಾಗಿದೆ. ಆದರೆ ನಿಮಗೆ ಆಗ ಈ ವಯಸ್ಸು ದಾಟದೆ ಇರುವುದರಿಂದ ಪ್ರಸ್ತುತ ಕಡ್ಡಾಯವಾಗಿರುತ್ತದೆ. ನೀವು ಈ ಪರೀಕ್ಷೆಯಲ್ಲಿ ನಿಯಮ 3(1)ರ ಮೇರೆಗೆ ಶೇ. 35 ಅಂಕಗಳನ್ನು ಪಡೆದು ತೇರ್ಗಡೆಯಾದರೆ ಸಾಕು. ಅಂದರೆ 80 ಅಂಕಗಳಿಗೆ 28 ಅಂಕಗಳನ್ನು ಗಳಿಸಿದರೆ ಸಾಕು. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಕೈಪಿಡಿ’ ಪುಸ್ತಕವನ್ನು ನೋಡಬಹುದಾಗಿದೆ.
***
15-01-2018.
ನಾನು ಸ್ಥಳೀಯ ಸಂಸ್ಥೆಯಲ್ಲಿ ‘ಸಿ’ ಗುಂಪಿನ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. 2013ರಲ್ಲಿ ಕೌಟುಂಬಿಕ ಕಾರಣಕ್ಕಾಗಿ ಎರಡು ತಿಂಗಳು ಗೈರುಹಾಜರಾಗಿ ಸೇವೆಗೆ ಹೋಗಲು ಅನುಮತಿ ಕೋರಿದಾಗ ನಮ್ಮ ಮೇಲಧಿಕಾರಿಗಳು ಸಕ್ಷಮ ಅಧಿಕಾರಿಯಿಂದ ಅನುಮತಿ ದೊರೆಯದ ಹೊರತು ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳುವುದಿಲ್ಲ ಎಂದರು. ಸುಮಾರು ಎಂಟು ತಿಂಗಳ ನಂತರ ಕರ್ತವ್ಯಕ್ಕೆ ಸೇರಿಸಿಕೊಂಡು ಎರಡು ವರ್ಷಗಳ ನಂತರ ಶಿಸ್ತುಪ್ರಾಧಿಕಾರಿ ಇಲಾಖಾ ವಿಚಾರಣೆ ಕುರಿತು ನೋಟಿಸ್ ಜಾರಿ ಮಾಡಿ ಲಿಖಿತವಾಗಿ ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸದೆ ಸೇವೆಯಿಂದ ವಜಾಗೊಳಿಸಿದ್ದಾರೆ. ಇದು ಸರಿಯಾದ ಕ್ರಮವೆ?
| ಪರಶುರಾಮ್ ಸಿಕ್ಕಲಾಗರ್ ಕೊಪ್ಪಳ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 108ರ ಮೇರೆಗೆ 120 ದಿನಗಳಿಗಿಂತ ಹೆಚ್ಚು ಕಾಲ ಅನಧಿಕೃತವಾಗಿ ಗೈರು ಹಾಜರಾದರೆ ಸೇವೆಯಿಂದ ವಜಾಗೊಳಿಸಬಹುದು, ಕಡ್ಡಾಯ ನಿವೃತ್ತಿ ಮಾಡಬಹುದು. ಈ ರೀತಿ ದಂಡನೆ ವಿಧಿಸುವ ಮೊದಲು ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದು. ನಿಮ್ಮ ಮೇಲಧಿಕಾರಿಯ ಮಾತು ಹಾಗೂ ಈ ರೀತಿಯ ವಜಾ ಸರಿಯಲ್ಲ. ನೀವು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಕೋರ್ಟ್ ಮೊರೆ ಹೋಗಬಹುದು.
***
14-01-2018.
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 1981ರಿಂದ ಕರ್ತವ್ಯ ನಿರ್ವಹಿಸುತ್ತಿದ್ದು, 2006ರಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಪದೋನ್ನತಿ ಪಡೆದಿದ್ದೇನೆ. ನನಗೆ ಒಂದು ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗಿದ್ದು, ಅದೇ ವೇತನ ಶ್ರೇಣಿಯಲ್ಲಿರುವುದರಿಂದ ನನಗೆ 2015 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದೆ?
| ಪ್ರೇಮಾ ಗೋ. ಭಟ್ಟ, ಅಳವಳ್ಳಿ, ಕುಮಟಾ.
ದಿನಾಂಕ 9-5-2002ರ ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ 13 ಎಸ್ಆರ್ಪಿ 2002 ರಂತೆ ಸೇವೆಯಲ್ಲಿ ಕನಿಷ್ಠ ಒಂದು ಪದೋನ್ನತಿ ಪಡೆದ ಸರ್ಕಾರಿ ನೌಕರರಿಗೆ ಇಪ್ಪತ್ತು ವರ್ಷಗಳ ಸೇವಾವಧಿಗೆ ಹೆಚ್ಚುವರಿ ವೇತನಬಡ್ತಿ ಲಭ್ಯವಾಗುವುದಿಲ್ಲ. ಅದೇ ರೀತಿಯಾಗಿ ದಿನಾಂಕ 14-6-2012ರ ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ 12 ಎಸ್ಆರ್ಎಸ್2012ರ ಮೇರೆಗೆ ಈ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***
13.01.2018.
ನಮ್ಮ ಶಾಲೆಯಲ್ಲಿ ಜನವರಿ 2018ಕ್ಕೆ ಮುಖ್ಯೋಪಾಧ್ಯಾಯರೊಬ್ಬರು ನಿವೃತ್ತರಾಗುತ್ತಾರೆ. ನಂತರ ಶಾಲೆಯ ಮುಖ್ಯೋಪಾಧ್ಯಾಯರ ಪ್ರಭಾರೆಯನ್ನು ಆ ಶಾಲೆಯಲ್ಲಿ ಹೆಚ್ಚು ಸೇವೆ ಸಲ್ಲಿಸಿದವರು ಅಥವಾ ಜಿಲ್ಲಾ ಸೇವಾ ಹಿರಿತನದಲ್ಲಿ ಹಿರಿಯ ಶಿಕ್ಷಕರು ವಹಿಸಿಕೊಳ್ಳಬೇಕು. ಪರಿಹಾರ ಸೂಚಿಸಿ.
| ಕೆ.ಜೆ. ರಾಜೇಶ್ ಧಾರವಾಡ.
ದಿನಾಂಕ 6-3-2017ರ ಸರ್ಕಾರದ ಸುತ್ತೋಲೆ ಸಂಖ್ಯೆ ಇಡಿ124ಎಲ್ಬಿಪಿ2016ರಲ್ಲಿ ಈ ಹಿಂದೆ ಶಾಲೆಯ ಹಿರಿಯ ಶಿಕ್ಷಕರು ಪ್ರಭಾರ ವಹಿಸಿಕೊಳ್ಳುವ ಬಗ್ಗೆ ಹೊರಡಿಸಿದ್ದ ದಿನಾಂಕ 25-5-2016ರ ಅಥವಾ ಸಮಸಂಖ್ಯೆಯ ಸುತ್ತೋಲೆಯನ್ನು ಹಿಂಪಡೆಯಲಾಗಿದೆ. ಆದುದರಿಂದ ಪ್ರಸ್ತುತ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ರ ಮೇರೆಗೆ ಜಿಲ್ಲೆಯ ಜ್ಯೇಷ್ಠತಾ ಘಟಕದಲ್ಲಿ ಯಾವುದೇ ವಿಷಯದ ಶಿಕ್ಷಕರು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹ ಶಿಕ್ಷಕರು ಮುಖ್ಯೋಪಾಧ್ಯಾಯರ ಪ್ರಭಾರವನ್ನು ವಹಿಸಿಕೊಳ್ಳಬಹುದು. ಆದುದರಿಂದ ನಿಮ್ಮ ಶಾಲೆಯಲ್ಲಿ ಹಿರಿಯ ಶಿಕ್ಷಕರು ಮಾತ್ರ ಪ್ರಭಾರ ವಹಿಸಿಕೊಳ್ಳಲು ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರು ಆದೇಶ ನೀಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಿ.
***
12-01-2018.
ನಾನು 36ನೇ ವಯಸ್ಸಿಗೆ ಕೆಲಸಕ್ಕೆ ಸೇರಿ, 24 ವರ್ಷ ಸೇವೆ ಸಲ್ಲಿಸಿ, 2016ರ ಜುಲೈ 31ರಂದು ವಯೋನಿವೃತ್ತನಾಗಿದ್ದೇನೆ. ಸರ್ಕಾರಿ ಸೇವಾ ನಿಯಮಾವಳಿ ರೀತ್ಯ 30 ವರ್ಷ ಕಳೆದ ನಂತರ ಕೆಲಸಕ್ಕೆ ಸೇರಿದ್ದರೆ, ಪಿಂಚಣಿಗಾಗಿ ನಾಲ್ಕು ವರ್ಷಗಳ ಅರ್ಹತಾದಾಯಕ ಸೇವೆಯನ್ನು ವಿಶೇಷ ಸೇರ್ಪಡೆಯಾಗಿ ಪರಿಗಣಿಸಬಹುದೆ? ಹಾಗಿದ್ದಲ್ಲಿ ಯಾರಿಗೆ ಮನವಿ ಸಲ್ಲಿಸಬೇಕು?
| ಡಿ. ಶಾಂತ ನೆಲಮಂಗಲ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ರೀತ್ಯ 30 ವರ್ಷ ತುಂಬಿದ ತರುವಾಯ ನೇರ ನೇಮಕಾತಿ ಆಗುವ ವ್ಯಕ್ತಿಗಳು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಅವರ ಅರ್ಹತಾದಾಯಕ ಸೇವೆಗೆ ಎರಡು ವರ್ಷಗಳಿಗೆ ಒಳಪಟ್ಟು ಸೇರಿಸಬಹುದಾಗಿದೆ. ಈ ಸೌಲಭ್ಯವು ದಿನಾಂಕ 15-2-2012ರ ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂಖ್ಯೆ ಎಫ್ಡಿ2004ಎಸ್ಆರ್ಎ2010ರ ಮೇರೆಗೆ ದಿನಾಂಕ 15-2-2012ರ ನಂತರ ನಿವೃತ್ತರಾಗುವ ನೌಕರರಿಗೆ ನೀಡಲಾಗುತ್ತದೆ.

11.01.2018.
ನಾನು ತಂದೆಯ ಮರಣದ ಅನುಕಂಪದ ಆಧಾರದ ಮೇಲೆ 1985ರಲ್ಲಿ ಕಾಯಂ ಸರ್ಕಾರಿ ನೌಕರಳಾಗಿ ಜವಾನ ಹುದ್ದೆ ಪಡೆದಿದ್ದೇನೆ. ಆದರೆ ನಾನು ಆ ಸಮಯದಲ್ಲಿ ದೇವದಾಸಿ ಆಗಿದ್ದು ಮತ್ತು ನನಗೆ ಬೇರೆ ಬೇರೆ ಪುರುಷರಿಂದ ಜನಿಸಿದ ಎರಡು ಗಂಡು ಮಕ್ಕಳೂ ಇದ್ದರು. ಆದರೆ ನನ್ನ ಅಣ್ಣಂದಿರು ನನ್ನನ್ನು ‘ಕುಮಾರಿ’ ಎಂದು ಜವಾನ ಹುದ್ದೆಗೆ ಸೇರಿಸಿದ್ದರು. ಈ ರೀತಿಯಾಗಿ ಹುದ್ದೆ ಸೇರಿದ್ದು ತಪ್ಪು ಎಂದು ಕೆಲವರು ಹೇಳುತ್ತಿದ್ದಾರೆ. ಈ ರೀತಿ ಹುದ್ದೆ ಪಡೆದಿದ್ದು ತಪ್ಪೇ? ಇದಕ್ಕೆ ನಾನು ಏನು ಮಾಡಬೇಕು?
| ಸುಶೀಲಾ ರಾಯಚೂರು.
ನೀವು ದೇವದಾಸಿ ಪದ್ಧತಿಯಲ್ಲಿ ಬೇರೆ ಬೇರೆ ಪುರುಷರಿಂದ ಎರಡು ಗಂಡು ಮಕ್ಕಳನ್ನು ಪಡೆದಿರುತ್ತೀರಿ. ನೀವು ಈಗಾಗಲೇ ಅನುಕಂಪದ ಮೇಲೆ ನೇಮಕಾತಿ ಹೊಂದಿರುವುದು ಸ್ವಾಭಾವಿಕ ನ್ಯಾಯದಡಿಯಲ್ಲಿ ಸರಿಯಾಗಿದೆ. ಸುಮಾರು 32 ವರ್ಷಗಳ ಸೇವೆ ಗತಿಸಿರುವುದರಿಂದ ಈಗಾಗಲೇ ಇದು ಸ್ವಾಭಾವಿಕ ನ್ಯಾಯದಡಿಯಲ್ಲಿ ಕ್ರಮಬದ್ಧವಾಗಿದೆ, ಹಾಗೂ ನಿಯಮಾವಳಿ ರೀತ್ಯ ಸರಿಯಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.
***
10.01.2018.
ನಾನು ಅಂಗವಿಕಲ ಮೀಸಲಾತಿ ಅಡಿಯಲ್ಲಿ ಪ್ರೌಢಶಾಲಾ ಸಹಶಿಕ್ಷಕಿಯಾಗಿ 1997ರಲ್ಲಿ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೋ ಮೂಗರ್ಜಿಯ ಹಿನ್ನೆಲೆಯಲ್ಲಿ ಹೊಸದಾಗಿ ಅಂಗವಿಕಲ ಪ್ರಮಾಣಪತ್ರ ನೀಡಲು ವೈದ್ಯಕೀಯ ಮಂಡಳಿಗೆ ಹಾಜರಾಗಲು ಇಲಾಖೆಯವರು ಹೇಳುತ್ತಿದ್ದಾರೆ. ಇದು ನಿಯಮಾವಳಿ ರೀತ್ಯ ಸರಿಯೆ?
| ಬಿ. ಪದ್ಮಾವತಿ ಬೆಂಗಳೂರು.
13-8-1995ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ಸೇಸ್ಥಅ94ರಲ್ಲಿ ನೇಮಕಾತಿ ಪ್ರಾಧಿಕಾರಿಯವರು ಅಂಗವಿಕಲ ಹುದ್ದೆಗಳನ್ನು ತುಂಬಲು ಅರ್ಜಿಗಳನ್ನು ಆಹ್ವಾನಿಸಿದ್ದಾಗ ಅಧಿಕೃತ ನಮೂನೆಯಲ್ಲಿ, ಅಂಗವಿಕಲತೆ ಬಗ್ಗೆ ಸಂಬಂಧಪಟ್ಟ ಜಿಲ್ಲಾ/ತಾಲ್ಲೂಕು ಮಟ್ಟದ ವೈದ್ಯಾಧಿಕಾರಿ ನೀಡಿದ ಪ್ರಮಾಣಪತ್ರವನ್ನು ಅರ್ಜಿಯೊಡನೆ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಈ ರೀತಿ ಸಲ್ಲಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮೂಲ ವೈದ್ಯಕೀಯ ಪ್ರಮಾಣಪತ್ರಗಳನ್ನು ನೇಮಕಾತಿ ಪ್ರಾಧಿಕಾರಕ್ಕೆ ನೀಡಬೇಕು. ಒಮ್ಮೆ ವೈದ್ಯಕೀಯ ಪ್ರಮಾಣಪತ್ರ ನೀಡಿದಲ್ಲಿ ಅದು ಸದಾ ಚಾಲ್ತಿಯಲ್ಲಿರುತ್ತದೆ. ಸರ್ಕಾರಿ ನೌಕರರ ಮೇಲೆ ಬರುವ ಅನಾಮಧೇಯ ದೂರು ಅರ್ಜಿಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಬಾರದೆಂದು ಸವೋಚ್ಚ ನ್ಯಾಯಾಲಯ ಸೂಚಿಸಿದೆ.
***
09.01.2018.
ನಾನು ಸೇವೆಗೆ ಸೇರುವ ಮೊದಲೇ ಒಂದು ಹೆಣ್ಣುಮಗುವನ್ನು ಪಡೆದಿದ್ದು, 2007ರಲ್ಲಿ ಸಹಶಿಕ್ಷಕಿಯಾಗಿ ಸೇವೆಗೆ ಸೇರಿದ್ದೇನೆ. 2010ರಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದು, ಒಂದು ಬಾರಿ ಮಾತ್ರ ಹೆರಿಗೆ ರಜೆ ಪಡೆದಿರುತ್ತೇನೆ. ಮೂರನೇ ಮಗುವಿಗೆ ಈ ಹೆರಿಗೆ ರಜೆ ಪಡೆಯಲು ಅರ್ಹಳೆ? ಪ್ರಸೂತಿ ರಜೆಯನ್ನು ಬಿಟ್ಟು ಬೇರೆ ರಜೆ ಪಡೆಯಬಹುದೆ?
| ರಶ್ಮಿ ಹಿರಿಯೂರು, ಚಿತ್ರದುರ್ಗ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ರೀತ್ಯ ಎರಡು ಜೀವಂತ ಮಕ್ಕಳು ಇರುವವರೆಗೆ ಈ ಪ್ರಸೂತಿ ರಜೆ ಪಡೆಯಬಹುದು. ಈಗಾಗಲೇ ಸೇವೆಗೆ ಸೇರಿದ ನಂತರ ಒಂದು ಪ್ರಸೂತಿ ರಜೆ ಪಡೆದಿರುವುದರಿಂದ ಹಾಗೂ ಎರಡು ಜೀವಂತ ಮಕ್ಕಳು ಇರುವುದರಿಂದ, ಮೂರನೇ ಮಗುವಿಗೆ ಈ ಹೆರಿಗೆ ರಜೆ ಸೌಲಭ್ಯಕ್ಕೆ ನೀವು ಅರ್ಹರಾಗಿರುವುದಿಲ್ಲ. ಆದರೆ ನಿಮ್ಮ ಲೆಕ್ಕದಲ್ಲಿರುವ ಗಳಿಕೆ ರಜೆ ಅಥವಾ ಅಸಾಧಾರಣ ರಜೆ, ನಿಯಮ 117ರ ಮೇರೆಗೆ ಗಳಿಸದ ರಜೆಯನ್ನು ಪಡೆಯಬಹುದು.
***
08.01.2018.
ನನ್ನ ಪತ್ನಿ ಮಾನ್ಯತೆ ಪಡೆದ ಒಂದು ಸಹಕಾರಿ ಬ್ಯಾಂಕ್ನಲ್ಲಿ 12 ವರ್ಷ ಸೇವೆ ಸಲ್ಲಿಸಿ 2017ರ ನವೆಂಬರ್ ಹತ್ತರಂದು ಅನಾರೋಗ್ಯದಿಂದ ನಿಧನರಾದರು. ನಮಗೆ ಒಂದು ಗಂಡುಮಗು ಇದೆ. ಬಿ.ಕಾಂ. ಪದವೀಧರನಾಗಿರುವ 47 ವರ್ಷದ ನಾನು 3ಬಿ ಪ್ರವರ್ಗಕ್ಕೆ ಸೇರಿದವನು. ನನಗೆ ಅನುಕಂಪದ ಆಧಾರದ ಮೇಲೆ ಆ ಬ್ಯಾಂಕ್ನಲ್ಲಿ ಉದ್ಯೋಗ ಸಿಗುತ್ತದೆಯೆ? ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ, ನೀವು ವಯಸ್ಸು ದಾಟಿರುವುದರಿಂದ ಯಾವುದೇ ಉದ್ಯೋಗ ನೀಡಲು ಸಾಧ್ಯವಿಲ್ಲ’ ಎಂದಿದ್ದಾರೆ. ಈ ಬಗ್ಗೆ ತಿಳಿಸಿ.
| ವಿನಾಯಕ ಶಿರಸಿ, ಉತ್ತರ ಕನ್ನಡ.
1960 ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಯ ನಿಯಮ 18(3)ರಡಿಯಲ್ಲಿ (ತಿದ್ದುಪಡಿ ಅಧಿಸೂಚನೆ ಸಂಖ್ಯೆ ಸಿಒ123ಸಿಎಲ್ಎಂ2016 ದಿನಾಂಕ 29-7-2017) ಸಹಕಾರ ಸಂಘದ / ಬ್ಯಾಂಕಿನಲ್ಲಿ ಮರಣ ಹೊಂದಿದ ಪುರುಷ / ಸ್ತ್ರೀ ಉದ್ಯೋಗಿಗೂ ವಿಧುರ / ವಿಧವೆಯಾದರೆ ಈ ಹುದ್ದೆಯ ನೇಮಕಾತಿಗೆ ಗರಿಷ್ಠ ವಯಸ್ಸು ಮಿತಿಯನ್ನು 10 ವರ್ಷಗಳಷ್ಟು ಸಡಿಲಿಸಲಾಗಿದೆ. ಈ ನಿಯಮದ ಅನುಸಾರ ಸಹಕಾರ ಬ್ಯಾಂಕುಗಳಲ್ಲಿ ನಿಧನ ಹೊಂದಿದರೆ ಅನುಕಂಪದ ಆಧಾರದ ಮೇಲೆ ವಿಧುರನಿಗೆ ನೇಮಕಾತಿಗೆ ಅವಕಾಶ ನೀಡಲು ತಿಳಿಸಲಾಗಿದೆ. 3ಬಿ ಪ್ರವರ್ಗಕ್ಕೆ ಸೇರಿರುವ ನಿಮಗೆ 48 ವರ್ಷದವರೆಗೆ ನೇಮಕಕ್ಕೆ ಅವಕಾಶವಿದೆ.
***
07.01.2018.
ನನ್ನ ತಂದೆಯವರು ಕೆಎಸ್ಆರ್ಟಿಸಿಯಲ್ಲಿ ಕಂಡಕ್ಟರ್ ಆಗಿದ್ದರು. ಅನಾರೋಗ್ಯದಿಂದ ಅವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ತಾಯಿಗೆ ಉದ್ಯೋಗ ದೊರಕಿತ್ತು. ಅವರೂ ಅನಾರೋಗ್ಯದಿಂದ ಕರ್ತವ್ಯದಲ್ಲಿರುವಾಗಲೇ ನಿಧನ ಹೊಂದಿದ್ದಾರೆ. ನಾನು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಿದಾಗ, ಈಗಾಗಲೇ ನಿಮ್ಮ ತಾಯಿಗೆ ಅನುಕಂಪದ ಮೇಲೆ ನೇಮಕಾತಿ ನೀಡಿರುವುದರಿಂದ ಮತ್ತೆ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿ.
| ಪಿ. ಮನು, ಮೈಸೂರು.
1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಾವಳಿಯ ನಿಯಮ 3ರ ಮೇರೆಗೆ ನೌಕರರ ಅವಲಂಬಿತರಾದ ಪತಿ/ಪತ್ನಿ/ಮಗ ಮತ್ತು ಅವಿವಾಹಿತ ಮಗಳು ಇದ್ದರೆ ಅನುಕಂಪದ ಮೇರೆಗೆ ಉದ್ಯೋಗ ನೀಡಬಹುದೆಂದು ಸೂಚಿಸುತ್ತದೆ. ನೀವು ಸಂಪೂರ್ಣವಾಗಿ ತಾಯಿಯನ್ನೇ ಅವಲಂಬಿಸುತ್ತಿದ್ದುದರಿಂದ ನಿಮಗೆ ಅನುಕಂಪದ ಮೇರೆಗೆ ಮತ್ತೊಮ್ಮೆ ಉದ್ಯೋಗಾವಕಾಶ ಕೊಡಬೇಕಾದುದು ನ್ಯಾಯ. ನೀವು ಮತ್ತೊಮ್ಮೆ ಕೆಎಸ್ಆರ್ಟಿಸಿ ನೇಮಕಾತಿ ಪ್ರಾಧಿಕಾರಕ್ಕೆ ಮನವಿ ಮಾಡಿ ಉದ್ಯೋಗ ಪಡೆಯಬಹುದು ಅಥವಾ ಕಾರ್ವಿುಕ ನ್ಯಾಯಾಲಯಕ್ಕೆ ಹೋಗಬಹುದು.
*** ಸರ್ಕಾರಿ ಕಾರ್ನರ್:
06.01.2018.
ನಾನು 2008ರಲ್ಲಿ ಬೆಂಗಳೂರು ವಿಭಾಗದಿಂದ ಪ್ರೌಢಶಾಲಾ ಶಿಕ್ಷಕಿಯಾಗಿ ನೇಮಕಾತಿ ಹೊಂದಿದೆ. 2014ರಲ್ಲಿ ಕೋರಿಕೆ ಮೇರೆಗೆ ತುಮಕೂರು ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಜ್ಯೇಷ್ಠತಾ ಪಟ್ಟಿಯಲ್ಲಿ ನೇಮಕಾತಿ ಆದೇಶದ ದಿನಾಂಕದ ಬದಲು ವರ್ಗಾವಣೆಯಾದ ದಿನಾಂಕವನ್ನು ಸೇರಿಸಲಾಗಿದೆ. ಒಂದೇ ವಿಭಾಗದಲ್ಲಿನ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಯಾಗಿದ್ದರೆ ಸೇವಾಜ್ಯೇಷ್ಠತೆ ಬೇರೆಬೇರೆಯಾಗುತ್ತದೆಯೆ?
| ರತ್ನಾ ಪ್ರಭಾಕರ ಶಿವಮೊಗ್ಗ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು 2007ರ ನಿಯಮ 8(4)ರಂತೆ; ಸ್ವಂತ ಕೋರಿಕೆ ಮೇರೆಗೆ ಒಂದು ಜ್ಯೇಷ್ಠತಾ ಘಟಕದಿಂದ ಮತ್ತೊಂದು ಘಟಕಕ್ಕೆ ವರ್ಗಾವಣೆಯಾದಲ್ಲಿ, ಅಂತಹವರ ಜ್ಯೇಷ್ಠತೆಯನ್ನು ಕರ್ನಾಟಕ ಸರ್ಕಾರಿ ಸೇವಾ (ಜ್ಯೇಷ್ಠತೆ) ನಿಯಮಗಳು 1957ರ ನಿಯಮ 6ರ ಪರಂತುಕದಡಿಯಲ್ಲಿ ವರ್ಗಾವಣೆಯ ದಿನಾಂಕದಂದು ಆ ಸೇವೆಯ ವೃಂದ ಅಥವಾ ಶ್ರೇಣಿ ಹೊಂದಿದ ನೌಕರರ ಕೆಳಗೆ ಅಂಖವರನ್ನು ಇಡತಕ್ಕದ್ದೆಂದು ಸೂಚಿಸಿದೆ. ಆದ್ದರಿಂದ ಒಂದೇ ವಿಭಾಗವಾದರೂ ನೇಮಕಾತಿ ಪ್ರಾಧಿಕಾರ ಬೇರೆ ಬೇರೆಯಾದ್ದರಿಂದ ಜ್ಯೇಷ್ಠತೆ ಲಭ್ಯವಾಗದು.
***
05.01.2018.
ನಾನು ಸರ್ಕಾರಿ ನೌಕರ. ಸವೋಚ್ಚ ನ್ಯಾಯಾಲಯವು ಬಿ.ಕೆ.ಪವಿತ್ರ ಪ್ರಕರಣದ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಂತೆ ನಮ್ಮ ಇಲಾಖೆಯಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಬೇಕಾಗಿತ್ತು. ಆದರೆ ಈ ರೀತಿ ಮಾಡದೆ ಜ್ಯೇಷ್ಠತಾ ಪಟ್ಟಿಯಲ್ಲಿ ಅನೇಕ ಲೋಪದೋಷಗಳು ಸಂಭವಿಸಿದ್ದು, ಈ ಬಗ್ಗೆ ಇಲಾಖಾ ಮುಖ್ಯಸ್ಥರಿಗೆ ಮನವಿ ಮತ್ತು ಆಕ್ಷೇಪಣೆ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಈ ದೋಷಪೂರಿತ ಜ್ಯೇಷ್ಠತಾ ಪಟ್ಟಿಯ ಆಧಾರದ ಮೇಲೆ ಕಿರಿಯವರಿಗೆ ಪದೋನ್ನತಿ ನೀಡಿದರೆ ನಾವು ಯಾವ ಕ್ರಮ ಕೈಗೊಳ್ಳಬೇಕು?
| ಎನ್. ರಮೇಶ್, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ (ಜ್ಯೇಷ್ಠತಾ) ನಿಯಮಾವಳಿಯ ಮೇರೆಗೆ ಹಾಗೂ ಸರ್ಕಾರವು ಬಿ.ಕೆ. ಪವಿತ್ರ ಪ್ರಕರಣದಲ್ಲಿ ಹೊರಡಿಸಿದ ಆದೇಶದ ಮೇರೆಗೆ ಆಯಾ ಇಲಾಖೆಯ ನೇಮಕಾತಿ ಪ್ರಾಧಿಕಾರಗಳು ಜ್ಯೇಷ್ಠತಾ ಪಟ್ಟಿಯನ್ನು ದಿನಾಂಕ 15-1-2002ರೊಳಗೆ ಸಿದ್ಧಪಡಿಸಿ ಸರ್ವೇಚ್ಚ ನ್ಯಾಯಾ ಲಯಕ್ಕೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದೋಷಪೂರಿತ ಜ್ಯೇಷ್ಠತಾ ಪಟ್ಟಿಯಿದ್ದರೆ ಅಂತಹ ಪಟ್ಟಿಯು ಅಂತಿಮವಾದ ನಂತರ ನೀವು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಮೊರೆ ಹೋಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಕೃತಿಯನ್ನು ನೋಡಬಹುದು.
***
04-01-2018.
52 ವರ್ಷದ ನಾನು ಆರೋಗ್ಯ ಇಲಾಖೆಯಲ್ಲಿ ಗ್ರೂಪ್ ಡಿ ನೌಕರ. 2018ರ ಮೇ ತಿಂಗಳಿನಲ್ಲಿ 25 ವರ್ಷಗಳ ಸೇವಾವಧಿ ಪೂರ್ಣವಾಗುತ್ತದೆ. ನಾನೀಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಸ್ವಯಂನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾನು ಸ್ವಯಂನಿವೃತ್ತಿ ಆದರೆ ಪಿಂಚಣಿಯಮೂಲವೇತನ ಎಷ್ಟಾಗುತ್ತದೆ? (ಈಗ ನನ್ನ ಮೂಲವೇತನ ರೂ. 16,800) ಎಷ್ಟು ಉಪದಾನ ಹಾಗೂ ಕಮ್ಯುಟೇಷನ್ ಲಭ್ಯವಾಗುತ್ತದೆ? ನನಗೆ ಹೆಚ್ಚುವರಿ ಐದು ವರ್ಷಗಳ ಸೇವಾಧಿಕ್ಯವನ್ನು ಪರಿಗಣಿಸುತ್ತಾರೆಯೇ? ದಯವಿಟ್ಟು ತಿಳಿಸಿ.
| ಎಸ್. ಲಕ್ಷ್ಮೀನಾರಾಯಣ ಕೊಳ್ಳೇಗಾಲ.
ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿಯಂತೆ ನೀವು 50 ವರ್ಷಗಳ ನಂತರ ನಿವೃತ್ತರಾಗುವುದರಿಂದ ಐದು ವರ್ಷಗಳ ಸೇವಾಧಿಕ್ಯವನ್ನು ಅರ್ಹತಾದಾಯಕ ಸೇವೆಗೆ ಸೇರಿಸಲಾಗುವುದಿಲ್ಲ. ನಿಮ್ಮ ಈಗಿನ ಮೂಲ ವೇತನದ ಹಿನ್ನೆಲೆಯಲ್ಲಿ ಪಿಂಚಣಿಯು ರೂ. 6,363ಕ್ಕೆ ನಿಗದಿಯಾಗಲಿದ್ದು ನಿಮಗೆ 2,10,000 ರೂ. ಉಪದಾನ ಕಮ್ಯುಟೇಷನ್, 3,16,332 ರೂ. ಲಭ್ಯವಾಗುತ್ತದೆ.
***
03.01-2018
ನಾನು 2018ರ ಜುಲೈ 31ರಂದು ನಿವೃತ್ತಿ ಹೊಂದುತ್ತಿದ್ದೇನೆ. ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದುವ ಕಾರಣದಿಂದ ನನಗೆ ದೊರಕುವ ಸಾಂರ್ದಭಿಕ ರಜೆ, ಗಳಿಕೆ ರಜೆ, ಅರ್ಧವೇತನ ರಜೆಗಳು ಎಷ್ಟು ಎಂಬುದನ್ನು ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
| ಎ.ಬಿ. ಮೋಹನ್ಕುಮಾರ್ ಹಾಸನ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ ಪ್ರಕಾರ 15 ದಿನಗಳ ಕಾಲ ಸಾಂರ್ದಭಿಕ ರಜೆ; ನಿಯಮ 112ರ ಪ್ರಕಾರ 15 ದಿನಗಳ ಕಾಲ ಗಳಿಕೆ ರಜೆ; ಎರಡು ದಿನಗಳ ನಿರ್ಬಂಧಿತ ರಜೆ ಹಾಗೂ ಹತ್ತು ದಿನಗಳ ಅರ್ಧವೇತನ ರಜೆಗಳು ನಿಮಗೆ ಲಭ್ಯವಾಗುತ್ತವೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ರಚಿಸಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮ ಕೃತಿಯನ್ನು ನೋಡಬಹುದು.
***
02.01.2018.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು 2006ರಲ್ಲಿ ಇಲಾಖಾ ಅನುಮತಿ ಪಡೆದು, 273 ದಿನಗಳ ಕಾಲ ಬಿಎಡ್ ಶಿಕ್ಷಣವನ್ನು ಪಡೆದಿದ್ದೇನೆ. ನನ್ನ ಈ ಅವಧಿಯನ್ನು ಕರ್ತವ್ಯವಲ್ಲದ (ಈಜಿಛಿಠ ್ಞ್ಞ ಅವಧಿಯೆಂದು ಪರಿಗಣಿಸಿದ್ದು, ನನ್ನ ವಾರ್ಷಿಕ ವೇತನ ಬಡ್ತಿಯನ್ನು ಮುಂದೂಡಲಾಗಿದೆ. ಇದು ಸರಿಯೆ?
| ಕೆ.ಸಿ. ವಸಂತಕುಮಾರ ಶಿಕಾರಿಪುರ, ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 55ಎ ಪ್ರಕಾರ ಕರ್ತವ್ಯವಲ್ಲದ ಅವಧಿಯನ್ನು (ಛಜಿಛಿಠಟ್ಞ) ವಾರ್ಷಿಕ ವೇತನ ಬಡ್ತಿಗೆ ಪರಿಗಣಿಸಬಾರದೆಂದು ಸೂಚಿಸಲಾಗಿದೆ. ಆದ್ದರಿಂದ ನಿಮ್ಮ ವೇತನ ಬಡ್ತಿಯನ್ನು ನಿಯಮ 51ರ ಮೇರೆಗೆ ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇದೇ ಲೇಖಕರು ರಚಿಸಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ಓದಿ.
***
01-01-2018.
ನಾನು 1988ರಿಂದ ದಿನಗೂಲಿ ನೌಕರಿಗೆ ಸೇರಿದ್ದೇನೆ. ನಮಗೆ ದಿನಗೂಲಿ ಕ್ಷೇಮಾಭಿವೃದ್ಧಿ ಅಡಿಯಲ್ಲಿ ವೇತನ ಭತ್ಯೆಗಳನ್ನು ನೀಡಲಾಗುತ್ತಿದೆ. ಗಿರಿಧಾಮದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವರ್ಗದ ನೌಕರರಿಗೂ ತಿಂಗಳಿಗೆ 300 ರೂ.ಗಳನ್ನು ಗಿರಿತಾಣಭತ್ಯೆ ನೀಡಲಾಗುತ್ತಿದೆ. ಆದರೆ ನಮಗೆ ಈ ಸೌಲಭ್ಯ ನೀಡುತ್ತಿಲ್ಲ. ಆದ್ದರಿಂದ ನಮಗೆ ಈ ಗಿರಿತಾಣ ಭತ್ಯೆ ಅನ್ವಯಿಸುತ್ತದೆಯೆ?
| ಎಸ್. ದೇವರಾಜ್ ಚಿಕ್ಕಬಳ್ಳಾಪುರ.
ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 12 ಎಸ್ಆರ್ಪಿ 2012 (4)ರ ಮೇರೆಗೆ ರಾಜ್ಯ ಸರ್ಕಾರಿ ನೌಕರರಿಗೆ 1.4.2012 ರಿಂದ ಜಾರಿಗೆ ಬರುವಂತೆ ಗಿರಿತಾಣ ಭತ್ಯೆಯನ್ನು ನೀಡಲಾಗುತ್ತಿದೆ. ಆದರೆ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೀವು ಖಾಯಂ ನೌಕರರಾಗಿರದ ಕಾರಣದಿಂದ ನಿಮಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಅನ್ವಯವಾಗುವುದಿಲ್ಲ. ಆದುದರಿಂದ ಈ ಗಿರಿತಾಣ ಭತ್ಯೆಯನ್ನು ನಿಮಗೆ ನೀಡಲಾಗುವುದಿಲ್ಲ .
***
================================================================2017 ಅಕ್ಟೋಬರ್ 4 ರಿಂದ ಆರಂಭ till December
@@@@@@@@@@@@@@@@@@@@@@@@@@@@@@@@@@
31-12-2017.
ನಾನು ಖಾಸಗಿ ಅನುದಾನಿತ ಶಾಲೆಯಲ್ಲಿ ಸಹಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. 2018ನೇ ಸಾಲಿನ ಆಗ್ನೇಯ ಶಿಕ್ಷಕಕ್ಷೇತ್ರಕ್ಕೆ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅಪೇಕ್ಷಿಸಿದ್ದೇನೆ. ನಾನು ಸೇವೆಯಲ್ಲಿದ್ದಾಗಲೇ ಈ ಚುನಾವಣೆಗೆ ಸ್ಪರ್ಧಿಸಬಹುದೆ? ಚುನಾವಣಾ ಸಮಯದಲ್ಲಿ ಎರಡು ತಿಂಗಳು ವೇತನರಹಿತ ರಜೆ ಪಡೆದು ನಿಲ್ಲಲು ಅವಕಾಶವಿದೆಯೆ? ಸಂಸ್ಥೆಯ ಅಥವಾ ಇಲಾಖೆಯ ಅನುಮತಿ ಅವಶ್ಯವೆ?
| ಎಸ್.ಸಿ. ಈಶ್ವರಪ್ಪ ಗುಬ್ಬಿ, ತುಮಕೂರು.
ಕರ್ನಾಟಕ ಶಿಕ್ಷಣಸಂಸ್ಥೆಗಳ (ನಿಯಂತ್ರಣ ಮತ್ತು ಶಿಸ್ತುಕ್ರಮ) ನಿಯಮಗಳು 1999ರ ನಂತರ ಅನುದಾನಿತ ಶಿಕ್ಷಣಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ರಾಜೀನಾಮೆ ನೀಡದೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ನೀವು ಇಲಾಖೆಯ ಅನುಮತಿ ಪಡೆದು ನಿಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಈ ಚುನಾವಣೆಗೆ ಸ್ಪರ್ಧಿಸಬಹುದು. ಚುನಾವಣೆಯಲ್ಲಿ ಸೋತರೆ ರಾಜೀನಾಮೆಯನ್ನು ಹಿಂಪಡೆಯಲು ನಿಯಮಾವಳಿಯಲ್ಲಿ ಅವಕಾಶ ಇರುವುದಿಲ್ಲ. ನೀವು ನಾಮಪತ್ರ ಸಲ್ಲಿಸಿದಾಗ ಚುನಾವಣಾ ಅಧಿಕಾರಿಗಳು ರಾಜೀನಾಮೆ ಅಂಗೀಕಾರದ ಬಗ್ಗೆ ಅಪೇಕ್ಷಿಸುತ್ತಾರೆ.
***
30.12.2017.
ಸರ್ಕಾರಿ ನೌಕರನಾಗಿರುವ ನನ್ನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿದ ಪೊಲೀಸರು, ನಿರೀಕ್ಷಣಾ ಜಾಮೀನಿನ ಮೇಲೆ ಬಂಧಿಸದೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ವೈಯಕ್ತಿಕ ವಿಷಯದ ಆರೋಪವಿರುವ ಈ ಮೊಕದ್ದಮೆಯ ವಿಷಯವನ್ನು ನನ್ನ ಶಿಸ್ತು ಪ್ರಾಧಿಕಾರ ಗಮನಕ್ಕೆ ನಾನೇ ತರಬೇಕೆ? ಬೇರೆ ಯಾರಾದರೂ ತರಬಹುದೆ?
| ಬಿ. ಸತೀಶ ಬೆಂಗಳೂರು.
ಸರ್ಕಾರಿ ನೌಕರನ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡಲ್ಪಟ್ಟಾಗ ಅಥವಾ ದೂರನ್ನು ದಾಖಲಿಸಿಕೊಂಡಾಗ ಸಂಬಂಧಿತ ಪೊಲೀಸ್ ಸ್ಟೇಷನ್ರವರು ಸಕ್ಷಮ ಶಿಸ್ತು ಪ್ರಾಧಿಕಾರಕ್ಕೆ ಪ್ರಥಮ ಮಾಹಿತಿ ವರದಿ (ಎಫ್ಐಆರ್)
ಚಾರ್ಜ್ಷೀಟ್ ಇತ್ಯಾದಿಗಳ ದೃಢೀಕೃತ ಪ್ರತಿಗಳನ್ನು ಕಳುಹಿಸಿಕೊಡಲು ದಿನಾಂಕ 15.1.2001ರ ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 14 ಸೇವಿಇ 99ರಲ್ಲಿ ಸೂಚಿಸಿದೆ. ಸರ್ಕಾರಿ ನೌಕರನ ಕ್ರಿಮಿನಲ್ ಅಪರಾಧ ನಿರ್ಣೀತತೆಯನ್ನು ಪೊಲೀಸರು ಮತ್ತು ಸರ್ಕಾರಿ ಅಭಿಯೋಜಕರು ಆತನ ನೇಮಕ ಪ್ರಾಧಿಕಾರಕ್ಕೆ ತಿಳಿಸಬೇಕು. ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರ ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿಯನ್ನು ನೋಡಬಹುದು.
***
29.12.2017.
ನಾನು ಯೋಜನಾ ನಿರಾಶ್ರಿತ ಮೀಸಲಾತಿಯಡಿಯಲ್ಲಿ ಆಯ್ಕೆಯಾಗಿ 2014ರಿಂದ ಆರೋಗ್ಯ ಇಲಾಖೆಯಲ್ಲಿ ಗ್ರೂಪ್ ಡಿ ನೌಕರನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಈಗ ಮತ್ತೊಂದು ಸರ್ಕಾರಿ ಹುದ್ದೆಗೆ ಇದೇ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದೆ?
| ವಿಠಲ ಈರಪ್ಪ ಹಣಮರ ತಿಪಟೂರು.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 9 (1ಎಎ) ರೀತ್ಯಾ ಯೋಜನೆ ನಿರಾಶ್ರಿತ ಅಭ್ಯರ್ಥಿಗಳಿಗೆ ಶೇಕಡ ಐದರಷ್ಟು ಸಮಾನಾಂತರ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ನಿಯಮದ ಉಪಬಂಧಗಳಲ್ಲಿ ಎಲ್ಲಿಯೂ ಮಿತಿಯನ್ನು ನಿಗದಿಪಡಿಸದೆ ಇರುವುದರಿಂದ ನೀವು ಅನೇಕ ಸಲ ಈ ಮೀಸಲಾತಿಯಡಿ ಬೇರೆ ರಾಜ್ಯ ಸರ್ಕಾರಿ ಹುದ್ದೆಗಳಿಗೆ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ರಚಿಸಿದ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ಯನ್ನು ಗಮನಿಸಿ.
***
28.12.2017.
ನಾನು 34 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ 2018ರ ಫೆಬ್ರವರಿ ತಿಂಗಳಿನಲ್ಲಿ ‘ಬಿ’ ಗುಂಪಿನ ಅಧಿಕಾರಿಯಾಗಿ ವಯೋನಿವೃತ್ತಿ ಹೊಂದುತ್ತಿದ್ದೇನೆ. ನಾನು ಸೇವಾ ನಿಯಮಾವಳಿ ರೀತ್ಯ ನನ್ನ ಖಾತೆಯಲ್ಲಿ 280 ದಿವಸಗಳಿಕೆ ರಜೆ ಇರುವುದರಿಂದ ರಜೆ ನಗದೀಕರಣ ಪಡೆಯಬಹುದೆ? ಸೂಕ್ತ ಪರಿಹಾರ ಸೂಚಿಸಿ.
| ಟಿ. ಲಕ್ಷ್ಮೀನಾರಾಯಣ ಆಚಾರ್ ಉಡುಪಿ.
ದಿನಾಂಕ 20.11.2017 ಸರ್ಕಾರಿ ಆದೇಶ ಸಂಖ್ಯೆ: ಆಇ04ಸೇನಿಸೇ 2017ರಲ್ಲಿ 2018ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಆರ್ಧÂಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯತಗೊಳಿಸಲು ಆದೇಶಿಸಿದೆ. ಈ ಆದೇಶದ ಕಂಡಿಕೆ 2ರಲ್ಲಿ 2018ರ ಜನವರಿಯಿಂದ ಮಾರ್ಚ್ ತಿಂಗಳಿನಲ್ಲಿ ನಿವೃತ್ತರಾಗುವ ಎಲ್ಲಾ ಅರ್ಹ ನೌಕರರು / ಅಧಿಕಾರಿಗಳು – ಅವರು ನಿವೃತ್ತರಾಗುವ ತಿಂಗಳಿನಲ್ಲಿ ರಜೆ ನಗದೀಕರಣ ಪಡೆಯಲು ಅರ್ಹರಾಗಿರುತ್ತಾರೆಂದು ತಿಳಿಸಿದೆ. ಆದ್ದರಿಂದ ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 118ರ ಮೇರೆಗೆ 2018ರ ಫೆಬ್ರವರಿ ತಿಂಗಳಿನಲ್ಲಿ ಈ ರಜೆ ನಗದೀಕರಣದ ಸೌಲಭ್ಯವನ್ನು ಪಡೆಯಬಹುದು.
***
27-12-2017.
ನಾನು ಪದವೀಧರನಾಗಿದ್ದು, ಅನುದಾನಿತ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇಗ್ನೋದಿಂದ ಬಿ.ಎಡ್. ತೇರ್ಗಡೆಯಾದರೆ ಬೋಧಕೇತರ ಸಿಬ್ಬಂದಿಯಿಂದ ಬೋಧಕ ಸಿಬ್ಬಂದಿಯಾಗಿ ಮುಂಬಡ್ತಿ ಪಡೆಯಲು ಸೇವಾ ಕಾನೂನಿನಲ್ಲಿ ಅವಕಾಶವಿದೆಯೆ?
| ಎನ್. ಶಿವರಾಂ ಧಾರವಾಡ
ಸರ್ಕಾರಿ ಸೇವಾ ಕಾನೂನಿನಡಿಯಲ್ಲಿ ಲಿಪಿಕ ಸಿಬ್ಬಂದಿಯಿಂದ ಬೋಧಕವೃಂದದಲ್ಲಿ ಪದೋನ್ನತಿ ಪಡೆಯಲು ಅವಕಾಶ ಇರುವುದಿಲ್ಲ. ನೀವು ನೇಮಕಾತಿ ಅಧಿಸೂಚನೆ ಹೊರಡಿಸಿದಾಗ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕವಾಗಬಹುದು. ಆದರೆ ಪ್ರಸ್ತುತ ಈ ನೇಮಕಾತಿಗೆ ಸರ್ಕಾರ ಬಿ.ಎಡ್., ನಂತರ ಟಿಇಟಿ ಪರೀಕ್ಷೆ ಕಡ್ಡಾಯಗೊಳಿಸಿದೆ. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ನೋಡಿ.
***
26.12.2017.
ನಾನು 2016ರ ಜುಲೈನಲ್ಲಿ ಅನುಕಂಪದ ಆಧಾರದ ಮೇಲೆ ಪ್ರಥಮದರ್ಜೆ ಸಹಾಯಕಳಾಗಿ ಕೆಲಸಕ್ಕೆ ಸೇರಿದ್ದೇನೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ನಾನು ತೇರ್ಗಡೆಯಾಗಬೇಕಾದುದು ಕಡ್ಡಾಯವೆ? ಶೇಕಡಾವಾರು ಎಷ್ಟು ಅಂಕಗಳನ್ನು ಗಳಿಸಬೇಕು ? ಯಾವ ಪುಸ್ತಕ ಓದಬೇಕು? ಮಾಹಿತಿ ನೀಡಿ.
| ಶಿಲ್ಪಶ್ರೀ ಮಂಗಳೂರು.
ರಾಜ್ಯ ಸರ್ಕಾರಿ ನೌಕರರು 2012ರ ಕರ್ನಾಟಕ ಸರ್ಕಾರಿ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಾವಳಿ ರೀತ್ಯ ತೇರ್ಗಡೆಯಾಗುವುದು ಕಡ್ಡಾಯವೆಂದು ಸೂಚಿಸಿದೆ. 16-12-2017ರ ಅಧಿಸೂಚನೆ ಸಂಖ್ಯೆ ಡಿಪಿಎಆರ್ 15 ಎಸ್ಸಿಆರ್ 2017ರಂತೆ ನಿಯಮ 2(ಎ)ಗೆ ತಿದ್ದುಪಡಿಗೊಳಿಸಿ, ಕನಿಷ್ಠ ಶೇ. 50ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗಬೇಕೆಂದು ಸೂಚಿಸಿದೆ. ಈ ಪರೀಕ್ಷೆಗೆ ಪಠ್ಯಕ್ರಮಕ್ಕನುಸಾರ ರಚಿತವಾದ ಲ. ರಾಘವೇಂದ್ರ ಅವರ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಕೈಪಿಡಿ’ ಓದಬಹುದು.
***
25-12-2017.
ನಾನು 2004ರಲ್ಲಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕನಾಗಿ ನೇಮಕವಾಗಿ 13 ವರ್ಷ ಸೇವೆ ಸಲ್ಲಿಸಿದ್ದೇನೆ. ಈಗ ಗಂಟಲಿನ ಸಮಸ್ಯೆಯಿಂದ ಪದೇಪದೆ ಧ್ವನಿ ಒಡೆಯುತ್ತಿದ್ದು ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಾಗುತ್ತಿಲ್ಲ. 38 ವರ್ಷದ ನನಗೆ ಹುದ್ದೆ ಬದಲಾವಣೆ ಅಥವಾ ಮಾತೃ ಇಲಾಖೆ/ಬೇರೆ ಇಲಾಖೆಯಲ್ಲಿ ಸಮಾನಾಂತರ ಹುದ್ದೆ ಪಡೆಯಲು ಸಾಧ್ಯವೆ?
| ಅನಂತ ಹೆಗಡೆ, ಕಾರವಾರ.
ಕರ್ನಾಟಕ ಸರ್ಕಾರಿ ಸೇವಾ(ಸಾಮಾನ್ಯ ನೇಮಕಾತಿ ಬಡ್ತಿ) ನಿಯಮ 16(ಎ)ರಂತೆ; ಸೇವೆಗೆ ಸಂಬಂಧಿಸಿದಂತೆ ಇಲಾಖಾ ಮುಖ್ಯಸ್ಥರು ಕಾರಣಗಳನ್ನು ದಾಖಲಿಸಿ ಮತ್ತು ಈ ಕುರಿತು ಸರ್ಕಾರ ಹೊರಡಿಸಬಹುದಾದ ಯಾವುದೇ ಸೂಚನೆಗಳಿಗೆ ಒಳಪಟ್ಟು ಒಂದು ಘಟಕದ ಹುದ್ದೆಯಿಂದ ಮತ್ತೊಂದು ಘಟಕದ ಅದೇ ಕೇಡರ್ನ ಸಮಾನ ಹುದ್ದೆಗೆ ‘ಸಿ’/‘ಡಿ’ ಗುಂಪಿನ ನೌಕರನನ್ನು ವರ್ಗಾಯಿಸಬಹುದು. ದೈಹಿಕ ನ್ಯೂನತೆಯಿಂದ ಹುದ್ದೆ ನಿರ್ವಹಿಸಲು ಕಾಯಂ ಅಸಮರ್ಥನಾದರೆ ಯಾವುದೇ ಇತರ ಸಮಾನಹುದ್ದೆ ಇಲ್ಲವೆಂದು ಸರ್ಕಾರ ಅಭಿಪ್ರಾಯಪಟ್ಟಲ್ಲಿ ಮೇಲಿನ ಹುದ್ದೆಗೆ ನೇಮಿಸತಕ್ಕದ್ದಲ್ಲವೆಂದು ನಿಯಮ 16 (3) ಸೂಚಿಸಿದೆ. ನಿಮ್ಮ ಅಸಮರ್ಥತೆಯ ಬಗ್ಗೆ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಸಲ್ಲಿಸಿ ಮಾತೃ ಇಲಾಖೆ ಅಥವಾ ಬೇರೆ ಇಲಾಖೆಯಲ್ಲಿ ವೃಂದ ಬದಲಾವಣೆ ಮಾಡಿಕೊಳ್ಳಬಹುದು.
***
24.12.2017.
ನಾನು ಮತ್ತು ಒಬ್ಬ ಸಹೋದ್ಯೋಗಿ ಒಂದೇ ದಿನ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿದೆವು. ಅವರು ನನಗಿಂತ ಎರಡು ತಿಂಗಳು ಹಿರಿಯರು. ಆದರೆ ಸೇವೆಯಲ್ಲಿರುವಾಗ 10 ತಿಂಗಳು ವೇತನರಹಿತ ರಜೆ ಹೋಗಿ ಬಿ.ಎಡ್. ತರಬೇತಿ ಪಡೆದರು. ಬಡ್ತಿಗೆ ನನಗಿಂತ ಅವರ ಹೆಸರೇ ಮೊದಲು ಬಂದಿದೆ. ಯಾವುದು ಸರಿ?
ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತಾ) ನಿಯಮಗಳು 1957ರ ನಿಯಮ 5(1) (ಎ) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿರುವಾಗ ಅದರ ಫಲಿತಾಂಶದ ಆಧಾರದ ಮೇಲೆ ಜ್ಯೇಷ್ಠತಾಕ್ರಮವು ಯಾವ ಅರ್ಹತಾಕ್ರಮದಲ್ಲಿರಬೇಕೋ ಅದೇ ರೀತಿ ಇರಬೇಕು. ನಿಯಮ 5(1)(ಸಿ)ರಂತೆ ಯಾವುದೇ ಹುದ್ದೆಯ ನೇಮಕಾತಿಗೆ ನಿಗದಿಪಡಿಸಲಾದ ತರಬೇತಿಯ ವ್ಯಾಸಂಗ ಪೂರ್ಣಗೊಳಿಸಿದವರ ಜ್ಯೇಷ್ಠತೆಯನ್ನು ತರಬೇತಿಯ ಕೊನೆಯ ಆಯ್ಕೆಯಲ್ಲಿ ಪರೀಕ್ಷೆ ನಡೆಸದಿರುವಾಗ ಅರ್ಹತಾಕ್ರಮದ ಆಧಾರದ ಮೇಲೆ ನಿರ್ಧರಿಸಬೇಕೆಂದಿದೆ. ವಯಸ್ಸಿನಲ್ಲಿ ಹಿರಿಯರನ್ನು ಜ್ಯೇಷ್ಠತೆಯಲ್ಲಿ ಮೇಲಿಡಬೇಕೆಂದು ಸರ್ಕಾರದ ಆದೇಶಿಸಿದೆ. ನಿಮ್ಮ ಸಹೋದ್ಯೋಗಿ ತರಬೇತಿ ಪಡೆದಿರುವುದರಿಂದ ಅವರು ಜ್ಯೇಷ್ಠತೆಯಲ್ಲಿ ಹಿರಿಯರಾಗಿಯೇ ಉಳಿಯುತ್ತಾರೆ.
***
23.12.2017.
ನಾನು 2014ರಲ್ಲಿ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದು, ಅದಕ್ಕಿಂತ ಮುಂಚೆ ಡಿಪ್ಲೊಮಾ ಮಾಡಿದ್ದೇನೆ. ನಂತರ ಸಂಜೆ ಕಾಲೇಜಿನಲ್ಲಿ ಬಿ.ಇ. ಮಾಡಲು ಅನುಮತಿ ಕೇಳಿದ್ದಕ್ಕೆ ‘ಸಂಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಪೊಲೀಸ್ ಇಲಾಖೆಯಲ್ಲಿ ಅನುಮತಿಯಿಲ್ಲ’ ಎಂದಿದ್ದಾರೆ. ಮುಂದೆ ಬಿ.ಇ. ಮಾಡಬಹುದೆ?
| ಬಸವರಾಜ್ ಬಿ. ಗುರಡ್ಡಿ ಬೆಳಗಾವಿ.
6.9.1986 ಸರ್ಕಾರಿ ಸುತ್ತೋಲೆ ಸಂಖ್ಯೆ ಡಿಪಿಆರ್ 9 ಎಸ್ಆರ್ಸಿ 86ರಂತೆ ಕಚೇರಿ ಕೆಲಸಕ್ಕೆ ಅಡ್ಡಿ ಮಾಡದಂತೆ ಉನ್ನತ ಶಿಕ್ಷಣ ಪಡೆಯಲು ಕೆಲವು ನಿಯಮಗಳಿಗೆ ಒಳಪಟ್ಟು ಅನುಮತಿಸಬೇಕೆಂದು ಸೂಚಿಸಲಾಗಿದೆ. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಆರ್19 ಎಸ್ಎಸ್ಆರ್85 11.6.1985ರಲ್ಲಿ ಸಿ-ಡಿ ಗುಂಪಿನ ನೌಕರರು ಕಚೇರಿ ವೇಳೆಯ ನಂತರ ಶೈಕ್ಷಣಿಕ, ತಾಂತ್ರಿಕ ವಿದ್ಯಾರ್ಹತೆ ಪಡೆಯಲು ಉತ್ತೇಜಿಸಬೇಕೆಂದು ಸೂಚಿಸಲಾಗಿದೆ. ಈಗಾಗಲೇ ಸರ್ಕಾರಿ ನೌಕರಿಯಲ್ಲಿರುವುದಕ್ಕೆ ಉನ್ನತ ದರ್ಜೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಸ್ಪರ್ಧಿಸಲು ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ರಿಯಾಯಿತಿ ಕಲ್ಪಿಸಲಾಗಿದೆ. ನೀವು ಈ ಸರ್ಕಾರಿ ಸುತ್ತೋಲೆ ಮತ್ತು 5.2.73ರ ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 4 ಎಸ್ಆರ್ಸಿ 73ರ ಮೇರೆಗೆ, ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 61ರಡಿಯಲ್ಲಿ ಉಪಬಂಧಗಳಿಗನುಸಾರ ಅನುಮತಿಸಬೇಕೆಂದು ಮನವಿ ಸಲ್ಲಿಸಿ.
****
22.12.207.
ನಾನು 2006ರ ಜನವರಿಯಿಂದ ಪ್ರೌಢಶಾಲಾ ಶಿಕ್ಷಕನಾಗಿದ್ದು 10 ವರ್ಷ ಪೂರ್ಣಗೊಂಡಿದೆ. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಿದೆ. ಇದಕ್ಕೆ ಇಲಾಖಾ ಅನುಮತಿ ಪಡೆದು ಅರ್ಜಿ ಸಲ್ಲಿಸಿ, ಈ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಉಪನ್ಯಾಸಕನಾಗಿ ನೇಮಕಗೊಂಡರೆ, ಎನ್ಪಿಎಸ್ ವ್ಯಾಪ್ತಿಗೆ ಒಳಪಡಬಹುದೆ? ಈಗಾಗಲೇ 10 ವರ್ಷ ಸೇವೆ ಸಲ್ಲಿಸಿದ್ದರಿಂದ ಹಿಂದಿನ ಸೇವೆ ಪರಿಗಣಿಸಲ್ಪಡಬಹುದೆ? ಮೂಲವೇತನದಲ್ಲಿ ವ್ಯತ್ಯಾಸ ಆಗಬಹುದೆ?
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 41ಎ-(1) ನಿಯಮ ರೀತ್ಯ ನಿಮ್ಮ ವೇತನ ನಿಗದಿಯಾಗುತ್ತದೆ. ನೀವು ಎನ್ಪಿಎಸ್ ಪಿಂಚಣಿ ಸೌಲಭ್ಯ ಜಾರಿಯಾಗುವುದಕ್ಕೆ ಮುಂಚೆ ಹಿಂದಿನ ಪಿಂಚಣಿ ಸೌಲಭ್ಯಕ್ಕೆ ಒಳಪಟ್ಟಿರುವುದರಿಂದ 224 (ಬಿ)ರಂತೆ ಪದವಿಪೂರ್ವ ಉಪನ್ಯಾಸಕರಾಗಿ ನೇಮಕಗೊಂಡರೆ ನೇಮಕಾತಿ ಪ್ರಾಧಿಕಾರದ ಮೂಲಕ ಸರ್ಕಾರಕ್ಕೆ ಮನವಿ ಕಳಿಸಿದರೆ ಹಳೇ ಪಿಂಚಣಿ ಸೌಲಭ್ಯ ಸಿಗುತ್ತದೆ. 41ಎ(1)ರ ಮೇರೆಗೆ ವೇತನ ನಿಗದಿಯಾಗುವುದರಿಂದ ಮೂಲ ವೇತನ ಬದಲಾಗದು. ಪದವಿಪೂರ್ವ ಉಪನ್ಯಾಸಕರ ಹುದ್ದೆಗೆ ಹಾಜರಾಗುವ ಮೊದಲು ನಿಯಮ 252ಬಿ’ರಂತೆ ಕಾರ್ಯವಿಮುಕ್ತಿಗೊಂಡು ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ.
***
21.12.2017.
ನಮ್ಮ ಶಾಲೆಯಲ್ಲಿ ನಾಲ್ಕು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈಗ ಒಬ್ಬರು ಪ್ರಭಾರೆ ಮುಖ್ಯಶಿಕ್ಷಕರಾಗಿ ಚಾರ್ಜ್ ತೆಗೆದುಕೊಳ್ಳಬೇಕಾಗಿದೆ. ನಾನು ಸೇವೆಯಲ್ಲಿ ಹಿರಿಯ ಶಿಕ್ಷಕನಾಗಿದ್ದು, ನನಗೆ ಚಾರ್ಜ್ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಯಾರು ಚಾರ್ಜ್ ತೆಗೆದುಕೊಳ್ಳಬೇಕು? ತಿಳಿಸಿಕೊಡಿ.
| ಜಗನ್ನಾಥ್ ಮೈಸೂರು.
ದಿನಾಂಕ 25.05.2016ರ ಸರ್ಕಾರಿ ಸುತ್ತೋಲೆ ಸಂಖ್ಯೆ ಇಡಿ 124 ಎಲ್ಬಿಪಿ 2016ರ ಮೇರೆಗೆ ಸರ್ಕಾರಿ/ಖಾಸಗಿ ಪ್ರೌಢಶಾಲೆಗಳಲ್ಲಿ ಖಾಯಂ ಮುಖ್ಯ ಶಿಕ್ಷಕರು ಇಲ್ಲದ ಸಂದರ್ಭದಲ್ಲಿ ಅಥವಾ ರಜೆ ಹೋದ ಸಂದರ್ಭದಲ್ಲಿ ಸಂಪೂರ್ಣವಾಗಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಶಾಲೆಯ ಪ್ರಭಾರವನ್ನು ಸದರಿ ಶಾಲಾ ಜ್ಯೇಷ್ಠತೆ ಹೊಂದಿರುವ ಶಿಕ್ಷಕರನ್ನು ಮುಖ್ಯೋಪಾಧ್ಯಾಯರ ಹುದ್ದೆಗೆ ಪ್ರಭಾರದಲ್ಲಿರಿಸತಕ್ಕದ್ದು. ಈ ರೀತಿ ಕ್ರಮ ಜರುಗಿಸುವಾಗ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 32ನೇ ನಿಯಮದ ಪ್ರಕಾರ ಪ್ರಭಾರದಲ್ಲಿಡತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಆದುದರಿಂದ ಈ ಸುತ್ತೋಲೆಯಂತೆ ಆ ಶಾಲೆಯ ಹಿರಿಯ ಶಿಕ್ಷಕರು ಪ್ರಭಾರ ತೆಗೆದುಕೊಳ್ಳಬೇಕಾಗುತ್ತದೆ.
***
20.12.2017.
ನಾನು ಪ್ರಾಥಮಿಕ ಶಾಲಾ ಶಿಕ್ಷಕಿ. ಆರು ತಿಂಗಳು ಎರಡು ವಾರದ ಗರ್ಭಿಣಿಯಾಗಿದ್ದಾಗಲೇ ಮಗು ಗರ್ಭಕೋಶದಲ್ಲೇ ನಿಧನವಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದರು. ನಾನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದ್ದು, ಪೂರ್ಣ ಹೆರಿಗೆ ರಜೆ ಬಳಸಿಕೊಳ್ಳಬಹುದೆ?
| ಎಂ.ಎನ್. ಹರ್ಷರಾಣಿ ಮಡಿಕೇರಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಮೇರೆಗೆ ಎರಡು ಜೀವಂತ ಮಗು ಇರುವವರೆಗೂ ಎರಡು ಬಾರಿ 180 ದಿನಗಳ ಹೆರಿಗೆ ರಜೆ ಪಡೆಯಬಹುದು. ಗರ್ಭದಲ್ಲಿ 26 ವಾರಗಳ ಕಾಲ ಇದ್ದ ಮಗುವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿರುವುದರಿಂದ ಪ್ರಸೂತಿ ಸೌಲಭ್ಯ ಅಧಿನಿಯಮ ಕಂಡ 3(ಜೆ) ಪ್ರಕಾರ 26 ವಾರಗಳ ನಂತರ ಮಗುವು ಗರ್ಭದಲ್ಲೇ ನಿಧನವಾದರೆ ಅಥವಾ ಜನನವಾಗಿ ನಿಧನವಾದರೆ ಅದನ್ನು ಸಾಮಾನ್ಯ ಜನನವೆಂದು ಪರಿಗಣಿಸಿ ಬಾಣಂತಿಯ ಆರೈಕೆಗಾಗಿ 180 ದಿನಗಳ ಹೆರಿಗೆ ರಜೆಯನ್ನು ಬಳಸಿಕೊಳ್ಳಬಹುದು.
***
19.12.2017.
ಆರೋಗ್ಯ ಇಲಾಖೆಯಲ್ಲಿ ಡಿ ಗುಂಪಿನ ನೌಕರನಾಗಿರುವ ನಾನು ಆರು ವರ್ಷ ಸರ್ಕಾರಿ ಸೇವೆ ಸಲ್ಲಿಸಿದ್ದೇನೆ. ನಾನೀಗ ಪದೋನ್ನತಿ ಹೊಂದಲು ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆನ್ನುತ್ತಿದ್ದಾರೆ. ಪದೋನ್ನತಿಗೆ ಯಾವ ಇಲಾಖಾ ಪರೀಕ್ಷೆ ತೇರ್ಗಡೆಯಾಗಬೇಕು? ಯಾವ್ಯಾವ ಪುಸ್ತಕಗಳ ಅಧ್ಯಯನ ಮಾಡಬೇಕು?
| ಬಿ. ಸೋಮಶೇಖರ್ ಶಿವಮೊಗ್ಗ.
ಕರ್ನಾಟಕ ನಾಗರಿಕ ಸೇವಾ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು 1974ರಲ್ಲಿನ ನಿಯಮಗಳು ‘ಡಿ’ ಗುಂಪಿನ ನೌಕರರಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಸರ್ಕಾರವು ದಿನಾಂಕ 19.08.1978ರ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 44 ಎಸ್ಎಸ್ಆರ್78ರ ಮೇರೆಗೆ ‘ಡಿ’ ಗುಂಪಿನ ನೌಕರರು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹರಿದ್ದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಪದೋನ್ನತಿ ಹೊಂದಿದ ಮೂರು ವರ್ಷದೊಳಗೆ ಅಕೌಂಟ್ಸ್ ಲೋಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಅವಕಾಶ ಕಲ್ಪಿಸಲಾಗಿದೆ. ನೀವು ಅಕೌಂಟ್ಸ್ ಲೋಯರ್ ಪರೀಕ್ಷೆ ತೇರ್ಗಡೆಯಾಗಲು ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, ಆರ್ಥಿಕ ಸಂಹಿತೆ, ಖಜಾನೆ ಸಂಹಿತೆ ಮತ್ತು ಸಾದಿಲ್ವಾರು ವೆಚ್ಚದ ಕೈಪಿಡಿ ಕೃತಿಗಳನ್ನು ಅಧ್ಯಯನ ಮಾಡಿ.
***
18.12.2017.
ನನ್ನ ಸ್ನೇಹಿತನೊಬ್ಬ ಸರ್ಕಾರಿ ಸೇವೆಯಲ್ಲಿದ್ದು ನೆಟ್ವರ್ಕ್ ಮಾರ್ಕೆಟ್ನಲ್ಲಿ ಪಾರ್ಟ್ ಟೈಂ ಮಾಡುತ್ತ ತಿಂಗಳಿಗೆ 20ರಿಂದ 60 ಸಾವಿರ ರೂ.ಗಳನ್ನು ಬ್ಯಾಂಕ್ ಮೂಲಕ ಕಮಿಷನ್ ಪಡೆಯುತ್ತಿದ್ದಾನೆ. ನನ್ನನ್ನು ಸೇರಿಸಿಕೊಂಡು ಇತರರು ಸರ್ಕಾರಿ ನೌಕರಿಯಲ್ಲಿರುವವರು ಮಾಡಬಹುದು ಎನ್ನುತ್ತಿದ್ದಾರೆ. ಇದು ಸರಿಯೆ? ಸರ್ಕಾರದ ಅನುಮತಿ ಅವಶ್ಯವೆ?
| ಎಂ.ದಿನೇಶ್ ಬಳ್ಳಾರಿ.
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 16ರಂತೆ ಯಾವುದೇ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವ ಮಂಜೂರಾತಿ ಪಡೆದ ಹೊರತು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ವ್ಯಾಪಾರ ವ್ಯವಹಾರದಲ್ಲಿ ಅಥವಾ ಇತರ ಉದ್ಯೋಗ ಕೈಗೊಳ್ಳತಕ್ಕದ್ದಲ್ಲ ಎಂದು ಸೂಚಿಸಲಾಗಿದೆ. ಹೀಗಿದ್ದರೂ ನೀವು ಮತ್ತು ನಿಮ್ಮ ಗೆಳೆಯರು ಈ ನೆಟ್ವರ್ಕ್ ಮಾರ್ಕೆಟಿನ ವ್ಯವಹಾರದಲ್ಲಿ ಪಾಲ್ಗೊಂಡರೆ ಶಿಸ್ತುಕ್ರಮಕ್ಕೆ ಒಳಗಾಗುತ್ತೀರಿ. ಆದ್ದರಿಂದ ಇದು ಕ್ರಮಬದ್ಧವಾಗಿರದು.
***
17-12-2017.
ನಾನು ಸರ್ಕಾರಿ ವಾಹನ ಚಾಲಕನಾಗಿ ಐದು ವರ್ಷ ಸೇವೆ ಪೂರೈಸಿದ್ದೇನೆ. ನಮ್ಮ ಕಚೇರಿಯವರು ದ್ವಿತೀಯ ದರ್ಜೆ ಸಹಾಯಕ ವೃಂದಕ್ಕೆ ವರ್ಗಾವಣೆ ಹೊಂದಲು ಪಿಯುಸಿ ಹಾಗೂ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕೆಂದು ಸೂಚಿಸಿದ್ದಾರೆ. ನಾನು ಯಾವ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು?
| ಎಂ.ಎನ್. ಷಫೀವುಲ್ಲಾ ಚಿತ್ರದುರ್ಗ.
ಕರ್ನಾಟಕ ಸರ್ಕಾರಿ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978ರ ನಿಯಮ 4ಎ(ಬಿ) ಪ್ರಕಾರ ವಾಹನ ಚಾಲಕ ವೃಂದದಿಂದ ದ್ವಿತೀಯ ದರ್ಜೆ ಸಹಾಯಕ ವೃಂದಕ್ಕೆ ವರ್ಗಾವಣೆ ಹೊಂದಲು ಎರಡು ವರ್ಷದ ಪಿಯುಸಿ ಕಡ್ಡಾಯ. ಆದರೆ ದಿನಾಂಕ 28.10.2017ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಸಿಆಸುಇ 5ಸೇಸೇನಿ 2017ರ ಪ್ರಕಾರ ವಾಹನ ಚಾಲಕ ವೃಂದದಿಂದ ದ್ವಿತೀಯ ದರ್ಜೆ ಸಹಾಯಕ ವೃಂದಕ್ಕೆ ವೃಂದ ಬದಲಾವಣೆ ಹೊಂದುವ ಸರ್ಕಾರಿ ನೌಕರನಿಗೆ ವೃಂದ ಬದಲಾವಣೆ ಹೊಂದಿದ ದಿನಾಂಕದಿಂದ ಮೂರು ವರ್ಷಗಳೊಳಗೆ ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳನ್ನು ತೇರ್ಗಡೆ ಹೊಂದಲು ಅವಕಾಶವಿದೆ. ಹೀಗಾಗಿ ವಾಹನ ಚಾಲಕ ವೃಂದದಿಂದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ವೃಂದ ಬದಲಾಗಲು ಇಲಾಖಾ ಪರೀಕ್ಷೆ ಕಡ್ಡಾಯವಲ್ಲ, ಪಿಯುಸಿ ಮಾತ್ರ ಕಡ್ಡಾಯ.
***
16.12.2017.
ಸರ್ಕಾರಿ ನೌಕರರಾಗಿದ್ದ ನನ್ನ ಪತಿ 2017ರ ಆಗಸ್ಟ್ ಆರರಂದು ಸೇವೆಯಲ್ಲಿರುವಾಗಲೇ ನಿಧನರಾದರು. ನಾನು ಎಂಟನೇ ತರಗತಿ ಓದಿದ್ದು, ಅನುಕಂಪದ ಮೇರೆಗೆ ಉದ್ಯೋಗ ಕೇಳಿದಾಗ ಎಸ್ಎಸ್ಎಲ್ಸಿ ತೇರ್ಗಡೆಯಾದರೆ ಮಾತ್ರ ಡಿ ಗುಂಪಿನ ಹುದ್ದೆ ನೀಡಲಾಗುವುದೆಂದಿದ್ದಾರೆ. ಪರಿಹಾರ ತಿಳಿಸಿ.
| ಜಯಲಕ್ಷ್ಮಿ ಮಂಡ್ಯ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮ 1996ರ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದಲ್ಲಿ ಅವರ ಅವಲಂಬಿತರಲ್ಲಿ ಒಬ್ಬರಿಗೆ ನಿಯಮಗಳಲ್ಲಿ ನಿಗದಿತವಾದ ನಿಬಂಧನೆಗಳಡಿ ಅನುಕಂಪದ ಆಧಾರದಲ್ಲಿ ಕೆಲಸ ನೀಡಬಹುದು. ಆದರೆ ನೇರ ನೇಮಕಾತಿ ಕೋರುವ ಅಭ್ಯರ್ಥಿಯು ಎಸ್ಎಸ್ಎಲ್ಸಿ ತೇರ್ಗಡೆಯಾಗಿದ್ದರೆ ಡಿ ಗುಂಪಿನ ನೌಕರಿ ನೀಡಲು ಅವಕಾಶವಿದ್ದರೂ ಅನುಕಂಪದ ಆಧಾರದ ಮೇಲೆ ಇದೇ ನಿಯಮದ ಪರಂತುಕದಡಿಯಲ್ಲಿ ವಿನಾಯಿತಿ ಇದೆ. 2017ರ ಅಕ್ಟೋಬರ್ 22ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 105 ಸೇಆನೆ 2017ರ ಮೇರೆಗೆ ಅನುಕಂಪದ ಆಧಾರದ ನೇಮಕಾತಿಗೆ ಪರಿಗಣಿಸುವಲ್ಲಿ ಮಾತ್ರ ಗ್ರೂಪ್ ಡಿ ಹುದ್ದೆಯ ನೇಮಕಾತಿಗೆ ಎಸ್ಎಸ್ಎಲ್ಸಿಯಿಂದ ವಿನಾಯಿತಿ ಇದೆ. ನೀವು ಮತ್ತೊಮ್ಮೆ ವಿನಂತಿಸಬಹುದು.
***
15.12.2017.
ನಾನು ಕೆಪಿಎಸ್ಸಿ ಮೂಲಕ ಆಯ್ಕೆಯಾಗಿ 1975ರ ಏಪ್ರಿಲ್ ಒಂದರಿಂದ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸಿ 2003ರ ಮಾರ್ಚ್ 31ರಂದು ನಿವೃತ್ತನಾದೆ. ಸರ್ಕಾರಿ ಆದೇಶ ಎಫ್ಡಿ 4/ಎಸ್.ಆರ್.ಎ./2010-15.2.2013 ಮತ್ತು ಕರ್ನಾಟಕ ಸರ್ಕಾರಿ ಸೇವಾನಿಯಮ 247ಎ(1)ರ ಪ್ರಕಾರ 30 ವರ್ಷದ ನಂತರ ನೇಮಕವಾಗಿರುವುದಕ್ಕೆ ಎರಡು ವರ್ಷಗಳ ಅರ್ಹತಾ ಸೇವೆ ಲಭ್ಯವಾಗುವುದೆ? ಪಿಂಚಣಿಗೆ ಸದರಿ ಸೇವೆಯನ್ನು ಪರಿಗಣಿಸಬಹುದೆ?
| ಬಿ.ಎಸ್. ಹೊಸಮನಿ ಶಿವಮೊಗ್ಗ.
ಕರ್ನಾಟಕ ಸರ್ಕ.ರಿ ಸೇವಾ ನಿಯಮಾವಳಿಯ ನಿಯಮ 247(ಎ1)ರಂತೆ 1.1.1971ರಿಂದ 31.11.2004ರ ತನಕ ನಿವೃತ್ತರಾದ ಸರ್ಕಾರಿ ನೌಕರರಿಗೆ 30 ವರ್ಷ ದಾಟಿದ ನಂತರ ನೇಮಕವಾಗುವ ವ್ಯಕ್ತಿಗಳ ಸಂದರ್ಭದಲ್ಲಿ, ಅರ್ಹತಾಸೇವೆಗೆ ಗರಿಷ್ಠ 8 ವರ್ಷಗಳಿಗೆ ಒಳಪಟ್ಟು ನೇರ ನೇಮಕಾತಿಯ ದಿನಾಂಕದ ನಿಕಟಪೂರ್ವದ ಜನ್ಮದಿನಾಂಕದಂದು ಆದ ವಯಸ್ಸು, 30 ವರ್ಷ ಇವುಗಳ ಮಧ್ಯದ ವ್ಯತ್ಯಾಸಕ್ಕೆ ಸಮನಾದ ಅವಧಿಯನ್ನು ಗರಿಷ್ಠ 8 ವರ್ಷಗಳ ಹೆಚ್ಚುವರಿ ಅರ್ಹದಾಯಕ ಸೇವೆಗೆ ಪರಿಗಣಿಸಲು ಸೂಚಿಸಲಾಗಿದೆ. ನೌಕರನ ನಿವೃತ್ತಿಯ ಸಂದರ್ಭದಲ್ಲಿ ಅವನ ಅರ್ಹತಾದಾಯಕ ಸೇವೆಗೆ ಇದನ್ನು ಸೇರಿಸಿ ಪಿಂಚಣಿ ಸೌಲಭ್ಯ ಮಂಜೂರು ಮಾಡಲಾಗುತ್ತದೆ.
***
14.12.2017.
ನಾನು 1994ರ ಜೂನ್ 30ರಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು ದಿನಾಂಕ 2010ರ ಅಫೆಬ್ರವರಿ 10ರಂದು ಪ್ರೌಢಶಾಲೆಗೆ ಬಡ್ತಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದೇನೆ. ಶಿಕ್ಷಕರಿಗೆ ನೀಡಲಾಗುತ್ತಿರುವ ವಿಶೇಷ ಭತ್ಯೆ ಪಡೆಯುತ್ತಿದ್ದೇನೆ. ಆದರೆ ಸರ್ಕಾರಿ ಆದೇಶ ಸಂಖ್ಯೆ: ಇಡಿ 78 ಎಸ್.ಎಲ್.ಬಿ. 2016 ಬೆಂಗಳೂರು ದಿನಾಂಕ 15.4.2016ರಂತೆ 1.8.2008ರ ನಂತರ ನೇರ ನೇಮಕಾತಿ ಪ್ರೌಢಶಾಲೆಗೆ ಆದವರಿಗೆ ಭತ್ಯೆ ನೀಡುತ್ತಿಲ್ಲ. ಅದರಂತೆ ಬಡ್ತಿ ಹೊಂದಿದವರಿಗೂ ನೀಡದಂತೆ ತಡೆಮಿತಿ ಇದ್ದರೆ ಇದರ ಬಗ್ಗೆ ಸ್ಪಷ್ಟನೆ ನೀಡಿ.
15.4.2016ರ ಸರ್ಕಾರಿ ಆದೇಶ ಸಂಖ್ಯೆ ಇ.ಡಿ. 78 ಎಸ್.ಎಲ್.ಬಿ. 2016ರ ಮೇರೆಗೆ 1.8.2008ರ ನಂತರ ನೇರ ನೇಮಕಾತಿ ಮೂಲಕವಾಗಲಿ ಅಥವಾ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪದೋನ್ನತಿ ಹೊಂದಿದವರಿಗೆ ವಿಶೇಷ ಭತ್ಯೆ ಮಂಜೂರು ಮಾಡಬಾರದೆಂದು ಸೂಚಿಸಲಾಗಿದೆ. ಹೀಗಾಗಿರುವುದರಿಂದ ನೀವು 2010ರ ಫೆಬ್ರವರಿ 10ರಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿರುವುದರಿಂದ ವಿಶೇಷ ಭತ್ಯೆ ಲಭ್ಯವಾಗುವುದಿಲ್ಲ.
***
13.12.2017.
ನಾನು 1998ರಲ್ಲಿ ಪ್ರಾಥಮಿಕ ಶಾಲೆಯ ಸಹಶಿಕ್ಷಕನಾಗಿ ನೇಮಕ ಹೊಂದಿ 20 ವರ್ಷದ ಬಡ್ತಿ ಪಡೆದು ಮೂಲವೇತನ 26,400/ – ಪಡೆಯುತ್ತಿರುತ್ತೇನೆ. ನನಗೆ 50 ವರ್ಷ ಸಮೀಪಿಸುತ್ತಿದ್ದು 10 ವರ್ಷ ಮಾತ್ರ ಸೇವಾವಧಿ ಬಾಕಿ ಇದೆ. ಈಗ ನನಗೆ ಪ್ರಾಥಮಿಕ ಶಾಲಾ ಸಹಶಿಕ್ಷಕರಿಂದ ಪ್ರೌಢಶಾಲಾ ಸಹಶಿಕ್ಷಕರಿಗೆ ಬಡ್ತಿ ಬಂದು, ಅದನ್ನು ನಿರಾಕರಿಸಿದರೆ, 25 ಮತ್ತು 30 ವರ್ಷದ ಹೆಚ್ಚುವರಿ ಬಡ್ತಿ (ವೇತನಶ್ರೇಣಿ) ಸಿಗುವುದೋ ಅಥವಾ ಇಲ್ಲವೋ?
| ಶೋಭಾ ಎಚ್ ತುಮಕೂರು.
ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 11 ಎಸ್ಆರ್ಪಿ 2012(8)ರ ಮೇರೆಗೆ ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ 25 ಮತ್ತು 30 ವರ್ಷ ಒಂದೇ ಹುದ್ದೆಯಲ್ಲಿ ಮುಂದುವರಿದಿರುವ ಸರ್ಕಾರಿ ನೌಕರರಿಗೆ ಹೆಚ್ಚಿನ ವೇತನ ಬಡ್ತಿ ಮಂಜೂರು ಮಾಡಲು ಅವಕಾಶ ಕಲ್ಪಿಸಿರುತ್ತದೆ. ಆದರೆ ಇದೇ ಆದೇಶದ ಖಂಡಿಕೆ 6(ಜಿಜಿ)(ಊ) ಸ್ವಇಚ್ಛೆಯಿಂದ ಪದೋನ್ನತಿಯನ್ನು ಬಿಟ್ಟುಕೊಟ್ಟರೆ ಅಥವಾ ನಿರಾಕರಿಸಿದರೆ ಅಂತಹ ನೌಕರರಿಗೆ ಈ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ. ಆದುದರಿಂದ ನೀವು ಬಡ್ತಿಯನ್ನು ನಿರಾಕರಿಸಿದರೆ 25 ಮತ್ತು 30 ವರ್ಷದ ಬಡ್ತಿ, ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗದು. ಅಲ್ಲದೆ ಸ್ಥಗಿತ ವೇತನ ಬಡ್ತಿಯೂ ದೊರಕುವುದಿಲ್ಲ.
***
12.12.2017.
ನಾನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಿ 2016ರ ಜೂನ್ 30ರಂದು ವಯೋನಿವೃತ್ತಿ ಹೊಂದಿದೆ. ಆರು ತಿಂಗಳಾದರೂ ಇಲಾಖೆಯಿಂದ ಬರಬೇಕಾದ ಮೇಲ್ಕಂಡ ಯಾವುದೇ ಮೊಬಲಗು ಮಂಜೂರಾಗಿರುವುದಿಲ್ಲ. ಸದರಿ ಮೊಬಲಗನ್ನು ಮಂಜೂರು ಮಾಡಿಕೊಡುವಂತೆ ಕೇಂದ್ರ ಕಚೇರಿಗೆ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಮೊಬಲಗು ಮಂಜೂರಾಗಿಲ್ಲ. ಸರ್ಕಾರಿ ಸೇವಾ ನಿಯಮಾವಳಿಯ (ಕೆಸಿಎಸ್ಆರ್) ಪ್ರಕಾರ ನಿವೃತ್ತಿಯಾದ ಎಷ್ಟು ದಿನದೊಳಗೆ ಮೇಲ್ಕಂಡ ಮೊಬಲಗನ್ನು ಮಂಜೂರು ಮಾಡಬಹುದು?
| ಎಚ್.ಎನ್. ಪಾಟೀಲ್ ಗದಗ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 285ನೇ ನಿಯಮದ ಮೇರೆಗೆ ವಯೋನಿವೃತ್ತಿಯಾದ ಆರು ತಿಂಗಳೊಳಗಾಗಿ ನಿಮ್ಮ ಪಿಂಚಣಿ ಸೌಲಭ್ಯಗಳನ್ನು ಮಂಜೂರು ಮಾಡಬೇಕು, ತದನಂತರ ಮಂಜೂರು ಮಾಡಿದರೆ ಸರ್ಕಾರಿ ಆದೇಶದ ಮೇರೆಗೆ ಈ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳಿಂದ ಅಥವಾ ಸರ್ಕಾರದಿಂದ ಪಿಂಚಣಿ ಸೌಲಭ್ಯಗಳ ಮೊಬಲಿಗೆ ಶೇ. ಎಂಟರಷ್ಟು ಬಡ್ಡಿಯನ್ನೂ ವಸೂಲಿ ಮಾಡಬಹುದು. ಆದುದರಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಿಗೆ ನಿಮ್ಮ ಪಿಂಚಣಿ ಸೌಲಭ್ಯಗಳನ್ನು ಮಂಜೂರು ಮಾಡಲು ಮತ್ತೊಮ್ಮೆ ವಿನಂತಿಸಬಹುದು.
***
11.12.2017.
ನಾನು 1983ರಿಂದ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ಕಾರ್ಯನಿರ್ವಹಿಸಿ 2017ರಲ್ಲಿ ನಿವೃತ್ತನಾದೆ. ಆದರೆ ಈವರೆಗೂ ನನಗೆ ಬರಬೇಕಾಗಿದ್ದ ಗ್ರಾಚ್ಯುಟಿ ಬಾಕಿ ಮತ್ತು ರಜೆ ಪರಿವರ್ತಿತ ಹಣ ಬಿಡುಗಡೆ ಮಾಡಿಲ್ಲ. ಯಾವುದೋ ವಿಚಾರಣೆಯೂ ಮುಗಿದು ಆರು ತಿಂಗಳಾಗಿದೆ. ಕೇಂದ್ರ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಪಿಂಚಣಿರಹಿತ ನಿವೃತ್ತಿ ಜೀವನ ದುಸ್ತರವಾಗಿದೆ. ಆದಕಾರಣ ಪಿಂಚಣಿ ಸೌಲಭ್ಯ ಪಡೆಯಲು ಯಾವ ಕ್ರಮ ಕೈಗೊಳ್ಳಬೇಕು?
| ರವಿಶಂಕರ, ರಾಯಚೂರು.
ಕರ್ನಾಟಕ ಸಹಕಾರ ಸಂಘದ ನಿಯಮಗಳು 1969ರ ಮೇರೆಗೆ, ಬ್ಯಾಂಕಿನ ಆಡಳಿತ ಮಂಡಳಿಯೇ ಗ್ರಾಮೀಣ ಬ್ಯಾಂಕುಗಳ ನೌಕರರ ಮತ್ತು ಅಧಿಕಾರಿಗಳ ಶಿಸ್ತು ಪ್ರಾಧಿಕಾರವಾಗಿದೆ. ನಿಮ್ಮ ವಿರುದ್ಧದ ವಿಚಾರಣೆ ಮುಗಿಸಿ – ಆರೋಪ ಸಾಬೀತಾಗಿದ್ದರೆ ದಂಡ ವಿಧಿಸಿ – ಸಹಕಾರ ಸಂಘಗಳ ನಿಬಂಧಕರಿಗೆ ವರದಿ ಕೊಡಬೇಕು. ನಂತರ ಅವರು ನಿಮ್ಮ ಗ್ರಾಚ್ಯುಟಿ, ಇನ್ನಿತರ ಪಿಂಚಣಿ ಸೌಲಭ್ಯ ಮಂಜೂರು ಮಾಡುತ್ತಾರೆ. ಅವನ್ನು ಆರು ತಿಂಗಳುಗಳೊಳಗೆ ಮಂಜೂರು ಮಾಡಬೇಕಾಗಿದ್ದು ನ್ಯಾಯ. ನೀವು ಪಿಂಚಣಿ ಸೌಲಭ್ಯ ಮಂಜೂರಿಗೆ ಕರ್ನಾಟಕ ಸಹಕಾರಿ ಸಂಘಗಳ ನಿಯಮಾವಳಿ 1969ರ ಮೇರೆಗೆ ಸಹಕಾರ ಸಂಘಗಳ ನಿಬಂಧಕರಿಗೆ ಮನವಿ ಸಲ್ಲಿಸಬಹುದು.
***
10.12.2017.
ನಾನು 37ನೇ ವಯಸ್ಸಿಗೆ ಕೆಲಸಕ್ಕೆ ಸೇರಿ 60ನೇ ವಯಸ್ಸಿನಲ್ಲಿ (2017ರ ಜುಲೈ 31) ನಿವೃತ್ತನಾಗಿದ್ದೇನೆ. 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಸರ್ಕಾರಿ ಸೇವೆಯ ನಿಯಮಾವಳಿಯ ನಿಯಮ ‘247ಎ’ರಂತೆ 30 ವರ್ಷ ಕಳೆದ ನಂತರ ಕೆಲಸಕ್ಕೆ ಸೇರಿದ್ದರೆ ನಾಲ್ಕು ವರ್ಷಗಳ ಅರ್ಹತೆ ಸೇವೆಯನ್ನು ಪಿಂಚಣಿಗಾಗಿ ಪರಿಗಣಿಸಬಹುದೆ? ಆಗಿದ್ದಲ್ಲಿ ಮನವಿ ಸಲ್ಲಿಸಬೇಕೆ?
| ಅಂಜನಾಚಾರಿ ತುಮಕೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ನಿಯಮ ‘247ಎ’ರಂತೆ 2012 ಫೆಬ್ರವರಿ 15ರ (ಅಧಿಸೂಚನೆ ಸಂಖ್ಯೆ ಎಫ್ಡಿ 4 ಎಸ್ಆರ್ಎ 2010) ತಿದ್ದುಪಡಿಯಂತೆ, ಈ ದಿನಾಂಕದ ನಂತರ ನಿವೃತ್ತರಾಗುವ, ಮೂವತ್ತು ವರ್ಷಗಳ ವಯಸ್ಸಿನ ನಂತರ ಸರ್ಕಾರಿ ಸೇವೆಗೆ ಸೇರಿದ್ದರೂ ಅರ್ಹದಾಯಿಕ ಸೇವೆಗೆ ಎರಡು ವರ್ಷಗಳ ವಿಶೇಷ ಸೇರ್ಪಡೆಯನ್ನು ಸೇರಿಸಲು ಸೂಚಿಸಿದೆ. ಆದ್ದರಿಂದ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಈ ಹೆಚ್ಚುವರಿ ಸೇರ್ಪಡೆಗೆ ಮನವಿ ಸಲ್ಲಿಸಿದ್ದರೆ ಹೆಚ್ಚುವರಿ ಪಿಂಚಣಿಯ ಸೌಲಭ್ಯವು ಸಿಗುತ್ತದೆ.
***
09.12.2017.
ನಾನು 1997ರ ಜನವರಿ 13ರಂದು ಪ್ರಾಥಮಿಕ ಶಾಲಾಶಿಕ್ಷಕನಾಗಿ ಕೆಲಸಕ್ಕೆ ಸೇರಿದೆ. ನನಗೆ ವಾರ್ಷಿಕ ಬಡ್ತಿ ಜನವರಿ ತಿಂಗಳಿಗೆ ಬರುತ್ತಿತ್ತು. ನನಗಿಂತ ಕಡಿಮೆ ಸೇವೆಯಲ್ಲಿರುವ ಶಿಕ್ಷಕರಿಗೆ ಒಂದು ಇನ್ಕ್ರಿಮೆಂಟ್ ವೇತನ ಜಾಸ್ತಿ ಪಡೆಯುತ್ತಿರುವುದರಿಂದ, ನನಗೂ ಸಹ ಸ್ಟೆಪ್ಅಪ್ ಮಾಡಿ, ವಾರ್ಷಿಕ ಬಡ್ತಿಯನ್ನು ಪ್ರತಿವರ್ಷ ಮೇ ತಿಂಗಳಿಗೆ ಹಾಕುತ್ತಿದ್ದಾರೆ. ನಾನು 2011ರ ಫೆಬ್ರವರಿ 21ರಿಂದ ಡಿಸೆಂಬರ್ 6ರವರೆಗೆ ಅಂದರೆ 9 ತಿಂಗಳು 15 ದಿನ ಬಿ.ಇಡಿ. ತರಬೇತಿಯ ಉನ್ನತ ವ್ಯಾಸಂಗಕ್ಕಾಗಿ ನಾನು ವೈಯಕ್ತಿಕವಾಗಿ ಇಲಾಖಾ ಅನುಮತಿ ಪಡೆದು ವೇತನ ರಹಿತ ರಜೆ ಪಡೆದಿದ್ದು, ವ್ಯಾಸಂಗ ಮುಗಿಸಿದ್ದೇನೆ. ಆದ್ದರಿಂದ ನನಗೆ ವಾರ್ಷಿಕ ಬಡ್ತಿ, 15 ವರ್ಷದ ಬಡ್ತಿ, 20 ವರ್ಷದ ವಿಶೇಷ ವೇತನ ಬಡ್ತಿ ಯಾವ ತಿಂಗಳು, ವರ್ಷಕ್ಕೆ ಬರುತ್ತದೆ?
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ನಿಯಮ ‘55 ಎ’ರಂತೆ ನಿಮ್ಮ ಬಿ.ಇಡಿ. ವ್ಯಾಸಂಗಕ್ಕೆ ಪಡೆದ 9 ತಿಂಗಳು 15 ದಿವಸಗಳಷ್ಟು ವೇತನರಹಿತ ರಜೆಯನ್ನು ಲೆಕ್ಕಕ್ಕಿಲ್ಲದ ಅವಧಿ (ಕರ್ತವ್ಯವಲ್ಲದ) ಎಂದು ಪರಿಗಣಿತವಾಗಿದ್ದರೆ, ನಿಮಗೆ 2012ರ ಅಕ್ಟೋಬರ್ ತಿಂಗಳಿನಲ್ಲಿ 15 ವರ್ಷದ ಸ್ವಯಂಚಾಲಿತ ವೇತನ ಬಡ್ತಿ ಹಾಗೂ 2017ರ ಅಕ್ಟೋಬರ್ನಲ್ಲಿ 20 ವರ್ಷದ ವಿಶೇಷ ವೇತನ ಬಡ್ತಿ ಮುಂದೂಡಿ ನೀಡಲಾಗುತ್ತದೆ.
***
08.12.2017.
ನಾನು ದಿನಾಂಕ 30.4.2008ರಂದು ವಯೋನಿವೃತ್ತಿ ಹೊಂದಿದ್ದೇನೆ. ಮಂಜೂರಾಗಿ ಬಂದ ನಿವೃತ್ತಿ ವೇತನದಲ್ಲಿ ರೂ. 3687/-ನ್ನು ಮಾರಿಕೊಂಡಿದ್ದೇನೆ. ಅದಕ್ಕೆ ರೂಪಾಯಿ 4,62,792 ಅನ್ನೂ (ಕಮುಟೆಡ್ ಪೆನ್ಷನ್) ಪಾವತಿಸಿದ್ದಾರೆ. ನನ್ನ ನಿವೃತ್ತಿ ವೇತನದಲ್ಲಿ ಪ್ರತಿ ತಿಂಗಳು 3,687/- ರೂ. ಕಟಾಯಿಸಿ ಪಾವತಿಸುತ್ತಾರೆ. ಹೀಗೆ ಕಮುಟೇಶನ್ ಮತ್ತು 15 ವರ್ಷಗಳಲ್ಲಿ ರೂಪಾಯಿ 6,63,660/- ಸರ್ಕಾರಕ್ಕೆ ಜಮಾ ಆಗುತ್ತದೆ. ಯಾವ ನಿಯಮದಡಿ ನಾನು ಪಡೆದ ಮೊತ್ತಕ್ಕಿಂತ ಹೆಚ್ಚಿಗೆ ಕಟಾಯಿಸುತ್ತಾರೆ?
| ಶಿವನಗೌಡ ರಾಯಚೂರು.
ಕರ್ನಾಟಕ ಸರ್ಕಾರಿ ಸೇವಾನಿಯಮಗಳು ನಿಯಮ 376(2)ರಂತೆ ನಿವೃತ್ತನಾಗುವ ಸರ್ಕಾರಿ ನೌಕರನು ತನ್ನ ನಿವೃತ್ತಿ ವೇತನದ 1/3 ಭಾಗದಷ್ಟು ಪರಿವರ್ತನೆ ಮಾಡಿಕೊಳ್ಳಲು ಇಚ್ಛೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಘೊಷಿಸಬೇಕು. ಹೀಗೆ ಮಂಜೂರಾದ ಪರಿವರ್ತನಾ ಮೌಲ್ಯದ ಮೊಬಲಗನ್ನು ಸ್ವೀಕರಿಸಿದ ದಿನಾಂಕದಿಂದ ನಿಯಮ 376(14)ರಂತೆ 15 ವರ್ಷಗಳಲ್ಲಿ ಪಿಂಚಣಿಯಿಂದ ಕಟಾಯಿಸಲಾಗುತ್ತದೆ. ಈ ಸೌಲಭ್ಯವು ನಿವೃತ್ತಿದಾರನಿಗೆ ಕಡಿಮೆ ಬಡ್ಡಿದರದಲ್ಲಿ ನೀಡುವ ಆವೃತ್ತಿಕವಾದ ಸಾಲವಾಗಿರುತ್ತದೆ.
****
07.12.2017.
1986ರಿಂದ 2013ರವರೆಗೆ ಒಂದು ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿದ್ದೆ. ಅದಕ್ಕೂ ಮೊದಲು ಏಳು ವರ್ಷ ಮಹಾರಾಷ್ಟ್ರದಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದು ಅದನ್ನು ಪರಿಗಣಿಸಿ ಕರ್ನಾಟಕ ಸರ್ಕಾರದಿಂದ ನೇಮಕಾತಿ ದಿನದಿಂದಲೇ ನೇರವಾಗಿ ಪ್ರಾಂಶುಪಾಲರನ್ನಾಗಿ ಅನುಮೋದನೆ ಆಗಿದೆ. ಆದರೆ ಕಾಲೇಜು ವೇತನ ಅನುದಾನಕ್ಕೆ ಒಳಪಟ್ಟಿದ್ದು 1989ರಲ್ಲಿ. ಹೀಗಾಗಿ ನಿವೃತ್ತಿ ವೇತನಕ್ಕೆ ಅನುದಾನರಹಿತ ಅವಧಿ ಪರಿಗಣಿಸಲ್ಪಟ್ಟಿಲ್ಲ. ನನ್ನ ಹಿಂದಿನ ಏಳು ವರ್ಷ ಸೇವೆ ಪಿಂಚಣಿ ಸೌಲಭ್ಯಗಳಿಗೆ ಅರ್ಹವೆ?
| ವಾದಿರಾಜ ನವರತ್ನ ರಾಣಿಬೆನ್ನೂರು
ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ (ವೇತನ, ಪಿಂಚಣಿ ಮತ್ತು ಇತರ ಸೌಲಭ್ಯಗಳ ವಿನಿಯಮನ) ಅಧಿನಿಯಮ 2014ರಡಿಯಲ್ಲಿ ನ್ಯಾಯಾಲಯಗಳ ಆದೇಶಗಳ ಆಧಾರದ ಮೇಲೆ ಪ್ರಕರಣ 3ರಡಿಯಲ್ಲಿ ಸಂಸ್ಥೆ/ಹುದ್ದೆಯು ಸರ್ಕಾರಿ ಅನುದಾನಕ್ಕೆ ಒಳಪಟ್ಟ ದಿನಾಂಕದಿಂದ ಸೇವಾ ಸೌಲಭ್ಯಗಳಿಗೆ ಅರ್ಹರಾಗುತ್ತಾರೆ. ಅಲ್ಲದೆ ನೀವು ಬೇರೆ ರಾಜ್ಯದಲ್ಲಿ ಸಲ್ಲಿಸಿದ ಸೇವೆಯು ಸೇರಿದಂತೆ ಅನುದಾನರಹಿತ ಸೇವಾವಧಿಯು ಪಿಂಚಣಿ ಸೌಲಭ್ಯಗಳಿಗೆ ಅರ್ಹವಾಗುವುದಿಲ್ಲ.

06.12.2017.
ನಾನು ಎಸ್ಎಸ್ಎಲ್ಸಿ ಪಾಸಾಗಿದ್ದು, 1994ರಿಂದ ಇಲ್ಲಿಯವರೆಗೆ ಚೌಡಾಪುರ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದುವರೆಗೆ ಎಸ್ಎಸ್ಎಲ್ಸಿ ಪಾಸಾದವರಿಗೆ ಗ್ರೇಡ್-2 ಕಾರ್ಯದರ್ಶಿಗೆ ಬಡ್ತಿ ನೀಡುತ್ತ ಬಂದಿರುತ್ತಾರೆ. ಆದರೆ 2017ರಿಂದ ಪಿಯುಸಿ ದ್ವಿತೀಯ ಪಾಸಾದವರಿಗೆ ಮಾತ್ರ ಬಡ್ತಿ ನೀಡುತ್ತಾರೆಂದು ಹೇಳುತ್ತಾರೆ. ನಾನು ಗ್ರೇಡ್-2 ಕಾರ್ಯದರ್ಶಿಗೆ ಬಡ್ತಿ ಹೊಂದಲು ಅರ್ಹನಾಗಿರುತ್ತೇನೆಯೆ?
| ಹಾಲಸ್ವಾಮಿ ಬಳ್ಳಾರಿ.
ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್20ಎಸ್ಸಿಆರ್ 2014 ದಿನಾಂಕ 21-4-2014ರ ಮೇರೆಗೆ ಈ ದಿನಾಂಕಕ್ಕೂ ಮೊದಲು ಸರ್ಕಾರಿ ಸೇವೆಗೆ ಸೇರಿ, ಅರ್ಹ ವಿದ್ಯಾರ್ಹತೆ ಪಡೆದಿದ್ದರೆ ಪದೋನ್ನತಿಗೆ ಅರ್ಹರಾಗುತ್ತಾರೆ. ಆದ್ದರಿಂದ ನಿಮ್ಮ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಯಂತೆ ಅರ್ಹತೆ ಹೊಂದಿದ್ದರೆ ಪದೋನ್ನತಿ ಹೊಂದಬಹುದು.
***
05.12.2017.
ನಾನು ಸರ್ಕಾರಿ ನೌಕರನಾಗಿದ್ದು, ಬಿಡುವಿನ ವೇಳೆಯಲ್ಲಿ ಯಾವುದಾದರೂ ವ್ಯಾಪಾರ ಅಥವಾ ವ್ಯವಹಾರದಲ್ಲಿ ತೊಡಗುವುದಕ್ಕೆ ಸರ್ಕಾರದ ಅಥವಾ ನೇಮಕ ಪ್ರಾಧಿಕಾರದ ಅನುಮತಿ ಅವಶ್ಯವೆ? ಸೂಕ್ತ ಸಲಹೆ ನೀಡಿ.
| ಶಿವಶರಣಪ್ಪ ರಾಯಚೂರು.
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966 ನಿಯಮ 16ರಂತೆ ಯಾವ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಯಾವುದೇ ರೀತಿಯ ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ತೊಡಗಿಸಿಕೊಳ್ಳತಕ್ಕದ್ದಲ್ಲವೆಂದು ತಿಳಿಸಲಾಗಿದೆ. ಆದ್ದರಿಂದ ಸರ್ಕಾರಿ ನೌಕರನು ಯಾವುದೇ ಲಾಭ ಪಡೆಯಲು ಅಥವಾ ಪಾಲು ಪಡೆಯಲು ತೊಡಗುವ ಚಟುವಟಿಕೆಗಳು ವ್ಯಾಪಾರ ಅಥವಾ ವ್ಯವಹಾರವಾಗಿರುತ್ತದೆ. ಆದ್ದರಿಂದ ನೀವು ನಿಮ್ಮ ನೇಮಕ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ತೊಡಗುವಂತಿಲ್ಲ.
****
04.12.2017.
ನಾನು ಅನಾರೋಗ್ಯದ ನಿಮಿತ್ತ ದಿನಾಂಕ 1-1-2016ರಿಂದ 31-3-2017ರವರೆಗೆ ವೈದ್ಯಕೀಯ ಆಧಾರದ ಮೇರೆಗೆ ಕೆ.ಸಿ.ಎಸ್.ಆರ್. 106(ಎ) ಪ್ರಕಾರ ನನ್ನ ಹಕ್ಕಿನಲ್ಲಿ ಯಾವುದೇ ರಜೆ ಇಲ್ಲದ್ದರಿಂದ ವೇತನರಹಿತ ರಜೆ ಪಡೆದಿರುತ್ತೇನೆ. ಆದರೆ ದಿನಾಂಕ 1-1-2016ರಿಂದ 31-3-2017ರ ಅವಧಿಗೆ ನನ್ನ ಹಕ್ಕಿನ ರಜೆಯಾದ, ಗಳಿಕೆ ರಜೆ ಹಾಗೂ ಅರ್ಧವೇತನ ರಜೆ ಪ್ರಾಪ್ತವಾಗುವುದೆ?
| ಹರೇಂದ್ರಕುಮಾರ ಹಾಸನ.
ಕರ್ನಾಟಕ ಸರ್ಕಾರಿ ಸೇವಾನಿಯಮ 112(6)ರಂತೆ ಯಾವುದೇ ಅರ್ಧ ವರ್ಷದಲ್ಲಿ ಸರ್ಕಾರಿ ನೌಕರನು ವೇತನರಹಿತ ಅಸಾಧಾರಣ ರಜೆ ಮೇಲಿದ್ದರೆ ಮುಂದಿನ ಅರ್ಧ ವರ್ಷದಲ್ಲಿ 15 ದಿನ ಜಮೆ ಮಾಡುವಾಗ ಅಂತಹ ಗೈರು ಹಾಜರಾತಿ ಅವಧಿಯು 1 / 10ರಷ್ಟು ಕಳೆಯಲಾಗುವುದು. ಅಲ್ಲದೆ ನಿಯಮ 114ರಂತೆ ಗೈರುಹಾಜರಿ ಅವಧಿಯನ್ನು ಲೆಕ್ಕಕ್ಕಿಲ್ಲದ ಅವಧಿ ಅಥವಾ ಕರ್ತವ್ಯವಲ್ಲದ ರಜೆಯೆಂದು ಪರಿಗಣಿಸಿದರೆ, ಮುಂದಿನ ಅರ್ಧ ವರ್ಷದ ಅವಧಿಯಲ್ಲಿ ಅರ್ಧವೇತನ ಖಾತೆಗೆ ಲೆಕ್ಕಕ್ಕಿಲ್ಲದ ಅವಧಿಯ 1 / 18 ಭಾಗದಷ್ಟು 10 ದಿನಗಳಿಗೆ ಮೀರದಂತೆ ಕಳೆಯಲಾಗುತ್ತದೆ. ಆದ್ದರಿಂದ ನಿಮ್ಮ ಗೈರುಹಾಜರಾಗಿ ನಿಮಗೆ ಗಳಿಕೆ ರಜೆ ಲಭ್ಯವಾಗುವುದಿಲ್ಲ.
***
3-12-2017
ನಾನು ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಕಿರಿಯ ತರಬೇತಿ ಅಧಿಕಾರಿಯಾಗಿ 16.4.1998ರಂದು ಸೇರಿದೆ. ಕೆಲಸಕ್ಕೆ ಸೇರಿದಾಗ ನನ್ನ ವಯಸ್ಸು 41. 31.5.2017ರಂದು ನಿವೃತ್ತನಾದೆ. ನನ್ನ ಮೂಲವೇತನ ರೂ. 30,400/-. 1976ರಿಂದ 1991ರವರೆಗೆ 15 ವರ್ಷ ಮಿಲಿಟರಿ ಸೇವೆ ಸಲ್ಲಿಸಿ ಪಿಂಚಣಿ ಪಡೆಯುತ್ತಿದ್ದೇನೆ. ನಿವೃತ್ತಿಯ ನಂತರ ಎಷ್ಟು ವರ್ಷ ವಿಶೇಷ ಸೇರ್ಪಡೆ ಹಾಗೂ ಮೂಲವೇತನ ಸಿಗುತ್ತದೆ?

| ಬಸವರಾಜ ದಾವಣಗೆರೆ.
ಕ.ಸ.ಸೇ.ನಿ. ನಿಯಮ 248 ಬಿ(1)ಯಂತೆ ನೇಮಕಾತಿ ನಿಯಮಗಳಿಗನುಸಾರ ಮಾಜಿ ಸೈನಿಕರು 30 ವರ್ಷಗಳ ನಂತರ ರಾಜ್ಯ ಸರ್ಕಾರಿ ಸೇವೆಗೆ ಸೇರಿದಾಗ ಸೈನಿಕ ಪಿಂಚಣಿ ಪಡೆಯುವ ಹಿಂದಿನ ಸೈನಿಕ ಸೇವೆ ಗಣನೆಗೆ ತೆಗೆದುಕೊಳ್ಳಲು ಅನುಮತಿಸದಿದ್ದರೆ, ಗರಿಷ್ಠ ನಾಲ್ಕು ವರ್ಷ ಅರ್ಹತಾದಾಯಕ ಸೇವೆಗೆ ಸೇರಿಸಲು ಸೂಚಿಸಿದೆ. ನಿಮಗೆ 19 ವರ್ಷ ರಾಜ್ಯ ಸರ್ಕಾರಿ ಸೇವೆ, ವಿಶೇಷ ಸೇರ್ಪಡೆ ನಾಲ್ಕು ವರ್ಷ ಸೇರಿ ಒಟ್ಟು
23 ವರ್ಷಗಳಷ್ಟಾಗುತ್ತದೆ. ನಿಮಗೆ ಮಾಸಿಕ ಪಿಂಚಣಿ ರೂ. 10,594 ಮತ್ತು ತುಟ್ಟಿಭತ್ಯೆ ಲಭ್ಯವಾಗುತ್ತದೆ. 3,49,600 ರೂ. ಉಪದಾನ ಹಾಗೂ 4,29,835 ರೂ. ಕಮ್ಯುಟೇಷನ್ ಒಂದೇ ಇಡಿಗಂಟಿನಲ್ಲಿ ದೊರಕುತ್ತದೆ.
23 ವರ್ಷಗಳಷ್ಟಾಗುತ್ತದೆ. ನಿಮಗೆ ಮಾಸಿಕ ಪಿಂಚಣಿ ರೂ. 10,594 ಮತ್ತು ತುಟ್ಟಿಭತ್ಯೆ ಲಭ್ಯವಾಗುತ್ತದೆ. 3,49,600 ರೂ. ಉಪದಾನ ಹಾಗೂ 4,29,835 ರೂ. ಕಮ್ಯುಟೇಷನ್ ಒಂದೇ ಇಡಿಗಂಟಿನಲ್ಲಿ ದೊರಕುತ್ತದೆ.
***
02.12.2017.
ನನ್ನ ಪತಿ ಸರ್ಕಾರಿ ನೌಕರರಾಗಿದ್ದು 26 ವರ್ಷ ಸೇವೆ ಸಲ್ಲಿಸಿ ಎಸಿಬಿಯಿಂದ ಟ್ರಾಪ್ಕೇಸಿಗೆ ಸಿಲುಕಿ 2-6-2017ರಿಂದ ಅಮಾನತುಗೊಂಡು ಒಂದು ತಿಂಗಳು ಜೈಲುವಾಸ ಅನುಭವಿಸಿ, ನಂತರ ಮಾನಸಿಕ ಖಿನ್ನತೆ ಒಳಗಾಗಿ 20-10-2017ರಂದು ನಿಧನರಾದರು. ನ್ಯಾಯಾಲಯದ ವಿಚಾರಣೆ ಪೂರ್ಣವಾಗದ ಕಾರಣ 2-6-2017ರಿಂದ ನಿಧನದ ದಿನಾಂಕದವರೆಗೆ ಪೂರ್ಣವೇತನ, ಭತ್ಯೆ ಲಭ್ಯವಾಗುವುದೇ? ಪಿಂಚಣಿ ಸೌಲಭ್ಯ ಸಿಗುವುದೇ? 44 ವರ್ಷದ ಪದವೀಧರೆಯಾದ ನನಗೆ ಅನುಕಂಪದ ನೌಕರಿ ಕೊಡುತ್ತಾರೆಯೇ?
| ಸೌಭಾಗ್ಯಲಕ್ಷ್ಮೀ ಮಂಡ್ಯ.
ಕರ್ನಾಟಕ ಸರ್ಕಾರಿ ಸೇವಾ ನಡತೆ ನಿಯಮ 100(2) ರಂತೆ ಅಮಾನತಿನಲ್ಲಿರುವ ಸರ್ಕಾರಿ ನೌಕರನು ಅವನ ವಿರುದ್ಧವಿರುವ ಶಿಸ್ತಿನ ಇಲಾಖಾ ಅಥವಾ ನ್ಯಾಯಾಲಯದ ವಿಚಾರಣೆ ಪೂರ್ಣವಾಗುವ ಮೊದಲು ಮೃತನಾದರೆ ಅವನ ಕುಟುಂಬಕ್ಕೆ ಅಮಾನತಿನ ಅವಧಿಯಲ್ಲಿ ಪೂರ್ಣವೇತನ ಮತ್ತು ಭತ್ಯೆಗಳನ್ನು ನೀಡಲು ಸೂಚಿಸಿದೆ. ಇದೇ ನಿಯಮಾವಳಿಯಂತೆ ಮರಣ ಉಪದಾನ, ಕುಟುಂಬ ಪಿಂಚಣಿ ಸೌಲಭ್ಯಗಳಲ್ಲದೆ, ನಿಮಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿಯೂ ಲಭ್ಯವಾಗುತ್ತದೆ.
30.11.2017.ಇಲಾಖಾ ವಿಚಾರಣಾಧಿಕಾರಿಗಳು ಆರೋಪ ಸಾಬೀತಾಗಿದೆ ಎಂದು ತಿಳಿಸಿ ವಿಧಿಸುವ ದಂಡನೆಯನ್ನು ಶಿಫಾರಸ್ಸು ಮಾಡಬಹುದೇ ?
| ಬಿ.ಎಸ್. ಶಂಕರ್ ಚಿಕ್ಕಮಗಳೂರು
ಇಲಾಖಾ ವಿಚಾರಣಾ ಸಮಿತಿಯು ವಾಸ್ತವಾಂಶವನ್ನು ಕಂಡುಹಿಡಿಯುವ ಸಮಿತಿ ಮಾತ್ರ ಪ್ರತಿವಾದಿ ವಿರುದ್ಧ ವಿಧಿಸಬಹುದಾದ ದಂಡನೆಯನ್ನು ಶಿಫಾರಸ್ಸು ಮಾಡುವ ವ್ಯಾಪ್ತಿಯಾಗಲಿ ಅಥವಾ ಅಧಿಕಾರವಾಗಲಿ ವಿಚಾರಣಾ ಸಮಿತಿಗೆ ಇಲ್ಲವೆಂದು ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ 1957ರ ನಿಯಮ 14(ಬಿ) ಅಡಿಯಲ್ಲಿ ಅಧಿಕಾರವಿರುವುದಿಲ್ಲ. ದೋಷತ್ವ ನಿರ್ಧರಿಸುವುದು ಮತ್ತು ದಂಡನೆಯನ್ನು ನಿರ್ಧರಿಸುವುದು ಪೂರ್ಣವಾಗಿ ಶಿಸ್ತು ಪ್ರಾಧಿಕಾರದ ತೀರ್ವನಕ್ಕೆ ಒಳಪಟ್ಟಿದ್ದು ಎಂದು ಜೆಜೆ ಮೋದಿ ್ಖಠ ಸ್ಟೇಟ್ ಆಫ್ ಗುಜರಾತ್ (ಎಐಆರ್ 1962 ಗುಜರಾತ್ 197) ಪ್ರಕರಣದಲ್ಲಿ ಸರ್ವೇಚ್ಚ ನ್ಯಾಯಾಲಯವು ಹೇಳಿದೆ.
***
29.11.2017.
ನಾನು 2018ರ ಮೇ ತಿಂಗಳಿನಲ್ಲಿ ವಯೋನಿವೃತ್ತಿ ಹೊಂದಲಿದ್ದು ಮುಂದಿನ ವರ್ಷ ಮೇ ತಿಂಗಳಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದೇ ?
ನಾನು 2018ರ ಮೇ ತಿಂಗಳಿನಲ್ಲಿ ವಯೋನಿವೃತ್ತಿ ಹೊಂದಲಿದ್ದು ಮುಂದಿನ ವರ್ಷ ಮೇ ತಿಂಗಳಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದೇ ?
| ನಾರಾಯಣಸ್ವಾಮಿ ಚಿಕ್ಕಬಳ್ಳಾಪುರ.
ಸರ್ಕಾರಿ ನೌಕರ ಯಾವುದೇ ವಿಧಾನಮಂಡಲದ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ . ಎಂದು ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 5 ಸೂಚಿಸುತ್ತದೆ. ಅಲ್ಲದೆ ಸರ್ಕಾರಿ ನೌಕರನು ಚುನಾವಣೆಯಲ್ಲಿ ಸ್ಪರ್ಧಿಸುವುದು ಮೂಲಭೂತ ಹಕ್ಕಲ್ಲವೆಂದು ಜಾವೇದ್ ್ಖಠ ಸ್ಟೇಟ್ ಆಫ್ ಹರಿಯಾಣ ಪ್ರಕರಣದಲ್ಲಿ ಸರ್ವೇಚ್ಚ ನ್ಯಾಯಾಲಯವು ಹೇಳಿದೆ. ಆದರೆ ಸರ್ಕಾರಿ ನೌಕರನಾದ ನೀವು ಸ್ವಯಂ ನಿವೃತ್ತಿಯನ್ನು ಮೊದಲೇ ಪಡೆದು ಚುನಾವಣೆಗೆ ಸ್ಪರ್ಧಿಸಲು ಯಾವುದೇ ತೊಂದರೆ ಇರುವುದಿಲ್ಲ.
***
28.11.2017.
ದಿನಾಂಕ 1-2-1985ರಿಂದ ದಿನಗೂಲಿ ನೌಕರನಾಗಿ ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು 2012ರಲ್ಲಿ ನಮ್ಮನ್ನು ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರೆಂದು ಪರಿಗಣಿಸಿರುವುದರಿಂದ ಸರ್ಕಾರ ಇದುವರೆಗೂ ನಮಗೆ ಗಳಿಕೆ ರಜೆಯ ವೇತನವನ್ನು ನಗದೀಕರಣಗೊಳಿಸಿರುವುದಿಲ್ಲ. ಆದುದರಿಂದ ನಮಗೆ ಗಳಿಕೆ ರಜೆಯ ವೇತನ ಸೌಲಭ್ಯವನ್ನು ನಗದೀಕರಣಗೊಳಿಸಿ ಮಂಜೂರು ಮಾಡಬಹುದೇ? ದಯವಿಟ್ಟು ತಿಳಿಸಿ.
| ಎಂ. ವೀರಯ್ಯ ಮಳವಳ್ಳಿ.
ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿಯಲ್ಲಿ ಕೆಲಸ ಮಾಡುತ್ತಿರುವ ನೌಕರರು ಕಾಯಂ ನೌಕರರಲ್ಲ. ಅವರುಗಳಿಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಅನ್ವಯವಾಗುವುದಿಲ್ಲ. ಆದ್ದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 118ರ ಮೇರೆಗೆ ರಜೆ ನಗದೀಕರಣ ಸೌಲಭ್ಯ ನೀಡಬಾರದೆಂದು ದಿನಾಂಕ 27-7-2017 ರ ಸರ್ಕಾರಿ ಸುತ್ತೋಲೆ ಸಂಖ್ಯೆ ಡಿಪಿಎಆರ್ 22 ಎಸ್ಎಲ್ಸಿ 2017ರಲ್ಲಿ ಸೂಚಿಸಲಾಗಿದೆ. ಆದ್ದರಿಂದ ನೀವು ರಜೆ ನಗದೀಕರಣಕ್ಕೆ ಅರ್ಹರಾಗುವುದಿಲ್ಲ.
***
27.11.2017.
ಸರಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕನಾಗಿ 7-4-2005 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆ ಅನುಮತಿ ಪಡೆದು ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಹುದ್ದೆಗೆ ಆಯ್ಕೆಯಾಗಿದ್ದು, ನನ್ನ ಹಾಲಿ ವೇತನ ಶ್ರೇಣಿ 14,550-26,700. ನನ್ನ ಪ್ರಸ್ತುತ ಮೂಲವೇತನ 16,800 ರೂ.ಗಳು ಇರುತ್ತದೆ. ಆಯ್ಕೆಯಾದ ಹುದ್ದೆಯ ವೇತನ ಶ್ರೇಣಿ 14,550-26,700 ಇದ್ದು, ಈ ಹುದ್ದೆಗೆ ನೇಮಕಗೊಂಡಲ್ಲಿ ನನಗೆ ದೊರೆಯುವ ಪಿಂಚಣಿ ಸೌಲಭ್ಯಗಳು, ವೇತನ ಸಂರಕ್ಷಣೆ ದೊರಕುತ್ತದೆಯೇ ?
| ರಾಚಪ್ಪ ಎಸ್.ವಿ. ಕೂಡ್ಲಿಗಿ ತಾ|, ಬಳ್ಳಾರಿ ಜಿಲ್ಲೆ.
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ನಿಯಮ 41ಎ ಪ್ರಕಾರ ನೀವು ವಾರ್ಡನ್ ಹುದ್ದೆಗೆ ಸೇರಿದರೆ ವೇತನ ರಕ್ಷಣೆ ದೊರಕುತ್ತದೆ. ನಿಯಮ 224ಬಿ ರಂತೆ ನೀವು ಮನವಿ ಸಲ್ಲಿಸಿ ಹಳೆಯ ನಿವೃತ್ತಿ ವೇತನ ಸೌಲಭ್ಯಕ್ಕೆ ಹಿಂದಿನ ಸೇವೆಯನ್ನು ಪರಿಗಣಿಸಲು ನಿಮ್ಮ ಈಗಿನ ನೇಮಕಾತಿ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಿದರೆ ನಿಮ್ಮದು ಪಿಂಚಣಿಯುಕ್ತ ಸೇವಾವಧಿಯಾಗುತ್ತದೆ.
***
26.11.2017.
ದಿನಾಂಕ 29-7-1993 ರಂದು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದಾಗ ನನ್ನ ವಯಸ್ಸು 37 ವರ್ಷ ಆಗಿದ್ದವು. ಬಡ್ತಿ ಮುಖ್ಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿ ದಿನಾಂಕ 31-5-2016 ರಂದು ನಿವೃತ್ತಿ ಹೊಂದಿದ್ದೇನೆ. ಒಟ್ಟು ನಾನು ಕಾರ್ಯ ನಿರ್ವಹಿಸಿದ್ದು 22 ವರ್ಷ, 10 ತಿಂಗಳು, 2 ದಿನ ಸೇವಾ ಅವಧಿ ಸಿಕ್ಕಿದೆ. ಆದ್ದರಿಂದ ನಿವೃತ್ತಿ ವೇತನಕ್ಕಾಗಿ ಹೆಚ್ಚುವರಿ ಎಷ್ಟು ಅಧಿಕ ವರ್ಷ ಅರ್ಹದಾಯಕ ಸೇವೆಯನ್ನು ಪಿಂಚಣಿ ಉದ್ದೇಶಕ್ಕಾಗಿ ಪರಿಗಣಿಸಬಹುದು?
| ಬಿ.ಕೆ. ನಾಗಪ್ಪ ಹುಲ್ಲೇಹಾಳ್, ಚಿತ್ರದುರ್ಗ.
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ನಿಯಮ 247ಎ ಪ್ರಕಾರ ದಿನಾಂಕ 15-2-2012ರ ನಂತರ ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ ಎರಡು ವರ್ಷ ಹೆಚ್ಚುವರಿಯಾಗಿ ಅರ್ಹತಾದಾಯಕ ಸೇವೆಗೆ ಸೇರ್ಪಡೆ ಮಾಡಲಾಗುತ್ತದೆ. ಆದ್ದರಿಂದ ನಿಮ್ಮ ಒಟ್ಟು ಅರ್ಹತಾದಾಯಕ ಸೇವೆ 25 ವರ್ಷವಾಗಲಿದ್ದು , ಈ ಬಗ್ಗೆ ಮನವಿಯನ್ನು ನಿಮ್ಮ ನೇಮಕ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
***
25.11.2017.
ನಮ್ಮ ತಂದೆಯವರು ಮಾಧ್ಯಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ 1998ರಂದು ನಿವೃತ್ತಿಹೊಂದಿ, 2006ರಲ್ಲಿ ತೀರಿಕೊಂಡಿದ್ದಾರೆ. ತಾಯಿಯವರು ಕುಟುಂಬ ಪಿಂಚಣಿ ಪಡೆಯುತ್ತಿದ್ದಾರೆ. ತಂದೆಯವರಿಗೆ ಮೂರು ಗಂಡುಮಕ್ಕಳು ಹಾಗೂ ಎರಡು ಹೆಣ್ಣುಮಕ್ಕಳು ಇದ್ದಾರೆ. ಎರಡನೆ ಮಗ ಪೂರ್ಣ ಅಂಗವೈಕಲ್ಯ ಹೊಂದಿರುತ್ತಾನೆ. ತಾಯಿಯ ಮರಣದ ಬಳಿಕ ಈತನಿಗೆ ಕುಟುಂಬ ಪಿಂಚಣಿ ಬರುವುದಾ?
| ಹನುಮಂತರಾಯಪ್ಪ ಬಂದಕುಂಟೆ, ಸಿರಾ.
ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ) ವೇತನ ನಿಯಮಗಳು 2002ರ ನಿಯಮ 9(ಡಿ) ಪ್ರಕಾರದ ಸರ್ಕಾರಿ ನೌಕರನ ಮಗ / ಮಗಳು ಯಾವುದೇ ಮನೋವೈಕಲ್ಯ ಅಥವಾ ಜೀವನ ನಿರ್ವಹಣೆ ಮಾಡಲು ಅಸಮರ್ಥವಾಗಿಸಿದ ದೈಹಿಕ ವಿಕಲತೆಯಿಂದ ಬಳಲುತ್ತಿದ್ದರೆ ಅಂಥವರ ಹೆಸರಿಗೆ ಮತ್ತು ಜೀವಿತ ಅವಧಿವರೆಗೆ ಕುಟುಂಬ ವೇತನವನ್ನು ನೀಡತಕ್ಕದ್ದೆಂದು ತಿಳಿಸಿದೆ. ಆದ್ದರಿಂದ ನಿಮ್ಮ ತಾಯಿ ನಿಧನಾನಂತರ ನಿವೃತ್ತಿವೇತನ ನೀಡಲು ಈಗಲೇ ಅಂಗವಿಕಲತೆ ಪ್ರಮಾಣ ಪತ್ರದೊಂದಿಗೆ ಮಹಾಲೇಖಪಾಲರಿಗೆ (ಅಎ) ಸಕ್ಷಮ ಪ್ರಾಧಿಕಾರದ ಮೂಲಕ ಮನವಿಯನ್ನು ಸಲ್ಲಿಸಬೇಕು.
***
24.11.2017.
ನಾನು 2-4-2005 ರಂದು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ್ದು ಅನುಮತಿ ಪಡೆದು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಹುದ್ದೆಗೆ ಅರ್ಜಿ ಸಲ್ಲಿಸಿದೆ. ನಾನು 15-5-2015 ರಂದು ನನ್ನ ಇಂದಿನ ಸೇವೆಯನ್ನು ನಿವೃತ್ತಿ ವೇತನಕ್ಕಾಗಿ ಪರಿಗಣಿಸಲು ಮನವಿಯನ್ನು ಸಲ್ಲಿಸಿದಾಗ ಸಕ್ಷಮ ಅಧಿಕಾರಿಯವರು 31-7-2014ರೊಳಗೆ ಸಲ್ಲಿಸದೆ ಇರುವುದರಿಂದ ನಿಮ್ಮ ಸೇವೆಯನ್ನು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಲು ಸಾಧ್ಯವಿಲ್ಲವೆಂದು ತಿರಸ್ಕರಿಸಿರುತ್ತಾರೆ. ಇದು ಸರಿಯೇ ?
| ತಿಪ್ಪೇಸ್ವಾಮಿ, ಕಲಬುರಗಿ.
ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ನಿಯಮ 224ಬಿರಂತೆ ಹಿಂದಿನ ಸೇವೆಯನ್ನು ನಿವೃತ್ತಿ ವೇತನಕ್ಕಾಗಿ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲು 31-7-2014ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು ನಿಯಮ 224ಬಿ(2) ಪ್ರಕಾರ ನೇಮಕ ಪ್ರಾಧಿಕಾರವು ಸೂಕ್ತ ಆದೇಶ ಹೊರಡಿಸುವ ಮುನ್ನ ಕ್ಲೇಮನ್ನು ಸಮರ್ಥಿಸುವ ಸೂಕ್ತ ದಾಖಲೆಗಳೊಂದಿಗೆ ಸರ್ಕಾರದ (ಆರ್ಥಿಕ ಇಲಾಖೆ) ಅನುಮೋದನೆ ಪಡೆಯತಕ್ಕದ್ದೆಂದು ಸೂಚಿಸಿದೆ. ಆದ್ದರಿಂದ ನೀವು ಪುನಃ ಮನವಿ ಸಲ್ಲಿಸಿ ಪರಿಹಾರ ಪಡೆಯಬಹುದು.
***
23.11.2017.
ನಾನು ಶಾಲಾ ಸಹ ಶಿಕ್ಷಕನಾಗಿ 39 ವರ್ಷ ಸೇವೆ ಸಲ್ಲಿಸಿ 31-10-2017ರಂದು ನಿವೃತ್ತಿಯಾಗಿದ್ದೇನೆ. ನನ್ನ ಮೂಲವೇತನ 28,800 ರೂ. ಆಗಿದ್ದು ನನಗೆ ಲಭ್ಯವಾಗುವ ಪಿಂಚಣಿ, ಡಿಸಿಆರ್ಜಿ ಮತ್ತು ಮೊಬಲಗು ಎಷ್ಟು? ಈ ಪಿಂಚಣಿಯೊಂದಿಗೆ, ಆರ್ಪಿ ವೈದ್ಯಕೀಯ ಮತ್ತು ಇತರ ವಿಶೇಷ ಭತ್ಯೆ ಲಭ್ಯವಾಗುವುದೇ ?

| ಗಂಗಯ್ಯ ಮಧುಗಿರಿ, ತುಮಕೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪ್ರಕಾರ ಗರಿಷ್ಟ 33 ವರ್ಷಗಳಷ್ಟು ಸೇವೆ ಸಲ್ಲಿಸಿದ್ದರೆ ಅಂತಿಮ ಉಪಲಬ್ಧದ ಅರ್ಧದಷ್ಟು ಪಿಂಚಣಿಯಾಗಿ ನೀಡುವುದಲ್ಲದೆ ಅದಕ್ಕೆ ಚಾಲ್ತಿಯಲ್ಲಿನ ತುಟ್ಟಿಭತ್ಯೆಯನ್ನು ನೀಡಲಾಗುತ್ತದೆ. ಅಂದರೆ ನಿಮಗೆ ರೂ. 14,400 ಪಿಂಚಣಿ ಮತ್ತು ಅದಕ್ಕೆ ಅನ್ವಯಿತ ತುಟ್ಟಿಭತ್ಯೆ ಸಿಗುತ್ತದೆ. ನಿಯಮಾವಳಿ ಲೆಕ್ಕಾಚಾರದ ಪ್ರಕಾರ ರೂ. 4,75,200 ಡಿಸಿಆರ್ಜಿ ಹಾಗೂ ರೂ. 5,65,056 ಕಮ್ಯೂಟೇಷನ್ ಮೊಬಲಗು ಒಂದೇ ಇಡಿಗಂಟಿನಲ್ಲಿ ಲಭ್ಯ. ಆದರೆ ಪಿಂಚಣಿಯೊಂದಿಗೆ ಮನೆ ಬಾಡಿಗೆ, ಇನ್ನಿತರೆ ಭತ್ಯೆಗಳೆಲ್ಲ ಲಭ್ಯವಾಗುವುದಿಲ್ಲ.
***
22.11.2017.
ನನ್ನ ಪತ್ನಿ 5-5-2017ರಂದು ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೆ ಹಾಜರಾಗಿ 26-5-2007ರಂದು ಆಕಸ್ಮಿಕವಾಗಿ ನಡೆದ ದ್ವಿಚಕ್ರವಾಹನದ ಅಪಘಾತದಲ್ಲಿ ಎಡಗೈ ಮುರಿದುಕೊಂಡಿದ್ದಳು. ಹೀಗಾಗಿ 26-5-2017ರಿಂದ 27-6-2017ರವರೆಗೆ ವೈದ್ಯಕೀಯ ರಜೆ ಪಡೆದಿದ್ದಾಳೆ. ಆದರೆ, ‘ಅವಳ ಖಾತೆಯಲ್ಲಿ ಯಾವುದೇ ರಜೆ ಇಲ್ಲ. ಹಾಗಾಗಿ ಪರಿವೀಕ್ಷಣಾ ಅವಧಿಯನ್ನು ಒಂದು ತಿಂಗಳು ಮುಂದೂಡಲಾಗುವುದು’ ಎಂದು ಮೇಲಧಿಕಾರಿಗಳು ಹೇಳುತ್ತಿದ್ದಾರೆ. ಇದು ರಜೆಯಾಗಿ ಪರಿವರ್ತಿಸಲಾಗದೆ?
| ಸಿ.ಆರ್. ನಾಯ್ಕ್ ರಾಯಚೂರು.
1977ರ ಕರ್ನಾಟಕ ಸರ್ಕಾರಿ ಸೇವೆ (ಪ್ರೊಬೇಷನ್) ನಿಯಮಾವಳಿಯ ನಿಯಮ ಮೂರರಂತೆ ಸರ್ಕಾರಿ ನೌಕರನು ಸೇವೆಗೆ ಸೇರಿದ ದಿನಾಂಕದಿಂದ ಎರಡು ವರ್ಷಗಳನ್ನು (ಎಲ್ಲ ಬಗೆಯ ಅಸಾಧಾರಣ ರಜೆಯೂ ಹೊರತುಪಡಿಸಿ) ಪರಿವೀಕ್ಷಣಾ ಅವಧಿ ಎಂದು ಸೂಚಿಸಿದೆ. ಹೀಗಾಗಿ ವೈದ್ಯಕೀಯ ಕಾರಣಗಳ ಮೇಲೆ ಅಸಾಧಾರಣ ರಜೆಯಲ್ಲಿದ್ದರೂ ಪ್ರೊಬೇಷನ್ ಅವಧಿಯನ್ನು ಒಂದು ತಿಂಗಳ ನಂತರ ಘೊಷಿಸಲಾಗುತ್ತದೆ. ಯಾವುದೇ ರಜೆ ಇಲ್ಲದ ಪ್ರಯುಕ್ತ ಈ ರಜೆಯನ್ನು ಪರಿವರ್ತಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲ.
***
21.11.2017.
ನನ್ನ ಪರಿಚಿತ ಶಿಕ್ಷಕರೊಬ್ಬರು ಜನವರಿ 1984ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿದ್ದು 2006-07ರಲ್ಲಿ ಪದೋನ್ನತಿಯನ್ನು ನಿರಾಕರಿಸಿ ಪುನಃ 2016ರಲ್ಲಿ ಪದೋನ್ನತಿ ಪಡೆದು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರ ಮೂಲ ವೇತನ ರೂ. 29,600 ಹಾಗೂ ಸ್ಥಗಿತ ವೇತನ ಬಡ್ತಿ ರೂ. 800 ನಿಗದಿಯಾಗಿದೆ. ಇವರಿಗೆ ನಿಗದಿಪಡಿಸಿದ ವೇತನ ಸರಿ ಇದೆಯೇ ?
| ಹೇಮಾವತಿ ದೇಶಭಂಡಾರಿ ಕಾರವಾರ.
ದಿನಾಂಕ 18-3-1996ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ3ಎಫ್ಆರ್ಪಿ96ರ ಕಂಡಿಕೆ 3(3)ರ ಪ್ರಕಾರ ಸ್ವಇಚ್ಛೆಯಿಂದ ಪದೋನ್ನತಿಯನ್ನು ಬಿಟ್ಟು ಕೊಡುವ ಅಥವಾ ಮುಂಬಡ್ತಿ ನಂತರ ಸ್ವಇಚ್ಛೆಯ ಮೇರೆಗೆ ಹಿಂದಿನ ಹುದ್ದೆಗೆ ಹಿಂಬಡ್ತಿ ಹೊಂದುವ ಸರ್ಕಾರಿ ನೌಕರರಿಗೆ ಈ ಸ್ಥಗಿತವೇತನ ಬಡ್ತಿ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ. ಆದ್ದರಿಂದ ನೀವು ತಿಳಿಸಿದ ಶಿಕ್ಷಕರಿಗೆ ಮುಖ್ಯೋಪಾಧ್ಯಾಯ ಹುದ್ದೆಗೆ ಮೊದಲು ನಿರಾಕರಿಸಿ, ತದನಂತರ ಪದೋನ್ನತಿ ಹೊಂದಿದ್ದರೂ ನಿಗದಿಪಡಿಸಿದ ವೇತನ ಸರಿಯಾಗಿರುವುದಿಲ್ಲ. ಇವರೂ ಸ್ಥಗಿತವೇತನ ಬಡ್ತಿಗೆ ಅರ್ಹರಲ್ಲ.
***
19-11-2017.
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. 14-5-2007ರಲ್ಲಿ ಸೇವೆಗೆ ಸೇರಿದ್ದೇನೆ. ನಾಲ್ಕು ತಿಂಗಳ ನಂತರ 464 ದಿನಗಳು ವೇತನ ರಹಿತ ರಜೆಯನ್ನು ವೈದ್ಯಕೀಯ ಆಧಾರದ ಮೇಲೆ ಪಡೆದಿರುತ್ತೇನೆ. ಈಗ 10 ವರ್ಷಗಳ ಕಾಲಮಿತಿ ಬಡ್ತಿಗೆ ನನ್ನ ಕಡತವನ್ನು ಕಳುಹಿಸಬೇಕೆಂದಿದ್ದೇನೆ. ನನ್ನ 10 ವರ್ಷಗಳ ಕಾಲಮಿತಿ ಬಡ್ತಿ ಅವಧಿಯು 464 ದಿವಸ ಮುಂದೆ ಹೋಗುತ್ತದೆಯೇ ಅಥವಾ ಇಲ್ಲವೇ ?
| ಉಷಾ ಎಂ., ಹರಿಹರ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 53 (ಬಿ) (ಜಿಜಿ)ರ ಪ್ರಕಾರ ವೈದ್ಯಕೀಯ ಪ್ರಮಾಣ ಪತ್ರದ ಮೇರೆಗೆ ತೆಗೆದುಕೊಂಡ ಅಸಾಧಾರಣ ರಜೆಯು ಹುದ್ದೆಗೆ ಅನ್ವಯಿಸುವ ವೇತನ ಶ್ರೇಣಿಯಲ್ಲಿ ಬಡ್ತಿಗಳಿಗೆ ತೆಗೆದುಕೊಳ್ಳತಕ್ಕದ್ದೆಂದು ಸೂಚಿಸಿದೆ. ಈಗಿರುವ ನಿಮ್ಮ 464 ದಿನಗಳ ಅವಧಿಯನ್ನು ಕರ್ತವ್ಯವೆಂದು ಪರಿಗಣಿಸಿದ್ದಲ್ಲಿ 1983ರ ಕರ್ನಾಟಕ ಸರ್ಕಾರಿ ಸೇವಾ (ಕಾಲಮಿತಿ ಬಡ್ತಿ ) ನಿಯಮಾವಳಿಯ ನಿಯಮ 3ರ ಪ್ರಕಾರ ಸಕಾಲಿಕವಾಗಿ ಈ ಕಾಲಮಿತಿ ಬಡ್ತಿಯನ್ನು ನೀಡಬೇಕಾಗುತ್ತದೆ. ಈ ನಿಮ್ಮ ರಜೆಯನ್ನು ಕರ್ತವ್ಯವಲ್ಲದ ಅವಧಿಯೆಂದು (ಛಜಿಛಿಠಟ್ಞ) ಪರಿಗಣಿಸಿದಲ್ಲಿ ನಿಯಮ 55ಎ ಪ್ರಕಾರ ವೇತನ ಬಡ್ತಿಯನ್ನು ಮುಂದೂಡಬೇಕಾಗುತ್ತದೆ.
***
18.11.2017.
ನನ್ನ ಪತಿ ಕೆಪಿಟಿಸಿಎಲ್ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು ನಿವೃತ್ತಿಗೆ ಮೂರೇ ತಿಂಗಳು ಬಾಕಿ ಇದೆ. ಮನೆಯಲ್ಲಿ ನನ್ನ ಮತ್ತು ನಾಲ್ವರು ಮಕ್ಕಳ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳದೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಅವರ ವೇತನವನ್ನು ನೀಡುತ್ತಿಲ್ಲ. ನನ್ನ ಮುಂದಿನ ಜೀವನ ನಡೆಸಲು ನಿವೃತ್ತಿ ವೇತನದ ಅರ್ಧದಷ್ಟು ನನ್ನ ಹೆಸರಿಗೆ ಬರುವಂತೆ ಮಾಡುವ ತ್ವರಿತ ವಿಧಾನಗಳು, ತ್ವರಿತ ನ್ಯಾಯ ಪಡೆಯುವ ಬಗೆ ಹೇಗೆ ?
| ಶಾಂತಾಬಾಯಿ ಶಿಲ್ಪಿ ಕೊಪ್ಪಳ.
1966ರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 29ಸಿ ನಿಯಮದ ಪ್ರಕಾರ ಯಾರೇ ಸರ್ಕಾರಿ ನೌಕರನು ಹೆಂಡತಿ ಮತ್ತು ಮಕ್ಕಳ ಆಹಾರ, ಬಟ್ಟೆ ವಸತಿ ಮತ್ತು ಶಿಕ್ಷಣ ಮುಂತಾದ ಮೂಲಭೂತ ಆವಶ್ಯಕತೆಗಳನ್ನು ನಿರ್ಲಕ್ಷಿಸತಕ್ಕದ್ದಲ್ಲ ಎಂದು ಸೂಚಿಸಿದೆ. ಇಲ್ಲದಿದ್ದರೆ, ಅಂತಹ ನೌಕರ ಶಿಸ್ತಿನ ಕ್ರಮಕ್ಕೆ ಒಳಗಾಗುತ್ತಾನೆ. ಆದ್ದರಿಂದ ನೀವು ನಿಮ್ಮ ಪತಿಯ ನಿವೃತ್ತಿ ವೇತನದಿಂದ ಅರ್ಧದಷ್ಟು ಪಡೆಯಲು ಅವರ ಮೇಲಧಿಕಾರಿಗಳಿಗೆ ಹಾಗೂ ಕೆಪಿಟಿಸಿಎಲ್ನ ಮ್ಯಾನೇಜಿಂಗ್ ಡೈರೆಕ್ಟರ್ ಅವರಿಗೆ ಮನವಿ ಸಲ್ಲಿಸಬಹುದು.
***
16.11.2017.
ನಾನು ದಿನಾಂಕ 21-7-1994ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ್ದು . ನನ್ನ ಜನ್ಮದಿನಾಂಕ 19-9-1957. ಆಗ ಸೇವೆಗೆ ಸೇರಿದ್ದಾಗ 36 ವರ್ಷ 10 ತಿಂಗಳು 2 ದಿನಗಳಾಗಿರುತ್ತದೆ. 30-9-2017 ರಂದು ವಯೋನಿವೃತ್ತಿ ಹೊಂದಿರುತ್ತೇನೆ. ಸರ್ಕಾರಿ ಸೇವೆಯ ನಿಯಮಾವಳಿಯ ನಿಯಮ 247/ಎ ರಂತೆ ನನಗೆ ವೇಟೇಜ್ ಎಷ್ಟು ಬರುತ್ತದೆ. ಈಗ ನನ್ನ ಮೂಲ ವೇತನ 23,400/- ರೂ. ಇರುತ್ತದೆ. ನಿವೃತ್ತಿಯ ನಂತರ ನನ್ನ ಮೂಲ ವೇತನ ಎಷ್ಟು ?
|ಎಚ್. ಎನ್. ಜಯಕುಮಾರ್ ಮದ್ದೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ರೀತ್ಯ ನೀವು ದಿನಾಂಕ 15-2-2012 ರ ನಿವೃತ್ತಿಯಾಗುತ್ತಿರುವುದರಿಂದ ಎರಡು ವರ್ಷಗಳಷ್ಟು ಅರ್ಹತಾದಾಯಕ ಸೇವೆಗೆ ಸೇರಿಸಿದಾಗ 25 ವರ್ಷಗಳಾಗುತ್ತದೆ. ನಿವೃತ್ತಿ ದಿನಾಂಕದಂದು ನಿಮ್ಮ ಮೂಲ ವೇತನ ರೂ. 23,400 ಆಗಿದ್ದು , ನಿಮಗೆ ಮಾಸಿಕವಾಗಿ ರೂ. 8864 ನಿವೃತ್ತಿ ವೇತನವು ಹಾಗೂ ಉಪದಾನ ರೂ. 2,92,500 ಲಭ್ಯವಾಗುತ್ತದೆ. ಅಲ್ಲದೆ ಕಮ್ಯೂಟೇಷನ್ ಮೊಬಲಗು 3,47,823ರೂ. ಸಿಗುತ್ತದೆ.
***
15.11.2017.
ನಾನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಷ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಈಗಾಗಲೇ ನನಗೆ ಎರಡು ಸಿಸೇರಿಯನ್ ಹೆರಿಗೆಯಾಗಿದ್ದು , ಈ ಸಂಬಂಧ ಎರಡು ಹೆರಿಗೆ ರಜೆ ಪಡೆದಿರುತ್ತೇನೆ. ಆದರೆ ಮೊದಲನೇ ಮಗು ಹುಟ್ಟಿದ ಒಂದು ತಿಂಗಳಿಗೆ ಸಾವನ್ನಪ್ಪಿದ್ದು, ನನಗೆ ಒಂದು ಜೀವಂತ ಮಗುವಿದೆ. ಮತ್ತೆ ಗರ್ಭಿಣಿಯಾಗಿದ್ದು, ಈಗ ನಾನು ಹೆರಿಗೆ ರಜೆ ಪಡೆಯಲು ಅರ್ಹಳೆ ?
| ಸವಿತಾ ದಾಂಡೇಲಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ರೀತ್ಯ ಎರಡು ಜೀವಂತ ಮಕ್ಕಳನ್ನು ಹೊಂದುವವರೆಗೆ ಮಹಿಳಾ ಸರ್ಕಾರಿ ನೌಕರರು ಈ ಹೆರಿಗೆ ರಜೆ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದ್ದರಿಂದ ನೀವು ಮತ್ತೆ 180 ದಿನಗಳ ಹೆರಿಗೆ ರಜೆ ಪಡೆಯಲು ಅರ್ಹರಾಗಿರುತ್ತೀರಿ.
***
14.11.2017.
ನಮ್ಮ ಅಣ್ಣ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿನ ತಾಲ್ಲೂಕು ಕಚೇರಿಯಲ್ಲಿ ಡಿ ಗ್ರೂಪ್ ನೌಕರರಾಗಿ, ಸೇವೆ ಸಲ್ಲಿಸಿ, ಜನವರಿ – 2017ರಲ್ಲಿ ಮರಣ ಹೊಂದಿರುತ್ತಾರೆ. ಇವರು ಅವಿವಾಹಿತರು ಮತ್ತು ಮನೆಗೆ ಹಿರಿಯವರು. ನಮ್ಮ ತಂದೆಗೆ ಎಂಟು ಜನ ಮಕ್ಕಳು. ನಾವೆಲ್ಲ ಅವರ ಮೇಲೆ ಅವಲಂಬಿತರಾಗಿದ್ದೆವು. ಈಗ ನನ್ನ ಪ್ರಶ್ನೆ ಎಂದರೆ ಎಲ್ಲರಿಗಿಂತ ಚಿಕ್ಕವನಾದ ತಮ್ಮನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಸಿಗುತ್ತದೆಯೇ?
| ಶಂಕರ್ ಹೊನ್ನಾಳಿ, ದಾವಣಗೆರೆ.
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996ರ ನಿಯಮ 3ರ ಉಪನಿಯಮ (ಜಿಎ) ರೀತ್ಯ ಅವಿವಾಹಿತ ಮೃತ ಪುರುಷ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಆತನ ಮೇಲೆ ಅವಲಂಬಿತರಾಗಿದ್ದ ಹಾಗೂ ಆತನೊಂದಿಗೆ ವಾಸಿಸುತ್ತಿದ್ದ ಆತನ ಅವಿವಾಹಿತ ಸಹೋದರರು ಅರ್ಹರಾಗುತ್ತಾರೆ. ಈ ನಿಯಮಾವಳಿ ರೀತ್ಯ ಮೃತ ಸರ್ಕಾರಿ ನೌಕರನ ಅವಲಂಬಿತರು ಒಂದು ವರ್ಷದೊಳಗೆ ಅನುಕಂಪದ ಆಧಾರದ ಮೇಲೆ ನೇಮಕಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಆದರೆ ಹಿರಿಯ ಸಹೋದರರು ತಮಗೆ ಈ ನೌಕರಿ ಬೇಡವೆಂದು ಶಪಥ ಪತ್ರವನ್ನು (ಅ್ಛಛಚಡಜಿಠಿ) ಅರ್ಜಿಯೊಡನೆ ಲಗತ್ತಿಸಬೇಕು.
***
13.11.2017.
ನನ್ನ ಪತ್ನಿಯು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಇತ್ತೀಚೆಗೆ ಒಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಅದು ಒಂದು ತಿಂಗಳ ನಂತರ ನಿಧನವಾಗಿದೆ. ಅವಳು ಈಗಾಗಲೇ ಮೊದಲ ಮಗುವಿಗೆ ಹೆರಿಗೆ ರಜೆ ಪಡೆದಿದ್ದಾಳೆ. ಎರಡನೇ ಮಗುವಿಗೆ ಪಡೆದಿರುವ ಹೆರಿಗೆ ರಜೆಯಲ್ಲಿ ಮುಂದುವರಿಯಬೇಕೇ ಅಥವಾ ಬೇಡವೆ? ಈ ಹೆರಿಗೆ ರಜೆಯನ್ನು ಒಂದು ಅಥವಾ ಎರಡು ಮಗುವಿಗೆ ಲಭ್ಯವಾಗುತ್ತದೆಯೇ? ದಯವಿಟ್ಟು ತಿಳಿಸಿ.
| ದುರ್ಗೇಶ್ ಶಹಪೂರ, ಕಲಬುರಗಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಪ್ರಕಾರ, ಎರಡು ಜೀವಂತ ಮಗು ಇರುವವರೆಗೆ ಎಷ್ಟು ಬಾರಿಯಾದರೂ ಈ ಹೆರಿಗೆ ರಜೆಯನ್ನು ಪಡೆಯಬಹುದು. ಈಗ ನಿಮ್ಮ ಎರಡನೇ ಮಗು ನಿಧನ ಹೊಂದಿದ್ದರೂ 180 ದಿನಗಳ ಹೆರಿಗೆ ರಜೆಯನ್ನು ನಿಮ್ಮ ಪತ್ನಿಯು ಬಳಸಿಕೊಳ್ಳಬಹುದು. ತದನಂತರ ಕೆಲಸಕ್ಕೆ ಹಾಜರಾಗಬಹುದು.
***
12.11.2017.
ನಾನು ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ದಿನಾಂಕ 11-4-2017 ರಿಂದ ಕಾಯಂಗೊಳಿಸಿದ್ದು . ನನ್ನ ಮುಂದಿನ ವಾರ್ಷಿಕ ವೇತನ ಬಡ್ತಿ 1-7-2018 ಆಗಿರುತ್ತದೆ. ಈ ರೀತಿ ಮುಂದಿನ ವೇತನ ಬಡ್ತಿಯ ದಿನಾಂಕ ಮುಂದೂಡಿರುವುದು ಸರಿಯೇ ?
| ಜಿ. ರವಿ, ಲಿಂಗಸುಗೂರು ರಾಯಚೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51ರ ರೀತ್ಯಾ ವಾರ್ಷಿಕ ವೇತನ ಬಡ್ತಿಯು ಅದನ್ನು ಗಳಿಸಿದ ದಿನದ ಮರುದಿನದಿಂದ ಪ್ರಾಪ್ತವಾಗುತ್ತದೆ. ಸರ್ಕಾರಿ ನೌಕರನಿಗೆ ದಂಡನೆಯಾಗಿ ಮುಂದೂಡದ ಹೊರತು, ಅದನ್ನು ಕ್ರಮಬದ್ಧಗೊಳಿಸಿದ ದಿನಾಂಕದಿಂದಲೇ ವಾರ್ಷಿಕವೇತನ ಬಡ್ತಿಯನ್ನು ಮಂಜೂರು ಮಾಡತಕ್ಕದ್ದು ಎಂದು ಸೂಚಿಸಿದೆ. ಆದ್ದರಿಂದ, ನಿಮಗೆ 1-4-2018 ರಿಂದ ವೇತನ ಬಡ್ತಿ ಲಭ್ಯವಾಗಬೇಕಾಗುತ್ತದೆ.
***
11.11.2017.
ನಾನು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಾಗಿದ್ದು, 19-2-2010 ರಂದು 1-1-2009 ರಿಂದ ಪೂರ್ವಾನ್ವಯವಾಗುವಂತೆ ಪದೋನ್ನತಿ ನೀಡಿರುತ್ತಾರೆ. ಆದರೆ ಆರ್ಥಿಕ ಸೌಲಭ್ಯವನ್ನು ದಿ. 19-2-2010 ರಿಂದ ನೀಡಿದ್ದು , ಪೂರ್ವಾನ್ವಯ ದಿನಾಂಕದಿಂದಲೇ ಆರ್ಥಿಕ ಮತ್ತು ಜ್ಯೇಷ್ಠತೆ ಸೌಲಭ್ಯ ಪಡೆಯಬಹುದೇ ?
| ಎಂ.ಕೆ. ಸುಂಕದ ಹಂಸಬಾವಿ ಹಾವೇರಿ.
ಕರ್ನಾಟಕ ಸಿವಿಲ್ ಸೇವಾ ನಿಯಮಗಳು 1978ರ ನಿಯಮ 2(3)ರ ಪ್ರಕಾರ ಚಾಲ್ತಿಯಲ್ಲಿದ್ದ ಜ್ಯೇಷ್ಠತಾ ಪಟ್ಟಿ ಜ್ಯೇಷ್ಠತೆಗನುಸಾರವಾಗಿ ಅರ್ಹತೆ ಹೊಂದಿದ್ದರೆ ಮತ್ತು ವೃಂದ-ನೇಮಕಾತಿ ನಿಯಮಗಳಿಗನುಸಾರವಾಗಿ ಪದೋನ್ನತಿಗೆ ಅರ್ಹನಾಗಿದ್ದರೆ, ಸ್ವತಂತ್ರ ಪ್ರಭಾರದಲ್ಲಿ ಮಾತ್ರ ಇರಿಸಿದ್ದರೆ, ಮತ್ತು ಸದರಿ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಿದ್ದರೆ, ಒಂದು ಪೂರ್ವಾನ್ವಯ ದಿನಾಂಕದಿಂದ ಜಾರಿಗೆ ಬರುವಂತೆ ಸಕ್ಷಮ ಪ್ರಾಧಿಕಾರಿ ನೀಡಬಹುದು. ಅಲ್ಲದೆ, ದಿನಾಂಕ 20-9-1983 ಮತ್ತು 20-8-1983ರ ಸರ್ಕಾರಿ ಸುತ್ತೋಲೆಗಳಲ್ಲಿ (ಸಂಖ್ಯೆ : ಡಿಪಿಎಆರ್01ಎಎಫ್ಸಿ83) ಸಹ ಈ ಬಗ್ಗೆ ಸ್ಪಷ್ಟೀಕರಣ ನೀಡಿ, ಸೂಚನೆ ನೀಡಲಾಗಿದೆ. ಆದ್ದರಿಂದ ನಿಮಗೆ ದಿನಾಂಕ 19-2-2010 ರಿಂದ ಆರ್ಥಿಕ ಸೌಲಭ್ಯ ಹಾಗೂ ಜ್ಯೇಷ್ಠತೆಯ ಪೂರ್ವಾನ್ವಯ ಬಡ್ತಿಯ ದಿನಾಂಕದಿಂದಲೇ ಲಭ್ಯವಾಗುತ್ತದೆ.
***
10.11.2017.
ನಾನು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದು, ನನಗೆ ಎರಡು ಮಕ್ಕಳಿವೆ. ದಿನಾಂಕ 27-2-2016ರಂದು ಸಂತಾನಶಕ್ತಿಹರಣ ಚಿಕಿತ್ಸೆ ಮಾಡಿಸಿದ್ದು, ವಿಶೇಷ ವೇತನ ಬಡ್ತಿ ಪಡೆಯಲು ಯಾವ ನಿಯಮದಡಿ ಅವಕಾಶ ಇದೆ. ಮಂಜೂರಾತಿ ಅಧಿಕಾರ ಯಾರಿಗಿದೆ.?
| ಸಿ.ಎಸ್.ಪಾಟೀಲ ಸವಣೂರು ಹಾವೇರಿ
ದಿನಾಂಕ 1-10-1985ರ ಸರ್ಕಾರದ ಆದೇಶದ ಮೇರೆಗೆ (ಸಂಖ್ಯೆ- ಎಫ್ಡಿ 27 ಎಸ್ಆರ್ಎಸ್ 85) ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರನು ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ವೈಯಕ್ತಿಕ ವೇತನ ರೂಪದಲ್ಲಿ ವಿಶೇಷ ವೇತನ ಮಂಜೂರು ಮಾಡಲು ಆದೇಶಿಸಿದೆ. ದಿ.4-6-1986ರ ಅಧಿಕೃತ ಜ್ಞಾಪನ ಸಂಖ್ಯೆ ಎಫ್ಡಿ 23 ಎಸ್ಆರ್ಎಸ್ 86ರ ಮೇರೆಗೆ ಗೆಜೆಟೆಡ್ ಸರ್ಕಾರಿ ನೌಕರರಿಗೆ ಇಲಾಖಾ ಮುಖ್ಯಸ್ಥರು ಈ ವಿಶೇಷ ವೇತನ ಬಡ್ತಿಯನ್ನು ಮಂಜೂರು ಮಾಡಬಹುದು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಎರಡು ವರ್ಷದೊಳಗೆ ಸಕ್ಷಮ ಅಧಿಕಾರಿಗೆ ಈ ವಿಶೇಷ ವೇತನ ಬಡ್ತಿ ಮಂಜೂರು ಮಾಡಲು ಮೇಲಿನ ಆದೇಶದಂತೆ ಅರ್ಜಿಯನ್ನು ಸಲ್ಲಿಸಬೇಕು.

09.11.2017.
ನಾನು 1994ರ ಜುಲೈ 21ರಂದು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದು, ಕೆಲಸಕ್ಕೆ ಸೇರಿದಾಗ ನನ್ನ ವಯಸ್ಸು 36 ವರ್ಷ 10 ತಿಂಗಳು. 2017ರ ಸೆಪ್ಟೆಂಬರ್ 30ರಂದು ನಾನು ವಯೋನಿವೃತ್ತಿ ಹೊಂದಿದ್ದು, ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247/ಎ ನಂತೆ ನನಗೆ ವೇಟೇಜ್ ಎಷ್ಟು ಬರುತ್ತದೆ. ನನ್ನ ಮೂಲ ವೇತನ 23,400 ರೂ.ಗಳಾಗಿದ್ದು, ನಿವೃತ್ತಿ ನಂತರ ನನ್ನ ಮೂಲ ವೇತನ ಎಷ್ಟಾಗುತ್ತದೆ.
| ಜಯಲಕ್ಷ್ಮಿ ಉ.ಕ. ಜಿಲ್ಲೆ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247-ಎ ರೀತ್ಯಾ ನಿಮ್ಮ ಒಟ್ಟು ಸೇವಾವಧಿಗೆ ಹೆಚ್ಚುವರಿಯಾಗಿ ಎರಡು ವರ್ಷಗಳ ಅರ್ಹತಾದಾಯಕ ಸೇವೆ ಸೇರಿಸಲಾಗುತ್ತದೆ. ನಿಮಗೆ 8864 ರೂ , ನಿವೃತ್ತಿ ವೇತನ ಹಾಗೂ 2,92,500 ರೂ ಉಪದಾನ ಲಭ್ಯವಾಗುತ್ತದೆ.
***
07.11.2017.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ 2005ರ ಜುಲೈ 4ರಂದು ಕೆಲಸಕ್ಕೆ ಸೇರಿದ್ದು ಇಲಾಖಾ ಅನುಮತಿ ಪಡೆದು ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಹುದ್ದೆಗೆ ಆಯ್ಕೆಯಾಗಿದ್ದೇನೆ. ನನ್ನ ಮೂಲವೇತನ 16,800 ರೂ. ಆಗಿದ್ದು ನನ್ನ ವೇತನ ಶ್ರೇಣಿಯು ವಾರ್ಡನ್ ಹುದ್ದೆಯ ವೇತನ ಶ್ರೇಣಿಗೆ 15,500-26,700ರ ವರೆಗೆ ಇರುತ್ತದೆ. ನನಗೆ ಪಿಂಚಣಿ, ವೇತನ ಸಂರಕ್ಷಣೆ, ಲಭ್ಯವಾಗುತ್ತದೆಯೇ?
|ಎಸ್.ವಿ. ರಾಚಪ್ಪ ಬಳ್ಳಾರಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41ಎ ಪ್ರಕಾರ ನೀವು ಸಮಾನ ವೇತನ ಶ್ರೇಣಿಯಲ್ಲಿ ವಾರ್ಡನ್ ಹುದ್ದೆಗೆ ಸೇರಿದರೆ ವೇತನ ಸಂರಕ್ಷಣೆ ನೀಡಲಾಗುತ್ತದೆ. ನೀವು ಅನುಮತಿ ಪಡೆದು ಅರ್ಜಿ ಸಲ್ಲಿಸಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 224 ಬಿ ರೀತ್ಯ ನಿಮಗೆ ಪಿಂಚಣಿ ಸೌಲಭ್ಯವನ್ನು ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ನಿಮ್ಮ ಮೇಲಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಿದರೆ ಅದನ್ನು ಪರಿಶೀಲಿಸಿ ನಿಮ್ಮ ಸೇವೆಯನ್ನು ಪಿಂಚಣಿ ಸೌಲಭ್ಯಯುಕ್ತವಾಗಿ ಪರಿಗಣಿಸಲಾಗುತ್ತದೆ.
***
06.11.2017.ನಾನು ನಿವೃತ್ತ ಪ್ರೌಢಶಾಲಾ ಶಿಕ್ಷಕ. ನನಗೀಗ 82 ವರ್ಷ. ನನ್ನ ಪತ್ನಿ ಇತ್ತೀಚೆಗೆ ನಿಧನ ಹೊಂದಿದ್ದಾಳೆ. ನನ್ನ ಸಂಬಂಧಿಗಳು ದೂರದ ಊರಿನಲ್ಲಿರುವುದರಿಂದ ನನಗೆ ಈ ಇಳಿವಯಸ್ಸಿನಲ್ಲಿ ನೆರವು ಬೇಕಾಗಿದೆ. ನಾನು ಮತ್ತೊಂದು ಮದುವೆಯಾದರೆ ಎರಡನೇ ಪತ್ನಿಗೆ ಕುಟುಂಬ ವೇತನ ದೊರೆಯುವುದೇ?